Security Breach in Lok Sabha: ದಾರಿ ತಪ್ಪಿದ ಕ್ರಾಂತಿಕಾರಿಗಳು? ಲೋಕಸಭೆಗೆ ನುಗ್ಗಿದವರ ಸೋಶಿಯಲ್‌ ಮೀಡಿಯಾದಲ್ಲಿ ಏನಿದೆ? - Vistara News

ದೇಶ

Security Breach in Lok Sabha: ದಾರಿ ತಪ್ಪಿದ ಕ್ರಾಂತಿಕಾರಿಗಳು? ಲೋಕಸಭೆಗೆ ನುಗ್ಗಿದವರ ಸೋಶಿಯಲ್‌ ಮೀಡಿಯಾದಲ್ಲಿ ಏನಿದೆ?

ಲೋಕಸಭೆಗೆ ಬುಧವಾರ ನುಗ್ಗಿ ಕಲರ್‌ ಗ್ಯಾಸ್‌ ಸಿಡಿಸಿದ ((Security Breach in Lok Sabha) ) ಆರೋಪಿಗಳಲ್ಲಿ ಮೂವರ ಸೋಶಿಯಲ್‌ ಮೀಡಿಯಾ ಪ್ರೊಫೈಲ್‌ಗಳು ಇವರ ʼದಾರಿ ತಪ್ಪಿದ ಕ್ರಾತಿಕಾರಿʼ ಮುಖವನ್ನು ಬಿಚ್ಚಿಟ್ಟಿದೆ.

VISTARANEWS.COM


on

indian parliament attack suspects
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ನಿನ್ನೆ ಭದ್ರತೆ ಲೋಪ ಎಸಗಿ ಲೋಕಸಭೆಗೆ ನುಗ್ಗಿ (Security Breach in Lok Sabha) ಕಲರ್‌ ಗ್ಯಾಸ್‌ ಸಿಡಿಸಿದ ಆರು ಮಂದಿಯ ಸೋಶಿಯಲ್‌ ಮೀಡಿಯಾಗಳನ್ನೂ ಪೊಲೀಸರು ಜಾಲಾಡಿದ್ದು, ಆಶ್ಚರ್ಯ ಹುಟ್ಟಿಸುವ ಕೆಲವು ಸಂಗತಿಗಳು ಕಂಡುಬಂದಿವೆ. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮತ್ತು ಚಂದ್ರಶೇಖರ್ ಆಜಾದ್‌ರಂತಹ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳು; ಕ್ಯೂಬನ್ ಕ್ರಾಂತಿಕಾರಿ ಫಿಡೆಲ್ ಕ್ಯಾಸ್ಟ್ರೋ ಮತ್ತು ಅಮೇರಿಕನ್ ಸಮಾಜವಾದಿ ಮತ್ತು ಕಾರ್ಮಿಕ ಕಾರ್ಯಕರ್ತ ಆಲ್ಬರ್ಟ್ ಪಾರ್ಸನ್ಸ್ ಅವರ ಕೋಟ್‌ಗಳು; ರೈತರ ಪ್ರತಿಭಟನೆಗಳ ಫೋಟೋಗಳು ಮತ್ತು ವೀಡಿಯೊಗಳು; ಮನರೇಗಾ ಕೆಲಸಗಾರರ ಫೋಟೋಗಳು- ಆರೋಪಿಗಳಲ್ಲಿ ಮೂವರು ಕಳೆದ ಎರಡು ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಂಗತಿಗಳಾಗಿವೆ.

ಬುಧವಾರ ಇವರಲ್ಲಿ ಒಬ್ಬನಾದ ಲಲಿತ್ ಝಾ ಇನ್‌ಸ್ಟಾಗ್ರಾಮ್‌ನಲ್ಲಿ ಲೋಕಸಭೆಯ ಹೊರಗೆ ಘೋಷಣೆ ಕೂಗಿದ ಇಬ್ಬರ ವೀಡಿಯೊವನ್ನು ಪೋಸ್ಟ್ ಮಾಡಿದ್ದಾನೆ. ಅದರಲ್ಲಿ ನೀಲಂ ಸಿಂಗ್ ಆಜಾದ್ ಮತ್ತು ಅಮೋಲ್ ಶಿಂಧೆ ಕಲರ್‌ ಗ್ಯಾಸ್‌ ಸಿಡಿಸಿ “ಜೈ ಭೀಮ್”, “ಜೈ ಭಾರತ್” ಮತ್ತು “ಭಾರತ್ ಮಾತಾ ಕಿ ಜೈ” ಎಂದು ಕೂಗುತ್ತಿದ್ದಾರೆ. ಐವರು ಆರೋಪಿಗಳಲ್ಲಿ ಮೂವರ ಸೋಶಿಯಲ್‌ ಮೀಡಿಯಾ ಚಟುವಟಿಕೆಯ ಚಿತ್ರಣ ಇಲ್ಲಿದೆ.

ನೀಲಂ ಸಿಂಗ್

ನೀಲಂ ಸಿಂಗ್ ಫೇಸ್‌ಬುಕ್ ಪುಟ 313 ಅನುಯಾಯಿಗಳನ್ನು ಹೊಂದಿದೆ. ಅವಳು ತನ್ನನ್ನು ಸಾಮಾಜಿಕ ಕಾರ್ಯಕರ್ತೆ ಎಂದು ಗುರುತಿಸಿಕೊಂಡಿದ್ದಾಳೆ. ʼಪ್ರಗತಿಶೀಲ ಆಜಾದ್ ಯುವ ಸಂಘಟನೆʼಯ (PAYS) ಸದಸ್ಯೆ ಎಂದು ತಿಳಿಸಿದ್ದಾಳೆ. ಜೂನ್ 4, 2023ರಂದು ಆಕೆಯ ಕೊನೆಯ ಪೋಸ್ಟ್‌ನಲ್ಲಿ ಆಕೆಯನ್ನು ಮಹಿಳಾ ಪೊಲೀಸ್ ಸಿಬ್ಬಂದಿ ಎಳೆದೊಯ್ಯುತ್ತಿರುವ ಫೋಟೋ ಇದ್ದು, ಅದರಲ್ಲಿ ಗುಲಾಬಿ ಬಣ್ಣದ ಟಿ-ಶರ್ಟ್ ಮತ್ತು ಜೀನ್ಸ್‌ ಧರಿಸಿದ್ದಾಳೆ. ಜೊತೆಗೆ “ಅನ್ಯಾಯವನ್ನು ಸಹಿಸುವವನು ಅನ್ಯಾಯವನ್ನು ಮಾಡುವವನಿಗಿಂತ ಹೆಚ್ಚು ತಪ್ಪಿತಸ್ಥ. ನಾವೆಲ್ಲರೂ ಧ್ವನಿ ಎತ್ತೋಣ ಮತ್ತು ಮಹಿಳೆಯರ ಶೋಷಣೆಯ ವಿರುದ್ಧ ಹೋರಾಡೋಣ. ಇಂಕಿಲಾಬ್ ಜಿಂದಾಬಾದ್ʼʼ ಎಂದು ಬರೆದಿದ್ದಾಳೆ. ಸ್ಥಳವನ್ನು ಜಂತರ್ ಮಂತರ್ ಎಂದು ಟ್ಯಾಗ್ ಮಾಡಲಾಗಿದೆ.

ಆಕೆಯ ಪ್ರೊಫೈಲ್ ಚಿತ್ರದಲ್ಲಿ ಒಂದು ಯುವಕರ ತಂಡವಿದೆ. ಅವರಲ್ಲಿ ಒಬ್ಬ ಡಾ.ಬಿ.ಆರ್ ಅಂಬೇಡ್ಕರ್ ಅವರ ಫೋಟೋ ಹಿಡಿದಿದ್ದಾನೆ. ಮಾರ್ಚ್ 23ರಂದು (ಶಹೀದ್ ದಿವಸ್) ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಮೂವರು ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಿಗೆ ಶ್ರದ್ಧಾಂಜಲಿ ಪೋಸ್ಟ್ ಮಾಡಿದ್ದಾಳೆ. ಫೆಬ್ರವರಿ 5ರಂದು ಸಂತ ರವಿದಾಸ್ ಜಯಂತಿ ಮತ್ತು ಜನವರಿಯಲ್ಲಿ ಜಿಂದ್‌ನ ಘಾಸೋ ಖುರ್ದ್ ಗ್ರಾಮದ ಸಭೆಯ ಫೋಟೋಗಳನ್ನು ಪೋಸ್ಟ್ ಮಾಡಿದ್ದಾಳೆ. ವಿವಿಧ ಪ್ರತಿಭಟನಾ ಸ್ಥಳಗಳಲ್ಲಿ ತಾನು ಮಾಡಿದ ಭಾಷಣಗಳ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾಳೆ. ಈಕೆಗೆ ಪ್ರತಿಭಟನೆಗಳೇ ಕಸುಬಾಗಿತ್ತು ಎಂದು ಇದು ಸೂಚಿಸಿದೆ.

ಲಲಿತ್ ಝಾ

ಬುಧವಾರ ಮಧ್ಯಾಹ್ನ ಸಂಸತ್ತಿನ ಹೊರಗೆ ನೀಲಂ ಸಿಂಗ್ ಮತ್ತು ಶಿಂಧೆ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊವನ್ನು ಝಾ ಪೋಸ್ಟ್ ಮಾಡಿದ್ದಾನೆ. ತನ್ನನ್ನು ಶಿಕ್ಷಕ ಎಂದು ಕರೆದುಕೊಂಡಿದ್ದಾನೆ. Instagramನಲ್ಲಿ 293 ಅನುಯಾಯಿಗಳನ್ನು ಹೊಂದಿದ್ದಾನೆ. ಆತನ ಪ್ರೊಫೈಲ್‌ನಲ್ಲಿರುವ 535 ಪೋಸ್ಟ್‌ಗಳಲ್ಲಿ ಹಲವು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳಾದ ಭಗತ್ ಸಿಂಗ್, ಬೋಸ್, ಆಜಾದ್, ಹಿಂದಿ ಕವಿಗಳಾದ ರಾಮಧಾರಿ ಸಿಂಗ್ ದಿನಕರ್, ಸೂರ್ಯಕಾಂತ್ ತ್ರಿಪಾಠಿ ನಿರಾಲಾ ಮತ್ತು ಹರಿಶಂಕರ್ ಪರ್ಸಾಯಿ ಅವರ ಉಲ್ಲೇಖಗಳಿವೆ. ನೀಲಂ ಸಿಂಗ್ ಸೆಪ್ಟೆಂಬರ್‌ನಿಂದೀಚಿಗೆ ಕನಿಷ್ಠ ಏಳು ಪೋಸ್ಟ್‌ಗಳಲ್ಲಿ ಈತನನ್ನು ಟ್ಯಾಗ್ ಮಾಡಿದ್ದಾಳೆ.

ಅಮೋಲ್ ಶಿಂಧೆ

ಲಾತೂರ್ ನಿವಾಸಿ, 25 ವರ್ಷದ ಅಮೋಲ್ ಶಿಂಧೆ ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನ ಫೋಟೋವನ್ನು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಈತ 357 ಅನುಯಾಯಿಗಳನ್ನು ಹೊಂದಿದ್ದಾನೆ. ಇವನ ಪ್ರೊಫೈಲ್ ಕೂಡ ಭಗತ್ ಸಿಂಗ್, ಆಜಾದ್ ಮತ್ತು ಬೋಸ್ ಅವರ ಪೋಸ್ಟ್‌ಗಳಿಂದ ತುಂಬಿದೆ. Instagramನಲ್ಲಿ ಇವನ ವಿವರಣೆಯಲ್ಲಿ “ಶಾಹೀದೋ ಕಿ ಶಹದತ್ ಕೊ ಸಲಾಮ್ ಔರ್ ನಮನ್” ಎಂದು ಬರೆಯಲಾಗಿದೆ. ಓಡುವುದನ್ನು ಆನಂದಿಸುತ್ತಾನಂತೆ. ಈ ವರ್ಷ ಆಗಸ್ಟ್ 10ರಂದು ದಿಲ್ಲಿಯ ಕರ್ತವ್ಯ ಪಥ್‌ನಿಂದ “ಶಾಂತ್, ಏಕಾಂತ್, ಅನಂತ್” ಎಂದು ಬರೆದಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾನೆ. ಆಗಸ್ಟ್‌ನಲ್ಲಿ ನಡೆದ ಮಾನ್ಸೂನ್ ಅಧಿವೇಶನದಲ್ಲಿ ಶಿಂಧೆ ಸೇರಿದಂತೆ ಐದು ಜನರಲ್ಲಿ ಮೂವರು ಸಂಸತ್ತಿಗೆ ಬಂದು ನೋಡಿಕೊಂಡು ಹೋಗಿದ್ದಾರೆ ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Security Breach in Lok Sabha: ಲೋಕಸಭೆ ಭದ್ರತೆ ಲೋಪ ಆರೋಪಿಗಳ ಮೇಲೆ ಭಯೋತ್ಪಾದನೆ ತಡೆ ಕಾನೂನು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕೃಷಿ

PM Kisan Samman: ಪಿಎಂ ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಪರಿಶೀಲಿಸುವುದು ಹೇಗೆ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (PM Kisan Samman) ನಿಧಿ ಯೋಜನೆಯ ೧೭ನೇ ಕಂತಿನ ಹಣ ಜೂನ್ 4 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ಅನಂತರ ಬಿಡುಗಡೆಯಾಗುವ ಸಾಧ್ಯತೆಯಿದೆ. ಕಿಸಾನ್ ಸಮ್ಮಾನ್ ಗಾಗಿ ಅರ್ಜಿ ಸಲ್ಲಿಸಿದ್ದರೆ ಸ್ಥಿತಿಗತಿಯನ್ನು ಒಮ್ಮೆ ಪರಿಶೀಲಿಸಿ. ಜನಸಾಮಾನ್ಯರಿಗೆ ಈ ಕುರಿತ ಸರಳ ಮಾಹಿತಿ ಇಲ್ಲಿದೆ.

VISTARANEWS.COM


on

By

PM Kisan Samman
Koo

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman) ಯೋಜನೆಯ 17ನೇ ಕಂತಿಗಾಗಿ (17th installment) ಫಲಾನುಭವಿ ರೈತರು (beneficiary farmers) ಕಾಯುತ್ತಿದ್ದು ಶೀಘ್ರದಲ್ಲೇ ಇದು ಬಿಡುಗಡೆಯಾಗಲಿದೆ. ಜೂನ್ 4ರಂದು (june) ನಡೆಯುವ ಲೋಕಸಭೆ ಚುನಾವಣೆಯ (loksabha election) ಫಲಿತಾಂಶ ಪ್ರಕಟವಾದ ಅನಂತರ ಇದು ಬಿಡುಗಡೆಯಾಗುವ ನಿರೀಕ್ಷೆ ಇದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 16ನೇ ಕಂತನ್ನು 2024ರ ಫೆಬ್ರವರಿ 28ರಂದು ಮಹಾರಾಷ್ಟ್ರದ ಯವತ್ಮಾಲ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 9 ಕೋಟಿಗೂ ಹೆಚ್ಚು ರೈತರಿಗೆ 21,000 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದರು. 15 ನೇ ಕಂತಿನ ಹಣ ಕಳೆದ ನವೆಂಬರ್ ನಲ್ಲಿ ಬಿಡುಗಡೆಯಾಗಿತ್ತು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ. ಗಳನ್ನು ಪಡೆಯುತ್ತಾರೆ, ಇದು ವಾರ್ಷಿಕವಾಗಿ 6,000 ರೂ. ಹಣವನ್ನು ಪ್ರತಿ ವರ್ಷ ಮೂರು ಕಂತುಗಳಲ್ಲಿ ಏಪ್ರಿಲ್- ಜುಲೈ, ಆಗಸ್ಟ್- ನವೆಂಬರ್ ಮತ್ತು ಡಿಸೆಂಬರ್- ಮಾರ್ಚ್ ನಲ್ಲಿ ನೀಡಲಾಗುತ್ತದೆ. ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.

ಈ ಯೋಜನೆಯನ್ನು 2019 ರ ಮಧ್ಯಂತರ ಬಜೆಟ್‌ನಲ್ಲಿ ಆಗಿನ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರು ಘೋಷಿಸಿದರು. ಕಂತುಗಳನ್ನು ಸ್ವೀಕರಿಸಲು ರೈತರು ತಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸಬೇಕು. ಯೋಜನೆಯ ಅಧಿಕೃತ ವೆಬ್‌ಸೈಟ್ ಪ್ರಕಾರ,ಪಿಎಂ ಕಿಸಾನ್ ನೋಂದಾಯಿತ ರೈತರಿಗೆ ಇ-ಕೆವೈಸಿ ಕಡ್ಡಾಯವಾಗಿದೆ. ಒಟಿಪಿ -ಆಧಾರಿತಇ-ಕೆವೈಸಿ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಲಭ್ಯವಿದೆ ಅಥವಾ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಗಾಗಿ ಹತ್ತಿರದ ಸಿಎಸ್ಸಿ ಕೇಂದ್ರಗಳನ್ನು ಸಂಪರ್ಕಿಸಬಹುದು.


ಪರಿಶೀಲನೆ ಹೇಗೆ?

ನೋಂದಾಯಿಸಿರುವ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲು ಅಧಿಕೃತ ವೆಬ್‌ಸೈಟ್‌ pmkisan.gov.in ಗೆ ಭೇಟಿ ನೀಡಿ. ಪುಟದ ಬಲಭಾಗದಲ್ಲಿರುವ ‘ನಿಮ್ಮ ಸ್ಥಿತಿಯನ್ನು ತಿಳಿಯಿರಿ’ ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ. ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ ಮತ್ತು ‘ಡೇಟಾ ಪಡೆಯಿರಿ’ ಎಂಬ ಆಯ್ಕೆಯನ್ನು ಆರಿಸಿ. ಬಳಿಕ ಫಲಾನುಭವಿಯ ಸ್ಥಿತಿಯು ಪರದೆಯ ಮೇಲೆ ಬರುತ್ತದೆ.

ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಪರಿಶೀಲನೆ

ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್ www.pmkisan.gov.in ಗೆ ಭೇಟಿ ನೀಡಿ ‘ಫಲಾನುಭವಿಗಳ ಪಟ್ಟಿ’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಬಳಿಕ ಡ್ರಾಪ್-ಡೌನ್‌ನಿಂದ ಆಯ್ದ ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ವಿವರಗಳನ್ನು ಆಯ್ಕೆ ಮಾಡಿ.ದ ಮೇಲೆ ‘ಗೆಟ್ ರಿಪೋರ್ಟ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದರ ಅನಂತರ, ಫಲಾನುಭವಿಗಳ ಪಟ್ಟಿಯ ವಿವರವನ್ನು ಪ್ರದರ್ಶಿಸಲಾಗುತ್ತದೆ.

ಈ ಮಾಹಿತಿಗಳನ್ನು ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿಯೂ ತಿಳಿದುಕೊಳ್ಳಬಹುದು. ಸಹಾಯವಾಣಿ ಸಂಖ್ಯೆ- 155261 ಮತ್ತು 011-24300606.

ಇದನ್ನೂ ಓದಿ: PSI Exam: ಪಿಎಸ್‌ಐ ಸೇರಿ 4 ಸಾವಿರ ಹುದ್ದೆಗಳ ನೇಮಕಾತಿಗೆ ಪರೀಕ್ಷಾ ದಿನಾಂಕ ಅನೌನ್ಸ್‌; ಯಾವ ದಿನಕ್ಕೆ ಯಾವ ಪರೀಕ್ಷೆ?

ಅರ್ಜಿ ಸಲ್ಲಿಸುವುದು ಹೇಗೆ?

pmkisan.gov.in ವೆಬ್ ಸೈಟ್ ಗೆ ಭೇಟಿ ನೀಡಿ, ‘ಹೊಸ ರೈತ ನೋಂದಣಿ’ ಮೇಲೆ ಕ್ಲಿಕ್ ಮಾಡಿ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಿ. ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ‘ಹೌದು’ ಎಂದು ಕ್ಲಿಕ್ ಮಾಡಿ. ಪಿಎಂ ಕಿಸಾನ್ ಅರ್ಜಿ ನಮೂನೆ 2024 ರಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ. ಅದನ್ನು ಉಳಿಸಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

Continue Reading

ವಾಣಿಜ್ಯ

Nita Ambani: ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ ರೂಪಾಯಿ!

ಜನಪ್ರಿಯ ವಿನ್ಯಾಸಕಾರರಿಂದ ಕಸ್ಟಮೈಸ್ ಮಾಡಿದ ಬಾಟಲಿಯಲ್ಲಿ 49 ಲಕ್ಷ ರೂಪಾಯಿ ಮೌಲ್ಯದ ವಿಶ್ವದ ಅತ್ಯಂತ ದುಬಾರಿ ಚಿನ್ನದ ನೀರನ್ನು ನೀತಾ ಅಂಬಾನಿ (Nita Ambani) ಕುಡಿಯುತ್ತಾರೆ ಎನ್ನಲಾಗುತ್ತದೆ. ಈ ನೀರು ಯಾಕೆ ಇಷ್ಟು ದುಬಾರಿ, ಇದರ ವಿಶೇಷತೆ ಏನು ಗೊತ್ತೇ? ವಿಶ್ವದ ಅತ್ಯಂತ ದುಬಾರಿ ನೀರಿನ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Nita Ambani
Koo

ಅಂಬಾನಿ (Ambani) ಕುಟುಂಬದ ಪ್ರತಿಯೊಬ್ಬರ ಬಗ್ಗೆಯೂ ತಿಳಿದುಕೊಂಡಷ್ಟು ಮತ್ತಷ್ಟು ತಿಳಿಯುವ ಕುತೂಹಲವಂತೂ ಇದ್ದೇ ಇದೆ. ಅದರಲ್ಲೂ ನೀತಾ ಅಂಬಾನಿ (Nita Ambani) ಅವರ ಸ್ಟೈಲಿಶ್ ಲುಕ್ (Stylish look) ಎಲ್ಲರನ್ನೂ ಮೋಡಿ ಮಾಡುತ್ತದೆ. ಅವರ ಚಪ್ಪಲಿಯಿಂದ ಹಿಡಿದು ಹಣೆಯ ಬಿಂದಿಯವರೆಗೆ ಅವರ ಕುರಿತು ಒಂದಲ್ಲ ಒಂದು ವಿಷಯಗಳು ಸದಾ ಚರ್ಚೆಯಲ್ಲಿರುತ್ತದೆ.

ತನ್ನದೇ ಆದ ಶೈಲಿ ಮತ್ತು ಸೊಬಗಿಗೆ ಹೆಸರುವಾಸಿಯಾಗಿರುವ ನೀತಾ ಅಂಬಾನಿ ಈಗ ಮತ್ತೆ ಚರ್ಚೆಯಲ್ಲಿರುವುದು ಅವರ ವಿಶಿಷ್ಟವಾದ ಬಾಟಲಿಯ ನೀರಿನಿಂದ (water bottle). ನೀರಲ್ಲಿ ಅಂತಹ ವಿಶೇಷತೆ ಏನಿದೆ ಎಂಬ ಪ್ರಶ್ನೆ ಕಾಡಬಹುದು. ಆದರೆ ಇದು ಅಂತಿಂತ ನೀರಲ್ಲ ವಿಶ್ವದ ಅತ್ಯಂತ ದುಬಾರಿ ನೀರು (costliest gold water).

ಜನಪ್ರಿಯ ಡಿಸೈನರ್ ಫರ್ನಾಂಡೋ ಅಲ್ಟಾಮಿರಾನೊ ವಿನ್ಯಾಸಗೊಳಿಸಿದ ಕಸ್ಟಮೈಸ್ ಮಾಡಿದ ಬಾಟಲಿಯಲ್ಲಿ ನೀತಾ ಅಂಬಾನಿ ನೀರು ಕುಡಿಯುತ್ತಾರೆ. ಇದು ವಿಶ್ವದ ಅತ್ಯಂತ ದುಬಾರಿ ನೀರು. ಏಕೆಂದರೆ ಈ ಚಿನ್ನದ ಬಾಟಲಿಯ ಬೆಲೆಯೇ 49 ಲಕ್ಷ ರೂಪಾಯಿಯಂತೆ!


ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬ್ಯೂಟೊ ಎ ಮೊಡಿಗ್ಲಿಯಾನಿ ಬ್ರಾಂಡ್ ನ 49 ಲಕ್ಷ ರೂಪಾಯಿಗಳ ಈ ನೀರನ್ನು ನೀತಾ ಅಂಬಾನಿ ಕುಡಿಯುತ್ತಾರೆ ಎಂದು ಹೇಳಲಾಗುತ್ತದೆ. ಇದು ವಿಶ್ವದ ಅತ್ಯಂತ ದುಬಾರಿ ನೀರು ಎನ್ನಲಾಗುತ್ತದೆ. ಚಿನ್ನದಂತಹ ನೀರಿನ ಬಾಟಲಿಯನ್ನು ಹಿಡಿದಿರುವ ಮಾರ್ಫ್ ಮಾಡಿದ ಚಿತ್ರವನ್ನು ಆಧರಿಸಿ ಈ ಸುದ್ದಿಯನ್ನು ಆಂಗ್ಲ ಮಾಧ್ಯಮವೊಂದು ಪ್ರಕಟಿಸಿದೆ. 2015ರ ಐಪಿಎಲ್ ಪಂದ್ಯದ ಸಮಯದಲ್ಲಿ ಮೂಲ ಫೋಟೋದಲ್ಲಿ ನೀತಾ ಅಂಬಾನಿ ಸಾಮಾನ್ಯ ನೀರಿನ ಬಾಟಲಿಯನ್ನು ಹಿಡಿದುಕೊಂಡಿದ್ದಾರೆ. ಅದೇ ಚಿತ್ರವನ್ನು ಚಿನ್ನದ ಬಾಟಲಿಗೆ ರೂಪಾಂತರಿಸಿ ಪ್ರಕಟಿಸಲಾಗಿದೆ. ಈ ಬ್ರಾಂಡ್ ನ ನೀರು ವಿಶ್ವದಲ್ಲೇ ಅತ್ಯಂತ ದುಬಾರಿ ಎನ್ನುವುದು ನಿಜ. ಆದರೆ ನೀತಾ ಅಂಬಾನಿ ಎಷ್ಟು ಪ್ರಮಾಣದಲ್ಲಿ ಅದನ್ನು ಕುಡಿಯುತ್ತಾರೆ ಎನ್ನುವುದು ಖಚಿತವಾಗಿಲ್ಲ.

ನೀರಿನ ವಿಶೇಷ ಏನು?

ತ್ವಚೆಯನ್ನು ಯೌವನವಾಗಿಡಲು ಚಿನ್ನದ ಕಣಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದರಿಂದ ಯುವ ಮತ್ತು ಕ್ರಿಯಾತ್ಮಕವಾಗಿ ಕಾಣಲು ನೀತಾ ಅಂಬಾನಿ ಈ ಚಿನ್ನದ ನೀರನ್ನು ಕುಡಿಯುತ್ತಾರೆ ಎಂದು ಹೇಳಲಾಗುತ್ತದೆ.


ಏಕೆ ದುಬಾರಿ?

ವಿಶ್ವದ ಅತ್ಯಂತ ದುಬಾರಿ ಚಿನ್ನದ ನೀರಿನ ಬಗ್ಗೆ ತಿಳಿದುಕೊಳ್ಳಬೇಕಾಗಿರುವ ಹಲವು ಪ್ರಮುಖ ವಿಷಯಗಳಿವೆ.

ಈ ನೀರಿನ ಬಾಟಲಿಯು 24 ಕ್ಯಾರಟ್ ಚಿನ್ನದಿಂದ ಮುಚ್ಚಲ್ಪಟ್ಟಿದೆ. ಫಿಜಿ ಮತ್ತು ಫ್ರಾನ್ಸ್‌ನ ನೈಸರ್ಗಿಕ ಬುಗ್ಗೆಯಿಂದ ನೀರನ್ನು ಸಂಗ್ರಹಿಸಲಾಗುತ್ತದೆ. ಐಸ್‌ಲ್ಯಾಂಡ್‌ನ ಹಿಮನದಿ ನೀರು 23 ಕ್ಯಾರಟ್ ಚಿನ್ನದ ಧೂಳನ್ನು ಹೊಂದಿರುತ್ತದೆ.

ದುಬಾರಿ ಫೋನ್ ಬಳಕೆ

ಐಷಾರಾಮಿ ಜೀವನಕ್ಕೆ ಹೆಸರುವಾಸಿಯಾಗಿರುವ ನೀತಾ ಅಂಬಾನಿ ಅತ್ಯಂತ ದುಬಾರಿ ಕಸ್ಟಮೈಸ್ ಮಾಡಿದ ಮೊಬೈಲ್ ಫೋನ್ ಗಳನ್ನು ಬಳಸುತ್ತಾರೆ. ಇತ್ತೀಚೆಗೆ, ಅವರು ಮಹತ್ವದ ಕಾರ್ಯಕ್ರಮವೊಂದರಲ್ಲಿ ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಹೊತ್ತೊಯ್ದಿದ್ದಾರೆ.

ಇದನ್ನೂ ಓದಿ: Forbes World Billionaires List: ವಿಶ್ವದ ಶ್ರೀಮಂತ ಮಹಿಳೆಯರು; ಭಾರತದ ಸಾವಿತ್ರಿ ಜಿಂದಾಲ್‌ಗೆ ಎಷ್ಟನೇ ಸ್ಥಾನ?

ನೀತಾ ಅಂಬಾನಿ ಅವರು ಫಾಲ್ಕನ್ ಸೂಪರ್ನೋವಾ ಐಫೋನ್ 6 ಪಿಂಕ್ ಡೈಮಂಡ್ ಅನ್ನು ಬಳಸುತ್ತಾರೆ, ಇದು ವಿಶ್ವದ ಅತ್ಯಂತ ದುಬಾರಿ ಫೋನ್‌ಗಳಲ್ಲಿ ಒಂದಾಗಿದೆ. ಈ ಕಸ್ಟಮ್ ವಿನ್ಯಾಸದ ಫೋನ್ ಹಿಂಭಾಗದಲ್ಲಿ ದೊಡ್ಡ ಗುಲಾಬಿ ವಜ್ರವನ್ನು ಹೊಂದಿದೆ ಮತ್ತು ಪ್ಲಾಟಿನಂನಲ್ಲಿ ಸುತ್ತುವರಿಯಲ್ಪಟ್ಟಿದೆ. ಇದರ ಬೆಲೆ ಸುಮಾರು 300 ಕೋಟಿ ರೂ. ಎನ್ನಲಾಗುತ್ತದೆ.

Continue Reading

ದೇಶ

Monsoon 2024: ಮುಂದಿನ 24 ಗಂಟೆಗಳಲ್ಲೇ ಮುಂಗಾರು ಪ್ರವೇಶ; ಕರ್ನಾಟಕ ಸೇರಿ ಎಲ್ಲೆಲ್ಲಿ ಮಳೆ?

Monsoon 2024: ಜೂನ್‌ 1ರಂದು ಮುಂಗಾರು ಮಳೆಯು ಕೇರಳವನ್ನು ಪ್ರವೇಶಿಸಿ, ಜುಲೈ 15ರ ವೇಳೆಗೆ ದೇಶಾದ್ಯಂತ ವ್ಯಾಪಿಸುತ್ತದೆ. ಆದರೆ, ಈ ಬಾರಿ ಒಂದು ದಿನ ಮೊದಲೇ ಅಂದರೆ, ಮೇ 31ರಂದು ಮುಂಗಾರು ಪ್ರವೇಶಿಸುತ್ತದೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿತ್ತು. ಬುಧವಾರ ಹವಾಮಾನ ಇಲಾಖೆ ನೀಡಿರುವ ಮಾಹಿತಿ ನೋಡಿದರೆ, ಮೇ 30ರಂದೇ ಮುಂಗಾರು ಪ್ರವೇಶಿಸಲಿದೆ.

VISTARANEWS.COM


on

Monsoon 2024
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿ ಉತ್ತರ ಭಾರತದ ಕೆಲ ರಾಜ್ಯಗಳನ್ನು ಹೊರತುಪಡಿಸಿ ದೇಶಾದ್ಯಂತ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ. ಕರ್ನಾಟಕದಲ್ಲೂ (Karnataka) ವರುಣ ಕೃಪೆ ತೋರಿದ ಕಾರಣ (Rain News) ಬಿಸಿಲಿನಿಂದ ಕಂಗೆಟ್ಟಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಜನ-ಜಾನುವಾರುಗಳಿಗೆ ನೀರು ಸಿಗುವಂತಾಗಿದೆ. ಇದರ ಬೆನ್ನಲ್ಲೇ, ಹವಾಮಾನ ಇಲಾಖೆಯು ಮಹತ್ವದ ಮಾಹಿತಿ ಹಂಚಿಕೊಂಡಿದೆ. ಮುಂದಿನ 24 ಗಂಟೆಗಳಲ್ಲಿಯೇ ಮುಂಗಾರು ಮಳೆಯು (Monsoon 2024) ಕೇರಳ ಪ್ರವೇಶಿಸಲಿದ್ದು, ದೇಶದ ಹಲವೆಡೆ ಮಳೆಯಾಗಲಿದೆ ಎಂಬುದಾಗಿ ಮಾಹಿತಿ ನೀಡಿದೆ. 

“ಮುಂದಿನ 24 ಗಂಟೆಗಳಲ್ಲಿ ಮುಂಗಾರು ಪ್ರವೇಶಿಸಲಿದೆ. ಮುಂಗಾರು ಪ್ರವೇಶದಿಂದಾಗಿ ಕೇರಳದಲ್ಲಿ ಮಳೆಯಾಗಲಿದೆ. ನಂತರ ಈಶಾನ್ಯ ಭಾರತದ ಕೆಲ ರಾಜ್ಯಗಳಲ್ಲಿ ಮಳೆಯಾಗಲಿದೆ. ಉಷ್ಣ ಗಾಳಿಯಿಂದ ಕಂಗೆಟ್ಟಿದ್ದ ಜನರಿಗೆ ಮುಂಗಾರು ಪ್ರವೇಶವು ತುಸು ರಿಲೀಫ್‌ ನೀಡಲಿದೆ. ಭಾರತದ ವಾಯವ್ಯ ಹಾಗೂ ಕೇಂದ್ರ ಭಾಗದಲ್ಲಿ ಉತ್ತಮ ಮಳೆಯಾಗುವ ಕಾರಣ ಕೃಷಿ ಚಟುವಟಿಕೆಗಳ ಆರಂಭಕ್ಕೆ ಮುನ್ನುಡಿ ಬರೆಯಲಿದೆ. ಸುಮಾರು 3-4 ಡಿಗ್ರಿ ಸೆಲ್ಸಿಯಸ್‌ ತಾಪಮಾನವು ಇಳಿಕೆಯಾಗಲಿದೆ” ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ಜೂನ್‌ 1ರಂದು ಮುಂಗಾರು ಮಳೆಯು ಕೇರಳವನ್ನು ಪ್ರವೇಶಿಸಿ, ಜುಲೈ 15ರ ವೇಳೆಗೆ ದೇಶಾದ್ಯಂತ ವ್ಯಾಪಿಸುತ್ತದೆ. ಆದರೆ, ಈ ಬಾರಿ ಒಂದು ದಿನ ಮೊದಲೇ ಅಂದರೆ, ಮೇ 31ರಂದು ಮುಂಗಾರು ಪ್ರವೇಶಿಸುತ್ತದೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿತ್ತು. ಬುಧವಾರ ಹವಾಮಾನ ಇಲಾಖೆ ನೀಡಿರುವ ಮಾಹಿತಿ ನೋಡಿದರೆ, ಮೇ 30ರಂದೇ ಮುಂಗಾರು ಪ್ರವೇಶಿಸಲಿದೆ. ಕೇರಳದಲ್ಲಿ ಮಳೆಯಾದರೆ, ದಕ್ಷಿಣ ಕನ್ನಡ, ಕೊಡಗು ಸೇರಿ ಹಲವೆಡೆ ಮಳೆಯಾಗುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಕೇರಳದಲ್ಲಿ ಈಗಾಗಲೇ ಒಂದು ವಾರದಿಂದ ಭಾರಿ ಮಳೆಯಾಗಿದೆ. ಮುಂಗಾರು ಪ್ರವೇಶದಿಂದ ಲಕ್ಷದ್ವೀಪ ಸೇರಿ ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಮುಂಗಾರು ಮಳೆಯು ದೇಶದ ಕೃಷಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ, ಈ ಬಾರಿ ವಾಡಿಕೆಗಿಂತ ಒಂದು ದಿನ ಮೊದಲೇ ಅಂದರೆ, ಮೇ 30 ದೇಶವನ್ನು ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುವುದು ರೈತರ ಪಾಲಿಗೆ ಸಿಹಿ ಸುದ್ದಿಯೇ ಆಗಿದೆ. ಮೇ 27ರಿಂದ ಜೂನ್‌ 4ರ ಅವಧಿಯಲ್ಲಿ ಯಾವಾಗ ಬೇಕಾದರೂ ನೈಋತ್ಯ ಮುಂಗಾರು ಪ್ರವೇಶಿಸಬಹುದು ಎಂದು ಹವಾಮಾನ ಇಲಾಖೆ ಇದಕ್ಕೂ ಮೊದಲು ತಿಳಿಸಿತ್ತು. ಪ್ರತಿ ವರ್ಷ ಜೂನ್‌ 1ರಂದು ಮುಂಗಾರು ಮಳೆಯು ಕೇರಳವನ್ನು ಪ್ರವೇಶಿಸಿ, ದೇಶಾದ್ಯಂತ ವ್ಯಾಪಿಸುವುದು ವಾಡಿಕೆಯಾಗಿದೆ. ಆದರೆ, ಹವಾಮಾನ ಇಲಾಖೆಯು ಈ ಬಾರಿ 2 ದಿನ ಮೊದಲೇ ಪ್ರವೇಶಿಸಲಿದೆ ಎಂದು ತಿಳಿಸಿದೆ. ಸೆಪ್ಟೆಂಬರ್‌ನಲ್ಲಿ ಮುಂಗಾರು ಮಳೆ ಅಂತ್ಯವಾಗಲಿದೆ.

ಇದನ್ನೂ ಓದಿ: Delhi Temperature: ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ದೇಶದಲ್ಲೇ ಇದುವರೆಗಿನ ಗರಿಷ್ಠ ಟೆಂಪರೇಚರ್!

Continue Reading

ಕರ್ನಾಟಕ

LinkedIn: ಉದ್ಯೋಗ ಹುಡುಕಾಟದಲ್ಲಿರುವ ಪದವೀಧರರಿಗೆ ಲಿಂಕ್ಡ್‌ಇನ್‌ ಸಲಹೆಗಳು ಪ್ರಕಟ; ಏನೇನಿವೆ ತಪ್ಪದೇ ಓದಿ

LinkedIn: ವಿಶ್ವದ ಅತಿದೊಡ್ಡ ಪ್ರೊಫೆಷನಲ್ ನೆಟ್‌ವರ್ಕ್ ಆಗಿರುವ ಲಿಂಕ್ಡ್‌ಇನ್ ಇಂದು ಉದ್ಯೋಗ ಹುಡುಕಾಟದಲ್ಲಿರುವ ಇತ್ತೀಚಿನ ಪದವೀಧರರಿಗಾಗಿ ಭಾರತದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಹುದ್ದೆಗಳು, ಕೈಗಾರಿಕೆಗಳು, ಕೆಲಸಗಳು ಮತ್ತು ಕೌಶಲ್ಯಗಳ ಕುರಿತು ಹೊಸ ಮಾಹಿತಿಯನ್ನು ಬಹಿರಂಗಪಡಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಆರಂಭಿಕ ಹಂತದ ಹುದ್ದೆಗಳಿಗೆ ಡಿಸೈನ್ (ವಿನ್ಯಾಸ), ಅನಾಲಿಟಿಕ್ಸ್ (ವಿಶ್ಲೇಷಣೆ) ಮತ್ತು ಪ್ರೋಗ್ರಾಮಿಂಗ್‌ಗಳು ಅತ್ಯುನ್ನತ ಕೌಶಲ್ಯಗಳು ಎಂದು ಲಿಂಕ್ಡ್‌ಇನ್ ತಿಳಿಸಿದೆ.

VISTARANEWS.COM


on

LinkedIns Tips for Graduates in the Job Search
ಸಾಂದರ್ಭಿಕ ಚಿತ್ರ.
Koo

ಬೆಂಗಳೂರು: ವಿಶ್ವದ ಅತಿದೊಡ್ಡ ಪ್ರೊಫೆಷನಲ್ ನೆಟ್‌ವರ್ಕ್ ಆಗಿರುವ ಲಿಂಕ್ಡ್‌ಇನ್ (LinkedIn) ಇಂದು ಉದ್ಯೋಗ ಹುಡುಕಾಟದಲ್ಲಿರುವ ಇತ್ತೀಚಿನ ಪದವೀಧರರಿಗಾಗಿ ಭಾರತದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಹುದ್ದೆಗಳು, ಕೈಗಾರಿಕೆಗಳು, ಕೆಲಸಗಳು ಮತ್ತು ಕೌಶಲ್ಯಗಳ ಕುರಿತು ಹೊಸ ಮಾಹಿತಿಯನ್ನು ಬಹಿರಂಗಪಡಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಆರಂಭಿಕ ಹಂತದ ಹುದ್ದೆಗಳಿಗೆ ಡಿಸೈನ್ (ವಿನ್ಯಾಸ), ಅನಾಲಿಟಿಕ್ಸ್ (ವಿಶ್ಲೇಷಣೆ) ಮತ್ತು ಪ್ರೋಗ್ರಾಮಿಂಗ್‌ಗಳು ಅತ್ಯುನ್ನತ ಕೌಶಲ್ಯಗಳು ಎಂದು ಲಿಂಕ್ಡ್‌ಇನ್ ತಿಳಿಸಿದೆ.

2024ರಲ್ಲಿ ಕಂಪನಿಗಳು ಹೊಂದಿಕೊಳ್ಳುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದನ್ನು ಮುಂದುವರೆಸುತ್ತಿವೆ. ಹೆಚ್ಚು ಹೊಂದಿಕೊಳ್ಳುವ ಕೆಲಸದ ವ್ಯವಸ್ಥೆಗಳ ಕಡೆಗೆ ಗಮನ ಕೊಡುವ ಟ್ರೆಂಡ್ ಈಗ ನಡೆಯುತ್ತಿದೆ. ಆನ್-ಸೈಟ್ ಹುದ್ದೆಗಳು 15% ರಷ್ಟು ಕಡಿಮೆಯಾಗುತ್ತಿವೆ ಮತ್ತು ವರ್ಷದಿಂದ ವರ್ಷಕ್ಕೆ ಆರಂಭಿಕ ಹಂತದ ಹುದ್ದೆಗಳಿಗೆ 52% ರಷ್ಟು ಹೈಬ್ರಿಡ್ ಸ್ಥಾನಗಳು ಹೆಚ್ಚಾಗುತ್ತಿವೆ. ಈ ಬದಲಾವಣೆಯು ಹೊಸ ಪದವೀಧರರಿಗೆ ಆಯ್ಕೆ ಮಾಡಲು ಮತ್ತು ವೃತ್ತಿ ಜೀವನ ಮುಂದುವರಿಸಲು ವಿಸ್ತಾರವಾದ ಕೆಲಸದ ಅವಕಾಶಗಳನ್ನು ಒದಗಿಸುತ್ತದೆ.

ಇದನ್ನೂ ಓದಿ: Money Guide: ಮೇ 31ರೊಳಗೆ ಪ್ಯಾನ್‌-ಆಧಾರ್‌ ಲಿಂಕ್‌ ಆಗದಿದ್ದರೆ ಟಿಡಿಎಸ್ ದುಪ್ಪಟ್ಟು ಕಡಿತ; ಹೀಗೆ ಲಿಂಕ್‌ ಮಾಡಿ

ಲಿಂಕ್ಡ್‌ಇನ್‌ನ ಕರಿಯರ್ ಸ್ಟಾರ್ಟರ್ 2024 ವರದಿಯ ಪ್ರಕಾರ, ಯುಟಿಲಿಟೀಸ್ ಕ್ಷೇತ್ರ ಬಹಳ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದ್ದು, ಬ್ಯಾಚುಲರ್ ಡಿಗ್ರಿ ಅಥವಾ ಪದವಿ ಹೊಂದಿರುವ ಯುವ ವೃತ್ತಿಪರರು ಆಯ್ಕೆಗೆ ಪರಿಗಣಿಸಬಹುದಾಗಿದೆ. ತೈಲ, ಅನಿಲ ಮತ್ತು ಗಣಿಗಾರಿಕೆ, ರಿಯಲ್ ಎಸ್ಟೇಟ್, ಸಲಕರಣೆ ಬಾಡಿಗೆ ಸೇವೆಗಳು ಮತ್ತು ಗ್ರಾಹಕ ಸೇವಾ ಕ್ಷೇತ್ರಗಳು ಹೊಸ ಪದವೀಧರರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಇನ್ನಿತರ ಉನ್ನತ ಉದ್ಯಮಗಳಾಗಿವೆ. ಜತೆಗೆ ಬ್ಯಾಚುಲರ್ ಡಿಗ್ರಿ ಅಥವಾ ಪದವಿ ಹೊಂದಿಲ್ಲದವರು ಶಿಕ್ಷಣ, ಮಾಹಿತಿ ಹಾಗೂ ತಂತ್ರಜ್ಞಾನ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಪಡೆಯಬಹುದಾಗಿದೆ ಎಂದು ತಿಳಿಸಿದೆ.

ವಿಭಿನ್ನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವವರಿಗೆ ಉನ್ನತ ಉದ್ಯೋಗ

ಲಿಂಕ್ಡ್‌ಇನ್‌ನ ಮಾಹಿತಿಯು ವಿಭಿನ್ನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ವೃತ್ತಿಪರರಿಗೆ ವಿವಿಧ ಶ್ರೇಣಿಯ ಉನ್ನತ ಉದ್ಯೋಗಗಳ ವಿವರಗಳನ್ನು ತಿಳಿಸುತ್ತದೆ. ಪದವೀಧರರು ಸಾಫ್ಟ್‌ವೇರ್ ಎಂಜಿನಿಯರ್, ಸಿಸ್ಟಮ್ ಎಂಜಿನಿಯರ್ ಮತ್ತು ಪ್ರೋಗ್ರಾಮಿಂಗ್ ಅನಾಲಿಸ್ಟ್ ನಂತಹ ಹುದ್ದೆಗಳಿಗೆ ಹುಡುಕಾಟ ನಡೆಸಬಹುದು. ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಡೇಟಾ ಅನಾಲಿಸ್ಟ್ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯ ಪದವೀಧರರನ್ನು ನೇಮಿಸಿಕೊಳ್ಳಲಾಗುತ್ತಿದೆ. ಪದವಿ ಇಲ್ಲದವರು ಕೂಡ ಸಾಫ್ಟ್‌ವೇರ್ ಎಂಜಿನಿಯರ್, ಸೆಕ್ರೆಟರಿ ಮತ್ತು ಡಿಸೈನ್ ಎಂಜಿನಿಯರ್‌ನಂತಹ ಹುದ್ದೆಗಳಲ್ಲಿ ಕೆಲಸ ಮಾಡಬಹುದು.

ಶೈಕ್ಷಣಿಕ ಹಿನ್ನೆಲೆ ಹೊರತಾಗಿಯೂ ಅನೇಕ ಕೆಲಸಗಳು

ಶೈಕ್ಷಣಿಕ ಹಿನ್ನೆಲೆ ಹೊರತಾಗಿಯೂ ಅನೇಕ ಕೆಲಸಗಳು ವೇಗದ ಬೆಳವಣಿಗೆ ಹೊಂದುವ ಅವಕಾಶ ನೀಡುತ್ತವೆ. ಸಮುದಾಯ ಮತ್ತು ಸಾಮಾಜಿಕ ಸೇವೆಗಳು, ಕಾನೂನು, ಮಾರ್ಕೆಟಿಂಗ್, ಮಾಧ್ಯಮ ಮತ್ತು ಸಂವಹನದಂತಹ ಕ್ಷೇತ್ರಗಳಲ್ಲಿ ಪದವೀಧರರಿಗೆ ಸಾಕಷ್ಟು ಅವಕಾಶಗಳು ಲಭ್ಯವಿದೆ. ಪದವಿ ಇಲ್ಲದವರು ಶಿಕ್ಷಣ, ಮಾನವ ಸಂಪನ್ಮೂಲ, ಮಾರ್ಕೆಟಿಂಗ್ ಹಾಗೂ ಮಾಧ್ಯಮ ಮತ್ತು ಸಂವಹನದಾದ್ಯಂತ ಸಾಕಷ್ಟು ಉದ್ಯೋಗಾವಕಾಶಗಳನ್ನು ಪಡೆಯುತ್ತಾರೆ.

ಇದನ್ನೂ ಓದಿ: TOP 5 Movies: ಒಟಿಟಿಯಲ್ಲಿ ನೋಡಲೇಬೇಕಾದ ಟಾಪ್‌ 5 ಬಿಗ್‌ ಬಜೆಟ್‌ ಸಿನಿಮಾಗಳು!

ಈ ಕುರಿತು ಲಿಂಕ್ಡ್‌ಇನ್ ಕರಿಯರ್ ಎಕ್ಸ್‌ಪರ್ಟ್ ಆಂಡ್ ಇಂಡಿಯಾ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ನಿರಾಜಿತಾ ಬ್ಯಾನರ್ಜಿ ಮಾತನಾಡಿ, “ಉದ್ಯೋಗ ಮಾರುಕಟ್ಟೆ ಸ್ವಲ್ಪ ಬಿಗುವಾಗಿದ್ದಾಗ ಆರಂಭಿಕ ಹಂತದಲ್ಲಿ ಉದ್ಯೋಗ ದೊರೆಯುವುದು ಕಷ್ಟವಾಗುತ್ತದೆ. ಉದ್ಯಮದ ಟ್ರೆಂಡ್‌ಗಳು ಮತ್ತು ಬೇಡಿಕೆಯ ಉದ್ಯೋಗಗಳ ಕುರಿತು ಅಪ್‌ಡೇಟ್ ಆಗಿರುವುದರಿಂದ ಮತ್ತು ಆರಂಭದಲ್ಲಿಯೇ ಸಿಗುವ ಹುದ್ದೆಗಳಲ್ಲಿ ಮುನ್ನಡೆಯುವುದರಿಂದ ಮುಂದೆ ಆಯ್ಕೆಗಳು ದೊಡ್ಡದಾಗುತ್ತಾ ಹೋಗುತ್ತದೆ. ಇಂದು ಅನೇಕ ಕೌಶಲ್ಯಗಳನ್ನು ಬೇರೆ ಬೇರೆ ಕೈಗಾರಿಕೆಗಳಲ್ಲಿ ಬಳಸಬಹುದಾಗಿದೆ, ಮತ್ತು ಎಐ ಬಳಕೆ ಹೆಚ್ಚುತ್ತಿರುವುದರಿಂದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಟೆಕ್-ಸಂಬಂಧಿತ ಹುದ್ದೆಗಳು ಸೃಷ್ಟಿಯಾಗುತ್ತಿವೆ.

ಈ ನೇಮಕಾತಿ ಟ್ರೆಂಡ್‌ಗಳು ಇಂಧನ ವಲಯದಲ್ಲಿರುವಂತಹ ವಿಶಾಲವಾದ ಆರ್ಥಿಕ ಮಾದರಿಗಳನ್ನು ಪ್ರತಿಬಿಂಬಿಸುತ್ತವೆ. ವೈವಿಧ್ಯಮಯ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ವೃತ್ತಿಪರರನ್ನು ಕಂಪನಿಗಳು ಹುಡುಕಲು ತೊಡಗಿವೆ. ತಮ್ಮ ದಿಗಂತವನ್ನು ವಿಸ್ತರಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳು ತಮ್ಮ ಕೌಶಲ್ಯಗಳನ್ನುಮತ್ತು ವೃತ್ತಿಪರರ ಜತೆಗಿನ ನೆಟ್‌ವರ್ಕಿಂಗ್ ಅನ್ನು ಬಲಪಡಿಸಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.

ಉದ್ಯೋಗ ಹುಡುಕಾಟವನ್ನು ಪ್ರಾರಂಭಿಸುವವರಿಗೆ ಲಿಂಕ್ಡ್‌ಇನ್‌ನ ಸಲಹೆಗಳು

ನೇಮಕಾತಿದಾರರ ಗಮನ ಸೆಳೆಯಲು, ಹೆಚ್ಚಿಸಲು ನಿಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ನಿಮ್ಮ ಕೌಶಲ್ಯಗಳನ್ನು ಗಮನ ಸೆಳೆಯುವಂತೆ ನಮೂದಿಸಿ. ಲಿಂಕ್ಡ್‌ಇನ್ ನೀವು ತಿಳಿಸಿದ ಕೌಶಲ್ಯಗಳ ಆಧಾರದ ಮೇಲೆ ನಿಮಗೆ ಈ ಮೊದಲು ತಿಳಿದಿರದ, ಆದರೆ ನಿಮಗೆ ಹೊಂದುವ ಉದ್ಯೋಗಾವಕಾಶಗಳನ್ನು ತಿಳಿಸುತ್ತದೆ.

ಲಿಂಕ್ಡ್‌ಇನ್‌ನ ಓಪನ್ ಟು ವರ್ಕ್ ಫೀಚರ್ ಮೂಲಕ ನೀವು ಹೊಸ ಉದ್ಯೋಗದಲ್ಲಿ ಆಸಕ್ತಿಯನ್ನು ಹೊಂದಿದ್ದೀರಿ ಎಂಬುದನ್ನು ತಿಳಿಸಿ. ಜತಗೆ ಈ ಕಾಲದ ಟ್ರೆಂಡ್ ಅಥವಾ ವಿಚಾರಗಳಿಗೆ ತಕ್ಕಂತೆ ನಿಮ್ಮ ಸ್ವಂತ ವಿಚಾರಗಳನ್ನು ಪೋಸ್ಟ್ ಮಾಡುವ ಮೂಲಕ ಮತ್ತು ಸಂಭಾವ್ಯ ಉದ್ಯೋಗದಾತರಿಗೆ ಸಂಬಂಧಿಸಿದ ವಿಷಯಗಳ ಕುರಿತು ಅರ್ಥಪೂರ್ಣವಾಗಿ ಸಂವಹನ ನಡೆಸುವ ಮೂಲಕ ಗಮನ ಸೆಳೆಯಬಹುದಾಗಿದೆ. ನಿಮ್ಮ ಭವಿಷ್ಯದ ಉದ್ಯೋಗದಾತರು ನಿಮ್ಮಿಂದ ಕೇವಲ ಒಂದು ಕಾಮೆಂಟ್ ದೂರದಲ್ಲಿರಬಹುದು ಎಂಬುದು ನೆನಪಲ್ಲಿರಲಿ.

ಇದನ್ನೂ ಓದಿ: Gold Rate Today: ಇಂದು ಚಿನ್ನದ ಬೆಲೆಯಲ್ಲಿ ತುಸು ಏರಿಕೆ; ಖರೀದಿಗೆ ಮುನ್ನ ದರ ಗಮನಿಸಿ

ಔಟ್ ಆಫ್ ದಿ ಬಾಕ್ಸ್ ಯೋಚಿಸಿ. ಅಂದರೆ ವಿಭಿನ್ನವಾಗಿ ಯೋಚಿಸಿ. ಎಲ್ಲಾ ಕಡೆ ಎಐ ಆವರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಪ್ರೋಗ್ರಾಮಿಂಗ್ ಕೌಶಲ್ಯಗಳನ್ನು ಹೊಂದಿರುವವರನ್ನು ತಂತ್ರಜ್ಞಾನ ಕ್ಷೇತ್ರಕ್ಕೆ ಹೊರತಾದ ಬೇರೆ ಅಭಿವೃದ್ಧಿ ಹೊಂದುತ್ತಿರುವ ಕೈಗಾರಿಕೆಗಳು ನೇಮಕಮಾಡಿಕೊಳ್ಳುತ್ತಿವೆ. ನಿಮ್ಮ ಮುಂದಿನ ಕೆಲಸ ಅಥವಾ ಹುದ್ದೆಗಾಗಿ ನೀವು ಹುಡುಕಾಟ ನಡೆಸುತ್ತಿರುವಾಗ ಈ ರೀತಿಯ ವೃತ್ತಿ ಪರಿವರ್ತನೆಯ (ಕರಿಯರ್ ಟ್ರಾನ್ಸಿಷನ್) ಟ್ರೆಂಡ್‌ಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಏಕೆಂದರೆ ಅದರಿಂದ ನಿಮ್ಮ ಮುಂದೆ ಅವಕಾಶಗಳ ಸಂಖ್ಯೆ ಹೆಚ್ಚುತ್ತದೆ. ನಿಮ್ಮ ಕೌಶಲ್ಯಗಳಿಗೆ ಸಂಬಂಧಿಸಿದ ಲಿಂಕ್ಡ್‌ಇನ್ ಗುಂಪುಗಳಲ್ಲಿ ತೊಡಗಿಸಿಕೊಳ್ಳಿ. ಇದು ನೆಟ್‌ವರ್ಕ್‌ ಸಾಧಿಸಲು ಉತ್ತಮ ಮಾರ್ಗವಾಗಿದೆ ಮತ್ತು ಲಭ್ಯವಿರುವ ವಿಶಾಲವಾದ ಅವಕಾಶಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅನುವು ಮಾಡಿ ಕೊಡಲಿದೆ.

ಇದನ್ನೂ ಓದಿ: World Digestive Health Day: ಜೀರ್ಣಕ್ರಿಯೆಯಲ್ಲಿ ತೊಡಕು ಅನಾರೋಗ್ಯಕ್ಕೆ ದಾರಿ; ಈ ಸಲಹೆ ಪಾಲಿಸಿ

ಪದವೀಧರರು ತಮ್ಮ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡಲು, ಲಿಂಕ್ಡ್‌ಇನ್ 30 ಜೂನ್ 2024ರವರೆಗೆ ಉಚಿತ ಲಿಂಕ್ಡ್‌ಇನ್ ಕಲಿಕಾ ಕೋರ್ಸ್‌ಗಳನ್ನು ಬಿಡುಗಡೆ ಮಾಡಿದೆ, ಆ ಕೋರ್ಸುಗಳು ಹೀಗಿವೆ.

● ಕಾಲೇಜು ಪದವೀಧರರಿಗೆ ಉದ್ಯೋಗ ಹುಡುಕಾಟ.
● ಇಂಟರ್ನ್‌ಶಿಪ್ ಅನ್ನು ಉದ್ಯೋಗವನ್ನಾಗಿ ಪರಿವರ್ತಿಸಿಕೊಳ್ಳುವುದು.
● ವೃತ್ತಿ ಆರಂಭಿಸುವವರಿಗೆ ಪ್ರೊಫೆಷನಲ್ ನೆಟ್‌ವರ್ಕಿಂಗ್.
● 30-ನಿಮಿಷದ ರೆಸ್ಯೂಮ್ ರಿಫ್ರೆಶ್.
● ಸಾಮಾನ್ಯ ಸಂದರ್ಶನ ಪ್ರಶ್ನೆಗಳಿಗೆ ಸಿದ್ಧರಾಗಿರುವುದು.
● ನಿಮ್ಮ ಕಾಂಪನ್ಸೇಷನ್ ಪ್ಯಾಕೇಜ್ ಮಾತುಕತೆ ನಡೆಸುವುದು.

Continue Reading
Advertisement
PM Kisan Samman
ಕೃಷಿ16 mins ago

PM Kisan Samman: ಪಿಎಂ ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಪರಿಶೀಲಿಸುವುದು ಹೇಗೆ?

Nita Ambani
ವಾಣಿಜ್ಯ22 mins ago

Nita Ambani: ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ ರೂಪಾಯಿ!

Team India Coach
ಕ್ರೀಡೆ29 mins ago

Team India Coach: ಅಭಿಮಾನಿಗಳು ಬಯಸಿದರೂ ಕೋಚ್​ ಹುದ್ದೆಗೆ ಧೋನಿ ಅನರ್ಹ; ಕಾರಣವೇನು?

Sudha Murty
ಕರ್ನಾಟಕ33 mins ago

Sudha Murty: ಡಾ.ಮಂಜುನಾಥ್‌ ಗೆಲುವಿಗಾಗಿ ರಾಯರಿಗೆ ವಿಶೇಷ ಹರಕೆ ಹೊತ್ತ ಸುಧಾಮೂರ್ತಿ; ಏನದು?

Headless Chicken
ವಿಜ್ಞಾನ45 mins ago

Headless Chicken: ತಲೆ ಕತ್ತರಿಸಿದರೂ ಈ ಕೋಳಿ 18 ತಿಂಗಳು ಬದುಕಿತ್ತು! ಸಾಯುವ ಮೊದಲು ಮಾಲೀಕನನ್ನು ಶ್ರೀಮಂತಗೊಳಿಸಿತು!

Monsoon 2024
ದೇಶ1 hour ago

Monsoon 2024: ಮುಂದಿನ 24 ಗಂಟೆಗಳಲ್ಲೇ ಮುಂಗಾರು ಪ್ರವೇಶ; ಕರ್ನಾಟಕ ಸೇರಿ ಎಲ್ಲೆಲ್ಲಿ ಮಳೆ?

Belagavi Tour
ಪ್ರವಾಸ2 hours ago

Belagavi Tour: ಬೆಳಗಾವಿಗೆ ಭೇಟಿ ನೀಡಿದಾಗ ಈ ಸ್ಥಳಗಳನ್ನು ನೋಡಲು ಮರೆಯಬೇಡಿ

AUS vs NAM
ಕ್ರೀಡೆ2 hours ago

AUS vs NAM: ನಮೀಬಿಯಾ ವಿರುದ್ಧ ಅಭ್ಯಾಸ ಪಂದ್ಯವಾಡಿದ ಆಸೀಸ್​ ತಂಡದ ಕೋಚಿಂಗ್​ ಸಿಬ್ಬಂದಿ

Dream Of Retired Couple
ಪ್ರವಾಸ2 hours ago

Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

KSET Results 2024
ಕರ್ನಾಟಕ2 hours ago

KSET Results 2024:‌ ಕೆ-ಸೆಟ್‌ ಪರೀಕ್ಷೆ ಫಲಿತಾಂಶ; ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ7 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌