Coronavirus | ʼಬಾಯಿ ಮುಚ್ಚಿಕೊಂಡುʼ ಕೋವಿಡ್‌ ಮಾರ್ಗಸೂಚಿ ಪಾಲಿಸಿ !: ಹೊಸ ವರ್ಷದ ಸಂಭ್ರಮಕ್ಕೂ ಮಾಸ್ಕ್‌ ಕಡ್ಡಾಯ; ರಾಜಕೀಯ ರ‍್ಯಾಲಿಗಿಲ್ಲ ನಿರ್ಬಂಧ - Vistara News

ಕೋವಿಡ್

Coronavirus | ʼಬಾಯಿ ಮುಚ್ಚಿಕೊಂಡುʼ ಕೋವಿಡ್‌ ಮಾರ್ಗಸೂಚಿ ಪಾಲಿಸಿ !: ಹೊಸ ವರ್ಷದ ಸಂಭ್ರಮಕ್ಕೂ ಮಾಸ್ಕ್‌ ಕಡ್ಡಾಯ; ರಾಜಕೀಯ ರ‍್ಯಾಲಿಗಿಲ್ಲ ನಿರ್ಬಂಧ

ಕೋವಿಡ್‌ (Coronavirus) ನಿಯಂತ್ರಣ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಲು ಸರ್ಕಾರ ನಿರ್ಧಾರ ಮಾಡಿದೆ.

VISTARANEWS.COM


on

coronavirus-precautionary-meeting-held-in-belagavi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ವರ್ಷಾಂತ್ಯಕ್ಕೆ ವಿವಿಧ ಸಂಭ್ರಮಾಚರಣೆಗೆ ಸಿದ್ಧವಾಗುತ್ತಿರುವ ನಾಗರಿಕರಿಗೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ್ದು, ಕೋವಿಡ್‌ (Coronavirus) ನಿಯಂತ್ರಣ ಸಲುವಾಗಿ ಎಲ್ಲ ಕಡೆಗಳಲ್ಲೂ ಮಾಸ್ಕ್‌ ಧರಿಸಿಯೇ ಇರಬೇಕು ಎಂದು ತಿಳಿಸಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದ ನಡುವೆಯೇ ಕಂದಾಯ ಸಚಿವ ಆರ್‌. ಅಶೊಕ್‌ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ನೇತೃತ್ವದಲ್ಲಿ ಕೋವಿಡ್‌ ತಜ್ಞರೊಂದಿಗೆ ಸಭೆ ನಡೆಸಲಾಯಿತು.

ಸಭೆಯ ನಂತರ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ್‌, ಚೀನಾ ಸೇರಿ ವಿದೇಶಗಳಲ್ಲಿ ಕೋವಿಡ್ ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರತ್ತ ಹೆಚ್ಚಿನ ಗಮನ ಕೊಡಲು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸಲಹೆ ನೀಡಿದ್ದಾರೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ವಿದೇಶದಿಂದ ಪ್ರಯಾಣಿಸಕರಿಗೆ ಪ್ರತ್ಯೇಕವಾಗಿ ಆಸ್ಪತ್ರೆ ಮೀಸಲು ಮಾಡಲಾಗುತ್ತದೆ. ಥಿಯೇಟರ್‌ನಲ್ಲಿ ಮಾಸ್ಕ್ ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಶಾಲಾ ಕಾಲೇಜು ಕ್ಲಾಸ್ ಪ್ರವೇಶಿಸುವ ಮುನ್ನ ವಿದ್ಯಾರ್ಥಿಗಳು ಸ್ಯಾನಿಟೈಸರ್ ಹಾಕಬೇಕು. ತರಗತಿಯಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ ಎಂದರು.

ಹೊಸ ವರ್ಷಚಾರಣೆಗೆ ಸಂಬಂಧಿಸಿದಂತೆ ಮಾತನಾಡಿದ ಅಶೋಕ್‌, ಪಬ್, ಬಾರ್, ರೆಸ್ಟೋರೆಂಟ್‌ನಲ್ಲಿ ಗ್ರಾಹಕರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಡಬಲ್ ಡೋಸ್ ಲಸಿಕೆ ಹಾಕಿಸಿರಬೇಕು. ಎಷ್ಟು ಟೇಬಲ್ ಇರುತ್ತದೆಯೋ ಅಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು. ಹೆಚ್ಚುವರಿ ಜನರಿಗೆ ಪಬ್, ಬಾರ್, ರೆಸ್ಟೋರೆಂಟ್‌ನಲ್ಲಿ ಅವಕಾಶವಿಲ್ಲ. ಬೆಂಗಳೂರಿನ ಎಂ.ಜಿ. ರಸ್ತೆ ಸೇರಿದಂತೆ ರಸ್ತೆಗಳಲ್ಲಿ ಸಂಭ್ರಮಚಾರಣೆಗೂ ಕೂಡ ಮಾಸ್ಕ್ ಕಡ್ಡಾಯವಿದ್ದು, ಮಧ್ಯರಾತ್ರಿ 1 ಗಂಟೆಗೆ ಎಲ್ಲವನ್ನೂ ಬಂದ್ ಮಾಡಬೇಕು ಎಮದು ಹೇಳಿದರು.

ಜಿಲ್ಲೆಗಳಲ್ಲಿ ಮಾರ್ಗಸೂಚಿ ಪಾಲನೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳ ಆಸ್ಪತ್ರೆ ಸ್ಥಿತಿಗತಿ ಪರಿಶೀಲನೆ ಮಾಡಬೇಕಾಗುತ್ತದೆ. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ಕುರಿತು ಯಾವುದೇ ಚರ್ಚೆಯಾಗಿಲ್ಲ. ಮುಖ್ಯಮಂತ್ರಿಗಳ ಜತೆಗೆ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರ‍್ಯಾಂಡಮ್ ಟೆಸ್ಟ್ ಮಾಡಲಾಗುವುದು. ರೋಗದ ಲಕ್ಷಣ ಕಂಡುಬಂದರೆ ಕ್ವಾರಂಟೈನ್ ನಡೆಸಿ ಚಿಕಿತ್ಸೆ ನೀಡಲಾಗುವುದು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಮತ್ತು ಮಂಗಳೂರಿನ ಒಂದು ಆಸ್ಪತ್ರೆ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಮಾತನಾಡಿ, ಬೂಸ್ಟರ್ ಡೋಸ್ ಹೆಚ್ಚಾಗಿ ಕೊಡುವ ಕೆಲಸವಾಗಬೇಕಿದೆ. 20% ಆಗಿರುವ ಬೂಸ್ಡರ್ ಡೋಸ್ ಅನ್ನು 50% ಆಗುವ ನಿಟ್ಡಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ತಾಲ್ಲೂಕು ಮಟ್ಡದಿಂದ ಜಿಲ್ಲಾ ಮಟ್ಟದವರೆಗೂ ಲಸಿಕಾ ಕ್ಯಾಂಪ್ ತೆರೆಯುತ್ತೇವೆ. ಹಿರಿಯ ನಾಗರಿಕರು, ರೋಗದ ಲಕ್ಷಣವಿದ್ದವರು, ಗರ್ಭಿಣಿಯರು, ಮಕ್ಕಳು ಹೊಸವರ್ಚಚಾರಣೆಯ ಸಮಾರಂಭದಲ್ಲಿ ಭಾಗಿಯಾಗದೆ ಇದ್ದರೆ ಒಳ್ಳೆಯದು. ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. BF.7 ವೈರಸ್‌ ಬಗ್ಗೆ ಯಾವುದೇ ಆತಂಕವಿಲ್ಲ. ಎರಡು ಡೋಸ್ ವ್ಯಾಕ್ಸಿನೇಷನ್‌ ಆಗಿದೆ. ಆತಂಕ್ಕೆ ಆಗುವ ಅವಶ್ಯಕತೆ ಇಲ್ಲ. ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ. ಯಾರು ಕೂಡ ಅನ್ಯಥಾ ಭಾವಿಸಬಾರದು. ಬೂಸ್ಟರ್ ಡೋಸ್ ಕಡ್ಡಾಯ ಎಂದು ಹೇಳುವುದಕ್ಕೆ ಆಗುವುದಿಲ್ಲ. ಬೂಸ್ಡರ್ ಡೋಸ್ ತೆಗೆದುಕೊಳ್ಳಬೇಕು. ಮೊದಲು ಮತ್ತು ಎರಡನೇ ಡೋಸ್ ಪ್ರಧಾನಿ ಮೋದಿಯವರ ಜಾಗೃತಿಯಿಂದ ಜನ ಸ್ವಯಂಪ್ರೇರಣೆಯಿಂದ ಪಡೆದುಕೊಂಡಿದ್ದಾರೆ. ಅದೇ‌ ರೀತಿ ಬೂಸ್ಡರ್ ಡೋಸ್ ಸ್ವಯಂಪ್ರೇರಿತರಾಗಿ ಪಡೆದುಕೊಳ್ಳಬೇಕು ಎಂದರು.

ಚೀನಾದಿಂದ ಬಂದ ಪರೀಕ್ಷೆಗೆ ಒಳಪಡಿಸಲಾಗಿದೆ. ಜಿನೋಮಿಕ್ ಸೀಕ್ವೆನ್ಸ್ ಗೆ ಕಳುಸಿಲಾಗಿದೆ. ವರದಿ ಬಂದ ಮೇಲೆ ಗೊತ್ತಾಗುತ್ತದೆ ಎಂದು ಹೇಳಿದರು. ರಾಜಕೀಯ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಕಾರ್ಯಕ್ರಮಕ್ಕೂ ನಾವು ನಿರ್ಬಂಧ ಹೇರಿಲ್ಲ. ಮಾಸ್ಕ್ ಧರಿಸಿ ಎಂದು ಮಾತ್ರ ಸಲಹೆ ನೀಡಿದ್ದೇವೆ. ಜೆಡಿಎಸ್ ಪಂಚರತ್ನ ರಥ ಯಾತ್ರೆನಾದ್ರೂ ಮಾಡಲಿ, ಕಾಂಗ್ರೆಸ್ ಬಸ್ ಯಾತ್ರೆನಾದ್ರೂ ಮಾಡಲಿ. ನಮ್ಮ ಮಾರ್ಗಸೂಚಿ ಪಾಲಿಸಲಿ ಎನ್ನುವುದಷ್ಟೇ ನಮ್ಮ ಕಾಳಜಿ ಎಂದು ಹೇಳಿದರು.

ಇದಕ್ಕೂ ಮುನ್ನ ಸಂಪುಟ ಸಭೆಯಲ್ಲಿ ಕೋವಿಡ್‌ ಕುರಿತು ಚರ್ಚೆ ನಡೆಸಲಾಗಿತ್ತು. ನಂತರ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವಸಂಪುಟದಲ್ಲಿ ಈ ಬರ್ಗೆ ಚರ್ಚಿಸಲಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವುದು, ಬೂಸ್ಟರ್ ಡೋಸ್ ಹೆಚ್ಚಿಸುವುದು,ಐಎಲ್ಐ ಮತ್ತು ಸಾರಿ ಪರೀಕ್ಷೆಗಳನ್ನು ಹೆಚ್ಚಿಸುವುದು, ಮಾಸ್ಕ್ ಗಳ ಧಾರಣೆ, ಒಳಾಂಗಣಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಗಳ ಬಗ್ಗೆ ತಜ್ಞರ ಸಮಿತಿಯೊಂದಿಗೆ ಸಭೆ ನಡೆಸಿ, ಹಂತಹಂತವಾಗಿ ನಿಯಮಗಳನ್ನು ಜಾರಿ ತರಲಾಗುವುದು.

ಹೊಸ ವರ್ಷಕ್ಕೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸುವ ಬಗ್ಗೆ ಉತ್ತರಿಸಿ, ಪ್ರತಿ ಬಾರಿಯಂತೆ ಈ ವರ್ಷವೂ ನಿಯಮಗಳಿದ್ದು, ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಸೇರಿಸಲಾಗುವುದು. ಜನಸಾಮಾನ್ಯರ ದೈನಂದಿನ ಚಟುವಟಿಕೆ, ಆರ್ಥಿಕತೆಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಹಂತಹಂತವಾಗಿ ಜಾರಿ ಮಾಡಲಾಗುವುದು ಎಂದಿದ್ದರು.

ಇದನ್ನೂ ಓದಿ | BF.7 Variant | ಉತ್ತರ ಪ್ರದೇಶದಲ್ಲಿ ಮತ್ತೊಂದು ಕೊರೊನಾ ಕೇಸ್​ ಪತ್ತೆ; ದುಬೈಗೆ ಹೊರಟಿದ್ದವನಿಗೆ ಕೋವಿಡ್​ ಪಾಸಿಟಿವ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕೋರ್ಟ್

Padarayanapura Riots : ಪಾದರಾಯನಪುರ ಗಲಭೆ; ಪ್ರಕರಣ ರದ್ದತಿಗೆ ಹೈಕೋರ್ಟ್‌ ಕೊಟ್ಟ ಕಾರಣಗಳೇನು

Padarayanapura Riots : ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿದವರನ್ನು ವಶಕ್ಕೆ ಪಡೆಯಲು ಹೋದ ಅಧಿಕಾರಿಗಳನ್ನೇ ಅಟ್ಟಾಡಿಸಿದ ಪಾದರಾಯನಪುರ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಕೇಸುಗಳನ್ನು ಹೈಕೋರ್ಟ್‌ ರದ್ದುಪಡಿಸಿದೆ.

VISTARANEWS.COM


on

Padarayanapura Violence
Koo

ಬೆಂಗಳೂರು : 2020ರಲ್ಲಿ ಕೋವಿಡ್-19 ಲಾಕ್ ಡೌನ್ (Covid 19 Lock down) ಸಂದರ್ಭ ಬೆಂಗಳೂರಿನ (Bangalore News) ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ (Padarayanapura Riots) ಸಂಬಂಧಿಸಿ 375 ಮಂದಿ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ (Karnataka High Court) ರದ್ದುಗೊಳಿಸಿದೆ. ಆವತ್ತು ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿ (Violation of Covid 19 Rules) ಓಡಾಡುತ್ತಿದ್ದ 51 ಮಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆಯಲು ಹೋದಾಗ ದೊಡ್ಡ ಹಿಂಸಾಚಾರವೇ ನಡೆದಿತ್ತು.

ಸಾಕ್ಷಿಗಳ ಹೇಳಿಕೆಗಳನ್ನು ಒಂದೇ ರೀತಿಯಲ್ಲಿ ದಾಖಲಿಸಲಾಗಿದೆ. ಪೊಲೀಸರು 120ಕ್ಕೂ ಅಧಿಕ ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಸಹ ಗಲಭೆ ನಡೆದಿದೆ ಎನ್ನಲಾದ ಸಮಯದಲ್ಲಿ ಯಾವುದೇ ಆಸ್ತಿ ಪಾಸ್ತಿ ನಷ್ಟವಾಗಿಲ್ಲ, ಪೊಲೀಸರು ಯಾವುದೇ ವಸ್ತು ವಶಪಡಿಸಿಕೊಂಡಿಲ್ಲ. ಹೀಗಾಗಿ ಅಕ್ರಮವಾಗಿ ಗುಂಪುಗೂಡಿ ಬಿಬಿಎಂಪಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಎನ್ನಲಾದ ಆರೋಪದಡಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣಗಳನ್ನು ನ್ಯಾಯಾಲಯವು ರದ್ದುಪಡಿಸಿದೆ. ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ನವಾಜ್ ಪಾಷಾ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು  ಮಾನ್ಯ ಮಾಡಿ ಈ ಆದೇಶ ಹೊರಡಿಸಿದೆ.

Padarayanapura Riots : ಪಾದರಾಯನಪುರದಲ್ಲಿ ಅಂದು ಏನಾಗಿತ್ತು?

2020ರ ಏ.19ರಂದು ಸಂಜೆಯ ಸಮಯ ಬಿಬಿಎಂಪಿ ಅಧಿಕಾರಿಗಳು ಕೋವಿಡ್ ಸೋಂಕು ತಗುಲಿದ್ದ 51 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲು ಹೋಗಿದ್ದರು. ಆಗ ಅಲ್ಲಿದ್ದ ಕೆಲವರು ಕೈಯಲ್ಲಿ ಚಾಕು, ದೊಣ್ಣೆ, ರಾಡ್ ಹಿಡಿದುಕೊಂಡು ಆಶಾ ಕಾರ್ಯಕರ್ತರು, ವೈದ್ಯಾಧಿಕಾರಿಗಳು, ಪಾಲಿಕೆ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದರು. ಆರೋಪಿಗಳು ಚೇರು, ಟೇಬಲ್‌ಗಳನ್ನು ಒಡೆದು ಟೆಂಟ್ ಕಿತ್ತು ಹಾಕಿ ಅಕ್ಕ ಪಕ್ಕದ ರಸ್ತೆಗಳಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟು ಮಾಡಿದ್ದರು.

ಈ ಸಂಬಂಧ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣಾ ನ್ಯಾಯಾಲಯವು ವಿಚಾರಣೆ ನಡೆಸುತ್ತಿತ್ತು. ಈ ನಡುವೆ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿ ಪ್ರಕರಣ ರದ್ದುಪಡಿಸಲು ಕೋರಿದ್ದರು.

Padarayanapura Violence1

ಪ್ರಾಸಿಕ್ಯೂಷನ್‌ ಮತ್ತು ಪೊಲೀಸರು ದಾಖಲಿಸಿಕೊಂಡಿದ್ದ ದೂರೇನು?

ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “2020ರ ಏಪ್ರಿಲ್‌ 19ರಂದು ಸಂಜೆ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಕೋವಿಡ್ ಸೋಂಕು ತಗುಲಿದ್ದ 58 ಮಂದಿಯನ್ನು ವಶಕ್ಕೆ ತೆಗೆದಕೊಳ್ಳಲು ಪಾದರಾಯನಪುರದಲ್ಲಿ ಹೋಗಿದ್ದಾಗ ಅಲ್ಲಿ ಅಕ್ರಮವಾಗಿ ಗುಂಪು ಗೂಡಿದ್ದವರು ಕೈಯಲ್ಲಿ ಚಾಕು, ದೊಣ್ಣೆ ಮತ್ತು ರಾಡ್‌ಗಳನ್ನು ಹಿಡಿದುಕೊಂಡು ಆಶಾ ಕಾರ್ಯಕರ್ತರು, ವೈದ್ಯಾಕಾರಿಗಳು ಹಾಗೂ ಬಿಬಿಎಂಪಿ ಅಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದರು” ಎಂದು ವಾದಿಸಿದ್ದರು. ಅಲ್ಲದೇ, “ಆರೋಪಿಗಳು ಖುರ್ಚಿ, ಟೇಬಲ್‌ಗಳನ್ನು ಒಡೆದು ಟೆಂಟ್ ಕಿತ್ತು ಹಾಕಿ ಅಕ್ಕ ಪಕ್ಕದ ರಸ್ತೆಗಳಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟು ಮಾಡಿದ್ದರು. ಹೀಗಾಗಿ, ಪ್ರಕರಣ ದಾಖಲಿಸಲಾಗಿತ್ತು” ಎಂದು ತಿಳಿಸಿದ್ದರು.

ಅರ್ಜಿದಾರರ ವಾದ ಏನಾಗಿತ್ತು?

ಅರ್ಜಿದಾರರು, ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ. ತಮ್ಮ ಮನೆ ಬೇರೆ ಕಡೆಯಿವೆ. ನಿಜವಾದ ಆರೋಪಿಗಳನ್ನು ಗುರುತಿಸದೆ ಪೊಲೀಸರು ಸಿಕ್ಕ ಸಿಕ್ಕವರ ಮೇಲೆ ಕೇಸ್ ಹಾಕಿದ್ದಾರೆ. ಪಾಲಿಕೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಾಗ ಅವರಲ್ಲಿ ಸೋಂಕಿ ತರ ಪಟ್ಟಿಯೇ ಇರಲಿಲ್ಲ. ಗಲಭೆ ನಡೆದಿದೆ ಎಂದು ಹೇಳಿದ್ದರೂ ಯಾರಿಗೂ ಗಾಯವಾಗಿಲ್ಲ. ಹಾಗಾಗಿ, ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ : Ban on dogs : ಅಪಾಯಕಾರಿ ನಾಯಿ ತಳಿಗಳಿಗೆ ಕೇಂದ್ರ ನಿಷೇಧ ; ಕರ್ನಾಟಕದಲ್ಲಿ ತಡೆ

ಹೈಕೋರ್ಟ್‌ ಗಮನಿಸಿದ ತಾಂತ್ರಿಕ ಸಮಸ್ಯೆಗಳೇನು?

  1. ಐಪಿಸಿ ಸೆಕ್ಷನ್‌ 172ರಿಂದ 188ರವರೆಗೆ ಮತ್ತು ವಿಪತ್ತು ನಿರ್ವಹಣಾ ಕಾಯಿದೆ ವಿವಿಧ ಸೆಕ್ಷನ್‌ ಉಲ್ಲಂಘಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಸಕ್ಷಮ ಪ್ರಾಧಿಕಾರ ದೂರು ದಾಖಲಿಸಿಲ್ಲ.
  2. ಬಿಬಿಎಂಪಿ ಅಧಿಕಾರಿಗಳು ಪಾದರಾಯನಪುರಕ್ಕೆ ಸೀಲ್ ಡೌನ್ ಮಾಡಲು ಹೋದಾಗ 51 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು ಎಂದು ಹೇಳುತ್ತಾರೆ. ಆದರೆ, ಯಾರಿಗೆ ಸೋಂಕು ತಗುಲಿತ್ತು ಎಂಬ ಬಗ್ಗೆ ಯಾವುದೇ ವಿವರಗಳನ್ನು ಆರೋಪ ಪಟ್ಟಿಯಲ್ಲಿ ದಾಖಲಿಸಿಲ್ಲ.
  3. ಬಿಬಿಎಂಪಿ ಅಧಿಕಾರಿಗಳು ಆ ಪ್ರದೇಶವನ್ನು ಸೀಲ್ ಡೌನ್ ಮಾಡಲು ಮುಂದಾದಾಗ ಅಲ್ಲಿನ ಜನರು ಹಾಲು, ತರಕಾರಿ ಮತ್ತಿತರ ಅಗತ್ಯ ವಸ್ತುಗಳನ್ನು ತರಲು ತೊಂದರೆ ಆಗಬಹುದು ಎಂದು ಪ್ರತಿರೋಧ ಮಾಡಿರಬಹುದು, ಆಗ ಒಂದು ರೀತಿಯ ಬಿಗುವಿನ ವಾತಾವರಣ ನಿರ್ಮಾಣವಾಗಿರಬಹುದು.
  4. ಮ್ಯಾಜಿಸ್ಟ್ರೇಟ್ ಐಪಿಸಿ ಸೆಕ್ಷನ್ 188ರ ಅಡಿ ಸಂಜ್ಞೆ ತೆಗೆದುಕೊಳ್ಳಲು ನಿರ್ಬಂಧವಿದೆ. ಆದರೂ ಸಂಜ್ಞೆ ತೆಗೆದುಕೊಂಡು ಮುಂದುವರಿದಿರುವುದು ಸರಿಯಲ್ಲ.
Continue Reading

ಕರ್ನಾಟಕ

Coronavirus News: ಬುಧವಾರ 201 ಕೋವಿಡ್ ಕೇಸ್‌; ರಾಜ್ಯದಲ್ಲಿ ಸೋಂಕು ತುಸು ಇಳಿಕೆ

Coronavirus News: ಅಲ್ಪಾವಧಿಯಲ್ಲೇ ಸಾವಿರ ಗಡಿ ದಾಡಿದ್ದ ಕೋವಿಡ್‌ ಸಕ್ರಿಯ ಪ್ರಕರಣಗಳಲ್ಲಿ ತುಸು ಇಳಿಕೆ ಕಂಡುಬಂದಿದೆ. ಬುಧವಾರ ಒಬ್ಬರು ಮೃತಪಟ್ಟಿದ್ದು, 257 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

VISTARANEWS.COM


on

covid 19
Koo

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 201 ಕೋವಿಡ್ ಪ್ರಕರಣಗಳು (Coronavirus News) ಪತ್ತೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಒಬ್ಬರು ಮೃತಪಟ್ಟಿದ್ದಾರೆ. ಇನ್ನು ಸೋಂಕಿನಿಂದ ಗುಣಮುಖರಾಗಿ 257 ಮಂದಿ ಡಿಸ್ಚಾರ್ಜ್ ಆಗಿದ್ದು, ಇದರಿಂದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 974ಕ್ಕೆ ಇಳಿಕೆಯಾಗಿದೆ.

ರಾಜ್ಯಾದ್ಯಂತ ಬುಧವಾರ ಒಟ್ಟು 7315 ಮಂದಿಗೆ ಕೋವಿಡ್‌ 19 ತಪಾಸಣೆ (RTPCR – 6557, RAT – 758) ನಡೆಸಲಾಗಿತ್ತು. ಈ ಪೈಕಿ 201 ಮಂದಿಗೆ ಸೋಂಕು ತಗುಲಿದ್ದು, ಮೈಸೂರಿನಲ್ಲಿ ಒಂದು ಸಾವು ದಾಖಲಾಗಿದೆ. ಒಟ್ಟು 974 ಕೋವಿಡ್‌ ಸಕ್ರಿಯ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 507 ಪ್ರಕರಣಗಳು ಇವೆ. 915 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದು, ಆಸ್ಪತ್ರೆಯಲ್ಲಿ 59 ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಮಂಗಳವಾರ 252 ಕೊರೊನಾ ಪ್ರಕರಣಗಳು (coronavirus News) ಪತ್ತೆಯಾಗಿದ್ದವು. ಸೋಂಕಿನಿಂದ ಇಬ್ಬರು ಮೃತಪಟ್ಟು, 441 ಮಂದಿ ಡಿಸ್ಚಾರ್ಜ್ ಆಗಿದ್ದರು.

ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ

ರಾಜ್ಯದಲ್ಲಿ ಮಂಗಳವಾರದವರೆಗೆ ಒಟ್ಟು ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ 1031 ಇತ್ತು. ಆದರೆ, ಬುಧವಾರ 257 ಮಂದಿ ಡಿಸ್ಚಾರ್ಜ್‌ ಆಗಿರುವುದರಿಂದ ಪ್ರಕರಣಗಳಲ್ಲಿ ತುಸು ಇಳಿಕೆ ಕಂಡುಬಂದಿದೆ. ಸದ್ಯ 974 ಕೊರೊನಾ ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ.

ಇದನ್ನೂ ಓದಿ | Home Remedies For Winter Sickness: ಚಳಿಗಾಲದ ಸೋಂಕಿಗೆ ಉಪಯುಕ್ತ ಮನೆಮದ್ದು ಇಲ್ಲಿದೆ

ಬಳ್ಳಾರಿಯಲ್ಲಿ ಮಹಿಳೆ ಸಾವು

ಬಳ್ಳಾರಿ: ಬಳ್ಳಾರಿಯಲ್ಲಿ ಕರೊನಾ ಸೋಂಕಿನಿಂದ ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿದ್ದರು. ಬಳ್ಳಾರಿಯ 50 ವರ್ಷದ ಮಹಿಳೆ ಅಜುಂ ಮೃತರು. ಇವರು ಕೊಮಾರ್ಬಿಡಿಟೀಸ್‌ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಕೋವಿಡ್‌ ಸೋಂಕಿಗೆ ತುತ್ತಾಗಿ ಒಂದು ವಾರದಲ್ಲೇ ಅವರು ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಜಿಲ್ಲೆಯಲ್ಲಿ ಒಟ್ಟು 6 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಮಂಗಳವಾರ ಬಳ್ಳಾರಿಯಲ್ಲಿ 5, ಸಂಡೂರಿನಲ್ಲಿ 1 ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಕ್ರಿಯ ಕೇಸ್‌ಗಳ ಸಂಖ್ಯೆ 34ಕ್ಕೆ ಏರಿಕೆ ಕಂಡಂತೆ ಆಗಿದೆ. ಬಳ್ಳಾರಿ 21, ಕಂಪ್ಲಿ 1, ಸಂಡೂರು 9, ಸಿರುಗುಪ್ಪದಲ್ಲಿ 3 ಕೇಸ್ ಸಕ್ರಿಯವಾಗಿದೆ. ಹೀಗಾಗಿ ಕೋವಿಡ್ ಟೆಸ್ಟ್ ಹೆಚ್ಚಳ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ನೂರಾರು ಕೈಗಾರಿಕೆಗಳನ್ನು ಹೊಂದಿರುವ ಬಳ್ಳಾರಿಯಲ್ಲಿ ಹೊರ ರಾಜ್ಯದವರು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಬುಧವಾರ 6 ಮಂದಿಗೆ ಸೋಂಕು ದೃಢಪಟ್ಟಿದೆ.

Continue Reading

ಆರೋಗ್ಯ

Coronavirus News: ಬಳ್ಳಾರಿಯಲ್ಲಿ ಕೋವಿಡ್‌ಗೆ ಮಹಿಳೆ ಬಲಿ

Coronavirus News: ಬಳ್ಳಾರಿಯ 50 ವರ್ಷದ ಮಹಿಳೆ ಅಜುಂ ಮೃತ ಮಹಿಳೆಯಾಗಿದ್ದಾರೆ. ಇವರು ಕೊಮಾರ್ಬಿಡಿಟೀಸ್‌ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಕೋವಿಡ್‌ ಸೋಂಕಿಗೆ ತುತ್ತಾಗಿ ಒಂದು ವಾರದಲ್ಲೇ ಅವರು ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಜಿಲ್ಲೆಯಲ್ಲಿ ಒಟ್ಟು 6 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

VISTARANEWS.COM


on

COVID 19 test
Koo

ಬಳ್ಳಾರಿ: ರಾಜ್ಯದಲ್ಲಿ ಮಂಗಳವಾರ 252 ಕೊರೊನಾ ಪ್ರಕರಣಗಳು (coronavirus News) ಪತ್ತೆಯಾಗಿದ್ದು, ಸೋಂಕಿನಿಂದ ಇಬ್ಬರು (Death in Corona) ಮೃತಪಟ್ಟಿದ್ದರು. ಇದೀಗ ಬಳ್ಳಾರಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಬಳ್ಳಾರಿಯ 50 ವರ್ಷದ ಮಹಿಳೆ ಅಜುಂ ಮೃತ ಮಹಿಳೆಯಾಗಿದ್ದಾರೆ. ಇವರು ಕೊಮಾರ್ಬಿಡಿಟೀಸ್‌ನಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಕೋವಿಡ್‌ ಸೋಂಕಿಗೆ ತುತ್ತಾಗಿ ಒಂದು ವಾರದಲ್ಲೇ ಅವರು ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಜಿಲ್ಲೆಯಲ್ಲಿ ಒಟ್ಟು 6 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಮಂಗಳವಾರ ಬಳ್ಳಾರಿಯಲ್ಲಿ 5, ಸಂಡೂರಿನಲ್ಲಿ 1 ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಕ್ರಿಯ ಕೇಸ್‌ಗಳ ಸಂಖ್ಯೆ 34ಕ್ಕೆ ಏರಿಕೆ ಕಂಡಂತೆ ಆಗಿದೆ. ಬಳ್ಳಾರಿ 21, ಕಂಪ್ಲಿ 1, ಸಂಡೂರು 9, ಸಿರುಗುಪ್ಪದಲ್ಲಿ 3 ಕೇಸ್ ಸಕ್ರಿಯವಾಗಿದೆ. ಹೀಗಾಗಿ ಕೋವಿಡ್ ಟೆಸ್ಟ್ ಹೆಚ್ಚಳ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ನೂರಾರು ಕೈಗಾರಿಕೆಗಳನ್ನು ಹೊಂದಿರುವ ಬಳ್ಳಾರಿಯಲ್ಲಿ ಹೊರ ರಾಜ್ಯದವರು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಮರಣ ಪ್ರಮಾಣ ದರ ಶೇ. 0.79

ರಾಜ್ಯದಾದ್ಯಂತ ಒಟ್ಟು 7359 ಮಂದಿಗೆ COVID 19 ತಪಾಸಣೆ (RTPCR – 6514, RAT – 845) ನಡೆಸಲಾಗಿದ್ದು, ಈ ಪೈಕಿ 252 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 470 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಕೋವಿಡ್‌ ಪಾಸಿಟಿವಿಟಿ ದರ ಶೇ.3.42 ಇದ್ದು, ಮರಣ ಪ್ರಮಾಣ ದರ ಶೇ. 0.79 ವರದಿಯಾಗಿದೆ.

ಒಟ್ಟು 1031 ಸಕ್ರಿಯ ಪ್ರಕರಣಗಳ ಪೈಕಿ 962 ಮಂದಿ ಹೋಮ್ ಐಸೋಲೇಟ್‌ ಆಗಿದ್ದು, 69 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸೋಮವಾರ ರಾಜ್ಯದಲ್ಲಿ 279 ಕೋವಿಡ್‌ ಪ್ರಕರಣ ದಾಖಲಾಗಿತ್ತು. 235 ಮಂದಿ ಡಿಸ್ಚಾರ್ಜ್‌ ಆಗಿದ್ದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ ಕೊರೊನಾ; ಕಾರ್ಯಕ್ರಮ ಕ್ಯಾನ್ಸಲ್

Governor Thaawar Chand Gehlot tests positive for COVID 19

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರಿಗೆ (Thaawar Chand Gehlot) ಕೊರೊನಾ ಧೃಡಪಟ್ಟಿದೆ. ಈ ಬಗ್ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯಪಾಲರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಎಲ್ಲ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ | Hit and Run Case: ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರ ಸಾವು

ಶೀಘ್ರ ಗುಣಮುಖರಾಗುವಂತೆ ಆರ್.‌ ಅಶೋಕ್‌ ಟ್ವೀಟ್

“ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೋವಿಡ್-19 ಸೋಂಕು ಧೃಢಪಟ್ಟಿರುವ ಸುದ್ದಿ ತಿಳಿಯಿತು. ಅವರು ಶೀಘ್ರವಾಗಿ ಗುಣಮುಖರಾಗಿ ಎಂದಿನಂತೆ ಕಾರ್ಯೋನ್ಮುಖರಾಗಲಿ ಎಂದು ಹಾರೈಸುತ್ತೇನೆ” ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ಹೇಳಿದ್ದಾರೆ.

Continue Reading

ಕರ್ನಾಟಕ

Coronavirus News: ರಾಜ್ಯದಲ್ಲಿಂದು 252 ಮಂದಿಗೆ ಕೊರೊನಾ ಸೋಂಕು, ಇಬ್ಬರ ಸಾವು

coronavirus News‌: ರಾಜ್ಯದಲ್ಲಿ ಒಟ್ಟು ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1031ಕ್ಕೆ ಏರಿಕೆಯಾಗಿದೆ.

VISTARANEWS.COM


on

Covid 19
Koo

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 252 ಕೊರೊನಾ ಪ್ರಕರಣಗಳು (coronavirus News) ಪತ್ತೆಯಾಗಿವೆ. ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದು, ಗುಣಮುಖರಾಗಿ 441 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1031ಕ್ಕೆ ಏರಿಕೆಯಾಗಿದೆ.

ರಾಜ್ಯದಾದ್ಯಂತ ಒಟ್ಟು 7359 ಮಂದಿಗೆ COVID 19 ತಪಾಸಣೆ (RTPCR – 6514, RAT – 845) ನಡೆಸಲಾಗಿದ್ದು, ಈ ಪೈಕಿ 252 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ 470 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಕೋವಿಡ್‌ ಪಾಸಿಟಿವಿಟಿ ದರ ಶೇ.3.42 ಇದ್ದು, ಮರಣ ಪ್ರಮಾಣ ದರ ಶೇ. 0.79 ವರದಿಯಾಗಿದೆ.

ಒಟ್ಟು 1031 ಸಕ್ರಿಯ ಪ್ರಕರಣಗಳ ಪೈಕಿ 962 ಮಂದಿ ಹೋಮ್ ಐಸೋಲೇಟ್‌ ಆಗಿದ್ದು, 69 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸೋಮವಾರ ರಾಜ್ಯದಲ್ಲಿ 279 ಕೋವಿಡ್‌ ಪ್ರಕರಣ ದಾಖಲಾಗಿತ್ತು. 235 ಮಂದಿ ಡಿಸ್ಚಾರ್ಜ್‌ ಆಗಿದ್ದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ ಕೊರೊನಾ; ಕಾರ್ಯಕ್ರಮ ಕ್ಯಾನ್ಸಲ್

Governor Thaawar Chand Gehlot tests positive for COVID 19

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಕೋವಿಡ್‌ 19ರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಸೋಮವಾರ ರಾಜ್ಯದಲ್ಲಿ 328 ಕೊರೊನಾ ಪ್ರಕರಣಗಳು (Coronavirus News) ಪತ್ತೆಯಾಗಿತ್ತು. ಹೀಗಾಗಿ 1159 ಕೋವಿಡ್‌ ಕೇಸ್‌ಗಳು ದೃಢಪಟ್ಟಂತೆ ಆಗಿತ್ತು. ಈಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ (Thaawar Chand Gehlot) ಕೊರೊನಾ ಧೃಡಪಟ್ಟಿದೆ.

ಈ ಬಗ್ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯಪಾಲರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಎಲ್ಲ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ | Hit and Run Case: ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರ ಸಾವು

ಶೀಘ್ರ ಗುಣಮುಖರಾಗುವಂತೆ ಆರ್.‌ ಅಶೋಕ್‌ ಟ್ವೀಟ್

“ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೋವಿಡ್-19 ಸೋಂಕು ಧೃಢಪಟ್ಟಿರುವ ಸುದ್ದಿ ತಿಳಿಯಿತು. ಅವರು ಶೀಘ್ರವಾಗಿ ಗುಣಮುಖರಾಗಿ ಎಂದಿನಂತೆ ಕಾರ್ಯೋನ್ಮುಖರಾಗಲಿ ಎಂದು ಹಾರೈಸುತ್ತೇನೆ” ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ಹೇಳಿದ್ದಾರೆ.

Continue Reading
Advertisement
Surabhi Jain
ಪ್ರಮುಖ ಸುದ್ದಿ15 mins ago

Surabhi Jain : 30 ವರ್ಷಕ್ಕೆ ಮೃತಪಟ್ಟ ಫ್ಯಾಷನ್ ಐಕಾನ್​ ಸುರಭಿ ಜೈನ್

RCB vs KKR
ಕ್ರೀಡೆ48 mins ago

RCB vS KKR: ಗ್ರೀನ್​ ಜೆರ್ಸಿಯಲ್ಲಿ ಆರ್​ಸಿಬಿ ಅದೃಷ್ಟ ಹೇಗಿದೆ; ಎಷ್ಟು ಗೆಲುವು ಎಷ್ಟು ಸೋಲು?

Modi in Karnataka Here live video of Modi rally in Chikkaballapur
Lok Sabha Election 202453 mins ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Modi in Karnataka today Cm Siddaramaiah asks 11 questions to PM Modi
Lok Sabha Election 202456 mins ago

Modi in Karnataka: ಇಂದು ಕರ್ನಾಟಕಕ್ಕೆ ಮೋದಿ; ಪ್ರಧಾನಿಗೆ 11 ಪ್ರಶ್ನೆ ಕೇಳಿದ ಸಿಎಂ ಸಿದ್ದರಾಮಯ್ಯ

Uttarakaanda Movie bande kaaka rangayana Raghu
ಸ್ಯಾಂಡಲ್ ವುಡ್1 hour ago

Uttarakaanda Movie: ‘ಬಂಡೆ ಕಾಕಾ’ ನಾಗಿ ‘ಉತ್ತರಕಾಂಡ’ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಂಗಾಯಣ ರಘು

India Economy
ಪ್ರಮುಖ ಸುದ್ದಿ1 hour ago

Indian Economy : ಭಾರತದ ಆರ್ಥಿಕತೆ ಚೀನಾಕ್ಕಿಂತ ವೇಗವಾಗಿ ಬೆಳೆಯುತ್ತಿದೆ ಎಂದ ಐಎಮ್​ಎಫ್​

ರಾಜಕೀಯ1 hour ago

Neha Murder Case: ನೇಹಾ ಕೊಲೆ ಪ್ರಕರಣ ರಾಜಕೀಯಕ್ಕೆ ಬಳಕೆ; ಕೊಲೆಗಾರನಿಗೆ ಉಗ್ರ ಶಿಕ್ಷೆ ಎಂದ ಸಿದ್ದರಾಮಯ್ಯ

Road Accident in karnataka
ಕೊಡಗು1 hour ago

Road Accident : ಯಮ ರೂಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಸ್ಕೂಟರ್‌ ಸವಾರ ಸಾವು, ಬಾಲಕ ಗಂಭೀರ

Gut Health
ಲೈಫ್‌ಸ್ಟೈಲ್2 hours ago

Gut Health: ನಿಮ್ಮ ಕರುಳಿನ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ಈ ಡ್ರಿಂಕ್ಸ್ ಸೇವಿಸಿ

Viral news
ವೈರಲ್ ನ್ಯೂಸ್2 hours ago

Viral news: ಚುನಾವಣೆಗೆ ಮೊದಲೇ 19 ಲಕ್ಷ ಇವಿಎಂ ಕಾಣೆಯಾಗಿದ್ದು ನಿಜವೇ? ಏನಿದರ ಅಸಲಿಯತ್ತು ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Modi in Karnataka Here live video of Modi rally in Chikkaballapur
Lok Sabha Election 202453 mins ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

Rain News
ಮಳೆ3 hours ago

Rain News : ಸಿಡಿಲಿಗೆ ವ್ಯಕ್ತಿ ಸೇರಿ ಜಾನುವಾರುಗಳು ಮೃತ್ಯು; ವ್ಯಾಪಕ ಮಳೆಗೆ ಜನರು ಕಂಗಾಲು

Neha Murder Case
ಹುಬ್ಬಳ್ಳಿ4 hours ago

Neha Murder Case : ನನ್ನ ಮಗನಿಗೆ ಶಿಕ್ಷೆ ಆಗಲಿ; ಇಬ್ಬರೂ ಲವ್‌ ಮಾಡ್ತಿದ್ದರು ಅನ್ನೋದು ಸತ್ಯ ಎಂದ ಫಯಾಜ್‌ ತಾಯಿ

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ24 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

ಟ್ರೆಂಡಿಂಗ್‌