SM Krishna: ಬೆಂಗಳೂರಿಗೆ ಐಟಿ ಗರಿ ಮೂಡಿಸಿದ ಯುವಜನರ ಕಣ್ಮಣಿ, ಪದ್ಮವಿಭೂಷಣ ಎಸ್.ಎಂ. ಕೃಷ್ಣ - Vistara News

ಕರ್ನಾಟಕ

SM Krishna: ಬೆಂಗಳೂರಿಗೆ ಐಟಿ ಗರಿ ಮೂಡಿಸಿದ ಯುವಜನರ ಕಣ್ಮಣಿ, ಪದ್ಮವಿಭೂಷಣ ಎಸ್.ಎಂ. ಕೃಷ್ಣ

Padma Vibhushan: ಪ್ರಜಾಪ್ರಭುತ್ವ ನಾಲ್ಕೂ ಸದನಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಅವರಿಗೆ ಮಾ.22ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ದೇಶದ ಅತ್ಯುನ್ನತ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ ಗೂಳಿಗೌಡ (Dinesh Gooligowda) ಅವರು ಎಸ್‌ಎಂಕೆ ಕುರಿತು ಬರೆದಿರುವ ಲೇಖನ ಇಲ್ಲಿದೆ.

VISTARANEWS.COM


on

S M Krishna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
ದಿನೇಶ್ ಗೂಳಿಗೌಡ, ವಿಧಾನ ಪರಿಷತ್ ಸದಸ್ಯ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಸ್ಥಿತಿವಂತ ಕುಟುಂಬದಲ್ಲಿ ಹುಟ್ಟಿ ತಮ್ಮ ಅಪಾರ ವಿದ್ವತ್, ಸುದೀರ್ಘ ಅನುಭವದ ಮೂಲಕ ಆಡಳಿತದಲ್ಲಿ ಹಲವು ಹೆಗ್ಗುರುತು ಮೂಡಿಸಿ ಜನನಾಯಕರಾಗಿ ರೂಪುಗೊಂಡವರು (SM Krishna) ಎಸ್.ಎಂ. ಕೃಷ್ಣ.

1932ರಲ್ಲಿ ಮದ್ದೂರಿನ ಜನರ ಪಾಲಿನ ಪ್ರಾತಃ ಸ್ಮರಣೀಯ ಜನಾನುರಾಗಿ ನಾಯಕರಾಗಿದ್ದ ದಿವಂಗತ ಎಸ್.ಸಿ. ಮಲ್ಲಯ್ಯ ಮತ್ತು ತಾಯಮ್ಮರವರ ಏಳನೇ ಮಗನಾಗಿ ತುಂಬು ಕುಟುಂಬದಲ್ಲಿ ಜನಿಸಿದ ಎಸ್.ಎಂ. ಕೃಷ್ಣ ರವರು 1962ರಲ್ಲಿ ಪ್ರಥಮ ಬಾರಿಗೆ ಶಾಸನ ಸಭೆ ಪ್ರವೇಶಿಸಿದರು. ಆ ನಂತರ ರಾಷ್ಟ್ರದ ಪ್ರಜಾಪ್ರಭುತ್ವ ನಾಲ್ಕು ಸ್ತಂಭಗಳಾದ ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ಕಳೆದ ಅರವತ್ತು ವರ್ಷಗಳ ಕಾಲ ನಾಡಿನ, ರಾಷ್ಟ್ರದ ಸೇವೆಗೈದ ಕೃಷ್ಣ ರವರು ತಾವು ನಿರ್ವಹಿಸಿದ ಪ್ರತಿ ಹುದ್ದೆಯಲ್ಲೂ ಹೆಜ್ಜೆಗುರುತು ಮೂಡಿಸಿದವರು.

ಅಂದಿನ ಕಾಲಘಟ್ಟದಲ್ಲಿಯೇ ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸಿ ಅಮೆರಿಕದಿಂದ ಸ್ವಗ್ರಾಮಕ್ಕೆ ಆಗಮಿಸಿದಾಗ ಮದ್ದೂರು ರೈಲ್ವೆ ನಿಲ್ದಾಣದಿಂದ ಹುಟ್ಟೂರು ಸೋಮನಹಳ್ಳಿ ವರೆಗೆ ತಳಿರು ತೋರಣಗಳಿಂದ ಸಿಂಗರಿಸಿ ಕೃಷ್ಣ ಅವರನ್ನು ಸ್ವಾಗತಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಮಾವಿನ ಬೇವಿನ ಬೆಲ್ಲದ ನೋಂಪಿನ ಹೊಸ ಹರುಷದ ಹಬ್ಬ

ದೇಶ ಕಂಡ ಅನುಭವಿ ರಾಜಕಾರಣಿಯವರಲ್ಲೊಬ್ಬರಾದ ಕೃಷ್ಣ ಅವರನ್ನು ವಿಶಿಷ್ಟ ಸ್ಥಾನದಲ್ಲಿ ಕಾಣಬಹುದಾಗಿದ್ದು ಅವರ ಸಜ್ಜನ ವ್ಯಕ್ತಿತ್ವ, ಸಾರ್ವಜನಿಕ ನಡವಳಿಕೆ ಮಾತಿನ ಶೈಲಿ ಜನರನ್ನೂ ಪ್ರೀತಿಯಿಂದ ನೋಡುವ ರೀತಿ, ಗೌರವಿಸುವ ಪರಿ ಎಂಥವರನ್ನೂ ಮೋಡಿ ಮಾಡಬಲ್ಲದು. ತಮ್ಮ ಬಾಲ್ಯ ಜೀವನದಲ್ಲಿ ರಾಮಕೃಷ್ಣ ಆಶ್ರಮದಿಂದ ಪ್ರಭಾವಿತರಾಗಿದ್ದ ಕೃಷ್ಣ ಅವರು ಎಂದೂ ಸೋಲಿಗೆ ಕುಗ್ಗಲಿಲ್ಲ, ಗೆದ್ದು ಬೀಗಲಿಲ್ಲ.

ಇಂದು ಅವರ ಗರಡಿಯಲ್ಲಿ ಪಳಗಿದ ಅದೆಷ್ಟೊ ಮಂದಿ ರಾಜಕೀಯ ಕ್ಷೇತ್ರದಲ್ಲಿ ಹಲವು ಉತ್ತಮ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ. ಆಡಳಿತ ಪ್ರಕ್ರಿಯೆಯಲ್ಲಿ ಹೇಗೆ ತೊಡಗಿಕೊಳ್ಳಬೇಕೆಂಬ ಚಾಕಚಕ್ಯತೆಯನ್ನು ಅಳವಡಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಒಬ್ಬ ಆದರ್ಶ ರಾಜಕಾರಣಿಯಾಗಿ ಪ್ರಭಾವ ಬೀರಿದವರು ಕೃಷ್ಣರವರು.

ಬೆಂಗಳೂರಿನತ್ತ ವಿಶ್ವವೇ ತಿರುಗಿನೋಡುವಂತೆ ಮಾಡಿದ, ಐಟಿಬಿಟಿ ನಗರಿಯನ್ನಾಗಿ ಮಾಡಿ ಕರ್ನಾಟಕದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯಾಗಿ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದ ಎಸ್.ಎಂ. ಕೃಷ್ಣ ಅವರು ರಾಷ್ಟ್ರಮಟ್ಟದಲ್ಲಿಯೂ ಸೇವೆ ಸಲ್ಲಿಸಿ ಕರ್ನಾಟಕದ ಕೀರ್ತಿಯನ್ನು ವಿಶ್ವ ಮಟ್ಟಕ್ಕೆ ಏರಿಸಿದ್ದಾರೆ. ಇವರ ಸುದೀರ್ಘ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇವರ ರಾಜಕೀಯ ಪಯಣ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದು ತಮ್ಮ ವಿರೋಧಿಗಳ ಬಗ್ಗೆ ಟೀಕೆ ಮಾಡಿದರೂ ಅದು ಸದಭಿರುಚಿಯಿಂದ ಕೂಡಿದ್ದು, ಯಾರ ಮನಸ್ಸಿಗೂ ಘಾಸಿ ಮಾಡದೆ ಪ್ರತಿ ಮಾತಿಗೂ ಜನ ಮೆಚ್ಚುವ ರೀತಿ ಹೇಳಿಕೆಗಳನ್ನು ರೂಢಿಸಿಕೊಂಡಿರುವ ಕೃಷ್ಣ ರಂತಹ ನಾಯಕರು ಇಂದಿನ ರಾಜಕಾರಣಿಗಳಲ್ಲಿ ವಿರಳಾತಿ ವಿರಳ.

ಮಂಡ್ಯ ಜಿಲ್ಲೆಯ ಕೀರ್ತಿಯನ್ನು ಇಡೀ ವಿಶ್ವಕ್ಕೆ ಪಸರಿಸಿದಂತಹ ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿರುವುದು ಮಂಡ್ಯ ಜಿಲ್ಲೆಯ ಜನರಿಗೆ ಒಂದು ಅಭಿಮಾನ ಹಾಗೂ ಕೀರ್ತಿಯೇ ಸರಿ. ಮಂಡ್ಯ ಜಿಲ್ಲೆಯ ಅಸ್ತಿತ್ವಕ್ಕೆ ಕಾರಣಿಭೂತರಾದ ಶ್ರೀ ಎಸ್ ಸಿ ಮಲ್ಲಯ್ಯರವರ ಸುಪುತ್ರರಾದ ಕೃಷ್ಣ ರವರ ತಂದೆಯ ಪ್ರಭಾವದಿಂದಾಗಿ ಚಿಕ್ಕ ವಯಸ್ಸಿನಲ್ಲೇ ರಾಜಕೀಯಕ್ಕೆ ಪದಾರ್ಪಣೆ ಮಾಡಿ ಅಂದು ರಾಜ್ಯದ ಲೋಕೋಪಯೋಗಿ ಸಚಿವರಾಗಿ ಮುಖ್ಯಮಂತ್ರಿ ಪದವಿಯ ಸನಿಹದಲ್ಲಿದ್ದ ಎಚ್.ಕೆ. ವಿರಣ್ಣಗೌಡರವರನ್ನು ಮಣಿಸಿ ಶಾಸನಸಭೆ ಪ್ರವೇಶಿಸಿ ರಾಜ್ಯ ಹಾಗೂ ರಾಷ್ಟ್ರದ ಹಲವು ನಾಯಕರ ಸಂಪರ್ಕದಿಂದ ಯಶಸ್ವಿ ನಾಯಕರಾಗಿ ಮಂಡ್ಯ ಜಿಲ್ಲೆ ,ಕನ್ನಡ ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಭಾರತಕ್ಕೆ ಬಂದ ನಂತರ ಅವರು 1962ರಲ್ಲಿ ಮದ್ದೂರು ವಿಧಾನಸಭಾ ಶಾಸಕರಾಗಿ ಸದನದಲ್ಲಿ ಮಂಡನೆಯಾಗಿದ್ದ ಪೂರಕ ಬಜೆಟ್ ಮೇಲೆ ಎಸ್.ಎಂ. ಕೃಷ್ಣ ಅವರು ಮಾಡಿದ ಭಾಷಣವು ಕರ್ನಾಟಕದ ಶೈಕ್ಷಣಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ಥಳೀಯ ಅಭ್ಯರ್ಥಿಗಳ ಬದುಕು ಅತಂತ್ರವಾಗಿದ್ದರ ಬಗ್ಗೆ ಗಮನ ಸೆಳೆದಿದ್ದ ಕೃಷ್ಣ ಅವರು, ಇಂತಹ ಅಭ್ಯರ್ಥಿಗಳ ಕಾಯಂ ಮಾಡುವಂತೆ ಒತ್ತಾಯಿಸಿದರು. ಇದರ ಫಲವಾಗಿ ಸ್ಥಳೀಯ ಉಪನ್ಯಾಸಕರನ್ನು ಸರ್ಕಾರ ಕಾಯಂ ಮಾಡಿತು. ಈ ಮೂಲಕ ರಾಜ್ಯದ ಅದೆಷ್ಟೋ ಉಪನ್ಯಾಸಕ ಕುಟುಂಬಗಳಿಗೆ ಭದ್ರತೆ ದೊರೆಯಲು ತಮ್ಮ ಚೊಚ್ಚಲ ಭಾಷಣದಲ್ಲಿಯೇ ಕಾರಣರಾದರು.

1968ರಲ್ಲಿ ಅವರು ಮೊದಲ ಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದರಾದರು. ನಂತರ 1971ರಿಂದ 2014 ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ವಿಧಾನ ಪರಿಷತ್ ಸದಸ್ಯರಾಗಿದ್ದರು. ಈ ನಡುವೆ 1983ರಲ್ಲಿ ಕೇಂದ್ರ ಕೈಗಾರಿಕಾ ಸಚಿವರಾಗಿದ್ದ ಅವರು ಕೈಗಾರಿಕೆಗಳ ಏಳ್ಗೆ ಬಗ್ಗೆ ಸಾಕಷ್ಟು ಶ್ರಮ ವಹಿಸಿದ್ದರು. ದೇಶದ ಪ್ರತಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕೈಗಾರಿಕಾ ಬಡಾವಣೆಗಳ ಸ್ಥಾಪನೆಗೆ ಮುಂದಾದರು. ಇದರ ಫಲವನ್ನು ಬಿಹಾರ, ಒರಿಸ್ಸಾ ಸೇರಿದಂತೆ ಹಲವು ರಾಜ್ಯಗಳು ಪಡೆದುಕೊಂಡವು.

ಇದನ್ನೂ ಓದಿ: PM Modi: ಯುಗಾದಿ ಹಬ್ಬಕ್ಕೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ; ಕನ್ನಡಿಗರಿಗಾಗಿ ಕನ್ನಡದಲ್ಲೇ ಟ್ವೀಟ್​

1999ರಿಂದ 2004 ಕೃಷ್ಣ ರವರು ಮುಖ್ಯಮಂತ್ರಿಯಾಗಿ ನಾಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಅವರ ಕಾಲಘಟ್ಟದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಯೋಜನೆಗಳು ಇಂದಿಗೂ ಜಾರಿಯಲ್ಲಿದ್ದು, ಅದು ಕೃಷ್ಣ ರವರ ದೂರದೃಷ್ಟಿಯ ಫಲವಾದದ್ದು. ಸ್ತ್ರೀ ಶಕ್ತಿ, ಅಕ್ಷರ ದಾಸೋಹ, ರೈತರಿಗೆ ಪಹಣಿ ನೀಡುವ ಭೂಮಿ ಯೋಜನೆ, ಯಶಸ್ವಿನಿ ಯೋಜನೆ ಸಮಾಜದ ಸರ್ವ ಜನರನ್ನು ಸ್ಪರ್ಶಿಸಿ ಜನಮನ ಗೆದ್ದ ಯೋಜನೆಗಳಾಗಿವೆ.

ಐಟಿ ಬಿಟಿ ಕ್ಷೇತ್ರಕ್ಕೆ ಅಗಾದವಾದ ಬೆಂಬಲ ನೀಡಿ ಬೆಂಗಳೂರು ನಗರದ ಬೆಳವಣಿಗೆಗೆ ಹಾಕಿಕೊಟ್ಟ ಭದ್ರ ಬುನಾದಿಯಿಂದ ಜಾಗತಿಕ‌ ಮಟ್ಟದಲ್ಲಿ ಬೆಂಗಳೂರು ಸಿಲಿಕಾನ್‌ ವ್ಯಾಲಿ ಎಂದು ಹೆಸರು ಗಳಿಸಿ ಅಮೆರಿಕದ ಕ್ಯಾಲಿಪೋರ್ನಿಯ ನಗರಕ್ಕೆ ಪರ್ಯಾಯವಾಗಿ ಹೆಸರು ಗಳಿಸಿತ್ತು. ಇಂದು ರಾಜ್ಯದ ಆಯವ್ಯಯ ಮೂರು ಲಕ್ಷ ಕೋಟಿ ದಾಟಿದ್ದರೆ ಅದಕ್ಕೆ ಕಾರಣ ಕೃಷ್ಣ ರವರು ಐಟಿ ಕ್ಷೇತ್ರಕ್ಕೆ ನೀಡಿದ ಅವಕಾಶಗಳೇ ಕಾರಣ. ಲಕ್ಷಾಂತರ ಉದ್ಯೋಗ ಸೃಷ್ಟಿಸಿ ಹಲವು ಮೂಲಭೂತ ಸೌಕರ್ಯಗಳನ್ನು ನೀಡಿ ಕನ್ನಡ ನಾಡನ್ನು ವಿಶ್ವ ಭೂಪಟದಲಿ ಬೆಳಗಿಸಲು ಕೃಷ್ಣ ರವರ ಪಾತ್ರ ಅತ್ಯಂತ ಹಿರಿದಾದ್ದು.

ಎಸ್.ಎಂ. ಕೃಷ್ಣಾ ಅವರು 2009 ರಿಂದ 2012 ರವರೆಗೆ ಮನಮೋಹನ ಸಿಂಗ್ ಸರ್ಕಾರದಲ್ಲಿ ಭಾರತದ 72ನೇ ವಿದೇಶಾಂಗ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಸುಮಾರು 80ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದರು. ಅಲ್ಲದೆ, ಪಾಕಿಸ್ತಾನ, ಚೀನಾ, ಬ್ರಿಟನ್, ರಷ್ಯಾ, ದಕ್ಷಿಣ ಆಫ್ರಿಕಾ ದೇಶಗಳ ಜತೆ ಉತ್ತಮ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಇದೆಲ್ಲದರ ಜತೆಗೆ ಅಮೆರಿಕದ ಆಗಿನ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಜತೆ ಸಹ ರಾಜತಾಂತ್ರಿಕ ಬಾಂಧವ್ಯವನ್ನು ಉತ್ತಮವಾಗಿಟ್ಟುಕೊಂಡಿದ್ದರು. ಇದಲ್ಲದೆ, ದ್ವಿಪಕ್ಷೀಯ ಸಂಬಂಧ ಸೇರಿದಂತೆ ಜಾಗತಿಕ ವಿಷಯವಾಗಿ ಹಲವು ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದಾರೆ.

ಇದನ್ನೂ ಓದಿ: Green Jobs : ಇಂಧನ, ತ್ಯಾಜ್ಯ ನಿರ್ವಹಣೆ, ಹಸಿರು ಮೂಲ ಸೌಕರ್ಯ ಉದ್ದಿಮೆಗಳಲ್ಲಿ ನೇಮಕಾತಿ ಚುರುಕು

ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವನ್ನು ಸಮರ್ಥವಾಗಿ ಪ್ರತಿಪಾದಿಸಿದ್ದ ಎಸ್.ಎಂ. ಕೃಷ್ಣ ಅವರು, ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಬೇಕು ಎಂದು ಒತ್ತಾಯಿಸಿದ್ದರು. ಈ ಮೂಲಕ ಭಾರತ ಸಹ ಎಲ್ಲ ದೇಶಗಳಂತೆ ಸಮರ್ಥವಾದ ದೇಶ ಹಾಗೂ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆದುಕೊಳ್ಳುವ ಎಲ್ಲ ಅರ್ಹತೆ ಇದೆ ಎಂದು ಪ್ರತಿಪಾದಿಸಿದ್ದರು. ಇನ್ನು ಶತ್ರು ದೇಶ ಎಂದೇ ಕರೆಯಲ್ಪಡುವ ಪಾಕಿಸ್ತಾನದ ಜತೆ ಬಾಂಧವ್ಯ ವೃದ್ಧಿಗಾಗಿ ಎಸ್ಎಂಕೆ ಅವರು ಸಾಕಷ್ಟು ಪ್ರಯತ್ನಪಟ್ಟಿದ್ದರು. ಇನ್ನು ಚೀನಾದ ಜತೆಯೂ ಉತ್ತಮ ಸಂಬಂಧ ಹೊಂದಲು ಆದ್ಯತೆಯ ಹೆಜ್ಜೆಯನ್ನಿಟ್ಟಿದ್ದರು.

ಈಗ ನಾವು ಪಾಸ್‌ಪೋರ್ಟ್ ಅನ್ನು ಬಹಳ ಸುಲಭವಾಗಿ ಹಾಗೂ ಸರಳವಾಗಿ ಪಡೆದುಕೊಂಡು ಬಿಡುತ್ತೇವೆ. ಆದರೆ, ಆಗ ಪಾಸ್‌ಪೋರ್ಟ್ ಪಡೆದುಕೊಳ್ಳುವ ಪ್ರಕ್ರಿಯೆ ಅಷ್ಟು ಸರಳವಾಗಿರಲಿಲ್ಲ. ಇದಕ್ಕಾಗಿ ಸಾಕಷ್ಟು ಪ್ರಕ್ರಿಯೆಗಳಿದ್ದವು. ಇವುಗಳನ್ನು ಪೂರೈಸುವಷ್ಟರಲ್ಲಿ ಜನರು ಹೈರಾಣಾಗಿಬಿಡುತ್ತಿದ್ದರು. ಈ ಸಮಸ್ಯೆ ಎಸ್ಎಂಕೆ ಗಮನಕ್ಕೆ ಬಂದಿತ್ತು. ಈ ಕಾರಣಕ್ಕಾಗಿಯೇ ಅವರು ಪಾಸ್‌ಪೋರ್ಟ್ ನೀತಿಯನ್ನು ಸರಳೀಕರಣಗೊಳಿಸಲು ಮುಂದಾದರು. ಜತೆಗೆ ಆಧುನೀಕರಣಗೊಳಿಸಿದರು. ಹೀಗಾಗಿ ದೇಶದ ವಿವಿಧ ಕಡೆ 77 ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆದರು. ಇನ್ನು ಪಾಸ್‌ಪೋರ್ಟ್ ನೀಡಿಕೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದ್ದ ದೂರಿಗೆ ಪರಿಹಾರವನ್ನು ಕಂಡುಕೊಳ್ಳಲು ಇ-ಗವರ್ನೆನ್ಸ್ ಕಾರ್ಯಕ್ರಮವನ್ನು ಜಾರಿಗೆ ತಂದರು. ಇದರ ಮೂಲಕ ಪಾಸ್‌ಪೋರ್ಟ್ ನೀಡಿಕೆಗೆ ವ್ಯವಸ್ಥೆ ಮಾಡಿದರು. ಇದು ಕೋಟ್ಯಂತರ ಭಾರತೀಯರಿಗೆ ಅನುಕೂಲವಾಯಿತು. ಸಕಾಲದಲ್ಲಿ ಅಗತ್ಯವಿದ್ದವರು ಪಾಸ್‌ಪೋರ್ಟ್‌ಗಳನ್ನು ಪಡೆದುಕೊಳ್ಳುವಂತಾಯಿತು. ಇದರ ಸಂಪೂರ್ಣ ಕೀರ್ತಿ ಎಸ್‌ಎಂಕೆ ಅವರಿಗೆ ಸಲ್ಲಬೇಕು.

ಇನ್ನು ಈ ವಿಷಯವಾಗಿ ಕೃಷ್ಣ ಅವರ ಬಗ್ಗೆ ಹೇಳಲೇಬೇಕು. ಅವರ ಕಾರ್ಯತತ್ಪರತೆ ಬಗ್ಗೆ ತಿಳಿಸಲೇಬೇಕು. 2011ರಲ್ಲಿ ಲಿಬಿಯಾ ಕ್ರಾಂತಿ ಪ್ರಾರಂಭವಾಗಿತ್ತು. ಇದರಿಂದ ಅಲ್ಲಿದ್ದ ಸರಿಸುಮಾರು 18 ಸಾವಿರ ಭಾರತೀಯರ ಜೀವ-ಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಆಗ, ಅವರೆಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಎಸ್ಎಂಕೆ ಮಹತ್ವದ ಪಾತ್ರವನ್ನು ವಹಿಸಿದ್ದರು. ನಿರಂತರ ಸಂಪರ್ಕದಲ್ಲಿದ್ದುಕೊಂಡು ಸುರಕ್ಷತೆಗೆ ಬಹಳವೇ ಆದ್ಯತೆಯನ್ನು ನೀಡಿದ್ದರು.

ಇನ್ನು ಎಸ್.ಎಂ.ಕೃಷ್ಣ ಅವರು 2004ರಿಂದ 2008 ರವರೆಗೆ ದೇಶದ ಗೌರವಯುತ ಸಾಂವಿಧಾನಿಕ ಹುದ್ದೆಯನ್ನೂ ನಿರ್ವಹಿಸಿ ಅದರಲ್ಲೂ ಸೈ ಎನಿಸಿಕೊಂಡರು. ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿ ಅವರು 4 ವರ್ಷ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: Karnataka Elections 2023 : ಮತದಾರರಿಗೆ ಹಂಚಲು ಒಯ್ಯುತ್ತಿದ್ದ 16 ಲಕ್ಷ ರೂ. ಮೌಲ್ಯದ 5000 ಸೀರೆ ವಶ

ಹೀಗೆ ಎಸ್ಎಂಕೆ ಅವರ ಸೇವೆ ಈ ಇಡೀ ದೇಶಕ್ಕೆ ಬಹಳ ದೊಡ್ಡದಿದೆ. ಇಂಥ ಸಂದರ್ಭದಲ್ಲಿ ಅವರು ರಾಷ್ಟ್ರದ ಎರಡನೇ ಅತ್ಯುನ್ನತ ಗೌರವವಾಗಿರುವ ಪದ್ಮವಿಭೂಷಣಕ್ಕೆ ಭಾಜನರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಇದು ಇಡೀ ಮಂಡ್ಯಕ್ಕೆ ಹಾಗೂ ಇಂಡಿಯಾಕ್ಕೆ ಸಂದ ಗೌರವ ಎಂದು ಹೇಳಲು ಬಯಸುತ್ತೇನೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Murder Case: ಎಮ್ಮೆ ಮಾರಿ ಬಂದ ಕಾಸಿನಿಂದ ಕುಡಿದ; ಆಕ್ಷೇಪಿಸಿದ ಹೆಂಡತಿಯ ಕೊಂದು ನೇಣು ಹಾಕಿಕೊಂಡ

Murder Case: ಅಣ್ಣಪ್ಪ ನಂದಿ, ಯಲ್ಲವ್ವ ನಂದಿ(41) ದುರಂತ ಅಂತ್ಯ ಕಂಡ ಗಂಡ ಹೆಂಡತಿ. ತನ್ನಲ್ಲಿದ್ದ ಎಮ್ಮೆಯನ್ನು‌ ಮಾರಿ ಬಂದ ಹಣದಿಂದ ಅಣ್ಣಪ್ಪ ಕಂಠಪೂರ್ತಿ ಕುಡಿದು ಬಂದಿದ್ದ. ನಿನ್ನೆ ಸಂಜೆ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಯಲ್ಲವ್ವ ನಂದಿ, ಗಂಡನ ಈ ನಡತೆಯನ್ನು ಆಕ್ಷೇಪಿಸಿದ್ದಳು.

VISTARANEWS.COM


on

murder case belagavi news
Koo

ಬೆಳಗಾವಿ: ಇದ್ದ ಒಂದು ಎಮ್ಮೆಯನ್ನೂ ಮಾರಿ ಅದರಿಂದ ಬಂದ ಕಾಸನ್ನು ಕುಡಿತಕ್ಕೆ ಖರ್ಚು ಮಾಡಿದ ಭಂಡ ಗಂಡ, ಇದನ್ನು ಆಕ್ಷೇಪಿಸಿದ ಹೆಂಡತಿಯನ್ನು ಕೊಂದು (Murder Case) ತಾನೂ ನೇಣಿಗೆ (Self harming) ಶರಣಾಗಿದ್ದಾನೆ. ಈ ಘಟನೆ ಬೆಳಗಾವಿ (Belagavi news) ಜಿಲ್ಲೆ ಮೂಡಲಗಿ ತಾಲೂಕಿನ ಪುಲಗಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ.

ಅಣ್ಣಪ್ಪ ನಂದಿ, ಯಲ್ಲವ್ವ ನಂದಿ(41) ದುರಂತ ಅಂತ್ಯ ಕಂಡ ಗಂಡ ಹೆಂಡತಿ. ತನ್ನಲ್ಲಿದ್ದ ಎಮ್ಮೆಯನ್ನು‌ ಮಾರಿ ಬಂದ ಹಣದಿಂದ ಅಣ್ಣಪ್ಪ ಕಂಠಪೂರ್ತಿ ಕುಡಿದು ಬಂದಿದ್ದ. ನಿನ್ನೆ ಸಂಜೆ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಯಲ್ಲವ್ವ ನಂದಿ, ಗಂಡನ ಈ ನಡತೆಯನ್ನು ಆಕ್ಷೇಪಿಸಿದ್ದಳು.

ಇದರಿಂದ ಜಗಳ ಹುಟ್ಟಿಕೊಂಡಿದೆ. ಹೆಂಡತಿಯ ಮೇಲೆ‌ ಮೊದಲೇ ಸಂಶಯ ಪಡುತ್ತಿದ್ದ ಪಾಪಿ ಅಣ್ಣಪ್ಪ, ಹೆಂಡತಿ ಪ್ರಶ್ನೆ ಮಾಡುತ್ತಿದ್ದಂತೆ ಆಕೆಯನ್ನು ಕೊಂದು ಹಾಕಿದ್ದಾನೆ, ನಂತರ ಮನೆಗೆ ಬಂದು ಮನೆಯ ಹೊರ ಭಾಗದ ತಗಡಿನ ಶೆಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರ್ಲಕ್ಷ್ಯ ಚಾಲನೆ ಪ್ರಶ್ನಿಸಿದ ಹಿಂದೂ ಯುವಕರಿಗೆ ಮುಸ್ಲಿಂ ಗುಂಪಿನಿಂದ ಹಲ್ಲೆ

ಮಂಡ್ಯ : ಅತಿ ವೇಗದಲ್ಲಿ ಕಾರು ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ್ದ ಅಭಿಲಾಷ್​ ಎಂಬುವರ ಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಯುವಕರ ಗುಂಪೊಂದು ಹಲ್ಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ (Mandya News) ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಸೋಮವಾರ ಸಂಜೆ ವೇಳೆ ನಡೆದಿದೆ. ಘಟನೆ ಬಳಿಕ ಬೆಳ್ಳೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಟಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಶ್ರಮ ವಹಿಸುತ್ತಿದ್ದಾರೆ. ಗಂಭೀರವಾಗಿ ಪೆಟ್ಟು ತಿಂದಿರುವ ಅಭಿಲಾಷ್​ ಅವರನ್ನು ಬೆಳ್ಳೂರಿನ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಶುಕ್ರವಾರ ಮುಸ್ಲಿಂ ಯುವಕರ ಗುಂಪು ಬೆಳ್ಳೂರಿನ ಸಂತೆ ಬೀದಿಯಲ್ಇ ಅತಿ ವೇಗದಲ್ಲಿ ಪಟ್ಟಣದೊಳಗೆ ಕಾರು ಓಡಿಸಿಕೊಂಡು ಹೋಗಿದೆ. ಅಪಾಯಕಾರಿ ರೀತಿಯಲ್ಲಿ ವಾಹನ ಓಡಿಸಿದ್ದನ್ನು ಹಲ್ಲೆಗೆ ಒಳಗಾಗಿರುವ ಅಭಿಲಾಷ್ ಹಾಗೂ ಅವರ ಜತೆಗಾರ ನಾಗೇಶ್​ ಎಂಬುವರು ಪ್ರಶ್ನಿಸಿದ್ದರು. ಮಿತಿ ಮೀರಿದ ವೇಗದಲ್ಲಿ ಕಾರು ಓಡಿಸದಂತೆ ಆ ಗುಂಪಿಗೆ ಬುದ್ಧಿವಾದ ಹೇಳಿದ್ದರು. ಈ ವೇಳೆ ಸಣ್ಣ ಮಟ್ಟಿನ ಮಾತಿನ ಚಕಮಕಿ ನಡೆದಿತ್ತು. ಅದೇ ದ್ವೇಷವನ್ನು ಇಟ್ಟುಕೊಂಡಿದ್ದ ಮುಸ್ಲಿಂ ಯುವಕರ ಗುಂಪಿ ಇನ್ನಷ್ಟು ದೊಡ್ಡ ಗುಂಪನ್ನು ಕಟ್ಟಿಕೊಂಡು ಬಂದು ಸೋಮವಾರ ಸಂಜೆ ಹಲ್ಲೆ ಮಾಡಿದ್ದಾರೆ.

ದೊಡ್ಡ ಗುಂಪಿನಿಂದ ಏಟು ತಿಂದಿರುವ ಅಭಿಲಾಷ್​ ಅವರಿಗೆ ಬಹು ವಿಧದಲ್ಲಿ ಗಾಯಗಳಾಗಿವೆ ಎಂದು ಅವರ ಆಪ್ತರು ಹೇಳಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಏಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸುದ್ದಿಯಾದ ಬಳಿಕ ಬೆಳ್ಳೂರು ಪಟ್ಟಣದಲ್ಲಿ ಆತಂಕ ಮನೆ ಮಾಡಿದೆ. ಪಟ್ಟಣದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದ್ದು ಗಲಾಟೆ ಸಂಭವಿಸುವ ಸಾಧ್ಯತೆಗಳನ್ನು ಮನಗಂಡಿರುವ ಪೊಲೀಸರು ಬೆಳ್ಳೂರು ಪಟ್ಟಣ ಹಾಗೂ ಬಿಜಿಎಸ್ ಆಸ್ಪತ್ರೆಗೆ ಬಿಗಿ ಪೊಲೀಸ್ ಭದ್ರತೆ. ಒದಗಿಸಿದ್ದಾರೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Assault Case: ಹಿಂಡಲಗಾ ಜೈಲಿನಲ್ಲಿ ಕೈದಿಯಿಂದಲೇ ಮಾರಣಾಂತಿಕ ಹಲ್ಲೆ; ಭಯದಲ್ಲಿ ಬದುಕುತ್ತಿರುವ ಸಿಬ್ಬಂದಿ!

Continue Reading

ಕ್ರೈಂ

Cyber Crime: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವೈದ್ಯರಿಗೆ ವಂಚನೆ; 76 ಲಕ್ಷ ರೂ. ಸುಲಿಗೆ!

Cyber Crime: ಮನಿ ಲಾಂಡ್ರಿಂಗ್ (Money Laundering) ಕೇಸ್ ಸಂಬಂಧ ನಿಮ್ಮನ್ನು ವಿಚಾರಣೆ ಮಾಡಬೇಕಾಗಿದೆ. ನಿಮ್ಮ ವಿರುದ್ಧ ಸುಪ್ರೀಂ ಕೋರ್ಟ್ ಆರೆಸ್ಟ್ ವಾರೆಂಟ್ ಜಾರಿ ಮಾಡಿದೆ, ಸಿಬಿಐನವರು ನಿಮ್ಮನ್ನು ಆರೆಸ್ಟ್ ಮಾಡಬಹುದು ಎಂದೆಲ್ಲ ಬೆದರಿಸಿ ವಂಚಕರು ವೈದ್ಯರಿಂದ ಸುಲಿಗೆ ಮಾಡಿದ್ದಾರೆ.

VISTARANEWS.COM


on

kalaburagi cyber crime news fraud
ವಂಚನೆಗೊಳಗಾದ ವೈದ್ಯ ಡಾ. ಶಂಕರ್
Koo

ಕಲಬುರಗಿ: ಸಿಬಿಐ ಅಧಿಕಾರಿಗಳ (CBI Officers) ಹೆಸರಿನಲ್ಲಿ ಸಂಪರ್ಕಿಸಿ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರೊಬ್ಬರಿಂದ 76 ಲಕ್ಷ ರೂ.ಗಳಷ್ಟು ಹಣವನ್ನು ವಂಚಿಸಿದ (Cyber Crime) ಘಟನೆ ನಡೆದಿದೆ. ಕಲಬುರಗಿಯ (Kalaburagi news) ಪ್ರತಿಷ್ಠಿತ ವೈದ್ಯ ಪಿ. ಎಸ್ ಶಂಕರ್ ಎಂಬವರು ಹೀಗೆ ವಂಚನೆಗೆ (Fraud Case) ಒಳಗಾಗಿ 76 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಡಾ. ಪಿ‌.ಎಸ್ ಶಂಕರ್ ಅವರು ಕಲಬುರಗಿ ನಗರದ ಕೆಬಿಎನ್ ಆಸ್ಪತ್ರೆಯಲ್ಲಿ ಎಮಿರೆಟ್ಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೇ 14ರಂದು ವೈದ್ಯರಿಗೆ ವಿಜಯ್ ಕುಮಾರ್ ಚೌಬೆ ಎಂಬಾತ ಕರೆ ಮಾಡಿದ್ದು, ತಾನು ಮುಂಬಯಿ ಕ್ರೈಂ ಬ್ರಾಂಚ್ ಆಫೀಸರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಮುಂಬಯಿಯಲ್ಲಿ ನಿಮ್ಮ ವಿರುದ್ಧ ಮನಿ ಲಾಂಡ್ರಿಂಗ್ ಕೇಸ್ ಆಗಿದೆ ಎಂದು ಬೆದರಿಸಿದ್ದಾನೆ.

ಮನಿ ಲಾಂಡ್ರಿಂಗ್ (Money Laundering) ಕೇಸ್ ಸಂಬಂಧ ನಿಮ್ಮನ್ನು ವಿಚಾರಣೆ ಮಾಡಬೇಕಾಗಿದೆ. ನಿಮ್ಮ ಹೆಸರಲ್ಲಿ ಎಲ್ಲೆಲ್ಲಿ ಬ್ಯಾಂಕ್ ಅಕೌಂಟ್ ಇದೆ, ಯಾವ್ಯಾವ ಬ್ಯಾಂಕ್‌ನಲ್ಲಿ ಎಷ್ಟು ಹಣ ಇದೆ ಎಂದು ಮಾಹಿತಿ ನೀಡಿ ಎಂದು ಬೆದರಿಸಿ ಮಾಹಿತಿ ಪಡೆದಿದ್ದಾನೆ. ಈ ವಿಚಾರ ಹೊರಗಡೆ ಎಲ್ಲೂ ಹೇಳದಂತೆ ಹಾಗೂ ತಾವಿರುವ ಸ್ಥಳ ಬಿಟ್ಟು ಹೋಗದಂತೆ ಸೂಚನೆ ನೀಡಿದ್ದಾನೆ. ಬಳಿಕ, ನಿಮ್ಮ ವಿರುದ್ಧ ಸುಪ್ರೀಂ ಕೋರ್ಟ್ ಆರೆಸ್ಟ್ ವಾರೆಂಟ್ ಜಾರಿ ಮಾಡಿದೆ, ಸಿಬಿಐನವರು ನಿಮ್ಮನ್ನು ಆರೆಸ್ಟ್ ಮಾಡಬಹುದು ಎಂದು ಹೆದರಿಸಿದ್ದಾನೆ.

ನಿಮಗೆ ತೊಂದರೆ ಆಗಬಾರದು ಅಂದರೆ ಸಿಬಿಐ ಹಿರಿಯ ಅಧಿಕಾರಿಗಳಿಗೆ ಪ್ರಿಯಾರಿಟಿ ಎನ್‌ಕ್ವೈಯರಿ ಮಾಡುವಂತೆ ಮನವಿ ಮಾಡಿಕೊಳ್ಳಬೇಕು ಎಂದಿದ್ದಾನೆ. ಅದರಂತೆ ಸಿಬಿಐ ಅಧಿಕಾರಿಗಳಿಗೆ ಪತ್ರ ಬರೆಯಲು ಮುಂದಾದ ವೈದ್ಯ ಶಂಕರ್‌ಗೆ, ಸಿಬಿಐ ಅಧಿಕಾರಿ ಆಕಾಶ್ ಪುಲ್ಹರಿ ಎಂಬ ಹೆಸರಿನವನನ್ನು ಪರಿಚಯಿಸಿದ್ದಾನೆ. ಪುಲ್ಹರಿಗೆ ಪತ್ರ ಬರೆದು ವೈದ್ಯರು ಮನವಿ ಮಾಡಿಕೊಂಡಿದ್ದಾರೆ. ಸ್ಕೈಪ್ ಆಪ್ ಮೂಲಕ ವೈದ್ಯರನ್ನು ಸಂಪರ್ಕಿಸಿದ ಆಕಾಶ್ ಪುಲ್ಹರಿ, ಬಳಿಕ ವೈದ್ಯರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ದಾಖಲಾಗಿರುವುದಾಗಿ ನಂಬಿಸಿದ್ದಾನೆ.

ನಂತರ ವೈದ್ಯರ ಅಕೌಂಟ್‌ನಲ್ಲಿರುವ ಹಣದ ಬಗ್ಗೆ ಮಾಹಿತಿ ಪಡೆದು, ತಕ್ಷಣ ತನ್ನ ಅಕೌಂಟ್‌ಗೆ ಹಣ ಟ್ರಾನ್ಸ್‌ಫರ್ ಮಾಡಿಸಿಕೊಂಡಿದ್ದಾನೆ. ಹಣ ಕಳೆದುಕೊಂಡ ಬಳಿಕ ವೈದ್ಯರಿಗೆ ತಾವು ಮೋಸ ಹೋಗಿರುವ ಕುರಿತು ಜ್ಞಾನೋದಯವಾಗಿದೆ. ಈ ಬಗ್ಗೆ ದೂರು ದಾಖಲು ಮಾಡಿದ್ದಾರೆ. ಕಲಬುರಗಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ನಕಲಿ ಸಿಬಿಐ ಅಧಿಕಾರಿಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

ಹಿಂಡಲಗಾ ಜೈಲಿನಲ್ಲಿ ಸಿಬ್ಬಂದಿಗಳಿಗೇ ಕೈದಿಗಳಿಂದ ಹಲ್ಲೆ

ಬೆಳಗಾವಿ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ (Hindalaga Jail) ಸಿಬ್ಬಂದಿಗಳಿಗೇ ರಕ್ಷಣೆ ಇಲ್ಲದಂತಾಗಿದೆ. ಕೈದಿಗಳು (Prisoners) ಸೃಷ್ಟಿಸಿರುವ ಜೀವಭಯದಲ್ಲಿ ಸಿಬ್ಬಂದಿಗಳೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ. ರೂಲ್ಸ್ ಫಾಲೋ ಮಾಡು ಎಂದಿದ್ದಕ್ಕೆ ಕೈದಿಗಳಿಂದ ಸಿಬ್ಬಂದಿ ಮೇಲೆ ಗೂಂಡಾಗಿರಿ (Assault Case) ನಡೆದಿದ್ದು, ಮಾರಣಾಂತಿಕವಾಗಿ ಹಲ್ಲೆಗೊಳಗಾದ ಸಿಬ್ಬಂದಿ ಈ ಬಗ್ಗೆ ದೂರು ನೀಡಿದ್ದಾರೆ.

ಒಂದೆರಡಲ್ಲ, ಕಳೆದ ಕೆಲವು ದಿನಗಳಿಂದ ನಾಲ್ಕೈದು ಬಾರಿ ಸಿಬ್ಬಂದಿ ಮೇಲೆ ಕೈದಿಗಳು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದು, ಒಂದು ಪ್ರಕರಣ ಬೆಳಕಿಗೆ ಬಂದಿದೆ. ಹಿಂಡಲಗಾ ಜೈಲಿನ ವಾರ್ಡರ್ ವಿನೋದ್ ಲೋಕಾಪುರ್ ಎಂಬವರ ಮೇಲೆ ಹಲ್ಲೆಯಾಗಿದೆ. ಹಲ್ಲೆಗೊಳಗಾದ ವಿನೋದ್ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೈಲಿನ ನಿಯಮಾವಳಿ ಉಲ್ಲಂಘಿಸಿ ನಡೆದುಕೊಳ್ಳುತ್ತಿದ್ದ ಕೈದಿ ರಾಹಿಲ್ ಅಲಿಯಾಸ್ ರೋಹನ್ ಎಂಬವನಿಗೆ ರೂಲ್ಸ್ ಫಾಲೋ ಮಾಡು ಎಂದು ಹೇಳಿದ್ದಕ್ಕೆ ವಾರ್ಡರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಕೈದಿ ರಾಹಿಲ್ ಹಾಸನದಿಂದ ಗಡೀಪಾರಾಗಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಆಗಿದ್ದು, ಅತೀ ಭದ್ರತೆ ವಿಭಾಗದಲ್ಲಿದ್ದಾನೆ.

ಈತ ಆಸ್ಪತ್ರೆಗೆ ಹೋಗಲು ಸ್ಥಳೀಯ ಸಿಬ್ಬಂದಿಯ ಅನುಮತಿ ಬೇಕಿದ್ದು, ತಡವಾಗಿ ಅನುಮತಿ ನೀಡಿದರು ಎನ್ನುವ ಕಾರಣಕ್ಕೆ ಹೊರ ಬಂದು ವಿನೋದ್ ಮೇಲೆ ಹಲ್ಲೆ ನಡೆಸಿದ್ದಾನೆ. ಕಾಲಿನಿಂದ ಒದ್ದು ಕೈಯಿಂದ ಹಿಗ್ಗಾಮಗ್ಗಾ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ವಿನೋಸ್‌ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ತೋರಿಸಿದ್ದಾರೆ. ಕೈದಿಗಳ ಗೂಂಡಾಗಿರಿಗೆ ಬೇಸತ್ತು ಕೆಲಸಕ್ಕೆ ಬರಲು ಭಯ ಪಡುವ ಸ್ಥಿತಿ ಸಿಬ್ಬಂದಿಯದ್ದಾಗಿದೆ. ಈ ಹಿಂದೆಯೂ ಸಿಬ್ಬಂದಿ ಮೇಲೆ‌ ಹಲ್ಲೆಯಾಗಿದೆ, ಆದರೆ ಕ್ರಮ ಆಗಿಲ್ಲ‌ ಎಂದು ವಿನೋದ್ ದೂರಿದ್ದಾರೆ. ಮೇಲಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಲ್ಲೆಗೊಳಗಾದ ಸಿಬ್ಬಂದಿ ವಿನೋದ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Mandya News : ಬೆಳ್ಳೂರಿನಲ್ಲಿ ಮುಸ್ಲಿಮ್ ಯುವಕರ ಗುಂಪಿನಿಂದ ಅಭಿಲಾಷ್​ ಎಂಬುವರ ಮೇಲೆ ಮಾರಕ ಹಲ್ಲೆ

Continue Reading

ಕ್ರೈಂ

Assault Case: ಹಿಂಡಲಗಾ ಜೈಲಿನಲ್ಲಿ ಕೈದಿಯಿಂದಲೇ ಮಾರಣಾಂತಿಕ ಹಲ್ಲೆ; ಭಯದಲ್ಲಿ ಬದುಕುತ್ತಿರುವ ಸಿಬ್ಬಂದಿ!

Assault Case: ಜೈಲಿನ ನಿಯಮಾವಳಿ ಉಲ್ಲಂಘಿಸಿ ನಡೆದುಕೊಳ್ಳುತ್ತಿದ್ದ ಕೈದಿ ರಾಹಿಲ್ ಅಲಿಯಾಸ್ ರೋಹನ್ ಎಂಬವನಿಗೆ ರೂಲ್ಸ್ ಫಾಲೋ ಮಾಡು ಎಂದು ಹೇಳಿದ್ದಕ್ಕೆ ವಾರ್ಡರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಕೈದಿ ರಾಹಿಲ್ ಹಾಸನದಿಂದ ಗಡೀಪಾರಾಗಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಆಗಿದ್ದು, ಅತೀ ಭದ್ರತೆ ವಿಭಾಗದಲ್ಲಿದ್ದಾನೆ.

VISTARANEWS.COM


on

hindalaga jail assault case
Koo

ಬೆಳಗಾವಿ: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ (Hindalaga Jail) ಸಿಬ್ಬಂದಿಗಳಿಗೇ ರಕ್ಷಣೆ ಇಲ್ಲದಂತಾಗಿದೆ. ಕೈದಿಗಳು (Prisoners) ಸೃಷ್ಟಿಸಿರುವ ಜೀವಭಯದಲ್ಲಿ ಸಿಬ್ಬಂದಿಗಳೇ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ. ರೂಲ್ಸ್ ಫಾಲೋ ಮಾಡು ಎಂದಿದ್ದಕ್ಕೆ ಕೈದಿಗಳಿಂದ ಸಿಬ್ಬಂದಿ ಮೇಲೆ ಗೂಂಡಾಗಿರಿ (Assault Case) ನಡೆದಿದ್ದು, ಮಾರಣಾಂತಿಕವಾಗಿ ಹಲ್ಲೆಗೊಳಗಾದ ಸಿಬ್ಬಂದಿ ಈ ಬಗ್ಗೆ ದೂರು ನೀಡಿದ್ದಾರೆ.

ಒಂದೆರಡಲ್ಲ, ಕಳೆದ ಕೆಲವು ದಿನಗಳಿಂದ ನಾಲ್ಕೈದು ಬಾರಿ ಸಿಬ್ಬಂದಿ ಮೇಲೆ ಕೈದಿಗಳು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿದ್ದು, ಒಂದು ಪ್ರಕರಣ ಬೆಳಕಿಗೆ ಬಂದಿದೆ. ಹಿಂಡಲಗಾ ಜೈಲಿನ ವಾರ್ಡರ್ ವಿನೋದ್ ಲೋಕಾಪುರ್ ಎಂಬವರ ಮೇಲೆ ಹಲ್ಲೆಯಾಗಿದೆ. ಹಲ್ಲೆಗೊಳಗಾದ ವಿನೋದ್ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೈಲಿನ ನಿಯಮಾವಳಿ ಉಲ್ಲಂಘಿಸಿ ನಡೆದುಕೊಳ್ಳುತ್ತಿದ್ದ ಕೈದಿ ರಾಹಿಲ್ ಅಲಿಯಾಸ್ ರೋಹನ್ ಎಂಬವನಿಗೆ ರೂಲ್ಸ್ ಫಾಲೋ ಮಾಡು ಎಂದು ಹೇಳಿದ್ದಕ್ಕೆ ವಾರ್ಡರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಕೈದಿ ರಾಹಿಲ್ ಹಾಸನದಿಂದ ಗಡೀಪಾರಾಗಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಆಗಿದ್ದು, ಅತೀ ಭದ್ರತೆ ವಿಭಾಗದಲ್ಲಿದ್ದಾನೆ.

ಈತ ಆಸ್ಪತ್ರೆಗೆ ಹೋಗಲು ಸ್ಥಳೀಯ ಸಿಬ್ಬಂದಿಯ ಅನುಮತಿ ಬೇಕಿದ್ದು, ತಡವಾಗಿ ಅನುಮತಿ ನೀಡಿದರು ಎನ್ನುವ ಕಾರಣಕ್ಕೆ ಹೊರ ಬಂದು ವಿನೋದ್ ಮೇಲೆ ಹಲ್ಲೆ ನಡೆಸಿದ್ದಾನೆ. ಕಾಲಿನಿಂದ ಒದ್ದು ಕೈಯಿಂದ ಹಿಗ್ಗಾಮಗ್ಗಾ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ವಿನೋಸ್‌ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ತೋರಿಸಿದ್ದಾರೆ. ಕೈದಿಗಳ ಗೂಂಡಾಗಿರಿಗೆ ಬೇಸತ್ತು ಕೆಲಸಕ್ಕೆ ಬರಲು ಭಯ ಪಡುವ ಸ್ಥಿತಿ ಸಿಬ್ಬಂದಿಯದ್ದಾಗಿದೆ. ಈ ಹಿಂದೆಯೂ ಸಿಬ್ಬಂದಿ ಮೇಲೆ‌ ಹಲ್ಲೆಯಾಗಿದೆ, ಆದರೆ ಕ್ರಮ ಆಗಿಲ್ಲ‌ ಎಂದು ವಿನೋದ್ ದೂರಿದ್ದಾರೆ. ಮೇಲಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಲ್ಲೆಗೊಳಗಾದ ಸಿಬ್ಬಂದಿ ವಿನೋದ್ ಮನವಿ ಮಾಡಿದ್ದಾರೆ.

ನಿರ್ಲಕ್ಷ್ಯ ಚಾಲನೆ ಪ್ರಶ್ನಿಸಿದ ಹಿಂದೂ ಯುವಕರಿಗೆ ಮುಸ್ಲಿಂ ಗುಂಪಿನಿಂದ ಹಲ್ಲೆ

ಮಂಡ್ಯ : ಅತಿ ವೇಗದಲ್ಲಿ ಕಾರು ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ್ದ ಅಭಿಲಾಷ್​ ಎಂಬುವರ ಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಯುವಕರ ಗುಂಪೊಂದು ಹಲ್ಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ (Mandya News) ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಸೋಮವಾರ ಸಂಜೆ ವೇಳೆ ನಡೆದಿದೆ. ಘಟನೆ ಬಳಿಕ ಬೆಳ್ಳೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಟಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಶ್ರಮ ವಹಿಸುತ್ತಿದ್ದಾರೆ. ಗಂಭೀರವಾಗಿ ಪೆಟ್ಟು ತಿಂದಿರುವ ಅಭಿಲಾಷ್​ ಅವರನ್ನು ಬೆಳ್ಳೂರಿನ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಶುಕ್ರವಾರ ಮುಸ್ಲಿಂ ಯುವಕರ ಗುಂಪು ಬೆಳ್ಳೂರಿನ ಸಂತೆ ಬೀದಿಯಲ್ಇ ಅತಿ ವೇಗದಲ್ಲಿ ಪಟ್ಟಣದೊಳಗೆ ಕಾರು ಓಡಿಸಿಕೊಂಡು ಹೋಗಿದೆ. ಅಪಾಯಕಾರಿ ರೀತಿಯಲ್ಲಿ ವಾಹನ ಓಡಿಸಿದ್ದನ್ನು ಹಲ್ಲೆಗೆ ಒಳಗಾಗಿರುವ ಅಭಿಲಾಷ್ ಹಾಗೂ ಅವರ ಜತೆಗಾರ ನಾಗೇಶ್​ ಎಂಬುವರು ಪ್ರಶ್ನಿಸಿದ್ದರು. ಮಿತಿ ಮೀರಿದ ವೇಗದಲ್ಲಿ ಕಾರು ಓಡಿಸದಂತೆ ಆ ಗುಂಪಿಗೆ ಬುದ್ಧಿವಾದ ಹೇಳಿದ್ದರು. ಈ ವೇಳೆ ಸಣ್ಣ ಮಟ್ಟಿನ ಮಾತಿನ ಚಕಮಕಿ ನಡೆದಿತ್ತು. ಅದೇ ದ್ವೇಷವನ್ನು ಇಟ್ಟುಕೊಂಡಿದ್ದ ಮುಸ್ಲಿಂ ಯುವಕರ ಗುಂಪಿ ಇನ್ನಷ್ಟು ದೊಡ್ಡ ಗುಂಪನ್ನು ಕಟ್ಟಿಕೊಂಡು ಬಂದು ಸೋಮವಾರ ಸಂಜೆ ಹಲ್ಲೆ ಮಾಡಿದ್ದಾರೆ.

ದೊಡ್ಡ ಗುಂಪಿನಿಂದ ಏಟು ತಿಂದಿರುವ ಅಭಿಲಾಷ್​ ಅವರಿಗೆ ಬಹು ವಿಧದಲ್ಲಿ ಗಾಯಗಳಾಗಿವೆ ಎಂದು ಅವರ ಆಪ್ತರು ಹೇಳಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಏಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸುದ್ದಿಯಾದ ಬಳಿಕ ಬೆಳ್ಳೂರು ಪಟ್ಟಣದಲ್ಲಿ ಆತಂಕ ಮನೆ ಮಾಡಿದೆ. ಪಟ್ಟಣದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದ್ದು ಗಲಾಟೆ ಸಂಭವಿಸುವ ಸಾಧ್ಯತೆಗಳನ್ನು ಮನಗಂಡಿರುವ ಪೊಲೀಸರು ಬೆಳ್ಳೂರು ಪಟ್ಟಣ ಹಾಗೂ ಬಿಜಿಎಸ್ ಆಸ್ಪತ್ರೆಗೆ ಬಿಗಿ ಪೊಲೀಸ್ ಭದ್ರತೆ. ಒದಗಿಸಿದ್ದಾರೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Bomb Threat: ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ; 26/11 ರೀತಿ ದಾಳಿಗೆ ಸಂಚು?

Continue Reading

ಸಿನಿಮಾ

Swagat Babu: ಕನ್ನಡ ಚಲನಚಿತ್ರ ನಿರ್ಮಾಪಕ ಸ್ವಾಗತ್ ಬಾಬು ಇನ್ನಿಲ್ಲ

Swagat Babu: ಅವರು ನಿರ್ಮಿಸಿದ್ದ ಚಂದ್ರಮುಖಿ ಪ್ರಾಣಸಖಿ, ಶ್ರೀರಸ್ತು ಶುಭಮಸ್ತು, ಸ್ಮೈಲ್ ಮುಂತಾದ ಸಿನಿಮಾಗಳು ಹಿಟ್‌ ಆಗಿದ್ದವು. ಇವಲ್ಲದೇ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು.

VISTARANEWS.COM


on

swagat babu no more
Koo

ಬೆಂಗಳೂರು: ಕನ್ನಡ ಚಲನಚಿತ್ರಗಳ ನಿರ್ಮಾಪಕ (film producer) ಹಾಗೂ ವಿತರಕರಾಗಿದ್ದ (distributor) ಸ್ವಾಗತ್‌ ಬಾಬು (Swagat Babu) ಅವರು ಮೃತಪಟ್ಟಿದ್ದಾರೆ. ಅವರು ನಿರ್ಮಿಸಿದ್ದ ಚಂದ್ರಮುಖಿ ಪ್ರಾಣಸಖಿ, ಶ್ರೀರಸ್ತು ಶುಭಮಸ್ತು, ಸ್ಮೈಲ್ ಮುಂತಾದ ಸಿನಿಮಾಗಳು ಹಿಟ್‌ ಆಗಿದ್ದವು. ಇವಲ್ಲದೇ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. ಸುದೀರ್ಘ 35 ವರ್ಷಗಳಿಂದ ಅವರು ಕನ್ನಡ ಚಿತ್ರೋದ್ಯಮದ (kannada film industry) ಆಗುಹೋಗುಗಳಲ್ಲಿ ತೊಡಗಿಸಿಕೊಂಡಿದ್ದರು. ಸ್ವಾಗತ್‌ ಬಾಬು ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ತಮಿಳು ನಿರ್ದೇಶಕ ಸೂರ್ಯ ಪ್ರಕಾಶ್‌ ಇನ್ನಿಲ್ಲ

ಬೆಂಗಳೂರು: ತಮಿಳು ಸಿನಿಮಾಗಳ ನಿರ್ದೇಶಕ ಸೂರ್ಯ ಪ್ರಕಾಶ್ (Surya Prakash) ನಿನ್ನೆ (ಮೇ 27ರಂದು) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ‘ಮಾಯಿ’, ‘ಮಾಣಿಕ್ಕಂ’ ಮತ್ತು ‘ದಿವಾನ್’ ಚಿತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದರು. ಸೂರ್ಯ ಪ್ರಕಾಶ್ (‘Maayi’ director) ಅವರ ಅಂತಿಮ ವಿಧಿವಿಧಾನಗಳ ಕುರಿತು ಕುಟುಂಬ ಮಾಹಿತಿ ಹಂಚಿಕೊಂಡಿಲ್ಲ.

ನಟ ಶರತ್‌ಕುಮಾರ್ ಮತ್ತು ರಾಧಿಕಾ ಶರತ್‌ಕುಮಾರ್ ತಮ್ಮ ಸಾಮಾಜಿಕ ಜಾಲತಾಣ ಮೂಲಕ ಸಂತಾಪ ಸೂಚಿಸಿದ್ದಾರೆ. “ಮಾಯಿ ಮತ್ತು ದಿವಾನ್ ಚಿತ್ರಗಳನ್ನು ನಿರ್ದೇಶಿಸಿದ ನನ್ನ ಆತ್ಮೀಯ ಸ್ನೇಹಿತ ಸೂರ್ಯ ಪ್ರಕಾಶ್ ಅವರ ನಿಧನದ ಸುದ್ದಿ ಕೇಳಿ ಆಘಾತ ಮತ್ತು ನೋವಾಯ್ತು. ನಿನ್ನೆಯಷ್ಟೇ ಅವರ ಜತೆ ಮಾತನಾಡಿದ್ದೆ. ಅವರ ಹಠಾತ್ ನಿಧನ ತುಂಬ ದುಃಖ ಉಂಟುಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆʼʼಎಂದು ನಟ ಶರತ್‌ಕುಮಾರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ರಾಧಿಕಾ ಶರತ್‌ಕುಮಾರ್ “ಅದ್ಭುತ ಮತ್ತು ಪ್ರತಿಭಾವಂತ ವ್ಯಕ್ತಿ, ಉತ್ತಮ ಬರಹಗಾರ, ಹಾಸ್ಯದ ಅಭಿರುಚಿಯುಳ್ಳ ನಿರ್ದೇಶಕ, ನಟ ಶರತ್‌ಕುಮಾರ್ ಅವರ ಆತ್ಮೀಯ ಸ್ನೇಹಿತ. ಅವರ ಕುಟುಂಬ ಮತ್ತು ಸಿನಿಮಾ ಉದ್ಯಮಕ್ಕೆ ದೊಡ್ಡ ನಷ್ಟʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Dhadak 2: ‘ಧಡಕ್ 2’ ಸಿನಿಮಾ ಅನೌನ್ಸ್‌ ಮಾಡಿದ ಕರಣ್‌ ಜೋಹರ್: ʻಅನಿಮಲ್‌ʼ ನಟಿ ನಾಯಕಿ!

Continue Reading
Advertisement
murder case belagavi news
ಕ್ರೈಂ34 mins ago

Murder Case: ಎಮ್ಮೆ ಮಾರಿ ಬಂದ ಕಾಸಿನಿಂದ ಕುಡಿದ; ಆಕ್ಷೇಪಿಸಿದ ಹೆಂಡತಿಯ ಕೊಂದು ನೇಣು ಹಾಕಿಕೊಂಡ

Pune Porsche Accident
ದೇಶ41 mins ago

Pune Porsche Accident: ಆರೋಪಿಯ ರಕ್ತದ ಮಾದರಿ ಬದಲಿಸಲು 3 ಲಕ್ಷ ರೂ. ಲಂಚ ಪಡೆದಿದ್ದ ವೈದ್ಯರು; ಆಸ್ಪತ್ರೆ ಜವಾನ ಅರೆಸ್ಟ್‌

Andre Russell Dance:
ಕ್ರಿಕೆಟ್43 mins ago

Andre Russell Dance: ಬಾಲಿವುಡ್ ನಟಿ ಅನನ್ಯಾ ಪಾಂಡೆ ಜತೆ ‘ಲುಟ್ ಪಟ್ ಗಯಾ’ ಹಾಡಿಗೆ ಡ್ಯಾನ್ಸ್​ ಮಾಡಿದ ಆ್ಯಂಡ್ರೆ ರಸೆಲ್​

Job Alert
ಉದ್ಯೋಗ1 hour ago

Job Alert: ಬಂಧನ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡಲು ಮೇ 31 ಕೊನೆಯ ದಿನ

kalaburagi cyber crime news fraud
ಕ್ರೈಂ1 hour ago

Cyber Crime: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವೈದ್ಯರಿಗೆ ವಂಚನೆ; 76 ಲಕ್ಷ ರೂ. ಸುಲಿಗೆ!

Rishabh Pant Video Calls
ಕ್ರೀಡೆ1 hour ago

Rishabh Pant Video Calls: ನ್ಯೂಯಾರ್ಕ್​ನಿಂದ ವಿಡಿಯೊ ಕಾಲ್​ ಮಾಡಿ ರಿಂಕು ಸಿಂಗ್​ಗೆ ಅಭಿನಂದಿಸಿದ ಪಂತ್​

Bomb Threat
ದೇಶ1 hour ago

Bomb Threat: ಸಾಲು ಸಾಲು ಬಾಂಬ್‌ ಥ್ರೆಟ್‌ ಪ್ರಕರಣ; ತಾಜ್‌ ಹೊಟೇಲ್‌ ಬೆನ್ನಲ್ಲೇ ಇಂಡಿಗೋ ವಿಮಾನಕ್ಕೂ ಬೆದರಿಕೆ

India Head Coach
ಕ್ರೀಡೆ2 hours ago

India Head Coach: ಗಂಭೀರ್‌ ಕೋಚ್​ ಆಗುವುದು ಬಹುತೇಕ ಖಚಿತ; ಕುತೂಹಲ ಮೂಡಿಸಿದ ಜಯ್‌ ಶಾ ಭೇಟಿ

hindalaga jail assault case
ಕ್ರೈಂ2 hours ago

Assault Case: ಹಿಂಡಲಗಾ ಜೈಲಿನಲ್ಲಿ ಕೈದಿಯಿಂದಲೇ ಮಾರಣಾಂತಿಕ ಹಲ್ಲೆ; ಭಯದಲ್ಲಿ ಬದುಕುತ್ತಿರುವ ಸಿಬ್ಬಂದಿ!

Viral Video
ವೈರಲ್ ನ್ಯೂಸ್2 hours ago

Viral Video: ನಡು ರಸ್ತೆಯಲ್ಲಿ ಪಿಸ್ತೂಲ್‌ ತೋರಿಸಿ ವ್ಯಕ್ತಿ ಮೇಲೆ ಹಲ್ಲೆ; ಅಂತಾರಾಷ್ಟ್ರೀಯ ಮಟ್ಟದ ಶೂಟರ್‌ನಿಂದ ದಾಂಧಲೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ17 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು7 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು7 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌