video viral: ಕುದುರೆ ಏರಿ ಫುಡ್​ ಡೆಲಿವರಿ ಮಾಡಿದ Swiggy Boyಗೆ ಆನ್​ಲೈನ್​ನಲ್ಲಿ ವ್ಯಾಪಕ ಪ್ರಶಂಸೆ - Vistara News

ದೇಶ

video viral: ಕುದುರೆ ಏರಿ ಫುಡ್​ ಡೆಲಿವರಿ ಮಾಡಿದ Swiggy Boyಗೆ ಆನ್​ಲೈನ್​ನಲ್ಲಿ ವ್ಯಾಪಕ ಪ್ರಶಂಸೆ

video viral:ಮುಂಬಯಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನ ಮನೆಯಿಂದ ಹೊರಗೆ ಬರಲು ಕಷ್ಟಪಡುತ್ತಿದ್ದಾರೆ. ಈ ಹೊತ್ತಿನಲ್ಲಿ ಸ್ವಿಗ್ಗಿ ಫುಡ್‌ ಡೆಲಿವರಿ ಬಾಯ್‌ ಒಬ್ಬ ಕುದುರೆಯಲ್ಲಿ ಹೋಗಿ ಆಹಾರ ಕೊಟ್ಟು ಬಂದು ಸುದ್ದಿಯಾಗಿದ್ದಾನೆ.

VISTARANEWS.COM


on

swiggy boy horse raiding
ಮಳೆಯಲ್ಲೂ ಕುದುರೆ ಏರಿ ಫುಡ್ ಡೆಲವರಿ ಮಾಡುತ್ತಿರುವ ಸಿಗ್ಗಿ ಬಾಯ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ಆಹಾರ ಪದಾರ್ಥಗಳನ್ನು ಡೆಲಿವರಿ ಮಾಡುವುದು ಭಾರಿ ಸವಾಲಿನ ಕೆಲಸ. ಸಮಯಕ್ಕೆ ಸರಿಯಾಗಿ ಮನೆಗಳಿಗೆ ತಲುಪಿಸಬೇಕು, ಒಂದು ನಿಮಿಷವೂ ತಡವಾಗುವಂತಿಲ್ಲ. ಹೊತ್ತು ಗೊತ್ತು ಇಲ್ಲ. ಹೇಳಿದ ಸಮಯಕ್ಕೆ ಹೋಗಬೇಕು, ಮಧ್ಯರಾತ್ರಿಯಾದರೂ ಸರಿ ಫುಡ್‌ ಡೆಲಿವರಿ ಮಾಡಬೇಕು. ಅದಕ್ಕಾಗಿ ಟ್ರಾಫಿಕ್‌ ಸಮಸ್ಯೆಯನ್ನು ನಿಭಾಯಿಸಿಕೊಳ್ಳಬೇಕು, ರಸ್ತೆ ಗುಂಡಿಗಳ ಮೇಲೆ ಕಣ್ಣಿಡಬೇಕು, ರೋಡ್‌ ಬ್ಲಾಕ್‌ ಆಗಿದ್ದರೆ ನೋಡಿಕೊಳ್ಳಬೇಕು. ಇಷ್ಟೆಲ್ಲ ಮಾಡಿ, ಮೈಯೆಲ್ಲಾ ಕಣ್ಣಾಗಿಸಿಕೊಂಡು ತುರ್ತಾಗಿ ಡೆಲಿವರಿ ಮಾಡಬೇಕು!

ಇಂಥ ಹತ್ತು ಹಲವು ಸಮಸ್ಯೆಗಳ ನಡುವೆಯೇ ಮಧ್ಯೆ ಮಳೆ ಕಾಟ ಕೊಡುತ್ತದೆ, ರಸ್ತೆಯಲ್ಲಿ ಬೈಕ್‌ ಓಡಿಸುವುದೇ ಕಷ್ಟವಾಗುತ್ತದೆ. ಮೊನ್ನೆ ಮುಂಬಯಿಯಲ್ಲೂ ಹೀಗೇ ಆಗಿತ್ತು. ಎರಡು ಮೂರು ದಿನಗಳಿಂದ ನಿರಂತರ ಮಳೆ ಬೀಳುತ್ತಿರುವುದರಿಂದ ನಗರದ ರಸ್ತೆಗಳು ಜಲಾವೃತವಾಗಿವೆ. ಜನರು ರಸ್ತೆಗಿಳಿಯಲು ಹೆದರುತ್ತಿದ್ದಾರೆ. ಈ ಹೊತ್ತಿನಲ್ಲೇ ಆನ್‌ಲೈನ್‌ ಫುಡ್‌ ಡೆಲಿವರಿಗೆ ಬೇಡಿಕೆ ಹೆಚ್ಚಾಗುವುದು!

ಮೊನ್ನೆ ಮಳೆಯ ನಡುವೆಯೇ ಬಂದ ಆರ್ಡರನ್ನು ತಲುಪಿಸಲು ಸ್ವಿಗ್ಗಿ ಬಾಯ್‌ (Swiggy boy) ಒಬ್ಬ ಬೇರೆಯೇ ಆದ ವಿಧಾನ ಬಳಸಿ ಗಮನ ಸೆಳೆದಿದ್ದಾನೆ. ಸಾಮಾನ್ಯವಾಗಿ ಫುಡ್ ಡೆಲಿವರಿ ಬಾಯ್ಸ್‌​ ಬೈಕ್ ಅಥವಾ ಸೈಕಲ್ ಅದೂ ಇಲ್ಲಾಂದ್ರೆ ನಡೆದುಕೊಂಡು ಬಂದು ಗ್ರಾಹಕರಿಗೆ ಫುಡ್ ಕೊಟ್ಟು ಬರುತ್ತಾರೆ. ಆದರೆ, ಇಲ್ಲೊಬ್ಬ ​ ಇದೆಲ್ಲವನ್ನೂ ಬಿಟ್ಟು ಕುದುರೆ ಏರಿ ಆಹಾರ ತಲುಪಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾನೆ.

ಇದನ್ನು ಓದಿ| ಸಲಿಂಗಿ ಪುರುಷರ ಅದ್ಧೂರಿ ಮದುವೆ; ಸಂಭ್ರಮದ ಕ್ಷಣದ ಫೋಟೊ, ವಿಡಿಯೊ ವೈರಲ್‌

ಹೀಗಾಗಿ ಮುಂಬೈನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಗರಗಳು ಜಲಾವೃತವಾಗಿರುವುದರಿಂದ ಬೈಕ್​ನಲ್ಲಿ ಹೋದರೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಲ್ಲ ಅಂತ ಇಲ್ಲೊಬ್ಬ ಸ್ವಿಗ್ಗಿ ಬಾಯ್ ಕುದುರೆ ಏರಿ ಮಳೆಯಲ್ಲೂ ಫುಡ್​ ಡೆಲಿವರಿ ಮಾಡುತ್ತಿದ್ದಾನೆ. ಸದ್ಯ ಈತ ನಗರದಲ್ಲಿ ಕುದುರೆ ಏರಿ ಸಂಚರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈತನ ಕಾರ್ಯಕ್ಷಮತೆಗೆ ಮನ ಸೋತಿದ್ದಾರೆ.

ಕುದುರೆ ಏರಿ ಶ್ರೀನಗರದಲ್ಲಿ ಫುಡ್​ ಡೆಲವರಿ ಮಾಡುತ್ತಿರುವ ಸ್ವಿಗ್ಗಿ ಬಾಯ್

ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರಿ ಹಿಮಪಾತವಾಗುತ್ತಿದ್ದಾಗ ಆಗಲೂ ಕೂಡ ಇದೇ ರೀತಿ ಸ್ವಿಗ್ಗಿ ಕಂಪನಿಯ ಫುಡ್ ಡೆಲಿವರಿ ಬಾಯ್ ಕುದುರೆ ಏರಿ ಮನೆ ಮನೆಗಳಿಗೆ ತೆರಳಿ ಆಹಾರ ತಲುಪಿಸಿದ್ದರು. ಆ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು.

ಇದನ್ನು ಓದಿ| ಮೊಸಳೆ ಬಾಯಿಯಿಂದ ಸ್ನೇಹಿತನನ್ನು ಹೊರಗೆ ತೆಗೆದ ಗೆಳೆಯರು; ವಿಡಿಯೋ ವೈರಲ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Gold Smuggling: ಜ್ಯಾಕೆಟ್‌, ಲೆಗ್ಗಿನ್ಸ್‌ನಲ್ಲಿ, ಬೆಲ್ಟ್‌ನಲ್ಲಿ 25 ಕೆ.ಜಿ ಚಿನ್ನ; ಆಫ್ಘಾನ್‌ ರಾಜತಾಂತ್ರಿಕ ಅಧಿಕಾರಿ ಕಸ್ಟಮ್ಸ್‌ ಬಲೆಗೆ

Gold Smuggling:ಅಫ್ಘಾನಿಸ್ತಾನದ ಇಸ್ಲಾಮಿಕ್‌ ರಿಪಬ್ಲಿಕ್‌ನ ರಾಜತಾಂತ್ರಿಕ ಅಧಿಕಾರಿ ಜಾಕಿಯಾ ವಾರ್ದಕ್‌ ಅವರು ಬರೋಬ್ಬರಿ 18.6 ಕೋಟಿ ರೂ. ಮೌಲ್ಯದ 25 ಕೆ.ಜಿ. ಚಿನ್ನವನ್ನು ಕಳ್ಳ ಸಾಗಾಟ ಮಾಡುತ್ತಿದ್ದ ವೇಳೆ ಏರ್‌ಪೋರ್ಟ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಏ.25ರಂದು ಈ ಘಟನೆ ನಡೆದಿದ್ದು, ಅಕ್ರಮ ಚಿನ್ನಾಭರಣ ಸಾಗಾಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅನೇಕ ಸಿಬ್ಬಂದಿ ನೇಮಿಸುವ ಮೂಲಕ ಡಿಆರ್‌ಐ ಅಧಿಕಾರಿಗಳು ಕಾರ್ಯಪ್ರವೃತರಾಗಿದ್ದರು.

VISTARANEWS.COM


on

Gold smuggling
Koo

ಮುಂಬೈ: ಭಾರತದಿಂದ ದುಬೈಗೆ ಕೋಟ್ಯಂತರ ರೂ ಮೌಲ್ಯದ ಚಿನ್ನವನ್ನು ಕಳ್ಳ ಸಾಗಾಣೆ(Gold Smuggling) ಮಾಡುತ್ತಿದ್ದ ಅಫ್ಘಾನಿಸ್ತಾನದ ರಾಜತಾಂತ್ರಿಕ(Afghan diplomat) ಅಧಿಕಾರಿಯೊಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಲೆಗೆ ಬಿದ್ದಿದ್ದಾರೆ. ಅಫ್ಘಾನಿಸ್ತಾನದ(Afghanistan) ಇಸ್ಲಾಮಿಕ್‌ ರಿಪಬ್ಲಿಕ್‌ನ ರಾಜತಾಂತ್ರಿಕ ಅಧಿಕಾರಿ ಜಾಕಿಯಾ ವಾರ್ದಕ್‌ ಅವರು ಬರೋಬ್ಬರಿ 18.6 ಕೋಟಿ ರೂ. ಮೌಲ್ಯದ 25 ಕೆ.ಜಿ. ಚಿನ್ನವನ್ನು ಕಳ್ಳ ಸಾಗಾಟ ಮಾಡುತ್ತಿದ್ದ ವೇಳೆ ಏರ್‌ಪೋರ್ಟ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಏ.25ರಂದು ಈ ಘಟನೆ ನಡೆದಿದ್ದು, ಅಕ್ರಮ ಚಿನ್ನಾಭರಣ ಸಾಗಾಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅನೇಕ ಸಿಬ್ಬಂದಿ ನೇಮಿಸುವ ಮೂಲಕ ಡಿಆರ್‌ಐ ಅಧಿಕಾರಿಗಳು ಕಾರ್ಯಪ್ರವೃತರಾಗಿದ್ದರು. ಜಾಕಿಯಾ ಮತ್ತು ಅವರ ಪುತ್ರ ಸಂಜೆ 5:45 ದುಬೈಗೆ ಪ್ರಯಾಣ ಬೆಳೆಸಲೆಂದು ಏರ್‌ಪೋರ್ಟ್‌ಗೆ ಬಂದಿದ್ದರು. ತಾವು ಯಾವುದೇ ಲಗೇಜ್‌ ತಂದಿಲ್ಲ ಎಂಬುದನ್ನು ತೋರಿಸಿಕೊಳ್ಳಲು ತಾಯಿ ಮಗ ಇಬ್ಬರೂ ಏರ್‌ಪೋರ್ಟ್‌ನ ಹಸಿರು ಚಾನೆಲನ್ನು ಬಳಸಿದ್ದರು ಎನ್ನಲಾಗಿದೆ.

ಜಾಕಿಯಾ ಮತ್ತು ಅವರ ಪುತ್ರನ ಬಳಿ ಇದ್ದ ಐದು ಟ್ರಾಲಿ ಬ್ಯಾಗ್‌ಗಳು, ಒಂದು ಹ್ಯಾಂಡ್‌ ಬ್ಯಾಗ್‌, ಒಂದು ಹ್ಯಾಂಗಿಂಗ್‌ ಬ್ಯಾಗ್‌ ಮತ್ತು ನೆಕ್‌ ಪಿಲ್ಲೋಗಳನ್ನು ತಪಾಸಣೆಗೊಳಪಡಿಸಿದ ಅಧಿಕಾರಿಗಳಿಗೆ ಅವುಗಳಲ್ಲಿ ಯಾವುದೇ ಚಿನ್ನ ಪತ್ತೆಯಾಗಿತ್ತು. ಆಮೇಲೆ ಅವರ ಬಳಿ ಯಾವುದಾದರೂ ಸುಂಕ ವಿಧಿಸಬಹುದಾದ ಅಥವಾ ಚಿನ್ನಾಭರಣ ಹೊಂದಿದ್ದೀರಾ ಎಂದು ಅಧಿಕಾರಿಗಳು ಜಾಕಿಯಾ ಅವರನ್ನು ಪ್ರಶ್ನಿಸಿದ್ದಾರೆ. ಆದರೆ ಅನುಮಾನಗೊಂಡ ಅಧಿಕಾರಿಗಳು ಜಾಕಿಯಾ ಮತ್ತು ಅವರ ಪುತ್ರನನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು, ತಪಾಸಣೆಗೊಳಪಡಿಸಿದರು. ಆಗ ಆಕೆ ಧರಿಸಿದ್ದ ಜ್ಯಾಕೆಟ್‌, ಲೆಗ್ಗಿನ್ಸ್‌, ಮೊಣಕಾಲಿಗೆ ಹಾಕುವ ಕ್ಯಾಪ್‌ ಮತ್ತು ಬೆಲ್ಟ್‌ನಲ್ಲಿ ಚಿನ್ನದ ಬಿಸ್ಕೇಟ್‌ ಪತ್ತೆಯಾಗಿತ್ತು. ಆಕೆಯ ಮಗನನ್ನು ತಪಾಸಣೆಗೊಳಪಡಿಸಿದಾಗ ಯಾವುದೇ ವಸ್ತುಗಳು ಪತ್ತೆ ಆಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರಿಗಳು 1962ರ ಕಸ್ಟಮ್ಸ್‌ ಕಾಯ್ದೆ ಅಡಿಯಲ್ಲಿ ಎಲ್ಲಾ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಅದಾಗ್ಯೂ ಆಕೆ ಅಫ್ಘಾನಿಸ್ತಾನದ ರಾಜತಾಂತ್ರಿಕ ಅಧಿಕಾರಿಯಾಗಿರುವ ಕಾರಣ ಅವರನ್ನು ಬಂಧಿಸಿಲ್ಲ.

ಇದನ್ನೂ ಓದಿ:Elvish Yadav: ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌ಗೆ ಮತ್ತೆ ಸಂಕಷ್ಟ; ಎಲ್ವಿಶ್‌ ವಿರುದ್ಧ ಇಡಿ ಕೇಸ್‌

ಎರಡು ವಾರಗಳ ಹಿಂದೆ ಮುಂಬೈ ಏರ್‌ಪೋರ್ಟ್‌ನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ನೂಡಲ್ಸ್ ಪ್ಯಾಕೆಟ್​ಗಳಲ್ಲಿ ಹುದುಗಿಸಿಟ್ಟಿದದ ವಜ್ರಗಳ ಹರಳುಗಳು ಪತ್ತೆಯಾಗಿದ್ದವು. ಅದರ ಮೌಲ್ಯ 6.48 ಕೋಟಿ ರೂಪಾಯಿ ಎಂದು ತಿಳಿದುಬಂದಿದ್ದು, ಅರೋಪಿ ಸಮೇತ ಅಧಿಕಾರಿಗಳು ವಜ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯನ್ನು ವಿವರಿಸಿದ ಅಧಿಕಾರಿಯೊಬ್ಬರು ಮುಂಬೈನಿಂದ ಬ್ಯಾಂಕಾಕ್​​ ಪ್ರಯಾಣಿಸುತ್ತಿದ್ದ ಭಾರತೀಯ ಪ್ರಜೆಯನ್ನು ತಡೆಯಲಾಯಿತು. ಈ ವೇಳೆ ಆತನ ಟ್ರಾಲಿ ಬ್ಯಾಗ್​ನಲ್ಲಿ ನೂಡಲ್ಸ್ ಪ್ಯಾಕೆಟ್​ಗಳಿದ್ದವು. ಅದರಲ್ಲಿ ಅಡಗಿಸಿಟ್ಟಿದ್ದ ವಜ್ರಗಳಿದ್ದು ಅವುಗಳನ್ನು ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂತು ಎಂದು ಹೇಳಿದ್ದಾರೆ. ಅದೇ ರೀತಿ ಕೊಲಂಬೋದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿದೇಶಿ ಪ್ರಜೆಯೊಬ್ಬರು ಚಿನ್ನದ ಗಟ್ಟಿಗಳು ಮತ್ತು ಕತ್ತರಿಸಿದ ತುಂಡನ್ನು ಸಾಗಿಸುತ್ತಿರುವುದು ಕಂಡುಬಂದಿದೆ. 321 ಗ್ರಾಂ ತೂಕದ ಚಿನ್ನವನ್ನು ತನ್ನ ಒಳ ಉಡುಪುಗಳಲ್ಲಿ ಅಡಗಿಸಿಟ್ಟಿರುವುದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.


Continue Reading

ದೇಶ

Elvish Yadav: ʻಬಿಗ್ ಬಾಸ್‌ ಒಟಿಟಿʼ ವಿನ್ನರ್‌ಗೆ ಮತ್ತೆ ಸಂಕಷ್ಟ; ಎಲ್ವಿಶ್‌ ವಿರುದ್ಧ ಇಡಿ ಕೇಸ್‌

Elvish Yadav: ಯೂಟ್ಯೂಬರ್, ಬಿಗ್ ಬಾಸ್ OTT2 ವಿಜೇತ ಸಿದ್ದಾರ್ಥ್‌ ಯಾದವ್‌ ಅಲಿಯಾಸ್‌ ಎಲ್ವಿಶ್ ಯಾದವ್ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕೇಸ್‌ ದಾಖಲಿಸಿದೆ. ಉತ್ತರಪ್ರದೇಶದ ಗೌತಮ್‌ ಬುದ್ಧನಗರ ಜಿಲ್ಲೆಯಲ್ಲಿ ದಾಖಲಾಗಿರುವ ಎಫ್‌ ಐಆರ್‌ ಮತ್ತು ಚಾರ್ಜ್‌ಶೀಟ್‌ಗಳ ಆಧಾರದ ಮೇಲೆ ಇಡಿ ಎಲ್ವಿಶ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಲ್ಲಿ ಕೇಸ್‌ ದಾಖಲಿಸಿದೆ.

VISTARANEWS.COM


on

Elvish Yadav
Koo

ನವದೆಹಲಿ: ಯೂಟ್ಯೂಬರ್, ಬಿಗ್ ಬಾಸ್ OTT2 ವಿಜೇತ ಸಿದ್ದಾರ್ಥ್‌ ಯಾದವ್‌ ಅಲಿಯಾಸ್‌ ಎಲ್ವಿಶ್ ಯಾದವ್ (Elvish Yadav) ವಿರುದ್ಧ ಜಾರಿ ನಿರ್ದೇಶನಾಲಯ(ED) ಅಕ್ರಮ ಹಣ ವರ್ಗಾವಣೆ ಕೇಸ್‌ (Money laundering case) ದಾಖಲಿಸಿದೆ. ಉತ್ತರಪ್ರದೇಶದ ಗೌತಮ್‌ ಬುದ್ಧನಗರ ಜಿಲ್ಲೆಯಲ್ಲಿ ದಾಖಲಾಗಿರುವ ಎಫ್‌ ಐಆರ್‌ ಮತ್ತು ಚಾರ್ಜ್‌ಶೀಟ್‌ಗಳ ಆಧಾರದ ಮೇಲೆ ಇಡಿ ಎಲ್ವಿಶ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(PMLA)ಯಲ್ಲಿ ಕೇಸ್‌ ದಾಖಲಿಸಿದೆ.

ಎಲ್ವಿಶ್‌ ಯಾದವ್‌ ಅಕ್ರಮವಾಗಿ ಹಣ ಪಡೆದು ವಿವಿಧ ಕಡೆಗಳಲಿ ರೇವ್‌ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಎಂಬುದು ಚಾರ್ಜ್‌ಶೀಟ್‌ ನಲ್ಲಿ ದಾಖಲಿಸಲಾಗಿದೆ. ಹೀಗಾಗಿ ಶೀಘ್ರದಲ್ಲೇ ಎಲ್ವಿಶ್‌ನನ್ನು ಇಡಿ ವಿಚಾರಣೆಗೊಳಪಡಿಸಲಿದೆ. ಇನ್ನು ಪ್ರಕರಣದಲ್ಲಿ ಭಾಗಿಯಾದ ಇನ್ನಿತರ ಆರೋಪಿಗಳನ್ನೂ ಇಡಿ ಗ್ರಿಲ್‌ ಮಾಡಲಿದೆ. ಯಾದವ್‌ ಜೊತೆಗೆ ಒಟ್ಟು ಆರು ಜನರ ವಿರುದ್ಧ ಇಡಿ ಕೇಸ್‌ ದಾಖಲಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಸಿದ ಆರೋಪದ ಮೇಲೆ ಯೂಟ್ಯೂಬರ್, ಬಿಗ್ ಬಾಸ್ OTT2 ವಿಜೇತ ಎಲ್ವಿಶ್ ಯಾದವ್ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಇವರ ಗ್ಯಾಂಗ್‌ನ ಐವರು ಸದಸ್ಯರನ್ನು ನೋಯ್ಡಾದಲ್ಲಿ ಬಂಧಿಸಲಾಗಿತ್ತು. ಸೆಕ್ಟರ್ 51ರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾವಿನ ವಿಷ ಲಭ್ಯವಿತ್ತು ಎಂದು ಪೊಲೀಸರು ತಿಳಿಸಿದ್ದರು. ಬಂಧಿತರನ್ನು ಆಗ್ನೇಯ ದೆಹಲಿಯ ಬದರ್‌ಪುರದ ಮೊಹರ್‌ಬಂದ್ ಗ್ರಾಮದ ನಿವಾಸಿಗಳಾದ ರಾಹುಲ್(32), ತೀತುನಾಥ್ (45), ಜೈಕರನ್ (50), ನಾರಾಯಣ್ (50) ಮತ್ತು ರವಿನಾಥ್ (45) ಎಂದು ಗುರುತಿಸಲಾಗಿತ್ತು.

ವಿದೇಶಿ ಪ್ರಜೆಗಳಿಗೂ ಆತಿಥ್ಯ ನೀಡಿದ ರೇವ್ ಪಾರ್ಟಿಗಳಲ್ಲಿ ಭಾಗವಹಿಸಿದ್ದ ಕೆಲವರು ಹಾವಿನ ವಿಷವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆರೋಪಿಯಿಂದ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳು ಹಾಗೂ ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿದ್ದು, ಹಾವುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ಅಂದು ಎಲ್ವಿಶ್ ಯಾದವ್ ಅವರನ್ನು ಬಂಧಿಸಿರಲಿಲ್ಲ.
ವಿವಿಧ ಸ್ಥಳಗಳಿಂದ ಹಾವುಗಳನ್ನು ಹಿಡಿದು ಅವುಗಳ ವಿಷವನ್ನು ಹೊರತೆಗೆಯುತ್ತಿದ್ದರು, ಎಲ್ವಿಶ್ ಯಾದವ್‌ ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದರು. ಪಾರ್ಟಿಗಳಲ್ಲಿ ವಿಷವನ್ನು ಪೂರೈಸಲು ಅವರು ಭಾರಿ ಮೊತ್ತದ ಹಣವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ಈ ಮುಂಚೆ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Rahul Gandhi: ಪ್ರಧಾನಿ ದ್ವಾರಕಾ ಪೂಜೆ ಒಂದು ನಾಟಕ; ಮತ್ತೆ ಸನಾತನ ಆಚರಣೆ ಬಗ್ಗೆ ರಾಹುಲ್‌ ಪ್ರಶ್ನೆ

ಎಲ್ವಿಶ್ ಯಾದವನ್ನು ನೋಯ್ಡಾ ಪೊಲೀಸರು ಹಾವಿನ ವಿಷ ಬಳಸಿದ ಪ್ರಕರಣದಲ್ಲಿ ಮಾ.17ರಂದು ಬಂಧಿಸಿದ್ದರು. ವಿಚಾರಣೆ ಬಳಿಕ ಜಾಮೀನು ಪಡೆದು ಹೊರ ಬಂದರು. ಹಾಗೇ ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆಯೂ ಜಾಮೀನು ಪಡೆದಿದ್ದ. ಇದಾದ ಕೆಲವೇ ದಿನಗಳಲ್ಲಿ ಎಲ್ವಿಶ್‌ 3 ಕೋಟಿ ರೂ ಮೌಲ್ಯದ ಮರ್ಸಿಡಿಸ್‌ ಗ್ವ್ಯಾಗನ್‌ G350 D (Mercedes G Wagon) ಖರೀದಿಸಿದ್ದ.

Continue Reading

ದೇಶ

Rahul Gandhi: ಪ್ರಧಾನಿ ದ್ವಾರಕಾ ಪೂಜೆ ಒಂದು ನಾಟಕ; ಮತ್ತೆ ಸನಾತನ ಆಚರಣೆ ಬಗ್ಗೆ ರಾಹುಲ್‌ ಪ್ರಶ್ನೆ

Rahul Gandhi: ಪ್ರಧಾನಿ ಮೋದಿಯವರು ಒಮ್ಮೆ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಮತ್ತೊಮ್ಮೆ ಸಮುದ್ರ ಒಳಗೆ ಹೋಗಿ ಅಲ್ಲಿ ಡ್ರಾಮಾ ಮಾಡುತ್ತಾರೆ. ಸಮುದ್ರಕ್ಕೆ ಇಳಿಯುತ್ತಿದ್ದಂತೆ ಅವರು ದೇವರೇ ತಮಗೇನು ಆಗದೇ ಇದ್ದರೆ ಸಾಕಪ್ಪ ಅನ್ನೋ ಭೀತಿಯಲ್ಲಿದ್ದರು. ಅವರು ಇಂತಹ ಡ್ರಾಮಾಗಳನ್ನು ಮಾಡೋದಾದರೂ ಏಕೆ? ಅವರು ರಾಜಕೀಯವನ್ನು ತಮಾಷೆಯ ವಿಚಾರ ಎಂಬಂತೆ ಬಿಂಬಿಸಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬಿಜೆಪಿಗರು ಹರಿಹಾಯ್ದಿದ್ದಾರೆ.

VISTARANEWS.COM


on

Rahul Gandhi
Koo

ಪುಣೆ: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ(Controversial statement)ಗಳ ಮೂಲಕ ಬಿಜೆಪಿಗೆ ಆಹಾರವಾಗುವ ರಾಹುಲ್‌ ಗಾಂಧಿ(Rahul Gandhi) ಅವರ ಮತ್ತೊಂದು ಹೇಳಿಕೆ ವಿವಾದಕ್ಕೀಡಾಗಿದೆ. ಬಿಜೆಪಿಗರು ಅವರ ವಿರುದ್ಧ ಕಿಡಿ ಕಾರಿದ್ದಾರೆ. ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯ(Narendra Modi)ವರ ಇತ್ತೀಚಿನ ದ್ವಾರಕಾ ಪೂಜೆ(Dwaraka Pooje) ಬಗ್ಗೆ ಟೀಕಿಸಿದ್ದು, ಸನಾತನ ಧರ್ಮದ ಆಚರಣೆ ಪದ್ದತಿಯನ್ನು ಮತ್ತೊಮ್ಮೆ ಪ್ರಶ್ನಿಸಿದ್ದಾರೆ. ಪುಣೆಯಲ್ಲಿ ಮಾತನಾಡಿದ ಅವರು ಸಮುದ್ರದ ಒಳಗೆ ಹೋಗಿ ಪ್ರಧಾನಿ ಮೋದಿ ಡ್ರಾಮಾ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿ ಮೋದಿಯವರು ಒಮ್ಮೆ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಮತ್ತೊಮ್ಮೆ ಸಮುದ್ರ ಒಳಗೆ ಹೋಗಿ ಅಲ್ಲಿ ಡ್ರಾಮಾ ಮಾಡುತ್ತಾರೆ. ಸಮುದ್ರಕ್ಕೆ ಇಳಿಯುತ್ತಿದ್ದಂತೆ ಅವರು ದೇವರೇ ತಮಗೇನು ಆಗದೇ ಇದ್ದರೆ ಸಾಕಪ್ಪ ಅನ್ನೋ ಭೀತಿಯಲ್ಲಿದ್ದರು. ಅವರು ಇಂತಹ ಡ್ರಾಮಾಗಳನ್ನು ಮಾಡೋದಾದರೂ ಏಕೆ? ಅವರು ರಾಜಕೀಯವನ್ನು ತಮಾಷೆಯ ವಿಚಾರ ಎಂಬಂತೆ ಬಿಂಬಿಸಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್‌ ಗಾಂಧಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬಿಜೆಪಿಗರು ಹರಿಹಾಯ್ದಿದ್ದಾರೆ. ರಾಹುಲ್‌ ಗಾಂಧಿಯವರು ಪ್ರಧಾನಿ ಮೋದಿಯವರನ್ನು ಟೀಕಿಸುವ ಭರದಲ್ಲಿ ಸನಾತನ ಧರ್ಮದ ಅಸ್ತಿತ್ವವನ್ನು ಮತ್ತೆ ಪ್ರಶ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಫೆಬ್ರುವರಿ 25ರಂದು ಗುಜರಾತ್‌ನ ದ್ವಾರಕಾದಲ್ಲಿ ಅಳವಾದ ನೀರಿನಲ್ಲಿ ಮುಳುಗಿ ದ್ವಾರಕಾಧೀಶ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇನ್ನು ಶ್ರೀ ಕೃಷ್ಣನ ಮುಳುಗಿ ಹೋದ ನಗರವನ್ನು ಹುಡುಕುವ ಸಮುದ್ರದಾಳದ ತಮ್ಮ ಪಯಣದ ವೇಳೆ ಸ್ಕೂಬಾ ಸಾಧನಗಳನ್ನು ಧರಿಸಿರುವ ಚಿತ್ರಗಳನ್ನು ಅವರು ಹಂಚಿಕೊಂಡಿದ್ದಾರೆ. ಬೇಯ್ತ್ ದ್ವಾರಕಾ ದ್ವೀಪದ ಸಮೀಪದ ಕರಾವಳಿಯಲ್ಲಿ ಪ್ರಧಾನಿ ಮೋದಿ ಸ್ಕೂಬಾ ಡೈವಿಂಗ್ ನಡೆಸಿದ್ದರು. ಪುರತತ್ವ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿ ಪುರಾತನ ದ್ವಾರಕಾ ನಗರದ ಅವಶೇಷಗಳನ್ನು ಪತ್ತೆ ಮಾಡಿದ್ದು, ಜನರು ಅದನ್ನು ವೀಕ್ಷಿಸಲು ಅವಕಾಶವಿದೆ.

ಇದನ್ನೂ ಓದಿ: Brij Bhushan: ಮಗನ ನಾಮನಿರ್ದೇಶನದ ವೇಳೆ 10 ಸಾವಿರಕ್ಕೂ ಅಧಿಕ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶಿಸಿದ ಬ್ರಿಜ್ ಭೂಷಣ್

ಕೆಲವು ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಹಿಂದೂ ದೇವತೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಛತ್ತೀಸ್‌ಗಡದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಶಿವಕುಮಾರ್‌ ದಹಾರಿಯಾ ಪರ ಪ್ರಚಾರದ ವೇಳೆ ಶಿವಕುಮಾರ್‌ ಅವರನ್ನು ಭಗವಾನ್‌ ಶಿವನಿಗೆ ಹೋಲಿಸಿ ಹೇಳಿಕೆಯೊಂದನ್ನು ನೀಡಿದ್ದರು. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿವಕುಮಾರ್‌ ಅವರು ಸಾಕ್ಷತ್‌ ಶಿವನಂತೆ. ಅವರು ಬಹಳ ಸುಲಭವಾಗಿ ರಾಮ(ಬಿಜೆಪಿ)ನ ಜೊತೆ ಸ್ಪರ್ಧೆಗಿಳಿಯಬಹುದು. ನನ್ನ ಹೆಸರು ಕೂಡ ಮಲ್ಲಿಕಾರ್ಜುನ. ಅಂದರೆ ಶಿವ ಎಂದರ್ಥ. ನಾನು ಕೂಡ ಶಿವನೇ ಆಂಧ‍್ರ ಪ್ರದೇಶದ ಶ್ರೀಶೈಲಂ ಮಲ್ಲಿಕಾರ್ಜುನ ಎಂಬ ಹೆಸರಿನಲ್ಲಿ ಜ್ಯೋತಿರ್ಲಿಂಗ ಇದೆ ಎಂದು ಹೇಳಿದ್ದರು.

Continue Reading

Lok Sabha Election 2024

Rahul Gandhi: ರಾಹುಲ್‌ ಗಾಂಧಿಗೆ ಸ್ವಂತ ಕಾರು, ಮನೆ ಇಲ್ಲ; ಇಲ್ಲಿದೆ ಕಾಂಗ್ರೆಸ್‌ ಮುಖಂಡ ಘೋಷಿಸಿದ ಆಸ್ತಿ ವಿವರ

Rahul Gandhi: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೇ 3ರಂದು ಉತ್ತರ ಪ್ರದೇಶದ ರಾಯ್‌ ಬರೇಲಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ ರಾಹುಲ್ ಗಾಂಧಿ ತಮ್ಮ ಬಳಿ ಎಷ್ಟು ಆಸ್ತಿ ಇದೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಅವರು 20.04 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ಈ ಪೈಕಿ 9.24 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಸ್ಥಿರಾಸ್ತಿಯ ಮೌಲ್ಯ 11.15 ಕೋಟಿ ರೂ. ಅಚ್ಚರಿ ಎಂದರೆ ಅವರು ಒಂದು ಸ್ವಂತ ಮನೆ ಹೊಂದಿಲ್ಲ. ಅವರು ಕಾರು ಅಥವಾ ಇತರ ವಾಹನವನ್ನೂ ಖರೀದಿ ಮಾಡಿಲ್ಲ. 

VISTARANEWS.COM


on

Rahul Gandhi
Koo

ಲಕ್ನೋ: ಲೋಕಸಭೆ ಚುನಾವಣೆ (Lok Sabha Election)ಯಲ್ಲಿ ಈ ಹಿಂದೆ ಕೇರಳದ ವಯನಾಡಿನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಮೇ 3ರಂದು ಉತ್ತರ ಪ್ರದೇಶದ ರಾಯ್‌ ಬರೇಲಿಯಿಂದಲೂ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ ರಾಹುಲ್ ಗಾಂಧಿ ತಮ್ಮ ಬಳಿ ಎಷ್ಟು ಆಸ್ತಿ ಇದೆ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಅವರು 20.04 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ.

ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ರಾಹುಲ್‌ ಗಾಂಧಿ ಒಟ್ಟು 20.04 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಈ ಪೈಕಿ 9.24 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಇದರಲ್ಲಿ 3 ಕೋಟಿ 81 ಲಕ್ಷದ 33 ಸಾವಿರ ರೂ. ಮೌಲ್ಯದ ಷೇರುಗಳು ಮತ್ತು 15 ಲಕ್ಷದ 21 ಸಾವಿರ ರೂ. ಮೌಲ್ಯದ ಚಿನ್ನದ ಬಾಂಡ್‌ಗಳು ಸೇರಿವೆ. ಸ್ಥಿರಾಸ್ತಿಯ ಮೌಲ್ಯ 11.15 ಕೋಟಿ ರೂ. ಇನ್ನು ರಾಹುಲ್‌ ಗಾಂಧಿ ಅವರ ಬಳಿ 55 ಸಾವಿರ ರೂ. ನಗದು ಇದೆ. ಎಸ್‌ಬಿಐ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಉಳಿತಾಯ ಖಾತೆಗಳಲ್ಲಿ 26.25 ಲಕ್ಷ ರೂ. ಠೇವಣಿ ಇಟ್ಟಿದ್ದಾರೆ. ಸ್ಥಿರಾಸ್ತಿ ಪೈಕಿ 9 ಕೋಟಿ 4 ಲಕ್ಷ 89 ಸಾವಿರ ರೂ. ಮೌಲ್ಯದ ಸ್ವ-ಖರೀದಿ ಆಸ್ತಿ ಹಾಗೂ 2 ಕೋಟಿ 10 ಲಕ್ಷ 13 ಸಾವಿರ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ಸೇರಿದೆ.

ವಾಹನವಿಲ್ಲ

ಅಚ್ಚರಿ ಎಂದರೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಒಂದು ಸ್ವಂತ ಮನೆ ಹೊಂದಿಲ್ಲ. ಅವರು ಕಾರು ಅಥವಾ ಇತರ ವಾಹನವನ್ನೂ ಖರೀದಿ ಮಾಡಿಲ್ಲ. ಆದರೆ ಗುರುಗ್ರಾಮದಲ್ಲಿ 9.04 ಕೋಟಿ ರೂ. ಮೌಲ್ಯದ ಸ್ವಂತ ಕಚೇರಿಯೊಂದನ್ನು ಹೊಂದಿದ್ದಾರೆ. ಹೊಸದಿಲ್ಲಿಯ ಮೆಹ್ರೌಲಿಯ ಸುಲ್ತಾನ್‌ಪುರ ಗ್ರಾಮದಲ್ಲಿ ಸುಮಾರು 3.778 ಎಕರೆ ಕೃಷಿ ಭೂಮಿ ಇದ್ದು, ಇದು ರಾಹುಲ್‌ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರಿನಲ್ಲಿದೆ. ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಲ್ಲಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಅಲ್ಲದೆ ಫ್ಲೋರಿಡಾದ ರೋಲಿನ್ಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದಿರುವುದು ಅಫಿಡವಿಟ್‌ನ ವಿವರದಲ್ಲಿ ಕಂಡು ಬಂದಿದೆ.

ಇದನ್ನೂ ಓದಿ: Lok Sabha Election 2024: ರಾಯ್‌ಬರೇಲಿಯಿಂದ ರಾಹುಲ್‌ ಗಾಂಧಿ ಕಣಕ್ಕೆ, ಅಮೇಠಿಯಿಂದ ಕಿಶೋರಿಲಾಲ್‌ ಸ್ಪರ್ಧೆ

ರಾಯ್‌ ಬರೇಲಿಯಲ್ಲಿ ನಾಮ ಪತ್ರ

ಸುಮಾರು 20 ವರ್ಷಗಳ ಕಾಲ ಸೋನಿಯಾ ಗಾಂಧಿ ಅಧಿಕಾರದಲ್ಲಿದ್ದ ಉತ್ತರ ಪ್ರದೇಶದ ರಾಯ್​ ಬರೇಲಿಯಲ್ಲಿ ಶುಕ್ರವಾರ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಸಿದ್ದರು. ರಾಹುಲ್ ಗಾಂಧಿ ತಮ್ಮ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದರು. ರಾಹುಲ್ ಗಾಂಧಿ ಅವರ ಎದುರಾಳಿಯಾಗಿ ಬಿಜೆಪಿಯಿಂದ ದಿನೇಶ್ ಪ್ರತಾಪ್ ಸಿಂಗ್ ಸ್ಪರ್ಧಿಸಲಿದ್ದಾರೆ. ಇಲ್ಲಿ ಮೇ 20ರಂದು 5ನೇ ಹಂತದಲ್ಲಿ ಮತದಾನ ನಡೆಯಲಿದೆ.

Continue Reading
Advertisement
Virat Kohli
ಕ್ರೀಡೆ3 mins ago

Virat Kohli: ಗುಜರಾತ್​ ವಿರುದ್ಧ 6 ರನ್ ಬಾರಿಸಿದರೆ ವಿಶೇಷ ದಾಖಲೆ ಬರೆಯಲಿದ್ದಾರೆ ಕಿಂಗ್​ ಕೊಹ್ಲಿ

Rohit Sharma
ಕ್ರೀಡೆ4 mins ago

Rohit Sharma : ರೋಹಿತ್​​ ಶರ್ಮಾಗೆ ಗಾಯ; ವಿಶ್ವ ಕಪ್​ ಮೊದಲೇ ಭಾರತ ತಂಡಕ್ಕೆ ಸಮಸ್ಯೆ?

Prajwal Revanna Case
ಕರ್ನಾಟಕ9 mins ago

Prajwal Revanna Case: ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ; ತೀರ್ಪು ಕಾಯ್ದಿರಿಸಿದ ಕೋರ್ಟ್, ಕೆಲವೇ ಕ್ಷಣಗಳಲ್ಲಿ ಆದೇಶ

Rowdy sheeter camel Rohit escapes from DCPs office after ccb officials spotted him
ಬೆಂಗಳೂರು16 mins ago

Rowdy Sheeter: ಸಿಸಿಬಿ ಅಧಿಕಾರಿಗಳ ಕಂಡು ಡಿಸಿಪಿ ಕಚೇರಿಯಿಂದ ರೌಡಿಶೀಟರ್‌ ಒಂಟೆ ರೋಹಿತ್‌ ಎಸ್ಕೇಪ್‌

Job Alert
ಉದ್ಯೋಗ19 mins ago

Job Alert: ಕೋರ್ಟ್‌ನಲ್ಲಿದೆ 41 ಹುದ್ದೆ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ

IPL 2024
ಕ್ರೀಡೆ23 mins ago

IPL 2024 : ಮುಂಬೈ ಬ್ಯಾಟರ್​​ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಮಾಲೀಕರಿಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ

Nikhil Kumaraswamy
ಕರ್ನಾಟಕ40 mins ago

Prajwal Revanna Case: ಹಾಸನ ಸಂಸದರಿಗೂ ನನಗೂ ಸಂಬಂಧವಿಲ್ಲ ಎಂದ ನಿಖಿಲ್‌ ಕುಮಾರಸ್ವಾಮಿ!

PBKS vs CSK
ಕ್ರೀಡೆ51 mins ago

PBKS vs CSK: ಬ್ಯಾಟಲ್​ ಆಫ್​ ದಿ ಕಿಂಗ್ಸ್​ಗೆ ಚೆನ್ನೈ-ಪಂಜಾಬ್​ ರೆಡಿ; ಗಾಯಕ್ವಾಡ್​ಗೆ ಸೇಡಿನ ಪಂದ್ಯ

Road Accident in bagalakote
ಬಾಗಲಕೋಟೆ51 mins ago

Road Accident : ಟಿಪ್ಪರ್‌ ಲಾರಿ ಡಿಕ್ಕಿಗೆ ಕಾರು ಪುಡಿ ಪುಡಿ; ಸಿದ್ದನಕೊಳ್ಳ ಶ್ರೀಗಳು ಗಂಭೀರ ಗಾಯ

MTR Karunadu Svada food festival inauguration in Bengaluru
ಕರ್ನಾಟಕ52 mins ago

MTR: ಬೆಂಗಳೂರಿನಲ್ಲಿ ಎಂಟಿಆರ್ ಕರುನಾಡು ಸ್ವಾದ; 2 ದಿನಗಳ ಆಹಾರ ಉತ್ಸವದಲ್ಲಿ ಏನೇನಿವೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ1 day ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌