ಇವರ ಮೈಮೇಲೆ ಸಾಯಿಬಾಬಾ ಬರುತ್ತಾರಾ? ಸದ್ಗುರು ಮಧುಸೂದನ ಸಾಯಿ ಇನ್ನೊಂದು ಸಾಮ್ರಾಜ್ಯ ಕಟ್ಟಿದ ರೋಚಕ ಕತೆ! - Vistara News

ಧಾರ್ಮಿಕ

ಇವರ ಮೈಮೇಲೆ ಸಾಯಿಬಾಬಾ ಬರುತ್ತಾರಾ? ಸದ್ಗುರು ಮಧುಸೂದನ ಸಾಯಿ ಇನ್ನೊಂದು ಸಾಮ್ರಾಜ್ಯ ಕಟ್ಟಿದ ರೋಚಕ ಕತೆ!

ಪುಟ್ಟಪರ್ತಿಯ ಸಾಯಿಬಾಬಾ ಭಕ್ತನಾಗಿದ್ದು, ಇಂದು ಸ್ವತಃ ತಮ್ಮನ್ನೇ ಸಾಯಿಬಾಬಾ ಆವಾಹಿತ ಎಂದು ಕರೆದುಕೊಳ್ಳುವ ಸದ್ಗುರು ಮಧುಸೂದನ ಸಾಯಿ ಅವರ ಕತೆ ಇಲ್ಲಿದೆ.

VISTARANEWS.COM


on

Madhusudan Sai
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೆಚ್ಚೇನೂ ದೂರವಿಲ್ಲ, ಕರ್ನಾಟಕದ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಎಂಬಲ್ಲಿ ಸದ್ಗುರು ಮಧುಸೂದನ ಸಾಯಿ ಅವರ ನೂರಾರು ಎಕರೆ ವಿಸ್ತೀರ್ಣದ ಆಶ್ರಮವಿದೆ. ಅವರು ಮತ್ತು ಅವರ ನೂರಾರು ಭಕ್ತರು ಹೇಳುವ ಪ್ರಕಾರ, ಅವರ ಮೈಮೇಲೆ ಶ್ರೀ ಸಾಯಿಬಾಬಾ ಅವರ ಆವಾಹನೆ ಆಗುತ್ತದೆ. ಆದರೆ ಪುಟ್ಟಪರ್ತಿಯ ಮೂಲ ಸಾಯಿಬಾಬಾ ಆಶ್ರಮದವರ ಪ್ರಕಾರ ಈ ವ್ಯಕ್ತಿ ನಕಲಿ. ಹಾಗಿದ್ದರೆ ನಿಜವೇನು?

ಒಂದು ಕಾಲದಲ್ಲಿ ಸತ್ಯನಾರಾಯಣ ರಾಜು ಅವರು ಸತ್ಯಸಾಯಿ ಬಾಬಾ ಆದಂತೆ, ಇಂದು ಮಧುಸೂದನ ನಾಯ್ಡು ಅವರು ತಮ್ಮ ಭಕ್ತಾದಿಗಳ ಬೆಂಬಲದಿಂದ ʼಸದ್ಗುರು ಶ್ರೀ ಮಧುಸೂದನ ಸಾಯಿʼ ಆಗಿದ್ದಾರೆ. ಸಾಯಿಬಾಬಾ ಅವರಂತೆಯೇ ಬಟ್ಟೆ ಧರಿಸುತ್ತಾರೆ. ಅವರಂತೆಯೇ ಗಾಳಿಯಿಂದ ವಿಭೂತಿ ಸೃಷ್ಟಿಸುವುದು, ಶೂನ್ಯದಿಂದ ಉಂಗುರ ಸೃಷ್ಟಿಸುವುದು ಮುಂತಾದ ಪವಾಡಗಳನ್ನು ಮಾಡುತ್ತಾರೆ. ಪುಟ್ಟಪರ್ತಿಯಿಂದ ನೂರು ಕಿಲೋಮೀಟರ್‌ ದೂರದಲ್ಲಿರುವ ಮುದ್ದೇನಹಳ್ಳಿಯಲ್ಲಿ ತಮ್ಮದೇ ಆದ ವ್ಯವಸ್ಥಿತ ಬೃಹತ್‌ ಆಶ್ರಮ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದಾರೆ.

ಸಾಯಾಬಾಬಾ ನನ್ನ ಜೊತೆ ಮಾತಾಡ್ತಾರೆ!
2011ರಲ್ಲಿ ಸಾಯಿಬಾಬಾ ಅವರು ನಿಧನ ಹೊಂದಿದರು. ಆಗ ಮಧುಸೂದನ ಅವರು ʼʼನನ್ನ ಜೊತೆ ಸಾಯಿಬಾಬಾ ಮಾತಾಡುತ್ತಾರೆʼʼ ಎಂದು ಹೇಳಿಕೊಂಡಿದ್ದರು. ಈಗ ʼʼಅವರೇ ನನ್ನ ಮೇಲೆ ಆವಾಹನೆಯಾಗುತ್ತಾರೆʼʼ ಎಂದು ಹೇಳಿಕೊಳ್ಳುತ್ತಾರೆ. ʼʼನನಗೆ ದೇಹವಿಲ್ಲ. ಆದರೆ ನಾನು ನಿಮ್ಮ ದೇಹಗಳ ಮೂಲಕ ಪವಾಡ ಮಾಡುತ್ತೇನೆʼʼ ಎಂದು ಸಾಯಿಬಾಬಾ ಅವರು ಮಧುಸೂದನ ಸಾಯಿ ಅವರಿಗೆ ಹೇಳಿದ್ದನ್ನು ತಮ್ಮ ಲೇಖನದಲ್ಲಿ ಬರೆದುಕೊಂಡಿದ್ದಾರೆ ಅವರು.

ಮುದ್ದೇನಹಳ್ಳಿಯ ಆಶ್ರಮ ಕಾರ್ಪೊರೇಟ್‌ ಮಾದರಿಯಲ್ಲಿದೆ. ಪಿಆರ್‌ ವ್ಯವಸ್ಥೆ ಕೂಡ ಅದ್ಭುತವಾಗಿದೆ. ಪುಟ್ಟಪರ್ತಿಯಿಂದ ಕೆಲವು ಭಕ್ತರು ಕೂಡ ಮುದ್ದೇನಹಳ್ಳಿಯ ಆಶ್ರಮಕ್ಕೆ ಶಿಫ್ಟ್‌ ಆಗಿದ್ದಾರೆ, ನಿಷ್ಠ ಬದಲಾಯಿಸಿದ್ದಾರೆ. ಆದರೆ ಪುಟ್ಟಪರ್ತಿಯ ಆಶ್ರಮದವರಿಗೆ ಮಧೂಸೂದನ ಸಾಯಿಯ ನೂತನ ಅವತಾರದ ಮೇಲೆ ಸಿಟ್ಟಿದೆ. ʼʼಅದು ನಕಲಿ, ನಾಟಕʼʼ ಎಂಬುದು ಅವರ ಅಭಿಪ್ರಾಯ.

2011ರ ಏಪ್ರಿಲ್‌ನಲ್ಲಿ ಸಾಯಿಬಾಬಾ ನಿರ್ವಾಣ ಹೊಂದಿದರು. ತಾನು 96 ವರ್ಷದವರೆಗೆ ಬದುಕುತ್ತೇನೆ, ನಂತರ ಕರ್ನಾಟಕದ ಮಂಡ್ಯದಲ್ಲಿ ಪ್ರೇಮಸಾಯಿಯಾಗಿ ಜನಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದರು. ಆದರೆ ಬದುಕಿದ್ದು 84 ವರ್ಷ ಮಾತ್ರ.

ಮುದ್ದೇನಹಳ್ಳಿಯ ಸಾಯಿ ಗ್ರಾಮ

ಬಾಬಾರ ನಿಕಟ ಅನುಯಾಯಿ
ಮಧುಸೂದನ ಸಾಯಿ ಅವರಿಗೆ ಈಗ 43 ವರ್ಷ. ಸಾಯಿಬಾಬಾ ತೀರಿಕೊಂಡ ಬಳಿಕ ಪುಟ್ಟಪರ್ತಿಯಲ್ಲಿದ್ದ ನರಸಿಂಹ ಮೂರ್ತಿ, ಸಿ.ಶ್ರೀನಿವಾಸ್‌, ಐಸಾಕ್‌ ಟಿಗ್ರೆಟ್‌ ಎಂಬ ದೊಡ್ಡ ಭಕ್ತರೆಲ್ಲ ಮಧುಸೂದನರ ಜೊತೆಗೆ ಸೇರಿಕೊಂಡರು. ಕೆಮಿಸ್ಟ್ರಿಯಲ್ಲಿ ಬಿಎ ಮತ್ತು ಎಂಎ ಡಿಗ್ರಿ ಮಾಡಿದ ಮಧುಸೂದನ, ಎಂಬಿಎಯನ್ನು ಪುಟ್ಟಪರ್ತಿಯಲ್ಲಿ ಮಾಡಿದರು. ಆಗಲೇ ಅದ್ಭುತವಾಗಿ ಮಾತನಾಡುತ್ತಿದ್ದರು, ಸ್ಟಡಿಯಲ್ಲಿ ಪಾರಂಗತ. ಸಂಗೀತ, ನಾಟಕ, ಪೇಂಟಿಂಗ್‌ಗಳಲ್ಲಿ ಪ್ರತಿಭಾವಂತ. ಸಾಯಿಬಾಬಾ ಅವರ ಹತ್ತಿರದ ಒಡನಾಟ ಹೊಂದಿದ್ದರು. ಆಗಲೇ ಹಾಸ್ಟೆಲ್‌ನಲ್ಲಿ ಸಾಯಿಬಾಬಾ ಅವರ ಮಾತು, ಕೈಕರಣಗಳನ್ನು ಅನುಕರಿಸಿ ಗೆಳೆಯರನ್ನು ಆಕರ್ಷಿಸುತ್ತಿದ್ದರು. ಸಾಯಿಬಾಬಾರಿಂದ ಕೆರಿಯರ್‌ ಮಾರ್ಗದರ್ಶನ ಪಡೆಯುತ್ತಿದ್ದರು. ಬಾಬಾ ಅವರ ತಂದೆತಾಯಿಗಳ ಪೇಟಿಂಗ್‌ ಮಾಡಿಕೊಟ್ಟಿದ್ದರು.

ಇದನ್ನೂ ಓದಿ: Explainer: ಕಾಶಿ ಮಾದರಿ ಸಮೀಕ್ಷೆಯತ್ತ ಮಥುರಾ ಶ್ರೀ ಕೃಷ್ಣ ಜನ್ಮಭೂಮಿ ?

2003ರಲ್ಲಿ ಎಂಬಿಎ ಮಾಡಿದ ಬಳಿಕ, ಬ್ಯಾಂಕಿಂಗ್‌ನತ್ತ ಹೋದರು. ಆದರೆ ಪುಟ್ಟಪರ್ತಿಗೆಗೆ ಆಗಾಗ ಬರುತ್ತಿದ್ದರು. ಸಾಯಿಬಾಬಾ ತೀರಿಕೊಂಡ ನಂತರ ಮಧುಸೂದನರ ವರ್ತನೆಗಳು ಬದಲಾದವು. ʼʼಸಮಾಧಿ ಒಡೆದು ಬಾಬಾ ಹೊರಗೆ ಬರುತ್ತಾರೆʼʼ ಎನ್ನುತ್ತಿದ್ದರು. ಪುಟ್ಟಪರ್ತಿಗೆ ಬಂದು ಭಕ್ತರನ್ನೆಲ್ಲ ಒಂದೆಡೆ ಸೇರಿಸಿ, ಅವರನ್ನು ದಿಟ್ಟಿಸಿ ನೋಡಿ, ʼʼಅದೋ ಬಾಬಾ ಬಂದರುʼʼ ಎನ್ನುತ್ತಿದ್ದರು. ಬಾಬಾ ನನ್ನ ಜೊತೆ ಮಾತಾಡುತ್ತಿದ್ದಾರೆ ಎನ್ನುತ್ತಿದ್ದರು. ಬಾಬಾ ಸಾವಿನ ಶಾಕ್‌ಗೆ ಮಧುಸೂದನ ಒಳಗಾಗಿದ್ದಾರೆ ಎಂದು ಪುಟ್ಟಪರ್ತಿ ಆಶ್ರಮದವರು ಇದನ್ನು ನಿರ್ಲಕ್ಷಿಸಿದರು.

ಸಾಯಿಬಾಬಾ ತಮ್ಮ ಕೊನೆಗಾಲದಲ್ಲಿ ಯಾವುದೇ ಉಯಿಲು ಇತ್ಯಾದಿ ಏನೂ ಬರೆದಿಟ್ಟಿರಲಿಲ್ಲ. ಹೀಗಾಗಿ ಪುಟ್ಟಪರ್ತಿಯ ಉತ್ತರಾಧಿಕಾರದ ಕುರಿತ ಗೊಂದಲ ಮುಂದುವರಿದಿತ್ತು. ಪುಟ್ಟಪರ್ತಿಗೇ ಸಂಬಂಧಿಸಿದ ಮುದ್ದೇನಹಳ್ಳಿಯ 120 ಎಕರೆ ಆಶ್ರಮ ಕೂಡ ಮುಂದೇನು ಎಂಬ ಇತ್ಯರ್ಥ ಇಲ್ಲದೇ ಹೋಗಿತ್ತು. ಅದೇ ಸಂದರ್ಭದಲ್ಲಿ ಮಧುಸೂದನ ಅಲ್ಲಿಗೆ ಬಂದು ಝಂಡಾ ಊರಿದರು.

ಅಲ್ಲಿಂದಾಚೆಗೆ ಮುದ್ದೇನಹಳ್ಳಿ ಆಶ್ರಮದ ಲುಕ್ಕೇ ಬದಲಾಗಿ ಹೋಯಿತು. ಹೊಸ ಆಶ್ರಮ ಬಂತು. ʼಸತ್ಯಸಾಯಿ ಗ್ರಾಮʼ ಎಂದು ಕರೆಯಲಾಯಿತು. ಅಗಲ ಬೀದಿಗಳು, ದೊಡ್ಡ ಕಟ್ಟಡಗಳು, ಸೊಗಸಾದ ಲಾನ್‌ಗಳು, ಫುಡ್‌ ಔಟ್‌ಲೆಟ್‌ಗಳು, ಶಾಪಿಂಗ್‌ ಮಾಲ್‌ಗಳು ಬಂದವು. ನಿತ್ಯ ಧ್ಯಾನದ ಶೆಡ್ಯೂಲ್‌ಗಳು ಹಾಗೂ ಸಾರಿಗೆ ಸಂಪರ್ಕವಿದೆ. ಸ್ಟೇಡಿಯಂ ಮತ್ತು ಗೋಶಾಲೆ ನಿರ್ಮಾಣವಾಗುತ್ತಿದೆ. ಕೋಟ್ಯಂತರ ರೂಪಾಯಿ ಹಣ ದೇಶ ವಿದೇಶದ ಭಕ್ತಾದಿಗಳಿಂದ ಹರಿದು ಬರುತ್ತಿದೆ.

ಬಾಬಾ ಸಂದೇಶವಾಹಕ
2011ರ ನಂತರ ʼʼನಾನು ಸತ್ಯಸಾಯಿ ಬಾಬಾ ಅವರ ಸಂದೇಶವಾಹಕʼʼ ಎಂದು ಮಧುಸೂದನ ಹೇಳಿಕೊಂಡರು. ಸರಳ ಬಟ್ಟೆ ತೊಡುತ್ತಿದ್ದರು. ತಮ್ಮ ಗುರುವಿಗಾಗಿ ಮೀಸಲಾದ ಒಂದು ಕುರ್ಚಿಯನ್ನು ಮುಂದಿಟ್ಟುಕೊಂಡು ಅದರ ಮುಂದೆ ಕುಳಿತಿರುತ್ತಿದ್ದರು. ಸ್ವಲ್ಪ ಕಾಲದ ನಂತರ ʼʼನಾನು ಸಾಯಿಬಾಬಾ ಅವರನ್ನು ನೋಡಬಲ್ಲೆʼʼ ಎನ್ನತೊಡಗಿದರು. ಮರ್ಸಿಡಿಸ್‌ ಕಾರಿನ ಬಾಗಿಲು ತೆರೆದು, ಹಿಂದಿನ ಸೀಟಿನಿಂದ ಇಳಿದು ಬರುತ್ತಿರುವ ಸಾಯಿಬಾಬಾ ಅವರನ್ನ ಸ್ವಾಗತಿಸಿದಂತೆ, ಅವರ ಮಾತನ್ನು ಆಲಿಸಿದಂತೆ, ತಾನೂ ಅವರೊಂದಿಗೆ ಮಾತಾಡಿದಂತೆ ಅಭಿನಯಿಸಿದರು.

ಇದೆಲ್ಲ ಬಾಬಾ ಅವರ ಭಕ್ತರನ್ನು ಆಕರ್ಷಿಸಿತು. ಪುಟ್ಟಪರ್ತಿಯ ಅನೇಕ ಸಾಂಪ್ರದಾಯಿಕ ಭಕ್ತರು ಕೂಡ ಇತ್ತ ಸೆಳೆತಕ್ಕೊಳಗಾದರು. ವಿದೇಶಗಳ ಭಕ್ತರೂ ಬರತೊಡಗಿದರು. ಕೆಲವು ವಿದೇಶಿ ಭಕ್ತರ ಹಿಂದಿನ ಜೀವನದ ವಿವರಗಳನ್ನು ಕರಾರುವಕ್ಕಾಗಿ ಹೇಳಿ, ಅವರನ್ನು ಮತ್ತಷ್ಟು ಇಂಪ್ರೆಸ್‌ ಮಾಡಿದರು. ಕೆಲವರು ಪರ್ಮನೆಂಟಾಗಿ ತಮ್ಮ ತಾಣವನ್ನು ಪುಟ್ಟಪರ್ತಿಯಿಂದ ಇಲ್ಲಿಗೆ ಬದಲಾಯಿಸಿದರು.

ನಾನೇ ಬಾಬಾ!
ನಿಧಾನವಾಗಿ ಮಧುಸೂದನ ಇನ್ನಷ್ಟು ಬದಲಾದರು. ಸತ್ಯಸಾಯಿ ಬಾಬಾ ಅವರಂತೆಯೇ ಉಡುಪು ಧರಿಸತೊಡಗಿದರು. 2019ರ ಜುಲೈ 16ರಂದು, ಸಾಯಿಬಾಬಾ ಅವರಿಗೆ ಮೀಸಲಿಟ್ಟ ಆಸನದಲ್ಲಿ ತಾವೇ ಕುಳಿತರು. ʼʼಗುರುಪೂರ್ಣಿಮೆಯಂದು ನಾನು ಎಲ್ಲವನ್ನೂ ಮಧುಸೂದನ್‌ಗೆ ಒಪ್ಪಿಸಿಕೊಟ್ಟಿದ್ದೇನೆ. ಅಗತ್ಯವಿದ್ದರೆ ಅವನು 24 ಗಂಟೆಯೂ ನನ್ನ ಆವಾಹನೆಯನ್ನು ಹೊಂದಿ ಇರಬಹುದುʼʼ ಎಂದು ಸಾಯಿಬಾಬಾ ಅವರ ಧ್ವನಿಯಲ್ಲಿ ಮಧುಸೂದನ ಹೇಳಿದರು.

ಇದನ್ನೂ ಓದಿ: Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?

ಇದೆಲ್ಲವೂ ಅತ್ತ ಪುಟ್ಟಪರ್ತಿಯ ಆಶ್ರಮದಲ್ಲಿ ಒಂದು ಬಗೆಯ ಕೋಲಾಹಲವನ್ನೇ ಸೃಷ್ಟಿಸಿವೆ. ಮಧುಸೂದನ ಅವರ ಬೋಧನೆ, ಮಾತುಗಳಿಂದ ಆಕರ್ಷಿತರಾಗಿ ಇತ ಬಂದವರು ಹಲವರಿದ್ದಾರೆ. ಅವರನ್ನು ಪುಟ್ಟಪರ್ತಿಯ ಆಶ್ರಮದವರು ಮರಳಿ ಸೇರಿಸಿಕೊಂಡಿಲ್ಲ. ʼʼಮಧುಸೂದನ ಮಾಡುತ್ತಿರುವುದೆಲ್ಲಾ ನಾಟಕʼʼ ಎಂದೇ ಅವರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಆಶ್ರಮದ ಜಾಗದ ತಗಾದೆ ಸೇರಿದಂತೆ ಹಲವಾರು ಕೋರ್ಟ್‌ ಪ್ರಕರಣಗಳು ಸಾಯಿಬಾಬಾ ಟ್ರಸ್ಟ್‌ ಹಾಗೂ ಮುದ್ದೇನಹಳ್ಳಿ ಆಶ್ರಮದ ನಡುವೆ ಇವೆ. ಮಧುಸೂದನ ಅವರ ಪುಸ್ತಕ ಅಥವಾ ಇನ್ಯಾವುದೇ ಪ್ರಭಾವಗಳು ಕಂಡುಬಂದಲ್ಲಿ ಅಂಥವರ ಮೇಲೆ ಪುಟ್ಟಪರ್ತಿ ಆಶ್ರಮ ಕಠಿಣ ಕ್ರಮ ಕೈಗೊಳ್ಳುತ್ತದೆ.

ಕೆಲವು ದಾಖಲೆಗಳ ಪ್ರಕಾರ ಇತ್ತೀಚೆಗೆ ಪುಟ್ಟಪರ್ತಿಗಿಂತಲೂ ಅಧಿಕ ವಿದೇಶಿ ಹಣ ಮುದ್ದೇನಹಳ್ಳಿ ಆಶ್ರಮಕ್ಕೆ ಹರಿದುಬರುತ್ತಿದೆ. ಆದರೆ ಪುಟ್ಟಪರ್ತಿಯ ಸಾಮ್ರಾಜ್ಯ ಇಂದಿಗೂ ಅಖಂಡಿತವಾಗಿಯೇ ಇದೆ. 114 ದೇಶಗಳಲ್ಲಿ ಹರಡಿಕೊಂಡಿರುವ ಸಾಯಿಬಾಬಾ ಕೇಂದ್ರಗಳು, ಶಿಕ್ಷಣಕೇಂದ್ರಗಳು, ಸುಸಜ್ಜಿತ ಏರ್‌ಪೋರ್ಟ್‌ ಎಲ್ಲ ಇವೆ.

ಸಾಯಿಬಾಬಾ ಅವರು ಮಧುಸೂದನ ಸಾಯಿ ಅವರ ದೇಹದಲ್ಲಿ ಇದ್ದಾರೆ ಎಂಬುದರ ಬಗ್ಗೆ ಅವರ ಭಕ್ತರಿಗೆ ಅಪನಂಬಿಕೆಯಿಲ್ಲ. ಆದರೆ ಪುಟ್ಟಪರ್ತಿಯವರಿಗೆ ಇದರ ಬಗ್ಗೆ ನಂಬಿಕೆಯಿಲ್ಲ. ಇಬ್ಬರಿಗೂ ತಮ್ಮ ತಮ್ಮ ಸಾಮ್ರಾಜ್ಯವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯವಂತೂ ಇದ್ದೇ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Bengaluru Karaga: ವೈಭವದ ಕರಗ ಮಹೋತ್ಸವ ಸಂಪನ್ನ; ಲಕ್ಷಾಂತರ ಭಕ್ತರ ನಡುವೆ ಮಸ್ತಾನ್ ಸಾಬ್ ದರ್ಗಾಗೆ ಭೇಟಿ

Bengaluru Karaga: ಸಂಪ್ರದಾಯದಂತೆ ಹಜರತ್ ತವಕಲ್ ಮಸ್ತಾನ್ ಷಾ ದರ್ಗಕ್ಕೆ ಕರಗ ಭೇಟಿ ನೀಡಿತು. ಹಜರತ್ ತವಕಲ್‌ ಮಸ್ತಾನ್ ಷಾನಲ್ಲಿ ಕರಗದ ಆಗಮನಕ್ಕಾಗಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ದರ್ಗದಲ್ಲಿ ಕರಗಕ್ಕೆ ‌ಪೂಜೆ ಸಲ್ಲಿಸಲಾಗಿದ್ದು, ನಂತರ ದರ್ಗಾವನ್ನು ಪ್ರದಕ್ಷಿಣೆ ಮಾಡಿ ಅಣ್ಣಮ್ಮ ದೇವಸ್ಥಾನದತ್ತ ತೆರಳಿತು.

VISTARANEWS.COM


on

bengaluru karaga in darga
Koo

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ (Bengaluru karaga Festival) ಮಂಗಳವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು. ನಗರ್ತಪೇಟೆಯಲ್ಲಿ ಧರ್ಮರಾಯಸ್ವಾಮಿ (Dharmaraya swamy) ರಥೋತ್ಸವ ಬಳಿಕ ರಾತ್ರಿ 2 ಗಂಟೆಗೆ ಕರಗ ಶಕ್ತ್ಸೋತ್ಸವಕ್ಕೆ (Bangalore Karaga) ಚಾಲನೆ ನೀಡಲಾಯಿತು. ಮುಂಜಾನೆ ಹಾಜಿ ಮಸ್ತಾನ್‌ ಸಾಬ್‌ ದರ್ಗಾಗೂ (Haji Mastan Saab Darga) ಭೇಟಿ ಕೊಟ್ಟು 5.45ರ ವೇಳೆಗೆ ಧರ್ಮರಾಯ ಸ್ವಾಮಿ ದೇವಸ್ಥಾನದೊಳಗೆ ಕರಗ ಸೇರಿಕೊಂಡಿತು. ವೈಭವದ ಕರಗ ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು.

ನಿನ್ನೆ ರಾತ್ರಿ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ತೇಜಸ್ವಿ ಸೂರ್ಯ, ಶಾಸಕ ಹ್ಯಾರಿಸ್‌, ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಮುಂತಾದವರು ಭೇಟಿ ನೀಡಿದರು. ಬೆಳಗ್ಗೆಯಿಂದಲೇ ತಾಯಿಗೆ ಬಳೆ ಶಾಸ್ತ್ರ, ತಾಳಿ ಶಾಸ್ತ್ರ, ಹೂ ಶಾಸ್ತ್ರ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರ ರಾತ್ರಿ 10.30ಕ್ಕೆ ಕಲ್ಯಾಣಿಗೆ ಹೋಗಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ವಾಪಸ್ ಬಂದು ಧರ್ಮರಾಯ ದೇವಸ್ಥಾನದಲ್ಲಿ ಪೂಜೆ ಮಾಡಲಾಯಿತು. ರಥೋತ್ಸವದ ಬಳಿಕ ಭಕ್ತರ ಗೋವಿಂದ… ಗೋವಿಂದ… ಎಂಬ ಘೋಷಣೆಗಳ ನಡುವೆ ಅರ್ಚಕ ಜ್ಞಾನೇಂದ್ರ ಅವರು ಕರಗ ಹೊತ್ತು ಸಾಗಿದರು.

ಮುಖ್ಯ ರಥ ಧರ್ಮರಾಯಸ್ವಾಮಿ ರಥದಲ್ಲಿ ಅರ್ಜುನ‌ ಮತ್ತು ದ್ರೌಪದಿ ದೇವಿ ವಿರಾಜಮಾನರಾಗಿದ್ದರು. ಚಿಕ್ಕ ರಥದಲ್ಲಿ ಗ್ರಾಮದೇವಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಪಾಂಡವರ ಮೂರ್ತಿಗಳು ಸೇರಿ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥಗಳು ಮುಂದೆ ಸಾಗುತ್ತಿದ್ದಂತೆ ದೇಗುಲದಿಂದ ದ್ರೌಪದಿ ದೇವಿ ಕರಗ ಹೊರಬಂದಿತು.

ಕರಗ ಸಾಗುವ ರಾಜಬೀದಿಗಳೆಲ್ಲಾ ಬಣ್ಣ ಬಣ್ಣದ ಲೈಟಿಂಗ್‌ ಹಾಗೂ ಜನರಿಂದ ಕಂಗೊಳಿಸಿದವು. ಸಾಂಪ್ರದಾಯಿಕವಾಗಿ ಎ. ಜ್ಞಾನೇಂದ್ರ 14ನೇ ಬಾರಿ ಕರಗ ಹೊತ್ತರು. ಒಂದು ರಥದಲ್ಲಿ ಮುತ್ಯಾಲಮ್ಮ ಮೂರ್ತಿ ಪ್ರತಿಷ್ಠಾಪನೆಯಾಗಿದ್ದು, ಪಾಂಡವರ ಮೂರ್ತಿಗಳು ಸೇರಿದಂತೆ ಒಟ್ಟು ಒಂಬತ್ತು ಮೂರ್ತಿಗಳಿಗೆ ವೀರಕುಮಾರರಿಂದ ಪೂಜೆ ಸಂದಿತು. ಪೂಜೆ ನಂತರ ಮತ್ತೊಂದು ರಥದಲ್ಲಿ ದ್ರೌಪದಿ ಮತ್ತು ಅರ್ಜುನ ಮೂರ್ತಿ ಪ್ರತಿಷ್ಠಾಪನೆಯಾಯಿತು. ನಂತರ ರಥಗಳ ಮೆರವಣಿಗೆ ಆರಂಭವಾಯಿತು. ಖಡ್ಗಗಳನ್ನು ಹಿಡಿದು ನೂರಾರು ವೀರಕುಮಾರರು ಮೆರವಣಿಗೆಯಲ್ಲಿ ತೆರಳಿದರು. ರಥಗಳು ಮುಂದೆ ಸಾಗುತ್ತಿದ್ದಂತೆ ದ್ರೌಪದಿ ದೇವಿ ಕರಗ ದೇಗುಲದಿಂದ ಹೊರ ಬಂದಿದ್ದು, ಅದನ್ನು ಕಂಡು ಭಕ್ತರು ಹರ್ಷೋದ್ಗಾರ ಮಾಡಿದರು.

ಸಂಪ್ರದಾಯದಂತೆ ಹಜರತ್ ತವಕಲ್ ಮಸ್ತಾನ್ ಷಾ ದರ್ಗಕ್ಕೆ ಕರಗ ಭೇಟಿ ನೀಡಿತು. ಹಜರತ್ ತವಕಲ್‌ ಮಸ್ತಾನ್ ಷಾನಲ್ಲಿ ಕರಗದ ಆಗಮನಕ್ಕಾಗಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿದ್ಯುತ್ ದೀಪಗಳಿಂದ ಕಂಗೊಳಿಸಿತು. ದರ್ಗದಲ್ಲಿ ಕರಗಕ್ಕೆ ‌ಪೂಜೆ ಸಲ್ಲಿಸಲಾಗಿದ್ದು, ನಂತರ ದರ್ಗಾವನ್ನು ಪ್ರದಕ್ಷಿಣೆ ಮಾಡಿ ಅಣ್ಣಮ್ಮ ದೇವಸ್ಥಾನದತ್ತ ತೆರಳಿತು. ಒಟ್ಟು 11-12 ಕಿಲೋಮೀಟರ್ ಕರಗದ ಮೆರವಣಿಗೆ ಸಾಗಿದೆ.

ಕರಗ ಮೆರವಣಿಗೆ ಮಾರ್ಗ

ರಥೋತ್ಸವದ ನಂತರ ಮಧ್ಯರಾತ್ರಿ 1 ಗಂಟೆಯಿಂದ ಕರಗ ಮಹೋತ್ಸವದ ಮೆರವಣಿಗೆ ಸಾಗಿತು. ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಕರಗ ಮೆರವಣಿಗೆ ಆರಂಭವಾಗಿ ಕಬ್ಬನ್​ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ ಮೂಲಕ ಸಾಗಿ ನಂತರ ಕೆ.ಆರ್. ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇಗುಲಕ್ಕೆ ತೆರಳಿತು. ಬಳಿಕ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ರಾಣಾಸಿಂಗ್​ಪೇಟೆ, ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ, ಬಳೆಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್​ಪಿ ರಸ್ತೆ ಮೂಲಕ ಸಾಗಿ ಅಣ್ಣಮ್ಮ ದೇಗುಲಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸಾಯಿತು. ಬೆಳಗ್ಗೆ 5.45 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ಸೇರಿತು. ಬೆಳಗ್ಗೆ 8 ಗಂಟೆಗೆ ತಾಯಿಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಕರಗಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ | Bengaluru Karaga 2024: ಬೆಂಗಳೂರು ಕರಗ ಶಕ್ತ್ಸೋತ್ಸವಕ್ಕೆ ಕೌಂಟ್‌ ಡೌನ್‌; 8 ಲಕ್ಷ ಜನ ಭಾಗಿ!

Continue Reading

ಬೆಂಗಳೂರು

Bengaluru Karaga 2024: ಬೆಂಗಳೂರು ಕರಗ ಶಕ್ತ್ಸೋತ್ಸವಕ್ಕೆ ಕೌಂಟ್‌ ಡೌನ್‌; 8 ಲಕ್ಷ ಜನ ಭಾಗಿ!

Bengaluru Karaga 2024 : ಚೈತ್ರ ಹುಣ್ಣಿಮೆಯ ದಿನದಂದು ನಡೆಯುವ ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಕ್ಷಣ ಗಣನೆ ಶುರುವಾಗಿದೆ. ಸೋಮವಾರ ಮಧ್ಯರಾತ್ರಿ ಪೊಂಗಲ್‌ ಸೇವೆ ನೆರವೇರಿದ್ದು, ಮಂಗಳವಾರ ಮಧ್ಯರಾತ್ರಿ 12:30ರ ಸುಮಾರಿಗೆ ಕರಗ ಮೆರವಣಿಗೆ ನಡೆಯಲಿದೆ.

VISTARANEWS.COM


on

By

Bengaluru Karaga 2024
Koo

ಬೆಂಗಳೂರು: ರಾಜಧಾನಿಯ ಪಾರಂಪರಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಂಗಳೂರು ಕರಗ ಉತ್ಸವ ಚೈತ್ರ ಮಾಸದ ಹುಣ್ಣಿಮೆಯಂದು ಮಂಗಳವಾರ ರಾತ್ರಿ ವೈಭವದಿಂದ (Bengaluru Karaga 2024) ನಡೆಯಲಿದೆ. ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ನೋಡಲು ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಕರಗ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ರಾಜಧಾನಿ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಆರು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಈಗಾಗಲೇ ತಿಗಳರಪೇಟೆ, ಚಿಕ್ಕಪೇಟೆ, ಕಾರ್ಪೋರೇಷನ್‌ ಸೇರಿದಂತೆ ಹಳೇ ಬೆಂಗಳೂರು ಪ್ರದೇಶವೆಲ್ಲವೂ ಸಿಂಗಾರಗೊಂಡಿದೆ. ಏ.23ರ ಚೈತ್ರ ಹುಣ್ಣಿಮೆಯ ದಿನದಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ಮಹಾರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಕರಗ ಹೊರುವ ಪೂಜಾರಿ ಜ್ಞಾನೇಂದ್ರ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇಂದು ಮಧ್ಯರಾತ್ರಿ 12:30ಕ್ಕೆ ಪೂಜಾ ಕೈಂಕರ್ಯಗಳು ಹಾಗೂ ಕಣ ಪೂಜೆ ಬಳಿಕ ಧರ್ಮರಾಯಸ್ವಾಮಿ ದೇಗುಲದಿಂದ ಹೊರಡುವ ಕರಗ ರಾಜಬೀದಿಗಳಲ್ಲಿ ಸಂಚಾರಿಸಲಿದೆ.

ಕರಗ ಸಾಗುವ ಮಾರ್ಗ ಹೀಗಿದೆ..

ಮೊದಲಿಗೆ ಧರ್ಮರಾಯ ಸ್ವಾಮಿ ದೇವಸ್ಥಾನ ಪ್ರದಕ್ಷಿಣೆ ಹಾಕಿ ದ್ರೌಪದಮ್ಮ ಕರಗ ಹೊರಡಲಿದೆ. ಕುಂಬಾರಪೇಟೆ ರಸ್ತೆ ಮೂಲಕ ಸಾಗಿ ಕೆ.ಆರ್‌.ಮಾರುಕಟ್ಟೆ ನಂತರ ಕೋಟೆ ಆಂಜನೇಯ ಸ್ವಾಮಿ ದೇಗುಲಕ್ಕೆ ತೆರಳಿ ಪೂಜೆ ಸ್ವೀಕರಿಸಲಿದೆ. ಕೆ.ಆರ್‌. ಮಾರುಕಟ್ಟೆ ವೃತ್ತಕ್ಕೆ ವಾಪಾಸಾಗಿ ಕಾಟನ್‌ಪೇಟೆ ಪೊಲೀಸ್‌ ಠಾಣೆ ರಸ್ತೆಯಲ್ಲಿ ತೆರಳಿ, ಅಲ್ಲಿನ ಮಸ್ತಾನ್‌ಸಾಬ್‌ ದರ್ಗಾಕ್ಕೆ ತೆರಳಿ ಪೂಜೆ ಸ್ವೀಕರಿಸಿ, ಬಳೇಪೇಟೆ ವೃತ್ತದ ಮೂಲಕ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಹೋಗಿ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ವಾಪಸ್‌ ಮರಳಲಿದೆ.

ಮಸ್ತಾನ್ ಸಾಬ್ ದರ್ಗಾದಲ್ಲಿ ಕರಗ ವೈಭವ

ಸಂಪ್ರದಾಯದಂತೆ ಬೆಂಗಳೂರು ಕರಗವು ಅಕ್ಕಿಪೇಟೆಯಲ್ಲಿರುವ ಮಸ್ತಾನ್ ಸಾಬ್ ದರ್ಗಾಕ್ಕೆ ಹೋಗಿ ಬರಲಿದ್ದು, ಧಾರ್ಮಿಕ ಭಾವೈಕ್ಯತೆಗೆ ಸಾಕ್ಷಿಯಾಗಲಿದೆ. ಮುಸ್ಲಿಂ ಭಾಂದವರು ಸಹ ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ಕರಗಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಇದನ್ನು ಫಾತಿಯಾ ಎಂದು ಕರೆಯಲಾಗುತ್ತದೆ. ಕರಗದ ಮೆರವಣಿಗೆ ಗಣಪತಿ ದೇವಸ್ಥಾನದಲ್ಲಿ ಮೊದಲ ಪೂಜೆ, ಗ್ರಾಮ ದೇವತೆ ಮುತ್ಯಾಲಮ್ಮನಿಗೆ ಎರಡನೇ ನಮಸ್ಕಾರ ಸಲ್ಲಿಸಿ ಇಲ್ಲಿಂದ ರಾಜಬೀದಿಗಳಲ್ಲಿ ಸಂಚಾರಿಸಿ, ನಂತರ ನಗರ ದೇವತೆ ಅಣ್ಣಮ್ಮ ದೇವಸ್ಥಾನಕ್ಕೆ ಹೋಗಿ ವಾಪಸ್‌ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಬರಲಿದೆ.

13ನೇ ಬಾರಿ ಕರಗ ಹೊರುತ್ತಿರುವ ಜ್ಞಾನೇಂದ್ರ

ಏಪ್ರಿಲ್ 15ರಿಂದ ಕರಗ ಮಹೋತ್ಸವ ಶುರುವಾಗಿದ್ದು, ಏ. 23 ರಂದು ಕೊನೆಗೊಳ್ಳಲಿದೆ. ಈ ಬಾರಿಯೂ ಕರಗವನ್ನು ಕರಗದ ಪೂಜಾರಿ ಎ. ಜ್ಞಾನೇಂದ್ರ ಹೊರಲಿದ್ದಾರೆ. ಈ ಮೂಲಕ ಜ್ಞಾನೇಂದ್ರ 13ನೇ ಬೆಂಗಳೂರು ಕರಗ ಹೊರುತ್ತಿದ್ದಾರೆ. ಇನ್ನೂ ಕಳೆದ ವರ್ಷ ಕರಗ ಶಕ್ತ್ಯೋತ್ಸವ ನಡೆಯುವ ಸಂದರ್ಭದಲ್ಲಿ ಕಿಡಿಗೇಡಿಗಳು ಕರಗದ ಪೂಜಾರಿ ಜ್ಞಾನೇಂದ್ರ ಅವರ ಮೇಲೆ ಕೆಮಿಕಲ್ ಎರಚಿದ್ದರು. ಆ ಮೂಲಕ ಕರಗ ಮಹೋತ್ಸವಕ್ಕೆ ಅಡ್ಡಿಪಡಿಸಲು ಮುಂದಾಗಿದ್ದರು. ಆದರೂ ಕರಗದ ಪೂಜಾರಿ ಜ್ಞಾನೇಂದ್ರ ಯಶಸ್ವಿಯಾಗಿ ದ್ರೌಪದಿದೇವಿ ಕರಗವನ್ನು ರಾಜಬೀದಿಯಲ್ಲಿ ಉತ್ಸವ ಮುಗಿಸಿದರು. ಹಿಂದಿನ ಘಟನೆಯನ್ನು ಮರುಕಳಿಸಬಾರೆಂದು ಈ ಬಾರಿ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ.

ಕರಗ ಮಹೋತ್ಸವ ಹಿನ್ನೆಲೆ ಮದ್ಯ ಮಾರಾಟ ನಿಷೇಧ

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ (Bengaluru Karaga 2024) ಹಿನ್ನೆಲೆಯಲ್ಲಿ ಏ.23ರಂದು ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಹಲಸೂರು ಗೇಟ್, ಎಸ್ಆರ್ ನಗರ, ವಿಲ್ಸನ್ ಗಾರ್ಡನ್, ಎಸ್‌ಜೆ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡುವಂತೆ ಆಯುಕ್ತ ದಯಾನಂದ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಕರಗ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುತ್ತಾರೆ. ಈ ವೇಳೆ ಕೆಲವು ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕಾನೂನು ಬಾಹಿರ ಕೃತ್ಯ ಎಸಗುವ ಸಾಧ್ಯತೆ ಇದೆ. ಇದು ಸಾರ್ವಜನಿಕರ ಶಾಂತಿಗೆ‌ ಭಂಗ ಉಂಟು ಮಾಡುವ ಸಂಭವವಿದೆ.

ಹೀಗಾಗಿ ಮುನ್ನೆಚ್ಚರಿಕೆ ಸಲುವಾಗಿ ಏ.23ರ ಬೆಳಗ್ಗೆ 6ಗಂಟೆಯಿಂದ ಮರುದಿನ 24ರ ಬೆಳಗ್ಗೆ 10ರವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ನಾಲ್ಕು ಠಾಣಾ ವ್ಯಾಪ್ತಿಯ ಬಾರ್ ರೆಸ್ಟೋರೆಂಟ್, ಮದ್ಯದ ಅಂಗಡಿಗಳು, ವೈನ್ ಶಾಪ್,‌ ಪಬ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ.

ಕರಗ ಮಹೋತ್ಸವ; ವಾಹನ ಸವಾರರೇ ಬೇರೆ ದಾರಿ ಕಂಡುಕೊಳ್ಳಿ

ಇಂದು ಮಧ್ಯರಾತ್ರಿ ಐತಿಹಾಸಿಕ ಬೆಂಗಳೂರು ಕರಗ (Bengaluru Karaga Festival) ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ (Traffic restriction) ಹೇರಲಾಗಿದ್ದು, ಪರ್ಯಾಯ (Alternate roads) ರಸ್ತೆಗಳಲ್ಲಿ ಸಾಗುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು (Bangalore traffic police) ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ರಾಫಿಕ್‌ ಪೊಲೀಸರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ: ದಿನಾಂಕ: 23.04.2024ರಿಂದ ದಿನಾಂಕ: 24.04.2024ರ ಬೆಳಗ್ಗೆ 06:00 ಗಂಟೆಯವರೆಗೆ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ಬೆಂಗಳೂರು ಕರಗದ ಉತ್ಸವ ನಡೆಯುತ್ತಿದ್ದು, ಈ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿರುತ್ತದೆ ಎಂದು ತಿಳಿಸಿದೆ.

ಮೆರವಣಿಗೆ ಸಾಗುವ ಮಾರ್ಗ

ಮೆರವಣಿಗೆಯು ನಗರ್ತಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡು ಕಬ್ಬನ್‌ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ ಮೂಲಕ ಕೆ.ಆರ್ ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇವಾಲಯಕ್ಕೆ ಬಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ಮೂಲಕ ರಾಣಾಸಿಂಗ್ ಪೇಟೆ,‌ ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ , ಮಸ್ತಾನ್ ಸಾಹೇಬ್ ದರ್ಗಾ, ಬಳೇಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್.ಪಿ.ರಸ್ತೆ ಮೂಲಕ ಅಣ್ಣಮ್ಮ ದೇವಾಲಯಕ್ಕೆ ಬರುತ್ತದೆ. ಪುನಃ ಅದೇ ಮಾರ್ಗವಾಗಿ ಸಂಚರಿಸಿ, ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್.ಟಿ.ರಸ್ತೆ , ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್‌ಪೇಟೆ ಮೂಲಕ ದಿ: 24/04/2024 ರಂದು ಬೆಳಗ್ಗೆ 6-00 ಘಂಟೆಗೆ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಸೇರುತ್ತದೆ.

ಸಂಚಾರ ನಿರ್ಬಂಧಿಸಲಾದ ರಸ್ತೆಗಳು

ಸಿಟಿ ಮಾರುಕಟ್ಟೆ ವೃತ್ತದಿಂದ ಅವೆನ್ಯೂ ರಸ್ತೆಯ ಮೂಲಕ ಮೈಸೂರು ಬ್ಯಾಂಕ್ ವೃತ್ತದವರೆಗೆ ಎಲ್ಲ ಮಾದರಿಯ ವಾಹನ ಸಂಚಾರ ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆ ಅವೆನ್ಯೂ ರಸ್ತೆ ಪ್ರವೇಶಿಸುತ್ತಿದ್ದಂತೆ, ಎ.ಎಸ್.ಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಎಸ್.ಜೆ.ಪಿ ರಸ್ತೆಯಿಂದ ಎನ್.ಆರ್ ವೃತ್ತದ ಕಡೆಗೆ ಹೋಗಲು ಪಿ.ಕೆ. ಲೇನ್ ಬಳಿ ಎಡ ತಿರುವು ಪಡೆಯುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆಯು ಅವೆನ್ಯೂ ರಸ್ತೆಯನ್ನು ಪ್ರವೇಶಿಸುತ್ತಿದಂತೆ ಮೆಡಿಕಲ್ ಕಾಲೇಜು
ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ನಿರ್ಬಂಧಿಸಲಾದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಎಸ್‌ಜೆಪಿ ರಸ್ತೆ -ಟೌನ್‌ಹಾಲ್, ಕೆಂಪೇಗೌಡ ರಸ್ತೆ ಮಾರ್ಗವಾಗಿ ತೆರಳಬಹುದು. ಮೈಸೂರು ರಸ್ತೆಯ ಎ.ಎಸ್.ಎಚ್ ರಸ್ತೆಯಲ್ಲಿ ಬಲ ತಿರುವು ರಾಯನ್ ವೃತ್ತದ‌ ಮೂಲಕ ಸಂಚರಿಸಬಹುದು. ಚಾಮರಾಜಪೇಟೆ ಕಡೆಯಿಂದ ಬರುವ ವಾಹನಗಳು ಪ್ರೊ. ಶಿವಶಂಕರ ವೃತ್ತದ ಮೂಲಕ ಜೆ.ಸಿ ರಸ್ತೆಯನ್ನು ಪ್ರವೇಶಿಸಿ ಟೌನ್‌ಹಾಲ್ ಕಡೆಗೆ ಸಂಚರಿಸಬಹುದು.

ವಾಹನಗಳ ಪಾರ್ಕಿಂಗ್ ಸ್ಥಳಗಳು

ಕರಗ ಉತ್ಸವಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಬನ್ನಪ್ಪ ಪಾರ್ಕ್ ಹಾಗೂ‌ ಪುರಭವನ, ಬಿ.ಬಿ.ಎಂ.ಪಿ ಮಾರ್ಕೆಟ್ ಕಾಂಪ್ಲೆಕ್ಸ್, ಇಲ್ಲಿ ನಿಲುಗಡೆ ಮಾಡಬಹುದಾಗಿರುತ್ತದೆ.

ಪಾರ್ಕಿಂಗ್ ನಿರ್ಬಂಧಿಸಲಾದ ಸ್ಥಳಗಳು

ಪಿ.ಕೆ ಲೈನ್, ಓ.ಟಿ.ಸಿ ರಸ್ತೆ, ಎಸ್ಪಿ ರಸ್ತೆ , ಕಬ್ಬನ್‌ಪೇಟೆ ರಸ್ತೆ, ಸುಣ್ಣಕಲ್ ಪೇಟೆ ರಸ್ತೆ, ಎಸ್.ಜೆ.ಪಿ. ಸಿಟಿ ಮಾರ್ಕೆಟ್ ಸರ್ಕಲ್, ಎಸ್.ಜೆ.ಪಿ ರಸ್ತೆ, ಅವೆನ್ಯೂ ರಸ್ತೆ , ಎ.ಎಸ್.ಚಾರ್ ಸ್ಟ್ರೀಟ್ ನಿಂದ ಮಾರ್ಕೆಟ್ ಸರ್ಕಲ್‌ವರೆಗೆ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಲೈಫ್‌ಸ್ಟೈಲ್

Vastu Tips: ಸುಖ, ಶಾಂತಿ, ಸಮೃದ್ಧಿಗಾಗಿ ಹೀಗಿರಲಿ ಮನೆಯ ಕಿಟಕಿ, ಬಾಗಿಲು

Vastu Tips: ನಮ್ಮ ಪೂರ್ವಜರು ಕೂಡ ಮನೆಯ ಪ್ರತಿಯೊಂದು ಭಾಗವನ್ನು ವಾಸ್ತುವಿನ ದೃಷ್ಟಿಕೋನದಿಂದಲೇ ನೋಡುತ್ತಿದ್ದರು. ಕ್ರಮೇಣ ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದೆವು. ಆದರೆ ಈಗ ಮತ್ತೆ ವಾಸ್ತುವಿಗೆ (Vastu Tips) ಪ್ರಾಮುಖ್ಯತೆ ಹೆಚ್ಚಾಗುತ್ತಿದೆ. ಮನೆಗೆ ಕಿಟಕಿ ಬಾಗಿಲು ಅಳವಡಿಸುವುದಕ್ಕೂ ವಾಸ್ತು ಪಾಲನೆ ಮಾಡುವುದು ಮುಖ್ಯ. ಇದರಿಂದ ಮನೆಯೊಳಗೆ ಧನಾತ್ಮಕ ಶಕ್ತಿ ವೃದ್ಧಿಯಾಗಿಸಬಹುದು.

VISTARANEWS.COM


on

By

Vastu Tips
Koo

ಮನೆಯೊಳಗೆ (home) ಸುಖ, ಶಾಂತಿ, ನೆಮ್ಮದಿ ಇರಬೇಕಾದರೆ ಧನಾತ್ಮಕ ಶಕ್ತಿ (Positive energy) ವೃದ್ಧಿಸಿಕೊಳ್ಳುವುದು ಬಹು ಮುಖ್ಯ. ಇದಕ್ಕಾಗಿ ವಾಸ್ತು ಅಂಶಗಳನ್ನು ನಾವು ಪರಿಗಣಿಸಿಬೇಕು. ನಮ್ಮ ಪೂರ್ವಜರು ಕೂಡ ಮನೆಯ ಪ್ರತಿಯೊಂದು ಭಾಗವನ್ನು ವಾಸ್ತುವಿನ ದೃಷ್ಟಿಕೋನದಿಂದಲೇ ನೋಡುತ್ತಿದ್ದರು. ಕ್ರಮೇಣ ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿದೆವು. ಆದರೆ ಈಗ ಮತ್ತೆ ವಾಸ್ತುವಿಗೆ (Vastu Tips) ಪ್ರಾಮುಖ್ಯತೆ ಹೆಚ್ಚಾಗುತ್ತಿದೆ.

ಮನೆಯಾದ್ಯಂತ ಧನಾತ್ಮಕ ಶಕ್ತಿಯನ್ನು ವೃದಿಸುವುದು ಸುಲಭವಲ್ಲ. ವಾಸ್ತು ಪ್ರಕಾರ ಮನೆಗೆ ಬಾಗಿಲು (door) ಮತ್ತು ಕಿಟಕಿಗಳನ್ನು (window) ಅಳವಡಿಸಿದರೆ ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.

ವಾಸ್ತು ಪ್ರಕಾರ ಬಾಗಿಲು ಮತ್ತು ಕಿಟಕಿಗಳನ್ನು ಅಳವಡಿಸಿದರೆ ಮುಚ್ಚಿರುವ ಜಾಗದಲ್ಲೂ ಧನಾತ್ಮಕ ಶಕ್ತಿ ಪುನರುತ್ಪಾದನೆಯಾಗುತ್ತದೆ. ಈ ಬಾಗಿಲು ಮತ್ತು ಕಿಟಕಿಗಳ ಮೂಲಕ ಶಕ್ತಿಗಳು ಮನೆಯ ಒಳ ಮತ್ತು ಹೊರಗೆ ಹರಿಯುತ್ತವೆ. ಆರೋಗ್ಯಕರ ಮತ್ತು ಶ್ರೀಮಂತ ಜೀವನಶೈಲಿಯ ವೃದ್ಧಿಗಾಗಿ ಇವುಗಳನ್ನು ಇಡಲು ನಿರ್ದಿಷ್ಟ ಜಾಗಗಳಿವೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Vastu Tips: ನಿಮ್ಮ ಮನೆಯಲ್ಲಿ ಸಂತೋಷ ವೃದ್ಧಿಸಬೇಕೆ? ಈ ಸಲಹೆಗಳನ್ನು ಪಾಲಿಸಿ

ಬಾಗಿಲು, ಕಿಟಕಿಗಳಿಗೆ ವಾಸ್ತು ಪಾಲನೆ ಯಾಕೆ?

ಮನೆ ನಿರ್ಮಿಸಲು ಉತ್ಸುಕರಾಗಿರುವ ಮನೆ ಮಾಲೀಕರು ಹಲವಾರು ಕಾರಣಗಳಿಗಾಗಿ ಬಾಗಿಲು ಮತ್ತು ಕಿಟಕಿಗಳನ್ನು ಇಡುವ ಸ್ಥಾನ, ದಿಕ್ಕು ಮತ್ತು ಬಳಸುವ ವಸ್ತುಗಳ ಬಗ್ಗೆ ವಿಶೇಷ ಗಮನವನ್ನು ನೀಡಬೇಕು. ಅವು ಗಾಳಿ ಮತ್ತು ಸೂರ್ಯನ ಬೆಳಕಿಗೆ ಪೂರಕವಾಗಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಇದರಿಂದಲೇ ಮನೆಯೊಳಗೇ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ.
ಹೊಸ ಮನೆಯನ್ನು ನಿರ್ಮಿಸುತ್ತಿದ್ದರೆ ಅಥವಾ ಹಳೆ ಮನೆಯನ್ನು ನವೀಕರಿಸುತ್ತಿದ್ದರೆ ಬಾಗಿಲು ಮತ್ತು ಕಿಟಕಿಗಳ ವಾಸ್ತು ಬಗ್ಗೆ ತಿಳಿದುಕೊಳ್ಳಿ.


ಸರಿಯಾದ ಮುಖ್ಯ ಬಾಗಿಲು

ಮನೆಯ ಮುಖ್ಯ ಬಾಗಿಲು ದೊಡ್ಡ ಬಾಗಿಲಾಗಿರಬೇಕು. ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಒಳಗೆ ತೆರೆದುಕೊಳ್ಳುವ ಎರಡು ಕವಾಟದ ಬಾಗಿಲು ಮಂಗಳಕರ. ಪ್ರಕಾಶಮಾನವಾದ ದೀಪಗಳು ಮತ್ತು ಉತ್ತಮ ಬಣ್ಣಗಳೊಂದಿಗೆ ಮುಖ್ಯ ಬಾಗಿಲಿನ ಮೇಲೆ ಸುಂದರವಾದ ವಿನ್ಯಾಸಗಳನ್ನು ಅಳವಡಿಸಿಕೊಳ್ಳಿ. ನೀರಸವಾದ ಮುಖ್ಯ ಬಾಗಿಲು ಮನೆಗೆ ಶೋಭೆಯಲ್ಲ.

ಬಾಗಿಲುಗಳ ಸರಿಯಾದ ಸಂಖ್ಯೆ

ಸಕಾರಾತ್ಮಕತೆಯು ಸಹ ಸಮ ಸಂಖ್ಯೆಗಳಲ್ಲಿ ಬರುತ್ತದೆ. ಮನೆಯಲ್ಲಿ ಬಾಗಿಲು ಮತ್ತು ಕಿಟಕಿಗಳ ಸಂಖ್ಯೆ ಯಾವಾಗಲೂ ಸಮವಾಗಿರಬೇಕು. ಎರಡು, ನಾಲ್ಕು, ಆರು ಹೀಗೆ ಎರಡರ ಗುಣಕಗಳಲ್ಲಿರಬೇಕು ಎನ್ನುತ್ತಾರೆ ವಾಸ್ತು ತಜ್ಞರು.


ಬಾಗಿಲಿನ ಗಾತ್ರದಲ್ಲಿ ಸ್ಥಿರತೆ

ಮುಂಭಾಗದ ಬಾಗಿಲನ್ನು ಹೊರತುಪಡಿಸಿ ಮನೆಯಲ್ಲಿ ಎಲ್ಲಾ ಆಂತರಿಕ ಬಾಗಿಲುಗಳ ಗಾತ್ರದಲ್ಲಿ ಒಂದೇ ಆಗಿರಬೇಕು. ವಿಭಿನ್ನ ಬಾಗಿಲು ಗಾತ್ರಗಳು ಮನೆಗೆ ಒಳ್ಳೆಯದಲ್ಲ. ಎದ್ದು ಕಾಣಬೇಕಾದ ಏಕೈಕ ಬಾಗಿಲು ಮುಖ್ಯ ಬಾಗಿಲು. ಮನೆಯೊಳಗೆ ಕೆಲವು ಬಾಗಿಲುಗಳನ್ನು ದೊಡ್ಡದಾಗಿ ಮಾಡಲು ಬಯಸಿದರೆ ಅವುಗಳನ್ನು ಉತ್ತರ ಅಥವಾ ಪೂರ್ವಕ್ಕೆ ಬದಲಾಗಿ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಬೇಕು.

ದೋಷರಹಿತವಾಗಿರಲಿ ಮನೆ ಬಾಗಿಲು

ಮನೆಯಲ್ಲಿ ಬಾಗಿಲುಗಳ ಕಾರ್ಯವಿಧಾನದ ವಿಷಯಕ್ಕೆ ಬಂದರೆ ಬಾಗಿಲು ತೆರೆಯುವಾಗ ಅಥವಾ ಮುಚ್ಚುವಾಗ ಕೀಲು ಬಾಗಿಲುಗಳನ್ನು ಹಾಕುವುದು ಉತ್ತಮ. ಮನೆಯಲ್ಲಿ ಬಾಗಿಲುಗಳು ಮತ್ತು ಕಿಟಕಿಗಳೊಂದಿಗೆ ಹೆಚ್ಚು ಜಗಳಗಳು ಇರುತ್ತದೆ. ಸ್ಮೂತ್ ಕೀಲುಗಳು ಮನೆಯಲ್ಲಿ ಉತ್ತಮ ಸಂಬಂಧಗಳನ್ನು ಪ್ರತಿಬಿಂಬಿಸುತ್ತವೆ. ಸ್ವಯಂ-ಮುಚ್ಚುವ ಬಾಗಿಲುಗಳನ್ನು ತಪ್ಪಿಸುವುದು ಒಳ್ಳೆಯದು.

ಕಿಟಕಿಗಳು

ಎಲ್ಲಾ ಕಿಟಕಿಗಳು ಸರಿಯಾದ ಆಕಾರ ಮತ್ತು ಸಮವಾದ ಎತ್ತರವನ್ನು ಹೊಂದಿರಬೇಕು. ಕಿಟಕಿಗಳು ತಾಜಾ ಗಾಳಿ ಮತ್ತು ಸೂರ್ಯನ ಬೆಳಕಿನ ಮೂಲವಾಗಿರುತ್ತದೆ. ಅವುಗಳಿಗೆ ಯಾವಾಗಲೂ ಎದುರು ಬಾಗಿಲುಗಳನ್ನು ಇಡಬೇಕು. ಮನೆಯಲ್ಲಿ ಗರಿಷ್ಠ ವಾತಾಯನವಿದೆ ಎಂದು ಇದು ಖಚಿತಪಡಿಸುತ್ತದೆ. ಮನೆಯಲ್ಲಿರುವ ಕಿಟಕಿಗಳ ಸಂಖ್ಯೆಯೂ ಸಮ ಸಂಖ್ಯೆಯಲ್ಲಿರಬೇಕು. ಕಿಟಕಿಗಳಿಗೆ ಸಾಮಾನ್ಯವಾಗಿ ನೈಋತ್ಯ ದಿಕ್ಕನ್ನು ತಪ್ಪಿಸಿ. ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಕಿಟಕಿಗಳು ದೊಡ್ಡದಾಗಿದ್ದರೆ ಉತ್ತಮ. ಉತ್ತರವು ಸಮೃದ್ಧಿಯನ್ನು ತರುತ್ತದೆ ಆದರೆ ಪೂರ್ವವು ಪ್ರಗತಿ ಮತ್ತು ಆರೋಗ್ಯವನ್ನು ತರುತ್ತದೆ.

ಬಾಗಿಲಿಗೆ ಬಳಸುವ ವಸ್ತುಗಳು

ಬಾಗಿಲುಗಳಿಗೆ ವಸ್ತುಗಳನ್ನು ಎಚ್ಚರಿಕೆಯಿಂದ ಆರಿಸುವುದು ಮುಖ್ಯ. ಏಕೆಂದರೆ ಇದು ಎಷ್ಟು ಮಂಗಳಕರ ಎಂಬುದನ್ನು ನಿರ್ಧರಿಸುತ್ತದೆ. ಬಾಗಿಲುಗಳಿಗೆ ವಸ್ತುಗಳನ್ನು ಆಯ್ಕೆಮಾಡುವಾಗ ಮರದ ಬಾಗಿಲು ಯಾವಾಗಲೂ ಅತ್ಯುತ್ತಮ ಆಯ್ಕೆಯಾಗಿದೆ. ಇದಲ್ಲದೆ ಉತ್ತರ ದಿಕ್ಕಿನ ಬಾಗಿಲುಗಳಿಗೆ ಲೋಹ ಅಥವಾ ಕಬ್ಬಿಣದಂತಹ ಬೆಳ್ಳಿಯನ್ನು ಹೊಂದಿರುವ ಬಾಗಿಲುಗಳನ್ನು ಆಯ್ಕೆ ಮಾಡಿಕೊಳ್ಳಿ. ದಕ್ಷಿಣಕ್ಕೆ ಮರದ ಮತ್ತು ಲೋಹದ ಅಂಶಗಳನ್ನು ಹೊಂದಿರುವ ಬಾಗಿಲುಗಳು ಸೂಕ್ತವಾಗಿದೆ. ಪೂರ್ವ ದಿಕ್ಕಿಗೆ ಮರದಿಂದ ಮಾಡಿದ ಬಾಗಿಲು ಉತ್ತಮ. ಪಶ್ಚಿಮಕ್ಕೆ ಕಬ್ಬಿಣದಂತಹ ಲೋಹದಿಂದ ಪ್ರಧಾನವಾಗಿ ಮಾಡಿದ ಬಾಗಿಲನ್ನು ಆಯ್ಕೆ ಮಾಡಿಕೊಳ್ಳಿ.

ಬಾಗಿಲುಗಳು ಮತ್ತು ಕಿಟಕಿಗಳ ಬಣ್ಣ

ಗಾಢವಾದ ಬಣ್ಣಗಳು ಮನೆಯೊಳಗೆ ಹರ್ಷಚಿತ್ತ ಮತ್ತು ಶಕ್ತಿಯುತ ಮನಸ್ಥಿತಿಗೆ ಕಾರಣವಾಗುತ್ತವೆ. ಆದ್ದರಿಂದ ಮುಂಭಾಗದ ಬಾಗಿಲುಗಳಿಗೆ ಹಳದಿ ಮತ್ತು ನೀಲಿ ಬಣ್ಣಗಳನ್ನು ಆರಿಸಿ.

ಅಲಂಕಾರಿಕ ವಸ್ತುಗಳು

ಬಾಗಿಲಿನ ಮುಂದೆ ಹನುಮಾನ್ ಅಥವಾ ಗಣೇಶನ ವಿಗ್ರಹವನ್ನು ಇರಿಸುವುದರಿಂದ ದುಷ್ಟ ಶಕ್ತಿಗಳನ್ನು ದೂರವಿರಿಸಬಹುದು ಎಂದು ನಂಬಲಾಗಿದೆ. ಹಿತ್ತಾಳೆಯ ಬಟ್ಟಲಿನಲ್ಲಿ ನೀರನ್ನು ಇಟ್ಟುಕೊಳ್ಳುವುದು ಮನೆಯಲ್ಲಿ ನಕಾರಾತ್ಮಕತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸಲು ಬುದ್ಧನ ಪ್ರತಿಮೆ ಅಥವಾ ಗಾಳಿಯ ಚೈಮ್ ಅನ್ನು ಪ್ರವೇಶದ್ವಾರದ ಬಳಿ ಇರಿಸಬಹುದು.


ವಾಸ್ತು ಪರಿಣಾಮ

ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಬಾಗಿಲು, ಕಿಟಕಿಗಳು ತಾಜಾ ಗಾಳಿ ಮತ್ತು ಬೆಳಿಗ್ಗೆ ಒಳ್ಳೆಯದು. ದಿನದ ಆರಂಭದಲ್ಲಿ ಇದು ಮನೆಯ ಶುದ್ಧೀಕರಣ ಪ್ರಕ್ರಿಯೆಯನ್ನು ನಡೆಸುತ್ತದೆ.

ದಕ್ಷಿಣ ದಿಕ್ಕು ಎಲ್ಲಾ ಉತ್ತಮ ಶಕ್ತಿಗಳ ಕೇಂದ್ರ ಎಂದು ಪರಿಗಣಿಸಲಾಗಿದೆ. ದಕ್ಷಿಣಕ್ಕೆ ಎದುರಾಗಿ ನಿಖರವಾಗಿ ಮತ್ತು ಮಧ್ಯದಲ್ಲಿ ಬಾಗಿಲು, ಕಿಟಕಿಗಳನ್ನು ಇರಿಸಿದರೆ ಮನೆಯೊಳಗೆ ಉತ್ತಮ ಶಕ್ತಿ ಸಂಚಾರವಾಗುತ್ತದೆ.

ಪೂರ್ವ ಎಲ್ಲಕ್ಕಿಂತ ಹೆಚ್ಚು ಶಕ್ತಿಶಾಲಿಯಾಗಿದೆ. ಇಲ್ಲಿ ಪ್ರವೇಶದ್ವಾರಗಳು ಸಮೃದ್ಧಿ, ಶಕ್ತಿ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ.

ಪಶ್ಚಿಮ ದಿಕ್ಕು ಸೂರ್ಯಾಸ್ತಮಾನವನ್ನು ಆನಂದಿಸುವ ಮನೆಮಾಲೀಕರಿಗೆ ಸೂಕ್ತವಾಗಿದೆ. ಈ ದಿಕ್ಕು ಸಂಪತ್ತು ಮತ್ತು ಸಮೃದ್ಧಿಯನ್ನು ಉತ್ತೇಜಿಸುತ್ತದೆ.

ಏನು ಮಾಡಬೇಕು?

ಮನೆಯ ಮುಖ್ಯ ಬಾಗಿಲು ಹೊಸ್ತಿಲನ್ನು ಹೊಂದಿರಬೇಕು. ಮನೆಗೆ ಸಂಪತ್ತನ್ನು ಆಕರ್ಷಿಸಲು ನಿರ್ದಿಷ್ಟ ಸಂಖ್ಯೆಯಲ್ಲಿ ಹೊಸ್ತಿಲಿನ ಎದುರು ಮೆಟ್ಟಿಲುಗಳನ್ನು ಇರಿಸಬೇಕು.

ಮುಖ್ಯ ಬಾಗಿಲು ಯಾವಾಗಲೂ ನೆಲದ ಮಟ್ಟಕ್ಕಿಂತ ಮೇಲಿರಬೇಕು. ಮಲಗುವ ಕೋಣೆಯ ಬಾಗಿಲುಗಳು ಮುಖ್ಯ ಬಾಗಿಲಿಗಿಂತ ಚಿಕ್ಕದಾಗಿರಬೇಕು. ಮುಖ್ಯ ಬಾಗಿಲನ್ನು ಮನೆಯಲ್ಲಿ ದೊಡ್ಡದಾಗಿಸಬೇಕು. ಎಲ್ಲಾ ಬಾಗಿಲುಗಳು ಪ್ರದಕ್ಷಿಣಾಕಾರವಾಗಿ ತೆರೆದಿರುವುದನ್ನು ಖಚಿತಪಡಿಸಿಕೊಳ್ಳಿ.


ಏನು ಮಾಡಬಾರದು?

ಮುಖ್ಯ ಬಾಗಿಲು ಮತ್ತು ನಿರ್ಗಮನ ಬಾಗಿಲು ಎದುರಾಗಿ ಇರಬಾರದು. ಮುಖ್ಯ ಬಾಗಿಲುಗಳು ಮನೆಯ ಆಯಾವನ್ನು ಬಿಟ್ಟು ಹೊರಗೆ ಇರಬಾರದು. ಮುಖ್ಯ ಬಾಗಿಲನ್ನು ಭೂಗತ ಟ್ಯಾಂಕ್ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳ ಕೆಳಗೆ ಇಡುವುದನ್ನು ತಪ್ಪಿಸಿ.

ಮುಖ್ಯ ಬಾಗಿಲಿನ ಮುಂದೆ ಶೂ ಅಥವಾ ಕಸವನ್ನು ಇಡಬೇಡಿ. ಮುಖ್ಯ ಬಾಗಿಲಿನ ಮುಂಭಾಗದಲ್ಲಿ ಕಂಬ, ಮರ, ತಂತಿ ಸೇರಿದಂತೆ ಅಡೆತಡೆಗಳನ್ನು ತಪ್ಪಿಸಿ.

ಬಾಗಿಲು ಅಥವಾ ನಿರ್ಗಮನ ಬಾಗಿಲಿನ ಹೊರ ಭಾಗದಲ್ಲಿ ದೇವರ ಚಿತ್ರಗಳನ್ನು ಪ್ರದರ್ಶಿಸಬೇಡಿ. ಬಾಗಿಲಿನ ವಾಸ್ತು ಪ್ರಕಾರ ಇದು ದುಃಖಕ್ಕೆ ಕಾರಣವಾಗಬಹುದು.

ಮನೆಯಲ್ಲಿ ಹೆಚ್ಚಿನ ಮಹಡಿಗಳಿದ್ದರೆ ಪ್ರತಿ ಮಹಡಿಯಲ್ಲಿ ಒಂದರ ಮೇಲೊಂದು ಬಾಗಿಲು ಹಾಕದಂತೆ ನೋಡಿಕೊಳ್ಳಿ.

Continue Reading

ಬೆಂಗಳೂರು

Bengaluru Karaga: ಇಂದು ರಾತ್ರಿ ಕರಗ ಮಹೋತ್ಸವ; ವಾಹನ ಸವಾರರೇ ಬೇರೆ ದಾರಿ ಕಂಡುಕೊಳ್ಳಿ

ದಿನಾಂಕ: 23.04.2024ರಿಂದ ದಿನಾಂಕ: 24.04.2024ರ ಬೆಳಗ್ಗೆ 06:00 ಗಂಟೆಯವರೆಗೆ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ಬೆಂಗಳೂರು ಕರಗದ (Bengaluru Karaga) ಉತ್ಸವ ನಡೆಯುತ್ತಿದ್ದು, ಈ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿರುತ್ತದೆ

VISTARANEWS.COM


on

Bengaluru Karaga
Koo

ಬೆಂಗಳೂರು: ಇಂದು ಮಧ್ಯರಾತ್ರಿ ಐತಿಹಾಸಿಕ ಬೆಂಗಳೂರು ಕರಗ (Bengaluru Karaga Festival) ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ (Traffic restriction) ಹೇರಲಾಗಿದ್ದು, ಪರ್ಯಾಯ (Alternate roads) ರಸ್ತೆಗಳಲ್ಲಿ ಸಾಗುವಂತೆ ಬೆಂಗಳೂರು ನಗರ ಸಂಚಾರ ಪೊಲೀಸರು (Bangalore traffic police) ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ರಾಫಿಕ್‌ ಪೊಲೀಸರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ: ದಿನಾಂಕ: 23.04.2024ರಿಂದ ದಿನಾಂಕ: 24.04.2024ರ ಬೆಳಗ್ಗೆ 06:00 ಗಂಟೆಯವರೆಗೆ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯ ಸ್ವಾಮಿ ಬೆಂಗಳೂರು ಕರಗದ ಉತ್ಸವ ನಡೆಯುತ್ತಿದ್ದು, ಈ ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿರುವುದರಿಂದ ತಿಗಳರ ಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಿಸಲಾಗಿರುತ್ತದೆ ಎಂದು ತಿಳಿಸಿದೆ.

ಮೆರವಣಿಗೆ ಸಾಗುವ ಮಾರ್ಗ

ಮೆರವಣಿಗೆಯು ನಗರ್ತಪೇಟೆಯ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡು ಕಬ್ಬನ್‌ಪೇಟೆ, ಗಾಣಿಗರ ಪೇಟೆ, ಅವೆನ್ಯೂ ರಸ್ತೆ ಮೂಲಕ ಕೆ.ಆರ್ ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇವಾಲಯಕ್ಕೆ ಬಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ಮೂಲಕ ರಾಣಾಸಿಂಗ್ ಪೇಟೆ,‌ ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ , ಮಸ್ತಾನ್ ಸಾಹೇಬ್ ದರ್ಗಾ, ಬಳೇಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್.ಪಿ.ರಸ್ತೆ ಮೂಲಕ ಅಣ್ಣಮ್ಮ ದೇವಾಲಯಕ್ಕೆ ಬರುತ್ತದೆ. ಪುನಃ ಅದೇ ಮಾರ್ಗವಾಗಿ ಸಂಚರಿಸಿ, ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್.ಟಿ.ರಸ್ತೆ , ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್‌ಪೇಟೆ ಮೂಲಕ ದಿ: 24/04/2024 ರಂದು ಬೆಳಗ್ಗೆ 6-00 ಘಂಟೆಗೆ ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಸೇರುತ್ತದೆ.

ಸಂಚಾರ ನಿರ್ಬಂಧಿಸಲಾದ ರಸ್ತೆಗಳು

ಸಿಟಿ ಮಾರುಕಟ್ಟೆ ವೃತ್ತದಿಂದ ಅವೆನ್ಯೂ ರಸ್ತೆಯ ಮೂಲಕ ಮೈಸೂರು ಬ್ಯಾಂಕ್ ವೃತ್ತದವರೆಗೆ ಎಲ್ಲ ಮಾದರಿಯ ವಾಹನ ಸಂಚಾರ ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆ ಅವೆನ್ಯೂ ರಸ್ತೆ ಪ್ರವೇಶಿಸುತ್ತಿದ್ದಂತೆ, ಎ.ಎಸ್.ಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಎಸ್.ಜೆ.ಪಿ ರಸ್ತೆಯಿಂದ ಎನ್.ಆರ್ ವೃತ್ತದ ಕಡೆಗೆ ಹೋಗಲು ಪಿ.ಕೆ. ಲೇನ್ ಬಳಿ ಎಡ ತಿರುವು ಪಡೆಯುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಉತ್ಸವದ ಮೆರವಣಿಗೆಯು ಅವೆನ್ಯೂ ರಸ್ತೆಯನ್ನು ಪ್ರವೇಶಿಸುತ್ತಿದಂತೆ ಮೆಡಿಕಲ್ ಕಾಲೇಜು
ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ವಾಹನಗಳ ಸಂಚಾರವನ್ನು ನಿರ್ಬಂಧಿಸಿದೆ. ನಿರ್ಬಂಧಿಸಲಾದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಎಸ್‌ಜೆಪಿ ರಸ್ತೆ -ಟೌನ್‌ಹಾಲ್, ಕೆಂಪೇಗೌಡ ರಸ್ತೆ ಮಾರ್ಗವಾಗಿ ತೆರಳಬಹುದು. ಮೈಸೂರು ರಸ್ತೆಯ ಎ.ಎಸ್.ಎಚ್ ರಸ್ತೆಯಲ್ಲಿ ಬಲ ತಿರುವು ರಾಯನ್ ವೃತ್ತದ‌ ಮೂಲಕ ಸಂಚರಿಸಬಹುದು. ಚಾಮರಾಜಪೇಟೆ ಕಡೆಯಿಂದ ಬರುವ ವಾಹನಗಳು ಪ್ರೊ. ಶಿವಶಂಕರ ವೃತ್ತದ ಮೂಲಕ ಜೆ.ಸಿ ರಸ್ತೆಯನ್ನು ಪ್ರವೇಶಿಸಿ ಟೌನ್‌ಹಾಲ್ ಕಡೆಗೆ ಸಂಚರಿಸಬಹುದು.

ವಾಹನಗಳ ಪಾರ್ಕಿಂಗ್ ಸ್ಥಳಗಳು

ಕರಗ ಉತ್ಸವಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಬನ್ನಪ್ಪ ಪಾರ್ಕ್ ಹಾಗೂ‌ ಪುರಭವನ, ಬಿ.ಬಿ.ಎಂ.ಪಿ ಮಾರ್ಕೆಟ್ ಕಾಂಪ್ಲೆಕ್ಸ್, ಇಲ್ಲಿ ನಿಲುಗಡೆ ಮಾಡಬಹುದಾಗಿರುತ್ತದೆ.

ಪಾರ್ಕಿಂಗ್ ನಿರ್ಬಂಧಿಸಲಾದ ಸ್ಥಳಗಳು

ಪಿ.ಕೆ ಲೈನ್, ಓ.ಟಿ.ಸಿ ರಸ್ತೆ, ಎಸ್ಪಿ ರಸ್ತೆ , ಕಬ್ಬನ್‌ಪೇಟೆ ರಸ್ತೆ, ಸುಣ್ಣಕಲ್ ಪೇಟೆ ರಸ್ತೆ, ಎಸ್.ಜೆ.ಪಿ. ಸಿಟಿ ಮಾರ್ಕೆಟ್ ಸರ್ಕಲ್, ಎಸ್.ಜೆ.ಪಿ ರಸ್ತೆ, ಅವೆನ್ಯೂ ರಸ್ತೆ , ಎ.ಎಸ್.ಚಾರ್ ಸ್ಟ್ರೀಟ್ ನಿಂದ ಮಾರ್ಕೆಟ್ ಸರ್ಕಲ್‌ವರೆಗೆ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿದೆ.

ಇದನ್ನೂ ಓದಿ: Karnataka Weather : ಬೆಂಗಳೂರು ಕರಗಕ್ಕೆ ಅಡ್ಡಿಯಾಗುತ್ತಾ ಮಳೆ; ಮತ್ತೆ ಬಿಸಿ ಗಾಳಿ ಎಚ್ಚರಿಕೆ ಕೊಟ್ಟ ತಜ್ಞರು

Continue Reading
Advertisement
Baking Soda Benefits
ಆರೋಗ್ಯ26 mins ago

Baking Soda Benefits: ಅಡುಗೆ ಸೋಡಾದಿಂದ ಎಷ್ಟೊಂದು ಪ್ರಯೋಜನಗಳಿವೆ ನೋಡಿ!

Dina Bhavishya
ಭವಿಷ್ಯ1 hour ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Implement the work without damaging the drinking water pipelines says ZP CEO Sadashiva Prabhu
ವಿಜಯನಗರ6 hours ago

Vijayanagara News: ಕುಡಿಯುವ ನೀರಿನ ಪೈಪ್‌ಲೈನ್‌ಗಳು ಹಾಳಾಗದಂತೆ ಕಾಮಗಾರಿ ಅನುಷ್ಠಾನಗೊಳಿಸಿ: ಜಿಪಂ ಸಿಇಒ

Congress leader Rahul Gandhi speech in Ballari
ಕರ್ನಾಟಕ6 hours ago

Lok Sabha Election 2024: ದೇಶ, ರಾಜ್ಯಕ್ಕೆ ಬಿಜೆಪಿಯಿಂದ ಖಾಲಿ ಚೊಂಬು ಕೊಟ್ಟಿದ್ದಾರೆ: ರಾಹುಲ್‌ ಗಾಂಧಿ

lok sabha election
ಪ್ರಮುಖ ಸುದ್ದಿ6 hours ago

ವಿಸ್ತಾರ ಸಂಪಾದಕೀಯ: ಗ್ರಾಮಾಂತರ ಜನರ ಮತೋತ್ಸಾಹ ನಗರದ ‘ಬುದ್ಧಿವಂತ’ ಮತದಾರರಲ್ಲಿ ಏಕಿಲ್ಲ?

Neha Murder Case
ಕರ್ನಾಟಕ7 hours ago

Neha Murder Case: ನೇಹಾ ತಂದೆಗೆ ಗನ್ ಮ್ಯಾನ್, ಮನೆಗೆ ಪೊಲೀಸ್ ಭದ್ರತೆ ಏರ್ಪಡಿಸಿದ ರಾಜ್ಯ ಸರ್ಕಾರ

IPL 2024
ಪ್ರಮುಖ ಸುದ್ದಿ7 hours ago

IPL 2024 : ಬೈರ್​ಸ್ಟೋವ್​ ಸ್ಫೋಟಕ ಶತಕ; ಕೆಕೆಆರ್​ ವಿರುದ್ಧ ಪಂಜಾಬ್​​ಗೆ ವಿಶ್ವ ದಾಖಲೆಯ ವಿಜಯ

Bike Accident
ಕರ್ನಾಟಕ7 hours ago

Bike Accident: ಮತದಾನ ಮಾಡಿ ತೆರಳುತ್ತಿದ್ದ ವೇಳೆ ಬೈಕ್‌ ಅಪಘಾತ; ಸ್ಥಳದಲ್ಲೇ ಇಬ್ಬರ ದುರ್ಮರಣ

lok sabha election
Lok Sabha Election 20247 hours ago

Lok Sabha Election : ಲೊಕಸಭಾ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಲ್ಲಿ ಶೇ 60.96 ಮತದಾನ

Hassan News
ಕರ್ನಾಟಕ8 hours ago

Hassan News: ಎರಡು ಗುಂಪುಗಳ ನಡುವೆ ಮಾರಾಮಾರಿ; ಕೈ ಕಾರ್ಯಕರ್ತನಿಗೆ ಗಂಭೀರ ಗಾಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 hour ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ18 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202419 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 202419 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ1 day ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20242 days ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

ಟ್ರೆಂಡಿಂಗ್‌