Jehanabad Stampede: ಬಿಹಾರ ಬಾಬಾ ಸಿದ್ದೇಶ್ವರನಾಥ ದೇವಾಲಯದಲ್ಲಿ ಭೀಕರ ಕಾಲ್ತುಳಿತ; 7 ಮಂದಿ ಸಾವು - Vistara News

ದೇಶ

Jehanabad Stampede: ಬಿಹಾರ ಬಾಬಾ ಸಿದ್ದೇಶ್ವರನಾಥ ದೇವಾಲಯದಲ್ಲಿ ಭೀಕರ ಕಾಲ್ತುಳಿತ; 7 ಮಂದಿ ಸಾವು

Jehanabad Stampede: ಬಿಹಾರದ ಜೆಹಾನಾಬಾದ್ ಜಿಲ್ಲೆಯ ದೇವಾಲಯವೊಂದರಲ್ಲಿ ಸೋಮವಾರ (ಆಗಸ್ಟ್‌ 12) ನಸುಕಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸೇರಿದಂತೆ 7 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಬಾರಾವರ್ ಬೆಟ್ಟಗಳಲ್ಲಿರುವ ಬಾಬಾ ಸಿದ್ದೇಶ್ವರ್ ನಾಥ್ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಕನಿಷ್ಠ 35 ಜನರು ಗಾಯಗೊಂಡಿದ್ದಾರೆ.

VISTARANEWS.COM


on

Jehanabad Stampede
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಾಟ್ನಾ: ಬಿಹಾರದ ಜೆಹಾನಾಬಾದ್ ಜಿಲ್ಲೆಯ ದೇವಾಲಯವೊಂದರಲ್ಲಿ ಸೋಮವಾರ (ಆಗಸ್ಟ್‌ 12) ನಸುಕಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸೇರಿದಂತೆ 7 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ. ಬಾರಾವರ್ ಬೆಟ್ಟಗಳಲ್ಲಿರುವ ಬಾಬಾ ಸಿದ್ದೇಶ್ವರನಾಥ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಕನಿಷ್ಠ 35 ಜನರು ಗಾಯಗೊಂಡಿದ್ದಾರೆ (Jehanabad Stampede).

ʼʼಘಟನೆಯಲ್ಲಿ 7 ಮಂದಿ ಭಕ್ತರು ಮೃತಪಟ್ಟಿರುವುದು ದೃಡವಾಗಿದೆ. 7 ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜೆಹಾನಾಬಾದ್‌ಗೆ ಕರೆ ತರಲಾಗಿದೆʼʼ ಎಂದು ಜೆಹಾನಾಬಾದ್ ಟೌನ್ ಇನ್ಸ್‌ಪೆಕ್ಟರ್‌ ದಿವಾಕರ್ ಕುಮಾರ್ ವಿಶ್ವಕರ್ಮ ಖಚಿತಪಡಿಸಿದ್ದಾರೆ. ಶ್ರಾವಣ ಮಾಸದಲ್ಲಿ ನಡೆಸಲಾಗುವ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕಾಗಿ ಭಕ್ತರು ಹೆಚ್ಚಿನ ದೇವಾಲಯದಲ್ಲಿ ಜಮಾಯಿಸಿದ್ದರು. ಗಾಯಾಳುಗಳಿಗೆ ಸ್ಥಳೀಯ ಮಖ್ದುಮ್ಪುರ್ ಮತ್ತು ಸದರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

“ಜನಸಂದಣಿಯನ್ನು ನಿರ್ವಹಿಸಲು ದೇವಾಲಯದ ಆಡಳಿತ ಮಂಡಳಿ ವಿಫಲವಾಗಿದ್ದೇ ಈ ಅನಾಹುತಕ್ಕೆ ಕಾರಣ. ಜನಸಂದಣಿ ನಿರ್ವಹಣೆಯಲ್ಲಿ ತೊಡಗಿದ್ದ ಕೆಲವು ಸ್ವಯಂಸೇವಕರು ಭಕ್ತರ ಮೇಲೆ ಲಾಠಿ ಪ್ರಯೋಗಿಸಿದ್ದರಿಂದಲೇ ಕಾಲ್ತುಳಿತಕ್ಕೆ ಸಂಭವಿಸಿತು” ಎಂದು ಸಂತ್ರಸ್ತೆಯ ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ತಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಎಲ್ಲಿದೆ ಈ ದೇವಸ್ಥಾನ?

ಶಿವಾಲಯವಾದ ಬಾಬಾ ಸಿದ್ಧನಾಥ ದೇವಾಲಯವು ಮೂಲತಃ ಸಿದ್ಧೇಶ್ವರನಾಥ ದೇವಸ್ಥಾನ ಎಂದು ಗುರುತಿಸಲ್ಪಡುತ್ತದೆ. ಇದು ಬರಾವರ್ ಬೆಟ್ಟಗಳ ಶ್ರೇಣಿಯ ಅತ್ಯುನ್ನತ ಶಿಖರದಲ್ಲಿದೆ. ಈ ದೇವಾಲಯವನ್ನು ಕ್ರಿ.ಶ. 7ನೇ ಶತಮಾನದಲ್ಲಿ ಗುಪ್ತರ ಕಾಲದಲ್ಲಿ ನಿರ್ಮಿಸಲಾಯಿತು. ಸ್ಥಳೀಯರು ಈ ದೇವಾಲಯವನ್ನು ಜರಾಸಂಧನ ಮಾವ ಬನ ರಾಜ ನಿರ್ಮಿಸಿದ್ದಾನೆಂದು ಹೇಳುತ್ತಾರೆ. ಈ ಜಿಲ್ಲೆಯನ್ನು ಬರಾವರ್ ಗುಹೆ ಎಂದೂ ಕರೆಯುತ್ತಾರೆ. ಬರಾವರ್ ಗುಹೆ ಜೆಹಾನಾಬಾದ್‌ನಿಂದ 25 ಕಿ.ಮೀ. ದೂರದಲ್ಲಿರುವ ಮಖ್ದುಮ್ಪುರ್ ಬಳಿಯ ಗುಡ್ಡಗಾಡು ಪ್ರದೇಶದಲ್ಲಿದೆ.

ಹತ್ರಾಸ್‌ ದುರಂತ

ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 121 ಮಂದಿ ಮೃತಪಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ನಡೆದಿದೆ. ಜುಲೈ 2ರಂದು ಉತ್ತರ ಪ್ರದೇಶದ ಹತ್ರಾಸ್‌ದಲ್ಲಿ ಈ ಕಾಲ್ತುಳಿತ ಸಂಭವಿಸಿತ್ತು. ಸ್ವಯಂಘೋಷಿತ ದೇವ ಮಾನವ ಭೋಲೆ ಬಾಬಾ (Bhole Baba) ಆಯೋಜಿಸಿದ್ದ ಸತ್ಸಂಗದ ವೇಳೆ ಈ ಕಾಲ್ತುಳಿತ ನಡೆದಿತ್ತು.

ದುರಂತದ ಹಿನ್ನೆಲೆ

ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಗ್ರಾಮದಲ್ಲಿ ಜುಲೈ 2ರಂದು ಸ್ವಯಂ ಘೋಷಿತ ʼದೇವ ಮಾನವʼ ಭೋಲೆ ಬಾಬಾ (Bhole Baba) ಅವರ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಕ್ಕಟ್ಟಾದ ಸ್ಥಳದಲ್ಲಿ ಲಕ್ಷಾಂತರ ಮಂದಿ ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು.

ಪೊಲೀಸ್‌ ತನಿಖೆಯ ಪ್ರಾಥಮಿಕ ವರದಿಯು, ʼʼ80 ಸಾವಿರ ಜನರಿಗಾಗಿ ಅನುಮತಿ ಪಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಭೋಲೆ ಬಾಬಾ ಮಧ್ಯಾಹ್ನ 12.30ರ ಸುಮಾರಿಗೆ ಸತ್ಸಂಗ ಪೆಂಡಾಲ್‌ಗೆ ಆಗಮಿಸಿದ್ದರು. ಕಾರ್ಯಕ್ರಮವು 1 ಗಂಟೆ ನಡೆಯಿತು. ನಂತರ ಮಧ್ಯಾಹ್ನ 1.40ರ ಸುಮಾರಿಗೆ ಭೋಲೆ ಬಾಬಾ ಪೆಂಡಾಲ್‌ನಿಂದ ಹೊರಬಂದರು. ಭೋಲೆ ಬಾಬಾ ಹೊರಡುವ ವೇಳೆ ವೇಳೆ ಲಕ್ಷಾಂತರ ಮಂದಿ ಅವರ ಪಾದ ಮುಟ್ಟಿ, ಅವರು ಮೆಟ್ಟಿದ ನೆಲದ ಮಣ್ಣನ್ನು ತೆಗೆದುಕೊಳ್ಳಲು ಓಡಿ ಹೋಗಿದ್ದಾರೆ. ಹಾಗೆ ಓಡಿ ಹೋಗುವ ಭರದಲ್ಲಿ ಕಾಲ್ತುಳಿತ ಉಂಟಾಗಿದೆ. ಒಬ್ಬರನ್ನೊಬ್ಬರು ತುಳಿದುಕೊಂಡು ಮುಂದೆ ಸಾಗಿದ್ದು ಹಾಗೂ ಚರಂಡಿಯಲ್ಲಿ ಬಿದ್ದಿದ್ದು ಸಾವಿನ ಸಂಖ್ಯೆ ಜಾಸ್ತಿಯಾಗಲು ಕಾರಣ” ಎಂದು ತಿಳಿಸಿದೆ.

ಇದನ್ನೂ ಓದಿ: Hathras Stampede: ಕಾಲ್ತುಳಿತದ ಬಳಿಕ ಕಾಲ್ಕಿತ್ತಿದ್ದ ಡೋಂಗಿ ಬಾಬಾ- ವೈರಲ್‌ ಆಯ್ತು ವಿಡಿಯೋ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Physical Abuse: 70 ವರ್ಷದ ಮುಸ್ಲಿಂ ಧರ್ಮ ಗುರು 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡುವಾಗ ಸಿಕ್ಕಿ ಬಿದ್ದ! ವಿಡಿಯೊ ಇದೆ

Physical Abuse: ಮಕ್ಬರಾ ಪ್ರದೇಶದಲ್ಲಿ ವಾಸಿಸುವ ಆರೋಪಿ ಮೌಲಾನಾ ಮುಖ್ತಾರ್ ಎಂಬಾತ ಮೊದಲು ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಏಳು ವರ್ಷದ ಮುಗ್ಧ ಬಾಲಕಿಯನ್ನು ಟಾಫಿ ಮತ್ತು ಚಾಕೊಲೇಟ್‌ಗಳ ಮೂಲಕ ತನ್ನ ಮನೆಗೆ ಕರೆದೊಯ್ದನು. ಬಳಿಕ ಧರ್ಮಗುರುವು ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಲು ಪ್ರಾರಂಭಿಸಿದನು, ಆದರೆ ಒಬ್ಬ ವ್ಯಕ್ತಿ ಹುಡುಗಿಯೊಂದಿಗೆ ಧರ್ಮಗುರು ಮನೆಗೆ ಹೋಗುವುದನ್ನು ನೋಡಿದನು ಮತ್ತು ಅವನು ಅನುಮಾನದ ಆಧಾರದ ಮೇಲೆ ಅವನನ್ನು ಹಿಂಬಾಲಿಸಿದ್ದ. ಆಗ ಈ ನೀಚ ಕೃತ್ಯ ಬಯಲಾಗಿದೆ.

VISTARANEWS.COM


on

Physical abuse
Koo

ಕಾನ್ಪುರ: 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ(Physical Abuse) ಮಾಡಲು ಯತ್ನಿಸುತ್ತಿದ್ದಾಗ 70 ವರ್ಷದ ಧರ್ಮಗುರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಶಾಕಿಂಗ್‌ ಘಟನೆ ಉತ್ತರಪ್ರದೇಶದ ಕಾನ್ಪುರದಿಂದ ಬೆಳಕಿಗೆ ಬಂದಿದೆ. ಆಗಸ್ಟ್ 9 ರ ಶುಕ್ರವಾರದಂದು ಈ ಘಟನೆ ನಡೆದಿದ್ದು, ಮಗುವಿಗೆ ಚಾಕೊಲೇಟ್ ಕೊಡಿಸುವುದಾಗಿ ಆಮಿಷವೊಡ್ಡಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಅದೃಷ್ಟವಶಾತ್‌ ಮಗುವನ್ನು ರಕ್ಷಿಸಲಾಗಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್‌(Viral Video) ಆಗುತ್ತಿದೆ.

ಮಕ್ಬರಾ ಪ್ರದೇಶದಲ್ಲಿ ವಾಸಿಸುವ ಆರೋಪಿ ಮೌಲಾನಾ ಮುಖ್ತಾರ್ ಎಂಬಾತ ಮೊದಲು ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಏಳು ವರ್ಷದ ಮುಗ್ಧ ಬಾಲಕಿಯನ್ನು ಟಾಫಿ ಮತ್ತು ಚಾಕೊಲೇಟ್‌ಗಳ ಮೂಲಕ ತನ್ನ ಮನೆಗೆ ಕರೆದೊಯ್ದನು. ಬಳಿಕ ಧರ್ಮಗುರುವು ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಲು ಪ್ರಾರಂಭಿಸಿದನು, ಆದರೆ ಒಬ್ಬ ವ್ಯಕ್ತಿ ಹುಡುಗಿಯೊಂದಿಗೆ ಧರ್ಮಗುರು ಮನೆಗೆ ಹೋಗುವುದನ್ನು ನೋಡಿದನು ಮತ್ತು ಅವನು ಅನುಮಾನದ ಆಧಾರದ ಮೇಲೆ ಅವನನ್ನು ಹಿಂಬಾಲಿಸಿದನು.

ಅವನು ಕೋಣೆಯ ಕಿಟಕಿಯಿಂದ ಒಳಗಿನ ದೃಶ್ಯವನ್ನು ನೋಡಿದಾಗ, ಜನ ಆಘಾತಕ್ಕೊಳಗಾಗಿದ್ದ.
ಕ್ಷಿಪ್ರವಾಗಿ ಆರೋಪಿಯ ಕೊಳಕು ಕೃತ್ಯವನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿ ಆ ಪ್ರದೇಶದ ಎಲ್ಲ ಜನರನ್ನು ಕರೆಸಿ ಆತನ ನೀಚ ಕೃತ್ಯ ಬಯಲಿಗೆಳೆದಿದ್ದಾರೆ. ಸ್ಥಳೀಯರು ಆತನನ್ನು ಬೆತ್ತಲೆ ಸ್ಥಿತಿಯಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದು ಥಳಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಈ ವೇಳೆ ಮೌಲ್ವಿಯು ಸ್ಥಳೀಯರಲ್ಲಿ ತನ್ನನ್ನು ಬಿಡುವಂತೆ ಮನವಿ ಮಾಡುತ್ತಿದ್ದು, ಅವರು ವಿಷಯವನ್ನು ಹತ್ತಿಕ್ಕಲು ಮತ್ತು ಸಮಾಧಾನಪಡಿಸಬೇಕು ಎಂದು ಮನವಿ ಮಾಡಿದರು, ಆದರೆ ಹುಡುಗಿಯ ಸಂಬಂಧಿಕರು ಆತನ ವಿರುದ್ಧ ಧ್ವನಿ ಎತ್ತಿದರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕಾಗಮಿಸುವುದರೊಳಗೆ ಆರೋಪಿ ತನ್ನ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ.

ಸ್ಥಳೀಯರನ್ನು ಉಲ್ಲೇಖಿಸಿ ವರದಿಯ ಪ್ರಕಾರ, ಈ ಪ್ರದೇಶದ ಇತರ ಕೆಲವು ಮಕ್ಕಳೊಂದಿಗೂ ಈ ಕಿಡಿಗೇಡಿ ಇಂತಹ ದುಷ್ಕೃತ್ಯ ಎಸಗಿದ್ದ ಎನ್ನಲಾಗಿದೆ. ಆದರೆ ಪ್ರತಿ ಬಾರಿ ಈತ ರೆಡ್‌ ಹ್ಯಾಂಡಾಗಿ ಅವರು ಆ ಪ್ರದೇಶದಲ್ಲಿ ಭಯಭೀತರಾಗಿದ್ದರು ಮತ್ತು ಕೆಲವರು ಅವರ ಸ್ಥಾನವನ್ನು ಮನಸ್ಸಿನಲ್ಲಿಟ್ಟುಕೊಂಡು ಮೌನವಾಗಿರುತ್ತಿದ್ದರು ಎಂದು ವರದಿಯಾಗಿದೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ಮಾನವ ಬೇಟೆ ಆರಂಭಿಸಲಾಗಿದೆ

ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಧಿಕಾರಿಗಳು ಹಲವು ತಂಡಗಳನ್ನು ರಚಿಸಿ ತಲೆಮರೆಸಿಕೊಂಡಿರುವ ಧರ್ಮಗುರುವಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಅಪ್ರಾಪ್ತ ವಯಸ್ಕ ಮತ್ತು ಆತನ ಕುಟುಂಬದವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಕಿಡಿಗೇಡಿಯನ್ನು ಶೀಘ್ರವೇ ಅರೆಸ್ಟ್‌ ಮಾಡಲಾಗುತ್ತದೆ. ಎಂದು ಎಸಿಪಿ ಕರ್ನಲ್‌ಗಂಜ್ ಮಹೇಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ; ಎಸ್‌ಪಿ ನಾಯಕ ಮೊಯೀದ್‌ ಖಾನ್‌ ಬೇಕರಿ ಧ್ವಂಸ! Video ಇದೆ

Continue Reading

ದೇಶ

Sandeep Kumar: ಪಕ್ಷ ಸೇರ್ಪಡೆಯಾದ ಕೇವಲ 6 ಗಂಟೆಗಳಲ್ಲೇ ದಿಲ್ಲಿ ಮಾಜಿ ಸಚಿವನನ್ನು ಉಚ್ಚಾಟನೆ ಮಾಡಿದ ಬಿಜೆಪಿ

Sandeep Kumar: ಎಎಪಿ ನಾಯಕ ಮತ್ತು ಸಚಿವರಾಗಿದ್ದ ಸಂದೀಪ್‌ ಕುಮಾರ್ ತಮ್ಮ ವಿರುದ್ಧ ಇರುವ ಹಗರಣದ ಆರೋಪವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ. ಅದು ಈಗ ಬಯಲಾಗಿದೆ. ಹೀಗಾಗಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಎಂದು ಹರ್ಯಾಣ ಬಿಜೆಪಿ ಉಸ್ತುವಾರಿ ಸುರೇಂದ್ರ ಪುನಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

VISTARANEWS.COM


on

Sandeep Kumar
Koo

ನವದೆಹಲಿ: ಪಕ್ಷಕ್ಕೆ ಸೇರ್ಪಡೆಯಾದ ಕೇವಲ ಆರು ಗಂಟೆಗಳಲ್ಲಿ ದಿಲ್ಲಿಯ ಮಾಜಿ ಸಚಿವ(Former Delhi Cabinet Minister) ಸಂದೀಪ್‌ ಕುಮಾರ್‌(Sandeep Kumar)ರನ್ನು ಹರ್ಯಾಣ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿರುವಂತಹ ಅಪರೂಪದ ಘಟನೆ ವರದಿಯಾಗಿದೆ.

ಎಎಪಿ ನಾಯಕ ಮತ್ತು ಸಚಿವರಾಗಿದ್ದ ಸಂದೀಪ್‌ ಕುಮಾರ್ ತಮ್ಮ ವಿರುದ್ಧ ಇರುವ ಹಗರಣದ ಆರೋಪವನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ. ಅದು ಈಗ ಬಯಲಾಗಿದೆ. ಹೀಗಾಗಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ ಎಂದು ಹರ್ಯಾಣ ಬಿಜೆಪಿ ಉಸ್ತುವಾರಿ ಸುರೇಂದ್ರ ಪುನಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹಲವಾರು ವಿವಾದಗಳಿಗೆ ಸಿಲುಕಿದ್ದ ಕುಮಾರ್ ಅವರನ್ನು ಆಗಸ್ಟ್ 31, 2016 ರಂದು ದೆಹಲಿ ಸಚಿವ ಸಂಪುಟದಿಂದ ತೆಗೆದುಹಾಕಲಾಯಿತು. ಅಮಲು ಪದಾರ್ಥ ನೀಡಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಅದನ್ನು ಚಿತ್ರೀಕರಿಸಿದ್ದಾರೆ ಎಂದು ಮಹಿಳೆಯೊಬ್ಬರು ಕುಮಾರ್‌ ವಿರುದ್ಧ ಆರೋಪ ಮಾಡಿದ್ದರು. ಇದಾದ ಬಳಿಕ ಆತ ಮಹಿಳೆಯ ಜೊತೆ ಕೇಸ್‌ ವಾಪಾಸ್‌ ಪಡೆಯುವಂತೆ ಸಂಧಾನ ಮಾಡುತ್ತಿರುವ ಕುಮಾರ್‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದಾದ ಬಳಿಕ 2016 ರ ಸೆಪ್ಟೆಂಬರ್ 3 ರಂದು ದೆಹಲಿ ಪೊಲೀಸರು ಆತನನ್ನು ಬಂಧಿಸಿದರು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದರು.

ಸಂದೀಪ್ ಕುಮಾರ್ ಅವರು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಡಿಯಲ್ಲಿ ದೆಹಲಿ ಸರ್ಕಾರದಲ್ಲಿ SC/ST ಕಲ್ಯಾಣ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ ಭಾರತೀಯ ರಾಜಕಾರಣಿ. ಅವರ ಅಧಿಕಾರಾವಧಿಯಲ್ಲಿ ಕೇಜ್ರಿವಾಲ್ ಅವರ ಸಂಪುಟದಲ್ಲಿ ಅವರು ಅತ್ಯಂತ ಕಿರಿಯ ಸಚಿವರಾಗಿದ್ದರು. ಅವರು ಆಮ್ ಆದ್ಮಿ ಪಕ್ಷದ ಸದಸ್ಯರಾಗಿದ್ದರು.

ಪಡಿತರ ಚೀಟಿ ಪಡೆಯುವ ನೆಪದಲ್ಲಿ ತನ್ನನ್ನು ಶೋಷಣೆ ಮಾಡಲಾಗಿದೆ ಎಂದು ಸಂತ್ರಸ್ತೆ ಹೇಳಿಕೊಂಡರೆ, ಕುಮಾರ್ ಆರೋಪಗಳನ್ನು ನಿರಾಕರಿಸಿ, ತನ್ನ ಮಾನಹಾನಿ ಮಾಡುವ ಪ್ರಯತ್ನ ಎಂದು ಕರೆದರು. ಇದಾದ ಬಳಿಕ ಕುಮಾರ್ ಅವರು ತಮ್ಮ ಪತ್ನಿ ರೀತುಗೆ ಸರ್ಕಾರಿ ಶಾಲೆಯನ್ನು ಅರ್ಪಿಸುವ ಮೂಲಕ ವಿವಾದವನ್ನು ಹುಟ್ಟುಹಾಕಿದರು. ಅವರು ಐದು ಬಾರಿ ಶಾಸಕ ಜೈ ಕಿಶನ್ ಅವರನ್ನು ಸೋಲಿಸಿದ ನಂತರ 2015 ರಲ್ಲಿ ಗಮನ ಸೆಳೆದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾಗಿ ಕೇಜ್ರಿವಾಲ್ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ್ದರು.

ಬಿಜೆಪಿಗೆ ಸೇರುವ ಮೊದಲು, ಕುಮಾರ್ 2021 ರಲ್ಲಿ ತಮ್ಮ ರಾಜಕೀಯ ಸಂಘಟನೆಯಾದ ‘ಕೀರ್ತಿ ಕಿಸಾನ್ ಶೇರ್ ಪಂಜಾಬ್’ ಅನ್ನು ರಚಿಸಿದರು. ಅವರು ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು ಆದರೆ ಅವರ ವಿವಾದಾತ್ಮಕ ಹಿಂದಿನ ಬೆಳಕಿಗೆ ಬಂದ ನಂತರ ಅವರನ್ನು ಅಮಾನತುಗೊಳಿಸಲಾಯಿತು.

ಕುಮಾರ್ ಸೋನಿಪತ್‌ನ ಸರ್ಗಥಾಲ್ ಗ್ರಾಮದವರು, 2004 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದರು ಮತ್ತು 2009 ರಲ್ಲಿ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು.

ಇದನ್ನೂ ಓದಿ: Kejriwal Bungalow Case: ಕೇಜ್ರಿವಾಲ್‌ ಬಂಗಲೆ ನವೀಕರಣ ಅಕ್ರಮ; ಮೂವರು ಇಂಜಿನಿಯರ್‌ಗಳು ಸಸ್ಪೆಂಡ್‌

Continue Reading

ದೇಶ

Panjab Flood: ಪಂಜಾಬ್‌ನಲ್ಲೂ ಪ್ರವಾಹ ಸ್ಥಿತಿ; ಒಂದೇ ಕುಟುಂಬದ 8 ಮಂದಿ ಸೇರಿ 9 ಜನ ನೀರುಪಾಲು

Panjab Flood: ಜೈಜೋನ್ ಚೋ ನದಿ ಉಕ್ಕಿ ಹರಿದಿದ್ದು, ಪ್ರವಾಹಕ್ಕೆ ಅನೇಕ ವಾಹನಗಳು ಕೊಚ್ಚಿ ಹೋಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಮಹಿಲ್‌ಪುರ್ ಬ್ಲಾಕ್‌ನಲ್ಲಿ SUV ವಾಹನ ನದಿಯಲ್ಲಿ ಕೊಚ್ಚಿಹೋಗಿದೆ. ಪಂಜಾಬ್‌ನ ಹಲವಾರು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿದೆ.

VISTARANEWS.COM


on

Panjab Flood
Koo

ಚಂಡೀಗಡ: ಪಂಜಾಬ್‌ನಲ್ಲಿ ಭಾರೀ ಮಳೆ(Heavy Rainfall)ಗೆ ಪ್ರವಾಹ(Panjab Flood) ಸ್ಥಿತಿ ನಿರ್ಮಾಣವಾಗಿದ್ದು, ಹಿಮಾಚಲ ಪ್ರದೇಶದ ಒಂದೇ ಕುಟುಂಬದ ಎಂಟು ಜನ ಸೇರಿದಂತೆ ಒಂಬತ್ತು ಮಂದಿ ಕೊಚ್ಚಿ ಹೋಗಿದ್ದಾರೆ. ಇನ್ನು ದುರ್ಘಟನೆಯಲ್ಲಿ ಇಬ್ಬರು ಕಣ್ಮರೆಯಾಗಿದ್ದಾರೆ. ಜೈಜೋನ್ ಚೋ ನದಿ ಉಕ್ಕಿ ಹರಿದಿದ್ದು, ಪ್ರವಾಹಕ್ಕೆ ಅನೇಕ ವಾಹನಗಳು ಕೊಚ್ಚಿ ಹೋಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಮಹಿಲ್‌ಪುರ್ ಬ್ಲಾಕ್‌ನಲ್ಲಿ SUV ವಾಹನ ನದಿಯಲ್ಲಿ ಕೊಚ್ಚಿಹೋಗಿದೆ. ಪಂಜಾಬ್‌ನ ಹಲವಾರು ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿದೆ.

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಮೆಹತ್‌ಪುರ ಬಳಿಯ ಡೆಹ್ರಾದಿಂದ ಪಂಜಾಬ್‌ನ ಎಸ್‌ಬಿಎಸ್ ನಗರ ಜಿಲ್ಲೆಯ ಮೆಹ್ರೋವಾಲ್ ಗ್ರಾಮಕ್ಕೆ ಮದುವೆಗೆ ಹಾಜರಾಗಲು ಚಾಲಕನ ಸಮೇತ ಕುಟುಂಬದ 11 ಸದಸ್ಯರು ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

10 ವರ್ಷದ ಮಗುವನ್ನು ಸ್ಥಳೀಯ ಗ್ರಾಮಸ್ಥರು ರಕ್ಷಿಸಿದ್ದಾರೆ. ಪಂಜಾಬ್‌ನ ನವನ್‌ಶಹರ್‌ನಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡು 11 ಮಂದಿ ಎಸ್‌ಯುವಿಯಲ್ಲಿ ಪ್ರಯಾಣಿಸಿ ತಮ್ಮ ನಿವಾಸಕ್ಕೆ ಮರಳುತ್ತಿದ್ದರು. ಪೋಲೀಸರ ಪ್ರಕಾರ, ಕುಟುಂಬವು ಮದುವೆ ಮುಗಿಸಿಕೊಂಡು ವಿಹಾರಕ್ಕೆ ಹೋಗುತ್ತಿದ್ದಾಗ ಪ್ರವಾಹದ ನೀರಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಎನ್ನಲಾಗಿದೆ. ಇನ್ನು ಮೃತರನ್ನು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಮೆಹತ್‌ಪುರ ಸಮೀಪದ ಡೆಹ್ಲಾನ್ ಗ್ರಾಮದ ನಿವಾಸಿ ದೀಪಕ್ ಭಾಟಿಯಾ ಎಂದು ಗುರುತಿಸಲಾಗಿದ್ದು, ಅವರ ತಂದೆ ಸುರ್ಜಿತ್ ಭಾಟಿಯಾ, ತಾಯಿ ಪರಮ್‌ಜೀತ್ ಕೌರ್, ಚಿಕ್ಕಪ್ಪ ಸರೂಪ್ ಚಂದ್, ಚಿಕ್ಕಮ್ಮ ಬಂಡಾರ್ ಮತ್ತು ಶಿನೋ, ಪುತ್ರಿಯರಾದ ಭಾವನಾ ಮತ್ತು ಅಂಕು ಮೃತಪಟ್ಟಿದ್ದಾರೆ.

ಸಿಎಂ ಸಂತಾಪ

ಇನ್ನು ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ಒಂಬತ್ತು ಜನರ ಸಾವಿನ ಸುದ್ದಿ ದುಃಖಕರವಾಗಿದೆ. “ನಾನು ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಸಂತ್ರಸ್ತ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಸೂಚನೆಗಳನ್ನು ನೀಡಲಾಗಿದೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Tungabhadra Dam: ತುಂಗಭದ್ರಾ ಡ್ಯಾಂ ಗೇಟ್‌ ಚೈನ್‌ ಕಟ್‌ ಪ್ರಕರಣ; ಪ್ರವಾಹದ ಭೀತಿ ಇಲ್ಲ ಎಂದ ಗೃಹ ಸಚಿವ ಡಾ. ಜಿ.ಪರಮೇಶ್ವರ್

Continue Reading

ದೇಶ

Independence day 2024: ನಮ್ಮ ಹೆಮ್ಮೆಯ ರಾಷ್ಟ್ರಧ್ವಜದ ಬಗ್ಗೆ ಈ 10 ಸಂಗತಿಗಳು ತಿಳಿದಿರಲಿ

ದೇಶಾದ್ಯಂತ ಆಗಸ್ಟ್ 15ರಂದು 78ನೇ ಸ್ವಾತಂತ್ರ್ಯ ದಿನವನ್ನು (Independence day 2024) ಆಚರಿಸಲಾಗುತ್ತಿದೆ. ಈಗಾಗಲೇ ಇದಕ್ಕೆ ಸಿದ್ದತೆಗಳು ಭರದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲಿ ಭಾರತದ ರಾಷ್ಟ್ರಧ್ವಜದ ಬಗ್ಗೆ ನಾವು ತಿಳಿದಿರಲೇ ಬೇಕಾದ 10 ಪ್ರಮುಖ ಸಂಗತಿಗಳಿವೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Independence day 2024
Koo

ಸುಮಾರು 200 ವರ್ಷಗಳ ಕಾಲ ಬ್ರಿಟಿಷ್ ಆಳ್ವಿಕೆಯ (British rule in india) ವಿರುದ್ಧ ಹೋರಾಡಿ ಭಾರತೀಯರು ಅಂತಿಮವಾಗಿ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯವನ್ನು ಪಡೆದರು. ಬಳಿಕ ದೇಶದ ಮೊದಲ ಪ್ರಧಾನಿಯಾದ (First PM of India) ಜವಾಹರಲಾಲ್ ನೆಹರು (Jawaharlal Nehru) ಅವರು ಆಗಸ್ಟ್ 15 ಅನ್ನು ಭಾರತದ ಸ್ವಾತಂತ್ರ್ಯ ದಿನ ಎಂದು ಘೋಷಿಸಿದರು. ಅಂದಿನಿಂದ ನಿರಂತರ ದೇಶಾದ್ಯಂತ ಈ ದಿನವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತಿದೆ. ಈ ಬಾರಿ 78ನೇ ಸ್ವಾತಂತ್ರ್ಯ ದಿನದ (Independence day 2024) ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಐತಿಹಾಸಿಕ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವದ ಬಳಿಕ ‘ಹರ್ ಘರ್ ತಿರಂಗ’ ಅಭಿಯಾನವು ಆಗಸ್ಟ್ 13ರಿಂದ 15ರವರೆಗೆ ರಾಷ್ಟ್ರವ್ಯಾಪಿ ನಡೆಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸುವ ಗುರಿಯಾಗಿದೆ.

ಭಾರತದ ರಾಷ್ಟ್ರಧ್ವಜದ ಬಗ್ಗೆ ನಾವು ತಿಳಿದಿರಲೇಬೇಕಾದ 10 ಪ್ರಮುಖ ಸಂಗತಿಗಳಿವೆ.


1. 1906ರ ಆಗಸ್ಟ್ 7ರಂದು ಭಾರತದಲ್ಲಿ ಮೊದಲ ರಾಷ್ಟ್ರಧ್ವಜವನ್ನು ಕೋಲ್ಕತ್ತಾದ ಪಾರ್ಸಿ ಬಗಾನ್ ಚೌಕದಲ್ಲಿ ಹಾರಿಸಲಾಯಿತು. ಧ್ವಜವು ಕೆಂಪು, ಹಳದಿ ಮತ್ತು ಹಸಿರು ಬಣ್ಣಗಳನ್ನು ಹೊಂದಿತ್ತು.


2. 1931ರಲ್ಲಿ ತ್ರಿವರ್ಣ ಧ್ವಜವನ್ನು ನಮ್ಮ ರಾಷ್ಟ್ರಧ್ವಜವಾಗಿ ಅಳವಡಿಸಿಕೊಳ್ಳುವ ಮಹತ್ವದ ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಧ್ವಜ ಈಗಿನ ಧ್ವಜಕ್ಕಿಂತ ಕೊಂಚ ಭಿನ್ನವಾಗಿತ್ತು. ಇದರಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣವಿದ್ದು, ಮಧ್ಯೆ ಅಶೋಕ ಚಕ್ರದ ಬದಲಿಗೆ ಮಹಾತ್ಮ ಗಾಂಧಿಯವರು ನೂಲುವ ಚಕ್ರವನ್ನು ಹೊಂದಿತ್ತು.


3. ಕೆಲವು ಮಾರ್ಪಾಡುಗಳೊಂದಿಗೆ ಅಶೋಕ ಚಕ್ರವನ್ನು ಅಧಿಕೃತವಾಗಿ 1947ರ ಜುಲೈ 22ರಂದು ಭಾರತೀಯ ತಿರಂಗದಲ್ಲಿ ಅಳವಡಿಸಲಾಯಿತು. ಇದನ್ನು ಮೊದಲು 1947ರ ಆಗಸ್ಟ್ 15ರಂದು ಹಾರಿಸಲಾಯಿತು.


4. ಈ ಹಿಂದೆ ಆಯ್ದ ಸಂದರ್ಭಗಳಲ್ಲಿ ಹೊರತುಪಡಿಸಿ ಭಾರತೀಯ ನಾಗರಿಕರಿಗೆ ರಾಷ್ಟ್ರಧ್ವಜವನ್ನು ಹಾರಿಸಲು ಅವಕಾಶವಿರಲಿಲ್ಲ. ಕೈಗಾರಿಕೋದ್ಯಮಿ ನವೀನ್ ಜಿಂದಾಲ್ ಅವರ ದಶಕದ ಸುದೀರ್ಘ ಕಾನೂನು ಹೋರಾಟದ ಅನಂತರ ಇದು ಬದಲಾಯಿತು. 2004ರ ಜನವರಿ 23ರಂದು ಈ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು.

5. 2004ರಲ್ಲಿ ಭಾರತದ ಸಂವಿಧಾನದ 19 (1) (ಎ) ವಿಧಿಯ ಅಡಿಯಲ್ಲಿ ಗೌರವ ಮತ್ತು ಘನತೆಯಿಂದ ರಾಷ್ಟ್ರಧ್ವಜವನ್ನು ಮುಕ್ತವಾಗಿ ಹಾರಿಸುವ ಹಕ್ಕು ಭಾರತೀಯ ನಾಗರಿಕನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಘೋಷಿಸಿತು.


6. 1904ರಲ್ಲಿ ಭಾರತದ ಮೊದಲ ರಾಷ್ಟ್ರಧ್ವಜವನ್ನು ಸ್ವಾಮಿ ವಿವೇಕಾನಂದರ ಶಿಷ್ಯೆ ಸಿಸ್ಟರ್ ನಿವೇದಿತಾ ವಿನ್ಯಾಸಗೊಳಿಸಿದ್ದರು.


7. ರವೀಂದ್ರನಾಥ ಠಾಗೋರ್ ಅವರು 1911ರಲ್ಲಿ ‘ಭರೋತೋ ಭಾಗ್ಯೋ ಬಿಧಾತ’ ಹಾಡನ್ನು ರಚಿಸಿದರು. ಅನಂತರ ಅದನ್ನು ‘ಜನ ಗಣ ಮನ ‘ ಎಂದು ಮರುನಾಮಕರಣ ಮಾಡಲಾಯಿತು.

8. ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಇಡೀ ದೇಶದಲ್ಲಿಯೇ ರಾಷ್ಟ್ರ ಧ್ವಜ ತಯಾರಿಸುವ ಪ್ರಮುಖ ಘಟಕವಾಗಿದೆ.

ಇದನ್ನೂ ಓದಿ: Independence Day 2024: ಹೊಗೆ ಬಂಡಿಯಿಂದ ವಂದೇ ಭಾರತ್‌‌ವರೆಗೆ; ಭಾರತೀಯ ರೈಲ್ವೆಯ ಅದ್ಭುತ ಪಯಣ!

9. ತಿರಂಗ ಅಥವಾ ತ್ರಿವರ್ಣವು ಮೂರು ಬಣ್ಣಗಳನ್ನು ಹೊಂದಿದ್ದು, ಅದರಲ್ಲಿ ಕೇಸರಿ ಅಗ್ರಸ್ಥಾನದಲ್ಲಿದೆ. ಇದು ದೇಶದ ಶಕ್ತಿ ಮತ್ತು ಧೈರ್ಯವನ್ನು ಸೂಚಿಸುತ್ತದೆ. ಮಧ್ಯದಲ್ಲಿ ಬಿಳಿ ಶಾಂತಿ ಮತ್ತು ಸತ್ಯವನ್ನು ಒಳಗೊಂಡಿರುತ್ತದೆ. ಕೆಳಭಾಗದಲ್ಲಿರುವ ಹಸಿರು ಬಣ್ಣವು ಭೂಮಿಯ ಫಲವತ್ತತೆ, ಬೆಳವಣಿಗೆ ಮತ್ತು ಮಂಗಳಕರತೆಯನ್ನು ತೋರಿಸುತ್ತದೆ.

10. ಇನ್ನೂ ಐದು ರಾಷ್ಟ್ರಗಳು ತಮ್ಮ ಸ್ವಾತಂತ್ರ್ಯ ದಿನವನ್ನು ಭಾರತದೊಂದಿಗೆ ಆಚರಿಸುತ್ತವೆ. ಇದರಲ್ಲಿ ರಿಪಬ್ಲಿಕ್ ಆಫ್ ಕಾಂಗೋ, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ, ಲಿಚ್ಟೆನ್‌ಸ್ಟೈನ್ ಮತ್ತು ಬಹರೈನ್ ಸೇರಿದೆ.

Continue Reading
Advertisement
Tungabhadra Dam
ಕರ್ನಾಟಕ19 mins ago

Tungabhadra Dam: ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ; ನದಿಪಾತ್ರದ ಗ್ರಾಮಗಳಲ್ಲಿ ಡಂಗುರ ಸಾರಿ ಎಚ್ಚರಿಕೆ

Physical abuse
ದೇಶ50 mins ago

Physical Abuse: 70 ವರ್ಷದ ಮುಸ್ಲಿಂ ಧರ್ಮ ಗುರು 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡುವಾಗ ಸಿಕ್ಕಿ ಬಿದ್ದ! ವಿಡಿಯೊ ಇದೆ

Mukesh Khanna slams Ajay Devgn Shah Rukh for doing pan masala
ಬಾಲಿವುಡ್52 mins ago

Mukesh Khanna: ಪಾನ್ ಮಸಾಲಾ ಜಾಹೀರಾತು ಮಾಡುವವರಿಗೆ ಹೊಡೆಯಬೇಕು ಎಂದ ಮಹಾಭಾರತ ಖ್ಯಾತಿಯ ʻಭೀಷ್ಮʼ

Ghee benefits
ಆರೋಗ್ಯ1 hour ago

Ghee For Health: ನಾವು ಆರೋಗ್ಯವಾಗಿರಲು ದಿನಕ್ಕೆಷ್ಟು ತುಪ್ಪ ತಿನ್ನಬೇಕು?

Murder Case
ಕ್ರೈಂ1 hour ago

Murder Case: ಅಟ್ಟಾಡಿಸಿಕೊಂಡು ಹೋಗಿ ಮಾರಾಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್‌ನ ಕೊಲೆ

Sandeep Kumar
ದೇಶ1 hour ago

Sandeep Kumar: ಪಕ್ಷ ಸೇರ್ಪಡೆಯಾದ ಕೇವಲ 6 ಗಂಟೆಗಳಲ್ಲೇ ದಿಲ್ಲಿ ಮಾಜಿ ಸಚಿವನನ್ನು ಉಚ್ಚಾಟನೆ ಮಾಡಿದ ಬಿಜೆಪಿ

Shah Rukh Khan pushes old man at Locarno film festival red carpet
ಸಿನಿಮಾ2 hours ago

Shah Rukh Khan: ಫೋಟೊಗೆ ಪೋಸ್‌ ಕೊಡುವ ಭರದಲ್ಲಿ ಹಿರಿಯ ವ್ಯಕ್ತಿಯನ್ನು ತಳ್ಳಿದ ಶಾರುಖ್‌; ʻಸೊಕ್ಕಿನ ಮನುಷ್ಯʼ ಅಂದ್ರು ನೆಟ್ಟಿಗರು!

Blood Pressure
ಆರೋಗ್ಯ2 hours ago

Sweet Potato Benefits: ಸವಿದವರೇ ಬಲ್ಲರು ಗೆಣಸಿನ ಸೊಗಸು! ಹಲವು ಆರೋಗ್ಯ ಸಮಸ್ಯೆಗೂ ಪರಿಹಾರ

Heavy Rain
ಮಳೆ2 hours ago

Heavy Rain: ಸಿಲಿಕಾನ್‌ ಸಿಟಿಯಲ್ಲಿ ಮಳೆಯ ಅಬ್ಬರ; ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ

Nanu Mattu Gunda-2 dog simba dubbing rakesh adiga in main roles
ಸ್ಯಾಂಡಲ್ ವುಡ್3 hours ago

Nanu Mattu Gunda-2: ಬರ್ತಿದೆ ʻನಾನು ಮತ್ತು ಗುಂಡ-2ʼ ಸಿನಿಮಾ; ಡಬ್ಬಿಂಗ್‌ಗೆ ಇಳಿದ ಸಿಂಬ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ4 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ4 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು6 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ6 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌