IND VS AUS: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯಕ್ಕೆ ಶ್ರೇಯಸ್​ ಅಯ್ಯರ್​ ಅಲಭ್ಯ​ - Vistara News

ಕ್ರಿಕೆಟ್

IND VS AUS: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯಕ್ಕೆ ಶ್ರೇಯಸ್​ ಅಯ್ಯರ್​ ಅಲಭ್ಯ​

ಆಸ್ಟ್ರೇಲಿಯಾ(IND VS AUS) ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಸೂರ್ಯಕುಮಾರ್​ ಯಾದವ್​ ಪದಾರ್ಪಣ ಪಂದ್ಯವನ್ನಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

VISTARANEWS.COM


on

Shreyas Iyer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಆಸ್ಟ್ರೇಲಿಯಾ(IND VS AUS) ವಿರುದ್ಧದ ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್​ ಆಟಗಾರ ಶ್ರೇಯಸ್​ ಅಯ್ಯರ್​ ಮೊದಲ ಪಂದ್ಯದಿಂದ ಹೊರಬಿದ್ದಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಬೆನ್ನು ನೋವಿನ ಕಾರಣದಿಂದ ಅಯ್ಯರ್ ಅವರು ಈ ಸರಣಿಯಿಂದ ಹೊರಬಿದ್ದಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿ ವೇಳೆ ತಂಡಕ್ಕೆ ಮರಳಬಹುದೆಂದು ನಿರೀಕ್ಷಿಸಲಾಗಿತ್ತು. ಇದೀಗ ಅವರು ಆಸೀಸ್​ ವಿರುದ್ಧದ ಮೊದಲ ಪಂದ್ಯದಿಂದ ಹೊರಬಿದ್ದಿದ್ದಾರೆ.

“ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿರಯವ ಶ್ರೇಯಸ್ ಅಯ್ಯರ್ ಅವರು ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರಿಗೆ ಇನ್ನೂ ಎರಡು ವಾರಗಳ ಕಾಲ ವಿಶ್ರಾಂತಿ ಬೇಕಾಗಿದೆ. ಹೀಗಾಗಿ ಅವರು ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಎರಡನೇ ಪಂದ್ಯ ಆಡುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು” ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಟೆಸ್ಟ್​ ಪದಾರ್ಪಣೆ ನಿರೀಕ್ಷೆಯಲ್ಲಿ ಸೂರ್ಯಕುಮಾರ್​

ಮೊದಲ ಟೆಸ್ಟ್​ ಪಂದ್ಯದಿಂದ ಹೊರಬಿದ್ದ ಶ್ರೇಯಸ್​ ಅಯ್ಯರ್ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಆಡುವ ಸಾಧ್ಯತೆಯಿದೆ. ಈ ಮೂಲಕ ಅವರು ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಸೂರ್ಯಕುಮಾರ್​ ಯಾದವ್​ ದೇಶಿಯ ಕ್ರಿಕೆಟ್ ರಣಜಿ ಟೂರ್ನಿಯಲ್ಲಿ ಉತ್ತಮ ರೆಕಾರ್ಡ್​ ಹೊಂದಿದ್ದಾರೆ. ಹೀಗಾಗಿ ಅವರಿಗೆ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕರು ಅಚ್ಚರಿಯಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯ ಫೆ.9ರಿಂದ ಆರಂಭವಾಗಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

India Head Coach: ಗಂಭೀರ್‌ ಕೋಚ್​ ಆಗುವುದು ಬಹುತೇಕ ಖಚಿತ; ಕುತೂಹಲ ಮೂಡಿಸಿದ ಜಯ್‌ ಶಾ ಭೇಟಿ

India Head Coach: ಕೆಲವು ದಿನಗಳ ಹಿಂದೆ ಗೌತಮ್ ಗಂಭೀರ್ ಅವರು ತಾನು ಭಾರತದ ಮುಖ್ಯ ಕೋಚ್ ಆಗಲು ಉತ್ಸುಕನಾಗಿದ್ದೇನೆ. ಆದರೆ, ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಭರ್ತಿ ಮಾಡುವ ಮುನ್ನ ‘ಒಂದು ಷರತ್ತು’ ಇದೆ, ‘ಆಯ್ಕೆಯ ಗ್ಯಾರಂಟಿ’ ನೀಡಿದರೆ ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದೇನೆ ಎಂದಿದ್ದರು. ಇದೀಗ ಜಯ್​ ಶಾ ಅವರು ಗಂಭೀರ್​ಗೆ ಗ್ಯಾರಂಟಿ ನೀಡಿದಂತಿದೆ.

VISTARANEWS.COM


on

India Head Coach
Koo

ಮುಂಬಯಿ: ಭಾರತ ತಂಡದ ಕೋಚ್(India Head Coach)​ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಅಂತಿಮ ದಿನವಾಗಿತ್ತು. ಸದ್ಯ ಯಾರೆಲ್ಲ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಆದರೆ ಇದೀಗ, ಕೆಕೆಆರ್​ ಮೆಂಟರ್​, ಟೀಮ್​ ಇಂಡಿಯಾದ ಮಾಜಿ ಆಟಗಾರ ಗೌತಮ್​ ಗಂಭೀರ್​(Gautam Gambhir) ಜತೆ ಬಿಸಿಸಿಐ(BCCI) ಕಾರ್ಯದರ್ಶಿ ಜಯ್​ ಶಾ(Jay Shah) ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದು ಕೋಚ್​ ಹುದ್ದೆಯ ಬಗ್ಗೆಯೇ ನಡೆದಿರುವ ಚರ್ಚೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ಗೌತಮ್ ಗಂಭೀರ್ ಅವರು ತಾನು ಭಾರತದ ಮುಖ್ಯ ಕೋಚ್ ಆಗಲು ಉತ್ಸುಕನಾಗಿದ್ದೇನೆ. ಆದರೆ, ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಭರ್ತಿ ಮಾಡುವ ಮುನ್ನ ‘ಒಂದು ಷರತ್ತು’ ಇದೆ, ‘ಆಯ್ಕೆಯ ಗ್ಯಾರಂಟಿ’ ನೀಡಿದರೆ ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದೇನೆ ಎಂದಿದ್ದರು. ಇದೀಗ ಜಯ್​ ಶಾ ಅವರು ಗಂಭೀರ್​ಗೆ ಗ್ಯಾರಂಟಿ ನೀಡಿದಂತಿದೆ.

ಗಂಭೀರ್​ ಅವರು ಈ ಬಾರಿಯ ಐಪಿಎಲ್​ ಆರಂಭಕ್ಕೂ ಮುನ್ನವೇ, ತಮ್ಮ ತಂಡದ ನಾಯಕ ಮೇ 26ರಂದು ನಡೆಯುವ ಫೈನಲ್​ ಪಂದ್ಯವ ವೇಳೆ ಟಾಸ್​ಗೆ ಸಿದ್ಧರಾಗಿರಬೇಕು ಎಂದು ಹೇಳಿದ್ದರು. ಅದರಂತೆ ಕೆಕೆಆರ್​ ಫೈನಲ್​ ಪ್ರವೇಶಿಸಿ ಕಪ್​ ಕೂಡ ಗೆದ್ದಿತು. ಗಂಭೀರ್​ ತಂಡವನ್ನು ಸಿದ್ಧಪಡಿಸಿದ ರೀತಿ ಮತ್ತು ಕಪ್​ ಗೆಲ್ಲಲೇ ಬೇಕೆಂದು ಪಣ ತೊಟ್ಟಿದೆಲ್ಲ ಫಲ ನೀಡಿತು. ಅವರ ಈ ಸಾಧನೆ ಮತ್ತು ಹಠವನ್ನು ಸೂಕ್ಷವಾಗಿ ಗಮನಿಸಿದ ಬಿಸಿಸಿಐ ಭಾರತ ತಂಡ ಕೋಚ್​ ಹುದ್ದೆ ನೀಡುವ ಯೋಜನೆಯಲ್ಲಿದೆ. ಇನ್ನೊಂದು ಮೂಲಗಳ ಪ್ರಕಾರ ಗಂಭೀರ್​ ಕೋಚ್​ ಆಗುವ ದೃಷ್ಟಿಯಿಂದಲೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎನ್ನಲಾಗಿದೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಲು ಇದೇ 27ರಂದು ಕೊನೆಯ ದಿನವಾಗಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ India Head Coach: ಕೋಚ್​ ಹುದ್ದೆಗೆ ನಾನು ರೆಡಿ; ಆದರೆ ಒಂದು ಷರತ್ತು ಎಂದ ಗಂಭೀರ್​

ಆಸ್ಟ್ರೇಲಿಯಾದ ಮಾಜಿ ಆಟಗಾರರು ಭಾರತ ತಂಡದ ಕೋಚ್​ ಹುದ್ದೆಯ ಬಗ್ಗೆ ನಿರಾಸಕ್ತಿಕ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಈ ಎಲ್ಲ ಹೇಳಿಕೆಗೆ ತಿರುಗೇಟು ನೀಡಿದ್ದರು. ಭಾರತೀಯ ಕ್ರಿಕೆಟ್‌ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ನಾವು ಯಾವುದೇ ಆಸ್ಟ್ರೇಲಿಯಾದವರನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

Continue Reading

ಕ್ರೀಡೆ

Yuvraj Singh : ಅಪಾರ್ಟ್​ಮೆಂಟ್ ವಿತರಣೆಯಲ್ಲಿ ಮೋಸ, ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ನೋಟಿಸ್​ ಕೊಟ್ಟ ಯುವರಾಜ್ ಸಿಂಗ್

Yuvraj Singh : ಈ ಸಂಸ್ಥೆಗಳು ಭರವಸೆ ನೀಡಿದಂತೆ ಸ್ವಾಧೀನದ ದೃಷ್ಟಿಯಿಂದ ಯೋಜನೆಗಳ ವಿತರಣೆಯನ್ನು ಸಹ ಸರಿಯಾದ ಸಮಯದಲ್ಲಿ ಪೂರೈಸಲಾಗಿಲ್ಲ ಎಂದು ಸಿಂಗ್ ಹೇಳಿದ್ದಾರೆ. ವಿಶೇಷವೆಂದರೆ, ಮಾಜಿ ಕ್ರಿಕೆಟ್ ತಾರೆ 2020 ರಲ್ಲಿ ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿ ವಸತಿ ಘಟಕವನ್ನು ಕಾಯ್ದಿರಿಸಿದ್ದರು.

VISTARANEWS.COM


on

Yuvraj Singh
Koo

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ (Yuvraj Singh)​ ಅವರು ದೆಹಲಿ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಎರಡು ಕಾನೂನು ನೋಟಿಸ್ ನೀಡಿದ್ದಾರೆ. ಈ ಸಂಸ್ಥೆಗಳು ನಡೆಸುವ ಯೋಜನೆಗಳಿಗೆ ಮೋಸದ ಪ್ರಚಾರ ಚಟುವಟಿಕೆಗಳ ಮೂಲಕ ಗೌಪ್ಯತೆ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಸಂಸ್ಥೆಗಳು ಭರವಸೆ ನೀಡಿದಂತೆ ಸ್ವಾಧೀನದ ದೃಷ್ಟಿಯಿಂದ ಯೋಜನೆಗಳ ವಿತರಣೆಯನ್ನು ಸಹ ಸರಿಯಾದ ಸಮಯದಲ್ಲಿ ಪೂರೈಸಲಾಗಿಲ್ಲ ಎಂದು ಸಿಂಗ್ ಹೇಳಿದ್ದಾರೆ. ವಿಶೇಷವೆಂದರೆ, ಮಾಜಿ ಕ್ರಿಕೆಟ್ ತಾರೆ 2020 ರಲ್ಲಿ ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿ ವಸತಿ ಘಟಕವನ್ನು ಕಾಯ್ದಿರಿಸಿದ್ದರು. ಯುವರಾಜ್ ಸಿಂಗ್ ಅವರನ್ನು ಪ್ರತಿನಿಧಿಸುವ ರಿಜ್ವಾನ್ ಲಾ ಅಸೋಸಿಯೇಟ್ಸ್ ಎಂಬ ಕಾನೂನು ಸಂಸ್ಥೆಯು ಯೋಜನೆಯ ವಿಳಂಬದಿಂದಾಗಿ ಉಂಟಾದ ಹಾನಿಯ ಕ್ಲೇಮ್​ನೊಂದಿಗೆ ನೋಟಿಸ್ ನೀಡಿದೆ.

ಇದನ್ನೂ ಓದಿ: Kavya Maran : ಸೋತಾಗ ಕಣ್ಣೀರು ಹಾಕಿದ ಕಾವ್ಯಾ ಮಾರನ್​, ​ ಡ್ರೆಸಿಂಗ್​ ರೂಮ್​ಗೆ ತೆರಳಿ ಆಟಗಾರರನ್ನೇ ನಗಿಸಿದರು; ಇಲ್ಲಿದೆ ವಿಡಿಯೊ

ಸಿಂಗ್ ಅವರಿಗೆ ಪ್ರೀಮಿಯಂ ಗುಣಮಟ್ಟದ ಅಪಾರ್ಟ್​ಮೆಂಟ್​ ಕೊಡುವೆ ಭರವಸೆ ನೀಡಲಾಗಿತ್ತು. ಆದರೆ ರಿಯಲ್ ಎಸ್ಟೇಟ್ ಕಡಿಮೆ ಗುಣಮಟ್ಟದ ಅಪಾರ್ಟ್​​ಮೆಂಟ್​ ಮಂಜೂರು ಮಾಡುವ ಮೂಲಕ ಮೋಸ ಮಾಡಿದೆ ಎಂದು ಆರೋಪಿಸಲಾಗಿದೆ. ವಿಶೇಷವೆಂದರೆ, ಈ ಯೋಜನೆ ಮೆಸರ್ಸ್ ಉಪ್ಪಲ್ ಹೌಸಿಂಗ್ ಪ್ರೈವೇಟ್ ಲಿಮಿಟೆಡ್​ ಸೇರಿದೆ. ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಗೌಪ್ಯತೆ ಹಕ್ಕುಗಳ ಉಲ್ಲಂಘನೆಗಾಗಿ ಮೆಸರ್ಸ್ ಬ್ರಿಲಿಯಂಟ್ ಎಟೋಯಿಲ್ ಪ್ರೈವೇಟ್ ಲಿಮಿಟೆಡ್ ಎಂಬ ಮತ್ತೊಂದು ಸಂಸ್ಥೆಗೆ ಎರಡನೇ ನೋಟಿಸ್ ನೀಡಲಾಗಿದೆ.

ಈ ವಿವಾದವು ಮುಖ್ಯವಾಗಿ ವ್ಯಕ್ತಿತ್ವ ಹಕ್ಕುಗಳಿಗೆ ಸಂಬಂಧಿಸಿದಂತೆ ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆ ಮತ್ತು ಸೆಲೆಬ್ರಿಟಿಯ ಬ್ರಾಂಡ್ ಮೌಲ್ಯದ ದುರುಪಯೋಗಕ್ಕೆ ಸಂಬಂಧಿಸಿದೆ.

ಒಪ್ಪಂದವು ಕಳೆದ ವರ್ಷ ನವೆಂಬರ ನಲ್ಲಿ ಮುಕ್ತಾಯಗೊಂಡಿತ್ತು

ರಿಯಲ್ ಎಸ್ಟೇಟ್ ಸಂಸ್ಥೆ ಕೈಗೊಂಡ ಯೋಜನೆಗಳ ಪ್ರಚಾರ ಮತ್ತು ಅನುಮೋದನೆಗೆ ಸಂಬಂಧಿಸಿದಂತೆ ಸಂಬಂಧಿತ ಪಕ್ಷಗಳು ತಿಳಿವಳಿಕೆ ಒಪ್ಪಂದಕ್ಕೆ (ತಿಳಿವಳಿಕೆ ಒಪ್ಪಂದ) ಸಹಿ ಹಾಕಿರುವುದು ಅತ್ಯಗತ್ಯ. ಆದಾಗ್ಯೂ, ಈ ತಿಳಿವಳಿಕೆ ಒಪ್ಪಂದವು ಕಳೆದ ವರ್ಷ ನವೆಂಬರ್ 23 ರಂದು ಕೊನೆಗೊಂಡಿತು. ಅದರ ಹೊರತಾಗಿಯೂ, ಸಂಸ್ಥೆಯು ಯುವರಾಜ್ ಸಿಂಗ್ ಅವರ ಹೆಸರನ್ನು ಬಿಲ್ಬೋರ್ಡ್ ಜಾಹೀರಾತುಗಳ ಮೂಲಕ ಮತ್ತು ಯೋಜನಾ ಸ್ಥಳದಲ್ಲಿ ಬಳಸುವುದನ್ನು ಮುಂದುವರಿಸಿತ್ತು.

ಸಂಸ್ಥೆಯು ಸುದ್ದಿ ಲೇಖನಗಳ ಜೊತೆಗೆ ಅವರ ವ್ಯಕ್ತಿತ್ವವನ್ನು ತಮ್ಮ ಸಾಮಾಜಿಕ ಮಾಧ್ಯಮ ಅಭಿಯಾನಗಳಲ್ಲಿ ಬಳಸುವ ಮೂಲಕ ಉಲ್ಲಂಘನೆ ಮುಂದುವರಿಸಿತ್ತು. ಇದರಿಂದಾಗಿ ಕೃತಿಸ್ವಾಮ್ಯ, ಪ್ರಚಾರದ ಹಕ್ಕು ಮತ್ತು ವ್ಯಕ್ತಿತ್ವದ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಯುವರಾಜ್ ಸಿಂಗ್ ಆರೋಪಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Kavya Maran : ಸೋತಾಗ ಕಣ್ಣೀರು ಹಾಕಿದ ಕಾವ್ಯಾ ಮಾರನ್​, ​ ಡ್ರೆಸಿಂಗ್​ ರೂಮ್​ಗೆ ತೆರಳಿ ಆಟಗಾರರನ್ನೇ ನಗಿಸಿದರು; ಇಲ್ಲಿದೆ ವಿಡಿಯೊ

Kavya Maran: ಈ ಋತುವಿನಲ್ಲಿ ಎಲ್ಲಾ ಬ್ಯಾಟಿಂಗ್ ದಾಖಲೆಗಳನ್ನು ಮುರಿದ ರೀತಿಗೆ ನಿಜವಾಗಿಯೂ ಹೆಮ್ಮೆಯಿದೆ ಎಂದು ಕಾವ್ಯಾ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಐಪಿಎಲ್ 2023 ರಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದ ನಂತರ ಫೈನಲ್ ತಲುಪಿದ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡಕ್ಕೆ ಅವರು ತಮ್ಮ ಭಾಷಣದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

VISTARANEWS.COM


on

Kavya Maran
Koo

ಚೆನ್ನೈ: ಐಪಿಎಲ್ 2024ರ (IPL 2024) ಆವೃತ್ತಿಯ ಫೈನಲ್​​ನಲ್ಲಿ ಕೆಕೆಆರ್ ವಿರುದ್ಧದ ಸೋಲಿನ ನಂತರ ಎಸ್​ಆರ್​ಎಚ್​ ತಂಡದ ಮಾಲೀಕರಾದ ಕಾವ್ಯಾ ಮಾರನ್​ (Kavya Maran) ಸ್ಟೇಡಿಯಮ್​ನಲ್ಲಿ ಕುಳಿತು ಕಣ್ಣೀರು ಹಾಕಿದ್ದರು. ಅದರೆ, ಆ ಬಳಿಕ ಅವರು ತಂಡದ ಡ್ರೆಸಿಂಗ್ ರೂಮ್​ಗೆ ತೆರಳಿ ಮಾತನಾಡಿ ಆಟಗಾರರನ್ನು ನಗಿಸಿದರು. ಈ ವೇಳೆ ಅವರು ಪ್ರೋತ್ಸಾಹಭರಿತ ಮಾತುಗಳನ್ನು ಆಡಿದರು. ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ತಂಡ ಹೀನಾಯ ಸೋಲನುಭವಿಸಿತ್ತು. ಇದು ಅಭಿಮಾನಿಗಳ ಮತ್ತು ಮಾಲೀಕರ ಹೃದಯವನ್ನು ಕಲ್ಲಾಗಿಸಿತ್ತು. ಆದಾಗ್ಯೂ ಕಾವ್ಯಾ ಅವರು ಡ್ರೆಸಿಂಗ್ ರೂಮ್​ಗೆ ಹೋಗಿ ಆಟಗಾರರ ಬಗ್ಗೆ ಅಭಿಮಾನದ ಮಾತುಗಳನ್ನು ಆಡಿದ್ದರು. ಫ್ರಾಂಚೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಕಾವ್ಯಾ ಅವರ ಹೃದಯಸ್ಪರ್ಶಿ ಮಾತುಗಳ ವೀಡಿಯೊವನ್ನು ಪೋಸ್ಟ್ ಮಾಡಿದೆ.

ಈ ಋತುವಿನಲ್ಲಿ ಎಲ್ಲಾ ಬ್ಯಾಟಿಂಗ್ ದಾಖಲೆಗಳನ್ನು ಮುರಿದ ರೀತಿಗೆ ನಿಜವಾಗಿಯೂ ಹೆಮ್ಮೆಯಿದೆ ಎಂದು ಕಾವ್ಯಾ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಐಪಿಎಲ್ 2023 ರಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದ ನಂತರ ಫೈನಲ್ ತಲುಪಿದ ಪ್ಯಾಟ್ ಕಮಿನ್ಸ್ ನೇತೃತ್ವದ ತಂಡಕ್ಕೆ ಅವರು ತಮ್ಮ ಭಾಷಣದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: IPL 2024 : ಇದು ಕಾಕತಾಳಿಯವೇ? ಐಪಿಎಲ್ ಮತ್ತು ಡಬ್ಲ್ಯುಪಿಎಲ್​ ಫೈನಲ್ ರಿಸಲ್ಟ್​​ನಲ್ಲಿದೆ ಸಾಮ್ಯತೆ

ನೀವೆಲ್ಲರೂ ನಮ್ಮನ್ನು ತುಂಬಾ ಹೆಮ್ಮೆಪಡುವಂತೆ ಮಾಡಿದ್ದೀರಿ. ನಾನು ಇಲ್ಲಿಗೆ ಬಂದು ಅದನ್ನು ನಿಮಗೆ ಹೇಳಬೇಕಾಗಿತ್ತು. ಅಂದರೆ ನಾವು ಟಿ 20 ಕ್ರಿಕೆಟ್ ಆಡುವ ವಿಧಾನವನ್ನು ನೀವು ಮರು ವ್ಯಾಖ್ಯಾನಿಸಿದ್ದೀರಿ ಮತ್ತು ಎಲ್ಲರೂ ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ನಿಜವಾಗಿಯೂ ನೀವು ಉತ್ತಮ ಕೆಲಸ ಮಾಡಿದ್ದೀರಿ” ಎಂದು ಕಾವ್ಯಾ ಹೇಳಿದ್ದಾರೆ.

ಕಳೆದ ವರ್ಷ ನಾವು ಕೊನೆಯ ಸ್ಥಾನವನ್ನು ಪಡೆದಿದ್ದರೂ, ನಿಮ್ಮಲ್ಲಿರುವ ಸಾಮರ್ಥ್ಯದಿಂದಾಗಿ ನಾವು ಗಮನ ಸೆಳೆದಿದ್ದೇವೆ. ಎಲ್ಲರೂ ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಕೆಕೆಆರ್ ಗೆದ್ದರೂ, ಎಲ್ಲರೂ ನಾವು ಆಡಿದ ಕ್ರಿಕೆಟ್ ಶೈಲಿಯ ಬಗ್ಗೆ ಮಾತನಾಡಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ಧನ್ಯವಾದಗಳು ಆಟಗಾರರೆ ಕಾಳಜಿ ವಹಿಸಿ. ನಾವು ಫೈನಲ್ ಆಡಿದ್ದೇವೆ, ಇದು ದೊಡ್ಡ ಪಂದ್ಯವೇ . ನನ್ನ ಪ್ರಕಾರ ಇತರ ಎಲ್ಲಾ ತಂಡಗಳು ಇಂದು ರಾತ್ರಿ ನಮ್ಮನ್ನು ನೋಡಿವೆ. ಧನ್ಯವಾದಗಳು, ನಾನು ಶೀಘ್ರದಲ್ಲೇ ನಿಮಗೆ ಸಿಗುತ್ತೇನೆ ಎಂದು ಕಾವ್ಯಾ ಹೇಳಿದ್ದಾರೆ.

ಎಸ್​ಆರ್​ಎಚ್​ಗೆ ದುಸ್ವಪ್ನ


ಕಾವ್ಯಾ ಅವರು ಭುಜಗಳನ್ನು ಕುಲುಕಿ ಹೊರಟು ನಿಂತಾಗ ತಂಡದ ಪ್ರತಿಯೊಬ್ಬರ ಮುಖದಲ್ಲಿ ನಗುವಿದೆ ಎಂದು ಖಚಿತಪಡಿಸಿಕೊಂಡರು. ಫೈನಲ್​ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋತಾಗ ತಂಡದ ಮಾಲೀಕರು ಕಣ್ಣೀರಿಟ್ಟಿದ್ದರು. ಯಾವಾಗಲೂ ಬೆಂಬಲಿಸುವ ಫ್ರ್ಯಾಂಚೈಸಿ ಮಾಲೀಕರಾಗಿ, ಕಾವ್ಯಾ ಕ್ರೀಡಾಂಗಣಗಳಾದ್ಯಂತ ಪ್ರತಿಯೊಂದು ಪಂದ್ಯದಲ್ಲೂ ತನ್ನ ತಂಡವನ್ನು ಬೆಂಬಲಿಸಿದ್ದರು.

Continue Reading

ಪ್ರಮುಖ ಸುದ್ದಿ

IPL 2024 : ಇದು ಕಾಕತಾಳಿಯವೇ? ಐಪಿಎಲ್ ಮತ್ತು ಡಬ್ಲ್ಯುಪಿಎಲ್​ ಫೈನಲ್ ರಿಸಲ್ಟ್​​ನಲ್ಲಿದೆ ಸಾಮ್ಯತೆ

IPL 2024: ಈ ವರ್ಷದ ಆರಂಭದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಸೋಲಿಸುವ ಮೂಲಕ ಡಬ್ಲ್ಯುಪಿಎಲ್​​ನ ಎರಡನೇ ಆವೃತ್ತಿಯನ್ನು ಗೆದ್ದುಕೊಂಡಿತು.

VISTARANEWS.COM


on

IPL 2024
Koo

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL 2024) 2024 ಫೈನಲ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 2024 ಫೈನಲ್ ನಡುವಿನ ಕೆಲವು ವಿಲಕ್ಷಣ ಹೋಲಿಕೆಗಳು ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೆ ಒಳಪಡಿಸಿವೆ. ಪ್ಯಾಟ್ ಕಮಿನ್ಸ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಕೋಲ್ಕತಾ ನೈಟ್ ರೈಡರ್ಸ್ (KKR) ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಸೋಲಿಸುವ ಮೂಲಕ ಡಬ್ಲ್ಯುಪಿಎಲ್​​ನ ಎರಡನೇ ಆವೃತ್ತಿಯನ್ನು ಗೆದ್ದುಕೊಂಡಿತು.

ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ 18.3 ಓವರ್​ಗಳಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ತಂಡವನ್ನು 113 ರನ್​ ಗಳಿಗೆ ಆಲೌಟ್ ಮಾಡಿತ್ತು. ಏತನ್ಮಧ್ಯೆ, ಸ್ಮೃತಿ ಮಂದಾನ ನೇತೃತ್ವದ ಆರ್ಸಿಬಿ ಕೂಡ ಮಾರ್ಚ್ 17 ರಂದು ಅಷ್ಟೇ ಓವರ್​​ಗಳಲ್ಲಿ ಡೆಲ್ಲಿ ತಂಡವನ್ನು ಅದೇ ಮೊತ್ತಕ್ಕೆ ಕಟ್ಟಿಹಾಕಿತ್ತು. ಇದು ಎರಡು ಫೈನಲ್ ಗಳ ನಡುವಿನ ಪ್ರಮುಖ ಹೋಲಿಕೆಗಳಲ್ಲಿ ಒಂದಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಡಬ್ಲ್ಯುಪಿಎಲ್​ ಮತ್ತು ಐಪಿಎಲ್​ನಲ್ಲಿ ಸೋತ ಎಸ್ಆರ್​ಎಚ್​ ಮತ್ತು ಡಿಸಿ ತಂಡ ನಾಯಕರು ಆಸ್ಟ್ರೇಲಿಯಾದ ಕ್ರಿಕೆಟಿಗರು. ಅವರೆಂದರೆ ಎಸ್​ಆರ್​ಎಚ್​ ತಂಡ ಪ್ಯಾಟ್​ ಕಮಿನ್ಸ್ ಮತ್ತು ಡಿಸಿ ಮಹಿಳಾ ತಂಡ ಮೆಗ್​ ಲ್ಯಾನಿಂಗ್. ಮುಂದುವರಿಂತೆ ಈ ಇಬ್ಬರೂ ಅದಕ್ಕಿಂತ ಹಿಂದೆ ಐಸಿಸಿ ಟೂರ್ನಿಗಳಲ್ಲಿ (ವಿಶ್ವ ಕಪ್​, ಟೆಸ್ಟ್ ಚಾಂಪಿಯನ್​ಷಿಪ್​​) ಭಾರತ ತಂಡವನ್ನು ಸೋಲಿಸಿದ್ದರು. ಕಮಿನ್ಸ್ 2023 ರ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್​​ನಲ್ಲಿ ಹಾಗೂ 2023 ರ ಏಕದಿನ ವಿಶ್ವಕಪ್ ಫೈನಲ್​​ನಲ್ಲಿ ಭಾರತ ತಂಡವನ್ನು ಸೋಲಿಸಿದ್ದರು. ಲ್ಯಾನಿಂಗ್ ಆಸ್ಟ್ರೇಲಿಯಾದ ಮಹಿಳಾ ತಂಡವನ್ನು 2022 ರ ಟಿ 20 ಮಹಿಳಾ ವಿಶ್ವಕಪ್ ಫೈನಲ್ ಪ್ರಶಸ್ತಿಗೆ ಕೊಂಡೊಯ್ದಿದ್ದರು. ಅಲ್ಲಿ ಭಾರತ ಸೋತಿತ್ತು . ಇದೀಗ ಭಾರತೀಯ ನಾಯಕರು ಆ ಆಸ್ಟ್ರೇಲಿಯನ್ ಆಟಗಾರರ ನಾಯಕತ್ವದ ತಂಡವನ್ನು ಮಣಿಸಿದ್ದಾರೆ. ಶ್ರೇಯಸ್​ ಅಯ್ಯರ್​ ಪ್ಯಾಟ್​ ಕಮಿನ್ಸ್ ನೇತೃತ್ವದ ಎಸ್​ಆರ್​ಎಚ್​ ತಂಡವನ್ನು ಸೋಲಿಸಿದರೆ, ಸ್ಮೃತಿ ಮಂಧಾನ ಅವರು ಆರ್​ಸಿಬಿ ಮೂಲಕ ಮೆಗ್​ ಲ್ಯಾನಿಂಗ್ ಅವರನ್ನು ಮಣಿಸಿದ್ದರು.

ಕೆಕೆಆರ್ ಬೌಲರ್​ಗಳಿಗೆ ಭರ್ಜರಿ ಖಷಿ

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮಿಚೆಲ್ ಸ್ಟಾರ್ಕ್ ಮತ್ತು ವೈಭವ್ ಅರೋರಾ ಪವರ್​ಪ್ಲೇನಲ್ಲಿ ತಲಾ ಮೂರು ಓವರ್​ಗಳನ್ನು ಎಸೆದು ಎಸ್​ಆರ್​ಎಚ್ ತಂಡ ಮೂರು ವಿಕೆಟ್​ಗಳನ್ನು ಪಡೆದರು. ಆರೆಂಜ್ ಆರ್ಮಿ 18.3 ಓವರ್​ಗಳಲ್ಲಿ 113 ರನ್​ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಆ್ಯಂಡ್ರೆ ರಸೆಲ್ 3 ವಿಕೆಟ್ ಕಿತ್ತರೆ, ಸ್ಟಾರ್ಕ್ ಹಾಗೂ ಹರ್ಷಿತ್ ರಾಣಾ ತಲಾ 2 ವಿಕೆಟ್ ಪಡೆದರು.

ಇದನ್ನೂ ಓದಿ: Virat Kohli: ಐಪಿಎಲ್​ 2024ರ ಸಾಧನೆ ಕುರಿತು ಹೇಳಿಕೆ ನೀಡಿದ ವಿರಾಟ್ ಕೊಹ್ಲಿ

ಉತ್ತರವಾಗಿ ಆಡಿದ ಕೆಕೆಆರ್ ಪರ ಸುನಿಲ್ ನರೈನ್ ಬೇಗನೆ ನಿರ್ಗಮಿಸಿದರು. ಆದರೆ ವೆಂಕಟೇಶ್ ಅಯ್ಯರ್ (26 ಎಸೆತಗಳಲ್ಲಿ 52* ರನ್) ಮತ್ತು ರಹಮಾನುಲ್ಲಾ ಗುರ್ಬಾಜ್ (32 ಎಸೆತಗಳಲ್ಲಿ 39 ರನ್) 45 ಎಸೆತಗಳಲ್ಲಿ 91 ರನ್​ಗಳ ಜೊತೆಯಾಟವನ್ನು ನೀಡಿದರು. ನಂತರ, ಶ್ರೇಯಸ್ ಅಯ್ಯರ್ ಮಧ್ಯದಲ್ಲಿ ವೆಂಕಟೇಶ್ ಅವರೊಂದಿಗೆ ಸೇರಿಕೊಂಡರು ಪಂದ್ಯವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಕೆಕೆಆರ್ 57 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

Continue Reading
Advertisement
India Head Coach
ಕ್ರೀಡೆ22 mins ago

India Head Coach: ಗಂಭೀರ್‌ ಕೋಚ್​ ಆಗುವುದು ಬಹುತೇಕ ಖಚಿತ; ಕುತೂಹಲ ಮೂಡಿಸಿದ ಜಯ್‌ ಶಾ ಭೇಟಿ

hindalaga jail assault case
ಕ್ರೈಂ40 mins ago

Assault Case: ಹಿಂಡಲಗಾ ಜೈಲಿನಲ್ಲಿ ಕೈದಿಯಿಂದಲೇ ಮಾರಣಾಂತಿಕ ಹಲ್ಲೆ; ಭಯದಲ್ಲಿ ಬದುಕುತ್ತಿರುವ ಸಿಬ್ಬಂದಿ!

Viral Video
ವೈರಲ್ ನ್ಯೂಸ್41 mins ago

Viral Video: ನಡು ರಸ್ತೆಯಲ್ಲಿ ಪಿಸ್ತೂಲ್‌ ತೋರಿಸಿ ವ್ಯಕ್ತಿ ಮೇಲೆ ಹಲ್ಲೆ; ಅಂತಾರಾಷ್ಟ್ರೀಯ ಮಟ್ಟದ ಶೂಟರ್‌ನಿಂದ ದಾಂಧಲೆ

swagat babu no more
ಸಿನಿಮಾ1 hour ago

Swagat Babu: ಕನ್ನಡ ಚಲನಚಿತ್ರ ನಿರ್ಮಾಪಕ ಸ್ವಾಗತ್ ಬಾಬು ಇನ್ನಿಲ್ಲ

Porsche car accident ವಿಸ್ತಾರ ಸಂಪಾದಕೀಯ
ಪ್ರಮುಖ ಸುದ್ದಿ1 hour ago

ವಿಸ್ತಾರ ಸಂಪಾದಕೀಯ: ಕುಡುಕ ಬಾಲಕನಿಂದ ಅಪಘಾತ ಪ್ರಕರಣ; ಪುಣೆ ಪೊಲೀಸರ ದಿಟ್ಟ ಕ್ರಮ ಶ್ಲಾಘನೀಯ

Cooking In An Iron Pot
ಆರೋಗ್ಯ2 hours ago

Cooking In An Iron Pot: ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವುದು ಒಳ್ಳೆಯದು! ಯಾಕೆ ಗೊತ್ತೇ?

karnataka weather Forecast
ಮಳೆ2 hours ago

Karnataka Weather : ಕರಾವಳಿ, ಮಲೆನಾಡಲ್ಲಿ ಗುಡುಗು, ಮಿಂಚು; ಒಳನಾಡಿನಲ್ಲಿ ಸಾಧಾರಣ ಮಳೆ

Which Type Of Roti Is Best
ಆಹಾರ/ಅಡುಗೆ3 hours ago

Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಹೊರ ಬರುತ್ತೀರಿ

Vijayapura news
ಪ್ರಮುಖ ಸುದ್ದಿ9 hours ago

Vijayapura News : ಪ್ರೀತಿಸಿದವಳನ್ನೇ ಮದುವೆಯಾಗಲು ಯುವಕನ ಹಠ; ಪರಸ್ಪರ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದರು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ15 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು7 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು7 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌