Bihar Politics: ಆಪರೇಶನ್‌ ಭಯ, ಜಾರ್ಖಂಡ್‌ ಶಾಸಕರಂತೆ ಬಿಹಾರದ ಕಾಂಗ್ರೆಸ್‌ ಶಾಸಕರೂ ತೆಲಂಗಾಣದಲ್ಲಿ! - Vistara News

ದೇಶ

Bihar Politics: ಆಪರೇಶನ್‌ ಭಯ, ಜಾರ್ಖಂಡ್‌ ಶಾಸಕರಂತೆ ಬಿಹಾರದ ಕಾಂಗ್ರೆಸ್‌ ಶಾಸಕರೂ ತೆಲಂಗಾಣದಲ್ಲಿ!

ಬಿಹಾರದ (Bihar Politics) ಕಾಂಗ್ರೆಸ್ ಶಾಸಕರು ಕೂಡ ಆಪರೇಶನ್‌ ಕಮಲದ ಆತಂಕದಿಂದ ಹೈದರಾಬಾದ್‌ಗೆ ಆಗಮಿಸಿ ಬೇರು ಬಿಟ್ಟಿದ್ದಾರೆ. ಫೆಬ್ರವರಿ 12ರಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ (Nitish Kumar) ಅವರು ವಿಶ್ವಾಸಮತ ಸಾಬೀತುಪಡಿಸಬೇಕಿದೆ.

VISTARANEWS.COM


on

bihar congress MLAs
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಟನಾ: ಒಂದೆಡೆ ಚಂಪೈ ಸೊರೆನ್‌ (Champai Soren) ನೇತೃತ್ವದ ಜಾರ್ಖಂಡ್‌ ಮುಕ್ತಿ ಮೋರ್ಚಾ (Jharkhand Mukti Morcha) ಹಾಗೂ ಕಾಂಗ್ರೆಸ್‌ ಶಾಸಕರು ಆಪರೇಶನ್‌ ಕಮಲದ (operation Lotus) ಭಯದಿಂದ ತೆಲಂಗಾಣದಲ್ಲಿ (Telangana) ಬೇರು ಬಿಟ್ಟಿದ್ದರೆ, ಅದೇ ಕಾರಣದಿಂದಲೇ ಬಿಹಾರದ ಕಾಂಗ್ರೆಸ್‌ ಶಾಸಕರು (Bihar Politics) ಕೂಡ ತೆಲಂಗಾಣಕ್ಕೆ ಆಗಮಿಸಿ ತಳ ಊರಿದ್ದಾರೆ.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಕಾಂಗ್ರೆಸ್ ಪಕ್ಷದ ನೇತೃತ್ವದ ಸಮ್ಮಿಶ್ರ ಸರ್ಕಾರದ ಶಾಸಕರನ್ನು ಆಪರೇಶನ್‌ ಕಮಲದ ಭಯದಿಂದಾಗಿ ತೆಲಂಗಾಣಕ್ಕೆ ತರಲಾಗಿತ್ತು. ಇಂದು ಜಾರ್ಕಂಡ್‌ ವಿಧಾನಸಭೆಯಲ್ಲಿ ಚಂಪೈ ಸೊರೇನ್‌ ಅವರು ವಿಶ್ವಾಸಮತ ಸಾಬೀತುಪಡಿಸಬೇಕಿರುವ ಹಿನ್ನೆಲೆಯಲ್ಲಿ ಶಾಸಕರು ಹೈದರಾಬಾದ್‌ನಿಂದ ಹೊರಟಿದ್ದಾರೆ. ಬಿಹಾರದ ಕಾಂಗ್ರೆಸ್ ಶಾಸಕರು ಕೂಡ ಆಪರೇಶನ್‌ ಕಮಲದ ಆತಂಕದಿಂದ ಹೈದರಾಬಾದ್‌ಗೆ ಆಗಮಿಸಿ ಬೇರು ಬಿಟ್ಟಿದ್ದಾರೆ. ಫೆಬ್ರವರಿ 12ರಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ (Nitish Kumar) ಅವರು ವಿಶ್ವಾಸಮತ ಸಾಬೀತುಪಡಿಸಬೇಕಿದೆ.

“ಡಿಸೆಂಬರ್ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ನಂತರ ಅಧಿಕಾರ ವಹಿಸಿಕೊಂಡ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಅಭಿನಂದಿಸಲು ಬಿಹಾರ ಕಾಂಗ್ರೆಸ್ ಶಾಸಕರು ಹೈದರಾಬಾದ್‌ಗೆ ಬಂದಿದ್ದಾರೆ” ಎಂದು ಹೇಳಲಾಗಿದೆ.

ʼತೆಲಂಗಾಣ ಮುಖ್ಯಮಂತ್ರಿಗೆ ಶುಭಾಶಯ ಕೋರಲುʼ ಬಂದಿರುವ ಬಿಹಾರದ ಕಾಂಗ್ರೆಸ್ ಶಾಸಕರು ಫೆಬ್ರವರಿ 11ರವರೆಗೆ ಹೈದರಾಬಾದ್‌ನಲ್ಲಿ ಉಳಿಯುವ ಸಾಧ್ಯತೆ ಇದೆ. ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ, ಬಿಹಾರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಎನ್‌ಡಿಎ ಸರ್ಕಾರ ಫೆ. 12ರಂದು ವಿಶ್ವಾಸ ಮತ ಯಾಚಿಸಲಿದ್ದು, ಯಾವುದೇ ಕಳ್ಳಬೇಟೆಯ ಯತ್ನಗಳನ್ನು ತಡೆಯಲು ಕಾಂಗ್ರೆಸ್‌ ಪಕ್ಷವು ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಹೈದರಾಬಾದ್‌ಗೆ ಕಾಂಗ್ರೆಸ್ ಶಾಸಕರ ಆಗಮನವಾಗಿದೆ ಎಂದು ತಿಳಿದು ಬಂದಿದೆ.

ಎಐಸಿಸಿ ಬಿಹಾರದ ಉಸ್ತುವಾರಿ ಮೋಹನ್ ಪ್ರಕಾಶ್ ಅವರು ಈ ಬೆಳವಣಿಗೆಯನ್ನು ಖಚಿತಪಡಿಸಿಲ್ಲ ಅಥವಾ ನಿರಾಕರಿಸಿಲ್ಲ. ಆದರೆ ಕಾಂಗ್ರೆಸ್ ಶಾಸಕರಲ್ಲಿ ಒಡಕಿದೆ ಎಂಬ ವದಂತಿಗಳನ್ನು ನಿರಾಕರಿಸಿದ್ದಾರೆ. “ಸತ್ಯವೆಂದರೆ ಜೆಡಿಯು ಶಾಸಕರು ತಮ್ಮ ವಿರುದ್ಧ ಮತದಾರರ ಕೋಪದಿಂದ ಒತ್ತಡಕ್ಕೆ ಒಳಗಾಗಿದ್ದಾರೆ. ಅವರ ಪಕ್ಷ NDAಗೆ ಶರಣಾಗಿದೆ. ಅವರು (ಜೆಡಿಯು) ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಬಗ್ಗೆ ಚಿಂತಿಸಬೇಕು” ಎಂದು ಅವರು ಹೇಳಿದರು.

ಬಿಹಾರದ ಕಾಂಗ್ರೆಸ್‌ ಮುಖಂಡರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದು, ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದರು. ಅಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರ ಇತ್ತೀಚಿನ ಯು ಟರ್ನ್‌ ಕಾಂಗ್ರೆಸ್‌ ಪಕ್ಷದಲ್ಲಿ ಹಾಗೂ ಇಂಡಿಯಾ ಬ್ಲಾಕ್‌ನಲ್ಲಿ ಆಘಾತ ಮೂಡಿಸಿದೆ.

ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ 19 ಶಾಸಕರನ್ನು ಹೊಂದಿದ್ದು, ಅವರಲ್ಲಿ 16 ಮಂದಿ ಸಭೆಗೆ ಹಾಜರಾಗಿದ್ದರು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಮತ್ತು ಎಂಎಲ್‌ಸಿಗಳಾದ ಪ್ರೇಮ್ ಚಂದ್ರ ಮಿಶ್ರಾ ಮತ್ತು ಮದನ್ ಮೋಹನ್ ಝಾ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಏತನ್ಮಧ್ಯೆ, ಚಂಪೈ ಸೊರೆನ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಹೈದರಾಬಾದ್‌ಗೆ ತೆರಳಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾ ಸಮ್ಮಿಶ್ರ ಸರ್ಕಾರದ ಶಾಸಕರು, ಸೋಮವಾರ ನಡೆಯಲಿರುವ ರಾಜ್ಯ ವಿಧಾನಸಭೆಯ ವಿಶ್ವಾಸಮತ ಪರೀಕ್ಷೆಗೆ ಭಾನುವಾರ ರಾತ್ರಿ ರಾಂಚಿಗೆ ತೆರಳಿದ್ದಾರೆ.

ಇದನ್ನೂ ಓದಿ: Bihar Politics: ಇಂದು ಬೆಳಗ್ಗೆ 10ಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ? ಬಿಹಾರ ರಾಜಕೀಯ ಬಿರುಸು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ರಾಜಕೀಯ ದ್ವೇಷ ಮರೆತು ಸೋನಿಯಾ, ರಾಹುಲ್‌ಗೆ ಸಹಾಯ; ಹೀಗ್ಯಾಕಂದ್ರು ಪ್ರಧಾನಿ ಮೋದಿ?

Narendra Modi: ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಕೊಲೆಯಾದ ನೇಹಾ ಹಿರೇಮಠ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಬಗೆಗಿನ ಟೀಕೆಗೆ ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದರು.

VISTARANEWS.COM


on

Narenda Modi Sonia gandhi
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜಕೀಯ, ಸೈದ್ಧಾಂತಿಕ ನಿಲುವನ್ನು ಮೀರಿ ಕಾಂಗ್ರೆಸ್‌(Congress) ನಾಯಕರಾದ ಸೋನಿಯಾ ಗಾಂಧಿ(Sonia Gandhi) ಮತ್ತು ರಾಹುಲ್‌ ಗಾಂಧಿ(Rahul Gandhi) ಗೆ ತಾವು ಸಹಾಯಹಸ್ತ ಚಾಚಿರುವ ಘಟನೆಗಳನ್ನು ನೆನಪಿಸಿಕೊಂಡರು. ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಕೊಲೆಯಾದ ನೇಹಾ ಹಿರೇಮಠ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(J P Nadda) ಭೇಟಿ ಬಗೆಗಿನ ಟೀಕೆಗೆ ಸ್ಪಷ್ಟನೆ ನೀಡಿದರು. ಒಬ್ಬ ರಾಜಕೀಯ ನಾಯಕನಾದವನು ರಾಜಕೀಯದ ಹೊರತಾಗಿಯೂ ಕೆಲವೊಂದು ವಿಚಾರಗಳು ಯೋಚನೆ ಮಾಡಬೇಕು. ಅದೇ ನಿಜವಾದ ರಾಜಕೀಯ ಧರ್ಮ ಎಂದರು.

ಇದೇ ವೇಳೆ ಕೆಲವೊಂದು ಹಳೆಯ ವಿಚಾರಗಳನ್ನು ನೆನಪಿಸಿಕೊಂಡ ಮೋದಿ, ನಾನು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಾಮನ್‌ನಲ್ಲಿ ಸೋನಿಯಾಗಾಂಧಿ ಮತ್ತು ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಗೊಂಡಿರುವ ಸುದ್ದಿ ಬಂದಿತ್ತು. ತಕ್ಷಣ ನಾನು ಸ್ಥಳಕ್ಕೆ ಏರ್‌ ಆಂಬ್ಯುಲೆನ್ಸ್‌ ಕಳುಹಿಸುವಂತೆ ಸೂಚನೆ ನೀಡಿದ್ದೆ. ಆಗ ಪಟೇಲ್‌ ಅವರು ತಾವು ಸುರಕ್ಷಿತವಾಗಿದ್ದೇವೆ ಏರ್‌ ಆಂಬ್ಯುಲೆನ್ಸ್‌ ಅವಶ್ಯಕತೆ ಇಲ್ಲ ಎಂದು ಕರೆ ಮಾಡಿದ್ದರು. ಮತ್ತೊಮ್ಮೆ ಕಾಶಿಯಲ್ಲಿ ಚುನಾವಣಾ ಪ್ರಚಾದಲ್ಲಿ ತೊಡಗಿದ್ದ ವೇಳೆ ಸೋನಿಯಾ ಗಾಂಧಿ ದಿಢೀರ್‌ ಅನಾರೋಗ್ಯಕ್ಕೆ ತುತ್ತಾಗಿದ್ದರು. ತಕ್ಷಣ ನಾನು ನಮ್ಮ ಕಚೇರಿಯ ಒಂದಷ್ಟು ಜನರನ್ನು ಕಳುಹಿಸಿ ಅವರಿಗೆ ವಿಮಾನ ವ್ಯವಸ್ಥೆಯ ಅವಶ್ಯಕತೆ ಏನಾದರೂ ಇದೆಯೇ ಎಂಬುದನ್ನು ವಿಚಾರಿಸುವಂತೆ ಸೂಚಿಸಿದ್ದೆ ಎಂದು ಹೇಳಿದರು.

ಇದನ್ನೂ ಓದಿ:PM Narendra Modi: ಪುಕ್ಕಲ ನಾಯಕ ದೇಶ ಆಳಬಲ್ಲನೇ? ರಾಹುಲ್‌ ಗಾಂಧಿಗೆ ಮೋದಿ ಟಾಂಗ್!

ಇನ್ನು ಯಾವುದೋ ಚುನಾವಣೆ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷವುಂಟಾಗಿತ್ತು. ತಕ್ಷಣ ನಾನು ಅವರಿಗೆ ಕರೆ ಮಾಡಿ ಏನಾದರೂ ಸಹಾಯ ಬೇಕಿತ್ತೆ ಎಂದು ವಿಚಾರಿಸಿದ್ದೆ. ಇದನ್ನು ಯಾವ ಕಾರಣಕ್ಕೆ ಹೇಳುತ್ತಿದ್ದೇನೆ ಎಂದರೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಕರ್ನಾಟಕದಲ್ಲಿ ವಿದ್ಯಾರ್ಥಿನಿಯೊಬ್ಬಳ ಬರ್ಬರ ಕೊಲೆಯಾಗಿತ್ತು. ಕಾಂಗ್ರೆಸ್‌ನ ಕಾರ್ಪೋರೇಟರ್‌ ಮಗಳನ್ನು ಧಾರುಣವಾಗಿ ಹತ್ಯೆ ಮಾಡಲಾಗಿತ್ತು. ನಡ್ಡಾ ಜೀ ಅಲ್ಲಿಯೇ ಇದ್ದ ಕಾರಣ ಅವರು ತಕ್ಷಣ ಪಕ್ಷ ಬೇಧ ಮರೆತು ಮೃತಳ ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದ್ದರು. ಇಲ್ಲಿ ಯಾವ ಪಕ್ಷ? ಯಾವ ಪಕ್ಷದ ವ್ಯಕ್ತಿಯ ಮಗಳು ಎಂಬ ವಿಚಾರ ನಮಗೆ ಬೇಕಿಲ್ಲ. ಇಲ್ಲಿ ಬೇಕಾಗಿದ್ದಿದ್ದು ಮಾನವೀಯತೆ. ಚುನಾವಣೆ ಒತ್ತಡದ ನಡುವೆಯೂ ಜೆ.ಪಿ. ನಡ್ಡಾ ಅವರ ಮನೆಗೆ ತೆರಳಿದ್ದು ಕೂಡ ಮಾನವೀಯತೆ ದೃಷ್ಟಿಯಿಂದ ಎಂದು ಪ್ರಧಾನಿ ಸ್ಪಷ್ಟಪಡಿಸಿದರು. ಇದೇ ವೇಳೆ ಅವರು ಕಾಂಗ್ರೆಸ್‌ ಸರ್ಕಾರ ವಿರುದ್ಧ ಹರಿಹಾಯ್ದ ಪ್ರಧಾನಿ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಗಲಭೆ, ಕೊಲೆಗಳು ಆಗಾಗ ನಡೆಯುತ್ತಲೇ ಇವೆ. ಇನ್ನು ರಾಜ್ಯ ಆರ್ಥಿಕ ದಿವಾಳಿತನ ಎದುರಿಸುತ್ತಿದೆ. ಅವರು ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ವಂಚಿಸುತ್ತಿದ್ದಾರೆ ಎಂದು ದೂರಿದ್ದಾರೆ.


Continue Reading

ಪ್ರಮುಖ ಸುದ್ದಿ

Viral Video: ನಮಗೆ ಹಿಂದೂ ಮತಗಳ ಅಗತ್ಯವಿಲ್ಲ: ಕಾಂಗ್ರೆಸ್‌ ನಾಯಕನ ವಿಡಿಯೋ ವೈರಲ್‌

Viral Video: ಹಿಂದೂಗಳ ವಿರುದ್ಧ ಕಾಂಗ್ರೆಸ್‌ ಪಕ್ಷ ಪೂರ್ವಗ್ರಹ ಪೀಡಿತ ಮನೋಭಾವ ಹೊಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಆರೋಪ ಮಾಡಿರುವ ಬೆನ್ನಲ್ಲೇ, 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಹಿಂದೂ ಮತಗಳ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ತುಮ್ಮಲ ನಾಗೇಶ್ವರರಾವ್ ಹೇಳಿಕೆ ನೀಡಿರುವ ವಿಡಿಯೋ ಹೊರಬಿದ್ದಿದೆ.

VISTARANEWS.COM


on

viral video tn rao
Koo

ಹೈದರಾಬಾದ್:‌ ತಮ್ಮ ಪಕ್ಷದ ಚುನಾವಣಾ ಗೆಲುವಿಗೆ ಹಿಂದೂಗಳ ಮತಗಳು ಅಗತ್ಯವಿಲ್ಲ ಎಂದು ತೆಲಂಗಾಣ ಕಾಂಗ್ರೆಸ್ (Telangana Congress) ನಾಯಕ ಟಿಎನ್ ರಾವ್ ಭಾಷಣದಲ್ಲಿ ಹೇಳಿದ್ದಾರೆ. ಅವರ ಈ ಮಾತಿನ ವಿಡಿಯೋ ವೈರಲ್ (viral video) ಆಗಿದೆ.

ಹಿಂದೂಗಳ ವಿರುದ್ಧ ಕಾಂಗ್ರೆಸ್‌ ಪಕ್ಷ ಪೂರ್ವಗ್ರಹ ಪೀಡಿತ ಮನೋಭಾವ ಹೊಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಆರೋಪ ಮಾಡಿರುವ ಬೆನ್ನಲ್ಲೇ, 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಹಿಂದೂ ಮತಗಳ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ತುಮ್ಮಲ ನಾಗೇಶ್ವರರಾವ್ ಹೇಳಿಕೆ ನೀಡಿರುವ ವಿಡಿಯೋ ಹೊರಬಿದ್ದಿದೆ.

ತಮ್ಮ ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್ ಪಕ್ಷವು ಭಾರತದ ಹಿಂದೂಗಳ ವಿರುದ್ಧ ಪಕ್ಷಪಾತ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು. ಹಿಂದೂಗಳ ಆಸ್ತಿಯನ್ನು ಮುಸ್ಲಿಮರಿಗೆ ಹಂಚಿಕೆ ಮಾಡುವುದು ಕಾಂಗ್ರೆಸ್‌ನ ಆದ್ಯತೆಯಾಗಿದೆ ಎಂದ ಆರೋಪಿಸಿದ್ದರು. ಇದಾಗಿ ಕೆಲವೇ ದಿನಗಳಲ್ಲಿ, ತೆಲಂಗಾಣ ಕಾಂಗ್ರೆಸ್ ನಾಯಕ ತುಮ್ಮಲ ನಾಗೇಶ್ವರ ರಾವ್ ಅವರು ಹೀಗೆಂದಿದ್ದಾರೆ. ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾವ್, 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಹಿಂದೂ ಮತಗಳ ಅಗತ್ಯವಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್‌ನ ಸಿದ್ಧಾಂತಕ್ಕೆ ಪ್ರಧಾನಿ ಹೋಲಿಸಿ ಟೀಕಿಸಿದ್ದರು. ದೇಶದ ಸಂಪನ್ಮೂಲಗಳು ಮೊದಲು ಬಡವರಿಗೆ ಸಲ್ಲಬೇಕು ಎಂಬ ತತ್ವವನ್ನು ಒತ್ತಿ ಹೇಳಿದರು. ರಾಜಕೀಯ ಲಾಭಕ್ಕಾಗಿ ನಿರ್ದಿಷ್ಟವಾಗಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಕೆಲವು ಧಾರ್ಮಿಕ ಗುಂಪುಗಳಿಗೆ ಕಾಂಗ್ರೆಸ್ ಒಲವು ತೋರುತ್ತಿದೆ ಎಂದು ಮೋದಿ ಆರೋಪಿಸಿದ್ದರು. ಕಾಂಗ್ರೆಸ್ ಪ್ರಣಾಳಿಕೆಯು ಮುಸ್ಲಿಂ ಲೀಗ್‌ನ ಧೋರಣೆಯ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಮ್ಮ ಹಿಂದಿನ ಹೇಳಿಕೆಯನ್ನು ಪುನರುಚ್ಚರಿಸಿದ್ದರು.

ಇದನ್ನೂ ಓದಿ: PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

Continue Reading

Latest

Fact Check: ಅಮಿತ್‌ ಶಾ ಎಸ್​​ಸಿ, ಎಸ್​ಟಿ ಮೀಸಲು ರದ್ದು ಮಾಡ್ತೀವಿ ಎಂದಿದ್ದು ನಿಜವೆ?​​

Fact Check: ಅಧಿಕಾರಿಗಳ ಪ್ರಕಾರ, ಗೃಹ ಸಚಿವಾಲಯ (ಎಂಎಚ್ಎ) ಈ ಸಂಬಂಧ ದೂರು ದಾಖಲಿಸಿದೆ. ಅದರ ಆಧಾರದ ಮೇಲೆ ದೆಹಲಿ ಪೊಲೀಸರ ವಿಶೇಷ ಸೆಲ್ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳು ಮತ್ತು ಐಟಿ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ.

VISTARANEWS.COM


on

Amith Shah
Koo

ನವ ದೆಹಲಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ (Fact Check) ನೀಡಲಾಗುತ್ತಿರುವ ಮಿಸಲಾತಿಯನ್ನು ತೆಗೆದು ಹಾಕಲಾಗುವುದು ಎಂದು ಅಮಿತ್ ಶಾ (Amit Shah) ಹೇಳಿದ್ದಾರೆ ಎಂದು ತಿರುಚಿದ ವಿಡಿಯೊ ಹರಿಬಿಟ್ಟ ಪ್ರಕರಣದಲ್ಲಿ ಡೆಲ್ಲಿ ಪೊಲೀಸರು (Delhi Police) ಎಫ್​ಐಆರ್​ ದಾಖಲಿಸಿದ್ದಾರೆ. ಇದೇ ವೇಳೆ ಪೊಲೀಸರು ವಿಡಿಯೊದ ಕುರಿತು ಮಾಹಿತಿ ನೀಡುವಂತೆ ಸೋಶಿಯಲ್ ಮೀಡಿಯಾ ಫ್ಲ್ಯಾಟ್​ಫಾರ್ಮ್​ ಎಕ್ಸ್​​ಗೆ (X) ಮನವಿ ಮಾಡಿದೆ. ಅದರ ಪ್ರಕಾರ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಇದು ನಕಲಿ ಸೃಷ್ಟಿ ಎಂದು ಅಮಿತ್‌ ಶಾ ಸ್ಪಷ್ಪಪಡಿಸಿದ್ದಾರೆ.

ನಕಲಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್​​ಫಾರ್ಮ್​ಗಳಲ್ಲಿ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಭಾನುವಾರ ಎಫ್ಐಆರ್ ದಾಖಲಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಗೃಹ ಸಚಿವಾಲಯ (ಎಂಎಚ್ಎ) ಈ ಸಂಬಂಧ ದೂರು ದಾಖಲಿಸಿದೆ. ಅದರ ಆಧಾರದ ಮೇಲೆ ದೆಹಲಿ ಪೊಲೀಸರ ವಿಶೇಷ ಸೆಲ್ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳು ಮತ್ತು ಐಟಿ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ.

ಮೂಲಗಳನ್ನು ಉಲ್ಲೇಖಿಸಿ, ಈ ಪ್ರಕರಣದಲ್ಲಿ ಬಂಧನಗಳು ದೇಶಾದ್ಯಂತ ನಡೆಯುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ತಿಳಿಸಿದೆ.

ಭಾರತೀಯ ಸೈಬರ್ ಕ್ರೈಮ್ ಸಮನ್ವಯ ಕೇಂದ್ರದ (ಐ 4 ಸಿ) ಡಿಸಿ ಸಿಂಕು ಶರಣ್ ಸಿಂಗ್ ಅವರು ಸಲ್ಲಿಸಿದ ದೂರಿನ ಪ್ರಕಾರ, “ಸಮುದಾಯಗಳ ನಡುವೆ ಸಾಮರಸ್ಯ ಹಾಳು ಮಾಡುವ ಉದ್ದೇಶದಿಂದ ಕೆಲವು ನಕಲಿ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ, ಇದು ಸಾರ್ವಜನಿಕ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಲಿಂಕ್​​ಗಳ ಸಂಗ್ರಹ

ಮುಂದಿನ ಕ್ರಮಕ್ಕಾಗಿ ವೀಡಿಯೊಗಳನ್ನು ಹಂಚಿಕೊಂಡ ಲಿಂಕ್​​ಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೂಲಗಳ ಪ್ರಕಾರ, ದೆಹಲಿ ಪೊಲೀಸರು ಎಕ್ಸ್ ಮತ್ತು ಫೇಸ್ಬುಕ್​​ಗೆ ಪತ್ರ ಬರೆದಿದ್ದು, ಅಮಿತ್ ಶಾ ಅವರ ನಕಲಿ ಕ್ಲಿಪ್​ನ ಮೂಲ ಮತ್ತು ವೀಡಿಯೊವನ್ನು ಮೊದಲು ಹಂಚಿಕೊಂಡ ಖಾತೆಯ ಬಗ್ಗೆ ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ಮಾಹಿತಿ ಕೋರಿದ್ದಾರೆ.

ಹಿಂಸಾಚಾರಕ್ಕೆ ಕಾರಣವಾಗಬಹುದು

ಗೃಹ ಸಚಿವರ ನಕಲಿ ವೀಡಿಯೊಗಳನ್ನು ಕಾಂಗ್ರೆಸ್ ಹರಡಿಸಿದೆ ಎಂಬುದಾಗಿ ಬಿಜೆಪಿ ಹೇಳಿದೆ. ಎಡಿಟ್ ಮಾಡಿದ ತುಣುಕುಗಳನ್ನು ಪ್ರಸಾರ ಮಾಡುವ ಮತ್ತು ಹಂಚಿಕೊಳ್ಳುವ ಮೂಲಕ ವಿರೋಧ ಪಕ್ಷವು ದೇಶದಲ್ಲಿ ಕೋಮು ಸಾಮರಸ್ಯವನ್ನು ಹರಡುತ್ತಿದೆ ಎಂದು ಆರೋಪಿಸಿದೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಕಾಂಗ್ರೆಸ್ ತೆಲಂಗಾಣ ಘಟಕವು ಅಮಿತ್ ಶಾ ಅವರ ನಕಲಿ ವೀಡಿಯೊವನ್ನು ಪ್ರಸಾರ ಮಾಡುತ್ತಿದೆ, ಇದು “ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಕಾರಣವಾಗಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: Hasan Pen Drive Case: ಎಲ್ಲೂ ಕಾಣದ ಪ್ರಜ್ವಲ್‌, ಇಂದು ಎಚ್‌ಡಿ ರೇವಣ್ಣ ಹೈಕೋರ್ಟ್‌ ಮೊರೆ

ತೆಲಂಗಾಣ ಕಾಂಗ್ರೆಸ್ ಎಡಿಟ್ ಮಾಡಿದ ವೀಡಿಯೊವನ್ನು ಹರಡುತ್ತಿದೆ, ಇದು ಸಂಪೂರ್ಣವಾಗಿ ನಕಲಿ ಮತ್ತು ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಕಾರಣವಾಗುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಮಾಳವೀಯ ಬರೆದಿದ್ದಾರೆ.

ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ನೀಡಲಾಗುವ “ಅಸಂವಿಧಾನಿಕ ಮೀಸಲಾತಿ” ಪ್ರಯೋಜನಗಳನ್ನು ತೆಗೆದುಹಾಕುವ ಬಗ್ಗೆ ಮಾತ್ರ ಶಾ ಮಾತನಾಡುತ್ತಿದ್ದಾರೆ ಎಂದು ಅವರು ಗಮನಸೆಳೆದರು.

ಅನನುಕೂಲಕರ ಮೀಸಲಾತಿ

ಕಾಂಗ್ರೆಸ್ ಮತ್ತು ಅದರ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೀಸಲಾತಿ ಬಗ್ಗೆ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅಮಿತ್ ಶಾ ತಮ್ಮ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುತ್ತಿದೆ ಅಸಂವಿಧಾನಿಕ ಮೀಸಲಾತಿಯನ್ನು ಕೊನೆಗೊಳಿಸುತ್ತೇವೆ ಎಂದು ಅವರು ಹೇಳಿದ್ದಾರೆ.

“ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮೀಸಲಾತಿ ಬಗ್ಗೆ ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ. ತುಷ್ಟೀಕರಣಕ್ಕಾಗಿ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವ ಮೂಲಕ ಮತ್ತು ಜಾಮಿಯಾ ಮತ್ತು ಎಎಂಯುನಂತಹ ಸಂಸ್ಥೆಗಳಲ್ಲಿ ಎಸ್ಸಿ-ಎಸ್ಟಿ ಮತ್ತು ಒಬಿಸಿಯನ್ನು ವಂಚಿತಗೊಳಿಸಲಾಗುತ್ತಿದೆ ಎಂದು” ಎಂದು ಶಾ ಆರೋಪಿಸಿದರು.

Continue Reading

Latest

Physical Abuse: ಮದುವೆಗೊಪ್ಪದ ಬಾಲಕಿಯ ಅತ್ಯಾಚಾರ; ಕೆನ್ನೆಯ ಮೇಲೆ ಬಿಸಿ ಕಬ್ಬಿಣದಿಂದ ಪಾಗಲ್‌ ಪ್ರೇಮಿ ಹೆಸರು!

Physical Abuse: ನಾನು ಏಪ್ರಿಲ್ 19 ರಂದು ಮನೆಗೆ ಸಾಮಗ್ರಿ ಖರೀದಿಸಲು ಅಂಗಡಿಗೆ ಹೋಗಿದ್ದೆ. ಅವನು ನನ್ನನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದೊಯ್ದಿದ್ದ. ಅಲ್ಲಿ ತಪ್ಪು ಕೆಲಸಗಳನ್ನು ಮಾಡಿದನು. ನಂತರ ಅವನು ನನ್ನ ಮುಖವನ್ನು ರಾಡ್ ನಿಂದ ಸುಟ್ಟು ತನ್ನ ಹೆಸರನ್ನು ಬರೆದನು, ಅವನ ಸಹೋದರಿ ಮತ್ತು ತಾಯಿ ನನ್ನನ್ನು ಹಿಡಿದುಕೊಂಡಿದ್ದರು. ನಾನು ಕೂಗುತ್ತಲೇ ಇದ್ದೆ, ಆದರೆ ಯಾರೂ ನಮ್ಮನ್ನು ರಕ್ಷಿಸಲು ಬರಲಿಲ್ಲ” ಎಂದು ಬಾಲಕಿ ತಿಳಿಸಿದ್ದಾರೆ.

VISTARANEWS.COM


on

Physical Abuse
Koo

ಲಖನೌ: ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ 17 ವರ್ಷದ ಬಾಲಕಿಯೊಬ್ಬಳನ್ನು ಮೂರು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿ, ಅತ್ಯಾಚಾರ ಎಸಗಿದ (Physical Abuse) ಘಟನೆ ಲಖೀಂಪುರದಲ್ಲಿ ನಡೆದಿದೆ. ಕ್ರೂರಿ ಆಕೆಯ ಮುಖದ ಮೇಲೆ ಬಿಸಿ ಕಬ್ಬಿಣದ ರಾಡ್​​ನಿಂದ ತನ್ನ ಹೆಸರನ್ನು ಬರೆದಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 19 ರಂದು, 21 ವರ್ಷದ ಯುವಕ ಈ ಕೆಲಸ ಮಾಡಿದ್ದಾರೆ. ತನ್ನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಆಕೆಯನ್ನು ಬಲವಂತವಾಗಿ ತನ್ನ ಮನೆಗೆ ಕರೆಯೊಯ್ದಿದ್ದ. ಅವಳನ್ನು ಮೂರು ದಿನಗಳ ಕಾಲ ಅಲ್ಲಿ ಬಂಧಿಯಾಗಿಟ್ಟು ಹಲ್ಲೆ ಹಾಗೂ ಅತ್ಯಾಚಾರ ಮಾಡಿದ್ದ.

ನಾನು ಏಪ್ರಿಲ್ 19 ರಂದು ಮನೆಗೆ ಸಾಮಗ್ರಿ ಖರೀದಿಸಲು ಅಂಗಡಿಗೆ ಹೋಗಿದ್ದೆ. ಅವನು ನನ್ನನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದೊಯ್ದಿದ್ದ. ಅಲ್ಲಿ ತಪ್ಪು ಕೆಲಸಗಳನ್ನು ಮಾಡಿದನು. ನಂತರ ಅವನು ನನ್ನ ಮುಖವನ್ನು ರಾಡ್ ನಿಂದ ಸುಟ್ಟು ತನ್ನ ಹೆಸರನ್ನು ಬರೆದನು, ಅವನ ಸಹೋದರಿ ಮತ್ತು ತಾಯಿ ನನ್ನನ್ನು ಹಿಡಿದುಕೊಂಡಿದ್ದರು. ನಾನು ಕೂಗುತ್ತಲೇ ಇದ್ದೆ, ಆದರೆ ಯಾರೂ ನಮ್ಮನ್ನು ರಕ್ಷಿಸಲು ಬರಲಿಲ್ಲ” ಎಂದು ಬಾಲಕಿ ತಿಳಿಸಿದ್ದಾರೆ.

ಬಾಲಕಿ ಹೇಗೋ ಸೆರೆಯಿಂದ ತಪ್ಪಿಸಿಕೊಂಡು ಏಪ್ರಿಲ್ 21ರಂದು ಮನೆಗೆ ಹಿಂದಿರುಗಿದ್ದಳು. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ, ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Pakistan Spy: ATS ಭರ್ಜರಿ ಕಾರ್ಯಾಚರಣೆ; ಪಾಕಿಸ್ತಾನ ಗೂಢಾಚಾರ ಅರೆಸ್ಟ್‌

ಆರಂಭದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 343 (ಅಕ್ರಮ ಬಂಧನ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು 504 (ಉದ್ದೇಶಪೂರ್ವಕ ಅವಮಾನ) ಮತ್ತು ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ನಿಬಂಧನೆಗಳನ್ನು ಸೇರಿಸಲಾಯಿತು.

Continue Reading
Advertisement
PM Narendra modi in Bagalakote and Attack on Congress
Lok Sabha Election 20245 mins ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

Family Drama Trailer Out
ಸಿನಿಮಾ13 mins ago

Family Drama Trailer: ʻಡೇರ್ ಡೆವಿಲ್ ಮುಸ್ತಾಫ’ ತಂಡದಿಂದ ವಿಭಿನ್ನ ಸಿನಿಮಾ!

gold rate today rakul
ಚಿನ್ನದ ದರ18 mins ago

Gold Rate Today: ಚಿನ್ನದ ಬೆಲೆಯಲ್ಲಿ ₹330 ಇಳಿಕೆ; ಇಂದಿನ ಬಂಗಾರ- ಬೆಳ್ಳಿ ದರಗಳು ಇಲ್ಲಿವೆ

Narenda Modi Sonia gandhi
ದೇಶ23 mins ago

Narendra Modi: ರಾಜಕೀಯ ದ್ವೇಷ ಮರೆತು ಸೋನಿಯಾ, ರಾಹುಲ್‌ಗೆ ಸಹಾಯ; ಹೀಗ್ಯಾಕಂದ್ರು ಪ್ರಧಾನಿ ಮೋದಿ?

dheeren rajkumar announces a new film change his name
ಸ್ಯಾಂಡಲ್ ವುಡ್41 mins ago

Dheeren Rajkumar: ಹೆಸರು ಬದಲಿಸಿಕೊಂಡು ಅದೃಷ್ಟ ಪರೀಕ್ಷೆಗಿಳಿದ ರಾಜ್‌ಕುಮಾರ್ ಮೊಮ್ಮಗ!

MS Dhoni
Latest51 mins ago

MS Dhoni : ಐಪಿಎಲ್​ನಲ್ಲಿ 150 ಪಂದ್ಯಗಳನ್ನು ಗೆದ್ದ ಹೆಗ್ಗಳಿಕೆಗೆ ಪಾತ್ರರಾದ ಧೋನಿ; ಅವರ ಬಳಿಕ ಯಾರಿದ್ದಾರೆ?

Mahesh Babu shares sweet moments with sister Manjula and Prabhas aunt
South Cinema58 mins ago

Mahesh Babu: ಸಹೋದರಿ ಮಂಜುಳಾ, ಪ್ರಭಾಸ್ ಚಿಕ್ಕಮ್ಮ ಜತೆ ಸಿಹಿಕ್ಷಣ ಹಂಚಿಕೊಂಡ ಮಹೇಶ್‌ ಬಾಬು!

Kavya Maran
Latest1 hour ago

Kavya Maran : ಎಸ್​ಆರ್​ಎಚ್​​​ ತಂಡದ ಫೀಲ್ಡಿಂಗ್ ನೋಡಿ ಮಗುವಿನಂತೆ ಕಣ್ಣೀರು ಹಾಕಿದ ಮಾಲಕಿ ಕಾವ್ಯಾ ಮಾರನ್​

ವೈರಲ್ ನ್ಯೂಸ್1 hour ago

Viral Video: ರೈಲು ಹತ್ತುವಾಗ ಕೆಳಗೆ ಬಿದ್ದ ವ್ಯಕ್ತಿ; ಮಹಿಳಾ ಪೇದೆಯಿಂದ ರಕ್ಷಣೆ-ರೋಚಕ ವಿಡಿಯೋ ವೈರಲ್‌

viral video tn rao
ಪ್ರಮುಖ ಸುದ್ದಿ1 hour ago

Viral Video: ನಮಗೆ ಹಿಂದೂ ಮತಗಳ ಅಗತ್ಯವಿಲ್ಲ: ಕಾಂಗ್ರೆಸ್‌ ನಾಯಕನ ವಿಡಿಯೋ ವೈರಲ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20245 mins ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20241 hour ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ8 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 202420 hours ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 202423 hours ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌