Valmiki Corporation Scam: ವಾಲ್ಮೀಕಿ ನಿಗಮ ಹಗರಣದ ಚಾರ್ಜ್‌ಶೀಟ್‌ ಸಲ್ಲಿಕೆ, ನಾಗೇಂದ್ರಗೆ ಕ್ಲೀನ್‌ ಚಿಟ್!‌ - Vistara News

ಪ್ರಮುಖ ಸುದ್ದಿ

Valmiki Corporation Scam: ವಾಲ್ಮೀಕಿ ನಿಗಮ ಹಗರಣದ ಚಾರ್ಜ್‌ಶೀಟ್‌ ಸಲ್ಲಿಕೆ, ನಾಗೇಂದ್ರಗೆ ಕ್ಲೀನ್‌ ಚಿಟ್!‌

Valmiki Corporation Scam: ಲೆಕ್ಕಪರಿಶೋಧಕ ಚಂದ್ರಶೇಖರ್ (Chandrashekhar) ಆತ್ಮಹತ್ಯೆ (Sucied) ಪ್ರಕರಣ ಸಂಬಂಧ ಸಿಐಡಿ (CID) ಅಧಿಕಾರಿಗಳು ಸಲ್ಲಿಸರುವ ಚಾರ್ಜ್‌ಶೀಟ್‌ನಲ್ಲಿ ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

VISTARANEWS.COM


on

Valmiki Corporation Scam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವಮೊಗ್ಗ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Corporation Scam) ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ತನಿಖೆಗಾಗಿ ರಚಿಸಲಾಗಿರುವ ಎಸ್‌ಐಟಿ ಚಾರ್ಜ್‌ಶೀಟ್‌ (SIT Charge Sheet) ಸಲ್ಲಿಸಿದೆ. ಇದರಲ್ಲಿ ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರನ್ನು ಹೊಣೆಯಾಗಿಸಲಾಗಿದೆ. ಆದರೆ ಮಾಜಿ ಸಚಿವ ನಾಗೇಂದ್ರ (EX Minister Nagendra) ಹೆಸರೇ ಇಲ್ಲ!

ಲೆಕ್ಕಪರಿಶೋಧಕ ಚಂದ್ರಶೇಖರ್ (Chandrashekhar) ಆತ್ಮಹತ್ಯೆ (Sucied) ಪ್ರಕರಣ ಸಂಬಂಧ ಸಿಐಡಿ (CID) ಅಧಿಕಾರಿಗಳು ಸಲ್ಲಿಸರುವ ಚಾರ್ಜ್‌ಶೀಟ್‌ನಲ್ಲಿ ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಎಸ್‌ಐಟಿ (SIT) ಅಧಿಕಾರಿಗಳ ತಂಡ 300 ಪುಟಗಳ ಚಾರ್ಜ್‌ಶೀಟ್ ಅನ್ನು ಶಿವಮೊಗ್ಗ ಕೋರ್ಟ್‌ಗೆ ಸಲ್ಲಿಸಿದೆ. ಶಿವಮೊಗ್ಗ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಸಿಐಡಿ ಅಧಿಕಾರಿಗಳು ಈ ಪ್ರಕರಣದಲ್ಲಿ ನಾಗೇಂದ್ರ ಹೆಸರನ್ನು ಕೈ ಬಿಟ್ಟಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಚಂದ್ರಶೇಖರ್ ಅವರ ಡೆತ್ ನೋಟ್ ಹಾಗೂ ನಾಗೇಂದ್ರ ಪತ್ನಿ ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿರುವ ಎಸ್‌ಐಟಿ ತಂಡ 300 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಹಗರಣದಲ್ಲಿ ನಿಗಮದ ಅಧೀಕ್ಷಕ ಚಂದ್ರಶೇಖರನ್.ಪಿ (52) ಅವರು ಶಿವಮೊಗ್ಗದ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರನ್.ಪಿ ಬರೆದಿರುವ ಡೆತ್‌ ನೋಟ್‌ನಲ್ಲಿ ಹೆಸರು ಹೇಳದೆ ಸಚಿವ ಬಿ.ನಾಗೇಂದ್ರ ಅವರ ಬಗ್ಗೆ ಉಲ್ಲೇಖ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಕ್ರೋಶ ಎದ್ದ ಪರಿಣಾಮ ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆತ್ಮಹತ್ಯೆಗೆ ಪ್ರಚೋದನೆಗೆ ನಿಗಮದ ಎಂಡಿ ಪದ್ಮನಾಭ್ ಮತ್ತು ಪರುಶರಾಮ್ ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿ ಒತ್ತಡ ನೀಡಿದ್ದಾರೆ ಎಂದು ಇಬ್ಬರ ಹೆಸರು ಉಲ್ಲೇಖಿಸಿದ್ದಾರೆ. ನಿಗಮದ ಹಗರಣದಲ್ಲಿ ಒಂದಿಷ್ಟು ಹಣವನ್ನು ಚಂದ್ರಶೇಖರ್ ಪಡೆದಿರುವುದಾಗಿ, ಪ್ರಕರಣ ಬೆಳಕಿಗೆ ಬಂದರೆ ಸಿಕ್ಕಿಬೀಳುವ ಭಯದಿಂದಾಗಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಪದ್ಮನಾಭ್ ಅವರು ಗೋವಾ ಮತ್ತು ಹೈದ್ರಾಬಾದ್‌ಗೆ ಕರೆದುಕೊಂಡು ಹೋಗಿ ಒತ್ತಡ ಹಾಕಿದ್ದರು. ನೀನು ಹಣ ಪಡೆದಿದ್ದೀಯ, ಪ್ರಕರಣ ಬೆಳಕಿಗೆ ಬಂದ್ರೆ ನೀನೊಬ್ಬನೇ ಜೈಲಿಗೆ ಹೋಗ್ತಿಯಾ ಎಂದು ಬೆದರಿಕೆ ಹಾಕಿದ್ದರು. ನಿನ್ನ ವಿರುದ್ಧ ನಾನೇ ದೂರು ಕೊಡ್ತೀನಿ ಎಂದು ಚಂದ್ರಶೇಖರ್‌ಗೆ ಬೆದರಿಸಿದ್ದರು. ಹೀಗಾಗಿ ಪದ್ಮನಾಭ್ ಮತ್ತು ಪರುಶರಾಮ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಈ ಪ್ರಕರಣದಲ್ಲಿ ವಿರೋಧಪಕ್ಷಗಳು ರಾಜ್ಯಾಧ್ಯಂತ ಪ್ರತಿಭಟನೆ ನಡೆಸಿ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿದ್ದರು. ಬಳಿಕ ನಾಗೇಂದ್ರ ರಾಜೀನಾಮೆ ಸಲ್ಲಿಸಿದ್ದರು. ಆದ್ರೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವ ಎಸ್‌ಐಟಿ ತಂಡ ಈ ಪ್ರಕರಣದಲ್ಲಿ ನಾಗೇಂದ್ರ ಹೆಸರನ್ನು ಕೈಬಿಟ್ಟಿದೆ. ಎಸ್‌ಐಟಿ ಹಗರಣಕ್ಕೆ ಸಂಬಂಧಿಸಿದಂತೆ 300 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಚಂದ್ರಶೇಖರ ಹೆಂಡತಿ ಮತ್ತು ನಿಗಮದ ಅಧಿಕಾರಿಗಳನ್ನು ಸಾಕ್ಷ್ಯ ಮಾಡಿದ್ದಾರೆ.

ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮುಖ್ಯ ಖಾತೆಯಲ್ಲಿ ಹಿಂದಿನ ಸಾಲಿನ ಹಾಗೂ 2024-25 ನೇ ಸಾಲಿನ ಯೋಜನೆಗಳಿಗೆ ಮೀಸಲಿಟ್ಟ 187 ಕೋಟಿ ಹಣದಲ್ಲಿ 88 ಕೋಟಿ ಹಣವನ್ನು ನಿಗಮದ ಅಧ್ಯಕ್ಷರ ಗಮನಕ್ಕೂ ಬಾರದೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂ.ಜಿ ರಸ್ತೆಯ ಶಾಖೆಯ ಅನಧಿಕೃತ ಖಾತೆಗೆ ವರ್ಗಾವಣೆ ಮಾಡಲಾಗಿತ್ತು. ಫೆ.26ರಂದು ಬ್ಯಾಂಕ್‌ನವರು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಲೆಕ್ಕಾಧಿಕಾರಿಗಳ ಸಹಿ ಪಡೆದು ನಿಗಮದ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ 187.33 ಕೋಟಿ ರೂ ಹಣವನ್ನು ವರ್ಗಾವಣೆ ಮಾಡಿದ್ದರು. ಮಾ.4ರಂದು 25 ಕೋಟಿ ರೂ., ಮಾ.6ರಂದು 25 ಕೋಟಿ ರೂ., ಮಾ.21ರಂದು 44 ಕೋಟಿ ರೂ., ಮಾ.22ರಂದು 43.33 ಕೋಟಿ ರೂ. ಹಾಗೂ ಮೇ 21ರಂದು 50 ಕೋಟಿ ರೂ. ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ: R Ashok: ವಾಲ್ಮೀಕಿ ಹಗರಣ; ಮುಖ್ಯಮಂತ್ರಿ ಏನು ಕತ್ತೆ ಕಾಯುತ್ತಿದ್ದರೇ ಎಂದ ಆರ್‌. ಅಶೋಕ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Neeraj Chopra: ಈ ವರ್ಷದ ಅತ್ಯುತ್ತಮ ಎಸೆತದೊಂದಿಗೆ ಡೈಮಂಡ್ ಲೀಗ್​ ಫೈನಲ್​ ಪ್ರವೇಶಿಸಿದ ನೀರಜ್ ಚೋಪ್ರಾ

Neeraj Chopra: ತೊಡೆಸಂಧು ನೋವಿನಿಂದ ಬಳಲುತ್ತಿರುವ ನೀರಜ್​ ಡೈಮಂಡ್ ಲೀಗ್ ಫೈನಲ್​ ಬಳಿಕ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

VISTARANEWS.COM


on

Neeraj Chopra
Koo

ಲೌಸನ್ನೆ: ಪ್ಯಾರಿಸ್ ಒಲಂಪಿಕ್ಸ್​ ಬೆಳ್ಳಿ ಪದಕ ವಿಜೇತ, ಭಾರತದ ಸ್ಟಾರ್‌ ಜಾವೆಲಿನ್‌ ಎಸೆತಗಾರ ನೀರಜ್ ಚೋಪ್ರಾ ಅವರು ಲಾಸೆನ್‌ ಡೈಮಂಡ್ ಲೀಗ್​ನಲ್ಲಿ(Lausanne Diamond League) 89.49 ಮೀ. ಜಾವೆಲಿನ್​ ಎಸೆಯುವ ಮೂಲಕ ಋತುವಿನ ಅತ್ಯುತ್ತಮ ಎಸೆತದೊಂದಿಗೆ 2 ನೇ ಸ್ಥಾನ ಪಡೆದು ಫೈನಲ್​ ಪ್ರವೇಶಿಸಿದ್ದಾರೆ. ಮುಂದಿನ ತಿಂಗಳು ಸೆಪ್ಟೆಂಬರ್ 13 ಮತ್ತು 14ರಂದು ಬ್ರಸೆಲ್ಸ್‌ನಲ್ಲಿ ನಡೆಯುವ ಕೊನೆಯ ಡೈಮಂಡ್‌ ಲೀಗ್​ನಲ್ಲಿ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಲ್ಲಿ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಈ ಎಸೆತವನ್ನು ಇಲ್ಲಿ ಉತ್ತಮಪಡಿಸಿಕೊಂಡರು.

ಗುರುವಾರ ತಡರಾತ್ರಿ ನಡೆದಿದ್ದ ಈ ಟೂರ್ನಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಗ್ರೆನಡಾದ ಆಂಡರ್ಸನ್ ಪೀಟರ್ಸ್ 90.61 ಮೀಟರ್ ದೂರ ಎಸೆದು ಪ್ರಥಮ ಸ್ಥಾನ ಪಡೆದರು. ನೀರಜ್ ಕೊನೆಯ ಪ್ರಯತ್ನದಲ್ಲಿ 89.49 ಮೀಟರ್‌ ದೂರವನ್ನು ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರು. ನೀರಜ್​ ಈ ಸ್ಪರ್ಧೆಗೂ ಮುನ್ನ ಅಂಕಪಟ್ಟಿಯಲ್ಲಿ 7 ಅಂಕದೊಂದಿಗೆ 4ನೇ ಸ್ಥಾನದಲ್ಲಿದ್ದರು. ಇದೀಗ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಫೈನಲ್​ನಲ್ಲಿ 6 ಮಂದಿ ಕಣಕ್ಕಿಳಿಯಲಿದ್ದಾರೆ. ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಪಾಕಿಸ್ತಾನದ ಅರ್ಷದ್ ನದೀಮ್(Arshad Nadeem) ಈ ಕ್ರೀಡಾಕೂಟದಲ್ಲಿ ಭಾಗವಹಿಸಿರಲಿಲ್ಲ.

ನೀರಜ್ ಆರಂಭದಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಮೊದಲ ಐದು ಪ್ರಯತ್ನಗಳಲ್ಲಿ ನೀರಜ್ ಕ್ರಮವಾಗಿ 82.10, 83.21, 83.13, 82.34 ಮತ್ತು 85.58 ಮೀ. ದೂರ ಎಸೆದರು. ಆದರೆ ಆರನೇ ಹಾಹೂ ಅಂತಿಮ ಪ್ರಯತ್ನದಲ್ಲಿ 89.49 ಮೀಟರ್‌ ದೂರ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ಏರಿದರು. ನೀರಜ್​ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ ಎಸೆದಿದ್ದರು. ಇದೇ ಆವೃತ್ತಿಯಲ್ಲಿ ಅವರು ಚಿನ್ನದ ಪದಕ ಜಯಿಸಿದ್ದರು.

ತೊಡೆಸಂಧು ನೋವಿನಿಂದ ಬಳಲುತ್ತಿರುವ ನೀರಜ್​ ಡೈಮಂಡ್ ಲೀಗ್ ಫೈನಲ್​ ಬಳಿಕ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ Paris Olympics: “ಇಂಡಿಯಾ ಹೌಸ್‌”ನಲ್ಲಿ ನೀರಜ್​ ಚೋಪ್ರಾ ಸೇರಿ ಪದಕ ವಿಜೇತರನ್ನು ಗೌರವಿಸಿದ ನೀತಾ ಅಂಬಾನಿ

ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಂಡ ನೀರಜ್​


ನೀರಜ್​ ಚೋಪ್ರಾ(Neeraj Chopra) ಅವರ ಬ್ರಾಂಡ್ ಮೌಲ್ಯ ಬರೋಬ್ಬರಿ 330 ಕೋಟಿ ರೂ.ಗೆ ಜಿಗಿತ ಕಂಡಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.  ಅಂಕಿಅಂಶಗಳ ವರದಿಯ ಪ್ರಕಾರ ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ಮೌಲ್ಯ 29.6 ದಶಲಕ್ಷ ಡಾಲರ್ ನಿಂದ 40 ದಶಲಕ್ಷ ಡಾಲರ್​ಗೆ ಏರಿಕೆಯಾಗಿದೆ. ಅಂದರೆ ಭಾರತೀಯ ರೂಪಾಯಿ ಪ್ರಕಾರ ಅವರ ಬ್ರ್ಯಾಂಡ್ ಮೌಲ್ಯ 330 ಕೋಟಿ ರೂ. ಆಗಿದೆ. ಇದು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ(hardik pandya) ಬ್ರ್ಯಾಂಡ್ ಮೌಲ್ಯಕ್ಕಿಂತ ಹೆಚ್ಚಾಗಿದೆ. ನೀರಜ್ ಭಾರತೀಯ ಕ್ರೀಡಾಪಟುಗಳಲ್ಲಿ ಅತ್ಯುನ್ನತ ಮೌಲ್ಯಯುತ ಕ್ರಿಕೆಟಿಗರಲ್ಲದ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

ನೀರಜ್ ಪ್ರಸ್ತುತ 24 ವಿವಿಧ ವರ್ಗಗಳಲ್ಲಿ 21 ಬ್ರ್ಯಾಂಡ್‌ಗಳನ್ನು ಅನುಮೋದಿಸಿದ್ದಾರೆ. ಮನಿ ಕಂಟ್ರೋಲ್ ವರದಿಯ ಪ್ರಕಾರ, ಹಾರ್ದಿಕ್ ಪಾಂಡ್ಯ 20 ಬ್ರಾಂಡ್‌ಗಳನ್ನು ಮಾತ್ರ ಹೊಂದಿದ್ದಾರೆ ಎನ್ನಲಾಗಿದೆ. ಪಾಂಡ್ಯಗಿಂತ ಶೇ.50ರಷ್ಟು ಬ್ರ್ಯಾಂಡ್‌ ಮೌಲ್ಯ ಹೆಚ್ಚಳವಾಗಿದೆ ಎಂದು ವರದಿಯಾಗಿದೆ.

Continue Reading

Latest

Eye Care Food: ನೀವು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಈ ಆಹಾರಗಳನ್ನು ಸೇವಿಸಿ

ಕೆಲವರು ಇಡೀ ದಿನ (Eye Care Food) ಕಂಪ್ಯೂಟರ್, ಲ್ಯಾಪ್ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತಾರೆ. ಅಂತವರು ತಮ್ಮ ಕಣ್ಣುಗಳ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇದರಿಂದ ಮುಂದೆ ಅನೇಕ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಅಲ್ಲದೇ ಕಣ್ಣುಗಳ ಮೇಲೆ ಒತ್ತಡ ಹೆಚ್ಚಾಗಿ ಜನರು ಕನ್ನಡಕವನ್ನು ಧರಿಸಬೇಕಾಗುತ್ತದೆ. ಹಾಗಾಗಿ ಕಣ್ಣಿನ ದೃಷ್ಟಿ ಸಮಸ್ಯೆಗಳನ್ನು ನಿವಾರಿಸಲು ಈ ಆಹಾರವನ್ನು ತಪ್ಪದೇ ಸೇವಿಸಿ.

VISTARANEWS.COM


on

Eye Care Food
Koo


ಹೆಚ್ಚಿನ ಜನರು ಕೆಲಸದ ಒತ್ತಡದಲ್ಲಿ ಆರೋಗ್ಯದ ಬಗ್ಗೆ ಗಮನಹರಿಸುವುದಿಲ್ಲ. ಕೆಲವರು ಇಡೀ ದಿನ ಕಂಪ್ಯೂಟರ್, ಲ್ಯಾಪ್‍ಟಾಪ್ ಮುಂದೆ ಕುಳಿತು ಕೆಲಸ ಮಾಡುತ್ತಾರೆ. ಅಂತವರು ತಮ್ಮ ಕಣ್ಣುಗಳ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇದರಿಂದ ಮುಂದೆ ಅನೇಕ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಅಲ್ಲದೇ ಕಣ್ಣುಗಳ ಮೇಲೆ ಒತ್ತಡ ಹೆಚ್ಚಾಗಿ ಜನರು ಕನ್ನಡಕವನ್ನು ಧರಿಸಬೇಕಾಗುತ್ತದೆ. ಹಾಗಾಗಿ ಕಣ್ಣಿನ ದೃಷ್ಟಿ ಸಮಸ್ಯೆಗಳನ್ನು ನಿವಾರಿಸಲು ಪ್ರತಿದಿನ ಈ ಆಹಾರ(Eye Care Food)ಗಳನ್ನು ಸೇವಿಸಿ.

ಟೊಮೆಟೊ

ಇದರಲ್ಲಿ ಲೈಕೋಪೀನ್ ಸಮೃದ್ಧವಾಗಿದೆ, ಇದು ಪ್ರಬಲ ಉತ್ಕರ್ಷಣ ನಿರೋಧಕವಾಗಿದೆ. ಲೈಕೋಪೀನ್ ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಕಣ್ಣಿನ ಪೊರೆ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ (ಎಎಂಡಿ) ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಟೊಮೆಟೊದಲ್ಲಿ ವಿಟಮಿನ್ ಸಿ ಸಹ ಇದೆ, ಇದು ಕಣ್ಣಿನ ಉರಿಯೂತವನ್ನು ಕಡಿಮೆ ಮಾಡಲು ಮತ್ತು ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕೆಂಪು ಬಣ್ಣದ ಕ್ಯಾಪ್ಸಿಕಂ

ಇದರಲ್ಲಿ ವಿಟಮಿನ್ ಸಿ ಮತ್ತು ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್‍ನಂತಹ ಕ್ಯಾರೊಟಿನಾಯ್ಡ್ ಗಳನ್ನು ಹೊಂದಿರುತ್ತದೆ. ವಿಟಮಿನ್ ಸಿ ಕಣ್ಣುಗಳ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಕಣ್ಣಿನ ಕೋಶಗಳನ್ನು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಈ ಅಂಶಗಳು ದೃಷ್ಟಿಯನ್ನು ಸುಧಾರಿಸಲು ಮತ್ತು ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸ್ಟ್ರಾಬೆರಿ

ಸ್ಟ್ರಾಬೆರಿ ವಿಟಮಿನ್ ಸಿಯ ಅತ್ಯುತ್ತಮ ಮೂಲವಾಗಿದೆ. ಇದು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ. ವಿಟಮಿನ್ ಸಿ ಕಣ್ಣಿನ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ ಮತ್ತು ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸ್ಟ್ರಾಬೆರಿಯಲ್ಲಿ ಆಂಟಿಆಕ್ಸಿಡೆಂಟ್‍ಗಳಿದ್ದು, ಇದು ಕಣ್ಣಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ದೃಷ್ಟಿಯನ್ನು ಆರೋಗ್ಯಕರವಾಗಿರಿಸುತ್ತದೆ.

ಕೆಂಪು ದ್ರಾಕ್ಷಿ

ಕೆಂಪು ದ್ರಾಕ್ಷಿಯಲ್ಲಿ ರೆಸ್ವೆರಾಟ್ರಾಲ್ ಮತ್ತು ಉತ್ಕರ್ಷಣ ನಿರೋಧಕಗಳಿವೆ, ಇದು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ರೆಸ್ವೆರಾಟ್ರಾಲ್ ಕಣ್ಣಿನ ಕೋಶಗಳನ್ನು ಫ್ರೀ ರಾಡಿಕಲ್‌ಗಳಿಂದ ರಕ್ಷಿಸುತ್ತದೆ ಮತ್ತು ದೃಷ್ಟಿಯನ್ನು ಸುಧಾರಿಸುತ್ತದೆ. ದ್ರಾಕ್ಷಿಯ ನಿಯಮಿತ ಸೇವನೆಯು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಕೆಂಪು ಸೇಬು

ಕೆಂಪು ಸೇಬುಗಳು ವಿಟಮಿನ್ ಎ, ಸಿ ಮತ್ತು ವಿವಿಧ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರೆಟಿನಾದ ಆರೋಗ್ಯಕರ ಸ್ಥಿತಿಯನ್ನು ಕಾಪಾಡಿಕೊಳ್ಳಲು ವಿಟಮಿನ್ ಎ ಮುಖ್ಯವಾಗಿದೆ, ಹಾಗೇ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಕಣ್ಣಿನ ಉರಿಯೂತವನ್ನು ಕಡಿಮೆ ಮಾಡಲು ಮತ್ತು ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಹಾಗಾಗಿ ದಿನವಿಡೀ ಕಂಪ್ಯೂಟರ್, ಲ್ಯಾಪ್‍ಟಾಪ್ ಮುಂದೆ ಕೆಲಸ ಮಾಡುವವರು ತಮ್ಮ ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಈ ಆಹಾರಗಳನ್ನು ಪ್ರತಿದಿನ ಸೇವಿಸಿ ನಿಮ್ಮ ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಂಡು ಜಗತ್ತಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.

Continue Reading

ಭವಿಷ್ಯ/ಧಾರ್ಮಿಕ

Dina Bhavishya : ಗೌಪ್ಯ ವಿಷಯಗಳು ಬಹಿರಂಗ ಮಾಡ್ಬೇಡಿ; ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಬೇಡಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷದ ಚೌತಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಮೇಷ ರಾಶಿಯಿಂದ ಶುಕ್ರವಾರ ರಾತ್ರಿ 08:00 ಗಂಟೆಗೆ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಮಿಥುನ, ಕಟಕ, ತುಲಾ, ವೃಶ್ಚಿಕ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಉತ್ಸಾಹದ ವಾತಾವರಣ ಇರಲಿದೆ. ಆಪ್ತರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಭರವಸೆಯ ಹೊಸ ಅವಕಾಶಗಳು ಸಿಗಲಿದೆ. ಮಿಥುನ ರಾಶಿಯವರು ಸಂತಸದ ಕ್ಷಣಗಳನ್ನು ಕಳೆಯುವಿರಿ. ಆರ್ಥಿಕ ಪ್ರಗತಿ ಇರಲಿದೆ. ಬಹಳ ದಿನಗಳ ಬಾಕಿ ಇರುವ ಕಾರ್ಯವು ಪೂರ್ಣವಾಗುವುದು. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (23-08-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ.
ತಿಥಿ: ಚೌತಿ 10:38 ವಾರ: ಶುಕ್ರವಾರ
ನಕ್ಷತ್ರ: ರೇವತಿ 19:53 ಯೋಗ: ಧೃತಿ 13:09ಶೂಲ 09:29/ ಗಂಡ 30:07
ಕರಣ: ಬಾಲವ 10:38 / ಕೌಲವ 21:11 ಅಮೃತಕಾಲ: ಸಂಜೆ 05:43 ರಿಂದ 07:10
ದಿನದ ವಿಶೇಷ: ಕಲ್ಯಾಣ ಕಾರಣಿಕ

ಸೂರ್ಯೋದಯ : 06:08   ಸೂರ್ಯಾಸ್ತ : 06:36

ರಾಹುಕಾಲ: ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಉತ್ಸಾಹದ ವಾತಾವರಣ ಇರಲಿದೆ. ಆಪ್ತರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಭರವಸೆಯ ಹೊಸ ಅವಕಾಶಗಳು ಸಿಗಲಿದೆ. ವ್ಯಾಪಾರ ವ್ಯವಹಾರಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 6

Horoscope Today

ವೃಷಭ: ಬಂಧು ಮಿತ್ರರಿಂದ ಸಹಕಾರ ಸಿಗಲಿದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸಿ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 5

Horoscope Today

ಮಿಥುನ: ಸಂತಸದ ಕ್ಷಣಗಳನ್ನು ಕಳೆಯುವಿರಿ. ಆರ್ಥಿಕ ಪ್ರಗತಿ ಇರಲಿದೆ. ಬಹಳ ದಿನಗಳ ಬಾಕಿ ಇರುವ ಕಾರ್ಯವು ಪೂರ್ಣವಾಗುವುದು. ಮನೆಯಲ್ಲಿ ಪರಸ್ಪರ ಸಹಕಾರ ಸಿಗುವುದು, ಉತ್ಸಾಹದ ದಿನವಿದು. ಅದೃಷ್ಟ ಸಂಖ್ಯೆ: 3

Horoscope Today

ಕಟಕ: ಆಕರ್ಷಕ ವ್ಯಕ್ತಿತ್ವ ಹೊಂದಿರುವ ನೀವು ಇಂದು ಇತರರನ್ನು ಆಕರ್ಷಿಸುವಿರಿ. ಆರ್ಥಿಕ ಪ್ರಗತಿ ಸಾಧಾರಣ ಇದ್ದರೂ ಸಮರ್ಥವಾಗಿ ನಿರ್ವಹಿಸುವಿರಿ. ಉದ್ಯೋಗದಲ್ಲಿ ಪ್ರಗತಿ ಇರಲಿದೆ. ಮಡದಿಯ ಪ್ರೀತಿಗೆ ಸೋಲುವಿರಿ. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 7

Horoscope Today

ಸಿಂಹ: ಉದ್ಯೋಗ ಅಪೇಕ್ಷಿತರಿಗೆ ಇಂದು ಉದ್ಯೋಗದ ಭರವಸೆ. ಆರ್ಥಿಕ ಪ್ರಗತಿ ಇರಲಿದೆ. ಪರಿಶ್ರಮಕ್ಕೆ ಪ್ರತಿ ಫಲ ಸಿಗುವುದು. ಮನೆಯವರ ಪ್ರೀತಿ ಸಹಕಾರ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 5

Horoscope Today

ಕನ್ಯಾ: ಮನೆಯಲ್ಲಿ ಪರಸ್ಪರರ ಮಧ್ಯೆ ಕಲಹದಿಂದ ವಾತಾವರಣ ಹದಗೆಡಬಹುದು. ಕೆಲಸದಲ್ಲಿ ಹಿರಿಯರಿಂದ ಒತ್ತಡ ಇರಲಿ, ಎಚ್ಚರಿಕೆ ವಹಿಸಿ. ಆರ್ಥಿಕ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ತರಾತುರಿಯಲ್ಲಿ ನಿರ್ಧಾರ ಕೈಗೊಂಡು ಯಾವುದೇ ಹೂಡಿಕೆ ಬೇಡ. ಬಂಧು ಮಿತ್ರರಿಂದ ಸಹಕಾರ ಸಿಗಲಿದೆ. ಆರೋಗ್ಯದಲ್ಲಿ ಉತ್ತಮವಾಗಿರಲಿದೆ. ಮನೆಯಲ್ಲಿ ಸಂತೋಷದ ದಿನ. ಅದೃಷ್ಟ ಸಂಖ್ಯೆ: 8

Horoscope Today

ವೃಶ್ಚಿಕ: ಮಿತ್ರರಿಂದ ಸಹಕಾರ ಸಿಗಲಿದೆ. ಆರ್ಥಿಕವಾಗಿ ಪ್ರಗತಿ ಹೊಂದಲು ಹಿರಿಯರು ಮಾರ್ಗದರ್ಶನ ಮಾಡುವುರು. ಧೈರ್ಯದಿಂದ ಕಾರ್ಯದಲ್ಲಿ ಮುನ್ನುಗ್ಗಿ. ಯಶ ಸಿಗುವುದು. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 5

Horoscope Today

ಧನಸ್ಸು: ಕುಟುಂಬ ಸದಸ್ಯರ ಆರೋಗ್ಯ ಸಂಬಂಧಿ ವಿಷಯಗಳು ತಮಗೆ ಒತ್ತಡ ಉಂಟುಮಾಡಬಹುದು. ಉದಾಸೀನತೆ ಮಾಡುವುದು ಬೇಡ. ಆಶಾವಾದಿಗಳಾಗಿರಿ ಕುಲದೇವರನ್ನು ಸ್ಮರಿಸಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

Horoscope Today

ಮಕರ: ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಆಲಸ್ಯದಿಂದ ದೂರವಿದ್ದು ಕಾರ್ಯ ಪೂರ್ಣ ಮಾಡಿ. ಕೆಲಸದ ಒತ್ತಡದಿಂದ ಮನೆಯ ಸದಸ್ಯರ ಮೇಲೆ ಹಾಕಿ, ವಾತಾವರಣ ಹದಗೆಡಲು ಕಾರಣವಾಗಬೇಡಿ. ಗುರುಗಳ ಆರಾಧನೆ ಮಾಡಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 5

Horoscope Today

ಕುಂಭ: ಭೂ ಸಂಬಂಧಿ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರುವುದು. ಅನ್ಯರು ಆಡುವ ಕುಹುಕು ಮಾತುಗಳಿಗೆ ಧ್ವನಿಯಾಗಬೇಡಿ. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 3

Horoscope Today

ಮೀನ: ನಿಮ್ಮ ಮಹತ್ವಾಕಾಂಕ್ಷೆಯ ಕೆಲಸ ಕಾರ್ಯಗಳು ಕುಂಠಿತವಾಗುವ ಸಾಧ್ಯತೆ ಇದೆ. ಗೌಪ್ಯ ವಿಷಯಗಳು ಬಹಿರಂಗವಾಗಿರಲಿದೆ. ಆರ್ಥಿಕ ನಷ್ಟದಿಂದ ತಪ್ಪಿಸಿಕೊಳ್ಳಿ. ಸಂಗಾತಿಯ ಮಾತುಗಳು ಹಿತವೆನಿಸುದು. ಕುಟುಂಬದಲ್ಲಿ ನೆಮ್ಮದಿ. ಅದೃಷ್ಟ ಸಂಖ್ಯೆ: 9

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ದೇಶ

Kapil Sibal: ವೈದ್ಯೆ ಕೊಲೆ ಕೇಸ್‌- ಸುಪ್ರೀಂಕೋರ್ಟ್‌ ವಿಚಾರಣೆ ವೇಳೆ ಎಲ್ಲರೆದುರು ಜೋರಾಗಿ ನಕ್ಕ ಕಪಿಲ್‌ ಸಿಬಲ್‌-ಭಾರೀ ಆಕ್ರೋಶ ವ್ಯಕ್ತ

Kapil Sibal:ಕೋಲ್ಕತ್ತಾ ವೈದ್ಯೆ ಕೊಲೆ ಪ್ರಕರಣದ ವಿಚಾರಣೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್‌ನಲ್ಲಿ ಇಂದು ಮಹತ್ವದ ವಿಚಾರಣೆ ನಡೆಯುತ್ತಿತ್ತು. ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷ ಸಿಬಲ್ ಮತ್ತು ತುಷಾರ್ ಮೆಹ್ತಾ ನಡುವೆ ವಾದ ನಡೆಯುತ್ತಿರುವಾಗ ಹಿರಿಯ ವಕೀಲರು ನಕ್ಕಿದ್ದಾರೆ. ಸರ್ಕಾರಿ ವಕೀಲರು ಪೊಲೀಸರಿಂದ ಎಫ್‌ಐಆರ್‌ನ ದಾಖಲಾತಿಯಲ್ಲಿನ ವ್ಯತ್ಯಾಸವನ್ನು ಪ್ರಸ್ತಾಪಿಸಿ ಅದನ್ನು ಎತ್ತಿ ತೋರಿಸುತ್ತಿದ್ದ ಸಂದರ್ಭದಲ್ಲಿ ಕಪಿಲ್‌ ಸಿಬಲ್‌ ಬಹಳ ನಿರ್ಲಕ್ಷ್ಯವಾಗಿ, ಬೆಜವಾಬ್ದಾರಿಯುವಾಗಿ ನಕ್ಕಿದ್ದಾರೆ.

VISTARANEWS.COM


on

Kapil sibal
Koo

ಕೋಲ್ಕತ್ತಾ: ಟೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ(Kolkata Doctor Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್‌(Supreme Court) ವಿಚಾರಣೆ ನಡೆಯಿತು. ಈ ವೇಳೆ ಹಿರಿಯ ವಕೀಲ, ಮಾಜಿ ಕೇಂದ್ರ ಸಚಿವ ಕಪಿಲ್‌ ಸಿಬಲ್‌(Kapil Sibal) ತಮ್ಮ ಬೇಜವಾಬ್ದಾರಿಯುವ ನಡೆಯಿಂದಾಗಿ ವಿವಾದಕ್ಕೀಡಾಗಿದ್ದಾರೆ. ವಿಚಾರಣೆ ವೇಳೆ ಕಪಿಲ್‌ ಸಿಬಲ್‌ ನಗುವ ಮೂಲಕ ವಿಲಕ್ಷಣ ವರ್ತನೆ ತೋರಿದ್ದು, ಅವರ ವರ್ತನೆಗೆ ಸಾಲಿಸಿಟರ್‌ ಜನರಲ್‌ ಗರಂ ಆಗಿದ್ದಾರೆ.

ಏನಿದು ಘಟನೆ?

ಕೋಲ್ಕತ್ತಾ ವೈದ್ಯೆ ಕೊಲೆ ಪ್ರಕರಣದ ವಿಚಾರಣೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್‌ನಲ್ಲಿ ಇಂದು ಮಹತ್ವದ ವಿಚಾರಣೆ ನಡೆಯುತ್ತಿತ್ತು. ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷ ಸಿಬಲ್ ಮತ್ತು ತುಷಾರ್ ಮೆಹ್ತಾ ನಡುವೆ ವಾದ ನಡೆಯುತ್ತಿರುವಾಗ ಹಿರಿಯ ವಕೀಲರು ನಕ್ಕಿದ್ದಾರೆ. ಸರ್ಕಾರಿ ವಕೀಲರು ಪೊಲೀಸರಿಂದ ಎಫ್‌ಐಆರ್‌ನ ದಾಖಲಾತಿಯಲ್ಲಿನ ವ್ಯತ್ಯಾಸವನ್ನು ಪ್ರಸ್ತಾಪಿಸಿ ಅದನ್ನು ಎತ್ತಿ ತೋರಿಸುತ್ತಿದ್ದ ಸಂದರ್ಭದಲ್ಲಿ ಕಪಿಲ್‌ ಸಿಬಲ್‌ ಬಹಳ ನಿರ್ಲಕ್ಷ್ಯವಾಗಿ, ಬೆಜವಾಬ್ದಾರಿಯುವಾಗಿ ನಕ್ಕಿದ್ದಾರೆ.

ಇದಕ್ಕೆ ಸಿಟ್ಟುಗೊಂಡ ಮೆಹ್ತಾ, ಒಂದು ಹುಡುಗಿ ತನ್ನ ಪ್ರಾಣವನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ಕಳೆದುಕೊಂಡಿದ್ದಾಳೆ. ಯಾರೋ ಸತ್ತಿದ್ದಾರೆ. ಇದು ನಗುವಂತಹ ವಿಚಾರವಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಇನ್ನು ಈ ಘಟನೆಯ ವಿಡಿಯೊವನ್ನು ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್‌ ಆಗುತ್ತಿದೆ. 32 ಸೆಕೆಂಡ್ ಅವಧಿಯ ಕ್ಲಿಪ್ ಅನ್ನು ಹಂಚಿಕೊಂಡ ಬಿಜೆಪಿಯ ಅಮಿತ್ ಮಾಳವಿಯಾ, ಸಿಬಲ್ ಅವರ ವರ್ತನೆಯನ್ನು ಟೀಕಿಸಿದ್ದಾರೆ.

ಮಾಳವಿಯಾ ಅವರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಕೇಂದ್ರ ಸಚಿವ ಕಪಿಲ್‌ ಸಿಬಲ್‌ ಅವರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಂತೆ ಕೋಲ್ಕತ್ತಾ ವೈದ್ಯೆ ಹತ್ಯೆ ಬಗ್ಗೆ ಕಿಂಚಿತ್ತೂ ನೋವಿಲ್ಲ. ಹೀಗಾಗಿಯೇ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ನಗಬೇಡಿ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕಪಿಲ್ ಸಿಬಲ್ ಅವರಿಗೆ ನೆನಪಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: Kolkata Doctor Murder Case: ಬರೋಬ್ಬರಿ 11ದಿನಗಳ ಬಳಿಕ ಮುಷ್ಕರ ಹಿಂಪಡೆದ ವೈದ್ಯರು

Continue Reading
Advertisement
KL Rahul announces retirement?
ಕ್ರೀಡೆ24 mins ago

KL Rahul Retirement: ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿದ ಕೆ.ಎಲ್​ ರಾಹುಲ್?; ಇನ್​ಸ್ಟಾಗ್ರಾಮ್​ ಪೋಸ್ಟ್​ ವೈರಲ್​​

raichur double murder case
ಕ್ರೈಂ25 mins ago

Murder Case: ತಾಯಿ, ಹೆಂಡತಿಯನ್ನು ಕೊಂದು ಪರಾರಿಯಾದ ಆಸ್ಪತ್ರೆ ನೌಕರ

Neeraj Chopra
ಕ್ರೀಡೆ1 hour ago

Neeraj Chopra: ಈ ವರ್ಷದ ಅತ್ಯುತ್ತಮ ಎಸೆತದೊಂದಿಗೆ ಡೈಮಂಡ್ ಲೀಗ್​ ಫೈನಲ್​ ಪ್ರವೇಶಿಸಿದ ನೀರಜ್ ಚೋಪ್ರಾ

Monkey Pox
ವಿದೇಶ1 hour ago

Monkey Pox: ಏನಿದು ಡೇಂಜರಸ್ ಮಂಕಿ ಪಾಕ್ಸ್? ಇದು ಹೇಗೆ ಹರಡುತ್ತದೆ? ಪಾರಾಗೋದು ಹೇಗೆ?

drunk driving check
ಬೆಂಗಳೂರು2 hours ago

Drunk Driving: ವಾಹನ ಚಾಲಕರೇ, ಕುಡಿದರೆ ಮನೆಯಲ್ಲೇ ಇರಿ, ರಸ್ತೆಗೆ ಬರಬೇಡಿ!

Namma Metro green Line
ಬೆಂಗಳೂರು2 hours ago

Namma Metro: ಇಂದೂ ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಇಲ್ಲ, ಪ್ರಯಾಣಿಕರೇ ಗಮನಿಸಿ

Valmiki Corporation Scam
ಪ್ರಮುಖ ಸುದ್ದಿ2 hours ago

Valmiki Corporation Scam: ವಾಲ್ಮೀಕಿ ನಿಗಮ ಹಗರಣದ ಚಾರ್ಜ್‌ಶೀಟ್‌ ಸಲ್ಲಿಕೆ, ನಾಗೇಂದ್ರಗೆ ಕ್ಲೀನ್‌ ಚಿಟ್!‌

ರಾಜಮಾರ್ಗ ಅಂಕಣ aruna shanubhag
ಅಂಕಣ3 hours ago

ರಾಜಮಾರ್ಗ ಅಂಕಣ: ನೆನಪಾದಳು ಅರುಣಾ ಶಾನುಭಾಗ್!‌

Eye Care Food
Latest4 hours ago

Eye Care Food: ನೀವು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಈ ಆಹಾರಗಳನ್ನು ಸೇವಿಸಿ

karnataka weather forecast
ಮಳೆ4 hours ago

Karnataka Weather : ಕರಾವಳಿಯಲ್ಲಿ ರಭಸವಾಗಿ ಬೀಸಲಿದೆ ಗಾಳಿ; ಸಾಧಾರಣ ಮಳೆ ಸಾಧ್ಯತೆ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌