Miss World- 2023: 27 ವರ್ಷಗಳ ಬಳಿಕ ಭಾರತಕ್ಕೆ ಬರುತ್ತಿರುವ ʼಮಿಸ್‌ ವರ್ಲ್ಡ್‌ʼ - Vistara News

ದೇಶ

Miss World- 2023: 27 ವರ್ಷಗಳ ಬಳಿಕ ಭಾರತಕ್ಕೆ ಬರುತ್ತಿರುವ ʼಮಿಸ್‌ ವರ್ಲ್ಡ್‌ʼ

1996ರಲ್ಲಿ ಈ ಕಾರ್ಯಕ್ರಮವನ್ನು ಭಾರತ ಕೊನೆಯ ಬಾರಿಗೆ ಆಯೋಜಿಸಿತ್ತು. 27 ವರ್ಷಗಳ ನಂತರ 71ನೇ ವಿಶ್ವ ಸುಂದರಿ ಸ್ಪರ್ಧೆ ಭಾರತದ ಪಾಲಿಗೆ ಬಂದಿದೆ.

VISTARANEWS.COM


on

miss world 2023 anouned to host in india
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸ ದಿಲ್ಲಿ: 27 ವರ್ಷಗಳ ಬಳಿಕ ಮತ್ತೊಮ್ಮೆ ʼಮಿಸ್‌ ವರ್ಲ್ಡ್‌ʼ (Miss World) ಸ್ಪರ್ಧೆಯ ಆತಿಥ್ಯ ಭಾರತದ ಪಾಲಿಗೆ ಬಂದಿದೆ.

1996ರಲ್ಲಿ ಈ ಕಾರ್ಯಕ್ರಮವನ್ನು ಭಾರತ ಕೊನೆಯ ಬಾರಿಗೆ ಆಯೋಜಿಸಿತ್ತು. 27 ವರ್ಷಗಳ ನಂತರ 71ನೇ ವಿಶ್ವ ಸುಂದರಿ ಸ್ಪರ್ಧೆ ಭಾರತದ ಪಾಲಿಗೆ ಬಂದಿದೆ. 1996ರಲ್ಲಿ ಭಾರತದ ಬೆಂಗಳೂರಿನಲ್ಲಿ ನಡೆದ ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಗ್ರೀಸ್‌ನ ಐರೀನ್‌ ಸ್ಕಿಲ್ವಾ ವಿನ್ನರ್‌  (Irene Skliva) ಆಗಿದ್ದರು.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಈ ವರ್ಷ ಸ್ಪರ್ಧೆ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಭಾರತಕ್ಕೆ ಒಲಿದಿದೆ. ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲವಾದರೂ, ಈ ವರ್ಷದ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ʼʼ71ನೇ ವಿಶ್ವ ಸುಂದರಿ ಫೈನಲ್‌ ಆತಿಥೇಯ ಭಾರತ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. 30 ವರ್ಷಗಳ ಹಿಂದೆ ನಾನು ಈ ಅದ್ಭುತ ದೇಶಕ್ಕೆ ಭೇಟಿ ನೀಡಿದ ಮೊದಲ ಕ್ಷಣದಿಂದ ಭಾರತದ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದೇನೆ! ವಿಶ್ವ ದರ್ಜೆಯ ಆಕರ್ಷಣೆಗಳು ಮತ್ತು ಪ್ರಪಂಚದ ಉಳಿದ ಭಾಗಗಳೊಂದಿಗೆ ಸ್ಪರ್ಧಿಸುವ ತಾಣಗಳನ್ನು ಭಾರತ ಹೊಂದಿದೆʼʼ ಎಂದು ಮಿಸ್ ವರ್ಲ್ಡ್ ಆರ್ಗನೈಸೇಶನ್ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

130ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ತಮ್ಮ ಅನನ್ಯ ಪ್ರತಿಭೆ, ಬುದ್ಧಿವಂತಿಕೆ ಮತ್ತು ಚೆಲುವನ್ನು ಈ ಸ್ಪರ್ಧೆಯಲ್ಲಿ ಪ್ರದರ್ಶಿಸಲಿದ್ದಾರೆ. ಪ್ರತಿಭಾ ಪ್ರದರ್ಶನ, ಕ್ರೀಡಾ ಸವಾಲು, ಸೇವಾ ಉಪಕ್ರಮ ಸೇರಿದಂತೆ ಹಲವು ಕಠಿಣ ಸ್ಪರ್ಧೆಗಳ ಸರಣಿಯಲ್ಲಿ ಭಾಗವಹಿಸುತ್ತಾರೆ. ನವೆಂಬರ್/ಡಿಸೆಂಬರ್ 2023ರಲ್ಲಿ ನಿಗದಿಯಾಗಿರುವ ಗ್ರ್ಯಾಂಡ್ ಫಿನಾಲೆಗೆ ಒಂದು ತಿಂಗಳ ಮೊದಲು, ಸ್ಪರ್ಧಿಗಳ ಶಾರ್ಟ್‌ಲಿಸ್ಟ್ ಮಾಡಲು ಹಲವಾರು ಸುತ್ತುಗಳು ಇರುತ್ತವೆ.

ಭಾರತದಿಂದ ಮೊದಲ ಬಾರಿಗೆ ವಿಶ್ವ ಸುಂದರಿ ಆದವರು ರೀಟಾ ಫರಿಯಾ. 1966ರಲ್ಲಿ ಇವರು ಸ್ಪರ್ಧೆಯಲ್ಲಿ ಗೆದ್ದರು. ಐಶ್ವರ್ಯ ರೈ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ (2000) ಮತ್ತು ಇತ್ತೀಚೆಗೆ ಮಾನುಷಿ ಚಿಲ್ಲರ್ (2017) ಗೆದ್ದ ಇತರರು. ಮಿಸ್ ಇಂಡಿಯಾ ವರ್ಲ್ಡ್- 2022 ಆಗಿರುವ ಸಿನಿ ಶೆಟ್ಟಿ ಅವರು ಮಿಸ್ ವರ್ಲ್ಡ್- 2023 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಇದನ್ನೂ ಓದಿ: Viral News : ಮಿಸ್‌ ವರ್ಲ್ಡ್‌ ಕಿರೀಟದೊಂದಿಗೆ ನೆಲದ ಮೇಲೆ ಕುಳಿತು ಊಟ ಮಾಡಿದ್ದ ಐಶ್ವರ್ಯ ರೈ! ಫೋಟೊ ವೈರಲ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

SBI Debit Cards: ಎಸ್‌ಬಿಐ ಡೆಬಿಟ್‌ ಕಾರ್ಡ್‌ದಾರರಿಗೆ ಬ್ಯಾಡ್‌ ನ್ಯೂಸ್‌; ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

SBI Debit Cards: ಏಪ್ರಿಲ್‌ 1ರಿಂದ ಎಸ್‌ಬಿಐ ಡೆಬಿಟ್ ಕಾರ್ಡ್‌ ಗ್ರಾಹಕರಿಗೆ ಹೆಚ್ಚುವರಿ ಹೊರೆ ಬೀಳಲಿದೆ. ವಾರ್ಷಿಕ ನಿರ್ವಹಣಾ ಶುಲ್ಕವನ್ನು ಹೆಚ್ಚಿಸುವುದಾಗಿ ಬ್ಯಾಂಕ್‌ ಘೋಷಿಸಿದೆ.

VISTARANEWS.COM


on

SBI Debit Cards
Koo

ನವದೆಹಲಿ: ನೀವು ಎಸ್‌ಬಿಐ (State Bank of India)ಯ ಡೆಬಿಟ್‌ ಕಾರ್ಡ್‌ ಹೊಂದಿದ್ದೀರಾ? ಹಾಗಾದರೆ ನಿಮಗಿದು ಬ್ಯಾಡ್‌ ನ್ಯೂಸ್‌. ಯಾಕೆಂದರೆ ಎಸ್‌ಬಿಐ ಕೆಲವು ವರ್ಗದ ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ವಾರ್ಷಿಕ ನಿರ್ವಹಣಾ ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿದೆ (SBI Debit Cards). ಹೊಸ ದರಗಳು ಹೊಸ ಹಣಕಾಸು ವರ್ಷದ ಮೊದಲ ದಿನವಾದ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ ಎಂದು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಯಾವೆಲ್ಲ ಕಾರ್ಡ್‌ಗಳಿಗೆ ಅನ್ವಯ?

ಡೆಬಿಟ್ ಕಾರ್ಡ್‌ಗಳಾದ ಕ್ಲಾಸಿಕ್ / ಸಿಲ್ವರ್ / ಗ್ಲೋಬಲ್, ಯುವ / ಗೋಲ್ಡ್, ಪ್ಲಾಟಿನಂ ಮತ್ತು ಪ್ರೈಡ್ / ಪ್ರೀಮಿಯಂ ಬಿಸಿನೆಸ್ ವಿಭಾಗಗಳಿಗೆ ಹೊಸ ಶುಲ್ಕಗಳು ಅನ್ವಯವಾಗುತ್ತವೆ. ವಿವಿಧ ವಿಭಾಗಗಳಲ್ಲಿ ವಾರ್ಷಿಕ ನಿರ್ವಹಣಾ ಶುಲ್ಕವನ್ನು 75 ರೂ. ಹೆಚ್ಚಿಸಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.

ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಇತರ ಶುಲ್ಕಗಳನ್ನು ಸಹ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಡೆಬಿಟ್ ಕಾರ್ಡ್‌ಗಳ ವಿತರಣೆ ಮತ್ತು ಬದಲಾವಣೆಯೂ ಸೇರಿವೆ. ಗ್ರಾಹಕರು ಡೆಬಿಟ್ ಕಾರ್ಡ್ ಬದಲಾಯಿಸಲು (300 ರೂ. ಮತ್ತು ಜಿಎಸ್‌ಟಿ), ನಕಲಿ ಪಿನ್ / ಪಿನ್ ರಿಜನರೇಷನ್‌ (50 ರೂ. ಪ್ಲಸ್ ಜಿಎಸ್‌ಟಿ)ಗೆ ಶುಲ್ಕ ಪಾವತಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ವಹಿವಾಟುಗಳಂತಹ ಸೇವೆಗಳ ಫೀಸ್‌ ಬಗ್ಗೆಯೂ ಎಸ್‌ಬಿಐ ಉಲ್ಲೇಖಿಸಿದೆ. ಎಲ್ಲ ಶುಲ್ಕಗಳು ಶೇ. 18 ರಷ್ಟು ಜಿಎಸ್‌ಟಿಯನ್ನು ಒಳಗೊಂಡಿದೆ.

  • ಎಸ್‌ಬಿಐ ಕ್ಲಾಸಿಕ್, ಸಿಲ್ವರ್, ಗ್ಲೋಬಲ್, ಕಾಂಟ್ಯಾಕ್ಟ್‌ಲೆಸ್ ಡೆಬಿಟ್ ಕಾರ್ಡ್‌ಗಳ ಗ್ರಾಹಕರು ವಾರ್ಷಿಕ 200 ರೂ. ನಿರ್ವಹಣಾ ಶುಲ್ಕ ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಪ್ರಸ್ತುತ ಈ ಕಾರ್ಡ್‌ಗಳಿಗೆ 125 ರೂ. ಶುಲ್ಕ + ಜಿಎಸ್‌ಟಿ ಪಾವತಿಸಬೇಕಿದೆ.
  • ಯುವ, ಗೋಲ್ಡ್, ಕಾಂಬೋ ಡೆಬಿಟ್ ಕಾರ್ಡ್, ಮೈ ಕಾರ್ಡ್ (ಇಮೇಜ್ ಕಾರ್ಡ್)ಗೆ ಏಪ್ರಿಲ್‌ 1ರಿಂದ 250 ರೂ. + ಜಿಎಸ್‌ಟಿ ನಿರ್ವಹಣಾ ಶುಲ್ಕ ಪಾವತಿಸಬೇಕು (ಇದುವರೆಗೆ 175 ರೂ. + ಜಿಎಸ್‌ಟಿ ಇತ್ತು). ಎಸ್‌ಬಿಐ ಪ್ಲಾಟಿನಂ ಡೆಬಿಟ್ ಕಾರ್ಡ್‌ಗಳಿಗೆ 250 ರೂ. ಬದಲಿಗೆ 325 ರೂ. + ಜಿಎಸ್‌ಟಿ ವಾರ್ಷಿಕ ಶುಲ್ಕ ಪಾವತಿಸಬೇಕು.
  • ಪ್ರೈಡ್ ಮತ್ತು ಪ್ರೀಮಿಯಂ ಬ್ಯುಸಿನೆಸ್ ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣೆ ಶುಲ್ಕವು ಈಗಿನ 350 ರೂ. + ಜಿಎಸ್‌ಟಿಯಿಂದ 425 ರೂ. + ಜಿಎಸ್‌ಟಿಗೆ ಹೆಚ್ಚಾಗುತ್ತದೆ.

ಇದನ್ನೂ ಓದಿ: LIC News: ಎಲ್‌ಐಸಿ ಈಗ ನಂಬರ್‌ ಒನ್‌ ಜಾಗತಿಕ ವಿಮೆ ಬ್ರಾಂಡ್!‌

ಕ್ರೆಡಿಟ್‌ ಕಾರ್ಡ್‌ನಲ್ಲಿಯೂ ಬದಲಾವಣೆ

ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ಗಳ ಕನಿಷ್ಠ ದಿನದ ಬಿಲ್ ಲೆಕ್ಕಾಚಾರ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಘೋಷಿಸಿದೆ. ಕೆಲವು ವಿಶೇಷ ಕ್ರೆಡಿಟ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಕ್ರೆಡಿಟ್ ಕಾರ್ಡ್‌ಗಳ ಮೂಲಕ ದರ ಪಾವತಿಗಳನ್ನು ಮಾಡುವಾಗ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುವುದಿಲ್ಲ. ಇದುವರೆಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ದರ ಪಾವತಿ ಮಾಡುವವರಿಗೆ ರಿವಾರ್ಡ್ ಪಾಯಿಂಟ್ಸ್‌ ಸಿಗುತ್ತಿತ್ತು. ಇದುವರೆಗೆ ಗಳಿಸಿರುವ ರಿವಾರ್ಡ್ ಪಾಯಿಂಟ್‌ಗಳು 2024ರ ಏಪ್ರಿಲ್ 15ರ ನಂತರ ಮುಕ್ತಾಯಗೊಳ್ಳಲಿವೆ. ಅಂದರೆ ರಿವಾರ್ಡ್ ಪಾಯಿಂಟ್ಸ್‌ ಪಡೆದಿದ್ದರೆ ಈ ಅವಧಿಯೊಳಗೆ ಬಳಸಿಕೊಳ್ಳಬೇಕು. ಎಸ್‌ಬಿಐ ದೇಶದ ಎರಡನೇ ಅತಿದೊಡ್ಡ ಕ್ರೆಡಿಟ್ ಕಾರ್ಡ್ ವಿತರಕನಾಗಿದ್ದು, 18 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

ಇತರರನ್ನು ಬೆದರಿಸುವುದು ಕಾಂಗ್ರೆಸ್‌ನ ಸಂಸ್ಕೃತಿ; ಮುಖ್ಯ ನ್ಯಾಯಮೂರ್ತಿಗೆ ಬರೆದ ವಕೀಲರ ಪತ್ರಕ್ಕೆ ಮೋದಿ ಪ್ರತಿಕ್ರಿಯೆ

Narendra Modi: ಪಟ್ಟಭದ್ರ ಹಿತಾಸಕ್ತಿ ಗುಂಪು ನ್ಯಾಯಾಂಗದ ಮೇಲೆ ಒತ್ತಡ ಹೇರಲು ಮತ್ತು ನ್ಯಾಯಾಲಯಗಳನ್ನು ದೂಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ನೂರಾರು ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಬರೆದ ಪತ್ರಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ ಹೀಗಿದೆ.

VISTARANEWS.COM


on

modi
Koo

ನವದೆಹಲಿ: ಪಟ್ಟಭದ್ರ ಹಿತಾಸಕ್ತಿ ಗುಂಪು ನ್ಯಾಯಾಂಗದ ಮೇಲೆ ಒತ್ತಡ ಹೇರಲು ಮತ್ತು ನ್ಯಾಯಾಲಯಗಳನ್ನು ದೂಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ನೂರಾರು ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (DY Chandrachud) ಅವರಿಗೆ ಪತ್ರ ಬರೆದ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಮೋದಿ ಅವರು, ʼʼಇತರರನ್ನು ಬೆದರಿಸುವುದು ಕಾಂಗ್ರೆಸ್‌ನ ಸಂಸ್ಕೃತಿ. ಐದು ದಶಕಗಳ ಹಿಂದೆ ಕಾಂಗ್ರೆಸ್‌ ನಾಯಕರು ‘ಬದ್ಧ ನ್ಯಾಯಾಂಗ’ಕ್ಕೆ ಕರೆ ನೀಡಿದ್ದರು. ಅವರು ನಾಚಿಕೆಯಿಲ್ಲದೆ ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಇತರರಿಂದ ಬದ್ಧತೆಯನ್ನು ಬಯಸುತ್ತಾರೆ. ಆದರೆ ಅವರು ರಾಷ್ಟ್ರದ ಬಗ್ಗೆ ಯಾವುದೇ ಬದ್ಧತೆಯಿಂದ ತೋರುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ʼʼ140 ಕೋಟಿ ಭಾರತೀಯರು ಅವರನ್ನು ತಿರಸ್ಕರಿಸುವುದರಲ್ಲಿ ಆಶ್ಚರ್ಯವೇನಿಲ್ಲʼʼ ಎಂದು ಹೇಳಿದ್ದಾರೆ.

ವಕೀಲರು ಬರೆದ ಪತ್ರದಲ್ಲೇನಿದೆ?

ದೇಶದ 600ಕ್ಕೂ ಹೆಚ್ಚು ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದು, “ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ತರುತ್ತಿರುವ ಬೆಳವಣಿಗೆಗಳ” ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಪಟ್ಟಭದ್ರ ಹಿತಾಸಕ್ತ ಗುಂಪು ನ್ಯಾಯಾಲಯದ ತೀರ್ಪುಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ” ಎಂದು ದೂರಿದ್ದಾರೆ.

ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿದಂತೆ 600 ಮಂದಿ ವಕೀಲರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. “ಪಟ್ಟಭದ್ರ ಹಿತಾಸಕ್ತಿಯ ಗುಂಪುಗಳು ನ್ಯಾಯಾಂಗ ಪ್ರಕ್ರಿಯೆಗಳನ್ನು ನಾಜೂಕಾಗಿ ನಿರ್ವಹಿಸಲು, ನ್ಯಾಯಾಲಯದ ತೀರ್ಪುಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿರುವುದು; ಆಧಾರರಹಿತ ಆರೋಪಗಳು ಮತ್ತು ರಾಜಕೀಯ ಅಜೆಂಡಾಗಳನ್ನು ಮುಂದಿಟ್ಟು ನ್ಯಾಯಾಂಗದ ಖ್ಯಾತಿಯನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವುದನ್ನು” ವಕೀಲರು ಖಂಡಿಸಿದ್ದಾರೆ.

“ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕೀಯ ವ್ಯಕ್ತಿಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತಿದೆ. ಅಲ್ಲಿ ನ್ಯಾಯಾಲಯದ ನಿರ್ಧಾರಗಳನ್ನು ತಮಗೆ ಬೇಕಾದ ಹಾಗೆ ತಿರುಚುವ, ನ್ಯಾಯಾಂಗಕ್ಕೆ ಕಳಂಕ ಉಂಟುಮಾಡುವ ಪ್ರಯತ್ನಗಳು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತಿವೆ” ಎಂದು ಪತ್ರದಲ್ಲಿ ದೂರಲಾಗಿದೆ.

“ಒಂದು ಆತಂಕಕಾರಿ ತಂತ್ರವೆಂದರೆ‌, ನ್ಯಾಯಾಲಯಗಳ ಈಗಿನ ಕಾರ್ಯವೈಖರಿಯನ್ನು ಉದ್ದೇಶಪೂರ್ವಕ ʼಕಲ್ಪಿತ ಸುವರ್ಣಯುಗ’ಕ್ಕೆ ಹೋಲಿಸುವುದು, ಸುಳ್ಳು ನಿರೂಪಣೆಯೊಂದಿಗೆ ನ್ಯಾಯಾಂಗದ ಕಾರ್ಯನಿರ್ವಹಣೆಯ ಕುರಿತು ಅಪಕಲ್ಪನೆ ಮೂಡಿಸುವುದು. ಇಂತಹ ಸುಳ್ಳು ನಿರೂಪಣೆಗಳು ನ್ಯಾಯಾಂಗದ ಫಲಿತಾಂಶಗಳ ಮೇಲೆ ದುಷ್ಪ್ರಭಾವ ಬೀರುವ ಮತ್ತು ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುವ ಉದ್ದೇಶವನ್ನು ಹೊಂದಿವೆ” ಎಂದು ವಕೀಲರು ಆಪಾದಿಸಿದ್ದಾರೆ.

ಇದನ್ನೂ ಓದಿ: CJI DY Chandrachud: 600 ವಕೀಲರಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ; ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ಬಗೆಗೆ ಕಳವಳ

ಈ ಪತ್ರವು “ಬೆಂಚ್ ಫಿಕ್ಸಿಂಗ್‌” ಬಗ್ಗೆ ಕಳವಳ ವ್ಯಕ್ತಪಡಿಸಿದೆ. “ನ್ಯಾಯಾಂಗ ಪೀಠಗಳ ಸಂಯೋಜನೆಯ ಮೇಲೆ ಪ್ರಭಾವ ಬೀರಲು ಮತ್ತು ನ್ಯಾಯಾಧೀಶರ ಸಮಗ್ರತೆಯ ಮೇಲೆ ಹಾನಿಯೆಸಗಲು ಪ್ರಯತ್ನಗಳನ್ನು ಮಾಡಲಾಗಿದೆ. ಈ ಕ್ರಮಗಳು ನ್ಯಾಯಾಂಗಕ್ಕೆ ಅಗೌರವ ಮಾತ್ರವಲ್ಲದೆ ಕಾನೂನು ಮತ್ತು ನ್ಯಾಯದ ತತ್ವಗಳಿಗೆ ಹಾನಿಯುಂಟುಮಾಡುತ್ತವೆ” ಎಂದಿದೆ. “ಅವರು ನಮ್ಮ ನ್ಯಾಯಾಲಯಗಳನ್ನು ಕಾನೂನಿನ ಆಡಳಿತವಿಲ್ಲದ ದೇಶಗಳಿಗೆ ಹೋಲಿಸುವ ಮಟ್ಟಕ್ಕೆ ಇಳಿದಿದ್ದಾರೆ” ಎಂದು ಆರೋಪಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Actor Govinda: ಶಿವಸೇನೆ ನಾಯಕನ ಜತೆ ನಟ ಗೋವಿಂದಾ ಚರ್ಚೆ; ಚುನಾವಣಾ ಕಣಕ್ಕೆ ಎಂಟ್ರಿ?

Actor Govinda: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಚರ್ಚಿಸಲು ನಟ ಗೋವಿಂದ ಅವರು ಶಿವಸೇನೆ (ಏಕನಾಥ್‌ ಶಿಂಧೆ ಬಣ) ನಾಯಕರೊಬ್ಬರ ಜತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Actor Govinda
Koo

ಮುಂಬೈ: ಲೋಕಸಭೆ ಚುನಾವಣೆಗೆ (Lok Sabha Election 2024) ಕೆಲವೇ ದಿನಗಳು ಬಾಕಿ ಇದ್ದು, ರಾಜಕೀಯ ಪಕ್ಷಗಳು ನಟ, ನಟಿಯರು, ಸಮಾಜ ಸೇವಕರು ಸೇರಿ ಹಲವರನ್ನು ಕಣಕ್ಕೆ ಇಳಿಸುತ್ತಿವೆ. ಇದರ ಬೆನ್ನಲ್ಲೇ, ಬಾಲಿವುಡ್‌ ನಟ ಗೋವಿಂದ (Actor Govinda) ಅವರು ಶಿವಸೇನೆ (ಏಕನಾಥ್‌ ಶಿಂಧೆ) (Shiv Sena) ನಾಯಕರೊಬ್ಬರನ್ನು ಭೇಟಿಯಾಗಿದ್ದು, ಮುಂಬೈ ವಾಯವ್ಯ ಕ್ಷೇತ್ರದಿಂದ (North West Mumbai) ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾರ್ಚ್‌ ತಿಂಗಳ ಆರಂಭದಲ್ಲಿ ನಟ ಗೋವಿಂದ ಅವರು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರನ್ನು ಭೇಟಿಯಾಗಿದ್ದರು. ಇದಾದ ಬಳಿಕವೇ, ನಟ ಗೋವಿಂದ ಅವರು ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಮತ್ತೆ ಶಿವಸೇನೆ ನಾಯಕರೊಬ್ಬರನ್ನು ಗೋವಿಂದ ಅವರು ಭೇಟಿಯಾಗಿದ್ದು, ವದಂತಿಗಳ ತೀವ್ರತೆ ಇನ್ನೂ ಜಾಸ್ತಿಯಾಗಿದೆ. ಆದಾಗ್ಯೂ, ಸ್ಪರ್ಧೆ ಕುರಿತು ಗೋವಿಂದ ಅವರಾಗಲಿ, ಶಿವಸೇನೆಯಾಗಿ ಇದುವರೆಗೆ ಯಾವುದೇ ಘೋಷಣೆ ಮಾಡಿಲ್ಲ.

ಮೂಲಗಳ ಪ್ರಕಾರ, ನಟ ಗೋವಿಂದ ಅವರು ಜುಹುವಿನಲ್ಲಿ ಶಿವಸೇನೆ ನಾಯಕ ಕೃಷ್ಣ ಹೆಗಡೆ ಅವರನ್ನು ಭೇಟಿಯಾಗಿ, ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Rekha Patra: ಸಂದೇಶ್‌ಖಾಲಿ ಸಂತ್ರಸ್ತೆಗೆ ಟಿಕೆಟ್‌ ನೀಡಿದ ಬಿಜೆಪಿ; ಯಾರಿವರು ರೇಖಾ ಪಾತ್ರಾ?

ನಟ ಗೋವಿಂದಗೆ ಇದು 2ನೇ ಇನ್ನಿಂಗ್ಸ್‌

ಹೀರೋ ನಂಬರ್‌ 1 ಖ್ಯಾತಿಯ ನಟ ಗೋವಿಂದ ಅವರು ಮತ್ತೆ ಚುನಾವಣಾ ರಾಜಕೀಯಕ್ಕೆ ಇಳಿದರೆ, ಇದು ಅವರಿಗೆ ಎರಡನೇ ಇನ್ನಿಂಗ್ಸ್‌ ಆಗಲಿದೆ. ಗೋವಿಂದ ಅವರು 2004ರಲ್ಲಿ ಮುಂಬೈ ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲ, ಬಿಜೆಪಿಯ ರಾಮ್‌ ನಾಯಕ್‌ ಅವರನ್ನು ಗೋವಿಂದ ಸೋಲಿಸಿದ್ದರು. ಆದರೆ, ಕಾರಣಾಂತರಗಳಿಂದ ಗೋವಿಂದ ಅವರು ಬಳಿಕ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ಈಗ ಶಿವಸೇನೆ ಮೂಲಕ ಅವರು ಮತ್ತೆ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂದೇ ಹೇಳಲಾಗುತ್ತಿದೆ.

ನಸೀಬ್‌, ಹೀರೋ ನಂಬರ್‌ 1, ಪಾರ್ಟ್‌ನರ್‌, ರಾಜು ಬಾಬು, ಕೂಲಿ ನಂಬರ್‌ 1, ಧುಲೆ ರಾಜ ಸೇರಿ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ತಪ್ಪದ ಸಂಕಷ್ಟ; ಇನ್ನೂ 4 ದಿನ ಜೈಲೇ ಗತಿ!

Arvind Kejriwal: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಇನ್ನೂ 4 ದಿನ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಇ.ಡಿ ಕಸ್ಟಡಿಗೆ ನೀಡಿದೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರ ಇ.ಡಿ ಕಸ್ಟಡಿಯನ್ನು ಏಪ್ರಿಲ್‌ 1ರವರೆಗೆ ವಿಸ್ತರಿಸಿದೆ. ಕಸ್ಟಡಿಯ ಅವಧಿಯು ಗುರುವಾರ (ಮಾರ್ಚ್‌ 28) ಮುಗಿಯುವ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು (ED Officials) ಕೇಜ್ರಿವಾಲ್‌ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದರು. ಇನ್ನೂ ಒಂದು ವಾರ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದರು. ಆದರೆ, ನ್ಯಾಯಾಲಯವು ನಾಲ್ಕು ದಿನಗಳವರೆಗೆ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಇ.ಡಿ ಕಸ್ಟಡಿಗೆ ನೀಡಿತು.

ಅರವಿಂದ್‌ ಕೇಜ್ರಿವಾಲ್‌ ಪರ ವಾದ ಮಂಡಿಸಿದ ವಕೀಲರು, “ಅರವಿಂದ್‌ ಕೇಜ್ರಿವಾಲ್‌ ಅವರ ಬಂಧನಕ್ಕೆ ಬಲವಾದ ಕಾರಣಗಳೇ ಇಲ್ಲ. ಇ.ಡಿ, ಸಿಬಿಐ ದಾಖಲೆಗಳಲ್ಲಿ ಕೇವಲ ನಾಲ್ಕು ಕಡೆ ಅರವಿಂದ್‌ ಕೇಜ್ರಿವಾಲ್‌ ಅವರ ಹೆಸರಿದೆ. ಇವರನ್ನು ಏಕೆ ಬಂಧಿಸಿದ್ದಾರೆ ಎಂಬುದೇ ಅಧಿಕಾರಿಗಳಿಗೆ ಗೊತ್ತಿಲ್ಲ” ಎಂಬುದಾಗಿ ಹೇಳಿದರು. ಇನ್ನು, 100 ಕೋಟಿ ರೂ. ಲಂಚದ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರನ್ನು ಇನ್ನೂ ಒಂದು ವಾರ ವಿಚಾರಣೆ ನಡೆಸಬೇಕು ಎಂಬುದಾಗಿ ಇ.ಡಿ ಅಧಿಕಾರಿಗಳು ಮನವಿ ಮಾಡಿದರು. ಕೊನೆಗೆ ನ್ಯಾಯಾಲಯವು ನಾಲ್ಕು ದಿನ ಇ.ಡಿ ಕಸ್ಟಡಿಗೆ ನೀಡಿತು.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 21ರಂದು ಅರವಿಂದ್‌ ಕೇಜ್ರಿವಾಲ್‌ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸಿದ್ದರು. ಇದಾದ ಬಳಿಕ ಮಾರ್ಚ್‌ 28ರವರೆಗೆ ನ್ಯಾಯಾಲಯವು ಅವರನ್ನು ಇ.ಡಿ ಕಸ್ಟಡಿಗೆ ನೀಡಿತ್ತು. ಇನ್ನು, ಅರವಿಂದ್‌ ಕೇಜ್ರಿವಾಲ್‌ ಅವರ ಬಂಧನ ಖಂಡಿಸಿ ಆಪ್‌ ಮುಖಂಡರು ಹಾಗೂ ಕಾರ್ಯಕರ್ತರ ಪ್ರತಿಭಟನೆ ಮುಂದುವರಿದಿದೆ.

ಸಿಎಂ ಸ್ಥಾನ ಅಬಾಧಿತ

ಅಬಕಾರಿ ನೀತಿ ಜಾರಿ ಹಗರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಬೇಕು ಎಂಬುದಾಗಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ. “ಇದೆಲ್ಲ ಶಾಸಕಾಂಗದ ಕೆಲಸ. ಯಾವುದೇ ಮುಖ್ಯಮಂತ್ರಿಯನ್ನು ಹುದ್ದೆಯಿಂದ ಕೆಳಗಿಳಿಸುವ ಅಧಿಕಾರ ನ್ಯಾಯಾಲಯಕ್ಕಿಲ್ಲ” ಎಂದು ಕೋರ್ಟ್‌ ಸ್ಪಷ್ಟಪಡಿಸಿತು.

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಕೆ. ಕವಿತಾ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ ಬಂಧನ: ಮತ್ತೆ ಅಮೆರಿಕ ಕ್ಯಾತೆ; ಕಾಂಗ್ರೆಸ್‌ ಬ್ಯಾಂಕ್‌ ಅಕೌಂಟ್‌ ನಿರ್ಬಂಧ ಕುರಿತೂ ಕಿರಿಕ್

ದೆಹಲಿ ಜಲ ಮಂಡಳಿ ಗುತ್ತಿಗೆ ಮಂಜೂರು ಮಾಡುವಾಗ ಕೂಡ ಅಕ್ರಮ ನಡೆದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಜಾರಿ ನಿರ್ದೇಶನಾಲಯವು ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ. ಮತ್ತೊಂದೆಡೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇ.ಡಿ ಸಲ್ಲಿಸಿದ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಇದರಿಂದ ಅವರು ತಾತ್ಕಾಲಿಕವಾಗಿ ರಿಲೀಫ್‌ ಪಡೆದಿದ್ದರು. ಆದರೆ, ಈಗ ಬಂಧನದಿಂದ ರಕ್ಷಣೆಗೆ ನೀಡದ ಕಾರಣ ಅವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Rajasthan Royals
ಪ್ರಮುಖ ಸುದ್ದಿ3 mins ago

IPL 2024 : ಬದಲಿ ಆಟಗಾರರನ್ನು ಘೋಷಿಸಿದ ರಾಜಸ್ಥಾನ್​ ರಾಯಲ್ಸ್​, ಕೆಕೆಆರ್​​

SBI Debit Cards
ವಾಣಿಜ್ಯ5 mins ago

SBI Debit Cards: ಎಸ್‌ಬಿಐ ಡೆಬಿಟ್‌ ಕಾರ್ಡ್‌ದಾರರಿಗೆ ಬ್ಯಾಡ್‌ ನ್ಯೂಸ್‌; ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

Rishabh Pant -IPL 2024
ಕ್ರೀಡೆ36 mins ago

Rishabh Pant : ಡೆಲ್ಲಿ ಪರ 100ನೇ ಪಂದ್ಯವಾಡಿದ ರಿಷಭ್ ಪಂತ್​!

Parliament Flashback
ಕರ್ನಾಟಕ1 hour ago

Parliament Flashback: ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದು, ಬಿಜೆಪಿಯಿಂದ ಸ್ಪರ್ಧಿಸಿದಾಗ ಸೋತು ಹೋಗಿದ್ದ ಒಡೆಯರ್‌!

Lok Sabha Election 2024 HD Kumaraswamy to file nomination for Mandya Lok Sabha seat on April 4
ಕರ್ನಾಟಕ1 hour ago

Lok Sabha Election 2024: ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮುಖಂಡರ ಸಮನ್ವಯ ಸಭೆ ಯಶಸ್ವಿ; ಏ. 4ಕ್ಕೆ ಹೆಚ್ಡಿಕೆ ನಾಮಪತ್ರ ಸಲ್ಲಿಕೆ

IPL 2024- Jayadev Unadkat
ಕ್ರೀಡೆ1 hour ago

IPL 2024 : ಐಪಿಎಲ್ ಇತಿಹಾಸದಲ್ಲಿ ವಿಭಿನ್ನ ಸಾಧನೆ ಮಾಡಿದ ಎಸ್​ಆರ್​​ಎಚ್​​ ಬೌಲರ್​ ಉನಾದ್ಕಟ್​

bengaluru dc
ಬೆಂಗಳೂರು2 hours ago

Hindu Temple: ಜಾತ್ರೆ, ಉತ್ಸವಗಳಲ್ಲಿ ಹಿಂದುಯೇತರರ ಅಂಗಡಿಗೆ ಅನುಮತಿ ನೀಡಬೇಡಿ; ಜಿಲ್ಲಾಧಿಕಾರಿಗೆ ಮನವಿ

minister Lakshmi hebbalkar latest statement
ಬೆಳಗಾವಿ2 hours ago

Belagavi News: ಕರ್ಮಭೂಮಿ ಎನ್ನಲು ಏನಿದೆ ಬೆಳಗಾವಿಗೆ ನಿಮ್ಮ ಕೊಡುಗೆ? ಶೆಟ್ಟರ್‌ಗೆ ಹೆಬ್ಬಾಳ್ಕರ್ ಪ್ರಶ್ನೆ

Chikkaballapura lok sabha constituency congress ticket aspirants Sivasankar Reddy Veerappa Moily and Raksha Ramayya
Lok Sabha Election 20242 hours ago

Lok Sabha Election 2024: ಕಾಂಗ್ರೆಸ್‌ಗೆ ಚಿಕ್ಕಬಳ್ಳಾಪುರ ಟೆನ್ಶನ್‌; ಟಿಕೆಟ್‌ ಸಿಗದಿದ್ದರೆ ಪಕ್ಷ ತೊರೆಯುವ ಎಚ್ಚರಿಕೆ ಕೊಟ್ಟ ಶಿವಶಂಕರ ರೆಡ್ಡಿ!

Karnataka Weather
ಮಳೆ2 hours ago

Karnataka Weather : ಕಲಬುರಗಿಯಲ್ಲಿ 40ರ ಗಡಿದಾಟಿದ ತಾಪಮಾನ; 4 ಜಿಲ್ಲೆಗಳಿಗೆ ಹೀಟ್‌ ವೇವ್‌ ಅಲರ್ಟ್‌

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20247 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20248 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ16 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌