ದೇಶ
ಬಿಜೆಪಿಯೇತರ ಸರ್ಕಾರಗಳಿಂದ ಜನರಿಗೆ ಅನ್ಯಾಯ: ಇಂಧನ ತೆರಿಗೆ ಇಳಿಸಿದ ಬೊಮ್ಮಾಯಿ ಸರ್ಕಾರಕ್ಕೆ ಮೋದಿ ಶ್ಲಾಘನೆ
ಕರ್ನಾಟಕ ತೆರಿಗೆ ಕಡಿತದಿಂದ ₹5,000 ಕೋಟಿ ಗುಜರಾತ್ ₹3,500 ಕೋಟಿ ತೆರಿಗೆ ನಷ್ಟವನ್ನು ಜನರ ಒಳಿತಿಗಾಗಿ ಅನುಭವಿಸಿವೆ ಎಂದು ಮೋದಿ ಶ್ಲಾಘನೆ ವ್ಯಕ್ತಪಡಿಸಿದರು.
ಬೆಂಗಳೂರು: ದೇಶದಲ್ಲಿ ದಿನೇದಿನೆ ಇಂಧನ ದರ ಹೆಚ್ಚಳವಾಗುತ್ತ ಜನರ ಜೇಬನ್ನು ಸುಡುತ್ತಿದೆ. ಕೇಂದ್ರ ಸರ್ಕಾರದ ಕೋರಿಕೆಯನ್ನು ಮನ್ನಿಸದೆ ಅನೇಕ ರಾಜ್ಯ ಸರ್ಕಾರಗಳು ಇಂಧನದ ಮೇಲಿನ ತಮ್ಮ ತೆರಿಗೆಯನ್ನು ಕಡಿತ ಮಾಡದ ಪರಿಣಾಮವಾಗಿ ಆ ರಾಜ್ಯಗಳ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರಧಾನಿ ಮೋದಿ ಬುಧವಾರ ದೂಷಿಸಿದ್ದಾರೆ.
ಕೋವಿಡ್-19 ಪರಿಸ್ಥಿತಿ ಕುರಿತು ಚರ್ಚಿಸಲು ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಲಾಗಿದ್ದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಮತ್ತು ಆರೋಗ್ಯ ಸಚಿವರ ಸಭೆಯನ್ನುದ್ದೇಸಿಸಿ ಮೋದಿ ಮಾತನಾಡಿದರು. (ಕಾರ್ಯಕ್ರಮದಲ್ಲಿ ಮೋದಿ ಭಾಷಣದ ಪೂರ್ಣ ಪಾಠಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ)
ತಮ್ಮ 20 ನಿಮಿಷದ ಭಾಷಣದ ಆರಂಭದಲ್ಲಿ ಕೋವಿಡ್ ಕುರಿತು ಮಾತನಾಡಿದ ಮೋದಿ, ಅಂತಿಮ ಹಂತದಲ್ಲಿ ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಪ್ರಸ್ತಾಪಿಸಿದರು. ಕೋವಿಡ್ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿದ್ದರಿಂದಲೇ ದೇಶದಲ್ಲಿ ಸೋಂಕನ್ನು ಹತ್ತಿಕ್ಕಲು ಸಾಧ್ಯವಾಯಿತು ಎಂದು ಶ್ಲಾಘಿಸಿದ ಮೋದಿ, ಇಂಧನ ವಿಚಾರಕ್ಕೆ ಹೊರಳಿದರು.
ಜಾಗತಿಕ ಪರಿಸ್ಥಿತಿಯಲ್ಲಿ ಭಾರತದ ಆರ್ಥಿಕ ನಿರ್ಣಯಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳ ಸಂಯೋಜನೆ ಹಿಂದಿಗಿಂತ ಹೆಚ್ಚು ಅವಶ್ಯಕವಿದೆ. ಇದೀಗ ಯುದ್ಧ ಪರಿಸ್ಥಿತಿ ಉಂಟಾಗಿದೆ. ಸಪ್ಲೈ ಚೈನ್ ಪರಿಣಾಮ ನೋಡಿದರೆ, ಪ್ರತಿದಿನ ಸವಾಲು ಹೆಚ್ಚಾಗುತ್ತಿದೆ. ಈ ಯುದ್ಧ ಅನೇಕ ಸವಾಲು ತಂದೊಡ್ಡುತ್ತಿದೆ. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಮನ್ವಯತೆಯನ್ನು ಮತ್ತಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ.
ಪೆಟ್ರೋಲ್ ಡೀಸೆಲ್ ದರ ಹೆಚ್ಚಳವಾಗಿರುವುದರ ಕುರಿತು ದೇಶದೆಲ್ಲೆಡೆ ಚರ್ಚೆ ನಡೆಯುತ್ತಿದೆ. ದೇಶವಾಸಿಗಳ ಮೇಲೆ ಇದರ ಭಾರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಸುಂಕ ಕಡಿಮೆ ಮಾಡಿದೆ. ರಾಜ್ಯಗಳೂ ತಮ್ಮ ತೆರಿಗೆಯನ್ನು ಕಡಿತ ಮಾಡಲು ಕಳೆದ ನವೆಂಬರ್‌ನಲ್ಲೆ ಆಗ್ರಹ ಮಾಡಲಾಗಿತ್ತು. ಇದರ ಲಾಭವನ್ನು ನಾಗರಿಕರಿಗೆ ತಲುಪಿಸಲು ಕೋರಿದ್ದೆವು. ಕೆಲವು ರಾಜ್ಯಗಳು ಕಡಿಮೆ ಮಾಡಿದವು. ಆದರೆ ಕೆಲವು ರಾಜ್ಯಗಳಿಂದಾಗಿ ಅವರ ನಾಗರಿಕರಿಗೆ ಅದರ ಲಾಭ ಸಿಕ್ಕಿಲ್ಲ. ಇದರಿಂದಾಗಿ ಈ ರಾಜ್ಯಗಳಲ್ಲಿ ಬೇರೆಯವರ ಹೋಲಿಕೆಯಲ್ಲಿ ಇಂಧನ ದರ ಹೆಚ್ಚಿದೆ. ಇದು ಈ ರಾಜ್ಯಗಳ ಜನರಿಗೆ ಅನ್ಯಾಯ ಹಾಗೂ ಪಕ್ಕದ ರಾಜ್ಯಗಳ ಮೇಲೆಯೂ ಹೊರೆಯಾಗುತ್ತಿದೆ ಎಂದರು.
ಇದನ್ನೂ ಓದಿ: ಪ್ರತಿ ಪ್ರಧಾನಿಯನ್ನೂ ಸ್ಮರಿಸುವ ಪ್ರಯತ್ನ: ‘ಮನ್ ಕಿ ಬಾತ್’ ನಲ್ಲಿ PM ಸಂಗ್ರಹಾಲಯ ಪ್ರಸ್ತಾಪಿಸಿದ ಮೋದಿ
ಕೇಂದ್ರದ ಕೋರಿಕೆಯನ್ನು ಮನ್ನಿಸಿ ರಾಜ್ಯಗಳ ಅಬಕಾರಿ ಸುಂಕವನ್ನು ಕಡಿತ ಮಾಡಿದ ಕರ್ನಾಟಕ ಹಾಗೂ ಗುಜರಾತ್ ಸರ್ಕಾರಗಳನ್ನು ಪ್ರಸ್ತಾಪಿಸಿದ ಮೋದಿ ಪರೋಕ್ಷವಾಗಿ ಶ್ಲಾಘನೆ ವ್ಯಕ್ತಪಡಿಸಿದರು. 2021ರ ನವೆಂಬರ್ ತಿಂಗಳಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಿದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳುತಮ್ಮ ತೆರಿಗೆಯನ್ನು ಕಡಿತ ಮಾಡಬೇಕು ಎಂಬ ಒತ್ತಾಯ ಹೆಚ್ಚಾಗಿತ್ತು. ಈ ಸಮಯದಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆಯನ್ನು ₹5 ಹಾಗೂ ಡೀಸೆಲ್ ಮೇಲಿನ ಅಬಕಾರಿ ತೆರಿಗೆಯನ್ನು ₹10 ಕಡಿತ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ದೀಪಾವಳಿ ಉತ್ಸವಕ್ಕೂ ಮುನ್ನ ಕೈಗೊಂಡ ಈ ನಿರ್ಧಾರವನ್ನು ರಾಜ್ಯ ಸರ್ಕಾರಗಳೂ ಅನುಸರಿಸಲು ಕೋರಲಾಗಿತ್ತು.ʼ
ರಾಜ್ಯ ಸರ್ಕಾರಗಳು ಇಂಧನದ ಮೇಲೆ ವಿಧಿಸುವ ತೆರಿಗೆಯನ್ನು ಕಡಿತ ಮಾಡಿ, ಜನರಗೆ ಅನುಕೂಲ ಮಾಡಿಕೊಡಲು ತಿಳಿಸಲಾಗಿತ್ತು. ಈ ಕರೆಗೆ ಓಗೊಟ್ಟ ಕರ್ನಾಟಕ, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತನ್ನ ತೆರಿಗೆ ಪಾಲನ್ನು ಕಡಿತ ಮಾಡಿತ್ತು. ₹104.50 ಇದ್ದ ಡೀಸೆಲ್ ದರ ₹19.47 ಕಡಿಮೆಯಾಗಿ ₹85.03 ಹಾಗೂ ಪೆಟ್ರೋಲ್ ದರ ₹113.93ರಿಂದ ₹13.30 ಕಡಿಮೆಯಾಗಿ ₹100.63 ಆಗಿತ್ತು. ಕೇಂದ್ರ ಸರ್ಕಾರದ ಕರೆಗೆ ಓಗೊಟ್ಟು ಜನಪರ ತೀರ್ಮಾನ ಕೈಗೊಂಡ ಮೊದಲ ರಾಜ್ಯ ಕರ್ನಾಟಕ ಎಂದು ಎಂದು ಸಿಎಂ. ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಆನಂತರದಲ್ಲಿ ಗುಜರಾತ್ ಸೇರಿ ಕೆಲವು ರಾಜ್ಯಗಳು ಇದೇ ಕ್ರಮವನ್ನು ಅನುಸರಿಸಿದ್ದವು.
ಈ ವಿಚಾರವನ್ನು ಬುಧವಾರದ ಭಾಷಣದಲ್ಲಿ ಮೋದಿ ಪ್ರಸ್ತಾಪಿಸಿದರು. ಕರ್ನಾಟಕ ತೆರಿಗೆ ಕಡಿತ ಮಾಡದಿದ್ದರೆ ₹5,000 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹವಾಗುತ್ತಿತ್ತು. ಅದೇ ರೀತಿ ತೆರಿಗೆ ಕಡಿಮೆ ಮಾಡಿದ್ದರಿಂದ ಗುಜರಾತ್ ರಾಜ್ಯಕ್ಕೆ ಸುಮಾರು ₹3,500 ಕೋಟಿ ತೆರಿಗೆ ನಷ್ಟವಾಗಿದೆ. ಇದೇ ವೇಳೆ ಗುಜರಾತ್ ಹಾಗೂ ಕರ್ನಾಟಕದ ಪಕ್ಕದ ರಾಜ್ಯಗಳು ₹3,500-₹5,000 ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹಿಸಿವೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ, ಜಾರ್ಖಂಡ್ ಸೇರಿ ಅನೇಕ ಕಾರಣಗಳಿಂದ ಕೇಂದ್ರದ ಮಾತನ್ನು ಕೇಳಿಲ್ಲ. ಆ ರಾಜ್ಯದ ಜನರ ಮೇಲಿನ ಹೊರೆ ಮುಂದುವರಿದಿದೆ. ಈ ರಾಜ್ಯಗಳು ಹೆಚ್ಚು ಆದಾಯ ಗಳಿಸಿವೆ. ದೇಶ ಹಿತದಲ್ಲಿ, ಕಳೆದ ನವೆಂಬರ್‌ನಲ್ಲಿ ತೆರಿಗೆ ಕಡಿಮೆ ಮಾಬೇಕಿತ್ತು. ಈಗಲಾದರೂ ನಿಮ್ಮ ರಾಜ್ಯದ ನಾಗರಿಕರಿಗೆ ಇದರ ಲಾಭ ವರ್ಗಾವಣೆ ಮಾಡಿ ಎಂದು ಕೋರುತ್ತೇನೆ. ಕೇಂದ್ರ ಸರ್ಕಾರಕ್ಕೆ ಬರುವ ಆದಾಯದಲ್ಲಿ 42% ರಾಜ್ಯಗಳಿಗೇ ಸಿಗುತ್ತದೆ. ಜಾಗತಿಕ ಸಂಕಷ್ಟದ ಸಮಯದಲ್ಲಿ ಒಂದು ತಂಡವಾಗಿ ನಾವೆಲ್ಲರೂ ಕೆಲಸ ಮಾಡಬೇಕು. ರಸಗೊಬ್ಬರಕ್ಕಾಗಿ ನಾವು ಬೇರೆ ದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ರೈತರ ಮೇಲೆ ನಾವು ಹೊರೆ ಹೊರಿಸಿಲ್ಲ. ನಿಮ್ಮ ರಾಜ್ಯ, ನೆರೆ ರಾಜ್ಯ ಹಾಗೂ ದೇಶವಾಸಿಗಳ ಹಿತದಲ್ಲಿ ಪ್ರಾಥಮಿಕತೆ ನೀಡಿ ಎಂದರು.
ಇಷ್ಟಕ್ಕೇ ಮಾತು ನಿಲ್ಲಿಸದ ಮೋದಿ, ಪ್ರತಿ ರಾಜ್ಯದ ಹೆಸರು ಹೇಳಿ ನೆರೆಯ ರಾಜ್ಯದೊಂದಿಗೆ ಹೋಲಿಕೆ ಮಾಡಿದರು. ತೆರಿಗೆ ಕಡಿತ ಮಾಡದಿದ್ದದ್ದಕ್ಕೆ ಚೆನ್ನೈನಲ್ಲಿ ಪೆಟ್ರೋಲ್ ದರ ₹112, ಜೈಪುರದಲ್ಲಿ ₹118, ಹೈದರಾಬಾದ್‌ನಲ್ಲಿ ₹119, ಕೊಲ್ಕತಾದಲ್ಲಿ ₹115, ಮುಂಬೈಯಲ್ಲಿ ₹120ಕ್ಕಿಂತ ಹೆಚ್ಚಿದೆ. ಅದೇ ತೆರಿಗೆ ಕಡಿತ ಮಾಡಿರುವ ದಿಯು ದಮನ್‌ನಲ್ಲಿ ₹ 102, ಲಖನೌನಲ್ಲಿ ₹ 101, ಜಮ್ಮುವಿನಲ್ಲಿ ₹106, ಗುವಾಹಟಿಯಲ್ಲಿ ₹105, ಗುರುಗ್ರಾಮ್‌ನಲ್ಲಿ ₹103, ಡೆಹ್ರಾಡೂನ್‌ನಲ್ಲಿ ₹105 ಇದೆ. ಆರು ತಿಂಗಳಲ್ಲಿ ಎಷ್ಟು ಸಂಪಾದಿಸಿದರೋ ಅರು ಒಂದೆಡೆ. ಈಗಲಾದರೂ ದೇಶದೊಂದಿಗೆ ಸಹಯೋಗ ನೀಡಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಮನವಿ ಮಾಡಿದ್ದಾರೆ.
ಗುಜರಾತ್ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿವೆ. ಎರಡೂ ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿಯೂ ಪ್ರಧಾನಿ ಮೋದಿಯವರ ಮಾತು ಗಮನಾರ್ಹವಾಗಿದೆ. ಒಂದೇ ಭಾಷಣದಲ್ಲಿ ಬಿಜೆಪಿಯೇತರ ರಾಜ್ಯಗಳ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಹೇರಿರುವ ಒತ್ತಡ ರಾಜಕೀಯ ವಾಗ್ವಾದಗಳಿಗೂ ಕಾರಣವಾಗುವ ಲಕ್ಷಣಗಳಿವೆ.
ತಂತ್ರಜ್ಞಾನ
Aadhaar Services: ಆನ್‌ಲೈನ್ ಮೂಲಕ ಆಧಾರ್ ‘ಲಾಕ್’ ಮತ್ತು ‘ಅನ್‌ಲಾಕ್’ ಮಾಡುವುದು ಹೇಗೆ?
Aadhaar Services: ಸರ್ಕಾರಿ ಸೇವೆಗಳನ್ನು ಪಡೆಯಲು, ವಿಳಾಸ ಮತ್ತು ಗುರುತು ದೃಢೀಕರಣಕ್ಕೆ ಆಧಾರ್ ಅತ್ಯಗತ್ಯ ಸರ್ಕಾರಿ ಗುರುತಿನ ಪತ್ರವಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಈಗ ಗ್ಯಾರಂಟಿಗಳ ಭರಾಟೆ. ಈ ಗ್ಯಾರಂಟಿ ಸೇವೆಗಳನ್ನು ಪಡೆಯಲು ಇತರ ಅಧಿಕೃತ ದಾಖಲೆಗಳ ಜತೆಗೆ ಆಧಾರ್ ಕೂಡ ಕಡ್ಡಾಯವಾಗಿಬೇಕು. ಹಾಗಾಗಿ, ಆಧಾರ್ ಮಾಡಿಸಿಕೊಳ್ಳಲು ಜನರು ಮುಗಿ ಬೀಳುತ್ತಿರುವ ವರದಿಗಳಾಗುತ್ತಿವೆ. ಗ್ಯಾರಂಟಿ ಮಾತ್ರವಲ್ಲದೇ ಕೇಂದ್ರವಾಗಲೀ, ರಾಜ್ಯ ಸರ್ಕಾರದ ಸೇವೆಗಳನ್ನು ಪಡೆಯಲು, ನಿಮ್ಮ ಅಧಿಕೃತ ವಿಳಾಸವನ್ನು ದೃಢೀಕರಿಸಲು ಈ ಆಧಾರ್ (Aadhaar Services) ಬೇಕೇ ಬೇಕು. ಆದರೆ, ಆಧಾರ್ ಮಾಹಿತಿ ಕಳುವಾದರೆ ಎಂಬ ಆತಂಕ ಇದ್ದೇ ಇರುತ್ತದೆ. ಬಳಕೆದಾರರಿಗೆ ಅಂಥದೊಂದು ಅನುಮಾನ ಮೂಡಿದರೆ, ನಿಮ್ಮ ಆಧಾರ್ ಸೇವೆಯನ್ನು ಲಾಕ್ (Lock) ಮಾಡಬಹುದು, ಅಗತ್ಯ ಎನಿಸಿದಾಗಿ ಮತ್ತೆ ಅನ್‌ಲಾಕ್ (Unlock) ಮಾಡಬಹುದು. ಅಂಥದೊಂದು ಅವಕಾಶವನ್ನು ಯುಐಡಿಎಐ ನೀಡಿದೆ.
ಬಳಕೆದಾರರ ಆಧಾರ್ ಸಂಖ್ಯೆಯ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ನಿವಾಸಿಗಳಿಗೆ ನಿಯಂತ್ರಣವನ್ನು ಒದಗಿಸಲು ಆಧಾರ್ ಸಂಖ್ಯೆಗಳನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಯುಐಡಿಎಐ ವ್ಯವಸ್ಥೆಯನ್ನು ಒದಗಿಸಿದೆ. ಬಳಕೆದಾರರು ಯುಐಡಿಎಐ ಜಾಲತಾಣ (www.myaadhaar.uidai.gov.in) ಅಥವಾ ಎಂಆಧಾರ್ (mAadhaar) ಆ್ಯಪ್ ಮೂಲಕ ಆಧಾರ್ ಲಾಕ್ ಮಾಡಬಹುದಾಗಿದೆ.
ಆಧಾರ್ ಹೇಗೆ ಲಾಕ್ ಮಾಡುವುದು?
ಎಸ್ಸೆಮ್ಮೆಸ್ ಮೂಲಕ: GVID ಟೈಪ್ ಮಾಡಿ ನಿಮ್ಮ ನಾಲ್ಕು ಅಥಾ ಎಂಟು ಅಂಕಿಗಳ ಯುಐಡಿ ನಂಬರ್ ಟೈಪ್ ಮಾಡಿ ಮತ್ತು ಅದನ್ನು 1947ಕೆ ಸೆಂಡ್ ಮಾಡಿದೆ. ಉದಾಹರಣೆ: GVID 7893 SMS to 1947
ವೆಬ್‌ಸೈಟ್ ಮೂಲಕ: ಯುಐಡಿಎಐ ವೆಬ್‌ಸೈಟ್ (https://resident.uidai.gov.in/aadhaar-lockunlock)ಗೆ ಭೇಟಿ ನೀಡಿ. ಹೋಮ್‌ಪುಟದಲ್ಲಿರುವ ಮೈ ಆಧಾರ್ ಸೆಕ್ಷನ್‌ನಲ್ಲಿರುವ ಲಾಕ್ ಆಧಾರ್ (Lock Aadhaar) ಮೇಲೆ ಕ್ಲಿಕ್ ಮಾಡಿ. ಬಳಿಕ ಯುಐಡಿ ಲಾಕ್ ಆಪ್ಷನ್ ಸೆಲೆಕ್ಟ್ ಮಾಡಿ. ಯುಐಡಿ ನಂಬರ್, ಹೆಸರು ಇತ್ಯಾದಿ ಮಾಹಿತಿಯನ್ನು ನಮೂದಿಸಿ. ಸೆಂಡ್ ಸೆಕ್ಯೂರಿಟಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ನಂಬರ್‌ಗೆ ಬರುವ ಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ. ಆಗ ನಿಮ್ಮ ಆಧಾರ್ ಯಶಸ್ವಿಯಾಗಿ ಲಾಕ್ ಆಗುತ್ತದೆ.
ಆಧಾರ್ ಅನ್‌ಲಾಕ್ ಮಾಡುವುದು ಹೇಗೆ?
ಎಸ್ಸೆಮ್ಮೆಸ್ ಮೂಲಕ: RVID ಅಂತಾ ಟೈಪ್ ಮಾಡಿ ಸ್ಪೇಸ್ ಬಿಟ್ಟು ನಾಲ್ಕು ಅಥವಾ 8 ಅಂಕಿಗಳ ಯುಐಡಿ ನಂಬರ್ ಟೈಪ್ ಮಾಡಿ, 1947 ನಂಬರ್‌ಗೆ ಸೆಂಡ್ ಮಾಡಿ.
ಇದನ್ನೂ ಓದಿ: Aadhaar card : ಆಧಾರ್ ಜತೆ ನಿಮ್ಮ ಇ-ಮೇಲ್, ಮೊಬೈಲ್ ಲಿಂಕ್ ಆಗಿದೆಯೇ ? ಹೀಗೆ ಖಾತರಿಪಡಿಸಿಕೊಳ್ಳಿ
ವೆಬ್‌ಸೈಟ್ ಮೂಲಕ ಹೀಗೆ ಮಾಡಿ: ಇಲ್ಲಿ ಕೂಡ ಸೇನ್ ಲಾಕ್ ಮಾಡುವ ಪ್ರಕ್ರಿಯೇ ಫಾಲೋ ಮಾಡಬೇಕು. ಮೊದಲಿಗೆ ಯುಐಡಿಎಐಗೆ ಹೋಗಿ. ಬಳಿಕ ಅನ್‌ಲಾಕ್ ಆಯ್ಕೆಯ ಸೆಲೆಕ್ಟ ಮಾಡಿ. ಹೊಸ ವಿಐಡಿ ಮತ್ತುಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ. ಸೆಂಡ್ ಒಟಿಪಿ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ. ಆಗ ನಿಮ್ಮ ಆಧಾರ್ ನಂಬರ್ ಯಶಸ್ವಿಯಾಗಿ ಅನ್‌ಲಾಕ್ ಆಗುತ್ತದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶ
17 ವರ್ಷದ ಹೆಣ್ಣುಮಕ್ಕಳು ಮಗು ಹೆರುವ ಕಾಲವಿತ್ತು; ರೇಪ್ ಸಂತ್ರಸ್ತೆಯ ಗರ್ಭಪಾತ ಬೇಡವೆಂದ ಹೈಕೋರ್ಟ್
Viral News: ಅತ್ಯಾಚಾರಕ್ಕೀಡಾದ ಬಾಲಕಿಯು ಈಗ ಗರ್ಭ ಧರಿಸಿದ್ದು, ಆಕೆಯ ವಯಸ್ಸನ್ನು ಪರಿಗಣಿಸಿ ನ್ಯಾಯಾಲಯವು ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ. ಆದರೆ, ಇದಕ್ಕೆ ಗುಜರಾತ್ ಹೈಕೋರ್ಟ್ ನಿರಾಕರಿಸಿದೆ.
ಗಾಂಧಿನಗರ: 17 ವರ್ಷದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೋಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ. ಅತ್ಯಾಚಾರ ಸಂತ್ರಸ್ತೆ ಗರ್ಭ ಧರಿಸಿ ಈಗ ತಿಂಗಳಾಗಿದೆ. ಆಕೆಯ ಗರ್ಭಪಾತಕ್ಕೆ ಕೋರಿ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು, “ಮೊದಲೆಲ್ಲ 17 ವರ್ಷದ ಹೆಣ್ಣುಮಕ್ಕಳು ಮಕ್ಕಳನ್ನು ಹೆರುತ್ತಿದ್ದರು, 14-15 ವರ್ಷಕ್ಕೆ ಮದುವೆಯಾಗುತ್ತಿದ್ದರು. ಇದೆಲ್ಲ ತಿಳಿಯಲು (Viral News) ಮನುಸ್ಮೃತಿ ಓದಿ” ಎಂದು ಕೂಡ ಹೇಳಿದೆ.
ಅತ್ಯಾಚಾರ ಸಂತ್ರಸ್ತೆಯ ವಯಸ್ಸನ್ನು ಪರಿಗಣಿಸಿ, ಆಕೆಗೆ ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಸಂತ್ರಸ್ತ ಬಾಲಕಿಯ ತಂದೆಯು ಅರ್ಜಿ ಸಲ್ಲಿಸಿದ್ದರು. “ಹಿಂದಿನ ಕಾಲದಲ್ಲಿ 18 ವರ್ಷ ತುಂಬುವ ಮೊದಲೇ ಹೆಣ್ಣುಮಕ್ಕಳು ಮದುವೆಯಾಗಿ, ಮಕ್ಕಳನ್ನು ಹೆರುತ್ತಿದ್ದರು ಎಂಬುದು ಗೊತ್ತಿರಲಿ. ಇದನ್ನು ನೀವು ಓದಿಲ್ಲವೆಂದರೆ, ಮನುಸ್ಮೃತಿ ಓದಿ ತಿಳಿದುಕೊಳ್ಳಿ” ಎಂದು ನ್ಯಾಯಮೂರ್ತಿ ಸಮೀರ್ ಜೆ ದಾವೆ ಹೇಳಿದರು.
ಸಂತ್ರಸ್ತೆಯ ತಂದೆ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಿಕಂದರ್ ಸೈಯದ್, “ಆಗಸ್ಟ್ 18ರಂದು ಬಾಲಕಿಯು ಮಗು ಹೆರುವ ಸಾಧ್ಯತೆ ಇದೆ. ವೈದ್ಯರು ಡೇಟ್ ಕೊಟ್ಟಿದ್ದಾರೆ. ಆಕೆಯ ವಯಸ್ಸನ್ನು ಪರಿಗಣಿಸಿ ಗರ್ಭಪಾತಕ್ಕೆ ಅನುಮತಿ ನೀಡಬೇಕು” ಎಂದು ವಾದ ಮಂಡಿಸಿದರು. ಆದರೆ, ನ್ಯಾಯಾಲಯವು, “ಬಾಲಕಿ ಹಾಗೂ ಮಗು ಆರೋಗ್ಯವಾಗಿದ್ದರೆ ಗರ್ಭಪಾತಕ್ಕೆ ಅನುಮತಿ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿತು. ಹಾಗೆಯೇ, ಬಾಲಕಿಯ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿತು.
ಇದನ್ನೂ ಓದಿ: Video Viral: ಚಾಮರಾಜನಗರದಲ್ಲಿ ಹಾವುಗಳ ಮಿಲನ; ಗಂಟೆಗೂ ಹೆಚ್ಚು ಸರಸ ಸಲ್ಲಾಪ! ವೈರಲ್ ಆಯ್ತು ವಿಡಿಯೊ
ರಾಜಕೋಟ್‌ನಲ್ಲಿರುವ ಸಿವಿಲ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಅವರು ಬಾಲಕಿ ಹಾಗೂ ಆಕೆಯ ಹೊಟ್ಟೆಯಲ್ಲಿರುವ ಮಗುವಿನ ವೈದ್ಯಕೀಯ ತಪಾಸಣೆಯನ್ನು ತುರ್ತಾಗಿ ಮಾಡಬೇಕು ಎಂದು ಗುಜರಾತ್ ಹೈಕೋರ್ಟ್ ನಿರ್ದೇಶನ ನೀಡಿದೆ. ವೈದ್ಯಕೀಯ ವರದಿಯನ್ನು ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ ನ್ಯಾಯಾಲಯವು, ಜೂನ್ 15ಕ್ಕೆ ವಿಚಾರಣೆ ಮುಂದೂಡಿದೆ.
ಸಹೋದರನಿಂದಲೇ ಗರ್ಭ ಧರಿಸಿದ 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಕೆಲ ದಿನಗಳ ಹಿಂದೆ ಕೇರಳ ಹೈಕೋರ್ಟ್ ಅನುಮತಿ ನೀಡಿತ್ತು. ಗರ್ಭಪಾತ ಮಾಡಿಸಲು ಅನುಮತಿ ಕೋರಿ ಬಾಲಕಿಯ ತಂದೆ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ್ದ ಏಕ ಸದಸ್ಯ ಪೀಠದ ನ್ಯಾ. ಜಿಯಾದ್ ರೆಹಮಾನ್ ಅವರು ಗರ್ಭಪಾತ ಮಾಡಿಸಲು ಅನುಮತಿ ನೀಡಿದ್ದರು.
“ಗರ್ಭಪಾತಕ್ಕೆ ಅನುಮತಿ ನೀಡದೆ ಹೋದರೆ ಸಾಮಾಜಿಕ ವ್ಯವಸ್ಥೆ ಹಾಗೂ ಬಾಲಕಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ” ಎಂದು ಸ್ಪಷ್ಟಪಡಿಸಿತು. ವೈದ್ಯಕೀಯ ಮಂಡಳಿಯು ಗರ್ಭಪಾತದ ಕುರಿತು ವರದಿ ಸಲ್ಲಿಸಿತ್ತು. 15 ವರ್ಷದ ಬಾಲಕಿಗೆ ಗರ್ಭಪಾತಕ್ಕೆ ಅನುಮತಿ ನೀಡದಿದ್ದರೆ ಸಾಮಾಜಿಕ ವ್ಯವಸ್ಥೆ ಹಾಗೂ ಆಕೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಹಾಗಾಗಿ, ಗರ್ಭಪಾತಕ್ಕೆ ಅನುಮತಿ ಸಿಕ್ಕಿತ್ತು.
ಕರ್ನಾಟಕ
Nirmala Sitharaman: ಬೆಂಗ್ಳೂರಲ್ಲಿ ಸದ್ದಿಲ್ಲದೆ ನಡೆಯಿತು ವಿತ್ತ ಸಚಿವೆ ನಿರ್ಮಲಾ ಪುತ್ರಿಯ ಮದ್ವೆ! ಆಶೀರ್ವದಿಸಿದ ಅದಮಾರು ಶ್ರೀಗಳು
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಪುತ್ರಿ ಪರಕಾಲ ಅವರು ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರಳವಾಗಿ ವಿವಾಹ ಕಾರ್ಯಕ್ರಮ ನಡೆಸಲಾಗಿದೆ.
ಬೆಂಗಳೂರು: ಈಗೆಲ್ಲ ಮದುವೆ ಎನ್ನುವುದೇ ಆಡಂಬರ. ಅದರಲ್ಲೂ ಸಮಾಜದಲ್ಲಿ ಒಂದು ಉನ್ನತ ಸ್ಥಾನದಲ್ಲಿ ಇದ್ದುಬಿಟ್ಟರಂತೂ ಕೇಳುವುದೇ ಬೇಡ. ಕೋಟಿ ಕೋಟಿ ಹಣ ಸುರಿದು ಅದ್ಧೂರಿ ಮದುವೆ ಮಾಡಿಬಿಡುತ್ತಾರೆ. ಆದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಾತ್ರ ಈ ಐಷಾರಾಮಿ ರೂಢಿಯನ್ನು ಮುರಿದು, ತಮ್ಮ ಮಗಳಿಗೆ ಮದುವೆ (Marriage) ಮಾಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರ ಮಗಳು ಪರಕಾಲ ವಂಗಮಾಯಿ ಅವರು ಪ್ರತೀಕ್ ಅವರ ಜತೆ ಗುರುವಾರ ವಿವಾಹವಾಗಿದ್ದಾರೆ. ಬೆಂಗಳೂರಿನಲ್ಲಿರುವ ಖಾಸಗಿ ಹೋಟೆಲ್ ಒಂದರಲ್ಲಿ ವಿವಾಹ ಕಾರ್ಯಕ್ರಮ ಜರುಗಿದೆ. ಈ ವೇಳೆ ಹಾಜರಿದ್ದ ಉಡುಪಿಯ ಅದಮಾರು ಮಠದ ಶ್ರೀಗಳು ಹಾಜರಿದ್ದು, ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ. ಯಾವುದೇ ರಾಜಕಾರಣಿಯನ್ನು ಮದುವೆಗೆ ಆಮಂತ್ರಿಸದೆ ಕೆಲವೇ ಕೆಲವು ಬಂಧುಗಳು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆಸಲಾಗಿದೆ ಎಂದು ವರದಿಯಿದೆ.
ಇದನ್ನೂ ಓದಿ: Viral Video : ಗಡಿ ದಾಟಿ ಭಾರತಕ್ಕೆ ನುಗ್ಗಿದ ಬಾಂಗ್ಲಾ ಯೋಧರು! ಅಟ್ಟಾಟಿಸಿಕೊಂಡು ಒದ್ದೋಡಿಸಿದ ಹಳ್ಳಿಗರು
ಬ್ರಾಹ್ಮಣ ಕುಟುಂಬದವರಾಗಿರುವ ನಿರ್ಮಲಾ ಅವರು ಬ್ರಾಹ್ಮಣ ಸಂಪ್ರದಾಯದಂತೆಯೇ ಮಗಳ ಮದುವೆ ನೆರವೇರಿಸಿದ್ದಾರೆ. ಉಡುಪಿಯ ಅದಮಾರು ಮಠದ ಆಶೀರ್ವಾದ ಮತ್ತು ಸೂಚನೆಗಳಂತೆ ಮದುವೆ ನಡೆಸಲಾಗಿದೆ.
ಪರಕಾಲ ಅವರು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ವಿಭಾಗದಿಂದ ಸ್ನಾತಕೋತ್ತರ ಪದವಿ ಮತ್ತು ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಮೆಡಿಲ್ ಸ್ಕೂಲ್ ಆಫ್ ಜರ್ನಲಿಸಂನಿಂದ ಪತ್ರಿಕೋದ್ಯಮದಲ್ಲಿ ಎಂಎಸ್ ಪದವಿ ಪಡೆದಿದ್ದಾರೆ. ಸದ್ಯ ಮಿಂಟ್ ಲೌಂಜ್‌ನಲ್ಲಿ ವಿಶಿಷ್ಟ ಬರಹಗಾರರಾಗಿದ್ದಾರೆ. ಸಿಂಗಾಪುರ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನಿಂದ ಪದವಿ ಪಡೆದಿರುವ ನಿರ್ಮಲಾ ಅವರ ಅಳಿಯ ಪ್ರತೀಕ್ ದೋಷಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯದ ಅಧಿಕಾರಿಯಾಗಿದ್ದಾರೆ.
ದೇಶ
ಬಾಲಕಿಯನ್ನು ರೇಪ್ ಮಾಡಿ, ಇನ್‌ಸ್ಟಾದಲ್ಲಿ ಫೋಟೋ ಷೇರ್ ಮಾಡಿದ ಕಾಮುಕ ಗಾಯಕ ಈಗ ಅಂದರ್!
Bhojpuri Singer Arrested: ಭೋಜಪುರಿ ಗಾಯಕನೊಬ್ಬ 13 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ್ದ.
ಗುರುಗ್ರಾಮ: ಬಾಲಕಿಯನ್ನು (13 Year Old girl) ಅತ್ಯಾಚಾರ (Rape) ಮಾಡಿ, ಆಕೆಯ ಆಕ್ಷೇಪಾರ್ಹ ಭಾವಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ ಆರೋಪದ ಮೇರೆಗೆ ಭೋಜಪುರಿ ಗಾಯಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ(Bhojpuri Singer Arrested). ಬಂಧಿತನನ್ನು 21 ವರ್ಷದ ಅಭಿಷೇಕ್ (Abhishek) ಎಂದು ಗುರುತಿಸಲಾಗಿದೆ. ಬಿಹಾರದ (Bihar) ಮೂಲದ ಈ ಯುವಕನನ್ನು ಭೋಜಪುರಿ ಸಿಂಗರ್ ಬಬುಲ್ ಬಿಹಾರಿ ಎಂದೂಕರೆಯಲಾಗುತ್ತದೆ. ಯುಟ್ಯೂಬ್ ಚಾನೆಲ್‌ನಲ್ಲಿ ಇವರಿಗೆ 27 ಸಾವಿರಕ್ಕೂ ಅಧಿಕ ಜನರು ಫಾಲೋವರ್ಸ್ ಇದ್ದಾರೆ.
ಆರೋಪಿ ಗಾಯಕ ದಿಲ್ಲಿಯ ರಾಜೀವ್ ನಗರದಲ್ಲಿ ಎರಡು ವರ್ಷಗಳ ಹಿಂದೆ ವಾಸವಾಗಿದ್ದರು. ಆಗ 13 ವರ್ಷದ ಬಾಲಕಿಯ ಸ್ನೇಹ ಸಂಪಾದಿಸಿದ ಆರೋಪಿ, ಆಕೆಯನ್ನು ಹೊಟೇಲ್ ರೂಮ್‌ಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಮಾಡಿ, ಆಕ್ಷೇಪಾರ್ಹ ಚಿತ್ರಗಳನ್ನು ಸೆರೆ ಹಿಡಿದಿದ್ದಾನೆ. ಈ ಘಟನೆಯ ಬಳಿಕ ಬಾಲಕಿ ಆತನಿಂದ ದೂರವಾಗಿದ್ದಾಳೆ. ಅಲ್ಲದೇ, ಈ ಘಟನೆಯ ಬಗ್ಗೆ ಯಾರೊಂದಿಗೆ ಆಕೆ ಮಾಹಿತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಕೆಲವು ದಿನಗಳ ಹಿಂದೆ ಆರೋಪಿ, ಸಂತ್ರಸ್ತೆಯ ಆಕ್ಷೇಪಾರ್ಹ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಫೋಟೋಗಳನ್ನು ನೋಡಿದ ಬಳಿಕ, ಸಂತ್ರಸ್ತೆಯ ಕುಟುಂಬಸ್ಥರು ಆಕೆಯನ್ನು ಪ್ರಶ್ನಿಸಿದ್ದಾರೆ. ಆಗ, ಆಕೆ ಎಲ್ಲ ಮಾಹಿತಿಯನ್ನು ಅವರೆದುರಿಗೆ ಹೇಳಿದ್ದಾಳೆ. ಕೂಡಲೇ ಕುಟುಂಬಸ್ಥರು ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ದೂರು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Crime : ಬಾಡಿಗೆ ಸರಿಯಾಗಿ ಕೊಡಲಿಲ್ಲವೆಂದು ಕುಡುಕನನ್ನೇ ರೇಪ್ ಮಾಡಿದ ಆಟೋ ಚಾಲಕ!
ಸಂತ್ರಸ್ತೆಗೆ ಕೌನ್ಸೆಲಿಂಗ್ ಮಾಡಿದ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಗಾಯಕನ ಪೋಕ್ಸೋ ಹಾಗೂ ಐಟಿ ಕಾಯ್ದೆ ಉಲ್ಲಂಘನೆಯ ಆರೋಪಗಳನ್ನು ಹೊರಿಸಿದ್ದಾರೆ. ಪ್ರಕರಣ ದಾಖಲಾದ ಕೆಲವೇ ಘಂಟೆಗಳಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಆತನನ್ನು ಸಿಟಿ ಕೋರ್ಟ್ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ವಕ್ತಾರ ಸುಭಾಶ್ ಬೋಕನ್ ಅವರು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ಸುವಚನ12 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
South Cinema24 hours ago
Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!
-
South Cinema22 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema22 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ18 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
ಪ್ರಮುಖ ಸುದ್ದಿ23 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಪ್ರಮುಖ ಸುದ್ದಿ24 hours ago
Textbook Revision: ಬುದ್ಧಿಜೀವಿ ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ!: ಸರ್ಕಾರಕ್ಕೆ ಹಿಗ್ಗಾಮುಗ್ಗಾ ಜಾಡಿಸಿದ ಮಾಜಿ ಸಚಿವ ಬಿ.ಸಿ. ನಾಗೇಶ್
-
ಕರ್ನಾಟಕ21 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!