Women’s Day 2023: ಹೆಣ್ಣುಮಕ್ಕಳಲ್ಲಿ ಸೌಂದರ್ಯಕ್ಕೂ ಮೀರಿದ ಗುಣಗಳೇ ಆಕೆಯ ಅಳತೆಗೋಲಾಗಲಿ - Vistara News

ಮಹಿಳೆ

Women’s Day 2023: ಹೆಣ್ಣುಮಕ್ಕಳಲ್ಲಿ ಸೌಂದರ್ಯಕ್ಕೂ ಮೀರಿದ ಗುಣಗಳೇ ಆಕೆಯ ಅಳತೆಗೋಲಾಗಲಿ

ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಆಕೆಯ ಸೌಂದರ್ಯಕ್ಕೆ ಹೊರತಾದಂತೆಯೂ ನೋಡುವ ಮೂಲಕ, ಆಕೆಯ ಇತರ ಮಾನವೀಯ ಗುಣಗಳನ್ನೂ, ಪ್ರತಿಭೆಯನ್ನೂ, ಬುದ್ಧಿಮತ್ತೆಯನ್ನೂ ಪ್ರಶಂಸಿಸುವುದು ಅಗತ್ಯವಾಗಿ ಬೇಕಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಆಕೆಯನ್ನೊಬ್ಬ ಆತ್ಮವಿಶ್ವಾಸಿ ಸ್ವತಂತ್ರ ಮಹಿಳೆಯಾಗಿ ರೂಪಿಸಿಕೊಳ್ಳುವಲ್ಲಿ ಹೆತ್ತವರ ಪಾತ್ರ ಬಹುಮುಖ್ಯ.

VISTARANEWS.COM


on

Womens Day 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ʻನೀನು ಸುಂದರವಾಗಿ ಕಾಣುತ್ತಿದ್ದಿ, ಮುದ್ದಾಗಿದ್ದಿ, ಬೊಂಬೆಯ ಹಾಗಿದ್ದಾಳೆʼ ಇತ್ಯಾದಿ ಇತ್ಯಾದಿ ಹೊಗಳಿಕೆಗಳು ಹೆಣ್ಣುಮಕ್ಕಳಿಗೆ ಸಾಮಾನ್ಯ. ಹೆಣ್ಣುಮಕ್ಕಳು ಆಗಾಗ ಹೊಗಳಿಸಿಕೊಳ್ಳುವ ವಿಷಯವೆಂದರೆ ಇದೇ. ಹೆಣ್ಣಿನ ಸೌಂದರ್ಯ ಹೀಗೆಯೇ ಇರಬೇಕು ಎಂಬ ಕಲ್ಪನೆಗಳಿಗೆ ಪಕ್ಕಾಗುವಂತಿದ್ದರೆ, ಆಕೆ ಸುಂದರಿಯೆಂದೂ, ಇಲ್ಲವಾದರೆ ಮದುವೆ ಕಷ್ಟವೆಂದೂ ಎಳವೆಯಲ್ಲೇ ಲೆಕ್ಕಾಚಾರ ಹಾಕಲಾಗುತ್ತದೆ. ಹೀಗಿದ್ದಾಗ, ಸಹಜವಾಗಿ ಹೆಣ್ಣು ಮಕ್ಕಳಿಗೆ (ಸೌಂದರ್ಯದ ಹೊರತಾದ ಗುಣಗಳಿಗಿಂತ ಸೌಂದರ್ಯವೇ ಮುಖ್ಯವಾಗಿ ಕಾಣತೊಡಗುತ್ತದೆ. ತನ್ನ ಬಗೆಗಿನ ಕೀಳರಿಮೆ, ಅಧೈರ್ಯ, ಆತ್ಮವಿಶ್ವಾಸದ ಕೊರತೆ ಎದ್ದು ಕಾಣತೊಡಗುತ್ತದೆ. ಹೆಣ್ಣನ್ನು ಸಮಾಜ ಸೌಂದರ್ಯದ ಪ್ರತೀಕವೆಂಬಂತೆ ನೋಡುವುದು ಸಹಜ. ಆದರೆ, ಬಹಳಷ್ಟು ಸಾರಿ ಹೆಣ್ಣುಮಗಳೊಬ್ಬಳಿಗೆ ಬೆಳವಣಿಗೆಯ ಹಂತದಲ್ಲಿ ಸಿಗಬೇಕಾದ ಪ್ರೋತ್ಸಾಹ, ಮುನ್ನಡೆಯಬಲ್ಲ ಮಾತುಗಳು ತನ್ನದೇ ಮನೆಯವರಿಂದ, ಹೆತ್ತವರಿಂದ, ಸಮಾಜದಿಂದ ದೊರೆಯುವುದೇ ಇಲ್ಲ. ಆಕೆಯ ಎಲ್ಲ ಗುಣ ಅವಗುಣಗಳೂ ಆಕೆಯ ಸೌಂದರ್ಯವೆಂಬ ಫ್ರೇಮಿನೊಳಗೆ ಕೂರದೆ ಅವಗಣನೆಗೆ ತುತ್ತಾಗುತ್ತದೆ. ಹಾಗಾಗಿ ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಆಕೆಯ ಸೌಂದರ್ಯಕ್ಕೆ ಹೊರತಾದಂತೆಯೂ ನೋಡುವ ಮೂಲಕ, ಆಕೆಯ ಇತರ ಮಾನವೀಯ ಗುಣಗಳನ್ನೂ, ಪ್ರತಿಭೆಯನ್ನೂ, ಬುದ್ಧಿಮತ್ತೆಯನ್ನೂ ಪ್ರಶಂಸಿಸುವುದು ಅಗತ್ಯವಾಗಿ ಬೇಕಾಗುತ್ತದೆ. ಆ ಮೂಲಕ ಆಕೆಗೆ ಆತ್ಮವಿಶ್ವಾಸ ಮೂಡಿಸಬೇಕಾದ ಸಂದರ್ಭಗಳು ಹೆತ್ತವರಾಗಿ ನಿಮ್ಮ ಕೈಯಲ್ಲೇ ಇವೆ. ಆದರೆ, ಸೂಕ್ಷ್ಮಗಳನ್ನೂ ಆರಿತು, ಆಧುನಿಕ ಜಗತ್ತಿನಲ್ಲಿ ಆಕೆಯನ್ನೊಬ್ಬ ಆತ್ಮವಿಶ್ವಾಸಿ ಸ್ವತಂತ್ರ ಮಹಿಳೆಯಾಗಿ ರೂಪಿಸಿಕೊಳ್ಳುವಲ್ಲಿ ಹೆತ್ತವರ ಪಾತ್ರ ಬಹುಮುಖ್ಯ. ಹಾಗಾದರೆ ಅವು ಯಾವುವು ಎಂಬತ್ತ ಮಹಿಳಾ ದಿನದ (International Women’s Day 2023) ಸಂದರ್ಭದಲ್ಲಿ ಬೆಳಕು ಚೆಲ್ಲೋಣ.

parenting tips

೧. ಆಕೆಯ ಸಹಾಯ ಮಾಡುವ ಗುಣ: ಹೆಣ್ಣುಮಕ್ಕಳಲ್ಲಿ ಸಹಜವಾಗಿಯೇ ನೈಸರ್ಗಿಕವಾಗಿ ಸಹಾಯ ಮಾಡುವ ಗುಣವಿರುತ್ತದೆ. ಹೆತ್ತವರು ಜೊತೆಯಲ್ಲಿದ್ದಾಗಲೋ, ಅವರ ಸಾಮಾನನ್ನು ಹಿಡಿದುಕೊಳ್ಳುವಂಥ ಪುಟ್ಟ ಕೆಲಸವಿರಬಹುದು, ಮನೆಯಲ್ಲಿ ಹೆತ್ತವರ ನಿತ್ಯದ ಕೆಲಸಕ್ಕೆ ನೆರವಾಗುವುದಿರಬಹುದು, ಏನೇ ಇರಲಿ, ಆಕೆ ಮಾಡುವ ಸಹಾಯವನ್ನು ಗುರುತಿಸಿ. ಸಹಾಯ ಮಾಡಿದಾಗ ಆಕೆಯ ಬೆನ್ನುತಟ್ಟಿ ಹುರಿದುಂಬಿಸಿ.

೨. ಆಕೆಯ ನಾಯಕತ್ವದ ಗುಣ: ನಿಮ್ಮ ಹೆಣ್ಣುಮಕ್ಕಳಲ್ಲಿ ನಾಯಕತ್ವದ ಗುಣ ಇದ್ದರೆ ಅದಕ್ಕೆ ಸ್ಪೂರ್ತಿ ನೀಡಿ. ಆಕೆಯನ್ನು ಅಧೀರಗೊಳಿಸಬೇಡಿ. ಆಕೆ ಸರಿಯಾದ ದಿಶೆಯಲ್ಲಿ ಹೋಗುತ್ತಿದ್ದಾಳೆ ಎಂದೆನಿಸಿದರೆ, ನಾಯಕತ್ವದ ಗುಣ ಅವಳನ್ನು ಆತ್ಮವಿಶ್ವಾಸಿಯನ್ನಾಗಿಸುತ್ತದೆ.

೩. ಆಕೆಯಲ್ಲಿರುವ ಕಾಳಜಿ: ಸಾಮಾನ್ಯವಾಗಿ ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ, ಅವರಲ್ಲಿ ಒಬ್ಬರು ಹೆಣ್ಣಾಗಿದ್ದರೆ ಇದು ನಿಮಗೆ ಢಾಳಾಗಿ ಕಾಣಿಸುತ್ತದೆ. ಹೆಣ್ಣು ಮಗಳು ತಮ್ಮನನ್ನು ಅಮ್ಮನಂತೆ ನೋಡಿಕೊಳ್ಳುತ್ತಾಳೆ. ಇಂತಹ ಆಕೆಯ ಗುಣವನ್ನು ಹೊಗಳಬಹುದು. ಆಕೆ ಖುಷಿಯಾಗುತ್ತಾಳೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಲಿಂಗ ಸಮಾನತೆಯ ಆಶಯ ಸರ್ಕಾರದ ಪ್ರಾತಿನಿಧ್ಯದಲ್ಲೂ ಈಡೇರಲಿ

೪. ಆಕೆಯ ಸಾಹಸ: ಎಷ್ಟೋ ಹೆಣ್ಣುಮಕ್ಕಳು ಎಳವೆಯಲ್ಲಿಯೇ ಸಾಹಸ ಮೆರೆಯುತ್ತಾರೆ. ಗಂಡುಮಕ್ಕಳಂತೆ ಇವೆಲ್ಲ ನಿನಗೆ ಬೇಕಾ ಎಂಬ ಮೂದಲಿಕೆಯ ಮಾತುಗಳು ಅವಳನ್ನು ಕುಗ್ಗಿಸಬಹುದು. ಸಾಹಸ ಮೆರೆದ ಹೆಣ್ಣುಮಗಳಿಗೆ ಊರುಗೋಲಾಗಿ ಆಕೆಯ ಬೆನ್ನಿಗೆ ನಿಂತರೆ ಆಕೆಯಿಂದ ಮುಂದೆ ಉತ್ತಮ ಭವಿಷ್ಯ ನಿರೀಕ್ಷಿಸಬಹುದು. ಆಕೆ ತನ್ನಕನಸುಗಳನ್ನು ಬೆಂಬತ್ತಿ ನಡೆಯಲು ಹೆಚ್ಚು ಧೈರ್ಯ ಬರಬಹುದು.

೫. ಆಕೆಯ ಬುದ್ಧಿಮತ್ತೆ: ಹೆಣ್ಣು ಹೆಚ್ಚು ಓದುವ ಅಗತ್ಯವಿಲ್ಲ ಎಂಬ ಹಳೆಯ ಮಾತು ಈಗಿಲ್ಲ ನಿಜ. ಆದರೂ ಇಂದಿಗೂ ಭಾರತದಂತಹ ದೇಶದಲ್ಲಿ ಮುಖ್ಯವಾಗಿ ಹಳ್ಳಿಗಳಲ್ಲಿ ಇಂದಿಗೂ ಹೆಣ್ಣುಮಕ್ಕಳು ಗಂಡುಮಕ್ಕಳಷ್ಟು ಸುಲಭವಾಗಿ ವಿದ್ಯೆಯ ಕನಸನ್ನು ಕಾಣುತ್ತಿಲ್ಲ. ಕನಸು ಕಂಡರೂ ಇಂದಿಗೂ ಬೇಲಿಗಳಿವೆ. ಹೆಣ್ಣುಮಕ್ಕಳು ಓದಿನಲ್ಲಿ, ಬುದ್ಧಿಮತ್ತೆಯಲ್ಲಿ ಚುರುಕಾಗಿದ್ದರೆ ಅದನ್ನು ಹೇಳಿ. ಆಕೆಯ ಸೌಂದರ್ಯಕ್ಕಿಂತ ಬುದ್ಧಿಮತ್ತೆಯೇ ಅಳತೆಗೋಲಾಗಲಿ. ಆ ಮೂಲಕ ಆಕೆಯ ಆತ್ಮ ವಿಶ್ವಾಸ ಹೆಚ್ಚಲಿ. ನೆನಪಿಡಿ, ಇದು ಪೋಷಕರಾಗಿ ನೀವು ನಿಮ್ಮ ಹೆಣ್ಣುಮಕ್ಕಳ ಭವಿಷ್ಯಕ್ಕೆ ಕೊಡಬಹುದಾದ ದೊಡ್ಡ ಗಿಫ್ಟು!

ಇದನ್ನೂ ಓದಿ: International Women’s Day 2023 : ಮಹಿಳಾ ದಿನಾಚರಣೆ ಆರಂಭವಾಗಿದ್ದು ಹೇಗೆ? ಏನಿದರ ಮಹತ್ವ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

National Safe Motherhood Day: 35 ವರ್ಷ ನಂತರದ ತಾಯ್ತನದಲ್ಲಿ ಯಾವೆಲ್ಲ ಎಚ್ಚರಿಕೆ ಅಗತ್ಯ?

ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಅಗತ್ಯವಾಗಿ ಬೇಕಾದ ಆರೈಕೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಸುರಕ್ಷಿತ ತಾಯ್ತನದ ದಿನವನ್ನು ಏಪ್ರಿಲ್‌ ತಿಂಗಳ 11ನೇ ತಾರೀಕು (National Safe Motherhood Day) ಆಚರಿಸಲಾಗುತ್ತದೆ. ಈ‌ ಹಿನ್ನೆಲೆಯಲ್ಲಿ ಸುರಕ್ಷಿತ ತಾಯ್ತನ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

National Safe Motherhood Day
Koo

ತಾಯ್ತನವೆಂಬುದು ಬದುಕಿನ ಆಹ್ಲಾದಕರ ಅನುಭವಗಳಲ್ಲಿ ಒಂದು. ಬರಲಿರುವ ಪುಟ್ಟ ಜೀವವನ್ನೇ ನೆನಸುತ್ತಾ ನವಮಾಸಗಳನ್ನು ಕಳೆಯುವುದು ಎಷ್ಟು ಆನಂದದಾಯಕವೋ ಕೆಲವೊಮ್ಮೆ ಅಷ್ಟೇ ತ್ರಾಸದಾಯಕವೂ ಆಗಬಹುದು. ಈ ದಿನಗಳಲ್ಲಿ ಮತ್ತು ಹೆರಿಗೆಯ ನಂತರ ಅಗತ್ಯವಾದ ಆರೈಕೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಸುರಕ್ಷಿತ ತಾಯ್ತನದ ದಿನವನ್ನು ಏಪ್ರಿಲ್‌ ತಿಂಗಳ 11ನೇ ತಾರೀಕು (National Safe Motherhood Day)ಆಚರಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ 30 ಅಥವಾ 35 ವರ್ಷಗಳ ನಂತರ ತಾಯ್ತನಕ್ಕೆ ಸಿದ್ಧವಾಗುವ ಮಹಿಳೆಯರ ಸಂಖ್ಯೆ ತೀವ್ರವಾಗಿ ಹೆಚ್ಚಿದೆ. ಕುಟುಂಬವನ್ನು ಬೆಳೆಸುವ ಯೋಜನೆಗಳು ಆಯಾ ದಂಪತಿಗಳ ವೈಯಕ್ತಿಕ ವಿಚಾರ ಹೌದಾದರೂ, ವಯಸ್ಸು ಹೆಚ್ಚಿದಂತೆ ಭಾವೀ ತಾಯಿಯ ಆರೋಗ್ಯದಲ್ಲಿ ಸಮಸ್ಯೆಗಳು ಹೆಚ್ಚುವುದನ್ನು ವೈದ್ಯರೂ ಒಪ್ಪುತ್ತಾರೆ. ಕೆಲವೊಮ್ಮೆ ಫಲವಂತಿಕೆಯೂ ಕುಸಿದಿರುತ್ತದೆ. ಹಾಗಾಗಿ ಇಪ್ಪತ್ತರ ಹರೆಯದಲ್ಲೇ ʻಎಗ್‌ ಫ್ರೀಜಿಂಗ್ʼ ತಂತ್ರಜ್ಞಾನದ ಮೊರೆ ಹೋಗುವವರೂ ಇದ್ದಾರೆ. ಈ ಎಲ್ಲವುಗಳ ಹಿನ್ನೆಲೆಯಲ್ಲಿ, 35ರ ನಂತರ ಮಾತೃತ್ವಕ್ಕೆ ಅಣಿಯಾಗುವ ತಾಯಂದಿರು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು?

Indication of pregnancy

ಮೊದಲೇ ಮಾತಾಡಿ

ತಾಯ್ತನವನ್ನು ತಡವಾಗಿ ಒಪ್ಪಿಕೊಳ್ಳುವ ಬಗ್ಗೆ ಗರ್ಭ ಧರಿಸುವ ಮೊದಲೇ ವೈದ್ಯರಲ್ಲಿ ಮಾತಾಡಿ. ಇದಕ್ಕೆ ಬೇಕಾದ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳಿ. ಮಾತ್ರವಲ್ಲ, ನಿಮಗಿರುವ ಆರೋಗ್ಯ ಸಮಸ್ಯೆಗಳು, ಅದಕ್ಕಾಗಿ ಯಾವುದಾದರೂ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಇಂಥ ಎಲ್ಲವನ್ನೂ ವೈದ್ಯರಲ್ಲಿ ತಿಳಿಸಿ. ಸಣ್ಣ ಪ್ರಾಯದವರಿಗೂ ಮಧುಮೇಹ, ಥೈರಾಯ್ಡ್‌ ಸಮಸ್ಯೆಗಳು ವಕ್ಕರಿಸುತ್ತಿರುವುದರಿಂದ ಇದನ್ನೆಲ್ಲ ಮೊದಲೇ ವೈದ್ಯರಲ್ಲಿ ಮಾತಾಡಿಕೊಳ್ಳಿ.
ಒತ್ತಡ ನಿರ್ವಹಣೆ: ೩೫ರ ನಂತರ ವೃತ್ತಿಯಲ್ಲಿ ಮತ್ತು ಬಾಂಧವ್ಯಗಳಲ್ಲಿ ಹೆಚ್ಚಿನ ಸ್ಥಿರತೆ ಇರುತ್ತದೆ. ಆಗಲೇ ತಾಯ್ತನ ಒಪ್ಪಿಕೊಳ್ಳುವುದು ಸೂಕ್ತ ಎಂಬುದು ಒಂದು ವಾದ. ಆದರೆ ವಯಸ್ಸು ಏರುತ್ತಿದ್ದಂತೆ ಒತ್ತಡ ಧಾರಣಾ ಸಾಮರ್ಥ್ಯವೂ ತೀಕ್ಷ್ಣವಾಗಿ ಕುಸಿಯುತ್ತದೆ. ಜೊತೆಗೆ ವೃತ್ತಿಯಲ್ಲಿ ಮೇಲೇರುತ್ತಿದ್ದಂತೆ ಹೊಣೆಗಾರಿಕೆಯೂ ಹೆಚ್ಚಿರುತ್ತದೆ. ಹಾಗಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಪರಿಣತರಲ್ಲಿ ಮಾತಾಡಿ, ಅವರ ಸಲಹೆಗಳನ್ನು ಅಳವಡಿಸಿಕೊಳ್ಳಿ. ಪ್ರಿನೇಟಲ್‌ ಯೋಗ, ಧ್ಯಾನ ಮುಂತಾದವು ಖಂಡಿತವಾಗಿ ಸಹಾಯ ಮಾಡುತ್ತವೆ. ಈ ಬಗ್ಗೆ ಗಮನ ಕೊಡದಿದ್ದರೆ ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ, ಮಧುಮೇಹಗಳು ಕಾಡುವ ಸಾಧ್ಯತೆ ಹೆಚ್ಚುತ್ತದೆ.

pregnancy exercise

ವ್ಯಾಯಾಮ

ನಿಯಮಿತವಾದ ವ್ಯಾಯಾಮಗಳು ಗರ್ಭಿಣಿಯರಿಗೆ ಅಗತ್ಯವಾಗಿ ಬೇಕಾದವು. ಯಾವುದನ್ನೆಲ್ಲ ಮಾಡಬಹುದು ಎಂಬ ಬಗ್ಗೆ ವೈದ್ಯರಲ್ಲೆ ಚರ್ಚಿಸುವುದು ಒಳಿತು. ಆದರೆ ನಡಿಗೆ, ಈಜು, ಪ್ರಿನೇಟಲ್‌ ಯೋಗ, ಕಡಿಮೆ ತೀವ್ರತೆಯ ಏರೋಬಿಕ್‌ ವ್ಯಾಯಾಮಗಳು ಗರ್ಭಿಣಿಯರಿಗೆ ಹಿತವಾಗುವಂಥವು. ಇದರಿಂದ ಶರೀರ ಹಗುರವಾಗಿದ್ದು, ಹೆರಿಗೆಗೆ ಬೇಕಾದ ಸಿದ್ಧತೆಗಳನ್ನು ದೇಹ ತಂತಾನೇ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

pregnancy sleep

ನಿದ್ದೆ, ವಿಶ್ರಾಂತಿ

ಎಷ್ಟೋ ಗರ್ಭಿಣಿಯರಿಗೆ ರಾತ್ರಿಯ ನಿದ್ದೆ ಕಷ್ಟವಾಗುತ್ತದೆ. ಕಡೆಯ ಮೂರು ತಿಂಗಳಲ್ಲಂತೂ ಹೇಗೆ ಮಲಗಿದರೂ ಸರಿಯಾಗುವುದಿಲ್ಲ ಎನ್ನುವಂಥ ಸಮಸ್ಯೆ ಅವರದ್ದು. ಅಂಥ ದಿನಗಳಲ್ಲಿ ರೆಕ್ಲೈನರ್‌ ಮಾದರಿಯ ಹಾಸಿಗೆಗಳು ವಿಶ್ರಾಂತಿಗೆ ನೆರವಾಗುತ್ತವೆ. ದಿನದಲ್ಲೂ ಕೆಲಕಾಲ ನಿದ್ದೆಯಲ್ಲದಿದ್ದರೆ, ವಿಶ್ರಾಂತಿಯನ್ನಂತೂ ತೆಗೆದುಕೊಳ್ಳಬೇಕು. ದಿನಕ್ಕೆ ಹತ್ತು ತಾಸುಗಳ ನಿದ್ದೆಯಿಂದ ಮಗುವಿನ ಬೆಳವಣಿಗೆಗೂ ಸಹಾಯ ದೊರೆಯುತ್ತದೆ. ಈ ಬಗ್ಗೆ ಪ್ರತಿಯೊಬ್ಬರ ದೇಹವೂ ತನ್ನ ಅಗತ್ಯಗಳನ್ನು ತಾನೇ ಸೂಚಿಸುತ್ತದೆ, ಅದನ್ನು ಕೇಳಿ.

pregnancy food

ಆಹಾರ

ಮೊದಲನೆಯದಾಗಿ, ಗರ್ಭಾವಸ್ಥೆಯಲ್ಲಿ ಇಬ್ಬರಿಗಾಗಿ ತಿನ್ನುವ ಅಗತ್ಯವಿಲ್ಲ. ನಿತ್ಯದ ಆಹಾರಕ್ಕಿಂತ ೩೦೦ ಕ್ಯಾಲರಿಯಷ್ಟು ಮಾತ್ರವೇ ಹೆಚ್ಚಿಗೆ ಆಹಾರ ತೆಗೆದುಕೊಂಡರೆ ಸಾಕಾಗುತ್ತದೆ. ಅತಿಯಾಗಿ ತಿನ್ನುವುದು, ಸಿಹಿ, ಖಾರ, ಕರಿದಿದ್ದು, ಐಸ್‌ಕ್ರೀಂನಂಥವು, ಚಿಪ್ಸ್‌, ಸೋಡಾ ಮುಂತಾದ ಯಾವುದೇ ಗುಜರಿ ಆಹಾರಗಳು ಭ್ರೂಣದ ಬೆಳವಣಿಗೆಗೆ ಪೂರಕವಲ್ಲ. ಆಹಾರದಲ್ಲಿ ಋತುಮಾನದ ಹಣ್ಣು-ತರಕಾರಿಗಳು, ಧಾರಾಳವಾಗಿ ನೀರು, ಡೇರಿ ಉತ್ಪನ್ನಗಳು, ಹಸಿರು ಸೊಪ್ಪುಗಳು, ಇಡೀ ಧಾನ್ಯಗಳು, ಕಾಯಿ-ಬೀಜಗಳು, ಮೊಟ್ಟೆ-ಮೀನಿನಂಥವು ಇರಬೇಕು. ಕೆಫೇನ್‌ ಸೇವನೆಯನ್ನು ಕಡಿಮೆ ಮಾಡಿ. ಇದರಿಂದ ಇಬ್ಬರ ಸ್ವಾಸ್ಥ್ಯಕ್ಕೂ ಹಿತ.

pregnancy doctor test

ತಪಾಸಣೆ

35ರ ನಂತರದ ಗರ್ಭಧಾರಣೆಯಲ್ಲಿ ಮಧುಮೇಹ, ಬಿಪಿ, ಅವಧಿಪೂರ್ವ ಪ್ರಸವ, ಕಡಿಮೆ ತೂಕ ಶಿಶು ಜನಿಸುವುದು, ಶಿಶುವಿಗೆ ಡೌನ್ಸ್‌ ಸಿಂಡ್ರೋಮ್‌ನಂಥ ಆನುವಂಶಿನ ಕಾಯಿಲೆಗಳು ಬರುವಂಥ ಎಷ್ಟೋ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ತಜ್ಞ ವೈದ್ಯರಿಂದ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಅವಶ್ಯವಾದಂಥ ರಕ್ತಪರೀಕ್ಷೆಗಳು ಸಹ ಈ ತಪಾಸಣೆಯ ಭಾಗವೇ ಆಗಿದೆ. ಭ್ರೂಣದ ಬೆಳವಣಿಗೆ ಮತ್ತು ಗರ್ಭಿಣಿಯ ಆರೋಗ್ಯ ಒಂದಕ್ಕೊಂದು ತೀರಾ ಭಿನ್ನವಲ್ಲ; ಯಾವುದು ಸರಿಯಿಲ್ಲದಿದ್ದರೂ ಇಬ್ಬರಿಗೂ ಅಪಾಯ.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

Continue Reading

ಆರೋಗ್ಯ

Women’s Health: 40 ವರ್ಷ ದಾಟಿದ ಮಹಿಳೆಯರು ಈ ವಿಷಯದಲ್ಲಿ ಎಚ್ಚರ ವಹಿಸಲೇಬೇಕು

40 ವರ್ಷ ದಾಟಿದ ತಕ್ಷಣ ಮಹಿಳೆ (Women’s Health) ತನ್ನ ಆರೋಗ್ಯದ ಕಾಳಜಿಯನ್ನು ತುಸು ಹೆಚ್ಚೇ ಮಾಡಬೇಕು. ಮುಖ್ಯವಾಗಿ ಮಹಿಳೆಯ ಹಾರ್ಮೋನಿನಲ್ಲಿ ಈ ಸಂದರ್ಭ ಬದಲಾವಣೆಗಳಾಗುವುದರಿಂದ, ಮೆನೋಪಾಸ್‌ ಅಥವಾ ಋತುಬಂಧದ ಆರಂಭವಾಗುವ ಸನಿಹಕ್ಕೆ ಬರುವುದರಿಂದ ದೇಹದ ಶಕ್ತಿ ಕುಗ್ಗುತ್ತದೆ. ಹಾಗಾಗಿ ಮಹಿಳೆ ತನ್ನ ಆರೋಗ್ಯದತ್ತ ಈ ಸಂದರ್ಭ ಗಮನ ಹರಿಸುವುದು ಒಳಿತು.

VISTARANEWS.COM


on

Women's Health
Koo

ಮಹಿಳೆಯ ದೇಹ (Women’s Health) ಮಾಗುತ್ತಾ ಮಾಗುತ್ತಾ ಬಹಳಷ್ಟು ಬದಲಾವಣೆಗಳಿಗೆ ಒಳಗಾಗುವುದರಿಂದ 40 ದಾಟುತ್ತಿದ್ದ ಹಾಗೆಯೇ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನೂ ಆಕೆ ಅನುಭವಿಸಬೇಕಾಗುತ್ತದೆ. ವಯಸ್ಸಾಗುವಿಕೆಯಿಂದ ಆರಂಭವಾಗುವ ಈ ಸಮಸ್ಯೆಗಳಿಗೆ ಬೇರೆ ವಿಚಾರಗಳ ಪ್ರಭಾವವೂ ಇರುತ್ತದೆ. ಉದಾಹರಣೆಗೆ ಆಕೆಯ ಜೀವನಶೈಲಿ, ಆಹಾರಕ್ರಮ, ಆಕೆಯ ಅಭ್ಯಾಸಗಳು ಇತ್ಯಾದಿ ಇತ್ಯಾದಿಗಳು ಆರೋಗ್ಯದ ಮೇಲೆ ನಲವತ್ತರ ನಂತರ ಪರಿಣಾಮ ಬೀರಲಾರಂಭಿಸುತ್ತದೆ. 40 ವರ್ಷ ದಾಟಿದ ತಕ್ಷಣ ಮಹಿಳೆ ತನ್ನ ಆರೋಗ್ಯದ ಕಾಳಜಿಯನ್ನು ತುಸು ಹೆಚ್ಚೇ ಮಾಡಬೇಕು. ಮುಖ್ಯವಾಗಿ ಮಹಿಳೆಯ ಹಾರ್ಮೋನಿನಲ್ಲಿ ಈ ಸಂದರ್ಭ ಬದಲಾವಣೆಗಳಾಗುವುದರಿಂದ, ಮೆನೋಪಾಸ್‌ ಅಥವಾ ಋತುಬಂಧದ ಆರಂಭವಾಗುವ ಸನಿಹಕ್ಕೆ ಬರುವುದರಿಂದ ದೇಹದ ಶಕ್ತಿ ಕುಗ್ಗುತ್ತದೆ. ಹಾಗಾಗಿ ಮಹಿಳೆ ತನ್ನ ಆರೋಗ್ಯದತ್ತ ಈ ಸಂದರ್ಭ ಗಮನ ಹರಿಸುವುದು ಒಳಿತು. ಬನ್ನಿ, ಪ್ರತಿ 40 ದಾಟಿದ ಮಹಿಳೆ ತನ್ನ ಆರೋಗ್ಯದ ಯಾವ ವಿಚಾರಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಿಕೊಳ್ಳಬೇಕು ಎಂಬುದನ್ನು ನೋಡೋಣ.

Kidney Stones Signs

ಕಿಡ್ನಿಯಲ್ಲಿ ಕಲ್ಲು

ಮೂತ್ರನಾಳ ಅಥವಾ ಕೋಶದಲ್ಲಿ ಖನಿಜಲವಣಗಳು ಕಲ್ಲಿನ ರೂಪದಲ್ಲಿ ಸಂಗ್ರಹವಾಗುವ ಸಮಸ್ಯೆ. ಇದು ಅತ್ಯಂತ ನೋವನ್ನು ನೀಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಸಾಮಾನ್ಯವಾಗಿ ಕಿಡ್ನಿಯಲ್ಲಿ ಕಲ್ಲು ಅಥವಾ ಸ್ಟೋನ್‌ ಪುರುಷರಲ್ಲಿ ಹೆಚ್ಚೆಂದು ಹೇಳಿದರೂ, ಮಹಿಳೆಯರಲ್ಲೂ ಇದು ಕಾಣಿಸಿಕೊಳ್ಳುತ್ತದೆ. ಸೊಂಟದ ಸಮೀಪ ತೀವ್ರ ನೋವು, ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು, ಮೂತ್ರದಲ್ಲಿ ರಕ್ತ, ವಾಂತಿ, ಕೆಟ್ಟ ವಾಸನೆಯ ಮೂತ್ರ ಇತ್ಯಾದಿ ಕಿಡ್ನಿಸ್ಟೋನ್‌ನ ಸಾಮಾನ್ಯ ಲಕ್ಷಣಗಳು. ಹೆಚ್ಚು ನೀರು ಕುಡಿಯುವುದು ಇಲ್ಲಿ ಬಹಳ ಮುಖ್ಯ.

ಸಂಧಿವಾತ

ಮಹಿಳೆಯರಲ್ಲಿ ನಲುವತ್ತು ದಾಟಿದ ಮೇಲೆ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆಗಳಲ್ಲಿ ಇದೂ ಒಂದು. ಮೂಳೆಯ ಸಾಂದ್ರತೆ ಕುಸಿಯುವುದರಿಂದ ಆಗುವ ನಿಃಶಕ್ತಿ, ಮೂಳೆಗಳಲ್ಲಿ ನೋವು, ಗಂಟುಗಳ ಬಿಗಿತ, ಸಂದಿಗಳಲ್ಲಿ ನೋವು ಇತ್ಯಾದಿ ಇತ್ಯಾದಿ ಸಮಸ್ಯೆಗಳು ಇದರಲ್ಲಿ ಕಾಣಿಸಿಕೊಳ್ಳುತ್ತವೆ.

Diabetes control

ಮಧುಮೇಹ

ಮಹಿಳೆಗೆ ನಲುವತ್ತು ದಾಟಿದ ಕೂಡಲೇ ಮಧುಮೇಹದ ಅಪಾಯವೂ ಇರುತ್ತದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಏರಿಕೆ, ಇದರೆಂದಾಗಿ ತಲೆಸುತ್ತು, ಕೈಕಾಲು ನಡುಕ, ನಿಃಶಕ್ತಿ, ಕಣ್ಣು ಮಂಜಾಗುವುದು, ತೂಕ ಇಳಿಕೆ, ಒಸಡುಗಳು ಮೆದುವಾಗುವುದು ಇತ್ಯಾದಿ ಸಮಸ್ಯೆಗಳು ಆರಂಭವಾಗುತ್ತದೆ.

ಮೂಳೆ ಸವೆತ

40ರ ನಂತರ ಮೂಳೆಗಳ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯವಾಗುತ್ತದೆ. ಮೂಳೆಯ ಸಾಂದ್ರತೆ ಕಡಿಮೆಯಾಗುವುದಲ್ಲದೆ, ಸವೆತವೂ ಕೆಲವರಲ್ಲಿ ಆರಂಭವಾಗುತ್ತದೆ. ಸಂದಿಗಳಲ್ಲಿ ವಿಪರೀತ ನೋವು ಹಾಗೂ ಸೆಳೆತ, ಸೊಂಟ ನೋವು, ಬೆನ್ನು ನೋವು, ಕಾಲು ನೋವುಗಳು ಹೆಚ್ಚಾಗುತ್ತವೆ. ಮೂಳೆ ಮುರಿತದಂತಹ ಸಮಸ್ಯೆಯೂ ಕೆಲವರಿಗೆ ಬರಬಹುದು. ಹಾಗಾಗಿ 40 ದಾಟಿದ ಮಹಿಳೆ ವೈದ್ಯರನ್ನು ಸಂಪರ್ಕಿಸಿ, ಸಲಹೆ ಸ್ವೀಕರಿಸಿ, ಕ್ಯಾಲ್ಶಿಯಂ ಹಾಗೂ ವಿಟಮಿನ್‌ ಡಿ ಸಪ್ಲಿಮೆಂಟ್‌ ಸೇವಿಸಬೇಕು.

ಮೂತ್ರ ಸಮಸ್ಯೆ

ವಯಸ್ಸಾಗುತ್ತಾ ಆಗುತ್ತಾ, ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕೆಲವು ಮಹಿಳೆಯರಲ್ಲಿ ಕಡಿಮೆಯಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ ಆ ಭಾಗದ ಮಾಂಸಖಂಡಗಳ ಶಕ್ತಿಗುಂದುವುದೂ ಇದಕ್ಕೆ ಕಾರಣ. ಇಂಥ ಸಂದರ್ಭ ಹೆಚ್ಚು ಹೊತ್ತು ಮೂತ್ರ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಿರುವಂಥ ಸಮಸ್ಯೆಗಳೂ ಬರಬಹುದು. ಸಣ್ಣ ಕೆಮ್ಮು, ಸೀನು ಇತ್ಯಾದಿಗಳಿಗೆ ಮೂತ್ರ ಚಿಮ್ಮುವುದು ಇತ್ಯಾದಿಗಳಿಗೂ ಇದೇ ಕಾರಣ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ ವಯಸ್ಸಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆಯಾದರೂ, ಇದು ಅತ್ಯಂತ ಅಪಾಯಕಾರಿ ಕೂಡಾ. ಈ ಸಮಸ್ಯೆ ಹೃದಯದ ತೊಂದರೆ, ಕಿಡ್ನಿ ತೊಂದರೆ, ಪಾರ್ಶ್ವವಾಯು ಮತ್ತಿತರ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತದೆ.

Belly Fat Reduction

ಬೊಜ್ಜು

40 ದಾಟುವ ಮಹಿಳೆಯ ಪ್ರಮುಖ ಸಮಸ್ಯೆ ಎಂದರೆ ಬೊಜ್ಜು. ಬದಲಾದ ಜೀವನಕ್ರಮ, ಮೆನೋಪಾಸ್‌ನಿಂದಾಗಿ ಹಾರ್ಮೋನಿನ ಏರುಪೇರು, ಅನಾರೋಗ್ಯಕರ ಆಹಾರಕ್ರಮ ಇವೆಲ್ಲವೂ ಇಂದಿನ ಮಹಿಳೆಯರ ಬಹುದೊಡ್ಡ ಸಮಸ್ಯೆಯಾದ ಬೊಜ್ಜಿಗೆ ಕಾರಣ. ಉತ್ತಮ ಆಹಾರ ಸೇವನೆ, ವೈದ್ಯರನ್ನು ಸಂಪರ್ಕಿಸಿ ಹಾರ್ಮೋನಿನ ವೈಪರೀತ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು, ನಿಯಮಿತ ವ್ಯಾಯಾಮ, ಕ್ರಿಯಾಶೀಲರಾಗಿರುವುದು ಇತ್ಯಾದಿಗಳಿಂದ ಈ ಸಮಸ್ಯೆಯಿಂದ ಹೊರಬರಬಹುದು. ತಮ್ಮನ್ನು ತಾವು ಫಿಟ್‌ ಆಗಿಟ್ಟು ಕೊಳ್ಳಬಹುದು.

Continue Reading

ಬೆಂಗಳೂರು ಗ್ರಾಮಾಂತರ

Begging Case : ಕುಡುಕ ಗಂಡನ ಮಾತು ಕೇಳಿ ಮಗು ಜತೆಗೆ ಭಿಕ್ಷಾಟನೆಗಿಳಿದ ತಾಯಿ

Begging Case : ಮಗು ಹಿಡಿದು ಭಿಕ್ಷಾಟನೆ ಮಾಡುತ್ತಿದ್ದಾಗಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಂಡ ದಾಳಿ ಮಾಡಿದೆ. ತಾಯಿ-ಮಗುವನ್ನು ಇಬ್ಬರನ್ನು ರಕ್ಷಿಸಿ ಕೌನ್ಸಿಲಿಂಗ್‌ ಒಳಪಡಿಸಿದಾಗ ಅಧಿಕಾರಿಗಳೇ ಶಾಕ್‌ ಆಗಿದ್ದಾರೆ. ಕುಡುಕ ಗಂಡ ಕೊಟ್ಟ ಕಿರುಕುಳಕ್ಕೆ ಬೇಸತ್ತು ಮಹಿಳೆ ಭಿಕ್ಷೆ ಬೇಡಲು ಬಂದಿರುವುದಾಗಿ ತಿಳಿಸಿದ್ದಾಳೆ.

VISTARANEWS.COM


on

By

Begging Case
Koo

ಆನೇಕಲ್: ರಣ ಬಿಸಿಲನ್ನು ಲೆಕ್ಕಿಸದೆ ಮಡಿಲಿನಲ್ಲಿ ಪುಟ್ಟ ಮಗುವನ್ನು ಕೂರಿಸಿಕೊಂಡು ಮಹಿಳೆಯೊಬ್ಬರು ಭಿಕ್ಷಾಟನೆ (Begging Case) ಮಾಡುತ್ತಿದ್ದರು. ದೇವಸ್ಥಾನದ ಮುಂದೆ ಭಿಕ್ಷಾಟನೆ ಮಾಡುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಅವರಿಬ್ಬರನ್ನು ವಶಕ್ಕೆ ಪಡೆದಿದ್ದರು. ನಂತರ ಕೌನ್ಸಿಲಿಂಗ್ ಮಾಡುವಾಗ ಮಹಿಳೆ ಹೇಳಿದ್ದನ್ನು ಕೇಳಿ ಅಧಿಕಾರಿಗಳೇ ಶಾಕ್‌ ಆಗಿದ್ದರು. ಮಹಿಳೆಯ ಅಸಹಾಯಕತೆಗೆ ಮರುಗಿದ್ದರು.

ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಮುಂಭಾಗ ಮಹಿಳೆಯೊಬ್ಬರು ಮಗು ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದಾರೆ ಎಂದು ದೂರು ಬಂದಿತ್ತು. ನಂತರ ನಾಲ್ಕೈದು ಬಾರಿ ಅಧಿಕಾರಿಗಳು ಭಿಕ್ಷೆ ಬೇಡದಂತೆ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಮತ್ತೆ ದೇವಸ್ಥಾನದ ಮುಂಭಾಗ ಭಿಕ್ಷೆ ಬೇಡುತ್ತಿರುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ ನೇತೃತ್ವದ ತಂಡ ದಾಳಿ ಮಾಡಿ, ಇಬ್ಬರನ್ನು ರಕ್ಷಿಸಿದ್ದರು.

Begging Case
ತಾಯಿ-ಮಗುವನ್ನು ರಕ್ಷಿಸಿದ ಅಧಿಕಾರಿಗಳ ತಂಡ

ನಂತರ ಮಹಿಳೆಯನ್ನು ಕೌನ್ಸಿಲಿಂಗ್‌ಗೆ ಒಳಪಡಿಸಿದಾಗ, ಆಕೆ ಹೇಳಿದ್ದು ಕೇಳಿ ಅಧಿಕಾರಿಗಳೇ ಒಂದು ಕ್ಷಣ ಮೌನಕ್ಕೆ ಜಾರಿದ್ದರು. ಕುಡುಕ ಗಂಡನನ್ನು ಕಟ್ಟಿಕೊಂಡ ತಪ್ಪಿಗೆ ಭಿಕ್ಷೆ ಬೇಡುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕುಡಿತಕ್ಕೆ ದಾಸನಾಗಿದ್ದ ಪತಿ, ಭಿಕ್ಷೆ ಬೇಡಿ ಕುಡಿಯಲು ಹಣ ತರುವಂತೆ ತಿಳಿಸಿ, ಕಿರುಕುಳ ಕೊಟ್ಟಿದ್ದಾನೆ ಎನ್ನಲಾಗಿದೆ. ಈತನ ಕಾಟಕ್ಕೆ ಬೇಸತ್ತ ಮಹಿಳೆ ಮಗು ಹಿಡಿದುಕೊಂಡು ದೇವಸ್ಥಾನದ ಮುಂದೆ ಭಿಕ್ಷಾಟನೆ ಮಾಡುತ್ತಿದ್ದಳು.

ಸದ್ಯ ತಾಯಿ ಮತ್ತು ಮಗುವನ್ನು ರಕ್ಷಿಸಿ ಸ್ವಾಧಾರ್ ಗೃಹದಲ್ಲಿಟ್ಟು ಕೌನ್ಸಿಲಿಂಗ್ ಮಾಡಲಾಗುತ್ತಿದೆ. ಕೌನ್ಸಿಲಿಂಗ್ ಬಳಿಕ ಅಧಿಕಾರಿಗಳು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಿದ್ದಾರೆ. ಇನ್ನೂ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಕಂಡರೆ 1098 ಅಥವಾ 122 ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Drowned in water : ನೀರು ಕುಡಿಯಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ಮಹಿಳೆ ಸಾವು

ಮಕ್ಕಳಿಬ್ಬರಿಗೆ ವಿಷ ಕುಡಿಸಿ, ನೇಣಿಗೆ ಶರಣಾದ ತಂದೆ

ಕೋಲಾರ : ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಂದೆಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆಯ (Kolar News) ಶ್ರೀನಿವಾಸಪುರ ತಾಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ನಾರಾಯಣಸ್ವಾಮಿ (40) ಹಾಗೂ ಮಕ್ಕಳಾದ ಪವನ್ (12), ನಿತಿನ್ (10) ಮೃತ ದುರ್ದೈವಿಗಳು. ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

Kolar News
ವಿಷಯ ತಿಳಿದು ಸ್ಥಳದಲ್ಲಿ ಜಮಾಯಿಸಿದ ಜನರು, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸುತ್ತಿರುವ ಪೊಲೀಸರು

ವಿಷಯ ತಿಳಿಯುತ್ತಿದ್ದಂತೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಶ್ರೀನಿವಾಸಪುರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ:Assault Case : ರಾಯಚೂರಿನಲ್ಲಿ ಬಿಜೆಪಿ ಶಾಸಕನಿಗೆ ಚಾಕು ತೋರಿಸಿದ ಅಪರಿಚಿತ; ಹಲ್ಲೆಗೆ ಯತ್ನ, ಅಪಾಯದಿಂದ ಜಸ್ಟ್‌ ಮಿಸ್‌

ಕೌಟುಂಬಿಕ ಕಲಹ; ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಗದಗ: ಕೌಟುಂಬಿಕ ಕಲಹಕ್ಕೆ (Family Dispute) ಒಂದೇ ಕುಟುಂಬದ ಮೂವರು (Self Harming) ಬಲಿ‌ಯಾಗಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ (Gadag News) ಈ ಘಟನೆ ನಡೆದಿದೆ. ರೇಣುಕಾ ತೇಲಿ (49), ಮಂಜುನಾಥ್ (22), ಸಾವಕ್ಕ ತೇಲಿ (47) ಮೃತ ದುರ್ದೈವಿಗಳು.

ಸಾಲದ ವಿಷಯಕ್ಕೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ರೇಣುಕಾ ತೇಲಿ ರೈಲು ಹಳಿಗೆ ಹಾರಿದ್ದರು. ತಾಯಿಯನ್ನು ಹಿಂಬಾಲಿಸಿ ಬಂದಿದ್ದ ಮಂಜುನಾಥ್‌ ತಾಯಿಯನ್ನು ಕಾಪಾಡಲು ಹೋಗಿ ಹಳಿಗೆ ಬಿದ್ದಿದ್ದರು. ಈ ವೇಳೆ ವೇಗವಾಗಿ ಬಂದ ರೈಲು ಇವರಿಬ್ಬರ ಪ್ರಾಣವನ್ನು ತೆಗೆದಿತ್ತು.

ಹಾವೇರಿ ಜಿಲ್ಲೆಯ ಎಲವಿಗಿ ರೈಲು ನಿಲ್ದಾಣದ ಬಳಿ ನಿನ್ನೆ ಭಾನುವಾರ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇತ್ತ ಅಕ್ಕ ರೇಣುಕಾಳ ಸಾವಿನ ವಿಷಯ ತಿಳಿದು ಸಾವಕ್ಕ ತೇಲಿ (47) ಎಂಬುವವರು ಮನೆಯಲ್ಲೇ ನೇಣು ಬಿಗಿದುಕೊಂಡಿದ್ದಾರೆ. ಒಂದೇ ಕುಟುಂಬದ ಮೂವರನ್ನು ಕಳೆದುಕೊಂಡು ಕುಟುಂಬಸ್ಥರು ಕಂಗಲಾಗಿದ್ದಾರೆ.

ಸಾವಕ್ಕ, ರೇಣುಕಾ ಮಧ್ಯೆ ಟ್ರ್ಯಾಕ್ಟರ್ ಸಾಲ ಕಟ್ಟುವ ವಿಷಯವಾಗಿ ಜಗಳವಾಡಿಕೊಂಡಿದ್ದರು. ಬ್ಯಾಂಕ್‌ನಿಂದ 4 ಲಕ್ಷ ರೂ. ಸಾಲ ಪಡೆದು ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ಟ್ರ್ಯಾಕ್ಟರ್ ಕಂತು ವಿಚಾರವು ಕೂಡು ಕುಟುಂಬದಲ್ಲಿ ಗಲಾಟೆಗೆ ಕಾರಣವಾಗಿತ್ತು ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸ್ಫೂರ್ತಿ ಕತೆ

Raja Marga Column : ಬಹುಮುಖಿ ಸ್ತ್ರೀ; ನೀವು ಕಂಡು ಕೇಳರಿಯದ ಹೆಣ್ಣಿನ ಮುಖಗಳು

Raja Marga Column : ನಮ್ಮ ಬದುಕಿನಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸಿ ನಮ್ಮ ಜೀವನವನ್ನು ಸಹನೀಯವಾಗಿಸುವ ಮಹಿಳಾ ಲೋಕಕ್ಕೆ ಶುಭಾಶಯಗಳನ್ನು ಸಲ್ಲಿಸುವುದನ್ನು ಮರೆಯದಿರೋಣ. ಇಲ್ಲಿವೆ ನಾವು ನೆನಪಿಸಿಕೊಳ್ಳಲೇಬೇಕಾದ ಕೆಲವು ಚಿತ್ರಗಳು.

VISTARANEWS.COM


on

Raja Marga column faces of Woman
Koo
RAJA MARGA COLUMN Rajendra Bhat

Raja Marga Column : ಮಾರ್ಚ್ 8ರ ವಿಶ್ವ ಮಹಿಳಾ ದಿನ (International Womens day) ನೇಪಥ್ಯಕ್ಕೆ ಸರಿದೇ ಹೋಯಿತು. ಅದು ಆಕೆಯ ದಿನ ಆಗಿತ್ತು. ಆಕೆಗೋಸ್ಕರ ಮುಡಿಪಾದ ದಿನ. ಆಕೆಯ ಅಜ್ಞಾತವಾದ ತ್ಯಾಗವನ್ನು ನೆನೆಯುವ ದಿನ ಅದು. ಅದಿಲ್ಲದೆ ಆಚರಣೆ ಪೂರ್ತಿ ಆಗೋದಿಲ್ಲ. ಅಜ್ಜಿಯಾಗಿ, ತಾಯಿಯಾಗಿ, ಮಗಳಾಗಿ, ಮೊಮ್ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ಸೊಸೆಯಾಗಿ, ಅತ್ತಿಗೆಯಾಗಿ, ಅತ್ತೆಯಾಗಿ, ನಾದಿನಿಯಾಗಿ, ಓರಗಿತ್ತಿಯಾಗಿ, ಆಪ್ತತೆಯ ಗೆಳತಿಯಾಗಿ, ಹೆಂಡತಿಯಾಗಿ, ಪ್ರೇರಣೆ ನೀಡುವ ಪ್ರೇಯಸಿ ಆಗಿ, ಶಿಕ್ಷಕಿಯಾಗಿ….. ಹೀಗೆ ನೂರು ರೂಪಗಳಲ್ಲಿ ನಮ್ಮ ಬದುಕನ್ನು ಪ್ರಭಾವಿಸಿದ, ನೂರಾರು ಆಯಾಮಗಳಲ್ಲಿ ನಮ್ಮ ಬದುಕಿನಲ್ಲಿ ತಂಗಾಳಿ ಬೀಸಲು ಕಾರಣರಾದ, ತನ್ನ ಬದುಕಿನ ಇಂಚಿಂಚು ಹ್ಯಾಪಿನೆಸನ್ನು ತುಂಬಾ ಸಂಭ್ರಮಿಸಿದ ಪ್ರತಿಯೊಬ್ಬ ಸಹೃದಯೀ ಮಹಿಳೆಗೂ ಅವಳದ್ದೇ ಮಹಿಳಾ ದಿನದ ಶುಭಾಶಯಗಳನ್ನು (Wishes to all women) ಸಲ್ಲಿಸಲು ಬಾಕಿ ಇದ್ದವರು ಇಂದಾದರೂ ಸಲ್ಲಿಸಿ.

Raja marga Column : ಆ ನೆಪದಲ್ಲಿ ಒಂದು ದಿನ ತಡವಾಗಿ ಆದರೂ ಒಂದು ಸುತ್ತು ಪಟ್ಟಿ ಮಾಡೋಣ!

ಮಹಿಳಾ ದಿನದ ನೆಪದಲ್ಲಿ ಹೀಗೊಂದು ಅರ್ಥಪೂರ್ಣ ಮಹಿಳಾ ಸಾಧಕರನ್ನು ಪಟ್ಟಿ ಮಾಡುತ್ತ ಹೋಗೋಣ. ಹಾಗೂ ಅವರನ್ನು ಅಭಿನಂದನೆ ಕೂಡ ಮಾಡೋಣ.

1. ನೂರಾರು ಆಲದ ಮರ ನೆಟ್ಟು ಅವುಗಳನ್ನು ತನ್ನ ಮಕ್ಕಳಂತೆ ಪೋಷಣೆ ಮಾಡಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನಿಗೆ..

Raja Marga column faces of Woman salu marada thimmakka

2. ಸಾವಿರಾರು ಜಾನಪದ ಹಾಡುಗಳನ್ನು ನೆನಪಿಟ್ಟು ಅವುಗಳನ್ನು ಹಾಡುತ್ತ ಜನಜಾಗೃತಿ ಮೂಡಿಸುತ್ತಿರುವ ಸುಕ್ರಜ್ಜಿಗೆ…

3. ಚಾರ್ಲಿ ಚಾಪ್ಲಿನ್ ಎಂಬ ಅದ್ಭುತ ಪ್ರತಿಭೆಗೆ ಜನ್ಮ ಕೊಟ್ಟ ಮತ್ತು ಅವನ ಪ್ರತಿಭೆಗೆ ಕೊನೆಯ ಉಸಿರಿನತನಕ ಪ್ರೇರಣೆಯಾಗಿ ನಿಂತ, ತನಗೆ ಮರೆವಿನ ಕಾಯಿಲೆ ಇದ್ದರೂ ಮಗನಿಗಾಗಿ ಜೀವ ಹಿಡಿದುಕೊಂಡ ಅವನ ತಾಯಿ ಹಾನ್ನಾ ಚಾಪ್ಲಿನ್ ಅವರಿಗೆ.

4. ಎಡಿಸನ್ ಎಂಬ ಸಮಸ್ಯಾತ್ಮಕ ಮಗುವಿಗೆ ಜನ್ಮ ಕೊಟ್ಟು ನೂರಾರು ಸವಾಲುಗಳ ನಡುವೆ ಕೂಡ ಆತನ ಅಷ್ಟೂ ಸಂಶೋಧನಾ ಪ್ರವೃತ್ತಿಗಳಿಗೆ ಬೆಂಬಲವಾಗಿ ನಿಂತ ಆತನ ತಾಯಿ ಗ್ಲಾಡಿಸ್‌ರಿಗೆ

5. ಡಾಕ್ಟರ್ ರಾಜಕುಮಾರ್ ಎಂಬ ಲೆಜೆಂಡ್ ನಟನ ಮುಗ್ಧತೆಗೆ ಬೇಲಿಯಾಗಿ ನಿಂತ ಮಡದಿ ಪಾರ್ವತಮ್ಮ ರಾಜಕುಮಾರ್ ಅವರಿಗೆ.

Raja Marga Column parvathamma Rajkumar

6. ಕಾಳಿದಾಸನ ಕಾವ್ಯ ಪ್ರತಿಭೆಗೆ ಸ್ಫೂರ್ತಿ ದೇವತೆಯಾಗಿ ನಿಂತ ವಿದ್ಯಾಧರೆ ಎಂಬ ಸುಂದರ ರಾಜಕುಮಾರಿಗೆ.

7. ಶಿವಾಜಿ ಎಂಬ ಶಕ್ತಿಶಾಲಿ ಮಗನ ಮೂಲಕ ತಾನು ಕನಸು ಕಂಡ ಹಿಂದವೀ ಸಾಮ್ರಾಜ್ಯವನ್ನು ಕಡೆದು ನಿಲ್ಲಿಸಿದ ಮಹಾಮಾತೆ ಜೀಜಾಬಾಯಿಗೆ.

8. ನರೇಂದ್ರ(ಸ್ವಾಮಿ ವಿವೇಕಾನಂದ) ಎಂಬ ಆಧ್ಯಾತ್ಮ ಶಿಖರಕ್ಕೆ ಒತ್ತಾಸೆಯಾಗಿ ನಿಂತ ಆತನ ತಾಯಿಯಾದ ಭುವನೇಶ್ವರಿ ದೇವಿಗೆ.

9. ಅಂಕೋಲಾದ ಕಾಡುಗಳಲ್ಲಿ ವೃಕ್ಷ ರಾಶಿಯನ್ನು ಬೆಳೆಸಿ ಅದರ ಸಂರಕ್ಷಣೆ ಮಾಡಿ ನೇಪಥ್ಯದಲ್ಲಿ ನಿಂತ ತುಳಸೀ ಗೌಡ ಅವರಿಗೆ.

Raja Marga column  Tulsi Gowda

10. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಉಸಿರಾಗಿ ಬೆಳೆಸಿದ, ಸಂಗೀತದ ಕಂಪನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿರುವ ಭಾರತ ರತ್ನ ಡಾ. ಎಂ ಎಸ್ ಸುಬ್ಬುಲಕ್ಷ್ಮಿ ಅವರಿಗೆ.

11. ಮಹಿಳಾ ಕ್ರಿಕೆಟನ್ನು ಭಾರತದಲ್ಲಿ ಜನಪ್ರಿಯತೆಯ ಶಿಖರದ ತುದಿಗೆ ಮುಟ್ಟಿಸಿದ ಬಲಿಷ್ಠ ಕ್ರಿಕೆಟರ್ ಮಿತಾಲಿ ರಾಜ್ ಅವರಿಗೆ..

12. ಭಾರತದ ಮೊದಲ ಮಹಿಳಾ ವೈದ್ಯೆಯಾಗಿ ಕೀರ್ತಿ ಪಡೆದು, ಪ್ರಾಕ್ಟೀಸ್ ಆರಂಭ ಮಾಡುವ ಮೊದಲೇ ನಿಧನರಾದ ಡಾಕ್ಟರ್ ಆನಂದಿಬಾಯಿ ಜೋಶಿ ಅವರಿಗೆ.

Raja Marga column : ರಾಜ್ಯಸಭೆಗೆ ಆಯ್ಕೆಯಾದ ಸಮಾಜಸೇವಕಿ ಸುಧಾಮೂರ್ತಿ

13. ಸರಳತೆ, ಸಮಾಜಸೇವೆ ಇವುಗಳಿಗೆ ಅನನ್ಯ ಮಾದರಿ ಆದ ಮತ್ತು ತನ್ನ ಪತಿಯ ಪ್ರತೀ ಉದ್ಯಮದ ಕನಸಿಗೂ ಒತ್ತಾಸೆಯಾಗಿ ನಿಂತ ಡಾಕ್ಟರ್ ಸುಧಾಮೂರ್ತಿ ಅವರಿಗೆ.

Raja marga Column Dr Sudha Murthy

14. ಎರಡೆರಡು ನೊಬೆಲ್ ಬಹುಮಾನಗಳನ್ನು ಪಡೆದು, ತನ್ನ ಸಂಶೋಧನೆಗಳ ಮೂಲಕ ಮಾನವ ಕುಲದ ಕಲ್ಯಾಣವನ್ನು ಹಾರೈಸಿದ ಮೇಡಂ ಕ್ಯೂರಿ ಅವರಿಗೆ.

15. ಮದುವೆಯಾಗಲು ತನ್ನನ್ನು ಒತ್ತಾಯಿಸಿದ ಹಿಂದೀ ಸಿನೆಮಾದ ಶೋಮ್ಯಾನ್ ಆದ ರಾಜ್ ಕಪೂರ್ ಅವರ ಪ್ರಸ್ತಾಪವನ್ನು ಪ್ರೀತಿಯಿಂದ ನಿರಾಕರಿಸಿ, ಕೊನೆಯವರೆಗೂ ಆತನ ಪ್ರಿಯತಮೆ ಆಗಿ ಉಳಿದು ಆತನಿಂದ ಮಹಾ ಸಿನೆಮಾಗಳನ್ನು ಮಾಡಿಸಿದ ಮೇರು ನಟಿ ನರ್ಗೀಸ್ ಅವರಿಗೆ.

16. ಹಾಡುವುದಕ್ಕಾಗಿಯೇ ಹುಟ್ಟಿ ಬಂದ, ಸಾವಿರಾರು ಹಾಡುಗಳನ್ನು ಹಾಡುವ ಮೂಲಕ ಭಾರತದ ಧ್ವನಿ ಎಂದೇ ಪ್ರಸಿದ್ಧಿ ಪಡೆದ ಮೇರು ಗಾಯಕಿ ಲತಾ ಮಂಗೇಷ್ಕರ್ ಅವರಿಗೆ.

Raja marga Column : ಗಟ್ಟಿತನಕ್ಕೆ ಇನ್ನೊಂದು ಹೆಸರು ಇಂದಿರಾ ಗಾಂಧಿ

17. ಗಟ್ಟಿತನ, ದಿಟ್ಟತನ ಮತ್ತು ಕಠಿಣ ನಿರ್ಧಾರಗಳಿಗೆ ಹೆಸರು ಮಾಡಿದ, ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾಂಕ್ ರಾಷ್ಟ್ರೀಕರಣ ಮಾಡಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ.

 Raja Marga column 
 Indira Gandhi

18. ತಾನೇ ಸ್ವತಃ ಅನಾಥೆ ಆಗಿದ್ದರೂ, ಭಿಕ್ಷೆ ಬೇಡಿ ಅನಾಥಾಶ್ರಮಗಳನ್ನು ಕಟ್ಟಿ ಸಾವಿರಾರು ಅನಾಥ ಮಕ್ಕಳ ತಾಯಿಯಾದ ಸಿಂಧುತಾಯಿ ಸಪ್ಕಲ್ ಅವರಿಗೆ.

19. ರೆಕ್ಕೆ ಬಿಚ್ಚಿ ಹಾರಾಡುವ ತನ್ನ ಕನಸನ್ನು ಬಾಹ್ಯಾಕಾಶ ಯಾನದ ಮೂಲಕ ನನಸು ಮಾಡಲು ಹೊರಟು ಅರ್ಧದಲ್ಲಿಯೇ ಬೂದಿ ಆಗಿ ಹೋದ ಕಲ್ಪನಾ ಚಾವ್ಲಾ ಅವರಿಗೆ.

20. ಇಡೀ ಜಗತ್ತಿನ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಾಗಿ ಪೋರ್ಚುಗೀಸರ ಜೊತೆಗೆ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದ ಉಳ್ಳಾಲದ ರಾಣಿ ಅಬ್ಬಕ್ಕ ಅವರಿಗೆ..

ಇದನ್ನೂ ಓದಿ : Womens Day 2024: ಉದ್ಯಾನನಗರಿಯ ಫ್ಯಾಷನ್‌ ಲೋಕದಲ್ಲಿ ಮಹಿಳೆಯರದೇ ಮೇಲುಗೈ!

21. ‘ದ ವುಮನ್ ವಿದ್ ದ ಲ್ಯಾಂಪ್’ ಎಂದು ಎಲ್ಲರಿಂದ ಕರೆಸಿಕೊಂಡು ಯುದ್ಧದಲ್ಲಿ ಸಂತ್ರಸ್ತರಾದ ಸೈನಿಕರ ಆರೈಕೆಗೆ ಸಂಕಲ್ಪ ಮಾಡಿದ, ವಿಶ್ವದ ಮೊದಲ ನರ್ಸಿಂಗ್ ಕಾಲೇಜನ್ನು ತೆರೆದ ಫ್ಲಾರೆನ್ಸ್ ನೈಟಿಂಗೇಲ್‌ ಅವರಿಗೆ.

22. ‘ಕಲಾ ಮಂಡಲಮ್ ‘ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿ, ಗೊಡ್ಡು ಸಂಪ್ರದಾಯಗಳ ವಿರುದ್ಧ ಹೋರಾಡಿ ಸಂಗೀತ ಮತ್ತು ನೃತ್ಯಗಳನ್ನು ಆರಾಧನೆ ಮಾಡಿದ ಮಹಾನ್ ಕಲಾವಿದೆ ರುಕ್ಮಿಣೀ ದೇವಿ ಆರುಂಡೇಲ್ ಅವರಿಗೆ…

23. ಗಂಡಾಗಿ ಹುಟ್ಟಿ, ಒಳಗಿನ ಧ್ವನಿಗಳಿಗೆ ಕಿವಿಕೊಟ್ಟು ಮುಂದೆ ಹೆಣ್ಣಾಗಿ ಪರಿವರ್ತನೆ ಆಗಿ, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದರೂ, ಕನ್ನಡದ ಜಾನಪದ ಜಗತ್ತನ್ನು ವಿಸ್ತರಿಸಿದ ಮಂಜಮ್ಮ ಜೋಗತಿ ಅವರಿಗೆ.

Raja Marga Column Manjamma Joagathi

24. ಶಂಕರನಾಗ್ ಅವರ ನೂರಾರು ಅಪೂರ್ಣ ಕನಸುಗಳನ್ನು ಅವರ ಮರಣದ ನಂತರ ಒಂದೊಂದಾಗಿ ಪೂರ್ತಿ ಮಾಡಿ ಕನ್ನಡದಲ್ಲಿ ರಂಗ ಸಂಸ್ಕೃತಿಯನ್ನು ಬೆಳೆಸಿದ ಅವರ ಪತ್ನಿ ಅರುಂಧತಿ ನಾಗ್ ಅವರಿಗೆ.

25. ಕನ್ನಡದ ಅತೀ ಶ್ರೇಷ್ಟವಾದ ಕಾದಂಬರಿಗಳನ್ನು ಬರೆದು ಸಾರಸ್ವತ ಲೋಕಕ್ಕೆ ಪರಿಚಯ ಮಾಡಿದ ಕನ್ನಡದ ಮಹಾ ಲೇಖಕಿ ಎಂ ಕೆ ಇಂದಿರಾ ಅವರಿಗೆ.

26. ಬೆಂಗಳೂರಿನಲ್ಲಿ ಬಯೋಕಾನ್ ತೆರೆದು ಸಾವಿರಾರು ಮಂದಿಗೆ ಉದ್ಯೋಗ ನೀಡಿದ ಮಹಿಳಾ ಉದ್ಯಮಿ ಕಿರಣ್ ಮಜುಂದಾರ್ ಅವರಿಗೆ.

27. ಮಹಾಕವಿ ರನ್ನನ ಕಾವ್ಯ ಪ್ರತಿಭೆಗೆ ಸ್ಫೂರ್ತಿ ಮತ್ತು ಬೆಂಬಲವಾಗಿ ನಿಂತ ಮಹಾ ದಾನಿ ಅತ್ತಿಮಬ್ಬೆಗೆ.

28. ಭಾರತದ ಮೊದಲ ಐಪಿಎಸ್ ಅಧಿಕಾರಿ ಆಗಿ ಮೂಡಿಬಂದು, ತನಗೆ ದೊರೆತ ಅವಕಾಶಗಳನ್ನು ಅತ್ಯಂತ ಸಮರ್ಥವಾಗಿ ಬೆಳೆಸಿಕೊಂಡ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರಿಗೆ .

raja Marga Column Kiran Bedi tihar jail

29. ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಒಲಿಂಪಿಕ್ ಪದಕವು ಸಿಗಲು ಸಾಧ್ಯವೇ ಇಲ್ಲ ಎಂಬ ಕೂಗಿನ ನಡುವೆಯೂ ಎಂಬತ್ತರ ದಶಕದಲ್ಲಿ ಭಾರತೀಯರಿಗೆ ಮೊದಲ ಬೆಳಕಿನ ಕಿಟಕಿ ತೆರೆದ ಪಯ್ಯೋಳಿ ಎಕ್ಸ್‌ಪ್ರೆಸ್‌ ಪಿ.ಟಿ. ಉಷಾ ಅವರಿಗೆ.

ಇದನ್ನೂ ಓದಿ : Raja Marga Column : ಈ ಹೆಣ್ಮಕ್ಕಳು ಜಗತ್ತಿನ ಮಹಾನ್ ಪವರ್‌ ಹೌಸ್‌ಗಳು

ನಾವು ಬದುಕುವ ಜಗತ್ತನ್ನು ತನ್ನ ಅದಮ್ಯ ಶಕ್ತಿಗಳ ಮೂಲಕ ಶ್ರೀಮಂತಗೊಳಿಸಿದ ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರು ಇನ್ನೂ ಸಾವಿರ ಸಾವಿರ ಸಂಖ್ಯೆಯಲ್ಲಿ ಇದ್ದಾರೆ. ಅಷ್ಟರ ಮಟ್ಟಿಗೆ ಭಾರತವನ್ನು ಪುಣ್ಯಗರ್ಭೆ ಎಂದೇ ಕರೆಯಬಹುದು. ಅವರಿಗೆಲ್ಲ ಒಂದು ದಿನ ತಡವಾಗಿ ಆದರೂ ಮತ್ತೆ ಅವರದೇ ದಿನಗಳ ಶುಭಾಶಯಗಳು. ಸ್ತ್ರೀಯರನ್ನು ಗೌರವಿಸುವ ಎಲ್ಲರಿಗೂ ಎಲ್ಲಾ ದಿನವೂ ಮಹಿಳಾ ದಿನಗಳೇ ಎನ್ನುವುದು ನನ್ನ ನಂಬಿಕೆ.

Continue Reading
Advertisement
Virat kohli
ಪ್ರಮುಖ ಸುದ್ದಿ38 seconds ago

Virat Kohli : ವಿರಾಟ್ ಕೊಹ್ಲಿಯ 50ನೇ ಏಕದಿನ ಕ್ರಿಕೆಟ್​ ಶತಕಕ್ಕೆ ಅಂತಾರಾಷ್ಟ್ರೀಯ ಗೌರವ

Job Alert
ಉದ್ಯೋಗ2 mins ago

Job Alert: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಮೇ 4ರೊಳಗೆ ಅಪ್ಲೈ ಮಾಡಿ

Murder case In Bengaluur
ಬೆಂಗಳೂರು3 mins ago

Murder Case : ಕೊಲೆಯಾದ ಮಹಿಳೆಗೆ 20 ಹುಡುಗರ ಸಹವಾಸ! ಅವರಿಗೆ ಆಕೆ ಇಟ್ಟಿದ್ದ ಹೆಸರು ಆರೆಂಜ್, ಆ್ಯಪಲ್, ಬನಾನಾ ಇತ್ಯಾದಿ!

Summer Hairstyles
ಫ್ಯಾಷನ್3 mins ago

Summer Hairstyles: ಸೆಕೆಗಾಲದಲ್ಲಿ ಟ್ರೆಂಡಿಯಾದ 3 ಮಿಕ್ಸ್‌ ಮ್ಯಾಚ್‌ ಹೇರ್‌ಸ್ಟೈಲ್ಸ್!

hardik pandya
ಕ್ರೀಡೆ4 mins ago

IPL 2024: ಹಾರ್ದಿಕ್​ ಪಾಂಡ್ಯ ನಿಜವಾಗಿಯೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ?; ವಿಚಿತ್ರ ವರ್ತನೆಯ ವಿಡಿಯೊ ವೈರಲ್​

Yuzvendra Chahal
ಪ್ರಮುಖ ಸುದ್ದಿ32 mins ago

Yuzvendra Chahal : ​ ಚಾಹಲ್ ಕೈಬಿಟ್ಟಿರುವುದರ ಹಿಂದಿನ ಕಾರಣ ಬಹಿಂಗ ಮಾಡಿದ ಆರ್​ಸಿಬಿ ಮಾಜಿ ಡೈರೆಕ್ಟರ್​

Three boys drown
ಕರ್ನಾಟಕ38 mins ago

Yadgir News: ಕೆರೆಯಲ್ಲಿ ಈಜಾಡಲು ಹೋಗಿ ಮೂವರು ಬಾಲಕರ ದುರ್ಮರಣ

Fraud case
ಬೆಂಗಳೂರು42 mins ago

Fraud Case : ಗುಜರಿ ಅಂಗಡಿ ಮಾಲೀಕನಿಗೆ ಬೆದರಿಸಿ ಹಣ ಪೀಕಿದ ಪೊಲೀಸ್‌ ಹಾಗೂ ಇನ್ಫಾರ್ಮರ್

Uttarakaanda Movie
ಸಿನಿಮಾ43 mins ago

Uttarakaanda Movie: ʼಉತ್ತರಕಾಂಡʼ ಚಿತ್ರಕ್ಕೆ ನಾಯಕಿ ಎಂಟ್ರಿ; ಮೋಹಕ ತಾರೆ ರಮ್ಯಾ ಜಾಗಕ್ಕೆ ಕಾಲಿವುಡ್‌ ನಟಿ

Lok Sabha Election 2024 BJP released Pick pocket Congress poster
Lok Sabha Election 202454 mins ago

LoK Sabha Election 2024: ಚೊಂಬು ಆರೋಪಕ್ಕೆ ಚಿಪ್ಪು ಕೊಟ್ಟ ಬಿಜೆಪಿ! ಪಿಕ್‌ ಪಾಕೆಟ್‌ ಕಾಂಗ್ರೆಸ್‌ ಪೋಸ್ಟರ್‌ ಬಿಡುಗಡೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ12 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು24 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ1 day ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು1 day ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌