ಅಲಿಗಢದ ತಿರಂಗಾ ಯಾತ್ರೆಯಲ್ಲಿ ಪಾಕಿಸ್ತಾನ ಪರ ಘೋಷಣೆ - Vistara News

ದೇಶ

ಅಲಿಗಢದ ತಿರಂಗಾ ಯಾತ್ರೆಯಲ್ಲಿ ಪಾಕಿಸ್ತಾನ ಪರ ಘೋಷಣೆ

ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದ ಕಾಲೇಜಿನ ತಿರಂಗಾ ರ‍್ಯಾಲಿಯಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾಗಿದ್ದು,ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

VISTARANEWS.COM


on

rally
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಖನೌ: ಉತ್ತರ ಪ್ರದೇಶದ ಅಲಿಗಢದಲ್ಲಿ ತಿರಂಗಾ ಯಾತ್ರೆಯ ವೇಳೆ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಲಾಗಿದೆ. ಇದರ ವಿಡಿಯೋಗಳು ಹೊರಬಿದ್ದ ನಂತರ ಹಲವಾರು ವಿದ್ಯಾರ್ಥಿಗಳ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ.

ಆಗಸ್ಟ್ 13ರಂದು, ಉತ್ತರ ಪ್ರದೇಶದ ಅಲಿಗಢದಲ್ಲಿ ಕಾಲೇಜೊಂದು ತಿರಂಗಾ ರ‍್ಯಾಲಿಯನ್ನು ಆಯೋಜಿಸಿತ್ತು. ಈ ಸಂದರ್ಭ ಕೆಲವು ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದರು. ಇದನ್ನು ನೋಡಿದ ಕೆಲವರು ಮೆರವಣಿಗೆಯ ವಿಡಿಯೋ ಸಮೇತ ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದರು. ಕಾಲೇಜು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ನಂತರ ದೂರುದಾರರು ವೀಡಿಯೊದೊಂದಿಗೆ ಪೊಲೀಸರನ್ನು ಸಂಪರ್ಕಿಸಿದರು. ಅದರ ಆಧಾರದ ಮೇಲೆ ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್ ಅಡಿ ದೂರು ದಾಖಲಿಸಲಾಗಿದೆ.

“ನಮ್ಮ ಕಾಲೇಜಿನಿಂದ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಇದ್ದಕ್ಕಿದ್ದಂತೆ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳು ಕೇಳಿಬಂದವು. ಕೂಡಲೇ ನಮ್ಮ ಶಿಕ್ಷಕರಿಗೆ ವಿಷಯ ತಿಳಿಸಿದ್ದೇವೆ. ಅವರು ಕಾಲೇಜಿನ ವಿದ್ಯಾರ್ಥಿಗಳೇ ಅಥವಾ ಹೊರಗಿನವರೇ ಎಂದು ನನಗೆ ತಿಳಿದಿಲ್ಲ” ಎಂದು ಕಾಲೇಜಿನ ವಿದ್ಯಾರ್ಥಿ ರಾಜನ್ ಕುಮಾರ್ ತಿಳಿಸಿದ್ದಾರೆ.

ʼನಾವು ನಮ್ಮದೇ ಅದ ತನಿಖೆಯನ್ನು ನಡೆಸಿದ್ದೇವೆ. ಯಾವುದೇ ವೀಡಿಯೋ ಪತ್ತೆಯಾಗಿಲ್ಲʼ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ರ‍್ಯಾಲಿಯಲ್ಲಿ ದೇಶಭಕ್ತಿಯ ಘೋಷಣೆಗಳ ಜೊತೆಗೆ ಕೆಲವು ಆಕ್ಷೇಪಾರ್ಹ ಘೋಷಣೆಗಳನ್ನು ಹೇಳಿದ ಬಗ್ಗೆ ವಿಡಿಯೋ ನೋಡಿದ ನಂತರ ಅರಿವಿಗೆ ಬಂದಿದೆ. ಪ್ರಾಂಶುಪಾಲರು ಮತ್ತು ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದುಅಲಿಗಢದ ಪೊಲೀಸ್ ವರಿಷ್ಠಾಧಿಕಾರಿ ಪಲಾಶ್ ಬನ್ಸಾಲ್ ಹೇಳಿದ್ದಾರೆ.

ಇದನ್ನೂ ಓದಿ: ಲಖನೌನ ನೂತನ ಲುಲು ಮಾಲ್‌ನಲ್ಲಿ ನಮಾಜ್‌ಗೆ ಅವಕಾಶ, ಹಿಂದೂ ಸಂಘಟನೆಗಳ ಆಕ್ಷೇಪ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Election results 2024: 280 ಸಂಸದರು ಮೊದಲ ಬಾರಿಗೆ ಲೋಕಸಭೆಗೆ ಎಂಟ್ರಿ! ಲಿಸ್ಟ್‌ನಲ್ಲಿದ್ದಾರೆ ಮಾಜಿ ಸಿಎಂಗಳು, ಸಿನಿ ತಾರೆಯರು, ಹೈಕೋರ್ಟ್‌ ಜಡ್ಜ್‌

Election results 2024:ಈ ಬಾರಿ ಒಟ್ಟು 280 ನೂತನ ಸಂಸದರು ಲೋಕಸಭೆಗ ಮೊದಲ ಬಾರಿಗೆ ಕಾಲಿಡುತ್ತಿದ್ದಾರೆ. ಇವರಲ್ಲಿ ಮಾಜಿ ಮುಖ್ಯಮಂತ್ರಿಗಳು, ಸಿನಿಮಾ ತಾರೆಯರು, ಕಾರ್ಯಕರ್ತರು ಹಾಗೂ ಮಾಜಿ ಹೈಕೋರ್ಟ್‌ ನ್ಯಾಯಮೂರ್ತಿಗಳೂ ಸೇರಿದ್ದಾರೆ.

VISTARANEWS.COM


on

Lok Sabha Election 2024
Koo

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ(Election results 2024) ಹೊರಬಿದ್ದು, ಮತ್ತೊಮ್ಮೆ ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಸಜ್ಜಾಗಿದೆ. ಇನ್ನು ಈ ಬಾರಿ ಒಟ್ಟು 280 ನೂತನ ಸಂಸದರು ಲೋಕಸಭೆಗ ಮೊದಲ ಬಾರಿಗೆ ಕಾಲಿಡುತ್ತಿದ್ದಾರೆ. ಇವರಲ್ಲಿ ಮಾಜಿ ಮುಖ್ಯಮಂತ್ರಿಗಳು, ಸಿನಿಮಾ ತಾರೆಯರು, ಕಾರ್ಯಕರ್ತರು ಹಾಗೂ ಮಾಜಿ ಹೈಕೋರ್ಟ್‌ ನ್ಯಾಯಮೂರ್ತಿಗಳೂ ಸೇರಿದ್ದಾರೆ.

ಇನ್ನು ಈ ಬಾರಿ ಉತ್ತರಪ್ರದೇಶದಿಂದ ಒಟ್ಟು 80 ಕ್ಷೇತ್ರಗಳಲ್ಲಿ ಬರೋಬ್ಬರಿ 45 ನೂತನ ಸಂಸದರು ಲೋಕಸಭೆಗೆ ಕಾಲಿಡುತ್ತಿದ್ದಾರೆ. ಅವರಲ್ಲಿ ಮೀರತ್‌ನಿಂದ ಚುನಾಯಿತರಾಗಿರುವ ಜನಪ್ರಿಯ ರಾಮಾಯಣ ಧಾರವಾಹಿಯ ನಟ ಅರುಣ್‌ ಗೋವಿಲ್‌, ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರನ್ನು ಸೋಲಿಸಿದ ಕಾಂಗ್ರೆಸ್ ನಾಯಕ ಕಿಶೋರಿ ಲಾಲ್ ಶರ್ಮಾ ಮತ್ತು ದಲಿತ ಹಕ್ಕುಗಳ ಕಾರ್ಯಕರ್ತ ಚಂದ್ರಶೇಖರ್ ಆಜಾದ್ ಆಜಾದ್ ಸಮಾಜ ಪಕ್ಷದ ನಗೀನಾ ಸೇರಿದ್ದಾರೆ.

ಈ ಬಾರಿ ಬಿಜೆಪಿಯು ಚುನಾವಣಾ ಹಿಮ್ಮುಖವನ್ನು ಎದುರಿಸಿದ ಮಹಾರಾಷ್ಟ್ರದಲ್ಲಿ ಶಾಲಾ ಶಿಕ್ಷಕ ಭಾಸ್ಕರ್ ಭಾಗೆ ಸೇರಿದಂತೆ 33 ನೂತನ ಸಂಸದರು ಲೋಕಸಭೆಗೆ ಚುನಾಯಿತರಾಗಿದ್ದಾರೆ. ಭಾಸ್ಕರ್‌ ಭಾಗೆ ಅವರು ಶರದ್ ಪವಾರ್ ಅವರ ಎನ್‌ಸಿಪಿಯಿಂದ ಬುಡಕಟ್ಟು ಸ್ಥಾನವಾದ ದಿಂಡೋರಿಯಲ್ಲಿ ಕಣಕ್ಕಿಳಿದಿದ್ದರು. ಅವರು ಬಿಜೆಪಿ ನಾಯಕಿ ಭಾರತಿ ಪವಾರ್ ಅವರನ್ನು ಸೋಲಿಸಿದ್ದರು. ಮಹಾರಾಷ್ಟ್ರದಿಂದ ಮೊದಲ ಅವಧಿಯ ಸದಸ್ಯರ ಪೈಕಿ ಮುಂಬೈ ಉತ್ತರದಿಂದ ಚುನಾಯಿತರಾದ ಬಿಜೆಪಿಯ ಪಿಯೂಷ್ ಗೋಯಲ್, ಅಮರಾವತಿಯಲ್ಲಿ ಬಿಜೆಪಿಯ ನವನೀತ್ ರಾಣಾ ಅವರನ್ನು ಸೋಲಿಸಿದ ಕಾಂಗ್ರೆಸ್ ನಾಯಕ ಬಲ್ವಂತ್ ವಾಂಖೆಡೆ, ಅಕೋಲಾದಿಂದ ಮಾಜಿ ಕೇಂದ್ರ ಸಚಿವ ಸಂಜಯ್ ಧೋತ್ರೆ ಅವರ ಪುತ್ರ ಬಿಜೆಪಿಯ ಅನುಪ್ ಧೋತ್ರೆ, ಸಾಂಗಲಿಯಿಂದ ವಿಶಾಲ್ ಪಾಟೀಲ್ ಸೇರಿದ್ದಾರೆ.

ಚುನಾಯಿತರಾದ ಮಾಜಿ ಮುಖ್ಯಮಂತ್ರಿಗಳು

ಇನ್ನು ಈ ಬಾರಿ ವಿವಿಧ ರಾಜ್ಯಗಳಿಂದ ಮಾಜಿ ಮುಖ್ಯಮಂತ್ರಿಗಳೂ ಕಣಕ್ಕಿಳಿದು ತಮ್ಮ ರಾಜಕೀಯ ಭವಿಷ್ಯ ಪರೀಕ್ಷಿಸಿದ್ದರು. ಈ ಬಾರಿ ಮಾಜಿ ಮುಖ್ಯಮಂತ್ರಿಗಳಾದ ನಾರಾಯಣ ರಾಣೆ (ರತ್ನಗಿರಿ-ಸಿಂಧುದುರ್ಗ), ತ್ರಿವೇಂದ್ರ ಸಿಂಗ್ ರಾವತ್ (ಹರಿದ್ವಾರ), ಮನೋಹರ್ ಲಾಲ್ (ಕರ್ನಾಲ್), ಬಿಪ್ಲಬ್ ಕುಮಾರ್ ದೇಬ್ (ತ್ರಿಪುರ ಪಶ್ಚಿಮ), ಜಿತನ್ ರಾಮ್ ಮಾಂಝಿ (ಗಯಾ), ಬಸವರಾಜ ಬೊಮ್ಮಾಯಿ (ಹಾವೇರಿ), ಜಗದೀಶ್ ಶೆಟ್ಟರ್ (ಬೆಳಗಾವಿ) , ಚರಂಜಿತ್ ಸಿಂಗ್ ಚನ್ನಿ (ಜಲಂಧರ್) ಲೋಕಸಭೆಗೆ ಮೊದಲ ಬಾರಿಗೆ ಚುನಾಯಿತರಾಗಿದ್ದಾರೆ.

ಇನ್ನು ಈ ಬಾರಿ ಇಬ್ಬರು ಸಿನಿಮಾ ತಾರೆಯರು ರಾಜಕೀಯ ಅದೃಷ್ಟ ಪರೀಕ್ಷೆಯಲ್ಲಿ ಗೆಲುವು ಸಾಧಿಸಿ ಸಂಸತ್‌ನ ಕೆಳಮನೆಗೆ ಕಾಲಿಡುತ್ತಿದ್ದಾರೆ. ಕೇರಳದ ತ್ರಿಶೂರ್‌ನಿಂದ ಸುರೇಶ್ ಗೋಪಿ ಮತ್ತು ಹಿಮಾಚಲಪ್ರದೇಶದ ಮಂಡಿಯಿಂದ ಕಂಗನಾ ರಣಾವತ್ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸುತ್ತಿರುವ ಸಿನಿಮಾ ತಾರೆಯರು.

ರಾಜ್ಯಸಭಾ ಸದಸ್ಯರಾದ ಅನಿಲ್ ದೇಸಾಯಿ (ಶಿವಸೇನೆ ಯುಬಿಟಿ), ಭೂಪೇಂದ್ರ ಯಾದವ್, ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವಿಯಾ ಮತ್ತು ಪರ್ಷೋತ್ತಮ್ ರೂಪಾಲಾ ಕೂಡ ಲೋಕಸಭೆಗೆ ಚೊಚ್ಚಲ ಪ್ರವೇಶ ಮಾಡಿದ್ದಾರೆ. ಇನ್ನು ಈ ಬಾರಿ ಹಿಂದಿನ ರಾಜಮನೆತನದ ಛತ್ರಪತಿ ಶಾಹು (ಕೊಲ್ಹಾಪುರ), ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಮೈಸೂರು), ಮತ್ತು ಕೃತಿ ದೇವಿ ದೆಬ್ಬರ್ಮನ್ (ತ್ರಿಪುರ ಪೂರ್ವ)ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಲಿದ್ದಾರೆ. ಬಂಗಾಳದ ತಾಲ್ಮುಕ್ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಕೋಲ್ಕತ್ತಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ ಅವರು ಮೊದಲ ಬಾರಿಗೆ ಸಂಸದರಾಗಿದ್ದಾರೆ.

ಇದನ್ನೂ ಓದಿ:Norway Tour: ಜಗತ್ತಿನ ಕೊನೆಯ ದೇಶ ಇದು! ಇಲ್ಲಿ 6 ತಿಂಗಳು ಹಗಲು, 6 ತಿಂಗಳು ರಾತ್ರಿ!

Continue Reading

ಉದ್ಯೋಗ

Job Alert: ರೈಲ್ವೆ ಇಲಾಖೆಯಲ್ಲಿನ 1,202 ಹುದ್ದೆಗಳಿಗೆ ಐಟಿಐ ಪಾಸಾದವರು ಆನ್‌ಲೈನ್‌ ಮೂಲಕ ಇಂದೇ ಅರ್ಜಿ ಸಲ್ಲಿಸಿ

Job Alert: ರೈಲ್ವೆ ಇಲಾಖೆ ಖಾಲಿ ಇರುವ ವಿವಿಧ 1,202 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಗ್ನೇಯ ರೈಲ್ವೆಯ ನೇಮಕಾತಿ ಕೋಶ ಖಾಲಿ ಇರುವ ಲೋಕೋ ಪೈಲಟ್‌ ಮತ್ತು ಟ್ರೈನ್ಸ್‌ ಮ್ಯಾನೇಜರ್‌ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ, ಐಟಿಐ, ಪದವಿ ತೇರ್ಗಡೆಯಾದವರನ್ನು ನೇಮಿಸಿಕೊಳ್ಳುತ್ತಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್‌ 12.

VISTARANEWS.COM


on

Job Alert
Koo

ನವದೆಹಲಿ: ಒಂದೊಳ್ಳೆ ಉದ್ಯೋಗ ಹೊಂದಬೇಕು ಎನ್ನುವುದು ಬಹುತೇಕರ ಕನಸು. ಅದರಲ್ಲಿಯೂ ಹೆಚ್ಚಿನ ಯುವ ಜನತೆ ಸರ್ಕಾರಿ ಕೆಲಸ ಪಡೆಯಬೇಕು ಎನ್ನುವ ಆಕಾಂಕ್ಷೆ ಹೊತ್ತಿರುತ್ತಾರೆ. ಅಂತಹವರಿಗೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ರೈಲ್ವೆ ಇಲಾಖೆ ಖಾಲಿ ಇರುವ ವಿವಿಧ 1,202 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಗ್ನೇಯ ರೈಲ್ವೆಯ ನೇಮಕಾತಿ ಕೋಶ (South Eastern Railway Recruitment Cell) ಖಾಲಿ ಇರುವ ಲೋಕೋ ಪೈಲಟ್‌ ಮತ್ತು ಟ್ರೈನ್ಸ್‌ ಮ್ಯಾನೇಜರ್‌ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ, ಐಟಿಐ, ಪದವಿ ತೇರ್ಗಡೆಯಾದವರನ್ನು ನೇಮಿಸಿಕೊಳ್ಳುತ್ತಿದೆ (RRC SER Recruitment 2024). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್‌ 12 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಅಸಿಸ್ಟಂಟ್‌ ಲೋಕೋ ಪೈಲಟ್‌ – 827 ಮತ್ತು ಟ್ರೈನ್ಸ್‌ ಮ್ಯಾನೇಜರ್‌ (ಗೂಡ್ಸ್‌ ಗಾರ್ಡ್‌) – 375 ಹುದ್ದೆಗಳಿವೆ. ಅಸಿಸ್ಟಂಟ್‌ ಲೋಕೋ ಪೈಲಟ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಜತೆಗೆ ಐಟಿಐ ಪಾಸ್‌ ಮಾಡಿರಬೇಕು ಅಥವಾ ಅಂಗೀಕೃತ ಸಂಸ್ಥೆಯಿಂದ ಎಂಜಿನಿಯರಿಂಗ್‌ನಲ್ಲಿ 3 ವರ್ಷದ ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಇನ್ನು ಟ್ರೈನ್ಸ್‌ ಮ್ಯಾನೇಜರ್‌ (ಗೂಡ್ಸ್‌ ಗಾರ್ಡ್‌) ಹುದ್ದೆಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಎಂದು ಪ್ರಕಟಣೆ ತಿಳಿಸಿದೆ.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 42 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವಿಭಾಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಯಾರಿಗೂ ಅರ್ಜಿ ಶುಲ್ಕವಿಲ್ಲ.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 5,200 ರೂ. – 20,200 ರೂ. ಮಾಸಿಕ ವೇತನ ದೊರೆಯಲಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ನೀವು ಅರ್ಜಿ ಸಲ್ಲಿಸಬೇಕಾದ ಹುದ್ದೆಯನ್ನು ಆಯ್ಕೆ ಮಾಡಿ ಅದರ ಮೇಲೆ ಕ್ಲಿಕ್‌ ಮಾಡಿ (South Eastern Railway Trains Manager (Goods Guard) ಅಥವಾ South Eastern Railway Assistant Loco Pilot (ALP))
  • ಪುಟದ ಕೆಳಗಡೆ ಕಾಣಿಸುವ Apply Now ಬಟನ್‌ ಆಯ್ಕೆ ಮಾಡಿ.
  • ನಿಮ್ಮ ಇಮೇಲ್‌ ಐಡಿ, ಫೋನ್‌ ನಂಬರ್‌ ಬಳಸಿ ಹೆಸರು ನೋಂದಾಯಿಸಿ.
  • ರಿಜಿಸ್ಟರ್‌ ನಂಬರ್‌, ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Sumbit ಬಟನ್‌ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಭಾರತೀಯ ವಾಯುಪಡೆಯಲ್ಲಿದೆ ಉದ್ಯೋಗಾವಕಾಶ; ದ್ವಿತೀಯ ಪಿಯು ಪಾಸಾದವರೂ ಅರ್ಜಿ ಸಲ್ಲಿಸಿ

Continue Reading

Lok Sabha Election 2024

Election Results 2024: ಜೈಲಿನಿಂದಲೇ ಸ್ಪರ್ಧಿಸಿ ಗೆದ್ದ ಇವರು ಸಂಸತ್‌ಗೆ ಹಾಜರಾಗಬಹುದೆ? ಕಾನೂನು ಏನು ಹೇಳುತ್ತದೆ?

Election Results 2024: ಜೈಲಿನಿಂದಲೇ ಸ್ಪರ್ಧಿಸಿ ಖಲಿಸ್ತಾನಿ ಪರ ಬೋಧಕ ಅಮೃತ್‌ಪಾಲ್‌ ಸಿಂಗ್ ಪಂಜಾಬ್‌ನ ಖದೂರ್ ಸಾಹಿಬ್ ಕ್ಷೇತ್ರದಿಂದ ಮತ್ತು ಭಯೋತ್ಪಾದಕರಿಗೆ ಹಣಕಾಸಿನ ನೆರವು ಒದಗಿಸಿದ ಆರೋಪ ಎದುರಿಸುತ್ತಿರುವ ಎಂಜಿನಿಯರ್ ರಶೀದ್ ಎಂದೇ ಜನಪ್ರಿಯವಾಗಿರುವ ಶೇಖ್ ಅಬ್ದುಲ್ ರಶೀದ್ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಗೆದ್ದಿದ್ದಾರೆ. ಮುಂದೆ ಇವರು ಸಂಸತ್‌ನ ಕಲಾಪಕ್ಕೆ ಹಾಜರಾಗಬಹುದೆ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Election Results 2024
Koo

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ (Election Results 2024). ಸಮೀಕ್ಷೆಗಳನ್ನು ತಲೆ ಕೆಳಗಾಗಿಸಿದ ಈ ರಿಸಲ್ಟ್‌ ಹಲವು ಅಚ್ಚರಿಗಳಿಗೂ ಕಾರಣವಾಗಿದೆ. ಈ ಪೈಕಿ ಭಯೋತ್ಪಾದನೆ ಆರೋಪದ ಮೇಲೆ ಪ್ರಸ್ತುತ ಜೈಲಿನಲ್ಲಿರುವ ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ವಿಜೇತರಾಗಿ ಹೊರ ಹೊಮ್ಮಿರುವುದು ಕೂಡ ಒಂದು. ಖಲಿಸ್ತಾನಿ ಪರ ಬೋಧಕ (Pro-Khalistani preacher) ಅಮೃತ್‌ಪಾಲ್‌ ಸಿಂಗ್ (Amrit pal Singh) ಪಂಜಾಬ್‌ನ ಖದೂರ್ ಸಾಹಿಬ್ (Khadoor Sahib) ಕ್ಷೇತ್ರದಿಂದ ಮತ್ತು ಭಯೋತ್ಪಾದಕರಿಗೆ ಹಣಕಾಸಿನ ನೆರವು ಒದಗಿಸಿದ ಆರೋಪ ಎದುರಿಸುತ್ತಿರುವ ಎಂಜಿನಿಯರ್ ರಶೀದ್ ಎಂದೇ ಜನಪ್ರಿಯವಾಗಿರುವ ಶೇಖ್ ಅಬ್ದುಲ್ ರಶೀದ್ (Sheikh Abdul Rashid) ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ (Baramulla) ಕ್ಷೇತ್ರದಿಂದ ಗೆದ್ದಿದ್ದಾರೆ.

ಹೊಸ ಸದನದ ಕಾರ್ಯಕಲಾಪಗಳಿಗೆ ಇವರು ಹಾಜರಾಗುವಂತಿಲ್ಲವಾದರೂ ಸಂಸತ್ತಿನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಂವಿಧಾನಿಕ ಹಕ್ಕನ್ನು ಹೊಂದಿದ್ದಾರೆ.

ಕಾನೂನು ಏನು ಹೇಳುತ್ತದೆ?

ಜೈಲಿನಲ್ಲಿರುವ ಹೊಸದಾಗಿ ಚುನಾಯಿತರಾದ ಸಂಸದರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಲಾಗುತ್ತದೆ. ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವುದು ಅವರ ಸಾಂವಿಧಾನಿಕ ಹಕ್ಕು. ಎಂಜಿನಿಯರ್ ರಶೀದ್ ಮತ್ತು ಅಮೃತ್‌ಪಾಲ್‌ ಸಿಂಗ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಬೇಕಾದರೆ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು. ಪ್ರಮಾಣ ವಚನ ಸ್ವೀಕರಿಸಿದ ನಂತರ, ಅವರು ಜೈಲಿಗೆ ಮರಳಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ಸದನಕ್ಕೆ ಹಾಜರಾಗಲು ಸಾಧ್ಯವಾಗದಿರುವ ಬಗ್ಗೆ ಸ್ಪೀಕರ್‌ಗೆ ತಿಳಿಸಲಾಗುವುದು. ನಂತರ ಸ್ಪೀಕರ್ ಈ ಮನವಿಗಳನ್ನು ಸದಸ್ಯರ ಗೈರು ಹಾಜರಿಯ ಸದನ ಸಮಿತಿಗೆ ಕಳುಹಿಸುತ್ತಾರೆ. ಸಮಿತಿಯು ನಂತರ ಸದನದ ಕಲಾಪಗಳಿಗೆ ಗೈರು ಹಾಜರಾಗಲು ಅವಕಾಶ ನೀಡಬೇಕೆ ಅಥವಾ ಬೇಡವೇ ಎಂದು ಶಿಫಾರಸು ಮಾಡುತ್ತದೆ. ನಂತರ ಶಿಫಾರಸನ್ನು ಸ್ಪೀಕರ್ ಸದನದ ಮತಕ್ಕೆ ಹಾಕುತ್ತಾರೆ. ಒಂದು ವೇಳೆ ಎಂಜಿನಿಯರ್ ರಶೀದ್ ಅಥವಾ ಅಮೃತ್‌ಪಾಲ್‌ ಸಿಂಗ್ ಅವರಿಗೆ ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದರೆ, ತಕ್ಷಣವೇ ಅವರು ಸಂಸದ ಸ್ಥಾನವನ್ನು ಕಳೆದುಕೊಳ್ಳುತ್ತಾರೆ ಎಂದು ವಿವರಿಸಿದ್ದಾರೆ.

ಅಮೃತ್‌ಪಾಲ್‌ ಸಿಂಗ್ ಹಿನ್ನೆಲೆ

ಅಮೃತಸರದ ಜಲ್ಲುಪುರ್‌ ಖೇರಾ ಎಂಬ ಗ್ರಾಮದಲ್ಲಿ 1993ರಲ್ಲಿ ಜನಿಸಿದ ಅಮೃತ್‌ಪಾಲ್‌, 12ನೇ ತರಗತಿವರೆಗೆ ಓದಿದ್ದಾನೆ. 2012ರಲ್ಲಿ ಭಾರತ ತೊರೆದು, ದುಬೈಯಲ್ಲಿ ತನ್ನ ಚಿಕ್ಕಪ್ಪನ ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ದುಡಿದ. ಈತ ಪಂಜಾಬ್‌ನ ಪೊಲೀಸರ ಹಾಗೂ ರಾಜಕಾರಣಿಗಳ ಗಮನಕ್ಕೆ ಬಂದುದೇ ಕೆಲವು ದಿನಗಳ ಹಿಂದೆ- ʼವಾರಿಸ್‌ ಪಂಜಾಬ್‌ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾದ ಸಂದರ್ಭದಲ್ಲಿ. ಈ ಸಂಘಟನೆಯನ್ನು ಸ್ಥಾಪಿಸಿದವನು ನಟ, ಚಳವಳಿಗಾರ ದೀಪ್‌ ಸಿಧು. ಇವನು 2022ರ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಇವನನ್ನು ಸರ್ಕಾರ ಸಾಯಿಸಿದೆ ಎಂದು ಅಮೃತ್‌ಪಾಲ್‌ ಮತ್ತು ಬೆಂಬಲಿಗರು ಆರೋಪಿಸುತ್ತ ಬಂದಿದ್ದಾರೆ. ಅಮೃತ್‌ಪಾಲ್‌ ಯಾವತ್ತೂ ಸಿಧುವನ್ನು ಭೇಟಿ ಮಾಡಿದವನೇ ಅಲ್ಲ. ಆದರೆ ಆನ್‌ಲೈನ್‌ನಲ್ಲಿ ತನ್ನನ್ನು ಅತ್ಯಂತ ಪ್ರಭಾವಿಸಿದ್ದ ಎಂದು ಹೇಳಿಕೊಳ್ಳುತ್ತಾನೆ. ಸಿಧುವಿನ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಧುವಿನ ಸಲಹೆಯಂತೆ ತಾನು ಗಡ್ಡ ಟ್ರಿಮ್‌ ಮಾಡಿಕೊಳ್ಳುವುದು ಬಿಟ್ಟಿರುವುದಾಗಿ ಹೇಳಿದ್ದ.

ಹಲವು ಸಮಯದಿಂದ ಆತ ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನ್ ಪರ ಪೋಸ್ಟ್‌ಗಳನ್ನು ಹಾಕುತ್ತಿದ್ದ. 2021ರಲ್ಲಿ ಕೆಂಪು ಕೋಟೆಯ ಮೇಲೆ ನಡೆದ ಗುಂಪು ದಾಳಿಯ ವೇಳೆ ಅದರ ನೇತೃತ್ವ ವಹಿಸಿದ್ದ ದೀಪ್‌ ಸಿಧುವಿನ ಕೃತ್ಯವನ್ನು ಈತ ಸಮರ್ಥಿಸಿಕೊಂಡಿದ್ದ. 2022ರಲ್ಲಿ ಪಂಜಾಬ್‌ನಲ್ಲಿ ಅಮೃತ್‌ಪಾಲ್‌ನನ್ನು ಅರೆಸ್ಟ್‌ ಮಾಡಲಾಗಿತ್ತು.

ಯಾರು ಈ ಶೇಖ್ ಅಬ್ದುಲ್ ರಶೀದ್?

ಇಂಜಿನಿಯರ್ ರಶೀದ್ ಪ್ರಸ್ತುತ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಅವಾಮಿ ಇತ್ತೆಹಾದ್ ಪಕ್ಷದ ಮುಖ್ಯಸ್ಥ, ಎರಡು ಬಾರಿ ಶಾಸಕನಾಗಿದ್ದ ರಶೀದ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2019 ರಲ್ಲಿ ಭಯೋತ್ಪಾದನೆ-ಧನಸಹಾಯ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಆತ ನ್ಯಾಷನಲ್‌ ಕಾನ್ಫರೆನ್ಸ್‌ನ ಓಮರ್‌ ಅಬ್ದುಲ್ಲಾ ವಿರುದ್ಧ ಸ್ಪರ್ಧಿಸಿ 4,7,2481 ಮತಗಳನ್ನು ಗಳಿಸಿದ್ದಾನೆ. ಒಮ್ಮೆಯೂ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡದ ರಶೀದ್ 2,04,142 ಮತಗಳ ಭಾರೀ ಅಂತರದಿಂದ ಗೆದ್ದಿದ್ದಾನೆ.

ಇದನ್ನೂ ಓದಿ: Lok Sabha Election 2024: ಚುನಾವಣಾ ಕಣಕ್ಕೆ ಧುಮುಕಿದ ಖಲಿಸ್ತಾನಿ ನಾಯಕ ಅಮೃತ್​ಪಾಲ್​ ಸಿಂಗ್‌; ಯಾವ ಕ್ಷೇತ್ರ?

Continue Reading

ದೇಶ

Lok Sabha Election 2024: ಒಬ್ಬ ಅಭ್ಯರ್ಥಿ ಎರಡೂ ಕ್ಷೇತ್ರಗಳಲ್ಲೂ ಗೆದ್ದರೆ ಏನಾಗುತ್ತದೆ?

Lok Sabha Election 2024: ಪ್ರಜಾಪ್ರತಿನಿಧಿ ಕಾಯ್ದೆ, 1951 ರ ಪ್ರಕಾರ, ಒಬ್ಬ ವ್ಯಕ್ತಿಗೆ ಎರಡು ಲೋಕಸಭಾ ಕ್ಷೇತ್ರಗಳಿಂದ ಏಕಕಾಲದಲ್ಲಿ ಚುನಾವಣೆಗೆ ಸ್ಪರ್ಧಿಸಲು ಕಾನೂನುಬದ್ಧವಾಗಿ ಅನುಮತಿ ಇದೆ. ಅಭ್ಯರ್ಥಿಯು ಎರಡು ಸ್ಥಾನಗಳಿಂದ ಸ್ಪರ್ಧಿಸಲು ಅವಕಾಶ ನೀಡುವ ಕಾಯಿದೆಯ 33 (7) ಉಪವಿಭಾಗವನ್ನು 1996 ರಲ್ಲಿ ತಿದ್ದುಪಡಿಯ ಮೂಲಕ ಪರಿಚಯಿಸಲಾಯಿತು. ಇದಕ್ಕೂ ಮೊದಲು, ಅಭ್ಯರ್ಥಿಯು ಸ್ಪರ್ಧಿಸಬಹುದಾದ ಕ್ಷೇತ್ರಗಳ ಸಂಖ್ಯೆಗೆ ಯಾವುದೇ ನಿರ್ಬಂಧವಿರಲಿಲ್ಲ. ಆದರೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 70ರ ಪ್ರಕಾರ ಒಬ್ಬ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಸ್ಥಾನಗಳಿಂದ ಗೆದ್ದಿದ್ದರೂ ಒಂದು ಬಾರಿಗೆ ಒಂದು ಸ್ಥಾನವನ್ನು ಮಾತ್ರ ಹೊಂದಬಹುದು.

VISTARANEWS.COM


on

Lok Sabha Election 2024
Koo

ನವದೆಹಲಿ: ಚುನಾವಣೆ(Lok Sabha Election 2024) ಬಂದಾಗ ಅಭ್ಯರ್ಥಿಗಳು ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುವುದು ಹೊಸದೇನಲ್ಲ. ಒಂದು ಕ್ಷೇತ್ರದಲ್ಲಿ ಸೋಲಿನ ಭೀತಿ ಇದ್ದಾಗ, ಅಥವಾ ತಮ್ಮ ಶಕ್ತಿ ಪ್ರದರ್ಶನವನ್ನು ಮಾಡಲು ಅಭ್ಯರ್ಥಿಗಳು ಎರಡನೇ ಕ್ಷೇತ್ರದಲ್ಲಿ ಸ್ಪರ್ಧಿಸುವುವುದು ಸಹಜ. ಈ ಬಾರಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ(Rahul Gandhi) ವಯನಾಡು(Wayanad) ಮತ್ತು ರಾಯ್‌ ಬರೇಲಿ(Rae Bareli) ಕ್ಷೇತ್ರಗಳಿಂದ ಸ್ಪರ್ಧಿಸಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹೀಗಿರುವಾಗ ಇದೇ ರೀತಿಯಾಗಿ ಒಂದು ವೇಳೆ ಅಭ್ಯರ್ಥಿ ಎರಡೂ ಕ್ಷೇತ್ರಗಳನ್ನು ಗೆದ್ದರೆ ಏನಾಗುತ್ತದೆ? ಅಭ್ಯರ್ಥಿಗಳು ಎರಡೂ ಕ್ಷೇತ್ರದಲ್ಲಿ ಸಂಸದರಾಗಿ ಮುಂದುವರೆಯಬಹುದೆ? ಈ ಬಗ್ಗೆ ಕಾನೂನು ಏನು ಹೇಳುತ್ತದೆ? ಈ ಎಲ್ಲಾ ಮಾಹಿತಿ ಇಲ್ಲಿದೆ ನೋಡಿ.

ಕಾನೂನು ಏನು ಹೇಳುತ್ತದೆ?

ಪ್ರಜಾಪ್ರತಿನಿಧಿ ಕಾಯ್ದೆ, 1951 ರ ಪ್ರಕಾರ, ಒಬ್ಬ ವ್ಯಕ್ತಿಗೆ ಎರಡು ಲೋಕಸಭಾ ಕ್ಷೇತ್ರಗಳಿಂದ ಏಕಕಾಲದಲ್ಲಿ ಚುನಾವಣೆಗೆ ಸ್ಪರ್ಧಿಸಲು ಕಾನೂನುಬದ್ಧವಾಗಿ ಅನುಮತಿ ಇದೆ. ಅಭ್ಯರ್ಥಿಯು ಎರಡು ಸ್ಥಾನಗಳಿಂದ ಸ್ಪರ್ಧಿಸಲು ಅವಕಾಶ ನೀಡುವ ಕಾಯಿದೆಯ 33 (7) ಉಪವಿಭಾಗವನ್ನು 1996 ರಲ್ಲಿ ತಿದ್ದುಪಡಿಯ ಮೂಲಕ ಪರಿಚಯಿಸಲಾಯಿತು. ಇದಕ್ಕೂ ಮೊದಲು, ಅಭ್ಯರ್ಥಿಯು ಸ್ಪರ್ಧಿಸಬಹುದಾದ ಕ್ಷೇತ್ರಗಳ ಸಂಖ್ಯೆಗೆ ಯಾವುದೇ ನಿರ್ಬಂಧವಿರಲಿಲ್ಲ. ಆದರೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 70ರ ಪ್ರಕಾರ ಒಬ್ಬ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಸ್ಥಾನಗಳಿಂದ ಗೆದ್ದಿದ್ದರೂ ಒಂದು ಬಾರಿಗೆ ಒಂದು ಸ್ಥಾನವನ್ನು ಮಾತ್ರ ಹೊಂದಬಹುದು.

ಎರಡೂ ಸ್ಥಾನಗಳಲ್ಲಿ ಅಭ್ಯರ್ಥಿ ಗೆದ್ದರೆ?

ಎರಡರಿಂದಲೂ ಚುನಾಯಿತರಾದ ವ್ಯಕ್ತಿಯು ಒಂದು ಬಾರಿಗೆ ಕೇವಲ ಒಂದು ಸ್ಥಾನವನ್ನು ಮಾತ್ರ ಹೊಂದಬಹುದು. ಅಭ್ಯರ್ಥಿಯು ಎರಡು ಸ್ಥಾನಗಳಿಂದ ಗೆದ್ದರೆ, ಅವನು ಅಥವಾ ಅವಳು ತೆರವಾದ ಸ್ಥಾನದಿಂದ ಉಪಚುನಾವಣೆ ಮಾಡಬೇಕಾಗುತ್ತದೆ. ಚುನಾವಣೆ ಮುಗಿದ ನಂತರ ಅನೇಕ ಉಪಚುನಾವಣೆಗಳನ್ನು ನಡೆಸಬೇಕಾಗಿರುವುದರಿಂದ ಮತ್ತೆ ಅಷ್ಟೇ ಖರ್ಚಾಗುತ್ತದೆ. ಚುನಾವಣಾ ಆಯೋಗವು 2019ರ ಲೋಕಸಭೆ ಚುನಾವಣೆಯಲ್ಲಿ ಅಂದಾಜು 5 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿತ್ತು. ಅಂದರೆ, ಪ್ರತಿ ಸೀಟಿಗೆ ಸರಾಸರಿ 9.20 ಕೋಟಿ ರೂ. ವೆಚ್ಚ ತಗುಲಿತ್ತು. ಈ ಬಾರಿ ಚುನಾವಣಾ ವೆಚ್ಚ ಇನ್ನೂ ಹೆಚ್ಚಳ ಕಂಡಿರುವ ಸಾಧ್ಯತೆಯಿದೆ. ಸುಮಾರು 10-12 ಕೋಟಿ ರೂ.ಗಳಷ್ಟು ವೆಚ್ಚವಾಗುವ ಸಾಧ್ಯತೆಯಿದೆ.

ಹೀಗಾಗಿ ಹಲವು ವರ್ಷಗಳಿಂದ ಚುನಾವಣಾ ಆಯೋಗವು (EC) ಅಭ್ಯರ್ಥಿಗಳು ಒಂದು ಸ್ಥಾನದಿಂದ ಸ್ಪರ್ಧಿಸುವುದನ್ನು ನಿರ್ಬಂಧಿಸಬೇಕು ಎಂಬ ವಾದಗಳನ್ನು ಮಾಡುತ್ತಲೇ ಬಂದಿದೆ. ಅಭ್ಯರ್ಥಿಯು ಎರಡೂ ಸ್ಥಾನಗಳನ್ನು ಗೆಲ್ಲಬೇಕಾದರೆ ಉಪಚುನಾವಣೆ ನಡೆಸುವಲ್ಲಿ ಸಾರ್ವಜನಿಕ ಹಣ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಆಗುತ್ತದೆ ಎಂಬ ಅರೋಪವೂ ಇದೆ.

ರಾಹುಲ್‌ ಗಾಂಧಿ ಆಯ್ಕೆ ಯಾವುದು?

ರಾಹುಲ್‌ ಗಾಂಧಿ ಈ ಬಾರಿ ಕೇರಳದ ವಯನಾಡು ಕ್ಷೇತ್ರದಲ್ಲಿ ಬರೋಬ್ಬರಿ 3,64,422 ಮತಗಳಿಂದ ಗೆದ್ದರೆ, ತಮ್ಮ ಮತ್ತೊಂದು ಕ್ಷೇತ್ರವಾದ ರಾಯ್‌ ಬರೇಲಿಯಲ್ಲಿ 3,89,341 ಮತಗಳ ಅಂತರದಿಂದ ಪ್ರತಿಸ್ಪರ್ಧಿ ಬಿಜೆಪಿಯ ದಿನೇಶ್‌ ಪ್ರತಾಪ್‌ ಅವರನ್ನು ಸೋಲಿಸಿದ್ದಾರೆ. ಹೀಗೆ ಎರಡೂ ಕ್ಷೇತ್ರಗಳಲ್ಲಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಎರಡರಲ್ಲಿ ಯಾವ ಕ್ಷೇತ್ರವನ್ನು ರಾಹುಲ್‌ ಗಾಂಧಿ ಉಳಿಸಿಕೊಳ್ಳಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ವಯನಾಡು ಅವರಿಗೆ ರಾಜಕೀಯ ಮರುಜೀವ ನೀಡಿದರೆ, ರಾಯ್‌ಬರೇಲಿ ಗಾಂಧಿ ಕುಟುಂಬದ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವ ಕ್ಷೇತ್ರ. ಹೀಗಿರುವಾಗ ಎರಡೂ ಕ್ಷೇತ್ರಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ರಾಹುಲ್‌ಗೆ ಬಹಳ ಸವಾಲಿನ ಕಾರ್ಯವಾಗಿದೆ.

ಇದನ್ನೂ ಓದಿ:Rain News: ಸಿಡಿಲು ಬಡಿದು ಇಬ್ಬರು ಮಹಿಳೆಯರ ಸಾವು; ಜೂನ್‌ 13ರವರೆಗೆ ಕಾವೇರಿ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ!

Continue Reading
Advertisement
valmiki corporation scam nagendra siddaramaiah
ಕರ್ನಾಟಕ5 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಇಂದೇ ಸಚಿವ ನಾಗೇಂದ್ರ ರಾಜೀನಾಮೆ?

Sunil Chhetri
ಕ್ರೀಡೆ11 mins ago

Sunil Chhetri: ಭಾರತದ ಫುಟ್ಬಾಲ್ ಐಕಾನ್​​ ಸುನೀಲ್‌ ಚೆಟ್ರಿಗೆ ಇಂದು ವಿದಾಯ ಪಂದ್ಯ

Lok Sabha Election 2024
ದೇಶ14 mins ago

Election results 2024: 280 ಸಂಸದರು ಮೊದಲ ಬಾರಿಗೆ ಲೋಕಸಭೆಗೆ ಎಂಟ್ರಿ! ಲಿಸ್ಟ್‌ನಲ್ಲಿದ್ದಾರೆ ಮಾಜಿ ಸಿಎಂಗಳು, ಸಿನಿ ತಾರೆಯರು, ಹೈಕೋರ್ಟ್‌ ಜಡ್ಜ್‌

Dolly Dhananjay Will He Get Married says During Kotee Trailer Launch
ಸ್ಯಾಂಡಲ್ ವುಡ್14 mins ago

Dolly Dhananjay: ರೋಡಲ್ಲಿ ಹೋಗೋರೆಲ್ಲ ನನ್ನ ಮದ್ವೆ ಬಗ್ಗೆನೇ ಕೇಳ್ತಾರೆ ಎಂದ  ಡಾಲಿ ಧನಂಜಯ್!

Hinduism Beliefs
ಧಾರ್ಮಿಕ16 mins ago

Hinduism Beliefs: ಸತ್ತ ವ್ಯಕ್ತಿಯ ದೇಹವನ್ನು ಏಕಾಂಗಿಯಾಗಿ ಬಿಡಬಾರದು ಅನ್ನೋದು ಯಾಕೆ ಗೊತ್ತೇ?

Job Alert
ಉದ್ಯೋಗ16 mins ago

Job Alert: ರೈಲ್ವೆ ಇಲಾಖೆಯಲ್ಲಿನ 1,202 ಹುದ್ದೆಗಳಿಗೆ ಐಟಿಐ ಪಾಸಾದವರು ಆನ್‌ಲೈನ್‌ ಮೂಲಕ ಇಂದೇ ಅರ್ಜಿ ಸಲ್ಲಿಸಿ

Norway Tour
ಪ್ರವಾಸ32 mins ago

Norway Tour: ಜಗತ್ತಿನ ಕೊನೆಯ ದೇಶ ಇದು! ಇಲ್ಲಿ 6 ತಿಂಗಳು ಹಗಲು, 6 ತಿಂಗಳು ರಾತ್ರಿ!

Rohit Sharma
ಕ್ರೀಡೆ36 mins ago

Rohit Sharma: ಹಲವು ದಾಖಲೆಗಳ ಸರದಾರನಾದ ಹಿಟ್​ಮ್ಯಾನ್​ ರೋಹಿತ್​

Election Results 2024
Lok Sabha Election 202437 mins ago

Election Results 2024: ಜೈಲಿನಿಂದಲೇ ಸ್ಪರ್ಧಿಸಿ ಗೆದ್ದ ಇವರು ಸಂಸತ್‌ಗೆ ಹಾಜರಾಗಬಹುದೆ? ಕಾನೂನು ಏನು ಹೇಳುತ್ತದೆ?

Rakshit Shetty Birthday here is the cinema Journey
ಸ್ಯಾಂಡಲ್ ವುಡ್40 mins ago

Rakshit Shetty: ಸಿಂಪಲ್‌ ಸ್ಟಾರ್‌ಗೆ ಇಂದು ಜನುಮದಿನದ ಸಂಭ್ರಮ; ರಕ್ಷಿತ್‌  ಸಿನಿ ಜರ್ನಿ ಹೀಗಿತ್ತು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ7 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 weeks ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌