ಶೋಪಿಯಾನ್​ನಲ್ಲಿ ಇಬ್ಬರು ವಲಸೆ ಕಾರ್ಮಿಕರನ್ನು ಕೊಂದಿದ್ದ ಉಗ್ರರಲ್ಲಿ ಇಬ್ಬರು ಅರೆಸ್ಟ್​, ಓರ್ವ ಹತ್ಯೆ - Vistara News

ದೇಶ

ಶೋಪಿಯಾನ್​ನಲ್ಲಿ ಇಬ್ಬರು ವಲಸೆ ಕಾರ್ಮಿಕರನ್ನು ಕೊಂದಿದ್ದ ಉಗ್ರರಲ್ಲಿ ಇಬ್ಬರು ಅರೆಸ್ಟ್​, ಓರ್ವ ಹತ್ಯೆ

ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದಾಳಿ ಹೆಚ್ಚುತ್ತಲೇ ಇದೆ. ಈ ಇಬ್ಬರು ವಲಸೆ ಕಾರ್ಮಿಕರ ಹತ್ಯೆಗೂ ಒಂದು ದಿನ ಮುಂಚೆ ಶೋಪಿಯಾನ್​​ನಲ್ಲಿ ಕಾಶ್ಮೀರಿ ಪಂಡಿತ ಪೋರಣ್​ ಕ್ರಿಶನ್​ ಭಟ್​ ಎಂಬಾತನನ್ನು ಉಗ್ರರು ಕೊಂದಿದ್ದಾರೆ.

VISTARANEWS.COM


on

Terrorist Killed who involved in attack on Uttar Pradesh workers
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್​​ನಲ್ಲಿ ಮಂಗಳವಾರ ಇಬ್ಬರು ಕಾರ್ಮಿಕರನ್ನು ಭಯೋತ್ಪಾದಕರು ಗ್ರೆನೇಡ್​ ದಾಳಿ ಮಾಡಿ ಹತ್ಯೆಗೈದಿದ್ದರು. ಇವರಿಬ್ಬರೂ ಉತ್ತರ ಪ್ರದೇಶ ಮೂಲದವರಾಗಿದ್ದರು. ಆ ಕಾರ್ಮಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಉಗ್ರರಲ್ಲಿ ಓರ್ವನನ್ನು ಜಮ್ಮು-ಕಾಶ್ಮಿರ ಪೊಲೀಸರು ಹೊಡೆದುರುಳಿಸಿದ್ದಾರೆ.

ಉತ್ತರ ಪ್ರದೇಶದ ಕನೌಜ್​ ಮೂಲದ ಕಾರ್ಮಿಕರಾದ ಮೋನಿಶ್​ ಕುಮಾರ್​ ಮತ್ತು ರಾಮ್​ ಸಾಗರ್​ ಎಂಬುವರನ್ನು ಶೋಪಿಯಾನ್​ ಜಿಲ್ಲೆಯ ಹರ್ಮೇನ್​ ಹಳ್ಳಿಯಲ್ಲಿ ಉಗ್ರರು ಕೊಂದು ಹಾಕಿದ್ದರು. ಹರ್ಮೇನ್​ ಹಳ್ಳಿಯಲ್ಲಿ ಇವರ ಶೆಡ್​ ಇರುವ ಸ್ಥಳದಲ್ಲೇ ಗ್ರೆನೇಡ್​ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಮೋನಿಶ್​ ಕುಮಾರ್​ ಮತ್ತು ರಾಮ್​ ಸಾಗರ್​ನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಇವರಿಬ್ಬರ ಹತ್ಯೆಯಾದ ಕೆಲವೇ ಹೊತ್ತಲ್ಲಿ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಉಗ್ರರನ್ನು ಬಂಧಿಸಿದ್ದಾಗಿ ಜಮ್ಮು-ಕಾಶ್ಮೀರ ಪೊಲೀಸರು ಹೇಳಿದ್ದರು. ಹಾಗೇ, ಇನ್ನೂ ಕೆಲವರು ಇದ್ದು, ಅವರಿಗಾಗಿ ಹುಡುಕುತ್ತಿದ್ದೇವೆ ಎಂದೂ ತಿಳಿಸಿದ್ದರು.

ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಮೇಲಿನ ದಾಳಿ ಹೆಚ್ಚುತ್ತಲೇ ಇದೆ. ಈ ಇಬ್ಬರು ವಲಸೆ ಕಾರ್ಮಿಕರ ಹತ್ಯೆಗೂ ಒಂದು ದಿನ ಮುಂಚೆ ಶೋಪಿಯಾನ್​​ನಲ್ಲಿ ಕಾಶ್ಮೀರಿ ಪಂಡಿತ ಪೋರಣ್​ ಕ್ರಿಶನ್​ ಭಟ್​ ಎಂಬಾತನನ್ನು ಉಗ್ರರು ಕೊಂದಿದ್ದಾರೆ. ಹಾಗೇ, ಸೆ.2ರಂದು ಪುಲ್ವಾಮಾದಲ್ಲಿ, ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕ ಮುನೀರ್​ ಉಲ್​​ ಇಸ್ಲಾಮ್​ ಎಂಬಾತನನ್ನು ಕೊಂದಿದ್ದರು.

ಇದನ್ನೂ ಓದಿ: Terror Attack | ಶೋಪಿಯಾನ್​​ನಲ್ಲಿ ನಿಲ್ಲದ ಉಗ್ರರ ದಾಳಿ; ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರು ಬಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Nijjar Killing: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಕೆನಡಾ ಪೊಲೀಸರು; ಯಾರಿವರು?

Nijjar Killing: 2023ರ ಜೂನ್‌ 18ರಂದು ಕೆನಡಾದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೀಡಾಗಿದ್ದಾನೆ. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆರೋಪ ಕೂಡ ಮಾಡಿದ್ದಾರೆ. ಇದರ ಬೆನ್ನಲ್ಲೇ, ಹತ್ಯೆ ಮಾಡಿದ ಆರೋಪಿಗಳನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

VISTARANEWS.COM


on

Nijjar Killing
Koo

ಒಟ್ಟಾವ: ಖಲಿಸ್ತಾನಿ ಉಗ್ರರ ಪರವಾಗಿರುವ ಕೆನಡಾ ಸರ್ಕಾರವೀಗ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಯ (Nijjar Killing) ಆರೋಪಿಗಳನ್ನು ಬಂಧಿಸಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ತಂಡದಲ್ಲಿದ್ದ ಕೆಲವು ಆರೋಪಿಗಳನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆದರೆ, ಯಾರನ್ನು ಬಂಧಿಸಲಾಗಿದೆ ಎಂಬುದರ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ.

ಕೆನಡಾ ಸರ‍್ರೆಯಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಹತ್ಯೆ ಮಾಡಿದವರು ಭಾರತದ ಏಜೆಂಟ್‌ಗಳು ನೇಮಿಸಿದವರೇ ಆಗಿದ್ದಾರೆ ಎಂಬುದಾಗ ಕೆನಡಾ ಆರೋಪಿಸಿದೆ. ಆದರೆ, ಹತ್ಯೆ ಮಾಡಿದ ತಂಡದ ಸದಸ್ಯರನ್ನೇ ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿರುವುದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಕೊಂದವರು ಯಾರು? ಅವರು ಭಾರತದ ಮೂಲದವರಾ? ಅವರು ನೀಡಿದ ಮಾಹಿತಿ ಏನು ಎಂಬ ಮಾಹಿತಿಯು ಕೆನಡಾ ಪೊಲೀಸರಿಂದಲೇ ಹೊರಬರಬೇಕಿದೆ. ಹತ್ಯೆ ಮಾಡಿದ ತಂಡದವರು ಎನ್ನಲಾದ ಮೂವರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

2023ರ ಜೂನ್‌ 18ರಂದು ಕೆನಡಾದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೀಡಾಗಿದ್ದಾನೆ. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆರೋಪ ಕೂಡ ಮಾಡಿದ್ದಾರೆ. ಹೀಗೆ, ಕೆನಡಾವನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕಿಸ್ತಾನದ ಐಎಸ್‌ಐ ಇಂತಹ ಕುತಂತ್ರ ಮಾಡಿದೆ. ಆದರೆ, ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಆರೋಪವನ್ನು ತಿರಸ್ಕರಿಸುವ ಭಾರತ, ಆರೋಪಗಳಿಗೆ ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ.

“ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ನಾನು ಭಾರತದ ಜತೆ ಮಾತನಾಡಿದ್ದೇನೆ. ಆದರೆ, ಆತನ ಹತ್ಯೆಯ ಕುರಿತು ಭಾರತಕ್ಕೆ ತುಂಬ ವಾರಗಳ ಹಿಂದೆಯೇ ನಂಬಲರ್ಹ ಆರೋಪಗಳ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ತುಂಬ ಗಂಭೀರವಾದ ವಿಚಾರದ ಕುರಿತು ಭಾರತ ಹಾಗೂ ಕೆನಡಾ ಒಗ್ಗೂಡಿ ಕಾರ್ಯನಿರ್ವಹಿಸುವ ಕುರಿತು ಕೂಡ ಮನವರಿಕೆ ಮಾಡಲಾಗಿದೆ. ಗಂಭೀರ ಹತ್ಯೆಯ ವಿಚಾರದಲ್ಲಿ ಭಾರತವು ನಮ್ಮ ಜತೆ ಕೈಗೂಡಿಸುತ್ತದೆ ಎಂಬ ಆಶಾಭಾವನೆಯಲ್ಲಿ ಇದ್ದೇವೆ” ಎಂದು ಜಸ್ಟಿನ್‌ ಟ್ರುಡೋ ಹೇಳಿದ್ದರು. ಆದರೆ, ಭಾರತ ಮಾತ್ರ ಸರಿಯಾದ ಸಾಕ್ಷ್ಯ ಕೊಡಿ ಎಂದು ಹೇಳಿದೆ.

ಇದನ್ನೂ ಓದಿ: Khalistan terrorist: ʼನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿಲ್ಲʼ ಎಂದ ನ್ಯೂಜಿಲ್ಯಾಂಡ್‌ ಉಪಪ್ರಧಾನಿಗೇ ಬೆದರಿಕೆ ಹಾಕಿದ ಪನ್ನುನ್!‌

Continue Reading

ದೇಶ

Rohith Vemula: ರೋಹಿತ್‌ ವೇಮುಲ ದಲಿತನಲ್ಲ ಎಂದ ಪೊಲೀಸರು; ಮರು ತನಿಖೆಗೆ ‘ಕೈ’ ಸರ್ಕಾರ ಆದೇಶ!

Rohith Vemula: 2016ರ ಜನವರಿಯಲ್ಲಿ ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ, ಈ ಪ್ರಕರಣವನ್ನು ತೆಲಂಗಾಣ ಪೊಲೀಸರು ಈಗ ಕ್ಲೋಸ್‌ ಮಾಡಿದ್ದಾರೆ. ಈ ಕುರಿತು ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿದ್ದಾರೆ. ಆದರೆ, ರಾಜ್ಯ ಸರ್ಕಾರವು ಪ್ರಕರಣದ ಕುರಿತು ಮರು ತನಿಖೆಗೆ ಆದೇಶಿಸಿದೆ.

VISTARANEWS.COM


on

Rohith Vemula
Koo

ಹೈದರಾಬಾದ್:‌ ತೆಲಂಗಾಣದ ಹೈದರಾಬಾದ್‌ನಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ (Central University) ಹಾಸ್ಟೆಲ್‌ನಲ್ಲಿ ಪಿಎಚ್‌.ಡಿ ವಿದ್ಯಾರ್ಥಿ ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ರೋಹಿತ್‌ ವೇಮುಲ (Rohith Vemula) ದಲಿತನಲ್ಲ, ಆತನ ನಿಜವಾದ ಜಾತಿ ಬಯಲಾಗುತ್ತದೆ ಎಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ಪ್ರಕರಣವನ್ನು ಕ್ಲೋಸ್‌ ಮಾಡಿರುವ ತೆಲಂಗಾಣ ಪೊಲೀಸರು ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ, ರೋಹಿತ್‌ ವೇಮುಲ ಸಾವಿನ ಪ್ರಕರಣವು ತೆಲಂಗಾಣ ಸರ್ಕಾರವು (Telangana Government) ಮರು ತನಿಖೆಗೆ ಆದೇಶಿಸಿದೆ.

2016ರ ಜನವರಿಯಲ್ಲಿ ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ, ಈ ಪ್ರಕರಣವನ್ನು ತೆಲಂಗಾಣ ಪೊಲೀಸರು ಈಗ ಕ್ಲೋಸ್‌ ಮಾಡಿದ್ದಾರೆ. ಈ ಕುರಿತು ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿದ್ದಾರೆ. ಆಗ ಸಿಕಂದರಾಬಾದ್‌ ಸಂಸದರಾಗಿದ್ದ ಬಂಡಾರು ದತ್ತಾತ್ರೇಯ, ವಿಧಾನ ಪರಿಷತ್‌ ಸದಸ್ಯ ಎನ್‌. ರಾಮಚಂದರ್‌ ರಾವ್‌, ವಿವಿ ಕುಲಪತಿ ಅಪ್ಪಾ ರಾವ್‌, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಹಲವು ಎಬಿವಿಪಿ ನಾಯಕರಿಗೂ ತೆಲಂಗಾಣ ಪೊಲೀಸರು ಕ್ಲೀನ್‌ಚಿಟ್‌ ನೀಡಿದ್ದಾರೆ.

ರೋಹಿತ್‌ ವೇಮುಲ ಸಾವಿನ ಕುರಿತು ಮತ್ತೆ ತನಿಖೆ ನಡೆಸಲು ತೆಲಂಗಾಣ ಪೊಲೀಸ್‌ ಮಹಾ ನಿರ್ದೇಶಕ (DGP) ರವಿ ಗುಪ್ತಾ ಆದೇಶಿಸಿದ್ದಾರೆ. ಕೇಸ್‌ ಕ್ಲೋಸ್‌ ಮಾಡಿರುವ ಕುರಿತು ಪೊಲೀಸರು ಸಲ್ಲಿಸಿದ ವರದಿ ಕುರಿತು ರೋಹಿತ್‌ ವೇಮುಲನ ತಾಯಿ ಹಾಗೂ ಸಹೋದರನು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮರು ತನಿಖೆಗೆ ಆದೇಶಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ. ಅಲ್ಲದೆ, ಪ್ರಕರಣದ ಕುರಿತು ಮತ್ತೆ ತನಿಖೆ ನಡೆಸಲು ಮ್ಯಾಜಿಸ್ಟ್ರೇಟ್‌ ಅನುಮತಿಗೆ ಮನವಿಯನ್ನೂ ಸಲ್ಲಿಸಲಾಗಿದೆ.

ವರದಿಯಲ್ಲಿ ಏನಿದೆ?

“ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ವಿವಿ ಕ್ಯಾಂಪಸ್‌ನಲ್ಲಿ ಆತನ ರಾಜಕೀಯ ಚಟುವಟಿಕೆಗಳು, ಅಧ್ಯಯನದಲ್ಲಿ ಹಿನ್ನಡೆ ಸೇರಿ ಹಲವು ಕಾರಣಗಳಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರೆ ಆತ ಓದಿನಲ್ಲಿ ಹಿಂದಿರುತ್ತಾನೆ. ಇಲ್ಲವೇ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳು ಕಾರಣವಾಗಿರುತ್ತವೆ. ಇನ್ನು ರೋಹಿತ್‌ ವೇಮುಲ ಪಿಎಚ್‌.ಡಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ, ಎರಡು ವರ್ಷದ ಬಳಿಕ ಮತ್ತೊಂದು ಪಿಎಚ್‌.ಡಿ ಮಾಡಲು ಮುಂದಾಗಿದ್ದ. ಏಕೆಂದರೆ, ಆತ ಶಿಕ್ಷಣಕ್ಕಿಂತ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆತ ದಲಿತನಲ್ಲ

“ರೋಹಿತ್‌ ವೇಮುಲ ದಲಿತನಲ್ಲ” ಎಂಬುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. “ರೋಹಿತ್‌ ವೇಮುಲ ಪ್ರಮಾಣಪತ್ರಗಳು ನಕಲಿ ಆಗಿವೆ. ಆತನಿಗೆ ತಾಯಿಯು ನಕಲಿ ಪರಿಶಿಷ್ಟ ಜಾತಿ (SC) ಪ್ರಮಾಣಪತ್ರ ತಯಾರಿಸಿ ಕೊಟ್ಟಿದ್ದಾರೆ ಎಂಬುದು ಗೊತಿತ್ತು. ಇದಾದ ಬಳಿಕ ಆತನು ತನ್ನ ಘನತೆಗೆ ಧಕ್ಕೆ ಬರುತ್ತದೆ ಎಂಬುದರ ಚಿಂತೆಯಲ್ಲಿದ್ದ. ನಕಲಿ ಪ್ರಮಾಣಪತ್ರದ ಭೀತಿಯಲ್ಲಿದ್ದ ಆತನು, ಇದುವರೆಗೆ ತಾನು ಗಳಿಸಿದ ಪದವಿಗಳೆಲ್ಲ ಹಾಳಾಗುತ್ತವೆ ಎಂಬ ಚಿಂತೆ ಕಾಡುತ್ತಿತ್ತು. ಇದರಿಂದಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು” ಎಂಬುದಾಗಿ ವರದಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಏನಿದು ಪ್ರಕರಣ?

ಹೈದರಾಬಾದ್‌ನಲ್ಲಿರುವ ಸೆಂಟ್ರಲ್‌ ಯುನಿವರ್ಸಿಟಿಯ ಹಾಸ್ಟೆಲ್‌ ಕೋಣೆಯಲ್ಲಿ ರೋಹಿತ್‌ ವೇಮುಲ 2016ರ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಈತನು ದಲಿತನೆಂದು, ವಿಶ್ವವಿದ್ಯಾಲಯದಲ್ಲಿ ದಲಿತ ವಿರೋಧಿ ನೀತಿಗಳು ಇವೆ ಎಂದು, ಕೇಂದ್ರದ ಮೋದಿ ಸರ್ಕಾರವು ದಲಿತ ವಿರೋಧಿ ಎಂದೂ ಪ್ರತಿಭಟನೆ ನಡೆಸಲಾಗಿತ್ತು. ದೆಹಲಿ ಸೇರಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ರೋಹಿತ್‌ ವೇಮುಲ ಆತ್ಮಹತ್ಯೆಗೂ ಮುನ್ನ ಆತನ ಮೇಲೆ ಎಬಿವಿಪಿ ಸದಸ್ಯರು ದಾಳಿ ಮಾಡಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ದೇಶದಲ್ಲಿ ಅಸಹಿಷ್ಣುತೆ ಇದೆ, ಬಿಜೆಪಿ ಸರ್ಕಾರದ ಬಂದ ಬಳಿಕ ಹೀಗೆಲ್ಲ ಆಗುತ್ತಿದೆ, ದಲಿತ ವಿರೋಧಿ ನೀತಿಗಳನ್ನು ಅನುಸರಿಸಲಾಗುತ್ತಿದೆ ಎಂದೆಲ್ಲ ಹೇಳಲಾಗುತ್ತಿತ್ತು.

ಇದನ್ನೂ ಓದಿ: Rohith Vemula: ರೋಹಿತ್‌ ವೇಮುಲ ದಲಿತನೇ ಅಲ್ಲ ಎಂದ ಪೊಲೀಸರು; ಕೇಸ್‌ ಕ್ಲೋಸ್‌, ಸ್ಮೃತಿ ಇರಾನಿ ಸೇರಿ ಹಲವರಿಗೆ ಕ್ಲೀನ್‌ ಚಿಟ್

Continue Reading

ವಿದೇಶ

ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

ಚೀನಾದ ಶಾಂಘೈ ವಿಶ್ವವಿದ್ಯಾಲಯ ಎಸ್‌ಜೆಟಿಯು ಹಾಗೂ ಪಾಕಿಸ್ತಾನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸುಪಾರ್ಕೊ ಜತೆಗೂಡಿ ಚಂದ್ರಯಾನ ಮಿಷನ್‌ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ, ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಚೀನಾದ ನೆರವಿನಿಂದ ಮೊದಲ ಚಂದ್ರಯಾನ ಕೈಗೊಂಡಿರುವ ಪಾಕಿಸ್ತಾನವು ಭಾರತಕ್ಕಿಂತ 16 ವರ್ಷ ಹಿಂದಿದೆ ಎಂಬುದು ಸಾಬೀತಾಗಿದೆ.

VISTARANEWS.COM


on

Pakistan
Koo

ಇಸ್ಲಾಮಾಬಾದ್:‌ ಆರ್ಥಿಕವಾಗಿ ದಿವಾಳಿಯಾಗಿರುವ, ಉತ್ತಮ ನಾಯಕ ಸಿಗದೆ ಆಡಳಿತಾತ್ಮಕವಾಗಿಯೂ ಅರಾಜಕತೆಯಿಂದ ಕೂಡಿರುವ, ಉಗ್ರರ ಪೋಷಣೆಗಾಗಿ ಜಾಗತಿಕವಾಗಿ ಹಣಕಾಸು ನೆರವು ಸಿಗದೆ ಒದ್ಡಾಡುತ್ತಿರುವ ಪಾಕಿಸ್ತಾನವೀಗ (Pakistan) ಚೀನಾದ (China) ನೆರವಿನಿಂದ ಮೊದಲ ಚಂದ್ರಯಾನ (Pakistan Lunar Mission) ಕೈಗೊಂಡಿದೆ. ಚೀನಾದ ನೆರವಿನಿಂದ ಪಾಕಿಸ್ತಾನ ಕೈಗೊಂಡಿರುವ ಚಂದ್ರಯಾನವು ಚಂದ್ರನ ಮೇಲ್ಮೈ ಕುರಿತು ಅಧ್ಯಯನ ನಡೆಸಲಿದೆ ಎಂದು ತಿಳಿದುಬಂದಿದೆ.

ಸುಮಾರು 53 ದಿನಗಳವರೆಗೆ ಪಾಕಿಸ್ತಾನದ ಚಂದ್ರಯಾನದ ಉಪಗ್ರಹವು ಚಂದ್ರನ ಮೇಲ್ಮೈ ಕುರಿತು ಅಧ್ಯಯನ ಮಾಡಲಿದೆ. ಚಂದ್ರಯಾನದ ಉಡಾವಣೆ ಯಶಸ್ವಿಯಾಗುತ್ತಲೇ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ದೇಶದ ಜನರಿಗೆ ಹಾಗೂ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. “ಅಣ್ವಸ್ತ್ರದಲ್ಲಿ ಹೇಗೆ ಪಾಕಿಸ್ತಾನದ ವಿಜ್ಞಾನಿಗಳು ಪಾರಮ್ಯ ಸಾಧಿಸಿದ್ದರೋ, ಅದೇ ರೀತಿ ಬಾಹ್ಯಾಕಾಶ ಕ್ಷೇತ್ರದಲ್ಲೂ ಮೈಲುಗಲ್ಲು ಸ್ಥಾಪಿಸಿದ್ದಾರೆ. ಇದು ದೇಶವೇ ಹೆಮ್ಮೆ ಪಡುವ ವಿಚಾರವಾಗಿದೆ” ಎಂಬುದಾಗಿ ನೂತನ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚೀನಾದ ಶಾಂಘೈ ವಿಶ್ವವಿದ್ಯಾಲಯ ಎಸ್‌ಜೆಟಿಯು ಹಾಗೂ ಪಾಕಿಸ್ತಾನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸುಪಾರ್ಕೊ ಜತೆಗೂಡಿ ಚಂದ್ರಯಾನ ಮಿಷನ್‌ ಕೈಗೊಳ್ಳಲಾಗಿದೆ. ಐಕ್ಯೂಬ್‌-ಕ್ಯೂ ಸ್ಯಾಟಲೈಟ್‌ (iCube-Q Satellite) ಎರಡು ಕ್ಯಾಮೆರಾಗಳನ್ನು ಒಳಗೊಂಡಿದ್ದು, ಇವು ಚಂದ್ರನ ಮೇಲ್ಮೈ ಫೋಟೊಗಳನ್ನು ಕಳುಹಿಸಲಿವೆ. ಇದು ಚೀನಾದ ಆರನೇ ಚಂದ್ರಯಾನವಾಗಿದ್ದು, ಚಂದ್ರನ ಅಂಗಳದಲ್ಲಿರುವ ಮಣ್ಣು ಹಾಗೂ ಕಲ್ಲಿನ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸುವುದು ಪ್ರಮುಖ ಉದ್ದೇಶವಾಗಿದೆ ಎಂದು ತಿಳಿದುಬಂದಿದೆ.

ಭಾರತಕ್ಕಿಂತ ಪಾಕ್‌ 16 ವರ್ಷ ಹಿಂದೆ

ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಚೀನಾದ ನೆರವಿನಿಂದ ಮೊದಲ ಚಂದ್ರಯಾನ ಕೈಗೊಂಡಿರುವ ಪಾಕಿಸ್ತಾನವು ಭಾರತಕ್ಕಿಂತ 16 ವರ್ಷ ಹಿಂದಿದೆ ಎಂಬುದು ಸಾಬೀತಾಗಿದೆ. ಭಾರತದ ಇಸ್ರೋ 2008ರಲ್ಲಿ ಮೊದಲ ಬಾರಿಗೆ ಚಂದ್ರಯಾನ ಕೈಗೊಂಡು ಯಶಸ್ವಿಯಾಗಿತ್ತು. ಈಗ ಭಾರತವು ಮೂರನೇ ಬಾರಿ ಚಂದ್ರಯಾನ ಕೈಗೊಂಡಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಲ್ಯಾಂಡರ್‌ ಹಾಗೂ ರೋವರ್‌ಗಳನ್ನು ಸಾಫ್ಟ್‌ ಲ್ಯಾಂಡ್‌ ಮಾಡಿದ ಮೊದಲ ದೇಶ ಎಂಬ ಖ್ಯಾತಿಗೆ ಭಾಜನವಾಗಿದೆ.

ಇದನ್ನೂ ಓದಿ: Chandrayaan 3: ಚಂದ್ರಯಾನ 3 ಆಗುತ್ತಿತ್ತು ಛಿದ್ರ; ಆ 4 ಸೆಕೆಂಡ್‌ಗಳಲ್ಲೇ ಮಿಷನ್‌ ಬಚಾವ್‌ ಆಗಿದ್ದು ಹೇಗೆ?

Continue Reading

ದೇಶ

Darshanam Mogulaiah: 2 ವರ್ಷದ ಹಿಂದೆ ಪದ್ಮಶ್ರೀ ಪಡೆದ ಸಾಧಕ ಈಗ ಹೊಟ್ಟೆಪಾಡಿಗಾಗಿ ಕೂಲಿ ಕಾರ್ಮಿಕ!

Darshanam Mogulaiah: ಸಂಗೀತ ವಾದನವಾದ ಕಿನ್ನೇರವನ್ನು ನುಡಿಸುವಲ್ಲಿ, ಆ ವಾದನಕ್ಕೆ ರಾಷ್ಟ್ರೀಯ ಗೌರವ ಸಿಗುವಲ್ಲಿ ದರ್ಶನಂ ಮೊಗುಳಯ್ಯ ಅವರ ಪಾತ್ರ ನಿರ್ಣಾಯಕವಾಗಿದೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವು 2022ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅದೇ ವರ್ಷ ದೇಶಾದ್ಯಂತ ಸುದ್ದಿಯಾದ ಇವರಿಗೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನವೂ ದೊರೆತಿತ್ತು. ಆದರೆ, ಈಗ ದರ್ಶನಂ ಮೊಗುಳಯ್ಯ ಅವರು ಕೂಲಿ ಕಾರ್ಮಿಕರಾಗಿ ದುಡಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.

VISTARANEWS.COM


on

Darshanam Mogulaiah
Koo

ಹೈದರಾಬಾದ್: ಭಾರತದಲ್ಲಿ ಕಲಾವಿದರಿಗೆ, ಸಾಧಕರಿಗೆ ಒಂದೋ ಅತಿಯಾದ ಗೌರವ ಸಿಗುತ್ತದೆ. ಇಲ್ಲದಿದ್ದರೆ, ಅವರ ಜೀವನವೇ ಸಂಕಷ್ಟಕ್ಕೆ ಸಿಲುಕಿದರೂ ಅವರು ಮುಖ್ಯವಾಹಿನಿಯಲ್ಲಿ ಇರುವುದಿಲ್ಲ. ಅವರಿಗೆ ಸಹಾಯಹಸ್ತ ಚಾಚುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಎರಡು ವರ್ಷಗಳ ಹಿಂದಷ್ಟೇ ಪದ್ಮಶ್ರೀ ಪ್ರಶಸ್ತಿ (Padma Shri Award) ಪಡೆದ ತೆಲಂಗಾಣದ (Telangana) ಸಾಧಕ ದರ್ಶನಂ ಮೊಗುಳಯ್ಯ (Darshanam Mogulaiah) ಅವರು ಈಗ ಹೊಟ್ಟೆಪಾಡಿಗಾಗಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಈ ಫೋಟೊಗಳು ಹಾಗೂ ವಿಡಿಯೊಗಳು (Viral News) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಹೌದು, ಸಂಗೀತ ವಾದನವಾದ ಕಿನ್ನೇರವನ್ನು ನುಡಿಸುವಲ್ಲಿ, ಆ ವಾದನಕ್ಕೆ ರಾಷ್ಟ್ರೀಯ ಗೌರವ ಸಿಗುವಲ್ಲಿ ದರ್ಶನಂ ಮೊಗುಳಯ್ಯ ಅವರ ಪಾತ್ರ ನಿರ್ಣಾಯಕವಾಗಿದೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವು 2022ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಆಗ ರಾಷ್ಟ್ರಪತಿಯಾಗಿದ್ದ ರಾಮನಾಥ್‌ ಕೋವಿಂದ್‌ ಅವರು ದರ್ಶನಂ ಮೊಗುಳಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇದಾದ ಬಳಿಕ ಇವರು ಭಾರತದಾದ್ಯಂತ ಸುದ್ದಿಯಾಗಿದ್ದರು. ಜನರಿಂದಲೂ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿತ್ತು.

ಈಗ ದಿನಗೂಲಿ ಕಾರ್ಮಿಕ

ಪದ್ಮಶ್ರೀ ಪ್ರಶಸ್ತಿ ಪಡೆದ ದರ್ಶನಂ ಮೊಗುಳಯ್ಯ ಅವರು ಈಗ ಅಂದರೆ 73ನೇ ವಯಸ್ಸಿನಲ್ಲಿ ಹೈದರಾಬಾದ್ ಬಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬಕ್ಕೆ ಇವರೇ ಆಧಾರ ಸ್ತಂಭವಾಗಿದ್ದು, ಮೂರು ಹೊತ್ತಿನ ಊಟಕ್ಕಾಗಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ, ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬ ಸಾಧಕ ಇಳಿ ವಯಸ್ಸಿನಲ್ಲಿ ಊಟಕ್ಕಾಗಿ ಕೂಲಿ ಕೆಲಸ ಮಾಡಬೇಕಾ ಎಂದು ಜನ ಪ್ರಶ್ನಿಸಿದ್ದಾರೆ.

ಸರ್ಕಾರ ಕೊಟ್ಟ ಕೋಟಿ ರೂ. ಏನಾಯ್ತು?

ದರ್ಶನಂ ಮೊಗುಳಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡುತ್ತಲೇ ತೆಲಂಗಾಣ ಸರ್ಕಾರವು ಅವರಿಗೆ ಒಂದು ಕೋಟಿ ರೂ. ಪ್ರೋತ್ಸಾಹ ಧನ ನೀಡಿತ್ತು. ಆಗ ಸಿಎಂ ಆಗಿದ್ದ ಕೆ.ಚಂದ್ರಶೇಖರ್‌ ರಾವ್‌ ಅವರು ಇವರಿಗೆ ಒಂದು ನಿವೇಶನವನ್ನೂ ಮಂಜೂರು ಮಾಡಿದ್ದರು. ಆದರೆ, ಸರ್ಕಾರ ಕೊಟ್ಟ ಪ್ರೋತ್ಸಾಹಧನದಲ್ಲಿ ಒಂದಷ್ಟು ಹಣವನ್ನು ಮಗಳ ಮದುವೆಗೆ ಖರ್ಚು ಮಾಡಿದ ಅವರು, ಉಳಿದ ಹಣವನ್ನು ಸಾಲ ತೀರಿಸಲು, ಕುಟುಂಬದ ತುರ್ತು ಸಂದರ್ಭಗಳಿಗೆ ಬಳಸಿದ್ದಾರೆ. ಹಾಗಾಗಿ, ಅವರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ, ಇಂತಹ ಸಾಧಕನಿಗೆ ಸರ್ಕಾರವು ನೆರವು ನೀಡಬೇಕು ಎಂದು ಜನ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Lok Sabha Election: ತರಕಾರಿ ಮಾರಿ ಪದ್ಮಶ್ರೀ ಪುರಸ್ಕೃತ ಅಭ್ಯರ್ಥಿ ಚುನಾವಣೆ ಪ್ರಚಾರ! ಯಾರಿವರು?

Continue Reading
Advertisement
Rain News
ಕರ್ನಾಟಕ4 hours ago

Rain News: ಪ್ರತ್ಯೇಕ ಮಳೆ ಅವಘಡ; ಸಿಡಿಲು ಬಡಿದು ನವ ವಿವಾಹಿತ ಸಾವು, ಕಾರ್ಮಿಕನ ಸ್ಥಿತಿ ಗಂಭೀರ

ಪ್ರಮುಖ ಸುದ್ದಿ4 hours ago

IPL 2024 : ಮುಂಬೈ ವಿರುದ್ಧ ಕೆಕೆಆರ್​ಗೆ 24 ರನ್​ ಗೆಲುವು; ಪಾಂಡ್ಯಾ ಬಳಗಕ್ಕೆ ಮತ್ತೊಂದು ಆಘಾತ

Nijjar Killing
ವಿದೇಶ4 hours ago

Nijjar Killing: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಕೆನಡಾ ಪೊಲೀಸರು; ಯಾರಿವರು?

Rohith Vemula
ದೇಶ4 hours ago

Rohith Vemula: ರೋಹಿತ್‌ ವೇಮುಲ ದಲಿತನಲ್ಲ ಎಂದ ಪೊಲೀಸರು; ಮರು ತನಿಖೆಗೆ ‘ಕೈ’ ಸರ್ಕಾರ ಆದೇಶ!

Rinku Singh
ಪ್ರಮುಖ ಸುದ್ದಿ4 hours ago

Rinku Singh : ಕೊಹ್ಲಿಯ ಬ್ಯಾಟ್​ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್​!

honour killing
ವಿಜಯಪುರ5 hours ago

Honor Killing: ಮರ್ಯಾದೆಗಾಗಿ ಗರ್ಭಿಣಿಯನ್ನು ಸುಟ್ಟು ಕೊಂದ ಇಬ್ಬರಿಗೆ ಗಲ್ಲು ಶಿಕ್ಷೆ, 6 ಮಂದಿಗೆ ಜೀವಾವಧಿ‌ ಶಿಕ್ಷೆ

Pakistan
ವಿದೇಶ5 hours ago

ಚೀನಾ ದಯೆಯಿಂದ ಮೊದಲ ಚಂದ್ರಯಾನ ಕೈಗೊಂಡ ಪಾಕಿಸ್ತಾನ; ಆದರೂ ಭಾರತಕ್ಕಿಂತ 16 ವರ್ಷ ಹಿಂದೆ!

T20 World Cup
ಪ್ರಮುಖ ಸುದ್ದಿ5 hours ago

T20 World Cup : ಉನ್ಮುಕ್ತ್​ ಚಾಂದ್​ಗೆ ತೆರೆಯದ ಭಾಗ್ಯದ ಬಾಗಿಲು; ಯುಎಸ್​ ತಂಡದಲ್ಲಿ ಇಲ್ಲ ಚಾನ್ಸ್​!

Health Tips Kannada
ಆರೋಗ್ಯ5 hours ago

Health Tips Kannada : ಉತ್ತಮ ಆರೋಗ್ಯಕ್ಕಾಗಿ ಎಷ್ಟು ಗಂಟೆ ಕುಳಿತುಕೊಳ್ಳಬೇಕು, ನಿಂತುಕೊಳ್ಳಬೇಕು, ಮಲಗಬೇಕು?

Meeting with representatives of various political parties about MLC election in Hosapete
ವಿಜಯನಗರ6 hours ago

Vijayanagara News: ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆ; ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru Rains
ಮಳೆ11 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ23 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ1 day ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20246 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

ಟ್ರೆಂಡಿಂಗ್‌