IAS ಅಧಿಕಾರಿ ಅವನೀಶ್‌ ಶರಣ್‌ಗೆ 10ನೇ ಕ್ಲಾಸಲ್ಲಿ ಬರೀ 44% ಅಂಕ, ಆದರೂ ಯುಪಿಎಸ್ಸಿ ಗೆದ್ದ ಸಾಹಸವೀಗ ಸ್ಫೂರ್ತಿ ಕಥೆ - Vistara News

ದೇಶ

IAS ಅಧಿಕಾರಿ ಅವನೀಶ್‌ ಶರಣ್‌ಗೆ 10ನೇ ಕ್ಲಾಸಲ್ಲಿ ಬರೀ 44% ಅಂಕ, ಆದರೂ ಯುಪಿಎಸ್ಸಿ ಗೆದ್ದ ಸಾಹಸವೀಗ ಸ್ಫೂರ್ತಿ ಕಥೆ

IAS ಅಧಿಕಾರಿ ಅವನೀಶ್‌ ಶರಣ್‌ 10 ನೇ ತರಗತಿಯ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಇದು ಅನೇಕರಿಗೆ ತಾವೂ ಏನಾದರೂ ಮಾಡಬಹುದು ಎಂಬ ಸ್ಫರ್ತಿ ತುಂಬಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಟನಾ: ಐಎಎಸ್‌ ಅಧಿಕಾರಿ ಅವನೀಶ್‌ ಶರಣ್‌ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬ ಫೇಮಸ್ಸು. ಛತ್ತೀಸ್‌ಗಢ ಬಲರಾಮ್‌ ಪುರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಅವರು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಸ್ಫೂರ್ತಿದಾಯಕ ಕಥೆಗಳು, ವ್ಯಕ್ತಿ ಚಿತ್ರಗಳು ಎಲ್ಲರಿಗೂ ಅಚ್ಚುಮೆಚ್ಚು ಮತ್ತು ಪ್ರೇರಣಾದಾಯಕ. ತಿಂಗಳ ಹಿಂದಷ್ಟೇ ಅವರು ತಮ್ಮ ಗೆಳೆಯ, ಭರೂಚ್‌ ಜಿಲ್ಲಾಧಿಕಾರಿ ತುಷಾರ್‌ ಸುಮೇರಾ ಅವರ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಸುದ್ದಿ ಮಾಡಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಪಡೆದವರಿಗೂ ಭವ್ಯ ಭವಿಷ್ಯವಿದೆ ಎನ್ನುವುದನ್ನು ಈ ಮೂಲಕ ಅವರ ಯುವಜನರಿಗೆ ಸಾರಿ ಹೇಳಿದ್ದರು.

ಇಂಥ ಮೋಟಿವೇಷನಲ್‌ ಆಫೀಸರ್‌ ಅವನೀಶ್‌ ಶರಣ್‌ ಈ ಬಾರಿ ತಮ್ಮದೇ ಎಸ್ಸೆಸ್ಸೆಲ್ಸಿ ಮಾರ್ಕ್ಸ್‌ ಕಾರ್ಡನ್ನು ಹಂಚಿಕೊಂಡು ಸೌಂಡ್‌ ಮಾಡಿದ್ದಾರೆ. ಅವರು ಎಸ್ಸೆಸ್ಸೆಲ್ಸಿಯಲ್ಲಿ ಪಡೆದಿರುವ ಅಂಕ ನೋಡಿದರೆ, ಅಷ್ಟೇ ಅಂಕ ಪಡೆದರೂ ಎಂಥಾ ಸಾಧನೆ ಮಾಡಿದ್ದಾರಲ್ಲಾ ಅಂತ ಎಲ್ಲರಿಗೂ ಅನಿಸದಿರದು ಮತ್ತು ಅದೆಷ್ಟೋ ಜನರಿಗೆ ಇದು ಸ್ಫೂರ್ತಿಯಾಗಲಿದೆ.

IAS ಅಧಿಕಾರಿ ಅವನೀಶ್‌ ಶರಣ್‌

ಅವನೀಶ್‌ ಅವರ ಟ್ವೀಟ್‌ ಗೆ ಇದುವರೆಗೂ ಲಕ್ಷಾಂತರ ಲೈಕ್‌ಗಳು ಬಂದಿವೆ ಮತ್ತು ಸಾವಿರಾರು ಮಂದಿ ಶೇರ್‌ ಮಾಡಿಕೊಂಡಿದ್ದಾರೆ.
ಅವನೀಶ್‌ ಅವರು ೧೯೯೬ರಲ್ಲಿ ಎಸ್ಸೆಸ್ಸೆಲ್ಸಿ ಪಾಸಾಗಿದ್ದರು. ಅವರದು ಬಿಹಾರ ಎಸ್ಸೆಸ್ಸೆಲ್ಸಿ ಬೋರ್ಡ್‌. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಒಟ್ಟು ೭೦೦ ಅಂಕಗಳಲ್ಲಿ ಅವನೀಶ್‌ಗೆ ಸಿಕ್ಕಿದ್ದು ಕೇವಲ ೩೧೪ ಅಂಕ. ಅಂದರೆ ಒಟ್ಟಾರೆಯಾಗಿ ೪೪.೮೫%. ಆದರೆ, ಈ ಕಳಪೆ ಅಂಕ ಅವರ ಸಾಧನೆಗೆ ಎಂದೂ ಅಡ್ಡಿಯಾಗಲೇ ಇಲ್ಲ.

ಬೋರ್ಡ್‌ನಿಂದ 1996 ರಲ್ಲಿ ನಡೆದ 10 ನೇ ತರಗತಿಯ ಪರೀಕ್ಷೆಯಲ್ಲಿ 700 ಅಂಕಗಳಿಗೆ 314 ಅಂಕಗಳಿಸಿ ಉತ್ತೀರ್ಣರಾಗಿದ್ದಾರೆ. ಅಂತಿಮ ಸ್ಕೋರ್ 44.85%.

ಅವರ ಜೀವನ ಹೂವಿನ ಹಾಸಿಗೆ ಆಗಿರದೆ ಕಲ್ಲು- ಮುಳ್ಳುಗಳಿಂದ ತುಂಬಿತ್ತು ಎಂದು ಖುದ್ದು ಅವನೀಶ್‌ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಶಾಲಾ ದಿನಗಳಲ್ಲಿ ಓದಲು ಕರೆಂಟ್‌ ಇಲ್ಲದೆ ಲಾಟೀನು ಬೆಳಕಿನಲ್ಲಿ ಓದುತ್ತಿದ್ದರಂತೆ. ತಮ್ಮ ತಂದೆಯಿಂದ ಪ್ರಭಾವಿತರಾಗಿರುವ ಅವನೀಶ್‌ ಸಾಧಿಸಲು ಬೇಕಾಗಿರುವುದು ಶ್ರದ್ಧೆ ಎನ್ನುತ್ತಾರೆ.

ಅವನೀಶ್‌ ಶರಣ್‌ 10 ನೇ ತರಗತಿಯ ಅಂಕಪಟ್ಟಿ

10ನೇ ತರಗತಿಯಲ್ಲಿ ಕಡಿಮೆ ಅಂಕ ಬಂದರೂ ಅವನೀಶ್‌ ಆಯ್ಕೆ ಮಾಡಿದ್ದು ಯೂನಿಯನ್ ಪಬ್ಲಿಕ್ ಸರ್ವಿಸ್ ಪರೀಕ್ಷೆಯನ್ನು (UPSC). ಅದರಲ್ಲಿ ಅವರಿಗೆ ಉನ್ನತ ರ‍್ಯಾಂಕ್‌ ಬಂದಿತ್ತು.

ಅವನೀಶ್‌ ಅವರ ಈ ಪೋಸ್ಟ್‌ ಟ್ವಿಟರ್‌ನಲ್ಲಿ ಭಾರಿ ಮೆಚ್ಚುಗೆ ಪಡೆದಿದೆ. ಅನೇಕರು ಈ ಪೋಸ್ಟ್‌ ಗೆ ಕಮೆಂಟ್‌ ಮಾಡಿದ್ದಾರೆ. “ನಾನು ಖಿನ್ನತೆಗೆ ಒಳಗಾದಾಗ ನಿಮ್ಮ ವಾಲ್‌ ನೋಡುತ್ತೇನೆ. ಯಾವುದೂ ಅಸಾಧ್ಯವಲ್ಲ ಎಂದು ನನ್ನಂತಹ ಯುವಕರನ್ನು ನೀವು ಪ್ರೇರೇಪಿಸುತ್ತೀರಿ ಎಂದು ನಿಮಗೆ ತಿಳಿದಿಲ್ಲ ಸರ್, ನಿಮ್ಮ ಬಗ್ಗೆ ಓದಿದಾಗಲೆಲ್ಲಾ ನನಗೆ ಸಾಧಿಸುವ ಸ್ಫೂರ್ತಿ ಹೆಚ್ಚಾಗುತ್ತದೆ. ಜೀವನದಲ್ಲಿ ಹೋರಾಡಲು ಶಕ್ತಿ ನೀಡುತ್ತದೆ” ಎಂದು ಒಬ್ಬರು ಬರೆದಿದ್ದಾರೆ.

೧೯೯೬ರಲ್ಲೇ 10ನೇ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮತ್ತೊಬ್ಬರು, “ನಾನು 1996 ರಲ್ಲಿ ಅದೇ ಪರೀಕ್ಷೆಯಲ್ಲಿ 65% ಗಳಿಸಿದ್ದೆ. ನನ್ನ ಶಾಲೆಯ ಟಾಪರ್ 75% ಕ್ಕಿಂತ ಹೆಚ್ಚು ಪಡೆದಿದ್ದರಿಂದ ಆ ಸಮಯದಲ್ಲಿ ತುಂಬಾ ದುಃಖವಾಯಿತು. ಆದರೆ, ಈಗ ನೆಮ್ಮದಿ ಆಗಿದ್ದೇನೆ. ಯಾಕೆಂದರೆ, ನಾನು ಸಾಧಿಸಿದ್ದೇನೆʼʼ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ‌ಇದನ್ನೂ ಓದಿ: ಅಂದು ಜಸ್ಟ್‌ ಪಾಸ್‌, ಇಂದು ಐಎಎಸ್:‌ ಭರೂಚ್‌ ಜಿಲ್ಲಾಧಿಕಾರಿ ತುಷಾರ್ ಸುಮೇರಾ ಸ್ಫೂರ್ತಿದಾಯಕ ಕಥೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Lok Sabha Election 2024: ಮೊದಲ ಹಂತದ ಮತದಾನ; ಪಶ್ಚಿಮ ಬಂಗಾಲ, ಮಣಿಪುರ, ಛತ್ತೀಸ್‌ಗಢದಲ್ಲಿ ಹಿಂಸಾಚಾರ

lok sabha election 2024: ಹಲವು ಕಡೆ ಹಿಂಸಾಚಾರದ ಘಟನೆಗಳ ನಡುವೆಯೂ ಪಶ್ಚಿಮ ಬಂಗಾಳ ಇದುವರೆಗೆ ಚುರುಕಾದ ಮತದಾನ ಪ್ರಮಾಣವನ್ನು ದಾಖಲಿಸಿದೆ. ಇದುವರೆಗೆ 50.96% ಮತದಾನ ದಾಖಲಾದೆ. ಸಂಜೆ 6 ಗಂಟೆಯವರೆಗೆ ಮತದಾನ ಮುಂದುವರಿಯಲಿದೆ.

VISTARANEWS.COM


on

lok sabha election 2024 1st phase voting
Koo

ಹೊಸದಿಲ್ಲಿ: ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತದ ಮತದಾನ (1st phase voting) 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಸ್ಥಾನಗಳಲ್ಲಿ ನಡೆಯುತ್ತಿದ್ದು, ಪಶ್ಚಿಮ ಬಂಗಾಲ (West bengal) ಮತ್ತು ಮಣಿಪುರದಲ್ಲಿ (Manipur) ಹಿಂಸಾಚಾರ (poll violence) ವರದಿಯಾಗಿದೆ. ಮತದಾನದ ಪ್ರಮಾಣ ಇಲ್ಲಿಯವರೆಗೆ ಚುರುಕಾಗಿದೆ.

ಪಶ್ಚಿಮ ಬಂಗಾಲದ ಚಾಂದಮಾರಿಯಲ್ಲಿ ಜನರು ಮತದಾನ ಮಾಡದಂತೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದರೆ, ಬೇಗರ್ಕತದ ಜನರು ತಮ್ಮ ಮತ ಚಲಾಯಿಸದಂತೆ ಬಿಜೆಪಿ ಸದಸ್ಯರು ಅವರಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಬೆಳಗ್ಗೆ 10 ಗಂಟೆಯ ವೇಳೆಗೆ ಟಿಎಂಸಿ ಮತ್ತು ಬಿಜೆಪಿ ಎರಡೂ ಪಕ್ಷಗಳು ಹಿಂಸಾಚಾರದ ಕುರಿತು ಚುನಾವಣಾ ಆಯೋಗಕ್ಕೆ ಹತ್ತಾರು ದೂರುಗಳನ್ನು ದಾಖಲಿಸಿದ್ದು, ಈ ಪೈಕಿ ಬಹುತೇಕ ದೂರುಗಳು ಕೂಚ್ ಬೆಹಾರ್ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿವೆ. ಕೂಚ್ ಬೆಹಾರ್ ಜಿಲ್ಲೆಯ ಸಿತಾಲ್ಕುಚಿಯಲ್ಲಿ ಬಿಜೆಪಿ ಬೆಂಬಲಿಗರು ತಮ್ಮ ಪಕ್ಷದ ಕಾರ್ಯಕರ್ತರನ್ನು ಥಳಿಸಿದ್ದಾರೆ ಮತ್ತು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಇದೇ ವೇಳೆ ಅಪರಿಚಿತ ದುಷ್ಕರ್ಮಿಗಳು ಥಮನ್‌ಪೋಕ್ಪಿಯ ಮತದಾನ ಕೇಂದ್ರದ ಬಳಿ ಗುಂಡಿನ ದಾಳಿ ನಡೆಸಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಭಾರೀ ಗಲಭೆಗಳಿಗೆ ಸಾಕ್ಷಿಯಾಗಿದ್ದ ಮಣಿಪುರದಲ್ಲಿ ಇಂದು ಮತ್ತೆ ಹಿಂಸಾಚಾರ ಘಟನೆ ಸಂಭವಿಸಿದೆ. ಮತದಾನ ನಡೆಯುವ ವೇಳೆ ಗುಂಡಿನ ದಾಳಿ ನಡೆದಿದೆ. ಪೂರ್ವ ಇಂಫಾಲ್‌ನ ಮತಗಟ್ಟೆಯೊಂದರಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿತ್ತು. ಈ ವೇಳೆ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಆಗ ರಕ್ಷಣಾ ಸಿಬ್ಬಂದಿ ಸಹ ಪ್ರತಿದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಘಟನೆಯಿಂದ ಆತಂಕಗೊಂಡ ಮತದಾರರು ಸ್ಥಳದಿಂದ ಪಾರಾಗಲು ಓಡಿದ್ದಾರೆ.

ನಕ್ಸಲ್‌ಪೀಡಿತ ಛತ್ತೀಸ್‌ಗಢದ ಬಸ್ತಾರ್ ಪ್ರಾಂತ್ಯದಲ್ಲಿನ ಬಿಜಾಪುರ್ ಮತಗಟ್ಟೆಯಿಂದ 500 ಮೀಟರ್ ದೂರದಲ್ಲಿ ಶುಕ್ರವಾರ ಬೆಳಗ್ಗೆ ಗ್ರನೇಡ್ ಸ್ಫೋಟ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯಿಂದ ಈ ಪ್ರದೇಶದ ಸುಪರ್ದಿ ತೆಗೆದುಕೊಳ್ಳುತ್ತಿದ್ದ ಭದ್ರತಾ ತಂಡದ ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಗಲ್ಗಾಮ್ ಪ್ರದೇಶದ ಮತಗಟ್ಟೆಯಿಂದ 500 ಮೀಟರ್ ದೂರದಲ್ಲಿ ಗ್ರೆನೇಡ್ ಲಾಂಚರ್ (UBGL) ಸೆಲ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.

ಹಿಂಸಾಚಾರದ ಹೊರತಾಗಿಯೂ, ಪಶ್ಚಿಮ ಬಂಗಾಲದಲ್ಲಿ ಇದುವರೆಗೆ 50.96% ಮತದಾನ ದಾಖಲಾದೆ. ಸಂಜೆ 6 ಗಂಟೆಯವರೆಗೆ ಮತದಾನ ಮುಂದುವರಿಯಲಿದೆ.

ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ, ಅವರ ಪುತ್ರ ಹಾಗೂ ಶಿವಗಂಗಾ ಅಭ್ಯರ್ಥಿ ಕಾರ್ತಿ ಚಿದಂಬರಂ, ಖ್ಯಾತ ನಟ ರಜನಿಕಾಂತ್, ಕಮಲಹಾಸನ್‌, ವಿಜಯ್‌ ಸೇತುಪತಿ, ಅಣ್ಣಾಮಲೈ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಸೇರಿದಂತೆ ಹಲವಾರು ಪ್ರಮುಖ ನಾಯಕರು ಮತ್ತು ವ್ಯಕ್ತಿಗಳು ಮತ ಚಲಾಯಿಸಿದ್ದಾರೆ. ಯೋಗ ಗುರು ಬಾಬಾ ರಾಮದೇವ್ ಮತ್ತು ಪತಂಜಲಿ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಉತ್ತರಾಖಂಡದ ಹರಿದ್ವಾರದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಇದನ್ನೂ ಓದಿ: Lok Sabha Election 2024: ಲೋಕಸಭೆ ಚುನಾವಣೆ ಮೊದಲ ಹಂತದಲ್ಲಿ ಪ್ರಬಲ ಪೈಪೋಟಿಯ ಟಾಪ್ 10 ಕ್ಷೇತ್ರಗಳಿವು

Continue Reading

ವೈರಲ್ ನ್ಯೂಸ್

Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

Pesticide: ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ ಎಂದು ಸಿಂಗಾಪುರ ಹೇಳಿದೆ,

VISTARANEWS.COM


on

pesticide everest fish curry masala
Koo

ಹೊಸದಿಲ್ಲಿ: ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ (Spices) ತಯಾರಕ ಎವರೆಸ್ಟ್‌ನ (Everest) ಫಿಶ್ ಕರಿ ಮಸಾಲಾ (Fish Curry Masala) ಅನ್ನು ಹಿಂಪಡೆಯಲು ಸಿಂಗಾಪುರ (Singapore) ಆದೇಶಿಸಿದೆ. ಇದರಲ್ಲಿ ಸುರಕ್ಷಿತ ಮಿತಿಯನ್ನು ಮೀರಿ ಕೀಟನಾಶಕ (Pesticide) ಎಥಿಲೀನ್ ಆಕ್ಸೈಡ್ (Ethylene oxide) ಇದೆ ಎಂದು ಅದು ಆರೋಪಿಸಿದೆ.

ಅನುಮತಿಸಲಾದ ಮಿತಿಯನ್ನು ಮೀರಿದ ಮಟ್ಟದಲ್ಲಿ ಫಿಶ್‌ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ. ಕೃಷಿ ಉತ್ಪನ್ನಗಳ ಫ್ಯುಮಿಗೇಶನ್‌ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು SFA ಹೇಳಿದೆ.

“ಸಿಂಗಾಪುರದ ಆಹಾರ ನಿಯಮಗಳ ಅಡಿಯಲ್ಲಿ, ಎಥಿಲೀನ್ ಆಕ್ಸೈಡ್ ಅನ್ನು ಮಸಾಲೆಗಳ ಸ್ಟೆರಿಲೈಸೇಶನ್‌ನಲ್ಲಿ ಮಾತ್ರ ಬಳಸಲು ಅನುಮತಿಸಲಾಗಿದೆ” ಎಂದು SFA ಹೇಳಿದೆ. ಕಡಿಮೆ ಮಟ್ಟದ ಎಥಿಲೀನ್ ಆಕ್ಸೈಡ್‌ ಸೇರಿರುವ ಆಹಾರವನ್ನು ಸೇವಿಸುವುದರಿಂದ ತಕ್ಷಣದ ಅಪಾಯವಿಲ್ಲ. ಆದರೆ ಇದರ ದೀರ್ಘಕಾಲಿಕ ಬಳಕೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆಹಾರ ಸಂಸ್ಥೆ ಹೇಳಿದೆ.

“ಈ ಆಹಾರ ಸೇವನೆಯಿಂದ ತಕ್ಷಣದ ಅಪಾಯವಿಲ್ಲ. ಆದರೆ ಈ ಮಸಾಲೆಗೆ ಒಡ್ಡಿಕೊಳ್ಳುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು” ಎಂದು ಅದು ಹೇಳಿದೆ. “ಸಂಬಂಧಿತ ಉತ್ಪನ್ನಗಳನ್ನು ಖರೀದಿಸಿದ ಗ್ರಾಹಕರು ಅದನ್ನು ಸೇವಿಸದಂತೆ ಸೂಚಿಸಲಾಗಿದೆ. ಈ ಉತ್ಪನ್ನಗಳನ್ನು ಸೇವಿಸಿದವರು, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಗ್ರಾಹಕರು ವಿಚಾರಣೆಗಾಗಿ ತಮ್ಮ ಖರೀದಿ ಕೇಂದ್ರವನ್ನು ಸಂಪರ್ಕಿಸಬಹುದು” ಎಂದು SFA ತಿಳಿಸಿದೆ.

ಮಸಾಲೆ ಉತ್ಪಾದನೆ ಸಂಸ್ಥೆ ಎವರೆಸ್ಟ್ ಈ ಬೆಳವಣಿಗೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: Shubman Gill: ಗ್ಯಾಲರಿಯಲ್ಲಿ ಕುಳಿತಿದ್ದ ಸುಂದರ ಹುಡುಗಿಯನ್ನು ಕಂಡು ಕ್ಲೀನ್​ ಬೌಲ್ಡ್​ ಆದ ಗಿಲ್​; ವಿಡಿಯೊ ವೈರಲ್​

Continue Reading

Latest

Lok Sabha Election 2024: ಲೋಕಸಭೆ ಚುನಾವಣೆ ಮೊದಲ ಹಂತದಲ್ಲಿ ಪ್ರಬಲ ಪೈಪೋಟಿಯ ಟಾಪ್ 10 ಕ್ಷೇತ್ರಗಳಿವು

Lok sabha election 2024: ದೇಶದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಲಿದೆ. ಈ ಬಾರಿ ತೀವ್ರ ಕೂತಹಲ ಕೆರಳಿಸಿರುವ 10 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದ್ದು, ಹಲವು ಪ್ರಮುಖರು ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಈ ಹತ್ತು ಕ್ಷೇತ್ರಗಳ ಹಿನ್ನೋಟ ಇಲ್ಲಿದೆ.

VISTARANEWS.COM


on

By

Lok sabha election-2024
Koo

ದೇಶದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಏರುವ ಕನಸು ಎನ್ ಡಿ ಎ ಗೆ (NDA) ಆದರೆ ಕಾಂಗ್ರೆಸ್ ಗೆ (congress) ಮರಳಿ ಗದ್ದುಗೆ ಏರುವ ತವಕ. ಈ ನಡುವೆ ಬಂದೇ ಬಿಟ್ಟಿದೆ ಲೋಕಸಭಾ ಚುನಾವಣೆ- 2024ರ (Lok sabha election-2024) ಮೊದಲ ಹಂತದ (first phase) ಮತದಾನ. ದೇಶಾದ್ಯಂತ ನಡೆಯಲಿರುವ ಏಳು ಹಂತಗಳ ಲೋಕ ಸಭಾ ಚುನಾವಣೆಯ ಮೊದಲ ಹಂತದ ಮತದಾನ (voting) ಇಂದು ದೇಶದ ವಿವಿಧ ಭಾಗಗಳಲ್ಲಿ ನಡೆಯಲಿದೆ.

ಪ್ರಧಾನಿ (PM) ನರೇಂದ್ರ ಮೋದಿ (narendra modi) ಅವರ ನೇತೃತ್ವದಲ್ಲಿ ಆಡಳಿತಾರೂಢ ಬಿಜೆಪಿ (BJP) ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಸತತ ಮೂರನೇ ಅವಧಿಗೆ ಗಮನಹರಿಸುತ್ತಿರುವುದರಿಂದ ಭಾರತದ 543 ಸಂಸದೀಯ ಕ್ಷೇತ್ರಗಳ ಪೈಕಿ 102 ಕ್ಷೇತ್ರಗಳ ಮತದಾನ ಇಂದು ನಡೆಯಲಿದೆ.

2024ರ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಒಟ್ಟು 1,625 ಅಭ್ಯರ್ಥಿಗಳು ಕಣದಲ್ಲಿದ್ದು, ಇವರಲ್ಲಿ 134 ಮಹಿಳಾ ಅಭ್ಯರ್ಥಿಗಳು ಮತ್ತು 1,491 ಪುರುಷರು.

ಇದನ್ನೂ ಓದಿ:Lok sabha Election‌ 2024: ಲೋಕಸಭೆ ಚುನಾವಣೆಯಲ್ಲಿ ಈ 10 ವಿಷಯಗಳೇ ನಿರ್ಣಾಯಕ


ಎಲ್ಲಿ ಮೊದಲು?

ಮೊದಲ ಹಂತದ ಮತದಾನ ಪ್ರಕ್ರಿಯೆಯು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ಇದರಲ್ಲಿ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ ಐದು, ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯದಲ್ಲಿ ತಲಾ ಎರಡು ಸ್ಥಾನಗಳಲ್ಲಿ ಮತದಾನ ನಡೆಯಲಿದೆ ಹಾಗೂ ಛತ್ತೀಸ್‌ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಸ್ಥಾನಗಳಿಗೆ ಮತದಾನ ನಡೆಯಲಿದೆ.

ರಾಜಕೀಯ ಪಕ್ಷಗಳು ಸಾಧ್ಯವಾದಷ್ಟು ಹೆಚ್ಚು ಮತದಾನ ನಡೆಯಬೇಕು ಎಂದು ಬಯಸುತ್ತಿರುವುದು ಮಾತ್ರವಲ್ಲ ಸಾಧ್ಯವಾದಷ್ಟು ಹೆಚ್ಚು ಸ್ಥಾನಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ. 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ 10 ಪ್ರಮುಖ ಕ್ಷೇತ್ರಗಳ ಸಂಕ್ಷಿಪ್ತ ಮಾಹಿತಿ
ಇಲ್ಲಿದೆ.

1. ನಾಗ್ಪುರ

ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಮಹಾರಾಷ್ಟ್ರದ ನಾಗ್ಪುರ ಕ್ಷೇತ್ರವನ್ನು ಬಿಜೆಪಿಯ ನಿತಿನ್ ಗಡ್ಕರಿ ಅವರು 2014 ರಲ್ಲಿ ಸಂಸದರಾಗಿದ್ದ ವಿಲಾಸ್ ಮುತ್ತೇಮ್‌ವಾರ್ ಅವರನ್ನು 2.84 ಲಕ್ಷ ಮತಗಳ ಅಂತರದಿಂದ ಸೋಲಿಸಿ ವಶಪಡಿಸಿಕೊಂಡಿದ್ದರು. 2019ರಲ್ಲಿ, ಗಡ್ಕರಿ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ನಾನಾ ಪಟೋಲೆ ಅವರನ್ನು 2.16 ಲಕ್ಷ ಮತಗಳಿಂದ ಸೋಲಿಸಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು. ಈ ಬಾರಿ ಮತ್ತೆ ಗಡ್ಕರಿ ಅವರು ಇಲ್ಲಿ ಕಾಂಗ್ರೆಸ್‌ನ ವಿಕಾಸ್ ಠಾಕ್ರೆ ಅವರೊಂದಿಗೆ ಸ್ಪರ್ಧಿಸುತ್ತಿದ್ದಾರೆ.

2. ಸಹರಾನ್ಪುರ್

ಉತ್ತರ ಪ್ರದೇಶದ ಪ್ರಮುಖ ಸ್ಥಾನಗಳಲ್ಲೊಂದಾದ ಸಹರಾನ್‌ಪುರವನ್ನು 2019 ರಲ್ಲಿ ಬಿಎಸ್‌ಪಿಯ ಹಾಜಿ ಫಜ್ಲುರ್ ರೆಹಮಾನ್ ಗೆದ್ದಿದ್ದರು. ಈ ಬಾರಿ ಸಹರಾನ್‌ಪುರವು ಬಿಜೆಪಿಯ ರಾಘವ್ ಲಖನ್‌ಪಾಲ್, ಬಿಎಸ್‌ಪಿ ಅಭ್ಯರ್ಥಿ ಮಜಿದ್ ಅಲಿ ಮತ್ತು ಕಾಂಗ್ರೆಸ್‌ನ ಇಮ್ರಾನ್ ಮಸೂದ್ ನಡುವೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.

3. ಶಿವಗಂಗಾ

ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಭದ್ರಕೋಟೆಯಾಗಿರುವ ಶಿವಗಂಗಾ ಪ್ರಸ್ತುತ ಅವರ ಪುತ್ರ ಕಾರ್ತಿ ಚಿದಂಬರಂ ಪ್ರತಿನಿಧಿಸುತ್ತಿದ್ದಾರೆ. 2019 ರಲ್ಲಿ ಅವರು ಬಿಜೆಪಿಯ ಎಚ್. ರಾಜಾ ಅವರನ್ನು 3.32 ಲಕ್ಷ ಮತಗಳಿಂದ ಸೋಲಿಸಿದರು. ಈ ಬಾರಿ ಮತ್ತೆ ಕಣಕ್ಕೆ ಇಳಿದಿರುವ ಕಾರ್ತಿ ಚಿದಂಬರಂ ಬಿಜೆಪಿಯ ದೇವನಾಥನ್ ಯಾದವ್ ಮತ್ತು ಎಐಎಡಿಎಂಕೆಯ ಎ ಕ್ಸೇವಿಯರ್‌ದಾಸ್ ಅವರನ್ನು ಎದುರಿಸಬೇಕಿರುವುದರಿಂದ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

4. ಚಿಂದ್ವಾರಾ

ಚಿಂದ್ವಾರಾ ಬಹುತೇಕ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ ತೋರಿದೆ. 2019 ರಲ್ಲಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದ ಏಕೈಕ ಕ್ಷೇತ್ರವಾಗಿರುವ ಚಿಂದ್ವಾರಾ ಮಾಜಿ ಸಿಎಂ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಪ್ರತಿನಿಧಿಸಿದ್ದರು. ಈ ಬಾರಿ ನಕುಲ್ ನಾಥ್ ಅವರು ಇಲ್ಲಿಂದ ಮರುಚುನಾವಣೆ ಬಯಸಿದ್ದು, ಸ್ಥಳೀಯರ ಪ್ರಮುಖ ಬಿಜೆಪಿಯ ವಿವೇಕ್ ‘ಬಂಟಿ’ ಸಾಹು ವಿರುದ್ಧ ಕಣಕ್ಕಿಳಿದಿದ್ದಾರೆ.

5. ಜೋರ್ಹತ್

ಜೋರ್ಹತ್ ಬಿಜೆಪಿಯ ಹಾಲಿ ಸಂಸದ ಟೋಪೋನ್ ಕುಮಾರ್ ಗೊಗೊಯ್ ಹಾಗೂ ಅಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ಪುತ್ರ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ನಡುವಿನ ಸಮರಕ್ಕೆ ಸಾಕ್ಷಿಯಾಗಿದೆ. ಎರಡು ಬಾರಿ ಸಂಸದರಾಗಿ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕರಾಗಿರುವ ಗೌರವ್ ಅಸ್ಸಾಂನ ಜೋರ್ಹತ್‌ನಿಂದ ಸ್ಪರ್ಧಿಸುತ್ತಿರುವುದು ಇದೇ ಮೊದಲು.

6. ಪಿಲಿಭಿತ್

ಮೂರು ದಶಕಗಳಿಗಿಂತಲೂ ಹೆಚ್ಚು ಅಕಾಲ ತಾಯಿ ಮೇನಕಾ ಗಾಂಧಿ ಮತ್ತು ಮಗ ವರುಣ್ ಗಾಂಧಿ ಅವರ ಕ್ಷೇತ್ರವಾಗಿತ್ತು. ಆದರೆ ಈ ಬಾರಿ ಬಿಜೆಪಿ ವರುಣ್ ಗಾಂಧಿ ಬದಲಿಗೆ ಉತ್ತರ ಪ್ರದೇಶದ ಸಚಿವ ಜಿತಿನ್ ಪ್ರಸಾದ ಅವರನ್ನು ಇಲ್ಲಿ ಅಭ್ಯರ್ಥಿಯನ್ನಾಗಿ ಮಾಡಿದೆ. ಸಮಾಜವಾದಿ ಪಕ್ಷದ ಭಗವತ್ ಸರನ್ ಗಂಗ್ವಾರ್ ಮತ್ತು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಅನಿಸ್ ಅಹ್ಮದ್ ಖಾನ್ ವಿರುದ್ಧ ಪ್ರಸಾದ ಸ್ಪರ್ಧಿಸುತ್ತಿದ್ದಾರೆ.

7. ಅರುಣಾಚಲ ಪಶ್ಚಿಮ

ಬಿಜೆಪಿಯ ಭದ್ರಕೋಟೆಯಾಗಿರುವ ಅರುಣಾಚಲ ಪಶ್ಚಿಮ ಕ್ಷೇತ್ರವು ಪ್ರಸ್ತುತ ಕಿರಣ್ ರಿಜಿಜು ಅವರ ಅಧಿಕಾರ ವ್ಯಾಪ್ತಿಯಲ್ಲಿದೆ. ನಾಲ್ಕನೇ ಬಾರಿಗೆ ಇಲ್ಲಿಂದ ಅವರು ಸ್ಪರ್ಧಿಸುತ್ತಿದ್ದಾರೆ. 2019ರ ಚುನಾವಣೆಯಲ್ಲಿ ರಿಜಿಜು ಅವರು ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಬಮ್ ತುಕಿ ಅವರನ್ನು 1.74 ಲಕ್ಷ ಮತಗಳಿಂದ ಸೋಲಿಸಿದರು. ಈ ಬಾರಿ ಚುನಾವಣೆಯಲ್ಲಿ ಅವರಿಬ್ಬರು ಮತ್ತೆ ಎದುರಾಳಿಗಳಾಗಿದ್ದಾರೆ.


8. ಬಿಕಾನೆರ್

2009ರಿಂದ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರ ಕ್ಷೇತ್ರವಾಗಿರುವ ಬಿಕಾನೇರ್ ನಲ್ಲಿ ಅವರು ಈ ಬಾರಿ ಮತ್ತೆ ಕಣಕ್ಕೆ ಇಳಿದಿದ್ದಾರೆ. ಇವರ ವಿರುದ್ಧ ಗೋವಿಂದ್ ರಾಮ್ ಮೇಘವಾಲ್ ಸ್ಪರ್ಧಿಸಲಿದ್ದಾರೆ. ಈ ಹಿಂದೆ ಇಲ್ಲಿ ಖ್ಯಾತ ನಟ ಧರ್ಮೇಂದ್ರ ಅವರೂ ಕಣಕ್ಕೆ ಇಳಿದಿದ್ದರು.

9. ತೂತುಕ್ಕುಡಿ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಪುತ್ರಿ ಕನಿಮೋಳಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಪಾದಾರ್ಪಣೆ ಮಾಡಿದರು. ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ತಮಿಳಿಸೈ ಸೌಂದರರಾಜನ್ ಅವರನ್ನು 3.4 ಲಕ್ಷ ಮತಗಳಿಂದ ಸೋಲಿಸಿದರು. ಈ ಬಾರಿ ಡಿಎಂಕೆ ನಾಯಕ ತೂತುಕ್ಕುಡಿಯಿಂದ ಸತತ ಎರಡನೇ ಅವಧಿಗೆ ಕಣ್ಣಿಟ್ಟಿದ್ದಾರೆ ಮತ್ತು ಎಐಎಡಿಎಂಕೆಯ ಆರ್. ಶಿವಸಾಮಿ ವೇಲುಮಣಿ ಮತ್ತು ಟಿಎಂಸಿ (ಎಂ) ಎಸ್‌ಡಿಆರ್ ವಿಜಯಶೀಲನ್ ವಿರುದ್ಧ ಕಣಕ್ಕಿಳಿದಿದ್ದಾರೆ.

10. ಕೊಯಮತ್ತೂರು

ತಮಿಳುನಾಡಿನ ಪ್ರತಿಷ್ಠಿತ ಕ್ಷೇತ್ರದಿಂದ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ. ಅಣ್ಣಾಮಲೈ ಈ ಬಾರಿ ಮೊದಲ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಎಐಎಡಿಎಂಕೆಯ ಸಿಂಗೈ ಜಿ.ರಾಮಚಂದ್ರನ್ ಮತ್ತು ಡಿಎಂಕೆಯ ಗಣಪತಿ ಪಿ. ರಾಜ್‌ಕುಮಾರ್ ಅವರೊಂದಿಗೆ ಸ್ಪರ್ಧಿಸುತ್ತಿರುವ ಅಣ್ಣಾಮಲೈ ಗೆದ್ದರೆ ತಮಿಳುನಾಡಿನಲ್ಲಿ ಬಿಜೆಪಿಗೆ ದೊಡ್ಡ ಜಯವಾಗಲಿದೆ. 2019ರಲ್ಲಿ ಈ ಕ್ಷೇತ್ರದಿಂದ ಸಿಪಿಐ(ಎಂ)ನ ಪಿ.ಆರ್‌. ನಟರಾಜನ್‌ ಗೆದ್ದಿದ್ದರು.

Continue Reading

Latest

Lok sabha Election‌ 2024: ಲೋಕಸಭೆ ಚುನಾವಣೆಯಲ್ಲಿ ಈ 10 ವಿಷಯಗಳೇ ನಿರ್ಣಾಯಕ

Lok sabha Election 2024: ಕಳೆದ ಒಂದು ದಶಕದಿಂದ ಕೇಂದ್ರದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಆದರೆ ಈ ಸಂದರ್ಭದಲ್ಲಿ ಅದು ಹಲವು ಬಾರಿ ಎಡವಿದ್ದರೂ ಮತ್ತೆ ಹಲವು ಬಾರಿ ಪುಟಿದು ಎದ್ದೇಳುವ ಪ್ರಯತ್ನದಲ್ಲಿ ಯುಶಸ್ವಿಯಾಗಿದೆ. ಇದರಲ್ಲಿ ಈ ಬಾರಿ ಚುನಾವಣೆ ಮೇಲೆ ಪ್ರಭಾವ ಬೀರಬಹುದಾದ ಹಲವಾರು ಅಂಶಗಳಿವೆ ಅವು ಯಾವುದು ಗೊತ್ತೇ? ಇಲ್ಲಿದೆ ವಿಸ್ತೃತ ವಿಶ್ಲೇಷಣೆ.

VISTARANEWS.COM


on

By

Lok sabha election-2024
Koo

ದೇಶಾದ್ಯಂತ ಏಳು ಹಂತದಲ್ಲಿ ನಡೆಯಲಿರುವ 2024ರ ಲೋಕಸಭಾ ಚುನಾವಣೆಯ (Lok sabha election-2024) ಮೊದಲ ಹಂತದ ಮತದಾನ (voting) ಪ್ರಕ್ರಿಯೆ ಶುಕ್ರವಾರ ಆರಂಭಗೊಂಡಿದೆ. ವಿಶ್ವದ ಅತಿ ದೊಡ್ಡ ಚುನಾವಣೆಯಲ್ಲಿ ಸುಮಾರು 100 ಕೋಟಿ ಭಾರತೀಯರು (indians) ಮತ ಚಲಾಯಿಸಲಿದ್ದಾರೆ.

ಚುನಾವಣೆ ಪೂರ್ವದಲ್ಲೇ ಸಾಕಷ್ಟು ಸಮೀಕ್ಷೆಗಳನ್ನು ನಡೆಸಲಾಗಿದ್ದು, ಈ ಬಾರಿಯೂ ಪ್ರಧಾನಿ (PM) ನರೇಂದ್ರ ಮೋದಿ (narendra modi) ನೇತೃತ್ವದ ಭಾರತೀಯ ಜನತಾ ಪಕ್ಷ (BJP) ಸುಲಭವಾಗಿ ಗೆಲುವು ಸಾಧಿಸುತ್ತದೆ ಎಂಬುದು ತಿಳಿದು ಬಂದಿದೆ. ಒಂದು ವೇಳೆ ಈ ಬಾರಿಯೂ ಬಿಜೆಪಿ ಗೆಲುವು ದಾಖಲಿಸಿದರೆ ಸತತ ಮೂರನೇ ಅವಧಿಗೆ ಅಧಿಕಾರ ಬಿಜೆಪಿ ಪಾಲಾದಂತಾಗುತ್ತದೆ.

ಏಪ್ರಿಲ್ 19ರಿಂದ ಜೂನ್ 1ರವರೆಗೆ ನಡೆಯಲಿರುವ ಏಳು ಹಂತಗಳಲ್ಲಿಮತದಾನದ ಎಣಿಕೆ ಪ್ರಕ್ರಿಯೆ ಜೂನ್ 4ರಂದು ನಡೆಯಲಿದೆ. ಸಂಸತ್ತಿನ ಕೆಳಮನೆಯಾದ ಲೋಕಸಭೆಯ 543 ಸ್ಥಾನಗಳಿಗೆ ನಡೆಯುವ ಚುನಾವಣೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳಿವೆ.

ಇದನ್ನೂ ಓದಿ: Lok Sabha Election 2024: ಮೊದಲ ಹಂತದ ಮತದಾನ ಆರಂಭ; 102 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಣಯ

1. ಆರ್ಥಿಕತೆಯ ಪ್ರಗತಿ

ಮಾರ್ಚ್ 31ರಂದು ಆರ್ಥಿಕ ವರ್ಷ ಕೊನೆಯಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಸುಮಾರು ಶೇ. 8ರಷ್ಟು ಬೆಳವಣಿಗೆಯಾಗಿದೆ. ಇದು ಅತ್ಯಂತ ವೇಗವಾದ ಬೆಳವಣಿಗೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಕಳೆದ ಒಂದು ದಶಕದಲ್ಲಿ ಭಾರತದ ಆರ್ಥಿಕತೆಯು ಮೊದಲಿಗಿಂತ ಐದು ಸ್ಥಾನಗಳನ್ನು ಜಿಗಿದು ವಿಶ್ವದಲ್ಲಿ ಐದನೇ ಸ್ಥಾನಕ್ಕೆ ತಲುಪಿದೆ. ಈ ಬಾರಿ ಚುನಾವಣೆಯಲ್ಲಿ ತಾವು ಗೆದ್ದರೆ ಅದನ್ನು ಮೂರನೇ ಸ್ಥಾನಕ್ಕೆ ಏರಿಸುವ ಭರವಸೆ ನೀಡಿದ್ದಾರೆ.

2. ಅಭಿವೃದ್ಧಿಯ ತೀವ್ರಗತಿ

ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಪ್ರಮುಖ ನಗರಗಳಾದ ನವದೆಹಲಿ ಮತ್ತು ಮುಂಬಯಿ ಸೇರಿದಂತೆ ದೇಶದಾದ್ಯಂತ ಇರುವ ರಸ್ತೆಗಳು ಮತ್ತು ಸೇತುವೆಗಳು ಸಾಕಷ್ಟು ಅಭಿವೃದ್ಧಿಯಾಗಿದೆ. ಆದರೂ ಅಭಿವೃದ್ಧಿ ಕಾರ್ಯಗಳು ಗ್ರಾಮಾಂತರಕ್ಕಿಂತ ನಗರಗಳಲ್ಲೇ ಹೆಚ್ಚು ಕೇಂದ್ರಿತವಾಗಿವೆ ಎಂಬ ಆರೋಪವೂ ಇದೆ.


3. ಹಣದುಬ್ಬರ, ಬೆಲೆ ಏರಿಕೆ

2021-22 ರಲ್ಲಿ ಶೇ.5.5ರಷ್ಟು ಇದ್ದ ಹಣದುಬ್ಬರ 2022- 23ರಲ್ಲಿ ಶೇ. 6.7ಕ್ಕೆ ಏರಿದೆ. ಕೇವಲ ಫೆಬ್ರವರಿಯಲ್ಲಿ ಹಣದುಬ್ಬರ ಶೇ. 5.09 ರಷ್ಟು ಆಗಿತ್ತು. ಬೆಲೆ ಏರಿಕೆ ವಿಷಯ ಕೂಡ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದೆ.

4. ಮೋದಿ ಕಲ್ಯಾಣ ನೀತಿಗಳು

ಕೋವಿಡ್ ಸಾಂಕ್ರಾಮಿಕದ ಬಳಿಕ ಸರ್ಕಾರವು ಭಾರತದ 1.42 ಶತಕೋಟಿ ಜನರಲ್ಲಿ 814 ಮಿಲಿಯನ್ ಜನರಿಗೆ ಉಚಿತ ಆಹಾರ ಪಡಿತರವನ್ನು ನೀಡುತ್ತಿದೆ. ಭಾರತದ ಜನಸಂಖ್ಯೆಯ ಸುಮಾರು ಶೇ.60ರಷ್ಟು ಜನರಿಗೆ ಉಚಿತ ಸಿರಿಧಾನ್ಯಗಳನ್ನು ಸರ್ಕಾರ ಒದಗಿಸುತ್ತಿರುವುದು ದೇಶದ ಅಸಮ ಆರ್ಥಿಕ ಬೆಳವಣಿಗೆಯ ಸಂಕೇತ ಎನ್ನಲಾಗುತ್ತದೆ.
ಕಳೆದ ವರ್ಷದ ಅಂತ್ಯದ ವೇಳೆಗೆ ಭಾರತದ ಶ್ರೀಮಂತ ನಾಗರಿಕರು ಶೇ.40.1ರಷ್ಟು ಸಂಪತ್ತು ಹೊಂದಿದ್ದರು. ಇದು 1961ರ ಬಳಿಕ ಅತ್ಯಧಿಕವಾಗಿದೆ.

5. ಮಹಿಳೆಯರ ಪ್ರಭಾವ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಮಹಿಳಾ ಮತದಾರರನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಹಣ ಹಂಚಿಕೆ, ಪೈಪ್‌ಲೈನ್ ಮೂಲಕ ಮನೆಮನೆಗೆ ನೀರು, 24/7 ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕಗಳಂತಹ ಗೃಹೋಪಯೋಗಿ ಸೌಲಭ್ಯಗಳ ಮೂಲಕ ಅವರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಇವು ದೇಶದ ಮಹಿಳೆಯರು ಮೋದಿ ಆಡಳಿತ ಕುರಿತು ಸಕಾರಾತ್ಮಕ ಅಭಿಪ್ರಾಯ ಹೊಂದಲು ಕಾರಣವಾಗಿದೆ.


6. ಧಾರ್ಮಿಕ ಪ್ರಭಾವ

ಬಿಜೆಪಿ ಸುಮಾರು 35 ವರ್ಷಗಳ ಹಿಂದೆ ನೀಡಿದ ಭರವಸೆಯನ್ನು ಈಗ ಈಡೇರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ರಾಮನ ಜನ್ಮ ಸ್ಥಳ ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಮೊಘಲ್ ದೊರೆ ಬಾಬರ್ ನಿಂದ ಕೆಡವಲ್ಪಟ್ಟ ದೇವಾಲಯ ಈಗ ಪುನರ್ ನಿರ್ಮಾಣಗೊಂಡಿದೆ.

ಅಲ್ಲದೇ ಪ್ರಧಾನಿಯವರು ದೇಶಾದ್ಯಂತ ಇರುವ ಹಿಂದೂ ದೇವಾಲಯಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ. ಇದು ಬಿಜೆಪಿಗೆ ಹೆಚ್ಚು ಜನ ಬೆಂಬಲವನ್ನು ನೀಡಬಲ್ಲದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಮೋದಿಯವರ ಸರ್ಕಾರವು ಮುಸ್ಲಿಂ ಶಾಲೆಗಳು ಅಥವಾ ಮದರಸಾಗಳಿಗೆ ಬೆಂಬಲವನ್ನು ಕೊನೆಗೊಳಿಸಿದೆ ಮತ್ತು ಕೆಲವು ಬಿಜೆಪಿ ರಾಜ್ಯಗಳು ಅವುಗಳಲ್ಲಿ ಹಲವನ್ನು ಮುಚ್ಚಿವೆ. ಆದರೆ ಮೋದಿ ಅವರು ಪೌರತ್ವ ಕಾನೂನನ್ನು ಜಾರಿಗೆ ತಂದು ಹೊರದೇಶಗಳಿಂದ ವಲಸೆ ಬಂದಿರುವ ಅನೇಕರಿಗೆ ಸಹಾಯ ಮಾಡಿದೆ.

7. ಭ್ರಷ್ಟಾಚಾರ

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಕಳೆದ ಒಂದು ದಶಕದಲ್ಲಿ ವಿರೋಧ ಪಕ್ಷದ ಸುಮಾರು 150 ರಾಜಕಾರಣಿಗಳನ್ನು ಕರೆಸಿ, ಪ್ರಶ್ನಿಸಿದೆ. ಹಲವಾರು ಅಧಿಕಾರಿಗಳು, ರಾಜಕಾರಣಿಗಳ ಆಸ್ತಿ ಮೇಲೆ ದಾಳಿ ನಡೆಸಿ ಬಂಧಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ರಾಜಕೀಯ ಲಾಭಕ್ಕಾಗಿ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವೂ ವಿರೋಧ ಪಕ್ಷಗಳಿಂದ ಕೇಳಿ ಬರುತ್ತಿದೆ. ಆದರೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಳೆದ 10 ವರ್ಷಗಳ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಹೀಗಾಗಿ ಈ ಅಂಶವೂ ಈ ಬಾರಿಯ ಚುನಾವಣೆ ಮೇಲೆ ಮಹತ್ವದ ಪ್ರಭಾವ ಬೀರಬಲ್ಲದು.

8. ನಿರುದ್ಯೋಗ

2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಜನರಿಗೆ ಹತ್ತಾರು ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿದ್ದು, ಇದರಲ್ಲಿ ಅರ್ಧದಷ್ಟು ಪೂರೈಕೆ ಮಾಡಲೂ ಸಾಧ್ಯವಾಗಿಲ್ಲ ಎಂಬ ಆರೋಪ ಇದೆ. ನಿರುದ್ಯೋಗ ದರವು ಫೆಬ್ರವರಿಯಲ್ಲಿ ಶೇ. 8ಕ್ಕೆ ಏರಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ತಿಳಿಸಿದೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ 2023ರ ಮಾರ್ಚ್ ನಿಂದ ನಿರುದ್ಯೋಗ ದರವು ಶೇ.5.4ಕ್ಕೆ ಏರಿದೆ. ಮೋದಿ ಅಧಿಕಾರ ವಹಿಸಿಕೊಳ್ಳುವ ಮೊದಲು 2013-14 ರಲ್ಲಿ ಇದು ಶೇ. 4.9ರಷ್ಟಿತ್ತು.

15- 29 ವರ್ಷದ ಸುಮಾರು ಶೇ. 16ರಷ್ಟು ನಗರ ಯುವಕರು 2022-23 ರಲ್ಲಿ ಕಳಪೆ ಕೌಶಲ್ಯ ಮತ್ತು ಗುಣಮಟ್ಟದ ಉದ್ಯೋಗಗಳ ಕೊರತೆಯಿಂದಾಗಿ ನಿರುದ್ಯೋಗಿಗಳಾಗಿದ್ದಾರೆ ಎಂದು ಸರ್ಕಾರಿ ಅಂಕಿಅಂಶಗಳು ತಿಳಿಸಿದೆ. ಈ ವಿಷಯ ಮೋದಿ ಆಡಳಿತಕ್ಕೆ ನಕಾರಾತ್ಮಕವಾಗಿದೆ. ಪ್ರತಿಪಕ್ಷಗಳ ಪ್ರಬಲ ಅಸ್ತ್ರವಾಗಿದೆ.


9. ರೈತರ ಪ್ರತಿಭಟನೆ

ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ 2022ರ ವೇಳೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಅದರ ಲಕ್ಷಣ ಕಾಣುತ್ತಿಲ್ಲ. ವಿಶೇಷವಾಗಿ ರೈತರು ಪ್ರತಿಭಟನೆ ಇದಕ್ಕೆ ಸಾಕ್ಷಿಯಾಗಿದೆ. ದೇಶದ ರೈತರ ವಿಶ್ವಾಸವನ್ನು ಸಂಪೂರ್ಣವಾಗಿ ಗಳಿಸಲು ಮೋದಿಗಿನ್ನೂ ಸಾಧ್ಯವಾಗಿಲ್ಲ.

10. ಜಾಗತಿಕ ಸ್ಥಾನಮಾನ

ಕಳೆದ ವರ್ಷ ಜಿ 20 ಶೃಂಗಸಭೆಯನ್ನು ಆಯೋಜಿಸಿರುವುದು, ರಷ್ಯಾದ ದಾಳಿಯ ವೇಳೆ ಉಕ್ರೇನ್‌ನಲ್ಲಿ ಸಿಲುಕಿರುವ ತನ್ನ ನಾಗರಿಕರನ್ನು ಯಶಸ್ವಿಯಾಗಿ ಸ್ಥಳಾಂತರಿಸಿರುವುದು ಪ್ರಧಾನಿ ನರೇಂದ್ರ ಮೋದಿಯ ಪ್ರಮುಖ ಸಾಧನೆಯಾಗಿದೆ. ಇದರಿಂದ ದೇಶಕ್ಕೆ ಸಿಗುತ್ತಿರುವ ಆರ್ಥಿಕತೆ ಬೆಂಬಲದೊಂದಿಗೆ ಭಾರತದ ಏರುತ್ತಿರುವ ಜಾಗತಿಕ ಸ್ಥಾನಮಾನ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ.

Continue Reading
Advertisement
IPL 2024
ಕ್ರೀಡೆ2 mins ago

IPL 2024: ಡಿಆರ್​ಎಸ್​ ಚೀಟಿಂಗ್ ವೇಳೆ ಸಿಕ್ಕಿ ಬಿದ್ದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

Job Alert
ಉದ್ಯೋಗ7 mins ago

Job Alert: 247 ಪಿಡಿಒ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ; ಇಲ್ಲಿದೆ ಡೈರಕ್ಟ್‌ ಲಿಂಕ್‌

lok sabha election 2024 1st phase voting
ಪ್ರಮುಖ ಸುದ್ದಿ24 mins ago

Lok Sabha Election 2024: ಮೊದಲ ಹಂತದ ಮತದಾನ; ಪಶ್ಚಿಮ ಬಂಗಾಲ, ಮಣಿಪುರ, ಛತ್ತೀಸ್‌ಗಢದಲ್ಲಿ ಹಿಂಸಾಚಾರ

pesticide everest fish curry masala
ವೈರಲ್ ನ್ಯೂಸ್52 mins ago

Pesticide: ಎವರೆಸ್ಟ್‌ ಫಿಶ್‌ ಕರಿ ಮಸಾಲೆಯಲ್ಲಿ ಕೀಟನಾಶಕ; ಬ್ಯಾನ್‌ ಮಾಡಿದ ಸಿಂಗಾಪುರ

Take strict action in Neha Murder Case CM instructs to DG
ಕ್ರೈಂ2 hours ago

Neha Murder Case: ನೇಹಾ ಕೇಸ್‌ನಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ; ಡಿಜಿಗೆ ಸಿಎಂ ಸೂಚನೆ

IPL 2024
ಕ್ರಿಕೆಟ್2 hours ago

IPL 2024: ಸಿಕ್ಸರ್​ ಮೂಲಕ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​

Murder case In Raichur
ರಾಯಚೂರು2 hours ago

Murder Case : ಕಲ್ಲಿನಿಂದ ಜಜ್ಜಿ ಪತ್ನಿಯ ಕೊಂದು ನೇಣಿಗೆ ಶರಣಾದ ಅನುಮಾನ ಪಿಶಾಚಿ

Lok sabha election-2024
Latest2 hours ago

Lok Sabha Election 2024: ಲೋಕಸಭೆ ಚುನಾವಣೆ ಮೊದಲ ಹಂತದಲ್ಲಿ ಪ್ರಬಲ ಪೈಪೋಟಿಯ ಟಾಪ್ 10 ಕ್ಷೇತ್ರಗಳಿವು

tamanna bhatia gold
ಚಿನ್ನದ ದರ2 hours ago

Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ; ಬೆಂಗಳೂರಿನಲ್ಲಿ ಇಂದು ಹೀಗಿದೆ ದರ

CET 2024 exam Complaint against syllabus question of Mathematics and Biology KEA to set up committee on April 24
ಶಿಕ್ಷಣ2 hours ago

CET 2024 Exam: ಗಣಿತ, ಜೀವಶಾಸ್ತ್ರದ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ ವಿರುದ್ಧ ದೂರು; ಏಪ್ರಿಲ್‌ 24ಕ್ಕೆ ಸಮಿತಿ ರಚನೆಗೆ ಕೆಇಎ ನಿರ್ಧಾರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina bhavishya
ಭವಿಷ್ಯ10 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ2 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ3 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ5 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ6 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ1 week ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

ಟ್ರೆಂಡಿಂಗ್‌