ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆ ಭಾರತದಲ್ಲಿ ನಿರ್ಬಂಧ; 6 ತಿಂಗಳಲ್ಲಿ ಇದು 2ನೇ ಬಾರಿ! - Vistara News

ದೇಶ

ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆ ಭಾರತದಲ್ಲಿ ನಿರ್ಬಂಧ; 6 ತಿಂಗಳಲ್ಲಿ ಇದು 2ನೇ ಬಾರಿ!

ಕಾನೂನು ವಿಷಯಕ್ಕೆ ಸಂಬಂಧಪಟ್ಟು ಈ ಕ್ರಮ ಕೈಗೊಳ್ಳಲಾಗಿದೆ. ಪಾಕಿಸ್ತಾನದ ಟ್ವಿಟರ್​ ಅಕೌಂಟ್​​ನ್ನು ಭಾರತದಲ್ಲಿ ವೀಕ್ಷಿಸದಂತೆ ಮಾಡುವಂತೆ ಟ್ವಿಟರ್​ಗೆ ಭಾರತದ ಸರ್ಕಾರ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಅದನ್ನು ತಡೆಹಿಡಿಯಲಾಗಿದೆ.

VISTARANEWS.COM


on

Pakistan Government Twitter
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಾಕಿಸ್ತಾನ ಸರ್ಕಾರದ (Pakistan government) ಅಧಿಕೃತ ಟ್ವಿಟರ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಭಾರತೀಯರು ಯಾರಾದರೂ ಪಾಕಿಸ್ತಾನ ಸರ್ಕಾರದ ಟ್ವಿಟರ್​ ಖಾತೆಗೆ (Pakistan government Twitter Account) ಹೋದರೆ ಅಲ್ಲಿ, Account Withheld (ಖಾತೆ ತಡೆಹಿಡಿಯಲಾಗಿದೆ) ಎಂಬ ಸಂದೇಶ ಕಾಣಿಸುತ್ತಿದೆ. ಕಾನೂನು ಕ್ರಮದ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಟ್ವಿಟರ್ ಅಕೌಂಟ್​ ನಿರ್ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಅಂದಹಾಗೇ, ಹೀಗೆ ಪಾಕಿಸ್ತಾನದ ಅಧಿಕೃತ ಟ್ವಿಟರ್​ ಖಾತೆಯನ್ನು ಭಾರತದಲ್ಲಿ ತಡೆಹಿಡಿಯುತ್ತಿರುವುದು ಕಳೆದ 6ತಿಂಗಳಲ್ಲಿ ಇದು 2ನೇ ಬಾರಿ.

ಕಾನೂನು ವಿಷಯಕ್ಕೆ ಸಂಬಂಧಪಟ್ಟು ಈ ಕ್ರಮ ಕೈಗೊಳ್ಳಲಾಗಿದೆ. ಪಾಕಿಸ್ತಾನದ ಟ್ವಿಟರ್​ ಅಕೌಂಟ್​​ನ್ನು ಭಾರತದಲ್ಲಿ ವೀಕ್ಷಿಸದಂತೆ ಮಾಡುವಂತೆ ಟ್ವಿಟರ್​ಗೆ ಭಾರತದ ಸರ್ಕಾರ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಅದನ್ನು ತಡೆಹಿಡಿಯಲಾಗಿದೆ ಎಂದು ರಾಯಿಟರ್ಸ್​ ವರದಿ ಮಾಡಿದೆ. ಹಾಗಂತ, ನಿರ್ದಿಷ್ಟ ಯಾವ ವಿಷಯಕ್ಕಾಗಿ ಈ ಕ್ರಮ ಎಂದು ಸ್ಪಷ್ಟವಾಗಿಲ್ಲ. ಯಾರದ್ದೇ ಟ್ವಿಟರ್​ ಖಾತೆಯನ್ನು ನಿರ್ಬಂಧಿಸಲು ಕಾನೂನಾತ್ಮಕ ಕಾರಣಗಳನ್ನು ಕೊಟ್ಟಾಗ ಆ ಖಾತೆಯನ್ನು ತಡೆಹಿಡಿಯಬೇಕು ಎಂಬುದು ಟ್ವಿಟರ್ ಕಂಪನಿಯ ನಿಯಮವಾಗಿದ್ದು, ಅದರಂತೆ ಈ ವಿಷಯದಲ್ಲೂ ಟ್ವಿಟರ್​ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: Amritpal Singh: ಅಮೃತ್​ಪಾಲ್ ಸಿಂಗ್​​ನ ಆಪ್ತನಿಗೆ, ಪಾಕಿಸ್ತಾನ ಮಾಜಿ ಸೇನಾ ಮುಖ್ಯಸ್ಥನ ಪುತ್ರನ ಜತೆ ನಂಟು!

2022ರ ಅಕ್ಟೋಬರ್​​ನಲ್ಲಿ ಒಮ್ಮೆ ಇದೇ ಕಾನೂನು ವಿಷಯದ ಕಾರಣಕ್ಕಾಗಿಯೇ ಪಾಕಿಸ್ತಾನದ ಟ್ವಿಟರ್​ ಅಕೌಂಟ್​ನ್ನು ಭಾರತದಲ್ಲಿ ತಡೆಹಿಡಿಯಲಾಗಿತ್ತು. ಅದಾದ ಮೇಲೆ ಆರು ತಿಂಗಳ ಬಳಿಕ ಈಗ ಮತ್ತೆ ನಿರ್ಬಂಧಿಸಲಾಗಿದೆ. ಅದಕ್ಕೂ ಪೂರ್ವ 2022ರ ಜುಲೈ ತಿಂಗಳಲ್ಲೂ ಒಮ್ಮೆ ಪಾಕ್​ ಸರ್ಕಾರದ ಅಧಿಕೃತ ಟ್ವಿಟರ್​ ಖಾತೆಗೆ, ನಮ್ಮ ದೇಶದಲ್ಲಿ ಕತ್ತರಿಬಿದ್ದಿತ್ತು. ಈ ಹಿಂದೆ ಒಮ್ಮೆ ಯುಎಸ್​, ಟರ್ಕಿ, ಇರಾನ್​ ಮತ್ತು ಈಜಿಪ್ಟ್​​ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಗಳ ಖಾತೆಯನ್ನು ಕೂಡ ಟ್ವಿಟರ್ ನಿರ್ಬಂಧ ವಿಧಿಸಿತ್ತು. ಅಷ್ಟೇ ಅಲ್ಲ, ಆಗಸ್ಟ್​​ನಲ್ಲಿ ಭಾರತದಲ್ಲಿ ಪಾಕಿಸ್ತಾನ ಮೂಲದ ಒಂದು ಯೂಟ್ಯೂಬ್ ಚಾನೆಲ್​ ಸೇರಿ ಒಟ್ಟು 8 ಯೂಟ್ಯೂಬ್ ಚಾನೆಲ್​ಗಳನ್ನು ಬ್ಲಾಕ್​ ಮಾಡಲಾಗಿದೆ. ಅದರೊಂದಿಗೆ ಭಾರತ ವಿರೋಧಿ, ಭಾರತ ಬಗೆಗಿನ ನಕಲಿ ವಿಷಯಗಳನ್ನು ಪ್ರಸಾರ ಮಾಡುವ ಪಾಕ್​ ಮೂಲದ ಫೇಸ್​ಬುಕ್​ ಖಾತೆಗಳನ್ನೂ ಈಗಾಗಲೇ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: Chicken Manchurian: ಚಿಕನ್ ಮಂಚೂರಿಯನ್ ಯಾರದ್ದು? ಟ್ವಿಟರ್‌ನಲ್ಲಿ ಭಾರತ-ಪಾಕ್ ನೆಟ್ಟಿಗರ ಜಟಾಪಟಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Helicopter Crash: ಶಿವಸೇನೆ ನಾಯಕಿ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ ಪತನ;ವಿಡಿಯೋ ವೈರಲ್‌

Helicopter Crash: ಶಿವಸೇನೆ ನಾಯಕಿ ಸುಷ್ಮಾ ಆಂದಾರೆ ಪ್ರಯಾಣಿಸಬೇಕಾಗಿದ್ದ ಈ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ಗಿರಕಿ ಹೊಡೆದು ನೆಲಕ್ಕಪ್ಪಳಿಸಿದೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

VISTARANEWS.COM


on

Helicopter Crash
Koo

ರಾಯ್‌ಗಢ: ಶಿವಸೇನೆ ನಾಯಕಿ(Shivsene Leader) ಪ್ರಯಾಣಕ್ಕೆಂದು ನಿಗದಿಯಾಗಿದ್ದ ಹೆಲಿಕಾಪ್ಟರ್‌(helicopter Crash)ವೊಂದು ಮಹಾರಾಷ್ಟ್ರ(Maharashtra)ದಲ್ಲಿ ಲ್ಯಾಂಡಿಂಗ್‌ ವೇಳೆ ಪತನಗೊಂಡಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸದೇ ಭಾರೀ ಅನಾಹುತವೊಂದು ತಪ್ಪಿದೆ. ಶಿವಸೇನೆ ನಾಯಕಿ ಸುಷ್ಮಾ ಆಂದಾರೆ (Sushma Andhare) ಪ್ರಯಾಣಿಸಬೇಕಾಗಿದ್ದ ಈ ಹೆಲಿಕಾಪ್ಟರ್‌ ಲ್ಯಾಂಡಿಂಗ್‌ (Landing) ವೇಳೆ ಗಿರಕಿ ಹೊಡೆದು ನೆಲಕ್ಕಪ್ಪಳಿಸಿದೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral Video) ಆಗಿದೆ.

ರಾಯ್‌ಗಢದ ಮಹಾದ್‌ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಯಾವುದೋ ಒಂದು ಬಯಲು ಪ್ರದೇಶದಲ್ಲಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ ಹೆಲಿಕಾಪ್ಟರ್‌ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿತ್ತು. ಗಾಳಿಯಲ್ಲಿ ತೂಗಾಡುವಂತೆ ಕಾಣುತ್ತಿದ್ದ ಹೆಲಿಕಾಪ್ಟರ್‌ ಇದ್ದಕ್ಕಿದ್ದಂತೆ ನೆಲಕ್ಕೆ ಅಪ್ಪಳಿಸುತ್ತಿದೆ. ತಕ್ಷಣ ಆಸ್ಥಳದಲ್ಲಿ ಹೊಗೆ ಧೂಳು ತುಂಬಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಹೆಲಿಕಾಪ್ಟರ್‌ನಲ್ಲಿ ಪೈಲಟ್‌ ಹೇಗೂ ಅದರಿಂದ ಕೆಳಗೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ. ಆತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಹೆಲಿಕಾಪ್ಟರ್‌ ಸಂಪೂರ್ಣವಾಗಿ ಜಖಂ ಆಗಿದೆ.ಪೊಲೀಸರು ಮತ್ತು ರಕ್ಷಣಾ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದೆ. ಇನ್ನು ತಾವು ಪ್ರಯಾಣಿಸಬೇಕಾಗಿದ್ದ ಹೆಲಿಕಾಪ್ಟರ್‌ ಪತನವಾಗಿರುವ ಬಗ್ಗೆ ಸುಷ್ಮಾ ಆತಂಕ ವ್ಯಕ್ತಪಡಿಸಿದ್ದಾರೆ. ಬಳಿಕ ತಮ್ಮ ಕಾರಿನಲ್ಲೇ ಪ್ರಚಾರ ಕಾರ್ಯಕ್ರಮ ನಿಗದಿಯಾಗಿದ್ದ ಸ್ಥಳಕ್ಕೆ ತೆರಳಿದ್ದಾರೆ.

ಇದನ್ನೂ ಓದಿ:United Nations: ಪಾಕಿಸ್ತಾನ ದುಷ್ಕೃತ್ಯಗಳ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದೆ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

ಕಳೆದ ವರ್ಷ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಹೆಲಿಕಾಪ್ಟರ್‌ ದುರಂತದಿಂದ ಗ್ರೇಟ್‌ ಎಸ್ಕೇಪ್‌ ಆಗಿದ್ದರು. ಅವರು ಜಕ್ಕೂರಿನಿಂದ ಮುಳಬಾಗಿಲಿಗೆ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ರಣಹದ್ದು ಒಂದು ಹೆಲಿಕಾಪ್ಟರ್‌ನ ವಿಂಡ್‌ ಶೀಲ್ಡ್‌ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿತು. ವಿಂಡ್‌ ಶೀಲ್ಡ್‌ ಸಂಪೂರ್ಣ ಒಡೆದು ಅಪಾಯದ ಸ್ಥಿತಿ ತಲುಪಿತು. ಕೂಡಲೇ ಎಚ್‌ಎಎಲ್‌ ಹೆಲಿಕಾಪ್ಟರನ್ನು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಈ ಮೂಲಕ ಭಾರಿ ಅಪಾಯದಿಂದ ಡಿ.ಕೆ. ಶಿವಕುಮಾರ್‌ ಪಾರಾಗಿದ್ದರು.  ಡಿಕೆ ಶಿವಕುಮಾರ್‌ ಅವರನ್ನು ಖಾಸಗಿ ಸುದ್ದಿ ವಾಹಿನಿಯ ವರದಿಗಾರ ಸಂದರ್ಶನ ನಡೆಸುವಾಗ ಈ ಅವಘಡ ಸಂಭವಿಸಿತ್ತು. ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿತ್ತು. ರಣಹದ್ದು ಬಡಿದ ತಕ್ಷಣ ಹೆಲಿಕಾಪ್ಟರ್‌ ಗಾಜು ಪುಡಿಪುಡಿಯಾಗಿದ್ದು, ಒಂದು ಕ್ಷಣ ಡಿಕೆ ಶಿವಕುಮಾರ್‌ ಹಾಗೂ ವರದಿಗಾರನ ಮುಖದಲ್ಲಿ ಆತಂಕ ಆವರಿಸಿತ್ತು. ಜೊತೆಗಿದ್ದ ಛಾಯಾಗ್ರಾಹಕನಿಗೆ ಗಾಜಿನ ಚೂರು ಚುಚ್ಚಿದ್ದು, ಸಣ್ಣಪುಟ್ಟ ಗಾಯಗಳಾಗಿದ್ದವು.

Continue Reading

ತಂತ್ರಜ್ಞಾನ

Bomber Drone: ಭಾರತದ ಮೊದಲ ಬಾಂಬರ್ ಡ್ರೋನ್ ಅನಾವರಣ; ಇದರ ವಿಶೇಷತೆ ಹೀಗಿದೆ ನೋಡಿ

Bomber Drone: ಭಾರತದ ಮೊದಲ ಮಿಲಿಟರಿ ದರ್ಜೆಯ (Indian military) ಬಾಂಬರ್ ಡ್ರೋನ್ ಇದಾಗಿದೆ. ಡ್ರೋನ್‌ಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವ, ಹೆಲಿಕಾಪ್ಟರ್‌ಗಿಂತ ಚಿಕ್ಕದಾಗಿರುವ ಈ ವಾಹಕ, ಪೈಲಟ್‌ರಹಿತವಾಗಿ ಕಾರ್ಯಾಚರಿಸಿ ಬಾಂಬ್‌ಗಳನ್ನು ಹೊತ್ತೊಯ್ದು ವೈರಿನೆಲೆಗಳ ಮೇಲೆ ಉದುರಿಸಬಲ್ಲುದು ಎಂದು ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಸಂಸ್ಥಾಪಕ, ಸಿಇಒ ಸುಹಾಸ್ ತೇಜ ಸ್ಕಂದ ವಿವರಿಸಿದ್ದಾರೆ.

VISTARANEWS.COM


on

bomber drone
Koo

ಬೆಂಗಳೂರು: ಭಾರತದ ಮೊತ್ತ ಮೊದಲ ಸ್ವದೇಶಿ ತಂತ್ರಜ್ಞಾನದ ಬಾಂಬರ್‌ ಡ್ರೋನ್‌ (Indigenous Bomber Drone) ಬೆಂಗಳೂರಿನಲ್ಲಿ ಅನಾವರಣಗೊಂಡಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ (Electronic City) ಅನಾವರಣಗೊಂಡಿರುವ ಈ ಬಾಂಬರ್‌ ಡ್ರೋನ್‌ ಅನ್ನು ʼಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಟೆಕ್ನಾಲಜೀಸ್ʼ ಸಂಸ್ಥೆ ನಿರ್ಮಾಣ ಮಾಡಿದೆ. ಇದಕ್ಕೆ FWD-200B UAV ಎಂದು ಹೆಸರಿಡಲಾಗಿದೆ.

ಭಾರತದ ಮೊದಲ ಮಿಲಿಟರಿ ದರ್ಜೆಯ (Indian military) ಬಾಂಬರ್ ಡ್ರೋನ್ ಇದಾಗಿದೆ. ಡ್ರೋನ್‌ಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವ, ಹೆಲಿಕಾಪ್ಟರ್‌ಗಿಂತ ಚಿಕ್ಕದಾಗಿರುವ ಈ ವಾಹಕ, ಪೈಲಟ್‌ರಹಿತವಾಗಿ ಕಾರ್ಯಾಚರಿಸಿ ಬಾಂಬ್‌ಗಳನ್ನು ಹೊತ್ತೊಯ್ದು ವೈರಿನೆಲೆಗಳ ಮೇಲೆ ಉದುರಿಸಬಲ್ಲುದು ಎಂದು ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಸಂಸ್ಥಾಪಕ, ಸಿಇಒ ಸುಹಾಸ್ ತೇಜ ಸ್ಕಂದ ವಿವರಿಸಿದ್ದಾರೆ.

FWD-200B UAV ಎಂದು ತಾಮತ್ರಿಕವಾಗಿ ಕರೆಯಲಾಗುವ ಈ ಡ್ರೋನ್ ವಿಮಾನವನ್ನು ಇಂದು ಎಲೆಕ್ಟ್ರಾನಿಕ ಸಿಟಿಯಲ್ಲಿ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಸಂಸ್ಥೆ ಅನಾವರಣ ಮಾಡಿದೆ. ರಕ್ಷಣಾ ಕ್ಷೇತ್ರದಲ್ಲಿ ವಿದೇಶಗಳ ಮೇಲಿನ ಅವಲಂಬನೆಗೆ ಬ್ರೇಕ್ ಹಾಕಲು ಸ್ವದೇಶಿ ಡ್ರೋನ್ ವಿಮಾನ‌ ತಯಾರಿಸಲಾಗಿದೆ. ಇದರೊಂದಿಗೆ ಸುಧಾರಿತ ಮಾನವರಹಿತ ಯುದ್ಧ ಡ್ರೋನ್ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ. ಇದರ ಆರಂಬಿಕ ಟೆಸ್ಟ್‌ಗಳು ಆಗಿದ್ದು, ಅಡ್ವಾನ್ಸ್‌ಡ್‌ ಪರೀಕ್ಷೆಗಳು ಇನ್ನೆರಡು ತಿಂಗಳಲ್ಲಿ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಇದರ ಉದ್ಘಾಟನೆ ಮಾಡಿಸುವ ಚಿಂತನೆಯನ್ನು ಸುಹಾಸ್ ಹಂಚಿಕೊಂಡಿದ್ದಾರೆ.

bomber drone flying vedge ceo suhas

ಭಾರತದಲ್ಲಿ ಸದ್ಯ ದಾಳಿ ಡ್ರೋನ್‌ಗಳು ಲಭ್ಯವಿಲ್ಲ. ಇರಾನ್‌ ಹಾಗೂ ರಷ್ಯಾಗಳು ಇದನ್ನು ಈಗಾಗಲೇ ಬಳಸುತ್ತಿವೆ. ಇಸ್ರೇಲ್‌ ಮೇಲೆ ದಾಳಿ ಮಾಡಲು ಕೂಡ ಪ್ಯಾಲೆಸ್ತೀನಿನ ಬಂಡುಕೋರರು ಸಣ್ಣ ಗಾತ್ರದ ಇಂಥದೇ ಡ್ರೋನ್‌ಗಳನ್ನು ಬಳಸಿದ್ದರು. ಈ ಬಗೆಯ ಡ್ರೋನ್‌ಗಳು ಆಧುನಿಕ ಯುದ್ಧದ ವೈಖರಿಯನ್ನೇ ಬದಲಿಸಲಿವೆ. ಕ್ಷಿಪಣಿಗಳು ದುಬಾರಿಯಾಗಿದ್ದು, ಅದಕ್ಕಿಂತ ಡ್ರೋನ್‌ಗಳು ಅಗ್ಗವಾಗಿವೆ. FWD-200B UAV ಸುಮಾರು 200 ಕಿಲೋದಷ್ಟು ಪೇಲೋಡ್‌ ಅನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಭಾರತ ಈಗ ಅಮೆರಿಕದ ಪ್ರಿಡೇಟರ್ ಡ್ರೋನ್‌ಗಳನ್ನು (Predator Drone) ತರಿಸುತ್ತಿದೆ. ಆದರೆ ಇದು 250 ಕೋಟಿಗಳಷ್ಟು ದುಬಾರಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ದೇಶೀಯವಾಗಿ ತಯಾರಾದ FWD-200B ಭಾರತದಲ್ಲಿ ಸ್ವದೇಶಿ ತಂತ್ರಜ್ಞಾನದೊಂದಿಗೆ ಕೇವಲ 25ಯಿಂದ 50 ಕೋಟಿ ವೆಚ್ಚದಲ್ಲಿ ತಯಾರಾಗಲಿದೆ. ಭಾರತವನ್ನು ಜಾಗತಿಕ ಡ್ರೋನ್ ಉತ್ಪಾದನೆ ಮತ್ತು ತಂತ್ರಜ್ಞಾನದ ಕೇಂದ್ರವಾಗಿಸುವ ಗುರಿ ತಮ್ಮದು. ಇನ್ನು ಎರಡು ತಿಂಗಳಲ್ಲಿ ಇದು ಭಾರತದ ಮಿಲಿಟರಿಯನ್ನು ಸೇರುವ ಆಶಯ ಇದೆ. ಈ ಮೂಲಕ ನಮ್ಮ ರಾಷ್ಟ್ರದ ವಾಯು ರಕ್ಷಣಾ ವ್ಯವಸ್ಥೆಯನ್ನು ಸಶಕ್ತಗೊಳಿಸಲು ಸಂಸ್ಥೆ ಮುಂದಾಗಿದೆ ಎಂದು ಸುಹಾಸ್‌ ತಿಳಿಸಿದ್ದಾರೆ.

ಇದನ್ನೂ ಓದಿ: Tejas Aircraft: ಸ್ವದೇಶಿ ʼತೇಜಸ್ʼ ವಿಮಾನದಲ್ಲಿ ಮೋದಿ ಹಾರಾಟ: ಪಾಕಿಸ್ತಾನ, ಚೀನಾಗೆ ನಡುಕ!

Continue Reading

ವೈರಲ್ ನ್ಯೂಸ್

Viral Video: ಎಲ್ಲ ಖುಷಿಯನ್ನು ಯಾಕೆ ಮನುಷ್ಯ ಮಾತ್ರ ಅನುಭವಿಸಬೇಕು? ಸ್ಮಿಮ್ಮಿಂಗ್‌ ಪೂಲ್‌ಗೆ ಲಗ್ಗೆ ಇಟ್ಟ ಮಂಗಗಳು

Viral Video: ದೇಶದಲ್ಲಿ ಹೆಚ್ಚುತ್ತಿರುವ ಬಿಸಲಿ ಬೇಗೆಗೆ ಎಲ್ಲರೂ ಹೈರಾಣಾಗಿದ್ದಾರೆ. ಕೆಲವು ದಿನಗಳ ಹಿಂದೆ ಮಕ್ಕಳನ್ನು ಸೆಕೆಯಿಂದ ಪಾರು ಮಾಡಲು ತರಗತಿ ಕೋಣೆಗೆ ಎರಡು ಅಡಿ ನೀರು ತುಂಬಿಸಿ ಈಜುಕೊಳವನ್ನಾಗಿ ಪರಿವರ್ತಿಸಿದ ವಿಡಿಯೊ ವೈರಲ್‌ ಆಗಿತ್ತು. ಇದೀಗ ಸುಡುವ ಬಿಸಿಲಿನಿಂದ ಪಾರಾಗಲು ಮಂಗಗಳ ಗುಂಪು ಸ್ವಿಮ್ಮಿಂಗ್‌ ಪೂಲ್‌ಗೆ ಲಗ್ಗೆ ಇಟ್ಟಿರುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೊವನ್ನು ನೀವೂ ನೋಡಿ.

VISTARANEWS.COM


on

Viral Video
Koo

ನವದೆಹಲಿ: ದೇಶದೆಲ್ಲೆಡೆ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ. ಈ ವೇಳೆ ಕೊಳ, ನದಿ ಕಂಡರೆ ಸಾಕು ಹೋಗಿ ಈಜಾಡೋಣ ಎನಿಸುತ್ತದೆ. ಈ ಪರಿಯ ಬಿಸಿಲಿನ ಬೇಗೆಗೆ ಮನುಷ್ಯರು ಮಾತ್ರವಲ್ಲ ಪ್ರಾಣಿಗಳೂ ಕಂಗಾಲಾಗಿವೆ. ಈ ಮಧ್ಯೆ ಮನುಷ್ಯರು ಮಾತ್ರ ಯಾಕೆ ನಾವೂ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಈಜಾಡಿ ತಂಪು ಮಾಡಿಕೊಳ್ಳುತ್ತೇವೆ ಎಂಬಂತಿದೆ ಈ ಮಂಗಗಳ ವರ್ತನೆ. ಹೌದು, ಮುಂಬೈಯ ವಸತಿ ಸಂಕೀರ್ಣದ ಈಜುಕೊಳಕ್ಕೆ ಲಗ್ಗೆ ಇಟ್ಟ ಮಂಗಗಳ ಗುಂಪು ನೀರಾಟವಾಡುವ ಮೂಲಕ ಮೈ ಮನಸ್ಸು ಹಗುರ ಮಾಡಿಕೊಂಡಿವೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ಮುಂಬೈಯ ಬೋರಿವಾಲಿ ಪ್ರದೇಶದಲ್ಲಿರುವ ವಸತಿ ಸಂಕೀರ್ಣದೊಳಗೆ ಕಂಡುಬಂದ ಈ ದೃಶ್ಯವನ್ನು ಸೆರೆ ಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲಾಗಿದೆ. ಅದು ಪರಸ್ಪರ ಸಂಪರ್ಕ ಹೊಂದಿರುವ ಎರಡು ಈಜು ಕೊಳಗಳು. ಮೊದಲ ವಿಡಿಯೊದಲ್ಲಿ ಕೊಳದಲ್ಲಿ ಮಂಗಗಳು ಈಜುತ್ತಿರುವುದು ಕಂಡು ಬಂದರೆ ಎರಡನೇ ವಿಡಿಯೊದಲ್ಲಿ ಒಂದು ಕೊಳದಿಂದ ಇನ್ನೊಂದು ಕೊಳಕ್ಕೆ ಮಂಗಗಳು ನೆಗೆಯುತ್ತಿರುವುದು ಕಾಣಿಸುತ್ತಿದೆ. ʼಮಂಗಗಳು ಈಜು ಕೊಳಕ್ಕೆ ಮರಳಿವೆ. ಈ ಬೇಸಿಗೆಯ ದಿನವನ್ನು ಸಿಮ್ಮಿಂಗ್‌ ಪೂಲ್‌ನಲ್ಲಿ ಕಳೆಯುತ್ತಿವೆʼ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

ನೆಟ್ಟಿಗರು ಏನಂದ್ರು?

ಸದ್ಯ ಮಂಗಗಳ ಈ ನೀರಾಟ ನೆಟ್ಟಿಗರ ಗಮನ ಸೆಳೆದಿದೆ. ಈಗಾಗಲೇ ಸಾವಿರಾರು ಮಂದಿ ನೋಡಿ ಮನಸ್ಸು ಹಗುರ ಮಾಡಿಕೊಂಡಿದ್ದಾರೆ. ʼʼಈ ಬಿಸಿಲಿನ ಬೇಗೆಯಿಂದ ಪಾರಾಗಲು ಇದು ಅತ್ಯುತ್ತಮ ಮಾರ್ಗʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಸೂಪರ್‌. ಈ ಭೂಮಿ ಎಲ್ಲರಿಗಾಗಿ ಎನ್ನುವ ಮಾತನ್ನು ಈ ವಿಡಿಯೊ ನಿಜವಾಗಿಸಿದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼವಾವ್‌. ಈ ಕೋತಿಗಳ ಆಟ ನೋಡಲು ಖುಷಿಯಾಗುತ್ತಿದೆʼʼ ಎಂದು ಮತ್ತೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ. ʼʼಜೀವನ ಎಂದರೆ ಇದುʼʼ ಎನ್ನುವ ಉದ್ಘಾರ ಮಗದೊಬ್ಬರದ್ದು. ʼʼಈ ಕೋತಿಗಳು ಕೊಳದಲ್ಲಿ ಮಲ ವಿಸರ್ಜನೆ ಮಾಡದಿರುವವರೆಗೆ ಈಜುವುದು ಸ್ವೀಕಾರಾರ್ಹʼʼ ಎಂದು ಇನ್ನು ಕೆಲವರು ಹೇಳಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ದೇಶಾದ್ಯಂತ ಅನುಭವಕ್ಕೆ ಬರುತ್ತಿರುವ ಬಿಸಿಲಿನ ಝಳದ ಗಂಭೀರತೆಯನ್ನು ತೆರೆದಿಟ್ಟಿದೆ. ಜತೆಗೆ ನೋಡುಗರ ತುಟಿಯಂಚಿನಲ್ಲಿ ಕಿರುನಗೆ ಅರಳಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: Viral News: ಸೆಕೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಕಾಪಾಡಲು ಶಿಕ್ಷಕರ ಸೂಪರ್‌ ಐಡಿಯಾ; ಇಲ್ಲಿದೆ ವಿಡಿಯೊ

ಮಂಗಗಳು ಈಜುಕೊಳದಲ್ಲಿ ಈ ರೀತಿ ನೀರಾಟವಾಡುತ್ತಿರುವ ಪ್ರಸಂಗ ಇದು ಮೊದಲೇನಲ್ಲ. ಹಿಂದೆಯೂ ಇದೇ ರೀತಿಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಮನೆಯೊಂದರ ಬಾಲ್ಕನಿಯಲ್ಲಿ ಮಂಗವೊಂದು ಕುಳಿತಿರುತ್ತದೆ. ಸ್ವಲ್ಪ ಹೊತ್ತು ಆಚೆ-ಈಚೆ ನೋಡುವ ಅದು ಬಳಿಕ ಆ ಕಟ್ಟಡದ ಕೆಳಭಾಗದಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ಗೆ ಜಿಗಿದು ಈಜಾಡುತ್ತದೆ. ʼಯಾಕೆ ಎಲ್ಲ ಸಂತೋಷವನ್ನು ಮನುಷ್ಯ ಮಾತ್ರ ಅನುಭವಿಸಬೇಕು? ಪ್ರಾಣಿಗಳಿಗೂ ಈಜಲು ಬರುತ್ತೆʼ ಎನ್ನುವ ಅರ್ಥಪೂರ್ಣ ಕ್ಯಾಪ್ಶನ್‌ ನೀಡಿ ಈ ವಿಡಿಯೊವನ್ನು ಶೇರ್‌ ಮಾಡಲಾಗಿತ್ತು. ಇದು ಕೂಡ ಲಕ್ಷಾಂತರ ಮಂದಿಯ ಗಮನ ಸೆಳೆದಿತ್ತು. ಮಂಗನ ಬುದ್ಧಿವಂತಿಕೆಗೆ ಹಲವರು ತಲೆದೂಗಿದ್ದರು.

Continue Reading

ದೇಶ

Ram Mandir:ಪಾಕ್‌ನ 200 ಸಿಂಧಿ ಯಾತ್ರಿಕರು ಅಯೋಧ್ಯೆಗೆ ಭೇಟಿ; ಭರ್ಜರಿ ಸ್ವಾಗತ

Ram Mandir: ಶ್ರೀರಾಮ ಮಂದಿರಕ್ಕೆ ಭೇಟಿ ನೀಡುಲೆಂದು ಪಾಕಿಸ್ತಾನದ ಸಿಂಧಿ ಸಮುದಾಯದ 200 ಜನರ ನಿಯೋಗ ಇಂದು ಅಯೋಧ್ಯೆಗೆ ಬರಲಿದೆ. ಈ ಬಗ್ಗೆ ದೇಗುಲದ ಟ್ರಸ್ಟ್‌ ಮಾಹಿತಿ ನೀಡಿದ್ದು, ಪಾಕಿಸ್ತಾನದ ಸಿಂಧಿ ಸಮುದಾಯ ಒಂದು ತಿಂಗಳು ಭಾರತದಲ್ಲಿ ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದು, ರಸ್ತೆ ಮೂಲಕ ಪ್ರಯಾಗರಾಜ್‌ನಿಂದ ಅಯೋಧ್ಯೆಗೆ ಬರಲಿದೆ. ಇವರ ಜೊತೆಗೆ ಭಾರತ ಸಿಂಧಿ ಸಮುದಾಯದ 150ಕ್ಕೂ ಹೆಚ್ಚು ಜನ ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ

VISTARANEWS.COM


on

Ram Mandir
Koo

ಉತ್ತರಪ್ರದೇಶ:ಶ್ರೀರಾಮ ಮಂದಿರ(Ram Mandir)ಕ್ಕೆ ಭೇಟಿ ನೀಡುಲೆಂದು ಪಾಕಿಸ್ತಾನದ ಸಿಂಧಿ ಸಮುದಾಯದ 200 ಜನರ ನಿಯೋಗ ಇಂದು ಅಯೋಧ್ಯೆ(Ayodhya)ಗೆ ಬರಲಿದೆ. ಈ ಬಗ್ಗೆ ದೇಗುಲದ ಟ್ರಸ್ಟ್‌ ಮಾಹಿತಿ ನೀಡಿದ್ದು, ಪಾಕಿಸ್ತಾನದ ಸಿಂಧಿ ಸಮುದಾಯ ಒಂದು ತಿಂಗಳು ಭಾರತದಲ್ಲಿ ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದು, ರಸ್ತೆ ಮೂಲಕ ಪ್ರಯಾಗರಾಜ್‌ನಿಂದ ಅಯೋಧ್ಯೆಗೆ ಬರಲಿದೆ. ಇವರ ಜೊತೆಗೆ ಭಾರತ ಸಿಂಧಿ ಸಮುದಾಯದ 150ಕ್ಕೂ ಹೆಚ್ಚು ಜನ ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಶ್ರೀ ಕ್ಷೇತ್ರ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಈ ಪವಾಸಿ ತಂಡವನ್ನು ಸ್ವಾಗತಿಸಲಿದ್ದಾರೆ. ರಾಮ್‌ ಕೀ ಪೈದಿಯಲ್ಲಿ ಇದಕ್ಕೆಂದೇ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರಯಾಗ್‌ರಾಜ್‌ನಿಂ ಈ ಪ್ರವಾಸಿಗರ ತಂಡ ಬಸ್‌ ಮೂಲಕ ಅಯೋಧ್ಯೆ ತಲುಪಲಿದೆ. ಭರತ್‌ ಕುಂಡ, ಗುಪ್ತಾರ್‌ ಘಾಟ್‌, ರೂಪನ್‌ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ಕೊಡಲಾಗುತ್ತದೆ ಎಂದು ರಾಷ್ಟ್ರೀಯ ಸಿಂಧಿ ವಿಕಾಸ್‌ ಪರಿಷತ್‌ನ ಸದಸ್ಯ ವಿಶ್ವ ಪ್ರಕಾಶ್‌ ರೂಪನ್‌ ಹೇಳಿದ್ದಾರೆ.

ಸಿಂಧಿ ಯಾತ್ರಿಕರಿಗೆ ವಿಶೇಷ ವ್ಯವಸ್ಥೆ

ಅಯೋಧ್ಯೆಗೆ ಆಗಮಿಸುತ್ತಿರುವ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತಿರುವ ಸಿಂಧಿ ಸಮುದಾಯದ ಯಾತ್ರಿಕರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಯಾತ್ರಿಕರಿಗೆಂದೇ ಅಯೋಧ್ಯೆಯ ಉದಾಸಿನ್‌ ರಿಷಿ ಆಶ್ರಮ ಮತ್ತು ಶಬರಿ ರಸೋಯಿ ಆಶ್ರಮಗಳಲ್ಲಿ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆ ರಾಮ್‌ ಕೀ ಪೈದಿಯಲ್ಲಿ ನಡೆಯಲಿರುವ ಸರಯೂ ಆರತಿಯಲ್ಲಿ ಎಲ್ಲಾ ಯಾತ್ರಿಕರು ಭಾಗಿಯಾಗಲಿದ್ದಾರೆ. ಆ ಸಂದರ್ಭದಲ್ಲಿ ಚಂಪತ್‌ ರೈ ಸಿಂಧಿ ಯಾತ್ರಿಕರನ್ನು ಸ್ವಾಗತಿಸಲಿದ್ದಾರೆ.

ಅಲ್ಲದೇ ಅಯೋಧ್ಯೆಯ ಸಿಂಧಿ ಧಾಮ್‌ ಆಶ್ರಮದಲ್ಲಿ ಪಾಕ್‌ ಸಿಂಧಿ ಯಾತ್ರಿಕರಿಗೆಂದೇ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸಲಿರುವ ಸಿಂಧಿ ಸಮುದಾಯದ ಯಾತ್ರಿಕರೂ ಭಾಗಿಯಾಗಿ ಪಾಕ್‌ ಯಾತ್ರಿಕರನ್ನು ಬರಮಾಡಿಕೊಳ್ಳಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಸಂತ ಸದಾ ರಾಮ ದರ್ಬಾರ್‌ ಮಠದ ಪೀಠಾಧಿಪತಿ ಯುಧಿಷ್ಠಿರ ಲಾಲ್‌ ಕೂಡ ಸಾಥ್‌ ನೀಡಲಿದ್ದಾರೆ. ಇಂದು ರಾತ್ರಿ ಸಿಂಧಿ ಪ್ರವಾಸಿಗರು ಲಕ್ನೋಗೆ ತೆರಳಿ ಅಲ್ಲಿಂದ ರಾಯ್‌ಪುರಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: Lalu Prasad Yadav: ಬಿಹಾರದಲ್ಲಿ ಲಾಲೂ ಪ್ರಸಾದ್‌ ಯಾದವ್‌ v/s ಲಾಲೂ ಪುತ್ರಿ

 ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಬಾಲಕ ರಾಮ ವಿಗ್ರಹದ ಪ್ರಾಣ ಪ್ರತಿಷ್ಠೆ ನೆರವೇರಿದೆ. ಜನವರಿ 22ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಸಮಾರಂಭ ಜನವರಿ 22ರಂದು ನಡೆಯಿತು. ಅದಾದ ಬಳಿಕ ಜನವರಿ 23ರಿಂದ ಈ ದೇಗುಲ ಭಕ್ತರ ಪ್ರವೇಶಕ್ಕೆ ಮುಕ್ತವಾಗಿದ್ದು, ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಿ ಬಾಲಕ ರಾಮನ ದರ್ಶನ ಮಾಡುತ್ತಿದ್ದಾರೆ. ಸದ್ಯ ರಾಮ ಮಂದಿರದಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಭಕ್ತರಿಗೆ ದೇವರ ದರ್ಶನ ಭಾಗ್ಯ ಲಭಿಸಲಿದೆ. ಆರಂಭದಲ್ಲಿ ದೇಗುಲದ ಬಾಗಿಲನ್ನು ಬೆಳಗ್ಗೆ 7 ಗಂಟೆಗೆ ತೆರೆಯಲಾಗುತ್ತಿತ್ತು. ಬಳಿಕ ಪ್ರವಾಸಿಗರ ನೂಕು ನುಗ್ಗಲು ಗಮನಿಸಿ ದರ್ಶನದ ಸಮಯವನ್ನು ಹೆಚ್ಚಿಸಲಾಗಿತ್ತು. ಈ ಮಧ್ಯೆ ಮಧ್ಯಾಹ್ನ 12:30ರಿಂದ 1:30ರ ವರೆಗೆ ಬಾಲಕ ರಾಮನಿಗೆ ವಿಶ್ರಾಂತಿ ಸಮಯವಾಗಿರುವುದರಿಂದ ಈ ವೇಳೆ ಭಕ್ತರಿಗೆ ದರ್ಶನ ಲಭಿಸುವುದಿಲ್ಲ.

Continue Reading
Advertisement
Helicopter Crash
ದೇಶ2 mins ago

Helicopter Crash: ಶಿವಸೇನೆ ನಾಯಕಿ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ ಪತನ;ವಿಡಿಯೋ ವೈರಲ್‌

Murder case
ಕ್ರೈಂ10 mins ago

Murder case : ಹುಬ್ಬಳ್ಳಿ, ಬೆಂಗಳೂರಲ್ಲಿ ಅಪರಿಚಿತ ಶವ ಪತ್ತೆ; ಹಂತಕರ ಬೆನ್ನಿಗೆ ಬಿದ್ದ ಖಾಕಿ ಪಡೆ

Hockey India
ಕ್ರೀಡೆ23 mins ago

Hockey India: ಭಾರತ ಮಹಿಳಾ ಹಾಕಿ ತಂಡಕ್ಕೆ 22 ವರ್ಷದ ಸಲೀಮಾ ನೂತನ ನಾಯಕಿ

Prajwal Revanna Case Revanna withdraws anticipatory bail plea
ಕ್ರೈಂ31 mins ago

Prajwal Revanna Case: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ರೇವಣ್ಣ; ವಾಪಸ್‌ ಪಡೆಯಲು ಕೋರ್ಟ್‌ ಹೇಳಿದ್ದೇಕೆ?

Kannada Serials TRP puttakkana makkalu top the list
ಕಿರುತೆರೆ31 mins ago

Kannada Serials TRP: ಈ ವಾರ ಟಿಆರ್‌ಪಿಯಲ್ಲಿʻ ಪುಟ್ಟಕ್ಕನ ಮಕ್ಕಳುʼ ಟಾಪ್‌ 1: ಕಲರ್ಸ್‌ನಲ್ಲಿ ‘ರಾಮಾಚಾರಿ’ಗೆ ಮೊದಲ ಸ್ಥಾನ!

bomber drone
ತಂತ್ರಜ್ಞಾನ37 mins ago

Bomber Drone: ಭಾರತದ ಮೊದಲ ಬಾಂಬರ್ ಡ್ರೋನ್ ಅನಾವರಣ; ಇದರ ವಿಶೇಷತೆ ಹೀಗಿದೆ ನೋಡಿ

Viral Video
ವೈರಲ್ ನ್ಯೂಸ್42 mins ago

Viral Video: ಎಲ್ಲ ಖುಷಿಯನ್ನು ಯಾಕೆ ಮನುಷ್ಯ ಮಾತ್ರ ಅನುಭವಿಸಬೇಕು? ಸ್ಮಿಮ್ಮಿಂಗ್‌ ಪೂಲ್‌ಗೆ ಲಗ್ಗೆ ಇಟ್ಟ ಮಂಗಗಳು

United Nations
ವಿದೇಶ46 mins ago

United Nations: ಪಾಕಿಸ್ತಾನ ದುಷ್ಕೃತ್ಯಗಳ ಟ್ರ್ಯಾಕ್‌ ರೆಕಾರ್ಡ್‌ ಹೊಂದಿದೆ; ವಿಶ್ವಸಂಸ್ಥೆಯಲ್ಲಿ ಗುಡುಗಿದ ಭಾರತ

Karnataka Weather Forecast
ಮಳೆ51 mins ago

Karnataka Weather Forecast : ರಾಯಚೂರಲ್ಲಿ ಬಿಸಿಲಾಜ್ಞೆ; ಮಧ್ಯಾಹ್ನ 12-4ರ ವರೆಗೆ ಹೊರಬರದಂತೆ ಡಿಸಿ ಕಟ್ಟಾಜ್ಞೆ!

Rashmika Mandanna's younger sister Shiman
ಟಾಲಿವುಡ್1 hour ago

Rashmika Mandanna: ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ತಂಗಿ ಈಗ ಹೇಗಿದ್ದಾರೆ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ9 hours ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ19 hours ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ1 day ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20244 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20244 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20245 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20245 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20245 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

ಟ್ರೆಂಡಿಂಗ್‌