Travel Tips: ಬ್ಲೂ ಸರ್ಟೀಫಿಕೆಟ್‌ ಪಡೆದ ನೀಲಿ ಹಸಿರ ಸ್ವಚ್ಛ ಸುಂದರ ನಮ್ಮ ಕಡಲ ಕಿನಾರೆಗಳಿವು! ರಾಜ್ಯದ್ದೂ ಇವೆ! Vistara News
Connect with us

ಪ್ರವಾಸ

Travel Tips: ಬ್ಲೂ ಸರ್ಟೀಫಿಕೆಟ್‌ ಪಡೆದ ನೀಲಿ ಹಸಿರ ಸ್ವಚ್ಛ ಸುಂದರ ನಮ್ಮ ಕಡಲ ಕಿನಾರೆಗಳಿವು! ರಾಜ್ಯದ್ದೂ ಇವೆ!

ಚಂದನೆಯ ನೀಲಿಹಸಿರು ಸಮುದ್ರ ತೀರಗಳು ಭಾರತದಲ್ಲಿ ಸಿಗುವುದು ಅತ್ಯಪೂರ್ವ. ಆದರೂ ನಮ್ಮ ದೇಶದಲ್ಲೂ ಸುಂದರ, ಶಾಂತವಾಗಿರುವ ಕಡಲ ತೀರಗಳೂ ಇವೆ. ಈ ಕೆಳಗಿನ 12 ಕಡಲ ತೀರಗಳಿಗೆ ಅಂಥ ಮಾನ್ಯತೆಯಾದ ಬ್ಲೂ ಸರ್ಟಿಫಿಕೇಶನ್‌ ಕೂಡಾ ದೊರಕಿದೆ. ಹಾಗಾದರೆ, ಆ ಸಮುದ್ರ ತೀರಗಳ್ಯಾವುವು ಎಂಬುದನ್ನು ನೋಡೋಣ.

VISTARANEWS.COM


on

kudle beach
Koo

ಸಮುದ್ರ ತೀರಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಆದರೆ ಬಹಳಷ್ಟು ಸಾರಿ ಸಮುದ್ರ ತೀರಗಳಲ್ಲಿ ಅಲೆದಾಡಲು ಹೊರಟರೆ ಸುತ್ತಮುತ್ತ ಕಸದ ರಾಶಿ, ದುರ್ನಾತ ಬೀರುವ ಮರಳ ದಂಡೆಗಳು ಸುಖಕ್ಕಿಂತ ತೊಂದರೆ ಅನುಭವಿಸುವುದೇ ಹೆಚ್ಚು. ಸ್ವಚ್ಛವಾಗಿರುವ ಸಮುದ್ರ ತೀರಗಳನ್ನು ಭಾರತದಲ್ಲಿ ಹುಡುಕುವುದು (beach tourism) ಕಷ್ಟ ಅನಿಸಿರಬಹುದು. ಪೋಸ್ಟರಿನ ಚಿತ್ರಗಳಂತೆ ಕಾಣುವ ನೀಲಿ ಹಸಿರು ಸಮುದ್ರ ತೀರಗಳನ್ನು ನೋಡಬೇಕೆಂದರೆ ವಿದೇಶಕ್ಕೇ ಹೋಗಬೇಕು ಎಂಬ ಕಲ್ಪನೆ ಬಹಳಷ್ಟು ಮಂದಿಗಿದೆ. ಯಾಕೆಂದರೆ, ಅಂಥಾ ಚಂದನೆಯ ನೀಲಿಹಸಿರು ಸಮುದ್ರ ತೀರಗಳು ಭಾರತದಲ್ಲಿ ಸಿಗುವುದು ಅತ್ಯಪೂರ್ವ. ಆದರೂ, ಹುಡುಕಿದರೆ, ಒಂದಿಷ್ಟು ಮಾಹಿತಿ ಕೆದಕಿದರೆ, ನಮ್ಮ ದೇಶದಲ್ಲೂ ಸುಂದರ, ಶಾಂತವಾಗಿರುವ ಪೋಸ್ಟರ್‌ ಪರ್ಫೆಕ್ಟ್‌ ಎನಿಸುವ ಕಡಲ ತೀರಗಳೂ ಇವೆ. ಈ ಕೆಳಗಿನ 12 ಕಡಲ ತೀರಗಳಿಗೆ ಅಂಥ ಮಾನ್ಯತೆಯಾದ ಬ್ಲೂ ಸರ್ಟಿಫಿಕೇಶನ್‌ ಕೂಡಾ ದೊರಕಿದೆ. ಹಾಗಾದರೆ, ಆ ಸಮುದ್ರ ತೀರಗಳ್ಯಾವುವು ಎಂಬುದನ್ನು ನೋಡೋಣ.

ghogla
ಘೋಗ್ಲಾ ಬೀಷ್‌

1. ಘೋಗ್ಲಾ, ದಿಯು: ಎಲ್ಲ ಮರೆತು ದಂಡೆಗಪ್ಪಳಿಸುವ ಅಲೆಗಳನ್ನೇ ಕೂತು ನೋಡುತ್ತಿರಬೇಕು, ಯಾರ ತೊಂದರೆಯೂ ಬೇಡ ಎಂದೆನಿಸುವ ಜೀವಗಳಿಗಿದು ಹೇಳಿ ಮಾಡಿಸಿದ ಬೀಚ್‌. ಶಾಂತ ಸುಂದರ ಸ್ವಚ್ಛ ಸಮುದ್ರ ತೀರವೆಂದರೆ ಇದು. ನೀವು ಕೊಂಚ ಸಾಹಸೀಪ್ರಿಯರಾಗಿದ್ದರೆ, ಇಲ್ಲಿ ಬನಾನಾ ಬೋಟ್‌ನಿಂದ ಹಿಡಿದು ಪಾರಾಸೈಲಿಂಗ್‌ವರೆಗೂ ಹಲವಾರು ಚಟುವಟಿಕೆಗಳನ್ನಿಲ್ಲಿ ಟ್ರೈ ಮಾಡಬಹುದು.

shivarajpur
ಶಿವರಾಜ್‌ಪುರ ಬೀಚ್

2. ಶಿವರಾಜಪುರ, ದ್ವಾರಕಾ, ಗುಜರಾತ್‌: ಗುಜರಾತಿನಲ್ಲಿರುವ ಕೃಷ್ಣನೂರು ದ್ವಾರಕೆಗೆ ಹೋಗುವ ಮನಸ್ಸಾಗಿದ್ದರೆ ಚಂದದೊಂದು ಸಮುದ್ರ ತೀರದಲ್ಲಿ ಒಮ್ಮೆ ಕೂತು ಕೃಷ್ಣನನ್ನು ನೆನೆಯಬೇಕೆನ್ನಿಸಿದರೆ, ಶಿವರಾಜಪುರದ ಬೀಚಿಗೊಮ್ಮೆ ಹೋಗಬೇಕು. ಇದು ರುಕ್ಮಿಣಿ ಮಂದಿರದಿಂದ ೧೫ ನಿಮಿಷ ಉತ್ತರಕ್ಕೆ ಪ್ರಯಾಣಿಸಿದರೆ ಸಿಗುತ್ತದೆ. ಮೆತ್ತನೆಯ ಮರಳು, ಚಂದನೆಯ ಗಾಢ ನೀಲಿ ಕಡಲು, ಸ್ವಚ್ಛ ಪರಿಸರ, ಒಂದು ಲೈಟ್‌ಹೌಸ್‌, ಕಲ್ಲು ಬಂಡೆಗಳು ʻಆಹಾ, ಇದಷ್ಟೇ ಬೇಕಿತ್ತುʼ ಎನಿಸುವಂತೆ ಮಾಡುತ್ತದೆ.

3. ರಾಧಾನಗರ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು: ಅಂಡಮಾನಿನ ಹ್ಯಾವ್ಲಾಕ್‌ ದ್ವೀಪದ ರಾಧಾನಗರ ಬೀಚ್‌ ಜಗತ್ತಿನ ಅತ್ಯಂತ ಸುಂದರ ಕಡಲ ಕಿನಾರೆಗಳ ಪೈಕಿ ೧೬ನೇ ಸ್ಥಾನದಲ್ಲಿದೆ. ಏಷ್ಯಾದ ಅತ್ಯಂತ ಸುಂದರ ಬೀಚ್‌ಗಳಲ್ಲಿ ಇದೂ ಒಂದು. ಪೋಸ್ಟ್‌ಕಾರ್ಡ್‌ ಚಿತ್ರದಲ್ಲಿರುವ ನಮ್ಮ ಕನಸಿನಲ್ಲಿ ಬಂದ ಚೆಂದನೆಯ ಹಸಿರು ಬಣ್ಣದ ಸ್ಪಟಿಕ ಶುದ್ಧ ನೀರಿನ, ʻಆಹಾʼ ಎನಿಸುವ ಮಧುರಾನುಭೂತಿ ನೀಡುವ ಸಮುದ್ರ ತೀರವಿದು. ಜಗತ್ಪ್ರಸಿದ್ಧ ಕಡಲತೀರವಾದರೂ ಈ ತೀರದ ಸುತ್ತಲೂ ಇರುವ ಮಳೆಕಾಡುಗಳು ಈ ಪರಿಸರವನ್ನೂ ಇನ್ನೂ ರಮ್ಯವಾಗಿಸಿ, ಹೊಸ ಜೋಡಿಗಳಿಗೆ ಬೆಸ್ಟ್‌ ಎನಿಸುವ ಹನಿಮೂನ್‌ ತಾಣವಾಗಿಸಿರುವುದು ಸುಳ್ಳಲ್ಲ. ಸಾಹಸೀಪ್ರಿಯರಿಗೂ ಹೇಳಿ ಮಾಡಿಸಿದ ಚಟುವಟಿಕೆಗಳು ಇಲ್ಲಿ ಲಭ್ಯ.

ಪಡುಬಿದ್ರಿ ಬೀಚ್

4. ಪಡುಬಿದ್ರಿ, ಕರ್ನಾಟಕ: ಗಾಢ ನೀಲಿ ಬಣ್ಣದ ಚೆಂದನೆಯ ಬೀಚ್‌ ಇದು. ನಮ್ಮದೇ ರಾಜ್ಯದ ಉಡುಪಿ ಪಡುಬಿದ್ರಿಯ ಈ ಬೀಚ್‌ ಅಷ್ಟಾಗಿ ಜನಜಂಗುಳಿಯಿಲ್ಲದ, ಶಾಂತವಾದ, ಎಲ್ಲವೂ ಅಚ್ಚುಕಟ್ಟಾಗಿ ಇರುವ ಸಮುದ್ರ ತೀರ.

kasarakod beach
ಕಾಸರಕೋಡ್‌ ಬೀಚ್

5. ಕಾಸರ್ಕೋಡ್‌, ಕರ್ನಾಟಕ: ಚಂದನೆಯ ಗಾಳಿ ಮರದ ತೋಪಿನ ಸಮುದ್ರ ತೀರವಾಗಿರುವ ಇದು ಇರುವುದು ನಮ್ಮ ರಾಜ್ಯದ ಹೊನ್ನಾವರದ ಬಳಿ. ಇಲ್ಲಿರುವ ಲೈಟ್‌ಹೌಸ್‌, ನಡೆಯಬೇಕೆನಿಸಿದಷ್ಟೂ ನಡೆಯಲು ಮರಳ ತೀರ, ಬೋಟಿಂಗ್‌, ಮಕ್ಕಳಿಗಾಗಿ ಪಾರ್ಕ್‌ ಹೀಗೆ ಸಮುದ್ರ ತೀರವೊಂದರಲ್ಲಿ ಎಲ್ಲ ವಯಸ್ಸಿನವರು ಬಯಸುವ ಎಲ್ಲವೂ ಇಲ್ಲಿದೆ.

ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!

6. ಋಷಿಕೊಂಡ, ಆಂಧ್ರಪ್ರದೇಶ: ಚಂದನೆಯ ಹಸಿರರಾಶಿಯ, ಬೆಟ್ಟಗುಡ್ಡಗಳ ದೃಶ್ಯಗಳನ್ನು ಸಮುದ್ರ ತೀರದಿಂದಲೂ ಕಣ್ತುಂಬಿಕೊಳ್ಳಬಹುದೆಂದರೆ ಅದಕ್ಕೆ ಋಷಿಕೊಂಡಕ್ಕೆ ಬರಬೇಕು. ಇದು ವಿಶಾಖಪಟ್ಟಣದ ಚಂದನೆಯ ಸಮುದ್ರ ತೀರ. ವಾಟರ್‌ ಸ್ಕೀಯಿಂಗ್‌, ವಿಂಡ್‌ ಸರ್ಫಿಂಗ್‌, ಈಜು ಮತ್ತಿತರ ಸಾಹಸೀಕ್ರೀಡೆಗಳನ್ನೂ ಇಲ್ಲಿ ಟ್ರೈ ಮಾಡಬಹುದು. ದಕ್ಷಿಣ ಭಾರತದ ಅದ್ಭುತ ಬೀಚ್‌ಗಳಲ್ಲಿ ಇದೂ ಒಂದು.

ಇನ್ನೂ ಆರು ಬೀಚ್‌ಗಳ ವಿವರ ಮುಂದಿನ ಭಾಗದಲ್ಲಿ

ಕ್ಷಣ ಕ್ಷಣದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಫೇಸ್ ಬುಕ್ ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ವೈವಿಧ್ಯಮಯ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್ ಟ್ವಿಟರ್ ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Travel Tips: ಬೆಟ್ಟದ ಹಾದಿಯಲ್ಲಿ ಪ್ರವಾಸಕ್ಕೆ ಮೊದಲು ಈ ಆಹಾರಗಳನ್ನು ತಿನ್ನದಿರಿ!

ಹೊಟ್ಟೆ ಕೈಕೊಟ್ಟಾಗ ದೇಹ, ಮನಸ್ಸು ನಮ್ಮ ಮಾತನ್ನು ಕೇಳುವುದಿಲ್ಲ. ಅದರಿಂದಾಗಿ ನಮ್ಮ ಪ್ರವಾಸದ ಖುಷಿ ಪೂರ್ತಿಯಾಗಿ ಹಾಳಾಗುತ್ತದೆ. ಹಾಗಾದರೆ, ಪ್ರವಾಸದಲ್ಲಿ ಬೆಟ್ಟದ ಹಾದಿಯಲ್ಲಿ, ಭಾರೀ ತಿರುವುಗಳಿರುವ ರಸ್ತೆಗಳಲ್ಲಿ ಗಂಟೆಗಟ್ಟಲೆ ಪ್ರವಾಸ ಮಾಡುವ ಸಂದರ್ಭ ಮೊದಲೇ ಯಾವ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು?

VISTARANEWS.COM


on

Edited by

travel diet
Koo

ಪ್ರವಾಸ ಎಂಬುದು ಖುಷಿ. ಈಗ ಬೇಸಗೆ ಹತ್ತಿರ ಬರುತ್ತಿದ್ದಂತೆ ಬಹುತೇಕ ಎಲ್ಲರೂ ಕುಟುಂಬ ಸಮೇತರಾಗಿ ಒಂದಲ್ಲ ಒಂದು  ಪ್ರವಾಸದ ಸಿದ್ಧತೆಯಲ್ಲಿರುತ್ತಾರೆ. ವಿಮಾನದ ಮೂಲಕವೋ, ರಸ್ತೆ ಮಾರ್ಗವೋ, ರೈಲು ಮಾರ್ಗವೋ ಏನೇ ಆದರೂ ಪ್ರವಾಸ ತರುವ ಅನುಭವವೇ ಬೇರೆ. ಪ್ರವಾಸಕ್ಕೆ ಬಟ್ಟೆಗಳನ್ನು ಪ್ಯಾಕ್‌ ಮಾಡಿಕೊಳ್ಳುವುದು ಒಂದು ಸಡಗರವಾದರೆ, ಪ್ರವಾಸದಲ್ಲಿ ಮೂರೂ ಹೊತ್ತು ಏನೆಲ್ಲ ತಿನ್ನುವುದು, ಎಲ್ಲೆಲ್ಲಿ ತಿನ್ನಬೇಕು ಎಂಬು ಪ್ಲಾನ್‌ ಮಾಡಿಕೊಳ್ಳುವುದೂ ಕೂಡಾ ಇನ್ನೊಂದು ಹರುಷ. ಚೆನ್ನಾಗಿ ತಿಂದುಂಡು ಸ್ಥಳಗಳನ್ನು ನೋಡಿ ಎಲ್ಲ ಒತ್ತಡವನ್ನು ಬದಿಗಿಟ್ಟು ಪ್ರವಾಸದ ಮಜಾವನ್ನು ಅನುಭವಿಸಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ, ಪ್ರವಾಸದ ಖುಷಿಯನ್ನು ಅನುಭವಿಸುವ ಭರದಲ್ಲಿ ತಿನ್ನುವ ಸಂಭ್ರಮದಲ್ಲಿ ಬಹಳಷ್ಟು ಮಂದಿ ತಪ್ಪನ್ನೇ ಮಾಡುತ್ತಾರೆ. ಚೆನ್ನಾಗಿ ತಿಂದು ಹೇರ್‌ಪಿನ್‌ ಬೆಂಡ್‌ಗಳಿರುವ ಹಾವಿನಂತೆ ತೆವಳುವ ರಸ್ತೆಯಲ್ಲಿ ಪ್ರಯಾಣ ಆರಂಭಿಸುತ್ತಾರೆ. ಆಗ ಹೊಟ್ಟೆ ನಮ್ಮ ಮಾತನ್ನು ಕೇಳದೆ ಇನ್ನೊಂದು ಹಾಡು ಹಾಡುತ್ತದೆ. ಹೊಟ್ಟೆ ಕೈಕೊಟ್ಟಾಗ ದೇಹ, ಮನಸ್ಸು ನಮ್ಮ ಮಾತನ್ನು ಕೇಳುವುದಿಲ್ಲ. ಅದರಿಂದಾಗಿ ನಮ್ಮ ಪ್ರವಾಸದ ಖುಷಿ ಪೂರ್ತಿಯಾಗಿ ಹಾಳಾಗುತ್ತದೆ. ಹಾಗಾದರೆ, ಪ್ರವಾಸದಲ್ಲಿ ಬೆಟ್ಟದ ಹಾದಿಯಲ್ಲಿ, ಭಾರೀ ತಿರುವುಗಳಿರುವ ರಸ್ತೆಗಳಲ್ಲಿ ಗಂಟೆಗಟ್ಟಲೆ ಪ್ರವಾಸ ಮಾಡುವ ಸಂದರ್ಭ ಮೊದಲೇ ಯಾವ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನೋಡೋಣ.

1. ಎಣ್ಣೆತಿಂಡಿಗಳನ್ನು ಬದಿಗಿಡಿ: ಹೌದು, ಪ್ರವಾಸದ ಸಂದರ್ಭ ಏನಾದರೊಂದು ಮೆಲ್ಲುತ್ತಾ ಕಾರಿನಲ್ಲೋ ಬಸ್ಸಿನಲ್ಲೋ ಪಯಣಿಸುವ ಮಜಾವೇ ಬೇರೆ. ಆದರೆ, ಸಿಕ್ಕಸಿಕ್ಕಲ್ಲೆಲ್ಲ ಪಕೋಡಾ, ಬಜ್ಜಿ, ಬೋಂಡಾ ಅಥವಾ ಏನಾದರೂ ಎಣ್ಣೆ ತಿಂಡಿಗಳನ್ನು ತಿನ್ನುವುದನ್ನು ಕಡಿಮೆ ಮಾಡಿ. ಕಡಿದಾದ ಹಾದಿಯಲ್ಲಿ ಎಣ್ಣೆತಿಂಡಿಗಳನ್ನು ಅತಿಯಾಗಿ ತಿಂದರೆ ಜೀರ್ಣಕ್ರಿಯೆ ನಿಧಾನವಾಗಿ ಹೊಟ್ಟೆ ಕೆಡುವ ಸಂಭವ ಇದೆ. ಪಕೋಡಾ, ಆಲೂ ಟಿಕ್ಕಿ, ಚಿಪ್ಸ್‌, ಫ್ರೈಸ್‌, ಫ್ರೈಡ್‌ ಚಿಕನ್‌ ಇತ್ಯಾದಿಗಳನ್ನು ಸಾಧ್ಯವಾದಷ್ಟೂ ಅವಾಯ್ಡ್‌ ಮಾಡಿ.

Healthy Food

2. ಮಾಂಸಾಹಾರ: ಪ್ರವಾಸದ ಸಂದರ್ಭ ಬೆಟ್ಟದ ಹಾದಿಯಲ್ಲಿ ಪ್ರಯಾಣವಿದ್ದಾಗ ಮೊದಲೇ ಮಾಂಸಹಾರ ಮಾಡಿ ಇಂತಹ ರಸ್ತೆಯಲ್ಲಿ ಹೊರಡಬೇಡಿ. ಬಟರ್‌ ಚಿಕನ್‌, ಮಟನ್‌ ರೋಗನ್‌ ಜೋಶ್‌, ಚಿಕನ್‌ ಟಿಕ್ಕಾ ಇತ್ಯಾದಿ ಇತ್ಯಾದಿ ಸ್ಪೈಸೀ ಮಾಂಸಾಹಾರವನ್ನು ತಿಂದು ಹೊರಟರೆ,ತಿರುವು ಮುರುವು ರಸ್ತೆಯಲ್ಲಿ ಖಂಡಿತಾ ಹೆಚ್ಚುಕಡಿಮೆಯಾಗಬಹುದು. ಮೀನು ಹಾಗೂ ಮಾಂಸ ದೇಹದಲ್ಲಿ ಸರಿಯಾಗಿ ಪಚನವಾಗಲು ಎರಡು ದಿನಗಳೇ ಬೇಕಾಗುತ್ತದೆ. ಇದರಲ್ಲಿ ಸಂಕೀರ್ಣವಾದ ಪ್ರೋಟೀನ್‌ ಇರುವುದರಿಂದ ಯಾವುದಾದರೂ ಲಘು ಆಹಾರ ತಿಂದು ಇಂತಹ ಜಾಗಕ್ಕೆ ಪ್ರಯಾಣ ಬೆಳೆಸಿ.

ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!

3. ಬಫೆ ಊಟ: ಬಗೆಬಗೆಯ ಭಕ್ಷ್ಯಗಳಿರುವ ಬಫೆ ಸೆಳೆಯುತ್ತದೆ ನಿಜ. ಆದರೆ, ಚೆನ್ನಾಗಿ ಬಫೆ ಉಂಡು ಹೊಟ್ಟೆ ಉಬ್ಬರಿಸಿದಂತಾಗಿ, ಹೊಟ್ಟೆ ಎತ್ತಲು ಶಕ್ತಿ ಇಲ್ಲದಷ್ಟು ತಿಂದಾಗ ಖಂಡಿತವಾಗಿಯೂ ಬೆಟ್ಟದ ಹಾದಿಯ ತಿರುವು ಮುರುವು ರಸ್ತೆ ನಿಮ್ಮ ಹೊಟ್ಟೆಕೆಡಿಸುವುದು ಗ್ಯಾರಂಟಿ. ಹಾಗಾಗಿ, ಪ್ರಯಾಣಕ್ಕೂ ಮುನ್ನ ಇಂತಹ ಹಬ್ಬದೂಟದ ಯೋಚನೆಯನ್ನು ಆದಷ್ಟೂ ಬದಿಗಿಡಿ.

4. ಹಾಲಿನ ಉತ್ಪನ್ನಗಳು: ಹಾಲು ಹಾಗೂ ಹಾಲಿನ ಆಹಾರ ಉತ್ಪನ್ನಗಳಾದ ಚೀಸ್‌, ಕ್ರೀಂ, ಐಸ್‌ ಕ್ರೀಂ ಇತ್ಯಾದಿಗಳು ಪ್ರಯಾಣದ ಸಂದರ್ಭ ಆರೋಗ್ಯವನ್ನು ಹದಗೆಡುವಂತೆ ಮಾಡುತ್ತದೆ. ಮೋಷನ್‌ ಸಿಕ್‌ನೆಸ್‌ ತೊಂದರೆ ಇರುವವರಿಗೆ ಖಂಡಿತವಾಗಿ ಇದು ಒಳ್ಳೆಯದನ್ನು ಮಾಡುವುದಿಲ್ಲ. ದೇಹ ಕುಲುಕಾಡುವಾಗ ಹಾಲಿನ ಉತ್ಪನ್ನಗಳು ಬಹಳ ಸಾರಿ ವಾಂತಿ ತರಿಸುತ್ತದೆ. ಹಾಗಾಗಿ ಕಾರ್‌, ಬಸ್‌ನಲ್ಲಿ ಪಯಣಿಸುವ ಸಂದರ್ಭ ಹಾಲು ಕುಡಿಯಬೇಡಿ ಹಾಗೂ ಡೈರಿ ಉತ್ಪನ್ನಗಳನ್ನು ತಿನ್ನಬೇಡಿ.

5. ಕಾರ್ಬೋನೇಟೆಡ್‌ ಡ್ರಿಂಕ್‌ಗಳು ಹಾಗೂ ಆಲ್ಕೋಹಾಲ್:‌ ಕಾರ್ಬೋನೇಟೆಡ್‌ ಡ್ರಿಂಕ್‌ಗಳು ಅಥವಾ ಸೋಡಾದಲ್ಲಿ ಇದರಲ್ಲಿ ಹೆಚ್ಚು ಸಕ್ಕರೆ ಇರುವುದರಿಂದ ಇದು ಹೊಟ್ಟೆಯನ್ನು ಕೆಡಿಸುತ್ತದೆ. ಹೊಟ್ಟೆಯಲ್ಲಿ ಗ್ಯಾಸ್‌ ಆಗಿ ಪ್ರಯಾಣವೇ ಯಾತನಾಮಯವಾಗಬಹುದು. ಹಾಗಾಗಿ, ಬಾಯಾರಿಕೆಗೆ ಆದಷ್ಟೂ ತಾಜಾ ಹಣ್ಣು ಅಥವಾ ನೀರು ಕುಡಿಯುವುದು ಒಳ್ಳೆಯದು. ಆಲ್ಕೋಹಾಲ್‌ ಕೂಡಾ ಅಷ್ಟೇ, ಪ್ರಯಾಣದ ಸಂದರ್ಭ ವಾಂತಿ ತರಿಸುವ ಸಂಭವ ಹೆಚ್ಚು. ಹಾಗಾಗಿ ಇವುಗಳಿಂದ ದೂರವಿರಿ.

ಇದನ್ನೂ ಓದಿ: Travel Tips: ಬ್ಲೂ ಸರ್ಟೀಫಿಕೆಟ್‌ ಪಡೆದ ನೀಲಿ ಹಸಿರ ಸ್ವಚ್ಛ ಸುಂದರ ನಮ್ಮ ಕಡಲ ಕಿನಾರೆಗಳಿವು! ರಾಜ್ಯದ್ದೂ ಇವೆ!

Continue Reading

ಪ್ರವಾಸ

Travel Tips: ಗುಹೆಗಳೆಂಬ ಪ್ರಕೃತಿ ವಿಸ್ಮಯಗಳು: ನೋಡಲೇಬೇಕಾದ ಭಾರತದ ಗುಹೆಗಳಿವು!

ಜೀವನದಲ್ಲಿ ಒಮ್ಮೆಯಾದರೂ ನೀವು ಒಳಹೊಕ್ಕು ನೋಡಲೇಬೇಕಾದ ಗುಹೆಗಳು ಭಾರತದಲ್ಲಿವೆ. ಕೆಲವು ಪ್ರಸಿದ್ಧವಾಗಿದ್ದರೆ, ಇನ್ನೂ ಕೆಲವು ಅಷ್ಟೇನೂ ಪ್ರಸಿದ್ಧವಲ್ಲ. ಆದರೂ ಇವುಗಳ ಭೇಟಿ ಆನಂದದಾಯಕ.

VISTARANEWS.COM


on

Edited by

bhimbetka caves
ಭೀಮ್‌ಬೆಟ್ಕಾ ಗುಹೆಗಳು
Koo

ನಿಸರ್ಗ ನಿರ್ಮಿತ ಗುಹೆಗಳಿಗೆ ಭಾರತದಲ್ಲೇನೂ ಕೊರತೆಯಿಲ್ಲ. ಅಜಂತಾ ಎಲ್ಲೋರಾ, ಬಾದಾಮಿಯಂತಹ ಗುಹಾಂತರ್ದೇವಾಲಯಗಳು ಒಂದೆಡೆಯಾದರೆ, ಗುಹೆಗಳು ಹೇಗಿದ್ದವೋ ಅದೇ ಸ್ವರೂಪದಲ್ಲಿ ಇಂದಿಗೂ ಉಳಿಸಿಕೊಂಡು ಬಂದಿರುವುದು ಇನ್ನೊಂದು ಬಗೆಯ ಗುಹೆಗಳು. ಇಂಥ ಗುಹೆಗಳ, ಜೀವನದಲ್ಲೊಮ್ಮೆಯಾದರೂ ಗುಹೆಗಳೆಂಬ ರೋಮಾಂಚನದೊಳಕ್ಕೆ ಹೊಕ್ಕು ನೋಡಲೇಬೇಕಾದ ಪ್ರಕೃತಿ ವಿಸ್ಮಯಗಳಿವು.

ಭೀಮ್‌ಬೆಟ್ಕಾ ಗುಹೆಗಳು, ಮಧ್ಯ ಪ್ರದೇಶ: ಮಧ್ಯಪ್ರದೇಶದ ರಾತಾಪಾನಿ ವನ್ಯಜೀವಿ ರಕ್ಷಿತಾರಣ್ಯದಲ್ಲಿರುವ ಭೀಮ್‌ಬೆಟ್ಕಾ ಗುಹೆಗಳು ಭಾರತದ ಪ್ರಮುಖ ಗುಹೆಗಳಲ್ಲೊಂದು. ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿರುವ ಈ ಗುಹೆಗಳ ಒಳಗೆ ಶಿಲಾಯುಗದ ಕಾಲದ ಚಿತ್ರಗಳನ್ನೂ ಹೊಂದಿದೆ. ಈ ಗುಹೆಗಳಿಗೆ ಪೌರಾಣಿಕ ಹಿನ್ನೆಲೆಯ ಕಥೆಗಳೂ ಇದ್ದು, ಹಿಂದೆ, ಪಾಂಡವರು ಅಜ್ಞಾತವಾಸದ ಸಂದರ್ಭ ಇಲ್ಲಿ ಯಾರಿಗೂ ಕಾಣದಂತಿರಲು ತಂಗಿದ್ದರು ಎಂಬ ಉಲ್ಲೇಖವೂ ಇದೆ. ಭಾರತದ ಪ್ರಮುಖ ಗುಹೆಗಳ ಪೈಕಿ ಇದೂ ಒಂದು.

ಬೋರಾ ಗುಹೆಗಳು, ಆಂಧ್ರಪ್ರದೇಶ: ವಿಶಾಖಪಟ್ಟಣದ ಅರಕು ವ್ಯಾಲಿಯಲ್ಲಿರುವ ಬೋರಾ ಗುಹೆಗಳು ನಿಸರ್ಗದ ವಿಸ್ಮಯಗಳಲ್ಲೊಂದು. ಗುಹೆಯ ಒಳಗೆ ನೈಸರ್ಗಿಕ ಶಿವಲಿಂಗವಿದ್ದು ಅತ್ಯಂತ ಸುಂದರ ಗುಹೆಗಳ ಪೈಕಿ ಇದೂ ಒಂದು.

bora

ಎಡಕಲ್‌ ಗುಹೆಗಳು, ಕೇರಳ: ಕೇರಳದ ವಯನಾಡಿನಲ್ಲಿರುವ ಎಡಕಲ್ಲು ಕನ್ನಡ ಸಿನಿಮಾವೊಂದರ ಹೆಸರಿನಿಂದ ಬಹಳ ಪ್ರಸಿದ್ಧ. ವಯನಾಡಿನ ಅದ್ಭುತ ಬೆಟ್ಟಗುಡ್ಡಗಳ ನಡುವಿರುವ ಈ ಗುಹೆಯಲ್ಲಿ ಶಿಲಾಯುಗದ ಕಾಲದ ಅಂದರೆ ಸುಮಾರು ಕ್ರಿಸ್ತಪೂರ್ವ ೬೦೦೦ನೇ ಇಸವಿಯ ಆಸುಪಾಸಿನದ್ದೆಂದು ಹೇಳಲಾದ ಚಿತ್ರಗಳೂ ಇವೆ. ಕಲ್ಲು ಬಂಡೆಗಳ ಮೇಲೆ ಬರೆಯಲಾದ ಈ ಚಿತ್ರಗಳು ಶಿಲಾಯುಗದ ಕಥೆಗಳನ್ನು ನಮಗೆ ದಾಟಿಸುತ್ತವೆ. ಬೆಂಗಳೂರಿನಿಂದ ಸುಮಾರು ೨೭೦ ಕಿಮೀ ದೂರದಲ್ಲಿರುವ ಇದು ಮೂರ್ನಾಲ್ಕು ದಿನಗಳ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗ.

edakkal

ಮಾಸ್ಮಾಯ್‌ ಗುಹೆಗಳು, ಚಿರಾಪುಂಜಿ: ಮೇಘಗಳ ತವರು, ಭಾರತದ ಮಳೆನಾಡು ಮೇಘಾಲಯದ ತುಂಬ ಗುಹೆಗಳೂ ಬೇಕಾದಷ್ಟಿವೆ. ಚಿರಾಪುಂಜಿಯಲ್ಲಿರುವ ಮಾಸ್ಮಾಯ್‌ ಗುಹೆಗಳು ಇವುಗಳ ಪೈಕಿ ಅತ್ಯಂತ ಪ್ರಸಿದ್ಧವಾದದ್ದು. ತೆವಳಿಕೊಂಡೇ ಒಳಗೆ ಹೋಗಬೇಕಾದ ಈ ಗುಹೆ ಒಂದು ಅತ್ಯಪೂರ್ವ ಅನುಭವ ನೀಡುತ್ತದೆ.

masmai

ಬೆಲ್ಲುಂ ಗುಹೆಗಳು, ಆಂಧ್ರಪ್ರದೇಶ: ಭಾರತದ ಎರಡನೇ ಅತ್ಯಂತ ದೊಡ್ಡ ನೈಸರ್ಗಿಕವಾದ ಗುಹೆಯಿದು. ಇದು ಸುಮಾರು ೩೨೨೯ ಮೀಟರ್‌ಗಳಷ್ಟು ಉದ್ದವಿದ್ದು, ೧೨೦ ಟಡಿಗಳಷ್ಟು ನೆಲದಿಂದ ಆಳದಲ್ಲಿದೆ. ಕರ್ನೂಲ್‌ ಜಿಲ್ಲೆಯ ಬೆಲ್ಲುಂ ಎಂಬಲ್ಲಿ ಈ ಗುಹೆಯಿದ್ದು ಬೆಂಗಳೂರಿನಿಂದ ಸುಮಾರು ೨೭೦ ಕಿಮೀ ದೂರದಲ್ಲಿದೆ. ಈ ಗುಹೆಗಳು ಬಹಳ ಹಿಂದೆ ಚಿತ್ರಾವತಿ ನದಿಯ ಹರಿವಿನಿಂದ ಭೂಗರ್ಭದಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಗುಹೆಗಳೆಂದು ಹೇಳಲಾಗಿದ್ದು, ಇಂದಿಗೂ ಗುಹೆಯೊಳಗೆ ಸಾಕಷ್ಟು ನೀರಿನ ಮೂಲಗಳನ್ನು ಕಾಣಬಹುದು. ಇಲ್ಲಿ ಬೌದ್ಧ ಸನ್ಯಾಸಿಗಳೂ ಒಂದು ಕಾಲದಲ್ಲಿ ವಾಸವಿದ್ದರು ಎಂಬುದಕ್ಕೆ ಸಾಕ್ಷ್ಯಗಳು ದೊರೆತಿದ್ದು ಇವೆಲ್ಲವನ್ನೂ ಅನಂತಪುರದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದಾದ, ಗುಹೆಯೊಂದರ ಅದ್ಭುತ ಅನುಭವ ನೀಡಬಹುದಾದ ಗುಹೆ ಇದಾಗಿದ್ದು, ಕುಟುಂಬ ಸಮೇತರಾಗಿ ಒಂದೆರಡು ದಿನಗಳ ಪ್ರವಾಸದಲ್ಲಿ ನೋಡಿ ಬರಬಹುದಾದ ಸ್ಥಳವಿದು.

belum

ಕುಟುಂಸಾರ್‌ ಗುಹೆಗಳು, ಛತ್ತೀಸ್‌ಗಢ: ಛತ್ತೀಸ್‌ಘಡದ ಬಸ್ತರ್‌ನ ಕಂಗೇರ್‌ ವ್ಯಾಲಿ ರಾಷ್ಟ್ರೀಯ ಉದ್ಯಾನದಲ್ಲಿರುವ ಈ ಗುಹೆ ನೈಸರ್ಗಿಕವಾಗಿ ನಿರ್ಮಿತವಾದ ಪ್ರಮುಖ ಗುಹೆಗಳಲ್ಲಿ ಒಂದು. ಇದರಲ್ಲಿ ಐದು ವಿಭಾಗಗಳಿದ್ದು, ಕೆಲವು ಬಾವಿಗಳನ್ನೂ ಹೊಂದಿದೆ. ೧೩೨೭ ಮೀಟರ್‌ ಉದ್ದವಿರುವ ಈ ಗುಹೆಯೊಳಗೆ ಸೂರ್ಯನ ಬಿಸಿಲು ತಾಗುವುದೇ ಇಲ್ಲ.

kutumsar

ನೆಲ್ಲಿತೀರ್ಥ, ಕರ್ನಾಟಕ: ಕರ್ನಾಟಕದೊಳಗೇ ಗುಹೆಯನ್ನು ನೋಡುವ ಆಸೆಯಿದ್ದವರಿಗೆ ನೆಲ್ಲಿತೀರ್ಥ ಉತ್ತಮ ಆಯ್ಕೆ. ದಕ್ಷಿಣ ಕನ್ನಡದಲ್ಲಿರುವ ಈ ಗುಹೆ ಸುಮಾರು ೨೦೦ ಮೀಟರ್‌ ಉದ್ದವಿದ್ದು, ಗುಹೆಯೊಳಗೆ ಶಿವಲಿಂಗವಿದೆ. ಗುಹೆಯೊಳಗೆ ನೆಲ್ಲಿಕಾಯಿ ಗಾತ್ರದ ನೀರಿನ ಬಿಂದುಗಳು ಬಿದ್ದು ಇಲ್ಲೆ ಕೊಳವೊಂದು ಉಂಟಾಗಿದ್ದು, ಈ ಕಾರಣದಿಂದಲೇ ಇಲ್ಲಿಗೆ ನೆಲ್ಲಿತೀರ್ಥವೆಂಬ ಹೆಸರು ಬಂದಿದೆ. ತೀರ್ಥೋದ್ಭವದ ದಿನ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.

nelliteertha

ಇದನ್ನೂ ಓದಿ: Travel Tips: Beach Tourism: ಬ್ಲೂ ಸರ್ಟಿಫಿಕೇಶನ್‌ ಪಡೆದ ಭಾರತದ ಸ್ವಚ್ಛ ಬೀಚ್‌ಗಳಿವು! (ಭಾಗ 2)

Continue Reading

ಪ್ರವಾಸ

ವಿಸ್ತಾರ ಸಂಪಾದಕೀಯ: ಮತದಾರರಿಗೆ ಆಮಿಷವೊಡ್ಡುವ ಚಟುವಟಿಕೆಗಳಿಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ಮತದಾರರಿಗೆ ಗಿಫ್ಟ್ ಹಂಚುವ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ. ಪ್ರಜಾಪ್ರಭುತ್ವಕ್ಕೆ ಇದು ಭೂಷಣವಲ್ಲ. ಇಂತಹ ಆಮಿಷಗಳನ್ನು ಜನರೇ ತಿರಸ್ಕರಿಸಬೇಕು. ಚುನಾವಣೆ ಆಯೋಗ ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು.

VISTARANEWS.COM


on

Vistara Editorial Voter luring activities need to be curbed
Koo

ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೂ ದಿನಾಂಕ ಪ್ರಕಟವಾಗಿಲ್ಲ. ಹಾಗಾಗಿ, ನೀತಿ ಸಂಹಿತೆ ಜಾರಿಯಾಗಿಲ್ಲ. ಆದರೆ, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಡೆಸುತ್ತಿರುವ ಕಸರತ್ತು ಜೋರಾಗಿದೆ. ಕುಕ್ಕರ್, ಸೀರೆ, ಪಂಚೆ, ಸ್ಕೂಲ್ ಬ್ಯಾಗ್, ಬಳೆ, ಬಾಡೂಟ, ಮದ್ಯ, ನಗದು ವಿತರಣೆ ಸೇರಿದಂತೆ ನಾನಾ ರೂಪದಲ್ಲಿ ಮತದಾರರನ್ನೂ ಭ್ರಷ್ಟರನ್ನಾಗಿಸುವ ಅಕ್ರಮ ಚಟುವಟಿಕೆಗಳು ರಾಜ್ಯದಲ್ಲಿ ನಡೆಯುತ್ತಿವೆ. ಈ ಅಕ್ರಮವನ್ನು ತಡೆಗಟ್ಟಲು ಚುನಾವಣಾ ಆಯೋಗವು, ವಿವಿಧ ಇಲಾಖೆಗಳ ಸಹಾಯದೊಂದಿಗೆ ದಾಳಿಗಳನ್ನು ನಡೆಸುತ್ತಿದೆ. ಈವರೆಗೆ, ವಿಶೇಷ ಕಾರ್ಯಾಚರಣೆ ಮೂಲಕ ಕಳೆದ 3 ದಿನಗಳಲ್ಲಿ 5.4 ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ವಾರ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ರಾಜ್ಯಕ್ಕೆ ಭೇಟಿ ನೀಡಿ, ಚುನಾವಣಾ ಅಕ್ರಮ ತಡೆಯಲು ಸೂಚನೆ ನೀಡಿದ್ದರು. ಬಳಿಕ, ಅಧಿಕಾರಿಗಳು ದಾಳಿಗಳನ್ನು ಚುರುಕುಗೊಳಿಸಿದ್ದಾರೆ. ಚುನಾವಣೆಯನ್ನು ಗೆಲ್ಲಲೇಬೇಕು ಎಂಬ ಲಕ್ಷ್ಯದೊಂದಿಗೆ ಅಭ್ಯರ್ಥಿಗಳು ನೀಡುವ ಆಮಿಷಗಳಿಗೆ ಮತದಾರರು ಸೊಪ್ಪ ಹಾಕಬಾರದು. ತಾತ್ಕಾಲಿಕ ಲಾಭಕ್ಕಾಗಿ ಮತವನ್ನು ಮಾರಿಕೊಳ್ಳುವುದನ್ನು ಜನರು ತಿರಸ್ಕರಿಸಬೇಕು.

ಚುನಾವಣಾ ಸ್ಪರ್ಧೆಗೆ ಮುಂದಾಗಿರುವ ರಾಜಕಾರಣಿಯೊಬ್ಬರ ಮನೆ ಮೇಲೆ ಇತ್ತೀಚೆಗೆ ದಾಳಿ ನಡೆಸಿದ ಕಂದಾಯ ಅಧಿಕಾರಿಗಳು, ಭಾರೀ ಸಂಖ್ಯೆಯಲ್ಲಿ ಸಂಗ್ರಹಿಸಲಾಗಿದ್ದ ಫುಡ್‌ಕಿಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇವರು ಈ ಹಿಂದೆಯೂ ಕುಕ್ಕರ್, ಸೀರೆ ಹಂಚಿ ಸುದ್ದಿಗೆ ಗ್ರಾಸವಾಗಿದ್ದರು. ಮತ್ತೊಂದೆಡೆ, ರಾಮನಗರ ತಾಲೂಕಿನಲ್ಲಿ, ಮತದಾರರಿಗೆ ಹಂಚಲು ಸಿದ್ಧವಾಗಿದ್ದ 2,900 ಕುಕ್ಕರ್‌ಗಳನ್ನು ತಹಸೀಲ್ದಾರ್ ಜಪ್ತಿ ಮಾಡಿದ್ದಾರೆ. ಐದು ದಿನಗಳ ಹಿಂದೆ, ಪರಿಷತ್ ಸದಸ್ಯರೊಬ್ಬರ ಹಾವೇರಿ ನಿವಾಸದ ಮೇಲೆ ವಾಣಿಜ್ಯ ಅಧಿಕಾರಿಗಳು ದಾಳಿ ನಡೆಸಿ, 6000ಕ್ಕೂ ಅಧಿಕ ಸೀರೆ, 9000ಕ್ಕೂ ಅಧಿಕ ಸ್ಕೂಲ್ ಬ್ಯಾಗ್‌ಗಳು, ತಟ್ಟೆ-ಲೋಟಗಳು ಸೇರಿದಂತೆ ಒಟ್ಟಾರೆ 8 ಕೋಟಿ ರೂ. ಮೌಲ್ಯದ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಇವು ಕೆಲವು ಉದಾಹರಣೆಗಳಷ್ಟೇ. ಇದು ಯಾವುದೋ ಒಂದು ಕ್ಷೇತ್ರಕ್ಕೆ ಅಥವಾ ಯಾವುದೋ ಒಂದೇ ಪಕ್ಷಕ್ಕೆ ಮಾತ್ರ ಸಿಮೀತವಾಗಿಲ್ಲ.

ಈ ಹಿಂದೆ ಮತದಾರರಿಗೆ ಆಮಿಷವೊಡ್ಡುವ ಚಟುವಟಿಕೆಗಳು ಒಂದಿಷ್ಟು ಕ್ಷೇತ್ರಗಳಲ್ಲಿ ಮಾತ್ರ ನಡೆಯುತ್ತಿದ್ದವು. ಆದರೆ, ಈಗ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಈ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ.

ಚುನಾವಣೆ ಸಂದರ್ಭದಲ್ಲಿ ಅಕ್ರಮಗಳನ್ನು ತಡೆಯದಿದ್ದರೆ ಪ್ರಜಾಪ್ರಭುತ್ವ ಸಶಕ್ತವಾಗಿ ಉಳಿಯಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಮತದಾರರು ಈ ವಿಷಯದಲ್ಲಿ ಜಾಗೃತರಾಗಬೇಕು. ಜನ ಜಾಗೃತರಾಗದೆ ಕಾನೂನು ಎಷ್ಟೇ ಬಿಗಿಗೊಳಿಸಿದರೂ ಪರಿಣಾಮ ಬೀರುವುದಿಲ್ಲ. ಯಾಕೆಂದರೆ, ಐನೂರು, ಸಾವಿರ ರೂಪಾಯಿಗೆ ಮತಗಳನ್ನು ಮಾರಿಕೊಂಡರೆ, ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಮತದಾರರು ಕಳೆದುಕೊಳ್ಳುತ್ತಾರೆ. ಹಣ, ಹೆಂಡ ಹಂಚಿ ಗೆದ್ದುಬರುವ ಅಭ್ಯರ್ಥಿ, ಚುನಾವಣಾ ವೆಚ್ಚವನ್ನು ಸರಿದೂಗಿಸಲು ಭ್ರಷ್ಟಾಚಾರಕ್ಕೆ ಇಳಿಯುತ್ತಾನೆ. ಅಂತಿಮವಾಗಿ ಅದರ ಹೊರೆ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ. ಇದೊಂದು ವಿಷ ವರ್ತುಲ. ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಅದರ ಒಳ್ಳೆಯ ಲಾಭ ಜನರಿಗೇ ಆಗುತ್ತದೆ. ಆಮಿಷಕ್ಕೆ ಬಿದ್ದು ಅರ್ಹನಲ್ಲದ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ, ಅದರಿಂದಾಗುವ ದುಷ್ಪರಿಣಾಮವನ್ನು ತಾವೇ ಅನುಭವಿಸಬೇಕಾಗುತ್ತದೆ ಎಂಬುದನ್ನು ಜನ ಅರಿತುಕೊಳ್ಳಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತ್ ಪಾಲ್ ಬೇಟೆ, ಮತ್ತಷ್ಟು ಕಠಿಣ ಕ್ರಮ ಅಗತ್ಯ

ಈಗಿನ ಚುನಾವಣೆ ನಡೆಯುವ ರೀತಿ ನೋಡಿದರೆ, ಸಭ್ಯರು ಎಲೆಕ್ಷನ್ ಗೆಲ್ಲುವುದೇ ಅಸಾಧ್ಯ. ಹಣವಂತರು ಮಾತ್ರವೇ ಚುನಾವಣೆ ಗೆಲ್ಲಲು ಸಾಧ್ಯ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಈ ಕಳಂಕವನ್ನು ನಿವಾರಿಸಬೇಕಾದ ಮಹತ್ತರ ಜವಾಬ್ದಾರಿ ಮತದಾರರ ಮೇಲಿದೆ. ಚುನಾವಣೆ ಆಯೋಗದ ಜವಾಬ್ದಾರಿಯೂ ಇಲ್ಲಿ ದೊಡ್ಡದಿದೆ. ಆಮಿಷ ಮುಕ್ತ ಮತ್ತು ಅಕ್ರಮ ಮುಕ್ತ ಚುನಾವಣೆ ನಡೆಸಲು ಕಾಯಿದೆ ಕಾನೂನು ರೂಪಿಸಿದರೆ ಸಾಲದು. ಇದರ ಕಠಿಣ ಅನುಷ್ಠಾನವೂ ಮುಖ್ಯ. ಆಡಳಿತ ಪಕ್ಷ, ಪ್ರತಿಪಕ್ಷ ಎಂಬ ಭೇದಭಾವ ಮಾಡದೆ ಚುನಾವಣೆ ಆಯೋಗವು ನಿಷ್ಪಕ್ಷಪಾತವಾಗಿ ಇಂಥ ಅಕ್ರಮಗಳಿಗೆ ತಡೆ ಹಾಕಬೇಕು.

Continue Reading

ಪ್ರವಾಸ

Travel Tips: Beach Tourism: ಬ್ಲೂ ಸರ್ಟಿಫಿಕೇಶನ್‌ ಪಡೆದ ಭಾರತದ ಸ್ವಚ್ಛ ಬೀಚ್‌ಗಳಿವು! (ಭಾಗ 2)

ಎಲೆಮರೆ ಕಾಯಿಯಂಥ, ಅಷ್ಟಾಗಿ ಇನ್ನೂ ಬೆಳಕಿಗೆ ಬಾರದ ಚಂದನೆಯ ಹಲವು ಸಮುದ್ರತೀರಗಳೆಷ್ಟೋ ಇವೆ. ಇವನ್ನೆಲ್ಲ ಹಾಗೆಯೇ ಉಳಿಸುವ ಜೊತೆಗೆ, ನಮ್ಮ ಸುತ್ತಮುತ್ತಲ ಸಮುದ್ರ ತೀರಗಳನ್ನು ಸ್ವಚ್ಛವಾಗಿರಿಸಿಕೊಳ್ಳುವಲ್ಲಿ ಪ್ರವಾಸಿರ ಪಾತ್ರವೂ ಇದೆ

VISTARANEWS.COM


on

Edited by

Womens Day 2023 Radhanagar Beach
Koo

ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಲ್ಲಬಹುದಾದ, ಚಂದನೆಯ ಸಮುದ್ರ ತೀರಗಳಿವೆ. ಸ್ಫಟಿಕ ಶುದ್ಧ ಸೊಗಸಿನ ಈ ಬೀಚ್‌ಗಳಲ್ಲಿ 12 ತೀರಗಳು ಬ್ಲೂ ಸರ್ಟಿಫಿಕೇಶನ್‌ ಪಡೆದಿವೆ. ಮೊದಲ ಭಾಗದಲ್ಲಿ ಆರು ಬೀಚ್‌ಗಳ ವಿವರ ಓದಿದ್ದೀರಿ. ಪಟ್ಟಿಯ ಮುಂದುವರಿದ ಭಾಗ ಇಲ್ಲಿದೆ!

೭. ಕಪ್ಪದ್‌, ಕೇರಳ: ಕೇರಳದ ಈ ಕಡಲ ಕಿನಾರೆಗೊಂದು ಇತಿಹಾಸವೇ ಇದೆ. ೧1498ರಲ್ಲಿ ವಾಸ್ಕೋಡಗಾಮ 170 ಮಂದಿ ಸಹಚರರೊಂದಿಗೆ ಭಾರತಕ್ಕೆ ಬಂದಿಳಿದ ಕಡಲ ಕಿನಾರೆಯಿದು. ಇದು ಸ್ವಚ್ಛವಷ್ಟೇ ಅಲ್ಲ, ಚಂದನೆಯ ವಲಸಿಗ ಹಕ್ಕಿಗಳಿಗೂ ತಾಣ. ಸದ್ಯ ಪ್ರವಾಸೋದ್ಯಮಕ್ಕೆ ಸೂಕ್ತವಾಗುವಂತೆ ವಾಕಿಂಗ್‌ ಟ್ರ್ಯಾಕ್‌, ವಾಶ್‌ರೂಂಗಳು ಸೇರಿದಂತೆ ಹಲವು  ನಾಗರಿಕ ಸೇವೆಗಳು ಇಲ್ಲಿ ಲಭ್ಯವಿವೆ.

೮. ಗೋಲ್ಡನ್‌ ಬೀಚ್‌, ಪುರಿ, ಒಡಿಶಾ: ಒಡಿಶಾದ ಪುರಿಯ ಗೋಲ್ಡನ್‌ ಬೀಚ್‌ ಸಾವಿರಾರು ಜನರನ್ನು ನಿತ್ಯವೂ ಸೆಳೆಯುವ ಪ್ರಸಿದ್ಧ ಕಡಲತೀರಗಳಲ್ಲೊಂದು. ಇಲ್ಲಿ ಮಾಡಲಾದ ಸಾರ್ವಜನಿಕ ಸೇವೆಗಳಾದ, ಟಾಯ್ಲೆಟ್‌, ವಿಕಲಚೇತನರಿಗೆ ಸರಳ ವ್ಯವಸ್ಥೆಗಳು, ವಾಚ್‌ಟವರ್‌ಗಳು, ಸ್ನಾನದ ಝೋನ್‌ಗಳು ಎಲ್ಲವೂ ಇದನ್ನು ಅಧ್ಬುತವನ್ನಾಗಿಸಿದೆ. ಪ್ರತಿ ವರ್ಷವೂ ಇಲ್ಲಿ ನಡೆಯುವ ಬೀಚ್‌ ಉತ್ಸವ, ಮರಳು ಚಿತ್ರಕಲೆ ಸಾಕಷ್ಟು ಜನರನ್ನಿಲ್ಲಿಗೆ ಸೆಳೆಯುತ್ತದೆ.‌

golden beach
ಗೋಲ್ಡನ್‌ ಬೀಚ್

೯. ಮಿನಿಕೋಯ್‌ ತುಂಡಿ ಬೀಚ್‌, ಲಕ್ಷದ್ವೀಪ: ಪಚ್ಚೆ ರತ್ನವೆನ್ನ ನೀರಲ್ಲಿ ಕರಗಿ ಹೋಗಿದೆಯೋ ಎಂಬಂತೆ ಸದಾ ಹರಿರು ಬಣ್ಣದಲ್ಲಿ ಫಳಪಳಿಸುತ್ತಿರುವ ಸಮುದ್ರ ತೀರವಿದು. ಜೀವನದಲ್ಲಿ ಒಮ್ಮೆಯಾದರೂ ಭಾರತದ ಈ ಪುಟಾಣೀ ದ್ವೀಪವನ್ನು ನೋಡಿ, ಇಲ್ಲಿನ ಸ್ಪಟಿಕ ಶುದ್ಧ ತೀರಗಳಲ್ಲಿ ಅಲೆದಾಡಬೇಕು.

೧೦. ಕದ್ಮತ್‌ ಬೀಚ್‌, ಲಕ್ಷದ್ವೀಪ: ಲಕ್ಷದ್ವೀಪದ ಕಡಲ ಕಿನಾರೆಗಳೆಲ್ಲವೂ ಅದ್ಭುತವೇ. ಹಸಿರು ಹಸಿರಾಗಿ ಕಂಗೊಳಿಸುವ ಇವು ನಮ್ಮ ಸಾದಾ ಬೀಚ್‌ಗಳಿಗಿಂತ ಕೊಂಚ ಭಿನ್ನವಾಗಿಯೇ ಕಾಣುತ್ತವೆ.

ಇದನ್ನೂ ಓದಿ: Travel Tips: ಗುಂಡಿಗೆ ಗಟ್ಟಿ ಇದ್ದವರು ಪ್ರಯಾಣಿಸಲೇಬೇಕಾದ ಭಾರತದ ದುರ್ಗಮ ರಸ್ತೆಗಳು!

೧೧. ಈಡನ್‌ ಬೀಚ್‌, ಪಾಂಡಿಚೇರಿ: ಪಾಂಡಿಚೇರಿ ಎಂಬ ಪುಟಾಣಿ ನಗರ ಹಲವಾರು ಕಾರಣಗಳಿಗೆ ಪ್ರವಾಸಿಗರನ್ನು ಸೆಳೆಯುತ್ತದೆ. ಅವುಗಳ ಪೈಕಿ ಸುಂದರ ಕಡಲ ಕಿನಾರೆಯೂ ಒಂದು. ಈಡೆನ್‌ ಬೀಚ್‌ ಪಾಂಡಿಯ ಚಂದನೆಯ ಸ್ವಚ್ಛವಾದ ಬೀಚ್‌ಗಳ ಪೈಕಿ ಅಗ್ರಗಣ್ಯ. ಪಾಂಡಿಯ ಆರೋವಿಲ್ಲೆಯಲ್ಲಿ ನಡೆದಾಡಿ, ಧ್ಯಾನ ಮಾಡಿ, ಅರವಿಂದಾಶ್ರಮದಲ್ಲಿ ಒಂದಿಷ್ಟು ಹೊತ್ತು ಕೂತು, ಸಂಜೆ ಈ ಕಡಲ ಕಿನಾರೆಯ ಗಾಳಿ ಸೇವನೆಗೆ ಕೂತರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅನ್ನಬಹುದು.

kovalam
ಕೋವಲಂ ಬೀಚ್

೧೨. ಕೋವಲಂ ಬೀಚ್‌, ತಮಿಳುನಾಡು: ಸರ್ಫಿಂಗ್‌ ಕಲಿಯಲು ಆಸಕ್ತಿಯಿರುವ ಮಂದಿಗೆ ದಕ್ಕುವ ಕೆಲವೇ ಕೆಲವು ದಕ್ಷಿಣದ ಬೀಚ್‌ಗಳ ಪೈಕಿ ಕೋವಲಂ ಬೀಚ್‌ ಕೂಡಾ ಒಂದು. ಚಂದನೆಯ, ಚಿಪ್ಪುಗಳಿಂದಾವೃತವಾದ ಮರಳ ದಿಣ್ಣೆಗಳಿರುವ ಸಂಜೆಯ ಹೊತ್ತು ತಪ್ಪದೇ ಭೇಟಿಕೊಡಬಹುದಾದ ಸರಳ ಸುಂದರ ಬೀಚ್‌ ಇದು. ಚೈನ್ನೈನ ಜನಜಂಗುಳಿಯ ಸಮುದ್ರ ತೀರಗಳಾದ ಬೆಸೆಂಟ್‌ ನಗರ ಹಾಗೂ ಮರೀನಾ ಬೀಚ್‌ಗಳಿಂದ ದೂರವಿರುವ ಆಫ್‌ಬೀಟ್‌ ಜಾಗ ಬೇಕು ಎಂದು ಆಸೆಪಡುವ ಮಂದಿಗೆ, ಚೆನ್ನೈನಿಂದ ಸುಮಾರು ೪೦ ಕಿಮೀ ದೂರದಲ್ಲಿರುವ ಈ ಬೀಚ್‌ ಬೆಸ್ಟ್‌ ಆಯ್ಕೆ.

ಕೇವಲ ಇವಿಷ್ಟೇ ಅಲ್ಲ, ಇವೆಲ್ಲ ಈಗಾಗಲೇ ಬ್ಲೂ ಸರ್ಟಿಫಿಕೇಶನ್‌ ಪಡೆದ ಸಮುದ್ರ ತೀರಗಳ ಕಥೆಯಾಯಿತು. ಇನ್ನೂ ಎಲೆಮರೆ ಕಾಯಿಯಂಥ, ಅಷ್ಟಾಗಿ ಇನ್ನೂ ಬೆಳಕಿಗೆ ಬಾರದ ಚಂದನೆಯ ಹಲವು ಸಮುದ್ರತೀರಗಳೆಷ್ಟೋ ಇವೆ. ಇವನ್ನೆಲ್ಲ ಹಾಗೆಯೇ ಉಳಿಸುವ ಜೊತೆಗೆ, ನಮ್ಮ ಸುತ್ತಮುತ್ತಲ ಸಮುದ್ರ ತೀರಗಳನ್ನು ಸ್ವಚ್ಛವಾಗಿರಿಸಿಕೊಳ್ಳುವಲ್ಲಿ ಪ್ರವಾಸಿರ ಪಾತ್ರವೂ ಇದೆ ಎಂಬುದನ್ನು ಮಾತ್ರ ನಾವು ಸದಾ ನೆನಪಿಟ್ಟುಕೊಳ್ಳಬೇಕು.

ಸ್ಪಟಿಕ ಶುದ್ಧ ಚಂದನೆಯ ಬೀಚ್‌ಗಳ ಪಟ್ಟಿಯ ಮೊದಲ ಆರು ಬೀಚ್‌ಗಳ ವಿವರಕ್ಕೆ ಮೊದಲ ಭಾಗ ಓದಿ. ‌

ಇದನ್ನೂ ಓದಿ: Travel Tips: ಹಿಮದೂರುಗಳಲ್ಲಿ ಬದುಕಿನಲ್ಲೊಮ್ಮೆ ಮಾಡಲೇಬೇಕಾದ ಸಾಹಸ ಕ್ರೀಡೆಗಳಿವು!

Continue Reading
Advertisement
Man commits suicide after wife commits suicide in Srirangapatna
ಕರ್ನಾಟಕ1 hour ago

Suicide Case: ಕೌಟುಂಬಿಕ ಕಲಹ; ಪತ್ನಿ ಆತ್ಮಹತ್ಯೆ ಕಂಡು ಪತಿಯೂ ನೇಣಿಗೆ ಶರಣು

Amid wedding rumours, AAP MP Raghav Chadha picks up Parineeti Chopra from Delhi airport
ದೇಶ2 hours ago

Raghav-Parineeti: ಮತ್ತೆ ಒಟ್ಟಿಗೆ ಕಾಣಿಸಿದ ರಾಘವ್‌, ಪರಿಣೀತಿ; ವಾರದಲ್ಲಿ 3ನೇ ಭೇಟಿ, ಸ್ನೇಹಾನಾ? ಪ್ರೀತಿನಾ?

Do you know how much marks Virat Kohli got in iron pea maths?
ಕ್ರಿಕೆಟ್2 hours ago

Virat Kohli : ಕಬ್ಬಿಣದ ಕಡಲೆ ಗಣಿತದಲ್ಲಿ ವಿರಾಟ್​ ಕೊಹ್ಲಿ ಪಡೆದ ಮಾರ್ಕ್​ ಎಷ್ಟು ಗೊತ್ತಾ?

Manmohan Lalwani says Solar powered system best tool to cross digital gap
ಕರ್ನಾಟಕ2 hours ago

SELCO India: ಡಿಜಿಟಲ್ ಕಂದಕ ದಾಟಲು ಸೌರಚಾಲಿತ ವ್ಯವಸ್ಥೆ ಅತ್ಯುತ್ತಮ ಸಾಧನ: ಮನಮೋಹನ್ ಲಾಲ್ವಾನಿ

Four farmers seriously injured in lathi charge by forest department personnel
ಕರ್ನಾಟಕ2 hours ago

Tumkur News: ಒತ್ತುವರಿ ತೆರವಿಗೆ ಆಕ್ಷೇಪಿಸಿದ್ದಕ್ಕೆ ಲಾಠಿ ಚಾರ್ಜ್ ಮಾಡಿದ ಅರಣ್ಯ ಸಿಬ್ಬಂದಿ; 4 ರೈತರಿಗೆ ಗಂಭೀರ ಗಾಯ

Bengaluru company to gift ChatGPT Plus subscription to employees after seeing rise in productivity
ಕರ್ನಾಟಕ2 hours ago

ChatGPT Subscription: ದಕ್ಷತೆ ಹೆಚ್ಚಳ; ನೌಕರರಿಗೆ ಚಾಟ್‌ಜಿಪಿಟಿ ಉಚಿತ ಸಬ್‌ಸ್ಕ್ರಿಪ್ಶನ್‌ ನೀಡಿದ ಬೆಂಗಳೂರು ಕಂಪನಿ

No prejudice about Hindi, such imposition is not worth it
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು

Google Layoffs: Some employees may get up to Rs 2.60 crore in severance pay
ದೇಶ3 hours ago

Google Layoffs: ಗೂಗಲ್‌ನಿಂದ ವಜಾಗೊಂಡ ನೌಕರರಿಗೆ ಸಿಗಲಿದೆ 2.6 ಕೋಟಿ ರೂ., ಇವರಿಗೆ ಬೇರೆ ನೌಕರಿಯೇ ಬೇಕಿಲ್ಲ

Former bowler of Rajasthan Royals who joined Chennai Super Kings
ಕ್ರಿಕೆಟ್3 hours ago

IPL 2023 : ಚೆನ್ನೈ ಸೂಪರ್​ ಕಿಂಗ್ಸ್​ ಬಳಗ ಸೇರಿದ ರಾಜಸ್ಥಾನ್​ ರಾಯಲ್ಸ್​ನ ಮಾಜಿ ಬೌಲರ್​

ಕರ್ನಾಟಕ4 hours ago

Prof. Madhav Kulkarni: ಖ್ಯಾತ ಲೇಖಕ, ವಿಮರ್ಶಕ ಪ್ರೊ. ಮಾಧವ ಕುಲಕರ್ಣಿ ಇನ್ನಿಲ್ಲ

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ2 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ2 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್4 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ5 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ2 months ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

Post Office Recruitment 2023
ಉದ್ಯೋಗ2 months ago

India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ

ಕರ್ನಾಟಕ7 hours ago

Ram Navami 2023: ಕರುನಾಡಿನೆಲ್ಲೆಡೆ ಶ್ರೀರಾಮ ನಾಮಸ್ಮರಣೆ; ಕಲಬುರಗಿಯಲ್ಲಿ ಮಜ್ಜಿಗೆ, ಪಾನಕ ವಿತರಿಸಿದ ಮುಸ್ಲಿಮರು

Siddalinga Swamiji of Siddaganga Mutt saw a cow and came running away Video goes viral
ಕರ್ನಾಟಕ13 hours ago

Sri Siddalinga Swamiji: ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು; ವಿಡಿಯೊ ವೈರಲ್‌

amit shah convoy
ಕರ್ನಾಟಕ3 days ago

Amit Shah: ಬೆಂಗಳೂರಿನಲ್ಲಿ ಅಮಿತ್‌ ಶಾ ಕಾನ್‌ವೇಯಲ್ಲಿ ಭದ್ರತಾ ವೈಫಲ್ಯ; ಇಬ್ಬರು ವಿದ್ಯಾರ್ಥಿಗಳ ವಿಚಾರಣೆ

rapido bike vs auto-Bike taxi drivers go on strike against auto drivers harassment
ಕರ್ನಾಟಕ4 days ago

Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್‌ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ

ಕರ್ನಾಟಕ1 week ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ1 week ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ1 week ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ2 weeks ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ2 weeks ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 weeks ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

ಟ್ರೆಂಡಿಂಗ್‌

error: Content is protected !!