Heart Failure: ಕೋವಿಡ್ ನಂತರ 30 ವರ್ಷದೊಳಗಿನವರ ಹಾರ್ಟ್‌ಫೇಲ್‌ ಶೇ.40 ಏರಿಕೆ! - Vistara News

ಆರೋಗ್ಯ

Heart Failure: ಕೋವಿಡ್ ನಂತರ 30 ವರ್ಷದೊಳಗಿನವರ ಹಾರ್ಟ್‌ಫೇಲ್‌ ಶೇ.40 ಏರಿಕೆ!

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ನೀಡಿದ ವಾರ್ಷಿಕ ವರದಿ (NCRB records) ʼಭಾರತದಲ್ಲಿ ಅಪಘಾತ ಸಾವುಗಳು ಮತ್ತು ಆತ್ಮಹತ್ಯೆಗಳು’ ಇದರಲ್ಲಿ ಈ ಆತಂಕಕಾರಿ ಅಂಕಿ ಅಂಶಗಳು ಕಂಡುಬಂದಿವೆ.

VISTARANEWS.COM


on

heart attack
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನರಲ್ಲಿ ಹೃದಯಾಘಾತದ (Heart Attack) ಸಾವುಗಳು (Heart Failure, heart attack death) 2018 ಮತ್ತು 2022ರ ನಡುವೆ 40%ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಒಟ್ಟಾರೆಯಾಗಿ ಈ ಅವಧಿಯಲ್ಲಿ ಹೃದಯಾಘಾತದ ಸಾವುಗಳಲ್ಲಿ 26%ರಷ್ಟು ಹೆಚ್ಚಳ ಕಂಡುಬಂದಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ನೀಡಿದ ವಾರ್ಷಿಕ ವರದಿ (NCRB records) ʼಭಾರತದಲ್ಲಿ ಅಪಘಾತ ಸಾವುಗಳು ಮತ್ತು ಆತ್ಮಹತ್ಯೆಗಳು’ ಇದರಲ್ಲಿ ಈ ಆತಂಕಕಾರಿ ಅಂಕಿ ಅಂಶಗಳು ಕಂಡುಬಂದಿವೆ.

2022ರಲ್ಲಿ 32,410 ಜನರ ಸಾವಿಗೆ ಕಾರಣವಾದ 32,457 ಹೃದಯಾಘಾತ ಘಟನೆಗಳು ಸಂಭವಿಸಿವೆ. 2018ರಲ್ಲಿ 25,764 ಹೃದಯಾಘಾತದ ಸಾವುಗಳು ಸಂಭವಿಸಿವೆ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ, ಹೃದಯಾಘಾತದ ಸಾವುಗಳು 2018ರಲ್ಲಿ 2,371 ಇತ್ತು. 2022ರಲ್ಲಿ ಅದು 3,329ಕ್ಕೆ ಏರಿದೆ. 30 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೃದಯಾಘಾತದ ಸಾವುಗಳು 23,392ರಿಂದ 29,081ಕ್ಕೆ ಏರಿದೆ ಎಂದು ವರದಿ ಹೇಳಿದೆ.

ಎನ್‌ಸಿಆರ್‌ಬಿ ಹಠಾತ್ ಸಾವುಗಳ ಪ್ರಕರಣಗಳ ಅಡಿಯಲ್ಲಿ ಹೃದಯಾಘಾತದ ಸಾವುಗಳನ್ನು ಎಣಿಕೆ ಮಾಡುತ್ತದೆ. ಹಿಂಸಾಚಾರವನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣದಿಂದ ದಿಡೀರ್‌ ಎಂದು ಸಂಭವಿಸುವ ಅನಿರೀಕ್ಷಿತ ಸಾವುಗಳ ಲೆಕ್ಕವಿಡುತ್ತದೆ. ದೇಶಾದ್ಯಂತ ಹಠಾತ್ ಸಾವಿನ ಪ್ರಕರಣಗಳು ಕಳೆದ ಐದು ವರ್ಷಗಳಲ್ಲಿ 23%ರಷ್ಟು ಹೆಚ್ಚಿವೆ. 2018ರಲ್ಲಿ 46,003ರಿಂದ 2022ರಲ್ಲಿ 56,653ಕ್ಕೆ ಅದು ಏರಿದೆ.

2022ರಲ್ಲಿ, ಹಠಾತ್ ಸಾವುಗಳು ಒಟ್ಟು ಅಪಘಾತದ ಸಾವುಗಳಲ್ಲಿ 13.4%ನಷ್ಟಿದೆ. ಟ್ರಾಫಿಕ್ ಅಪಘಾತಗಳ ನಂತರ ಇದು ಎರಡನೇ ಸ್ಥಾನದಲ್ಲಿದೆ. ಅಪಘಾತದ ಸಾವುಗಳಲ್ಲಿ ಇದು 46%ದಷ್ಟಿದೆ. 2014ರಿಂದ ದೇಶದಲ್ಲಿ ಪುರುಷರು ಮತ್ತು ಮಹಿಳೆಯರಲ್ಲಿ ಹಠಾತ್ ಸಾವಿನ ಪ್ರಕರಣಗಳಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ. 2012ಕ್ಕೆ ಹೋಲಿಸಿದರೆ 2022ರಲ್ಲಿ ಹಠಾತ್ ಸಾವಿನ ಪ್ರಕರಣಗಳು ದ್ವಿಗುಣಗೊಂಡಿದೆ.

ಹಠಾತ್ ಸಾವುಗಳಲ್ಲಿ ಹೃದಯಾಘಾತ ಗಮನಾರ್ಹ ಪಾಲನ್ನು ಹೊಂದಿದೆ. 2012ರಿಂದ ಹೃದಯಾಘಾತದ ಸಾವಿನಲ್ಲೂ ಜಿಗಿತ ಕಂಡುಬಂದಿದೆ. ಸಾವುನೋವುಗಳು 2012ರಲ್ಲಿ 18,522ರಿಂದ 2022ರಲ್ಲಿ 32,410ಕ್ಕೆ ಅಂದರೆ 75%ರಷ್ಟು ಹೆಚ್ಚಾಗಿದೆ.

2012ರಿಂದ ಮಹಾರಾಷ್ಟ್ರವು ರಾಜ್ಯಗಳಲ್ಲಿ ಅತಿ ಹೆಚ್ಚು ಹೃದಯಾಘಾತ ಸಾವುಗಳನ್ನು ವರದಿ ಮಾಡಿದೆ. ಮಹಾರಾಷ್ಟ್ರದ ಹೊರತಾಗಿ ಕಳೆದ 10 ವರ್ಷಗಳಲ್ಲಿ ಕೇರಳವು ಗಮನಾರ್ಹ ಏರಿಕೆಯನ್ನು ವರದಿ ಮಾಡಿದ ಮತ್ತೊಂದು ರಾಜ್ಯ. ಕಳೆದ ಕೆಲವು ವರ್ಷಗಳಿಂದ, ಭಾರತದಾದ್ಯಂತ ವರದಿಯಾದ ಹೃದಯಾಘಾತ ಸಾವುಗಳಲ್ಲಿ ಅರ್ಧದಷ್ಟಕ್ಕೆ ಈ ಎರಡು ರಾಜ್ಯಗಳು ಕಾರಣವಾಗಿವೆ.

ಕೋವಿಡ್-19 ನಂತರ ಹಠಾತ್ ಸಾವುಗಳು ಹೆಚ್ಚಾಗುತ್ತಿರುವುದು ವರದಿಯಾಗಿವೆ. ಆದರೆ ಅಂತಹ ಸಾವುಗಳಿಗೆ ಕಾರಣವನ್ನು ಖಚಿತಪಡಿಸಲು ಸಾಕಷ್ಟು ಪುರಾವೆಗಳು ಲಭ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇತ್ತೀಚೆಗೆ ಲೋಕಸಭೆಗೆ ತಿಳಿಸಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಸಜ್ದಾ ಅಹ್ಮದ್ ಅವರು ದೇಶದಲ್ಲಿ ಕೋವಿಡ್ ಲಸಿಕೆ ಮತ್ತು ಹೃದಯಾಘಾತದ ನಡುವಿನ ಸಂಬಂಧದ ಬಗ್ಗೆ ಪ್ರಶ್ನಿಸಿದ್ದರು.

ಕೋವಿಡ್-19 ರ ನಂತರ ಹೆಚ್ಚುತ್ತಿರುವ ಹೃದಯ ಸ್ತಂಭನ ಪ್ರಕರಣಗಳ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ (NIE) ಅಧ್ಯಯನವನ್ನು ನಡೆಸಿವೆ. ಮೇ- ಆಗಸ್ಟ್ 2023ರ ಅವಧಿಯಲ್ಲಿ 19 ರಾಜ್ಯಗಳು/UTಗಳಾದ್ಯಂತ ಇರುವ 47 ತೃತೀಯ ಆರೈಕೆ ಆಸ್ಪತ್ರೆಗಳಲ್ಲಿ ಇದನ್ನು ನಡೆಸಲಾಗಿದೆ.

18-45 ವರ್ಷ ವಯಸ್ಸಿನ, ಯಾವುದೇ ಕೊಮೊರ್ಬಿಡಿಟಿ ಕಾಯಿಲೆಗಳಿಲ್ಲದ ಜನರ ಹಠಾತ್‌ ಸಾವುಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಕೋವಿಡ್- 19 ವ್ಯಾಕ್ಸಿನೇಷನ್, ಸೋಂಕು, ಕೋವಿಡ್-19 ನಂತರದ ಪರಿಸ್ಥಿತಿಗಳು, ಕುಟುಂಬದ ಆರೋಗ್ಯ ಇತಿಹಾಸ, ಧೂಮಪಾನ, ಮಾದಕವಸ್ತು ಬಳಕೆ, ಮದ್ಯಸೇವನೆ, ತೀವ್ರ ದೈಹಿಕ ಚಟುವಟಿಕೆ ಇತ್ಯಾದಿಗಳ ಬಗ್ಗೆಯೂ ಮಾಹಿತಿ ಕಲೆಹಾಕಲಾಗಿದೆ. ಕೋವಿಡ್- 19 ಲಸಿಕೆಯು ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಅಧ್ಯಯನವು ತಿಳಿಸಿದೆ. ಹಠಾತ್ ಸಾವಿನ ಕುಟುಂಬದ ಇತಿಹಾಸ ಮತ್ತು ಕೆಲವು ಜೀವನಶೈಲಿ ನಡವಳಿಕೆಗಳು ಈ ಹಠಾತ್ ಸಾವಿನ ಸಾಧ್ಯತೆಯನ್ನು ಹೆಚ್ಚಿಸಿವೆ ಎಂದಿದೆ.

ಇದನ್ನೂ ಓದಿ: ನಿಲ್ಲುತ್ತಿದೆ ಮಕ್ಕಳ ಹೃದಯ! ಹೆಚ್ಚಾಯ್ತು ಅಲ್ಪಾಯುಷ್ಯದ ಭಯ; ಹೃದಯಾಘಾತಕ್ಕೆ ಮತ್ತೊಬ್ಬ ವಿದ್ಯಾರ್ಥಿ ಬಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

New Cancer Drug: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕ್ರಾಂತಿ; ಹೊಸ ಔಷಧ ಪ್ರಯೋಗ ಶೇ. 100 ಯಶಸ್ವಿ!

ಕ್ಯಾನ್ಸರ್ ಗೆ ಹೊಸ ಔಷಧವೊಂದನ್ನು (New Cancer Drug) ಕಂಡುಹಿಡಿಯಲಾಗಿದ್ದು, ಇದು ಶೇಕಡ ನೂರರಷ್ಟು ಪರಿಣಾಮಕಾರಿಯಾಗಿದೆ. ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್ಎಲ್ ವೈ ಹೆಸರಿನ ಕ್ಯಾನ್ಸರ್ ಔಷಧ ಗುದನಾಳದ ಕ್ಯಾನ್ಸರ್ ಹೊಂದಿದ್ದ 42 ರೋಗಿಗಳಿಗೆ ಪರೀಕ್ಷಿಸಲಾಗಿದ್ದು, ಎಲ್ಲರ ಕ್ಯಾನ್ಸರ್ ಗೆಡ್ಡೆಗಳನ್ನು ಅದು ಯಶಸ್ವಿಯಾಗಿ ತೆಗೆದುಹಾಕಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಅಭೂತಪೂರ್ವ ಯಶಸ್ಸು ಎಂದೇ ಹೇಳಬಹುದು.

VISTARANEWS.COM


on

By

New Cancer Drug
Koo

ಕ್ಯಾನ್ಸರ್‌ಗೆ (cancer) ಹೊಸ ಔಷಧವೊಂದನ್ನು (New Cancer Drug) ಕಂಡುಹಿಡಿಯಲಾಗಿದ್ದು, ಇದು ಶೇಕಡ ನೂರರಷ್ಟು ಪರಿಣಾಮಕಾರಿ ಎಂದು ವಿಜ್ಞಾನಿಗಳು (Scientists) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್ಎಲ್ ವೈ (Jemperli-dostarlimab-gxly) ಎಂಬ ಹೆಸರಿನ ಕ್ಯಾನ್ಸರ್ ಗುಣಪಡಿಸುವ ಔಷಧ ಗುದನಾಳದ ಕ್ಯಾನ್ಸರ್ (colorectal cancers) ಹೊಂದಿದ್ದ 42 ರೋಗಿಗಳಿಗೆ ಪರೀಕ್ಷಿಸಲಾಗಿದ್ದು, ಎಲ್ಲರ ಕ್ಯಾನ್ಸರ್ ಗಡ್ಡೆಗಳನ್ನು ಅದು ಯಶಸ್ವಿಯಾಗಿ ತೆಗೆದುಹಾಕಿದೆ ಎಂದು ಹೇಳಿದ್ದಾರೆ. ಎರಡನೇ ಹಂತದಲ್ಲಿ ಈ ಔಷಧ ಪ್ರಯೋಗ ಯಶಸ್ವಿಯಾಗಿದ್ದು, ಔಷಧವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಗುದನಾಳದ ಕ್ಯಾನ್ಸರ್ ಅನ್ನು ಕೊಲೊರೆಕ್ಟಲ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಎರಡನೇ ಹಂತದ ಔಷಧ ಪ್ರಯೋಗದ ಬಳಿಕ ಮೊದಲ 24 ರೋಗಿಗಳಲ್ಲಿ ಉತ್ತಮ ಚೇತರಿಕೆ ಕಂಡು ಬಂದಿದೆ. ಸುಮಾರು ಎರಡು ವರ್ಷದ ಬಳಿಕ ಅವರಲ್ಲಿ ಯಾವುದೇ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದಿಲ್ಲ.

ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ಆಂಕೊಲಾಜಿಸ್ಟ್ ಡಾ. ಆಂಡ್ರಿಯಾ ಸೆರ್ಸೆಕ್ ಅವರ ಪ್ರಕಾರ Dostarlimab-gxly ಕ್ಯಾನ್ಸರ್ ಔಷಧವು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವಲ್ಲಿ ಉತ್ತಮ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ಮತ್ತು ವಿಕಿರಣದ ಅಗತ್ಯ ಮೊದಲ ಹಂತದಲ್ಲಿ ನೀಡಲಾಗುತ್ತದೆ. ಇದು ಚಿಕಿತ್ಸಾ ಆಯ್ಕೆಯ ಭರವಸೆಯನ್ನು ನೀಡುತ್ತದೆ, ಇವೆರಡೂ ಜೀವನದ ಗುಣಮಟ್ಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಅಡ್ಡ ಪರಿಣಾಮ ಕಡಿಮೆ

ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಸಾಮಾನ್ಯವಾಗಿ ಕರುಳು, ಮೂತ್ರ, ಲೈಂಗಿಕ ಕ್ರಿಯೆಯಲ್ಲಿ ತೊಂದರೆ, ಎರಡನೇ ಬಾರಿ ಮತ್ತೆ ಕ್ಯಾನ್ಸರ್ ಬರುವ ಅಪಾಯ ಮತ್ತು ಬಂಜೆತನವನ್ನು ಉಂಟು ಮಾಡುತ್ತದೆ. ಇದು ಜೀವನದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸಲು ಇಮ್ಯುನೊಥೆರಪಿಯನ್ನು ಬಳಸಿಕೊಂಡು ಈ ಔಷಧವು ಕಾರ್ಯನಿರ್ವಹಿಸುತ್ತದೆ. ಇದು ಸಾಂಪ್ರದಾಯಿಕ ಕಿಮೊಥೆರಪಿಗಿಂತ ಭಿನ್ನವಾಗಿದೆ. ಈ ಔಷಧವು ಅತ್ಯಂತ ಕಡಿಮೆ ಅಡ್ಡಪರಿಣಾಮಗಳನ್ನು ತೋರಿಸಿದೆ.

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕ್ರಾಂತಿ

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದೊಂದು ಕ್ರಾಂತಿಯನ್ನು ಉಂಟು ಮಾಡಿದೆ. ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್ಎಲ್ ವೈ ಔಷಧದ ಪರಿಣಾಮಗಳ ಕುರಿತು ತಿಳಿದುಕೊಳ್ಳಲು ವಿವಿಧ ಕೊಲೊರೆಕ್ಟಲ್ ಕ್ಯಾನ್ಸರ್ ಮೇಲೆ ಪ್ರಯೋಗಗಳನ್ನು ಮುಂದುವರಿಸಲಾಗುತ್ತದೆ.

ಎರಡನೇ ಹಂತದ ಯಶಸ್ವಿ ಪ್ರಯೋಗದ ಬಳಿಕ ಜೆಂಪರ್ಲಿ ದೋಸ್ಟರಲಿಮ್ಬ್-ಜಿಎಕ್ಸ್ಎಲ್ ವೈ ಅನ್ನು ಚಿಕಾಗೋದ 2024 ರ ಅಮೆರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ (ASCO) ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು.

ಕಳೆದ ವರ್ಷ ಎಂಡೊಮೆಟ್ರಿಯಲ್ ಕ್ಯಾನ್ಸರ್ ಗೆ ಕಿಮೊಥೆರಪಿ ಜೊತೆಗೆ ಪೂರಕ ಚಿಕಿತ್ಸೆಯಾಗಿ ಔಷಧೀಯ ಕಂಪೆನಿಯಾದ ಎಫ್ ಡಿಎಯಿಂದ ಔಷಧವನ್ನು ಅನುಮೋದಿಸಲಾಗಿದೆ. ಇದೀಗ ಔಷಧೀಯ ಕಂಪೆನಿ ಜಿಎಸ್ ಕೆ ಇತರ ರೀತಿಯ ಕೊಲೊರೆಕ್ಟಲ್ ಕ್ಯಾನ್ಸರ್‌ಗಳ ಅಧ್ಯಯನವನ್ನು ನಡೆಸುತ್ತಿದೆ.

ಔಷಧ ಪ್ರಯೋಗದ ಕುರಿತು ಪ್ರತಿಕ್ರಿಯಿಸಿರುವ ಜಿಎಸ್‌ಕೆ ಹಿರಿಯ ಉಪಾಧ್ಯಕ್ಷ ಅಬ್ದುಲ್ಲಾ ಹೆಶಮ್, 42 ರೋಗಿಗಳಲ್ಲಿ ಔಷಧ ಬೀರಿರುವ ಪರಿಣಾಮ ಅತ್ಯದ್ಭುತವಾಗಿದೆ. ಈ ಫಲಿತಾಂಶಗಳು ನಮ್ಮನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಹೆಜ್ಜೆ ಹತ್ತಿರಕ್ಕೆ ತಂದಿದೆ ಎಂದು ತಿಳಿಸಿದ್ದಾರೆ.

ಈ ಚಿಕಿತ್ಸೆಯ ಉದ್ದೇಶ ಮತ್ತು ವಿಧಾನಗಳ ಬಗ್ಗೆ ರೋಗಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಪ್ರಯೋಗಗಳನ್ನು ಮುಂದುವರಿಸಲಾಗಿದೆ. ಕೆಲವು ಕೊಲೊರೆಕ್ಟಲ್ ಕ್ಯಾನ್ಸರ್‌ಗಳಲ್ಲಿ dostarlimabgxly ಮೌಲ್ಯಮಾಪನ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಔಷಧದಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ ಎಂದು ಜಿಎಸ್ ಕೆ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

Continue Reading

ಆರೋಗ್ಯ

Vitamin A: ವಿಟಮಿನ್‌ ಎ ಕೊರತೆಯಾದರೆ ಏನಾಗುತ್ತದೆ?

ಹಳದಿ, ಹಸಿರು, ಕಿತ್ತಳೆ, ಕೇಸರಿ, ಕೆಂಪು ಬಣ್ಣದ ಆಹಾರಗಳನ್ನು ತಿನ್ನಬೇಕೆಂದು ಪೋಷಕಾಂಶ ತಜ್ಞರು ಹೇಳಿದ್ದನ್ನು ಕೇಳಿರಬಹುದು. ಇಂಥ ಬಹುತೇಕ ಆಹಾರಗಳಿಂದ ಎ ಜೀವಸತ್ವ ಭರಪೂರ ದೊರೆಯುತ್ತದೆ. ಒಂದೊಮ್ಮೆ ವಿಟಮಿನ್‌ ಎ (Vitamin A) ಕೊರತೆಯಾದರೆ ಏನಾಗುತ್ತದೆ? ಏನದರ ಲಕ್ಷಣಗಳು? ಎಲ್ಲ ಮಾಹಿತಿಯಿದೆ ಈ ಲೇಖನದಲ್ಲಿ.

VISTARANEWS.COM


on

Vitamin A
Koo

ನಮ್ಮ ದೇಹ ಸರಿಯಾಗಿ ಕೆಲಸ ಮಾಡುವುದಕ್ಕೆ ಹಲವಾರು ಜೀವಸತ್ವಗಳು ಅಗತ್ಯ ಪ್ರಮಾಣದಲ್ಲಿ ಶರೀರಕ್ಕೆ ದೊರೆಯಬೇಕು. ಅವುಗಳಲ್ಲಿ ವಿಟಮಿನ್‌ ಎ ಸಹ ಒಂದು. ಇದು ದೃಷ್ಟಿ ಚುರುಕಾಗಿ ಇರುವುದಕ್ಕೆ, ಪ್ರತಿರೋಧಕ ಶಕ್ತಿಗೆ ಮತ್ತು ಚರ್ಮ, ಕೂದಲುಗಳ ಆರೋಗ್ಯಕ್ಕೆ ಅಗತ್ಯ. ಮಾತ್ರವಲ್ಲ, ಶ್ವಾಸಕೋಶಗಳು, ಯಕೃತ್‌, ಕರುಳು ಮತ್ತು ಮೂತ್ರನಾಳಗಳ ಒಳಪದರವನ್ನು ಸರಿಯಾಗಿಡುವುದಕ್ಕೆ ಎ ಜೀವಸತ್ವ ಬೇಕು. ಒಂದೊಮ್ಮೆ ವಿಟಮಿನ್‌ ಎ (Vitamin A) ಕೊರತೆಯಾದರೆ ಏನಾಗುತ್ತದೆ? ಕೊರತೆಯ ಲಕ್ಷಣಗಳೇನು? ಎ ಜೀವಸತ್ವವನ್ನು ನೇರವಾಗಿ ಪಡೆಯುವುದಕ್ಕಾಗದು ನಮಗೆ. ಇದನ್ನು ಹೊಂದಿರುವ ಆಹಾರಗಳನ್ನು ತೆಗೆದುಕೊಳ್ಳಬೇಕು ನಾವು. ಕೋಶಗಳ ಬೆಳವಣಿಗೆಯಲ್ಲಿ, ಚಯಾಪಚಯ ಸರಿಯಾಗಿರುವುದಕ್ಕೆ, ರೊಗನಿರೋಧಕ ಶಕ್ತಿಗೆ ಬಲ ತುಂಬಲು ಮತ್ತು ಪ್ರಜನನ ವ್ಯವಸ್ಥೆ ಸರಿಯಾಗಿರುವುದಕ್ಕೆ ವಿಟಮಿನ್‌ ಎ ಸಮರ್ಪಕವಾಗಿ ದೊರೆಯುವುದು ಮುಖ್ಯ. ಕಣ್ಣಿಗೆ ಸಾಕಷ್ಟು ತೇವ ಒದಗಿಸಿಕೊಡುವಂಥ ಸಣ್ಣ ಕೆಲಸವೂ ಮುಖ್ಯವೇ. ಈ ಸಣ್ಣ ಕೆಲಸಗಳು ಸರಿಯಾಗಿ ನಡೆಯದಿದ್ದರೆ, ದೃಷ್ಟಿ ಮಾಂದ್ಯತೆ ಕಾಡಬಹುದು.

Vitamin A photo

ಮಹತ್ವವೇನು?

ಇರುಳುಗಣ್ಣು ಅಥವಾ ರಾತ್ರಿ ಕುರುಡಿಗೆ ಇರುವಂಥ ಕಾರಣಗಳಲ್ಲಿ ವಿಟಮಿನ್‌ ಎ ಕೊರತೆಯೂ ಒಂದು. ರೆಟಿನಾ ಆರೋಗ್ಯ ಚೆನ್ನಾಗಿರುವಲ್ಲಿ ಎ ಜೀವಸತ್ವ ಬಹಳಷ್ಟು ಶ್ರಮಿಸುತ್ತದೆ. ಕಣ್ಣುಗಳ ತೇವವನ್ನು ಕಾಪಾಡುವುದರ ಜೊತೆಗೆ, ದೃಷ್ಟಿ ಚುರುಕಾಗಿರುವುದಕ್ಕೆ ಬೇಕಾದ ಪಿಗ್ಮೆಂಟ್‌ಗಳ ಉತ್ಪತ್ತಿಗೂ ಎ ಜೀವಸತ್ವ ಬೇಕು. ನಮ್ಮ ಶ್ವಾಸಕೋಶ, ಯಕೃತ್‌, ಸಣ್ಣ ಮತ್ತು ದೊಡ್ಡ ಕರುಳುಗಳು ಹಾಗೂ ಮೂತ್ರನಾಳಗಳ ಒಳ ಪದರಗಳು ಚೆನ್ನಾಗಿದ್ದರಷ್ಟೇ ಈ ಅಂಗಗಳು ಸರಿಯಾಗಿ ಕೆಲಸ ಮಾಡಬಲ್ಲವು. ಇ ಅಂಗಗಳ ಒಳಪದರವನ್ನು ಸಮರ್ಪಕವಾಗಿ ಇಡುವಲ್ಲಿ ವಿಟಮಿನ್‌ ಎ ಗೆ ಕೆಲಸವಿದೆ. ಚರ್ಮಕ್ಕೆ ಬೇಕಾದ ಪೋಷಣೆಯನ್ನು ಒದಗಿಸುವುದಕ್ಕೆ ಎ ಜೀವಸತ್ವ ಅಗತ್ಯ. ತ್ವಚೆಗೆ ಅಗತ್ಯವಾದ ಕೊಲಾಜಿನ್‌ ಉತ್ಪಾದನೆಗೆ ಪ್ರಚೋದನೆ ನೀಡುವುದೇ ಅಲ್ಲದೆ, ಚರ್ಮದ ಸ್ವಾಸ್ಥ್ಯ ಕಾಪಾಡುತ್ತದೆ. ತ್ವಚೆಯ ಮೇಲಿನ ಸೂಕ್ಷ್ಮ ಸುಕ್ಕುಗಳನ್ನು ಹೋಗಲಾಡಿಸಿ, ಹೊಳಪು, ತಾರುಣ್ಯ ಮರಳಿಸುತ್ತದೆ. ಕೂದಲಿನ ದೇಖರೇಖಿಯಲ್ಲಿ ವಿಟಮಿನ್‌ ಎ ಬಹಳಷ್ಟು ಉಪಕಾರ ಮಾಡಬಲ್ಲದು. ಹಾಗಾಗಿ ಸೌಂದರ್ಯ ಕ್ಷೇತ್ರದಲ್ಲೂ ವಿಟಮಿನ್‌ ಎ ಸಾಕಷ್ಟು ಮಹತ್ವ ಗಳಿಸಿದಂಥ ಪೋಷಕಸತ್ವ. ಹಲವು ರೀತಿಯ ಕ್ಯಾನ್ಸರ್‌ಗಳ ವಿರುದ್ಧ ಇದು ರಕ್ಷಾಕವಚವನ್ನು ನಿರ್ಮಿಸಬಲ್ಲದು. ಎ ಜೀವಸತ್ವದ ವಿವಿಧ ರೂಪಗಳಾದ ರೆಟಿನಾಲ್‌, ಕೆರೋಟಿನಾಯ್ಡ್‌, ಬೀಟಾ ಕ್ಯಾರೊಟಿನ್‌ನಂಥ ಅಂಶಗಳನ್ನು ಉತ್ಕರ್ಷಣ ನಿರೋಧಕಗಳೆಂದು ಕರೆಯಲಾಗುತ್ತದೆ. ಇವು ದೇಹವನ್ನು ಉರಿಯೂತದಿಂದ ರಕ್ಷಿಸುವುದೇ ಅಲ್ಲದೆ, ಕ್ಯಾನ್ಸರ್‌ನಂಥ ಮಾರಕ ರೋಗಗಳಿಂದ ಶರೀರವನ್ನು ಕಾಪಾಡಬಲ್ಲ ಸಾಮರ್ಥ್ಯ ಹೊಂದಿವೆ.

ಕೊರತೆಯ ಲಕ್ಷಣಗಳೇನು?

ಕೂದಲು ಉದುರುವುದು, ಚರ್ಮದ ತೊಂದರೆಗಳು ಶೀಘ್ರವಾಗಿ ಗಮನಕ್ಕೆ ಬರುವಂಥವು. ತೇವ ಕಳೆದುಕೊಂಡಿದ್ದರಿಂದ ಚರ್ಮದಲ್ಲಿ ತುರಿಕೆ, ಶುಷ್ಕತೆ ಸಾಮಾನ್ಯ. ಮಕ್ಕಳಲ್ಲಿ ವಿಟಮಿನ್‌ ಎ ಕೊರತೆ ಇದ್ದರೆ ಬೆಳವಣಿಗೆ ಕುಂಠಿತವಾಗಬಹುದು. ಮಾನಸಿಕ ಬೆಳವಣಿಗೆಗೂ ಅಡಚಣೆಯಾಗಬಹುದು. ಸಂತಾನೋತ್ಪತ್ತಿಯಲ್ಲಿ ತೊಂದರೆಯಾಗಬಹುದು. ದೃಷ್ಟಿಯ ಸಮಸ್ಯೆಗಳು ಕಾಣಬಹುದು. ಶ್ವಾಸನಾಳಕ್ಕೆ ಪದೇಪದೆ ಸೋಂಕು ಉಂಟಾಗಬಹುದು.

Healthy Products Rich in Vitamin a

ಸರಿಪಡಿಸಬಹುದೇ?

ಹೌದು, ವಿಟಮಿನ್‌ ಎ ಕೊರತೆಯನ್ನು ಸರಿಪಡಿಸಬಹುದು. ಒಂದೊಮ್ಮೆ ಕೊರತೆಯ ಲಕ್ಷಣಗಳು ತೀವ್ರವಾಗಿದ್ದರೆ, ವೈದ್ಯರು ಮೊದಲಿಗೆ ಪೂರಕಗಳ ಸೇವನೆಗೆ ಸೂಚಿಸುತ್ತಾರೆ. ನಂತರ ಅದನ್ನು ಸಮತೋಲಿತ ಆಹಾರದ ಮೂಲಕವೇ ಕಾಪಾಡಿಕೊಳ್ಳಬಹುದು. ಹಾಗೆಂದು ವೈದ್ಯರ ಸೂಚನೆಯಿಲ್ಲದೇ ಪೂರಕಗಳ ಸೇವನೆ ಸೂಕ್ತವಲ್ಲ. ಇಂಥ ಯಾವುದೇ ಸತ್ವಗಳು ದೇಹದಲ್ಲಿ ಅಗತ್ಯಕ್ಕಿಂತ ಅತಿಯಾಗಿ ಸೇರಿದರೂ ಸಮಸ್ಯೆಗಳನ್ನು ಸೃಷ್ಟಿಸುತ್ತವೆ.

ಇದನ್ನೂ ಓದಿ: Benefits of Poppy Seeds: ಗಸೆಗಸೆ ನಿದ್ದೆಗಷ್ಟೇ ಅಲ್ಲ, ಪೌಷ್ಟಿಕಾಂಶಗಳ ಆಗರವೂ ಹೌದು!

ಯಾವೆಲ್ಲ ಆಹಾರಗಳು?

ಕುಂಬಳಕಾಯಿ, ಕ್ಯಾರೆಟ್‌, ಗೆಣಸು, ಕೆಂಪು ಕ್ಯಾಪ್ಸಿಕಂ, ಪಾಲಕ್‌ನಂಥ ಸೊಪ್ಪುಗಳು, ಏಪ್ರಿಕಾಟ್‌, ಮಾವಿನ ಹಣ್ಣು, ಕಿತ್ತಳೆ ಹಣ್ಣು, ಪಪ್ಪಾಯಿ, ಕಲ್ಲಂಗಡಿ ಮುಂತಾದ ಹಣ್ಣು-ತರಕಾರಿಗಳಿಂದ ದೊರೆಯುತ್ತವೆ. ರೆಟಿನಾಲ್‌, ಕೆರೋಟಿನಾಯ್ಡ್‌, ಬೀಟಾ ಕ್ಯಾರೊಟಿನ್‌ನಂಥ ಅಂಶಗಳಿರುವ ಎಲ್ಲ ಹಣ್ಣು-ತರಕಾರಿಗಳು ದೇಹಕ್ಕೆ ವಿಟಮಿನ್‌ ಎ ಪೂರೈಕೆ ಮಾಡುತ್ತವೆ. ಮುಖ್ಯವಾಗಿ ಹಳದಿ, ತಿಳಿ ಹಸಿರು ಮತ್ತು ಕಿತ್ತಳೆಬಣ್ಣದ ಆಹಾರಗಳಲ್ಲಿ ಎ ಜೀವಸತ್ವ ಹೇರಳವಾಗಿ ದೊರೆಯುತ್ತದೆ.

Continue Reading

ಆರೋಗ್ಯ

Benefits of Poppy Seeds: ಗಸೆಗಸೆ ನಿದ್ದೆಗಷ್ಟೇ ಅಲ್ಲ, ಪೌಷ್ಟಿಕಾಂಶಗಳ ಆಗರವೂ ಹೌದು!

ಗಸಗಸೆ ಎನ್ನುವ ಪುಟ್ಟ ಬೀಜಗಳ ಹೆಸರು ಕೇಳುತ್ತಿದ್ದಂತೆ ಗಸಗಸೆ ಪಾಯಸ, ಖೀರು ಕುಡಿದು ನಿದ್ದೆ ಹೊಡೆಯುವವರ ನೆನಪಾಗಬಹುದು. ಆದರೆ ಗಸಗಸೆಯ ಬಳಕೆ ಅದಷ್ಟಕ್ಕೇ ಸೀಮಿತವಲ್ಲ. ಹಲವರು ರೀತಿಯ ಪಕ್ವಾನ್ನಗಳಲ್ಲಿ ಇದನ್ನು ಮಸಾಲೆಯಾಗಿ ಸೇರಿಸಲಾಗುತ್ತದೆ. ಇದರಿಂದ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಪೌಷ್ಟಿಕಾಂಶವನ್ನೂ ಹೆಚ್ಚಿಸಬಹುದು. ಏನು ಸತ್ವಗಳಿವೆ (Benefits of Poppy Seeds) ಗಸಗಸೆಯಲ್ಲಿ?

VISTARANEWS.COM


on

Benefits of Poppy Seeds
Koo

ನೈಋತ್ಯ ಭಾಗದಲ್ಲಿ ಮುಂಗಾರು ಮಾರುತಗಳು ಬಂದರೂ, ಸೆಕೆ ಕಡಿಮೆಯಾಗಿಲ್ಲ. ಹಾಗಾಗಿ ದೇಹ ತಂಪಾಗಿಸುವುದಕ್ಕೆ ಹಲವು ಉಪಾಯಗಳು ಬೇಕಾಗುತ್ತವೆ. ಅವುಗಳಲ್ಲಿ ಗಸಗಸೆಯೂ ಒಂದು. ಅದರ ಹೆಸರು ಕೇಳುತ್ತಿದ್ದಂತೆ ಗಸಗಸೆ ಪಾಯಸ, ಖೀರಿನದ್ದೇ ನೆನಪಾಗಬಹುದು. ಆದರೆ ಗಸಗಸೆಯ ಬಳಕೆ ಅದಷ್ಟಕ್ಕೇ ಸೀಮಿತವಲ್ಲ. ಅಂಟಿನುಂಡೆ, ಡ್ರೈಫ್ರೂಟ್ಸ್‌ ಲಡ್ಡುಗಳಲ್ಲಿ ಇದನ್ನು ಸೇರಿಸುವವರಿದ್ದಾರೆ. ಹಲವರು ರೀತಿಯ ಪಕ್ವಾನ್ನಗಳಲ್ಲಿ ಇದನ್ನು ಮಸಾಲೆಯಾಗಿ ಸೇರಿಸಲಾಗುತ್ತದೆ. ಇದರಿಂದ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಪೌಷ್ಟಿಕಾಂಶವನ್ನೂ ಹೆಚ್ಚಿಸಬಹುದು. ಏನು ಸತ್ವಗಳಿವೆ (Benefits of Poppy Seeds) ಗಸಗಸೆಯಲ್ಲಿ?

Poppy Seeds

ಸತ್ವಗಳು ಬಹಳಷ್ಟು

ಕ್ಯಾಲ್ಸಿಯಂ, ಮೆಗ್ನೀಶಿಯಂ, ಫಾಸ್ಫರಸ್‌, ಕಬ್ಬಿಣ ಸೇರಿದಂತೆ ಹಲವು ರೀತಿಯ ಖನಿಜಗಳು ಗಸೆಗಸೆಯಲ್ಲಿವೆ. ಈ ಪುಟ್ಟ ಬೀಜಗಳಲ್ಲಿ ಥಿಯಾಮಿನ್‌, ರೈಬೊಫ್ಲೆವಿನ್‌, ನಯಾಸಿನ್‌ ಸೇರಿದಂತೆ ವಿವಿಧ ರೀತಿಯ ಬಿ ಜೀವಸತ್ವಗಳಿವೆ. ಇವೆಲ್ಲ ಆಹಾರವನ್ನು ಶಕ್ತಿಯಾಗಿ ಸಂಚಯಿಸುವಲ್ಲಿ ಮತ್ತು ನರಗಳ ಕ್ಷಮತೆ ಹೆಚ್ಚಿಸುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತವೆ. ಜೊತೆಗೆ, ಪಾಲಿಫೆನಾಲ್‌ಗಳು ಮತ್ತು ಫ್ಲೆವನಾಯ್ಡ್‌ಗಳಂಥ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ ಈ ಕಿರುಬೀಜಗಳು. ಆರೋಗ್ಯಕರ ಕೊಬ್ಬು ಸಹ ಇದರ ಭಾಗ. ಈ ಎಲ್ಲ ಸತ್ವಗಳಿಂದ ದೇಹಕ್ಕೆ ಬಹಳಷ್ಟು ರೀತಿಯಲ್ಲಿ ಪ್ರಯೋಜನಗಳಿವೆ.

Sleeping Tips

ನಿದ್ದೆಗೆ ಪೂರಕ

ಶರೀರಕ್ಕೆ ಆರಾಮ ನೀಡಿ, ನಿದ್ದೆ ಬರಿಸುವಂಥ ಸಾಮರ್ಥ್ಯ ಗಸಗಸೆಗೆ ಇದೆಯೆನ್ನುವುದು ಭಾರತೀಯರ ಪರಂಪರಾಗತ ತಿಳುವಳಿಕೆ. ಇದರಲ್ಲಿರುವ ಆಲ್ಕಲಾಯ್ಡ್‌ ಮತ್ತು ಪೆಪ್ಟೈಡ್‌ಗಳಿಗೆ ನೋವು ನಿವಾರಿಸುವ ಮತ್ತು ನಿದ್ದೆ ಬರಿಸುವಂಥ ಗುಣಗಳಿವೆ. ಇವು ನರಗಳನ್ನು ಶಾಂತಗೊಳಿಸುತ್ತವೆ. ಹಾಗಾಗಿ ತೀವ್ರ ಆಯಾಸವಾಗಿದ್ದರೆ, ಶ್ರಮದ ಕೆಲಸದಿಂದ ಮೈ-ಕೈ ನೋವಾಗಿದ್ದರೆ, ನಿದ್ದೆಯಿಲ್ಲದೆ ಒದ್ದಾಡುತ್ತಿದ್ದರೆ, ಸಂಜೆಯ ಹೊತ್ತಿಗೆ ಗಸಗಸೆ ಖೀರು ಕುಡಿದು ನಿದ್ದೆ ಹೊಡೆಯುವುದು ಒಳ್ಳೆಯ ಉಪಾಯ.

Improves Digestion Karela Benefits

ಜೀರ್ಣಾಂಗಗಳ ಕ್ಷಮತೆ ಹೆಚ್ಚಳ

ಈ ಪುಟ್ಟ ಬೀಜಗಳಲ್ಲಿ ನಾರಿನಂಶ ಹೇರಳವಾಗಿದೆ. ಇವುಗಳ ಸೇವನೆಯಿಂದ ಮಲಬದ್ಧತೆಯಂಥ ತೊಂದರೆಯನ್ನು ದೂರ ಮಾಡಲು ಅನುಕೂಲವಾಗುತ್ತದೆ. ನಾರು ಹೆಚ್ಚಿರುವ ಆಹಾರಗಳು ಹೊಟ್ಟೆಯನ್ನು ನಿಯಮಿತವಾಗಿ ಖಾಲಿ ಮಾಡಿಸಿ, ಮಲಬದ್ಧತೆಯನ್ನು ನಿವಾರಿಸಿ, ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ. ಇದರಲ್ಲಿರುವ ಜೆಲ್‌ನಂಥ ವಸ್ತುಗಳು, ಜೀರ್ಣಾಂಗಗಳಲ್ಲಿರುವ ಉರಿಯೂತ ನಿವಾರಣೆಗೆ ನೆರವಾಗುತ್ತವೆ.

Antioxidants in it keep immunity strong Benefits Of Mandakki

ಪ್ರತಿರೋಧಕ ಶಕ್ತಿ ಸುಧಾರಣೆ

ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತವೆ. ಇದರಿಂದ ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚುತ್ತದೆ. ಇದರಲ್ಲಿರುವ ಸತು ಮತ್ತು ಮ್ಯಾಂಗನೀಸ್‌ನಂಥ ಸತ್ವಗಳು ಪ್ರತಿರೋಧಕ ಸಾಮರ್ಥ್ಯ ಹೆಚ್ಚಿಸುವಲ್ಲಿ ನೆರವಾಗುತ್ತವೆ. ಬೇಸಿಗೆ ಮುಗಿಯುತ್ತಾ ಬಂದು, ಮಳೆಗಾಲದ ಹೊಸಿಲಲ್ಲಿರುವಾಗ ದೇಹಕ್ಕೆ ಬೇಕಾದ ರೋಗ ನಿರೋಧಕತೆಯ ರಕ್ಷಣೆ ನೀಡುವಲ್ಲಿ ಇದು ಸಹಾಯ ಮಾಡಬಲ್ಲದು.

Hair And Skin Care Tips For Monsoon

ಚರ್ಮ, ಕೂದಲಿನ ಆರೋಗ್ಯ

ಇದರಲ್ಲಿರುವ ಒಮೇಗಾ 6 ಮತ್ತು ಒಮೇಗಾ 3 ಕೊಬ್ಬಿನಾಮ್ಲಗಳು ದೇಹಕ್ಕೆ ಆರೋಗ್ಯಕರ ಕೊಬ್ಬನ್ನು ನೀಡಬಲ್ಲವು. ಇವು ಚರ್ಮ ಮತ್ತು ಕೂದಲಿನ ಆರೋಗ್ಯ ರಕ್ಷಣೆಯಲ್ಲಿ ಹಲವು ರೀತಿಯ ಅನುಕೂಲಗಳನ್ನು ಒದಗಿಸುತ್ತವೆ. ಚರ್ಮದ ಹಿಗ್ಗುವಿಕೆಯನ್ನು ವೃದ್ಧಿಸಿ, ಕೊಲಾಜಿನ್‌ ಹೆಚ್ಚಿಸಿ, ಈ ಮೂಲಕ ಸುಕ್ಕುಗಳನ್ನು ಕಡಿಮೆ ಮಾಡಿ ತ್ವಚೆಗೆ ತಾರುಣ್ಯ ಮರಳಿಸುವ ಸಾಮರ್ಥ್ಯ ಹೊಂದಿವೆ. ಇದರಲ್ಲಿರುವ ಜಿಂಕ್‌ ಅಂಶದಿಂದ ಕೊಲಾಜಿನ್‌ ವೃದ್ಧಿಯಾಗಿ, ಕೂದಲಿನ ಆರೋಗ್ಯ ಸುಧಾರಿಸುತ್ತದೆ. ಕೂದಲು ಬಲಕಳೆದುಕೊಂಡು ತುಂಡಾಗುತ್ತಿದ್ದರೆ, ಅದನ್ನು ತಡೆಯುವುದಕ್ಕೆ ಕೊಲಾಜಿನ್‌ ನೆರವಾಗುತ್ತದೆ. ಹಾಗಾಗಿ ಗಸೆಗಸೆಯನ್ನು ಅಲ್ಪ ಪ್ರಮಾಣದಲಾದರೂ ಬಳಕೆ ಮಾಡುವುದು ದೇಹಾರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: Benefits Of Litchi: ಸಿಹಿಯಾದ, ರುಚಿಯಾದ ಲಿಚಿ ಹಣ್ಣನ್ನು ತಿಂದರೆ ಆರೋಗ್ಯ ಲಾಭ ಹಲವಾರು

Continue Reading

ಆರೋಗ್ಯ

Microplastics: ನಮಗೆ ಗೊತ್ತೇ ಆಗದಂತೆ ನಮ್ಮ ದೇಹ ಸೇರುತ್ತಿದೆ ಅಪಾಯಕಾರಿ ಪ್ಲಾಸ್ಟಿಕ್‌!

ಕಣ್ಣಿಗೆ ಕಾಣದ ಪ್ಲಾಸ್ಟಿಕ್‌ ಕಣಗಳು (Microplastics) ಎಷ್ಟೋ ಬಾರಿ ಆಹಾರದ ಜೊತೆಗೆ ನಮಗೆ ಗೊತ್ತೇ ಆಗದಂತೆ ನಮ್ಮ ಹೊಟ್ಟೆ ಸೇರುತ್ತದೆ. ಮೈಕ್ರೋ ಪ್ಲಾಸ್ಟಿಕ್‌ ಎಂದರೆ ಐದು ಎಂಎಂಗೂ ಸಣ್ಣದಾದ ಪ್ಲಾಸ್ಟಿಕ್‌ನ ಕಣಗಳು. ಬಹಳ ಸೂಕ್ಷ್ಮವಾದ ಈ ಪ್ಲಾಸ್ಟಿಕ್‌ ಕಣಗಳು ನಾವು ಉಸಿರಾಡುವ ಗಾಳಿಯಲ್ಲಿ ತೇಲಾಡುತ್ತಾ ವಾತಾವರಣದಲ್ಲಿ ಇರುತ್ತವೆ. ವಾತಾವರಣದಲ್ಲಿರುವ ಇವು ಅನೇಕ ಬಾರಿ ತೆರೆದ ಆಹಾರದ ಮೇಲೆಯೂ ಸಂಗ್ರಹವಾಗುತ್ತವೆ. ಬಹಳ ಸಾರಿ, ಕಾರ್ಖಾನೆಗಳಲ್ಲಿ ಸಂಸ್ಕರಿಸಿದ ಆಹಾರ ತಯಾರಿಸುವಾಗಲೇ ಪ್ಯಾಕೇಜಿನ ಜೊತೆಗೂ ಇವು ಸೇರಿಕೊಂಡು ಬಿಟ್ಟಿರುತ್ತವೆ.

VISTARANEWS.COM


on

Microplastics
Koo

ನಾವು ನಿತ್ಯವೂ ತಿನ್ನುವ ಆಹಾರದಲ್ಲಿ ಪ್ಲಾಸ್ಟಿಕ್‌ (Microplastics) ಇದೆ ಎಂದರೆ ನಂಬುತ್ತೀರಾ? ಹೌದು. ಮೈಕ್ರೋ ಪ್ಲಾಸ್ಟಿಕ್‌ ಎಂಬ ಕಣ್ಣಿಗೆ ಕಾಣದ ಪ್ಲಾಸ್ಟಿಕ್‌ ಕಣಗಳು ಎಷ್ಟೋ ಬಾರಿ ಆಹಾರದ ಜೊತೆಗೆ ನಮಗೆ ಗೊತ್ತೇ ಆಗದಂತೆ ನಮ್ಮ ಹೊಟ್ಟೆ ಸೇರುತ್ತದೆ. ಮೈಕ್ರೋ ಪ್ಲಾಸ್ಟಿಕ್‌ ಎಂದರೆ ಐದು ಎಂಎಂಗೂ ಸಣ್ಣದಾದ ಪ್ಲಾಸ್ಟಿಕ್‌ನ ಕಣಗಳು. ಬಹಳ ಸೂಕ್ಷ್ಮವಾದ ಈ ಪ್ಲಾಸ್ಟಿಕ್‌ ಕಣಗಳು ನಾವು ಉಸಿರಾಡುವ ಗಾಳಿಯಲ್ಲಿ ತೇಲಾಡುತ್ತಾ ವಾತಾವರಣದಲ್ಲಿ ಇರುತ್ತವೆ. ವಾತಾವರಣದಲ್ಲಿರುವ ಇವು ಅನೇಕ ಬಾರಿ ತೆರೆದ ಆಹಾರದ ಮೇಲೆಯೂ ಸಂಗ್ರಹವಾಗುತ್ತವೆ. ಬಹಳ ಸಾರಿ, ಕಾರ್ಖಾನೆಗಳಲ್ಲಿ ಸಂಸ್ಕರಿಸಿದ ಆಹಾರ ತಯಾರಿಸುವಾಗಲೇ ಪ್ಯಾಕೇಜಿನ ಜೊತೆಗೂ ಇವು ಸೇರಿಕೊಂಡು ಬಿಟ್ಟಿರುತ್ತವೆ. ನಾವು ಕುಡಿಯುವ ನೀರಿನಲ್ಲಿ, ಕುಡಿಯುವ ಪೇಯಗಳಲ್ಲಿ ಅಥವಾ ಯಾವುದೇ ತೆರೆದ, ತೆರೆಯದ ಆಹಾರಗಳ ಮೇಲೆ ಇಂತಹ ಕಣಗಳು ನಮಗೆ ತಿಳಿಯದೆ ಸೇರಿರುತ್ತವೆ. ಹೀಗಾಗಿ ಮುಚ್ಚಿಟ್ಟ ಆಹಾರದಲ್ಲಿಯೂ, ಮೊದಲೇ ಪ್ಯಾಕಟ್ಟಿನಲ್ಲಿರುವ ಆಹಾರದಲ್ಲಿಯೂ ಇಂತಹ ಮೈಕ್ರೋ ಪ್ಲಾಸ್ಟಿಕ್‌ ಕಣಗಳು ಬಂದಿರುವ ಸಾಧ್ಯತೆ ಇರುವುದರಿಂದ ನಾವು ಎಷ್ಟೇ ಜಾಗರೂಕತೆಯಿಂದ ಆಹಾರಗಳನ್ನು ಕಾಪಿಟ್ಟರೂ, ಇವು ಮೊದಲೇ ಸೇರಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದಿಲ್ಲ. ಅಷ್ಟೇ ಅಲ್ಲ, ನಾವು ಓಡಾಡುವ ಪರಿಸರದ ವಾತಾವರಣದಲ್ಲಿಯೂ ಇರುವುದರಿಂದ ಇದು ಈಚೆಗೆ ಸಹಜವೇ ಆಗಿದೆ. ಒಂದು ಅಧಯಯನದ ಪ್ರಕಾರ, ಉಪ್ಪು, ಮೀನು ಮತ್ತಿತರ ಸಮುದ್ರ ಜೀವಿಗಳು, ಮಾಂಸ, ಪೇಯಗಳು ಸೇರಿದಂತೆ ಹಲು ಪ್ಯಾಕೇಜ್ಡ್‌ ಆಹಾರಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ ಇರುವ ಸಾಧ್ಯತೆಗಳು ಹೆಚ್ಚಿವೆಯಂತೆ.

food microplastics

ಮೈಕ್ರೋ ಪ್ಲಾಸ್ಟಿಕ್‌ ಹಾವಳಿ

ಒಂದು ಅಧ್ಯಯನದ ಪ್ರಕಾರ 1990ರಿಂದ 2018ರವರೆಗೆ 109 ದೇಶಗಳ ಪೈಕಿ ಸಮುದ್ರ ತೀರದಲ್ಲಿರುವ ದೇಶಗಳ ಮೇಲೆ ಈ ಮೈಕ್ರೋ ಪ್ಲಾಸ್ಟಿಕ್‌ ಹಾವಳಿ ಹೆಚ್ಚಿದೆಯಂತೆ. ಅದರಲ್ಲೂ ಇಂಡೋನೇಷ್ಯಾ ಈ ಸಮಸ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆಯಂತೆ. ತಿಂಗಳಿಗೆ ಇಲ್ಲಿ 15 ಗ್ರಾಂಗಳಷ್ಟು ಮೈಕ್ರೋ ಪ್ಲಾಸ್ಟಿಕ್‌ ಇಲ್ಲಿನ ಮಂದಿಯ ಹೊಟ್ಟೆ ಸೇರುತ್ತದಂತೆ. ಇನ್ನುಳಿದಂತೆ ಏಷ್ಯಾ, ಅಮೆರಿಕಾ, ಆಫ್ರಿಕಾ ಖಂಡದ ದೇಶಗಳಲ್ಲಿ (ಚೈನಾ ಹಾಗೂ ಯುಎಸ್‌ ಸೇರಿದಂತೆ) ಈ ಮೈಕ್ರೋ ಪ್ಲಾಸ್ಟಿಕ್‌ ದೇಹ ಸೇರುವ ಪ್ರಮಾಣ ಇತ್ತೀಚೆಗಿನ ವರ್ಷಗಳಲ್ಲಿ ಆರು ಪಟ್ಟು ಹೆಚ್ಚಿದೆಯಂತೆ.

ಹಾರ್ಮೋನುಗಳನ್ನೇ ನಕಲು ಮಾಡುತ್ತವೆ

ಸಂಶೋಧನೆಗಳ ಪ್ರಕಾರ, ಪ್ಲಾಸ್ಟಿಕ್‌ನಲ್ಲಿರುವ ರಾಸಾಯನಿಕಗಳಾದ ಬಿಪಿಎ, ಪ್ಥಲೇಟ್ಸ್‌ ಹಾಗೂ ಪಿಎಫ್‌ಎಎಸ್‌ ನಂತಹುಗಳು ಮಾನವನ ದೇಹದ ಹಾರ್ಮೋನುಗಳನ್ನೇ ನಕಲು ಮಾಡುತ್ತವೆ. ಇದರಿಂದ ಸಂತಾನಹೀನತೆಯೂ ಸೇರಿದಂತೆ ಕ್ಯಾನ್ಸರ್‌ವರೆಗೂ ಹಲವು ಆರೋಗ್ಯ ಸಮಸ್ಯೆಗಳು ಬರುವ ಲಕ್ಷಣಗಳಿವೆ.
ಹಾಗಾದರೆ ಇದರಿಂದ ದೂರವಿರಲು ಏನು ಮಾಡಬಹುದು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಈ ಕೆಲವು ಜಾಗರೂಕತೆಗಳನ್ನು ನೀವು ವಹಿಸಬಹುದು.

ಇದನ್ನೂ ಓದಿ: Benefits Of Cherries: ಚೆರ್ರಿ ಹಣ್ಣು ರುಚಿಗಷ್ಟೇ ಅಲ್ಲ, ಉತ್ತಮ ಆರೋಗ್ಯಕ್ಕೂ ಹಿತಕರ!

ಅವು ಯಾವುವೆಂದರೆ

  1. ಪ್ಲಾಸ್ಟಿಕ್‌ನ ಪಾತ್ರೆಗಳನ್ನು, ಬೌಲ್‌ಗಳನ್ನು ಮೈಕ್ರೋವೇವ್‌ನಲ್ಲಿಡಬೇಡಿ. ಅದರ ಅತಿಯಾದ ಉಷ್ಣತೆ ಪ್ಲಾಸ್ಟಿಕ್‌ನಿಂದ ಕೆಟ್ಟ ರಾಸಾಯನಿಕಗಳನ್ನು ಬಿಡುಗಡೆ ಮಾಡುವಂತೆ ಮಾಡುತ್ತವೆ. ಹೀಗಾಗಿ ಮೈಕ್ರೋವೇವ್‌ಗೆ ಸೆರಾಮಿಕ್‌ ಅಥವಾ ಗ್ಲಾಸ್‌ ಬೌಲ್‌ಗಳನ್ನೇ ಇಡಿ.
  2. ಗ್ಲಾಸ್‌ ಅಥವಾ ಸ್ಟೀಲ್‌ ನೀರಿನ ಬಾಟಲ್‌ಗಳನ್ನೇ ಬಳಸಿ. ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಬೇಡಿ.
  3. ಆದಷ್ಟೂ ಸಾವಯುವ ವಸ್ತುಗಳನ್ನೇ ಬಳಸಿ. ಕ್ರಿಮಿನಾಶಕಗಳನ್ನು ಬಳಸಿದ ತರಕಾರಿಗಳನ್ನು ಕಡಿಮೆ ಮಾಡಿ.
  4. ಮಾಂಸವನ್ನು ತಿನ್ನುವುದನ್ನು ಕಡಿಮೆ ಮಾಡಿ. ಇವು ಅತಿಯಾದ ಕೊಬ್ಬಿನ ಆಹಾರಗಳಾಗಿರುವುದರಿಂದ ಹಾಗೂ ಪ್ರಾಣಿ ಮೂಲಮೂಲವಾಗಿರುವುದರಿಂದ ಇವುಗಳಲ್ಲಿ ರಾಸಾಯನಿಕಗಳು ಹೆಚ್ಚು ಸಂಗ್ರಹವಾಗುತ್ತವೆ.
Continue Reading
Advertisement
Dr C N Manjunath
ಕರ್ನಾಟಕ18 mins ago

Dr C N Manjunath: ಬೆಂಗಳೂರಿನಲ್ಲೇ ಸುರೇಶ್‌ ವಿರುದ್ಧ ಡಾ. ಮಂಜುನಾಥ್‌ಗೆ 2 ಲಕ್ಷ ಮತಗಳ ಲೀಡ್‌! ಕ್ಷೇತ್ರವಾರು ಪಟ್ಟಿ ಇಲ್ಲಿದೆ

New Cancer Drug
ಆರೋಗ್ಯ31 mins ago

New Cancer Drug: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕ್ರಾಂತಿ; ಹೊಸ ಔಷಧ ಪ್ರಯೋಗ ಶೇ. 100 ಯಶಸ್ವಿ!

World Environment Day celebration in karatagi
ಕೊಪ್ಪಳ34 mins ago

World Environment Day: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕು

500 Rs deposit in the name of new admission children by old students of Government Kannada School Lingasugur
ಕರ್ನಾಟಕ36 mins ago

Raichur News: ಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳ ಹೆಸರಿನಲ್ಲಿ 500 ರೂ. ಠೇವಣಿ!

Koti Movie
ಸಿನಿಮಾ49 mins ago

Koti Movie: ಡಾಲಿ ಧನಂಜಯ್ ನಟನೆಯ ‘ಕೋಟಿ’ ಚಿತ್ರದ ಟ್ರೈಲರ್ ರಿಲೀಸ್; ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ

Belagavi Election Result 2024
ಬೆಳಗಾವಿ1 hour ago

ಲಕ್ಷ್ಮೀ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಶೆಟ್ಟರ್‌ಗೆ 50 ಸಾವಿರ ಮತಗಳ ಲೀಡ್; ಕ್ಷೇತ್ರವಾರು ಪಟ್ಟಿ ಇಲ್ಲಿದೆ!

French Open 2024
ಕ್ರೀಡೆ2 hours ago

French Open 2024: ಸೆಮಿಫೈನಲ್​ ಪ್ರವೇಶಿಸಿದ ಬೋಪಣ್ಣ-ಮ್ಯಾಥ್ಯೂ ಜೋಡಿ

Minister Of Parliament
Latest2 hours ago

Minister Of Parliament: ನೀವು ಮತ ಹಾಕಿ ಕಳುಹಿಸಿರುವ ಸಂಸದರಿಗೆ ಎಷ್ಟು ಸಂಬಳ ಸಿಗುತ್ತದೆ ಗೊತ್ತೇ?

Uttarakhand Trekking Tragedy
ಪ್ರಮುಖ ಸುದ್ದಿ2 hours ago

Uttarakhand Trekking Tragedy: ಉತ್ತರಾಖಂಡದಿಂದ ರಾಜ್ಯದ ಚಾರಣಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ: ಸಿಎಂ

India Bloc Meeting
ದೇಶ2 hours ago

India Bloc Meeting: ಆಡಳಿತದ ಆಸೆ ಕೈಬಿಟ್ಟ ಇಂಡಿಯಾ ಒಕ್ಕೂಟ; ಒಗ್ಗಟ್ಟಿಗಾಗಿ ಸಭೆ, ಬಲಿಷ್ಠ ಪ್ರತಿಪಕ್ಷದ ಗುರಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ2 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು4 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ6 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌