Kargil Vijay Diwas: ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೊಕ್ಕು ಮುರಿದ ಭಾರತ!, ಯೋಧರ ಸಾಹಸ ರೋಚಕ... - Vistara News

ಕಾರ್ಗಿಲ್​ ವಿಜಯ್​ ದಿನ

Kargil Vijay Diwas: ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೊಕ್ಕು ಮುರಿದ ಭಾರತ!, ಯೋಧರ ಸಾಹಸ ರೋಚಕ…

Kargil Vijay Diwas: 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಭಾರತೀಯ ಸೇನೆಯು ಸೋಲಿಸಿತು. ಅಂದು ನಮ್ಮ ಯೋಧರು ತಮ್ಮ ಪ್ರಾಣವನ್ನು ನೀಡಿ, ಭಾರತದ ಗಡಿಗಳನ್ನು ರಕ್ಷಣೆ ಮಾಡಿದರು.

VISTARANEWS.COM


on

Kargil War
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1999ರ ಕಾರ್ಗಿಲ್ ಯುದ್ಧದಲ್ಲಿ (Kargil War) ಮಡಿದ ಯೋಧರನ್ನು ಸ್ಮರಿಸಲು ಪ್ರತಿ ವರ್ಷವೂ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas) ಆಚರಣೆ ಮಾಡಲಾಗುತ್ತದೆ. ಯುದ್ಧ ನಡೆದು ಈಗ 24 ವರ್ಷಗಳಾದವು. ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(LoC)ಗುಂಟ 1999ರ ಮೇ ತಿಂಗಳಿಂದ ಜುಲೈವರೆಗೂ ಅಂದರೆ ಎರಡು ತಿಂಗಳು ಪಾಕಿಸ್ತಾನದ (Pakistan) ಜತೆ ಭಾರತವು (India) ಯುದ್ಧ ನಡೆಸಿತು. ಭಾರತದ ಗಡಿಯೊಳಗೇ ನುಸುಳಿದ್ದ ಪಾಕಿಸ್ತಾನದ ಯೋಧರನ್ನು, ಭಾರತೀಯ ಸೇನೆಯು ಯಶಸ್ವಿಯಾಗಿ ಹಿಮ್ಮೆಟ್ಟಿಸಿತು. ಈ ಯುದ್ಧದಲ್ಲಿ ನೂರಾರು ಯೋಧರು ತಮ್ಮ ಪ್ರಾಣವನ್ನು ಬಲಿದಾನ ಮಾಡಿದರು. ಅವರ ಸಾಹಸ, ಶೌರ್ಯ ಹಾಗೂ ಬಲಿದಾನವನ್ನು ಸ್ಮರಿಸುವುದಕ್ಕಾಗಿ ಇಡೀ ಭಾರತವು ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮಾಡುತ್ತದೆ.

1999ರ ಮೇ ತಿಂಗಳಲ್ಲಿ ಪಾಕಿಸ್ತಾನವು ತನ್ನ ಸೈನಿಕರನ್ನು ನುಸುಳುಕೋರರ ವೇಷದಲ್ಲಿ ಭಾರತದ ಗಡಿಯೊಳಗೆ ಕಳುಹಿಸಿತ್ತು. ಈ ಪಾಕ್ ಯೋಧರು ಜಮ್ಮು-ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಎಲ್ಒಸಿ ಗುಡಿಗುಂಟ ಅಡಗಿ ಕುಳಿತುಕೊಂಡಿದ್ದರು. ಭಾರತದ ಗಡಿಯಲ್ಲಿ ಸಂಘರ್ಷ ಸೃಷ್ಟಿಸುವುದಕ್ಕಾಗಿ ಲಡಾಕ್ ಮತ್ತು ಕಾಶ್ಮೀರ ನಡುವಿನ ಸಂಪರ್ಕ ಕಡಿತ ಮಾಡುವುದು ಪಾಕ್ ಯೋಧರ ಉದ್ದೇಶವಾಗಿತ್ತು. ಈ ವೇಳೆ, ಪಾಕ್ ಸೈನಿಕರು ಪರ್ವತಗಳ ತುದಿಯಲ್ಲಿದ್ದರೆ ಭಾರತದ ಯೋಧರು ಪರ್ವತದ ತಪ್ಪಲಿನಲ್ಲಿದ್ದರು. ಹಾಗಾಗಿ, ಭಾರತೀಯ ಸೇನೆಯ ಮೇಲೆ ಪಾಕ್ ಸೈನಿಕರ ದಾಳಿ ನಡೆಸುವುದು ಬಹಳ ಸುಲಭವಾಗಿತ್ತು. ಅಂತಿಮವಾಗಿ ಎರಡೂ ಕಡೆಯಿಂದಲೂ ಯುದ್ಧ ಘೋಷಣೆಯಾಯಿತು. ಪಾಕಿಸ್ತಾನದ ಯೋಧರು ಎಲ್ಒಸಿಯನ್ನು ದಾಟಿ ಭಾರತದ ಗಡಿಯೊಳಗೇ ನುಗ್ಗಿದರು.

ಆಪರೇಷನ್ ವಿಜಯ್ ಆರಂಭ

1999 ಮೇ 3ರಂದು ಕಾರ್ಗಿಲ್ ಯುದ್ಧವನ್ನು ಪಾಕಿಸ್ತಾನವು ಆರಂಭಿಸಿತು. ಕಾರ್ಗಿಲ್ ಜಿಲ್ಲೆಯ ಬಂಡೆಗಳಿಂದ ಕೂಡಿರುವ ಪರ್ವತಗಳಲ್ಲಿ ಪಾಕಿಸ್ತಾನದ ಸುಮಾರು 50000ಕ್ಕೂ ಅಧಿಕ ಸೈನಿಕರು ಅಡಗಿಕೊಂಡಿದ್ದರು ಮತ್ತು ಆ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಯಾವಾಗ ಈ ಮಾಹಿತಿ ದೊರೆಯಿತೋ ಭಾರತೀಯ ಸೇನೆಯ ಆಪರೇಷನ್ ವಿಜಯ್ ಆರಂಭಿಸಿತು. ಭಾರತದ ಗಡಿಯೊಳಗೇ ನುಗ್ಗಿದ್ದ ಅಷ್ಟೂ ಪಾಕಿಸ್ತಾನ ಸೈನಿಕರನ್ನು ವಾಪಸ್ ಪಾಕಿಸ್ತಾನಕ್ಕೆ ಅಟ್ಟುವಲ್ಲಿ ಯಶಸ್ವಿಯಾಯಿತು.

ಭಾರೀ ಸಿದ್ಧತೆ ಮಾಡಿಕೊಂಡಿದ್ದ ಪಾಕ್

1998-1999ರ ಚಳಿಗಾಲದಲ್ಲಿ ಪಾಕಿಸ್ತಾನಿ ಸೇನೆಯು ಸಿಯಾಚಿನ್ ಗ್ಲೇಸಿಯರ್ ಮೇಲೆ ಹಿಡಿತ ಸಾಧಿಸುವ ಗುರಿಯೊಂದಿಗೆ ಪ್ರದೇಶದಲ್ಲಿ ಪ್ರಾಬಲ್ಯ ಮೆರೆಯಲು ಕಾರ್ಗಿಲ್ ಬಳಿ ರಹಸ್ಯವಾಗಿ ತನ್ನ ಯೋಧರಿಗೆ ತರಬೇತಿ ನೀಡಿತ್ತು. ಅಲ್ಲದೇ ಸೇನೆಯನ್ನು ಭಾರತದ ಗಡಿಯೊಳಗೆ ನುಗ್ಗಿಸಲು ಆರಂಭಿಸಿತ್ತು. ಈ ಕುರಿತು ಪ್ರಶ್ನಿಸಿದಾಗ, ಅವರು ಪಾಕಿಸ್ತಾನದ ಯೋಧರಲ್ಲ, ಇಂಡಿಯನ್ ಮುಜಾಹಿದ್ದೀನ್ ಉಗ್ರರು ಎಂದು ಸಮಜಾಯಿಸಿ ನೀಡಿತ್ತು. ಪಾಕಿಸ್ತಾನದ ಉದ್ದೇಶವೇ ಅಂತಾರಾಷ್ಟ್ರೀಯ ಸಮುದಾಯದ ಗಮನವನ್ನು ತನ್ನತ್ತ ಸೆಳೆಯುವುದಾಗಿತ್ತು. ಆ ಮೂಲಕ ಭಾರತೀಯ ಸೇನೆಯ ಮೇಲೆ ಒತ್ತಡ ತಂದು, ಸಿಯಾಚಿನ್ ಪ್ರದೇಶದಿಂದ ಯೋಧರನ್ನ ಭಾರತವು ವಾಪಸ್ ಕರೆಯಿಸಿಕೊಳ್ಳುವ ಹುನ್ನಾರವನ್ನು ಪಾಕಿಸ್ತಾನ ಮಾಡಿತ್ತು. ಅಲ್ಲದೇ, ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆಗೆ ಭಾರತದ ಮೇಲೆ ಒತ್ತಡ ತರುವುದು ಉದ್ದೇಶವಾಗಿತ್ತು.

1971ರ ಇಂಡೋ-ಪಾಕ್ ಯುದ್ಧದ ಬಳಿಕ ಉಭಯ ರಾಷ್ಟ್ರಗಳ ನಡುವೆ ಅನೇಕ ಸೇನಾ ಸಂಘರ್ಷಗಳು ಸಂಭವಿಸಿವೆ. ಎರಡೂ ರಾಷ್ಟ್ರಗಳು ಪರಮಾಣು ಅಸ್ತ್ರಗಳನ್ನು ಪರೀಕ್ಷಿಸಿವೆ. 1999 ಫೆಬ್ರವರಿಯಲ್ಲಿ ಪಾಕಿಸ್ತಾನ ಮತ್ತು ಭಾರತಗಳೆರಡೂ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದ ಅನ್ವಯ ಕಾಶ್ಮೀರ ಸಂಘರ್ಷವನ್ನು ದ್ವಿಪಕ್ಷೀಯ ಹಾಗೂ ಶಾಂತಿ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವುದಾಗಿತ್ತು.

ಆಪರೇಷನ್ ಭದ್ರ್

ಭಾರತದ ಗಡಿಯೊಳಗೆ ನುಗ್ಗಿ ಸೇನಾ ಕಾರ್ಯಾಚರಣೆ ಕೈಗೊಳ್ಳುವ ಈ ಕ್ರಿಯೆಗೆ ಪಾಕಿಸ್ತಾನವು ಆಪರೇಷನ್ ಭದ್ರ್ ಎಂದು ಹೆಸರಿಟ್ಟಿತ್ತು. ಇದರ ಮುಖ್ಯ ಉದ್ದೇಶವೇ ಲಡಾಕ್ ಮತ್ತು ಕಾಶ್ಮೀರದ ನಡುವಿನ ಸಂಪರ್ಕವನ್ನು ಕಡಿತಗೊಳಿಸುವುದು ಮತ್ತು ಸಿಯಾಚಿನ್ ಪ್ರದೇಶದಿಂದ ಭಾರತೀಯ ಸೇನೆ ವಾಪಸ್ ಹೋಗುವಂತೆ ಮಾಡುವುದಾಗಿತ್ತು. ಅಲ್ಲದೇ, ಈ ಪ್ರದೇಶದಲ್ಲಿ ಉದ್ಭವವಾಗುವ ಯಾವುದೇ ಕದಲಿಕೆಯು ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುತ್ತಿತ್ತು. ಅದೇ ಉದ್ದೇಶದಿಂದ ಪಾಕಿಸ್ತಾನವು ಭಾರತದ ಗಡಿಯೊಳಗೇ ತನ್ನ ಸೈನಿಕರನ್ನು ಕಳುಹಿಸಿತ್ತು. ಆದರೆ, ಭಾರತೀಯ ಸೇನೆಯು ಈ ಎಲ್ಲ ಸೈನಿಕರನ್ನು ಸದೆ ಬಡಿಯಿತು. ಅಲ್ಲದೇ ಪಾಕಿಸ್ತಾನದ ಹುನ್ನಾರವನ್ನು ಜಗಜ್ಜಾಹೀರು ಮಾಡಿತು.

ವಾಯುಪಡೆಯ ಪಾತ್ರ

ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವಾಯುಪಡೆಯು ಪ್ರಮುಖ ಪಾತ್ರ ನಿರ್ವಹಿಸಿತು. ಮಿಗ್-2ಐ, ಮಿಗ್-23ಸ್, ಮಿಗ್-27ಎಸ್, ಜಾಗ್ವಾರ್ ಮತ್ತು ಮಿರಾಜ್ 2000 ಯುದ್ಧ ವಿಮಾನಗಳನ್ನು ಪರಿಣಾಮಕಾರಿಯಾಗಿ ಬಳಸಲಾಯಿತು. ಮಿಗ್ 21 ಮತ್ತು ಮಿಗ್ 23 ಹಾಗೂ ಮಿಗ್ 27 ಮೂಲಕ ಪಾಕಿಸ್ತಾನದ ಅನೇಕ ಟಾರ್ಗೆಟ್‌ಗಳನ್ನು ನಾಶ ಮಾಡಲಾಯಿತು. ಹಾಗಾಗಿ, ಯುದ್ಧದ ವೇಳೆ ಆಪರೇಷನ್ ಸುರಕ್ಷಿತ್ ಸಾಗರಕ್ಕಾಗಿ ವಾಯುಪಡೆಯು ಮಿಗ್ 21 ಮತ್ತು ಮಿರಾಜ್ 2000 ಯುದ್ಧ ವಿಮಾನಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಯಿತು.

ಘನ ಘೋರ ಯುದ್ಧ

ಕಾರ್ಗಿಲ್ ಯುದ್ಧದ ವೇಳೆ ರಾಕೆಟ್ಸ್, ಬಾಂಬ್‌ಗಳನ್ನು ಬಳಸಲಾಯಿತು. ಎರಡೂವರೆ ಲಕ್ಷ ಶೆಲ್, ಬಾಂಬ್ ಮತ್ತು ರಾಕೆಟ್‌ಗಳ ಮೂಲಕ ದಾಳಿ ನಡೆಸಲಾಯಿತು. ಸರಿಸುಮಾರು 5,000 ಫಿರಂಗಿ ಶೆಲ್‌ಗಳು, ಮಾರ್ಟರ್ ಬಾಂಬ್‌ಗಳು ಮತ್ತು ರಾಕೆಟ್‌ಗಳನ್ನು ಪ್ರತಿದಿನ 300 ಬಂದೂಕುಗಳು, ಮಾರ್ಟರ್‌ಗಳು ಮತ್ತು ಎಂಬಿಆರ್‌ಎಲ್‌ಗಳಿಂದ ಹಾರಿಸಲಾಯಿತು ಮತ್ತು ಟೈಗರ್ ಹಿಲ್ ಅನ್ನು ಮರಳಿ ಪಡೆದ ದಿನ 9,000 ಶೆಲ್‌ಗಳನ್ನು ಹಾರಿಸಲಾಯಿತು.

ಯೋಧರ ಬಲಿದಾನ

ಕಾರ್ಗಿಲ್ ಯುದ್ಧ ವೇಳೆ 527 ಯೋಧರು ಬಲಿದಾನ ಮಾಡಿದರು. 1300ಕ್ಕೂ ಅಧಿಕ ಯೋಧರು ಗಾಯಗೊಂಡರು. ಸಾಕಷ್ಟು ಸಾವು ನೋವು ಸಂಭವಿಸಿತು. ಆದರೂ, ನಮ್ಮ ಗಡಿಯನ್ನು ರಕ್ಷಿಸಿಕೊಳ್ಳಲು ಭಾರತೀಯ ಹೆಮ್ಮೆಯ ಯೋಧರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಕಾದಾಡಿದರು. ಪಾಕಿಸ್ತಾನದ ಸೇನೆಗೆ ಸರಿಯಾದ ಪಾಠವನ್ನು ಕಲಿಸಿದರು.

ಅಮ್ಮಾ‌, ಗೆದ್ದರೆ ತಿರಂಗಾ ಅರಳಿಸಿ ಬರುತ್ತೇನೆ; ಸೋತರೆ ಹೊದ್ದು ಬರುತ್ತೇನೆ ಅಂದಿದ್ದ ಆ ಸೈನಿಕ!

1999ರ ಮೇ ತಿಂಗಳಿನಲ್ಲಿ ಕಾರ್ಗಿಲ್ ಯುದ್ದದ ನಿರ್ಧಾರ ಆದಾಗ ಎಲ್ಲ ಸೈನಿಕರಿಗೂ ʻಎಲ್ಲಿದ್ದರೂ ಬನ್ನಿʼ ಎಂಬ ಆದೇಶ ನೀಡಲಾಗಿತ್ತು. ಆಗ ಭಾರತೀಯ ಸೇನೆ ಬಹುತೇಕ ರಜೆಯ ಮೂಡಿನಲ್ಲಿ ಇತ್ತು. ಕ್ಯಾಪ್ಟನ್ ವಿಕ್ರಂ ಬಾತ್ರಾ ಕೂಡ ರಜೆಯಲ್ಲಿ ಊರಿಗೆ ಬಂದು ಅಮ್ಮನ ಮುಂದೆ ಕೂತಿದ್ದರು. ಅವರ ಅಮ್ಮ ಒಬ್ಬರು ಶಿಕ್ಷಕಿ ಆಗಿದ್ದರು. ಅವರದ್ದು ಹಿಮಾಚಲ ಪ್ರದೇಶದ ಒಂದು ಪುಟ್ಟ ಹಳ್ಳಿ. ತನ್ನ ಸ್ವಂತ ಇಚ್ಛೆಯಿಂದ ಮಗ ಕಂಬೈನ್ ಡಿಫೆನ್ಸ್ ಪರೀಕ್ಷೆ ಬರೆದು ಸೈನಿಕನಾಗಿ ಸೇರಿದ್ದ.

ಅಮ್ಮನಿಗೆ ಮಗ ಅಪರೂಪಕ್ಕೆ ಊರಿಗೆ ಬಂದಿದ್ದಾನೆ, ಸ್ವಲ್ಪ ದಿನ ಜೊತೆಗೆ ಇದ್ದರೆ ಚೆನ್ನಾಗಿತ್ತು ಅಂತ ಆಸೆ ಇತ್ತು. ಆದರೆ ಯುದ್ಧಕ್ಕೆ ಕರೆಬಂದಾಗ ಭಾರತೀಯ ಸೈನಿಕ ಹೊರಡುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ. ಹಾಗೆ ಕ್ಯಾಪ್ಟನ್ ವಿಕ್ರಂ ಬಾತ್ರಾ ಹೊರಟು ನಿಂತಿದ್ದ ತನ್ನ ಎದೆಯನ್ನು ಕಲ್ಲು ಮಾಡಿಕೊಂಡು! ಅಮ್ಮನಿಗೆ ಕಣ್ಣೀರು ತಡೆದುಕೊಳ್ಳಲು ಆಗಲೇ ಇಲ್ಲ. ಆಗ ಮಗ ಅಮ್ಮನಿಗೆ ಧೈರ್ಯ ತುಂಬುತ್ತಾ, “ಅಳಬೇಡ ಅಮ್ಮ. ನೀನು ವೀರ ಸೈನಿಕನ ತಾಯಿ. ನಾನು ಖಂಡಿತ ಹಿಂದೆ ಬರುತ್ತೇನೆ. ಯುದ್ಧವನ್ನು ಗೆದ್ದರೆ ತ್ರಿವರ್ಣ ಧ್ವಜವನ್ನು ಹಾರಿಸಿ ಬರುತ್ತೇನೆ. ಅಥವಾ ತ್ರಿವರ್ಣ ಧ್ವಜವನ್ನು ಹೊದ್ದು ಹಿಂದೆ ಬರುತ್ತೇನೆ!” ಅಮ್ಮನಿಗೆ ಎಷ್ಟು ಅರ್ಥ ಆಯಿತೋ ಗೊತ್ತಿಲ್ಲ. ಅವನಿಗೆ ಆರತಿ ಎತ್ತಿ ಆಶೀರ್ವಾದ ಮಾಡಿ ಕಳುಹಿಸಿದರು.

ಈ ಸುದ್ದಿಯನ್ನೂ ಓದಿ: Pervez Musharraf Death: ಕಾರ್ಗಿಲ್ ಯುದ್ಧಕ್ಕೆ ಕಾರಣವಾಗಿದ್ದ ಮುಷರಫ್, ಆಗ್ರಾ ಮಾತುಕತೆ ಮುರಿದರು

1999ರ ಮೇ ತಿಂಗಳಿನಲ್ಲಿ ಆರಂಭ ಆದ ಕಾರ್ಗಿಲ್ ಯುದ್ಧವು ಎರಡು ತಿಂಗಳ ಕಾಲ ಮುಂದುವರಿಯಿತು. ಅದರಲ್ಲಿ ಕ್ಯಾಪ್ಟನ್ ವಿಕ್ರಂ ಬಾತ್ರಾ ಅವರಿಗೆ ತುಂಬಾ ಕ್ಲಿಷ್ಟಕರವಾದ ಟಾಸ್ಕ್ ನೀಡಲಾಯಿತು. ಏಳು ಸಾವಿರ ಅಡಿ ಎತ್ತರದ ಹಿಮ ಪರ್ವತದ ಶಿಖರ (ಅದರ ಹೆಸರು ಪಾಯಿಂಟ್ 5140)ವನ್ನು ಆಕ್ರಮಿಸಿಕೊಂಡ ಪಾಕ್ ಸೈನಿಕರಿಂದ ಮತ್ತೆ ಭಾರತದ ವಶಕ್ಕೆ ಪಡೆಯುವ ಟಾಸ್ಕ್ ಅದು. ಕ್ಯಾಪ್ಟನ್ ಬಾತ್ರಾ ಅವರು ತನ್ನ ಜೊತೆಗೆ ಇದ್ದ ಐವರು ಸೈನಿಕರಿಗೆ ಧೈರ್ಯ ಹೇಳಿ ‘ಯೇ ದಿಲ್ ಮಾಂಗೇ ಮೋರ್’ ಎಂಬ ಘೋಷಣೆಯನ್ನು ಕೊಡುತ್ತಾರೆ. ಆ ಶಿಖರವನ್ನು ಮುಂಭಾಗದಿಂದ ಏರಿ ಅದನ್ನು ವಶಪಡಿಸಿಕೊಳ್ಳುತ್ತಾರೆ. ನಿರಂತರ ಬಾಂಬ್, ಗ್ರಾನೈಡ್ ಮತ್ತು ಕ್ಷಿಪಣಿ ದಾಳಿಗಳ ನಡುವೆ, ದುರ್ಗಮ ಹಾದಿಯಲ್ಲಿ ಸಾಗಿ ಆ ಶಿಖರವನ್ನು ಏರಿ ಅದನ್ನು ಗೆದ್ದದ್ದು ಅಸಾಮಾನ್ಯ ಸಾಹಸವೇ ಆಗಿತ್ತು.

ಅದನ್ನು ಮುಗಿಸಿ ಇನ್ನೊಂದು ಶಿಖರವನ್ನು (ಪಾಯಿಂಟ್ 4875) ವಶ ಮಾಡಲು ಹೊರಟಾಗ ಕ್ಷಿಪಣಿ ದಾಳಿಗೆ ತುತ್ತಾಗಿ ಕ್ಯಾಪ್ಟನ್ ವಿಕ್ರಂ ಬಾತ್ರಾ ತಮ್ಮ ಪ್ರಾಣವನ್ನು ಕಳೆದುಕೊಂಡರು. ಅವರಿಗೆ ಮರಣೋತ್ತರ ಆಗಿ ಸೈನಿಕನಿಗೆ ನೀಡುವ ಪರಮೋಚ್ಚ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. ಈ ರೀತಿ ಹುತಾತ್ಮರಾದ 527 ಭಾರತೀಯ ಸೈನಿಕರ ಬಲಿದಾನದ ಫಲವಾಗಿ ಭಾರತವು ಕಾರ್ಗಿಲ್ ಯುದ್ಧವನ್ನು ಗೆದ್ದಿತು. ಆ ಸೈನಿಕರ ಗೌರವದ ದಿನ ಇಂದು ಕಾರ್ಗಿಲ್ ವಿಜಯ ದಿವಸ್. ಆ ಮಹಾನ್ ಸೈನಿಕರಿಗೆ ನಮ್ಮ ಶೃದ್ಧಾಂಜಲಿ ಇರಲಿ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Kargil Vijay Diwas: ಬೆಂಗಳೂರಿನ ಐಟಿಐ ಸೆಂಟ್ರಲ್ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿನಾಚರಣೆ

Kargil Vijay Diwas: ಬೆಂಗಳೂರು ನಗರದ ದೂರವಾಣಿ ನಗರದ ಐ.ಟಿ.ಐ ಸೆಂಟ್ರಲ್ ಶಾಲೆಯ ಎನ್‌ಸಿಸಿ ಟ್ರೂಪ್‌ನ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಮಕ್ಕಳಿಂದ ಕಾರ್ಗಿಲ್ ವಿಜಯ್ ದಿವಸದ ರಜತ ಮಹೋತ್ಸವ ಕಾರ್ಯಕ್ರಮ ಜರುಗಿತು.

VISTARANEWS.COM


on

Kargil Vijay Diwas Silver Jubilee Programme at ITI Central School Bengaluru
Koo

ಬೆಂಗಳೂರು: ನಗರದ ದೂರವಾಣಿ ನಗರದ ಐ.ಟಿ.ಐ ಸೆಂಟ್ರಲ್ ಶಾಲೆಯ ಎನ್‌ಸಿಸಿ ಟ್ರೂಪ್‌ನ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಮಕ್ಕಳಿಂದ ಕಾರ್ಗಿಲ್ ವಿಜಯ್ ದಿವಸದ (Kargil Vijay Diwas) ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

ಎನ್‌ಸಿಸಿ ಕೆಡೆಟ್‌ಗಳಿಂದ ವೀರಯೋಧರ ಭಾವಚಿತ್ರಗಳಿಗೆ ಪುಷ್ಪ ಅರ್ಪಿಸಿ, ಗೌರವ ನಮನ ಸಲ್ಲಿಸಿ, ಪರೇಡ್ ನಡೆಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಈ ವೇಳೆ ಅಮರರ ಬಗ್ಗೆ ಕನ್ನಡ, ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ಅಂಕಣಗಳನ್ನು ವಾಚಿಸಿದರು. ಬಳಿಕ ಹಾಡು ಮತ್ತು ನೃತ್ಯದ ಮೂಲಕ ನಮನ ಸಲ್ಲಿಸಿದರು. ಎನ್.ಸಿ.ಸಿ. ಅಧಿಕಾರಿ ಬಾಲಕೃಷ್ಣ ವಿ.ಎಚ್. ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಇದನ್ನೂ ಓದಿ: Bengaluru Power Cut: ಜು.27, 28, 30ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲೆ ಪೊನ್ಮಲಾರ್, ಉಪಪ್ರಾಂಶುಪಾಲೆ ಶೈಲಜಾ ಆರಾಧ್ಯ, ಮುಖ್ಯ ಶಿಕ್ಷಕಿ ಅರುಣಾ ಜಾನಕಿರಾಮನ್ ಉಪಸ್ಥಿತರಿದ್ದರು.

Continue Reading

ದೇಶ

Kargil Vijay Diwas: ಕಾರ್ಗಿಲ್ ವಿಜಯದ 25ನೇ ವಾರ್ಷಿಕೋತ್ಸವ; ಜು. 26ರಂದು ಯುದ್ಧಭೂಮಿಗೆ ಮೋದಿ

ಕಾರ್ಗಿಲ್ ವಿಜಯ್ ದಿವಸ್‌ನ (Kargil Vijay Diwas) 25ನೇ ವಾರ್ಷಿಕೋತ್ಸವದ ಅಂಗವಾಗಿ ಕಾರ್ಗಿಲ್ ಯುದ್ಧ ಸ್ಮಾರಕ ಡ್ರಾಸ್‌ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಲಿದ್ದಾರೆ. 2022ರಲ್ಲಿ ಪ್ರಧಾನಿ ಮೋದಿ ಅವರು ಕಾರ್ಗಿಲ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು. ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಸಮರ್ಪಿಸಿದ್ದರು. ಬಳಿಕ 1999ರಲ್ಲಿ ಇಲ್ಲಿ ಪ್ರಾಣ ಕಳೆದುಕೊಂಡ ಸೇನಾ ಸಿಬ್ಬಂದಿಗೆ ಗೌರವ ಸಲ್ಲಿಸಿದ್ದರು.

VISTARANEWS.COM


on

By

Kargil Vijay Diwas
Koo

ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್‌ (Kargil Vijay Diwas) 25ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜುಲೈ 26ರಂದು ಲಡಾಖ್‌ನ ಡ್ರಾಸ್‌ಗೆ (Dras in Ladakh) ಭೇಟಿ ನೀಡಲಿದ್ದಾರೆ. ಇದಕ್ಕೂ ಮುನ್ನ ಲಡಾಖ್‌ನ ನಿವೃತ್ತ ಲೆಫ್ಟಿನೆಂಟ್ ಗವರ್ನರ್ ಬ್ರಿಗ್ ಬಿ.ಡಿ. ಮಿಶ್ರಾ ಅವರು ಸೆಕ್ರೆಟರಿಯೇಟ್‌ನಲ್ಲಿ ಸಭೆ ನಡೆಸಿದ್ದಾರೆ. ಡ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಭೇಟಿಯ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.

ಬಿ. ಡಿ. ಮಿಶ್ರಾ ಅವರು ಲೆಫ್ಟಿನೆಂಟ್ ಗವರ್ನರ್ ಸೆಕ್ರೆಟರಿಯೇಟ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಗಿಲ್ ಯುದ್ಧ ಸ್ಮಾರಕ ಡ್ರಾಸ್‌ಗೆ ಭೇಟಿ ನೀಡುವ ಕುರಿತು ಚರ್ಚಿಸಿದ್ದಾರೆ. ಈ ಕುರಿತು ಲೆಫ್ಟಿನೆಂಟ್ ಗವರ್ನರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಎಲ್‌ಜಿ ಮಿಶ್ರಾ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಡ್ರಾಸ್ ಬ್ರಿಗೇಡ್ ಹೆಲಿಪ್ಯಾಡ್‌ನಲ್ಲಿ ಪ್ರಧಾನಮಂತ್ರಿಯವರ ಸ್ವಾಗತದ ವ್ಯವಸ್ಥೆಗಳ ಬಗ್ಗೆ 8 ಪರ್ವತ ವಿಭಾಗದ ಜಿಒಸಿಯಿಂದ ಹೆಚ್ ಎಲ್ ಜಿ ವಿಚಾರಿಸಿದೆ. ಅವರು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಸಕಾಲಿಕವಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 2024ರ ಜುಲೈ 24ರಂದು ಡ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಭೇಟಿಯ ವ್ಯವಸ್ಥೆಗಳನ್ನು ಪರಿಶೀಲಿಸುವುದಾಗಿ ಲಡಾಖ್ ಎಲ್‌ಜಿ ಹೇಳಿದರು.

Kargil Vijay Diwas
Kargil Vijay Diwas


2022ರಲ್ಲಿ ಪ್ರಧಾನಿ ಮೋದಿ ಅವರು ಕಾರ್ಗಿಲ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು. ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಸಮರ್ಪಿಸಿದ್ದರು. ಬಳಿಕ 1999ರಲ್ಲಿ ಇಲ್ಲಿ ಪ್ರಾಣ ಕಳೆದುಕೊಂಡ ಸೇನಾ ಸಿಬ್ಬಂದಿಗೆ ಗೌರವ ಸಲ್ಲಿಸಿದ್ದರು.

ಭಾರತದಲ್ಲಿ ವಾರ್ಷಿಕವಾಗಿ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ. 1999ರಲ್ಲಿ ಆಪರೇಷನ್ ವಿಜಯ್ ವಿಜಯವನ್ನು ಇದು ನೆನಪಿಸುತ್ತದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಕಾರ್ಗಿಲ್ ಯುದ್ಧದ ಮುಕ್ತಾಯವನ್ನು ಇದು ಸೂಚಿಸುತ್ತದೆ. ಈ ಯುದ್ಧ 1999ರ ಮೇ ತಿಂಗಳಲ್ಲಿ ಪ್ರಾರಂಭವಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಸೆಕ್ಟರ್‌ನಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಭಯೋತ್ಪಾದಕರು ಒಳನುಸುಳಿದ್ದು, ಅವರನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಸೈನಿಕರು ಯಶಸ್ವಿಯಾಗಿದ್ದರು.


ಕಾರ್ಗಿಲ್ ವಿಜಯ್ ದಿವಸ್ ರಾಷ್ಟ್ರದ ರಕ್ಷಣೆಯಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರ ಧೈರ್ಯವನ್ನು ಗೌರವಿಸುತ್ತದೆ. ಭಾರತೀಯ ಸಶಸ್ತ್ರ ಪಡೆಗಳ ನಿರ್ಣಯ ಮತ್ತು ಶಕ್ತಿಯನ್ನು ಸಂಭ್ರಮಿಸುತ್ತದೆ.

ಇದನ್ನೂ ಓದಿ: Bengaluru Police: ಪೊಲೀಸರು ಇನ್ಮುಂದೆ ರೀಲ್ಸ್‌ ಮಾಡುವಂತಿಲ್ಲ: ಕಮಿಷನರ್ ಖಡಕ್‌ ಎಚ್ಚರಿಕೆ

ಕಾರ್ಗಿಲ್ ವಿಜಯ್ ದಿವಸ್ ಸೈನಿಕರ ಪ್ರಾಣ ತ್ಯಾಗಕ್ಕೆ ಗೌರವರ್ಥವಾಗಿ ಆಚರಿಸಲಾಗುತ್ತದೆ. ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ರಾಷ್ಟ್ರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಈ ವರ್ಷ ಕಾರ್ಗಿಲ್ ವಿಜಯ್ ದಿವಸ್‌ನ 25ನೇ ವಾರ್ಷಿಕೋತ್ಸವ. ಹೀಗಾಗಿ ಜುಲೈ 26ರಂದು ದೇಶದಾದ್ಯಂತ ಬಹಳ ಸಂಭ್ರಮದಿಂದ ಇದನ್ನು ಆಚರಿಸಲಾಗುತ್ತದೆ.

Continue Reading

ಕರ್ನಾಟಕ

Kargil Memory : ಕಾರ್ಗಿಲ್‌ ಯೋಧರಿಗೆ ನಮನ ಸಲ್ಲಿಸಲು 3200 ಕಿ.ಮೀ ಸೈಕಲ್‌ ತುಳಿದ ಬೆಂಗಳೂರಿನ ಹುಡುಗ್ರು!

Kargil Memory : ಕಾರ್ಗಿಲ್‌ ಯುದ್ಧದಲ್ಲಿ ವೀರ ಮರಣವನ್ನು ಅಪ್ಪಿದ ಯೋಧರ ಸಾಹಸಿಕ ಕಥೆಗಳಿಂದ ಸ್ಪೂರ್ತಿ ಪಡೆದ ಬೆಂಗಳೂರಿನ ಕಾಲೇಜು ಹುಡುಗರಿಬ್ಬರು ಸೈಕಲ್‌ನಲ್ಲೇ ಡ್ರಾಸ್‌ವೆರೆಗೆ ಹೋಗಿ ವಿಜಯ ದಿವಸದಂದು ನಮನ ಸಲ್ಲಿಸಿ ಮರಳಿದ್ದಾರೆ.

VISTARANEWS.COM


on

Kargil memory
ಕಾರ್ಗಿಲ್‌ ಯೋಧರಿಗೆ ನಮನ ಸಲ್ಲಿಸಿದ ಬೆಂಗಳೂರಿನ ವಿದ್ಯಾರ್ಥಿಗಳು
Koo

ಬೆಂಗಳೂರು: ಕಾರ್ಗಿಲ್‌ ಯುದ್ಧ (Kargil War) ನಡೆದು 23 ವರ್ಷಗಳೇ ಕಳೆದಿವೆ. ಆದರೆ, ಪಾಕಿಸ್ತಾನದ ಕುತಂತ್ರವನ್ನು ಮಣಿಸಿ ನಮ್ಮ ದೇಶದ ಗಡಿಯನ್ನು ರಕ್ಷಿಸಿಕೊಂಡ ಆ ಮಹಾಸಾಹಸದ ನೆನಪುಗಳು (Kargil Memory) ಇವತ್ತಿಗೂ ಜೀವಂತವಾಗಿವೆ. ಈ ಯುದ್ಧದ ಬಳಿಕ ಹುಟ್ಟಿದ ಮಕ್ಕಳಲ್ಲಿ ಕೂಡಾ ಈ ಕಥನಗಳು ಸ್ಫೂರ್ತಿ ತುಂಬುತ್ತಿವೆ. ಆ ಮೂಲಕ ದೇಶಭಕ್ತ ನೈಜ ಹೀರೋಗಳ ಕಥೆಗಳು (Stories of Kargil Heroes) ಜನರಿಂದ ಜನರಿಗೆ ಹರಿದಾಡುತ್ತಿವೆ. ಈ ಕಾರ್ಗಿಲ್‌ ಯೋಧರ ಕಥನದಿಂದ ಪ್ರೇರಣೆ ಪಡೆದ ಬೆಂಗಳೂರಿನ ಇಬ್ಬರು ಕಾಲೇಜು ವಿದ್ಯಾರ್ಥಿಗಳು (Two College students from Bangalore) ಸೈಕಲ್‌ (Cycle travel) ಮೂಲಕ ದೇಶ ಸುತ್ತುತ್ತಾ ಅಲ್ಲಿಗೇ ಹೋಗಿ ಕಾರ್ಗಿಲ್‌ನ ಕಡಿದಾದ ಬೆಟ್ಟಗಳ ನಡುವೆ ನಿಂತು ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ.

ಕಾರ್ಗಿಲ್‌ ಕದನದಲ್ಲಿ ವೀರ ಮರಣವನ್ನು ಅಪ್ಪಿದ ವೀರ ಯೋಧ ಕ್ಯಾಪ್ಟನ್‌ ವಿಜಯಂತ್‌ ಥಾಪರ್‌ (Captain Vijayant Thapar) ಅವರ ಸಾಹಸದಿಂದ ರೋಮಾಂಚಿತರಾದ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಸೈಕಲ್‌ ಮೂಲಕ 3200 ಕಿ.ಮೀ. ಕ್ರಮಿಸಿ ಕಾರ್ಗಿಲ್‌ಗೆ ಹೋಗಿ ಅಲ್ಲಿನ ಎನ್‌ಸಿಸಿ ಯುನಿಟ್‌ ಮೂಲಕ ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಹೋಗಿ ಬರುವ ದಾರಿಯಲ್ಲಿ ಅವರು ಭಾರತೀಯ ಯೋಧರು ಮಾಡಿದ ಹೋರಾಟ, ತ್ಯಾಗ, ಬಲಿದಾನಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದರು.

ರಾಮಯ್ಯ ಕಾಲೇಜಿನ ಬಿಬಿಎ ವಿದ್ಯಾರ್ಥಿಯಾಗಿರುವ ಕೃಷ್ಣನ್‌ ಎ ಮತ್ತು ಸೈಂಟ್‌ ಜೋಸೆಫ್‌ ಯುನಿವರ್ಸಿಟಿಯಲ್ಲಿ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿರುವ ಪೆಡ್ಡಿ ಸಾಯಿ ಕೌಶಿಕ್‌ ಅವರೇ ಈ ರೀತಿಯಾಗಿ ಕಾರ್ಗಿಲ್‌ಗೆ ಪಯಣ ಬೆಳೆಸಿದವರು. ಈಗ ಎನ್‌ಸಿಸಿ ಕೆಡೆಟ್‌ಗಳಾಗಿರುವ ಅವರಿಗೆ ಮುಂದೆ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುವ ಕನಸೂ ಇದೆ.

ಈ ಕನಸು ಹುಟ್ಟಿದ್ದು ಹೇಗೆ?

ʻʻನಾನು ಹೊಸ ವರ್ಷದ ದಿನದಂದು ಕ್ಯಾಪ್ಟನ್‌ ವಿಜಯಂತ್‌ ಥಾಪರ್‌ ಅವರ ಕುರಿತ ಒಂದು ಪುಸ್ತಕವನ್ನು ಓದುತ್ತಿದ್ದೆ. ವಿಜಯಂತ್‌ ಥಾಪರ್‌ ಅವರು 1999ರಲ್ಲಿ ನಡೆದ ಕಾರ್ಗಿಲ್‌ ಕದನದಲ್ಲಿ ವೀರಮರಣವನ್ನು ಅಪ್ಪಿದ್ದರು. ನನಗೆ ಅವರ ಹೋರಾಟದ ಕಥೆ ತುಂಬಾ ಇಷ್ಟವಾಯಿತು. ಅವರಿಗೆ ವೀರಚಕ್ರ ಪ್ರಶಸ್ತಿಯನ್ನು ಕೂಡಾ ನೀಡಿ ಗೌರವಿಸಲಾಗಿತ್ತು.. ಈ ಪುಸ್ತಕ ಓದಿದ ಬಳಿಕ ಮನೆಗೆ ಹೋಗಿ ಕೇಳಿದೆ; ಶೌರ್ಯ ಪ್ರಶಸ್ತಿ ಪಡೆದ ಯಾವುದಾದರೂ ಸೈನಿಕ ಹೆಸರು ಹೇಳಿ ಅಂತ. ಆದರೆ ಅವರಿಗೆ ಯಾರ ಹೆಸರೂ ಗೊತ್ತಿರಲಿಲ್ಲ. ನನ್ನ ಗೆಳೆಯರ ಬಳಿ ಹೋಗಿ ಕೇಳಿದೆ. ಅವರಿಗೆ ಕೂಡಾ ಒಂದು ಹೆಸರೂ ನೆನಪಿರಲಿಲ್ಲ. ಆಗ ನನಗೆ ಇಂಥ ವೀರ ಯೋಧರ, ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದವರ ಬಗ್ಗೆ ಜನರಿಗೆ ಅರಿವು ನೀಡುವ ಅಗತ್ಯವಿದೆ ಎಂದು ನನಗೆ ಅನಿಸಿತು. ಅವರು ಕೇವಲ ಒಂದೆರಡು ದಿನಗಳ ಕಾಲ ನೆನಪಲ್ಲಿ ಇರಬೇಕಾದವರಲ್ಲಿ, ದೇಶದ ಎಲ್ಲ ಜನರಿಗೆ ನಿರಂತರವಾಗಿ ನೆನಪಿನಲ್ಲಿ ಉಳಿಯುವಂತಾಗಬೇಕು, ಅದಕ್ಕಾಗಿ ಏನಾದರೂ ಮಾಡಬೇಕು ಅನಿಸಿತುʼʼ ಎಂದು ಸಾಯಿ ಕೌಶಿಕ್‌ ಅವರು ತಮ್ಮ ಸೈಕಲ್‌ ಪ್ರಯಾಣದ ಕನಸು ಹುಟ್ಟಿದ ಕಥೆಯನ್ನು ತೆರೆದಿಟ್ಟಿದ್ದಾರೆ.

ನಾವು ಮೇ ತಿಂಗಳಲ್ಲಿ ಸೈಕಲ್‌ ಯಾನ ಶುರು ಮಾಡಿದೆವು. ಜುಲೈ 26ರ ಕಾರ್ಗಿಲ್‌ ವಿಜಯ ದಿವಸ್‌ಗಿಂತ ಎರಡು ದಿನ ಮೊದಲು ಅಂದರೆ ಜುಲೈ 24ರಂದು ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ತಲುಪಿದೆವು. ನಾವು ಕನ್ಯಾಕುಮಾರಿ-ಶ್ರೀನಗರ ಹೆದ್ದಾರಿಯಲ್ಲಿ ಸಂಚಾರ ನಡೆಸಿದೆವು. ನಿಜವೆಂದರೆ ನಮ್ಮ ಪ್ರಯಾಣ ತುಂಬ ಕಷ್ಟಕರವಾಗಿತ್ತು. ಆದರೆ, ಅಂತಿಮವಾಗಿ ಗುರಿ ತಲುಪಿದಾಗ ಮ್ಯಾಜಿಕಲ್‌ ಅನುಭವವನ್ನು ಪಡೆದೆವು ಎಂದು ಕೃಷ್ಣನ್‌ ವಿವರಿಸಿದ್ದಾರೆ.

ದಾರಿಯುದ್ದಕ್ಕೂ ಸಂಕಷ್ಟಗಳ ಸರಮಾಲೆ

ನಿಜವೆಂದರೆ ನಮಗೆ ದಾರಿಯುದ್ದಕ್ಕೂ ಹಲವು ಸಮಸ್ಯೆಗಳು ಎದುರಾದವು. ನಾವು ಪಂಜಾಬ್‌ ತಲುಪುವ ಹೊತ್ತಿಗೆ ಅಲ್ಲಿ ಪ್ರವಾಹ ಎದುರಾಗಿತ್ತು. ಇದನ್ನು ದಾಟಿ ಮುಂದೆ ಸಾಗುವುದು ಸಾಧ್ಯವೇ ಇಲ್ಲ ಅಂತ ಅನಿಸಿತ್ತು. ಸಾಯಿ ಕೌಶಿಕ್‌ಗೆ ಟೈಫಾಯಿಡ್‌ ಬಂದು ಬಿಟ್ಟಿತ್ತು. ಹೀಗಾಗಿ ಪ್ರಯಾಣವನ್ನು ಎರಡು ವಾರ ನಿಧಾನಗೊಳಿಸಬೇಕಾಯಿತು. ದಾರಿ ಮಧ್ಯೆ ನನಗೆ ಅಪಘಾತವಾಗಿತ್ತು. ಹೀಗಾಗಿ ಸ್ವಲ್ಪ ವಿಶ್ರಾಂತಿ ಪಡೆಯಬೇಕಾಯಿತು. ಆದರೆ, ಅಂತಿಮವಾಗಿ ಒಂದು ದೊಡ್ಡ ಸಾಧನೆಯ ನೆಮ್ಮದಿ ನಮ್ಮದಾಯಿತು ಎಂದು ಖುಷಿಪಟ್ಟರು ಕೃಷ್ಣನ್‌.

ನಾವು ನಮ್ಮ ಎನ್‌ಸಿಸಿ ಮೂಲಕ ವಿಜಯ ದಿವಸ್‌ ಆಚರಣೆಯ ಕಾರ್ಯಕ್ರಮ ವಿಚಾರದಲ್ಲಿ ಸಂಪರ್ಕದಲ್ಲಿದ್ದೆವು. ಡ್ರಾಸ್‌ ತಲುಪುತ್ತಿದ್ದಂತೆಯೇ ನಮ್ಮ ಸಂಭ್ರಮಕ್ಕೆ ಪಾರವೇ ಇಲ್ಲ. ನಮಗೆ ಅಲ್ಲಿ ವಿಐಪಿ ಪಾಸ್‌ಗಳನ್ನು ಕೊಡಲಾಯಿತು. ಮಾತ್ರವಲ್ಲ ವೀರಯೋಧರ ಸಮಾಧಿಗಳ ಮೇಲೆ ಪುಷ್ಪ ಗುಚ್ಛ ಇಡುವ ಅವಕಾಶವನ್ನೂ ಒದಗಿಸಿದ್ದರು ಎಂದು ಅವರಿಬ್ಬರೂ ಖುಷಿ ಹಂಚಿಕೊಂಡರು.

ಇದನ್ನೂ ಓದಿ: Kargil war | ಕಾರ್ಗಿಲ್‌ ಕದನ ಕಲಿಗಳಿವರು

ಬೆಂಗಳೂರು: ಕಾರ್ಗಿಲ್‌ ಯುದ್ಧ (Kargil War) ನಡೆದು 23 ವರ್ಷಗಳೇ ಕಳೆದಿವೆ. ಆದರೆ, ಪಾಕಿಸ್ತಾನದ ಕುತಂತ್ರವನ್ನು ಮಣಿಸಿ ನಮ್ಮ ದೇಶದ ಗಡಿಯನ್ನು ರಕ್ಷಿಸಿಕೊಂಡ ಆ ಮಹಾಸಾಹಸದ ನೆನಪುಗಳು (Kargil Memory) ಇವತ್ತಿಗೂ ಜೀವಂತವಾಗಿವೆ. ಈ ಯುದ್ಧದ ಬಳಿಕ ಹುಟ್ಟಿದ ಮಕ್ಕಳಲ್ಲಿ ಕೂಡಾ ಈ ಕಥನಗಳು ಸ್ಫೂರ್ತಿ ತುಂಬುತ್ತಿವೆ. ಆ ಮೂಲಕ ದೇಶಭಕ್ತ ನೈಜ ಹೀರೋಗಳ ಕಥೆಗಳು (Stories of Kargil Heroes) ಜನರಿಂದ ಜನರಿಗೆ ಹರಿದಾಡುತ್ತಿವೆ. ಈ ಕಾರ್ಗಿಲ್‌ ಯೋಧರ ಕಥನದಿಂದ ಪ್ರೇರಣೆ ಪಡೆದ ಬೆಂಗಳೂರಿನ ಇಬ್ಬರು ಕಾಲೇಜು ವಿದ್ಯಾರ್ಥಿಗಳು (Two College students from Bangalore) ಸೈಕಲ್‌ (Cycle travel) ಮೂಲಕ ದೇಶ ಸುತ್ತುತ್ತಾ ಅಲ್ಲಿಗೇ ಹೋಗಿ ಕಾರ್ಗಿಲ್‌ನ ಕಡಿದಾದ ಬೆಟ್ಟಗಳ ನಡುವೆ ನಿಂತು ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ.

Continue Reading

ಕಾರ್ಗಿಲ್​ ವಿಜಯ್​ ದಿನ

Kargil Vijay Diwas : ಕಾರ್ಗಿಲ್‌ ವೀರರಿಗೆ ಬಾಲಿವುಡ್‌ ತಾರೆಯರು, ಗಣ್ಯರ ಭಾವುಕ ಸಂದೇಶ

ಕಾರ್ಗಿಲ್‌ ವಿಜಯ ದಿನದ (Kargil Vijay Diwas) ಪ್ರಯುಕ್ತ ಅನೇಕ ಗಣ್ಯರು ಹುತಾತ್ಮ ಯೋಧರನ್ನು ಸ್ಮರಿಸಿಕೊಂಡಿದ್ದಾರೆ. ಅವುಗಳಲ್ಲಿ ಕೆಲವು ಟ್ವೀಟ್‌ಗಳು ಇಲ್ಲಿವೆ.

VISTARANEWS.COM


on

Kargil Vijay Diwas
Koo

ಮುಂಬೈ: ಇಂದು ಕಾರ್ಗಿಲ್‌ ವಿಜಯ ದಿನ(Kargil Vijay Diwas). 1999ರಲ್ಲಿ ಕಾರ್ಗಿಲ್‌ ಯುದ್ಧದಲ್ಲಿ ದೇಶವನ್ನು ಕಾಪಾಡಲು ಪಾಕಿಸ್ತಾನಿ ಯೋಧರೊಂದಿಗೆ ಹೊಡೆದಾಡಿ ಪ್ರಾಣವನ್ನೇ ತ್ಯಾಗ ಮಾಡಿದ ಯೋಧರನ್ನು ನೆನಪಿಸಿಕೊಳ್ಳುವಂತಹ ದಿನ. ಈ ವಿಶೇಷ ದಿನದಂದು ಇಡೀ ದೇಶವೇ ಯೋಧರನ್ನು ಸ್ಮರಿಸಿಕೊಳ್ಳುತ್ತಿದೆ. ಅದೇ ರೀತಿಯಲ್ಲಿ ಬಾಲಿವುಡ್‌ನ ತಾರೆಗಳು ಹಾಗೂ ಹಲವಾರು ಗಣ್ಯರು ಕೂಡ ಯೋಧರ ಬಲಿದಾನವನ್ನು ಸ್ಮರಿಸಿ, ಅವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.

ಬಾಲಿವುಡ್‌ನ ನಟ ಅಕ್ಷಯ್‌ ಕುಮಾರ್‌ ಅವರು ಕಾರ್ಗಿಲ್‌ ವಿಜಯ ದಿನವನ್ನು ಸ್ಮರಿಸುತ್ತಾ ಟ್ವೀಟ್‌ ಮಾಡಿದ್ದಾರೆ. “ಹೃದಯದಲ್ಲಿ ಕೃತಜ್ಞತೆ ಮತ್ತು ಬಾಯಿಯಲ್ಲಿ ಪ್ರಾರ್ಥನೆಯೊಂದಿಗೆ, ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ನಮ್ಮ ಕೆಚ್ಚೆದೆಯ ಹೃದಯಗಳನ್ನು ಸ್ಮರಿಸುತ್ತೇನೆ. ಇಂದು ನಿಮ್ಮಿಂದಾಗಿ ನಾವು ಬದುಕಿದ್ದೇವೆ” ಎಂದು ಬರೆದುಕೊಂಡಿದ್ದಾರೆ.


ಹಾಗೆಯೇ ನಟಿ ನಿಮ್ರತ್‌ ಕೌರ್‌ ಅವರು ಕೂಡ ಈ ವಿಶೇಷ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ. ಕಾರ್ಗಿಲ್‌ ವಿಜಯ ದಿನದ ಅಂಗವಾಗಿ ನೋಯ್ಡಾದಲ್ಲಿ ಆಯೋಜಿಸಲಾಗಿದ್ದ ಸೈಕ್ಲಿಂಗ್‌ ಕಾರ್ಯಕ್ರಮದಲ್ಲಿ ಅವರ ತಾಯಿ ಭಾಗವಹಿಸಿದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. “ಕಾರ್ಗಿಲ್‌ ವಿಜಯ್‌ ದಿವಸ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಅಪ್ರತಿಮ ತ್ಯಾಗ ಮತ್ತು ಶೌರ್ಯವನ್ನು ಸ್ಮರಿಸುತ್ತೇನೆ. ನೋಯ್ಡಾದಲ್ಲಿ ನನ್ನ ತಾಯಿ ಕಾರ್ಗಿಲ್‌ ವಿಜಯ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ 20ಕಿ.ಮೀ. ಸೈಕ್ಲಿಂಗ್‌ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಕಾರ್ಗಿಲ್‌ ಯುದ್ಧದ ವೀರರ ಸೇವೆಯನ್ನು ನಾವು ಎಂದಿಗೂ ಮರೆಯಬಾರದು” ಎಂದು ಬರೆದುಕೊಂಡಿದ್ದಾರೆ.

ನಟ ಅಭಿಷೇಕ್‌ ಬಚ್ಚನ್‌ ಅವರೂ ಕೂಡ ಈ ದಿನವನ್ನು ಸ್ಮರಿಸಿಕೊಂಡಿದ್ದಾರೆ. ಕಾರ್ಗಿಲ್‌ ವಿಜಯ ದಿನದ ಕುರಿತಾಗಿರುವ ಪೋಸ್ಟರ್‌ ಅನ್ನು ಅವರು ತಮ್ಮ ಇನ್‌ಸ್ಟಾಗ್ರಾಂನ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.


ಹಾಗೆಯೇ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಯುವರಾಜ್‌ ಸಿಂಗ್‌ ಕೂಡ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. “ನಮ್ಮ ರಾಷ್ಟ್ರದ ಕೆಚ್ಚೆದೆಯ ಹೃದಯಗಳಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ ಅವರ ತ್ಯಾಗವನ್ನು ಎಂದಿಗೂ ಮರೆಯದಿರುವುದು. ಕಾರ್ಗಿಲ್‌ನಲ್ಲಿ ಭಾರತದ ಧ್ವಜ ಹಾರುತ್ತಲೇ ಇರುವಂತೆ ಮಾಡಿದ ಎಲ್ಲ ವ್ಯಕ್ತಿಗಳು ಮತ್ತು ಅವರ ಕುಟುಂಬದ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಕಲಾವಿದರಾಗಿರುವ ಸುದರ್ಶನ್‌ ಪಟ್ನಾಯಕ್‌ ಕೂಡ ಕಾರ್ಗಿಲ್‌ ವಿಜಯ ದಿನದ ನೆನಪನ್ನು ಮಾಡಿಕೊಂಡಿದ್ದಾರೆ. ಅವರು ಮರಳು ಕಲೆಯ ಮೂಲಕ ಕಾರ್ಗಿಲ್‌ ವಿಜಯ ದಿನದ ಶುಭಾಶಯ ತಿಳಿಸಿದ್ದಾರೆ ಹಾಗೆಯೇ ವೀರ ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ತಿಳಿಸಿದ್ದಾರೆ.

Continue Reading
Advertisement
Dina Bhavishya
ಭವಿಷ್ಯ1 ಗಂಟೆ ago

Dina Bhavishya : ಪ್ರಮುಖ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಜಾಗೃತೆ ಇರಲಿ

Dina Bhavishya
ಭವಿಷ್ಯ20 ಗಂಟೆಗಳು ago

Dina Bhavishya : ಭೂ ಸಂಬಂಧಿ ವ್ಯವಹಾರಗಳಲ್ಲಿ ಡಬಲ್‌ ಲಾಭ; ಬಹುದಿನಗಳ ಕನಸು ನನಸಾಗುವ ಕಾಲ

Hc grants interim bail to actor Darshan
ಸಿನಿಮಾ2 ದಿನಗಳು ago

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

dina bhavishya
ಭವಿಷ್ಯ2 ದಿನಗಳು ago

Dina Bhavishya : ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ

Doctors at Fortis Hospital remove fish bone from man's stomach for 5 years
ಬೆಂಗಳೂರು3 ದಿನಗಳು ago

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

murder case
ಕೊಡಗು3 ದಿನಗಳು ago

Murder case : ಸುಳಿವೆ ಇಲ್ಲದಿರುವ ಕೊಲೆ ಪ್ರಕರಣ ಭೇದಿಸಿದ ಸುಂಟಿಕೊಪ್ಪ ಪೊಲೀಸರಿಗೆ ಸನ್ಮಾನ

ಬೆಂಗಳೂರು3 ದಿನಗಳು ago

Assault Case : ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಪತಿ; ನಿಧಿಗಾಗಿ ಮಗುನಾ ಬಲಿ ಕೊಡೋಣವೆಂದು ಪತ್ನಿಗೆ ಕಿರುಕುಳ

Dina Bhavishya
ಭವಿಷ್ಯ3 ದಿನಗಳು ago

Dina Bhavishya : ಈ ದಿನ ಯಾವುದೇ ಕಾರಣಕ್ಕೂ ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ

Murder case
ಉತ್ತರ ಕನ್ನಡ4 ದಿನಗಳು ago

Murder Case : ಗಾರೆ ಕೆಲಸಕ್ಕೆ ಬಂದಿದ್ದ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪಾಪಿಗಳು

Medical negligence
ಪ್ರಮುಖ ಸುದ್ದಿ4 ದಿನಗಳು ago

Medical Negligence : ವಿಜಯನಗರದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ 5 ವರ್ಷದ ಮಗು ಬಲಿ; ಕೆರೆಗೆ ಕಾಲು ಜಾರಿ ಬಿದ್ದು ಯುವತಿ ಸಾವು

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ12 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ4 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌