ಉಕ್ರೇನ್ ರಾಜಧಾನಿ ಕೀವ್​ಗೆ ರಷ್ಯಾ ದಿಗ್ಬಂಧನ- Russia Ukraine War highlights - Vistara News

ರಷ್ಯಾ-ಉಕ್ರೇನ್‌ ಕದನ

ಉಕ್ರೇನ್ ರಾಜಧಾನಿ ಕೀವ್​ಗೆ ರಷ್ಯಾ ದಿಗ್ಬಂಧನ- Russia Ukraine War highlights

ಉಕ್ರೇನ್‌ ವಿರುದ್ಧ ಅಣುಬಾಂಬ್‌ ಬಳಸುವ ಕೆಲ ಮುನ್ಸೂಚನೆಗಳನ್ನೂ ರಷ್ಯಾ ನೀಡಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವಂತೆ ಭಾರತ ಸರ್ಕಾರವು ಸಲಹೆ ನೀಡಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿದಿದೆ. ಉಕ್ರೇನ್‌ ಪ್ರತಿರೋಧ ಹೆಚ್ಚಾದ ನಡುವೆಯೂ ಅಣುಬಾಂಬ್‌ ಬಳಸುವ ಕೆಲ ಮುನ್ಸೂಚನೆಗಳನ್ನೂ ರಷ್ಯಾ ನೀಡಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವಂತೆ ಭಾರತ ಸರ್ಕಾರವು ಸಲಹೆ ನೀಡಿದೆ. ರಾಜತಾಂತ್ರಿಕ ಚರ್ಚೆಯೇ ಇದಕ್ಕೆ ಪರಿಹಾರ ಎಂದು ವಿಶ್ವಸಂಸ್ಥೆಯಲ್ಲಿರುವ ಭಾರತದ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಉಕ್ರೇನ್​ನಲ್ಲಿ ಸಿಲುಕಿದ್ದ 182 ಭಾರತೀಯರ ಏರ್​ಲಿಫ್ಟ್

‘ಆಪರೇಷನ್ ಗಂಗಾ’ 7ನೇ ವಿಮಾನ ಮುಂಬೈಗೆ ಆಗಮನ

ದೆಹಲಿಯಿಂದ ಬೆಂಗಳೂರಿನತ್ತ 7 ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿದ್ದ 7 ವಿದ್ಯಾರ್ಥಿಗಳು ತಾಯ್ನಾಡಿನತ್ತ ಮರಳಿದ್ದಾರೆ. ನಿನ್ನೆ ದೆಹಲಿಗೆ ಬಂದಿದ್ದ ವಿದ್ಯಾರ್ಥಿಗಳು ಬೆಂಗಳೂರಿನತ್ತ ಹೊರಟಿದ್ದು ಬೆಳಗ್ಗೆ 10.45ಕ್ಕೆ ಬೆಂಗಳೂರು ತಲುಪಲಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿದ್ದ 182 ಭಾರತೀಯರ ಏರ್‌ಲಿಫ್ಟ್ ಮಾಡಲಾಗಿದೆ. ‘ಆಪರೇಷನ್ ಗಂಗಾ’ 7ನೇ ವಿಮಾನ ಮುಂಬೈಗೆ ಆಗಮಿಸಿದೆ. ರೊಮೇನಿಯಾದ ಬುಕಾರೆಸ್ಟ್‌ನಿಂದ ಮುಂಬೈಗೆ ಆಗಮನ ಆಗಿದೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಭಾರತೀಯರಿಗೆ ಸ್ವಾಗತ ಕೋರಲಾಗಿದೆ. ಕೇಂದ್ರ ಸಚಿವ ನಾರಾಯಣ್ ರಾಣೆಯಿಂದ ಸ್ವಾಗತ ಕೋರಲಾಗಿದೆ.

ಉಕ್ರೇನ್‌ನಲ್ಲಿ ಹಿಂಸಾಚಾರ ನಿಲ್ಲಿಸಲು ಪುಟಿನ್‌ಗೆ ಮೋದಿ ಆಗ್ರಹ

ಕೈದಿಗಳಿಗೆ ಶಸ್ತ್ರ ಕೊಡುತ್ತಿರುವ ಉಕ್ರೇನ್: ರಷ್ಯಾ ವಿರೋಧ

ರಷ್ಯಾ ಸೇನೆಯ ವಿರುದ್ಧದ ಹೋರಾಟಕ್ಕೆ ತನ್ನೆಲ್ಲಾ ಸಂಪನ್ಮೂಲಗಳನ್ನು ಕ್ರೋಡೀಕರಿಸಿರುವ ಉಕ್ರೇನ್ ಇದೀಗ ಕೈದಿಗಳಿಗೂ ಶಸ್ತ್ರಾಸ್ತ್ರ ಕೊಟ್ಟು ಹೋರಾಡುವಂತೆ ಪ್ರೇರೇಪಿಸುತ್ತಿದೆ. ಉಕ್ರೇನ್​ನ ಈ ನಿರ್ಧಾರವನ್ನು ರಷ್ಯಾ ತೀವ್ರವಾಗಿ ವಿರೋಧಿಸಿದೆ. ಕೈದಿಗಳಿಗೆ ಶಸ್ತ್ರಾಸ್ತ್ರ ನೀಡಿದರೆ ದೊಡ್ಡಮಟ್ಟದಲ್ಲಿ ದರೋಡೆ, ಕೊಲೆಗಳಾಗುತ್ತವೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ಆತಂಕ ವ್ಯಕ್ತಪಡಿಸಿತು.

  • ಇಂಗ್ಲೆಂಡ್​ನಿಂದ ಹಣಕಾಸು ನೆರವುರಷ್ಯಾ ದಾಳಿಗೆ ನಲುಗಿರುವ ಉಕ್ರೇನ್​ಗೆ ಇಂಗ್ಲೆಂಡ್ ಹಣಕಾಸಿನ ನೆರವು ಘೋಷಿಸಿದೆ. ಉಕ್ರೇನ್‌ಗೆ 54 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ. ಯುದ್ಧದಿಂದ ಆಗಿರುವ ಹಾನಿ ಮತ್ತು ದೇಶದ ಅಭಿವೃದ್ಧಿಗಾಗಿ 500 ಮಿಲಿಯನ್ ಡಾಲರ್ ಸಾಲ ನೀಡುವುದಾಗಿಯೂ ಇಂಗ್ಲೆಂಡ್ ಭರವಸೆ ನೀಡಿದೆ.
  • 01 Mar 2022 07:53 AM (IST)ಭಾರತದಿಂದ ಉಕ್ರೇನ್​ಗೆ ನೆರವುಯುದ್ಧಪೀಡಿತ ಉಕ್ರೇನ್​ಗೆ ಔಷಧ ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಭಾರತ ಸರ್ಕಾರವು ಮುಂದಾಗಿದೆ. ಮಾನವೀಯತೆಯ ದೃಷ್ಟಿಯಿಂದ ಭಾರತವು ನೆರವು ಒದಗಿಸುತ್ತಿದ್ದು, ನಾಳೆಯೇ ಈ ವಸ್ತುಗಳನ್ನು ರವಾನಿಸಲಾಗುವುದು ಎಂದು ಕೇಂದ್ರ ಸರ್ಕಾರವು ಹೇಳಿದೆ.
  • ನೋ-ಫ್ಲೈ ಜೋನ್ ಬೇಕು ಎಂದ ಉಕ್ರೇನ್ ಅಧ್ಯಕ್ಷಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ನೋ-ಫ್ಲೈ ಜೋನ್‌ ರೂಪಿಸಬೇಕೆಂದು ಉಕ್ರೇನ್ ಅಧ್ಯಕ್ಷ ವೊಲೊದ್ಮಿರ್ ಝೆಲೆನ್ಸ್​ಕಿ ಕರೆ ನೀಡಿದ್ದಾರೆ. ಈ ಮೂಲಕ ಬಾಂಬ್ ದಾಳಿಗೆ ಕಡಿವಾಣ ಹಾಕಬೇಕು ಎಂದು ವಿನಂತಿಸಿದ್ದಾರೆ. ಆದರೆ ಅಮೆರಿಕ ವಿನಂತಿಯನ್ನು ತಳ್ಳಿ ಹಾಕಿದೆ.
  • 01 Mar 2022 07:46 AM (IST)ಉಕ್ರೇನ್​ನಿಂದ 5.20 ಲಕ್ಷ ಜನರ ವಲಸೆರಷ್ಯಾ ಸೇನೆಯ ದಾಳಿಯ ನಂತರ ಉಕ್ರೇನ್‌ನಿಂದ ಸುಮಾರು 5.20 ಲಕ್ಷ ಜನರು  ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಂಡು ವಲಸೆ ಹೋಗಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
  • ಉಕ್ರೇನ್ ನೆರವಿಗೆ ಬಂದ ಫಿನ್​ಲ್ಯಾಂಡ್ರಷ್ಯಾ ದಾಳಿಯಿಂದ ಜರ್ಝರಿತವಾಗಿರುವ ಉಕ್ರೇನ್​ಗೆ ಅಗತ್ಯ ನೆರವು ನೀಡುವುದಾಗಿ ಫಿನ್‌ಲ್ಯಾಂಡ್‌ ದೇಶವು ಭರವಸೆ ನೀಡಿದೆ. ಅಗತ್ಯ ಶಸ್ತ್ರಾಸ್ತ್ರ ಒದಗಿಸುವುದಾಗಿ ಫಿನ್‌ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಘೋಷಿಸಿದ್ದಾರೆ.
  • 01 Mar 2022 06:58 AM (IST)ರಷ್ಯಾದಲ್ಲಿ ಅಮೆರಿಕನ್ನರ ಪರದಾಟರಷ್ಯಾ ವಿರುದ್ಧ ವಿಶ್ವದ ಹಲವು ದೇಶಗಳು ಆರ್ಥಿಕ ದಿಗ್ಬಂಧನ ವಿಧಿಸಿವೆ. ರಷ್ಯಾ ಬ್ಯಾಂಕುಗಳಿಗೆ ನಿರ್ಬಂಧ ಇರುವ ಕಾರಣ ರಷ್ಯಾದಲ್ಲಿರುವ ಅಮೆರಿಕನ್ನರು ಹಣ ಹಿಂಪಡೆಯಲು ಸಾಧ್ಯವಾಗದೆ ಪರದಾಡುವಂತಾಗಿದೆ. ಬ್ಯಾಂಕ್ ಕಾರ್ಡ್‌ಗಳು ಕೆಲಸ ಮಾಡುತ್ತಿಲ್ಲ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಷ್ಯಾ-ಉಕ್ರೇನ್‌ ಕದನ

Russia-Ukraine War: ಯುದ್ಧ ಭೂಮಿಯಿಂದ ಪಾರಾಗಲು 10 ಕಿ.ಮೀ ನಡೆದ 98 ವರ್ಷದ ವೃದ್ಧೆ!

Russia-Ukraine War: ಹೆಚ್ಚು ಕಾಲ ಬದುಕುಳಿಯಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಯುದ್ಧ ವಾತಾವರಣದಲ್ಲಿ ಉಕ್ರೇನ್ ನ 98 ವರ್ಷದ ಮಹಿಳೆಯೊಬ್ಬರು ಸುಮಾರು 10 ಕಿ.ಮೀ ದೂರ ನಡೆದು ಬಂದಿದ್ದು ಸುರಕ್ಷಿತ ತಾಣ ತಲುಪಿದ್ದಾಳೆ.

VISTARANEWS.COM


on

By

Russia-Ukraine War
Koo

ಬದುಕಬೇಕು ಎನ್ನುವ ಛಲ ಇದ್ದರೆ ಎಂತಹ ಕಠಿಣ ಪರಿಸ್ಥಿತಿಯಾದರೂ ಸರಿ ನಾವು ಹೋರಾಡುತ್ತೇವೆ. ಇದಕ್ಕೆ ಒಂದು ಉತ್ತಮ ನಿದರ್ಶನ 98 ವರ್ಷ ವಯಸ್ಸಿನ ಉಕ್ರೇನಿಯನ್ ವೃದ್ಧೆ (Ukrainian woman). ಲಿಡಿಯಾ ಸ್ಟೆಪನಿವ್ನಾ ಎನ್ನುವ ವೃದ್ಧ ವೃದ್ಧೆ ರಷ್ಯಾ- ಉಕ್ರೇನ್ ಯುದ್ಧದ (Russia-Ukraine War) ಪರಿಸ್ಥಿತಿಯಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸುಮಾರು 10 ಕಿ.ಮೀ. ದೂರ ನಡೆದುಕೊಂಡೇ ಹೋಗಿ ಬಚಾವಾಗಿದ್ದಾರೆ.

ರಷ್ಯಾ ಆಕ್ರಮಿಸಿಕೊಂಡಿರುವ ಡೊನೆಟ್ಸ್ಕ್ ನಲ್ಲಿರುವ ( Donetsk) ಓಚೆರೆಟೈನ್ (Ocheretyne) ಅನ್ನು ತೊರೆದು ಕೀವ್​​ (Kyiv) ನಿಯಂತ್ರಿಸುವ ಪ್ರದೇಶಗಳನ್ನು ತಲುಪಲು ಲಿಡಿಯಾ ಸ್ಟೆಪನಿವ್ನಾ ಸುಮಾರು 6 ಮೈಲು ದೂರ ನಡೆದಿದ್ದಾರೆ. ಈ ಕುರಿತು ಸೋಮವಾರ ಉಕ್ರೇನ್‌ನ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನಗೆದ್ದಿರುವ ಈ ವಿಡಿಯೋದಲ್ಲಿ ಲಿಡಿಯಾ ಸ್ಟೆಪನಿವ್ನಾ, ತಾನು ಆಹಾರ ಅಥವಾ ನೀರಿಲ್ಲದೆ ನಡೆದುಕೊಂಡು ಬಂದಿದ್ದೇನೆ. ಹಲವಾರು ಬಾರಿ ಬಿದ್ದಿದ್ದೇನೆ. ಆದರೆ ನೀರಿಕ್ಷೆ ಕಳೆದುಕೊಳ್ಳಲಿಲ್ಲ. ಎದ್ದು ಮನ್ನಡೆದು ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: America Shootout: ಅಮೆರಿಕದಲ್ಲಿ ಮತ್ತೆ ಶೂಟೌಟ್‌; 4 ಪೊಲೀಸರು ಬಲಿ

ಮೂರನೇ ಯುದ್ದದಿಂದಲೂ ಬದುಕಿದೆ

ಎರಡನೇ ಮಹಾಯುದ್ದದಿಂದ ನಾನು ಬದುಕುಳಿದಿದ್ದೇನೆ. ಈಗ ಮತ್ತೆ ರಷ್ಯಾ- ಉಕ್ರೇನ್ ಯುದ್ಧದಿಂದಲೂ ಬದುಕುಳಿದಿದ್ದೇನೆ ಎಂದು ಸ್ಟೆಪನಿವ್ನಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ನಾನಿದ್ದ ಜಾಗಕ್ಕೆ ಶೆಲ್ ದಾಳಿಯಾದಾಗ ಕೋಲುಗಳ ಸಹಾಯದಿಂದ ನೆಲದ ಮೇಲೆ ಮಲಗಿದೆ. ಬಳಿಕ ಹಾಸಿಗೆಯ ಮೇಲೆ ಕುಳಿತು ಕೋಟ್ ಹಾಕಿಕೊಂಡೆ. ತಲೆಗೆ ಸ್ಕಾರ್ಫ್ ಕಟ್ಟಿದೆ. ಕೈಯಲ್ಲಿ ಮರದ ಕೋಲು ಬಿಟ್ಟರೆ ಬೇರೇನೂ ಉಳಿದಿರಲಿಲ್ಲ. ಕಾಲುಗಳ ಮೇಲೆ ಭರವಸೆ ಇಟ್ಟುಕೊಂಡು ನಡೆದುಕೊಂಡು ಬಂದೆ ಎಂದು ಅಜ್ಜಿ ಹೇಳಿಕೊಂಡಿದ್ದಾರೆ.


ಎರಡನೇ ಮಹಾಯುದ್ಧದಂತಿಲ್ಲ

ರಷ್ಯಾ ತನ್ನ ದೇಶದ ವಿರುದ್ಧ ನಡೆಸುತ್ತಿರುವ ಯುದ್ಧವು ಎರಡನೇ ಮಹಾಯುದ್ಧದಂತಿಲ್ಲ ಎಂದು ಹೇಳಿದ ಅವರು, ಮನೆಗಳು ಸುಟ್ಟು ಕರಕಲಾಗುತ್ತಿದ್ದು, ಮರಗಳು ಉರುಳುತ್ತಿವೆ ಎಂದು ತಿಳಿಸಿದ್ದಾರೆ.

ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

ಮಹಿಳೆಯ ಕುರಿತು ಉಕ್ರೇನ್‌ನ ಆಂತರಿಕ ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿನ ಮಾಹಿತಿ ಹಂಚಿಕೊಂಡಿದೆ. ಮಹಿಳೆಯನ್ನು ಉಕ್ರೇನ್‌ನ ಮಿಲಿಟರಿ ಪತ್ತೆ ಹಚ್ಚಿದ್ದಾರೆ. ಬಳಿಕ ಅವರು ಪೊಲೀಸರಿಗೆ ಒಪ್ಪಿಸಿದರು. ಅವರು ಆಕೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಮಹಿಳೆ ಯಾವಾಗ ಪತ್ತೆಯಾಗಿದ್ದಾಳೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಕಾನೂನು ಜಾರಿ ಅಧಿಕಾರಿಗಳು ಮಹಿಳೆಯ ಸಂಬಂಧಿಕರನ್ನು ಹುಡುಕುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ.

ರಷ್ಯಾ- ಉಕ್ರೇನ್ ಯುದ್ಧವು ಮೂರನೇ ವರ್ಷವೂ ಮುಂದುವರಿದಿದೆ. ಈಗಾಗಲೇ ಸಾವಿರಾರು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಉಕ್ರೇನಿಯನ್ ನಗರಗಳು ಮತ್ತು ಹಳ್ಳಿಗಳು ಜನವಿಲ್ಲದೆ ಸ್ಮಶಾನದಂತಾಗಿದೆ. ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Continue Reading

ವಿದೇಶ

Safest Countries : ವಿಶ್ವದ ಎಲ್ಲೆಡೆ ನೋಡಿದರೂ ಯುದ್ಧ ಭೀತಿ; ಈ ದೇಶಗಳಷ್ಟೇ ಸುರಕ್ಷಿತ!

Safest Countries: ವಿಶ್ವದೆಲ್ಲೆಡೆ ಈಗ ಯುದ್ಧದ ಭೀತಿ ಎದುರಾಗಿದೆ. ಈ ನಡುವೆ ನಾವು ಹೆಚ್ಚು ಸುರಕ್ಷಿತವಾಗಿರುವುದು ಎಲ್ಲಿ ಎನ್ನುವ ಚಿಂತೆಯೂ ಕಾಡುತ್ತಿದೆ. ಒಂದು ವೇಳೆ ಯುದ್ಧ ನಡೆದರೆ ನಾವು ಯಾವ ದೇಶಕ್ಕೆ ಹೋಗಿ ಸುರಕ್ಷಿತವಾಗಿರಬಹುದು ಗೊತ್ತೇ ?

VISTARANEWS.COM


on

By

Safest Countries
Koo

ಒಂದೆಡೆ ರಷ್ಯಾ- ಉಕ್ರೇನ್ (Russia-Ukraine), ಇನ್ನೊಂದೆಡೆ ಹಮಾಸ್- ಇಸ್ರೇಲ್ (Hamas- Israel), ಮತ್ತೊಂದೆಡೆ ಇರಾನ್- ಇಸ್ರೇಲ್ (Iran- Israel) ಯುದ್ಧದಲ್ಲಿ ತೊಡಗಿದೆ. ಇದರಿಂದಾಗಿ ಮುಂದೆ ಮೂರನೇ ಮಹಾಯುದ್ಧದ (world war) ಭೀತಿ ವಿಶ್ವಕ್ಕೆ ಕಾಡುತ್ತಿದೆ. ಜಗತ್ತಿನಾದ್ಯಂತ ಈಗ ಯುದ್ಧದ ವಾತಾವರಣವಿದ್ದು ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಯುದ್ಧದ ಪರಿಸ್ಥಿತಿ ತಲೆದೋರಿದರೆ ಸುರಕ್ಷಿತವಾಗಿ ಇರಬಹುದಾದ ದೇಶ ಯಾವುದು (Safest Countries) ಎನ್ನುವ ಹುಡುಕಾಟದಲ್ಲೂ ಕೆಲವರಿದ್ದಾರೆ.

ತನ್ನ ರಾಯಭಾರಿ ಕಚೇರಿ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಏಪ್ರಿಲ್ 13 ರಂದು ಇರಾನ್ ದೇಶವು ಇಸ್ರೇಲ್ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿತ್ತು. ಇದು ಮೂರನೇ ವಿಶ್ವ ಸಮರಕ್ಕೆ ಕಾರಣವಾಗಬಹುದು ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

ಈ ಯುದ್ಧವನ್ನು ತಡೆಗಟ್ಟಲು ಯುನೈಟೆಡ್ ಸ್ಟೇಟ್ಸ್ ಪ್ರಯತ್ನಿಸುತ್ತಿದೆ. ಇರಾನ್‌ನ ದಾಳಿಯು ವಿಶ್ವದೆಲ್ಲೆಡೆ ಸಂಘರ್ಷದ ವಾತಾವರಣವನ್ನು ಸೃಷ್ಟಿಸಿದೆ. ಅಲ್ಲದೇ ಇರಾನ್ ಗೆ ಎಚ್ಚರಿಕೆಯನ್ನೂ ನೀಡುತ್ತಿದೆ. ಹಮಾಸ್‌ ಮೇಲೆ ಇಸ್ರೇಲ್‌ ನಡೆಸಿರುವುದರಿಂದ ಮಧ್ಯಪ್ರಾಚ್ಯವು ಈಗಾಗಲೇ ಆಕ್ರೋಶದಲ್ಲಿದೆ.

ಇದನ್ನೂ ಓದಿ: Summer Tour: ಪಾಂಡಿಚೇರಿಯಲ್ಲಿ ಸುತ್ತು ಹಾಕುವಾಗ ಇವುಗಳನ್ನು ಮಿಸ್ ಮಾಡಿಕೊಳ್ಳಬೇಡಿ!

ಯುದ್ಧದ ಭೀತಿಗೆ ಕಾರಣ?

ಯುದ್ಧದ ಪರಿಸ್ಥಿತಿಯನ್ನು ಉಲ್ಬಣಗೊಳ್ಳಲು ಯುದ್ಧ ಸನ್ನದ್ಧವಾಗಿರುವ ರಾಷ್ಟ್ರಗಳಿಗೆ ಹಲವು ರಾಷ್ಟ್ರಗಳ ಬೆಂಬಲ, ಕೆಲವು ರಾಷ್ಟ್ರಗಳ ತಟಸ್ಥವಾಗಿರುವುದು ಕೂಡ ಕಾರಣವಾಗುತ್ತಿದೆ. ಇರಾನ್- ಇಸ್ರೇಲ್ ಯುದ್ಧದ ವೇಳೆ ಇರಾನ್, ಇರಾಕ್, ಸಿರಿಯಾ, ಲೆಬನಾನ್ ಮತ್ತು ಯೆಮೆನ್ ಮೊದಲಾದ ನೆರೆಯ ದೇಶಗಳಿಂದ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ, ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಲು ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ದಮ್ ಇಸ್ರೇಲ್ ನ ರಕ್ಷಣೆಗೆ ನಿಂತಿವೆ.

ಮೂರನೇ ವಿಶ್ವಯುದ್ಧದ ಆತಂಕ

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಭದ್ರತಾ ಮಂಡಳಿಗೆ ನೀಡಿದ ಹೇಳಿಕೆಯಲ್ಲಿ ಮಧ್ಯಪ್ರಾಚ್ಯವು ಪ್ರಮುಖ ಸಂಘರ್ಷದ ಅಂಚಿನಲ್ಲಿದೆ ಎಂದು ಹೇಳಿದ್ದರು. ಈ ಪ್ರದೇಶದ ಜನರು ವಿನಾಶಕಾರಿ ಹಾಗೂ ಪೂರ್ಣ ಪ್ರಮಾಣದ ಸಂಘರ್ಷದ ಅಪಾಯವನ್ನು ಎದುರಿಸುತ್ತಿದ್ದಾರೆ. ಒಂದು ವೇಳೆ ಈಗ ಸಂಯಮ ತೆಗೆದುಕೊಳ್ಳದೇ ಇದ್ದರೆ ಮೂರನೇ ವಿಶ್ವಯುದ್ಧ ಉಂಟಾಗುವ ಸಂಪೂರ್ಣ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಯುದ್ಧ ಭೀತಿಯಲ್ಲಿರುವ ಮಧ್ಯಪ್ರಾಚ್ಯದಲ್ಲಿ ದೊಡ್ಡ ಜಾಗತಿಕ ಸಂಘರ್ಷ ಉಲ್ಬಣವಾದರೆ ಸಾಮಾನ್ಯ ಜನರಿಗೆ ಸುರಕ್ಷಿತ ಎಂದೆನಿಸುವ ಹತ್ತು ಪ್ರಮುಖ ರಾಷ್ಟ್ರಗಳಿವೆ.


ಗ್ರೀನ್‌ಲ್ಯಾಂಡ್

ಡೆನ್ಮಾರ್ಕ್‌ನ ಸ್ವಾಯತ್ತ ರಾಷ್ಟ್ರವಾಗಿರುವ ಗ್ರೀನ್ ಲ್ಯಾಂಡ್ ಯುದ್ಧ ಭೀತಿಯಿಂದ ದೂರದಲ್ಲಿದೆ ಮತ್ತು ರಾಜಕೀಯವಾಗಿ ಅಲಿಪ್ತವಾಗಿದೆ. ಇಲ್ಲಿ ಸಂಘರ್ಷ ಹರಡುವ ಸಾಧ್ಯತೆಗಳು ಕಡಿಮೆ.


ದಕ್ಷಿಣ ಆಫ್ರಿಕಾ

ಸ್ಥಿರವಾದ ವಿದೇಶಾಂಗ ನೀತಿ ಮತ್ತು ಆಧುನಿಕ ಮೂಲಸೌಕರ್ಯಕ್ಕೆ ಬದ್ಧತೆಯು ದಕ್ಷಿಣ ಆಫ್ರಿಕಾವನ್ನು ಯುದ್ಧದ ಸಂಭಾವ್ಯ ಅಪಾಯಗಳಿಂದ ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇಲ್ಲಿ ಜನರು ಹೆಚ್ಚು ಸುರಕ್ಷಿತವಾಗಿರಬಹುದು.


ಐಸ್ ಲ್ಯಾಂಡ್

ಹೇರಳವಾದ ತಾಜಾ ನೀರಿನ ನಿಕ್ಷೇಪಗಳು, ಸಮುದ್ರ ಸಂಪನ್ಮೂಲಗಳು ಮತ್ತು ನವೀಕರಿಸಬಹುದಾದ ಇಂಧನ ಮೂಲಗಳಿಗೆ ಹೆಸರುವಾಸಿಯಾಗಿರುವ ಐಸ್ ಲ್ಯಾಂಡ್ ಮೇಲೆ ದಾಳಿ ನಡೆಯುವ ಸಾಧ್ಯತೆ ಇಲ್ಲ. ಇಲ್ಲಿ ಸಂಘರ್ಷ ಹರಡುವ ಸಾಧ್ಯತೆ ಇಲ್ಲ. ಹೀಗಾಗಿ ಇದು ಸುರಕ್ಷಿತವೆಂದೇ ಹೇಳಬಹುದು.


ಅಂಟಾರ್ಕ್ಟಿಕಾ

ಅಂಟಾರ್ಕ್ಟಿಕಾ ಇರುವ ಸ್ಥಳವು ಅದನ್ನು ಸುರಕ್ಷಿತ ಸ್ಥಳವನ್ನಾಗಿ ಮಾಡಿದೆ. ಇದು ಯುದ್ಧ ವಲಯವಾಗಿ ಬದಲಾಗುವ ಸಾಧ್ಯತೆಯಿಲ್ಲ.


ಸ್ವಿಟ್ಜರ್ಲೆಂಡ್

ಮೊದಲ ಎರಡು ವಿಶ್ವ ಯುದ್ಧಗಳಲ್ಲಿಯೂ ಇದು ಕಠಿಣವಾದ ಪರ್ವತ ಭೂಪ್ರದೇಶದಿಂದಾಗಿ ದೂರದಲ್ಲಿ ಉಳಿದಿತ್ತು. ಇಲ್ಲಿ ದೃಢವಾದ ಸಾಂಪ್ರದಾಯಿಕ ತಟಸ್ಥತೆ ಯುದ್ಧದ ಸನ್ನಿವೇಶದಿಂದ ಎಲ್ಲರನ್ನೂ ದೂರವಿರಿಸುತ್ತದೆ.


ಇಂಡೋನೇಷ್ಯಾ

ಭೌಗೋಳಿಕ ಪ್ರತ್ಯೇಕತೆ ಮತ್ತು ಬಲವಾದ ಆರ್ಥಿಕತೆಗೆ ಹೆಸರುವಾಸಿಯಾಗಿರುವ ಇಂಡೋನೇಷ್ಯಾ “ಮುಕ್ತ ಮತ್ತು ಸಕ್ರಿಯ” ವಿದೇಶಾಂಗ ನೀತಿಯನ್ನು ನಿರ್ವಹಿಸುತ್ತಿದೆ. ಹೀಗಾಗಿ ಇಲ್ಲಿ ಯುದ್ಧದ ಭೀತಿ ಇಲ್ಲ.


ಟುವಾಲು

ಪ್ರತ್ಯೇಕತೆ ಮತ್ತು ತಟಸ್ಥತೆಯಿಂದಾಗಿ ಟುವಾಲು ಅತ್ಯಂತ ಏಕಾಂತ ಮತ್ತು ರಾಜಕೀಯವಾಗಿ ಅಲಿಪ್ತವಾಗಿರುವ ರಾಷ್ಟ್ರವಾಗಿದೆ. ಹೀಗಾಗಿ ವಿಶ್ವ ಯುದ್ಧ ನಡೆದರೆ ಇದು ಅದರಿಂದ ದೂರವೇ ಉಳಿಯುತ್ತದೆ.


ನ್ಯೂಜಿಲೆಂಡ್

ಯುದ್ಧ ಸಂಘರ್ಷಗಳ ಇತಿಹಾಸವಿಲ್ಲದ ಸ್ಥಿರವಾದ ಪ್ರಜಾಪ್ರಭುತ್ವ, ತನ್ನದೇ ಆದ ಆಹಾರವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ದೇಶ ನ್ಯೂಜಿಲ್ಯಾಂಡ್. ಇಲ್ಲಿ ಯುದ್ಧದ ಸಾಧ್ಯತೆ ಕಡಿಮೆ.


ಐರ್ಲೆಂಡ್

ತಟಸ್ಥತೆ ಮತ್ತು ಶಾಂತಿಯುತ ವಿದೇಶಾಂಗ ನೀತಿಗೆ ಹೆಸರುವಾಸಿಯಾಗಿರುವ ಐಲೆಂಡ್ ನಲ್ಲಿ ಯುದ್ಧ ಸಾಧ್ಯತೆಯೂ ಇಲ್ಲವೆನ್ನಬಹುದು.


ಭೂತಾನ್

ಹಿಮಾಲಯದಿಂದ ಸುತ್ತುವರೆದಿರುವ ಭೂತಾನ್‌ನ ವಿಶಿಷ್ಟ ಸ್ಥಳವು ಅಲ್ಲಿನ ಜನರಿಗೆ ಅತ್ಯುತ್ತಮವಾದ ಆಶ್ರಯವನ್ನು ಒದಗಿಸುತ್ತದೆ. ಇಲ್ಲಿ ಯುದ್ಧದ ಭೀತಿ ಇಲ್ಲವೆನ್ನಲು ಅಡ್ಡಿಯಿಲ್ಲ.

Continue Reading

ಪ್ರಮುಖ ಸುದ್ದಿ

Vladimir Putin: ಐಷಾರಾಮಿ ತಾಣದಲ್ಲಿ ವ್ಲಾದಿಮಿರ್‌ ಪುಟಿನ್‌, ಗರ್ಲ್‌ಫ್ರೆಂಡ್ ರಹಸ್ಯ ವಾಸ, ಯಾರೀಕೆ ಗೆಳತಿ?

ರಷ್ಯದ ರಾಜಧಾನಿ ಮಾಸ್ಕೋದ ವಾಯುವ್ಯದಲ್ಲಿರುವ ಈ ಎಸ್ಟೇಟ್‌ನಲ್ಲಿ ಪುಟಿನ್‌ (Vladimir Putin) ತಮ್ಮ ಬಹುಕಾಲ ಗೆಳತಿ ಮತ್ತು ಆಕೆಯ ಮಕ್ಕಳ ಜತೆಗೆ ಹಾಯಾಗಿದ್ದಾರೆ.
ಪುಟಿನ್‌ ಅವರ ಸಂಗಾತಿಯ ಹೆಸರು ಅಲಿನಾ ಕಬಯೆವಾ, ಈಕೆಗೆ 39 ವರ್ಷ. 2008ರಿಂದಲೂ ಇವರ ಹೆಸರು ಪುಟಿನ್‌ ಜತೆಗೆ ತಳುಕು ಹಾಕಿಕೊಂಡಿದೆ.

VISTARANEWS.COM


on

vladimir putin
Koo

ಕ್ರೆಮ್ಲಿನ್:‌ ಒಂದು ಕಡೆ ಉಕ್ರೇನ್‌ ದೇಶದ ಮೇಲೆ ಸೇನೆ ನುಗ್ಗಿಸಿ ಅಲ್ಲಿನ ಜನರ ಬದುಕನ್ನು ನರಕ ಮಾಡಿರುವ ರಷ್ಯ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) , ತಾನು ಮಾತ್ರ ರಹಸ್ಯ ಐಷಾರಾಮಿ ತಾಣದಲ್ಲಿ, ಗೆಳತಿಯ ಜತೆ ಸುಖವಾಗಿ ಮೋಜು ಮಜಾ ಮಾಡುತ್ತಾ ಇದ್ದಾರೆ.

ಹೌದು, ಅವರು ಇರುವ ಐಷಾರಾಮಿ ಎಸ್ಟೇಟ್‌ನ ಮೌಲ್ಯ ಸುಮಾರು 120 ಮಿಲಿಯ ಡಾಲರ್‌, ಅಂದರೆ ಸುಮಾರು 989 ಕೋಟಿ ರೂಪಾಯಿ. ರಷ್ಯದ ರಾಜಧಾನಿ ಮಾಸ್ಕೋದ ವಾಯುವ್ಯದಲ್ಲಿರುವ ಈ ಎಸ್ಟೇಟ್‌ನಲ್ಲಿ ಪುಟಿನ್‌ ತಮ್ಮ ಬಹುಕಾಲ ಗೆಳತಿ ಮತ್ತು ಆಕೆಯ ಮಕ್ಕಳ ಜತೆಗೆ ಹಾಯಾಗಿದ್ದಾರೆ. ಲೇಕ್‌ ವಾಲ್ಡಾಯ್‌ ತೀರದಲ್ಲಿರುವ ಈ ರಹಸ್ಯ ತಾಣವನ್ನು 2020ರಲ್ಲಿ ನಿರ್ಮಿಸಲಾಗಿದೆ. ಸುಮಾರು 13,000 ಚದರಡಿ ವಿಸ್ತಾರವಾಗಿರುವ ಬಂಗಲೆಯನ್ನು ಪೂರ್ತಿಯಾಗಿ ಮರದಿಂದ ರಷ್ಯನ್‌ ವಾಸ್ತುಶಿಲ್ಪ ಬಳಸಿ ನಿರ್ಮಿಸಲಾಗಿದೆಯಂತೆ.

ಪುಟಿನ್‌ ನೆಲೆಸಿರುವ ತಾಣದ ಬಗ್ಗೆ ಮೊದಲು ಅಲ್ಲಿನ ಪ್ರತಿಪಕ್ಷ ಮುಖಂಡ ಅಲೆಕ್ಸಿ ನವಲ್ನಿ ವರದಿ ಮಾಡಿದ್ದರು. ಇಲ್ಲಿರುವ ಪುಟಿನ್‌ ಅವರ ಬೆಡ್‌ರೂಂ, ಚಿನ್ನದ ಕುರ್ಚಿಗಳು, ಚಿನ್ನದ ತೂಗುದೀಪ ಮುಂತಾದ ಫೋಟೋಗಳು ಬಹಿರಂಗಗೊಂಡಿವೆ.

ಯಾರೀಕೆ ಕಬಯೆವಾ?

ಪುಟಿನ್‌ ಅವರ ಸಂಗಾತಿಯ ಹೆಸರು ಅಲಿನಾ ಕಬಯೆವಾ, ಈಕೆಗೆ 39 ವರ್ಷ. 2008ರಿಂದಲೂ ಇವರ ಹೆಸರು ಪುಟಿನ್‌ ಜತೆಗೆ ತಳುಕು ಹಾಕಿಕೊಂಡಿದೆ. ರಷ್ಯಾದ ಮಾಜಿ ಜಿಮ್ನಾಸ್ಟ್‌ ಕೂಡ ಆಗಿರುವ ಕಬಯೆವಾ ಮೊದಲು ನಾಲ್ಕು ಮಕ್ಕಳಿಗೆ ಸ್ವಿಜರ್ಲೆಂಡ್‌ನಲ್ಲಿ ಜನ್ಮ ನೀಡಿದ್ದರು. ಪುಟಿನ್‌ ಅವರಿಂದ ಐದನೇ ಮಗು ಪಡೆಯುತ್ತಿದ್ದಾರೆ ಎಂಬ ರೂಮರ್‌ಗಳು ಈ ಮೊದಲು ಹರಡಿದ್ದವು. ಅಲಿನಾ ರಷ್ಯಾದ ಸಂಸತ್ತು ಎನಿಸಿಕೊಂಡಿರುವ ಡುಮಾದ ಮಾಜಿ ಸದಸ್ಯರೂ ಆಗಿದ್ದಾರೆ. ರಷ್ಯಾದ ಪರವಾಗಿ ಮಾತನಾಡುವ ಟಿವಿ, ರೇಡಿಯೋ ಹಾಗೂ ಮುದ್ರಣ ಮಾಧ್ಯಮ ಸಂಸ್ಥೆಗಳ ಗುಂಪು ಎನಿಸಿಕೊಂಡಿರುವ ರಷ್ಯಾದ ರಾಷ್ಟ್ರೀಯ ಮಾಧ್ಯಮ ಗುಂಪಿನ ಮುಖ್ಯಸ್ಥರಾಗಿದ್ದಾರೆ.

ಕಬಯೆವಾ ರಷ್ಯಾದ ಅಗ್ರಗಣ್ಯ ಮಹಿಳಾ ಜಿಮ್ನಾಸ್ಟ್. 2000ರಲ್ಲಿ ಸಿಡ್ನಿ ಒಲಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ, 2004ರ ಅಥೆನ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ, ವಿವಿಧ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಒಟ್ಟು 14 ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಈ ಹಿಂದೆ ಒಬ್ಬ ಪೋಲೀಸ್‌ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳೆಂದು ಹೇಳಲಾಗಿತ್ತು; ಆದರೆ 2008ರಿಂದೀಚೆಗೆ ಪುಟಿನ್ ಜೊತೆ ಸಂಬಂಧ ಹೊಂದಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ಬೈಡೆನ್ ಉಕ್ರೇನ್ ಭೇಟಿ ಎಫೆಕ್ಟ್! ಅಮೆರಿಕ ಜತೆ ಪರಮಾಣು ಒಪ್ಪಂದ ಮಾತುಕತೆ ಇಲ್ಲ ಎಂದ ರಷ್ಯಾ ಅಧ್ಯಕ್ಷ ಪುಟಿನ್

Continue Reading

ದೇಶ

Russia-Ukraine War:‌ ರಷ್ಯಾ ವಿರುದ್ಧ ವಿಶ್ವಸಂಸ್ಥೆ ನಿರ್ಣಯ, ಮತದಾನದಿಂದ ಹೊರಗುಳಿದ ಭಾರತ

ಉಕ್ರೇನ್‌ನ ಮೇಲೆ ರಷ್ಯಾ ಯುದ್ಧ ಸಾರಿ (Russia-Ukraine War) ಒಂದು ವರ್ಷವಾಗಿದೆ. ಅಸಂಖ್ಯ ಜೀವಹಾನಿಯಾಗಿದೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಉಕ್ರೇನ್‌ನಿಂದ ಸೈನ್ಯ ಹಿಂದೆಗೆಯಲು ರಷ್ಯಾವನ್ನು ಆಗ್ರಹಿಸುವ ಗೊತ್ತುವಳಿಯನ್ನು ಮಂಡಿಸಲಾಗಿದೆ.

VISTARANEWS.COM


on

ukraine
Koo

ನವ ದೆಹಲಿ: ಉಕ್ರೇನ್‌ನಿಂದ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ರಷ್ಯಾವನ್ನು ಆಗ್ರಹಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಕುರಿತು ಮತದಾನ ನಡೆದಿದ್ದು, ಈ ಮತದಾನದಲ್ಲಿ ಭಾಗವಹಿಸದೆ ಭಾರತ ಆಚೆಗೆ ಉಳಿದಿದೆ.

ಉಕ್ರೇನ್‌ನ ಮೇಲೆ ರಷ್ಯಾ ಯುದ್ಧ ಸಾರಿ (Russia-Ukraine War) ಒಂದು ವರ್ಷವಾಗಿದೆ. ಅಸಂಖ್ಯ ಜೀವಹಾನಿಯಾಗಿದೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಉಕ್ರೇನ್‌ನಿಂದ ಸೈನ್ಯ ಹಿಂದೆಗೆಯಲು ರಷ್ಯಾವನ್ನು ಆಗ್ರಹಿಸುವ ಗೊತ್ತುವಳಿಯನ್ನು 180 ಸದಸ್ಯ ರಾಷ್ಟ್ರಗಳಿರುವ ವಿಶ್ವಸಂಸ್ಥೆ ಮಹಾಸಭೆಯಲ್ಲಿ ಮತಕ್ಕೆ ಹಾಕಿದಾಗ, 141 ದೇಶಗಳು ಅದನ್ನು ಬೆಂಬಲಿಸಿವೆ. ರಷ್ಯಾ ಸೇರಿದಂತೆ 7 ದೇಶಗಳು ವಿರೋಧಿಸಿವೆ. ಭಾರತ, ಚೀನಾ ಸೇರಿದಂತೆ 32 ದೇಶಗಳು ಈ ಮತದಾನದಿಂದ ಹೊರಗೆ ಉಳಿದಿವೆ.

ಆದರೆ, ಉಕ್ರೇನ್‌ನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಭಾರತಕ್ಕೆ ಕಳವಳವಿದೆ. ಅಸಂಖ್ಯ ಜೀವಹಾನಿ ಹಾಗೂ ನಿರಾಶ್ರಯಕ್ಕೆ ಕಾರಣವಾಗಿರುವ ಈ ಯುದ್ಧವನ್ನು ಆದಷ್ಟು ಬೇಗ ಕೈಬಿಟ್ಟು ಉಭಯ ದೇಶಗಳು ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂಬುದರಲ್ಲಿ ಭಾರತ ವಿಶ್ವಾಸ ಹೊಂದಿದೆ. ಇಂದಿನ ನಿರ್ಣಯ ಈ ವಿಚಾರದಲ್ಲಿ ಸೀಮಿತವಾಗಿರುವುದರಿಂದ ಭಾರತ ಮತದಾನದಿಂದ ಆಚೆ ಉಳಿಯುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ರುಚಿರಾ ಕಾಂಬೋಜ್‌ ಹೇಳಿದ್ದಾರೆ.

ಇದನ್ನೂ ಓದಿ: Russia-Ukraine War : ಯುದ್ಧದ ಭೀಕರತೆ ಹೇಗಿರುತ್ತವೆ ಎಂಬುದಕ್ಕೆ ರಷ್ಯಾ- ಉಕ್ರೇನ್​ ಕದನ ಈ ಚಿತ್ರಗಳೇ ಸಾಕ್ಷಿ

Continue Reading
Advertisement
IPL 2024
ಪ್ರಮುಖ ಸುದ್ದಿ57 mins ago

IPL 2024 : ಆರ್​ಸಿಬಿ, ಆರ್​ಆರ್​ಗೆ ಆಘಾತ; ಐಪಿಎಲ್ ಬೇಡ ಎಂದು ಹೊರಟ ಹಲವು ಆಟಗಾರರು

Prajwal Revanna Case
ಕರ್ನಾಟಕ1 hour ago

Prajwal Revanna Case: ರೇವಣ್ಣಗೆ ಜಾಮೀನು ಹಿನ್ನೆಲೆ ವಿದೇಶದಿಂದ ಪ್ರಜ್ವಲ್‌ ವಾಪಸ್?‌; ಕೋರ್ಟ್‌ಗೆ ಶರಣಾಗುವ ಸಾಧ್ಯತೆ

Hoarding
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

Sushil Kumar Modi
ಪ್ರಮುಖ ಸುದ್ದಿ2 hours ago

Sushil Kumar Modi : ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ

Tejasvi Surya
ದೇಶ2 hours ago

Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

IPL 2024
ಪ್ರಮುಖ ಸುದ್ದಿ2 hours ago

IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

Vidyarthi Vidyarthiniyare Movie
ಕರ್ನಾಟಕ2 hours ago

Vidyarthi Vidyarthiniyare Movie: ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಟ್ರೈಲರ್ ಔಟ್; ಧುಮ್ಮಿಕ್ಕಿದ ಹರೆಯದ ತೊರೆ!

Road Accident Head on collision between bikes One person died on the spot
ಉತ್ತರ ಕನ್ನಡ2 hours ago

Road Accident: ಬೈಕ್‌ಗಳ ನಡುವೆ ಡಿಕ್ಕಿ; ಒಬ್ಬ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

Lok Sabha Election
ದೇಶ3 hours ago

Lok Sabha Election: 28 ವರ್ಷಗಳಲ್ಲೇ ಶ್ರೀನಗರದಲ್ಲಿ ಅಧಿಕ ಮತದಾನ; 370ನೇ ವಿಧಿ ರದ್ದು ಎಫೆಕ್ಟ್?

Award Ceremony
ಬೆಂಗಳೂರು3 hours ago

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Bail Revanna will not leave the country condition imposed by the court
ಕ್ರೈಂ6 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Prajwal Revanna case HD Revanna finally gets bail What was the argument like
ಕ್ರೈಂ6 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ7 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ7 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ8 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ14 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ19 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ20 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ1 day ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಟ್ರೆಂಡಿಂಗ್‌