Delhi MCD Election| 134 ವಾರ್ಡ್​ಗಳನ್ನು ಗೆದ್ದ ಆಪ್​; ಪ್ರಧಾನಿ ನರೇಂದ್ರ ಮೋದಿಯವರಿಂದ ಆಶೀರ್ವಾದ ಕೋರಿದ ಕೇಜ್ರಿವಾಲ್​ - Vistara News

ದಿಲ್ಲಿ ಪಾಲಿಕೆ ಚುನಾವಣೆ

Delhi MCD Election| 134 ವಾರ್ಡ್​ಗಳನ್ನು ಗೆದ್ದ ಆಪ್​; ಪ್ರಧಾನಿ ನರೇಂದ್ರ ಮೋದಿಯವರಿಂದ ಆಶೀರ್ವಾದ ಕೋರಿದ ಕೇಜ್ರಿವಾಲ್​

ಆಮ್​ ಆದ್ಮಿ ಪಕ್ಷ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಸಕಲ ಪ್ರಯತ್ನ ಮಾಡುತ್ತಿದೆ. ಈ ಹೊತ್ತಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಗೆದ್ದಿದ್ದು ಆ ಪಕ್ಷಕ್ಕೆ ವರದಾನ ಆಗಲಿದೆ.

VISTARANEWS.COM


on

AAP wins 134 Ward Kejriwal seeks PM Modi blessing
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ ಗೆಲುವು ಸಾಧಿಸುತ್ತಿದ್ದಂತೆ, ಪಕ್ಷದ ನಾಯಕರು, ಪ್ರಮುಖರು, ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಪಕ್ಷದ ಪ್ರಧಾನ ಕಚೇರಿಯ ಹೊರಗೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್​ ‘ನಾವೆಲ್ಲರೂ ಒಟ್ಟಾಗಿ ಭ್ರಷ್ಟಾಚಾರ ತೊಡೆದು ಹಾಕಬೇಕು. ದೆಹಲಿಯನ್ನು ಸ್ವಚ್ಛಗೊಳಿಸಬೇಕು. ಯಾರೆಲ್ಲ ನಮಗೆ ಮತ ಹಾಕಿದ್ದಾರೋ, ಅವರಿಗೆ ಧನ್ಯವಾದಗಳು. ಹಾಗೇ, ಯಾರೆಲ್ಲ ನಮಗೆ ಮತ ಹಾಕಿಲ್ಲವೋ, ಅವರ ಸಮಸ್ಯೆಗಳನ್ನೇ ನಾವು ಮೊದಲು ಪರಿಹಾರ ಮಾಡುತ್ತೇವೆ’ ಎಂದು ಹೇಳಿದರು. ಹಾಗೇ, ‘ಹಾಗೇ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ನಮಗೆ, ದೆಹಲಿಗೆ ಅತ್ಯುತ್ತಮ ಆಡಳಿತ ನೀಡಲು ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ ಬೇಕು’ ಎಂದೂ ಹೇಳಿದ್ದಾರೆ.

ದೆಹಲಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 250 ವಾರ್ಡ್​ಗಳಿದ್ದು, ಡಿಸೆಂಬರ್​ 4ರಂದು ಚುನಾವಣೆ ನಡೆದಿತ್ತು. ಇಂದು ಬೆಳಗ್ಗೆಯಿಂದ ಪ್ರಾರಂಭವಾದ ಮತಎಣಿಕೆ ಈಗ ಮುಕ್ತಾಯವಾಗಿದ್ದು, 134 ವಾರ್ಡ್​​ಗಳನ್ನು ಆಮ್​ ಆದ್ಮಿ ಪಕ್ಷ ಗೆದ್ದುಕೊಂಡಿದೆ. ಹಾಗೇ, ಬಿಜೆಪಿ 104 ವಾರ್ಡ್​ಗಳಲ್ಲಿ, ಕಾಂಗ್ರೆಸ್​ 9 ಮತ್ತು ಪಕ್ಷೇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಳೆದ 15 ವರ್ಷಗಳಿಂದಲೂ ಮಹಾನಗರ ಪಾಲಿಕೆ ಆಡಳಿತ ಚುಕ್ಕಾಣಿಯನ್ನು ಬಿಜೆಪಿಯೇ ಹಿಡಿದಿತ್ತು. 2012ರಲ್ಲಿ ಆಮ್​ ಆದ್ಮಿ ಪಕ್ಷ ಅಸ್ತಿತ್ವಕ್ಕೆ ಬಂದ ಮೇಲೆ 2017ರಲ್ಲಿ ಮೊಟ್ಟಮೊದಲಿಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಅದರಲ್ಲಿ ಸೋತಿತ್ತು. ಈ ಸಲ ಎರಡನೇ ಬಾರಿಗೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿತ್ತು, ಭರ್ಜರಿಯಾಗಿಯೇ ಗೆಲುವು ಪಡೆದಿದೆ. ಆಪ್​ ಇದೇ ಮೊದಲ ಬಾರಿಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಂತಾಗಿದೆ.

ಆಮ್​ ಆದ್ಮಿ ಪಕ್ಷ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಸಕಲ ಪ್ರಯತ್ನ ಮಾಡುತ್ತಿದೆ. ಪಂಜಾಬ್​ ಚುನಾವಣೆಯಲ್ಲಿ ಗೆದ್ದು, ಅಲ್ಲಿ ಸರ್ಕಾರ ರಚನೆ ಮಾಡಿದ ಬೆನ್ನಲ್ಲೇ, ಹಿಮಾಚಲ ಪ್ರದೇಶ, ಗುಜರಾತ್​ ವಿಧಾನಸಭೆ ಚುನಾವಣೆಗಳಲ್ಲೂ ಸ್ಪರ್ಧಿಸಿದೆ. ಇದೇ ಹೊತ್ತಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಜಯ ದೊರೆತಿದ್ದು, ಪಕ್ಷದ ಪಾಲಿಗೆ ಬಹುದೊಡ್ಡ ವರದಾನ ಆಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Delhi MCD Election| ಗೆಲುವಿನೆಡೆಗೆ ಹೆಜ್ಜೆ ಹಾಕುತ್ತಿರುವ ಆಮ್​ ಆದ್ಮಿ ಪಕ್ಷ; ಸದ್ಯ ಬಿಜೆಪಿಗೆ 60 ವಾರ್ಡ್​​ಗಳಲ್ಲಿ ಗೆಲುವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದಿಲ್ಲಿ ಪಾಲಿಕೆ ಚುನಾವಣೆ

Delhi Mayor Polls: ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದ ಸುಪ್ರೀಂ, ಆಪ್‌ಗೆ ಭಾರಿ ಮುನ್ನಡೆ

Delhi Mayor Polls: ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದರಿಂದ ಬಿಜೆಪಿ ಹಾಗೂ ಆಪ್‌ ನಡುವಿನ ಬಿಕ್ಕಟ್ಟು ಬಹುತೇಕ ಬಗೆಹರಿದಂತಾಗಿದೆ.

VISTARANEWS.COM


on

Delhi Mayor Polls
Koo

ನವದೆಹಲಿ: ಮಹಾನಗರ ಪಾಲಿಕೆಯ ಮೇಯರ್‌ ಆಯ್ಕೆಯ ಕಗ್ಗಂಟಿನ (Delhi Mayor Polls) ವಿಚಾರದಲ್ಲಿ ಬಿಜೆಪಿ ವಿರುದ್ಧ ಆಪ್‌ಗೆ ಭಾರಿ ಮುನ್ನಡೆ ದೊರೆತಿದೆ. “ಮೇಯರ್‌ ಆಯ್ಕೆಗೆ ಸಂಬಂಧಿಸಿದಂತೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಪ್ರಸ್ತಾಪಿಸಿದ ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ” ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಹಾಗೆಯೇ, ೨೪ ಗಂಟೆಯೊಳಗೆ ಮೇಯರ್‌ ಆಯ್ಕೆಗೆ ಚುನಾವಣೆ ನಡೆಸಿ ಎಂದು ಲೆಫ್ಟಿನೆಂಟ್‌ ಗವರ್ನರ್‌ಗೆ ಸೂಚಿಸಿದೆ.

“ದೆಹಲಿ ಮೇಯರ್‌ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನ ಮಾಡುವ ಹಕ್ಕಿಲ್ಲ. ಇದರ ಕುರಿತು ಕಾನೂನಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ” ಎಂದು ಆಪ್‌ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಮೇಯರ್‌ ಆಯ್ಕೆಗೆ ಜನವರಿ ೬, ೨೪ ಹಾಗೂ ಫೆಬ್ರವರಿ ೬ರಂದು ಸಭೆ ನಡೆಸಲಾಗಿತ್ತು. ಆದರೆ, ಬಿಜೆಪಿ-ಆಪ್‌ ಗಲಾಟೆಯಿಂದಾಗಿ ಆಯ್ಕೆ ಸಾಧ್ಯವಾಗಿರಲಿಲ್ಲ.

ಇದುವರೆಗೆ, ಪಾಲಿಕೆಯ ಸಭೆಯಲ್ಲಿ ಬಿಜೆಪಿಯ ನಾಮನಿರ್ದೇಶಿತ ಸದಸ್ಯರಿಗೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅವರು ಮೊದಲು ಮತದಾನ ಮಾಡಲು ಅವಕಾಶ ನೀಡಿದ ಕಾರಣ ಆಪ್‌ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿ ಸಭೆಯಲ್ಲಿಯೂ ನಾಮನಿರ್ದೇಶಿತ ಸದಸ್ಯರಿಗೆ ಮೊದಲು ಮತದಾನದ ಅವಕಾಶ ನೀಡಿದ ಕಾರಣ ಬೇಸತ್ತ ಆಪ್‌ ಕೋರ್ಟ್‌ ಮೊರೆ ಹೋಗಿದೆ.

ಇದನ್ನೂ ಓದಿ: Delhi Mayor Polls: ದಿಲ್ಲಿ ಮಹಾನಗರ ಪಾಲಿಕೆ ಸಭೆ ಮುಂದೂಡಿಕೆ, ಮತ್ತೆ ಆಯ್ಕೆಯಾಗಲಿಲ್ಲ ಮೇಯರ್! ಆಪ್ ಕೋರ್ಟ್ ಮೊರೆ?

Continue Reading

ದಿಲ್ಲಿ ಪಾಲಿಕೆ ಚುನಾವಣೆ

Delhi MCD Ruckus | ದೆಹಲಿಯಲ್ಲಿ ಬೀದಿಗೆ ಬಂದ ಬಿಜೆಪಿ, ಆಪ್‌ ಜಗಳ, ಮತ ಹಾಕಿದ ಜನರಿಗೇ ನಾಚಿಕೆಯಾಗುವಂತೆ ಕಿತ್ತಾಟ

ದೆಹಲಿ ಮಹಾನಗರ ಪಾಲಿಕೆಯ ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆಪ್‌ ಕೌನ್ಸಿಲರ್‌ಗಳ ಕಿತ್ತಾಟವು ಮುಗಿಲುಮುಟ್ಟಿದೆ. ಕೆಲ ದಿನಗಳ ಹಿಂದೆ ಪಾಲಿಕೆಯ ಕಚೇರಿಯಲ್ಲಿ ನಡೆದಿದ್ದ ಗಲಾಟೆ (Delhi MCD Ruckus) ಈಗ ಬೀದಿಗೆ ಬಂದಿದೆ.

VISTARANEWS.COM


on

Delhi MCD Ruckus
Koo

ನವದೆಹಲಿ: ಮುನ್ಸಿಪಲ್‌ ಕಾರ್ಪೊರೇಷನ್‌ ಆಫ್‌ ದೆಹಲಿ (MCD)ಯ ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆಫ್‌ ಕೌನ್ಸಿಲರ್‌ಗಳ ಮಧ್ಯೆ ನಡೆಯುತ್ತಿರುವ ಗಲಾಟೆಯೀಗ (Delhi MCD Ruckus) ಬೀದಿಗೆ ಬಂದಿದೆ. ಮೇಯರ್‌ ಚುನಾವಣೆ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು, ಬಿಜೆಪಿ ಕೇಂದ್ರ ಕಚೇರಿ ಎದುರು ಆಪ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಇಂತಹವರಿಗೆ ನಾವು ಮತ ಹಾಕಿದೆವಾ ಎಂದು ಜನ ಬೇಸರ ವ್ಯಕ್ತಪಡಿಸುವಷ್ಟರ ಮಟ್ಟಿಗೆ ಕಾದಾಟ ತಾರಕಕ್ಕೇರಿದೆ.

ಬಿಜೆಪಿ ಕೇಂದ್ರ ಕಚೇರಿ ಎದುರು ಆಪ್‌ ಪ್ರತಿಭಟನೆ
ಲೆಫ್ಟಿನೆಂಟ್‌ ಗವರ್ನರ್‌ ಅವರು ಮಹಾನಗರ ಪಾಲಿಕೆಯ ಸ್ಪೀಕರ್‌ ಆಗಿ ಬಿಜೆಪಿಯ ಸತ್ಯ ಶರ್ಮಾ ಅವರನ್ನು ನೇಮಿಸಿದ ಕಾರಣ ಬಿಜೆಪಿ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ವಿರುದ್ಧ ಆಪ್‌ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಕೇಂದ್ರ ಕಚೇರಿ ಎದುರು ಆಪ್‌ ಕೌನ್ಸಿಲರ್‌ಗಳು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ ಕಾರ್ಯಕರ್ತರ ಮೇಲೆ ಜಲಫಿರಂಗಿ
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನಿವಾಸದ ಎದುರು ಬಿಜೆಪಿ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿದ್ದು, ಗುಂಪನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. ಪ್ರತಿಭಟನೆ ವೇಳೆ ಬಿಜೆಪಿಯ ಇಬ್ಬರು ಮಹಿಳಾ ಕೌನ್ಸಿಲರ್‌ಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಇದರಿಂದಾಗಿ ಪೊಲೀಸರು ಜಲಫಿರಂಗಿ ಪ್ರಯೋಗಿಸಬೇಕಾಯಿತು.

ಏಕೆ ಇಷ್ಟೊಂದು ಗಲಾಟೆ?
ಜನವರಿ 6ರಂದು ನಡೆದ ಮೊದಲ ಸಭೆಯ ವೇಳೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ತಾತ್ಕಾಲಿಕವಾಗಿ ಬಿಜೆಪಿಯ ಸತ್ಯ ಶರ್ಮಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುತ್ತಿದ್ದಂತೆ ಸಭೆಯಲ್ಲಿ ಸಂಘರ್ಷ ಶುರುವಾಯಿತು. ಶರ್ಮಾ ಅವರು ಮೊದಲಿಗೆ, ನಾಮನಿರ್ದೇಶನಗೊಂಡ ಸದಸ್ಯರಿಗೆ ಪ್ರಮಾಣವಚನ ಬೋಧಿಸಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಪ್ ಸದಸ್ಯರು, ನಾಮನಿರ್ದೇಶನಗೊಂಡ ಸದಸ್ಯರಿಗಿಂತ ಮೊದಲು, ಚುನಾಯಿತ ಸದಸ್ಯರಿಗೆ ಪ್ರಮಾಣವಚನ ಬೋಧಿಸಬೇಕು ಎಂದು ಪಟ್ಟು ಹಿಡಿದರು. ಆಗ ಬಿಜೆಪಿ ಮತ್ತು ಆಪ್ ಸದಸ್ಯರ ಮಧ್ಯೆ ಜಟಾಪಟಿ ಶುರುವಾಯಿತು.

ಹೊಸದಾಗಿ ಚುನಾಯಿತವಾದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗೆ 10 ಸದಸ್ಯರನ್ನು ನಾಮನಿರ್ದೇಶನ ಮಾಡಲಾಗಿದೆ. ಸಕ್ಸೇನಾ ಅವರು ಶುಕ್ರವಾರ ಮೇಯರ್ ಚುನಾವಣೆಯ ಅಧ್ಯಕ್ಷತೆ ವಹಿಸಲು ಬಿಜೆಪಿ ಕೌನ್ಸಿಲರ್ ಸತ್ಯ ಶರ್ಮಾ ಅವರನ್ನು ತಾತ್ಕಾಲಿಕ ಸ್ಪೀಕರ್ ಎಂದು ಘೋಷಿಸಿದರು. ಮೇಯರ್ ಆಯ್ಕೆಯ ಹಿನ್ನೆಲೆಯು ಆಪ್ ಮತ್ತು ಬಿಜೆಪಿ ಸದಸ್ಯರ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ | Delhi Mayor Polls | ಮಾರಾಮಾರಿ ನಡುವೆ ದಿಲ್ಲಿ ಪಾಲಿಕೆ ಸಭೆ ಮುಂದೂಡಿಕೆ, ನಡೆಯಲಿಲ್ಲ ಮೇಯರ್ ಎಲೆಕ್ಷನ್!

Continue Reading

ದಿಲ್ಲಿ ಪಾಲಿಕೆ ಚುನಾವಣೆ

Delhi MCD Election | ಆಪ್​ ವಿರುದ್ಧ ಸೋತಿದ್ದರೂ ಮೇಯರ್​-ಉಪಮೇಯರ್​ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ

ಆಮ್​ ಆದ್ಮಿ ಪಕ್ಷದಿಂದ ಶೆಲ್ಲಿ ಒಬೆರಾಯ್​ ಮೇಯರ್​ ಸ್ಥಾನಕ್ಕೆ ಮತ್ತು ಆಲೆ ಮೊಹಮ್ಮದ್​ ಇಕ್ಬಾಲ್​ ಉಪಮೇಯರ್​ ಸ್ಥಾನಕ್ಕೆ ಅಭ್ಯರ್ಥಿಗಳಾಗಿದ್ದಾರೆ.

VISTARANEWS.COM


on

Rekha Gupta is Delhi BJP Mayor candidate
ರೇಖಾ ಗುಪ್ತಾ ಮತ್ತು ಶೆಲ್ಲಿ ಓಬೆರಾಯ್​
Koo

ನವ ದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷದ ಎದುರು ಸೋತಿದ್ದ ಬಿಜೆಪಿ, ಅಷ್ಟು ಸುಲಭಕ್ಕೆ ಅಲ್ಲಿನ ಪಟ್ಟ ಬಿಟ್ಟುಕೊಡುವ ಹಾಗೆ ಕಾಣುತ್ತಿಲ್ಲ. ಡಿಸೆಂಬರ್​ 4ರಂದು ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಒಟ್ಟು 250 ವಾರ್ಡ್​ಗಳಿಗೆ ನಡೆದ ಎಲೆಕ್ಷನ್​​ನಲ್ಲಿ ಆಮ್​ ಆದ್ಮಿ ಪಕ್ಷ 134 ಸೀಟುಗಳನ್ನು ಗೆದ್ದಿದ್ದರೆ, ಬಿಜೆಪಿ 104 ವಾರ್ಡ್​ಗಳಲ್ಲಿ ಜಯಸಾಧಿಸಿತ್ತು. ಈ ಮೂಲಕ ಕಳೆದ 15ವರ್ಷಗಳಿಂದಲೂ ದೆಹಲಿ ಮಹಾನಗರ ಪಾಲಿಕೆಯಲ್ಲಿ ಇದ್ದ ಬಿಜೆಪಿ ಆಡಳಿತ ಕೊನೆಗೊಂಡಿತ್ತು.

ಗೆದ್ದ ಪಕ್ಷದಿಂದಲೇ ಮೇಯರ್​ ಮತ್ತು ಉಪಮೇಯರ್​ಗಳನ್ನು ಆಯ್ಕೆ ಮಾಡಲಾಗುತ್ತದೆ. ದೆಹಲಿ ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿದ ಆಮ್​ ಆದ್ಮಿ ಪಕ್ಷ ಜನವರಿ 6ರಂದು ಮೇಯರ್​ ಮತ್ತು ಉಪಮೇಯರ್​ ಸ್ಥಾನದ ಆಯ್ಕೆ ಪ್ರಕ್ರಿಯೆಯನ್ನು ನಿಗದಿಪಡಿಸಿತ್ತು. ಇಂದು ನಾಮಪತ್ರ ಸಲ್ಲಿಸಲು ಕೊನೇ ದಿನವಾಗಿತ್ತು. ಇದೇ ವೇಳೆ ಬಿಜೆಪಿ ಯೂಟರ್ನ್​ ಹೊಡೆದಿದೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಇದೀಗ ಮೇಯರ್​-ಉಪಮೇಯರ್​ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅದರಂತೆ ಮೇಯರ್​ ಸ್ಥಾನಕ್ಕೆ ಬಿಜೆಪಿ ರೇಖಾ ಗುಪ್ತಾರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು, ಉಪಮೇಯರ್ ಸ್ಥಾನಕ್ಕೆ ಕಮಲ್ ಬಾಗ್ರಿ ಅವರನ್ನು ಕಣಕ್ಕಿಳಿಸಿದೆ. ಇವರಿಬ್ಬರೂ ಇಂದು ನಾಮಪತ್ರ ಸಲ್ಲಿಸಿದ್ದಾರೆ.

ಇದರಲ್ಲಿ ರೇಖಾಗುಪ್ತಾ ಶಾಲಿಮಾರ್ ಬಾಘ್​​ನ ಕೌನ್ಸಿಲರ್​ ಆಗಿದ್ದು, ಮೂರು ಅವಧಿಗೆ ಆಡಳಿತ ನಡೆಸಿದ ಅನುಭವಿ. ಹಾಗೇ, ಕಮಲ್​ ಬಾಗ್ರಿಯವರು ರಾಮ್​ ನಗರ ವಾರ್ಡ್​​ನ ಕೌನ್ಸಿಲರ್​. ಮೇಯರ್​ ಹುದ್ದೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು. ಗೆದ್ದ ಪಕ್ಷದವರೇ ಆಯ್ಕೆಯಾಗಬೇಕು ಎಂದೇನೂ ಇಲ್ಲ. ಹಾಗಾಗಿಯೇ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದೆ. ಇನ್ನೊಂದೆಡೆ ಆಮ್​ ಆದ್ಮಿ ಪಕ್ಷದಿಂದ ಶೆಲ್ಲಿ ಒಬೆರಾಯ್​ ಮೇಯರ್​ ಅಭ್ಯರ್ಥಿಯಾಗಿದ್ದು, ಉಪಮೇಯರ್​ ಸ್ಥಾನಕ್ಕೆ ಆಲೆ ಮೊಹಮ್ಮದ್​ ಇಕ್ಬಾಲ್​ ಅವರನ್ನು ಅಭ್ಯರ್ಥಿಯನ್ನಾಗಿಸಿದೆ.

ಇದನ್ನೂ ಓದಿ: Delhi MCD Election | ದೆಹಲಿ ಪಾಲಿಕೆ ಚುನಾವಣೆಯಲ್ಲಿ ಸೋಲುಂಡ ಬಿಜೆಪಿಯಿಂದ ಆಪರೇಷನ್‌ ಕಮಲ?

Continue Reading

ದಿಲ್ಲಿ ಪಾಲಿಕೆ ಚುನಾವಣೆ

BJP Poaching AAP | ದೆಹಲಿಯ ಒಬ್ಬ ಕೌನ್ಸಿಲರ್‌ಗೆ ಬಿಜೆಪಿ 10 ಕೋಟಿ ರೂ. ಆಫರ್‌, ಆಪ್‌ ಗಂಭೀರ ಆರೋಪ

ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗಾಣಿಸಿದ ಆಪ್‌ ಈಗ ಬಿಜೆಪಿ ವಿರುದ್ಧ “ಕುದುರೆ ವ್ಯಾಪಾರ”ದ (BJP Poaching AAP) ಆರೋಪ ಮಾಡಿದೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ, ಬಿಜೆಪಿಯ ೧೫ ವರ್ಷಗಳ ಆಡಳಿತವನ್ನು ಕೊನೆಗಾಣಿಸಿದ ಆಪ್‌ ಈಗ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದೆ. “ಆಪ್‌ನ ೧೦ ಕೌನ್ಸಿಲರ್‌ಗಳ ಖರೀದಿಗೆ ಬಿಜೆಪಿ ೧೦೦ ಕೋಟಿ ರೂಪಾಯಿಯ ಆಫರ್‌ (BJP Poaching AAP) ನೀಡಿದೆ” ಎಂದು ಆಪ್‌ ಕೌನ್ಸಿಲರ್‌ಗಳು ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದಾರೆ.

“ಪಾಲಿಕೆ ಚುನಾವಣೆಯಲ್ಲಿ ಸೋತ ಬಿಜೆಪಿಯು ಹೊಲಸು ರಾಜಕಾರಣ ಮಾಡುತ್ತಿದೆ. ಹಣಬಲದಿಂದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ. ಆಪ್‌ನ ಒಬ್ಬ ಕೌನ್ಸಿಲರ್‌ಗೆ ೧೦ ಕೋಟಿ ರೂ. ಆಫರ್‌ ನೀಡಿದೆ. ಒಬ್ಬ ಕೌನ್ಸಿಲರ್‌ಗೆ ತಲಾ ೧೦ ಕೋಟಿ ರೂ. ನೀಡಿ, ಒಟ್ಟು ೧೦ ಕೌನ್ಸಿಲರ್‌ಗಳನ್ನು ಸೆಳೆಯುವ ತಂತ್ರ ಬಿಜೆಪಿಯದ್ದಾಗಿದೆ. ಹಾಗೆಯೇ, ಒಂದು ಕ್ರಾಸ್‌ ವೋಟಿಂಗ್‌ಗೆ ೫೦ ಲಕ್ಷ ರೂ. ಫಿಕ್ಸ್‌ ಮಾಡಿದೆ. ಆ ಮೂಲಕ ದೆಹಲಿ ಪಾಲಿಕೆಯಲ್ಲಿ ಆಪ್‌ ಆಡಳಿತ ನಡೆಸುವುದನ್ನು ತಡೆಯಲು ಬಿಜೆಪಿ ಎಲ್ಲ ಪ್ರಯತ್ನ ಮಾಡುತ್ತಿದೆ” ಎಂದು ಆಪ್‌ ಕೌನ್ಸಿಲರ್‌ಗಳಾದ ಡಾ.ರೊನಾಕ್ಷಿ ಶರ್ಮಾ, ಅರುಣ್‌ ನವಾರಿಯಾ ಹಾಗೂ ಜ್ಯೋತಿ ರಾಣಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ.

ಇದಕ್ಕೂ ಮೊದಲು, ಬಿಜೆಪಿ ಕೂಡ ಆಪ್‌ ವಿರುದ್ಧ ಇದೇ ಆರೋಪ ಮಾಡಿದೆ. ಬಿಜೆಪಿ ಕೌನ್ಸಿಲರ್‌ಗಳಿಗೆ ಆಪ್‌ ಆಮಿಷ ಒಡ್ಡುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ದೆಹಲಿ ಮಹಾನಗರ ಪಾಲಿಕೆಯ ೨೫೦ ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಆಪ್‌ ೧೩೪, ಬಿಜೆಪಿ ೧೦೪ ಹಾಗೂ ಕಾಂಗ್ರೆಸ್‌ ೯ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ | Delhi MCD Election| ದೆಹಲಿ ಮಹಾನಗರ ಪಾಲಿಕೆ ಆಪ್​ ಮಡಿಲಿಗೆ; ಬಿಜೆಪಿಯ 15 ವರ್ಷಗಳ ಆಡಳಿತ ಅಂತ್ಯ

Continue Reading
Advertisement
young womans lover was stabbed in the neck by an ex lover
ಉತ್ತರ ಕನ್ನಡ16 mins ago

Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

IPL 2024
ಪ್ರಮುಖ ಸುದ್ದಿ25 mins ago

Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

Pune porsche car crash
ದೇಶ55 mins ago

Pune porsche car crash : ಕುಡಿದು ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನ ಜಾಮೀನು ವಜಾ

Kalki 2898 AD
ಪ್ರಮುಖ ಸುದ್ದಿ59 mins ago

Kalki 2898 AD: ಕಲ್ಕಿ ಚಿತ್ರದ ʼಬುಜ್ಜಿʼ ಪಾತ್ರ ರಿವೀಲ್; ಅದ್ಧೂರಿ ಕಾರ್ಯಕ್ರಮದ LIVE ವಿಡಿಯೊ ಇಲ್ಲಿದೆ

Congress leader actress Vidya murder case Accused husband arrested
ಕರ್ನಾಟಕ1 hour ago

Murder Case: ನಟಿ, ಕಾಂಗ್ರೆಸ್ ನಾಯಕಿ ವಿದ್ಯಾ ಹತ್ಯೆ ಆರೋಪಿ ಪತಿಯ ಬಂಧನ

CM City Rounds CM Siddaramaiah lashes out at flyover slowdown and Notice to cancel the tender
ಬೆಂಗಳೂರು1 hour ago

CM City Rounds: ಫ್ಲೈ ಓವರ್‌ ನಿಧಾನಗತಿಗೆ ಸಿಎಂ ಕೆಂಡಾಮಂಡಲ; ಟೆಂಡರ್‌ ರದ್ದು ಮಾಡಿ ಬೇರೆಯವರಿಗೆ ಗುತ್ತಿಗೆ ಕೊಡಲು ಸೂಚನೆ

lok sabha election
ದೇಶ1 hour ago

Lok Sabha Election : ಬಿಜೆಪಿ 305 ಸೀಟ್ ಗೆಲ್ಲೋದು ಗ್ಯಾರಂಟಿ; ಅಮೆರಿಕದ ರಾಜಕೀಯ ಪಂಡಿತನ ಭವಿಷ್ಯ

Prajwal Revanna Case SIT summons Bhavani Revanna car driver in KR Nagar victim kidnapped case
ಕರ್ನಾಟಕ2 hours ago

Prajwal Revanna Case: ಕೆ ಆರ್‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌; ಭವಾನಿ ರೇವಣ್ಣ ಕಾರು ಚಾಲಕನಿಗೆ‌ SIT ಸಮನ್ಸ್

Rain News
ಕರ್ನಾಟಕ2 hours ago

Rain News: ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ; ಹಾರಿದ 10ಕ್ಕೂ ಹೆಚ್ಚು ಮನೆಗಳ ಮೇಲಿನ ಶೀಟ್, ಇಬ್ಬರಿಗೆ ಗಾಯ

Virat kohli
ಕ್ರೀಡೆ2 hours ago

Virat kohli : ಐಪಿಎಲ್​ನಲ್ಲಿ 8000 ರನ್ ಬಾರಿಸಿ ದಾಖಲೆ ಬರೆದ ಕೊಹ್ಲಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ16 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ6 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌