ಪುಟಿನ್‌ ಪ್ರೇಯಸಿಯ ಮೇಲೆ ಮುಗಿಬಿದ್ದ ಯುರೋಪ್!‌ ಯಾರೀಕೆ ಕಬಯೇವಾ? - Vistara News

ವಿದೇಶ

ಪುಟಿನ್‌ ಪ್ರೇಯಸಿಯ ಮೇಲೆ ಮುಗಿಬಿದ್ದ ಯುರೋಪ್!‌ ಯಾರೀಕೆ ಕಬಯೇವಾ?

ಪುಟಿನ್‌ ಗರ್ಲ್‌ಫ್ರೆಂಡ್‌ ಮೇಲೆ ಭಾರಿ ವಾಣಿಜ್ಯ ವ್ಯಾಪಾರ ನಿರ್ಬಂಧಗಳನ್ನು ಯುರೋಪ್‌ ವಿಧಿಸುತ್ತಿದೆ. ಯಾರೀಕೆ, ಯಾಕೆ ಈಕೆಯ ಮೇಲೆ ಅಮೆರಿಕ, ಯುರೋಪ್‌ಗೆ ಸಿಟ್ಟು?

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಷ್ಯಾ ಮೇಲೆ ಈಗಾಗಲೇ ಅಮೆರಿಕ ಹಾಗೂ ಯುರೋಪ್‌ಗಳು ಭಾರಿ ಪ್ರಮಾಣದ ವಾಣಿಜ್ಯ ನಿರ್ಬಂಧಗಳನ್ನು ವಿಧಿಸಿವೆ. ಇದೀಗ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಪ್ರೇಯಸಿ ಅಲೀನಾ ಕಬಯೇವಾ ಅವರನ್ನು ಪೂರ್ತಿಯಾಗಿ ನಿರ್ಬಂಧಿಸಲು ಯುರೋಪ್‌ ಮುಂದಾಗಿದೆ.
ಹೀಗೊಬ್ಬಳು ಇದ್ದಾಳೆಂದೇ ಹೆಚ್ಚಿನವರಿಗೆ ಗೊತ್ತಿಲ್ಲ. ಈಕೆ ರಷ್ಯದ ರಾಜಕಾರಣಿ, ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮಾಜಿ ಜಿಮ್ನಾಸ್ಟ್‌. ರೂಮರ್‌ಗಳು ಹೇಳುವುದು ನಿಜವಾದರೆ ಪುಟಿನ್‌ನ ಹಲವು ಮಕ್ಕಳಿಗೆ ಈಗೆ ತಾಯಿ ಕೂಡ.

ಪುಟಿನ್‌ ಅವರ ಆಪ್ತರನ್ನು ಇಬ್ಬಂದಿಗೆ ಸಿಲುಕಿಸಲು ಮುಂದಾಗಿರುವ ಯುರೋಪ್‌ ಹಾಗೂ ಅಮೆರಿಕಗಳು, ಅಂಥವರು ಸಿಕ್ಕಲ್ಲೆಲ್ಲ ನಿರ್ಬಂಧದ ಬೀಗ ಜಡಿಯುತ್ತಿವೆ. ಕಳೆದ ತಿಂಗಳು, ಪುಟಿನ್‌ನ ಮಕ್ಕಳಾದ ಮರಿಯಾ ವೊರೊಂತ್ಸೊವಾ (36), ಕ್ಯಾತೆರಿನಾ ತಿಕೊನೊವಾ (35) ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಇವರು ಪುಟಿನ್‌ನ ಮೊದಲ ಹೆಂಡತಿ ಲ್ಯುದ್‌ಮಿಲಾ ಅವರ ಮಕ್ಕಳು.

ಕಳೆದ ತಿಂಗಳ ವರೆಗೂ ಈಕೆ ಸ್ವಿಜರ್‌ಲ್ಯಾಂಡ್‌ನಲ್ಲಿ ವಾಸಿಸಿದ್ದಳು. ಈಗಲೂ ಅಲ್ಲಿದ್ದಾಳೆಯೇ ಅಥವಾ ರಷ್ಯಾಗೆ ಹೋಗಿದ್ದಾಳೆಯೇ ಎಂಬುದು ಗೊತ್ತಾಗಿಲ್ಲ. ಸ್ವಿಜರ್‌ಲ್ಯಾಂಡ್‌ನ ಆಕೆಯ ಮನೆಯಿಂದ ಆಕೆಯನ್ನು ಓಡಿಸಬೇಕು ಎಂದು ಕಳೆದ ತಿಂಗಳಲ್ಲೇ ಆನ್‌ಲೈನ್‌ ಅಭಿಯಾನ ಆರಂಭವಾಗಿತ್ತು. ಪುಟಿನ್‌ ಪರವಾದ ಆನ್‌ಲೈನ್‌ ಅಭಿಯಾನ, ಅಮೆರಿಕ ವಿರೋಧಿ ಪ್ರಚಾರದಲ್ಲೆಲ್ಲ ಮುಂಚೂಣಿಯಲ್ಲಿರುವ ಪುಟಿನ್‌ರ ಆಪ್ತ ಬಳಗದಲ್ಲಿ ಈಕೆಯೂ ಇದ್ದಾಳೆ ಎಂದು ತಿಳಯಲಾಗಿದೆ.

ಪುಟಿನ್‌ ಸ್ವತಃ ತನಗೆ ಕಬಯೇವಾ ಜೊತೆಗೆ ಸಂಬಂಧ ಇರುವುದನ್ನು ಒಪ್ಪಿಕೊಂಡಿಲ್ಲ. ಪುಟಿನ್‌ ತಮ್ಮ ಖಾಸಗಿ ಸಂಗತಿಗಳ ಬಗ್ಗೆ ಅತ್ಯಂತ ಗೌಪ್ಯತೆ ಕಾಪಾಡಿಕೊಳ್ಳುತ್ತಾರೆ. ಕಬಯೇವಾ ಕೂಡ ತಮ್ಮ- ಪುಟಿನ್‌ ಸಂಬಂಧವನ್ನು ದೃಢಪಡಿಸಿಲ್ಲ, ನಿರಾಕರಿಸಿಯೂ ಇಲ್ಲ.

2008ರಲ್ಲಿ ಮಾಸ್ಕೋವಸ್ಕಿ ಕರೆಸ್ಪಾಂಡೆಂಟ್‌ ಪತ್ರಿಕೆಯು, ಪುಟಿನ್‌ ಅವರು ತಮ್ಮ ಪತ್ನಿ ಲ್ಯುದ್‌ಮಿಲಾ ಅವರಿಗೆ ಡೈವೋರ್ಸ್‌ ನೀಡಿ, ಕಬಯೇವಾ ಅವರನ್ನು ವಿವಾವಾಗಲಿದ್ದಾರೆ ಎಂದು ಸುದ್ದಿ ಮಾಡಿತ್ತು. ಇಬ್ಬರೂ ಅದನ್ನು ನಿರಾಕರಿಸಿದ್ದರು. ಇದಾಗಿ ಕೆಲವೇ ತಿಂಗಳಲ್ಲಿ ಆ ಪತ್ರಿಕೆಯನ್ನು ರಷ್ಯ ಸರಕಾರ ಮುಚ್ಚಿಹಾಕಿತ್ತು. ಐದು ವರ್ಷ ಬಳಿಕ ಪುಟಿನ್-‌ ಲ್ಯುದ್‌ಮಿಲಾ ವಿಚ್ಛೇದನವಾಗಿತ್ತು.

ಕಬಯೇವಾಳ ಪರಿಣತಿಯ ಕ್ರೀಡೆ ರಿದ್ಮಿಕ್‌ ಜಿಮ್ನಾಸ್ಟಿಕ್ಸ್.‌ ಈಕೆ ಇದರಲ್ಲಿ ಜಗತ್ತಿನ ಅಗ್ರಗಣ್ಯ ಕ್ರೀಡಾಳು ಆಗಿದ್ದಳು. 2000- 2016ರ ನಡುವಿನ ಪ್ರತಿಯೊಂದು ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್‌ ಚಿನ್ನದ ಪದಕವನ್ನೂ ರಷ್ಯಾ ಗೆದ್ದುಕೊಳ್ಳುತ್ತಿತ್ತು. ಈಕೆಯ ಹೆಸರಿನಲ್ಲೇ ಇರುವ ಒಂದು ಜಿಮ್ನಾಸ್ಟಿಕ್‌ ಚಲನೆಯೂ ಇದೆ. ಇದನ್ನು ಈಕೆಯೇ ಆವಿಷ್ಕರಿಸಿದ್ದು ಎನ್ನಲಾಗುತ್ತದೆ.

ಇದನ್ನೂ ಓದಿ: ಪುಟಿನ್‌ಗೆ ಕ್ಯಾನ್ಸರ್:‌ ಬರಲಿದ್ದಾನೆ ಅವನಿಗಿಂತಲೂ ದೊಡ್ಡ ರಾಕ್ಷಸ!

1983ರಲ್ಲಿ ಜನಿಸಿದ ಈಕೆ ನಾಲ್ಕನೇ ವರ್ಷದಲ್ಲೇ ಜಿಮ್ನಾಸ್ಟಿಕ್‌ ಕಲಿಯಲಾರಂಭಿಸಿದಳು. ನಂತರ ಈಕೆ ʼರಷ್ಯಾದ ಅತ್ಯಂತ ಫ್ಲೆಕ್ಸಿಬಲ್‌ ಮಹಿಳೆʼ ಎಂದೇ ಖ್ಯಾತಿ ಪಡೆದಳು. 1998ರಲ್ಲಿ ಯುರೋಪಿಯನ್‌ ಚಾಂಪಿಯನ್ಶಿಪ್‌ನಲ್ಲಿ ಪದಕ ಪಡೆದಳು. ನಂತರ 2004ರಲ್ಲಿ ನಡೆದ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಳು. ನಂತರ ತನ್ನ ಒಟ್ಟಾರೆ ಕೆರಿಯರ್‌ನಲ್ಲಿ 18 ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಳು.

ನಂತರ ರಾಜಕೀಯಕ್ಕೆ ಬಂದಳು. 2007-2014ರ ಅವಧಿಯಲ್ಲಿ ಯುನೈಟೆಡ್‌ ರಷ್ಯಾ ಪಾರ್ಟಿಯಿಂದ ಸ್ಪರ್ಧಿಸಿ ರಷ್ಯದ ಕೆಳಮನೆಯ ಸದಸ್ಯಳಾದಳು. ಅಲ್ಲಿಂದಾಚೆಗೆ ಪುಟಿನ್‌ ಅವರ ಮುಖವಾಣಿಯಾಗಿ ಅಲ್ಲಿನ ಪತ್ರಿಕೆಗಳನ್ನು ರೂಪಿಸುವ ಹೊಣೆ ಹೊಂದಿದ್ದ ನ್ಯಾಷನಲ್‌ ಮೀಡಿಯಾ ಗ್ರೂಪ್‌ನ ಅಧ್ಯಕ್ಷೆಯಾದಳು. ಪುಟಿನ್‌ಗೆ ಸನಿಹವಾಗುತ್ತಾ ಹೋದಳು. ಎಣಿಸಲಾಗದಷ್ಟು ಶ್ರೀಮಂತೆಯೂ ಆದಳು.

ಪುಟಿನ್‌ ಮತ್ತು ಈಕೆಯ ಗೆಳೆತನದ ಬಹುತೇಕ ವಿವರಗಳು ರಹಸ್ಯವಾಗಿವೆ. ಕಬಯೇವಾಗೆ 2015ರಲ್ಲಿ ಗಂಡು ಮಗು ಹಾಗೂ 2019ರಲ್ಲಿ ಅವಳಿ ಮಕ್ಕಳಾಗಿವೆ. ಆದರೆ ಈ ಮಕ್ಕಳ ತಂದೆ ಯಾರು ಎಂದು ಆಕೆ ಹೇಳಿಕೊಂಡಿಲ್ಲ. ಅದು ಪುಟಿನ್‌ ಎಂದು ತರ್ಕಿಸಲಾಗಿದೆ. ರಷ್ಯಾದ ಪತ್ರಿಕೆಗಳು ಪುಟಿನ್-‌ ಕಬಯೇವಾ ಸಂಬಂಧದ ಸುದ್ದಿಗಳನ್ನು ಪ್ರಕಟಿಸಲು ಹೆದರಿಕೊಳ್ಳುತ್ತವೆ. ಆದರೆ ಯುರೋಪಿಯನ್‌ ಮಾಧ್ಯಮಗಳು ರಷ್ಯಾದ ಮೂಲಗಳನ್ನು ಆಧರಿಸಿ ವರದಿ ಮಾಡುತ್ತವೆ. ಅದರ ಪ್ರಕಾರ ಪುಟಿನ್‌ ಕಬಯೇವಾಗೆ ಬೆಲೆಬಾಳುವ ಗಿಫ್ಟ್‌ಗಳನ್ನು ನೀಡುವುದು, ಆಗಾಗ ಕರೆಸಿಕೊಳ್ಳುವುದು ನಡೆದೇ ಇದೆ.

ಇಂಥ ಚೆಲುವೆಗೆ ನಿರ್ಬಂಧ ವಿಧಿಸಲು ಈಗ ಯುರೋಪ್‌ ಒಕ್ಕೂಟ ಮುಂದಾಗಿದೆ. ಇದು ಒಂದು ರೀತಿಯಲ್ಲಿ ಪುಟಿನ್‌ಗೆ ನೀಡುತ್ತಿರುವ ವೈಯಕ್ತಿಕ ತಪರಾಕಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವಿದೇಶ

Robert Fico: ಸ್ಲೊವಾಕಿಯಾ ಪ್ರಧಾನಿ ರಾಬರ್ಟ್‌ ಫಿಕೊ ಮೇಲೆ ಗುಂಡಿನ ದಾಳಿ; ಭೀಕರ ವಿಡಿಯೊ ಇಲ್ಲಿದೆ

Robert Fico: ರಾಬರ್ಟ್‌ ಫಿಕೊ ಅವರ ಹೊಟ್ಟೆಗೆ ಗುಂಡು ತಗುಲಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟೇ ಅಲ್ಲ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಕಾರಣ ಬ್ಯಾನ್ಸ್‌ಕಾ ಬಿಸ್ಟ್ರಿಕಾ ಆಸ್ಪತ್ರೆಗೆ ಹೆಲಿಕಾಪ್ಟರ್‌ ಮೂಲಕ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

VISTARANEWS.COM


on

Robert Fico
Koo

ಬ್ರಾಟಿಸ್ಲಾವಾ: ಸ್ಲೊವಾಕಿಯಾ ಪ್ರಧಾನಿ ರಾಬರ್ಟ್‌ ಫಿಕೊ (Robert Fico) ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಂಡ್ಲೋವಾದಲ್ಲಿ (Handlova) ಸರ್ಕಾರಿ ಸಭೆಯೊಂದರಲ್ಲಿ ಪಾಲ್ಗೊಂಡು ಹೊರಬರುತ್ತಿರುವಾಗಲೇ ದುಷ್ಕರ್ಮಿಯು ಗುಂಡಿನ ದಾಳಿ ದಾಳಿ ನಡೆಸಿದ್ದಾನೆ. ಕೂಡಲೇ ಭದ್ರತಾ ಸಿಬ್ಬಂದಿಯು ರಾಬರ್ಟ್‌ ಫಿಕೊ ಅವರನ್ನು ರಕ್ಷಣೆ ಮಾಡಿದ್ದಾರೆ. ಇದಾದ ಬಳಿಕ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಬರ್ಟ್‌ ಫಿಕೊ ಅವರ ಹೊಟ್ಟೆಗೆ ಗುಂಡು ತಗುಲಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟೇ ಅಲ್ಲ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಕಾರಣ ಬ್ಯಾನ್ಸ್‌ಕಾ ಬಿಸ್ಟ್ರಿಕಾ ಆಸ್ಪತ್ರೆಗೆ ಹೆಲಿಕಾಪ್ಟರ್‌ ಮೂಲಕ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಆದಾಗ್ಯೂ, ದಾಳಿ ಮಾಡಿರುವ ದುಷ್ಕರ್ಮಿ ಯಾರು? ಆತನ ಹೆಸರೇನು? ಯಾವ ಸಂಘಟನೆಗೆ ಸೇರಿದವನು? ದಾಳಿ ಮಾಡಿದ್ದೇಕೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಭೀಕರ ದಾಳಿಯ ವಿಡಿಯೊ ಇಲ್ಲಿದೆ

59 ವರ್ಷದ ರಾಬರ್ಟ್‌ ಫಿಕೊ ಅವರ ಮೇಲೆ ನಾಲ್ಕು ಗುಂಡು ಹಾರಿಸಲಾಗಿದೆ. ಒಂದು ಗುಂಡು ಅವರ ಹೊಟ್ಟೆಗೆ ತಗುಲಿದ ಕಾರಣ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ರಾಬರ್ಟ್‌ ಫಿಕೊ ಶೀಘ್ರವೇ ಗುಣಮುಖರಾಗಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ. ದಾಳಿಯನ್ನು ಸ್ಲೊವಾಕಿಯಾ ಸರ್ಕಾರವೂ ದೃಢಪಡಿಸಿದೆ. “ರಾಬರ್ಟ್‌ ಫಿಕೊ ಅವರ ಮೇಲೆ ದಾಳಿ ನಡೆದಿರುವ ವಿಚಾರ ತಿಳಿದು ಬೇಸರವಾಯಿತು. ಅವರು ಶೀಘ್ರವೇ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಸ್ಲೊವಾಕಿಯಾ ಅಧ್ಯಕ್ಷೆ ಜುಜಾನ ಕ್ಯಾಪುಟೋವಾ ಪೋಸ್ಟ್‌ ಮಾಡಿದ್ದಾರೆ.

ದಾಳಿ ಮಾಡಿದ ಆರೋಪಿಯ ಬಂಧನ.

ರಷ್ಯಾ ಪರ ನಿಲುವು ತಾಳಿದ್ದಕ್ಕೇ ದಾಳಿ?

ರಾಬರ್ಟ್‌ ಫಿಕೊ ಅವರು ರಷ್ಯಾ ಪರವಾಗಿ ನಿಲುವು ತಾಳಿ, ಉಕ್ರೇನ್‌ಅನ್ನು ವಿರೋಧಿಸಿದ್ದೇ ದಾಳಿ ನಡೆಸಲು ಕಾರಣ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, “ಉಕ್ರೇನ್‌ನಲ್ಲಿ 2022ರಿಂದ ಅಲ್ಲ, 2014ರಿಂದಲೂ ಯುದ್ಧ ನಡೆದಿದೆ. ಉಕ್ರೇನ್‌ನಲ್ಲಿರುವ ರಷ್ಯಾ ನಾಗರಿಕರನ್ನು ಭೀಕರವಾಗಿ ಕೊಲೆ ಮಾಡಿದ ಬಳಿಕ ಯುದ್ಧ ಆರಂಭವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡುತ್ತಲೇ ಇದೆ. ಇದಕ್ಕೆ ರಷ್ಯನ್ನರನ್ನು ಉಕ್ರೇನ್‌ ಕೊಂದಿದ್ದೇ ಕಾರಣ. ಉಕ್ರೇನ್‌ನಲ್ಲಿ ಆ ದೇಶದ ಸೇನೆ ವಿರುದ್ಧ ರಷ್ಯಾ ಪರವಾಗಿ ಅಮೆರಿಕವೂ ದಾಳಿ ಮಾಡುತ್ತಿದೆ” ಎಂದಿದ್ದರು. ಇದೇ ಕಾರಣಕ್ಕೆ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Salman Khan: ಸಲ್ಮಾನ್‌ ಮನೆ ಮುಂದೆ ಗುಂಡಿನ ದಾಳಿ ನಡೆಸಿದ ಇಬ್ಬರು ಶೂಟರ್‌ಗಳ ಬಂಧನ

Continue Reading

EXPLAINER

CAA: ಸಿಎಎ ಕಾಯ್ದೆಯಡಿ 14 ವಲಸಿಗರಿಗೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

CAA: ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರು ಭಾರತದ ಪೌರತ್ವ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಿಎಎ ಅನ್ವಯ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಸಾವಿರಾರು ಜನರಿಗೆ ಕೇಂದ್ರ ಸರ್ಕಾರವು ಭಾರತದ ಪೌರತ್ವ ನೀಡಲಿದೆ. ಅಷ್ಟಕ್ಕೂ ಸಿಎಎ ಎಂದರೇನು? ಕೇಂದ್ರದ ಪ್ರಮಾಣಪತ್ರಗಳಲ್ಲಿ ಏನಿರುತ್ತದೆ? ಇಲ್ಲಿದೆ ಮಾಹಿತಿ.

VISTARANEWS.COM


on

CAA
Koo

ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪೌರತ್ವ (ತಿದ್ದುಪಡಿ) ಕಾಯ್ದೆ, 2019 (Citizenship Amendment Act) ಕಾಯ್ದೆ ಜಾರಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರವು 14 ಜನರಿಗೆ ಭಾರತದ ಪೌರತ್ವ (Indian Citizenship) ನೀಡಿದೆ. ದೆಹಲಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರು ಭಾರತದ ಪೌರತ್ವ ಪ್ರಮಾಣಪತ್ರಗಳನ್ನು ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಿಎಎ ಅನ್ವಯ ಪೌರತ್ವ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಸಾವಿರಾರು ಜನರಿಗೆ ಕೇಂದ್ರ ಸರ್ಕಾರವು ಭಾರತದ ಪೌರತ್ವ ನೀಡಲಿದೆ ಎಂದು ತಿಳಿದುಬಂದಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಡಿಸೆಂಬರ್ 31, 2014 ರಂದು ಮತ್ತು ಅದಕ್ಕೂ ಮೊದಲು ಭಾರತಕ್ಕೆ ಆಗಮಿಸಿದ ಮುಸ್ಲಿಮರನ್ನು ಹೊರತುಪಡಿಸಿ ವಲಸಿಗರಿಗೆ ಈ ಕಾನೂನು ಅನ್ವಯಿಸುತ್ತದೆ.

ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಿರಲಿಲ್ಲ. ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ.

ಸಿಎಎಗೆ 2019ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ.

ಯಾವ ದಾಖಲೆ ಕೊಡುವುದು ಕಡ್ಡಾಯ?

ಸಿಎಎ ಅಡಿಯಲ್ಲಿ ಭಾರತದ ಪೌರತ್ವ ಪಡೆಯಲು ವಲಸಿಗರು ಕೇಂದ್ರ ಸರ್ಕಾರಕ್ಕೆ ಹಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಜನನ ಪ್ರಮಾಣಪತ್ರ, ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಅದರ ದಾಖಲೆ, ಗುರುತಿನ ಚೀಟಿ ಅಥವಾ ದಾಖಲೆ, ವಾಹನ ಚಾಲನಾ ಪರವಾನಗಿ ಸೇರಿ ಯಾವುದೇ ಪರವಾನಗಿ, ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡುವುದು ಕಡ್ಡಾಯವಾಗಿದೆ. ಇವುಗಳನ್ನು ಪರಿಶೀಲಿಸಿ ಕೇಂದ್ರ ಸರ್ಕಾರವು ಭಾರತದ ಪೌರತ್ವ ಪಡೆಯಲಿದ್ದಾರೆ.

ಭಾರತದ ಮುಸ್ಲಿಮರಿಗೆ ತೊಂದರೆ ಇಲ್ಲ

ಸಿಎಎ ಜಾರಿಯು ಭಾರತದ ಮುಸ್ಲಿಮರ ಪೌರತ್ವದ ಮೇಲೆ ಪರಿಣಾಮ ಬೀರಲು ಯಾವುದೇ ನಿಬಂಧನೆಗಳನ್ನು ಮಾಡಿಲ್ಲ. ಕಾನೂನಿಗೆ ಭಾರತದಲ್ಲಿರುವ 18 ಕೋಟಿ ಭಾರತೀಯ ಮುಸ್ಲಿಮರೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು ತಮ್ಮ ಹಿಂದೂ ಸಹವರ್ತಿಗಳಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದಕ್ಕೂ ಮೊದಲು, ಸಿಎಎ ಎಂದರೆ, ಭಾರತದಲ್ಲಿರುವ ಮುಸ್ಲಿಮರ ಪೌರತ್ವವನ್ನು ರದ್ದುಗೊಳಿಸುವುದು ಎಂಬ ವದಂತಿ ಹಬ್ಬಿಸಲಾಗಿತ್ತು.

ಗೃಹ ಸಚಿವಾಲಯದ 2021-22ರ ವಾರ್ಷಿಕ ವರದಿಯ ಪ್ರಕಾರ ಏಪ್ರಿಲ್ 1, 2021ರಿಂದ ಡಿಸೆಂಬರ್ 31, 2021 ರವರೆಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಈ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಒಟ್ಟು 1,414 ವಿದೇಶಿಯರಿಗೆ ಪೌರತ್ವ ಕಾಯ್ದೆ, 1955 ರ ಅಡಿಯಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗಿದೆ.

ಇದನ್ನೂ ಓದಿ: CAA: ಸಿಎಎ ಅಡಿಯಲ್ಲಿ 14 ಜನರಿಗೆ ಭಾರತದ ಪೌರತ್ವ ನೀಡಿದ ಮೋದಿ ಸರ್ಕಾರ; ಸರ್ಟಿಫಿಕೇಟ್‌ ಕೂಡ ಹಸ್ತಾಂತರ!

Continue Reading

ವಿದೇಶ

Google: 10 ಲಕ್ಷ ಕೋಟಿ ರೂ. ಮೌಲ್ಯದ ಪಿಂಚಣಿ ಡೇಟಾ ಡಿಲೀಟ್‌ ಮಾಡಿ Sorry ಎಂದ ಗೂಗಲ್; ಮುಂದೇನು?

Google: ಲಕ್ಷಾಂತರ ಜನರ ಡೇಟಾವನ್ನು ಗೂಗಲ್‌ ಕ್ಲೌಡ್‌ನಿಂದ ಅಳಿಸಿಹಾಕಿದ ಬಳಿಕ ಗೂಗಲ್‌ ಸಂಸ್ಥೆ ಕ್ಷಮೆಯಿರಲಿ ಎಂದಷ್ಟೇ ಹೇಳುವ ಮೂಲಕ ಕೈ ತೊಳೆದುಕೊಂಡಿದೆ. ಮಾಹಿತಿ ಡಿಲೀಟ್‌ ಆದ ಕಾರಣ ಯುನಿಸೂಪರ್‌ ಸಂಸ್ಥೆಯು ಕೂಡ ವಿಷಾದ ವ್ಯಕ್ತಪಡಿಸಿದೆ. ಆದರೆ, ಲಕ್ಷಾಂತರ ಜನರ ಲಕ್ಷಾಂತರ ಕೋಟಿ ರೂ. ಮಾಹಿತಿ ಡಿಲೀಟ್‌ ಆದ ಕಾರಣ ಅವರೆಲ್ಲ ಆತಂಕಕ್ಕೀಡಾಗಿದ್ದಾರೆ.

VISTARANEWS.COM


on

Google
Koo

ವಾಷಿಂಗ್ಟನ್:‌ ಇದೇನಿದ್ದರೂ ಡಿಜಿಟಲ್‌ (Digital) ಯುಗ. ಎಲ್ಲ ಮಾಹಿತಿಯೂ ಈಗ ಕಂಪ್ಯೂಟರ್‌ನಲ್ಲಿ, ಗೂಗಲ್‌ ಕ್ಲೌಡ್‌ ಸೇರಿ ಹಲವು ಮಾದರಿಯಲ್ಲಿ ಸಂಗ್ರಹಿಸಲಾಗುತ್ತದೆ. ಬ್ಯಾಂಕಿಂಗ್‌ನಿಂದ ಹಿಡಿದು ಎಲ್ಲ ಕ್ಷೇತ್ರಗಳ ಮಾಹಿತಿಯೂ ಆನ್‌ಲೈನ್‌ನಲ್ಲೇ ಸಂಗ್ರಹಿಸಲಾಗುತ್ತದೆ. ಆದರೆ, ಈ ಮಾಹಿತಿ ಡಿಲೀಟ್‌ ಮಾಡಿದರೆ, ಯಾರಾದರೂ ಡಿಲೀಟ್‌ ಮಾಡಿದರೆ ಆಗುವ ಅನಾಹುತಗಳು ಅಷ್ಟಿಷ್ಟಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಗೂಗಲ್‌ (Google) ಸಂಸ್ಥೆಯು ಗೂಗಲ್‌ ಕ್ಲೌಡ್‌ನಲ್ಲಿ (Google Cloud) ಸುಮಾರು 10.43 ಲಕ್ಷ ಕೋಟಿ ರೂ. ಮೌಲ್ಯದ ಪಿಂಚಣಿ ಡೇಟಾವನ್ನು ಅಚಾತುರ್ಯವಾಗಿ ಡಿಲೀಟ್‌ ಮಾಡಿದೆ.

ಆಸ್ಟ್ರೇಲಿಯಾದ ನಿವೃತ್ತಿದಾರರಿಗೆ ಪಿಂಚಣಿ ಒದಗಿಸುವ ಯುನಿಸೂಪರ್‌ (UniSuper) ಎಂಬ ಸಂಸ್ಥೆಯ 6.2 ಲಕ್ಷ ಜನರ ಮಾಹಿತಿಯನ್ನು ಗೂಗಲ್‌ ಡಿಲೀಟ್‌ ಮಾಡಿದೆ. ಯುನಿಸೂಪರ್‌ ಸಂಸ್ಥೆಯು ಡೇಟಾ ಸಂಗ್ರಹಕ್ಕಾಗಿ ಗೂಗಲ್‌ ಕ್ಲೌಡ್‌ ಜತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಗೂಗಲ್‌ ಸಂಸ್ಥೆಯು ಅಚಾತುರ್ಯದಿಂದ 6.2 ಲಕ್ಷ ಜನರ ಡೇಟಾವನ್ನು ಡಿಲೀಟ್‌ ಮಾಡಿದೆ. ಕಳೆದ ಒಂದು ವಾರದಿಂದ ಯುನಿಸೂಪರ್‌ ಸದಸ್ಯರು ತಮ್ಮ ಪಿಂಚಣಿ ಮಾಹಿತಿಯನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Sorry ಎಂದ ಗೂಗಲ್‌

ಲಕ್ಷಾಂತರ ಜನರ ಡೇಟಾವನ್ನು ಗೂಗಲ್‌ ಕ್ಲೌಡ್‌ನಿಂದ ಅಳಿಸಿಹಾಕಿದ ಬಳಿಕ ಗೂಗಲ್‌ ಸಂಸ್ಥೆ ಕ್ಷಮೆಯಿರಲಿ ಎಂದಷ್ಟೇ ಹೇಳುವ ಮೂಲಕ ಕೈ ತೊಳೆದುಕೊಂಡಿದೆ. ಮಾಹಿತಿ ಡಿಲೀಟ್‌ ಆದ ಕಾರಣ ಯುನಿಸೂಪರ್‌ ಸಂಸ್ಥೆಯು ಕೂಡ ವಿಷಾದ ವ್ಯಕ್ತಪಡಿಸಿದೆ. ಆದರೆ, ಲಕ್ಷಾಂತರ ಜನರ ಲಕ್ಷಾಂತರ ಕೋಟಿ ರೂ. ಮಾಹಿತಿ ಡಿಲೀಟ್‌ ಆದ ಕಾರಣ ಅವರೆಲ್ಲ ಆತಂಕಕ್ಕೀಡಾಗಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಿ ಎಂಬುದಾಗಿ ಸಂಸ್ಥೆಯನ್ನು ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ಗೂಗಲ್‌ ಜತೆಗಿನ ಒಪ್ಪಂದವನ್ನು ಯುನಿಸೂಪರ್‌ ರದ್ದುಗೊಳಿಸಿದೆ.

ಬ್ಯಾಕಪ್‌ಗಾಗಿ ಹರಸಾಹಸ

6 ಲಕ್ಷಕ್ಕೂ ಅಧಿಕ ಮಾಹಿತಿಯನ್ನು ಮರು ಸಂಗ್ರಹಿಸಲು (ಬ್ಯಾಕಪ್‌) ಯುನಿಸೂಪರ್‌ ಹರಸಾಹಸ ಮಾಡುತ್ತಿದೆ. ಡಿಲೀಟ್‌ ಆಗಿರುವ ಎಲ್ಲ ಮಾಹಿತಿಯನ್ನು ಬ್ಯಾಕಪ್‌ ಮಾಡಿಕೊಳ್ಳಲು ಬೇರೊಂದು ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಮಾಹಿತಿಯು ತಾತ್ಕಾಲಿಕವಾಗಿ ಡಿಲೀಟ್‌ ಆಗಿದೆಯೋ, ಇಲ್ಲವೋ? ಅದನ್ನು ಬ್ಯಾಕಪ್‌ ಮಾಡುವುದು ಸುಲಭವೋ, ಇಲ್ಲವೋ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಾಹಿತಿ ಲಭ್ಯವಾಗುವವರೆಗೂ ಗ್ರಾಹಕರು ಹಾಗೂ ಕಂಪನಿಗೆ ಆತಂಕ ತಪ್ಪಿದ್ದಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Continue Reading

ದೇಶ

ಮೋದಿ ಬಲಿಷ್ಠ ನಾಯಕ, ಮತ್ತೆ ಪ್ರಧಾನಿಯಾಗೋದು ನಿಶ್ಚಿತ ಎಂದ ಪಾಕ್‌ ಮೂಲದ ಉದ್ಯಮಿ

ನರೇಂದ್ರ ಮೋದಿ ಅವರಲ್ಲಿ ಹುಟ್ಟಿನಿಂದಲೇ ನಾಯಕತ್ವದ ಗುಣಗಳಿವೆ. ಅವರು ರಾಜಕೀಯ ಹಿತಾಸಕ್ತಿ ನೋಡದೆ, ಅತಿ ಕೆಟ್ಟ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಮುಂದಿನ ದಿನಗಳಲ್ಲಿ, ಮೋದಿ ಅವರು ಪಾಕಿಸ್ತಾನದ ಜತೆ ಮಾತುಕತೆ ನಡೆಸಿ, ಮತ್ತೆ ವ್ಯಾಪಾರ ಶುರು ಮಾಡಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಸಾಜಿದ್‌ ತರಾರ್‌ ಹೇಳಿದ್ದಾರೆ.

VISTARANEWS.COM


on

Narendra Modi
Koo

ವಾಷಿಂಗ್ಟನ್:‌ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ, ಅವರ ನಾಯಕತ್ವವನ್ನು ಮುಕ್ತ ಕಂಠದಿಂದ ಹೊಗಳುವವರಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನ ಮೂಲದ, ಅಮೆರಿಕದಲ್ಲಿ ನೆಲೆಸಿರುವ ಉದ್ಯಮಿ ಸಾಜಿದ್‌ ತರಾರ್‌ (Sajid Tarar) ಅವರು ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. “ನರೇಂದ್ರ ಮೋದಿ ಬಲಿಷ್ಠ ನಾಯಕರಾಗಿದ್ದಾರೆ. ಅವರು ಹುಟ್ಟಿನಿಂದಲೇ ನಾಯಕತ್ವ ಗುಣಗಳನ್ನು ಹೊಂದಿದ್ದಾರೆ” ಎಂದು ಉದ್ಯಮಿ ಹೇಳಿದ್ದಾರೆ.

“ನರೇಂದ್ರ ಮೋದಿ ಅದ್ಭುತ ನಾಯಕರಾಗಿರುವ ಕಾರಣದಿಂದಾಗಿಯೇ ಭಾರತ ಅಷ್ಟೊಂದು ಉತ್ತಮವಾಗಿ ಏಳಿಗೆ ಹೊಂದಿದೆ. ಅವರಲ್ಲಿ ಹುಟ್ಟಿನಿಂದಲೇ ನಾಯಕತ್ವದ ಗುಣಗಳಿವೆ. ಅವರು ರಾಜಕೀಯ ಹಿತಾಸಕ್ತಿ ನೋಡದೆ, ಅತಿ ಕೆಟ್ಟ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಮುಂದಿನ ದಿನಗಳಲ್ಲಿ, ಮೋದಿ ಅವರು ಪಾಕಿಸ್ತಾನದ ಜತೆ ಮಾತುಕತೆ ನಡೆಸಿ, ಮತ್ತೆ ವ್ಯಾಪಾರ ಶುರು ಮಾಡಲಿದ್ದಾರೆ ಎಂಬ ನಂಬಿಕೆ ಇದೆ” ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದ ವೇಳೆ ಅವರು ಹೇಳಿದ್ದಾರೆ.

“ನರೇಂದ್ರ ಮೋದಿ ಅವರ ನಾಯಕತ್ವವು ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಪ್ರಮುಖವಾಗಿದೆ. ಇದೇ ಕಾರಣಕ್ಕಾಗಿಯೇ ಅವರು ಮೂರನೇ ಬಾರಿ ಪ್ರಧಾನಿಯಾಗುವುದು ಖಚಿತವಾಗಿದೆ. ಅವರು ಮತ್ತೆ ಪ್ರಧಾನಿಯಾಗುತ್ತಾರೆ ಎಂಬುದು ಜಗತ್ತಿಗೇ ಗೊತ್ತಿದೆ. ಪಾಕಿಸ್ತಾನದಿಂದ ಭಾರತಕ್ಕೂ ಅನುಕೂಲವಿದೆ. ಪಾಕಿಸ್ತಾನಕ್ಕೂ ಭಾರತದಿಂದ ಅನುಕೂಲವಿದೆ. ಮುಂದಿನ ದಿನಗಳಲ್ಲಿ ಎರಡೂ ದೇಶಗಳ ನಡುವಿ ಸಂಬಂಧ ಸುಧಾರಿಸುವ ವಿಶ್ವಾಸವಿದೆ” ಎಂದು ಹೇಳಿದರು. ಪಾಕಿಸ್ತಾನದವರಾದ ಸಾಜಿದ್‌ ತರಾರ್‌, 1990ರ ದಶಕದಲ್ಲಿ ಅಮೆರಿಕಕ್ಕೆ ತೆರಳಿ, ಅಲ್ಲಿಯೇ ನೆಲೆಸಿದ್ದಾರೆ.

ಅಂತಾರಾಷ್ಟ್ರಿಯ ಖ್ಯಾತಿಯ ಆಫ್ರಿಕನ್​-ಅಮೆರಿಕನ್​ ಗಾಯಕಿ ಮೇರಿ ಮಿಲ್​​ಬೆನ್ ಅವರು ಕೂಡ ನರೇಂದ್ರ ಮೋದಿ ಅವರ ಅಭಿಮಾನಿಯಾಗಿದ್ದಾರೆ. ಆಗಾಗ ಅವರು ಮೋದಿ ಅವರನ್ನು ಹೊಗಳುತ್ತಲೇ ಇರುತ್ತಾರೆ. ಭಾರತ ತನ್ನ ದೇಶದ ನಾಯಕನ ಮೇಲೆ ಆತ್ಮವಿಶ್ವಾಸ ಹೊಂದಿದೆ. ಮಣಿಪುರದ ಮಾತೆಯರು, ಪುತ್ರಿಯರು ಹಾಗೂ ಮಹಿಳೆಯರಿಗೆ ನ್ಯಾಯ ಸಿಗುತ್ತದೆ. ನಿಮ್ಮ ಸ್ವಾತಂತ್ರ್ಯಕ್ಕಾಗಿ ನರೇಂದ್ರ ಮೋದಿ ಅವರು ಎಂದಿಗೂ ಹೋರಾಡುತ್ತಾರೆ. ನರೇಂದ್ರ ಮೋದಿ ಅವರೇ ನಿಮ್ಮ ಮೇಲೆ ವಿಶ್ವಾಸ ಇದೆ. ನಿಮಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಕೆಲ ತಿಂಗಳ ಹಿಂದಷ್ಟೇ ಮೇರಿ ಮಿಲ್​​ಬೆನ್ ಹೇಳಿದ್ದರು.

ಇದನ್ನೂ ಓದಿ: Narendra Modi: ಹತ್ತು ವರ್ಷ ಪ್ರಧಾನಿಯಾಗಿರುವ ನರೇಂದ್ರ ಮೋದಿ ಆಸ್ತಿ ಎಷ್ಟಿದೆ? ಪ್ರಮಾಣಪತ್ರದಲ್ಲಿದೆ ಮಾಹಿತಿ

Continue Reading
Advertisement
PBKS vs RR
ಕ್ರೀಡೆ2 mins ago

PBKS vs RR: ಸ್ಯಾಮ್‌ ಕರನ್‌ ಏಕಾಂಗಿ ಬ್ಯಾಟಿಂಗ್​ ಹೋರಾಟಕ್ಕೆ ತಲೆ ಬಾಗಿದ ರಾಜಸ್ಥಾನ್​

Anjali Murder Case
ಕ್ರೈಂ20 mins ago

Anjali Murder Case: ಅಂಜಲಿ‌ ಕೊಲೆ‌ ಪ್ರಕರಣದಲ್ಲಿ ಕರ್ತವ್ಯ ಲೋಪ; ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು

Participation of young women in science technology information and communication fields should be increased says Isha Ambani
ದೇಶ31 mins ago

Isha Ambani: ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಶ್ಲಾಘಿಸಿದ ಇಶಾ ಅಂಬಾನಿ

Retired Teacher G T Bhatt Bommanahalli 80th celebration programme on May 19
ಉತ್ತರ ಕನ್ನಡ38 mins ago

Uttara Kannada News: ಮೇ 19ರಂದು ನಿವೃತ್ತ ಶಿಕ್ಷಕ ಜಿ. ಟಿ. ಭಟ್ ಬೊಮ್ಮನಹಳ್ಳಿ 80ರ ಸಂಭ್ರಮ

Dalita Sangharsha samiti demands that Minister HK Patil should be dismissed from the Cabinet
ರಾಯಚೂರು42 mins ago

Raichur News: 371 ಜೆ ಮೀಸಲಾತಿ ಮುಂದುವರಿಸದಂತೆ ಸಿಎಂಗೆ ಪತ್ರ ಬರೆದ ಎಚ್.ಕೆ. ಪಾಟೀಲ್ ವಜಾಗೆ ದಸಂಸ ಆಗ್ರಹ

Sandeep Lamichhane
ಕ್ರೀಡೆ54 mins ago

Sandeep Lamichhane: ಅತ್ಯಾಚಾರ ಆರೋಪದಲ್ಲಿ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ಲಮಿಚಾನೆಗೆ ರಿಲೀಫ್; ನಿರಪರಾಧಿ ಎಂದ ಕೋರ್ಟ್​

Shyam Rangeela
ದೇಶ1 hour ago

Shyam Rangeela: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದ ಕಲಾವಿದನ ನಾಮಪತ್ರ ತಿರಸ್ಕಾರ!

Terrorist Arrested
ಕರ್ನಾಟಕ2 hours ago

Terrorist Arrested: ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಉಗ್ರನ ಬಂಧನ

Monsoon 2024
ದೇಶ2 hours ago

Monsoon 2024: ರೈತರಿಗೆ ಗುಡ್‌ ನ್ಯೂಸ್;‌ ಮುಂಗಾರು ಮಳೆ ಆಗಮನಕ್ಕೆ ಫಿಕ್ಸ್‌ ಆಯ್ತು ದಿನಾಂಕ!

DP Manu
ಕ್ರೀಡೆ2 hours ago

DP Manu: ಫೆಡರೇಷನ್ ಕಪ್‌ನಲ್ಲಿ ನೀರಜ್​ ಚೋಪ್ರಾಗೆ ಬೆವರಿಳಿಯುವಂತೆ ಮಾಡಿದ ಕನ್ನಡಿಗ ಮನು; ಇವರ ಹಿನ್ನೆಲೆ, ಸಾಧನೆ ಏನೇನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ16 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ18 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ1 day ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌