Hijab row | ಇಸ್ಲಾಮಿಕ್‌ ದೇಶಗಳಲ್ಲಿ 10 ಸಾವಿರ ಆತ್ಮಹತ್ಯೆ ದಾಳಿ, ನಮ್ಮಲ್ಲಿ ಒಂದು ಮಾತ್ರ: ಹಿಜಾಬ್‌ ಪರ ವಕೀಲರ ವಾದ - Vistara News

ಕೋರ್ಟ್

Hijab row | ಇಸ್ಲಾಮಿಕ್‌ ದೇಶಗಳಲ್ಲಿ 10 ಸಾವಿರ ಆತ್ಮಹತ್ಯೆ ದಾಳಿ, ನಮ್ಮಲ್ಲಿ ಒಂದು ಮಾತ್ರ: ಹಿಜಾಬ್‌ ಪರ ವಕೀಲರ ವಾದ

ಉಡುಪಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್‌ ಧಾರಣೆಯ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ವಾದವಿವಾದ ನಡೆಯುತ್ತಿದ್ದು, ಮಂಗಳವಾರವೂ ಮುಂದುವರಿಯಲಿದೆ.

VISTARANEWS.COM


on

udupi hijab students
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಇಸ್ಲಾಮಿಕ್‌ ದೇಶಗಳಲ್ಲಿ ಇದುವರೆಗೂ ಹತ್ತು ಸಾವಿರ ಆತ್ಮಹತ್ಯಾ ದಾಳಿಗಳು ನಡೆದಿವೆ. ಆದರೆ ಭಾರತದಲ್ಲಿ ನಡೆದಿರುವುದು ಒಂದೇ ಒಂದು, ಪುಲ್ವಾಮ ದಾಳಿ ಮಾತ್ರ. ಇದು ಇಲ್ಲಿನ ಮುಸ್ಲಿಮರು ದೇಶದ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್‌ ಪರ ವಕೀಲರಾದ ಹಿರಿಯ ನ್ಯಾಯವಾದಿ ದುಶ್ಯಂತ ದವೆ ವಾದಿಸಿದ್ದಾರೆ.

ಮುಸ್ಲಿಂ ಯುವತಿಯರು ಹಿಜಾಬ್‌ ಧರಿಸುವುದು ಯಾರ ಧಾರ್ಮಿಕ ಭಾವನೆಗಳಿಗೂ ನೋವುಂಟು ಮಾಡುವುದಿಲ್ಲ. ಹಿಜಾಬ್‌ ಅವರ ವ್ಯಕ್ತಿತ್ವದ ವಿಶಿಷ್ಟತೆಯಾಗಿದೆ. ಆದರೆ ಲವ್‌ ಜಿಹಾದ್‌ ಆರೋಪಗಳು, ಶಿಕ್ಷಣ ಸಂಸ್ಥೆಗಳಲ್ಲಿ ಅವರು ಹಿಜಾಬ್‌ ಧರಿಸುವುದಕ್ಕೆ ನಿರಾಕರಣೆ ಇತ್ಯಾದಿಗಳು ಅಲ್ಪಸಂಖ್ಯಾತ ಸಮುದಾಯವನ್ನು ಅಂಚಿಗೆ ತಳ್ಳುವ ಮನೋಭಾವದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತಿವೆ. ಭಾರತವು ಪ್ರಗತಿಪರ ಮನೋಧರ್ಮದಲ್ಲಿ ಬೆಳೆದುಬಂದಿದ್ದು, ವೈವಿಧ್ಯತೆಯೇ ಇಲ್ಲಿನ ಏಕತೆಯಾಗಿದೆ ಎಂದು ದವೆ ವಾದಿಸಿದರು.

ಪಾಶ್ಚಿಮಾತ್ಯ ದೇಶಗಳು ಹಿಜಾಬ್ ಧಾರಣೆಗೆ ಅವಕಾಶ ನೀಡಿವೆ. ಅಮೆರಿಕದ ಸೈನ್ಯದಲ್ಲೂ ಟರ್ಬನ್‌ಗಳಿಗೆ ಅವಕಾಶ ನೀಡಲಾಗಿದೆ. ಸಿಕ್ಖರು ಟರ್ಬನ್‌ ಧರಿಸುವುದಕ್ಕೆ ಯಾವುದೇ ಆಕ್ಷೇಪ ಇಲ್ಲ. ಹಾಗೆಯೇ ಮುಸ್ಲಿಂ ಮಹಿಳೆಯರ ಹಿಜಾಬ್‌ಗೂ ಆಕ್ಷೇಪ ಇರಬಾರದು. ಕೆಲವು ತಿಲಕ ಇಡಲು, ಕೆಲವರು ಕ್ರಾಸ್‌ ಧರಿಸಲು ಇಷ್ಟಪಡಬಹುದು. ಹೀಗಿರುವಾಗ ಹಿಜಾಬ್‌ ಹೇಗೆ ದೇಶದ ಏಕತೆಗೆ ಧಕ್ಕೆಯಾಗುತ್ತದೆ ಎಂದು ದವೆ ಪ್ರಶ್ನಿಸಿದರು.

ನೀವು (ರಾಜ್ಯ ಸರ್ಕಾರ) ಸಮವಸ್ತ್ರದ ನೆವದಲ್ಲಿ ಹಿಜಾಬ್‌ ನಿಷೇಧದ ನಿರ್ಣಯ ನೀಡುತ್ತೀರಿ. ಆದರೆ ಅದರ ಮೂಲ ಉದ್ದೇಶವೇ ಬೇರೆಯಾಗಿದೆ. ನೀವು ನಿಮ್ಮ ನಂಬಿಕೆಗಳನ್ನು ಆಚರಿಸಲು ನಾವು ಬಿಡುವುದಿಲ್ಲ ಎನ್ನುವ ಮೂಲಕ, ನಾವು ಹೇಳಿದಂತೆ ನೀವು ಕೇಳಬೇಕು ಎನ್ನುವ ಸಂದೇಶ ರವಾನೆ ಮಾಡಲಾಗುತ್ತಿದೆ ಎಂದು ಅವರು ರಾಜ್ಯ ಸರ್ಕಾರವನ್ನು ಆಕ್ಷೇಪಿಸಿದರು.‌

ಇದನ್ನೂ ಓದಿ | Hijab Row | ಮೋದಿ ಪೇಟ, ಜೀನ್ಸ್‌, ನೆಹರು, ಇವು ಹಿಜಾಬ್‌ ವಿಚಾರಣೆ ವೇಳೆ ಪ್ರಸ್ತಾಪವಾದ ವಿಷಯಗಳು!

ನಮ್ಮ ಸಂವಿಧಾನ ಯಾವಾಗಲೂ ಮುಕ್ತತೆಯಿಂದ ನಡೆದುಕೊಂಡಿದೆ. ಹಿಜಾಬ್‌ ಧರಿಸಬಲ್ಲ ಹಕ್ಕು ಸಂವಿಧಾನದ ಆರ್ಟಿಕಲ್‌ 25ರ ಪ್ರಕಾರ ಪ್ರಜೆಗೆ ದತ್ತವಾಗಿದ್ದು, ಇದನ್ನು ಎಲ್ಲಿ ಬೇಕಿದ್ದರೂ ನಾವು ಆಚರಿಸಬಹುದಾಗಿದೆ. ನಮ್ಮ ಧಾರ್ಮಿಕ ನಂಬಿಕೆಗಳನ್ನು ಎಲ್ಲಿ ಬೇಕಿದ್ದರೂ ಮುಕ್ತವಾಗಿ ನಂಬುವುದು, ಆಚರಿಸುವುದು, ಪ್ರತಿಪಾದಿಸುವುದು ಆರ್ಟಿಕಲ್‌ 25ರ ಪ್ರಕಾರ ಸಾಧ್ಯ. ತರಗತಿಗಳಲ್ಲೂ ಇದನ್ನು ಮಾಡಬಹುದಾಗಿದೆ ಎಂದು ದವೆ ಪ್ರತಿಪಾದಿಸಿದರು.

ಹಿಜಾಬ್‌ ಧರಿಸುವುದು ತನ್ನ ಧಾರ್ಮಿಕ ಆಚರಣೆಗೆ ಅಗತ್ಯ ಎಂದು ಮುಸ್ಲಿಂ ಮಹಿಳೆ ಹೇಳಿದರೆ ಅದನ್ನು ಯಾವುದೇ ಕೋರ್ಟ್‌ ಅಥವಾ ಆಡಳಿತ ವ್ಯವಸ್ಥೆ ನಿರಾಕರಿಸುವಂತಿಲ್ಲ ಎಂದು ದವೆ ವಾದಿಸಿದ್ದಾರೆ.

ಉಡುಪಿಯ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ತರಗತಿಯೊಳಗೆ ಹಿಜಾಬ್ ಧರಿಸುವ ವಿಚಾರದಲ್ಲಿ ಎದ್ದ ವಿವಾದಕ್ಕೆ ಸಂಬಂಧಿಸಿ, ತರಗತಿಯಲ್ಲಿ ಹಿಜಾಬ್‌ ನಿಷೇಧಿಸಿ ಫೆಬ್ರವರಿ 5ರಂದು ಸರ್ಕಾರ ಆದೇಶಿಸಿತ್ತು. ಹಿಜಾಬ್‌ ಧಾರಣೆಗೆ ಅನುಮತಿ ನೀಡುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರ ಒಂದು ತಂಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಏಳು ದಿನಗಳಿಂದ ನ್ಯಾಯಮೂರ್ತಿಗಳಾದ ಹೇಮಂತ ಗುಪ್ತಾ ಮತ್ತು ಸುಧಾಂಶು ಧೂಲಿಯಾ ಅವರ ಪೀಠದ ಮುಂದೆ ವಿಚಾರಣೆ ನಡೆಯುತ್ತಿದ್ದು, ಮಂಗಳವಾರ ಮುಂದುವರಿಯಲಿದೆ.

ಇದನ್ನೂ ಓದಿ | ವಿಸ್ತಾರ Explainer | ಇರಾನ್‌ನಲ್ಲಿ ಹಿಜಾಬ್‌ ಕಟ್ಟಳೆ, ಹೊರಬರಲು ಆಗುವುದಿಲ್ಲವೇ ಮಹಿಳೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

NOTA: ಅತಿ ಹೆಚ್ಚು `ನೋಟಾ’ ಬಿದ್ದರೆ ಹೊಸ ಚುನಾವಣೆ ಮಾಡಬಹುದೇ? ಸುಪ್ರೀಂ ಪ್ರಶ್ನೆ

NOTA: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ ಚಂದ್ರಚೂಡ್ ನೇತೃತ್ವದ ಪೀಠವು, ದೇಶದಾದ್ಯಂತ ಮತದಾರರ ಜಾಗೃತಿ ಮೂಡಿಸಲು ಚುನಾವಣೆಗಳಲ್ಲಿ ನೋಟಾವನ್ನು “ಕಾಲ್ಪನಿಕ ಚುನಾವಣಾ ಅಭ್ಯರ್ಥಿ” ಎಂದು ಪರಿಗಣಿಸಬೇಕೆ ಎಂಬುದನ್ನು ಪರಿಶೀಲಿಸಲು ಸಹ ಒಪ್ಪಿಗೆ ನೀಡಿದೆ.

VISTARANEWS.COM


on

nota vote
Koo

ಹೊಸದಿಲ್ಲಿ: ʼನೋಟಾʼ (NOTA) ಆಯ್ಕೆಗೆ ಹೆಚ್ಚಿನ ಸಂಖ್ಯೆಯ ಮತಗಳು ಬಿದ್ದ ಕ್ಷೇತ್ರದಲ್ಲಿ ಹೊಸ ಚುನಾವಣೆ ನಡೆಸಬಹುದೇ ಎಂಬ ಪ್ರಶ್ನೆಯನ್ನು ಚುನಾವಣಾ ಆಯೋಗದ (Election commission of India) ಮುಂದೆ ಸುಪ್ರೀಂ ಕೋರ್ಟ್‌ (Supreme court) ಇಟ್ಟು ಉತ್ತರ ಬಯಸಿದೆ. ಮತದಾರರಿಗೆ (Voters) “ಮೇಲಿನ ಯಾವುದೂ ಅಲ್ಲ” (ನೋಟಾ) ಆಯ್ಕೆಯನ್ನು ನೀಡಿದ ಹನ್ನೊಂದು ವರ್ಷಗಳ ನಂತರ ಸುಪ್ರೀಂ ಕೋರ್ಟ್ ಶುಕ್ರವಾರ ಭಾರತೀಯ ಚುನಾವಣಾ ಆಯೋಗದಿಂದ (ECI) ಪ್ರತಿಕ್ರಿಯೆ ಕೇಳಿದೆ.

ನೋಟಾ ಬಟನ್ ಇವಿಎಂಗಳಲ್ಲಿ ಅಭ್ಯರ್ಥಿಗಳ ಪಟ್ಟಿಯ ಅತ್ಯಂತ ಕೆಳಭಾಗದಲ್ಲಿರುತ್ತದೆ. ಪ್ರಸ್ತುತ, ಒಂದು ಕ್ಷೇತ್ರದಲ್ಲಿ ನೋಟಾ ಹೆಚ್ಚು ಮತಗಳನ್ನು ಗಳಿಸಿದರೆ ಎರಡನೇ ಅತಿ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಧನಂಜಯ ವೈ ಚಂದ್ರಚೂಡ್ ನೇತೃತ್ವದ ಪೀಠವು, ದೇಶದಾದ್ಯಂತ ಮತದಾರರ ಜಾಗೃತಿ ಮೂಡಿಸಲು ಚುನಾವಣೆಗಳಲ್ಲಿ ನೋಟಾವನ್ನು “ಕಾಲ್ಪನಿಕ ಚುನಾವಣಾ ಅಭ್ಯರ್ಥಿ” ಎಂದು ಪರಿಗಣಿಸಬೇಕೆ ಎಂಬುದನ್ನು ಪರಿಶೀಲಿಸಲು ಸಹ ಒಪ್ಪಿಗೆ ನೀಡಿದೆ.

ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ನೋಟಾಗೆ ಗರಿಷ್ಠ ಮತಗಳನ್ನು ಪಡೆದ, ಮತದಾರರಿಂದ ತಿರಸ್ಕೃತಗೊಂಡ ಅಭ್ಯರ್ಥಿಗಳನ್ನು ಹೊಸ ಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿಸಬಾರದು ಎಂಬ ಅರ್ಜಿದಾರರ ಮನವಿಗೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿತು.

“ನಾವು ಅದನ್ನು ಹೇಗೆ ಮಾಡಲು ಸಾಧ್ಯ? ಅದು ಶಾಸಕಾಂಗದ ಆಯ್ಕೆ. ನಾವು ಅಂತಹ ಆದೇಶ ನೀಡಲು ಸಾಧ್ಯವಿಲ್ಲ ಎಂದು ನಾವು ಭಾವಿಸುತ್ತೇವೆ” ಎಂದು ಈ ವಿಷಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರ ಶಿವ ಖೇರಾ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರಿಗೆ ನ್ಯಾಯಪೀಠ ಹೇಳಿದೆ. ಖೇರಾ ದೆಹಲಿ ಮೂಲದ ಸ್ಫೂರ್ತಿ ಭಾಷಣಕಾರ ಮತ್ತು ಲೇಖಕ.

2013ರಲ್ಲಿ ನೋಟಾವನ್ನು ಪರಿಚಯಿಸಿದ್ದು, ಪ್ರಜಾಪ್ರಭುತ್ವದಲ್ಲಿ ಮತದಾರರ ಆಯ್ಕೆಯನ್ನು ಉತ್ತಮಗೊಳಿಸುವ ಸುಪ್ರೀಂ ಕೋರ್ಟ್‌ನ ಉದ್ದೇಶವನ್ನು ಮುಂದುವರಿಸುವ ಗುರಿಯನ್ನು ಅರ್ಜಿಯು ಹೊಂದಿದೆ ಎಂದು ಶಂಕರನಾರಾಯಣನ್ ಒತ್ತಿ ಹೇಳಿದರು. “ಸೂರತ್‌ನಲ್ಲಿ ಮತ ಚಲಾಯಿಸದೇ ಒಬ್ಬ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಲಾಯಿತು. ಏಕೆಂದರೆ ಕಣದಲ್ಲಿ ಬೇರೆ ಅಭ್ಯರ್ಥಿ ಇರಲಿಲ್ಲ. ಮತದಾರರಿಗೆ ಆಯ್ಕೆ ಇರಲಿಲ್ಲ,” ಎಂದು ಅವರು ವಾದಿಸಿದರು.

ಮೇ 7ರಂದು ಮೂರನೆ ಹಂತದ ಮತದಾನ ನಡೆಯಲಿರುವ ಹದಿನೈದು ದಿನಗಳ ಮೊದಲು ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿ ಮುಖೇಶ್ ದಲಾಲ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಖೇರಾ ಅವರ ಅರ್ಜಿಯನ್ನು ಪರಿಶೀಲಿಸಲು ಸಮ್ಮತಿಸಿದ ಪೀಠ, ಇಸಿಐಗೆ ನೋಟಿಸ್ ಜಾರಿ ಮಾಡಿದೆ.

ನೋಟಾ ಮತ ತಟಸ್ಥವಾದುದು. ಯಾವುದೇ ಸಂಖ್ಯಾ ಮೌಲ್ಯವನ್ನು ಹೊಂದಿಲ್ಲ. ನೋಟಾ ಆಯ್ಕೆಯ ಶೂನ್ಯ ಸಂಖ್ಯಾತ್ಮಕ ಮೌಲ್ಯದ ಹೊರತಾಗಿಯೂ, 2013ರ ಸುಪ್ರೀಂ ಕೋರ್ಟ್ ತೀರ್ಪು “ಇದು ರಾಜಕೀಯ ಪಕ್ಷಗಳನ್ನು ಸಮರ್ಥ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡಲು ಒತ್ತಾಯಿಸುತ್ತದೆ” ಎಂದು ಹೇಳಿದೆ. 2013ರ ತೀರ್ಪು ಹೇಳುವಂತೆ, “ನೋಟಾ ಮತದಾನವು ಚುನಾವಣೆಯಲ್ಲಿ ವ್ಯವಸ್ಥಿತ ಬದಲಾವಣೆಗೆ ಕಾರಣವಾಗುತ್ತದೆ ಮತ್ತು ರಾಜಕೀಯ ಪಕ್ಷಗಳು ಶುದ್ಧ ಅಭ್ಯರ್ಥಿಗಳನ್ನು ಹಾಕಲು ಒತ್ತಾಯಿಸುತ್ತದೆ. ಮತದಾನದ ಹಕ್ಕು ಶಾಸನಬದ್ಧ ಹಕ್ಕಾಗಿದ್ದರೆ, ಅಭ್ಯರ್ಥಿಯನ್ನು ತಿರಸ್ಕರಿಸುವ ಹಕ್ಕು ಸಂವಿಧಾನದ ಅಡಿಯಲ್ಲಿ ಭಾಷಣ ಮತ್ತು ಅಭಿವ್ಯಕ್ತಿಯ ಮೂಲಭೂತ ಹಕ್ಕು,” ಎಂದಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ನೋಟಾ 6,50,000ಕ್ಕಿಂತ ಹೆಚ್ಚು ಮತಗಳನ್ನು ಪಡೆದಿದೆ. ಇದು ಒಟ್ಟು ಮತದ 1.06%. 17ನೇ ಲೋಕಸಭೆಗೆ ಸ್ಪರ್ಧಿಸಿದ 36 ಪಕ್ಷಗಳ ಪೈಕಿ ಹದಿನೈದು ರಾಜಕೀಯ ಪಕ್ಷಗಳು ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆದಿವೆ. ಈ ಪಕ್ಷಗಳು ಬೆರಳೆಣಿಕೆಯಷ್ಟು ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿವೆ.

2021ರಲ್ಲಿ, ಸುಪ್ರೀಂ ಕೋರ್ಟ್ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರ ಇದೇ ರೀತಿಯ ಅರ್ಜಿಯನ್ನು ಒಪ್ಪಿಕೊಂಡಿತ್ತು. “ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕನ್ನು ಸಬಲೀಕರಣಗೊಳಿಸಲು” ಮತ್ತು “ರಾಜಕೀಯ ಪಕ್ಷಗಳು ಹೆಚ್ಚು ಉತ್ತಮ ಆಯ್ಕೆಯನ್ನು ನೀಡಲು ಪ್ರೋತ್ಸಾಹಿಸಲು” ಕೋರಿತು. ಉಪಾಧ್ಯಾಯ ಅವರ ಅರ್ಜಿಯು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.

ಇದನ್ನೂ ಓದಿ: Election Commission: ಥೀಮ್‌ ಸಾಂಗ್‌ನಲ್ಲಿ ‘ಜೈ ಭವಾನಿ’ ಪದ ಬಳಕೆ; ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣಕ್ಕೆ ನೋಟಿಸ್‌

Continue Reading

ಕೋರ್ಟ್

Chemistry paper leak : ದ್ವಿತೀಯ ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; 17 ಆರೋಪಿಗಳು ಖುಲಾಸೆ

Chemistry paper leak: ಭಾರಿ ಚರ್ಚೆಗೆ ಗ್ರಾಸವಾಗಿ ರಾಜ್ಯದ ಗಮನ ಸೆಳೆದಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಆರೋಪಿಗಗಳನ್ನು ಖುಲಾಸೆಗೊಳಿಸಿ ಕೋರ್ಟ್‌ ಆದೇಶ ಹೊರಡಿಸಿದೆ.

VISTARANEWS.COM


on

By

Chemistry paper leak case
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: 2015-16ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ (Chemistry paper leak) ಪ್ರಕರಣದ 17 ಆರೋಪಿಗಳನ್ನು ಖುಲಾಸೆಗೊಳಿಸಿ ಕೋರ್ಟ್ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

2016ರ ಮಾ.21ರಂದು ನಡೆದಿದ್ದ ದ್ವಿತೀಯ ಪಿಯು ರಸಾಯನಶಾಸ್ತ್ರದ ಪ್ರಶ್ನೆಪತ್ರಿಕೆಯು ಅದೇ ದಿನ ದಿನ ಬೆಳಗ್ಗೆ 7.30ಕ್ಕೆ ಸೋರಿಕೆಯಾಗಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿತ್ತು. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿರೋಧ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳ ಒತ್ತಾಯಕ್ಕೆ ಮಣಿದು ಆಗೀನ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು.

ಬಳಿಕ ತನಿಖೆ ನಡೆಸಿದ್ದ ಸಿಐಡಿ‌ ಅಧಿಕಾರಿಗಳು 18 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ವೇಳೆ ವಿಚಾರಣಾ ಹಂತದಲ್ಲಿಯೇ ಓರ್ವ ಆರೋಪಿ ಸಾವನ್ನಪ್ಪಿದರು. ಉಳಿದ ಆರೋಪಿಗಳನ್ನು ನ್ಯಾಯಾಲಯವು ಇಂದು ಗುರುವಾರ (ಏ.25) ಖುಲಾಸೆಗೊಳಿಸಿದೆ.

ಇನ್ನೂ ತನಿಖೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆಯು ಹಲವು ವರ್ಷಗಳಿಂದ ನಡೆಯುತ್ತಿತ್ತು. ಅದರಲ್ಲಿ ಹಲವು ಟ್ಯೂಟೋರಿಯಲ್‌ಗಳು ಹಾಗೂ ಶಿಕ್ಷಕರು ಭಾಗಿಯಾಗಿರುವ ಮಾಹಿತಿ ದೊರೆತಿತ್ತು. ಹೀಗಾಗಿ ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿರುವ ಸಿಐಡಿ, ಹಲವು ಅಧಿಕಾರಿಗಳು ಮತ್ತು ಶಿಕ್ಷಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಯನ್ನೂ ನಡೆಸಿದ್ದರು.

2016ರ ಮಾರ್ಚ್ 21ರಂದು ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ನಂತರ ಮಾರ್ಚ್ 31ರಂದು ಮರು ಪರೀಕ್ಷೆ ನಡೆಸಿದಾಗಲೂ ಎರಡು ಬಾರಿಯೂ ಪಿಯು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ನಂತರ ಈ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಸಿಐಡಿ ಡಿಐಜಿ ಸೋನಿಯಾ ನಾರಂಗ್ ನೇತೃತ್ವದಲ್ಲಿ ತನಿಖೆ ನಡೆದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

ವಿಸ್ತಾರ Explainer: Wealth redistribution: ನಿಮ್ಮ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳಬಹುದಾ? ಸುಪ್ರೀಂ ಕೋರ್ಟ್ ಮುಂದಿದೆ ಕೇಸ್‌

wealth redistribution: ಮೂರು ದಶಕಗಳಷ್ಟು ಹಳೆಯ ಪ್ರಕರಣವನ್ನು ಸುಪ್ರೀಂ ಕೋರ್ಟ್‌ (Supreme Court) ಪೀಠ ಮರಳಿ ಕೈಗೆತ್ತಿಕೊಂಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJI DY Chandrachud) ನೇತೃತ್ವದ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು (nine judges bench) ಇಂದಿನಿಂದ ಈ ಪ್ರಕರಣದ ವಿಚಾರಣೆ ನಡೆಸಲಿದೆ.

VISTARANEWS.COM


on

supreme court wealth redistribution
Koo

ಹೊಸದಿಲ್ಲಿ: “ಸಂಪತ್ತು ಮರುಹಂಚಿಕೆ” (Wealth redistribution) ಕುರಿತ ವಿವಾದ (controversy) ರಾಷ್ಟ್ರ ರಾಜಕೀಯದಲ್ಲಿ ಜೋರಾಗುತ್ತಿರುವಂತೆ, ವ್ಯಕ್ತಿಯ ಖಾಸಗಿ ಒಡೆತನದ (Private property) ಆಸ್ತಿಯನ್ನು “ಸಮುದಾಯದ ವಸ್ತು ಸಂಪನ್ಮೂಲ” (community property) ಎಂದು ಪರಿಗಣಿಸಬಹುದೇ ಎಂದು ನಿರ್ಧರಿಸಲು ಮೂರು ದಶಕಗಳಷ್ಟು ಹಳೆಯ ಪ್ರಕರಣವನ್ನು ಸುಪ್ರೀಂ ಕೋರ್ಟ್‌ (Supreme Court) ಪೀಠ ಮರಳಿ ಕೈಗೆತ್ತಿಕೊಂಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (CJI DY Chandrachud) ನೇತೃತ್ವದ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠವು (nine judges bench) ಇಂದಿನಿಂದ ಈ ಪ್ರಕರಣದ ವಿಚಾರಣೆ ನಡೆಸಲಿದೆ.

ವಿವಾದವೇನು?

ಬಿರುಸಿನ ಲೋಕಸಭೆ ಚುನಾವಣೆ (lok Sabha Election 2024) ಪ್ರಚಾರ ನಡೆಯುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇದ್ದ ಒಂದು ಉಲ್ಲೇಖವನ್ನು ಎತ್ತಿ ಆಡಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi), “ಸಂಪತ್ತು ಪುನರ್ ವಿತರಣಾ ಯೋಜನೆಯ ಭಾಗವಾಗಿ ಮನೆ, ಚಿನ್ನ, ವಾಹನ ಸೇರಿದಂತೆ ಖಾಸಗಿ ಆಸ್ತಿಯನ್ನು ಕಿತ್ತುಕೊಳ್ಳುವುದಾಗಿ ಕಾಂಗ್ರೆಸ್ (Congress) ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ” ಎಂದಿದ್ದರು. ಇದು ರಾಜಕೀಯ ಬಿರುಗಾಳಿ ಎಬ್ಬಿಸಿತ್ತು.

ಅಂತಹ ಯಾವುದೇ ಯೋಜನೆಯನ್ನು ಕಾಂಗ್ರೆಸ್ ನಿರಾಕರಿಸಿದೆ. ಪ್ರಧಾನಿ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ. ಕಾಂಗ್ರೆಸ್ ಆಯ್ಕೆಯಾದರೆ ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ನಡೆಸಲಿದೆ ಎಂದು ಅದರ ಪ್ರಣಾಳಿಕೆ ಹೇಳುತ್ತದೆ. “ಜಾತಿಗಳು ಮತ್ತು ಉಪ-ಜಾತಿಗಳು ಮತ್ತು ಅವರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಎಣಿಸಲು ಕಾಂಗ್ರೆಸ್ ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯನ್ನು ನಡೆಸುತ್ತದೆ. ದತ್ತಾಂಶದ ಆಧಾರದ ಮೇಲೆ, ನಾವು ಸಕಾರಾತ್ಮಕ ಕ್ರಮಕ್ಕಾಗಿ ಕಾರ್ಯಸೂಚಿಯನ್ನು ಬಲಪಡಿಸುತ್ತೇವೆ.” ಖಾಸಗಿ ಆಸ್ತಿ ಮರುಹಂಚಿಕೆ ಯೋಜನೆ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿಲ್ಲ.

Narendra Modi

ಕೋರ್ಟ್‌ ಮುಂದಿರುವ ಪ್ರಕರಣ ಮತ್ತು ಅದರ ಇತಿಹಾಸ

ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಾಧೀಶರ ಪೀಠದ ಮುಂದಿರುವ ಪ್ರಕರಣವು 1986ರ ಹಿಂದಿನದು. ಮಹಾರಾಷ್ಟ್ರ ಸರ್ಕಾರವು ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಕಾಯಿದೆ- 1976 (MHADA) ಇದನ್ನು ತಿದ್ದುಪಡಿ ಮಾಡಿತ್ತು. 70 ಪ್ರತಿಶತ ನಿವಾಸಿಗಳ ಒಪ್ಪಿಗೆಯಿದ್ದರೆ ಮರುಸ್ಥಾಪನೆ ಉದ್ದೇಶಗಳಿಗಾಗಿ ಕೆಲವು “ಸೆಸ್ಡ್ ಆಸ್ತಿಗಳನ್ನು” ಸ್ವಾಧೀನಪಡಿಸಿಕೊಳ್ಳಬಹುದು ಎಂಬ ಅಧಿಕಾರವನ್ನು ಇದು ಮುಂಬೈ ಕಟ್ಟಡ ದುರಸ್ತಿ ಮತ್ತು ಪುನರ್ನಿರ್ಮಾಣ ಮಂಡಳಿಗೆ ಹೊಂದಲು ಅವಕಾಶ ಮಾಡಿಕೊಟ್ಟಿತು. ತಿದ್ದುಪಡಿಯು ಸಂವಿಧಾನದ 39(ಬಿ) ವಿಧಿಯನ್ನು ಉಲ್ಲೇಖಿಸಿದೆ. ಅದು “ಸಮುದಾಯದ ವಸ್ತು ಸಂಪನ್ಮೂಲಗಳ ಮಾಲೀಕತ್ವ ಮತ್ತು ನಿಯಂತ್ರಣವನ್ನು ಸಾಮಾನ್ಯ ಒಳಿತಿಗಾಗಿ ಉತ್ತಮ ರೀತಿಯಲ್ಲಿ ವಿತರಿಸಲಾಗುವುದು” ಎಂದು ಹೇಳುತ್ತದೆ.

ಮುಂಬೈನಲ್ಲಿರುವ 20,000ಕ್ಕೂ ಹೆಚ್ಚು ಭೂಮಾಲೀಕರನ್ನು ಪ್ರತಿನಿಧಿಸುವ ಆಸ್ತಿ ಮಾಲೀಕರ ಸಂಘ (POA) ಈ ತಿದ್ದುಪಡಿಯನ್ನು ಪ್ರಶ್ನಿಸಿದೆ ಮತ್ತು ವಸತಿ ಸಂಕೀರ್ಣಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮಂಡಳಿಗೆ ಇದು ಅನಿಯಂತ್ರಿತ ಅಧಿಕಾರವನ್ನು ನೀಡಿದೆ ಎಂದು ವಾದಿಸಿದೆ. ಡಿಸೆಂಬರ್ 1991ರಲ್ಲಿ, ಬಾಂಬೆ ಉಚ್ಚ ನ್ಯಾಯಾಲಯವು, “ಸಾಮಾನ್ಯ ಜನರಿಗೆ ಆಶ್ರಯ ನೀಡುವುದು ಸರ್ಕಾರವು ಕರ್ತವ್ಯವಾಗಿದೆ” ಎಂಬ ಕಾರಣಕ್ಕಾಗಿ ಅರ್ಜಿಗಳನ್ನು ರದ್ದುಗೊಳಿಸಿತು.

ಪಿಒಎ ಮತ್ತು ಇತರ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಅವರ ಅರ್ಜಿಯನ್ನು ಇನ್ನೆರಡು ಪ್ರಕರಣಗಳಿಗೆ ಜೋಡಿಸಲಾಗಿದೆ. ಅವು ಶಿವರಾಮ ರಾಮಯ್ಯ ಯೆರಾಳ ವರ್ಸಸ್‌ ಮಹಾರಾಷ್ಟ್ರ ಸರ್ಕಾರ ಪ್ರಕರಣ ಹಾಗೂ ಬಾಂಬೆಯ ಪ್ರಮೀಳಾ ಚಿಂತಾಮಣಿ ಮೋಹನ್‌ದಾಸ್ ವರ್ಸಸ್‌ ಮಹಾರಾಷ್ಟ್ರ ರಾಜ್ಯ ಸರ್ಕಾರ. ಇವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಅತ್ಯಂತ ಹಳೆಯ ಪ್ರಕರಣಗಳಾಗಿವೆ. ಸುಪ್ರೀಂ ಕೋರ್ಟ್ ಪೀಠವು ಇವನ್ನು ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು. ಅದು ಇವನ್ನು ಏಳು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿತು. 2002ರಲ್ಲಿ, ಆಗಿನ ಮುಖ್ಯ ನ್ಯಾಯಮೂರ್ತಿ ಎಸ್‌ಪಿ ಭರೂಚಾ ನೇತೃತ್ವದ ಏಳು ನ್ಯಾಯಾಧೀಶರ ಪೀಠವು ಈ ವಿಷಯವನ್ನು ಒಂಬತ್ತು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿತು.

2019ರಲ್ಲಿ, ಮತ್ತೊಂದು ಪ್ರಮುಖ ಬೆಳವಣಿಗೆ ನಡೆಯಿತು. ಮಹಾರಾಷ್ಟ್ರ ಸರ್ಕಾರ ಮತ್ತೆ ಕಾನೂನನ್ನು ತಿದ್ದುಪಡಿ ಮಾಡಿತು. ಹೊಸ ತಿದ್ದುಪಡಿಯ ಪ್ರಕಾರ, ಗಡುವಿನೊಳಗೆ ಆಸ್ತಿ ಮರುಸ್ಥಾಪಿಸಲು ಭೂಮಾಲೀಕರು ವಿಫಲವಾದರೆ, ರಾಜ್ಯ ಸರ್ಕಾರವು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬಹುದಿತ್ತು. ಇದು ಕಲ್ಯಾಣ ಶಾಸನ ಎಂದು ರಾಜ್ಯ ಸರ್ಕಾರ ಒತ್ತಿಹೇಳಿತು. ಆದರೆ ಆಸ್ತಿಯನ್ನು ಕಡಿಮೆ ಬೆಲೆಗೆ ಕಿತ್ತುಕೊಂಡು ಗುತ್ತಿಗೆದಾರರಿಗೆ ಹಸ್ತಾಂತರಿಸುವ ಯೋಜನೆ ಇದು ಎಂದು ಭೂಮಾಲೀಕರು ಆರೋಪಿಸಿದರು.

ಕಳೆದ ವರ್ಷ, ವಿಚಾರಣೆಗೆ ಬಾಕಿ ಇರುವ ಒಂಬತ್ತು ನ್ಯಾಯಾಧೀಶರ ಪೀಠದ ಪ್ರಕರಣಗಳನ್ನು ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು. ಈ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ನಿನ್ನೆ ನಡೆಸಿತು. ನ್ಯಾಯಮೂರ್ತಿ ಹೃಷಿಕೇಶ್ ರಾಯ್, ನ್ಯಾಯಮೂರ್ತಿ ಬಿವಿ ನಾಗರತ್ನ, ನ್ಯಾಯಮೂರ್ತಿ ಸುಧಾಂಶು ಧುಲಿಯಾ, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ, ನ್ಯಾಯಮೂರ್ತಿ ಮನೋಜ್ ಮಿಶ್ರಾ, ನ್ಯಾಯಮೂರ್ತಿ ರಾಜೇಶ್ ಬಿಂದಾಲ್, ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರು ಪೀಠದಲ್ಲಿರುವ ಇತರ ಎಂಟು ನ್ಯಾಯಾಧೀಶರು. ಒಟ್ಟು 16 ಅರ್ಜಿಗಳು ನ್ಯಾಯಾಲಯದ ಮುಂದಿವೆ.

ನಿರ್ಣಾಯಕ ಪ್ರಶ್ನೆ

ನ್ಯಾಯಾಲಯದ ಮುಂದಿರುವ ಪ್ರಮುಖ ಸಮಸ್ಯೆಯು ಸಂವಿಧಾನದಲ್ಲಿನ ಎರಡು ನಿಬಂಧನೆಗಳಿಗೆ ಸಂಬಂಧಿಸಿದೆ- ಆರ್ಟಿಕಲ್ 31 ಸಿ ಮತ್ತು ಆರ್ಟಿಕಲ್ 39 (ಬಿ). ಇವುಗಳು ರಾಜ್ಯ ನೀತಿಯ ಡೈರೆಕ್ಟಿವ್ ಪ್ರಿನ್ಸಿಪಲ್ಸ್‌ಗೆ ಸಂಬಂಧಿಸಿವೆ. ಈ ತತ್ವಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುವುದಿಲ್ಲ. ಆದರೆ ದೇಶದ ಆಡಳಿತಕ್ಕೆ ಇವು ಮೂಲಭೂತವಾಗಿವೆ. ಕಾನೂನುಗಳನ್ನು ರಚಿಸುವಾಗ ಈ ತತ್ವಗಳನ್ನು ಅನ್ವಯಿಸುವುದು ರಾಜ್ಯದ ಕರ್ತವ್ಯ ಎಂದು ಸಂವಿಧಾನ ಹೇಳುತ್ತದೆ.

ಆರ್ಟಿಕಲ್ 39(ಬಿ) ಹೇಳುವಂತೆ, ಸಮುದಾಯದ ವಸ್ತು ಸಂಪನ್ಮೂಲಗಳ ಮಾಲೀಕತ್ವ ಮತ್ತು ನಿಯಂತ್ರಣವನ್ನು ಸಾಮಾನ್ಯ ಒಳಿತಿಗಾಗಿ ಉತ್ತಮ ರೀತಿಯಲ್ಲಿ ವಿತರಿಸಬಹುದು. ಆರ್ಟಿಕಲ್ 31(ಸಿ) ಕೆಲವು ನಿರ್ದೇಶನ ತತ್ವಗಳನ್ನು ಜಾರಿಗೆ ತರುವ ಕಾನೂನುಗಳನ್ನು ರಕ್ಷಿಸುತ್ತದೆ. ಇದರ ಅರ್ಥವೇನೆಂದರೆ, ನಿರ್ದೇಶನದ ತತ್ವಗಳ ಅಡಿಯಲ್ಲಿ ರಾಜ್ಯವು ಜಾರಿಗೊಳಿಸಿದ ಯಾವುದೇ ಕಾನೂನನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳೊಂದಿಗೆ ವ್ಯವಹರಿಸುವ ಸಂವಿಧಾನದ ಆರ್ಟಿಕಲ್ 14 ಮತ್ತು ಆರ್ಟಿಕಲ್ 19ನ್ನು ಮುಂದಿಟ್ಟುಕೊಂಡು ಕೂಡ ಪ್ರತಿಭಟಿಸಲು ಸಾಧ್ಯವಿಲ್ಲ.

supreme court CJI DY chandrachud

ನಿರ್ದೇಶನದ ತತ್ವಗಳಲ್ಲಿ ರಾಜ್ಯವು “ಆದಾಯದಲ್ಲಿನ ಅಸಮಾನತೆಗಳನ್ನು ಕಡಿಮೆ ಮಾಡಲು ಶ್ರಮಿಸಬೇಕು ಮತ್ತು ವ್ಯಕ್ತಿಗಳ ನಡುವೆ ಮಾತ್ರವಲ್ಲದೆ ವಿವಿಧ ಪ್ರದೇಶಗಳಲ್ಲಿ ವಾಸಿಸುವ ಅಥವಾ ವಿವಿಧ ಕೆಲಸಗಳಲ್ಲಿ ತೊಡಗಿರುವ ಜನರ ಗುಂಪುಗಳ ನಡುವೆಯೂ ಸಹ ಸ್ಥಾನಮಾನ, ಸೌಲಭ್ಯಗಳು ಮತ್ತು ಅವಕಾಶಗಳಲ್ಲಿನ ಅಸಮಾನತೆಗಳನ್ನು ತೊಡೆದುಹಾಕಲು ಪ್ರಯತ್ನಿಸಬೇಕು” ಎಂದು ಹೇಳುತ್ತದೆ.

ಹಾಗಾಗಿ ಖಾಸಗಿ ಆಸ್ತಿಯನ್ನು ʼಸಮುದಾಯದ ವಸ್ತು ಸಂಪನ್ಮೂಲಗಳು’ ಎಂದು ಪರಿಗಣಿಸಬಹುದೇ ಮತ್ತು ಸಾಮಾನ್ಯ ಒಳಿತಿಗಾಗಿ ರಾಜ್ಯವು ಸ್ವಾಧೀನಪಡಿಸಿಕೊಳ್ಳಬಹುದೇ ಎಂಬುದು ನ್ಯಾಯಾಲಯದ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ.

ಪ್ರಮುಖ ಅವಲೋಕನಗಳು

ನಿನ್ನೆ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳು ಕೆಲವು ಪ್ರಮುಖ ಅವಲೋಕನಗಳನ್ನು ಮಾಡಿದರು. “ನೀವು ಆಸ್ತಿಯ ಬಂಡವಾಳಶಾಹಿ ಪರಿಕಲ್ಪನೆಯನ್ನು ನೋಡಿದರೆ, ಅದು ಆಸ್ತಿಗೆ ಪ್ರತ್ಯೇಕತೆಯ ಭಾವನೆಯನ್ನು, ಇದು ಪ್ರತ್ಯೇಕವಾಗಿ ನನ್ನದು ಎಂಬ ಭಾವನೆಯನ್ನು ಆರೋಪಿಸುತ್ತದೆ. ಆಸ್ತಿಯ ಸಮಾಜವಾದಿ ಪರಿಕಲ್ಪನೆಯು ಕನ್ನಡಿ ಪ್ರತಿಬಿಂಬವಾಗಿದೆ. ಇದು ಆಸ್ತಿಗೆ ಸಾಮಾನ್ಯತೆಯ ಕಲ್ಪನೆಯನ್ನು ಸೂಚಿಸುತ್ತದೆ. ಯಾವುದೂ ವ್ಯಕ್ತಿಗೆ ಪ್ರತ್ಯೇಕವಾಗಿಲ್ಲ. ಎಲ್ಲಾ ಆಸ್ತಿಯೂ ಸಮುದಾಯಕ್ಕೆ ಸಾಮಾನ್ಯವಾಗಿದೆ. ಇದು ತೀವ್ರ ಸಮಾಜವಾದಿ ದೃಷ್ಟಿಕೋನ” ಎಂದು ಹೇಳಿದರು.

“ಭಾರತದ ರಾಜ್ಯ ನೀತಿಯ ನಿರ್ದೇಶನ ತತ್ವಗಳು ಗಾಂಧಿ ತತ್ವ ಮತ್ತು ಸಿದ್ಧಾಂತಕ್ಕೆ ಅನುಗುಣವಾಗಿವೆ. ಆ ತತ್ವಗಳೇನು? ನಮ್ಮ ನೀತಿಯು ನಂಬಿಕೆಯ ಆಸ್ತಿಯನ್ನು ಪರಿಗಣಿಸುತ್ತದೆ. ಖಾಸಗಿ ಆಸ್ತಿ ಇಲ್ಲ ಎಂಬುದಕ್ಕಾಗಿ ನಾವು ಸಮಾಜವಾದಿ ಮಾದರಿಯನ್ನು ಅಳವಡಿಸಿಕೊಳ್ಳಲು ಹೋಗಿಲ್ಲ. ಆದರೆ ಖಾಸಗಿ ಆಸ್ತಿ ಇದೆ” ಎಂದವರು ಗಮನಿಸಿದರು.

“ನಮ್ಮ ಆಸ್ತಿಯ ಪರಿಕಲ್ಪನೆಯು ತೀವ್ರ ಬಂಡವಾಳಶಾಹಿ ದೃಷ್ಟಿಕೋನದಿಂದ ಅಥವಾ ತೀವ್ರ ಸಮಾಜವಾದಿ ದೃಷ್ಟಿಕೋನದಿಂದ ಅತ್ಯಂತ ವಿಭಿನ್ನವಾದ, ಅತ್ಯಂತ ಸೂಕ್ಷ್ಮವಾದ ಬದಲಾವಣೆ ಹೊಂದಿದೆ. ನಾವು ಆಸ್ತಿಯನ್ನು ನಂಬುವ ವಿಷಯವೆಂದು ಪರಿಗಣಿಸುತ್ತೇವೆ. ನಾವು ಕುಟುಂಬದಲ್ಲಿ ಮುಂದಿನ ಪೀಳಿಗೆಗೆ ಆಸ್ತಿಯನ್ನು ನೀಡುವ ನಂಬಿಕೆಯನ್ನು ಇರಿಸಿದ್ದೇವೆ. ಆದರೆ ವಿಶಾಲವಾಗಿ ನಾವು ಆಸ್ತಿಯನ್ನು ವಿಶಾಲ ಸಮುದಾಯದ ವಿಶ್ವಾಸದಲ್ಲಿರಿಸುತ್ತೇವೆ. ಅದು ಸುಸ್ಥಿರ ಅಭಿವೃದ್ಧಿಯ ಸಂಪೂರ್ಣ ಪರಿಕಲ್ಪನೆಯಾಗಿದೆ. ಅದನ್ನೇ ನಾವು ಇಂಟರ್‌ಜೆನೆರೇಶನಲ್ ಇಕ್ವಿಟಿ ಎಂದು ಕರೆಯುತ್ತೇವೆ,” ಎಂದು ಅವರು ಹೇಳಿದರು.

“ಸಮುದಾಯದ ವಸ್ತು ಸಂಪನ್ಮೂಲಗಳು ಎಂದರೆ ಸಾರ್ವಜನಿಕ ಸಂಪನ್ಮೂಲಗಳು ಮತ್ತು ನಾವು ವ್ಯಕ್ತಿಯ ಖಾಸಗಿ ಆಸ್ತಿಯಲ್ಲಿ ಅದಿಲ್ಲ ಎಂದು ಸೂಚಿಸುವುದು ಸ್ವಲ್ಪ ವಿಪರೀತ. ಆ ದೃಷ್ಟಿಕೋನವನ್ನು ತೆಗೆದುಕೊಳ್ಳುವುದು ಏಕೆ ಅಪಾಯಕಾರಿ ಎಂದು ನಾನು ಹೇಳುತ್ತೇನೆ. ಗಣಿಗಳು ಮತ್ತು ಖಾಸಗಿ ಅರಣ್ಯಗಳಂತಹ ಸರಳ ವಿಷಯಗಳನ್ನು ತೆಗೆದುಕೊಳ್ಳಿ. ಉದಾಹರಣೆಗೆ, 39 (ಬಿ) ಅಡಿಯಲ್ಲಿ ಖಾಸಗಿ ಅರಣ್ಯಗಳಿಗೆ ಸರ್ಕಾರಿ ನೀತಿ ಅನ್ವಯಿಸುವುದಿಲ್ಲ ಎಂದು ನಾವು ಹೇಳುತ್ತೇವೆ. ಆದ್ದರಿಂದ ಪ್ರತಿಪಾದನೆಯಾಗಿ ಅತ್ಯಂತ ಅಪಾಯಕಾರಿ,” ಅವರು ಹೇಳಿದರು.

ಸಂವಿಧಾನ ರಚನೆಯಾದ 1950ರ ಪರಿಸ್ಥಿತಿಯನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿಗಳು, “ಸಂವಿಧಾನವು ಸಾಮಾಜಿಕ ಪರಿವರ್ತನೆಯನ್ನು ತರಲು ಉದ್ದೇಶಿಸಲಾಗಿತ್ತು. ಆಸ್ತಿಯನ್ನು ಖಾಸಗಿಯಾಗಿ ಹೊಂದಿರುವ ನಂತರ 39 (ಬಿ) ವಿಧಿಗೆ ಯಾವುದೇ ಅನ್ವಯವಿಲ್ಲ ಎಂದು ನಾವು ಹೇಳಲು ಸಾಧ್ಯವಿಲ್ಲ.” ಎಂದರು.

ಆದಾಗ್ಯೂ, ಮಹಾರಾಷ್ಟ್ರದ ಕಾನೂನು ಶಿಥಿಲಗೊಂಡ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡಿದೆಯೇ ಎಂಬುದು ವಿಭಿನ್ನ ವಿಷಯವಾಗಿದೆ ಮತ್ತು ಅದನ್ನು ಸ್ವತಂತ್ರವಾಗಿ ನಿರ್ಧರಿಸಲಾಗುತ್ತದೆ ಎಂದು ಅದು ಒತ್ತಿಹೇಳಿತು. ‘ಜಮೀಂದಾರಿ’ ಪದ್ಧತಿಯ ರದ್ದತಿಯನ್ನೂ ಮುಖ್ಯ ನ್ಯಾಯಮೂರ್ತಿ ಉಲ್ಲೇಖಿಸಿದರು. “ಸಂವಿಧಾನವು ಸಾಮಾಜಿಕ ಪರಿವರ್ತನೆಯನ್ನು ತರಲು ಉದ್ದೇಶಿಸಿರುವುದರಿಂದ ಸಂವಿಧಾನದಲ್ಲಿ 39 (ಬಿ) ವಿಧವನ್ನು ನಿರ್ದಿಷ್ಟ ರೀತಿಯಲ್ಲಿ ರಚಿಸಲಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ನಾವು ಖಾಸಗಿ ಆಸ್ತಿಯನ್ನು ಖಾಸಗಿ ಆಸ್ತಿ ಎಂದು ಹೇಳಿದಾಗ ಆರ್ಟಿಕಲ್ 39 (ಬಿ) ಯಾವುದೇ ಅನ್ವಯವನ್ನು ಹೊಂದಿರುವುದಿಲ್ಲ” ಎಂದು ಅವರು ಹೇಳಿದರು. ಇಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: Wealth Redistribution: ಸಂಪತ್ತು ಮರು ಹಂಚಿಕೆ ವಿವಾದದ ಬೆಂಕಿಗೆ ತುಪ್ಪ ಸುರಿದ ಸ್ಯಾಮ್ ಪಿತ್ರೊಡಾ; ಕಾಂಗ್ರೆಸ್‌ಗೆ ಫಜೀತಿ!

Continue Reading

ಪ್ರಮುಖ ಸುದ್ದಿ

‌Nada Geethe: ನಾಡಗೀತೆ ವಿವಾದ; ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ತಿರಸ್ಕಾರ ಮಾಡಿದ ಹೈಕೋರ್ಟ್

‌Nada Geethe: ದಿವಂಗತ ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿದ್ದ 2 ನಿಮಿಷ 30 ಸೆಕೆಂಡ್‌ಗಳ ಕಾಲದ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ರದ್ದು ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದರು.

VISTARANEWS.COM


on

Nada Gheethe
Koo

ಬೆಂಗಳೂರು: ನಾಡಗೀತೆ (‌Nada Geethe) ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಪುರಸ್ಕರಿಸಿದ್ದು, ಸರ್ಕಾರದ ಆದೇಶ ರದ್ದು ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕಾರ ಮಾಡಿದೆ.

ದಿವಂಗತ ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿದ್ದ 2 ನಿಮಿಷ 30 ಸೆಕೆಂಡ್‌ಗಳ ಕಾಲದ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ರದ್ದು ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿದ್ದರು. ಆದರೆ, ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಕಡ್ಡಾಯಗೊಳಿಸಲು ಸರ್ಕಾರಕ್ಕೆ ಶಿಕ್ಷಣ ಕಾಯ್ದೆಯಡಿ ಅಧಿಕಾರವಿದೆ ಎಂದು ಹೈಕೋರ್ಟ್ ಸ್ಪಷ್ಟನೆ ನೀಡುವ ಮೂಲಕ, ಕಿಕ್ಕೇರಿ ಕೃಷ್ಣಮೂರ್ತಿ ಅವರ ಅರ್ಜಿಯನ್ನು ತಿರಸ್ಕರಿಸಿದೆ.

ನಿರ್ದಿಷ್ಟ ರಾಗದಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿರುವುದರಿಂದ ಜನರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ. ಸರ್ಕಾರದ ಆದೇಶ ಪ್ರಶ್ನಿಸುವ ಯಾವುದೇ ಅಧಿಕಾರವನ್ನು ಅರ್ಜಿದಾರರು ಹೊಂದಿಲ್ಲ. ಅವರೇನೂ ಸರ್ಕಾರಿ ನೌಕರರಲ್ಲ ಅಥವಾ ಅವರ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದಾಗಲೀ ಇಲ್ಲ. ಹೀಗಾಗಿ, ಅವರ ಮೂಲಭೂತ ಹಕ್ಕು ಉಲ್ಲಂಘನೆ ಆಗಿದೆ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ನಿಮ್ಮ ಯಾವ ಹಕ್ಕುಗಳೂ ಉಲ್ಲಂಘನೆಯಾಗಿಲ್ಲ ಎಂಬುದನ್ನು ನೆನಪಿಡಿ. ಹೀಗಾಗಿ, ನಿಮ್ಮ ಅರ್ಜಿ ವಜಾ ಮಾಡಲಾಗುತ್ತಿದೆ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

ಇದನ್ನೂ ಓದಿ | Lok Sabha Election 2024: ಏ. 26ಕ್ಕೆ ವೋಟ್‌ ಹಾಕಿ ಈ ಹೋಟೆಲ್‌ಗಳಿಗೆ ಬನ್ನಿ; ಏನೇ ತಿಂದ್ರೂ 10 ಪರ್ಸೆಂಟ್‌ ಡಿಸ್ಕೌಂಟ್‌!

ಅರ್ಜಿದಾರರ ವಾದವೇನು?

ನಾಡಗೀತೆಯನ್ನು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು’ ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್ 25ರಂದು ಹೊರಡಿಸಿದ ಆದೇಶವನ್ನು ಅರ್ಜಿದಾರ ಕಿಕ್ಕೇರಿ ಕೃಷ್ಣಮೂರ್ತಿ ಅವರು ಪ್ರಶ್ನಿಸಿದ್ದರು. ಅನಂತಸ್ವಾಮಿ ಅವರು ನಾಡಗೀತೆಯ ಕೇವಲ ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜಿಸಿದ್ದಾರೆ. ಗಾಯಕ ಮತ್ತು ಸಂಗೀತ ಸಂಯೋಜಕ ಸಿ.ಅಶ್ವತ್ ಅವರು ನಾಡಗೀತೆಯ ಎಲ್ಲಾ ಚರಣಗಳಿಗೆ ರಾಗ ಸಂಯೋಜಿಸಿದ್ದಾರೆ. ಹಾಗಾಗಿ, ಸರ್ಕಾರದ ಆದೇಶ ರದ್ದುಪಡಿಸಬೇಕು ಮತ್ತು ಸಿ.ಅಶ್ವತ್ ಅವರ ರಾಗ ಸಂಯೋಜಿಸಿದ ಧಾಟಿಯಲ್ಲೇ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದರು. ಆದರೆ, ಇದೀಗ ಈ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ.

Continue Reading
Advertisement
Paris Olympics
ಕ್ರೀಡೆ17 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತದ 7 ಶಟ್ಲರ್​ಗಳು; ಕನ್ನಡತಿ ಅಶ್ವಿನಿ ಪೊನ್ನಪ್ಪಗೂ ಅವಕಾಶ

ವಿದೇಶ28 mins ago

Pakistan: “ಭಾರತ ಸೂಪರ್‌ ಪವರ್‌ಪುಲ್‌ ರಾಷ್ಟ್ರ..ಪಾಕಿಸ್ತಾನ ಮಾತ್ರ ಭಿಕ್ಷೆ ಬೇಡ್ತಿದೆ”; ಹೀಗಂದಿದ್ದು ಯಾರು ಗೊತ್ತಾ?

IPL 2024
ಕ್ರೀಡೆ54 mins ago

IPL 2024: ಸೌರವ್ ಗಂಗೂಲಿಯ ಐಪಿಎಲ್​ ದಾಖಲೆ ಮುರಿದ ಫಿಲ್​ ಸಾಲ್ಟ್​

Hassan Pen Drive Case
ಪ್ರಮುಖ ಸುದ್ದಿ55 mins ago

Hassan Pen Drive Case: ಎಸ್‌ಐಟಿಗೆ 18 ಸಿಬ್ಬಂದಿ ನೇಮಕ; ಅಶ್ಲೀಲ ವಿಡಿಯೋದಲ್ಲಿ ಇರುವವರು ಯಾರು?

T20 World Cup 2024
ಕ್ರೀಡೆ1 hour ago

T20 World Cup 2024: ಇಂದು ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಸಂಭಾವ್ಯ ತಂಡ ಹೀಗಿದೆ

Manipur Violence
ದೇಶ1 hour ago

Manipur Violence:ಮಹಿಳೆಯರ ವಿವಸ್ತ್ರ ಕೇಸ್‌; ಪೊಲೀಸರೆದುರೇ ನಡೆದಿತ್ತು ನೀಚ ಕೃತ್ಯ

taliban writing muniraju
ಕ್ರೈಂ2 hours ago

Taliban Writing: ಗೋಡೆ ಮೇಲೆ ತಾಲಿಬಾನ್‌ ಬರಹ ಬರೆದ ಪೇದೆ ಮುನಿರಾಜು ಈಗ ಮುಸ್ಲಿಂ ಅಂತೆ!

IPL 2024 Points Table
ಕ್ರೀಡೆ2 hours ago

IPL 2024 Points Table: ಡೆಲ್ಲಿ ಕ್ಯಾಪಿಟಲ್ಸ್​ ಸೋಲಿನ ಬಳಿಕ ಹೀಗಿದೆ ಅಂಕಪಟ್ಟಿ

Rohit Sharma Birthday
ಕ್ರೀಡೆ2 hours ago

Rohit Sharma Birthday: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

road accident anekal
ಬೆಂಗಳೂರು ಗ್ರಾಮಾಂತರ2 hours ago

Road Accident: ಪಂಚರ್‌ ಹಾಕುತ್ತಿದ್ದ ಲಾರಿ ಚಾಲಕ ಬೈಕ್‌ ಡಿಕ್ಕಿಯಾಗಿ ಸಾವು, ಹಿಟ್‌ ಆ್ಯಂಡ್‌ ರನ್‌ನಲ್ಲಿ ಯುವಕ ಮೃತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ6 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 202422 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202423 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌