Paytm payments Bank: ಕುಸಿತದ ನಡುವೆಯೇ ₹244 ಕೋಟಿ ಬೆಲೆಯ ಪೇಟಿಎಂ ಷೇರು ಖರೀದಿಸಿದ ಮಾರ್ಗನ್ ಸ್ಟಾನ್ಲಿ - Vistara News

ವಾಣಿಜ್ಯ

Paytm payments Bank: ಕುಸಿತದ ನಡುವೆಯೇ ₹244 ಕೋಟಿ ಬೆಲೆಯ ಪೇಟಿಎಂ ಷೇರು ಖರೀದಿಸಿದ ಮಾರ್ಗನ್ ಸ್ಟಾನ್ಲಿ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ (paytm payments bank) ಠೇವಣಿ ಸ್ವೀಕಾರ ಹಾಗೂ ಸಾಲ ನೀಡಿಕೆ ನಿಲ್ಲಿಸುವಂತೆ ಆರ್‌ಬಿಐ (RBI) ಆದೇಶಿಸಿದ ಎರಡು ದಿನಗಳ ಬಳಿಕ ದೈತ್ಯ ಕಂಪನಿ ಮಾರ್ಗನ್‌ ಸ್ಟಾನ್ಲಿ (Morgan Stanley) ಪೇಟಿಎಂನಲ್ಲಿ ಭಾರಿ ಹೂಡಿಕೆ ಮಾಡಿದೆ.

VISTARANEWS.COM


on

paytm payments bank morgan stanley
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಹಣಕಾಸು ಸೇವೆಗಳ ದೈತ್ಯ ಕಂಪನಿ ಮಾರ್ಗನ್ ಸ್ಟಾನ್ಲಿ (Morgan Stanley), Paytmನ ಮೂಲ ಕಂಪನಿ One97 ಕಮ್ಯುನಿಕೇಷನ್ಸ್‌ನ ₹244 ಕೋಟಿ ಮೌಲ್ಯದ ಷೇರುಗಳನ್ನು ಮುಕ್ತ ಮಾರುಕಟ್ಟೆ ವಹಿವಾಟಿನ ಮೂಲಕ ಶುಕ್ರವಾರ ಖರೀದಿಸಿ ಗಮನಾರ್ಹ ಹೂಡಿಕೆ ಮಾಡಿದೆ.

ಮಾರ್ಗನ್ ಸ್ಟಾನ್ಲಿ, ಅದರ ಅಂಗಸಂಸ್ಥೆಯಾದ ಮಾರ್ಗನ್ ಸ್ಟಾನ್ಲಿ ಏಷ್ಯಾ (ಸಿಂಗಾಪುರ) Pte- ODI ಮೂಲಕ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) 50 ಲಕ್ಷ ಷೇರುಗಳನ್ನು ಖರೀದಿಸಿತು. ಇದು Paytmನಲ್ಲಿ ಪ್ರತಿಶತ 0.8ರಷ್ಟು ಪಾಲನ್ನು ಪ್ರತಿನಿಧಿಸುತ್ತದೆ. ಪ್ರತಿ ಷೇರಿನ ಸರಾಸರಿ ಬೆಲೆ ₹487.20 ಆಗಿದ್ದು, ಒಟ್ಟು ಡೀಲ್ ಗಾತ್ರ ₹243.60 ಕೋಟಿಯಾಗಿದೆ. ಆದರೆ ಮಾರಾಟಗಾರರ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ.

Paytm ಷೇರುಗಳ ಬೆಲೆ NSEನಲ್ಲಿ ಶುಕ್ರವಾರ 20 ಪ್ರತಿಶತ ಕುಸಿತವನ್ನು ದಾಖಲಿಸಿತು. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India RBI), Paytmನ ಸಹವರ್ತಿಯಾದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm payments Bank) ಲಿಮಿಟೆಡ್‌ಗೆ (PPBL) ಠೇವಣಿಗಳನ್ನು ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುವಂತೆ ನಿರ್ದೇಶಿಸಿದೆ. ಇದರ ನಂತರ ಕಂಪನಿಯ ಷೇರು ಬೆಲೆಗಳು 2 ದಿನಗಳಲ್ಲಿ 36 ಪ್ರತಿಶತದಷ್ಟು ಕುಸಿದಿವೆ. ಮಾರ್ಚ್ 1ರಿಂದ ಪೇಟಿಎಂ ಬ್ಯಾಂಕಿನ ವಿವಿಧ ಖಾತೆಗಳು, ವ್ಯಾಲೆಟ್‌ಗಳು ಮತ್ತು ಸಾಧನಗಳಲ್ಲಿ ಠೇವಣಿ ಹೂಡುವಂತಿಲ್ಲ.

Paytm ಪೇಮೆಂಟ್ಸ್ ಬ್ಯಾಂಕ್‌ನಲ್ಲಿ One97 Communications Ltd (OCL) ಶೇಕಡಾ 49ರಷ್ಟು ಪಾಲನ್ನು ಹೊಂದಿದ್ದರೆ, One97 ಕಮ್ಯುನಿಕೇಶನ್‌ನ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ಇತರ ಶೇಕಡಾ 51ರಷ್ಟು ಪಾಲನ್ನು ಹೊಂದಿದ್ದಾರೆ. One97 ಕಮ್ಯುನಿಕೇಷನ್ಸ್‌ನ ಷೇರುಗಳ ದರ NSEನಲ್ಲಿ ನಿನ್ನೆ ₹487.20ಕ್ಕೆ ಇಳಿದಿದೆ.

ಪೇಟಿಎಂ ಬ್ಯಾಂಕ್ ಅನುಮತಿ ರದ್ದು?

ಮುಂದಿನ ತಿಂಗಳ ಆರಂಭದಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಪರವಾನಗಿಯನ್ನು ಹಿಂಪಡೆಯಲು ಆರ್‌ಬಿಐ ಚಿಂತನೆ ನಡೆಸುತ್ತಿದೆ ಎಂದು ವರದಿಗಳಿವೆ. ಗ್ರಾಹಕರ ದಾಖಲಾತಿ ನಿಯಮಗಳ ದುರುಪಯೋಗ ಮತ್ತು ಹಣಕಾಸು ವಹಿವಾಟುಗಳನ್ನು ಬಹಿರಂಗಪಡಿಸದಿರುವುದು ಸೇರಿದಂತೆ ವಹಿವಾಟು ನಿಯಮಾವಳಿ ಉಲ್ಲಂಘನೆಗಳು ಪೇಟಿಎಂನಲ್ಲಿ ನಡೆದಿರುವುದನ್ನು ಬ್ಯಾಂಕಿಂಗ್ ವಲಯದ ನಿಯಂತ್ರಕರು ಕಂಡುಕೊಂಡಿದ್ದಾರೆ.

RBI ಠೇವಣಿದಾರರ ರಕ್ಷಣೆಗೆ ಆದ್ಯತೆ ನೀಡುವ ಗುರಿಯನ್ನು ಹೊಂದಿದೆ. ಫೆಬ್ರವರಿ 29ರ ಗಡುವಿನ ನಂತರ Paytmನ ಬೆಳವಣಿಗೆ ಅವಲಂಬಿಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಮುಂದಿನ ಬೆಳವಣಿಗೆಗಳ ಆಧಾರದ ಮೇಲೆ ಆರ್‌ಬಿಐ ನಿಲುವು ಬದಲಾಗಲೂಬಹುದು ಎನ್ನಲಾಗಿದೆ.

ಇದನ್ನೂ ಓದಿ: Paytm Payments Bank: ʼನಿಮ್ಮ ಹಣ ಸೇಫ್‌ʼ ಎಂದ ಪೇಟಿಎಂ ಪಾವತಿ ಬ್ಯಾಂಕ್; ಆದರೆ…

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್‌ ಏರಿಕೆ

Stock Market: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತಪಮ್ಮೆ ಅದಿಕಾರಕ್ಕೆ ಬೆಲಿದ್ದಾರೆ ಎಂದು ಎಕ್ಸಿಟ್‌ ಪೋಲ್‌ಗಳು ಭವಿಷ್ಯ ನುಡಿದಿದ್ದು, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರುಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು. ನಿಫ್ಟಿ 50 (807 ಪಾಯಿಂಟ್‌) ಮತ್ತು ಸೆನ್ಸೆಕ್ಸ್ ಸುಮಾರು ಶೇ. 3ರಷ್ಟು (2,622 ಪಾಯಿಂಟ್‌) ಏರಿಕೆಯಾಗಿದ್ದು, ಕ್ರಮವಾಗಿ 23,338.70 ಮತ್ತು 76,738.89ರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ.

VISTARANEWS.COM


on

Stock Market
Koo

ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಎನ್‌ಡಿಎ (NDA) ಸರ್ಕಾರಕ್ಕೆ ಸ್ಪಷ್ಟ ಜಯವನ್ನು ಸೂಚಿಸುವ ಎಕ್ಸಿಟ್‌ ಪೋಲ್‌ (Exit Poll) ಫಲಿತಾಂಶಗಳ ಹಿನ್ನೆಲೆಯಲ್ಲಿ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರುಗಳು (Stock Market) ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು. ನಿಫ್ಟಿ 50 (807 ಪಾಯಿಂಟ್‌) ಮತ್ತು ಸೆನ್ಸೆಕ್ಸ್ ಸುಮಾರು ಶೇ. 3ರಷ್ಟು (2,622 ಪಾಯಿಂಟ್‌) ಏರಿಕೆಯಾಗಿದ್ದು, ಕ್ರಮವಾಗಿ 23,338.70 ಮತ್ತು 76,738.89ರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ.

ಸುಮಾರು 360 ಸ್ಥಾನಗಳೊಂದಿಗೆ ಎನ್‌ಡಿಎ ಸ್ಪಷ್ಟ ಬಹಮತ ದೊರೆಯಲಿದೆ ಎನ್ನುವ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಮೇ ತಿಂಗಳಲ್ಲಿ ಮಾರುಕಟ್ಟೆಗಳ ಮೇಲೆ ಆವರಿಸಿದ್ದ ಆತಂಕವನ್ನು ನಿವಾರಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲ ಪ್ರಮುಖ ವಲಯಗಳು ಏರಿಕೆ ದಾಖಲಿಸಿವೆ. ಸಣ್ಣ ಮತ್ತು ಮಧ್ಯಮ ಕ್ಯಾಪ್‌ಗಳು ಸಹ ಗಮನಾರ್ಹ ಲಾಭವನ್ನು ಕಂಡಿವೆ. ಎಲ್ಲ 13 ಪ್ರಮುಖ ವಲಯ ಸೂಚ್ಯಂಕಗಳು ಹಸಿರು ಬಣ್ಣದಲ್ಲಿದ್ದವು. ನಿಫ್ಟಿ ಎನರ್ಜಿ, ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ನಿಫ್ಟಿ ರಿಯಾಲ್ಟಿ ತಲಾ ಶೇ. 4-5ರಷ್ಟು ಏರಿಕೆ ಕಂಡಿವೆ. ನಿಫ್ಟಿ ಫಾರ್ಮಾ ಮತ್ತು ನಿಫ್ಟಿ ಹೆಲ್ತ್‌ಕೇರ್‌ ಎರಡೂ ಸೂಚ್ಯಂಕಗಳು ಶೇಕಡಾ 1.2ರಷ್ಟು ಏರಿಕೆಯೊಂದಿಗೆ ಅತಿ ಕಡಿಮೆ ಲಾಭವನ್ನು ದಾಖಲಿಸಿವೆ. ಏತನ್ಮಧ್ಯೆ ಬಿಎಸ್ಇಯಲ್ಲಿ ಎಲ್ಲ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣ(capitalisation)ವು 11.1 ಲಕ್ಷ ಕೋಟಿ ರೂ.ಗಳಿಂದ 423.21 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ.

ವೈಯಕ್ತಿಕ ಸ್ಟಾಕ್‌ಗಳಲ್ಲಿ ಅದಾನಿ ಪೋರ್ಟ್ಸ್, ಶ್ರೀರಾಮ್ ಫೈನಾನ್ಸ್ ಮತ್ತು ಪವರ್ ಗ್ರಿಡ್ ಆರಂಭಿಕ ವಹಿವಾಟಿನಲ್ಲಿ ಟಾಪ್ ಪರ್ಫಾರ್ಮರ್‌ಗಳಾಗಿದ್ದು, ಪ್ರತಿಯೊಂದೂ 6-9 ಪ್ರತಿಶತದಷ್ಟು ಏರಿವೆ. ಅದಾನಿ ಇಂಟರ್‌ನ್ಯಾಶನಲ್ ಪೋರ್ಟ್ಸ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ (AIPH) ಟಾಂಜಾನಿಯಾದ ಡಾರ್ ಎಸ್ ಸಲಾಮ್ ಬಂದರಿನಲ್ಲಿ ಕಂಟೈನರ್ ಟರ್ಮಿನಲ್ 2 ಅನ್ನು ನಿರ್ವಹಿಸಲು ತಾಂಜಾನಿಯಾ ಪೋರ್ಟ್ಸ್ ಅಥಾರಿಟಿಯೊಂದಿಗೆ 30 ವರ್ಷಗಳ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅದಾನಿ ಪೋರ್ಟ್ಸ್ ಷೇರುಗಳು ಸುಮಾರು ಶೇ. 9ರಷ್ಟು ಲಾಭ ಗಳಿಸಿದವು.

“ಎಲ್ಲ ಎಕ್ಸಿಟ್‌ ಪೋಲ್‌ಗಳು ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ ಎಂದು ಹೇಳಿದೆ. ಇದು ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಗೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಂತಿಮವಾಗಿ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗಳೊಂದಿಗೆ ಹೊಂದಿಕೆಯಾದರೆ ಸಂಭಾವ್ಯ ಏರಿಕೆಯ ಬಗ್ಗೆ ಆಶಾವಾದಿಗಳಾಗಿರಬಹುದು” ಎಂದು ಆರ್ಥಿಕ ತಜ್ಞ ಡಾ. ರವಿ ಸಿಂಗ್‌ ಹೇಳಿದ್ದಾರೆ.

ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್‌ವೆಸ್ಟರ್ಸ್‌ (Foreign institutional investors) ಮೇ 31ರಂದು 1,613.24 ಕೋಟಿ ರೂ.ಗಳ ಭಾರತೀಯ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು 2,114.17 ಕೋಟಿ ರೂ.ಗಳ ಈಕ್ವಿಟಿಗಳನ್ನು ಖರೀದಿಸಿದ್ದರು. ಚುನಾವಣೋತ್ತರ ಸಮೀಕ್ಷೆಗಳು ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ ಎಂದು ಸೂಚಿಸಿದ ನಂತರ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ಭಾರತೀಯ ರೂಪಾಯಿ 42 ಪೈಸೆ ಏರಿಕೆಯಾಗಿ 83ಕ್ಕೆ ತಲುಪಿದೆ.

ಇದನ್ನೂ ಓದಿ: Exit Polls: ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಜಿಗಿತ ಸಾಧ್ಯತೆ

Continue Reading

ದೇಶ

Samsung: ಸ್ಯಾಮ್‌ಸಂಗ್‌ನ ʼಬಿಗ್‌ ಟಿವಿ ಡೇಸ್‌ʼ ಸೇಲ್‌; ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌!

Samsung: ಸ್ಯಾಮ್‌ಸಂಗ್ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್‌ಇಡಿ, ಓಎಲ್‌ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್‌ಡಿ ಟಿವಿಗಳು ಸೇರಿದಂತೆ ತನ್ನ ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌ಗಳನ್ನು ಘೋಷಿಸಿದೆ. ಟಿ20 ವಿಶ್ವಕಪ್‌ ಕ್ರಿಕೆಟ್ ಸಮೀಪಿಸುತ್ತಿದ್ದಂತೆ ಗ್ರಾಹಕರು ದೊಡ್ಡ ಟಿವಿಗಳಲ್ಲಿ ಕ್ರೀಡಾಂಗಣದ ಅನುಭವ ಪಡೆಯಲು ‘ಬಿಗ್ ಟಿವಿ ಡೇಸ್’ ಮಾರಾಟ ಪರಿಚಯಿಸಲಾಗಿದೆ.

VISTARANEWS.COM


on

Samsung Big TV Days Sale Exciting offer on big TVs
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ (Samsung) ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್‌ಇಡಿ, ಓಎಲ್‌ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್‌ಡಿ ಟಿವಿಗಳು ಸೇರಿದಂತೆ ತನ್ನ ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌ಗಳನ್ನು ಘೋಷಿಸಿದೆ. ಟಿ20 ವಿಶ್ವಕಪ್‌ ಕ್ರಿಕೆಟ್ ಸಮೀಪಿಸುತ್ತಿದ್ದಂತೆ ಗ್ರಾಹಕರು ದೊಡ್ಡ ಟಿವಿಗಳಲ್ಲಿ ಕ್ರೀಡಾಂಗಣದ ಅನುಭವ ಪಡೆಯಲು ‘ಬಿಗ್ ಟಿವಿ ಡೇಸ್’ ಮಾರಾಟ ಪರಿಚಯಿಸಲಾಗಿದೆ.

‘ಬಿಗ್ ಟಿವಿ ಡೇಸ್’ ಆಫರ್ ಸಮಯದಲ್ಲಿ ಸ್ಯಾಮ್‌ಸಂಗ್ ಟಿವಿಗಳನ್ನು ಖರೀದಿಸುವ ಗ್ರಾಹಕರು, ಅವರು ಖರೀದಿಸಿದ ಟಿವಿಯನ್ನು ಅವಲಂಬಿಸಿ ರೂ. 89990 ಮೌಲ್ಯದ ಸೆರಿಫ್ ಟಿವಿ ಅಥವಾ ರೂ. 79990 ಮೌಲ್ಯದ ಸೌಂಡ್‌ಬಾರ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಗ್ರಾಹಕರು ರೂ.2990 ದಿಂದ ಆರಂಭವಾಗುವ ಸುಲಭ ಇಎಂಐ ಸೌಲಭ್ಯವನ್ನು ಪಡೆಯಬಹುದು ಮತ್ತು 20% ವರೆಗಿನ ಕ್ಯಾಶ್‌ಬ್ಯಾಕ್ ಅನ್ನು ಕೂಡ ಪಡೆಯಬಹುದು. ಈ ಆಫರ್‌ಗಳು Samsung.com, ಪ್ರಮುಖ ರಿಟೇಲ್ ಅಂಗಡಿಗಳು ಮತ್ತು ಹಲವಾರು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತವೆ. ರಾಷ್ಟ್ರವ್ಯಾಪಿ ಇರುವ ಗ್ರಾಹಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ಆಫರ್‌ಗಳು ಜೂನ್ 1 ರಿಂದ ಆರಂಭವಾಗುತ್ತದೆ ಮತ್ತು ಜೂನ್ 30, 2024ಕ್ಕೆ ಕೊನೆಗೊಳ್ಳಲಿದೆ. ಆಫರ್‌ಗಳು 98″/85″/83″/77″/75″ ಗಾತ್ರಗಳ ನಿಯೋ ಕ್ಯೂಎಲ್‌ಇಡಿ, ಓಎಲ್‌ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್‌ಡಿ ಶ್ರೇಣಿಯ ಆಯ್ದ ಮಾಡೆಲ್‌ಗಳ ಮೇಲೆ ಲಭ್ಯವಿದೆ.

ಇದನ್ನೂ ಓದಿ: Mysore News: ಶಾಸ್ತ್ರ ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ: ಮಂತ್ರಾಲಯ ಶ್ರೀ

ಸ್ಯಾಮ್‌ಸಂಗ್ ಗ್ರಾಹಕರ ಟಿವಿ ವೀಕ್ಷಣೆ ಅನುಭವವನ್ನು ಅತ್ಯುನ್ನತಗೊಳಿಸಲು ಮತ್ತು ಅಸಾಧಾರಣ ವೀಕ್ಷಣೆಯ ಅನುಭವಗಳನ್ನು ಒದಗಿಸಲು ಟಿವಿಗಳಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಕ್ರಾಂತಿಕಾರಕ ಶಕ್ತಿಯನ್ನು ಪರಿಚಯಿಸಿದೆ. ಈ ಟೆಲಿವಿಷನ್‌ಗಳು ಎಐ ಬಳಕೆಯ ಮೂಲಕ ಮನೆಯ ಮನರಂಜನಾ ಅನುಭವಕ್ಕೆ ಹೊಸ ರೂಪ ನೀಡಲಿದೆ. ಸುಸ್ಥಿರತೆ ಮತ್ತು ಹೆಚ್ಚಿನ ಭದ್ರತೆ ಒದಗಿಸುತ್ತದೆ.

ಸ್ಯಾಮ್‌ಸಂಗ್ ಇಂಡಿಯಾದ ವಿಷುಯಲ್ ಡಿಸ್‌ಪ್ಲೇ ಬ್ಯುಸಿನೆಸ್‌ನ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್ ಈ ಕುರಿತು ಮಾತನಾಡಿ, ಟಿ20 ವಿಶ್ವಕಪ್‌ ಕ್ರಿಕೆಟ್ ಸಂದರ್ಭದಲ್ಲಿ ದೊಡ್ಡ ಗಾತ್ರದ ಪರದೆ ಮತ್ತು ಪ್ರೀಮಿಯಂ ವೀಕ್ಷಣೆಯ ಅನುಭವಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮ ‘ಬಿಗ್ ಟಿವಿ ಡೇಸ್’ ಮಾರಾಟವನ್ನು ಸೂಕ್ತವಾಗಿ ಆಯೋಜಿಸಲಾಗಿದೆ.

ನಿಯೋ ಕ್ಯೂಎಲ್‌ಇಡಿ, ಓಎಲ್‌ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್‌ಡಿ ಟಿವಿಗಳು ಸೇರಿದಂತೆ ನಮ್ಮ ಅಲ್ಟ್ರಾ-ಪ್ರೀಮಿಯಂ ಶ್ರೇಣಿಯ ಟಿವಿಗಳನ್ನು ಅತ್ಯಾಕರ್ಷಕ ಕೊಡುಗೆಗಳ ಜತೆಗೆ ನೀಡುವ ಮೂಲಕ ನಮ್ಮ ಗ್ರಾಹಕರಿಗೆ ತಮ್ಮ ಮನೆಗಳಲ್ಲಿ ನೇರವಾಗಿ ಕ್ರೀಡಾಂಗಣದಲ್ಲಿಯೇ ಕ್ರಿಕೆಟ್ ನೋಡುವಂತೆ ಅನ್ನಿಸುವ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ನಮ್ಮ ಅತ್ಯಾಧುನಿಕ ಎಐ-ಚಾಲಿತ ಟೆಲಿವಿಷನ್‌ಗಳಲ್ಲಿ ನಮ್ಮ ಗ್ರಾಹಕರು ಅಸಾಧಾರಣ ದೃಶ್ಯ ಗುಣಮಟ್ಟ, ಅಪೂರ್ವ ಆಡಿಯೋ ಮತ್ತು ಸಪೂರ ವಿನ್ಯಾಸಗಳನ್ನು ನಿರೀಕ್ಷೆ ಮಾಡಬಹುದು. ಇದಲ್ಲದೆ ಎಐ ಬಳಕೆಯಿಂದ 8ಕೆ ಎಐ ಅಪ್‌ಸ್ಕೇಲಿಂಗ್ ಮತ್ತು ಎಐ ಮೋಷನ್‌ ಎನ್ ಹ್ಯಾನ್ಸರ್ ಪ್ರೊ ನಂತಹ ಫೀಚರ್‌ಗಳು ಕ್ರಿಕೆಟ್ ನೇರಪ್ರಸಾರದ ಸಂದರ್ಭದಲ್ಲಿ ಬಾಲ್ ಅನ್ನು ಸ್ಪಷ್ಟವಾಗಿ ಕಾಣಿಸುವ ಮೂಲಕ ಗ್ರಾಹಕರಿಗೆ ಅದ್ಭುತ ಕ್ರಿಕೆಟ್ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ ಎಂದು ತಿಳಿಸಿದ್ದಾರೆ.

ಸ್ಯಾಮ್‌ಸಂಗ್ ಕಂಪನಿಯು ಭಾರತೀಯ ಗ್ರಾಹಕರಿಗಾಗಿಯೇ ಪ್ರಾದೇಶಿಕವಾಗಿ ಸಿದ್ಧಗೊಳಿಸಲಾದ ಸ್ಮಾರ್ಟ್ ಅನುಭವಗಳನ್ನು ನೀಡಲು ಈ ಟಿವಿಗಳಲ್ಲಿ ಗೇಮಿಂಗ್, ಮನರಂಜನೆ, ಶಿಕ್ಷಣ ಮತ್ತು ಫಿಟ್‌ನೆಸ್‌ನಂತಹ ಸೌಲಭ್ಯಗಳನ್ನು ಒದಗಿಸಿದೆ. ಕ್ಲೌಡ್ ಗೇಮಿಂಗ್ ಸೇವೆಯು ಬಳಕೆದಾರರಿಗೆ ಯಾವುದೇ ಕನ್ಸೋಲ್ ಅಥವಾ ಪಿಸಿ ಅಗತ್ಯವಿಲ್ಲದೆಯೇ ಎಎಎ ಗೇಮ್‌ಗಳನ್ನು ಪ್ಲಗ್ ಮತ್ತು ಪ್ಲೇ ಮೂಲಕ ಆಡಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: Battery Life Tips: ಈ 5 ಸಲಹೆ ಪಾಲಿಸಿ; ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಿ!

ಸ್ಯಾಮ್‌ಸಂಗ್ ಎಜುಕೇಶನ್ ಹಬ್ ಬಳಕೆದಾರರಿಗೆ ಲೈವ್ ತರಗತಿಗಳ ಜತೆಗೆ ದೊಡ್ಡ ಪರದೆಯ ಕಲಿಕೆಯನ್ನು ಒದಗಿಸುತ್ತಿದ್ದು, ನಿಮ್ಮ ಮಕ್ಕಳಿಗೆ ಹೆಚ್ಚು ಸಂವಾದಾತ್ಮಕ ಮತ್ತು ಖುಷಿದಾಯ ಕಲಿಕೆಯ ಸೌಲಭ್ಯ ಒದಗಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಟಿವಿ ಕೀ ಕ್ಲೌಡ್ ಸೇವೆಯ ಮೂಲಕ ಕ್ಲೌಡ್ ಮೂಲಕ ವಿಷಯದ ನೇರ ಪ್ರಸಾರವನ್ನು ಒದಗಿಸುವುದರಿಂದ ಗ್ರಾಹಕರಿಗೆ ಇನ್ನು ಮುಂದೆ ಸೆಟ್-ಟಾಪ್ ಬಾಕ್ಸ್ ಅಗತ್ಯ ಇರುವುದಿಲ್ಲ. ಸ್ಯಾಮ್‌ಸಂಗ್ ಟಿವಿ ಪ್ಲಸ್ ಫೀಚರ್ ಸುದ್ದಿ, ಚಲನಚಿತ್ರಗಳು, ಮನರಂಜನೆ ಮತ್ತು ಇತ್ಯಾದಿಗಳನ್ನು ವೀಕ್ಷಿಸಲು 100+ ಚಾನೆಲ್‌ಗಳನ್ನು ಉಚಿತವಾಗಿ ಒದಗಿಸುತ್ತದೆ.

ನಿಯೋ ಕ್ಯೂಎಲ್ಇಡಿ 8ಕೆ

ನಿಯೋ ಕ್ಯೂಎಲ್ಇಡಿ 8ಕೆ ಶ್ರೇಣಿಯು ಎನ್‌ಕ್ಯೂ8 ಎಐ ಜೆನ್2 ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಅದು ಎಐ-ಆಧರಿತ ಅನುಭವವನ್ನು ಒದಗಿಸುತ್ತದೆ ಮತ್ತು ಸ್ಪಷ್ಟವಾಗಿರುವ ಚಿತ್ರ ಗುಣಮಟ್ಟವನ್ನು ನೀಡುತ್ತದೆ. ಎನ್‌ಕ್ಯೂ8 ಎಐ ಜೆನ್2 ಪ್ರೊಸೆಸರ್, 256 ಎಐ ನ್ಯೂರಲ್ ನೆಟ್‌ವರ್ಕ್‌ಗಳಿಂದ ಚಾಲಿತವಾಗಿದ್ದು, ನೀವು ಓಟಿಟಿ ನೋಡುತ್ತಿರಲಿ, ನಿಮ್ಮ ಮೆಚ್ಚಿನ ವೀಡಿಯೊ ಗೇಮ್ ಗಳನ್ನು ಆಡುತ್ತಿರಲಿ ಅಥವಾ ಲೈವ್ ಕ್ರೀಡೆಗಳನ್ನು ವೀಕ್ಷಿಸುತ್ತಿರಲಿ ಎಲ್ಲಾ ಸಂದರ್ಭಗಳಲ್ಲೂ 8ಕೆ ಅನುಭವವನ್ನು ನೀಡುವಂತಹ ದೃಶ್ಯ ಮತ್ತು ಆಡಿಯೋ ಎರಡನ್ನೂ ಒದಗಿಸಲು ಸಹಾಯ ಮಾಡುತ್ತದೆ. ಸ್ಯಾಮ್‌ಸಂಗ್‌ನ ನಿಯೋ ಕ್ಯೂಎಲ್ಇಡಿ 8ಕೆ ಟಿವಿಗಳು ಮೋಷನ್ ಆಕ್ಸಲೇಟರ್ ಟರ್ಬೋ ಪ್ರೋ ಫೀಚರ್ ಹೊಂದಿದ್ದು, ಅದು ಹೆಚ್ಚಿನ ವೇಗದ ಗೇಮಿಂಗ್‌ ಆಡುವ ಸಂದರ್ಭದಲ್ಲಿ ದೃಶ್ಯಗಳನ್ನು ಸ್ಥಿರವಾಗಿ ಕಾಣಿಸುತ್ತದೆ ಮತ್ತು ಅಪೂರ್ವ ವೇಗವನ್ನು ಒದಗಿಸುತ್ತದೆ.

ನಿಯೋ ಕ್ಯೂಎಲ್ಇಡಿ 4ಕೆ 2024

ನಿಯೋ ಕ್ಯೂಎಲ್ಇಡಿ 4ಕೆ ಉತ್ಪನ್ನ ಶ್ರೇಣಿಯು ಎನ್‌ಕ್ಯೂ4 ಎಐ ಜೆನ್2 ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಈ ಪ್ರೊಸೆಸರ್ ಯಾವುದೇ ವಿಷಯವನ್ನು ಅದ್ಭುತವಾದ 4ಕೆ ದೃಶ್ಯಾವಳಿಯಲ್ಲಿ ತೋರಿಸುತ್ತದೆ ಮತ್ತು ಪ್ರತೀ ದೃಶ್ಯಕ್ಕೂ ಜೀವ ತುಂಬುತ್ತದೆ. ಕ್ವಾಂಟಮ್ ಮ್ಯಾಟ್ರಿಕ್ಸ್ ತಂತ್ರಜ್ಞಾನದಿಂದ ಮತ್ತಷ್ಟು ಶಕ್ತಿ ತುಂಬಲ್ಪಟ್ಟಿದ್ದು, ಸಂಕೀರಣ ದೃಶ್ಯಗಳಲ್ಲಿಯೂ ಅತ್ಯುತ್ತಮ ದೃಶ್ಯ ವೈಭವವನ್ನು ಒದಗಿಸುತ್ತದೆ. ಆಡಿಯೋ ಅನುಭವ ಉನ್ನತೀಕರಿಸಲು ಡಾಲ್ಬಿ ಅಟ್ಮೋಸ್ ವ್ಯವಸ್ಥೆ ಇದೆ. ಒಟ್ಟಾರೆ ನಿಯೋ ಕ್ಯೂಎಲ್ಇಡಿ 4ಕೆ ಶ್ರೇಣಿಯ ಟಿವಿಗಳು ಅತ್ಯದ್ಭುತ 4ಕೆ ಅನುಭವ ನೀಡುತ್ತವೆ.

ಕ್ಯೂಎಲ್ಇಡಿ ಟಿವಿ

ಸ್ಯಾಮ್‌ಸಂಗ್‌ನ ಕ್ಯೂಎಲ್ಇಡಿ ಟಿವಿ ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ ಅತ್ಯದ್ಭುತ ದೃಶ್ಯ ಗುಣಮಟ್ಟವನ್ನು ಒದಗಿಸುತ್ತದೆ. 100% ಬಣ್ಣ ಸ್ಪಷ್ಟತೆ ಹೊಂದಿರುವುದರಿಂದ ಈ ಟಿವಿ, ಎಷ್ಟೇ ಬ್ರೈಟ್‌ನೆಸ್ ಇದ್ದರೂ ಜಾಸ್ತಿ ಮಾಡಿದರೂ ಕಡಿಮೆ ಇದ್ದರೂ ಸೂಕ್ತವಾದ ಬಣ್ಣಗಳನ್ನೇ ಕಾಣಿಸುತ್ತವೆ. ಇದರ ಅಲ್ಟ್ರಾ-ಸ್ಲಿಮ್ ವಿನ್ಯಾಸವು ಯಾವುದೇ ರೀತಿ ಮನೆಯೊಳಗೆ ಸುಂದರವಾಗಿ ಕಾಣಿಸುತ್ತದೆ. ನೀವು ವಾಸಿಸುವ ಸ್ಥಳದ ಸೊಬಗನ್ನು ಹೆಚ್ಚಿಸುತ್ತದೆ.

ಒಎಲ್ಇಡಿ ಟಿವಿ

ಪ್ರಪಂಚದ ಮೊದಲ ಗ್ಲೇರ್-ಫ್ರೀ ಓಎಲ್ಇಡಿ ಟಿವಿ ಯಾವುದೇ ರೀತಿಯ ಬೆಳಕು ಇದ್ದರೂ ಗಾಢ ಕಪ್ಪು ಮತ್ತು ಸ್ಪಷ್ಟ ದೃಶ್ಯಗಳನ್ನು ಪ್ರಸಾರ ಮಾಡುವಾಗ ಯಾವುದೇ ರೀತಿಯ ಅನಗತ್ಯ ರಿಫ್ಲೆಕ್ಷನ್‌ಗಳನ್ನು (ಪ್ರತಿಬಿಂಬ) ಕಾಣಿಸುವುದಿಲ್ಲ. ಈ ಟಿವಿಗಳೂ ಅದೇ ಅಸಾಧಾರಣ ಎನ್‌ಕ್ಯೂ4 ಎಐ ಜೆನ್2 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ.

ಸ್ಯಾಮ್‌ಸಂಗ್‌ನ ಓಎಲ್ಇಡಿ ಟಿವಿಗಳು ರಿಯಲ್ ಡೆಪ್ತ್ ಎನ್‌ಹಾನ್ಸರ್ ಮತ್ತು ಒಎಲ್ಇಡಿ ಎಚ್‌ಡಿಆರ್ ಪ್ರೊನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ಅದರಿಂದ ದೃಶ್ಯದ ಗುಣಮಟ್ಟವನ್ನು ಮತ್ತಷ್ಟು ಉನ್ನತೀಕರಿಸುತ್ತದೆ. ಜತೆಗೆ ಮೋಷನ್ ಆಕ್ಸಲೇಟರ್ 144 ಹರ್ಟ್ಜ್ ಫೀಚರ್ ಸುಗಮ ಚಲನೆ ಮತ್ತು ವೇಗದ ತ್ವರಿತ ಪ್ರತಿಕ್ರಿಯೆ ಸೌಲಭ್ಯ ಒದಗಿಸುತ್ತಿದ್ದು, ಆದ್ದರಿಂದಲೇ ಸ್ಯಾಮ್ ಓಎಲ್ಇಡಿ ಗೇಮಿಂಗ್‌ಗೆ ಸೂಕ್ತ ಆಯ್ಕೆಯಾಗಿದೆ. ಸಪೂರವಾದ ವಿನ್ಯಾಸ ಹೊಂದಿರುವ ಈ ಓಎಲ್ಇಡಿ ಟಿವಿಗಳು ಮನೆಯಲ್ಲಿ ಎಲ್ಲಿ ಟಿವಿ ಇಟ್ಟಿದ್ದೀರೋ ಆ ಸ್ಥಳದ ಸೊಬಗು ಹೆಚ್ಚಿಸುತ್ತದೆ.

ಇದನ್ನೂ ಓದಿ: World Bicycle Day: ಸೈಕಲ್‌ ಹೊಡೆಯುವುದರ ಲಾಭಗಳು ನಾವಂದುಕೊಂಡಿದ್ದಕ್ಕಿಂತ ಹೆಚ್ಚು!

ಯುಎಚ್‌ಡಿ ಟಿವಿ

ಸ್ಯಾಮ್‌ಸಂಗ್‌ನ ಯುಎಚ್‌ಡಿ ಟಿವಿ ವಿಶಿಷ್ಟವಾದ ಕ್ರಿಸ್ಟಲ್ ಕಲರ್ ತಂತ್ರಜ್ಞಾನ ಹೊಂದಿದ್ದು, ಬಣ್ಣಗಳಿಗೆ ಜೀವ ತುಂಬುತ್ತದೆ, ಪ್ರತಿ ಛಾಯೆಯಲ್ಲೂ ಸೂಕ್ಷ್ಮ ವಿವರಗಳನ್ನು ಕಾಣಿಸುತ್ತದೆ ಮೋಷನ್ ಆಕ್ಸಲೇಟರ್ ಫೀಚರ್ ವೇಗವಾಗಿ ಚಲಿಸುವ ದೃಶ್ಯಗಳನ್ನು ಸುಗಮವಾಗಿ ಮತ್ತು ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರತಿ ಗೇಮ್, ಚಲನಚಿತ್ರ ಅಥವಾ ಯಾವುದೋ ಶೋ ಅನ್ನು ಹೆಚ್ಚು ಸೊಗಸಾಗಿ ಕಾಣಿಸುತ್ತದೆ ಮತ್ತು ಆನಂದಿಸುವಂತೆ ಮಾಡುತ್ತದೆ.

Continue Reading

ಕರ್ನಾಟಕ

Gold Rate Today: ಚಿನ್ನ ಕೊಳ್ಳಲು ಇದೇ ಸೂಕ್ತ ಸಮಯ; ಮತ್ತೆ ಬಂಗಾರದ ದರ ಇಳಿಕೆ

Gold Rate Today:ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹ 6,610 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 7,211 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 52,880 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹66,100 ಮತ್ತು ₹6,61,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,211 ಆಗಿದ್ದು, ಎಂಟು ಗ್ರಾಂ ಬೆಲೆ ₹57,688ಕ್ಕೆ ಇಳಿದಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72,110 ಮತ್ತು ₹7,21,100 ವೆಚ್ಚವಾಗಲಿದೆ.

VISTARANEWS.COM


on

gold rate today
Koo

ಬೆಂಗಳೂರು: ಚಿನ್ನ ಕೊಳ್ಳುವವರಿಗೆ ಇಂದು ತುಸು ಸಮಾಧಾನದ ಸುದ್ದಿ ಹೊರ ಬಿದ್ದಿದೆ. ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today)ಯಲ್ಲಿ ತುಸು ಇಳಿಕೆ ಕಂಡಿದೆ. ಇಂದು (ಸೋಮವಾರ) 1 ಗ್ರಾಂ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನದ ಬೆಲೆ ಕ್ರಮವಾಗಿ ₹ 40 ಮತ್ತು ₹ 44 ಇಳಿಕೆಯಾಗಿದೆ. ಇಂದಿನ ಬೆಂಗಳೂರು ಸುವರ್ಣ ಮಾರುಕಟ್ಟೆಯ ದರಗಳು ಹೀಗಿವೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹ 6,610 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 7,211 ಇದೆ. 22 ಕ್ಯಾರೆಟ್‌ನ ಎಂಟು ಗ್ರಾಂ ಚಿನ್ನದ ಬೆಲೆ ₹ 52,880 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹66,100 ಮತ್ತು ₹6,61,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,211 ಆಗಿದ್ದು, ಎಂಟು ಗ್ರಾಂ ಬೆಲೆ ₹57,688ಕ್ಕೆ ಇಳಿದಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72,110 ಮತ್ತು ₹7,21,100 ವೆಚ್ಚವಾಗಲಿದೆ.

ನಗರ22 ಕ್ಯಾರಟ್ (10 ಗ್ರಾಂ)24 ಕ್ಯಾರಟ್ (10 ಗ್ರಾಂ)
ದಿಲ್ಲಿ₹ 66,250₹ 72,600
ಮುಂಬೈ₹ 66,100₹ 72,110
ಬೆಂಗಳೂರು₹ 66,100₹ 72,110
ಚೆನ್ನೈ₹ 66,660₹ 72,270

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ: ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: Lok Sabha Election 2024: ಬಿಜೆಪಿ ಫೈರ್‌ ಬ್ರ್ಯಾಂಡ್‌ಗಳ ಸೋಲು ಗೆಲುವಿನ ಲೆಕ್ಕಾಚಾರ ಹೇಗಿದೆ? ಎಕ್ಸಿಟ್‌ ಪೋಲ್‌ ಹೇಳೋದೇನು?

Continue Reading

ಪ್ರಮುಖ ಸುದ್ದಿ

Stock Market News: ಮೋದಿ ಸರಕಾರ ಪುನರಾಗಮನಕ್ಕೆ ಷೇರು ಮಾರುಕಟ್ಟೆ ಹರ್ಷ, ಸೆನ್ಸೆಕ್ಸ್‌- ನಿಫ್ಟಿ ದಾಖಲೆ ಏರಿಕೆ

Stock Market News: ಎಕ್ಸಿಟ್‌ ಪೋಲ್‌ಗಳು ಷೇರು ಮಾರುಕಟ್ಟೆಯಲ್ಲಿಸಂಚಲನ ಉಂಟುಮಾಡಿವೆ. ಬಿಎಸ್‌ಇ ಸೆನ್ಸೆಕ್ಸ್ (BSE Sensex) 2,622 ಪಾಯಿಂಟ್‌ಗಳಷ್ಟು ಏರಿದೆ. ಶೇಕಡಾ 3.5ರಷ್ಟು ಏರಿಕೆ ಕಂಡಿದ್ದು, ದಾಖಲೆಯ ಗರಿಷ್ಠ 76,583 ಮಟ್ಟವನ್ನು ತಲುಪಿದೆ. ಎನ್‌ಎಸ್‌ಇ ನಿಫ್ಟಿ (NSE Nifty) 807 ಪಾಯಿಂಟ್‌ಗಳಷ್ಟು ಏರಿಕೆ ಕಂಡು 23,337 ಮಟ್ಟಕ್ಕೆ ತಲುಪಿದೆ.

VISTARANEWS.COM


on

stock market news narendra modi
Koo

ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಎನ್‌ಡಿಎ (NDA) ಸರ್ಕಾರಕ್ಕೆ ಸ್ಪಷ್ಟ ಜಯವನ್ನು ಸೂಚಿಸುವ ಎಕ್ಸಿಟ್‌ ಪೋಲ್‌ (Exit Poll) ಫಲಿತಾಂಶಗಳ ಹಿನ್ನೆಲೆಯಲ್ಲಿ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರುಗಳು (Stock Market news) ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು.

ಬಿಎಸ್‌ಇ ಸೆನ್ಸೆಕ್ಸ್ (BSE Sensex) 2,622 ಪಾಯಿಂಟ್‌ಗಳಷ್ಟು ಏರಿದೆ. ಶೇಕಡಾ 3.5ರಷ್ಟು ಏರಿಕೆ ಕಂಡಿದ್ದು, ದಾಖಲೆಯ ಗರಿಷ್ಠ 76,583 ಮಟ್ಟವನ್ನು ತಲುಪಿದೆ. ಎನ್‌ಎಸ್‌ಇ ನಿಫ್ಟಿ (NSE Nifty) 807 ಪಾಯಿಂಟ್‌ಗಳಷ್ಟು ಏರಿಕೆ ಕಂಡು 23,337 ಮಟ್ಟಕ್ಕೆ ತಲುಪಿದೆ.

ಪವರ್ ಗ್ರಿಡ್, ಎಲ್&ಟಿ, ಎನ್‌ಟಿಪಿಸಿ, ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಎಂ&ಎಂ, ಐಸಿಐಸಿಐ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಸೆನ್ಸೆಕ್ಸ್‌ನಲ್ಲಿ ಮುನ್ನುಗ್ಗಿದವು. ಈ ಷೇರುಗಳು ಶೇ.3ರಿಂದ ಶೇ.7ರ ಏರಿಕೆ ಕಂಡವು. ವಿದೇಶಿ ಮಾರುಕಟ್ಟೆಗಳಲ್ಲಿ ನಿಫ್ಟಿ ಸ್ಮಾಲ್‌ಕ್ಯಾಪ್ ಶೇಕಡಾ 2.73ರಷ್ಟು ಏರಿದರೆ ಮಿಡ್‌ಕ್ಯಾಪ್ ಶೇಕಡಾ 2.5 ರಷ್ಟು ಜಿಗಿದಿದೆ. ವಲಯವಾರು ನಿಫ್ಟಿಯಲ್ಲಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕ (ಶೇ. 5), ನಿಫ್ಟಿ ರಿಯಾಲ್ಟಿ (ಶೇ. 4), ಮತ್ತು ನಿಫ್ಟಿ ಬ್ಯಾಂಕ್ (ಶೇ. 3) ಗಳು ಏರಿಕೆ ರ್ಯಾಲಿಯನ್ನು ಮುನ್ನಡೆಸಿದವು.

ವೈಯಕ್ತಿಕ ಸ್ಟಾಕ್‌ಗಳಲ್ಲಿ ಅದಾನಿ ಪೋರ್ಟ್ಸ್, ಶ್ರೀರಾಮ್ ಫೈನಾನ್ಸ್ ಮತ್ತು ಪವರ್ ಗ್ರಿಡ್ ಆರಂಭಿಕ ವಹಿವಾಟಿನಲ್ಲಿ ಟಾಪ್ ಪರ್ಫಾರ್ಮರ್‌ಗಳಾಗಿದ್ದು, ಪ್ರತಿಯೊಂದೂ 6-9 ಪ್ರತಿಶತದಷ್ಟು ಏರಿವೆ. ಅದಾನಿ ಇಂಟರ್‌ನ್ಯಾಶನಲ್ ಪೋರ್ಟ್ಸ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್ (AIPH) ಟಾಂಜಾನಿಯಾದ ಡಾರ್ ಎಸ್ ಸಲಾಮ್ ಬಂದರಿನಲ್ಲಿ ಕಂಟೈನರ್ ಟರ್ಮಿನಲ್ 2 ಅನ್ನು ನಿರ್ವಹಿಸಲು ತಾಂಜಾನಿಯಾ ಪೋರ್ಟ್ಸ್ ಅಥಾರಿಟಿಯೊಂದಿಗೆ 30 ವರ್ಷಗಳ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅದಾನಿ ಪೋರ್ಟ್ಸ್ ಷೇರುಗಳು ಸುಮಾರು 9 ಪ್ರತಿಶತ ಲಾಭ ಗಳಿಸಿದವು.

ತಜ್ಞರ ಪ್ರಕಾರ, ಮೇ ತಿಂಗಳಲ್ಲಿ ಕಂಡುಬಂದಿರುವ ಮಾರುಕಟ್ಟೆಯ ಚಂಚಲತೆಯು, ಜೂನ್ 4ರಂದು ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಕಡಿಮೆಯಾಗಬಹುದು. “ಚುನಾವಣಾ ಫಲಿತಾಂಶದವರೆಗೆ ನಮ್ಮ ಮಾರುಕಟ್ಟೆಗಳು ದುರ್ಬಲವಾಗಿರುತ್ತವೆ ಮತ್ತು ಈ ಸಮಯದಲ್ಲಿ ಚಂಚಲವಾಗಿರುವ ಸಾಧ್ಯತೆಯಿದೆ” ಎಂದು ಏಂಜೆಲ್ ಒನ್‌ನ ಹೆಡ್ ರಿಸರ್ಚ್ ಸಮೀತ್ ಹೇಳಿದ್ದಾರೆ. ಚುನಾವಣೆಯ ನಂತರ ಮಾರುಕಟ್ಟೆಯ ಗಮನವು ಹೊಸ ಸರ್ಕಾರ ಮತ್ತು ಯೂನಿಯನ್ ಬಜೆಟ್‌ನ ಮೊದಲ 100 ದಿನಗಳತ್ತ ಬದಲಾಗುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ನಿಫ್ಟಿ ಕೂಡ 23,800 ತಲುಪಬಹುದು ಎಂದು ಅಂದಾಜಿಸಲಾಗಿದೆ.

ಮಾರುಕಟ್ಟೆಯ ಇನ್ನಷ್ಟು ರ್ಯಾಲಿಯನ್ನು ಲಾರ್ಜ್‌ಕ್ಯಾಪ್‌ಗಳು ಮುನ್ನಡೆಸುವ ಸಾಧ್ಯತೆಯಿದೆ. RIL, ICICI ಬ್ಯಾಂಕ್, HDFC ಬ್ಯಾಂಕ್, ಕೋಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್, L&T, M&M, Tata Motors, Bajaj Auto, Eicher Motors ನಂತಹ ಸ್ಟಾಕ್‌ಗಳು ಮೂಲಭೂತವಾಗಿ ಪ್ರಬಲ ಲಾರ್ಜ್‌ಕ್ಯಾಪ್‌ಗಳು. TCS, Infy, HCL Tech, Coforge, Persistent ಮತ್ತು L&T ಟೆಕ್‌ನಂತಹ IT ಸ್ಟಾಕ್‌ಗಳು ವ್ಯತಿರಿಕ್ತ ಖರೀದಿ ಅವಕಾಶಗಳನ್ನು ನೀಡುತ್ತವೆ. ಶುಕ್ರವಾರ ಬಂದ ಜಿಡಿಪಿ ಸಂಖ್ಯೆ 8.2% ಬೆಳವಣಿಗೆಯೊಂದಿಗೆ ನಿರೀಕ್ಷೆಗಿಂತ ಉತ್ತಮವಾಗಿವೆ. ಇದು ಮಾರುಕಟ್ಟೆಗೆ ಮೂಲಭೂತ ಬೆಂಬಲವನ್ನು ನೀಡಿದೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: 2024ರ ಸೈಬರ್‌ ಸೆಕ್ಯುರಿಟಿ ಟ್ರೆಂಡ್‌ಗಳು

Continue Reading
Advertisement
Stock Market
ವಾಣಿಜ್ಯ8 mins ago

Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್‌ ಏರಿಕೆ

Dharwad Lok Sabha Constituency
ಧಾರವಾಡ16 mins ago

Dharwad Lok Sabha Constituency: ಜೋಶಿ vs ಅಸೂಟಿ; ಯಾವ ಅಭ್ಯರ್ಥಿಗೆ ಧಾರವಾಡ ಪೇಡಾ?

Anant Ambani Radhika Merchant Pre Wedding
ಫ್ಯಾಷನ್30 mins ago

Anant Ambani Radhika Merchant Pre Wedding: ಅಂಬಾನಿ ಫ್ಯಾಮಿಲಿಯ ಕ್ರ್ಯೂಸ್ ಟೂರ್‌ನಲ್ಲಿ ಸ್ಟಾರ್‌ಗಳ ಮಕ್ಕಳ ಲುಕ್‌ ಹೇಗಿದೆ ನೋಡಿ!

Vijaypur Lok Sabha Constituency
ವಿಜಯಪುರ35 mins ago

Vijaypur Lok Sabha Constituency: ವಿಜಯಪುರದಲ್ಲಿ ಅಧಿಕಾರದ ‘ಗೋಲ ಗುಮ್ಮಟ’ ಯಾರಿಗೆ?

IND vs PAK
ಕ್ರಿಕೆಟ್47 mins ago

IND vs PAK: ಸ್ನೈಪರ್ ಗನ್​ ಕಣ್ಗಾವಲಿನಲ್ಲಿ ಭಾರತ-ಪಾಕ್ ಟಿ20​ ವಿಶ್ವಕಪ್​ ಪಂದ್ಯ

Lok Sabha Election Result 2024
ದೇಶ57 mins ago

Lok Sabha Election Result 2024: ನಾಳೆ ಲೋಕಸಭೆ ಚುನಾವಣೆ ಫಲಿತಾಂಶ; ಯಾರಿಗೆ ಅಧಿಕಾರ? ನಿಮ್ಮ ಅಭಿಪ್ರಾಯ ತಿಳಿಸಿ

Maldives
ವಿದೇಶ1 hour ago

Maldives: ಇಸ್ರೇಲಿಗರ ಪ್ರವೇಶವನ್ನು ನಿಷೇಧಿಸಿದ ಮಾಲ್ಡೀವ್ಸ್‌; ಭಾರತದ ಬೀಚ್‌ಗೆ ತೆರಳಿ ಎಂದು ತಿರುಗೇಟು ನೀಡಿದ ಇಸ್ರೇಲ್‌

Cow including lineman dies of electric shock
ಉಡುಪಿ1 hour ago

Electric shock : ಪ್ರತ್ಯೇಕ ಕಡೆ‌ ಕರೆಂಟ್‌ ಶಾಕ್‌ಗೆ ಲೈನ್‌ಮ್ಯಾನ್‌ ಸೇರಿ ಹಸು ಬಲಿ

Rave Party
ಕರ್ನಾಟಕ1 hour ago

Rave Party: ರೇವ್ ಪಾರ್ಟಿ ಪ್ರಕರಣ; ವಿಚಾರಣೆಗೆ ಹಾಜರಾದ ತೆಲುಗು ನಟಿ ಹೇಮಾ ಅರೆಸ್ಟ್‌

Saree Fashion
ಫ್ಯಾಷನ್2 hours ago

Saree Fashion: ರಫಲ್‌ ಡಿಸೈನ್‌ನಲ್ಲಿ ಬಂದಿದೆ ಜಾರ್ಜೆಟ್ ಲೆಹೆಂಗಾ ಸೀರೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌