Bridge Collapse: ನೌಕೆ ಡಿಕ್ಕಿಯಾಗಿ ಮಕ್ಕಳಾಟಿಕೆಯಂತೆ ಕುಸಿದ 2.5 ಕಿ.ಮೀ. ಉದ್ದದ ಸೇತುವೆ! - Vistara News

ವೈರಲ್ ನ್ಯೂಸ್

Bridge Collapse: ನೌಕೆ ಡಿಕ್ಕಿಯಾಗಿ ಮಕ್ಕಳಾಟಿಕೆಯಂತೆ ಕುಸಿದ 2.5 ಕಿ.ಮೀ. ಉದ್ದದ ಸೇತುವೆ!

Bridge Collapse: ಬಾಲ್ಟಿಮೋರ್‌ನಿಂದ ಹೊರಹೋಗುತ್ತಿದ್ದ ಹಡಗು ಸೇತುವೆಯ ನಡುವಿನ ಸ್ತಂಭ ಹಾಗೂ ಮೇಲಿನ ಕಮಾನಿಗೆ ಬಡಿದು ಅದು ಕುಸಿಯಲು ಕಾರಣವಾಯಿತು.

VISTARANEWS.COM


on

baltimore bridge collapse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಲ್ಟಿಮೋರ್‌: ಮಂಗಳವಾರ ಮುಂಜಾನೆ ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಉಕ್ಕಿನ ಸೇತುವೆಗೆ ಕಂಟೈನರ್‌ ನೌಕೆಯೊಂದು ಡಿಕ್ಕಿ ಹೊಡೆದ ಪರಿಣಾಮ, ಸೇತುವೆ ಸಂಪೂರ್ಣವಾಗಿ (Baltimore bridge collapse) ನೀರುಗುರುಳಿದೆ. 20ಕ್ಕೂ ಅಧಿಕ ಮಂದಿ (Drowned) ನೀರುಪಾಲಾಗಿದ್ದಾರೆ.

ಡಿಕ್ಕಿಯ ರಭಸಕ್ಕೆ ಸೇತುವೆಯ ಮೇಲೆ ಚಲಿಸುತ್ತಿದ್ದ ಹಲವು ವಾಹನಗಳು ನೀರಿಗೆ ಬಿದ್ದಿವೆ. ಕನಿಷ್ಠ ಇಪ್ಪತ್ತು ಜನರು ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಡುರಾತ್ರಿ ಈ ಘಟನೆ ನಡೆದ ಕಾರಣ ಸೇತುವೆಯ ಮೇಲೆ ಹೆಚ್ಚಿನ ವಾಹನಗಳು ಇರಲಿಲ್ಲ. ಜನದಟ್ಟಣೆಯ ಸಮಯದಲ್ಲಿ ಈ ಘಟನೆ ಸಂಬಂಧಿಸಿದ್ದರೆ ನೂರಾರು ಜನರ ಸಾವುನೋವು ಸಂಭವಿಸುವ ಸಾಧ್ಯತೆಯಿತ್ತು.

ವೈರಲ್‌ ಆಗಿರುವ ವಿಡಿಯೋದಲ್ಲಿ, ದೊಡ್ಡ ಹಡಗು ಸೇತುವೆಗೆ ಅಪ್ಪಳಿಸುತ್ತಿರುವುದು ಕಂಡುಬಂದಿದೆ. ಸೋಶಿಯಲ್ ಮೀಡಿಯಾ ಸೈಟ್ ಎಕ್ಸ್‌ನಲ್ಲಿ ವೈರಲ್ ಆಗುತ್ತಿರುವ ತುಣುಕಿನ ಪ್ರಕಾರ, ಸೇತುವೆ ಭಗ್ನಗೊಂಡು ಮುಳುಗುವ ಮೊದಲು ಬೆಂಕಿ ಹೊತ್ತಿಕೊಂಡಿತು. ಮತ್ತು ಅನೇಕ ವಾಹನಗಳು ಪಟಾಪ್ಸ್ಕೋ ನದಿಗೆ ಬೀಳುತ್ತಿರುವುದು ಕಂಡುಬಂದಿತು.

ಬಾಲ್ಟಿಮೋರ್ ಅಗ್ನಿಶಾಮಕ ಇಲಾಖೆಯ ಸಂವಹನ ನಿರ್ದೇಶಕ ಕೆವಿನ್ ಕಾರ್ಟ್‌ರೈಟ್ ಪ್ರಕಾರ, ಕನಿಷ್ಠ ಇಪ್ಪತ್ತು ಜನರಿಗಾಗಿ ನೀರಿನಲ್ಲಿ ಹುಡುಕಾಟ ನಡೆದಿದೆ. ಸ್ಥಳೀಯ ಸಮಯ ರಾತ್ರಿ 1:30ರ ವೇಳೆಗೆ ಈ ಘಟನೆ ನಡೆದಿದೆ. ಬಾಲ್ಟಿಮೋರ್‌ನಿಂದ ಹೊರಹೋಗುತ್ತಿದ್ದ ಹಡಗು ಸೇತುವೆಯ ನಡುವಿನ ಸ್ತಂಭ ಹಾಗೂ ಮೇಲಿನ ಕಮಾನಿಗೆ ಬಡಿದು ಅದು ಕುಸಿಯಲು ಕಾರಣವಾಯಿತು. ಆ ಸಮಯದಲ್ಲಿ ಸೇತುವೆಯ ಮೇಲೆ ಹಲವಾರು ವಾಹನಗಳು ಇದ್ದವು. ಅದರಲ್ಲಿ ಒಂದು ಟ್ರಾಕ್ಟರ್-ಟ್ರೇಲರ್ ಕೂಡ ಸೇರಿದೆ.

ಶಿಪ್ ಮಾನಿಟರಿಂಗ್ ವೆಬ್‌ಸೈಟ್ MarineTraffic ಮಂಗಳವಾರ ಮುಂಜಾನೆ ಸೇತುವೆಯ ಕೆಳಗೆ ನಿಲ್ಲಿಸಿದ ಡಾಲಿ ಎಂಬ ಸಿಂಗಾಪುರದ ಧ್ವಜದ ಕಂಟೈನರ್ ಹಡಗನ್ನು ತೋರಿಸಿದೆ. I-695 ಕೀ ಬ್ರಿಡ್ಜ್‌ ಕುಸಿದ ಪರಿಣಾಮ ಇಲ್ಲಿ ಹಾದುಹೋಗುವ ಎಲ್ಲಾ ಲೇನ್‌ಗಳನ್ನು ಎರಡೂ ದಿಕ್ಕುಗಳಲ್ಲಿ ಮುಚ್ಚಲಾಗಿದೆ ಎಂದು ಮೇರಿಲ್ಯಾಂಡ್ ಸಾರಿಗೆ ಪ್ರಾಧಿಕಾರವು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಬಾಲ್ಟಿಮೋರ್‌ ಮುನ್ಸಿಪಲ್ ನಗರದ ನೈಋತ್ಯಕ್ಕೆ ಇರುವ ಪಟಾಪ್ಸ್ಕೋ ನದಿಗೆ ಅಡ್ಡಲಾಗಿ ಈ ನಾಲ್ಕು-ಲೇನ್ ಸೇತುವೆಯನ್ನು ಕಟ್ಟಲಾಗಿತ್ತು. ಇದು 1.6 ಮೈಲಿ (2.6-ಕಿಲೋಮೀಟರ್) ಉದ್ದವಿದೆ. 1977ರಲ್ಲಿ ಕಟ್ಟಲಾಗಿದ್ದ ಇದರ ಮೇಲೆ ವರ್ಷಕ್ಕೆ 1.10 ಕೋಟಿ ವಾಹನಗಳು ಓಡಾಡುತ್ತಿದ್ದವು. ಇದು ಬಾಲ್ಟಿಮೋರ್ ಸುತ್ತಮುತ್ತಲಿನ ರಸ್ತೆ ಜಾಲದ ಪ್ರಮುಖ ಭಾಗ. ಬಾಲ್ಟಿಮೋರ್‌, ರಾಜಧಾನಿ ವಾಷಿಂಗ್ಟನ್ DCಯ ಪಕ್ಕದಲ್ಲಿರುವ ಅಮೆರಿಕದ ಪೂರ್ವ ಕರಾವಳಿಯ ಕೈಗಾರಿಕಾ ನಗರವಾಗಿದೆ.

ಇದನ್ನೂ ಓದಿ: Viral video: ಬೈಕ್‌ ರೈಡಿಂಗ್‌ ಮಾಡ್ತಾ ಲ್ಯಾಪ್‌ಟಾಪ್‌ನಲ್ಲಿ ವಿಡಿಯೋ ಕಾಲ್‌:‌ ಬೆಂಗಳೂರು ಸವಾರನ ಸಾಹಸ ವೈರಲ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Yamuna Bridge: ಯಮುನಾ ಸೇತುವೆಯ ಅದ್ಭುತ ಚಿತ್ರ ಹಂಚಿಕೊಂಡ ಭಾರತೀಯ ರೈಲ್ವೆ: ವಾವ್‌ ತಾಜ್‌ ಎಂದ ನೆಟ್ಟಿಗರು; ನೀವೂ ನೋಡಿ

Yamuna Bridge: ರೈಲ್ವೆ ಸಚಿವಾಲಯ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಆಗ್ರಾದಲ್ಲಿನ ಯಮುನಾ ರೈಲ್ವೆ ಸೇತುವೆಯ ಅದ್ಭುತ ಚಿತ್ರವನ್ನು ಹಂಚಿಕೊಂಡಿದೆ. ರೈಲ್ವೆ ಹಂಚಿಕೊಂಡಿರುವ, ಡ್ರೋನ್‌ ಸೆರೆಹಿಡಿರುವ ಈ ಚಿತ್ರದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಐತಿಹಾಸಿಕ ಸೇತುವೆಯ ಹಿನ್ನೆಲೆಯಲ್ಲಿ ತಾಜ್‌ಮಹಲ್‌ ಕಾಣಿಸುತ್ತಿದ್ದು, ನೆಟ್ಟಿಗರು ಮನ ಸೋತಿದ್ದಾರೆ. ಫೋಟೊ ಹಂಚಿಕೊಂಡ ಕೆಲವೇ ಹೊತ್ತಿನಲ್ಲಿ ಇದು ವೈರಲ್‌ ಆಗಿದೆ. ಈಗಾಗಲೇ 28 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 490ಕ್ಕೂ ಹೆಚ್ಚು ಮಂದಿ ಲೈಕ್‌ ಬಟನ್‌ ಒತ್ತಿದ್ದಾರೆ. 200ಕ್ಕೂ ಹೆಚ್ಚು ಶೇರ್‌ ಆಗಿದೆ. ಯಮುನೆಯ ಸೌಂದರ್ಯಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.

VISTARANEWS.COM


on

Yamuna Bridge
Koo

ಹೊಸದಿಲ್ಲಿ: ಭಾರತೀಯ ರೈಲ್ವೆ ಇಲಾಖೆ (Railways Ministry) ಆಗಾಗ ತನ್ನ ಕಾಮಗಾರಿಗಳ ವಿವರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತದೆ. ಸ್ವೇಷನ್‌, ಸೇತುವೆ ನಿರ್ಮಾಣ ಕಾಮಗಾರಿ, ಹೊಸ ಯೋಜನೆಗಳ ಮಾಹಿತಿಯನ್ನು ನೀಡುತ್ತಿರುತ್ತದೆ. ಇದೀಗ ರೈಲ್ವೆ ಸಚಿವಾಲಯ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಆಗ್ರಾದಲ್ಲಿನ ಯಮುನಾ ರೈಲ್ವೆ ಸೇತುವೆಯ ಅದ್ಭುತ ಚಿತ್ರವನ್ನು ಹಂಚಿಕೊಂಡಿದೆ. ರೈಲ್ವೆ ಹಂಚಿಕೊಂಡಿರುವ, ಡ್ರೋನ್‌ ಸೆರೆಹಿಡಿರುವ ಈ ಚಿತ್ರದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಐತಿಹಾಸಿಕ ಸೇತುವೆಯ ಹಿನ್ನೆಲೆಯಲ್ಲಿ ತಾಜ್‌ಮಹಲ್‌ ಕಾಣಿಸುತ್ತಿದ್ದು, ನೆಟ್ಟಿಗರು ಮನ ಸೋತಿದ್ದಾರೆ (Viral News).

“ಆಗ್ರಾದಲ್ಲಿನ ಯಮುನಾ ಸೇತುವೆಯ ಪಕ್ಷಿ ನೋಟ. ಸೇತುವೆಯ ಹಿನ್ನೆಲೆಯಲ್ಲಿ ಭವ್ಯವಾದ ತಾಜ್ ಮಹಲ್ ಅನ್ನೂ ಕಾಣಬಹುದುʼʼ ಎಂದು ಫೋಟೊಕ್ಕೆ ಕ್ಯಾಪ್ಶನ್‌ ನೀಡಲಾಗಿದೆ. ಫೋಟೊ ಹಂಚಿಕೊಂಡ ಕೆಲವೇ ಹೊತ್ತಿನಲ್ಲಿ ಇದು ವೈರಲ್‌ ಆಗಿದೆ. ಈಗಾಗಲೇ 28 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 490ಕ್ಕೂ ಹೆಚ್ಚು ಮಂದಿ ಲೈಕ್‌ ಬಟನ್‌ ಒತ್ತಿದ್ದಾರೆ. 200ಕ್ಕೂ ಹೆಚ್ಚು ಶೇರ್‌ ಆಗಿದೆ. ಯಮುನೆಯ ಸೌಂದರ್ಯಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.

ನೆಟ್ಟಿಗರು ಏನಂದ್ರು?

ʼʼವಾವ್‌ ತಾಜ್‌ʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಹಿನ್ನೆಲೆಯಲ್ಲಿ ತಾಜ್‌ಮಹಲ್‌ ಕಾಣಿಸುತ್ತಿದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಜೈ ಭಾರತ್‌, ಜೈ ಭಾರತಿʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ʼʼವಿಹಂಗಮ ದೃಶ್ಯʼʼ ಎಂದು ಮಗದೊಬ್ಬರು ಉದ್ಘರಿಸಿದ್ದಾರೆ. ʼʼನಿಜವಾಗಿಯೂ ಈ ಫೋಟೊ ಮನಮೋಹಕವಾಗಿದೆʼʼ ಎಂದು ನೆಟ್ಟಿಗರೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ಒಟ್ಟಿನಲ್ಲಿ ಯಮುನೆಯ ಒನಪು, ಸೇತುವೆಯ ಗಾಂಭೀರ್ಯ, ತಾಜ್‌ ಮಹಲ್‌ನ ಸೌಂದರ್ಯ ಹಲವರ ಗಮನ ಸೆಳೆದಿದ್ದು ಸುಳ್ಳಲ್ಲ.

ಶತಮಾನಗಳ ಇತಿಹಾಸ

ವಿಶೇಷವೆಂದರೆ ಭಾರತೀಯ ರೈಲ್ವೆಯ ಪ್ರಮುಖ ಜೀವನಾಡಿಯಾದ ಈ ಸೇತುವೆ 1875ರಲ್ಲಿ ಸಂಚಾರಕ್ಕೆ ಮುಕ್ತವಾಗಿತ್ತು. ಆಗ್ರಾ ಈಸ್ಟ್ ಬ್ಯಾಂಕ್ ನಿಲ್ದಾಣ ಮತ್ತು ಆಗ್ರಾ ಕೋಟೆ ನಿಲ್ದಾಣವನ್ನು ಇದು ಸಂಪರ್ಕಿಸುತ್ತದೆ. ಶತಮಾನಗಳ ಇತಿಹಾಸ ಹೊಂದಿರುವ ಯಮುನಾ ಸೇತುವೆಯ ಸಮೀಪದ ಆಗ್ರಾ ರೈಲ್ವೆ ನಿಲ್ದಾಣವು ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿದೆ. ಇದು ಪ್ರಯಾಣಿಕರು ಮತ್ತು ಸರಕುಗಳೆರಡಕ್ಕೂ ಪ್ರಮುಖ ಸಾರಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಜತೆಗೆ ಆಗ್ರಾವನ್ನು ಭಾರತದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.

ಜನರೊಂದಿಗೆ ನಿರಂತರ ಸಂಪರ್ಕ

ರೈಲ್ವೆ ಸಚಿವಾಲಯವು ರೈಲುಗಳು ಮತ್ತು ಅವುಗಳ ಸೇವೆಗಳ ಬಗ್ಗೆ ಆಗಾಗ ಆಸಕ್ತಿದಾಯಕ ಸಂಗತಿಗಳು ಮತ್ತು ಮಾಹಿತಿಯನ್ನು ಹಂಚಿಕೊಂಡು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ. ಕೆಲವು ವಾರಗಳ ಹಿಂದೆ ಸಚಿವಾಲಯವು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ ನಿರ್ಮಿಸಲಾದ ಗುಜರಾತ್‌ನ ಔರಂಗ ಸೇತುವೆಯ ಅದ್ಭುತ ಚಿತ್ರವನ್ನು ಹಂಚಿಕೊಂಡಿತ್ತು. ವಲ್ಸಾದ್ ಜಿಲ್ಲೆಯ ಔರಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯ ಕಾಮಗಾರಿ 2023ರ ಆಗಸ್ಟ್‌ನಲ್ಲಿ ಪೂರ್ಣಗೊಂಡಿತ್ತು. ಜತೆಗೆ ಪಶ್ಚಿಮ ಘಟ್ಟದ ಹಸಿರಿನ ನಡುವೆ, ಗುಡ್ಡಗಳ ಮಧ್ಯೆ ಚಲಿಸುವ ರೈಲಿನ ವಿಡಿಯೊವನ್ನು ಇತ್ತೀಚೆಗೆ ಹಂಚಿಕೊಂಡಿತ್ತು. ʼʼಸ್ವರ್ಗ ಸದೃಶ ಪಶ್ಚಿಮ ಘಟ್ಟದ ಸೌಂದರ್ಯವನ್ನು ಭಾರತೀಯ ರೈಲ್ವೆಯೊಂದಿಗೆ ಆನಂದಿಸಿʼʼ ಎನ್ನುವ ಶೀರ್ಷಿಕೆಯಡಿ ಹಂಚಿಕೊಂಡ ಈ ಪೋಸ್ಟ್‌ಗೂ ನೂರಾರು ಲೈಕ್‌ಗಳು ಸಂದಿವೆ.

ಇದನ್ನೂ ಓದಿ: India’s T20 World Cup Jersey: ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿಯಲ್ಲಿ ಆಡಲಿದೆ ಭಾರತ; ಜೆರ್ಸಿ ಫೋಟೊ ವೈರಲ್​

Continue Reading

ತುಮಕೂರು

Theft Case : ಕಳ್ಳತನವೂ ಈಗ ಪ್ರೊಫೆಷನಲ್‌; ಕದಿಯೋಕೆ ತಿಂಗಳ ಸ್ಯಾಲರಿ ಕೊಡುತ್ತಿದ್ದ ಪ್ರಳಯಾಂತಕ!

Theft Case : ತುಮಕೂರಿನಲ್ಲಿ ಬೋರ್‌ವೇಲ್‌ ಕೇಬಲ್‌ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಕಳ್ಳರ ಗ್ಯಾಂಗ್‌ ಅನ್ನು ಬೆಂಗಳೂರಿನಲ್ಲಿ ಹಿಡಿಯಲಾಗಿದೆ. ಪೊಲೀಸರ ವಿಚಾರಣೆ ವೇಳೆ ಪ್ರಳಯಾಂತಕನೊಬ್ಬ ಕದಿಯೋಕೆ ಎಂದೇ ಒಬ್ಬನನ್ನು ನೇಮಿಸಿಕೊಂಡು ತಿಂಗಳ ಸಂಬಳ ಕೊಡುತ್ತಿದ್ದನಂತೆ.

VISTARANEWS.COM


on

By

theft case
ಸಾಂದರ್ಭಿಕ ಚಿತ್ರ
Koo

ತುಮಕೂರು: ಕಳ್ಳತನವೂ ಈಗ ಪ್ರೊಫೆಷನಲ್‌ ಆಗಿಬಿಟ್ಟಿದೆ. ಭೂಪನೊಬ್ಬ ಬೋರ್‌ವೇಲ್‌ ಕೇಬಲ್‌ಗಳನ್ನು ಕದಿಯೋಕೆ ಅಂತಲೇ ತಿಂಗಳ ಸಂಬಳಕ್ಕೆ ಕಳ್ಳನನ್ನು (Theft Case) ನೇಮಿಸಿಕೊಂಡಿರುವ ಅಪರೂಪದ ಪ್ರಕರಣವೊಂದು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.

ವೆಂಕಟೇಶ್‌ ಎಂಬಾತ ಕಳ್ಳತನಕ್ಕಾಗಿಯೇ ಬೆಂಗಳೂರು ಮೂಲದ ರಾಘವೇಂದ್ರ ಎಂಬಾತನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ. ವೆಂಕಟೇಶ್‌ ಕಳ್ಳತನ ಮಾಡುವ ರಾಘವೇಂದ್ರನಿಗೆ ತಿಂಗಳ ಲೆಕ್ಕದಲ್ಲಿ ಸಂಬಳ ಕೊಡುತ್ತಿದ್ದ. ರಾಘವೇಂದ್ರ ತಿಂಗಳಿಗೆ 20 ಸಾವಿರ ರೂ. ಸಂಬಳ ಪಡೆಯುತ್ತಿದ್ದಾಗಿ ಪೊಲೀಸರ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ.

ಈ ಖದೀಮರು ಗ್ರಾಮೀಣ ಭಾಗದಲ್ಲಿರುವ ಬೋರ್‌ವೇಲ್‌ ಕೇಬಲ್ ಕಳ್ಳತನ ಮಾಡುತ್ತಿದ್ದರು. ಕೊರಟಗೆರೆ ತಾಲೂಕಿನಲ್ಲಿ ಬೋರ್‌ವೇಲ್‌ ಕೇಬಲ್‌ಗಳ ಕಳುವಿನಿಂದ ರೈತರು ಹೈರಾಣಾಗಿದ್ದರು. ಕೊರಟಗೆರೆಯಲ್ಲಿ ಒಂದು ತಿಂಗಳಿಂದ ನಿರಂತರವಾಗಿ ಕಳ್ಳರು ಬೋರ್‌ವೇಲ್‌ ಕೇಬಲ್ ಕಳ್ಳತನ ಮಾಡುತ್ತಿದ್ದರು. ವಡ್ಡಗೆರೆ ಬಳಿ ಖತರ್ನಾಕ್ ಕಳ್ಳರ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

Theft Case The thief was paid a salary for theft

ಇದನ್ನೂ ಓದಿ: Road Accident : ಬಸ್‌ ಗುದ್ದಿದ ರಭಸಕ್ಕೆ ಕಾರು ಛಿದ್ರ ಛಿದ್ರ; ಚಾಲಕ ಸ್ಪಾಟ್‌ ಡೆತ್‌, ನಾಲ್ವರಿಗೆ ಗಾಯ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರಿನ ಚಲನವಲನ ಗಮನಿಸಿ ಕಳ್ಳರನ್ನು ಪತ್ತೆ ಹಚ್ಚಿದ್ದರು. ಕೊರಟಗೆರೆ ಪೊಲೀಸರು ಖತರ್ನಾಕ್ ಕಳ್ಳನ ಸಹಿತ ಮೂವರ ಹೆಡೆಮುರಿ ಕಟ್ಟಿದ್ದಾರೆ. ಐನಾತಿ ಕಳ್ಳರು ಕದ್ದ ಮಾಲನ್ನು ವಿನೇಶ್ ಪಟೇಲ್ ಎಂಬಾತನಿಗೆ ಮಾರಾಟ ಮಾಡುತ್ತಿದ್ದರು.

ಸದ್ಯ ಮೂವರು ಆರೋಪಿಗಳಾದ ವೆಂಕಟೇಶ್, ರಾಘವೇಂದ್ರ ಹಾಗೂ ವಿನೇಶ್‌ನನ್ನು ಕೊರಟಗೆರೆ ಪೊಲೀಸರು ಬೆಂಗಳೂರಿನ ಕಾಮಾಕ್ಷಿಪಾಳ್ಳದಲ್ಲಿ ಬಂಧಿಸಿದ್ದಾರೆ. ಇನ್‌ಸ್ಪೆಕ್ಟರ್‌ ಅನಿಲ್‌ ಹಾಗೂ ತಂಡ ಕಳ್ಳರನ್ನು ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಕಳ್ಳರ ಬಂಧನದಿಂದ ಕೊರಟಗೆರೆ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವೈರಲ್ ನ್ಯೂಸ್

Viral News: ಮೇಲಿಂದ ಬಿದ್ದು ಬದುಕುಳಿದಿದ್ದ ಮಗುವಿನ ತಾಯಿ ಸೂಸೈಡ್‌; ಸೋಶಿಯಲ್‌ ಮೀಡಿಯಾ ಕಮೆಂಟ್‌ನಿಂದಲೇ ಖಿನ್ನತೆಗೊಳಗಾಗಿದ್ಳಾ?

Viral News:ಮಗುವಿನ ತಾಯಿ ರಮ್ಯಾ ತೀರ ಖಿನ್ನತೆಗೊಳಗಾಗಿದ್ದರು. ತನ್ನ ಅಜಾಗುರೂಕತೆಯಿಂದ ದುರಂತ ಸಂಭವಿಸಿದೆ ಎಂಬುದನ್ನು ಪದೇ ಪದೇ ಹೇಳುತ್ತಲೇ ಇದ್ದರು. ಇನ್ನು ನೆರೆಹೊರೆಯವರು, ನೆಟ್ಟಿಗರು ಈ ಘಟನೆ ಬಗ್ಗೆ ತಿಳಿದವರು ಎಲ್ಲರೂ ರಮ್ಯಾಳ ಅಜಾಗುರೂಕತೆಯಿಂದಲೇ ಈ ಘಟನೆ ನಡೆದಿದೆ ಎಂದು ದೂರುತ್ತಿದ್ದರು.

VISTARANEWS.COM


on

Viral News
Koo

ಕೊಯಂಬತ್ತೂರ್‌: ಕಳೆದ ತಿಂಗಳು ಅಪಾರ್ಟ್‌ಮೆಂಟ್‌(Apartment)ನ ಕಿಟಕಿಯಿಂದ ವಿಂಡೋ ಪೋರ್ಚ್‌(Window Porch) ಮೇಲೆ ಬಿದ್ದು, ಪವಾಡ ಸದೃಶ್ಯವಾಗಿ ಬದುಕಿ ಬಂದ ಏಳು ತಿಂಗಳ ಮಗುವಿನ(Toddler) ತಾಯಿ ಇದೀಗ ಆತಹತ್ಯೆಗೆ ಶರಣಾಗಿದ್ದಾಳೆ(Viral News). ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ತಾಯಿಯ ಮಡಿಲಿನಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಿಟಕಿಯಿಂದ ಪ್ಲಾಸ್ಟಿಕ್‌ ಶೀಟ್‌ ಕವರ್‌ ಮಾಡಲಾಗಿದ್ದ ವಿಂಡೋ ಪೋರ್ಚ್‌ ಮೇಲೆ ಬಿದ್ದಿತ್ತು. ಮಗು ಅದೃಷ್ಟವಶಾತ್‌ ಅಲ್ಲೇ ನೇತಾಡಿಕೊಂಡು ಸ್ಥಳೀಯರ ಸಹಾಯದಿಂದ ಬದುಕುಳಿದಿತ್ತು.

ಈ ಘಟನೆ ಬಳಿಕ ಮಗುವಿನ ತಾಯಿ ರಮ್ಯಾ ತೀರ ಖಿನ್ನತೆಗೊಳಗಾಗಿದ್ದರು. ತನ್ನ ಅಜಾಗುರೂಕತೆಯಿಂದ ದುರಂತ ಸಂಭವಿಸಿದೆ ಎಂಬುದನ್ನು ಪದೇ ಪದೇ ಹೇಳುತ್ತಲೇ ಇದ್ದರು. ಇನ್ನು ನೆರೆಹೊರೆಯವರು, ನೆಟ್ಟಿಗರು ಈ ಘಟನೆ ಬಗ್ಗೆ ತಿಳಿದವರು ಎಲ್ಲರೂ ರಮ್ಯಾಳ ಅಜಾಗುರೂಕತೆಯಿಂದಲೇ ಈ ಘಟನೆ ನಡೆದಿದೆ ಎಂದು ದೂರುತ್ತಿದ್ದರು. ಇದರಿಂದ ಬೇಸರಗೊಂಡಿದ್ದ ರಮ್ಯಾ ಖಿನ್ನತೆಗೊಳಗಾಗಿದ್ದರು. ಇದನ್ನು ಗಮನಿಸಿದ ಆಕೆಯ ಪತಿ ವೆಂಕಟೇಶ್‌ ಕೊಯಂಬತ್ತೂರ್‌ನಲ್ಲಿರುವ ಆಕೆಯ ತವರು ಮನೆಗೆ ಕರೆದುಕೊಂಡು ಬಂದಿದ್ದರು.

ಭಾನುವಾರ ರಮ್ಯಾಳನ್ನು ಒಬ್ಬಳೇ ಮನೆಯಲ್ಲಿ ಬಿಟ್ಟು ಎಲ್ಲರೂ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ವಾಪಸ್‌ ಮನೆಗೆ ಬಂದಾಗ ರಮ್ಯಾ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಕಂಡು ಮನೆಯವರು ಗಾಬರಿಗೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ. ಇನ್ನು ಆಕೆಯ ಸಾವಿಗೆ ಕಾರಣ ಏನೆಂಬುದು ಸರಿಯಾಗಿ ತಿಳಿದುಬಂದಿಲ್ಲ. ಆಕೆ ಏನಾದರೂ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಅವಡಿಯ ತಿರುಮಲ್ಲೈವೋವಲ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಏ.28ರಂದು ತಾಯಿಯ ಮಡಿಲಿನಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ಕಿಟಕಿಯಿಂದ ಪ್ಲಾಸ್ಟಿಕ್‌ ಶೀಟ್‌ ಕವರ್‌ ಮಾಡಲಾಗಿದ್ದ ವಿಂಡೋ ಪೋರ್ಚ್‌ ಮೇಲೆ ಬಿದ್ದಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ತಕ್ಷಣ ಮಗುವಿನ ರಕ್ಷಣೆಗೆ ಧಾವಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ವಿಂಡೋ ಪೋರ್ಚ್‌ ಮೇಲೆ ಬಿದ್ದಿ ಮಗುವಿನ ರಕ್ಷಣೆಗೆ ದೌಡಾಯಿಸಿದ್ದ ಅಪಾರ್ಟ್‌ಮೆಂಟ್‌ ನಿವಾಸಿಗಳು ಮತ್ತೊಂದು ಕಿಟಕಿಯಿಂದ ಹೊರಬಂದು ಮಗುವನ್ನು ರಕ್ಷಿಸಿಲು ಹರಸಾಹನ ಪಟ್ಟರು. ನಾಲ್ಕೈದು ಜನ ಕಿಟಕಿಯ ಹೊರ ಭಾಗದಲ್ಲಿರುವ ಸಣ್ಣ ಜಾಗದಲ್ಲಿ ನಿಂತು ಮಗುವಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ರಕ್ಷಿಸಿದ್ದಾರೆ. ಇನ್ನು ಕೆಳಗೆ ಅನೇಕ ಜನ ದೊಡ್ಡ ಬಟ್ಟೆಯೊಂದು ಹಿಡಿದು ಮಗುವಿನ ರಕ್ಷಣೆಗೆ ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರಶಂಸೆ ವ್ಯಕ್ತಪಡಿಸಿರುವ ನೆಟ್ಟಿಗರು, ಅಚಾನಕ್ಕಾಗಿ ನಾಲ್ಕನೇ ಮಹಡಿಯಿಂದ ವಿಂಡೋ ಪೋರ್ಚ್‌ ಮೇಲೆ ಬಿದ್ದಿದ್ದ 7 ತಿಂಗಳಿನ ಮಗುವನ್ನು ಬಹಳ ಜಾಣ್ಮೆಯಿಂದ ರಕ್ಷಿಸಿದ್ದಾರೆ. ಅವರ ಕಾರ್ಯಕ್ಕೆ ಸಲಾಂ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

Continue Reading

ದೇಶ

Great Khali: ಜಗತ್ತಿನ ಕುಬ್ಜ ಮಹಿಳೆಯನ್ನು ಮಗುವಿನಂತೆ ಎತ್ತಿ ಆಡಿಸಿದ ಗ್ರೇಟ್‌ ಖಲಿ; ಜನ ಕೆಂಡವಾಗಿದ್ದು ಏಕೆ?

Great Khali: ಜ್ಯೋತಿ ಆಮ್ಗೆ ಅವರನ್ನು ಒಂದೇ ಕೈಯಲ್ಲಿ ತಮಾಷೆಗಾಗಿ ಎತ್ತಿ ಆಡಿಸಿದ ವಿಡಿಯೊವನ್ನು ಗ್ರೇಟ್‌ ಖಲಿ ಅವರೇ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ಆದರೆ, ಎತ್ತಿ ಆಡಿಸಿದ್ದಕ್ಕೆ ಗ್ರೇಟ್‌ ಖಲಿ ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಬ್ಯಾಡ್‌ ಟಚ್‌ ಎಂದು ದಿ ಗ್ರೇಟ್‌ ಖಲಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

VISTARANEWS.COM


on

Great Khali
Koo

ನವದೆಹಲಿ: ಆಜಾನುಬಾಹು ದೇಹದಿಂದಲೇ ದೇಶಾದ್ಯಂತ ಖ್ಯಾತಿ ಗಳಿಸಿರುವ, ಡಬ್ಲ್ಯೂಡಬ್ಲ್ಯೂಇನಲ್ಲಿ (WWE) ಭಾರತವನ್ನು ಪ್ರತಿನಿಧಿಸಿದ ಕುಸ್ತಿಪಟು ದಿ ಗ್ರೇಟ್‌ ಖಲಿ (Great Khali) ಅವರು ವಿಶ್ವದಲ್ಲೇ ಅತಿ ಕುಬ್ಜ ಮಹಿಳೆ ಎನಿಸಿರುವ ಜ್ಯೋತಿ ಆಮ್ಗೆ (Jyoti Amge) ಅವರನ್ನು ಒಂದೇ ಕೈಯಲ್ಲಿ ಎತ್ತಿ ಆಡಿಸಿದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ. ಆದರೆ, ತಮಾಷೆಗಾಗಿ ಒಂದೇ ಕೈಯಲ್ಲಿ ಮಗುವಿನಂತೆ ಎತ್ತಿ ಆಡಿಸಿದ ವಿಡಿಯೊ ವೈರಲ್‌ (Viral Video) ಆದ ಬೆನ್ನಲ್ಲೇ ಗ್ರೇಟ್‌ ಖಲಿ ವಿರುದ್ಧ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದವರಾದ ಜ್ಯೋತಿ ಆಮ್ಗೆ (30) ಅವರು ಕೇವಲ 2.3 ಅಡಿ ಎತ್ತರವಾಗಿದ್ದು, ಜಗತ್ತಿನಲ್ಲೇ ಅತಿ ಕುಬ್ಜ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಇವರು ಗಿನ್ನಿಸ್‌ ದಾಖಲೆಗೂ ಭಾಜನರಾಗಿದ್ದಾರೆ. ಜ್ಯೋತಿ ಆಮ್ಗೆ ಹಾಗೂ ದಿ ಗ್ರೇಟ್‌ ಖಲಿ ಅವರು ಇತ್ತೀಚೆಗೆ ಭೇಟಿಯಾಗಿದ್ದು, ಗ್ರೇಟ್‌ ಖಲಿ ಅವರು ತಮಾಷೆಗಾಗಿ ಅವರನ್ನು ಒಂದೇ ಕೈಯಲ್ಲಿ ಎತ್ತಿ ಆಡಿಸಿದ್ದಾರೆ. “ನಾನು ನಿಮ್ಮನ್ನು ನಾಗ್ಪುರಕ್ಕೆ ಕಳುಹಿಸಿಬಿಡುತ್ತೇನೆ” ಎಂದು ತಮಾಷೆ ಮಾಡಿದ್ದಾರೆ. ಇದರಿಂದ ಜ್ಯೋತಿ ಆಮ್ಗೆ ಅವರು ನಾಚಿ ನೀರಾಗಿದ್ದಾರೆ.

ಕೆರಳಿ ಕೆಂಡವಾದ ಜನ

ಜ್ಯೋತಿ ಆಮ್ಗೆ ಅವರನ್ನು ಎತ್ತಿ ಆಡಿಸಿದ ವಿಡಿಯೊವನ್ನು ಗ್ರೇಟ್‌ ಖಲಿ ಅವರೇ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ಆದರೆ, ಎತ್ತಿ ಆಡಿಸಿದ್ದಕ್ಕೆ ಗ್ರೇಟ್‌ ಖಲಿ ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಗ್ರೇಟ್‌ ಖಲಿಯವರೇ, ನಮಗೆ ನಿಮ್ಮ ಬಗ್ಗೆ ಗೌರವ ಇದೆ. ಆದರೆ, ನೀವು ಹೀಗೆ ಮಾಡಬಾರದಿತ್ತು. ಅದು ಮಗು ಅಲ್ಲ‌, 30 ವರ್ಷದ ಮಹಿಳೆ ಅವರು. ನೀವು ಹಾಗೆ ಮಾಡಬಾರದಿತ್ತು” ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

“ಇದು ಬ್ಯಾಡ್ ಟಚ್” ಎಂಬುದಾಗಿ ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. “ಇದು ತಮಾಷೆಯಾಗಿಲ್ಲ. ಹೀಗೆ ಮಾಡಲು ಜ್ಯೋತಿ ಅವರು ಅನುಮತಿ ನೀಡಿದ್ದಾರೆ ಎಂದುಕೊಳ್ಳುತ್ತೇನೆ” ಎಂದು ಮತ್ತೊಬ್ಬರು ನಯವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಒಂದಷ್ಟು ಜನ ತಮಾಷೆಯಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. “ನೀವು ಜ್ಯೋತಿ ಆಮ್ಗೆ ಅವರನ್ನು ಹಾಗೆಯೇ ಎತ್ತಿಕೊಂಡು ವರ್ಲ್ಡ್‌ ಟೂರ್‌ ಕೂಡ ಮಾಡಬಹುದು”, “ಅವರನ್ನು ಹಾಗೆಯೇ ತಿಂದು ಬಿಡಿ” ಎಂಬುದು ಸೇರಿ ಹಲವು ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಇನ್ನು ವಿಡಿಯೊಗೆ ಖುದ್ದು ಜ್ಯೋತಿ ಆಮ್ಗೆ ಅವರೇ ಪ್ರತಿಕ್ರಿಯಿಸಿದ್ದು, “ತುಂಬ ಧನ್ಯವಾದ” ಎಂದು ಹೇಳಿದ್ದಾರೆ. ಅಲ್ಲಿಗೆ, ಜನ ತಣ್ಣಗಾದಂತಾಗಿದೆ.

ಇದನ್ನೂ ಓದಿ: Lok Sabha Election 2024: ʼನನ್ನ ಸ್ಟೈಲು ಬೇರೇನೆ…ʼ; ಕತ್ತೆ ಮೂಲಕ ಪ್ರಚಾರ ನಡೆಸುವ ಅಭ್ಯರ್ಥಿಯ ಕಾರ್ಯ ವೈಖರಿ ಈಗ ವೈರಲ್‌

Continue Reading
Advertisement
Covaxin Safety
ದೇಶ32 mins ago

Covaxin Safety: ಕೊವ್ಯಾಕ್ಸಿನ್‌ನಿಂದ ಅಡ್ಡ ಪರಿಣಾಮ ಎಂದು ಬನಾರಸ್‌ ವಿವಿ ವರದಿ; ವೈದ್ಯ ಸಂಶೋಧನಾ ಸಂಸ್ಥೆ ಆಕ್ಷೇಪ

Food department deletes name from ration card list even though it is alive
ವಿಜಯನಗರ35 mins ago

Food Department : ಜೀವಂತ ಇದ್ದವಳನ್ನು ಸತ್ತಿದ್ದಾಗಿ ಘೋಷಿಸಿದ ಆಹಾರ ಇಲಾಖೆ; ರೇಷನ್‌ ಕಾರ್ಡ್‌ನಿಂದಲೇ ಹೆಸರು ಡಿಲೀಟ್‌

History Of Ice Cream
ಆಹಾರ/ಅಡುಗೆ37 mins ago

History Of Ice Cream: ಎಲ್ಲರ ನೆಚ್ಚಿನ ಐಸ್‌ಕ್ರೀಮ್‌ ಹುಟ್ಟಿದ್ದು ಹೇಗೆ?

IPL 2024
ಕ್ರೀಡೆ38 mins ago

IPL 2024: ಮೋದಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್​ ಪ್ಲೇ ಆಫ್​ ಪಂದ್ಯಕ್ಕೆ ಐಸಿಸ್‌ ಉಗ್ರರ ಕಾಟ; ಪಂದ್ಯಕ್ಕೂ ಮುನ್ನ ನಾಲ್ವರ ಬಂಧನ

Silver Jewel Trend
ಫ್ಯಾಷನ್48 mins ago

Silver Jewel Trend: ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆದ ಸಿಲ್ವರ್‌ ಜ್ಯುವೆಲರಿಗಳು!

Prajwal Revanna Case
ಪ್ರಮುಖ ಸುದ್ದಿ50 mins ago

Prajwal Revanna Case: ನಾನು ಸೇರಿ ಸುಮಾರು 30 ಜನರ ಫೋನ್ ಟ್ಯಾಪ್: ಸರ್ಕಾರದ ವಿರುದ್ಧ ಎಚ್‌ಡಿಕೆ ಬಾಂಬ್‌!

Holenarasipura sexual assault case SIT moves HC against HD Revanna bail order
ಕ್ರೈಂ55 mins ago

HD Revanna: ರೇವಣ್ಣಗೆ ಜಾಮೀನು ಸಿಕ್ಕರೂ ಸಿಗದ ರಿಲೀಫ್‌; ಎಸ್‌ಐಟಿಯಿಂದ ಹೈಕೋರ್ಟ್‌ ಮೊರೆ

Due to heavy rain in Shira water entered houses and shops
ತುಮಕೂರು1 hour ago

Heavy Rain: ಶಿರಾದಲ್ಲಿ ಭಾರೀ ಮಳೆಗೆ ಮನೆ, ಅಂಗಡಿಗಳಿಗೆ ನುಗ್ಗಿದ ನೀರು

Lok Sabha Election 2024 Shah Rukh Khan booth in Mumbai
ಬಾಲಿವುಡ್1 hour ago

Lok Sabha Election 2024: ಕುಟುಂಬದ ಜತೆ ಬಂದು ಮತ ಚಲಾಯಿಸಿದ ಶಾರುಖ್‌ ಖಾನ್‌

Trichy Tour
ಪ್ರವಾಸ1 hour ago

Trichy Tour: ದಾಂಪತ್ಯದ ಲವಲವಿಕೆಯನ್ನು ಮತ್ತೆ ಜೀವಂತಗೊಳಿಸಲು ತಿರುಚಿರಾಪಳ್ಳಿಗೆ ಹೋಗಿ ಬನ್ನಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌