Yash-Radhika Pandit | ರಾಕಿಂಗ್​ ಸ್ಟಾರ್​ ಮನೆಯಲ್ಲಿ ದೀಪಾವಳಿ ಸಡಗರ; ಮಕ್ಕಳೊಂದಿಗೆ ನಕ್ಷತ್ರ ಕಡ್ಡಿ ಹಚ್ಚಿದ ಯಶ್​-ರಾಧಿಕಾ - Vistara News

ಸಿನಿಮಾ

Yash-Radhika Pandit | ರಾಕಿಂಗ್​ ಸ್ಟಾರ್​ ಮನೆಯಲ್ಲಿ ದೀಪಾವಳಿ ಸಡಗರ; ಮಕ್ಕಳೊಂದಿಗೆ ನಕ್ಷತ್ರ ಕಡ್ಡಿ ಹಚ್ಚಿದ ಯಶ್​-ರಾಧಿಕಾ

ರಾಕಿಂಗ್​ ಸ್ಟಾರ್ ಯಶ್​ -ರಾಧಿಕಾ ಮನೆಯಲ್ಲಿ ಎಲ್ಲ ಹಬ್ಬಗಳನ್ನೂ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಇತ್ತೀಚೆಗೆ ಗಣೇಶ ಚತುರ್ಥಿ, ವರಮಹಾಲಕ್ಷ್ಮೀ ಹಬ್ಬಗಳನ್ನೂ ಆಚರಣೆ ಮಾಡಿದ್ದರು. ಆ ಫೋಟೋಗಳನ್ನು ರಾಧಿಕಾ ಪಂಡಿತ್​ ಹಂಚಿಕೊಂಡಿದ್ದರು.

VISTARANEWS.COM


on

Yash Radhika
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಯಾವುದೇ ಹಬ್ಬ ಇರಲಿ ರಾಕಿಂಗ್ ಸ್ಟಾರ್ ಯಶ್​-ರಾಧಿಕಾ ಪಂಡಿತ್​ ದಂಪತಿ ಮನೆಯಲ್ಲಿ ತುಂಬ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಇವರಿಬ್ಬರೂ ಹೊಸ ಉಡುಗೆ ತೊಟ್ಟು, ತಮ್ಮ ಇಬ್ಬರು ಮುದ್ದಾದ ಮಕ್ಕಳಿಗೂ ಚೆಂದನೆಯ ಸಾಂಪ್ರದಾಯಿಕ ಉಡುಪು ತೊಡಿಸಿ, ಎಲ್ಲರೂ ಒಟ್ಟಾಗಿ ಹಬ್ಬ ಆಚರಣೆ ಮಾಡುತ್ತಾರೆ. ಹಾಗೇ ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನೂ ಪೋಸ್ಟ್ ಮಾಡುತ್ತಾರೆ.

ಅದರಂತೆ ಈಗ ನಟ ಯಶ್​ ಮನೆಯಲ್ಲಿ ದೀಪಾವಳಿ ಹಬ್ಬವನ್ನೂ ಅದ್ದೂರಿಯಾಗಿ ಆಚರಿಸಲಾಗಿದೆ. ಈ ಫೋಟೋಗಳನ್ನು ಯಶ್​ ಮತ್ತು ರಾಧಿಕಾ ಇಬ್ಬರೂ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮಕ್ಕಳಾದ ಯಥರ್ವ ಮತ್ತು ಐರಾ ಜತೆ ಸೇರಿ ಪಟಾಕಿ ಹೊಡೆಯುತ್ತಿರುವ ಫೋಟೋ ಶೇರ್​ ಮಾಡಿದ ನಟ ಯಶ್​ ‘ಈ ಕ್ಷಣಗಳೆಲ್ಲ ಅತ್ಯಂತ ಮುಖ್ಯವಾದವು’ ಎಂದು ಕ್ಯಾಪ್ಷನ್​ ಬರೆದಿದ್ದಾರೆ. ಹಾಗೇ, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಇನ್ನು ರಾಧಿಕಾ ಪಂಡಿತ್​ ಕೂಡ ಇನ್​ಸ್ಟಾಗ್ರಾಂನಲ್ಲಿ ದೀಪಾವಳಿ ಆಚರಣೆಯ ನಾಲ್ಕು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು ‘ಮುಂಬರುವ ದಿನಗಳು ಎಲ್ಲರಲ್ಲೂ ಸಂತೋಷ ಮತ್ತು ಸುಖ ತರಲಿ. ಹ್ಯಾಪಿ ದೀಪಾವಳಿ’ ಎಂದಿದ್ದಾರೆ.

ರಾಧಿಕಾ ಪಂಡಿತ್​-ಯಶ್​ ಮನೆಯಲ್ಲಿ ಗಣೇಶ ಚತುರ್ಥಿ, ವರಮಹಾಲಕ್ಷ್ಮೀ ಹಬ್ಬಗಳನ್ನೂ ಸಂಭ್ರಮದಿಂದ ಆಚರಣೆ ಮಾಡಲಾಗಿತ್ತು. ಆ ಫೋಟೋಗಳನ್ನೂ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.

ಇದನ್ನೂ ಓದಿ: Rocking Star Yash | 10 ಕೋಟಿ ನಷ್ಟ ಕಂಡಿದ್ದ ಯಶ್‌ ಸಿನಿಮಾ ತೆಲುಗಿನಲ್ಲಿ ರಿಲೀಸ್‌: ಮನಗೆಲ್ಲುತ್ತಾ ʻರಾರಾಜುʼ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Ranbir Kapoor: ಸಖತ್ ಫಿಟ್ ಆ್ಯಂಡ್ ಫೈನ್​ ಆದ ರಣಬೀರ್! ಫೋಟೊ ಶೇರ್‌ ಮಾಡಿದ ಟ್ರೈನರ್‌!

Ranbir Kapoor: ಈ ಮುಂಚೆ ನಟರ ವೇಷಭೂಷಣದಲ್ಲಿರುವ ಚಿತ್ರಗಳು ಸೋರಿಕೆಯಾದ ಬಳಿಕ ಚಿತ್ರೀಕರಣದ ಮೊದಲ ಎರಡು ದಿನಗಳು ಕಾಲ ನಿರ್ದೇಶಕರು ಒತ್ತಡವನ್ನುಂಟುಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ಈ ಫೋಟೊಗಳಿಂದ ನಿರ್ದೇಶಕ ನಿತೇಶ್ ತಿವಾರಿ ತುಂಬ ಬೇಸರಿಸಿಗೊಂಡಿದ್ದರು ಎಂದು ವರದಿಯಾಗಿತ್ತು.ದೃಶ್ಯಕ್ಕೆ ಅಗತ್ಯವಿರುವ ನಟರು ಮತ್ತು ತಂತ್ರಜ್ಞರನ್ನು ಮಾತ್ರ ಸೆಟ್‌ನಲ್ಲಿ ಇರುವಂತೆ ಆದೇಶ ನೀಡಿದ್ದು, ಉಳಿದವರಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿತ್ತು.

VISTARANEWS.COM


on

Ranbir Kapoor trainer shares transformation Of Ranbir
Koo

ಬೆಂಗಳೂರು: ರಣಬೀರ್ ಕಪೂರ್ (Ranbir Kapoor) ಮುಂಬರುವ ಸಿನಿಮಾ ‘ರಾಮಾಯಣ’ (Ramayana Movie) ಚಿತ್ರದ ರಾಮನ ಪಾತ್ರಕ್ಕಾಗಿ ಕಠಿಣ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಮುಂಚೆ ʻಅನಿಮಲ್‌ʼ ಸಿನಿಮಾಗಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಇದೀಗ ರಾಮಾಯಣ ಸಿನಿಮಾಗಾಗಿ ಸಖತ್‌ ಫಿಟ್‌ ಫೈನ್‌ ಆಗಿದ್ದಾರೆ. ಇದೀಗ ಬಾಡಿ ಟ್ರಾನ್ಸ್‌ಫರ್ಮೇಶನ್‌ ಫೋಟೊವನ್ನು ಹಂಚಿಕೊಂಡಿದ್ದಾರೆ.

ಏಪ್ರಿಲ್ 24ರಂದು, ರಣಬೀರ್ ಅವರ ತರಬೇತುದಾರ ಶಿವೋಹಂ (trainer Shivoham) ಅವರು ರಣಬೀರ್‌ ಅವರ ಟ್ರಾನ್ಸ್‌ಫರ್ಮೇಶನ್‌ ಫೋಟೊವನ್ನು ಹಂಚಿಕೊಂಡಿದ್ದಾರೆ. ಮೊದಲಿಗೆ ʻಅನಿಮಲ್‌ʼ ಸಿನಿಮಾ ಲುಕ್‌, ಬಳಿಕ ನಾರ್ಮಲ್‌ ಫೋಟೊ, ಹಾಗೇ ಮೂರನೇ ಫೋಟೊದಲ್ಲಿ ರಾಮನ ಪಾತ್ರಕ್ಕೆ ಫಿಟ್‌ ಆಗಿರುವ ರಣಬೀರ್‌ ಫೋಟೊವನ್ನು ಹಂಚಿಕೊಂಡಿದ್ದಾರೆ.

ಶಿವೋಹಂ ಫೋಟೊ ಜತೆಗೆ ʻ “ಇದೊಂದು ಸುಂದರ ಪ್ರಯಾಣ ಮತ್ತು ಮುಂದಿನ ಬ್ಲಾಕ್ಬಸ್ಟರ್ ಯಶಸ್ಸಿಗೆ! ರಣಬೀರ್‌ ಅವರ ʻರಾಮಾಯಣʼ ಸಿನಿಮಾಗೆ ಶುಭ ಹಾರೈಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್​ ಯಶ್​ ಅವರು ರಾವಣನಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಗಾಸಿಪ್ ಹಬ್ಬಿದೆ.

ಈ ಮುಂಚೆ ನಟರ ವೇಷಭೂಷಣದಲ್ಲಿರುವ ಚಿತ್ರಗಳು ಸೋರಿಕೆಯಾದ ಬಳಿಕ ಚಿತ್ರೀಕರಣದ ಮೊದಲ ಎರಡು ದಿನಗಳು ಕಾಲ ನಿರ್ದೇಶಕರು ಒತ್ತಡವನ್ನುಂಟುಮಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ಈ ಫೋಟೊಗಳಿಂದ ನಿರ್ದೇಶಕ ನಿತೇಶ್ ತಿವಾರಿ ತುಂಬ ಬೇಸರಿಸಿಗೊಂಡಿದ್ದರು ಎಂದು ವರದಿಯಾಗಿತ್ತು. ಈಗಾಗಲೇ ಸೆಟ್‌ನಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದು ಫೋನ್‌ಕೂಡ ನಿಷೇಧಿಸಲಾಗಿದೆ ಎನ್ನಲಾಗಿತ್ತು.

ದೃಶ್ಯಕ್ಕೆ ಅಗತ್ಯವಿರುವ ನಟರು ಮತ್ತು ತಂತ್ರಜ್ಞರನ್ನು ಮಾತ್ರ ಸೆಟ್‌ನಲ್ಲಿ ಇರುವಂತೆ ಆದೇಶ ನೀಡಿದ್ದು, ಉಳಿದವರಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: Ranbir Kapoor: `ರಾಮಾಯಣ’ ಸಿನಿಮಾಗಾಗಿ ಕಠಿಣ ವರ್ಕೌಟ್ ಮಾಡುತ್ತಿರುವ ರಣಬೀರ್ ಕಪೂರ್!

ಇನ್ನು ದಶರಥನಾಗಿ ಅರುಣ್‌ ಗೋವಿಲ್, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಾರೆ ಎನ್ನಲಾಗುತ್ತಿದೆ. ರಾವಣನ ಸಹೋದರಿ ಶೂರ್ಪನಖಿಯಾಗಿ ರಕುಲ್‌ಪ್ರೀತ್ ಸಿಂಗ್ ಹಾಗೂ ಮಡದಿ ಮಂಡೋದರಿಯಾಗಿ ಸಾಕ್ಷಿ ತನ್ವರ್ ನಟಿಸುತ್ತಾರೆ ಎಂದು ವರದಿಯಾಗಿದೆ.

ಸದ್ಯ ಯಶ್ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ‘ರಾಮಾಯಣ’ ಚಿತ್ರದಲ್ಲಿ ಸದ್ಯ ಬೇರೆ ಕಲಾವಿದರ ದೃಶ್ಯಗಳನ್ನು ಸೆರೆಹಿಡಿಯಲಿದ್ದು ನಿಧಾನವಾಗಿ ಯಶ್ ತಂಡ ಸೇರಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.

Continue Reading

South Cinema

Tamannaah Bhatia: ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ; ನಟಿ ತಮನ್ನಾಗೆ ಸಮನ್ಸ್‌!

Tamannaah Bhatia: ಏಪ್ರಿಲ್ 23ರಂದು ನಟ ಸಂಜಯ್ ದತ್ ಅವರಿಗೂ ಈ ಸಂಬಂಧ ಸಮನ್ಸ್ ನೀಡಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ತಾವು ಭಾರತದಲ್ಲಿ ಇಲ್ಲ ಎಂದು ವಿಚಾರಣೆಗೆ ಹಾಜಾರಾಗಲು ಹೊಸ ಡೇಟ್‌ ನೀಡಲು ಕೋರಿದ್ದರು. ಇದೀಗ ನಟಿ ತಮನ್ನಾಗೆ ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಆದೇಶ ನೀಡಲಾಗಿದೆ ಎನ್ನಲಾಗಿದೆ.

VISTARANEWS.COM


on

Tamannaah Bhatia Summoned in Illegal IPL Streaming Case
Koo

ಮುಂಬೈ: ಫೇರ್‌ಪ್ಲೇ ಆ್ಯಪ್‌ನಲ್ಲಿ ಅಕ್ರಮ ಐಪಿಎಲ್ ಪಂದ್ಯಗಳ ಸ್ಟ್ರೀಮಿಂಗ್ (Illegal IPL Streaming Case) ಪ್ರಕರಣದಲ್ಲಿ ಟಾಲಿವುಡ್‌ ನಟಿ ತಮನ್ನಾ ಭಾಟಿಯಾ (Tamannaah Bhatia) ಹೆಸರು ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯನ್ನು ಮಹಾರಾಷ್ಟ್ರ ಸೈಬರ್ ಸೆಲ್ (Maharashtra Cyber Cell ) ವಿಚಾರಣೆಗೆ ಕರೆಸಿದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಆದೇಶ ನೀಡಲಾಗಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಹೆಸರು ಕೂಡ ಈ ಮುಂಚೆ ಕೇಳಿಬಂದಿತ್ತು.

ಫೇರ್‌ಪ್ಲೇ ಆ್ಯಪ್‌ನಲ್ಲಿ (Fairplay App) ಐಪಿಎಲ್ 2023ರ ಅಕ್ರಮ ಸ್ಟ್ರೀಮಿಂಗ್‌ಗೆ ಸಂಬಂಧಿಸಿದಂತೆ ವಯಾಕಾಮ್‌ಗೆ ಕೋಟ್ಯಂತರ ರೂ. ನಷ್ಟ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸೈಬರ್ ಸೆಲ್‌ ನಟಿ ತಮನ್ನಾ ಭಾಟಿಯಾ ಅವರನ್ನು ವಿಚಾರಣೆಗೆ ಕರೆದಿದೆ. ಏಪ್ರಿಲ್ 29ರಂದು ಮಹಾರಾಷ್ಟ್ರ ಸೈಬರ್‌ಗೆ ಹಾಜರಾಗುವಂತೆ ನಟಿಗೆ ತಿಳಿಸಲಾಗಿದೆ ಎಂದು ಎಎನ್‌ಐ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಏಪ್ರಿಲ್ 23ರಂದು ನಟ ಸಂಜಯ್ ದತ್ ಅವರಿಗೂ ಈ ಸಂಬಂಧ ಸಮನ್ಸ್ ನೀಡಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ತಾವು ಭಾರತದಲ್ಲಿ ಇಲ್ಲ ಎಂದು ವಿಚಾರಣೆಗೆ ಹಾಜಾರಾಗಲು ಹೊಸ ಡೇಟ್‌ ನೀಡಲು ಕೋರಿದ್ದರು.

ಇದನ್ನೂ ಓದಿ: Tamannaah Bhatia : ಪಾಕ್​ ಕ್ರಿಕೆಟಿಗ ರಜಾಕ್ ಜತೆ ಚಿನ್ನದ ಮಳಿಗೆಗೆ ಹೋದ ಕಹಿ ಘಟನೆ ನೆನೆದ ತಮನ್ನಾ

ಫೇರ್ ಪ್ಲೇ ಪ್ಲಾಟ್‌ಫಾರ್ಮ್ ಬೆಟ್ಟಿಂಗ್‌ ಅಪ್ಲಿಕೇಶನ್‌ ಆಗಿದೆ. ವಯಾಕಾಮ್‌ 18 ಐಪಿಎಲ್‌ ಅಧಿಕೃತ ಪ್ರಸಾರ ಹಕ್ಕುಗಳನ್ನು ಹೊಂದಿದೆ. ಬೆಟ್ಟಿಂಗ್ ಅಪ್ಲಿಕೇಶನ್ ಫೇರ್ ಪ್ಲೇ ಪ್ಲಾಟ್‌ಫಾರ್ಮ್ ಅಕ್ರಮವಾಗಿ ಪಂದ್ಯಗಳನ್ನು ಸ್ಟ್ರೀಮ್ ಮಾಡುತ್ತಿದೆ ಎಂದು ವಯಾಕಾಮ್‌ ಎಫ್‌ಐಆರ್‌ ದಾಖಲಿಸಿತ್ತು . ವಯಾಕಾಮ್‌ 18ಗೆ 100 ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ವರದಿಯಾಗಿದೆ. ಎಫ್‌ಐಆರ್ ದಾಖಲಿಸಿದ ಬಳಿಕ ಬಾದ್‌ಶಾ, ಸಂಜಯ್ ದತ್, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ತಮನ್ನಾ ಸೇರಿದಂತೆ ಹಲವಾರು ತಾರೆಯರನ್ನು ವಿಚಾರಣೆಗೆ ಕರೆಯಲಾಯಿದೆ ಎಂದು ವರದಿಯಾಗಿದೆ. ಡಿಸೆಂಬರ್ 2023 ರಲ್ಲಿ, ಬೆಟ್ಟಿಂಗ್ ಅಪ್ಲಿಕೇಶನ್‌ನ ಉದ್ಯೋಗಿಯನ್ನು ಬಂಧಿಸಲಾಯಿತ್ತು.

Continue Reading

ಟಾಲಿವುಡ್

Kiara Advani: ಪ್ರಭಾಸ್ ನಟನೆಯ ʻಸಲಾರ್ 2ʼ ಸಿನಿಮಾದಲ್ಲಿ ಕಿಯಾರಾ ಆಡ್ವಾಣಿ?

Kiara Advani: ಪ್ರಶಾಂತ್ ನೀಲ್ ನಿರ್ದೇಶನದ, ʻಸಲಾರ್ ಭಾಗ 1ʼ (Salaar Part 1: Ceasefire ) ಡಿಸೆಂಬರ್ 2023ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಪ್ರಭಾಸ್ ಜತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಕೂಡ ನಟಿಸಿದ್ದರು. ಈ ಚಿತ್ರ ವಿಶ್ವಾದ್ಯಂತ 500 ಕೋಟಿ ರೂ. ಗಳಿಕೆ ಕಂಡಿತ್ತು. ಇದೀಗ ಕಿಯಾರ ಸಲಾರ್‌ 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಪ್ರಭಾಸ್ ಜತೆ ವಿಶೇಷ ಹಾಡಿನಲ್ಲಿ ಕಿಯಾರಾ ಆಡ್ವಾಣಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ನಟಿಯಾಗಲಿ, ಚಿತ್ರತಂಡವಾಗಲಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

VISTARANEWS.COM


on

Kiara Advani Joins Salaar 2
Koo

ಬೆಂಗಳೂರು: ಕಿಯಾರಾ ಆಡ್ವಾಣಿ (Kiara Advani) ಸೌತ್‌ ಸಿನಿಮಾಗಳಿಗೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್‌. ಶಂಕರ್‌ ಅವರ ‘ಗೇಮ್‌ ಚೇಂಜರ್‌’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೀಗ ನಟಿ ಶೀಘ್ರದಲ್ಲೇ ಪ್ರಭಾಸ್ ನಟನೆಯ ʻಸಲಾರ್ 2ʼ ( Prabhas’ Salaar 2) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಪ್ರಮುಖ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಪ್ರಭಾಸ್ ಜತೆ ವಿಶೇಷ ಹಾಡಿನಲ್ಲಿ ಕಿಯಾರಾ ಆಡ್ವಾಣಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ನಟಿಯಾಗಲಿ, ಚಿತ್ರತಂಡವಾಗಲಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಪ್ರಶಾಂತ್ ನೀಲ್ ನಿರ್ದೇಶನದ, ʻಸಲಾರ್ ಭಾಗ 1ʼ (Salaar Part 1: Ceasefire ) ಡಿಸೆಂಬರ್ 2023ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಪ್ರಭಾಸ್ ಜತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಕೂಡ ನಟಿಸಿದ್ದರು. ಈ ಚಿತ್ರ ವಿಶ್ವಾದ್ಯಂತ 500 ಕೋಟಿ ರೂ. ಗಳಿಕೆ ಕಂಡಿತ್ತು. ಇದೀಗ ಕಿಯಾರ ಸಲಾರ್‌ 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Kiara Advani: ‘ಡಾನ್‌ 3’ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದ ಕಿಯಾರಾ ಅಡ್ವಾಣಿ

 ‘ಡಾನ್‌ 3’ ಚಿತ್ರದಲ್ಲಿಯೂ ಕಿಯಾರ ನಾಯಕಿ!

ಬಾಲಿವುಡ್‌ನ ಜನಪ್ರಿಯ ನಾಯಕಿ ಕಿಯಾರಾ ಆಡ್ವಾಣಿ ಸದ್ಯ ಬೇಡಿಯಲ್ಲಿರುವ ನಟಿಯರ ಪೈಕಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು. ಹಿಂದಿಯ ಜತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿಯೂ ಗುರುತಿಸಿಕೊಂಡಿರುವ ಅವರ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್‌ಗಳಿವೆ. ಈ ಮಧ್ಯೆ ಅವರು ಬಾಲಿವುಡ್‌ನ ಬಹು ನಿರೀಕ್ಷಿತ ʼಡಾನ್‌ 3ʼ (Don 3) ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಣವೀರ್‌ ಸಿಂಗ್‌ (Ranveer Singh) ಜತೆ ಮೊದಲ ಬಾರಿ ತೆರೆ ಹಂಚಿಕೊಳ್ಳಲಿರುವ ಅವರು ಈ ಚಿತ್ರಕ್ಕಾಗಿ ದಾಖಲೆಯ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುಗುತ್ತಿದೆ.

ವರದಿಯೊಂದರ ಪ್ರಕಾರ ಪ್ರರ್ಹಾನ್‌ ಅಖ್ತರ್‌ ನಿರ್ದೇಶನದ ಈ ಚಿತ್ರಕ್ಕೆ ಕಿಯಾರಾ ಬರೋಬ್ಬರಿ 13 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರಂತೆ. ಅಂದರೆ ಇದು ಅವರು ʼವಾರ್‌ 2ʼ ಚಿತ್ರಕ್ಕೆ ಪಡೆದ ಸಂಭಾವನೆಗಿಂತ ಹಲವು ಪಟ್ಟು ಅಧಿಕ ಎನ್ನಲಾಗುತ್ತಿದೆ.

ʼʼಡಾನ್‌ 3ʼ ಸಿನಿಮಾಕ್ಕಾಗಿ ಕಿಯಾರಾ ಅಡ್ವಾಣಿ 13 ಕೋಟಿ ರೂ. ಸಂಭಾವನೆಯ ಬೇಡಿಕೆ ಇಟ್ಟಿದ್ದಾರೆ. ಈ ಚಿತ್ರದಲ್ಲಿ ಅವರು ಹಲವು ಅಪಾಯಕಾರಿ ಆ್ಯಕ್ಷನ್‌ ದೃಶ್ಯಗಳಲ್ಲಿ ಪಾಲ್ಗೊಳ್ಳಲಿದ್ದು, ಇದಕ್ಕಾಗಿ ದುಬಾರಿ ಸಂಭಾವನೆಯ ಬೇಡಿಕೆ ಸಲ್ಲಿಸಿದ್ದಾರೆ. ಇದು ʼವಾರ್‌ 2ʼ ಚಿತ್ರದಲ್ಲಿ ಪಡೆದ ಸಂಭಾವನೆಗಿಂತ ಎರಡು ಪಟ್ಟು ಅಧಿಕʼʼ ಎಂದು ವರದಿಯೊಂದು ತಿಳಿಸಿದೆ. ಇನ್ನೂ ಈ ಸುದ್ದಿ ಅಧಿಕೃತವಾಗಿ ದೃಢವಾಗಿಲ್ಲ.

ಇದನ್ನೂ ಓದಿ: Comedy Khiladigalu Premier League: ಹೇಗಿರಲಿದೆ ಹೊಸ ಶೋ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼ?

2025ರಲ್ಲಿ ತೆರೆ ಕಾಣಲಿರುವ ಈ ಚಿತ್ರ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ. ಈಗಾಗಲೇ ‘ಡಾನ್‌’ ಸರಣಿಯ ಎರಡೂ ಚಿತ್ರಗಳು ಯಶಸ್ವಿಯಾಗಿರುವುದರಿಂದ ಈ ಮೂರನೇ ಭಾಗ ಕುತೂಹಲ ಮೂಡಿಸಿದೆ. ಅಲ್ಲದೆ ಇದೇ ಮೊದಲ ಬಾರಿಗೆ ರಣವೀರ್‌ ಸಿಂಗ್‌ ಮತ್ತು ಕಿಯಾರಾ ಆಡ್ವಾಣಿ ತೆರೆ ಹಂಚಿಕೊಳ್ಳುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಿಸಿದೆ.

ಸದ್ಯ ಕಿಯಾರಾ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್‌.ಶಂಕರ್‌ ಅವರ ‘ಗೇಮ್‌ ಚೇಂಜರ್‌’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಮ್‌ ಚರಣ್‌ ನಾಯಕನಾಗಿರುವ ಈ ಸಿನಿಮಾದಲ್ಲಿ ಅಂಜಲಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಈ ಬಹು ನಿರೀಕ್ಷಿತ ಚಿತ್ರ ಬಿಡುಗಡೆಯಾಗಲಿದೆ. ‘ವಾರ್‌ 2’ ಸಿನಿಮಾದಲ್ಲಿ ನಾಯಕರಾಗಿ ಹೃತಿಕ್‌ ರೋಷನ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೂಡ ಅಭಿಮಾನಿಳ ಗಮನ ಸೆಳೆದಿದೆ. ಕಿಯಾರಾ ಆಡ್ವಾಣಿ ಕಳೆದ ವರ್ಷ ಫೆಬ್ರವರಿ 7ರಂದು ಬಾಲಿವುಡ್‌ ಸಿದ್ಧಾರ್ಥ್‌ ಮಲ್ಹೋತ್ರಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

Continue Reading

ಕಿರುತೆರೆ

Comedy Khiladigalu Premier League: ಹೇಗಿರಲಿದೆ ಹೊಸ ಶೋ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼ?

Comedy Khiladigalu Premier League:  ಈ ಕಾಮಿಡಿ ಪ್ರೀಮಿಯರ್‌ ಲೀಗ್‌ನಲ್ಲಿ ಈ ಬಾರಿ ಐವರು ನಿರೂಪಕರು ಇರಲಿದ್ದಾರೆ. ನಿರೂಪಕರಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿ ನಿಭಾಯಿಸಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ಹೆಸರು ಪಡೆದವರು ಅದೆಷ್ಟೋ ಸ್ಟಾರ್‌ ನಟರ ಜತೆ, ಬೆಳ್ಳಿ ಪರದೆಯಲ್ಲಿ ಕಲಾವಿದರಾಗಿ ಮಿಂಚುತ್ತಿದ್ದಾರೆ. ಮೆಗಾ ಆಡಿಷನ್‌ನಲ್ಲಿ ಈ ಬಾರಿಯೂ ವಿವಿಧ ಭಾಗದ ಬೇರೆ ಬೇರೆ ಕಲಾವಿದರು ಆಯ್ಕೆಯಾಗಿದ್ದಾರೆ. ತಮ್ಮ ವಿಶೇಷ ಪ್ರತಿಭೆಗಳಿಂದ ನೋಡುಗರನ್ನು ರಂಜಿಸಲಿದ್ದಾರೆ.‌

VISTARANEWS.COM


on

Comedy Khiladigalu Premier League From 27th April On Zee Kannada
Koo

ಬೆಂಗಳೂರು: ʻಜೀ ಕನ್ನಡʼ ವಾಹಿನಿಯ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಅಂದರೆ ಅದುವೇ ʻಕಾಮಿಡಿ ಕಿಲಾಡಿಗಳುʼ ಶೋ. (Comedy Khiladigalu Premier League) “ಸೈಡ್‌ಗಿಡ್ರಿ ನಿಮ್‌ ಟೆನ್ಷನ್‌ಗಳು, ಮತ್ತೆ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು” ಎಂಬ ಸ್ಲೋಗನ್‌ ಮೂಲಕ ವಾರಾಂತ್ಯದಲ್ಲಿ ಕರುನಾಡನ್ನೇ ನಗೆಗಡಲಲ್ಲಿ ತೇಲಿಸುವ ಕೀರ್ತಿ ಈ ಕಾರ್ಯಕ್ರಮಕ್ಕೆ ಸಲ್ಲುತ್ತದೆ. ಇದೀಗ ಸೀಸನ್‌ 5 ಪ್ರೇಕ್ಷಕರ ಮುಂದೆ ಬರುತ್ತಿದೆ. ಈಗ ಜೀ ವಾಹಿನಿ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ʼಮೂಲಕ ಮನರಂಜಿಸಲು ಸಿದ್ಧವಾಗಿದೆ.

ಈ ಕಾಮಿಡಿ ಪ್ರೀಮಿಯರ್‌ ಲೀಗ್‌ನಲ್ಲಿ ಈ ಬಾರಿ ಐವರು ನಿರೂಪಕರು ಇರಲಿದ್ದಾರೆ. ನಿರೂಪಕರಾದ ಅನುಶ್ರೀ, ಮಾಸ್ಟರ್‌ ಆನಂದ್‌, ಅಕುಲ್‌ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್‌ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಮೂಲಗಳ ಪ್ರಕಾರ ಈ ಬಾರಿಯ ಶೋನಲ್ಲಿ ಟಿ-20 ರೀತಿಯಲ್ಲಿ ಹೇಗೆ ತಂಡಗಳು, ಮಾಲೀಕರು , ಕ್ಯಾಪ್ಟನ್‌ಗಳು ಇರುತ್ತಾರೋ ಅದೇ ರೀತಿ ಇಲ್ಲಿಯೂ ಇರಲಿದೆ. ಕರ್ನಾಟಕದ 31 ಜಿಲ್ಲೆಗಳಿಂದ ಆಯ್ಕೆ ಮಾಡಿ ತಂದ ಕಲಾವಿದರನ್ನು ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳಲಾಗುವುದು. 5 ತಂಡಗಳು 1 ಟ್ರೋಫಿಗಾಗಿ ಗುದ್ದಾಟ ನಡೆಸಲಿದೆ. ಈ ಶೋನಲ್ಲಿ ಒಳ್ಳೆಯ ಪ್ರದರ್ಶನ ನೀಡಿದ ಕಲಾವಿದರಿಗೆ ಅವರ ಪ್ರದರ್ಶನ ಆಧಾರದ ಮೇಲೆ ಪ್ರತಿ ವಾರ 1 ಲಕ್ಷ ರೂ. ಬಹುಮಾನ ಗೆಲ್ಲುವ ಅವಕಾಶ ಇರಲಿದೆ. ಈ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ʼಗೆ ಐವರು ನಿರೂಪಕರು ಹೊಸ ಜವಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಹೊಸ ನಿರೂಪಕರನ್ನು ಈ ಶೋ ಮೂಲಕ ಕರೆ ತರಲಾಗುತ್ತಿದೆ ಎಂದು ವರದಿಯಾಗಿದೆ. ಆ ನಿರೂಪಕರು ಯಾರು ಎಂಬ ಪ್ರಶ್ನೆಗೆ ಉತ್ತರ ಇದೇ ಶನಿವಾರ ಹಾಗೂ ಭಾನುವಾರು ರಾತ್ರಿ 9ಗಂಟೆಗೆ ಗೊತ್ತಾಗಲಿದೆ.

ಇದನ್ನೂ ಓದಿ: Comedy khiladi Nayana: ಮುದ್ದು ಕೃಷ್ಣನನ್ನು ಹಿಡಿದು ಫೋಟೊಶೂಟ್‌ ಮಾಡಿಸಿದ ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ!

ಸೀಸನ್ 4 ಈಗಾಗಲೇ ಮುಕ್ತಾಯಗೊಂಡಿದೆ. ಸೀಸನ್‌ 4ರ ವಿಜೇತರಾಗಿ ಹರೀಶ್ ಹಿರಿಯೂರು, ಮೊದಲನೇ ರನ್ನರ್ ಅಪ್ ಆಗಿ ಮಂಡ್ಯದ ಗಿಲ್ಲಿ ನಟ ಮತ್ತು ಎರಡನೇ ರನ್ನರ್ ಅಪ್‌ ಆಗಿ ಶುಭಾ ಸ್ಥಾನ ಪಡೆದಿದ್ದರು. ಒಟ್ಟು 12 ಜನ ಟಾಪ್​ ಫೈನಲಿಸ್ಟ್‌ಗಳ ನಡುವೆ ಈ ಮೂವರು ವಿಶೇಷ ಸ್ಥಾನ ಪಡೆದಿದ್ದರು.

ಈ ಕಾರ್ಯಕ್ರಮದ ಮೂಲಕ ಹೆಸರು ಪಡೆದವರು ಅದೆಷ್ಟೋ ಸ್ಟಾರ್‌ ನಟರ ಜತೆ, ಬೆಳ್ಳಿ ಪರದೆಯಲ್ಲಿ ಕಲಾವಿದರಾಗಿ ಮಿಂಚುತ್ತಿದ್ದಾರೆ. ಮೆಗಾ ಆಡಿಷನ್‌ನಲ್ಲಿ ಈ ಬಾರಿಯೂ ವಿವಿಧ ಭಾಗದ ಬೇರೆ ಬೇರೆ ಕಲಾವಿದರು ಆಯ್ಕೆಯಾಗಿದ್ದಾರೆ. ತಮ್ಮ ವಿಶೇಷ ಪ್ರತಿಭೆಗಳಿಂದ ನೋಡುಗರನ್ನು ರಂಜಿಸಲಿದ್ದಾರೆ.‌ ಈ ಕಾರ್ಯಕ್ರಮದ (Comedy Khiladigalu) ಎಲ್ಲ ಸೀಸನ್‌ಗಳಲ್ಲಿಯೂ ಅದ್ಭುತವಾಗಿ ನಿರೂಪಣೆ ಮಾಡಿರುವ ಮಾಸ್ಟರ್‌ ಆನಂದ್‌ ಈ ಬಾರಿಗೂ ನಿರೂಪಣೆ ಜವಾಬ್ದಾರಿಯನ್ನು ಹೊತ್ತಿದ್ದಾರೆ ಎನ್ನಲಾಗಿದೆ.

Continue Reading
Advertisement
Ranbir Kapoor trainer shares transformation Of Ranbir
ಬಾಲಿವುಡ್44 seconds ago

Ranbir Kapoor: ಸಖತ್ ಫಿಟ್ ಆ್ಯಂಡ್ ಫೈನ್​ ಆದ ರಣಬೀರ್! ಫೋಟೊ ಶೇರ್‌ ಮಾಡಿದ ಟ್ರೈನರ್‌!

Road Accident in Chamarajanagar
ಚಾಮರಾಜನಗರ10 mins ago

Road Accident : ಶಾಸಕ ಎಆರ್ ಕೃಷ್ಣಮೂರ್ತಿ ಕಾರು ಅಪಘಾತ; ಚಲಿಸುತ್ತಿದ್ದಾಗಲೇ ಕಾರ್‌ ಟೈರ್‌ ಸ್ಫೋಟ

IPL 2024
ಕ್ರೀಡೆ26 mins ago

IPL 2024: ಸಿಕ್ಸರ್​ನಿಂದ ಗಾಯಗೊಂಡ ಕ್ಯಾಮೆರಮನ್​ಗೆ ವಿಡಿಯೊ ಮೂಲಕ ಕ್ಷಮೆ ಕೇಳಿದ ರಿಷಭ್​ ಪಂತ್​​

gold rate today 34
ಚಿನ್ನದ ದರ30 mins ago

Gold Rate Today: ಬಂಗಾರದ ಮಾರುಕಟ್ಟೆಯಲ್ಲಿ ದರ ಇಂದು ತುಸು ಇಳಿಕೆ; 24Kಗೆ ಎಷ್ಟಿದೆ ನೋಡಿ

Lok sabha election 2024
Lok Sabha Election 202455 mins ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

leopard Attack
ಕ್ರೀಡೆ58 mins ago

leopard Attack: ಚಿರತೆ ದಾಳಿ; ಜಿಂಬಾಬ್ವೆ ಮಾಜಿ ಕ್ರಿಕೆಟಿಗನಿಗೆ ತೀವ್ರ ಗಾಯ

Madhavi Latha
Lok Sabha Election 20241 hour ago

Kompella Madhavi Latha: ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಆಸ್ತಿ ಎಷ್ಟಿದೆ ನೋಡಿ!

Tamannaah Bhatia Summoned in Illegal IPL Streaming Case
South Cinema1 hour ago

Tamannaah Bhatia: ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ; ನಟಿ ತಮನ್ನಾಗೆ ಸಮನ್ಸ್‌!

Kotak Bank
ದೇಶ1 hour ago

Kotak Bank: ಆರ್‌ಬಿಐ ನಿರ್ಬಂಧದ ಬೆನ್ನಲ್ಲೇ ಕೊಟಕ್‌ ಬ್ಯಾಂಕ್‌ ಷೇರು ಭಾರಿ ಕುಸಿತ; ಹೂಡಿಕೆದಾರರಿಗೆ ನಷ್ಟ!

Samsung India launched the 2nd edition of Samsung Innovation Campus
ದೇಶ1 hour ago

Samsung: ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್‌ನ 2ನೇ ಆವೃತ್ತಿ ಪ್ರಾರಂಭಿಸಿದ ಸ್ಯಾಮ್‌ಸಂಗ್ ಇಂಡಿಯಾ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ3 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ4 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ5 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20245 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌