Food Tips: ತೂಕ ಇಳಿಕೆಯ ಸಂಗಾತಿ ಓಟ್ಸ್‌ನಲ್ಲೂ ರುಚಿಕರ ಆಯ್ಕೆಗಳು! - Vistara News

ಆಹಾರ/ಅಡುಗೆ

Food Tips: ತೂಕ ಇಳಿಕೆಯ ಸಂಗಾತಿ ಓಟ್ಸ್‌ನಲ್ಲೂ ರುಚಿಕರ ಆಯ್ಕೆಗಳು!

ತೂಕ ಇಳಿಸುವಿಕೆಗೆ ಮುಖ್ಯವಾಗಿ ಬೇಕಾದ ಪ್ರೊಟೀನ್‌ ಕೂಡಾ ಇದರಲ್ಲಿದ್ದು ಇದು ಮಾಂಸಖಂಡಗಳನ್ನು ಟೋನ್‌ ಮಾಡಿ, ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ. ಹಾಗಾದರೆ, ಓಟ್ಸ್‌ನನ್ನು ಬೆಳಗಿನ ಉಪಹಾರದಲ್ಲಿ ಹೇಗೆಲ್ಲ ಬಳಸಬಹುದು ಎಂಬುದನ್ನು ನೋಡೋಣ.

VISTARANEWS.COM


on

oats meal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತೂಕ ಇಳಿಸುವ ಪ್ರಕ್ರಿಯೆ (weight loss) ಎಂಬುದೇ ಒಂದು ಪಯಣ. ಪ್ರಯಾಣವೊಂದರ ಹಾಗೆಯೇ, ಇಲ್ಲಿ ಎಷ್ಟೇ ಓದಿಕೊಂಡರೂ ಆ ಪ್ರಕ್ರಿಯೆಗೆ ಇಳಿದಾಗಲೇ ನಾವು ಮಾಡುವ ತಪ್ಪುಗಳು ಅರಿವಿಗೆ ಬರುವುದು ಹಾಗೂ ಹೊಸ ಹೊಸ ಅನುಭವಗಳಾಗುವುದು. ತೂಕ ಇಳಿಸುವುದೆಂದರೆ ಅದು ನಾಲಿಗೆಯ ಚಪಲಗಳನ್ನೆಲ್ಲ ಬಿಡುವುದು ಎಂಬ ಮನೋಭಾವನೆಯೂ ಹಲವರಲ್ಲಿದೆ. ಆದರೆ, ನಾಲಿಗೆಗೆ ಬೇಕಾದ ರುಚಿಯನ್ನು ನೀಡುತ್ತಲೂ ತೂಕದ ಮೇಲೆ ಗಮನ ಹರಿಸಿಕೊಂಡು ದೇಹದ ಒಳ್ಳೆಯದನ್ನೇ ಬಯಸುವ ಅದ್ಭುತ ಪಯಣವನ್ನೂ ನಾವು ಮನಸ್ಸು ಮಾಡಿದರೆ ಮಾಡಬಹುದು. ಹೀಗೆ, ತೂಕ ಇಳಿಸುವತ್ತ ಗಮನ ಹರಿಸಿಕೊಂಡು ಪೋಷಕಾಂಶಯುಕ್ತ ಆಹಾರದ ವಿಚಾರಕ್ಕೆ ಬಂದಾಗ ದಿಢೀರ್‌ ನೆರವಿಗೆ ಬರುವ ಆಹಾರಗಳ ಪೈಕಿ ಓಟ್ಸ್‌ (oats diet) ಕೂಡಾ ಒಂದು.

ಓಟ್ಸ್‌ ಎಂದರೆ, ಅಯ್ಯೋ ಎಂದು ಮೂಗು ಮುರಿವ ಮಂದಿಯೇ ಹೆಚ್ಚು. ಓಟ್ಸ್‌ ಕೆಲವು ದಿನಗಳಲ್ಲಿ ಬೋರಾಗಿಬಿಡುತ್ತದೆ, ತಿನ್ನಲು ಮನಸೇ ಬರುವುದಿಲ್ಲ ಎಂಬ ದೂರುಗಗಳೂ ಸಹಜ. ಆದರೆ, ಓಟ್ಸ್‌ನಲ್ಲಿಯೂ ರುಚಿಕಟ್ಟಾದ ಅಡುಗೆ ಮಾಡಬಹುದು. ಬೆಳಗಿನ ಉಪಹಾರಕ್ಕೆ ಓಟ್ಸ್‌ನಲ್ಲಿ ಸಾಕಷ್ಟು ಆಯ್ಕೆಗಳಿವೆ. ಓಟ್ಸ್‌ನಲ್ಲಿ ನಾರಿನಂಶ ಹೆಚ್ಚಿದ್ದು, ಇದು ಹೊಟ್ಟೆ ತುಂಬಿಸುವ ಆಯ್ಕೆ. ಇದರಿಂದಾಗಿ ಆಗಾಗ ತಿನ್ನುವ ಬಯಕೆ ಕಡಿಮೆಯಾಗುತ್ತದೆ. ಅತಿಯಾಗಿ ತಿನ್ನುವ ಬಯಕೆಯೂ ಹತೋಟಿಗೆ ಬರುತ್ತದೆ. ಅಷ್ಟೇ  ಅಲ್ಲ, ತೂಕ ಇಳಿಸುವಿಕೆಗೆ ಮುಖ್ಯವಾಗಿ ಬೇಕಾದ ಪ್ರೊಟೀನ್‌ ಕೂಡಾ ಇದರಲ್ಲಿದ್ದು ಇದು ಮಾಂಸಖಂಡಗಳನ್ನು ಟೋನ್‌ ಮಾಡಿ, ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತದೆ. ಹಾಗಾದರೆ, ಓಟ್ಸ್‌ನನ್ನು ಬೆಳಗಿನ ಉಪಹಾರದಲ್ಲಿ ಹೇಗೆಲ್ಲ ಬಳಸಬಹುದು ಎಂಬುದನ್ನು ನೋಡೋಣ.

oats meal

೧. ಓಟ್ಸ್‌, ಬಾದಾಮಿ ಹಾಗೂ ಬಾಳೆಹಣ್ಣಿನ ದಲಿಯಾ: ಓಟ್ಸ್‌ ದಲಿಯಾ ಓಟ್ಸ್‌ನಲ್ಲಿ ಮಾಡಬಹುದಾದ ಅತ್ಯಂತ ಸಾಮಾನ್ಯ ಉಪಹಾರ. ಆದರೆ, ಬಹುತೇಕರು ಇದಕ್ಕೆ ಸಕ್ಕರೆಯನ್ನೂ ಹಾಕಿ, ಆರೋಗ್ಯಕ್ಕೆ ಸಿಗಬಹುದಾ ಪ್ರಯೋಜನವನ್ನೂ ಹೊಸಕಿ ಹಾಕಿಬಿಡುತ್ತಾರೆ. ಆದರೆ ಈ ದಲಿಯಾ ಹಾಗಲ್ಲ. ಇಲ್ಲಿ, ಬೇಕಾದಷ್ಟು ಓಟ್ಸ್‌ ತೆಗೆದುಕೊಂಡು ಅದನ್ನು ನೀರಿನಲ್ಲಿ ಐದರಿಂದ ಹತ್ತು ನಿಮಿಷ ಬೇಯಿಸಿ. ಇದಕ್ಕೆ ಬಿಸಿ ಮಾಡಿದ ಹಾಲು ಸೇರಿಸಿ. ನೀರಿನಲ್ಲಿ ಹತ್ತು ನಿಮಿಷ ನೆನೆಸಿದ ಚಿಯಾ ಬೀಜಗಳು, ಬಾದಾಮಿ, ಕತ್ತರಿಸಿದ ಬಾಳೆಹಣ್ಣು, ಒಂದು ಚಮಚ ಜೇನುತುಪ್ಪ, ಚಿಟಿಕೆ ಚೆಕ್ಕೆ ಪುಡಿ, ಒಂದೆರಡು ಖರ್ಜೂರ ಸೇರಿಸಿ, ಒಲೆಯಿಂದ ಕೆಳಗಿಳಿಸಿ. ಅತ್ಯಂತ ರುಚಿಕರ ಹಾಗೂ ಅಷ್ಟೇ ಪೋಷಕಾಂಶಯುಕ್ತ ಓಟ್ಸ್‌ ದಲಿಯಾ ರೆಡಿ.

ಇದನ್ನೂ ಓದಿ: Food Tips: ಹಣ್ಣುಗಳನ್ನು ಕೆಡದಂತೆ ತಾಜಾ ಆಗಿ ಕಾಪಾಡಿಕೊಳ್ಳುವುದು ಹೇಗೆ?

೨. ಓಟ್ಸ್‌- ಬಟಾಣಿ ದೋಸೆ: ದೋಸೆಯೆಂಬ ತಿಂಡಿ ಬೆಳಗಿನ ಉಪಹಾರಕ್ಕೆ ಹೇಳಿ ಮಾಡಿಸಿದ್ದು. ನಿತ್ಯದ ಒಂದೇ ಬಗೆಯ ದೋಸೆಗಿಂತ ಬೇರೆ ದೋಸೆಯನ್ನು ಹೀಗೆ ಪ್ರಯತ್ನಿಸಬಹುದು. ಓಟ್ಸ್‌ ನೆನೆಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ಇಂಗು, ಜೀರಿಗೆ, ಕತ್ತರಿಸಿದ ಹಸಿಮೆಣಸಿನಕಾಯಿ, ಹಸಿ ಬಟಾಣಿ, ತುರಿದ ಶುಂಠಿ ಸೇರಿಸಿ ಬಾಡಿಸಿಕೊಂಡು ಹಿಟ್ಟಿಗೆ ಸೇರಿಸಿ ದೋಸೆ ಹುಯ್ಯಿರಿ.

೩. ಓಟ್ಸ್‌ ಪಾನ್‌ಕೇಕ್:‌ ಕೇವಲ ತೂಕ ಇಳಿಸುವವರಿಗಷ್ಟೇ ಅಲ್ಲ, ಮಕ್ಕಳಿಗೂ ಆಸಕ್ತಿಕರ ಅಷ್ಟೇ ಆರೋಗ್ಯಕರ ಬೆಳಗಿನ ತಿಂಡಿಯ ಆಯ್ಕೆಯಿದು. ಮೈದಾದ ಪಾನ್‌ಕೇಕ್‌ ಮಾಡುವ ಬದಲು, ಆರೋಗ್ಯಕರ ಓಟ್ಸ್‌ ಪಾನ್‌ ಕೇಕ್‌ ಇದು. ಓಟ್ಸ್‌ ನೆನೆಹಾಕಿ ಮಜ್ಜಿಗೆ ಸೇರಿಸಿ ರುಬ್ಬಿಟ್ಟುಕೊಳ್ಳಿ. ಹುಳಿ ಬಂದ ಈ ಹಿಟ್ಟಿಗೆ ಮೊಟ್ಟೆಯನ್ನೂ ಸೇರಿಸಿ ಕಲಸಿಕೊಳ್ಳಬಹುದು. ಮೊಟ್ಟೆ ತಿನ್ನದವರು ಇದನ್ನು ಬಿಡಬಹುದು. ಇದನ್ನು ಪಾನ್‌ಕೇಕ್‌ನಂತೆ ತವಾದ ಮೇಲೆ ಹುಯ್ಯಿರಿ. ಮಕ್ಕಳಿಗೆ ರುಚಿಗೆ ಬೇಕಿದ್ದರೆ ಹಿಟ್ಟಿಗೆ ಸಕ್ಕರೆ ಸೇರಿಸಿಕೊಳ್ಳಬಹುದು.

ಇದನ್ನೂ ಓದಿ: Food Tips: ಇಡ್ಲಿ ಎಂಬ ಆರಾಧ್ಯ ದೈವ: ಇಲ್ಲಿದೆ ಹಬೆಯಾಡುವ ಬಗೆಬಗೆಯ ಇಡ್ಲಿಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Solution For Pimples: ಈ ಆಹಾರಗಳ ಸಹವಾಸ ಬಿಡಿ; ಮೊಡವೆಯನ್ನು ದೂರವಿಡಿ!

ಮೊಡವೆಗಳಿಗೆ ಪರಿಹಾರವೇ ಇಲ್ಲವೇ (Solution For Pimples) ಎಂದು ನೀವು ಕೇಳಬಹುದು. ಖಂಡಿತ ಇದ್ದೇ ಇದೆ. ಮುಖ್ಯವಾಗಿ, ಚರ್ಮದ ಹೊರಗಿನ ಆರೈಕೆಗಿಂತ ಒಳಗಿನ ಆರೈಕೆ ಮುಖ್ಯ. ಒಳಗೆ ತೆಗೆದುಕೊಳ್ಳುವ ಆಹಾರದ ಬಗ್ಗೆಯೂ ಕಾಳಜಿ ಮಾಡಬೇಕು. ಬನ್ನಿ, ಯಾವೆಲ್ಲ ಆಹಾರಗಳ ಬಗ್ಗೆ ಎಚ್ಚರ ಅಗತ್ಯ ಎಂಬುದನ್ನು ನೋಡೋಣ.

VISTARANEWS.COM


on

Solution For Pimple
Koo

ಮೊಡವೆ ಮತ್ತು ಮೊಡವೆಗಳ ಕಲೆಗಳಿಂದ ಬೇಸತ್ತ ಮಂದಿ ಏನೆಲ್ಲ ಸರ್ಕಸ್‌ ಮಾಡಿದರೂ ಮೊಡವೆಯಿಂದ ಮುಕ್ತಿ ಸಿಗುವುದಿಲ್ಲ ಎಂದು ಬೇಸರ ಪಡಬಹುದು. ನೂರೆಂಟು ಮಂದಿ ನೂರಾರು ಸಲಹೆ ಕೊಡಬಹುದಾದರೂ, ಎಲ್ಲರಿಗೂ ಎಲ್ಲ ಸಲಹೆಗಳೂ ಹೊಂದಲಾರದು. ಕಾರಣ, ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ಬಗೆ. ಮೊಡವೆಗಳ ಸಮಸ್ಯೆಗೆ (Solution For Pimples) ಎಲ್ಲರ ಕಾರಣಗಳೂ ಒಂದೇ ಆಗಿರಬೇಕಾಗಿಲ್ಲ. ಆದರೆ, ಬಹುತೇಕರ ಸಮಸ್ಯೆ ಎಂದರೆ ಎಣ್ಣೆ ಚರ್ಮ. ಚರ್ಮದಲ್ಲಿ ಅತಿಯಾದ ಎಣ್ಣೆ ಸ್ರವಿಸಲ್ಪಡುವುದು ಹಾಗೂ ಇದರಿಂದ ಉಂಟಾಗುವ ಮೊಡವೆಗಳು. ಇದಕ್ಕಾಗಿ ಅನೇಕರು ಬಳಸದ ಕ್ರೀಮ್‌ಗಳಿಲ್ಲ, ಮಾಡದ ಮನೆಮದ್ದುಗಳಿಲ್ಲ, ಹೋಗದ ಪಾರ್ಲರ್‌ಗಳಿಲ್ಲ. ಆದರೆ ಸಮಸ್ಯೆ ಮಾತ್ರ ಎಂದಿನದ್ದೇ. ಹಾಗಾದರೆ ಮೊಡವೆಗಳಿಗೆ ಪರಿಹಾರವೇ ಇಲ್ಲವೇ ಎಂದು ನೀವು ಕೇಳಬಹುದು. ಖಂಡಿತ ಇದ್ದೇ ಇದೆ. ಮುಖ್ಯವಾಗಿ, ಚರ್ಮದ ಹೊರಗಿನ ಆರೈಕೆಗಿಂತ ಒಳಗಿನ ಆರೈಕೆ ಮುಖ್ಯ. ಒಳಗೆ ತೆಗೆದುಕೊಳ್ಳುವ ಆಹಾರದ ಬಗ್ಗೆಯೂ ಕಾಳಜಿ ಮಾಡಬೇಕು. ಬನ್ನಿ, ಯಾವೆಲ್ಲ ಆಹಾರಗಳ ಬಗ್ಗೆ ಎಚ್ಚರ ಅಗತ್ಯ ಎಂಬುದನ್ನು ನೋಡೋಣ.

Warm milk

ಹಾಲು

ಹಾಲಿನಿಂದ ಮೊಡವೆಗಳುಂಟಾಗಬಹುದು. ಆಶ್ಚರ್ಯವಾದರೂ ಸತ್ಯವೇ. ಹಸುವಿನ ಹಾಲಿನಲ್ಲಿ ಬೆಳವಣಿಗೆಯ ಹಾರ್ಮೋನ್‌ ಐಜಿಎಫ್‌-1 ಹಾಗೂ ಬೊವಿನ್‌ ಇರುವುದರಿಂದ ಇವು ನಮ್ಮ ದೇಹಕ್ಕೆ ಸೇರುವುದರಿಂದ ಇವು ಚರ್ಮದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇದರಿಂದ ಮುಖದಲ್ಲಿ ಕೂದಲ ಬೆಳವಣಿಗೆ ಹಾಗೂ ಮೊಡವೆಗಳೂ ಉಂಟಾಗುತ್ತದೆ.

ಅಯೋಡಿನ್

ಮೊಡವೆಗಳಿಗೂ ಅಯೋಡಿನ್‌ಗೂ ಅವಿನಾಭಾವ ಸಂಬಂಧವಿದೆ. ಅಂದರೆ, ಉಪ್ಪು ಹೆಚ್ಚಿರುವ ತಿನಿಸುಗಳನ್ನು, ಆಗಾಗ ತಿನ್ನುವ ಆಹಾರಗಳಲ್ಲಿರುವ ಉಪ್ಪಿನ ಪ್ರಮಾಣ ಎಲ್ಲವೂ ನಮ್ಮ ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಆದರೆ, ಪೂರ್ತಿಯಾಗಿ ಉಪ್ಪನ್ನು ಬಿಡಬೇಡಿ. ಅಯೋಡಿನ್‌ ಕೊರತೆ ದೇಹಕ್ಕೆ ಆಗಬಾರದು ಎಂಬುದನ್ನೂ ನೆನಪಿನಲ್ಲಿಟ್ಟುಕೊಂಡು ಕೊಂಚ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದು ನಿಮ್ಮ ಚರ್ಮದ ಮೇಲೆ ಮ್ಯಾಜಿಕ್‌ ಮಾಡಬಹುದು.

Index foods

ಹೆಚ್ಚು ಗ್ಲಿಸೆಮಿಕ್‌ ಇಂಡೆಕ್ಸ್‌ ಇರುವ ಆಹಾರಗಳು

ಕಡಿಮೆ ಗ್ಲಿಸೆಮಿಕ್‌ ಇಂಡೆಕ್ಸ್‌ ಇರುವ ಆಹಾರಗಳ ಸೇವನೆ ನಿಮ್ಮ ಮೊಡವೆಗಳ ಸಮಸ್ಯೆಯನ್ನೇ ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ ಎನ್ನಲಾಗುತ್ತದೆ. ಕಾರ್ನ್‌ ಸಿರಪ್‌, ಮೈದಾ, ಸಕ್ಕರೆ, ರಿಫೈನ್ಡ್‌ ಧಾನ್ಯಗಳು, ಸಾಸ್‌ ಹಾಗೂ ಕೆಚಪ್‌ಗಳು, ಸ್ಪೋರ್ಟ್ಸ್‌ ಡ್ರಿಂಕ್‌ಗಳು ಸಂಸ್ಕರಿಸಿದ ಮಾಂಸ ಹಾಗೂ ಇತರ ಆಹಾರಗಳು, ಇತರ ಆಹಾರಗಳ ಮೂಲಕ ಗೊತ್ತೇ ಆಗದಂತೆ ದೇಹದೊಳಕ್ಕೆ ಸೇರುವ ಸಕ್ಕರೆ ಎಲ್ಲವೂ ಹೆಚ್ಚು ಗ್ಲಿಸೆಮಿಕ್‌ ಇಂಡೆಕ್ಸ್‌ ಹೊಂದಿವೆ. ಆದಷ್ಟೂ ನೈಸರ್ಗಿಕ ಆಹಾರಗಳು, ಒಣಬೀಜಗಳು, ಹಣ್ಣುಗಳು ಇತ್ಯಾದಿಗಳನ್ನೇ ತಿನ್ನಿ.
ಹಾಗಾದರೆ ಏನು ತಿಂದರೆ ಮೊಡವೆಗಳು ಬರದಂತೆ ತಡೆಯಬಹುದು, ಚರ್ಮವನ್ನು ನುಣುಪಾಗಿ ಇರಿಸಬಹುದು ಎನ್ನುತ್ತೀರಾ? ಝಿಂಕ್‌ ಹೆಚ್ಚಿರುವ ಆಹಾರಗಳು ಮೊಡವೆ ಸಮಸ್ಯೆಗೆ ಬಹಳ ಒಳ್ಳೆಯದು. ಇದರಲ್ಲಿರುವ ಆಂಟಿ ಇನ್‌ಫ್ಲಮೇಟರಿ ಗುಣಗಳು ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾಗಳನ್ನು ಓಡಿಸುತ್ತವೆ. ಕಿಡ್ನಿ ಬೀನ್ಸ್‌, ಓಯ್ಸ್ಟರ್‌, ಕೆಂಪು ಮಾಂಸ ಹಾಗೂ ಸಿಹಿಕುಂಬಳದ ಬೀಜ ಇವುಗಳಲ್ಲಿ ಹೆಚ್ಚು ಝಿಂಕ್‌ ಇವೆ.
ಅಷ್ಟೇ ಅಲ್ಲ, ಒಮೆಗಾ 3 ಇರುವ ಆಹಾರಗಳನ್ನು ಹೆಚ್ಚಿಸಿ ಒಮೆಗಾ ಇರುವ ಆಹಾರಗಳಾದ ಸಂಸ್ಕರಿಸಿದ ಎಣ್ಣೆಗಳು, ಬೇಕ್ಡ್‌ ಆಹಾರಗಳು ಇತ್ಯಾದಿಗಳನ್ನು ಕಡಿಮೆ ಮಾಡಿ. ನದಿಯ ಮೀನನ್ನು ವಾರಕ್ಕೆರಡು ಬಾರಿ ತಿನ್ನಿ. ಚಿಯಾ ಬೀಜಗಳು, ಅಗಸೆ ಬೀಜಗಳನ್ನು ನಿತ್ಯವೂ ಸೇವಿಸಿ. ಆಹಾರ ಸೇವನೆಯ ಪ್ರಮಾಣದ ಮೇಲೆ ಹಿಡಿತವಿರಲಿ. ನೈಸರ್ಗಿಕ ಆಹಾರಗಳನ್ನೇ ಹೆಚ್ಚು ಸೇವಿಸಿ. ಎಲ್ಲ ಪೋಷಕಾಂಶಗಳನ್ನೊಳಗೊಂಡ ಸಂಪೂರ್ಣ ಆಹಾರದೆಡೆಗೆ ಗಮನ ಇರಲಿ. ಇಷ್ಟು ಮಾಡಿದರೆ ಖಂಡಿತವಾಗಿಯೂ ನಿಮ್ಮ ಚರ್ಮವೂ ಆರೋಗ್ಯಕರವಾಗಿ ಫಲಫಳಿಸುತ್ತದೆ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

Continue Reading

ಆಹಾರ/ಅಡುಗೆ

ವಿಸ್ತಾರ ಸಂಪಾದಕೀಯ: ಸಾರ್ವಜನಿಕ ಆಹಾರದಲ್ಲಿ ಆರೋಗ್ಯ ಕಾಳಜಿ ಪ್ರಮುಖವಾಗಿರಲಿ

ಬೀದಿ ಬದಿಯ ಆಹಾರ ತಿಂಡಿಗಳ ಸೇವನೆ ಯಾವಾಗಲೂ ರಿಸ್ಕ್‌ ಅಂಶದಿಂದ ಕೂಡಿರುವಂಥದು. ಇಲ್ಲಿ ಸ್ವಚ್ಛತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾರ್ವಜನಿಕರಿಗೆ ಯಾವ ಅವಕಾಶವೂ ಇಲ್ಲ. ಸ್ಥಳೀಯಾಡಳಿತಗಳ ಬಳಿಯೂ ಯಾವುದೇ ಮಾನದಂಡ ಇರುವಂತಿಲ್ಲ. ರುಚಿಯಾಗಿದೆ ಎಂದು ಕಾಣಿಸುವ ಆಹಾರವೆಲ್ಲವೂ ಶುಚಿಯಾಗಿರಬೇಕಿಲ್ಲ. ಈ ಬಗ್ಗೆ ಜನ ಜಾಗೃತರಾಗುವುದು ಮುಖ್ಯ.

VISTARANEWS.COM


on

Steet Food
Koo

ಬೇಸಿಗೆಯ ಬಿಸಿಲಿನ ತೀವ್ರತೆ ಹಾಗೂ ನೀರಿನ ಲಭ್ಯತೆಯ ಕೊರತೆ ಹೆಚ್ಚಾಗುತ್ತಿರುವಂತೆ, ಬೀದಿ ಬದಿಯ ಆಹಾರ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ವಿತರಣೆಯಾಗುವ ಆಹಾರವನ್ನು ಸೇವಿಸಿ ಅಸ್ವಸ್ಥರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಂಡ್ಯದಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ, ಐಸ್ ಕ್ರೀಂ ತಿಂದು ಒಂದುವರೆ ವರ್ಷದ ಅವಳಿ ಮಕ್ಕಳು (Twin Children death) ಮೃತಪಟ್ಟಿದ್ದು, ತಾಯಿ ಅಸ್ವಸ್ಥಗೊಂಡಿದ್ದಾರೆ. ದಾವಣಗೆರೆಯಲ್ಲಿ ನಡೆಯುತ್ತಿದ್ದ ಎಕ್ಸಿಬಿಷನ್‌ನಲ್ಲಿ ಬಾಲಕನೊಬ್ಬ ಸ್ಮೋಕ್‌ ಬಿಸ್ಕೆಟ್‌ ತಿಂದು ಅಸ್ವಸ್ಥನಾಗಿದ್ದಾನೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೊಡವತ್ತಿ ಕ್ರಾಸ್‌ನ ಗೊಲ್ಲರಹಟ್ಟಿಯಲ್ಲಿ ರಾಮನವಮಿಯಂದು ಪಾನಕ, ಮಜ್ಜಿಗೆ ಸೇವಿಸಿ ಒಂದೇ ಗ್ರಾಮದ 45 ಮಂದಿ ಅಸ್ವಸ್ಥರಾಗಿದ್ದಾರೆ. ಬುಧವಾರ ರಾಮನವಮಿ ಹಿನ್ನೆಲೆಯಲ್ಲಿ ಭಕ್ತರು ಮಜ್ಜಿಗೆ, ಪಾನಕವನ್ನು ಸೇವನೆ ಮಾಡಿದ್ದರು. ಇವರಿಗೆ ಮಧ್ಯರಾತ್ರಿಯಿಂದ ಹೊಟ್ಟೆನೋವು, ವಾಂತಿ- ಭೇದಿ ಶುರುವಾಗಿದೆ.

ಇಂಥ ಪ್ರಕರಣಗಳು ಹೆಚ್ಚುತ್ತಿವೆ; ಹೀಗಾಗಿಯೇ ಸ್ಥಳೀಯಾಡಳಿತಗಳು, ಸರ್ಕಾರದ ಜೊತೆಗೆ ಸಾರ್ವಜನಿಕರೂ ಎಚ್ಚರಿಕೆ ವಹಿಸಬೇಕಿದೆ. ಬೇಸಿಗೆಯಲ್ಲಿ ಸಹಜವಾಗಿಯೇ ಹೊರಗೆ ಓಡಾಡುವವರಿಗೆ ದಾಹ ಹೆಚ್ಚು. ಈ ಸಲವಂತೂ ಧಗೆ ಇನ್ನಷ್ಟು ಹೆಚ್ಚಿದೆ. ತಣ್ಣಗೆ ಏನಾದರೂ ಸಿಕ್ಕರೆ ಕುಡಿದುಬಿಡೋಣ ಎನಿಸುತ್ತದೆ. ರಾಮನವಮಿ ಕೂಡ ಕಡುಬೇಸಿಗೆಯಲ್ಲಿ ಬರುತ್ತದೆ. ಸಾರ್ವಜನಿಕವಾಗಿ ಪಾನಕ- ಪನಿವಾರ ವಿತರಣೆ ನಡೆಯುತ್ತದೆ. ಹೆಚ್ಚಿನ ಭಕ್ತರು ಸ್ವಚ್ಛತೆಯ ಕಾಳಜಿ ವಹಿಸುತ್ತಾರಾದರೂ, ಕೆಲವೆಡೆ ಪ್ರಮಾದವಶಾತ್‌ ಅವಘಡಗಳು ಸಂಭವಿಸುತ್ತವೆ. ಇದಕ್ಕಾಗಿಯೇ ಸಾರ್ವಜನಿಕವಾಗಿ ಆಹಾರ ಸೇವಿಸುವಾಗ, ಪಾನೀಯ ಸೇವಿಸುವಾಗ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು. ವಿತರಕರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಇನ್ನು ಖಾಸಗಿ, ಬೀದಿ ಬದಿಯ ಆಹಾರ ತಿಂಡಿಗಳ ಸೇವನೆ ಯಾವಾಗಲೂ ರಿಸ್ಕ್‌ ಅಂಶದಿಂದ ಕೂಡಿರುವಂಥದು. ಇಲ್ಲಿ ಸ್ವಚ್ಛತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸಾರ್ವಜನಿಕರಿಗೆ ಯಾವ ಅವಕಾಶವೂ ಇಲ್ಲ. ಸ್ಥಳೀಯಾಡಳಿತಗಳ ಬಳಿಯೂ ಯಾವುದೇ ಮಾನದಂಡ ಇರುವಂತಿಲ್ಲ. ರುಚಿಯಾಗಿದೆ ಎಂದು ಕಾಣಿಸುವ ಆಹಾರವೆಲ್ಲವೂ ಶುಚಿಯಾಗಿರಬೇಕಿಲ್ಲ. ಐಸ್‌ಕ್ರೀಮ್‌ನಂಥ ತಿಂಡಿತಿನಿಸುಗಳು ಸೇವಿಸುವಾಗ ಆಹಾ ಎನಿಸಿದರೂ, ಅದರ ಪರಿಣಾಮ ಆಮೇಲೆ ತಿಳಿಯುತ್ತದೆ. ತಣ್ಣಗೆ ಕೊರೆಯುವ ಐಸ್‌ಕ್ರೀಮ್‌ ಗಂಟಲಿನಲ್ಲಿ ಸೋಂಕು ಉಂಟುಮಾಡಬಲ್ಲದು. ಇದು ಎಲ್ಲ ಐಸ್‌ಕ್ರೀಮ್‌ಗಳಿಗೆ ಹೇಳಿದ ಮಾತಲ್ಲ. ಶುಚಿತ್ವ, ಶುದ್ಧತೆ, ಗ್ರಾಹಕರ ಆರೋಗ್ಯದ ಕಡೆಗೆ ಗಮನ ಕೊಡದ ಈಟರಿಗಳ ಬಗ್ಗೆ ಮಾತ್ರ ಈ ಮಾತನ್ನು ಹೇಳಬಹುದು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಇರಾನ್ -‌ ಇಸ್ರೇಲ್ ಯುದ್ಧ ತಪ್ಪಿಸಲೇಬೇಕಿದೆ

ಹಾಗಾದರೆ ಸ್ಥಳೀಯಾಡಳಿತಗಳು ಸಾರ್ವಜನಿಕರ ಆರೋಗ್ಯ ಖಾತರಿಪಡಿಸಿಕೊಳ್ಳಲು ಏನು ಮಾಡಬಹುದು? ಬೀದಿ ಬದಿಯ ಈಟರಿಗಳಿಗೆ ದಿಡೀರ್‌ ದಾಳಿ ನಡೆಸಿ ಅಲ್ಲಿನ ಹೈಜೀನ್‌ ಅನ್ನು ಪರೀಕ್ಷಿಸುವುದು ಒಂದು ದಾರಿ. ಹೋಟೆಲ್‌ಗಳೂ ಈ ಹೈಜೀನ್‌ ಮಾನದಂಡಗಳನ್ನು ಅನುಸರಿಸಬೇಕು. ಸಾರ್ವಜನಿಕರೂ, ಸ್ವಚ್ಛತೆ ಕಾಪಾಡಿಕೊಳ್ಳದ ಸ್ಥಳಗಳಲ್ಲಿ ಆಹಾರ ಸೇವಿಸುವುದಿಲ್ಲ ಎಂಬ ನಿರ್ಣಯ ತೆಗೆದುಕೊಳ್ಳಬೇಕು. ಬೆಂಗಳೂರಿನಲ್ಲಿ ಕುಡಿಯುವ ನೀರಿನಿಂದ ಹಾಗೂ ಆಹಾರದಿಂದ ಬಂದ ಕಾಲರಾ ಕೂಡ ಕೆಲವರಲ್ಲಿ ಕಂಡುಬಂದಿದೆ. ಸೋಂಕುಗಳು ವ್ಯಾಪಕವಾಗಿರುವ ಕಾಲದಲ್ಲಿ, ಮನೆಯಲ್ಲಿ ಮಾಡಿಕೊಳ್ಳುವ ಆರೋಗ್ಯಕರ ಆಹಾರವೇ ಅತ್ಯುತ್ತಮ.

Continue Reading

ಲೈಫ್‌ಸ್ಟೈಲ್

Nestle Company: ಮಕ್ಕಳ ಜೀವದ ಜತೆ ನೆಸ್ಲೆ ಕಂಪನಿ ಚೆಲ್ಲಾಟ? ಸೆರೆಲಾಕ್‌ ಕುಡಿಸೋ ಮುನ್ನ ಎಚ್ಚರ!

Nestle Company ಮಕ್ಕಳು ದೇಶದ ಸಂಪತ್ತು ಎನ್ನುತ್ತಾರೆ. ಹಾಗಾಗಿ ಅವರ ಆರೋಗ್ಯ ತುಂಬಾ ಮಹತ್ವವಾದದ್ದು. ಈಗಂತೂ ರಾಗಿ ಗಂಜಿ, ಕುಚ್ಚಲಕ್ಕಿ ಗಂಜಿ ಬದಲು ಬೆಳಿಗ್ಗೆ ಎದ್ದಾಕ್ಷಣ ದೊಡ್ಡದೊಂದು ಗ್ಲಾಸ್ ನಲ್ಲಿ ಹಾಲು ಹಾಕಿ ಅದಕ್ಕೆ ಒಂದಷ್ಟು ಮಾರುಕಟ್ಟೆಯಿಂದ ತಂದ ಪುಡಿ ಸುರಿದು ಮಕ್ಕಳ ಹೊಟ್ಟೆಯನ್ನು ತುಂಬಿಸಿಬಿಡುತ್ತಾರೆ. ಅದರಲ್ಲಿರುವ ಸಕ್ಕರೆ ಪ್ರಮಾಣ, ಕಲರ್ ಗೆ ಬಳಸಿರುವ ವಸ್ತುಗಳ ಬಗ್ಗೆ ನಮ್ಮ ಗಮನವೇ ಇಲ್ಲ. ಇದೀಗ ಸಾಕಷ್ಟು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ನೆಸ್ಲೆ ಕಂಪೆನಿಯು ಇಂತಹದ್ದೊಂದು ಇಕ್ಕಟ್ಟಿಗೆ ಸಿಕ್ಕಿ ಹಾಕಿಕೊಂಡಿದೆ.

VISTARANEWS.COM


on

Nestle Company
Koo

ಬೆಂಗಳೂರು: ನಾವು ನಮ್ಮ ಮಕ್ಕಳಿಗೆ ಯಾವುದೇ ಒಂದು ಆಹಾರವನ್ನು ನೀಡುವಾಗಲೂ ತುಂಬಾ ಎಚ್ಚರಿಕೆ ವಹಿಸುತ್ತೇವೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ನೆಸ್ಲೆ ಕಂಪೆನಿಯ (Nestle Company) ಆಹಾರವನ್ನು ಕೇಳಿ ಪಡೆಯುತ್ತೇವೆ. ಯಾಕೆಂದರೆ ಇದು ವಿಶ್ವದ ಅತಿದೊಡ್ಡ ಮತ್ತು ಪ್ರಸಿದ್ಧ ಗ್ರಾಹಕರ ಸರಕುಗಳ ಪೂರೈಕೆಯ ಕಂಪೆನಿಯಾಗಿದೆ. ಆದರೆ ಈ ಕಂಪೆನಿಯ ಫುಡ್ ಅನ್ನು ಮಕ್ಕಳಿಗೆ ನೀಡಿದರೆ ಇದರಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವುದರಲ್ಲಿ ಸಂಶಯವಿಲ್ಲ.

ಹೌದು ವಿಶ್ವದ ಅತಿದೊಡ್ಡ ಗ್ರಾಹಕರ ಸರಕುಗಳ ಪೂರೈಕೆಯ ಕಂಪೆನಿ ನೆಸ್ಲೆ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಗ್ರಾಹಕರ ಮತ್ತು ಶಿಶುಗಳ ಆಹಾರದಲ್ಲಿ ಅತಿ ಹೆಚ್ಚು ಸಕ್ಕರೆಯನ್ನು ಬಳಸುತ್ತಿದೆ ಎಂಬುದಾಗಿ ಅಧ್ಯಯನದಿಂದ ತಿಳಿದುಬಂದಿದೆಯಂತೆ. ಯುನೈಟೆಡ್ ಕಿಂಗ್ ಡಮ್, ಜರ್ಮನಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನೆಸ್ಲೆ ಸಕ್ಕರೆ ಮುಕ್ತ ಆಹಾರವನ್ನು ಮಾರಾಟ ಮಾಡುತ್ತಿದ್ದರೆ ಏಷ್ಯನ್, ಆಫ್ರಿಕನ್ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ನೆಸ್ಲೆ ಮಗುವಿನ ಆಹಾರ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಸೇರಿಸುತ್ತಿದೆ ಎಂದು ಅಧ್ಯಯನ ತೋರಿಸಿದೆ.

ಜನಪ್ರಿಯವಾದ ‘ಬೋರ್ನ್ ವೀಟಾ’ ಮೇಲೆ ಭಾರತ ಸರ್ಕಾರವು ಕಠಿಣ ಕ್ರಮ ಕೈಗೊಂಡ ಹಿನ್ನಲೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ಮೂಲಕ ಬೊಜ್ಜು ಮತ್ತು ದೀರ್ಘಕಾಲದ ಕಾಯಿಲೆಗಳನ್ನು ನಿಗ್ರಹಿಸುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಅಧ್ಯಯನದ ಮೂಲಕ ತಿಳಿದುಬಂದಿದೆ.

ನೆಸ್ಲೆ ಕಂಪೆನಿ ಆಹಾರ ಉತ್ಪನ್ನಗಳ ಲೇಬಲ್ ಗಳಲ್ಲಿ ಪ್ಯಾಕೇಜಿಂಗ್, ವಿಟಮಿನ್ ಗಳು, ಖನಿಜಗಳು ಮತ್ತು ಉತ್ಪನ್ನಗಳಲ್ಲಿರುವ ಪೋಷಕಾಂಶಗಳ ವಿವರವನ್ನು ನೀಡುತ್ತಿದೆ ಆದರೆ ಉತ್ಪನ್ನಗಳಿಗೆ ಸೇರಿಸಿದ ಸಕ್ಕರೆ ಮಾಹಿತಿಯನ್ನು ಬಿಟ್ಟುಬಿಡಲಾಗಿದೆ ಎಂಬುದು ವರದಿಯಿಂದ ಬಹಿರಂಗಗೊಂಡಿದೆ. ಇದರಿಂದಾಗಿ ನೆಸ್ಲೆ ಕಂಪೆನಿಯ ಮೇಲೆ ಅನುಮಾನ ಹುಟ್ಟಿಕೊಂಡಿದೆ ಎನ್ನಲಾಗಿದೆ.

  • ನೆಸ್ಲೆ ಆಹಾರ ಉತ್ಪನ್ನಗಳಿಗೆ ಬಳಸುತ್ತಿರುವ ಸಕ್ಕರೆ ಪ್ರಮಾಣದ ಬಗ್ಗೆ ಇಲ್ಲಿದೆ ಮಾಹಿತಿ
  • ಥೈಲ್ಯಾಂಡ್ : ಒಂದು ಉತ್ಪನ್ನಕ್ಕೆ 6ಗ್ರಾಂ ಸಕ್ಕರೆ ಬಳಕೆ
  • ಇಥಿಯೋಪಿಯಾ: 5.2ಗ್ರಾಂ ಸಕ್ಕರೆ ಬಳಕೆ
  • ದಕ್ಷಿಣ ಆಫ್ರಿಕಾ: 4ಗ್ರಾಂ ಸಕ್ಕರೆ ಬಳಕೆ
  • ಪಾಕಿಸ್ತಾನ : 2.7ಗ್ರಾಂ ಸಕ್ಕರೆ ಬಳಕೆ
  • ಭಾರತ : 2.2ಗ್ರಾಂ ಸಕ್ಕರೆ ಬಳಕೆ
  • ಬಾಂಗ್ಲಾದೇಶ: 1.6ಗ್ರಾಂ ಸಕ್ಕರೆ ಬಳಕೆ
  • ಯುಕೆ, ಜರ್ಮನಿ, ಫ್ರಾನ್ಸ್ : ಶೂನ್ಯ ಸಕ್ಕರೆ ಬಳಕೆ

ಇದನ್ನೂ ಓದಿ: Viral Video: ಅಕ್ಷರ ಕಲಿಸಿದ ಶಿಕ್ಷಕಿಯ ಕಪಾಳಕ್ಕೆ ಹೊಡೆದ ವಿದ್ಯಾರ್ಥಿ; ಎಂಥ ಕಾಲ ಬಂತು ನೋಡಿ!

ಇದಕ್ಕೆ ಪ್ರತಿಕ್ರಿಯಿಸಿದ ನೆಸ್ಲೆ ಕಂಪೆನಿ ಉತ್ಪನ್ನಗಳಲ್ಲಿ ಸೇರಿಸಲಾದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದಾಗಿ ತಿಳಿಸಿದೆ. ಆದರೆ ಈ ಅಧ್ಯಯನದಿಂದ ಹೊರಬಿದ್ದ ಮಾಹಿತಿಯಿಂದಾಗಿ ನೆಸ್ಲೆ ಆಹಾರ ಉತ್ಪನ್ನಗಳ ಮಾರಾಟದಲ್ಲಿ ಹಿನ್ನೆಡೆಯನ್ನು ಎದುರಿಸುವುದು ಖಂಡಿತ ಎನ್ನಲಾಗಿದೆ. ಒಟ್ಟಾರೆ ಮಕ್ಕಳ ಜೀವದ ಜೊತೆ ಆಟವಾಡುವಂತಹ ಆಹಾರ ಉತ್ಪನ್ನಗಳ ಕಂಪನಿಯನ್ನು ಬುಡಸಹಿತ ಕಿತ್ತು ಹಾಕುವುದು ಉತ್ತಮ ಎಂಬ ಮಾತುಗಳು ಕೇಳಿಬರುತ್ತಿವೆ.

Continue Reading

ಆಹಾರ/ಅಡುಗೆ

Baking Powder: ಬೇಕಿಂಗ್‌ ಪುಡಿ ಹುಟ್ಟಿದ ಕತೆ ಕುತೂಹಲಕರ! ಅಡುಗೆ ಮಾಡುವ ಮೊದಲು ಇದರ ಹಿನ್ನೆಲೆ ಗೊತ್ತಿರಲಿ

ಏನನ್ನಾದರೂ ದಿಢೀರನೆ ಬೇಕ್‌ ಮಾಡಬೇಕೆಂದರೆ ಬೇಕಿಂಗ್‌ ಪುಡಿಗಾಗಿ (Baking Powder) ತಡಕಾಡುತ್ತೇವೆ. ಇಡ್ಲಿ, ದೋಸೆಯ ಹಿಟ್ಟುಗಳು ಹುದುಗು ಬಾರದಿದ್ದರೆ, ಧೋಕ್ಲಾ ಬೇಗನೇ ಉಬ್ಬುವುದಕ್ಕೆ- ಹೀಗೆ ಹಲವು ತಿನಿಸುಗಳಲ್ಲಿ ಬೇಕಿಂಗ್‌ ಪುಡಿ ಬಳಕೆಯಾಗುತ್ತದೆ. ಏನಿದು ಬೇಕಿಂಗ್‌ ಪುಡಿ? ಇದರ ಇತಿಹಾಸವೇನು? ಈ ಲೇಖನ ಓದಿ.

VISTARANEWS.COM


on

Baking Powder
Koo

ಏನನ್ನಾದರೂ ಬೇಕ್‌ ಮಾಡುವ ಉದ್ದೇಶ ನಿಮಗಿದೆ ಎಂದಿಟ್ಟುಕೊಳ್ಳೋಣ. ಇಂಟರ್ನೆಟ್‌ನಲ್ಲಿ ರೆಸಿಪಿ ಹುಡುಕುತ್ತೀರಿ. ಯಾವುದೇ ಪಾಕವನ್ನು ಹುಡುಕಿದರೂ ಅದರಲ್ಲಿ ಸಾಮಾನ್ಯವಾಗಿ ಬೇಕಿಂಗ್‌ ಪೌಡರ್‌ ಹಾಕುವುದಕ್ಕೆ ಹೇಳಿರುತ್ತಾರೆ. ಭಾರತೀಯ ಅಡುಗೆ ಮನೆಗಳಲ್ಲಿ ಪರಂಪರಾಗತವಾಗಿ ಇದರ ಬಳಕೆ ಇಲ್ಲದಿದ್ದರೂ, ಆಧುನಿಕ ಅಡುಗೆಮನೆಗಳಲ್ಲಿ ಇದು ತನ್ನ ಸ್ಥಾನ ಸ್ಥಾಪಿಸಿಕೊಂಡಿದೆ. ಹೆಚ್ಚಿನ ಬೇಕಿಂಗ್‌ ವಿಧಾನಗಳು ಬೇಕಿಂಗ್‌ ಪೌಡರ್‌ (Baking Powder) ಬಳಸುವುದಕ್ಕೆ ಸೂಚಿಸುತ್ತವೆ. ಬೇಕಿಂಗ್‌ ಸೋಡಾ ಸಹ ಅಲ್ಪ ಪ್ರಮಾಣದಲ್ಲಿ ಬಳಕೆಯಾದರೂ, ಅದು ಸ್ವಚ್ಛ ಮಾಡುವುದಕ್ಕೂ ಅಷ್ಟೇ ವ್ಯಾಪಕವಾಗಿ ಬಳಕೆಯಲ್ಲಿದೆ. ಆದರೆ ಬೇಕಿಂಗ್‌ ಸೋಡಾದಷ್ಟು ಪ್ರಬಲವಾದ ಶುಚಿಕಾರಕವಲ್ಲ ಬೇಕಿಂಗ್‌ ಪುಡಿ. ಏನಿದು, ಎಂದಿನಿಂದ ಇದರ ಬಳಕೆ ಪ್ರಾರಂಭವಾಯ್ತು ಎಂಬೆಲ್ಲ ಮಾಹಿತಿಗಳು ಇಲ್ಲಿವೆ.
ಹಿಟ್ಟನ್ನು ಹುದುಗು ಬರಿಸಿ ಬೇಯಿಸುವುದು ವಿಶ್ವದೆಲ್ಲೆಡೆ ಚಾಲ್ತಿಯಲ್ಲಿರುವ ಕ್ರಮ; ಅದು ಇಡ್ಲಿ-ದೋಸೆಗಳೇ ಇರಬಹುದು, ಧೋಕ್ಲಾ-ವಡೆಗಳೇ ಆಗಬಹುದು, ಕೇಕ್‌-ಬ್ರೆಡ್‌ಗಳೇ ಇರಬಹುದು. ಈ ಹುದುಗು ಬರುವುದೆಂದರೆ ಹಿಟ್ಟಿನಲ್ಲಿ ನೈಸರ್ಗಿಕವಾಗಿ ಒಂದಿಷ್ಟು ಎನ್‌ಜೈಮುಗಳು ಸೇರಿಕೊಳ್ಳುವುದು. ಪಾಶ್ಚಾತ್ಯ ಅಡುಗೆಗಳಲ್ಲಿ ಯೀಸ್ಟ್‌ ಬಳಕೆ ಶತಮಾನಗಳಿಂದಲೂ ಇದೆ. ಆದರೆ ಅವುಗಳಲ್ಲೂ ಸಮಯ ತೆಗೆದುಕೊಳ್ಳುತ್ತದೆ. ಬ್ರೆಡ್‌ ಮಾಡುವುದಕ್ಕೆ ಯೀಸ್ಟ್‌ ಸೇರಿಸಿದಾಗ ಹಲವಾರು ತಾಸುಗಳ ಕಾಲ ಹಿಟ್ಟನ್ನು ಹುದುಗಿಸಬೇಕು, ಆ ಹಿಟ್ಟು ಉಬ್ಬಿ ಬರಬೇಕು. ಆಗಲೇ ಮೃದುವಾದ ಹತ್ತಿಯಂಥ ಬ್ರೆಡ್‌ ಮಾಡುವುದಕ್ಕೆ ಸಾಧ್ಯ. ಭಾರತೀಯ ಪಾಕಗಳಲ್ಲೂ ಹಾಗೆಯೇ. ಆದರೆ ಹಿಟ್ಟನ್ನು ನೈಸರ್ಗಿಕವಾಗಿಯೇ ಹುದುಗಿಸುವ ಕ್ರಮ ಇನ್ನೂ ಚಾಲ್ತಿಯಲ್ಲಿದೆ. ತೀರಾ ಗಡಿಬಿಡಿಯಿದ್ದರೆ ಬೇಕಿಂಗ್‌ ಪೌಡರ್‌ ಇದ್ದೇಇದೆ!

Baking soda

ಆವಿಷ್ಕಾರ ಆಗಿದ್ದೇಕೆ?

ಪಶ್ಚಿಮ ದೇಶಗಳಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಜೀವನಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳು ತಲೆದೋರಿದವು. ಎಲ್ಲವನ್ನೂ ಬೃಹತ್‌ ಪ್ರಮಾಣದಲ್ಲಿ ಮಾಡುವ ಗೀಳು ಆರಂಭವಾಯಿತು, ಬ್ರೆಡ್‌ ಮತ್ತದರ ಸೋದರ ಸಂಬಂಧಿಗಳು ಸಹ ಈ ಪಟ್ಟಿಗೆ ಸೇರಿದವು. ಮನೆಮಂದಿಯ ಯೋಗಕ್ಷೇಮವನ್ನೇ ಕಸುಬಾಗಿ ನೆಚ್ಚಿಕೊಂಡಿದ್ದ ಮಹಿಳೆಯರು ಕೈಗಾರಿಕೆಗಳಿಗೆ ತೆರಳಿ ದುಡಿಯಲು ಆರಂಭಿಸಿದ ಮೇಲೆ, ಬೇಕರಿಗಳಿಂದ ಆಹಾರ ಖರೀದಿಸುವ ಅಗತ್ಯ ಕಂಡುಬಂತು. ಹೀಗೆ ಹೆಚ್ಚಿನ ಪ್ರಮಾಣದಲ್ಲಿ, ಕ್ಷಿಪ್ರವಾಗಿ ಬೇಕ್‌ ಮಾಡುವ ಉದ್ದೇಶ ಬೇಕಿಂಗ್‌ ಪೌಡರ್‌ ಮತ್ತು ಸೋಡಾಗಳ ಆವಿಷ್ಕಾರದ ಹಿಂದಿತ್ತು.
ಬ್ರಿಟಿಷ್‌ ದೇಶದ ರಸಾಯನ ಶಾಸ್ತ್ರಜ್ಞ ಆಲ್ಫ್ರೆಡ್‌ ಬರ್ಡ್‌ ಎಂಬಾತ, ೧೮೪೩ರಲ್ಲಿ, ಬೇಕಿಂಗ್‌ ಪೌಡರ್‌ ಆವಿಷ್ಕರಿಸಿದ. ಬೇಕಿಂಗ್‌ ಸೋಡಾ ಮತ್ತು ಆಮ್ಲವೊಂದರ (ಟಾರ್ಟರ್‌ ಕ್ರೀಮ್‌) ಮಿಶ್ರಣಗಳು ತೇವಾಂಶ ಅಥವಾ ಉಷ್ಣತೆಯ ಸಂಪರ್ಕಕ್ಕೆ ಬಂದಾಕ್ಷಣ ಹುದುಗಲಾರಂಭಿಸುತ್ತವೆ ಎಂಬುದನ್ನು ಆತ ತೋರಿಸಿಕೊಟ್ಟ. ಹೀಗೆ ಹತ್ತೊಂಬತ್ತನೇ ಶತಮಾನದ ಹೊತ್ತಿಗೆ, ಇಂದಿನ ಕಾಲದಲ್ಲಿ ಉಪಯೋಗಿಸುತ್ತಿರುವ ಬೇಕಿಂಗ್‌ ಪುಡಿ ಸಿದ್ಧಗೊಂಡಿತು.

Baking soda

ಇಂದಿನ ದಿನಗಳಲ್ಲಿ

ಕೇವಲ ಹಿಟ್ಟನ್ನು ಹುದುಗಿಸುವುದಕ್ಕೆ ಮಾತ್ರವೇ ಬೇಕಿಂಗ್‌ ಪುಡಿ ಇಂದಿನ ದಿನಗಳಲ್ಲಿ ಸೀಮಿತಗೊಂಡಿಲ್ಲ. ಬೇಕ್‌ ಮಾಡಿದ ತಿನಿಸುಗಳು ಸರಿಯಾದ ಆಕಾರ ಹೊಂದಲು, ಅದಕ್ಕೆ ಪದರುಪದರಾದ ಮೇಲ್ಮೈ ಬರುವುದಕ್ಕೆ- ಹೀಗೆ ತಿನಿಸುಗಳು ಕಣ್ಣಿಗೂ ತಂಪೆರೆಯುವಂತೆ ಮಾಡುವುದಕ್ಕೆ ಇದು ಸಹಕಾರಿ. ಮಾತ್ರವಲ್ಲ, ಗೋದಿ ಅಥವಾ ಮೈದಾ ಬಳಸದ ಗ್ಲೂಟೆನ್‌-ಮುಕ್ತ ಬೇಕಿಂಗ್‌ನಲ್ಲೂ ಬೇಕಿಂಗ್‌ ಪುಡಿಯ ಕೊಡುಗೆ ಸಾಕಷ್ಟಿರುತ್ತದೆ. ಮೊಟ್ಟೆಯನ್ನು ಬಳಸದೆ ಬೇಕ್‌ ಮಾಡುವುದಕ್ಕೆ ಸಹ ಬೇಕಿಂಗ್‌ ಪುಡಿ ಅತ್ಯಗತ್ಯ. ಇದಲ್ಲದೆ, ಹೊಸ ರೆಸಿಪಿಗಳು ಬೇಕಿಂಗ್‌ ಪುಡಿಯನ್ನು ಬಳಸಿಕೊಂಡೇ ತಿನಿಸುಗಳ ಬಣ್ಣ, ರುಚಿ ಮತ್ತು ಮೇಲ್ನೋಟವನ್ನು ಶೋಧಿಸಲು ಯತ್ನಿಸುತ್ತಿರುವುದು ಆಸಕ್ತಿಕರ ಸಂಗತಿ.

ಇದನ್ನೂ ಓದಿ: Sugarcane Milk Benefits: ಬಿಸಿಲಲ್ಲೂ ತಾಜಾತನ ನೀಡುವ ಕಬ್ಬಿನಹಾಲು ದೇವರು ಕೊಟ್ಟ ಅಮೃತ!

Continue Reading
Advertisement
Dina Bhavishya
ಭವಿಷ್ಯ20 mins ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

ಕರ್ನಾಟಕ5 hours ago

Water Crisis: ಬೆಂಗಳೂರಿನ 110 ಹಳ್ಳಿಗಳಿಗೆ ಗುಡ್ ನ್ಯೂಸ್ ಕೊಟ್ಟ ಜಲಮಂಡಳಿ; ಶೀಘ್ರದಲ್ಲೇ ಹೆಸರಘಟ್ಟ ಕೆರೆಯಿಂದ ನೀರು!

Neha Hiremttt
ಪ್ರಮುಖ ಸುದ್ದಿ5 hours ago

ವಿಸ್ತಾರ ಸಂಪಾದಕೀಯ: ನೇಹಾ ಹಿರೇಮಠಗೆ ನ್ಯಾಯ ಸಿಗಲಿ, ಆರೋಪಿಗೆ ಗಲ್ಲು ಶಿಕ್ಷೆಯಾಗಲಿ

Narendra Modi
ದೇಶ6 hours ago

Narendra Modi : ವಿಶ್ವವೇ ನೋಡಿದೆ.. ಯುಪಿ ರ್ಯಾಲಿಯಲ್ಲಿ ಶಮಿಯನ್ನು ಹೊಗಳಿದ ಮೋದಿ

IPL 2024
ಕ್ರೀಡೆ6 hours ago

IPL 2024 : ಚೆನ್ನೈ ವಿರುದ್ಧ ಲಕ್ನೊ ತಂಡಕ್ಕೆ8 ವಿಕೆಟ್ ಭರ್ಜರಿ ಗೆಲುವು

Operation Hasta
ಕರ್ನಾಟಕ6 hours ago

Operation Hasta: ಮಾಜಿ‌ ಸಚಿವ ಮಾಲೀಕಯ್ಯ ಗುತ್ತೇದಾರ್, ಮಾಜಿ ಶಾಸಕಿ ಶಾರದಾ ಶೆಟ್ಟಿ ಕಾಂಗ್ರೆಸ್‌ ಸೇರ್ಪಡೆ

Ballari Lok Sabha constituency Congress candidate e Tukaram Election campaign
ಬಳ್ಳಾರಿ6 hours ago

Lok Sabha Election 2024: ಬಡವರ ಬಾಳು ಬಂಗಾರ ಮಾಡಿದ್ದು ಕಾಂಗ್ರೆಸ್‌: ಈ. ತುಕಾರಾಂ

Lok Sabha Election 2024
Lok Sabha Election 20246 hours ago

Lok Sabha Election 2024: 1 ವೋಟಿಗಾಗಿ ದಟ್ಟ ಕಾಡಿನಲ್ಲಿ 18 ಕಿ.ಮೀ. ನಡೆದ ಚುನಾವಣಾ ಸಿಬ್ಬಂದಿ

Narendra Modi
ಪ್ರಮುಖ ಸುದ್ದಿ6 hours ago

Narendra Modi : ಮತದಾನ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ ಮೋದಿ; ಎನ್​ಡಿಎಗೆ ಮತ ನೀಡಿದ್ದಾರೆ ಎಂದ ಪ್ರಧಾನಿ

Lok sabha Election
ರಾಜಕೀಯ7 hours ago

lok Sabha Election : ಮೊದಲ ಹಂತದಲ್ಲಿ ಶೇ.60.3ರಷ್ಟು ಮತದಾನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ20 mins ago

Dina Bhavishya : ಈ ರಾಶಿಯ ವಿವಾಹ ಆಕಾಂಕ್ಷಿಗಳಿಗೆ ಕೂಡಿಬರಲಿದೆ ಶುಭ ಘಳಿಗೆ

Neha Murder Case
ಹುಬ್ಬಳ್ಳಿ14 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ1 day ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20245 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ1 week ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

ಟ್ರೆಂಡಿಂಗ್‌