Deepavali 2023: ಹಣತೆ ಬೆಳಗಿ ದೀಪಾವಳಿ ಆಚರಿಸಿದ US ಅಧ್ಯಕ್ಷ ಜೋ ಬೈಡೆನ್‌, ಜಿಲ್‌ - Vistara News

ದೇಶ

Deepavali 2023: ಹಣತೆ ಬೆಳಗಿ ದೀಪಾವಳಿ ಆಚರಿಸಿದ US ಅಧ್ಯಕ್ಷ ಜೋ ಬೈಡೆನ್‌, ಜಿಲ್‌

ದ್ವೇಷ ಮತ್ತು ವಿಭಜನೆಯ ಕತ್ತಲೆಯ ವಿರುದ್ಧ ವಿವೇಕ, ಪ್ರೀತಿ ಮತ್ತು ಏಕತೆಯ ಬೆಳಕನ್ನು ಅನ್ವೇಷಿಸುವುದು ಇದರ ಸಂಕೇತವಾಗಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ (US president Joe Biden) ದೀಪಾವಳಿಯ (Deepavali 2023) ದೀಪ ಬೆಳಗಿ ಹೇಳಿದ್ದಾರೆ.

VISTARANEWS.COM


on

joe biden jill biden
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಾಷಿಂಗ್ಟನ್:‌ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ (US president Joe Biden) ಹಾಗೂ ಪ್ರಥಮ ಮಹಿಳೆ ಜಿಲ್ ಬೈಡೆನ್‌ (Jill Biden) ನಿನ್ನೆ ರಾತ್ರಿ ಶ್ವೇತಭವನದಲ್ಲಿ (white house) ಹಣತೆ ಬೆಳಗಿ ದೀಪಾವಳಿ (Deepavali 2023) ಆಚರಿಸಿದರು.

ದೀಪಾವಳಿ ಹಬ್ಬದ ಸಂದರ್ಭವನ್ನು ಗೌರವಿಸಲು ಅಧ್ಯಕ್ಷ ಜೋ ಬೈಡೆನ್ ಅವರು ಮತ್ತು ಜಿಲ್ ಬೈಡೆನ್ ದೀಪಗಳನ್ನು ಬೆಳಗಿಸುವ ವೀಡಿಯೊವನ್ನು Xನಲ್ಲಿ ಹಂಚಿಕೊಂಡರು. “ಇಂದು ಜಿಲ್ ಮತ್ತು ನಾನು ದೀಪಾವಳಿಯ ಸಂದೇಶವನ್ನು ಸಂಕೇತಿಸಲು ಹಣತೆಯನ್ನು ಬೆಳಗಿಸಿದೆವು. ದ್ವೇಷ ಮತ್ತು ವಿಭಜನೆಯ ಕತ್ತಲೆಯ ವಿರುದ್ಧ ವಿವೇಕ, ಪ್ರೀತಿ ಮತ್ತು ಏಕತೆಯ ಬೆಳಕನ್ನು ಅನ್ವೇಷಿಸುವುದು ಇದರ ಸಂಕೇತವಾಗಿದೆ. ನಮ್ಮ ರಾಷ್ಟ್ರದ ನಿರಂತರ ಚೈತನ್ಯ ಹಾಗೂ ಬೆಳಕನ್ನು ಹಂಚಿಕೊಂಡು ಸ್ವೀಕರಿಸೋಣ ಮತ್ತು ಶಕ್ತಿ ಪಡೆಯೋಣʼʼ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹ್ಯಾಲೊವೀನ್ ಆಚರಣೆಯ ಅಕ್ಕಪಕ್ಕದಲ್ಲೇ ದೀಪಾವಳಿ ಹಬ್ಬವೂ ಬರುತ್ತದೆ. ಕ್ಯಾಲಿಫೋರ್ನಿಯಾದ ಡಿಸ್ನಿಲ್ಯಾಂಡ್ ಮತ್ತು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಂತಹ ಜನಪ್ರಿಯ ತಾಣಗಳಲ್ಲಿ ದೀಪಗಳ ಹಬ್ಬವನ್ನು ಆಚರಿಸುವುದರೊಂದಿಗೆ ಅಮೆರಿಕದಲ್ಲಿ ದೀಪಾವಳಿ ಆಚರಣೆಗಳ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ವೈಟ್ ಹೌಸ್ ಕೂಡ ದೀಪಾವಳಿಯನ್ನು ಆಚರಿಸುತ್ತಿದೆ.

ನವೆಂಬರ್ 12ರಂದು ಹಾಕಿದ ಮತ್ತೊಂದು X ಪೋಸ್ಟ್‌ನಲ್ಲಿ ಬೈಡೆನ್ ದೀಪಾವಳಿ ಶುಭಾಶಯಗಳನ್ನು ಮತ್ತಷ್ಟು ವಿಸ್ತರಿಸಿದರು. “ತಲೆಮಾರುಗಳಷ್ಟು ಕಾಲ ದಕ್ಷಿಣ ಏಷ್ಯಾದಿಂದ ಬಂದು ಅಮೆರಿಕನ್ನರಾಗಿರುವವರು ನಮ್ಮ ರಾಷ್ಟ್ರದ ಬಟ್ಟೆಯಲ್ಲಿ ದೀಪಾವಳಿ ಸಂಪ್ರದಾಯಗಳ ಕುಸುರಿಯನ್ನು ನೇಯ್ದಿದ್ದಾರೆ. ಇದು ಅಜ್ಞಾನ, ದ್ವೇಷ, ವಿಭಜನೆಯ ಕತ್ತಲೆಯ ವಿರುದ್ಧ ವಿವೇಕ, ಪ್ರೀತಿ ಮತ್ತು ಏಕತೆಯ ಬೆಳಕನ್ನು ಹುಡುಕುವ ಸಂದೇಶವನ್ನು ಸಂಕೇತಿಸುತ್ತದೆ” ಎಂದಿದ್ದಾರೆ.

“ಇದು ಕಳೆದ ಕೆಲವು ಕಷ್ಟಕರ ವರ್ಷಗಳಿಂದ ನಮ್ಮ ರಾಷ್ಟ್ರವು ಬಲವಾಗಿ ಹೊರಹೊಮ್ಮಲು ಸಹಾಯ ಮಾಡಿದ ಸಂದೇಶವಾಗಿದೆ. ಈಗ ಎಂದಿಗಿಂತಲೂ ಇದು ಹೆಚ್ಚು ಮುಖ್ಯವಾಗಿದೆ. ಈ ದೀಪಾವಳಿಯಂದು, ಬೆಳಕಿನ ಶಕ್ತಿಯನ್ನು ನಾವು ಹಂಚಿಕೊಳ್ಳೋಣ. ಅಮೆರಿಕ ಮತ್ತು ಪ್ರಪಂಚದಾದ್ಯಂತ ದೀಪಾವಳಿ ಆಚರಿಸುತ್ತಿರುವ ಒಂದು ಶತಕೋಟಿಗೂ ಹೆಚ್ಚು ಹಿಂದೂಗಳು, ಜೈನರು, ಸಿಖ್ಖರು ಮತ್ತು ಬೌದ್ಧರಿಗೆ ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇವೆ” ಎಂದು ಬರೆದಿದ್ದಾರೆ.

ಬೈಡೆನ್ ಅವರು ಪ್ರತಿವರ್ಷವೂ ದೀಪಾವಳಿಯ ಸಮಯದಲ್ಲಿ ವಿವಿಧ ಸಮುದಾಯಗಳಿಗೆ ತಮ್ಮ ಶುಭಾಶಯಗಳನ್ನು ವ್ಯಕ್ತಪಡಿಸುತ್ತಾರೆ. ಕಳೆದ ವರ್ಷವೂ ಸಹ, ಅವರು ದೀಪಾವಳಿ ಆಚರಿಸಿ ಸಂದೇಶ ನೀಡಿದ್ದರು. “ಈ ದಿನದಂದು, ಅಮೆರಿಕದಾದ್ಯಂತ ಹರಡಿರುವ ದಕ್ಷಿಣ ಏಷ್ಯಾದ ಸಮುದಾಯವು ಪ್ರದರ್ಶಿಸಿರುವ ಆಶಾವಾದ, ಧೈರ್ಯ ಮತ್ತು ಸಹಾನುಭೂತಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಒಟ್ಟಾಗಿ, ದಕ್ಷಿಣ ಏಷ್ಯಾ ಮೂಲದ ಅಮೆರಿಕನ್ನರು ಈ ಸಾಂಕ್ರಾಮಿಕ ರೋಗದಿಂದ (ಕೊರೊನಾ) ಬಲಶಾಲಿಯಾಗಿ ಹೊರಹೊಮ್ಮಲು ನಮಗೆ ಸಹಾಯ ಮಾಡುತ್ತಿರಲಿ, ಎಲ್ಲರಿಗೂ ಸಹಾಯವಾಗುವ ಆರ್ಥಿಕತೆಯನ್ನು ನಿರ್ಮಿಸುತ್ತಿರಲಿ ಅಥವಾ ನಮ್ಮ ದೇಶಕ್ಕೆ ಸೇವೆ ಸಲ್ಲಿಸುತ್ತಿರಲಿ ಹೀಗೆ ಯಾವುದರಲ್ಲೇ ಇರಲಿ ನಾವು ರಾಷ್ಟ್ರವಾಗಿ ಯಾರೆಂಬುದರ ಆತ್ಮವನ್ನು ಪ್ರತಿಬಿಂಬಿಸುತ್ತಾರೆ” ಎಂದು ಅವರು ಬರೆದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

BJP Candidates List : ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದ ಘಟಾನುಘಟಿ ನಾಯಕರಿವರು…

BJP Candidates List: ಬಿಜೆಪಿ ಪಟ್ಟಿಯಲ್ಲಿ 34 ಕೇಂದ್ರ ಸಚಿವರು ಸೇರಿದ್ದಾರೆ. ಈ ಮೂಲಕ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿ ಘೋಷಿಸುವ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ಮಾಡಿದೆ.

VISTARANEWS.COM


on

Modi sha
Koo

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (BJP) 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು (BJP Candidates List) ಪ್ರಕಟಿಸಿದೆ. ಬಿಜೆಪಿ ಮುಂಬರುವ ಚುನಾವಣೆಯಲ್ಲಿ 370 ಸ್ಥಾನಗಳನ್ನು ಗೆಲ್ಲುವ ಪಣ ತೊಟ್ಟಿದೆ. ಅಂತೆಯೇ ಬಿಡುಗಡೆಗೊಂಡಿರುವ ಮೊದಲ ಪಟ್ಟಿಯಲ್ಲಿ 34 ಕೇಂದ್ರ ಸಚಿವರು ಸೇರಿದ್ದಾರೆ. ಈ ಮೂಲಕ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸುವ ಮೊದಲೇ ಬಿಜೆಪಿ ತನ್ನ ಬಲವನ್ನು ಪ್ರದರ್ಶಿಸಿದೆ.

2024 ರ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿರುವ ಪ್ರಮುಖರ ಪಟ್ಟಿ ಇಲ್ಲಿದೆ.

ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಉತ್ತರ ಪ್ರದೇಶದ ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ. ಅವರು ಈಗಾಗಲೇ ಕ್ಷೇತ್ರದಿಂದ ಎರಡು ಬಾರಿ ಗೆದ್ದಿದ್ದಾರೆ ಮತ್ತು ಈ ಬಾರಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದಾರೆ. 2014 ರಲ್ಲಿ ಪ್ರಧಾನಿ ಮೋದಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದರು. ಅದೇ ರತಿ 2019 ರಲ್ಲಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ವಿರುದ್ಧ ಜಯಭೇರಿ ಬಾರಿಸಿದ್ದರು.

ಅಮಿತ್ ಶಾ

2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಪ್ರಚಂಡ ವಿಜಯದತ್ತ ಮುನ್ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್​ನ ಗಾಂಧಿನಗರದಿಂದ ಸ್ಪರ್ಧಿಸಲಿದ್ದಾರೆ.

ರಾಜನಾಥ್ ಸಿಂಗ್

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮುಂಬರುವ ಚುನಾವಣೆಯಲ್ಲಿ ಲಕ್ನೋದಿಂದ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ : ಬಿಜೆಪಿ ಪಟ್ಟಿ ಪ್ರಕಟ: ತಿರುವನಂತಪುರಂನಲ್ಲಿ ರಾಜೀವ್‌ ಚಂದ್ರಶೇಖರ್‌ Vs ಶಶಿ ತರೂರ್?‌

ಸ್ಮೃತಿ ಇರಾನಿ

2019 ರಲ್ಲಿ ಕಾಂಗ್ರೆಸ್ ಭದ್ರಕೋಟೆಯಾದ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಜಯಗಳಿಸಿದ ನಂತರ ಸ್ಮೃತಿ ಇರಾನಿ ಅವರಿಗೆ ಮತ್ತೊಮ್ಮೆ ಉತ್ತರ ಪ್ರದೇಶದ ಅದೇ ಕ್ಷೇತ್ರದಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ

ರಾಜ್ಯಸಭಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು 2002ರಿಂದ ಕಾಂಗ್ರೆಸ್​ ಪಕ್ಷದ ಮೂಲಕ ಪಾರಮ್ಯ ಮೆರೆದಿದ್ದ ಮಧ್ಯಪ್ರದೇಶದ ಗುನಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅವರು 2019ರಲ್ಲಿ ಇದೇ ಕ್ಷೇತ್ರದಲ್ಲಿ ಬಿಜೆಪಿಯ ಕೃಷ್ಣ ಪಾಲ್ ಸಿಂಗ್ ಯಾದವ್ ವಿರುದ್ಧ ಸೋತಿದ್ದರು.

ಶಿವರಾಜ್ ಸಿಂಗ್ ಚೌಹಾಣ್

ಕಳೆದ ವರ್ಷ ನಡೆದ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅದ್ಭುತ ವಿಜಯ ಕಂಡ ಹೊರತಾಗಿಯೂ ಮುಖ್ಯಮಂತ್ರಿಯಾಗದ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅಧಿಕಾರದಲ್ಲಿ ಮುಂದುವರಿಸಿರಲಿಲ್ಲ. ಅವರೀಗ ವಿದಿಶಾದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.

ಕಿರಣ್ ರಿಜಿಜು

ಪ್ರಸ್ತುತ ಭೂ ವಿಜ್ಞಾನ ಖಾತೆಯನ್ನು ಹೊಂದಿರುವ ಕಿರಣ್ ರಿಜಿಜು ಅರುಣಾಚಲ ಪಶ್ಚಿಮದಿಂದ ಸ್ಪರ್ಧಿಸಲಿದ್ದಾರೆ. 2019 ರಲ್ಲಿ ಬಿಜೆಪಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಾಗಿನಿಂದ, ರಿಜಿಜು ಕಾನೂನು ಮತ್ತು ಯುವ ವ್ಯವಹಾರಗಳಂತಹ ಹಲವಾರು ಪ್ರಮುಖ ಸಚಿವಾಲಯಗಳನ್ನು ಮುನ್ನಡೆಸಿದ್ದಾರೆ.

ರಾಜೀವ್ ಚಂದ್ರಶೇಖರ್

ಕಾಂಗ್ರೆಸ್ ನ ಶಶಿ ತರೂರ್ ಪ್ರತಿನಿಧಿಸುವ ತಿರುವನಂತಪುರಂ ಕ್ಷೇತ್ರದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ರಾಜ್ಯಸಭೆಗೆ ಮರುನಾಮಕರಣಗೊಳ್ಳದ ಸಚಿವರಲ್ಲಿ ಒಬ್ಬರಾದ ಚಂದ್ರಶೇಖರ್ ಅವರು ಇತ್ತೀಚೆಗೆ ತಮ್ಮ ಮೊದಲ ಲೋಕಸಭಾ ಚುನಾವಣೆಯ ಸುಳಿವು ನೀಡಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಇನ್ನಷ್ಟು ರೋಮಾಂಚಕಾರಿ ಹಂತ ಏರುವುದಾಗಿ ಹೇಳಿಕೊಂಡಿದ್ದರು.

ಹೇಮಾ ಮಾಲಿನಿ

ನಟಿ-ರಾಜಕಾರಣಿ ಹೇಮಾ ಮಾಲಿನಿ ಅವರನ್ನು ಮಥುರಾದಿಂದ ಮತ್ತೆ ಕಣಕ್ಕಿಳಿಸಲಾಗಿದೆ. 2014 ಮತ್ತು 2019 ರ ಚುನಾವಣೆಗಳಲ್ಲಿ, ಹಿರಿಯ ಬಾಲಿವುಡ್ ನಟ ಎರಡೂ ಬಾರಿ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದರು.

ಭೂಪೇಂದರ್ ಯಾದವ್

ಸವಾಲುಗಳನ್ನು ಎದುರಿಸುವಲ್ಲಿ ಬಿಜೆಪಿಯ ಪ್ರಬಲ ನಾಯಕರಾಗಿರುವ ಭೂಪೇಂದರ್ ಯಾದವ್ ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಪಕ್ಷದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ತಮ್ಮ ಮೊದಲ ಲೋಕಸಭಾ ಚುನಾವಣೆಗೆ ಕಾಲಿಡುತ್ತಿದ್ದಾರೆ. ರಾಜಸ್ಥಾನದ ಅಲ್ವಾರ್ ನಿಂದ ಅವರು ಕಣಕ್ಕೆ ಇಳಿದಿದ್ದಾರೆ .

2019 ರ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗೆದ್ದಿದೆ. ಆದರೆ ಪ್ರಸ್ತುತ ಅದು ಲೋಕಸಭೆಯಲ್ಲಿ 290 ಸದಸ್ಯರನ್ನು ಹೊಂದಿದೆ, ಇದರಲ್ಲಿ ಕೆಲವು ಸಂಸದರು ಇತ್ತೀಚೆಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ರಾಜೀನಾಮೆ ನೀಡಿದ್ದಾರೆ. ಚುನಾವಣಾ ಆಯೋಗವು ಈ ತಿಂಗಳ ಕೊನೆಯಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ ಮತ್ತು ಚುನಾವಣೆಗಳು ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ.

Continue Reading

ಪ್ರಮುಖ ಸುದ್ದಿ

Narendra Modi : ಭಾರತ್​ ಶಕ್ತಿಯಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ ಮೋದಿ; ಏನಿದು ಮಿಲಿಟರಿ ಶಕ್ತಿ ಪ್ರದರ್ಶನ

Narendra Modi : ರಾಜಸ್ಥಾನದ ಪೋಖ್ರಾನ್​ನಲ್ಲಿ ನಡೆಯಲಿರುವ ಯುದ್ಧ ಪ್ರದರ್ಶನದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಭಾರತದ ಮಿಲಿಟರಿ ಶಕ್ತಿಯ ಸ್ವಾಲಂಬನೆ ಹಾಗೂ ತಾಂತ್ರಿಕ ನೈಪುಣ್ಯತೆಯ ಪ್ರದರ್ಶನವಾಗಿರುವ “ಭಾರತ್​ ಶಕ್ತಿ’ ಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 12 ರಂದು ರಾಜಸ್ಥಾನದ ಪೋಖ್ರಾನ್​​ನಲ್ಲಿ ಈ ಪ್ರದರ್ಶನ ನಡೆಯಲಿದೆ. ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ರಕ್ಷಣಾ ವಿಭಾಗದ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಸೇರಿದಂತೆ ಮೂರು ಸೇನಾ ವಿಭಾಗದ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಪೋಖ್ರಾನ್​ನಲ್ಲಿ ನಡೆಯಲಿರುವ ಯುದ್ಧ ಸಾಮಗ್ರಿಗಳ ಪ್ರದರ್ಶನವು ಪ್ರಧಾನಿ ಮೋದಿಯವರ ‘ಆತ್ಮನಿರ್ಭರ ಭಾರತ್’ ಪರಿಕಲ್ಪನೆಯನ್ನು ಆಧರಿಸಿದೆ. ಅದೇ ರೀತಿ ಮಿಲಿಟರಿ ವ್ಯವಹಾರಗಳಲ್ಲಿ ಭಾರತ ಕೇಂದ್ರಿತ ಉತ್ಪಾದನಾ ಕ್ರಾಂತಿಗೆ ಉತ್ತೇಜನವಾಗಲಿದೆ. ಈ ಪ್ರದರ್ಶನವು ಭಾರತಕ್ಕಿರುವ ಭದ್ರತಾ ಬೆದರಿಕೆಗಳಿಗೆ ಪ್ರತಿ ತಂತ್ರವಾಗಿದೆ.

ಭಾರತೀಯ ನಿರ್ಮಿತ ಯುದ್ಧ ತಂತ್ರಗಳು ಮತ್ತು ನೆಟ್ವರ್ಕ್ ಕೇಂದ್ರಿತ ವ್ಯವಸ್ಥೆಗಳ ಪರಿಣಾಮವನ್ನು ಪರೀಕ್ಷಿಸುವುದು ಮತ್ತು ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಯನ್ನು ಪ್ರದರ್ಶಿಸುವುದು ‘ಭಾರತ್ ಶಕ್ತಿ’ ಯ ಉದ್ದೇಶವಾಗಿದೆ.

ಜಲಾಂತರ್ಗಾಮಿ ಹಡಗು ನಿರ್ಮಾಣ ಮತ್ತು ವಿಮಾನ ಎಂಜಿನ್ ಉತ್ಪಾದನಾ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಕೇಂದ್ರಿತ ಅಭಿವೃದ್ಧಿ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯಲ್ಲಿ ಸ್ವಾವಲಂಬನೆ ಸಾಧಿಸುವ ಪ್ರಧಾನಿ ಮೋದಿಯವರ ದೃಷ್ಟಿಕೋನವಾಗಿದ್ದು, ಅದು ಈ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿದೆ. ವಿಶೇಷವೆಂದರೆ, ಭಾರತೀಯ ಸೇನೆಯು ಶೇಕಡಾ 100 ರಷ್ಟು ಸ್ವದೇಶಿಕವಾಗಿದೆ.

ಇದನ್ನೂ ಓದಿ : Anant Ambani: `ನಾಟು ನಾಟು’ಗೆ ಸಖತ್‌ ಸ್ಟೆಪ್ಸ್‌ ಹಾಕಿದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್‌!

‘ಭಾರತ್ ಶಕ್ತಿ’ ಪ್ರದರ್ಶನವು ಸಂವಹನ ವ್ಯವಸ್ಥೆಗಳು ಮತ್ತು ನೆಟ್ವರ್ಕ್​ಗಳ ದೃಢತೆ ಮತ್ತು ಸಮಗ್ರತೆಗೆ ಸಾಕ್ಷಿಯಾಗಲಿದೆ. ಪ್ರತಿಕೂಲ ಪರಿಸ್ಥಿತಿಗಳಲ್ಲಿ ಹ್ಯಾಕಿಂಗ್ ತಡೆಗೂ ನೆರವಾಗಲಿದೆ. ಈ ಸಮರಾಭ್ಯಾಸವು ಮೂರು ರಕ್ಷಣಾ ವಿಭಾಗಗಳ ಒಟ್ಟು ಶಕ್ತಿಯನ್ನು ಪ್ರದರ್ಶಿಸುತ್ತದೆ.

ತೇಜಸ್ ಯುದ್ಧ ವಿಮಾನ, ಕೆ -9 ಫಿರಂಗಿಗಳು, ದೇಶೀಯ ಡ್ರೋನ್​ಗಳು, ಪಿನಾಕಾ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್​ಗಳು ಮತ್ತು ಕ್ಷಿಪಣಿಗಳನ್ನು ಪ್ರದರ್ಶಿಸಲಾಗುತ್ತದೆ. ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್​ನಲ್ಲಿ ಭಾರತೀಯ ವಾಯುಪಡೆಯ ಅತಿದೊಡ್ಡ ಯುದ್ಧ ವ್ಯಾಯಾಮ ವಾಯುಶಕ್ತಿ -2024 ರಲ್ಲಿ ಭಾಗವಹಿಸಿದ್ದರು. ರಫೇಲ್ ಯುದ್ಧ ವಿಮಾನ ಸೇರಿದಂತೆ 140ಕ್ಕೂ ಹೆಚ್ಚು ವಿಮಾನಗಳು ಮತ್ತು ಹೆಲಿಕಾಪ್ಟರ್​ಗಳು ಈ ಅಭ್ಯಾಸದಲ್ಲಿ ಭಾಗವಹಿಸಿದ್ದವು.

Continue Reading

ದೇಶ

Jayant Chaudhary: ಐಎನ್​ಡಿಐಎ ಮೈತ್ರಿಕೂಟಕ್ಕೆ ಮತ್ತೊಂದು ಹೊಡೆತ; ಎನ್‌ಡಿಎಗೆ ಸೇರ್ಪಡೆಯಾದ ಆರ್‌ಎಲ್‌ಡಿ

Jayant Chaudhary: ಜಯಂತ್‌ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕ ದಳ ಶನಿವಾರ ಅಧಿಕೃತವಾಗಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರ್ಪಡೆಯಾಗಿದೆ.

VISTARANEWS.COM


on

rld
Koo

ನವದೆಹಲಿ: ಲೋಕಸಭಾ ಚುನಾವಣಾ (Lok Sabha election) ಹೊತ್ತಿನಲ್ಲಿ ವಿಪಕ್ಷ ಒಕ್ಕೂಟ ಐಎನ್​ಡಿಐಎಗೆ (INDI Alliance) ಮತ್ತೊಂದು ಹಿನ್ನಡೆಯಾಗಿದೆ. ಜಯಂತ್‌ ಚೌಧರಿ (Jayant Chaudhary) ನೇತೃತ್ವದ ರಾಷ್ಟ್ರೀಯ ಲೋಕ ದಳ (Rashtriya Lok Dal) ಶನಿವಾರ ಅಧಿಕೃತವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ (NDA)ಗೆ ಸೇರ್ಪಡೆಯಾಗಿದೆ. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮೊದಲು ಭೇಟಿಯಾದ ಜಯಂತ್ ಚೌಧರಿ ಅವರು ಸುದೀರ್ಘ ಮಾತುಕತೆ ನಡೆಸಿದ್ದು, ಎನ್​ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲು ಒಪ್ಪಿಗೆ ಸೂಚಿಸಿದರು. ಬಳಿಕ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ʼʼಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಆರ್​ಎಲ್​ಡಿ ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ ಅವರೊಂದಿಗೆ ಸಭೆ ನಡೆಯಿತು. ಎನ್‌ಡಿಎ ಕುಟುಂಬಕ್ಕೆ ಸೇರುವ ಜಯಂತ್ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣ ಮತ್ತು ಉತ್ತರ ಪ್ರದೇಶದ ಅಭಿವೃದ್ಧಿಯಲ್ಲಿ ನೀವು ಪ್ರಮುಖ ಕೊಡುಗೆ ನೀಡುತ್ತೀರಿ ಎಂಬ ವಿಶ್ವಾಸವಿದೆ. ಈ ಬಾರಿ ಎನ್‌ಡಿಎ 400 ದಾಟುತ್ತದೆʼʼ ಎಂದು ಜೆ.ಪಿ.ನಡ್ಡಾ ಬರೆದುಕೊಂಡಿದ್ದಾರೆ.

ಅಮಿತ್‌ ಶಾ ಹೇಳಿದ್ದೇನು?

ಆರ್​ಎಲ್​ಡಿ ಪಕ್ಷವನ್ನು ಅಮಿತ್‌ ಶಾ ಅವರೂ ಸ್ವಾಗತಿಸಿದ್ದಾರೆ. ʼʼರಾಷ್ಟ್ರೀಯ ಲೋಕದಳದ ಅಧ್ಯಕ್ಷ ಜಯಂತ್ ಅವರನ್ನು ನಾನು ಎನ್‌ಡಿಎ ಕುಟುಂಬಕ್ಕೆ ಸ್ವಾಗತಿಸುತ್ತೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೀತಿಗಳಲ್ಲಿ ವಿಶ್ವಾಸವನ್ನು ಇರಿಸಿ ಅವರು ಎನ್​ಡಿಎಗೆ ಸೇರ್ಪಡೆಯಾಗಿದ್ದಾರೆ. ಇದರಿಂದ ರೈತರು, ಬಡವರು ಮತ್ತು ವಂಚಿತ ವರ್ಗಗಳ ಉನ್ನತಿಗಾಗಿ ಸಂಕಲ್ಪ ತೊಟ್ಟಿರುವ ನಮಗೆ ಇನ್ನಷ್ಟು ಬಲ ಸಿಕ್ಕಂತಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400 ಸೀಟ್‌ ದಾಟಲಿದೆʼʼ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಜಯಂತ್‌ ಚೌಧರಿ ಹೇಳಿದ್ದೇನು?

ಎನ್‌ಡಿಎ ಸೇರ್ಪಡೆಯ ತಮ್ಮ ನಿರ್ಧಾರವನ್ನು ಜಯಂತ್‌ ಚೌಧರಿ ಸಮರ್ಥಿಸಿಕೊಂಡಿದ್ದಾರೆ. ʼʼನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಗೊಳ್ಳಲಿದೆ. ಜತೆಗೆ ಬಡವರ ಏಳಿಗೆಯೂ ಆಗಲಿದೆ. ಅಮಿತ್‌ ಶಾ ಮತ್ತು ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲು ನಿರ್ಧರಿಸಿದೆ. ಅಭಿವೃದ್ಧಿ ಹೊಂದಿದ ದೇಶದ ಕನಸನ್ನು ಎನ್‌ಡಿಎ ನನಸು ಮಾಡಲಿದೆʼʼ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Bharat Ratna: ಚೌಧರಿಗೆ ಭಾರತರತ್ನ ಘೋಷಣೆ ಬೆನ್ನಲ್ಲೇ ಬಿಜೆಪಿ ಜತೆ ಮೈತ್ರಿ ಎಂದ ಆರ್‌ಎಲ್‌ಡಿ!

ಇಂಡಿಯಾ ಸಖ್ಯ ತೊರೆಯುವ ನಿರ್ಧಾರ ತಿಳಿಸಿದ್ದ ಚೌಧರಿ

ಐಎನ್​ಡಿಐಎ ಜತೆಗಿನ ಮೈತ್ರಿ ಮುರಿದುಕೊಂಡ ಆರ್‌ಎಲ್‌ಡಿ ಕೆಲವು ದಿನಗಳ ಹಿಂದೆ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಳ್ಳುವುದಾಗಿ ಘೋಷಿಸಿತ್ತು. ಜನರಿಗೆ ಒಳ್ಳೆಯದನ್ನು ಮಾಡುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಜಯಂತ್ ಚೌಧರಿ ಸ್ಪಷ್ಟನೆ ನೀಡಿದ್ದರು. ಕೆಲವು ದಿನಗಳ ಹಿಂದೆ ನಿತೀಶ್‌ ಕುಮಾರ್‌ ಐಎನ್​ಡಿಐಎ ಮೈತ್ರಿ ತೊರೆದಿದ್ದರು. ಅದಾದ ಬಳಿಕ ಜಯಂತ್ ಚೌಧರಿಯೂ ಹೊರ ಬಂದಿದ್ದು, ಚುನಾವಣೆ ಸಮಯದಲ್ಲಿ ಐಎನ್​ಡಿಐಎಗೆ ಮತ್ತಷ್ಟು ಆಘಾತ ಎದುರಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

ಕೇಂದ್ರ ಸರ್ಕಾರದ ಮಧ್ಯಸ್ಥಿಕೆಗೆ ಮಣಿದ ಗೂಗಲ್;‌ ಭಾರತದ ಆ್ಯಪ್‌ಗಳ ರಿಸ್ಟೋರ್‌

ಅಧಿಕ ಸೇವಾ ಶುಲ್ಕ ವಿಧಿಸಿದ್ದ ಗೂಗಲ್‌ ಕಂಪನಿಯ ನಿರ್ಧಾರವನ್ನು ಭಾರತದ ಕಂಪನಿಗಳು ವಿರೋಧಿಸಿದ್ದವು. ಇದೇ ಕಾರಣಕ್ಕೆ ಗೂಗಲ್‌ ಸಂಸ್ಥೆಯು ಭಾರತದ ಕಂಪನಿಗಳ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿತ್ತು. ಹಾಗಾಗಿ, ಅಶ್ವಿನಿ ವೈಷ್ಣವ್‌ ಮಧ್ಯಪ್ರವೇಶಿಸಿದ್ದರು.

VISTARANEWS.COM


on

Ashwini Vaishnaw And Google
Koo

ನವದೆಹಲಿ: ಅಧಿಕ ಸೇವಾ ಶುಲ್ಕ ವಿಧಿಸಿದ್ದನ್ನು ವಿರೋಧಿಸಿದ್ದಕ್ಕೇ ಭಾರತದ ಕಂಪನಿಗಳ (Indian Companies) ಹಲವು ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ (Play Store) ತೆಗೆದುಹಾಕಿದ್ದ ಗೂಗಲ್‌ ಈಗ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಮಣಿದಿದೆ. ಮ್ಯಾಟ್ರಿಮೋನಿ, ನೌಕ್ರಿ.ಕಾಮ್‌ ಸೇರಿ ಭಾರತದ ಹಲವು ಆ್ಯಪ್‌ಗಳನ್ನು ಗೂಗಲ್‌ ರಿಸ್ಟೋರ್‌ ಮಾಡಿದೆ. ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ಅವರು ಮಧ್ಯಸ್ಥಿಕೆ ವಹಿಸಿ, ಸೋಮವಾರ ಗೂಗಲ್‌ ಪ್ರತಿನಿಧಿಗಳ ಸಭೆ ಕರೆದಿದ್ದರು. ಆದರೆ, ಸಭೆಗೂ ಮುನ್ನವೇ ಆ್ಯಪ್‌ಗಳನ್ನು ಗೂಗಲ್‌ ರಿಸ್ಟೋರ್‌ ಮಾಡಿದೆ ಎಂದು ತಿಳಿದುಬಂದಿದೆ.

“ಭಾರತವು ಭಾರಿ ಬೆಳವಣಿಗೆ ಹೊಂದಿರುವ ಸ್ಟಾರ್ಟಪ್‌ಗಳ ಎಕೋಸಿಸ್ಟಮ್‌ ಹೊಂದಿದೆ. ಹಾಗಾಗಿ, ಭಾರತೀಯ ಕಂಪನಿಗಳ ಹಿತ ಕಾಪಾಡುವುದು ಮುಖ್ಯವಾಗಿದೆ. ಇದೇ ದಿಸೆಯಲ್ಲಿ, ಸೋಮವಾರ ಗೂಗಲ್‌ ಕಂಪನಿಯ ಪ್ರತಿನಿಧಿಗಳೊಂದಿಗೆ ಸಭೆ ಕರೆಯಲಾಗಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಸಭೆಯ ಉದ್ದೇಶವಾಗಿದೆ” ಎಂದು ಅಶ್ವಿನಿ ವೈಷ್ಣವ್‌ ತಿಳಿಸಿದ್ದರು. ಹಾಗೆಯೇ, ಗೂಗಲ್‌ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಸಭೆಗೂ ಮುನ್ನವೇ ಗೂಗಲ್‌ ರಿಸ್ಟೋರ್‌ ಮಾಡಿದೆ.

ಗೂಗಲ್‌ ತೆಗೆದುಹಾಕಿದ್ದ ಆ್ಯಪ್‌ಗಳಿವು

  1. ಭಾರತ್‌ ಮ್ಯಾಟ್ರಿಮೋನಿ- ಡೇಟಿಂಗ್‌, ವಧು-ವರರ ವೇದಿಕೆ
  2. ಟ್ರೂಲಿ ಮ್ಯಾಡ್ಲಿ- ಡೇಟಿಂಗ್‌
  3. ಕ್ವ್ಯಾಕ್‌ ಕ್ವ್ಯಾಕ್‌ – ಡೇಟಿಂಗ್‌ ಸೈಟ್‌
  4. ಸ್ಟೇಜ್-‌ ಒಟಿಟಿ ಪ್ಲಾಟ್‌ಫಾರ್ಮ್‌
  5. ಕುಕು ಎಫ್‌ಎಂ- ಒಟಿಟಿ ಪಾಡ್‌ಕಾಸ್ಟ್‌
  6. ಜೀವನ್‌ಸಾಥಿ.ಕಾಮ್-‌ ಡೇಟಿಂಗ್‌, ಮ್ಯಾಚ್‌ ಮೇಕಿಂಗ್‌
  7. 99 ಎಕರ್ಸ್-‌ ಪ್ರಾಪರ್ಟಿ ಟ್ರೇಡಿಂಗ್‌
  8. ನೌಕ್ರಿ.ಕಾಮ್‌- ಉದ್ಯೋಗ ನೇಮಕಾತಿ

ಏನಿದು ಪ್ರಕರಣ?

ಗೂಗಲ್‌ ಸಂಸ್ಥೆಯು ಇತ್ತೀಚೆಗೆ ಆ್ಯಪ್‌ಗಳಿಗೆ ಶೇ.11ರಿಂದ ಶೇ.26ರಷ್ಟು ಸೇವಾ ಶುಲ್ಕವನ್ನು ವಿಧಿಸಲು ಮುಂದಾಗಿದ್ದು, ಇದನ್ನು ಭಾರತದ ಕಂಪನಿಗಳು ವಿರೋಧಿಸಿದ್ದವು. ಇದರಿಂದ ಕುಪಿತಗೊಂಡಿದ್ದ ಗೂಗಲ್‌ ಸಂಸ್ಥೆಯು ಭಾರತದ ಕಂಪನಿಗಳ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಿತ್ತು. ಇದು ಈಗ ಹೊಸ ವಿವಾದಕ್ಕೆ ಕಾರಣವಾಗಿದ್ದು, ಕೇಂದ್ರ ಸರ್ಕಾರವು ಮಧ್ಯಸ್ಥಿಕೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಡಿ ಇಟ್ಟಿತ್ತು. ಈಗ ಮಧ್ಯಸ್ಥಿಕೆಯು ಫಲಪ್ರದವಾಗಿದ್ದು, ಭಾರತದ ಕಂಪನಿಗಳು ನಿಟ್ಟುಸಿರು ಬಿಟ್ಟಿವೆ.

ಇದನ್ನೂ ಓದಿ: Matrimony Apps: ಮ್ಯಾಟ್ರಿಮೋನಿ ಆ್ಯಪ್ ಇನ್ನಿಲ್ಲ; ಆನ್‌ಲೈನ್‌ನಲ್ಲಿ ಇನ್ನು ಸಂಗಾತಿ ಸಿಗಲ್ಲ!

ಗೂಗಲ್‌ ಕ್ರಮವನ್ನು ಕಂಪನಿಗಳು ಖಂಡಿಸಿದ್ದವು. “ನಿಯಮಗಳ ಉಲ್ಲಂಘನೆಯಾಗಿದೆ ಎಂದು ಗೂಗಲ್‌ ಕಂಪನಿಯು ನೋಟಿಸ್‌ ನೀಡುತ್ತಿದೆ. ಮ್ಯಾಟ್ರಿಮೋನಿ ಸರಣಿಯ ಒಂದೊಂದೇ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಡಿಲೀಟ್ ಮಾಡಲಾಗುತ್ತಿದೆ. ಭಾರತದ ಇಂಟರ್‌ನೆಟ್‌ ಕ್ಷೇತ್ರದಲ್ಲಿ ಇದೊಂದು ಕರಾಳ ದಿನ” ಎಂದು ಮ್ಯಾಟ್ರಿಮೋನಿ ಸಂಸ್ಥಾಪಕ ಮುರುಗಾವೇಲ್‌ ಜಾನಕಿರಾಮ್‌ ಅವರು ಬೇಸರ ವ್ಯಕ್ತಪಡಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Chaithra Hebbar News found
ದಕ್ಷಿಣ ಕನ್ನಡ7 mins ago

Chaithra Hebbar : ಚೈತ್ರಾ ಹೆಬ್ಬಾರ್‌ ಮಿಸ್ಸಿಂಗ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್‌; ಪ್ರಿಯಕರ ಹಿಮಾಚಲದಲ್ಲಿ; ಅವಳೆಲ್ಲಿ?

Shah Rukh Khan chants Jai Shri Ram at Anant-Radhika pre-wedding
ಬಾಲಿವುಡ್9 mins ago

Shah Rukh Khan: ಅಂಬಾನಿ ಮಗನ ಮದುವೆ: ʻಜೈ ಶ್ರೀ ರಾಮ್’ ಎಂದ ಶಾರುಖ್‌ ಖಾನ್‌!

Modi sha
ದೇಶ15 mins ago

BJP Candidates List : ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಪಡೆದ ಘಟಾನುಘಟಿ ನಾಯಕರಿವರು…

operation
ವೈರಲ್ ನ್ಯೂಸ್41 mins ago

Viral News: ವೈದ್ಯರ ಎಡವಟ್ಟು; ಪಿತ್ತಕೋಶದ ಶಸ್ತ್ರಚಿಕಿತ್ಸೆ ಬದಲು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದರು !

Illicit relationship mysore.webp
ಮೈಸೂರು48 mins ago

Illicit Relationship : ಅನೈತಿಕ ಸಂಬಂಧ ಪ್ರಶ್ನಿಸಿದ ಪತ್ನಿಗೆ ಮನೆಯಿಂದ್ಲೇ ಹೊರಗಟ್ಟಿದ ಭೂಪ

Narendra Modi
ಪ್ರಮುಖ ಸುದ್ದಿ51 mins ago

Narendra Modi : ಭಾರತ್​ ಶಕ್ತಿಯಲ್ಲಿ ಭಾಗಿಯಾಗಲಿದ್ದಾರೆ ಪ್ರಧಾನಿ ಮೋದಿ; ಏನಿದು ಮಿಲಿಟರಿ ಶಕ್ತಿ ಪ್ರದರ್ಶನ

SRK Aamir Salman Come Together For Performance Anant Wedding
ಬಾಲಿವುಡ್1 hour ago

Anant Ambani: `ನಾಟು ನಾಟು’ಗೆ ಸಖತ್‌ ಸ್ಟೆಪ್ಸ್‌ ಹಾಕಿದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್‌!

Sangeeta Phoghat
ಕ್ರೀಡೆ2 hours ago

Sangeeta Phogat : ಯಜ್ವೇಂದ್ರ ಚಹಲ್​ ಎತ್ತಿ ಹೆಗಲ ಮೇಲೆ ಕೂರಿಸಿದ ಸಂಗೀತಾ ಫೋಗಟ್​​, ಇಲ್ಲಿದೆ ವಿಡಿಯೊ

rld
ದೇಶ2 hours ago

Jayant Chaudhary: ಐಎನ್​ಡಿಐಎ ಮೈತ್ರಿಕೂಟಕ್ಕೆ ಮತ್ತೊಂದು ಹೊಡೆತ; ಎನ್‌ಡಿಎಗೆ ಸೇರ್ಪಡೆಯಾದ ಆರ್‌ಎಲ್‌ಡಿ

Actor Yash Fan Who Injured By Followers Car Police Complaint
ಸ್ಯಾಂಡಲ್ ವುಡ್2 hours ago

Actor Yash: ಯಶ್ ಬೆಂಗಾವಲು ವಾಹನ ಹರಿದು ಗಾಯಗೊಂಡಿದ್ದ ಯುವಕನಿಂದ ದೂರು

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for march 3rd 2024
ಭವಿಷ್ಯ6 hours ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು17 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು21 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು2 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ5 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ಟ್ರೆಂಡಿಂಗ್‌