ED Raid: ನಾಗೇಂದ್ರ- ದದ್ದಲ್‌ ಪಿಎಗಳಿಂದ ಲಕ್ಷ ಲಕ್ಷ ಡೀಲ್, ಇಡಿ ವಿಚಾರಣೆಯಲ್ಲಿ ಬಯಲು; ಯಾವ ಕ್ಷಣದಲ್ಲೂ ಬಾಸ್‌ಗಳ ಬಂಧನ? - Vistara News

ಪ್ರಮುಖ ಸುದ್ದಿ

ED Raid: ನಾಗೇಂದ್ರ- ದದ್ದಲ್‌ ಪಿಎಗಳಿಂದ ಲಕ್ಷ ಲಕ್ಷ ಡೀಲ್, ಇಡಿ ವಿಚಾರಣೆಯಲ್ಲಿ ಬಯಲು; ಯಾವ ಕ್ಷಣದಲ್ಲೂ ಬಾಸ್‌ಗಳ ಬಂಧನ?

ED Raid: ಮಾಜಿ ಸಚಿವ ನಾಗೇಂದ್ರ (Ex minister B Nagendra) ಹಾಗೂ ಶಾಸಕ ಬಸವನಗೌಡ ದದ್ದಲ್‌ (Basanagouda Daddal) ಅವರಿಬ್ಬರ ಆಪ್ತರು ಲಕ್ಷ ಲಕ್ಷ ಹಣದ ಡೀಲ್‌ ಮಾಡಿರುವುದನ್ನು ಇಡಿ ಅಧಿಕಾರಿಗಳು ಬಾಯಿ ಬಿಡಿಸಿದ್ದಾರೆ. ಈ ವಿಚಾರಣೆ ಇವರ ಬಾಸ್‌ಗಳ ಕೊರಳನ್ನೂ ಸುತ್ತಿಕೊಳ್ಳುವ ಸಂಭವವಿದ್ದು, ಯಾವುದೇ ಕ್ಷಣದಲ್ಲಿ ಶಾಸಕರಿಬ್ಬರನ್ನು ಇಡಿ ವಶಕ್ಕೆ ಪಡೆಯಬಹುದು ಎಂದು ನಂಬಲಾಗಿದೆ.

VISTARANEWS.COM


on

b nagendra basanagouda daddal ed raid
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು/ರಾಯಚೂರು: ರಾಜಧಾನಿ ಹಾಗೂ ರಾಯಚೂರಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ (Valmiki Corporation Scam) ಜಾರಿ ನಿರ್ದೇಶನಾಲಯದ (Enforcement directorate) ದಾಳಿ (ED Raid) ಎರಡನೇ ದಿನವೂ ಮುಂದುವರಿದಿದ್ದು, ಮಾಜಿ ಸಚಿವ ನಾಗೇಂದ್ರ (Ex minister B Nagendra) ಹಾಗೂ ಶಾಸಕ ಬಸವನಗೌಡ ದದ್ದಲ್‌ (Basanagouda Daddal) ಅವರಿಬ್ಬರ ಆಪ್ತರು ಲಕ್ಷ ಲಕ್ಷ ಹಣದ ಡೀಲ್‌ ಮಾಡಿರುವುದನ್ನು ಇಡಿ ಅಧಿಕಾರಿಗಳು ಬಾಯಿ ಬಿಡಿಸಿದ್ದಾರೆ. ಈ ವಿಚಾರಣೆ ಇವರ ಬಾಸ್‌ಗಳ ಕೊರಳನ್ನೂ ಸುತ್ತಿಕೊಳ್ಳುವ ಸಂಭವವಿದ್ದು, ಯಾವುದೇ ಕ್ಷಣದಲ್ಲಿ ಶಾಸಕರಿಬ್ಬರನ್ನು ಇಡಿ ವಶಕ್ಕೆ ಪಡೆಯಬಹುದು ಎಂದು ನಂಬಲಾಗಿದೆ.

ಪಂಪಣ್ಣ ಮನೆ ಮೇಲೆ ದಾಳಿ

ಬಸವನಗೌಡ ದದ್ದಲ್ ಅವರ ಮಾಜಿ ಪಿಎ ಪಂಪಣ್ಣ ಮನೆ ಮೇಲೆ ಇಡಿ ದಾಳಿ ನಡೆಸಿದ್ದು, ದದ್ದಲ್ ಆಪ್ತನ ಇನ್‌ಸೈಡ್ ಸ್ಟೋರಿ ಬಗೆದಷ್ಟೂ ಬಯಲಾಗುತ್ತಿದೆ. ಬಿಚ್ಚಾಲಿ ಗ್ರಾ.ಪಂ ಪಿಡಿಓ ಆಗಿ ನಿಯೋಜನೆಗೊಂಡಿದ್ದ ಪಂಪಣ್ಣ, ಪಿಡಿಓ ಚಾರ್ಜ್ ತೆಗೆದುಕೊಳ್ಳದೆ ರಾಯಚೂರು ತಾ.ಪಂನಲ್ಲಿ ಕೇಸ್ ವರ್ಕರ್ ಆಗಿ ಮುಂದುವರಿದಿದ್ದ. ನೂತನ MLC ಒಬ್ಬರ ಪಿಎ ಆಗಲು, ಪಿಡಿಓ ಕೆಲಸಕ್ಕೆ ಹಾಜರಾಗಿರಲಿಲ್ಲ. ನಗರದ ಆಜಾದ್ ನಗರದಲ್ಲಿ ಐಷಾರಾಮಿ ಪ್ಲ್ಯಾಟ್ ಖರೀದಿಸಿ ವಾಸ ಮಾಡುತ್ತಿದ್ದ. ತಾಲೂಕು ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ಬಸವನಗೌಡ ದದ್ದಲ್‌ನ ಖಾಸಗಿ ವ್ಯವಹಾರ ನೋಡಿಕೊಳ್ಳುತ್ತಿದ್ದ.

ಹಗರಣದಲ್ಲಿ ಪಂಪಣ್ಣ 50 ಲಕ್ಷ ರೂಪಾಯಿ ಕಮಿಷನ್ ಪಡೆದಿರುವ ಆರೋಪವಿದೆ. ಆರೋಪದ ಹಿನ್ನೆಲೆಯಲ್ಲಿ ಜುಲೈ 05ರಂದು ಈತ SIT ವಿಚಾರಣೆ ಒಳಗಾಗಿದ್ದ. ಪಂಪಣ್ಣನಿಂದ ಮಹತ್ವದ ದಾಖಲೆಗಳನ್ನು SIT ಪಡೆದಿದೆ. SIT ವಿಚಾರಣೆ ಬೆನ್ನಲ್ಲೇ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಪಂಪಣ್ಣ ಮನೆಯಲ್ಲಿ‌ ಸಿಕ್ಕ ದಾಖಲೆಗಳನ್ನು ಇಡಿ ಅಧಿಕಾರಿಗಳು ಸ್ಕ್ಯಾನ್ ಮಾಡಿ ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದಾರೆ.

ಹರೀಶ್‌ ಬಾಯಿ ಬಿಡಿಸಿದ ಇಡಿ

ನಿನ್ನೆ ಮಾಜಿ ಸಚಿವ ನಾಗೇಂದ್ರ ಪಿಎ ಹರೀಶ್‌ನನ್ನು ಇಡಿ ವಿಚಾರಣೆ ನಡೆಸಿದ್ದು, ಮಲ್ಲೇಶ್ವರಂನ ಶ್ರೀ ಸಾಗರ ಹೋಟೆಲ್ ಬಳಿ ಡೀಲ್ ನಡೆದಿರುವುದು ಗೊತ್ತಾಗಿದೆ. ಹರೀಶ್‌ ಎರಡು ಬ್ಯಾಗ್‌ಗಳಲ್ಲಿ 25 ಲಕ್ಷ ರೂ. ಹಣ ಪಡೆದಿದ್ದ. ನಿಗಮದ ಎಂಡಿ ಪದ್ಮನಾಭ, ಅಕೌಂಟೆಂಟ್ ಪರಶುರಾಮ ಬಳಿ 25 ಲಕ್ಷ ರೂ. ಕಮಿಷನ್ ಪಡೆಯಲು ಈ ಹೋಟೆಲ್‌ಗೆ ಬಂದಿದ್ದ. ಪಿಎ ಹರೀಶ್ ಕೊಟ್ಟ ಮಾಹಿತಿ ಅಧಾರದ ಮೇಲೆ ನಾಗೇಂದ್ರ ಅವರನ್ನು ಪ್ರಶ್ನಿಸಲಾಗುತ್ತಿದ್ದು, ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ. ಈ 25 ಲಕ್ಷ ಹಣ ತರಿಸಿದವರು ಯಾರು, ಆ ಹಣ ಎಲ್ಲಿದೆ ಎಂಬ ಮಾಹಿತಿ ಇಡಿಗೆ ಬೇಕಾಗಿದೆ. ಸದ್ಯ ಐದು ಜನ ಇಡಿ ಅಧಿಕಾರಿಗಳ ತಂಡದಿಂದ ನಾಗೇಂದ್ರ ಮನೆಯಲ್ಲಿ ಶೋಧ ಮುಂದುವರಿದ್ದು, ಬ್ಯಾಂಕ್‌ ಅಧಿಕಾರಿಗಳ ಮೇಲಿನ ಇಡಿ ದಾಳಿಯಲ್ಲಿ ಸಿಕ್ಕ ದಾಖಲೆಗಳ ಅಧಾರದ ಮೇಲೆ ಮಾಜಿ ಸಚಿವರ ವಿಚಾರಣೆ ನಡೆಸಲಾಗುತ್ತಿದೆ.

ಬ್ಯಾಂಕ್ ಸಿಬ್ಬಂದಿಗಳಿಗೆ ಲಕ್ಷ‌ ಲಕ್ಷ ಕಮಿಷನ್

ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಸಿಬ್ಬಂದಿಗೂ ಲಕ್ಷ ಲಕ್ಷ ರೂ. ಕಮಿಷನ್ ನೀಡಲಾಗಿತ್ತು. ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಸಚಿವರ ಹಾಗೂ ಅಧ್ಯಕ್ಷರ ಪಿಎಗಳು ಬ್ಯಾಂಕ್‌ಗೆ ಸತತವಾಗಿ ಭೇಟಿ ನೀಡಿದ್ದರು. ಈಗಾಗಲೇ ಬ್ಯಾಂಕಿನ ಸಿಸಿ ಕ್ಯಾಮರಾ ರೆಕಾರ್ಡ್‌ಗಳನ್ನು ಎಸ್‌ಐಟಿ ಪರಿಶೀಲನೆ ಮಾಡಿದ್ದು, ಅದನ್ನು ಇಡಿ ಕೂಡ ಸಂಗ್ರಹಿಸಿದೆ. ಸಚಿವರ ಹಾಗೂ ಶಾಸಕರ ಮೇಲೆ ದಾಳಿಗೂ ಮುನ್ನ ಬ್ಯಾಂಕ್‌ಗೆ ಭೇಟಿ ನೀಡಿ ಬ್ಯಾಂಕ್ ಸಿಬ್ಬಂದಿಗಳಿಂದ ಮಾಹಿತಿ ಸಂಗ್ರಹಿಸಿದೆ.

ಮುಂಜಾನೆಯೇ ಬ್ಯಾಂಕ್‌ ಅಧಿಕಾರಿಗಳಿಗೆ ಬುಲಾವ್‌

ಮಾಜಿ‌ ಸಚಿವ ನಾಗೇಂದ್ರ ಮನೆಗೆ ಇಡಿ ಅಧಿಕಾರಿಗಳು ಬೆಳಗಿನ ಜಾವ ಐದು ಗಂಟೆಗೇ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿಕೊಂಡು ನಾಗೇಂದ್ರ ಮನೆಯಲ್ಲಿ ಸಿಕ್ಕಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸತತ 24 ಗಂಟೆಗಳಿಂದ ಇಡಿ ಅಧಿಕಾರಿಗಳ ದಾಳಿ ಮುಂದುವರಿದಿದೆ.

ಇಡಿ ದಾಳಿ ನಡುವೆಯೇ ಎಸ್‌ಐಟಿ ನೋಟೀಸ್‌

ಇಡಿ ಅಧಿಕಾರಿಗಳ ದಾಳಿ ನಡುವೆಯೇ ಎಸ್ಐಟಿ ಅಧಿಕಾರಿಗಳಿಂದ ಮಾಜಿ ಸಚಿವ ನಾಗೇಂದ್ರ ಮತ್ತು ಶಾಸಕ ಬಸವನ ಗೌಡ ದದ್ದಲ್‌ಗೆ ಇಂದು ಎಸ್ಐಟಿ ಕಚೇರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ಜಾರಿಯಾಗಿದೆ. ಎರಡು ದಿನಗಳ ಹಿಂದೆ ನಾಗೇಂದ್ರರನ್ನು ಎಂಟು ಗಂಟೆ, ದದ್ದಲ್‌ರನ್ನು ನಾಲ್ಕು ಗಂಟೆ ಕಾಲ ಎಸ್‌ಐಟಿ ವಿಚಾರಣೆ ನಡೆಸಿತ್ತು. ಮತ್ತೆ ನಿನ್ನೆ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸೂಚಿಸಿದ್ದರು. ಆದರೆ ನಿನ್ನೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಪರಿಣಾಮ ಇಬ್ಬರೂ ವಿಚಾರಣೆ ಹಾಜರಾಗಿರಲಿಲ್ಲ. ಇವತ್ತೂ ಇಡಿ ದಾಳಿ ಮುಂದುವರಿದ ಪರಿಣಾಮ ಎಸ್ಐಟಿ ವಿಚಾರಣೆಗೆ ಹಾಜರಾಗುವುದು ಅನುಮಾನವಾಗಿದೆ.

ಇದನ್ನೂ ಓದಿ | ED Raid: ಇಡಿ- ಸಿಬಿಐ ಮೆಗಾ ದಾಳಿ; 80 ಅಧಿಕಾರಿಗಳಿಂದ ರೇಡ್‌, ಬ್ಯಾಂಕ್‌ ಸಿಬ್ಬಂದಿ ಮನೆ ಸೀಜ್‌! ಬೆಳಗ್ಗೆಯಿಂದ ಏನೇನಾಯ್ತು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Team India : ಶ್ರೀಲಂಕಾ ಪ್ರವಾಸದ ಟಿ20 ಸರಣಿಗೆ ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ನಾಯಕ

Team India: ಹಾರ್ದಿಕ್ ಪಾಂಡ್ಯ ವಿಶ್ವಕಪ್ ಸಮಯದಲ್ಲಿ ​​ ರೋಹಿತ್ ಅವರ ಉಪನಾಯಕರಾಗಿದ್ದರು. ಅವರು ಹೆಚ್ಚು ಅನುಭವ ಹೊಂದಿದ್ದಾರೆ. ಮೂರು ಏಕದಿನ ಮತ್ತು 16 ಟಿ 20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಜೊತೆಗೆ ಐಪಿಎಲ್​​ನ ಎರಡು ಋತುಗಳಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ.

VISTARANEWS.COM


on

Team India
Koo

ನವದೆಹಲಿ: ಸೀಮಿತ ಓವರ್​ಗಳ ಪಂದ್ಯಗಳ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿರುವ ಭಾರತ ತಂಡಕ್ಕೆ (Team India) ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ತಂಡದ ನಾಯಕರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ. ಅವರು ಟಿ20 ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ತಿಂಗಳು ಟಿ 20 ವಿಶ್ವಕಪ್​ನಲ್ಲಿ ಭಾರತವನ್ನು ಪ್ರಶಸ್ತಿಗೆ ಮುನ್ನಡೆಸಿದ ರೋಹಿತ್ ಶರ್ಮಾ ಅವರಿಂದ ಸೂರ್ಯಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಾರ್ಬಡೋಸ್​ನಲ್ಲಿ ನಡೆದ ಫೈನಲ್ ನಂತರ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರೊಂದಿಗೆ ರೋಹಿತ್​​ ನಿವೃತ್ತಿ ಹೊಂದಿದ್ದಾರೆ.

ಹಾರ್ದಿಕ್ ಪಾಂಡ್ಯ ವಿಶ್ವಕಪ್ ಸಮಯದಲ್ಲಿ ​​ ರೋಹಿತ್ ಅವರ ಉಪನಾಯಕರಾಗಿದ್ದರು. ಅವರು ಹೆಚ್ಚು ಅನುಭವ ಹೊಂದಿದ್ದಾರೆ. ಮೂರು ಏಕದಿನ ಮತ್ತು 16 ಟಿ 20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಜೊತೆಗೆ ಐಪಿಎಲ್​​ನ ಎರಡು ಋತುಗಳಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಗಾಯಗಳು ಹಾರ್ದಿಕ್ ಅವರನ್ನು ಕಾಡುತ್ತಿವೆ. ಇತ್ತೀಚೆಗೆ, ಅಕ್ಟೋಬರ್ 19, 2023 ರಂದು ಏಕದಿನ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತದ ಪಂದ್ಯದ ಸಮಯದಲ್ಲಿ ಅವರಿಗೆ ಆದ ಪಾದದ ಗಾಯವು ಅವರನ್ನು ಐಪಿಎಲ್ 2024 ರವರೆಗೆ ತಂಡದಿಂದ ಹೊರಕ್ಕೆ ಇರುವಂತೆ ಮಾಡಿತು. ಬಳಿಕ ಅವರು ರೋಹಿತ್ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕನಾಗಿ ಆಡಿದರು. ಅವರು ಟಿ 20 ವಿಶ್ವಕಪ್​​ನಲ್ಲಿ ರಾಷ್ಟ್ರೀಯ ಕರ್ತವ್ಯಕ್ಕೆ ಮರಳಿದರು. ವಾಸ್ತವವಾಗಿ, 2022 ರ ಆರಂಭದಿಂದ ಭಾರತ ಆಡಿದ 79 ಟಿ 20 ಪಂದ್ಯಗಳಲ್ಲಿ, ಹಾರ್ದಿಕ್ ಕೇವಲ 46 ರಲ್ಲಿ ಮಾತ್ರ ಭಾಗಿಯಾಗಿದ್ದಾರೆ.

ಸೂರ್ಯಕುಮಾರ್ ಈ ಹಿಂದೆ ದೇಶೀಯ ಕ್ರಿಕೆಟ್ನಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐದು ಟಿ 20 ಐ ಸರಣಿಯಲ್ಲಿ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೂರು ಟಿ 20 ಐ ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಅವರು ನಾಯಕತ್ವದ ಸಾಲಿನಲ್ಲಿ ಬಲವಾಗಿದ್ದಾರೆ ಮತ್ತು ಸಮಕಾಲೀನ ಟಿ 20 ಕ್ರಿಕೆಟ್​ಗೆ ಸೂಕ್ತ ವೇಗದಲ್ಲಿ ಬ್ಯಾಟಿಂಗ್ ಮಾಡುತ್ತಾರೆ.

ಇದನ್ನೂ ಓದಿ: Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

ಟಿ 20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರಿಂದ ಅಧಿಕಾರ ವಹಿಸಿಕೊಂಡ ಹೊಸ ಕೋಚ್ ಗೌತಮ್ ಗಂಭೀರ್ ಅವರ ಅಡಿಯಲ್ಲಿ ಶ್ರೀಲಂಕಾದಲ್ಲಿ ಟಿ 20 ಪಂದ್ಯಗಳಲ್ಲಿ ಭಾರತ ಪಾಲ್ಗೊಳ್ಳಬೇಕಾಗಿದೆ. 2026 ರಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂದಿನ ಟಿ 20 ವಿಶ್ವಕಪ್​ಗೆ ತಂಡವನ್ನು ನಿರ್ಮಿಸುವ ನಿಟ್ಟಿನಲ್ಲಿ ಎಲ್ಲಾ ಮೊದಲ ಆಯ್ಕೆಯ ಆಟಗಾರರೊಂದಿಗೆ ತಂಡ ಸಿದ್ಧಗೊಳ್ಳಲಿದೆ. ಟಿ 20 ವಿಶ್ವಕಪ್ ನಂತರ ಭಾರತವು ಜಿಂಬಾಬ್ವೆಯಲ್ಲಿ ಐದು ಪಂದ್ಯಗಳ ಟಿ 20 ಐ ಸರಣಿಯನ್ನು ಆಡಿತು. ಆದರೆ ಆ ತಂಡದಲ್ಲಿ ವಿಶ್ವಕಪ್ ಗೆದ್ದ ತಂಡದಿಂದ ಕೇವಲ ಮೂವರು ಆಟಗಾರರು ಇದ್ದರು. ಅವರು ಕೊನೆಯ ಮೂರು ಪಂದ್ಯಗಳಿಗೆ ಮಾತ್ರ ಲಭ್ಯವಿದ್ದರು.

ಪ್ರವಾಸ ತಂಡವನ್ನು ಅಂತಿಮಗೊಳಿಸಲು ಆಯ್ಕೆದಾರರು ಬುಧವಾರ ಸಭೆ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರವಾಸದಲ್ಲಿ ಮೂರು ಟಿ20 ಪಂದ್ಯಗಳ ಜೊತೆಗೆ ಮೂರು ಏಕದಿನ ಪಂದ್ಯಗಳು ನಡೆಯಲಿವೆ.

Continue Reading

ಕ್ರೀಡೆ

Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

Yuvraj Singh: ಅಂಗವಿಕಲರ ಉದ್ಯೋಗ ಉತ್ತೇಜನದ ರಾಷ್ಟ್ರೀಯ ಕೇಂದ್ರದ (ಎನ್​ಸಿಪಿಇಡಿಪಿ) ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ಅವರು ಅಮರ್ ಕಾಲೋನಿ ಪೊಲೀಸ್ ಠಾಣೆಯ ಎಸ್ಎಚ್ಒಗೆ ಕ್ರಿಕೆಟಿಗರ ವಿರುದ್ಧ ದೂರು ದಾಖಲಿಸಿರುವುದರಿಂದ ಈ ವಿಷಯ ಮತ್ತಷ್ಟು ಬೆಳೆದಿದೆ.

VISTARANEWS.COM


on

Yuvraj Singh
Koo

ನವದೆಹಲಿ: ಲೆಜೆಂಡ್ಸ್ ವಿಶ್ವ ಕಪ್​ನ ಉದ್ಘಾಟನಾ ಆವೃತ್ತಿಯಲ್ಲಿ ಗೆಲುವು ಸಾಧಿಸಿದ ಖುಷಿಯಲ್ಲಿ ಮಾಡಿದ ವಿಡಿಯೊ ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ (Yuvraj Singh), ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಗುರ್ಕೀರತ್ ಮಾನ್ ಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ. ಎಲ್ಲರ ವಿರುದ್ಧ ಅಂಗವಿಕಲರನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಪೊಲೀಸ್ ದೂರು ದಾಖಲಿಸಲಾಗಿದೆ. ವಿಶೇಷವೆಂದರೆ, ಮಾಜಿ ಕ್ರಿಕೆಟಿಗರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ರೀಲ್ ಅನ್ನು ಪೋಸ್ಟ್ ಮಾಡಿದ್ದರು. ಅಲ್ಲಿ ಅವರು ನಟ ವಿಕ್ಕಿ ಕೌಶಲ್ ಅವರ ಮುಂಬರುವ ಚಿತ್ರ ಬ್ಯಾಡ್ ನ್ಯೂಸ್​ನ ವೈರಲ್ ಹಾಡಿನ ‘ತೌಬಾ-ತೌಬಾ’ ಹಾಡಿಗೆ ಹೆಜ್ಜೆ ಹಾಕಿದ್ದರು.

ವಿಶ್ವ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಫೈನಲ್​​ನಲ್ಲಿ ಭಾಗವಹಿಸಿದ ನಂತರ ಕ್ರಿಕೆಟಿಗರು ತಮ್ಮ ದೇಹದ ಸ್ಥಿತಿಯನ್ನು ಹಾಸ್ಯಮಯ ರೀತಿಯಲ್ಲಿ ತೋರಿಸಿದ್ದರು. ಈ ಕಿರು ಕ್ಲಿಪ್ ವಿಕ್ಕಿ ಕೌಶಲ್ ಅವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅವರು ಪೋಸ್ಟ್​ಗೆ ನಗುವ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದರು. ಆದಾಗ್ಯೂ, ಭಾರತದ ಪ್ಯಾರಾ-ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿ ಅವರು ಕ್ರಿಕೆಟಿಗರು ವಿಕಲಚೇತನರನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಟೀಕಿಸಿದ್ದರು. ಅವರ ಆಕ್ರೋಶದ ನಂತರ, ಹರ್ಭಜನ್. ರೀಲ್ ಅನ್ನು ತೆಗೆದು ತಮ್ಮ ಇನ್ಸ್ಟಾಗ್ರಾಮ್ ಮೂಲಕ ಕ್ಷಮೆ ಯಾಚಿಸಿದ್ದರು.

ಅಂಗವಿಕಲರ ಉದ್ಯೋಗ ಉತ್ತೇಜನದ ರಾಷ್ಟ್ರೀಯ ಕೇಂದ್ರದ (ಎನ್​ಸಿಪಿಇಡಿಪಿ) ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ಅವರು ಅಮರ್ ಕಾಲೋನಿ ಪೊಲೀಸ್ ಠಾಣೆಯ ಎಸ್ಎಚ್ಒಗೆ ಕ್ರಿಕೆಟಿಗರ ವಿರುದ್ಧ ದೂರು ದಾಖಲಿಸಿರುವುದರಿಂದ ಈ ವಿಷಯ ಮತ್ತಷ್ಟು ಬೆಳೆದಿದೆ.

ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅರ್ಮಾನ್ ಸೂಚನೆ

ಕ್ರಿಕೆಟಿಗರಲ್ಲದೆ, ಮೆಟಾ ಇಂಡಿಯಾದ ಉಪಾಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ದೇವನಾಥನ್ ಕೂಡ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಅನ್ನು ಉಲ್ಲಂಘಿಸಿದ್ದಾರೆ ಎಂದು ದೂರು ನೀಡಲಾಗಿದೆ. “ಈ ವೀಡಿಯೊ ಭಾರತದ ಸಂವಿಧಾನದ 21 ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ, ಇದು ಪ್ರತಿಯೊಬ್ಬ ವ್ಯಕ್ತಿಗೆ ಘನತೆಯಿಂದ ಬದುಕುವ ಹಕ್ಕನ್ನು ಖಾತರಿಪಡಿಸುತ್ತದೆ. ಇದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2016 ರ ಸೆಕ್ಷನ್ 92 ಅನ್ನು ಉಲ್ಲಂಘಿಸುತ್ತದೆ ಮತ್ತು ನಿಪುನ್ ಮಲ್ಹೋತ್ರಾ ವಿರುದ್ಧ ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (2004 ಎಸ್ಸಿಸಿ ಆನ್ಲೈನ್ ಎಸ್ಸಿ 1639) ಪ್ರಕರಣದಲ್ಲಿ ಸ್ಥಾಪಿಸಲಾದ ಸುಪ್ರೀಂ ಕೋರ್ಟ್​ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ ” ಎಂದು ಅರ್ಮಾನ್ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Chennai Super King : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್​

ಕ್ರಿಕೆಟಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅರ್ಮಾನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. “ಅವರ ಕೃತ್ಯಗಳಿಗಾಗಿ ಅವರಿಗೆ ದಂಡ ವಿಧಿಸಬೇಕು” ಎಂದು ಅರ್ಮಾನ್ ಅಭಿಪ್ರಾಯಪಟ್ಟಿದ್ದಾರೆ.

Continue Reading

ಪ್ರಮುಖ ಸುದ್ದಿ

T20 World Cup 2024 : 30 ಎಸೆತಕ್ಕೆ 30 ರನ್​ ಇದ್ದಾಗ ದಿಕ್ಕೇ ತೋಚದಂತಾಗಿದ್ದೆ! ಆ ತಲ್ಲಣ ವಿವರಿಸಿದ ಶರ್ಮಾ

T20 World Cup 2024 : ಇಂಥ ಪರಿಸ್ಥಿತಿಯಲ್ಲಿ ಏನಾಗುತ್ತಿದೆ ಎಂದು ಗೊತ್ತಾಗಿರಲಿಲ್ಲ. ತಮ್ಮ ತಂಡದ ಆಟಗಾರರಿಗೆ ತಮ್ಮ ಸಂಯಮವನ್ನು ಕಾಪಾಡಿಕೊಳ್ಳುವಂತೆ ಕೇಳಿಕೊಳ್ಳುವುದು ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲ. ಪ್ರಶಸ್ತಿಯ ಆಕಾಂಕ್ಷೆಗಳು ಹೊತ್ತು ಕಳೆದಂತೆ ಕ್ಷೀಣಿಸಿತ್ತು ಎಂದು ರೋಹಿತ್​ ಶರ್ಮಾ ಹೇಳಿದ್ದಾರೆ

VISTARANEWS.COM


on

T20 World Cup 2024
Koo

ಬೆಂಗಳೂರು: ಜೂನ್​ನಲ್ಲಿ ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿ ನಡೆದ ಟಿ 20 ವಿಶ್ವಕಪ್ 2024 ರ (T20 World Cup 2024) ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಗೆಲುವಿನ ಕಡೆಗೆ ಮುನ್ನುಗ್ಗುತ್ತಿದ್ದಾಗ ತಮ್ಮ ಮನಸ್ಸಿನಲ್ಲಿ ಆದ ಭಾವನೆಗಳನ್ನು ಅವರು ವಿವರಿಸಿದ್ದಾರೆ. ಆ ವೇಳೆ ತಮ್ಮ ಮನಸ್ಸು ಸಂಪೂರ್ಣವಾಗಿ ನಿಶ್ಚಲವಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.

15ನೇ ಓವರ್​ನಲ್ಲಿ ಹೆನ್ರಿಕ್ ಕ್ಲಾಸೆನ್, ಅಕ್ಷರ್ ಪಟೇಲ್ ಅವರ ಒಂದೇ ಓವರ್​ನಲ್ಲಿ 24 ರನ್ ಬಾರಿಸಿದ್ದರು. ಹೀಗಾಗಿ ದಕ್ಷಿಣ ಆಫ್ರಿಕಾ ಗೆಲುವಿನತ್ತ ಸಾಗುತ್ತಿತ್ತು. ಮೊದಲ ವಿಶ್ವಕಪ್ ಗೆಲ್ಲಲು 177 ರನ್​ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಕ್ಕೆ ಕೊನೆಯ ಐದು ಓವರ್​ಗಳಲ್ಲಿ ಕೇವಲ 30 ರನ್​ ಅವಶ್ಯಕತೆಯಿತ್ತು. ಕ್ಲಾಸೆನ್ 22 ಎಸೆತಗಳಲ್ಲಿ 49 ರನ್ ಗಳಿಸಿದರೆ, ಮಿಲ್ಲರ್ 7 ಎಸೆತಗಳಲ್ಲಿ 14 ರನ್ ಗಳಿಸಿ ಇದ್ದರು. ದಕ್ಷಿಣ ಆಫ್ರಿಕಾ ಆರು ವಿಕೆಟ್​ ಕೂಡ ಹೊಂದಿತ್ತು. ಟಿ 20 ಕ್ರಿಕೆಟ್​ನ ಅತ್ಯಂತ ಅಪಾಯಕಾರಿ ಬ್ಯಾಟರ್​ಗಳು ಅವರು.

ಇಂಥ ಪರಿಸ್ಥಿತಿಯಲ್ಲಿ ಏನಾಗುತ್ತಿದೆ ಎಂದು ಗೊತ್ತಾಗಿರಲಿಲ್ಲ. ತಮ್ಮ ತಂಡದ ಆಟಗಾರರಿಗೆ ತಮ್ಮ ಸಂಯಮವನ್ನು ಕಾಪಾಡಿಕೊಳ್ಳುವಂತೆ ಕೇಳಿಕೊಳ್ಳುವುದು ಬಿಟ್ಟರೆ ಬೇರೆ ಆಯ್ಕೆ ಇರಲಿಲ್ಲ. ಪ್ರಶಸ್ತಿಯ ಆಕಾಂಕ್ಷೆಗಳು ಹೊತ್ತು ಕಳೆದಂತೆ ಕ್ಷೀಣಿಸಿತ್ತು ಎಂದು ರೋಹಿತ್​ ಶರ್ಮಾ ಹೇಳಿದ್ದಾರೆ

ನಾನು ಸಂಪೂರ್ಣವಾಗಿ ಸ್ತಬ್ಧನಾಗಿದ್ದೆ. ನಾನು ಮುಂದೆ ಏನಾಗುತ್ತದೆ ಎಂದು ಯೋಚಿಸಲೂ ಸಮಯ ಇರಲಿಲ್ಲ. ಈ ವಾಸ್ತವದಲ್ಲೇ ಉಳಿಯುವುದು ಮತ್ತು ಕೆಲಸದ ಮೇಲೆ ಗಮನ ಹರಿಸುವುದು ಗುರಿಯಾಗಿತ್ತು. ನಾವೆಲ್ಲರೂ ಶಾಂತವಾಗಿದ್ದು ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುವುದು ಬಹಳ ಮುಖ್ಯವಾಗಿತ್ತು”ಎಂದು ಡಲ್ಲಾಸ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರೋಹಿತ್ ಹೇಳಿದ್ದಾರೆ.

ಇದನ್ನೂ ಓದಿ: Chennai Super King : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್​

ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದ ರೋಹಿತ್​​ ಒತ್ತಡದಲ್ಲಿ ಭಯಭೀತರಾಗದೆ ಕಾರ್ಯಯೋಜನೆ ಮೇಲೆ ಗಮನ ಹರಿಸಿದ್ದಕ್ಕಾಗಿ ತಮ್ಮ ತಂಡವನ್ನು ಶ್ಲಾಘಿಸಿದರು.

ದಕ್ಷಿಣ ಆಫ್ರಿಕಾಕ್ಕೆ 30 ಎಸೆತಗಳಲ್ಲಿ 30 ರನ್​ಗಳ ಅಗತ್ಯವಿದ್ದಾಗ ನಾವು ತೀವ್ರ ಒತ್ತಡದಲ್ಲಿದ್ದೆವು. ನಾವು ಎಸೆದ ಐದು ಓವರ್​ಗಳು ನಾವು ಎಷ್ಟು ಸಂಯಮದಿಂದ ಇದ್ದೆವು ಎಂಬುದನ್ನು ತೋರಿಸಿತು. ನಾವು ಬೇರೆ ಯಾವುದರ ಬಗ್ಗೆಯೂ ಹೆಚ್ಚು ಯೋಚಿಸದೆ ನಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿದೆವು. ನಾವು ಭಯಭೀತರಾಗಲಿಲ್ಲ; ಅದರ ಫಲಿತಾಂಶ ಸಿಕ್ಕಿತು ಎಂದು 37 ವರ್ಷದ ಆಟಗಾರ ಹೇಳಿದ್ದಾರೆ.

ಹಾರ್ದಿಕ್ ಪಾಂಡ್ಯ, ಅರ್ಶ್​ದೀಪ್​ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಕೊನೆಯ ಐದು ಓವರ್​ಗಳಲ್ಲಿ ಗಮನಾರ್ಹವಾಗಿ ಬೌಲಿಂಗ್ ಮಾಡಿ ಕೇವಲ 22 ರನ್​ ಬಿಟ್ಟುಕೊಟ್ಟು ಏಳು ರನ್​ಗಳ ಅಂತರದಿಂದ ಗೆದ್ದರು. ಇದರೊಂದಿಗೆ ಐಸಿಸಿ ಪ್ರಶಸ್ತಿಗಾಗಿ ಭಾರತದ 11 ವರ್ಷಗಳ ಕಾಯುವಿಕೆ ಕೊನೆಗೊಂಡಿತು.

Continue Reading

ಕರ್ನಾಟಕ

Dengue Fever: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ತೀವ್ರ ಏರಿಕೆ; ಮಂಗಳವಾರ 487 ಕೇಸ್‌ ಪತ್ತೆ!

Dengue Fever: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 487 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 128 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

VISTARANEWS.COM


on

Koo

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 487 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 128 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದ್ದು, ಸದ್ಯ ರಾಜ್ಯದಲ್ಲಿ 358 ಸಕ್ರಿಯ ಪ್ರಕರಣಗಳ ಇವೆ.

ಕಳೆದ 24 ಗಂಟೆಗಳಲ್ಲಿ 4572 ಟೆಸ್ಟ್‌ ಮಾಡಿದ್ದು, ಇದರಲ್ಲಿ 487 ಮಂದಿಗೆ ಸೋಂಕು ದೃಢಪಟ್ಟಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 283, ಬೆಂಗಳೂರು ನಗರ 5, ಬೆಂ. ಗ್ರಾಮಾಂತರ 3, ರಾಮನಗರ 1, ಕೋಲಾರ 3, ತುಮಕೂರು 18, ಚಿತ್ರದುರ್ಗ 10, ದಾವಣಗೆರೆ 12, ಶಿವಮೊಗ್ಗ 9, ವಿಜಯಪುರ 2, ಧಾರವಾಡ 17, ಹಾವೇರಿ 12, ಉತ್ತರ ಕನ್ನಡ 5, ಕಲಬುರಗಿ 12 ಬೀದರ್‌ 3, ವಿಜಯನಗರ 16, ಕೊಪ್ಪಳ 6, ಮೈಸೂರು 5, ಚಾಮರಾಜನಗರ 4, ಮಂಡ್ಯ 6, ಹಾಸನ 26, ಉಡುಪಿ 12, ಚಿಕ್ಕಮಗಳೂರು 9, ಕೊಡಗು ಜಿಲ್ಲೆಯಲ್ಲಿ 8 ಪ್ರಕರಣ ಪತ್ತೆಯಾಗಿವೆ.

ಇನ್ನು ರಾಜ್ಯದಲ್ಲಿ ಜನವರಿಯಿಂದ ಈವರೆಗೆ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 10449 ವರದಿಯಾಗಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಸದ್ಯ ಡಂಗ್ಯೂ ಮರಣ ಪ್ರಮಾಣ ಶೇ. 0.07 ಇದೆ.

ಇದನ್ನೂ ಓದಿ | Manikanta Rathod: ಅನ್ನ ಭಾಗ್ಯ ಅಕ್ಕಿ ಕಳವು ಕೇಸ್‌ನಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಬಂಧನ

ಮಹಾಮಾರಿ ಡೆಂಗ್ಯೂಗೆ ಯುವಕ ಬಲಿ

ಶಿವಮೊಗ್ಗ: ಮಹಾಮಾರಿ ಡೆಂಗ್ಯೂಗೆ ಯುವಕ ಬಲಿಯಾಗಿರುವ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ನಡೆದಿದೆ. ಇದರಿಂದ ಒಂದೇ ವಾರದಲ್ಲಿ ಇಬ್ಬರು ಡೆಂಗ್ಯೂದಿಂದ ಮೃತಪಟ್ಟಂತಾಗಿದೆ. ಹೊಸನಗರ ರಸ್ತೆಯ ನಿವಾಸಿ ಆಶಿಕ್ ರಸೂಲ್ (27) ಮೃತಪಟ್ಟ ದುರ್ದೈವಿ.

ಶನಿವಾರದಿಂದ ಜ್ವರದಿಂದ ಬಳಲುತಿದ್ದ ಆಶಿಕ್ ರಸೂಲ್‌ಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಸಾವನ್ನಪ್ಪಿದ್ದಾನೆ. ಬಿಳಿರಕ್ತ ಕಣಗಳು ತೀವ್ರವಾಗಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ಯುವಕ ಸಾವಿಗೀಡಾಗಿದ್ದಾನೆ. ಇತ್ತೀಚೆಗೆ ರಶ್ಮಿ ನಾಯಕ್ ಎನ್ನುವ ರಿಪ್ಪನ್‌ಪೇಟೆಯ ಬಿವಾಸು ಮಹಿಳೆ ಡೆಂಗ್ಯೂನಿಂದ ಮೃತಪಟ್ಟಿದ್ದಾರೆ.

Continue Reading
Advertisement
Oil Tanker Capsizes
ವಿದೇಶ8 mins ago

Oil Tanker Capsizes: ತೈಲ ತುಂಬಿದ್ದ ಹಡಗು ಮುಳುಗಡೆ; 13 ಭಾರತೀಯರು ಜಲಸಮಾಧಿ

Team India
ಪ್ರಮುಖ ಸುದ್ದಿ16 mins ago

Team India : ಶ್ರೀಲಂಕಾ ಪ್ರವಾಸದ ಟಿ20 ಸರಣಿಗೆ ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ನಾಯಕ

Ananth Ambani Wedding
ದೇಶ37 mins ago

Anant Ambani Wedding: ಅನಂತ್‌ ಅಂಬಾನಿ ಮದುವೆಯಲ್ಲಿ ಬಾಂಬ್‌ ಸ್ಫೋಟಕ್ಕೆ ನಡೆದಿತ್ತಾ ಸಂಚು? ಕಿಡಿಗೇಡಿ ಅರೆಸ್ಟ್‌

Yuvraj Singh
ಕ್ರೀಡೆ47 mins ago

Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

Mosaic of Modernity art exhibition by Gallery G in Bengaluru
ಕರ್ನಾಟಕ1 hour ago

Bengaluru News: ಬೆಂಗಳೂರಿನಲ್ಲಿ ಗ್ಯಾಲರಿ ಜಿ ಯಿಂದ ‘ಮೊಸಾಯಿಕ್ ಆಫ್ ಮಾಡರ್ನಿಟಿ’ ಕಲಾ ಪ್ರದರ್ಶನ

Viral Video
ವೈರಲ್ ನ್ಯೂಸ್1 hour ago

Viral Video: ಪಕ್ಷದ ಕಾರ್ಯಕರ್ತನಿಗೆ ರಪ್‌ ಅಂತಾ ಕೆನ್ನೆಗೆ ಬಾರಿಸಿದ ಟಿಎಂಸಿ ನಾಯಕಿ; ವಿಡಿಯೋ ಇದೆ

T20 World Cup 2024
ಪ್ರಮುಖ ಸುದ್ದಿ2 hours ago

T20 World Cup 2024 : 30 ಎಸೆತಕ್ಕೆ 30 ರನ್​ ಇದ್ದಾಗ ದಿಕ್ಕೇ ತೋಚದಂತಾಗಿದ್ದೆ! ಆ ತಲ್ಲಣ ವಿವರಿಸಿದ ಶರ್ಮಾ

Assembly Session
ಕರ್ನಾಟಕ2 hours ago

Assembly Session: ಅಧಿಕಾರಿಗಳು ಮಾಡಿದ ಅಕ್ರಮಕ್ಕೆ ಸಚಿವರ ವಿರುದ್ಧ ಆರೋಪಿಸುವುದು ಸರಿಯಲ್ಲ ಎಂದ ಡಿಕೆಶಿ!

A 15 year old boy weighing 111 kg underwent successful spinal disc surgery that avoided potential paralysis
ಕರ್ನಾಟಕ2 hours ago

Fortis Hospital: 111 ಕೆಜಿ ತೂಕವಿದ್ದ ಬಾಲಕನಿಗೆ ಪಾರ್ಶ್ವವಾಯು ತಪ್ಪಿಸಿದ ʼಬೆನ್ನೆಲುಬಿನ ಡಿಸ್ಕ್ʼ ಶಸ್ತ್ರಚಿಕಿತ್ಸೆ

Pooja Khedkar
ದೇಶ2 hours ago

Pooja Khedkar: ಪೂಜಾ ಖೇಡ್ಕರ್‌ ಪುಣೆ ಜಿಲ್ಲಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ11 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ13 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 day ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ2 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌