ವಿಸ್ತಾರ TOP 10 NEWS: ಏರೋ ಇಂಡಿಯಾಗಾಗಿ ಬೆಂಗಳೂರಿಗೆ ಬಂದಿಳಿದ ಮೋದಿ, 2024ರಲ್ಲಿ ಪಾಕಿಸ್ತಾನ ದಿವಾಳಿ ಹಾಗೂ ಇನ್ನಿತರ ಪ್ರಮುಖ ಸುದ್ದಿಗಳಿವು - Vistara News

ಕರ್ನಾಟಕ

ವಿಸ್ತಾರ TOP 10 NEWS: ಏರೋ ಇಂಡಿಯಾಗಾಗಿ ಬೆಂಗಳೂರಿಗೆ ಬಂದಿಳಿದ ಮೋದಿ, 2024ರಲ್ಲಿ ಪಾಕಿಸ್ತಾನ ದಿವಾಳಿ ಹಾಗೂ ಇನ್ನಿತರ ಪ್ರಮುಖ ಸುದ್ದಿಗಳಿವು

ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.

VISTARANEWS.COM


on

vistara-top-10-Prime minister narendra modi arrive to inaugurate aero india to report about pakistan and more news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1. Aero India 2023: ಏರೋ ಇಂಡಿಯಾದಿಂದ ಕರ್ನಾಟಕದ ಯುವಕರಿಗೆ ಹೆಚ್ಚಿನ ಉದ್ಯೋಗ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌
ಬೆಂಗಳೂರಿನಲ್ಲಿ ಏರೋ ಇಂಡಿಯಾ ಆಯೋಜನೆ ಆಗುತ್ತಿರುವುದು ಇಲ್ಲಿನ ಕೌಶಲ್ಯಯುತ ಯುವಕರಿಗೆ ಉದ್ಯೋಗ ಸೃಜನೆ ಮಾಡಲು ಪೂರಕವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರದಿಂದ ಆರಂಭವಾಗಲಿರುವ ಏರೋ ಇಂಡಿಯಾ 2023ರ (Aero India 2023) ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಏರೋ ಇಂಡಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದು, ಈಗಾಗಲೆ ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ. ಒಟ್ಟು ಐದು ದಿನ ನಡೆಯುವ ಏರೋ ಇಂಡಿಯಾದಲ್ಲಿ ಮೊದಲ ಮೂರು ದಿನ ಉದ್ಯಮಗಳಿಗೆ ಮಾತ್ರ ಸೀಮಿತವಾಗಿದ್ದು, ಫೆಬ್ರವರಿ 16 ಹಾಗೂ 17ರಂದು ಸಾರ್ವಜನಿಕರ ವೀಕ್ಷಣೆಗೂ ಅವಕಾಶವಿರುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Appointments of Governors: ಆಂಧ್ರಕ್ಕೆ ನಿವೃತ್ತ ಜಡ್ಜ್, ಕನ್ನಡಿಗ ಅಬ್ದುಲ್ ನಜೀರ್ ರಾಜ್ಯಪಾಲ, ಒಟ್ಟು 12 ಗವರ್ನರ್ ನೇಮಕ
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಕನ್ನಡಿಗರಾದ ಎಸ್ ಅಬ್ದುಲ್ ನಜೀರ್ (S Abdul Nazeer) ಅವರನ್ನು ಆಂಧ್ರ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಮತ್ತೊಂದೆಡೆ, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ರಾಜೀನಾಮೆಯನ್ನು ಅಂಗೀಕರಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಜಾರ್ಖಂಡ್ ರಾಜ್ಯಪಾಲರಾಗಿದ್ದ ರಮೇಶ್ ಬೈಸ್ ಅವರನ್ನು ಮಹಾರಾಷ್ಟ್ರಕ್ಕೆ ರಾಜ್ಯಪಾಲರಾಗಿ ನಿಯೋಜಿಸಲಾಗಿದೆ. ವಿವಿಧ ರಾಜ್ಯಗಳಿಗೆ 12 ರಾಜ್ಯಪಾಲರು ಮತ್ತು ಒಬ್ಬರು ಲೆಫ್ಟಿನೆಂಟ್ ಗೌವರ್ನರ್ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Justice Nazeer: ಆಂಧ್ರದ ನೂತನ ರಾಜ್ಯಪಾಲ ನ್ಯಾ. ಅಬ್ದುಲ್‌ ನಜೀರ್‌; ಅಯೋಧ್ಯೆ ತೀರ್ಪಿನಿಂದ ಗಮನ ಸೆಳೆದ ಕರಾವಳಿಯ ಸರಳ ಸಜ್ಜನ ಸಾಧಕ

3. JDS Politics: ಕಾಂಗ್ರೆಸ್‌ ಕಡೆ ಹೊರಟ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಅಶೋಕ್‌ ಬಾಣಾವರ JDS ಅಭ್ಯರ್ಥಿ: ಎಚ್‌.ಡಿ. ಕುಮಾರಸ್ವಾಮಿ ಘೋಷಣೆ
ಪಕ್ಷದೊಂದಿಗೆ ಸುಮಾರು ಎರಡು ವರ್ಷದಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್‌ ಕಡೆಗೆ ವಾಲಲು ಸಿದ್ಧವಾಗಿರುವ ಅರಸೀಕೆರೆ ಜೆಡಿಎಸ್‌(JDS Politics) ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಕುರುಬ ಸಮುದಾಯದ ಅಶೋಕ್‌ ಭಾಣಾವರ (ಬಿ.ಎಸ್‌. ಅಶೋಕ್‌) ಅವರನ್ನು ಅಭ್ಯರ್ಥಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: JDS Politics: ಕೆಂಪು ಗುಲಾಬಿ ಪ್ರಸಾದ ಆಗಿದೆ; ಅರಕಲಗೂಡು ಗೆದ್ದರೆ ಜೆಡಿಎಸ್‌ ಅಧಿಕಾರಕ್ಕೆ: ಎಚ್‌.ಡಿ. ರೇವಣ್ಣ ಪುತ್ರರಿಬ್ಬರ ಭವಿಷ್ಯವಾಣಿ

4. Pakistan economic crisis : ಪಾಕಿಸ್ತಾನ 2024ರ ಮಾರ್ಚ್‌ ವೇಳೆಗೆ ದಿವಾಳಿ ಸಂಭವ : ವರದಿ
ಪಾಕಿಸ್ತಾನ ಮುಂದಿನ 6 ತಿಂಗಳಿನಲ್ಲಿ ಸಾಲದ ಮರು ಪಾವತಿಗೆ ವಿಫಲವಾಗುವ ಹಾಗೂ 2024ರ ಮಾರ್ಚ್‌ ವೇಳೆಗೆ ದಿವಾಳಿಯಾಗುವ ನಿರೀಕ್ಷೆ ಇದೆ ಎಂದು ಬ್ಲೂಮ್‌ಬರ್ಗ್‌ ವರದಿ ತಿಳಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್‌ (International monetary fund) ಜೂನ್‌ ಅಂತ್ಯದ ತನಕ ನೆರವು ನೀಡಲಿದೆ. ಆದರೆ 2024ರ ಏಪ್ರಿಲ್‌ನಲ್ಲಿ ಪಾಕಿಸ್ತಾನ ದೊಡ್ಡ ಮೊತ್ತದ ಡಾಲರ್‌ ಸಾಲವನ್ನು ಮರು ಪಾವತಿಸಬೇಕಾಗುತ್ತದೆ. ಇದು ಭಾರಿ ಸವಾಲಾಗಿ ಪರಿಣಮಿಸಲಿದೆ. ಪಾಕಿಸ್ತಾನ ಈಗ 5.6 ಶತಕೋಟಿ ಡಾಲರ್‌ (ಅಂದಾಜು 45,360 ಕೋಟಿ ರೂ.) ವಿದೇಶಿ ವಿನಿಮಯ ಸಂಗ್ರಹವನ್ನು (Foreign exchange reserve) ಹೊಂದಿದೆ. ಇದು 6 ತಿಂಗಳಿನ ತನಕ ಸಾಲದ ನಿರ್ವಹಣೆಗೆ ಸಾಕು. ಬಳಿಕ ಸುಸ್ತಿಸಾಲಗಾರನಾಗುವ (default) ಅಪಾಯ ಇದೆ ಎಂದು ಬ್ಲೂಮ್‌ಬರ್ಗ್‌ ವರದಿ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಭಾರತದಲ್ಲೂ ಭೂಕಂಪ?; ಟರ್ಕಿ-ಸಿರಿಯಾದಲ್ಲಿ 3ದಿನ ಮೊದಲೇ ಪ್ರಬಲ ಭೂಕಂಪದ ಎಚ್ಚರಿಕೆ ಕೊಟ್ಟಿದ್ದ ಡಚ್​ ಸಂಶೋಧಕ ಹೇಳೋದೇನು?
ಡಚ್​ ಸಂಶೋಧಕ ಫ್ರಾಂಕ್ ಹೂಗರ್​ಬೀಟ್ಸ್​ ಈಗ ಮತ್ತೊಂದು ಅಂದಾಜು ಮಾಡಿದ್ದಾರೆ. ಅತಿಶೀಘ್ರದಲ್ಲೇ ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲೂ ಭೂಕಂಪನ ಉಂಟಾಗಬಹುದು ಎಂದು ಹೇಳಿದ್ದು, ಆ ವಿಡಿಯೊ ಕೂಡ ವೈರಲ್ ಆಗುತ್ತಿದೆ. ಅಫ್ಘಾನಿಸ್ತಾನ ಭೂಕಂಪನದ ಕೇಂದ್ರಬಿಂದು ಆಗಬಹುದು. ಅದು ಪಾಕಿಸ್ತಾನ ಮತ್ತು ಭಾರತದ ಮೇಲೆ ಪ್ರಭಾವ ಬೀರಬಹುದು ಎಂದು ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Turkey Earthquake: ಟರ್ಕಿಯಲ್ಲಿ ಪವಾಡ, ಕಟ್ಟಡದ ಅವಶೇಷಗಳಲ್ಲಿ 128 ತಾಸಿದ್ದೂ ಬದುಕಿದ 2 ತಿಂಗಳ ಶಿಶು
ಪ್ರಬಲ ಭೂಕಂಪದಿಂದ (Turkey Earthquake) ಟರ್ಕಿ ಹಾಗೂ ಸಿರಿಯಾ ಈಗ ಮಸಣದಂತಾಗಿವೆ. ಇದುವರೆಗೆ ಮೃತಪಟ್ಟವರ ಸಂಖ್ಯೆ ೨೮ ಸಾವಿರ ದಾಟಿದೆ. ನೂರಾರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣೆ ಕಾರ್ಯ ಮುಂದುವರಿದಿದೆ. ಆದಾಗ್ಯೂ, ಹಲವಾರು ಗಂಟೆಗಳ ಕಾಲ ಅವಶೇಷಗಳ ಅಡಿ ಸಿಲುಕಿದ ಕೆಲವೇ ಕೆಲವರು ಬದುಕುಳಿದಿದ್ದಾರೆ. ಇದೇ ರೀತಿ, ಅವಶೇಷಗಳ ಅಡಿಯಲ್ಲಿ ಐದು ದಿನ ಅಂದರೆ ೧೨೮ ಗಂಟೆ ಇದ್ದ ಎರಡು ತಿಂಗಳ ಹಸುಗೂಸೊಂದು ಪವಾಡಸದೃಶವಾಗಿ ಬದುಕುಳಿದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Women’s T20 World Cup : ವಿಶ್ವ ಕಪ್​ ಗೆದ್ದರೆ ಭಾರತ ಮಹಿಳೆಯರ ಕ್ರಿಕೆಟ್ ತಂಡದ ಭವಿಷ್ಯವೇ ಬದಲಾಗುವುದು
ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ವಿಶ್ವ ಕಪ್​ನಲ್ಲಿ (Women’s T20 World Cup) ಭಾರತ ತಂಡಕ್ಕೆ ಟ್ರೋಫಿ ಗೆಲ್ಲುವ ಎಲ್ಲ ಅವಕಾಶಗಳಿವೆ. ಒಂದು ವೇಳೆ ಗೆದ್ದರೆ ಮಹಿಳೆಯರ ಕ್ರಿಕೆಟ್​ನ ಸ್ವರೂಪವೇ ಬದಲಾಗುವುದು ಎಂಬುದಾಗಿ ಭಾರತ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಕೋಚ್​ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರ ವಿಶ್ವ ಕಪ್​ಗೆ ಈಗಾಗಲೇ ಆರಂಭಗೊಂಡಿದ್ದು, ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಫೆಬ್ರವರಿ 12ರಂದು ನಡೆಯಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Karnataka Election: ಅಹಿಂದ, ಮರಾಠದವರು ಶೇ. 74 ಇದ್ದೇವೆ; ನಾವೆಲ್ಲರೂ ಒಟ್ಟಾದರೆ ಏನಾಗತ್ತೆ?: ರಮೇಶ್‌ ಜಾರಕಿಹೊಳಿ
ಬೆಳಗಾವಿಯ ಮೂರು ಕ್ಷೇತ್ರದಲ್ಲಿ ಅಹಿಂದ, ಮರಾಠ ಸೇರಿದರೆ ಶೇಕಡಾ 74ರಷ್ಟು ಮತಗಳು ಆಗುತ್ತವೆ. ಇಲ್ಲಿ ಬಂದು ದೊಡ್ಡ ದೊಡ್ಡ ಮಾತನಾಡಿ ಹೋಗುತ್ತೀರಲ್ಲವೇ? ನಾವು ಒಂದಾದರೆ ಅವರ ಪರಿಸ್ಥಿತಿ ಏನಾಗುತ್ತದೆ? ಅಹಿಂದ ಇರಬಹುದು, ಮರಾಠ ಇರಬಹುದು ನಾವು ಒಂದು ಟಿಕೆಟ್ ಕೇಳುತ್ತೇವೆ. ಆರು ಪರ್ಸೆಂಟ್ ಇದ್ದವರು 50 ಟಿಕೆಟ್ ಕೇಳುತ್ತಾರೆ. ಚುನಾವಣೆ (Karnataka Election) ಆಗಲಿ ಈ ಸಮುದಾಯವನ್ನು ಒಗ್ಗೂಡಿಸುವೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarkhiholi) ಗುಡುಗಿದರು. ಈ ಮೂಲಕ ತಮ್ಮ ಎದುರಾಳಿಗಳಿಗೆ ತಿರುಗೇಟು ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Shivamogga Airport: ತಮ್ಮ ಹೆಸರು ಬೇಡ ಎಂದು ಬಿ.ಎಸ್.‌ ಯಡಿಯೂರಪ್ಪ ಪುನರುಚ್ಛಾರ: ರಾಷ್ಟ್ರಕವಿ ಕುವೆಂಪು ಹೆಸರನ್ನು ಸೂಚಿಸಿದ ಮಾಜಿ ಸಿಎಂ
ಇದೇ ತಿಂಗಳು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ(Shivamogga Airport) ತಮ್ಮ ಹೆಸರನ್ನು ನಾಮಕರಣ ಮಾಡುವುದು ಬೇಡ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಪುನರುಚ್ಛರಿಸಿದ್ದು, ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Pathaan Movie: ವಿಶ್ವಾದ್ಯಂತ 924 ಕೋಟಿ ರೂ. ಬಾಚಿದ ಪಠಾಣ್‌: ಚಿತ್ರತಂಡದಿಂದ ಅಧಿಕೃತ ಘೋಷಣೆ
ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಪಠಾಣ್‌ ಸಿನಿಮಾ (Pathaan Movie) ಈವರೆಗೂ 924 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಭಾರತದಲ್ಲಿ 572 ಕೋಟಿ ರೂ. ಹಾಗೂ ವಿದೇಶಗಳಲ್ಲಿ 352 ಕೋಟಿ ರೂ. ಲಾಭ ಮಾಡಿದೆ ಈ ಮಾಹಿತಿಯನ್ನು ಸ್ವತಃ ನಿರ್ಮಾಣ ಸಂಸ್ಥೆಯೇ ನೀಡಿದೆ. ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಹೆಚ್ಚಿನ ಓದಿಗಾಗಿ

  1. Hardik Pandya: ಭಾರತ ಟೆಸ್ಟ್‌ ತಂಡಕ್ಕೆ ಮರಳುವ ಬಗ್ಗೆ ಸುಳಿವು ನೀಡಿದ ಹಾರ್ದಿಕ್ ಪಾಂಡ್ಯ
  2. Kantara movie: ಕಾಂತಾರ ಸಿನಿಮಾ ಹಾಡಿನ ವೇಳೆ ಪಂಜುರ್ಲಿ ವೇಷಧಾರಿ ವಿದ್ಯಾರ್ಥಿ ಮೈಯಲ್ಲಿ ಆವೇಶ!
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೈಂ

Prajwal Revanna case: ಪ್ರಜ್ವಲ್‌ ರೇವಣ್ಣ ಮೇಲೆ ಸುಳ್ಳು ಆರೋಪ ನೀಡಲು ಒತ್ತಡ: ಮಹಿಳೆ ದೂರು

Prajwal Revanna case: ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ ರೇವಣ್ಣ (HD revanna jailed) ಅವರ ವಿರುದ್ಧ ರಾಜಕೀಯ ಪ್ರೇರಿತ ಸುಳ್ಳು ದೂರುಗಳನ್ನು ದಾಖಲಿಸಲಾಗುತ್ತಿದೆ ಎಂದು ಜೆಡಿಎಸ್‌ (JDS) ಪ್ರತಿಭಟನೆ ನಡೆಸುತ್ತಿರುವುದರ ಹಿನ್ನೆಲೆಯಲ್ಲಿ ಈ ದೂರು ಮಹತ್ವ ಪಡೆದುಕೊಂಡಿದೆ. ಸೂಕ್ತ ಭದ್ರತೆಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆ ಪತ್ರ ಬರೆದಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಈಗಾಗಲೇ ಲೈಂಗಿಕ ದೌರ್ಜನ್ಯ (Physical abuse) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna case) ವಿರುದ್ಧ ಸುಳ್ಳು ಕೇಸ್ (Fake case) ಹಾಕಲು ತನಗೆ ಒತ್ತಾಯಿಸಲಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (National Commission for Women) ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ ರೇವಣ್ಣ (HD revanna jailed) ಅವರ ವಿರುದ್ಧ ರಾಜಕೀಯ ಪ್ರೇರಿತ ಸುಳ್ಳು ದೂರುಗಳನ್ನು ದಾಖಲಿಸಲಾಗುತ್ತಿದೆ ಎಂದು ಜೆಡಿಎಸ್‌ (JDS) ಪ್ರತಿಭಟನೆ ನಡೆಸುತ್ತಿರುವುದರ ಹಿನ್ನೆಲೆಯಲ್ಲಿ ಈ ದೂರು ಮಹತ್ವ ಪಡೆದುಕೊಂಡಿದೆ. ಸೂಕ್ತ ಭದ್ರತೆಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆ ಪತ್ರ ಬರೆದಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡುವಂತೆ ನನಗೆ ಒತ್ತಡ ಹಾಕಲಾಗುತ್ತಿದೆ. ಮೂವರು ಸಿವಿಲ್ ಡ್ರೆಸ್‌ನಲ್ಲಿ ಬಂದವರು ಒತ್ತಡ ಹಾಕಿದ್ದು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆ ಪತ್ರ ಬರೆದಿದ್ದಾರೆ.

ಮಹಿಳೆ ಪತ್ರ ಬರೆದಿರುವ ಬಗ್ಗೆ ವಿಸ್ತಾರ ನ್ಯೂಸ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಮಾಹಿತಿ ನೀಡಿದೆ. ಹಾಸನ ಮೂಲದ ಮಹಿಳೆ ಪತ್ರ ಬರೆದಿದ್ದು, ಪತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ. ದೂರಿನ ಪ್ರತಿ ಹಾಗೂ ಸೂಕ್ತ ಭದ್ರತೆಗೆ ಮನವಿ ಮಾಡಲಾಗಿದೆ.

ಪ್ರಜ್ವಲ್ ಕೇಸ್‌ನಲ್ಲಿ ಮಹಿಳೆಗೆ ದೂರು ನೀಡುವಂತೆ ಒತ್ತಡ ಹಾಕಲಾಗ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆಯೋಗದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಇಂದು ಮತ್ತೆ ಪತ್ರ ಬರೆಯುತ್ತೇವೆ. ಆಯೋಗದ ಅಧಿಕಾರಿಗಳು ಪತ್ರ ಬರೆದ ಮಹಿಳೆಯನ್ನು ಭೇಟಿ ಮಾಡುತ್ತೇವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.

ವಕೀಲ ದೇವರಾಜೇಗೌಡ ಮೇಲೂ ಲೈಂಗಿಕ ದೌರ್ಜನ್ಯ ದೂರು

ಪೆನ್ ಡ್ರೈವ್ ಪ್ರಕರಣದಲ್ಲಿ (Prajwal Revanna Case) ಹೋರಾಟ ನಡೆಸುತ್ತಿದ್ದ ವಕೀಲ ದೇವರಾಜೇಗೌಡ (Devaraje Gowda) ವಿರುದ್ದ ಎಫ್ಐಆರ್ ದಾಖಲಾಗಿದೆ. ಮಹಿಳೆಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ಎಫ್ಐಆರ್ ದಾಖಲಾಗಿದೆ. ಹತ್ತು ತಿಂಗಳ ಹಿಂದೆ ಪರಿಚಯವಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪತಿಯು ಮಾಲೀಕತ್ವದ ಸೈಟ್ ವಿಚಾರವಾಗಿ ದೇವರಾಜೇಗೌಡ ಅವರನ್ನು ಸಂತ್ರಸ್ತ ಮಹಿಳೆ ಭೇಟಿಯಾಗಿದ್ದರು. ಆ ಪರಿಚಯವನ್ನು ದುರ್ಬಳಕೆ ಮಾಡಿಕೊಂಡು ವಾಟ್ಸ್​ಆ್ಯಪ್​ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪ ದೇವರಾಜ್ ವಿರುದ್ಧ ಕೇಳಿ ಬಂದಿದೆ. ಅದೇ ರೀತಿ ಬಳಿಕ ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪವೂ ಕೇಳಿ ಬಂದಿದೆ.

ಮಹಿಳೆಗೆ ಫೋನ್ ಮಾಡಿ ತಾವು ಜೊತೆಯಲ್ಲಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡೋದಾಗಿ ಬೆದರಿಕೆ ಹಾಕಿದ ಆರೋಪವೂ ದಾಖಲಾಗಿದೆ. ಅದೇ ರೀತಿ ಮಹಿಳೆಗೆ ವಿಡಿಯೋ ಕಾಲ್‌ ಮಾಡಿ‌ ಖಾಸಗಿ ಅಂಗಗಳನ್ನು ಪ್ರದರ್ಶನದ ಮಾಡಿರುವ ಆರೋಪವೂ ದಾಖಲಾಗಿದೆ.

ತಾನು ಹೇಳಿದ ಹಾಗೆ ಕೇಳಬೇಕು.ಇಲ್ಲದೇ ಹೋದರೆ ಪತಿಯ ಜೀವಕ್ಕೆ ಪಾಯ ತಂದೊಡ್ಡುವುದಾಗಿ ದೇವರಾಜೇಗೌಡ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ತನ್ನ ಬೆಂಬಲಿಗರನ್ನು ಕಳುಹಿಸಿ ಜೀವ ಬೆದರಿಕೆ ಹಾಕಿದ ಅರೋಪವೂ ಕೇಳಿ ಬಂದಿದೆ. ಹಲವಾರು ಆರೋಪಗಳ ಮೇಲೆ ದೂರು ದಾಖಲಾಗಿದೆ. ಹೊಳೆನರಸೀಪುರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ

ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಕೆ.ಆರ್.‌ ನಗರದ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್‌ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ (HD Revanna) ಅವರಿಗೂ ನಿನ್ನೆಯೂ ಸಹ ಜಾಮೀನು ಸಿಕ್ಕಿಲ್ಲ. ಸಾಕಷ್ಟು ವಾದ – ಪ್ರತಿವಾದದ ಬಳಿಕ ಜನಪ್ರತಿನಿಧಿಗಳ ಕೋರ್ಟ್, ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದಿದೆ.

ಎಚ್.ಡಿ. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್, ಸೋಮವಾರ ಬೆಳಗ್ಗೆ 11.30ಕ್ಕೆ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸುವುದಾಗಿ ಮುಂದೂಡಿದೆ. ಕೋರ್ಟ್‌ಗೆ ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಸೋಮವಾರ ಸಮಯ ವ್ಯರ್ಥ ಮಾಡದೆ ಮಾಹಿತಿ ನೀಡುತ್ತೇವೆ. ಸೋಮವಾರದವರೆಗೆ ವಿಚಾರಣೆ ಮುಂದೂಡಬೇಕೆಂದು ವಿಶೇಷ ಸಾರ್ವಜನಿಕ ಅಭಿಯೋಜಕರು (ಎಸ್‌ಪಿಪಿ) ನ್ಯಾಯಾಧೀಶರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸೋಮವಾರಕ್ಕೆ ಮುಂದೂಡಿಕೆ ಮಾಡಿ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಆದೇಶವನ್ನು ನೀಡಿದ್ದಾರೆ.

ಎಸ್ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆ ಮಾಡಿದ್ದು, ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ, ವಿಳಂಬದ ಉದ್ದೇಶವಿಲ್ಲ. ನಾವು ವಾದ ಮಂಡಿಸಲು ಸ್ವಲ್ಪ ಸಮಯಾವಕಾಶ ಬೇಕಾಗಿದೆ ಎಂದು ಕೋರ್ಟ್‌ ಮುಂದೆ ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ನೀವು ಹಿರಿಯ ವಕೀಲರು ಇದ್ದೀರಿ, ವಿಳಂಬ ಮಾಡಬೇಡಿ
ಎಸ್‌ಐಟಿ ಪರ ವಕೀಲರಿಗೆ ಸೂಚಿಸಿದರು. ಅದಕ್ಕೆ ಒಪ್ಪಿದ ಜಯ್ನಾ ಕೊಠಾರಿ, ಕೋರ್ಟ್‌ಗೆ ಮತ್ತಷ್ಟು ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಯಾವುದೇ ಕಾರಣಕ್ಕೂ ಸೋಮವಾರ ‌ಸಮಯ ವ್ಯರ್ಥ ಮಾಡಲ್ಲ ಎಂದು ಮನವಿ ಮಾಡಿದರು.

ಇದನ್ನೂ ಓದಿ: Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: SSLC Result 2024: ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತದ ಜೊತೆಗೆ ಸಿಹಿ ಸುದ್ದಿಯೂ ಇದೆ

SSLC Result 2024: ನಿಜಕ್ಕೂ ಸಿಹಿ ಸುದ್ದಿ ಎಂದರೆ ಇನ್ನೆರಡು ಬಾರಿ ಪರೀಕ್ಷೆ ಬರೆಯುವ ಅವಕಾಶ. ಅನುತ್ತೀರ್ಣರಾದ ಹಾಗೂ ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದೆಂಬ ಉದ್ದೇಶದಿಂದ ಇದೇ‌ ಮೊದಲ ಬಾರಿಗೆ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಮಾದರಿಯಲ್ಲಿ ಮೂರು ಬಾರಿ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಪರೀಕ್ಷೆಯ ಅಂಕಗಳು ಸಮಾಧಾನ ತರದಿದ್ದಲ್ಲಿ ಇಡೀ ಪರೀಕ್ಷೆಯನ್ನು ಮರಳಿ ಬರೆಯಬಹುದು.

VISTARANEWS.COM


on

karnataka SSLC result 2024
Koo

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Result 2024) ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಈ ಬಾರಿಯ ಫಲಿತಾಂಶ ನೋಡಿ ಸಂತೋಷಪಡುವುದಕ್ಕೂ, ಗಾಬರಿಯಾಗುವುದಕ್ಕೂ ಕಾರಣಗಳಿವೆ.

ಮೊದಲನೆಯದಾಗಿ, ಕಳಪೆ ಫಲಿತಾಂಶ. ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿದೆ. 2022-23ರಲ್ಲಿ 83.89% ಇದ್ದರೆ, ಈ ಬಾರಿ 73.40% ಮಂದಿ ಪಾಸ್ ಆಗಿದ್ದಾರೆ. ಅಂದರೆ ಶೇಕಡಾ 10.49%ರಷ್ಟು ಫಲಿತಾಂಶ ಕುಸಿತವಾಗಿದೆ. ಆದರೆ ಇದು ಕೂಡ ನಿಜವಾದ ಕುಸಿತವಲ್ಲ. ಶಿಕ್ಷಣ ಇಲಾಖೆ ಈ ಬಾರಿ ವಿದ್ಯಾರ್ಥಿಗಳಿಗೆ ಬರೋಬ್ಬರಿ 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌ ಅನ್ನು ಕೊಟ್ಟಿದೆ. ಫಲಿತಾಂಶ ಹೆಚ್ಚಿಸಲು ಶಿಕ್ಷಣ ಇಲಾಖೆ ಸರ್ಕಸ್ ಮಾಡಿದ್ದು, ಶೇಕಡಾ 20 ಗ್ರೇಸ್ ಮಾರ್ಕ್ಸ್‌ ಕೊಟ್ಟರೂ ಕಡಿಮೆ ಫಲಿತಾಂಶ ದಾಖಲಾಗಿದೆ. ವಿದ್ಯಾರ್ಥಿ ಹಿತದೃಷ್ಟಿಯಿಂದ ಗ್ರೇಸ್‌ ಮಾರ್ಕ್ಸ್‌ ನೀಡಲಾಗಿದೆ. ಒಟ್ಟು 1 ಲಕ್ಷದ 70 ಸಾವಿರ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್‌ ಸಿಕ್ಕಿದೆ. ಇಷ್ಟಾಗಿಯೂ ಫಲಿತಾಂಶ ಮಾತ್ರ ಕಡಿಮೆಯೇ.

ಕೃಪಾಂಕಗಳ ಹಿಂದೊಂದು ಕತೆಯಿದೆ. ಹಲವು ಕಡೆ ಸಾಮೂಹಿಕ ನಕಲು ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಪ್ರಪ್ರಥಮ ಬಾರಿಗೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲಕ ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿಯನ್ನು ಪರಿಚಯಿಸಲಾಗಿತ್ತು. ಪರೀಕ್ಷಾ ಕೊಠಡಿಗಳ ದೃಶ್ಯಾವಳಿಗಳನ್ನು ಮೇಲ್ವಿಚಾರಣೆ ಮಾಡಲು ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಇದರ ಪರಿಣಾಮವೇ ಈ ಫಲಿತಾಂಶ. ಇದರಿಂದ ಒಟ್ಟಾರೆ ಫಲಿತಾಂಶ ಕಳೆದ ವರ್ಷಕ್ಕಿಂತ ಶೇ. 30ರಷ್ಟು ಕಡಿಮೆಯಾಗಿದೆ. ಇದರಿಂದ ಗಾಬರಿ ಬಿದ್ದ ಇಲಾಖೆ, ವಿದ್ಯಾರ್ಥಿಗಳ ಹಾಗೂ ಒಟ್ಟಾರೆ ಶೈಕ್ಷಣಿಕ ಆವರಣದ ನೈತಿಕ ಸ್ಥೈರ್ಯ ಕುಸಿಯದಿರಲಿ ಎಂಬ ದೃಷ್ಟಿಯಿಂದ ಭಾರಿ ಪ್ರಮಾಣದ ಕೃಪಾಂಕ ನೀಡಿದೆ. ಇದೇನೂ ಒಳ್ಳೆಯ ಸುದ್ದಿಯಲ್ಲ. ನಕಲು ನಡೆಯುತ್ತಿದ್ದುದರಿಂದ ಉತ್ತಮ ಫಲಿತಾಂಶ ದೊರೆಯುತ್ತಿತ್ತು ಎಂಬುದನ್ನು ಇಲಾಖೆ ಒಪ್ಪಿಕೊಂಡ ಹಾಗಾಗಿದೆ. ವೆಬ್ ಕಾಸ್ಟಿಂಗ್ ಪರಿಣಾಮ ನಕಲು ನಿಂತುದು ಒಳ್ಳೆಯ ಸಂಗತಿಯೇ. ಆದರೆ ಇದು ಪಾರದರ್ಶಕ ಪರೀಕ್ಷೆಯಲ್ಲಿ ತನ್ಮೂಲಕ ಉತ್ತಮ ಫಲಿತಾಂಶದಲ್ಲಿ ಕೊನೆಯಾಗಬೇಕಿದೆ. ಮುಂಬರುವ ವರ್ಷಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೂತನ ವ್ಯವಸ್ಥೆಗೆ ಉತ್ತಮವಾಗಿ ಹೊಂದಿಕೊಳ್ಳುವುದರಿಂದ ಫಲಿತಾಂಶ ವೃದ್ಧಿಯ ಅಗತ್ಯವಿರುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ. ಪರೀಕ್ಷೆಯ ಮೇಲೆ ನಿಗಾ ಇಡಲು ದುಡ್ಡು ಖರ್ಚು ಮಾಡಿದರೆ ಸಾಲದು, ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೂ ಹಾಗೆಯೇ ವೆಚ್ಚ ಮಾಡಿದರೆ ಉತ್ತಮ ಫಲಿತಾಂಶ ಬಂದೀತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್‌ ಆಗಿ ಹೊರಹೊಮ್ಮಿರುವ, 625ರಲ್ಲಿ ಅಷ್ಟೂ ಅಂಕಗಳನ್ನೂ ಬಾಚಿಕೊಂಡಿರುವ ಅಂಕಿತಾ ಕೊನ್ನೂರ್‌ ಹಳ್ಳಿಯೊಂದರ ರೈತರ ಮಗಳು. ಇದು ಗ್ರಾಮೀಣ ಪ್ರತಿಭೆಯ ದಿಗ್ವಿಜಯ ಎನ್ನಬಹುದು. ಈಕೆಗೆ ಐಎಎಸ್‌ ಅಧಿಕಾರಿಯಾಗುವ ಕನಸು ಇದೆಯಂತೆ. ಬಾಗಲಕೋಟೆ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ. ಪಠ್ಯದ ಜೊತೆಗೆ ಲೈಬ್ರರಿ ಹಾಗೂ ಯುಟ್ಯೂಬ್ ಮಾಹಿತಿಯನ್ನೂ ಸೂಕ್ತವಾಗಿ ಬಳಸಿಕೊಂಡು ಈಕೆ ಟಾಪರ್ ಆಗಿದ್ದಾಳೆ. ಎಲ್ಲ ಮಕ್ಕಳಿಗೂ ಮಾದರಿಯಾಗಿರುವ ಈಕೆಯ ಅಭಿನಂದನೆಗಳು ಸಲ್ಲುತ್ತವೆ. ನಮ್ಮ ಹಳ್ಳಿಯ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ದೊರೆತರೆ ದೊಡ್ಡ ಸಾಧನೆ ಮಾಡಬಲ್ಲರು ಎಂಬುದನ್ನು ನಾವು ಅರ್ಥ ಮಾಡಿಕೊಂಡರೆ ಸಾಕು.

ನಿಜಕ್ಕೂ ಸಿಹಿ ಸುದ್ದಿ ಎಂದರೆ ಇನ್ನೆರಡು ಬಾರಿ ಪರೀಕ್ಷೆ ಬರೆಯುವ ಅವಕಾಶ. ಅನುತ್ತೀರ್ಣರಾದ ಹಾಗೂ ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗಬಾರದೆಂಬ ಉದ್ದೇಶದಿಂದ ಇದೇ‌ ಮೊದಲ ಬಾರಿಗೆ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆ ಮಾದರಿಯಲ್ಲಿ ಮೂರು ಬಾರಿ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ. ಮೊದಲ ಪರೀಕ್ಷೆಯ ಅಂಕಗಳು ಸಮಾಧಾನ ತರದಿದ್ದಲ್ಲಿ ಇಡೀ ಪರೀಕ್ಷೆಯನ್ನು ಮರಳಿ ಬರೆಯಬಹುದು. ವಿಷಯವಾರು ಪರೀಕ್ಷೆಯನ್ನೂ ಬರೆಯಬಹುದು. ಎರಡು ಅಥವಾ ಮೂರು ಪರೀಕ್ಷೆಗಳಿಗೂ ಕುಳಿತುಕೊಳ್ಳಬಹುದು. ಯಾವುದೇ ವಿಷಯದಲ್ಲಿ ವಿದ್ಯಾರ್ಥಿ ಪಡೆದ ಗರಿಷ್ಠ ಅಂಕಗಳನ್ನು ಪರಿಗಣಿಸಲಾಗುತ್ತದೆ. ಇದು ಪರೀಕ್ಷಾ ವಿಧಾನದಲ್ಲಿ ಕ್ರಾಂತಿಕರ ಬದಲಾವಣೆ. ಈ ಬಾರಿ ಅನುತ್ತೀರ್ಣರಾದವರಿಗೆ ಹೇಗೂ ಪೂರಕ ಪರೀಕ್ಷೆ ಇದ್ದೇ ಇದೆ. ಆದ್ದರಿಂದ, ಇದೇ ನಿಜವಾಗಿಯೂ ಫಲಿತಾಂಶ ಹೆಚ್ಚಿಸುವ ವೈಜ್ಞಾನಿಕ ವಿಧಾನವಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾಂಗ್ರೆಸ್ ನಾಯಕನ ‘ವರ್ಣ ವ್ಯಾಖ್ಯಾನ’ ಅವಿವೇಕತನದ್ದು

Continue Reading

ಮಳೆ

Karnataka Weather : 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ; ಗುಡುಗು ಸಹಿತ ಭಾರಿ ಮಳೆಗೆ ಯೆಲ್ಲೋ ಅಲರ್ಟ್‌ ಘೋಷಣೆ

Karnataka Weather Forecast : ರಾಜ್ಯಾದ್ಯಂತ ಬಿರುಗಾಳಿ ಸಹಿತ ಗುಡುಗು ಮಿಂಚಿನ ಭಾರಿ ಮಳೆಯಾಗುವ (Heavy Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಆರು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಜೋರಾಗಿ ಗಾಳಿ ಬೀಸುವುದರಿಂದ ಮರದಡಿ ನಿಲ್ಲದಂತೆ ಸೂಚನೆ ನೀಡಲಾಗಿದೆ.

VISTARANEWS.COM


on

By

Karnataka Weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ದಕ್ಷಿಣ ಒಳನಾಡಿನಲ್ಲಿ ವ್ಯಾಪಕವಾಗಿ ಹಗುರದಿಂದ ಮಧ್ಯಮ ಮಳೆಯಾಗಲಿದ್ದು, ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಇನ್ನೂ ಕರಾವಳಿಐಲ್ಲಿ ಮಧ್ಯಮ ಮಳೆಯಾಗುವ (Rain News) ನಿರೀಕ್ಷೆ ಇದೆ. ಜತೆಗೆ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಿಂಚು ಮತ್ತು ಗಾಳಿಯು ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ, ಮಂಡ್ಯ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬಳ್ಳಾರಿ ಮತ್ತು ರಾಯಚೂರು ಹಾಗೂ ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯನಗರ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಹಗುರವಾದ ಮಳೆಯಾಗುವ ನಿರೀಕ್ಷೆ ಇದೆ.

ಮಲೆನಾಡಿನ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿರಲಿದೆ.

ಇದನ್ನೂ ಓದಿ: Akshaya Tritiya Fashion: ಅಕ್ಷಯ ತೃತೀಯಕ್ಕೆ ಬಂತು ಬಂಗಾರದ ಆಕರ್ಷಕ ಮೂಗಿನ ಸ್ಟಡ್ಸ್

ಬೆಂಗಳೂರಲ್ಲಿ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಯೆಲ್ಲೋ ಅಲರ್ಟ್‌

ಭಾರೀ ಮಳೆಯೊಂದಿಗೆ ಗುಡುಗು ಸಹಿತ ಬಿರುಗಾಳಿ (ಗಂಟೆಗೆ 40-50 ಕಿ.ಮೀ) ಬೀಸಲಿದೆ. ಹೀಗಾಗಿ ಐಎಂಡಿ ಹಳದಿ ಎಚ್ಚರಿಕೆಯನ್ನು ನೀಡಿದೆ. ಮುಖ್ಯವಾಗಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಕೋಲಾರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Akshaya Tritiya 2024: ಸಕಲ ಸಮೃದ್ಧಿಗಳು ಕ್ಷಯಿಸದಂತೆ ಕಾಪಾಡುವ ಅಕ್ಷಯ ತೃತೀಯ

ಅಕ್ಷಯ ತದಿಗೆ ಅಥವಾ ಅಕ್ಷಯ ತೃತೀಯ… ಹೆಸರು ಯಾವುದಾದರೂ (Akshaya Tritiya 2024) ಅರ್ಥ ಮಾತ್ರ ಒಂದೇ- ಎಂದಿಗೂ ಕಡಿಮೆಯಾಗದ್ದು ಎಂಬುದು. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ, ಯಶಸ್ಸು, ಆರೋಗ್ಯ, ಐಶ್ವರ್ಯ ಮುಂತಾದ ಸಮೃದ್ಧಿಗಳು ಕ್ಷಯವಾಗುವುದಿಲ್ಲ, ಅಂದರೆ ಕಡಿಮೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಅಕ್ಷಯ ತೃತೀಯ ಕುರಿತ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

Akshaya Tritiya 2024
Koo

ಅಲಕಾ ಕೆ, ಮೈಸೂರು

ಚಿನ್ನ-ಬೆಳ್ಳಿ ಮುಂತಾದ (Akshaya Tritiya 2024) ಹೊಸ ವಸ್ತುಗಳ ಖರೀದಿ, ಆಸ್ತಿ ಹೂಡಿಕೆ, ಉದ್ದಿಮೆ ಪ್ರಾರಂಭ, ವಿವಾಹದಂಥ ಶುಭ ಕಾರ್ಯಗಳು- ಎಲ್ಲವಕ್ಕೂ ಅಕ್ಷಯ ತೃತೀಯ ಪ್ರಶಸ್ತ ಎಂಬುದು ಬಹುಜನರ ನಂಬಿಕೆ. ಅಂದು ನೆರವಿನ ಅಗತ್ಯ ಇರುವವರಿಗೆ ಬೇಕಾದ ನೆರವು ನೀಡುವುದರಿಂದ ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯೂ ಇದೆ. ಅಂದು ಪೂಜೆಗೆ ಪ್ರಶಸ್ತ್ರ ಸಮಯ ಯಾವುದು?

ಅಕ್ಷಯ ತದಿಗೆ ಅಥವಾ ಅಕ್ಷಯ ತೃತೀಯ… ಹೆಸರು ಯಾವುದಾದರೂ ಅರ್ಥ ಮಾತ್ರ ಒಂದೇ- ಎಂದಿಗೂ ಕಡಿಮೆಯಾಗದ್ದು ಎಂಬುದು. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಿನ ದಿನ ಭರವಸೆ, ಸಂತೋಷ, ಯಶಸ್ಸು, ಆರೋಗ್ಯ, ಐಶ್ವರ್ಯ ಮುಂತಾದ ಸಮೃದ್ಧಿಗಳು ಕ್ಷಯವಾಗುವುದಿಲ್ಲ, ಅಂದರೆ ಕಡಿಮೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಭಾರತದೆಲ್ಲೆಡೆ ಈ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.

ಮಂಗಳಕಾರ್ಯಗಳಿಗೆ ಪ್ರಶಸ್ತ:

ಈ ದಿನ ಯಾವುದೇ ಮಂಗಳಕಾರ್ಯಗಳಿಗೆ ಪ್ರಶಸ್ತವಾಗಿದೆ ಎಂಬ ನಂಬಿಕೆ ಇದೆ. ಹೊಸ ಉದ್ದಿಮೆಗಳ ಪ್ರಾರಂಭ, ವಿವಾಹ, ಚಿನ್ನ, ಭೂಮಿಯಂಥ ಆಸ್ತಿ ಖರೀದಿ, ಹೂಡಿಕೆ ಮುಂತಾದ ಕೆಲಸಗಳನ್ನು ಜನ ಈ ದಿನದಂದು ಇರಿಸಿಕೊಳ್ಳುತ್ತಾರೆ. ಹಾಗಾಗಿ ದೇಶದ ಉದ್ದಗಲಕ್ಕೆ ಚಿನಿವಾರ ಪೇಟೆಗೆ ಅಂದು ಬಿಡುವಿಲ್ಲದ ಕೆಲಸ. ಈ ಬಾರಿ ಅಕ್ಷಯ ತೃತೀಯ ಮೇ 10ರಂದು ಆಚರಣೆಯಾಗಲಿದ್ದು, ಬೆಳಗಿನ 5.33ರಿಂದ ಮಧ್ಯಾಹ್ನ 12.18ರವರೆಗೆ ಪೂಜೆಗೆ ಸೂಕ್ತ ಎನ್ನಲಾಗಿದೆ. ತದಿಗೆಯ ತಿಥಿಯು ಮೇ 10ರಂದು ಬೆಳಗಿನ 4.17ಕ್ಕೆ ಪ್ರಾರಂಭವಾದರೆ, ಮೇ 11ರ ಬೆಳಗಿನ ಜಾವ 2.50ರವರೆಗೆ ಇರಲಿದೆ. ಬಂಗಾರ ಖರೀದಿಗೆ ಬೆಳಗಿನ ಜಾವ 4.17ರಿಂದ ತದಿಗೆ ಮುಗಿಯುವರೆಗೂ ಸಕಾಲ.

ಲಕ್ಷ್ಮಿ ಮತ್ತು ಕುಬೇರ ಪೂಜೆ:

ಅಂದಿನ ದಿನ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಮತ್ತು ಕುಬೇರನನ್ನು ಪೂಜಿಸುವ ಸಂಪ್ರದಾಯವಿದೆ. ಇದಲ್ಲದೆ, ದಾನ-ದಕ್ಷಿಣೆಗಳನ್ನು ನೀಡಲು ಪ್ರೋತ್ಸಾಹಿಸಲಾಗುತ್ತದೆ. ನೆರವಿನ ಅಗತ್ಯ ಉಳ್ಳವರಿಗೆ ದಾನ ಮಾಡಿದಷ್ಟೂ ಸಮೃದ್ಧಿ ಹೆಚ್ಚು ಎನ್ನುವ ಪ್ರತೀತಿಯೂ ಇದೆ. ಮೊಳಕೆ ಕಾಳುಗಳು, ಹಣ್ಣುಗಳು ಮತ್ತು ಸಿಹಿ ತಿಂಡಿಗಳನ್ನು ವಿತರಿಸುವ ವಾಡಿಕೆ ಕೆಲವೆಡೆಗಳಲ್ಲಿ ಇದೆ. ಕೆಲವರು ಅನ್ನದಾನವನ್ನೂ ನಡೆಸಿ ಕೊಡುತ್ತಾರೆ.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವುದು?

ಪೌರಾಣಿಕ ಹಿನ್ನೆಲೆ:

ಅಕ್ಷಯ ತೃತೀಯದ ಹಿಂದೆ ಹಲವಾರು ಪೌರಾಣಿಕ ಕಥೆಗಳಿವೆ. ಪಾಂಡವರು ವನವಾಸದಲ್ಲಿದ್ದಾಗ ದೂರ್ವಾಸರ ಕೋಪಕ್ಕೆ ತುತ್ತಾಗುವುದನ್ನು ತಪ್ಪಿಸಿದ್ದು ಅಕ್ಷಯ ಪಾತ್ರೆ. ಸಾವಿರಾರು ಶಿಷ್ಯಂದಿರ ಜೊತೆಗೆ ದೂರ್ವಾಸರು ಪಾಂಡವರ ಆಶ್ರಮಕ್ಕೆ ಆಗಮಿಸುತ್ತಾರೆ. ಅವರೆಲ್ಲರನ್ನೂ ಸತ್ಕರಿಸಬೇಕಾದ ಪರಿಸ್ಥಿತಿ ಪಾಂಡವರ ಪಾಲಿಗೆ ಒದಗುತ್ತದೆ. ಆದರೆ ಅಕ್ಷಯಪಾತ್ರೆಯಲ್ಲಿ ದ್ರೌಪದಿಯೂ ಉಂಡು ಮಗುಚಿದ ಮೇಲೆ, ಆ ದಿನಕ್ಕೆ ಆಹಾರ ದೊರೆಯುವುದಿಲ್ಲ. ಮುಂದಿನ ದಾರಿ ಕಾಣದೆ ಅವರು ಕೃಷ್ಣನನ್ನು ಕರೆಯುತ್ತಾರೆ. ಅಲ್ಲಿಗೆ ಆಗಮಿಸುವ ಕೃಷ್ಣ, ಅದರಲ್ಲಿದ್ದ ಅಗುಳೊಂದನ್ನು ಸೇವಿಸಿದಾಗ, ದೂರ್ವಾಸರು ಮತ್ತವರ ಶಿಷ್ಯರ ಹೊಟ್ಟೆಯೆಲ್ಲ ಭರ್ತಿಯಾದ ಕಥೆಯನ್ನು ಕೇಳಿಯೇ ಇರುತ್ತೇವೆ. ಒಂದೇ ಅಗುಳು ಅಕ್ಷಯವಾಗಿ ಎಲ್ಲರ ಹೊಟ್ಟೆ ತುಂಬಿಸಿದ್ದ ಕಥೆಯು ಈ ದಿನಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತದೆ.
ಇದಲ್ಲದೆ, ಇಂದಿನ ದಿನ ದ್ವಾರಕೆಯಲ್ಲಿದ್ದ ಕೃಷ್ಣನನ್ನು ಆತನ ಮಿತ್ರ ಸುಧಾಮ ಭೇಟಿ ಮಾಡಿ, ಸಂಪತ್ತು ಹೆಚ್ಚಿಕೊಂಡ ಘಟನೆಯ ನಂಟೂ ಇರುವುದಾಗಿ ಕಥೆಗಳು ಹೇಳುತ್ತವೆ. ವಿಷ್ಣವಿನ ಅವತಾರವಾದ ಪರಶುರಾಮನ ಜನ್ಮದಿನವೆಂದು ನಂಬಲಾಗುತ್ತದೆ. ಪರಶುರಾಮ ದೇಗುಲಗಳಲ್ಲಿ ಅಂದು ಆತನ ಪೂಜೆಯೂ ವಿಜೃಂಭಣೆಯಿಂದ ಜರುಗುತ್ತದೆ. ಗಣಪತಿಗೆ ಬರೆಯುವುದಕ್ಕೆಂದು ಮಹಾಭಾರತವನ್ನು ವ್ಯಾಸರು ಕಥಿಸಲು ಪ್ರಾರಂಭಿಸಿದ ದಿನ ಎಂಬ ದಂತಕಥೆಯೂ ಈ ದಿನದೊಂದಿಗೆ ತಳುಕು ಹಾಕಿಕೊಂಡಿದೆ. ಗಂಗೆಯು ಭುವಿಗೆ ಅವತರಿಸಿದ ದಿನವಿದು ಎಂಬ ಪ್ರತೀತಿಯೂ ಅಕ್ಷಯ ತದಿಗೆಗೆ ಇದೆ. ಚಾರ್‌ಧಾಮ್‌ ಪುಣ್ಯ ಕ್ಷೇತ್ರಗಳನ್ನು ಯಾತ್ರಿಕರಿಗೆ ತೆರೆಯುವುದು ಸಾಮಾನ್ಯವಾಗಿ ಈ ಶುಭ ಸಂದರ್ಭದಲ್ಲೇ.

Continue Reading
Advertisement
Prajwal Revanna Case
ಕ್ರೈಂ1 min ago

Prajwal Revanna case: ಪ್ರಜ್ವಲ್‌ ರೇವಣ್ಣ ಮೇಲೆ ಸುಳ್ಳು ಆರೋಪ ನೀಡಲು ಒತ್ತಡ: ಮಹಿಳೆ ದೂರು

karnataka SSLC result 2024
ಸಂಪಾದಕೀಯ20 mins ago

ವಿಸ್ತಾರ ಸಂಪಾದಕೀಯ: SSLC Result 2024: ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತದ ಜೊತೆಗೆ ಸಿಹಿ ಸುದ್ದಿಯೂ ಇದೆ

Digestion Tips
ಆರೋಗ್ಯ37 mins ago

Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

Karnataka Weather Forecast
ಮಳೆ1 hour ago

Karnataka Weather : 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ; ಗುಡುಗು ಸಹಿತ ಭಾರಿ ಮಳೆಗೆ ಯೆಲ್ಲೋ ಅಲರ್ಟ್‌ ಘೋಷಣೆ

Which Sweetener Is Better
ಆರೋಗ್ಯ2 hours ago

Which Sweetener Is Better: ಸಕ್ಕರೆ, ಬೆಲ್ಲ, ಕಲ್ಲುಸಕ್ಕರೆ- ಯಾವುದು ಒಳ್ಳೆಯದು?

Basavanna jayanti
ಧಾರ್ಮಿಕ2 hours ago

Basava Jayanti 2024: ಬದುಕಿನ ಪಾಠ ಕಲಿಸುವ ಬಸವಣ್ಣನ 10 ವಚನಗಳಿವು

Akshaya Tritiya 2024
ಪ್ರಮುಖ ಸುದ್ದಿ3 hours ago

Akshaya Tritiya 2024: ಸಕಲ ಸಮೃದ್ಧಿಗಳು ಕ್ಷಯಿಸದಂತೆ ಕಾಪಾಡುವ ಅಕ್ಷಯ ತೃತೀಯ

Dina Bhavishya
ಭವಿಷ್ಯ3 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Mureder Case
ಪ್ರಮುಖ ಸುದ್ದಿ5 hours ago

Murder Case : ಕೊಡಗಿನಲ್ಲಿ ಮದುವೆ ಕ್ಯಾನ್ಸಲ್ ಆದ ಕೋಪಕ್ಕೆ ಬಾಲಕಿಯ ರುಂಡ ಕತ್ತರಿಸಿ ಕೊಂದ ಪ್ರೇಮಿ

Akshaya Tritiya Bala Rama Silver Idol gift from Sri Sai Gold Palace in bengaluru
ಬೆಂಗಳೂರು6 hours ago

Sri Sai Gold Palace: ಅಕ್ಷಯ ತೃತೀಯ; ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಿಂದ ಶ್ರೀ ಬಾಲ ರಾಮನ ಬೆಳ್ಳಿ ವಿಗ್ರಹ ಉಡುಗೊರೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ3 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ10 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ11 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ12 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ18 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ18 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ19 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು19 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ19 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು21 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

ಟ್ರೆಂಡಿಂಗ್‌