Viral Video: ಭಾರಿ ಬೆಂಕಿಯಿಂದ ಹೊತ್ತಿ ಉರಿದ ಸ್ಲಮ್​ ಏರಿಯಾ; ಕೈಯಿಗೆ ಸಿಕ್ಕಿದ್ದನ್ನೆಲ್ಲ ಎತ್ತಿಕೊಂಡು ಓಡಿದ ಜನ - Vistara News

ದೇಶ

Viral Video: ಭಾರಿ ಬೆಂಕಿಯಿಂದ ಹೊತ್ತಿ ಉರಿದ ಸ್ಲಮ್​ ಏರಿಯಾ; ಕೈಯಿಗೆ ಸಿಕ್ಕಿದ್ದನ್ನೆಲ್ಲ ಎತ್ತಿಕೊಂಡು ಓಡಿದ ಜನ

ಶಾಸ್ತ್ರಿನಗರದಲ್ಲಿರುವ ಈ ಸ್ಲಮ್​​ನಲ್ಲಿ ಮನೆಗಳಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಚಿಕ್ಕಚಿಕ್ಕ ಮನೆಗಳೆಲ್ಲ ಹತ್ತಿರಹತ್ತಿರವೇ ಇರುವುದರಿಂದ ಬಹುಬೇಗನೇ ಪಸರಿಸಿದೆ.

VISTARANEWS.COM


on

Massive fire In Patna People run Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಾಟ್ನಾದ ಶಾಸ್ತ್ರಿನಗರದಲ್ಲಿರುವ ಸ್ಲಮ್​ ಏರಿಯಾವೊಂದರಲ್ಲಿ ಭಯಂಕರ ಬೆಂಕಿ (Patna Fire) ಕಾಣಿಸಿಕೊಂಡು, ಅಲ್ಲಿನ ನಿವಾಸಿಗಳು ಗಾಬರಿಯಿಂದ ಓಡಿದ್ದಾರೆ. ಆ ಕೊಳೆಗೇರಿ ಪ್ರದೇಶದಲ್ಲಿ ಪುಟ್ಟಪುಟ್ಟ ಗುಡಿಸಿಲಿನಂಥ ಮನೆಗಳಿದ್ದವು. ಒಂದಾದ ಬಳಿಕ ಒಂದು ಮನೆಗೆ ಬೆಂಕಿ ಆವರಿಸಿಕೊಂಡು ಹೋಗಿದೆ. ಇದರಿಂದಾಗಿ ಸ್ಥಳೀಯರು ತಮ್ಮತಮ್ಮ ಮನೆಯಲ್ಲಿದ್ದ ಗ್ಯಾಸ್​ ಸಿಲಿಂಡರ್​, ಟ್ರಂಕ್​​ಗಳು, ಬಟ್ಟೆಬರೆಗಳೆಲ್ಲ ಸೇರಿ, ಕೈಯಿಗೆ ಸಿಕ್ಕಿದ್ದನ್ನೆಲ್ಲ ಎತ್ತಿಕೊಂಡು ಹೊರಗೆ ಓಡಿದ್ದಾರೆ. ಇನ್ನೂ ಕೆಲವರು ದೊಡ್ಡದಾಗಿ ಕೂಗುತ್ತ, ಎಲ್ಲರೂ ಬೇಗ ಓಡಿಓಡಿ ಎಂದು ಹೇಳುತ್ತ ತಾವೂ ಓಡಿದ್ದಾರೆ. ಭಾರಿ ಬೆಂಕಿ ಬಿದ್ದು, ಆಕಾಶದೆತ್ತರಕ್ಕೆ ಹೊಗೆ ಎದ್ದಿರುವ, ಜನರೆಲ್ಲ ಓಡುತ್ತಿರುವ, ಗಾಬರಿಯಾಗಿರುವ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶಾಸ್ತ್ರಿನಗರದಲ್ಲಿರುವ ಈ ಸ್ಲಮ್​​ನಲ್ಲಿ ಮನೆಗಳಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಚಿಕ್ಕಚಿಕ್ಕ ಮನೆಗಳೆಲ್ಲ ಹತ್ತಿರಹತ್ತಿರವೇ ಇರುವುದರಿಂದ ಬಹುಬೇಗನೇ ಪಸರಿಸಿದೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದಾರೆ. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಪೊಲೀಸರು ಅಲ್ಲಿನ ಜನರನ್ನು, ಸಾಕುಪ್ರಾಣಿಗಳನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸದ್ಯದವರೆಗೆ ಯಾವುದೇ ಸಾವಿನ ವರದಿಯಾಗಿಲ್ಲ ಎನ್ನಲಾಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬರಬೇಕಿದೆ.

ಇದನ್ನೂ ಓದಿ: Kerala Train Fire : ಬೋಗಿಗೆ ಬೆಂಕಿ ಹಚ್ಚಿ 3 ಜನರ ಕೊಂದ ಆರೋಪಿ ಸೆರೆ, ಪೊಲೀಸರ ಕಾರ್ಯಾಚರಣೆ ಹೇಗಿತ್ತು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಬೆಂಗಳೂರು

Summer Special Trains: ಹಾಲಿಡೇ ಟ್ರಿಪ್‌ಗೆ ರೆಡಿನಾ? ಬೆಂಗಳೂರು-ಮೈಸೂರಿನಿಂದ ಈ ರಾಜ್ಯಗಳಿಗೆ ಸ್ಪೆಷಲ್‌ ಟ್ರೈನ್‌

Summer Special Trains: ಬೇಸಿಗೆ ರಜೆ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಇಲಾಖೆಯು ಬೆಂಗಳೂರು ಮತ್ತು ಮೈಸೂರಿನಿಂದ ಬೇರೆ ರಾಜ್ಯಗಳಿಗೆ ವಿಶೇಷ ರೈಲುಗಳ ಓಡಾಟ ಇರಲಿದೆ. ಯಾವ ನಿಲ್ದಾಣಗಳಿಂದ ಎಷ್ಟು ಗಂಟೆಗೆ ಎಲ್ಲೆಲ್ಲಿಗೆ ರೈಲುಗಳ ಸಂಚಾರ ಇರಲಿದೆ ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

By

summer special trains
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಶಾಲಾ-ಕಾಲೇಜು ಮುಗಿದಿದ್ದು ಬೇಸಿಗೆ ರಜೆ ಶುರುವಾಗಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ತೆರಳುವವರಿಗೆ, ಪ್ರವಾಸಕ್ಕೆ ಹೋಗುವವರಿಗಾಗಿ ನೈರುತ್ಯ ಇಲಾಖೆಯು ವಿಶೇಷ ರೈಲುಗಳನ್ನು (Summer Special Trains) ನಿಯೋಜನೆ ಮಾಡಿದೆ. ಬೆಂಗಳೂರು-ಮೈಸೂರಿನಿಂದ ದಕ್ಷಿಣ ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ರೈಲುಗಳ ಓಡಾಟ ಇರಲಿದೆ. ಜತೆಗೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕಾಗಿ ತಮ್ಮ ಊರುಗಳಿಗೆ ತೆರಳವು ಕಾರಣಕ್ಕೂ ವಿಶೇಷ ರೈಲು ಇರಲಿದೆ.

ಯಶವಂತಪುರದಿಂದ ಚೆನ್ನೈ ನಡುವೆ ವಿಶೇಷ ರೈಲುಗಳ ಸಂಚಾರ

ನೈರುತ್ಯ ರೈಲ್ವೆಯು ಯಶವಂತಪುರ ಹಾಗೂ ಡಾ.ಎಂ.ಜಿ.ಆರ್.ಚೆನ್ನೈ ಸೆಂಟ್ರಲ್ ನಡುವೆ 1 ಟ್ರಿಪ್ ಮತ್ತು ಎಸ್ಎಂವಿಟಿ ಬೆಂಗಳೂರು-ಹೌರಾ ನಿಲ್ದಾಣಗಳ ನಡುವೆ 6 ಟ್ರಿಪ್‌ಗಳಿಗೆ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಆ ಪ್ರಕಾರ ರೈಲು ಸಂಖ್ಯೆ 06533/06534 ಯಶವಂತಪುರ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಯಶವಂತಪುರ ಎಕ್ಸ್‌ಪ್ರೆಸ್‌ ವಿಶೇಷ (1 ಟ್ರಿಪ್) ರೈಲು ಏಪ್ರಿಲ್ 18 ರಂದು ಯಶವಂತಪುರದಿಂದ ರಾತ್ರಿ 10:45ಕ್ಕೆ ಹೊರಟು, ಮರುದಿನ ಬೆಳಗ್ಗೆ 04:55 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ. ನಂತರ ರೈಲು ಸಂಖ್ಯೆ 06534 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ಏಪ್ರಿಲ್ 19ರಂದು ಬೆಳಗ್ಗೆ 06:45ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 12.30ಕ್ಕೆ ಯಶವಂತಪುರ ತಲುಪಲಿದೆ.

ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ ಜಂಕ್ಷನ್, ಜೋಲಾರ್ಪೆಟ್ಟೈ ಜಂಕ್ಷನ್, ಅರಕ್ಕೋಣಂ ಜಂಕ್ಷನ್ ಮತ್ತು ಪೆರಂಬೂರ್ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲಲಿದೆ. ಈ ವಿಶೇಷ ರೈಲುಗಳು ಎಸಿ ಫಸ್ಟ್ ಕ್ಲಾಸ್ -1, ಎಸಿ -2 ಶ್ರೇಣಿ -2, ಎಸಿ -3 ಶ್ರೇಣಿ -6, ಸ್ಲೀಪರ್ ಕ್ಲಾಸ್ -8, ಜನರಲ್ ಸೆಕೆಂಡ್ ಕ್ಲಾಸ್ -2 ಮತ್ತು ಬ್ರೇಕ್, ಲಗೇಜ್ ಕಮ್ ಜನರೇಟರ್ ಕಾರ್ -2 ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ.

ಎಸ್ಎಂವಿಟಿ ಬೆಂಗಳೂರು-ಹೌರಾ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲು (6 ಟ್ರಪ್‌ಗಳು)

ರೈಲು ಸಂಖ್ಯೆ 06585 ಎಸ್ಎಂವಿಟಿ ಬೆಂಗಳೂರು-ಹೌರಾ ಸಾಪ್ತಾಹಿಕ ವಿಶೇಷ ರೈಲು ಏಪ್ರಿಲ್ 19, 26 ಮತ್ತು ಮೇ 3, 10, 17 ಮತ್ತು 24, ರಂದು 00:30 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಡಲಿದೆ. ಈ ರೈಲು ಮರುದಿನ 10:00 ಗಂಟೆಗೆ ಹೌರಾವನ್ನು ತಲುಪಲಿದೆ. ರೈಲು ಸಂಖ್ಯೆ 06586 ಹೌರಾದಿಂದ ಏಪ್ರಿಲ್ 20, 27, ಮೇ 4, 11, 18 ಮತ್ತು 25 ರಂದು ಮಧ್ಯಾಹ್ನ 1:05 ಗಂಟೆಗೆ ಹೊರಡಲಿದೆ. ಈ ರೈಲು ಮರುದಿನ ರಾತ್ರಿ 8:10 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ಪೆಟ್ಟೈ, ಕಟಪಾಡಿ, ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊಟ್ಟವಲಸ, ವಿಜಯನಗರಂ, ಶ್ರೀಕಾಕುಳಂ ರಸ್ತೆ, ಪಲಾಸ, ಬ್ರಹ್ಮಪುರ, ಖುರ್ದಾ ರಸ್ತೆ, ಭುವನೇಶ್ವರ, ಕಟಕ್ ಜಂಕ್ಷನ್, ಭದ್ರಾಕ್, ಬಾಲೇಶ್ವರ ಮತ್ತು ಖರಗ್ಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಇದನ್ನೂ ಓದಿ: Lok Sabha Election 2024: ಮಂಡ್ಯದಲ್ಲಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಬಂದ ದರ್ಶನ್‌; ಯಾಕೆ ಸುಮಲತಾ ಸೈಲೆಂಟ್?

ಚೆನ್ನೈ-ವೈಟ್‌ಫೀಲ್ಡ್ ನಡುವೆ ವಿಶೇಷ ರೈಲುಗಳ ಓಡಾಟ

ತಮಿಳುನಾಡು ಚುನಾವಣೆಯ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಹಿನ್ನೆಲೆಯಲ್ಲೂ ಬೇಡಿಕೆಗೆ ಅನುಗುಣವಾಗಿ ರೈಲು ಸೇವೆಯನ್ನು ಒದಗಿಸಲಾಗುತ್ತಿದೆ. ರೈಲು ಸಂಖ್ಯೆ 06005 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ವೈಟ್‌ಫೀಲ್ಡ್‌ ವಿಶೇಷ ರೈಲು ಏಪ್ರಿಲ್ 18 ಮತ್ತು 20ರಂದು ಬೆಳಗ್ಗೆ 05:35ಕ್ಕೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಹೊರಡಲಿದೆ. ಈ ರೈಲು ಅದೇ ದಿನ ಮಧ್ಯಾಹ್ನ 12 ಗಂಟೆಗೆ ವೈಟ್ ಫೀಲ್ಡ್ ತಲುಪಲಿದೆ. ಈ ರೈಲು ಅರಕ್ಕೋಣಂ ಜಂಕ್ಷನ್, ವಾಲಾಜಾ ರಸ್ತೆ, ಕಟಪಾಡಿ ಜಂಕ್ಷನ್, ಜೋಲಾರ್ಪೆಟ್ಟೈ ಜಂಕ್ಷನ್, ಕುಪ್ಪಂ ಮತ್ತು ಬಂಗಾರಪೇಟೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ಹಿಂದಿರುಗುವಾಗ ರೈಲು ಸಂಖ್ಯೆ 06006 ವೈಟ್‌ಫೀಲ್ಡ್‌-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್‌ ಏಪ್ರಿಲ್ 18 ಮತ್ತು 20 ರಂದು ಮಧ್ಯಾಹ್ನ 1ಗಂಟೆಗೆ ವೈಟ್‌ಫೀಲ್ಡ್‌ನಿಂದ ಹೊರಡಲಿದೆ. ಈ ರೈಲು ಅದೇ ದಿನ 07:00 ಗಂಟೆಗೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ. ಈ ರೈಲು ಬಂಗಾರಪೇಟೆ, ಕುಪ್ಪಂ, ಜೋಲಾರ್ಪೆಟ್ಟೈ ಜಂಕ್ಷನ್, ಕಟಪಾಡಿ ಜಂಕ್ಷನ್, ವಾಲಾಜಾ ರಸ್ತೆ, ಅರಕ್ಕೋಣಂ ಮತ್ತು ಪೆರಂಬೂರ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಈ ವಿಶೇಷ ರೈಲುಗಳು ಎಸಿ ಫಸ್ಟ್ ಕ್ಲಾಸ್-1, ಎಸಿ-2 ಟೈರ್-2, ಎಸಿ-3 ಟೈರ್-6, ಸ್ಲೀಪರ್ ಕ್ಲಾಸ್-7, ಪ್ಯಾಂಟ್ರಿ ಕಾರ್-1, ಜನರಲ್ ಸೆಕೆಂಡ್ ಕ್ಲಾಸ್-3, ಸೆಕೆಂಡ್ ಲಗೇಜ್ ಕಂ ಬ್ರೇಕ್ ವ್ಯಾನ್ಗಳು/ ಅಂಗವಿಕಲ ಬೋಗಿ-1 ಮತ್ತು ಬ್ರೇಕ್, ಲಗೇಜ್ ಮತ್ತು ಜನರೇಟರ್ ಕಾರ್-1 ಸೇರಿದಂತೆ ಒಟ್ಟು 22 ಬೋಗಿಗಳನ್ನು ಒಳಗೊಂಡಿರುತ್ತದೆ

ಎಸ್ಎಂವಿಟಿ ಬೆಂಗಳೂರು ಮತ್ತು ಕಲಬುರಗಿ ನಡುವೆ ಬೇಸಿಗೆ ವಿಶೇಷ ರೈಲು ಸೇವೆ

ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್‌ಎಂವಿಟಿ) ಮತ್ತು ಕಲಬುರಗಿ ನಡುವೆ 9 ಟ್ರಿಪ್‌ಗಳಿಗೆ ಬೇಸಿಗೆ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಈಗ ಈ ವಿಶೇಷ ರೈಲುಗಳ ಏಳು ಟ್ರಿಪ್‌ಗಳಲ್ಲಿ ದಿನಾಂಕ ಬದಲಾಗಿದೆ.

ರೈಲು ಸಂಖ್ಯೆ 06589 ಏಪ್ರಿಲ್ 21 ರಿಂದ ಮೇ 19ರವರೆಗೆ ಪ್ರತಿ ಭಾನುವಾರ ಮತ್ತು ಮಂಗಳವಾರ ರಾತ್ರಿ 11: 00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 09:05 ಗಂಟೆಗೆ ಕಲಬುರಗಿಯನ್ನು ತಲುಪಲಿದೆ. ರೈಲು ಸಂಖ್ಯೆ 06590 ಏಪ್ರಿಲ್ 22 ರಿಂದ ಮೇ 20 ರವರೆಗೆ ಪ್ರತಿ ಸೋಮವಾರ ಮತ್ತು ಬುಧವಾರ ಸಂಜೆ 05:10 ಗಂಟೆಗೆ ಕಲಬುರಗಿಯಿಂದ ಹೊರಟು ಮರುದಿನ ಬೆಳಗ್ಗೆ 04:15 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

ಮೈಸೂರಿನಿಂದಲ್ಲೂ ವಿಶೇಷ ರೈಲುಗಳ ಓಡಾಟ

ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಮೈಸೂರು-ಮುಜಾಫರ್ಪುರ ನಿಲ್ದಾಣಗಳ ನಡುವೆ ಬೇಸಿಗೆ ವಿಶೇಷ ರೈಲು ಸೇವೆ ನಾಲ್ಕು ಟ್ರಿಪ್‌ಗಳಿಗೆ ಕಾರ್ಯನಿರ್ವಹಿಸಲಿದೆ. ರೈಲು ಸಂಖ್ಯೆ 06221 ಮೈಸೂರು-ಮುಜಾಫರ್ಪುರ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು ಏಪ್ರಿಲ್ 15, 22, 29 ಮತ್ತು ಮೇ 6 ರಂದು ಬೆಳಗ್ಗೆ 10:30 ಕ್ಕೆ ಮೈಸೂರಿನಿಂದ ಹೊರಟು ಮೂರನೇ ದಿನ ಮಧ್ಯಾಹ್ನ 1:30 ಗಂಟೆಗೆ ಮುಜಾಫರ್ಪುರವನ್ನು ತಲುಪಲಿದೆ.

ರೈಲು ಸಂಖ್ಯೆ 06222 ಏಪ್ರಿಲ್ 18, 25, ಮೇ 2 ಮತ್ತು 9 ರಂದು ಮಧ್ಯಾಹ್ನ 1:00 ಗಂಟೆಗೆ ಮುಜಾಫರ್ಪುರದಿಂದ ಹೊರಟು ಮೂರನೇ ದಿನ 4:40 ಗಂಟೆಗೆ ಮೈಸೂರಿಗೆ ತಲುಪಲಿದೆ. ಈ ವಿಶೇಷ ರೈಲು ಮಂಡ್ಯ, ಕೆಎಸ್ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ಪೆಟ್ಟೈ, ಕಟಪಾಡಿ, ರೇಣಿಗುಂಟ, ಗುಡೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊಟ್ಟವಲಸ, ವಿಜಯನಗರಂ, ಶ್ರೀಕಾಕುಳಂ ರಸ್ತೆ, ಪಲಾಸ, ಬ್ರಹ್ಮಪುರ, ಖುರ್ದಾ ರಸ್ತೆ, ಭುವನೇಶ್ವರ, ಕಟಕ್ ಜಂಕ್ಷನ್, ಭದ್ರಾಕ್, ಬಾಲೇಶ್ವರ್, ಖರಗ್ಪುರ, ಡಂಕುನಿ, ಬೋಲ್ಪುರ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಲೈಫ್‌ಸ್ಟೈಲ್

Senior Citizen: 2050ರ ವೇಳೆಗೆ ಭಾರತ ‘ಮುದುಕರ ದೇಶ’ವಾಗಲಿದೆ!

Senior citizen: 2050ರ ವೇಳೆಗೆ ಭಾರತವು ವಿಶ್ವದ ಶೇ. 17 ಹಿರಿಯ ನಾಗರಿಕರನ್ನು ಹೊಂದಲಿದೆ. ಇದರಿಂದ ಅವರ ಅಗತ್ಯತೆಗಳನ್ನು ಪೂರೈಸವು ಹಿರಿಯ ನಾಗರಿಕ ಕೇಂದ್ರಗಳ ಬೇಡಿಕೆಯೂ ಹೆಚ್ಚಾಗಲಿದೆ ಎನ್ನುತ್ತದೆ ವರದಿಯೊಂದು. ಈ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Senior citizen
Koo

ನವದೆಹಲಿ: ಭಾರತವು (india) 2050ರ ವೇಳೆಗೆ 340 ಮಿಲಿಯನ್ ಹಿರಿಯ ನಾಗರಿಕರನ್ನು (Senior citizen) ಹೊಂದಲಿದೆ. ಇದು ವಿಶ್ವದ ವಯಸ್ಸಾದ ಜನಸಂಖ್ಯೆಯ (population) ಸರಿಸುಮಾರು ಶೇ. 17ರಷ್ಟು ಇರಲಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ ಸಿಬಿಆರ್ ಇ (CBRE) ಸೌತ್ ಏಷ್ಯಾದ ವರದಿ ಬುಧವಾರ ತಿಳಿಸಿದೆ.

ವಿಶ್ವದಲ್ಲೇ ಇತ್ತೀಚಿನ ವರ್ಷಗಳಲ್ಲಿ ವಿಶೇಷ ಆರೈಕೆ ಮತ್ತು ಜೀವನಶೈಲಿಯ ಆಯ್ಕೆಗಳನ್ನು ಬಯಸುತ್ತಿರುವ ಹಿರಿಯರ ಸಂಖ್ಯೆ ಹೆಚ್ಚುತ್ತಿದ್ದು, ದೇಶದಲ್ಲಿ ಹಿರಿಯ ಜೀವನ ಸೌಲಭ್ಯಗಳ ಬೇಡಿಕೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ವರದಿ ಹೇಳಿದೆ.

ದೇಶದಲ್ಲಿ ಪ್ರಸ್ತುತ ಹಿರಿಯರ ಆರೈಕೆ ಕೇಂದ್ರಗಳೂ ವೇಗವಾಗಿ ಹೆಚ್ಚಾಗುತ್ತಿದೆ. ಈಗಾಗಲೇ ರಾಷ್ಟ್ರದಾದ್ಯಂತ 18,000 ಘಟಕಗಳಿದ್ದು, ಸಂಘಟಿತ ಹಿರಿಯ ಜೀವನ ಮತ್ತು ಆರೈಕೆ ವಿಭಾಗಗಳಲ್ಲಿ ಶೇ. 62ರಷ್ಟನ್ನು ಹೊಂದಿರುವ ದಕ್ಷಿಣ ಪ್ರದೇಶದಲ್ಲೇ ಇದು ಹೆಚ್ಚಾಗಿದೆ.

ಇದನ್ನೂ ಓದಿ: Eye Protection: ಡಿಜಿಟಲ್ ಪರದೆಗಳಿಂದ ಕಣ್ಣುಗಳನ್ನು ಕಾಪಾಡಿಕೊಳ್ಳುವುದು ಹೇಗೆ?

2024ರಲ್ಲಿ ಹಿರಿಯ ಜೀವನ ಸೌಲಭ್ಯಗಳ ಒಟ್ಟು ಅಂದಾಜು ಗುರಿ ಸುಮಾರು 1 ಮಿಲಿಯನ್ ಆಗಿದ್ದು, ಮುಂದಿನ 10 ವರ್ಷಗಳಲ್ಲಿ 2.5 ಮಿಲಿಯನ್‌ಗೆ ಹೆಚ್ಚಾಗುವ ನಿರೀಕ್ಷೆಯಿದೆ.

ವೇಗವಾಗಿ ಹೆಚ್ಚಳ

ಭಾರತದ ಹಿರಿಯ ಜನಸಂಖ್ಯೆಯು ಗಮನಾರ್ಹವಾಗಿ ಶೇ. 25.4 ಬೆಳವಣಿಗೆಯಾಗುವ ನಿರೀಕ್ಷೆಯಿದೆ. ಇದು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯಾಗಿದೆ. ಭಾರತ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಹಿರಿಯ ನಾಗರಿಕರ ಪ್ರಮಾಣ ವೇಗವಾಗಿ ಬೆಳೆಯುತ್ತಿದೆ ಎಂದು ಸಿಬಿಆರ್ ಇ ಯ ಅಧ್ಯಕ್ಷ ಮತ್ತು ಸಿಇಒ ಅಂಶುಮಾನ್ ಮ್ಯಾಗಜೀನ್ ತಿಳಿಸಿದ್ದಾರೆ.


ಹೆಚ್ಚುತ್ತಿದೆ ಬೇಡಿಕೆ

ಕಳೆದ ದಶಕದಲ್ಲಿ ಭಾರತವು ಹಿರಿಯ ಜೀವನ ಯೋಜನೆಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದೆ. ಈ ವಲಯದಲ್ಲಿ ಹೆಚ್ಚುತ್ತಿರುವ ಸ್ವೀಕಾರ ಮತ್ತು ಬೇಡಿಕೆಯನ್ನುಇದು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಿರಿಯ ಆರೈಕೆ ಘಟಕಗಳಲ್ಲಿ ಹೆಚ್ಚಿನವು ಚೆನ್ನೈ, ಬೆಂಗಳೂರು, ಹೈದರಾಬಾದ್, ಕೊಯಮತ್ತೂರು, ಪುಣೆ ಮತ್ತು ದೆಹಲಿ- ಎನ್ ಸಿಆರ್ ನಗರಗಳಲ್ಲಿ ಕೇಂದ್ರೀಕೃತವಾಗಿದೆ.

ಹಲವು ಕ್ರಮ

ಭಾರತದಲ್ಲಿ ವರ್ಧಿತ ವಯೋಸಹಜ ಆರೈಕೆಗಾಗಿ ಹಿರಿಯರ ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮ (NPHCE), ರಾಷ್ಟ್ರೀಯ ಆರೋಗ್ಯ ನೀತಿ ಮತ್ತು ಸಮುದಾಯ ಆಧಾರಿತ ಕಾರ್ಯಕ್ರಮಗಳಂತಹ ಹಲವಾರು ನೀತಿ ಉಪಕ್ರಮಗಳನ್ನು ಸರ್ಕಾರವು ಕೈಗೊಳ್ಳುತ್ತದೆ.

ವಯಸ್ಸಾದ ಜನಸಂಖ್ಯೆಯ ವಿಕಸನಗೊಳ್ಳುತ್ತಿರುವ ಆದ್ಯತೆಗಳನ್ನು ಪೂರೈಸಲು ರಚನಾತ್ಮಕ ಆರೈಕೆ ಕಾರ್ಯಕ್ರಮಗಳು, ಉದ್ದೇಶಿತ ನೀತಿಗಳು ಮತ್ತು ವಿಶೇಷ ವೈದ್ಯಕೀಯ ಸೇವೆಗಳ ಅಗತ್ಯವನ್ನು ಗುರುತಿಸಲಾಗಿದೆ. ಭಾರತ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಲ್ಲಿ ಹಿರಿಯ ಆರೈಕೆ ಕ್ಷೇತ್ರದ ಉದ್ಯಮದ ಬಗ್ಗೆ ಜನ ನಾಯಕರು ಮಾತನಾಡುತ್ತಿದ್ದಾರೆ ಎಂದು ಕನ್ಸಲ್ಟಿಂಗ್ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಮಿ ಕೌಶಲ್ ತಿಳಿಸಿದ್ದಾರೆ.

Continue Reading

Latest

Lok Sabha Election 2024: ಬೇರೆಯವರು ನಮ್ಮ ಮತ ಚಲಾಯಿಸಿದರೆ ಏನು ಮಾಡಬಹುದು?

Lok sabha election 2024: ದೇಶ ಬಹುದೊಡ್ಡ ಚುನಾವಣೆಯನ್ನು ಎದುರು ನೋಡುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಮತವನ್ನು ಬೇರೆಯವರಿಗೆ ಚಲಾಯಿಸಲು ಅಧಿಕಾರ ಇದೆಯೇ ? ಒಂದು ವೇಳೆ ಬೇರೆಯವರು ನಮ್ಮ ಮತ ಚಲಾಯಿಸಿದರೆ ಏನು ಮಾಡಬೇಕು? ನಮ್ಮ ಅಸಲಿ ಮತ ವ್ಯರ್ಥವಾಗುತ್ತದೆಯೆ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

By

Lok sabha election-2024
Koo

ಲೋಕಸಭಾ ಚುನಾವಣೆ- 2024ರ (lok sabha election-2024) ಮೊದಲ ಹಂತದ ( first phase) ಚುನಾವಣೆ (election) ನಾಳೆ ದೇಶದ ಕೆಲವು ಕಡೆ ನಡೆಯಲಿದೆ. ಮತದಾರರಲ್ಲಿ (voters) ಹಲವು ಪ್ರಶ್ನೆಗಳು, ಗೊಂದಲಗಳು ಕಾಡುತ್ತಿದೆ. ಇದರಲ್ಲಿ ನಮ್ಮ ಮತವನ್ನು (vote) ಬೇರೆಯವರು ಚಲಾವಣೆ ಮಾಡಿದರೆ ಏನಾಗುತ್ತದೆ, ಈ ಸಂದರ್ಭದಲ್ಲಿ ನಾವು ಏನು ಮಾಡಬೇಕು ಎಂಬುದು ಕೂಡ ಒಂದು.

ದೇಶದ ಬಹುದೊಡ್ಡ ಚುನಾವಣೆಗಾಗಿ ಚುನಾವಣಾ ಅಧಿಕಾರಿಗಳು (election officers), ವಿವಿಧ ಪಕ್ಷಗಳ ಅಭ್ಯರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಈಗಾಗಲೇ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಆದರೆ ಇದರಲ್ಲಿ ಬಹುದೊಡ್ಡ ಪಾಲುದಾರ ಪ್ರತಿಯೊಬ್ಬ ಮತದಾರ. ಅವರ ಅಧಿಕಾರ, ಹಕ್ಕನ್ನು ಬೇರೆಯವರು ಚಲಾಯಿಸಲು ಸಾಧ್ಯವಿಲ್ಲ.

ಒಂದು ವೇಳೆ ಅಕ್ರಮವಾಗಿ ಅಥವಾ ಆಕಸ್ಮಿಕವಾಗಿ ನಮ್ಮ ಮತವನ್ನು ಬೇರೆಯವರು ಚಲಾಯಿಸಿಸಿದರೆ ಏನು ಮಾಡಬೇಕು, ಹೀಗಾದಾಗ ನಮ್ಮ ಮತದಾನದ ಹಕ್ಕನ್ನು ನಾವು ಮತ್ತೆ ಚಲಾಯಿಸಲು ಸಾಧ್ಯವೇ ? ಈ ಸಂದರ್ಭದಲ್ಲಿ ನಾವು ಏನು ಕ್ರಮ ಕೈಗೊಳ್ಳಬಹುದು ಮೊದಲಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಇದನ್ನೂ ಓದಿ: Modi Letter: ಸಾಮಾನ್ಯ ಎಲೆಕ್ಷನ್‌ ಅಲ್ಲ; ರಾಮನವಮಿ ದಿನವೇ ಎನ್‌ಡಿಎ ಅಭ್ಯರ್ಥಿಗಳಿಗೆ ಮೋದಿ ಪತ್ರ!

ಬೇರೆಯವರು ನಮ್ಮ ಮತ ಚಲಾಯಿಸಬಹುದೇ?

ಬೇರೆಯವರು ನಮ್ಮ ಮತ ಚಲಾಯಿಸಲು ಸಾಧ್ಯವಿಲ್ಲ. ಒಂದು ವೇಳೆ ಚಲಾಯಿಸಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗದಿಂದ ಒಂದು ನಿಬಂಧನೆಯನ್ನು ಮಾಡಲಾಗಿದೆ. ಮತದಾರನ ಬಳಿ ವೋಟರ್ ಐಡಿ ಮತ್ತು ವೋಟಿಂಗ್ ಸ್ಲಿಪ್ ಇದ್ದರೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ನಿಮ್ಮ ಮತವನ್ನು ಟೆಂಡರ್ಡ್ ಬ್ಯಾಲೆಟ್ ಪೇಪರ್ ಎಂದು ಗುರುತಿಸಲಾಗುತ್ತದೆ ಮತ್ತು ಪ್ರತ್ಯೇಕವಾಗಿ ಇರಿಸಲಾಗುತ್ತದೆ.


ತಕ್ಷಣ ದೂರು ನೀಡಿ

ಮತಗಟ್ಟೆ ಅಧಿಕಾರಿಯು ಮತಗಟ್ಟೆಯೊಳಗೆ ಬರುವಾಗ ನಿಮ್ಮ ಮತವು ಈಗಾಗಲೇ ಚಲಾವಣೆಯಾಗಿದೆ ಎಂದು ತಿಳಿಸಿದರೆ ಭಾರತೀಯ ಚುನಾವಣಾ ಕಾಯಿದೆ 1961ರ ಅಡಿಯಲ್ಲಿ ಯಾರಾದರೂ ನಿಮ್ಮ ಹೆಸರಿನಲ್ಲಿ ಮತ ಚಲಾಯಿಸಿದರೆ ತಕ್ಷಣ ಸ್ಥಳದಲ್ಲಿರುವ ಪ್ರಿಸೈಡಿಂಗ್ ಅಧಿಕಾರಿಗೆ ದೂರು ನೀಡಿ. ಆಗ ಟೆಂಡರ್ಡ್ ಮತವನ್ನು ಚಲಾಯಿಸಲು ಕಾನೂನು ನಿಮಗೆ ಅವಕಾಶ ನೀಡುತ್ತದೆ.

ಚುನಾವಣಾ ನಿಯಮಗಳ ನಿಯಮ 49ಪಿ ಪ್ರಕಾರ ಟೆಂಡರ್ಡ್ ಬ್ಯಾಲೆಟ್ ಪೇಪರ್ ಅನ್ನು ನಿಮಗೆ ನೀಡಲಾಗುತ್ತದೆ ಮತ್ತು ಟೆಂಡರ್ ಮಾಡಿದ ಮತಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸಹಿ ಮಾಡಬೇಕಾಗುತ್ತದೆ. ವಿದ್ಯುನ್ಮಾನ ಮತಯಂತ್ರದಲ್ಲಿ ಇದನ್ನು ಮಾಡಲು ಸಾಧ್ಯವಿಲ್ಲ. ಟೆಂಡರ್ ಮಾಡಿದ ಮತಪತ್ರವು ಬ್ಯಾಲೆಟ್ ಯೂನಿಟ್‌ನಲ್ಲಿ ಪ್ರದರ್ಶಿಸಲಾದ ಬ್ಯಾಲೆಟ್ ಪೇಪರ್‌ನಂತೆಯೇ ಇರುತ್ತದೆ. ಟೆಂಡರ್ಡ್ ಬ್ಯಾಲೆಟ್ ಪೇಪರ್ ಅನ್ನು ಪ್ರಿಸೈಡಿಂಗ್ ಅಧಿಕಾರಿಗೆ ಮರಳಿ ನೀಡಬೇಕು.

ಹೇಗೆ ಮತ ಹಾಕುವುದು?

ಬಾಣದ ಕ್ರಾಸ್ ಮಾರ್ಕ್ ರಬ್ಬರ್ ಸ್ಟಾಂಪ್ ಸಹಾಯದಿಂದ ನಿಮ್ಮ ಅಭ್ಯರ್ಥಿಯ ಆಯ್ಕೆಯನ್ನು ಗುರುತಿಸಿದ ಅನಂತರ ನೀವು ಟೆಂಡರ್ ಮಾಡಿದ ಮತಪತ್ರವನ್ನು ಪ್ರಿಸೈಡಿಂಗ್ ಅಧಿಕಾರಿಗೆ ಹಸ್ತಾಂತರಿಸಬೇಕು. ಅವರು ಅದನ್ನು ಪ್ರತ್ಯೇಕ ಕವರ್‌ನಲ್ಲಿ ಇಡುತ್ತಾರೆ.

ಚಾಲೆಂಜ್ಡ್ ವೋಟ್

ಟೆಂಡರ್ ಮಾಡಿದ ಬ್ಯಾಲೆಟ್ ಪೇಪರ್ ಅನ್ನು ಚಾಲೆಂಜ್ಡ್ ವೋಟ್ ಎಂದೂ ಕರೆಯುತ್ತಾರೆ. ಬಳಿಕ ನಿಮ್ಮ ಜಾಗದಲ್ಲಿ ಯಾರು ಮತ ಹಾಕಿದ್ದಾರೆ ಎಂಬುದನ್ನು ಚುನಾವಣಾ ಅಧಿಕಾರಿಗಳು ಪರಿಶೀಲಿಸಿ ಅದನ್ನು ತೆಗೆದು ನಿಮ್ಮ ಮತವನ್ನು ಎಣಿಕೆಗೆ ಹಾಕಲಾಗುತ್ತದೆ.

ಗುರುತಿನ ಪುರಾವೆ ನೀಡಬೇಕು

ಮತದಾರರಾಗಿ ನಿಮ್ಮ ಗುರುತಿನ ಬಗ್ಗೆ ಯಾವುದೇ ಅಭ್ಯರ್ಥಿಯ ಪೋಲಿಂಗ್ ಏಜೆಂಟ್‌ ಪ್ರಶ್ನಿಸಿದರೆ ಚುನಾವಣಾ ಅಧಿಕಾರಿಗಳು ನಿಮ್ಮ ಗುರುತಿನ ಪುರಾವೆಯನ್ನು ಕೇಳುತ್ತಾರೆ. ಇದಕ್ಕಾಗಿ ನೀವು ಎಪಿಕ್ ಅಥವಾ ಪಾಸ್‌ಪೋರ್ಟ್, ರೇಷನ್ ಕಾರ್ಡ್‌ನಂತಹ ಯಾವುದೇ ದಾಖಲೆಯನ್ನು ಹೊಂದಿರಬೇಕು. ಆದರೂ ಅವರು ಸವಾಲು ಮಾಡಿ ಮತದಾನಕ್ಕೆ ಅನುಮತಿ ನೀಡದೇ ಇದ್ದರೆ ಪ್ರಿಸೈಡಿಂಗ್ ಅಧಿಕಾರಿಯಿಂದ ಲಿಖಿತ ದೂರನ್ನು ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ.

ಎಷ್ಟು ಮತದಾರರು?

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಸುಮಾರು 97 ಕೋಟಿ ಭಾರತೀಯರು ಮತ ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಭಾರತದಲ್ಲಿ 96.88 ಕೋಟಿ ಜನರು ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ, ಇದು ವಿಶ್ವದ ಅತಿದೊಡ್ಡ ಮತದಾರರ ಪೂಲ್ ಆಗಿದೆ. ಆಯೋಗದ ಪ್ರಕಾರ, 2019 ರ ಲೋಕಸಭಾ ಚುನಾವಣೆ ಬಳಿಕ ನೋಂದಾಯಿತ ಮತದಾರರ ಸಂಖ್ಯೆ ಶೇ. 6ರಷ್ಟು ಹೆಚ್ಚಾಗಿದೆ.

ಯಾವಾಗ ನಡೆಯಲಿದೆ ಚುನಾವಣೆ?

2024ರ ಲೋಕಸಭೆ ಚುನಾವಣೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನವು ಏಪ್ರಿಲ್ 19 ರಂದು ಪ್ರಾರಂಭವಾಗಲಿದೆ. ಬಳಿಕ ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1ರಂದು ಮತದಾನ ನಡೆದು ಮತ ಎಣಿಕೆಯು ದೇಶಾದ್ಯಂತ ಜೂನ್ 4 ರಂದು ನಡೆಯಲಿದೆ.

Continue Reading

ದೇಶ

Lok Sabha Election: ನಾಳೆ ಮೊದಲ ಹಂತದ ಮತದಾನ; ಪ್ರಜಾಪ್ರಭುತ್ವದ ಹಬ್ಬಕ್ಕೆ ಹೇಗಿದೆ ಸಿದ್ಧತೆ?

Lok Sabha Election: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನವು ಶುಕ್ರವಾರ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಆರಂಭವಾಗಲಿದ್ದು, ಸಂಜೆ 5 ಗಂಟೆವರೆಗೆ ಜನರು ಹಕ್ಕು ಚಲಾಯಿಸಬಹುದಾಗಿದೆ. ಮೊದಲ ಹಂತದಲ್ಲಿ 1,626 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದ ಮತದಾನದ ಹಿನ್ನೆಲೆಯಲ್ಲಿ ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ. ಛತ್ತೀಸ್‌ಗಢದಲ್ಲಿ ನಕ್ಸಲ್‌ ದಾಳಿಯ ಭೀತಿ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

VISTARANEWS.COM


on

Lok Sabha Election
Koo

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election 2024) ಶುಕ್ರವಾರ (ಏಪ್ರಿಲ್‌ 19) ಚಾಲನೆ ಸಿಗಲಿದೆ. ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಳೆ ಮೊದಲ ಹಂತದ ಮತದಾನ (First Phase Voting) ನಡೆಯಲಿದ್ದು, ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತದಾನ ಆರಂಭವಾಗಲಿದ್ದು, ಸಂಜೆ 5 ಗಂಟೆವರೆಗೆ ಜನರು ಹಕ್ಕು ಚಲಾಯಿಸಬಹುದಾಗಿದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಜನ ಇದ್ದರೆ ಇನ್ನೂ ಒಂದು ಗಂಟೆ ವಿಸ್ತರಣೆ ಮಾಡಬಹುದಾಗಿದೆ. ಮೊದಲ ಹಂತದಲ್ಲಿ 102 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಸಿದ್ಧತೆ ಹೇಗಿದೆ? ಯಾವ ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬುದು ಸೇರಿ ವಿವಿಧ ಮಾಹಿತಿ ಇಲ್ಲಿದೆ.

ಚುನಾವಣೆ ಆಯೋಗ ಸನ್ನದ್ಧ

ಪ್ರಜಾಪ್ರಭುತ್ವದ ಹಬ್ಬವನ್ನು ಶಾಂತಿಯುತವಾಗಿ ಹಾಗೂ ಪಾರದರ್ಶಕವಾಗಿ ಆಚರಿಸಲು ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ. ಮತಗಟ್ಟೆಗಳಿಗೆ ಮತಯಂತ್ರಗಳು ಸೇರಿ ಅಗತ್ಯ ಉಪಕರಣಗಳ ರವಾನೆ, ಸಿಬ್ಬಂದಿಯ ರವಾನೆ, ಮತದಾರರಿಗೆ ಸಕಲ ರೀತಿಯ ಸೌಲಭ್ಯ ಒದಗಿಸುವುದು ಸೇರಿ ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಇನ್ನು ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಶಾಂತಿಯುತ ಮತದಾನ ಪ್ರಕ್ರಿಯೆಗೆ ಅನುವು ಮಾಡಿಕೊಡುತ್ತಿದೆ.

ನಾಳೆ ಎಲ್ಲೆಲ್ಲಿ ಮತದಾನ?

ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶುಕ್ರವಾರ ಮತದಾನ ನಡೆಯಲಿದೆ. ತಮಿಳುನಾಡಿನ 39, ಉತ್ತರಾಖಂಡ 5, ಅರುಣಾಚಲ ಪ್ರದೇಶ 2, ಮಣಿಪುರ 2, ಮಿಜೋರಾಂ 2, ನಾಗಾಲಾಂಡ್ಯ್‌ 1, ಸಿಕ್ಕಿಂ 1, ಬಿಹಾರ 4, ಛತ್ತೀಸ್‌ಗಢ 1, ಮಧ್ಯಪ್ರದೇಶ 6, ಮಹಾರಾಷ್ಟ್ರ 5, ರಾಜಸ್ಥಾನ 12, ತ್ರಿಪುರ 1, ಉತ್ತರ ಪ್ರದೇಶ 8, ಪಶ್ಚಿಮ ಬಂಗಾಳ 3, ಅಂಡಮಾನ್‌ ನಿಕೋಬಾರ್‌ ದ್ವೀಪಗಳು 1, ಜಮ್ಮು ಕಾಶ್ಮೀರ 1, ಲಕ್ಷದ್ವೀಪ 1 ಹಾಗೂ ಪುದುಚೇರಿಯ ಒಂದು ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಕಣದಲ್ಲಿರುವ ಪ್ರಮುಖರು ಯಾರು?

ಮೊದಲ ಹಂತದ ಚುನಾವಣೆಯಲ್ಲಿಯೇ ದೇಶದ ಘಟಾನುಘಟಿಗಳ ಭವಿಷ್ಯವು ಮತಯಂತ್ರದಲ್ಲಿ ಭದ್ರವಾಗಲಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ (ಕೊಯಮತ್ತೂರು), ಮಾಜಿ ರಾಜ್ಯಪಾಲೆ ತಮಿಳ್‌ಸಾಯಿ ಸುಂದರರಾಜನ್‌ (ಚೆನ್ನೈ ದಕ್ಷಿಣ), ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ (ಜಮುಯಿ), ಮಾಜಿ ಸಿಎಂ ಕಮಲ್‌ನಾಥ್‌ ಪುತ್ರ ನಕುಲ್‌ ನಾಥ್‌ (ಛಿಂದ್ವಾರ), ಕನಿಮೋಳಿ ಕರುಣಾನಿಧಿ (ತೂತುಕುಡಿ) ಸೇರಿ ಹಲವು ಪ್ರಮುಖ ಅಭ್ಯರ್ಥಿಗಳ ಭವಿಷ್ಯವು ನಾಳೆ ತೀರ್ಮಾನವಾಗಲಿದೆ.

ಲೋಕಸಭೆ ಚುನಾವಣೆಯು ಶುಕ್ರವಾರ ಆರಂಭವಾಗಲಿದ್ದು, ಜೂನ್‌ 1ರವರೆಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮೊದಲ ಹಂತದಲ್ಲಿ 1,626 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದ ಮತದಾನದ ಹಿನ್ನೆಲೆಯಲ್ಲಿ ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ. ಛತ್ತೀಸ್‌ಗಢದಲ್ಲಿ ನಕ್ಸಲ್‌ ದಾಳಿಯ ಭೀತಿ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದಲ್ಲಿ ಏಪ್ರಿಲ್‌ 26ರಂದು ಮೊದಲ ಹಂತದ ಮತದಾನ ನಡೆಯಲಿದೆ.

ಇದನ್ನೂ ಓದಿ: Priyanka Vadra: ಇವಿಎಂ ತಿರುಚದಿದ್ದರೆ ಬಿಜೆಪಿಗೆ 180 ಸೀಟೂ ಬರಲ್ಲ ಎಂದ ಪ್ರಿಯಾಂಕಾ ವಾದ್ರಾ!

Continue Reading
Advertisement
gold rate today 18
ಚಿನ್ನದ ದರ15 mins ago

Gold Rate Today: ಬಂಗಾರ ಕೊಳ್ಳುವವರಿಗೆ ತುಸು ರಿಲೀಫ್‌, ಬಹುದಿನಗಳ ನಂತರ ಬೆಲೆ ಇಳಿಕೆ; ಇಂದಿನ ದರ ಹೀಗಿದೆ

Rohit sharma
ಕ್ರೀಡೆ18 mins ago

Rohit Sharma: ಸ್ಮರಣೀಯ ಪಂದ್ಯವನ್ನಾಡಲು ಸಜ್ಜಾದ ರೋಹಿತ್​ ಶರ್ಮ

summer special trains
ಬೆಂಗಳೂರು27 mins ago

Summer Special Trains: ಹಾಲಿಡೇ ಟ್ರಿಪ್‌ಗೆ ರೆಡಿನಾ? ಬೆಂಗಳೂರು-ಮೈಸೂರಿನಿಂದ ಈ ರಾಜ್ಯಗಳಿಗೆ ಸ್ಪೆಷಲ್‌ ಟ್ರೈನ್‌

Senior citizen
ಲೈಫ್‌ಸ್ಟೈಲ್33 mins ago

Senior Citizen: 2050ರ ವೇಳೆಗೆ ಭಾರತ ‘ಮುದುಕರ ದೇಶ’ವಾಗಲಿದೆ!

Lok sabha election-2024
Latest37 mins ago

Lok Sabha Election 2024: ಬೇರೆಯವರು ನಮ್ಮ ಮತ ಚಲಾಯಿಸಿದರೆ ಏನು ಮಾಡಬಹುದು?

Darshan and Sumalatha Ambareesh
ಪ್ರಮುಖ ಸುದ್ದಿ45 mins ago

Lok Sabha Election 2024: ಮಂಡ್ಯದಲ್ಲಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಬಂದ ದರ್ಶನ್‌; ಯಾಕೆ ಸುಮಲತಾ ಸೈಲೆಂಟ್?

Uttarakaanda Movie doodh peda diganth mirchi mallige
ಸ್ಯಾಂಡಲ್ ವುಡ್57 mins ago

Uttarakaanda Movie: ʻಉತ್ತರಕಾಂಡʼ ಸಿನಿಮಾದಲ್ಲಿ ದೂದ್ ಪೇಡಾ ದಿಗಂತ್ ಈಗʻಮಿರ್ಚಿ ಮಲ್ಲಿಗೆʼ!

Shubman Gill
ಕ್ರೀಡೆ1 hour ago

Shubman Gill: ಗ್ಯಾಲರಿಯಲ್ಲಿ ಕುಳಿತಿದ್ದ ಸುಂದರ ಹುಡುಗಿಯನ್ನು ಕಂಡು ಕ್ಲೀನ್​ ಬೌಲ್ಡ್​ ಆದ ಗಿಲ್​; ವಿಡಿಯೊ ವೈರಲ್​

Lok Sabha Election
ದೇಶ1 hour ago

Lok Sabha Election: ನಾಳೆ ಮೊದಲ ಹಂತದ ಮತದಾನ; ಪ್ರಜಾಪ್ರಭುತ್ವದ ಹಬ್ಬಕ್ಕೆ ಹೇಗಿದೆ ಸಿದ್ಧತೆ?

Malaika Arora says son Arhaan mannerisms are like Arbaaz Khan
ಸಿನಿಮಾ1 hour ago

Malaika Arora: ಮಗನ ಮ್ಯಾನರಿಸಂ ಮಾಜಿ ಪತಿಯಂತೆ ಇದೆ, ಅಟ್ರ್ಯಾಕ್ಟಿವ್‌ ಇಲ್ಲ ಎಂದ ಮಲೈಕಾ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌