ಪೆಟ್ರೋಲ್, ಡೀಸೆಲ್ ಬೆಲೆ ಶೀಘ್ರ ಇಳಿಕೆ! ಲೋಕಸಭೆ ಎಲೆಕ್ಷನ್ ಎಫೆಕ್ಟ್? - Vistara News

ದೇಶ

ಪೆಟ್ರೋಲ್, ಡೀಸೆಲ್ ಬೆಲೆ ಶೀಘ್ರ ಇಳಿಕೆ! ಲೋಕಸಭೆ ಎಲೆಕ್ಷನ್ ಎಫೆಕ್ಟ್?

Petrol, Diesel price: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ ಮತ್ತು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲೂ ಇಳಿಕೆಯನ್ನು ಕಾಣಬಹುದು.

VISTARANEWS.COM


on

Rs 8 to 10 price cut in Petrol and Diesel, PM Modi to announce on year end
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ (International Market) ಕಚ್ಚಾ ತೈಲ (Crude Oil) ಬೆಲೆ ಭಾರೀ ಇಳಿಕೆ ಕಂಡ ಪರಿಣಾಮ ದೇಶದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆಗಳಿವೆ! (Petrol, Diesel price) ಒಂದು ವರ್ಷದಿಂದ ಈ ಬೆಲೆಗಳಲ್ಲಿ ಅಂಥ ಬದಲಾವಣೆಗಳಾಗಿರಲಿಲ್ಲ. ಈಗ ಲಾಭದ ಪಾಲನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಭಾರೀ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

2022ರಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 17 ರೂ. ಮತ್ತು ಡೀಸೆಲ್‌ಗೆ 35 ರೂ.ನಷ್ಟು ಗರಿಷ್ಠ ನಷ್ಟ ಅನುಭವಿಸುತ್ತಿದ್ದ ತೈಲ ಮಾರಾಟ ಕಂಪನಿಗಳು ಈಗ ಪ್ರತಿ ಲೀಟರ್‌ಗೆ ಪೆಟ್ರೋಲ್‌ಗೆ 8-10 ರೂ. ಮತ್ತು ಡೀಸೆಲ್‌ನಲ್ಲಿ 3-4 ರೂ. ಲಾಭ ಗಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇಂಧನ ಸಚಿವಾಲಯವು ಈಗಾಗಲೇ ತೈಲ ಮಾರಾಟ ಕಂಪನಿಗಳೊಂದಿಗೆ ಕಚ್ಚಾ ಮತ್ತು ಚಿಲ್ಲರೆ ಇಂಧನ ಬೆಲೆಯ ಸನ್ನಿವೇಶಗಳ ಕುರಿತು ಚರ್ಚಿಸಿದೆ.

ತೈಲ ಮಾರಾಟ ಕಂಪನಿಗಳು ಲಾಭವನ್ನು ಮಾಡಿಕೊಳ್ಳುತ್ತಿರುವುದರಿಂದ, ಅದರ ಲಾಭವನ್ನು ಜನರಿಗೂ ದಾಟಿಸುವ ಕುರಿತು ಕೇಂದ್ರ ಸರ್ಕಾರವು ಚರ್ಚೆ ನಡೆಸಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಕಚ್ಚಾ ತೈಲ ಬೆಲೆಯ ಸನ್ನಿವೇಶದ ಬಗ್ಗೆ ಹಣಕಾಸು ಸಚಿವಾಲಯ ಮತ್ತು ತೈಲ ಸಚಿವಾಲಯ ಚಿಂತನೆ ನಡೆಸುತ್ತಿದೆ. ತೈಲ ಮಾರಾಟ ಕಂಪನಿಗಳ ಲಾಭದಾಯಕತೆಯ ಜೊತೆಗೆ, ಅವರು ಜಾಗತಿಕ ಪರಿಸ್ಥಿತಿಗಳ ಕುರಿತೂ ಅವರು ಚರ್ಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಮೂರು ತ್ರೈಮಾಸಿಕಗಳಲ್ಲಿ ಬಲವಾದ ಲಾಭದ ಕಾರಣವಾಗಿ ತೈಲ ಮಾರಾಟ ಕಂಪನಿಗಳ ಒಟ್ಟಾರೆ ನಷ್ಟದ ಪ್ರಮಾಣ ಕಡಿಮೆಯಾಗಿದೆ. ಕಳೆದ ತ್ರೈಮಾಸಿಕದಲ್ಲಿ ಐಒಸಿ, ಎಚ್‌ಪಿಸಿಎಲ್ ಮತತು ಬಿಪಿಸಿಎಲ್‌ ಮೂರು ತೈಲ ಮಾರಾಟ ಕಂಪನಿಗಳ ಒಟ್ಟು ಲಾಭ 28,000 ಕೋಟಿಗಳಷ್ಟಾಗಿದೆ. ನಷ್ಟವನ್ನು ಭರಿಸಿಕೊಳ್ಳುತ್ತಿವೆ ಎಂಬ ಪರಿಸ್ಥಿತಿಯಿಂದ ಕಂಪನಿಗಳು ಹೊರ ಬಂದಿರುವುದರಿಂದ ಸರ್ಕಾರವು ಲಾಭವನ್ನು ಜನರಿಗೂ ದಾಟಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಬೇಡಿಕೆಯಲ್ಲಿನ ಕುಸಿತ ಮತ್ತು ಒಪೆಕ್ ಪೂರೈಕ ಕಡಿತ ಆಳ ಮತ್ತು ಅವಧಿಯ ಮೇಲಿನ ಅನಿಶ್ಚಿತತೆಯು ಈ ವಾರಂಭದಲ್ಲಿ ತೈಲ ಬೆಲೆಗಳ ಕುಸಿತಕ್ಕೆ ಕಾರಣವಾಯಿತು. ನೈಜೀರಿಯಾ ಮತ್ತು ಇರಾಕ್‌ ತಮ್ಮ ರಫ್ತು ಪ್ರಮಾಣವನ್ನು ಕಡಿಮೆ ಮಾಡಿವೆ. ಸೌದಿ ಅರೇಬಿಯಾ ಮತ್ತು ಒಪೆಕ್ ಪ್ಲಸ್ ಮೈತ್ರಿಯ ಇತರ ಸದಸ್ಯರಿಂದ ನಡೆಯುತ್ತಿರುವ ಮಾರುಕಟ್ಟೆ-ಬೆಂಬಲಿತ ಕಡಿತದ ಪರಿಣಾಮವಾಗಿ ಜುಲೈ ನಂತರದ ಮೊದಲ ಮಾಸಿಕ ಕುಸಿತದ ಬಳಿಕ, ಒಪೆಕ್ ತೈಲ ಉತ್ಪಾದನೆಯು ನವೆಂಬರ್‌ನಲ್ಲಿ ಮತ್ತೆ ಕುಸಿತವನ್ನು ದಾಖಲಿಸಿತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ತೈಲ ಬೆಲೆಗಳು ದೇಶದಲ್ಲಿ ಹಣದುಬ್ಬರ ಇಳಿಕೆಗೆ ಕೊಡುಗೆಯನ್ನು ನೀಡಬಲ್ಲವು. ಅಲ್ಲದೇ, ಕುಸಿತ್ತಿರುವ ತೈಲ ಬೆಲೆಗಳು ಭಾರತೀಯ ಷೇರು ಮಾರುಕಟ್ಟೆಗೆ ಬಲ ನೀಡಲಿವೆ. ವಿಶೇಷವಾಗಿ ಕಚ್ಚಾ ತೈಲವನ್ನು ಕಚ್ಚಾ ವಸ್ತುವಾಗಿ ಬಳಸುವ ವಲಯದ ಕಂಪನಿಗಳಿಗೆ ಭಾರೀ ಲಾಭವಾಗಲಿವೆ. ಇದೇ ವೇಳೆ, ಕೆಲವು ವಲಯಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನೂ ಕಾಣಬಹುದು.

ಈ ಸುದ್ದಿಯನ್ನೂ ಓದಿ: Crude Oil Price: ಇಸ್ರೇಲ್-ಪ್ಯಾಲೆಸ್ತೀನ್‌ ಯುದ್ಧ; ಕಚ್ಚಾ ತೈಲ ಬೆಲೆ ಏರಿಕೆ, ಭಾರತದ ಮೇಲೆ ಪರಿಣಾಮ ನಿಶ್ಚಿತ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

OpenAI: ಇಸ್ರೇಲ್‌ನ ಸಂಸ್ಥೆಯಿಂದ ಬಿಜೆಪಿ ವಿರುದ್ಧ ಪ್ರಚಾರ; ಶಾಕಿಂಗ್‌ ಮಾಹಿತಿ ಹಂಚಿಕೊಂಡ ಓಪನ್ಎಐ

OpenAI: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಇಂದು (ಜೂನ್‌ 1) ನಡೆಯುತ್ತಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಚುನಾವಣೆಯ ಮೇಲೆ ಪ್ರಭಾವ ಬೀರಲು ಇಸ್ರೇಲ್‌ ಸಂಸ್ಥೆ ಕೃತಕ ಬುದ್ಧಿಮತ್ತೆ (AI) ಮಾದರಿಗಳನ್ನು ಬಳಸಲು ಪ್ರಯತ್ನಿಸಿದೆ ಎಂದು ಓಪನ್ಎಐ ಹೇಳಿದೆ. ಈ ಬಗ್ಗೆ ಬಿಜೆಪಿ ತೀವ್ರ ಕಳವಳ ವ್ಯಕ್ತಪಡಿಸಿದೆ.

VISTARANEWS.COM


on

OpenAI
Koo

ನವದೆಹಲಿ: ಸುಮಾರು ಎರಡು ತಿಂಗಳ ಕಾಲ ನಡೆದ ಲೋಕಸಭಾ ಚುನಾವಣೆ (Lok Sabha Election)ಯ ಕೊನೆಯ ಹಂತದ ಮತದಾನ ಇಂದು (ಜೂನ್‌ 1) ನಡೆಯುತ್ತಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಚುನಾವಣೆಯ ಮೇಲೆ ಪ್ರಭಾವ ಬೀರಲು ಇಸ್ರೇಲ್‌ ಸಂಸ್ಥೆ ಕೃತಕ ಬುದ್ಧಿಮತ್ತೆ (AI) ಮಾದರಿಗಳನ್ನು ಬಳಸಲು ಪ್ರಯತ್ನಿಸಿದೆ ಎಂದು ಚಾಟ್‌ಜಿಪಿಟಿ (ChatGPT)ಯ ಓಪನ್ಎಐ (OpenAI) ಹೇಳಿದೆ.

ಇಸ್ರೇಲ್‌ ಮೂಲದ ಸಂಸ್ಥೆಯಾದ STOIC ʼಝೀರೋ ಝೆನೊʼ (Zero Zeno) ಎಂದು ಕರೆಯಲ್ಪಡುವ ಅಭಿಯಾನ ನಡೆಸಿ ಬಿಜೆಪಿ ವಿರೋಧಿ ಚಟುವಟಿಕೆ ನಡೆಸಲು ಪ್ರಯತ್ನಿಸಿ, ವಿಫಲವಾಗಿದೆ ಎನ್ನಲಾಗಿದೆ. ಆಡಳಿತಾರೂಢ ಬಿಜೆಪಿಯನ್ನು ಟೀಕಿಸುವ ಮತ್ತು ಕಾಂಗ್ರೆಸ್ ಅನ್ನು ಶ್ಲಾಘಿಸುವ ಕಮೆಂಟ್‌, ಲೇಖನ, ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ರಚಿಸುವಂತಹ ಕಾರ್ಯಗಳಿಗಾಗಿ ಓಪನ್ಎಐಯ ಶಕ್ತಿಯುತ ಭಾಷಾ ಮಾದರಿಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಓಪನ್‌ಎಐ ಹೇಳಿದ್ದೇನು?

“ಮೇಯಲ್ಲಿ STOIC ನೆಟ್‌ವರ್ಕ್‌ ಭಾರತದ ಆಡಳಿತಾರೂಢ ಬಿಜೆಪಿಯನ್ನು ಟೀಕಿಸುವ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸುವ ಕಮೆಂಟ್‌ಗಳನ್ನು ರಚಿಸಲು ಪ್ರಾರಂಭಿಸಿತು. ಚುನಾವಣೆಯ ಮೇಲೆ ಪರಿಣಾಮ ಬೀರಬಹುದಾದ ಇಂತಹ ಕೆಲವು ಚಟುವಟಿಕೆಗಳನ್ನು ನಾವು ತಡೆದಿದ್ದೇವೆʼʼ ಎಂದು ಓಪನ್‌ಎಐ ಹೇಳಿದೆ. ʼʼಸಾಮಾಜಿಕ ಜಾಲತಾಣಗಳಾದ ಎಕ್ಸ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ವೆಬ್‌ಸೈಟ್‌ ಮತ್ತು ಯೂಟ್ಯೂಬ್‌ನಲ್ಲಿ ಪ್ರಭಾವ ಬೀರಲು ಯತ್ನಿಸುತ್ತಿದ್ದ ಇಸ್ರೇಲ್‌ನಿಂದ ಕಾರ್ಯನಿರ್ವಹಿಸುವ ಖಾತೆಗಳ ಸಮೂಹವನ್ನು ನಿಷೇಧಿಸಲಾಗಿದೆʼʼ ಎಂದೂ ವಿವರಿಸಿದೆ.

ʼʼಈ ಅಭಿಯಾನವನ್ನು ಕೆನಡಾ, ಅಮೆರಿಕ ಮತ್ತು ಇಸ್ರೇಲ್‌ನಲ್ಲಿರುವವರನ್ನು ಗುರಿಯಾಗಿಸಿ ಆರಂಭಿಸಲಾಗಿತ್ತು. ಇದಕ್ಕಾಗಿ ಸಂದೇಶಗಳಲ್ಲಿ ಇಂಗ್ಲಿಷ್‌ ಮತ್ತು ಹಿಬ್ರೂ ಭಾಷೆಗಳನ್ನು ಬಳಸಲಾಗುತ್ತಿತ್ತು. ಬಳಿಕ ಮೇಯಲ್ಲಿ ಭಾರತೀಯರನ್ನು ತಲುಪುವ ಉದ್ದೇಶದಿಂಧ ಇಂಗ್ಲಿಷ್‌ನಲ್ಲಿ ಕಮೆಂಟ್‌ ರಚಿಸಲಾಗಿತ್ತುʼʼ ಎಂದು ಓಪನ್‌ಎಐ ತಿಳಿಸಿದೆ.

ಅಪಾಯಕಾರಿ ಬೆದರಿಕೆ ಎಂದ ಬಿಜೆಪಿ

ಈ ಬೆಳವಣಿಗೆ ಬಗ್ಗೆ ಬಿಜೆಪಿ ಆತಂಕ ವ್ಯಕ್ತಪಡಿಸಿದೆ. ಇದು ಅಪಾಯಕಾರಿ ಬೆದಿಕೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಸಚಿವ ರಾಜೀವ್ ಚಂದ್ರಶೇಖರ್, ʼʼಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾಯಾದ ಬೆದರಿಕೆ. ಭಾರತ ಮತ್ತು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳು ಬಿಜೆಪಿ ವಿರುದ್ಧ ಕಾರ್ಯನಿರ್ವಹಿಸುತ್ತಿವೆ ಎನ್ನುವುದು ಇದರಿಂದ ಸ್ಪಷ್ವಾಗುತ್ತದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕಾಗಿದೆ ಮತ್ತು ಸತ್ಯವನ್ನು ಬಹಿರಂಗಪಡಿಸಬೇಕಾಗಿದೆ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇಂಟರ್‌ನೆಟ್‌ ಮೂಲಕ ನಮ್ಮ ಮಾದರಿಗಳನ್ನು ಬಳಸಿ ವಂಚನೆಯಲ್ಲಿ ತೊಡಗಿದ್ದ ಇಂತಹ ಸುಮಾರು ಐದು ರಹಸ್ಯ ಕಾರ್ಯಾಚರಣೆಗಳನ್ನು ಕಳೆದ ಮೂರು ತಿಂಗಳಲ್ಲಿ ಗುರುತಿಸಲಾಗಿದೆ ಎಂದು ಓಪನ್ಎಐ ಹೇಳಿದೆ. 2015ರಲ್ಲಿ ಸ್ಥಾಪಿಸಲಾದ ಕೃತಕ ಬುದ್ಧಿಮತ್ತೆ ಸಂಶೋಧನಾ ಸಂಸ್ಥೆಯೇ ಓಪನ್ಎಐ.

ಇದನ್ನೂ ಓದಿ: Lok Sabha Election: ಇಂದು ಕೊನೇ ಹಂತದ ಮತದಾನ; ಸಂಜೆ ಎಕ್ಸಿಟ್‌ ಪೋಲ್, ಇಂದೇ ತಿಳಿಯಲಿದೆ ಭವಿಷ್ಯ!

2024ರ ಲೋಕಸಭೆ ಚುನಾವಣೆಯ 7ನೇ ಮತ್ತು ಅಂತಿಮ ಹಂತದ ಮತದಾನ ಇಂದು (ಜೂನ್ 1) ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಾಲಿವುಡ್‌ ನಟಿ ಕಂಗನಾ ರಾಣಾವತ್‌, ಚರಣ್‌ಜೀತ್‌ ಸಿಂಗ್‌ ಚನ್ನಿ, ಅನುರಾಗ್ ಠಾಕೂರ್, ಅಭಿಷೇಕ್ ಬ್ಯಾನರ್ಜಿ, ಮೀಸಾ ಭಾರ್ತಿ ಮತ್ತಿತರರ ಪ್ರಮುಖ ನಾಯಕರ ಭವಿಷ್ಯವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ.

Continue Reading

ಪ್ರಮುಖ ಸುದ್ದಿ

Shatru Bhairavi Yaga: ಶತ್ರು ಭೈರವಿ ಯಾಗ ನಡೆದಿಲ್ಲ, ಪ್ರಾಣಿಬಲಿಯೂ ಇಲ್ಲ: ಕೇರಳ ಸರಕಾರದಿಂದಲೇ ತನಿಖೆ, ಸ್ಪಷ್ಟನೆ

Shatru Bhairavi Yaga: ಕೇರಳ ರಾಜ್ಯ ಗುಪ್ತಚರ ಹಾಗೂ ಪೊಲೀಸ್ ಇಲಾಖೆ (Kerala police) ಈ ಕುರಿತು ವಿಶೇಷ ತನಿಖಾ ತಂಡ (SIT) ರಚಿಸಿದ್ದು, ಅದರ ಮೂಲಕ ತನಿಖೆ ನಡೆಸಲಾಗಿದೆ. ಕೇರಳ ರಾಜ್ಯದ ಕಣ್ಣೂರು, ತಳಿಪರಂಬ ಭಾಗದಲ್ಲಿ ಓಡಾಡಿ ಕೇರಳ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

VISTARANEWS.COM


on

shatru bhairavi yaga
ತಳಿಪರಂಬ ಶ್ರೀ ರಾಜರಾಜೇಶ್ವರ ದೇವಾಲಯ
Koo

ಮಂಗಳೂರು: ʼತಮ್ಮನ್ನು ಮುಗಿಸಲು ಕೇರಳದಲ್ಲಿ ಶತ್ರು ಭೈರವಿ ಯಾಗ (Shatru Bhairavi Yaga) ನಡೆದಿದೆʼ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ನೀಡಿದ್ದ ಹೇಳಿಕೆ ಕೇರಳದಲ್ಲಿ (Kerala) ಸಂಚಲನ ಸೃಷ್ಟಿಸಿದ್ದು, ಈ ಬಗ್ಗೆ ಅಲ್ಲಿನ ಸರ್ಕಾರ ತನಿಖೆ ನಡೆಸಿದೆ. ಅಂಥ ಯಾವುದೇ ಯಾಗ ನಡೆದಿಲ್ಲ, ಪ್ರಾಣಿ ಬಲಿ (animal sacrifice) ನೀಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಕೇರಳ ರಾಜ್ಯ ಗುಪ್ತಚರ ಹಾಗೂ ಪೊಲೀಸ್ ಇಲಾಖೆ (Kerala police) ಈ ಕುರಿತು ವಿಶೇಷ ತನಿಖಾ ತಂಡ (SIT) ರಚಿಸಿದ್ದು, ಅದರ ಮೂಲಕ ತನಿಖೆ ನಡೆಸಲಾಗಿದೆ. ಕೇರಳ ರಾಜ್ಯದ ಕಣ್ಣೂರು, ತಳಿಪರಂಬ ಭಾಗದಲ್ಲಿ ಓಡಾಡಿ ಕೇರಳ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಾಣಿ ಬಲಿ ಕೊಟ್ಟು ಶತ್ರು ಭೈರವಿ ಯಾಗ ನಡೆದಿದೆಯಾ ಎಂದು ತನಿಖೆ ನಡೆಸಿ ಸಮಗ್ರ ಮಾಹಿತಿ ಸಂಗ್ರಹಿಸಿ ಕೇರಳ ಡಿಜಿಪಿಗೆ ವಿಶೇಷ ತನಿಖಾ ತಂಡ ವರದಿ ಸಲ್ಲಿಸಿದೆ.

ತಳಿಪರಂಬ ಶ್ರೀ ರಾಜರಾಜೇಶ್ವರಿ ದೇವರು

ತಳಿಪರಂಬ, ರಾಜರಾಜೇಶ್ವರಂ ಹಾಗೂ ಕಣ್ಣೂರು ಸುತ್ತಮುತ್ತ ಪ್ರದೇಶದಲ್ಲಿ ತನಿಖೆ ನಡೆಸಿದ ಕೇರಳ ಟೀಂ, ಅಂಥ ಯಾವುದೇ ಪ್ರಾಣಿ ಬಲಿ ಯಾಗ ನಡೆದಿಲ್ಲ ಎಂದು ಕೇರಳ ಡಿಜಿಪಿಗೆ ವರದಿ ಸಲ್ಲಿಸಿದೆ. ಈ ನಡುವೆ ಕರ್ನಾಟಕ ಪೊಲೀಸ್ ವಿಶೇಷ ತಂಡದಿಂದಲೂ ಗುಪ್ತವಾಗಿ ಮಾಹಿತಿ ಸಂಗ್ರಹ ನಡೆದಿದೆ. ಆದರೆ ಯಾರ ತನಿಖೆಯಲ್ಲೂ ಯಾಗದ ಕುರಿತು ಸುಳಿವು ದೊರೆತಿಲ್ಲ.

ಕೇರಳ ಸಚಿವರಿಂದಲೂ ಸ್ಪಷ್ಟನೆ

ಕೇರಳದ ದೇವಸ್ವಂ ಬೋರ್ಡ್ ಸಚಿವ ರಾಧಾಕೃಷ್ಣನ್ ಅವರೂ ಡಿಕೆ ಶಿವಕುಮಾರ್ ಆರೋಪವನ್ನು ನಿರಾಕರಿಸಿದ್ದಾರೆ. ನಮ್ಮ ರಾಜ್ಯದ ಯಾವುದೇ ದೇವಸ್ಥಾನಗಳಲ್ಲೂ ಪ್ರಾಣಿ ಬಲಿ ನಡೆಯಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ದೇವಳ ಆಡಳಿತ ಮಂಡಳಿ ನಿರಾಕರಣೆ

“ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಯಾವುದೇ ದೇವಾಲಯಗಳಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡ ಯಾವುದೇ ಪೂಜೆ ಅಥವಾ ನೈವೇದ್ಯಗಳು ನಡೆಯುವುದಿಲ್ಲ. ಕೇರಳದ ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ರಾಜರಾಜೇಶ್ವರಂ ದೇವಸ್ಥಾನದ ಹೆಸರಿನ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಅಸತ್ಯ ಮತ್ತು ದುರದೃಷ್ಟಕರ” ಎಂದು ಅಧಿಕೃತ ಪತ್ರಿಕಾ ಹೇಳಿಕೆ‌ ಮೂಲಕ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ದೇವಾಲಯ ಆಡಳಿತ ಮಂಡಳಿ ಸ್ಪಷ್ಟನೆ

“ಶ್ರೀ ರಾಜರಾಜೇಶ್ವರಿ ದೇವಸ್ಥಾನವು ಕೇರಳದ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಕಣ್ಣೂರು ತಳಿಪರಂಬ ಶ್ರೀ ರಾಜರಾಜೇಶ್ವರಂ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಅಂತಹ ಯಾವುದೇ ಪೂಜೆ ಅಥವಾ ಶತ್ರು ಭೈರವಿ ಯಾಗವನ್ನು ನಡೆಸಲಾಗುವುದಿಲ್ಲ. ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಯಾವುದೇ ದೇವಾಲಯಗಳಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡ ಯಾವುದೇ ಪೂಜೆ ಅಥವಾ ನೈವೇದ್ಯಗಳಿಲ್ಲ. ದೇವಾಲಯದ ಹಿತಾಸಕ್ತಿಗಳ ವಿರುದ್ಧದ ಪ್ರಚಾರಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ” ಎಂದು ಪತ್ರಿಕಾ ಹೇಳಿಕೆ ಮೂಲಕ ತಳಿಪರಂಬ ಶ್ರೀ ರಾಜರಾಜೇಶ್ವರಂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹೇಳಿಕೆ ನೀಡಿದ್ದಾರೆ.

ಡಿಕೆಶಿ ಆರೋಪ ಏನಿತ್ತು?

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬ ಶ್ರೀ ರಾಜರಾಜೇಶ್ವರಂ ದೇವಸ್ಥಾನದಲ್ಲಿ ಸಿಎಂ ಹಾಗೂ ನನ್ನ ವಿರುದ್ಧ ಶತ್ರು ಭೈರವಿ ಯಾಗ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿಕೆಶಿ ಮೊನ್ನೆ ಹೇಳಿದ್ದರು. “ಇದು ಶತ್ರು ಸಂಹಾರಕ್ಕಾಗಿ ಮಾಡುತ್ತಿರುವ ಶತ್ರು ಭೈರವಿ ಯಾಗವಾಗಿದ್ದು, ಇದನ್ನು ಮಾಡಿಸುತ್ತಿರುವವರು ಯಾರೆಂದು ಗೊತ್ತಿದೆ. ರಾಜಕೀಯ ವೈರಿಗಳು ಮಾಡಿಸುತ್ತಿದ್ದಾರೆ. ಯಾಗದಲ್ಲಿ ಮೇಕೆ, ಹಂದಿ, ಕುರಿ, ಹೀಗೆ ಪಂಚಬಲಿ ಕೊಟ್ಟಿದ್ದಾರೆ. ಅಘೋರಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಆಸುಪಾಸು ಚೆಕ್ ಮಾಡಿ, ನಿಮಗೇ ಗೊತ್ತಾಗುತ್ತೆ. ಇದರಲ್ಲಿ ಭಾಗವಹಿಸಿದವರೇ ನನಗೆ ಮಾಹಿತಿ ನೀಡಿದ್ದಾರೆ” ಎಂದು ಡಿಕೆಶಿ ಆರೋಪಿಸಿದ್ದರು.

ಇದನ್ನೂ ಓದಿ: ಮಾರಣ ಶತ್ರು ಭೈರವಿ ಯಾಗ ಎದುರಿಸಲು ರಕ್ಷಣಾಕವಚ ಮಾಡಿಸಿದ ಡಿಕೆಶಿ! ಹೀಗಿರುತ್ತೆ ನೋಡಿ ಯಾಗ

Continue Reading

Lok Sabha Election 2024

Lok Sabha Election: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದಿರುವ 6 ಅಭ್ಯರ್ಥಿಗಳ ಸಾಮರ್ಥ್ಯ ಎಷ್ಟಿದೆ?

Lok Sabha Election: ಲೋಕಸಭೆ ಚುನಾವಣೆಯ 7ನೇ ಮತ್ತು ಅಂತಿಮ ಹಂತದ ಮತದಾನ ಇಂದು (ಜೂನ್ 1) ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಮುಖಂಡರು ಏಳನೇ ಹಂತದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಾರಾಣಸಿ ಕ್ಷೇತ್ರದಿಂದ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್‌ನ ಅಜಯ್‌ ರೈ ಸೇರಿ 6 ಮಂದಿ ಸ್ಪರ್ಧಿಸುತ್ತಿದ್ದಾರೆ. ಅವರ ವಿವರ ಇಲ್ಲಿದೆ.

VISTARANEWS.COM


on

Lok Sabha Election
Koo

ನವದೆಹಲಿ: 2024ರ ಲೋಕಸಭೆ ಚುನಾವಣೆಯ (Lok Sabha Election) 7ನೇ ಮತ್ತು ಅಂತಿಮ ಹಂತದ ಮತದಾನ ಇಂದು (ಜೂನ್ 1) ಆರಂಭವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಸೇರಿ ಹಲವು ಮುಖಂಡರು ಏಳನೇ ಹಂತದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಾರಾಣಸಿ ಕ್ಷೇತ್ರದಿಂದ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. 2014ರಿಂದ ಅವರು ಇಲ್ಲಿಂದ ಸ್ಪರ್ಧಿಸುತ್ತಿದ್ದು, ಸದ್ಯ ಈ ಕಣ ದೇಶದ ಗಮನ ಸೆಳೆದಿದೆ.

ಮೋದಿ ವಿರುದ್ಧ ಈ ಬಾರಿ ಆರು ಮಂದಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ ಅಜಯ್ ರೈ ಅವರನ್ನು ಮೂರನೇ ಬಾರಿಗೆ ಕಣಕ್ಕಿಳಿಸಿದೆ. ಇನ್ನು ಯುಗ ತುಳಸಿ ಪಾರ್ಟಿಯಿಂದ ಕೋಳಿಶೆಟ್ಟಿ ಶಿವಕುಮಾರ್, ಬಹುಜನ ಸಮಾಜ ಪಕ್ಷದಿಂದ ಅಥೆರ್‌ ಜಮಾಲ್‌ ಲಾರಿ, ಗಗನ್‌ ಪ್ರಕಾಶ್‌ ಯಾದವ್‌ (ಅಪ್ನಾ ದಳ, ಕಮರೇವಾಡಿ), ಸ್ವತಂತ್ರವಾಗಿ ದಿನೇಶ್‌ ಕುಮಾರ್‌ ಯಾದವ್‌ ಮತ್ತು ಸಂಜಯ್‌ ಕುಮಾರ್‌ ತಿವಾರಿ ಪ್ರಧಾನಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಅವರ ಕುರಿತಾದ ವಿವರ ಇಲ್ಲಿದೆ.

ಅಜಯ್‌ ರೈ

53 ವರ್ಷದ ಕಾಂಗ್ರೆಸ್‌ ನಾಯಕ ಅಜಯ್‌ ರೈ ಸತತ ಮೂರನೇ ಬಾರಿ ಮೋದಿ ವಿರುದ್ಧ ತೊಡೆ ತಟ್ಟಿದ್ದಾರೆ. ಇವರು 2014 ಮತ್ತು 2019ರಲ್ಲಿ ಪ್ರಧಾನಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಅಜಯ್‌ ರೈ ವಿರುದ್ಧ ಸುಮಾರು 18 ಪ್ರಕರಣಗಳು ದಾಖಲಾಗಿವೆ. ಇವರು ಆರಂಭದಲ್ಲಿ ಆರ್‌ಎಸ್‌ಎಸ್‌, ಎಬಿವಿಪಿ ಮತ್ತು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. 1996, 2002 ಮತ್ತು 2007ರಲ್ಲಿ ಇವರು ಬಿಜೆಪಿಯಿಂದ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. 2009ರಲ್ಲಿ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಅಜಯ್‌ ರೈ 6.66 ಲಕ್ಷ ರೂ.ಗಳ ಚರಾಸ್ತಿ ಮತ್ತು 1.25 ಕೋಟಿ ರೂ.ಗಳ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಇವರನ್ನು ಕಳೆದ ಆಗಸ್ಟ್‌ನಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಅಥೆರ್‌ ಜಮಾಲ್‌ ಲಾರಿ

ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ 70 ವರ್ಷದ ಅಥೆರ್‌ ಜಮಾಲ್‌ ಲಾರಿ ವಿರುದ್ಧವೂ ಪ್ರಕರಣವಿದೆ. ಅವರ ಹೆಸರಿನಲ್ಲಿ 1 ಪ್ರಕರಣ ದಾಖಲಾಗಿದೆ.

ಕೋಳಿಶೆಟ್ಟಿ ಶಿವಕುಮಾರ್‌

46 ವರ್ಷದ ಕೋಳಿಶೆಟ್ಟಿ ಶಿವಕುಮಾರ್‌ ಹೈದರಾಬಾದ್‌ ಮೂಲದವರು. ಈ ಹಿಂದೆ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕೆಂದು ಪ್ರತಿಭಟನೆ ನಡೆಸಿದ್ದರು. ಇವರು ಈ ಮೊದಲು ತಿರುಮಲ ತಿರುಪತಿ ದೇವಸ್ಥಾನಂ ಮೋರ್ಡ್‌ ಸದಸ್ಯರಾಗಿದ್ದರು.

ಗಗನ್‌ ಪ್ರಕಾಶ್‌ ಯಾದವ್‌

ಅಪ್ನಾ ದಳದಿಂದ ಕಣಕ್ಕಿಳಿದಿರುವ 39 ವರ್ಷದ ಗಗನ್‌ ಪ್ರಕಾಶ್‌ ಯಾದವ್‌ ಅವರ ಹೆಸರಿನಲ್ಲಿ 5 ಪ್ರಕರಣ ದಾಖಲಾಗಿದೆ. ಈ ಹಿಂದೆ ಇವರು ಸಮಾಜವಾದಿ ಪಾರ್ಟಿಯಲ್ಲಿದ್ದರು.

ದಿನೇಶ್‌ ಕುಮಾರ್‌ ಯಾದವ್‌

ಸತಂತ್ರ ಅಭ್ಯರ್ಥಿ ದಿನೇಶ್‌ ಕುಮಾರ್‌ ಯಾದವ್‌ ಈ ಹಿಂದೆ ಬಿಜೆಪಿಯಲ್ಲಿದ್ದರು. ಇವರ ವಿರುದ್ಧ ಯಾವುದೇ ಕೇಸ್‌ಗಳಿಲ್ಲ.

ಸಂಜಯ್‌ ಕುಮಾರ್‌ ತಿವಾರಿ

ಇನ್ನೊಬ್ಬ ಸ್ವತಂತ್ರ ಅಭ್ಯರ್ಥಿ ಇವರು. ಇವರು ದೆಹಲಿ ಮೂಲದ ಸಾಮಾಜಿಕ ಕಾರ್ಯಕರ್ತರು. ಇವರು ಗಾಂಧಿ ತತ್ವದ ಪ್ರತಿಪಾದಕರು.

ದಾಖಲೆಯ ಗೆಲುವು ಕಂಡಿದ್ದ ಮೋದಿ

ಮೋದಿ ಈ ಹಿಂದೆ ಎರಡು ಬಾರಿಯೂ ವಾರಾಣಸಿ ಕ್ಷೇತ್ರದಲ್ಲಿ ದಾಖಲೆಯ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. 2014ರ ಚುನಾವಣೆಯಲ್ಲಿ ಮೋದಿ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸ್ಪರ್ಧಿಸಿದ್ದರು. ಆಗ ಮೋದಿ 3.37 ಲಕ್ಷ ಮತಗಳ ಅಂತರಿಂದ ಗೆದ್ದಿದ್ದರು. ಇನ್ನು 2019ರಲ್ಲಿ ಮೋದಿ ಅವರು ಎಸ್‌ಪಿ-ಬಿಎಸ್‌ಪಿ ಅಭ್ಯರ್ಥಿ ಶಾಲಿನಿ ಯಾದವ್‌ ಅವರನ್ನು 4.80 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.

Continue Reading

ಬಾಲಿವುಡ್

Lok Sabha Election 2024: ಕೊನೇ ಹಂತದ ಮತದಾನ; ವೋಟ್‌ ಮಾಡಿದ ನಟ ಮಿಥುನ್ ಚಕ್ರವರ್ತಿ

Lok Sabha Election 2024: ಭಾರತೀಯ ಜನತಾ ಪಕ್ಷ ನಾಯಕ ಮತ್ತು ನಟ ಮಿಥುನ್ ಚಕ್ರವರ್ತಿ ಲೋಕಸಭೆ ಚುನಾವಣೆಯ ಅಂತಿಮ ಹಂತದಲ್ಲಿ ಮತದಾನ ಮಾಡಿದರು ಪಶ್ಚಿಮ ಬಂಗಾಳದ ಬೆಲ್ಗಾಚಿಯಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇತ್ತೀಚಿನ ವರ್ಷಗಳಲ್ಲಿ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹಿಂದಿ, ಬೆಂಗಾಲಿ, ಒಡಿಯಾ, ಭೋಜ್‌ಪುರಿ ಮತ್ತು ತಮಿಳು ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಸುಮಾರು 350 ಚಿತ್ರಗಳಲ್ಲಿ ಮಿಥುನ್ ಚಕ್ರವರ್ತಿ ನಟಿಸಿದ್ದಾರೆ.

VISTARANEWS.COM


on

Lok Sabha Election 2024 Mithun Chakraborty casting his vote
Koo

ನವದೆಹಲಿ: ದೇಶದ ಭವಿಷ್ಯವನ್ನು ನಿರ್ಧರಿಸುವ ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತಕ್ಕೆ ಬಂದಿದೆ. ಇಂದು (ಜೂನ್‌ 1) ಏಳನೇ ಅಥವಾ ಕೊನೆಯ ಹಂತದ ಮತದಾನ ನಡೆಯಲಿದ್ದು, ಇದರೊಂದಿಗೆ ಸಾರ್ವತ್ರಿಕ ಚುನಾವಣೆ ಕೊನೆಗೊಳ್ಳಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದ್ದು, ಎಲ್ಲರ ಗಮನವೀಗ ಫಲಿತಾಂಶದ ಕಡೆ ವಾಲಿದೆ.  ಭಾರತೀಯ ಜನತಾ ಪಕ್ಷ ನಾಯಕ ಮತ್ತು ನಟ ಮಿಥುನ್ ಚಕ್ರವರ್ತಿ ಲೋಕಸಭೆ ಚುನಾವಣೆಯ ಅಂತಿಮ ಹಂತದಲ್ಲಿ ಮತದಾನ ಮಾಡಿದರು ಪಶ್ಚಿಮ ಬಂಗಾಳದ ಬೆಲ್ಗಾಚಿಯಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬಳಿಕ ಮಾಧ್ಯಮದ ಮುಂದೆ ಮಾತನಾಡಿ , “ನಾನು ಬಿಜೆಪಿ ಕಾರ್ಯಕರ್ತ, ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ನಾನು ನಾಳೆಯಿಂದ ಸಿನಿಮಾಗಳ ಬಗ್ಗೆ ಮಾತನಾಡುತ್ತೇನೆ. ಏಕೆಂದರೆ ನಾನು ನನ್ನ ಕುಟುಂಬದ ಹೊಟ್ಟೆ ಕೂಡ ತುಂಬಿಸಬೇಕುʼʼಎಂದರು.

ಇದನ್ನೂ ಓದಿ: Raghu Thatha: `ಪುಷ್ಪ 2′ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್‌ ಸೆಡ್ಡು: ‘ರಘು ತಾತಾ’ ರಿಲೀಸ್‌ ಡೇಟ್‌ ಅನೌನ್ಸ್‌!

ಇತ್ತೀಚಿನ ವರ್ಷಗಳಲ್ಲಿ ಅವರು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹಿಂದಿ, ಬೆಂಗಾಲಿ, ಒಡಿಯಾ, ಭೋಜ್‌ಪುರಿ ಮತ್ತು ತಮಿಳು ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಸುಮಾರು 350 ಚಿತ್ರಗಳಲ್ಲಿ ಮಿಥುನ್ ಚಕ್ರವರ್ತಿ ನಟಿಸಿದ್ದಾರೆ.

ಉತ್ತರ ಪ್ರದೇಶದ 13 ಲೋಕಸಭೆ ಕ್ಷೇತ್ರಗಳು, ಪಂಜಾಬ್‌ 13, ಪಶ್ಚಿಮ ಬಂಗಾಳ 9, ಬಿಹಾರ 8, ಒಡಿಶಾ 6, ಹಿಮಾಚಲ ಪ್ರದೇಶ 4, ಜಾರ್ಖಂಡ್‌ 3 ಹಾಗೂ ಚಂಡೀಗಢದ 1 ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ನಡೆಯಲಿದೆ. ಸಂಜೆ 6 ಗಂಟೆವರೆಗೆ ಜನ ಹಕ್ಕು ಚಲಾಯಿಸಬಹುದಾಗಿದ್ದು, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆಗಾಗಿ ಆಯೋಗವು ಬಿಗಿ ಬಂದೋಬಸ್ತ್‌ ಸೇರಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರ ಭವಿಷ್ಯವು ಶನಿವಾರ ಮತಯಂತ್ರಗಳಲ್ಲಿ ಭದ್ರವಾಗಲಿದೆ.

ಇಂದು ಸಂಜೆ ಎಕ್ಸಿಟ್‌ ಪೋಲ್‌

ಶನಿವಾರ ಸಂಜೆ 6 ಗಂಟೆಗೆ ಮತದಾನ ಮುಗಿಯಲಿದ್ದು, 6.30ರ ಸುಮಾರಿಗೆ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಲಿವೆ. ಹಾಗಾಗಿ, ರಾಜಕೀಯ ನಾಯಕರು, ತಜ್ಞರು, ನಾಗರಿಕರು ಸೇರಿದಂತೆ ಎಲ್ಲರ ಗಮನ ಈಗ ಎಕ್ಸಿಟ್ ಪೋಲ್‌ಗಳತ್ತ ಇದೆ. ಜೂನ್‌ 1ರಂದು ಸಂಜೆ 6.30ರ ಹೊತ್ತಿಗೆ ವಿವಿಧ ಮಾಧ್ಯಮಗಳ ಎಕ್ಸಿಟ್‌ ಪೋಲ್‌ ಪ್ರಕಟವಾಗಲಿದೆ. ಕಳೆದ ಅನೇಕ ವರ್ಷಗಳಲ್ಲಿ ಎಕ್ಸಿಟ್ ಪೋಲ್‌ಗಳು ಮತದಾರರ ಚಿತ್ತವನ್ನು ಅಳೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚುನಾವಣಾ ಆಯೋಗದ ಅಧಿಕೃತ ಘೋಷಣೆಯ ಮೊದಲೇ ಚುನಾವಣಾ ಫಲಿತಾಂಶದ ನಿಖರವಾದ ವಿವರಣೆ ಲಭ್ಯವಾಗುತ್ತದೆ.

ಎಕ್ಸಿಟ್ ಪೋಲ್ ಜನರ ಮನಸ್ಥಿತಿಯನ್ನು ಹೇಳುತ್ತವೆ. ಆದರೆ ಅದರ ನಿಖರತೆಯು ಭೌಗೋಳಿಕ ವ್ಯಾಪ್ತಿ ಮತ್ತು ಮತದಾರರ ನಿಷ್ಕಪಟತೆಯಂತಹ ಬಹು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ ಜನರು ಗುಂಪುಗಳಲ್ಲಿ ಮತ ಚಲಾಯಿಸಿದಾಗ ಗಾಳಿ ಯಾವ ಕಡೆಗೆ ಬೀಸುತ್ತಿದೆ ಎಂಬುದನ್ನು ಅಳೆಯುವುದು ಸುಲಭ. ಆದರೆ ಒಂದು ಭಾಗದ ಜನರು ತಮ್ಮ ಒಲವನ್ನು ತೋರಿಸದಿರಲು ನಿರ್ಧರಿಸಿದರೆ ಅಲ್ಲಿಯೇ ಸಮೀಕ್ಷೆದಾರರು ಸಂಖ್ಯೆಗಳನ್ನು ತಪ್ಪಾಗಿ ಬಿಡುತ್ತದೆ. ಎಕ್ಸಿಟ್ ಪೋಲ್‌ಗಳು ಕೆಲವೊಮ್ಮೆ ಸರಿ ಮತ್ತು ಕೆಲವೊಮ್ಮೆ ತಪ್ಪಾಗಿವೆ.

Continue Reading
Advertisement
OpenAI
Lok Sabha Election 20242 mins ago

OpenAI: ಇಸ್ರೇಲ್‌ನ ಸಂಸ್ಥೆಯಿಂದ ಬಿಜೆಪಿ ವಿರುದ್ಧ ಪ್ರಚಾರ; ಶಾಕಿಂಗ್‌ ಮಾಹಿತಿ ಹಂಚಿಕೊಂಡ ಓಪನ್ಎಐ

Murder Case in Mysuru
ಕ್ರೈಂ3 mins ago

Murder case : ಜಸ್ಟ್‌ ಗುರಾಯಿಸಿದ್ದಕ್ಕೆ ಯುವಕನ ಬರ್ಬರ ಹತ್ಯೆ; ಸಾವಿನ ಕೊನೆ ಕ್ಷಣ ಸೆರೆ

Ambati Rayudu
ಕ್ರೀಡೆ4 mins ago

Ambati Rayudu: ಸ್ಟಾಂಡರ್ಡ್​ ಕಮ್ಮಿ ಮಾಡಿದರೆ ಉತ್ತಮ ಎಂದು ಕೊಹ್ಲಿಯ ಕಾಲೆಳೆದ ರಾಯುಡು

cm Siddaramaiah And DK Shivakumar
ಪ್ರಮುಖ ಸುದ್ದಿ7 mins ago

CM Siddaramaiah: ಸಿಎಂ, ಡಿಸಿಎಂ ಕೂಡ ಇಂದು ಕೋರ್ಟ್‌ ಕಟಕಟೆಯಲ್ಲಿ! ಏನಿದು ಕೇಸ್?‌

Cannes Film Festival Ukrainian model Sawa Pontyjska assault by security guard
ಸಿನಿಮಾ10 mins ago

Cannes Film Festival:  ಮಾಡೆಲ್‌ನನ್ನು ಒರಟಾಗಿ ಹೊರ ದಬ್ಬಿದ ಕಾನ್‌ ಚಲನಚಿತ್ರೋತ್ಸವ ಸಂಘಟಕರು; ವಿಡಿಯೊ ವೈರಲ್‌!

shatru bhairavi yaga
ಪ್ರಮುಖ ಸುದ್ದಿ47 mins ago

Shatru Bhairavi Yaga: ಶತ್ರು ಭೈರವಿ ಯಾಗ ನಡೆದಿಲ್ಲ, ಪ್ರಾಣಿಬಲಿಯೂ ಇಲ್ಲ: ಕೇರಳ ಸರಕಾರದಿಂದಲೇ ತನಿಖೆ, ಸ್ಪಷ್ಟನೆ

Bigg Boss OTT 3 Anil Kapoor Replaces Salman Khan As Host
ಒಟಿಟಿ51 mins ago

Bigg Boss OTT 3: ಶುರುವಾಗಲಿದೆ ಬಿಗ್​ ಬಾಸ್​ ಒಟಿಟಿ 3: ನಿರೂಪಣೆಗೆ ಸಲ್ಮಾನ್​ ಖಾನ್​ ಬದಲು ಅನಿಲ್​ ಕಪೂರ್!

Lok Sabha Election
Lok Sabha Election 202458 mins ago

Lok Sabha Election: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದಿರುವ 6 ಅಭ್ಯರ್ಥಿಗಳ ಸಾಮರ್ಥ್ಯ ಎಷ್ಟಿದೆ?

IND vs PAK
ಕ್ರೀಡೆ1 hour ago

IND vs PAK T20 World Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ ಗೆಲುವು ಖಚಿತ ಎಂದ ಪಾಕ್​ ಆಟಗಾರ

Lok Sabha Election 2024 Mithun Chakraborty casting his vote
ಬಾಲಿವುಡ್1 hour ago

Lok Sabha Election 2024: ಕೊನೇ ಹಂತದ ಮತದಾನ; ವೋಟ್‌ ಮಾಡಿದ ನಟ ಮಿಥುನ್ ಚಕ್ರವರ್ತಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌