ಇಂದಿನ 5 ಪ್ರಮುಖ ಸುದ್ದಿಗಳು - Vistara News

ಹೊಸ ಸುದ್ದಿ

ಇಂದಿನ 5 ಪ್ರಮುಖ ಸುದ್ದಿಗಳು

ಮಂಗಳವಾರ ಇಡೀ ದಿನ ನಡೆದ ಸುದ್ದಿಗಳಲ್ಲಿ ಪ್ರಮುಖವಾದವು ಇಲ್ಲಿವೆ, ನಿಮಗಾಗಿ…

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎತ್ತಿನ ಹೊಳೆ ಯೋಜನೆಯಲ್ಲಿ ನೀರು ಬಂದರೆ ಅದೃಷ್ಟ: ದೇವೇಗೌಡ ವ್ಯಂಗ್ಯ

ಕೋಲಾರ ಹಾಗೂ ಚಿಕ್ಕಬಳ್ಳಾಪುರಗಳಿಗೆ ಶಾಶ್ವತ ಕುಡಿಯುವ ನೀರನ್ನು ಕಲ್ಪಿಸಲು ಪ್ರಮುಖವಾದದ್ದು ಎನ್ನಲಾಗುವ ಎತ್ತಿನ ಹೊಳೆ ಯೋಜನೆಯಿಂದ ನೀರು ಬಂದರೆ ಅದು ಈ ಭಾಗದ ಜನರ ಪುಣ್ಯ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ವ್ಯಂಗ್ಯವಾಡಿದ್ದಾರೆ.

KGF Collection | ಅರ್ಧ ಸಾವಿರ ಕೋಟಿ ದಾಟಿದ ಗಳಿಕೆ: ರಾಕಿಭಾಯ್‌ ದಾಖಲೆ !

ಕೆಜಿಎಫ್‌ 2‌ ಬಾಕ್ಸ್‌ಆಫೀಸ್‌ನಲ್ಲಿ ತೂಫಾನ್‌ ಎಬ್ಬಿಸಿದೆ. ನಾಲ್ಕು ದಿನಗಳಲ್ಲಿ ₹500 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ ವಿಶ್ವದಲ್ಲೇ ದಾಖಲೆ ಸೃಷ್ಟಿಸಿದ ಕನ್ನಡ ಸಿನಿಮಾ.

Explainer: ಕಾಂಗ್ರೆಸ್‌ ಉಳಿಸೋಕೆ ಪ್ರಶಾಂತ್‌ ಕಿಶೋರ್‌ ಪ್ಲಾನ್‌ ಏನು?

ಒಂದಾದ ಮೇಲೊಂದು ರಾಜ್ಯಗಳಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ ಪಕ್ಷವನ್ನು ಉಳಿಸಲು ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಮುಂದಾಗಿದ್ದಾರೆ. ಅವರ ಬುಟ್ಟಿಯಲ್ಲಿ ಏನಿದೆ ಜಾದೂ?

ʼಮೈಸೂರು ಹುಲಿʼಯನ್ನು ಕೈಬಿಟ್ಟಿಲ್ಲ: ಟಿಪ್ಪು ಸುಲ್ತಾನ್‌ ಪಾಠ ಇರಲಿದೆ ಎಂದ ನಾಗೇಶ್‌

ಪ್ರೊ. ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ರಚನಾ ಸಮಿತಿಯು ಅನೇಕ ಸುಳ್ಳು, ಅಪೂರ್ಣ ಹಾಗೂ ಪೂರ್ವಾಗ್ರಹಪೀಡಿತ ಅಂಶಗಳನ್ನು ಶಾಲಾ ಪಠ್ಯದಲ್ಲಿ ಸೇರಿಸಿದೆ ಎಂಬ ಆರೋಪ ಕೇಳಿಬಂದಿತ್ತು.

ʼಪರಾಕ್ರಮಿʼ ಮನೋಜ್‌ ಪಾಂಡೆ ನೂತನ ಸೇನಾ ಮುಖ್ಯಸ್ಥ

ಲೆ | ಜೆನರಲ್‌ ಮನೋಜ್‌ ಪಾಂಡೆ ಮುಂದಿನ ಸೇನಾ ಮುಖ್ಯಸ್ಥರಾಗಿ ಕಾರ್ಯಪ್ರವೃತ್ತರಾಗಲಿದ್ದಾರೆ. ಮನೋಜ್‌ ಪಾಂಡೆ ಸೇನಾ ಮುಖ್ಯಸ್ಥರ ಸ್ಥಾನಕ್ಕೆ ಏರಿದ ಮೊದಲ ಇಂಜಿನಿಯರ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದಾವಣಗೆರೆ

Davanagere News : ಇಳಿ ವಯಸ್ಸಿನಲ್ಲಿ ಕೂಡಿ ಬಂದ ಕಂಕಣ ಭಾಗ್ಯ; ದೂರಾಯಿತು ಒಂಟಿತನ

Davanagere News : ಇತ್ತೀಚೆಗೆ ಯುವಜನತೆ ಮದುವೆಗೆ ವರ ಸಿಗುತ್ತಿಲ್ಲ, ವಧು ಸಿಗುತ್ತಿಲ್ಲ ಅಂತ ಪೆಚಾಡುತ್ತಿದ್ದರೆ, ಇತ್ತ ದಾವಣಗೆರೆಯಲ್ಲಿ ಇಳಿ ವಯಸ್ಸಿನಲ್ಲಿ (Marriage at an early age) ಕಂಕಣ ಭಾಗ್ಯ ಕೂಡಿ ಬಂದಿದ್ದು, ಜೋಡಿಯ ಒಂಟಿತನವು ದೂರಾಗಿದೆ. ಕುಟುಂಬಸ್ಥರ ಸಮ್ಮುಖದಲ್ಲೇ ಸರಳ ಮದುವೆ ಕಾರ್ಯವು ನೆರವೇರಿದೆ.

VISTARANEWS.COM


on

By

Davanagere News Marriage at an early age
Koo

ದಾವಣಗೆರೆ: ಆ ಗ್ರಾಮದಲ್ಲಿ ನಡೆದ ಮದುವೆಯು (Marriage) ಸಂಭ್ರಮದೊಂದಿಗೆ ವಿಶೇಷವಾಗಿಯೂ ಇತ್ತು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರನಿಗೆ 61 ಆದರೆ ವಧುವಿಗೆ 56 ವರ್ಷ.. ಈ ಹಿರಿಯರ ಮದುವೆಗೆ ಕುಟುಂಬಸ್ಥರು ಸೇರಿ ಗ್ರಾಮಸ್ಥರು ಸಾಕ್ಷಿಯಾಗಿದ್ದರು. ಇಳಿ ವಯಸ್ಸಿನಲ್ಲಿ ಕಂಕಣ ಭಾಗ್ಯ ಕೂಡಿ ಬಂದಿದ್ದು, ಕೊನೆಗಾಲದಲ್ಲಿ ಆಸರೆಯಾಗಿರಲು ಇಳಿ ವಯಸ್ಸಿನ ‌ವಧು-ವರ (Marriage at an early age) ಒಂದಾಗಿದ್ದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಈ ವಿಶೇಷ ಮದುವೆ ನಡೆದಿದೆ. 56 ವರ್ಷದ ರುಕ್ಮಿಣಿ ಹಾಗೂ 61 ವರ್ಷದ ನಿವೃತ್ತ ಶಿಕ್ಷಕ ನಾಗರಾಜ್‌ ಎಂಬುವವರು ಸತಿಪತಿಗಳಾದ ಜೋಡಿ.

ಶಾಲಾ‌ ಶಿಕ್ಷಕರಾಗಿ ನಿವೃತ್ತಿ ‌ಹೊಂದಿದ್ದ ನಾಗರಾಜ್, ಪತ್ನಿಯನ್ನು ಕಳೆದುಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದರು. ಇತ್ತ ರುಕ್ಮಿಣಿ ಮದುವೆಯಾಗದೇ ತವರು ಮನೆಯಲ್ಲೇ ಆಶ್ರಯ ಪಡೆದಿದ್ದರು. ಒಂಟಿ ಜೀವಕ್ಕೆ ಜೋಡಿಯೊಂದು ಬೇಕೆಂದು ಹಂಬಲಿಸಿದ್ದ ನಾಗರಾಜ್‌ ಅವರು ಒಬ್ಬಂಟಿಯಾಗಿದ್ದ ರುಕ್ಮಿಣಿಯವರ ಕೈಹಿಡಿದಿದ್ದಾರೆ.

ಇನ್ನೂ ಇವರಿಬ್ಬರ ಮದುವೆಗೆ ಕುಟುಂಬಸ್ಥರು ಒಪ್ಪಿಗೆ ಮುದ್ರೆ ಒತ್ತಿದ್ದಾರೆ. ಕುಂಬಳೂರು ಗ್ರಾಮದ ದೇವಸ್ಥಾನದಲ್ಲಿ ಎರಡು ಕುಟುಂಬಗಳ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನೆರವೇರಿದೆ.

Davanagere News Marriage at an early age

ಇದನ್ನೂ ಓದಿ: Metro Penalty: ಮೆಟ್ರೊ ಸ್ಟೇಷನ್‌ನಲ್ಲಿ ಗರ್ಲ್‌ ಫ್ರೆಂಡ್‌ಗೆ ಕಾಯುತ್ತ ಕೂತರೆ ಬೀಳುತ್ತೆ 50 ರೂ. ದಂಡ!

Abdu Rozik: ತನಗಿಂತ ತುಂಬಾ ಎತ್ತರದ ಹುಡುಗಿ ಜತೆ ಬಿಗ್‌ ಬಾಸ್‌ ಸ್ಪರ್ಧಿಯ ಮದುವೆ!

ಸಾಮಾಜಿಕ ಜಾಲತಾಣದಲ್ಲಿ (social media) ಸಕ್ರಿಯರಾಗಿರುವ ಮತ್ತು ಬಿಗ್ ಬಾಸ್ 16 (Bigg Boss 16) ಖ್ಯಾತಿಯ ಅಬ್ದು ರೋಝಿಕ್ (Abdu Rozik) ಇತ್ತೀಚೆಗಷ್ಟೇ ಅಮಿರಾ ಅವರೊಂದಿಗೆ ಮದುವೆ ನಿಶ್ಚಿತಾರ್ಥವನ್ನು (engagement) ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು ಮುಂದಿನ ಜುಲೈನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಬಾಲಿವುಡ್ ನಟ (Bollywood actor) ಸಲ್ಮಾನ್ ಖಾನ್ (Salman Khan) ಪಾಲ್ಗೊಳ್ಳಲಿದ್ದಾರೆ ಎಂದು ಅಬ್ದು ತಿಳಿಸಿದ್ದಾರೆ.

20 ವರ್ಷದ ಗಾಯಕ (singer) ಅಬ್ದು ರೋಝಿಕ್ ಅವರು ಅಮೀರಾ ಅವರನ್ನು ಆಹಾರ ಉತ್ಸವದಲ್ಲಿ ಭೇಟಿಯಾಗಿದ್ದರು. ಮೊದಲ ನೋಟದಲ್ಲೇ ಇಬ್ಬರಿಗೂ ಪ್ರೀತಿಯಾಗಿತ್ತು ಎಂದು ಅಬ್ದು ತಿಳಿಸಿದರು.

ಅಬ್ದು ಅವರ ನಿಶ್ಚಿತಾರ್ಥವು ಯಾವುದೇ ಪ್ರಚಾರವಲ್ಲ ಎಂದು ಅಬ್ದು ಸ್ಪಷ್ಟಪಡಿಸಿದ್ದು, ನನ್ನಂತಹ ಸಣ್ಣ ವ್ಯಕ್ತಿ ಪ್ರೀತಿಯನ್ನು ಕಂಡುಕೊಂಡಿದ್ದಾನೆ ಎಂದು ಜನರು ನಂಬಲು ಕಷ್ಟವಾಗಬಹುದು ಎಂದು ತಿಳಿಸಿದರು.
ಅಮೀರಾಗಿಂತ ಚಿಕ್ಕವನಾಗಿರುವ ತನ್ನ ಎತ್ತರದ ವ್ಯತ್ಯಾಸವು ನಮ್ಮ ಪ್ರೀತಿಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಹೇಳಿದರು.


ಅಬ್ದು ಅವರು 115 ಸೆಂ ಮತ್ತು ಅಮೀರಾ 155 ಸೆಂ.ಮೀ. ಎತ್ತರವಿದ್ದಾರೆ. ಅವರಿಬ್ಬರೂ ಕಡಿಮೆ ಎತ್ತರದಿಂದಾಗಿ ತಮ್ಮ ಸಂಗಾತಿಯನ್ನು ಹುಡುಕುವ ಬಗ್ಗೆ ಚಿಂತಿತರಾಗಿದ್ದರು. ಆದರೆ ಅಮೀರಾ ಅವರನ್ನು ಭೇಟಿ ಮಾಡಿದ್ದಕ್ಕಾಗಿ ಕೃತಜ್ಞರಾಗಿರುತ್ತೇನೆ. ಅಮೀರಾ ತನಗಿಂತ ಎತ್ತರವಾಗಿದ್ದರೂ ಅದು ನಮ್ಮ ಸಂಬಂಧದ ನಡುವೆ ಎಂದಿಗೂ ಬಂದಿಲ್ಲ ಎಂದು ತಿಳಿಸಿದರು.


ಕೆಲವು ದಿನಗಳ ಹಿಂದೆ ಅಬ್ದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅವರು ಅಮೀರಾ ಅವರ ಮುಖವನ್ನು ಬಹಿರಂಗಪಡಿಸಲಿಲ್ಲ, ಆದರೆ ಹೃದಯದ ಆಕಾರದ ವಜ್ರದ ಉಂಗುರದ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸುದ್ದಿಯನ್ನು ಹಂಚಿಕೊಂಡ ಅವರು, “ಜುಲೈ 7 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸುವುದಾಗಿ ಹೇಳಿದ್ದು, ನನ್ನನ್ನು ಗೌರವಿಸುವ ಪ್ರೀತಿಯನ್ನು ಪಡೆಯುವ ಅದೃಷ್ಟಶಾಲಿ ಎಂದು ನಾನು ನನ್ನ ಜೀವನದಲ್ಲಿ ಎಂದಿಗೂ ಊಹಿಸಿರಲಿಲ್ಲ. ನಾನು ಎಷ್ಟು ಸಂತೋಷವಾಗಿದ್ದೇನೆ ಎಂದು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿಕ್ಕಬಳ್ಳಾಪುರ

Baby Girl : ಹೆಣ್ಣು ಮಗುವೆಂದು ಗಂಡನ ತಾತ್ಸಾರ; ದಾನ ಮಾಡಲು ಮುಂದಾದ ನತದೃಷ್ಟ ತಾಯಿ

Baby Girl : ಎರಡನೇ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದಳೆಂದು ಪತಿಯೊಬ್ಬ ಕಿರುಕುಳ ನೀಡಿದ್ದಕ್ಕೆ, ಪತ್ನಿ ಹೆತ್ತ ಮಗುವನ್ನೇ ದಾನ ಮಾಡಲು ಮುಂದಾಗಿದ್ದಾಳೆ.

VISTARANEWS.COM


on

By

Man harasses Wife for giving birth to girl child
Koo

ಚಿಕ್ಕಬಳ್ಳಾಪುರ: ಎರಡನೇ ಬಾರಿಯೂ ಹೆಣ್ಣು ಮಗುವನ್ನೇ (Baby Girl) ಹೆತ್ತಳೆಂದು ಸಿಟ್ಟಾದ ಪಾಪಿ ಪತಿಯೊಬ್ಬ ಪತ್ನಿಗೆ ಕಿರುಕುಳ ನೀಡಿದ್ದಾನೆ. ಪತಿ ಕುಟುಂಬಸ್ಥರ ಕಿರುಕುಳಕ್ಕೆ (Husband assaulted) ಬೇಸತ್ತ ನತದೃಷ್ಟ ತಾಯಿ, ಹೆಣ್ಣು ಮಗುವನ್ನು ದಾನ ಮಾಡಲು ಮುಂದಾಗಿದ್ದಾಳೆ. ಚಿಕ್ಕಬಳ್ಳಾಪುರ (chikkabalapura News) ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮರಸನಪಲ್ಲಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ರಾಜಮ್ಮ ಎಂಬಾಕೆ ಹೆತ್ತ ಮಗುವನ್ನು ದಾನ ಮಾಡಲು ಮುಂದಾದ ನತದೃಷ್ಟ ತಾಯಿ ಆಗಿದ್ದಾಳೆ. ರಾಜಮ್ಮ ಮರಸನಪಲ್ಲಿ ಗ್ರಾಮದ ಲಕ್ಷ್ಮೀನಾರಾಯಣ ಎಂಬಾತನನ್ನು ಮದುವೆ ಆಗಿದ್ದರು. ಮೊದಮೊದಲು ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ಯಾವಾಗ ರಾಜಮ್ಮರಿಗೆ ಇಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳೋ ಆಗಲಿದ್ದ ಅಸಡ್ಡೆ ತೋರಲು ಮುಂದಾಗಿದ್ದರು.

ಗಂಡು ಮಗುವಿಗೆ ಜನ್ಮ ನೀಡದ ಕಾರಣಕ್ಕೆ ಪತಿ ಲಕ್ಷ್ಮೀನಾರಾಯಣ ಕುಟುಂಬದವರು ರಾಜಮ್ಮರಿಗೆ ಹಾಗೂ ಹೆಣ್ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ. ರಾಜಮ್ಮ ಗರ್ಭಿಣಿಯಾಗಿದ್ದಾಗ ಆರೈಕೆ ಮಾಡುತ್ತಿದ್ದ ಕುಟುಂಬ, 2ನೇ ಬಾರಿಯೂ ಹೆಣ್ಣು ಮಗು ಹುಟ್ಟಿದಾಕ್ಷಣ ನಿರ್ಲಕ್ಷ್ಯ ತೋರಿದ್ದಾರೆ. ರಾಜಮ್ಮ ಚಿಕಿತ್ಸೆಗೆಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಬಂದಾಗ ಈ ನೋವಿನ ಪ್ರಕರಣವು ಬೆಳಕಿಗೆ ಬಂದಿದೆ.

ತಂದೆ- ತಾಯಿ ಕಳೆದುಕೊಂಡಿರುವ ರಾಜಮ್ಮರಿಗೆ ಅತ್ತ ತವರು ಮನೆ ಇಲ್ಲದೇ ಇತ್ತ ಗಂಡನ ಆಸರೆಯು ಇಲ್ಲದಂತಾಗಿದೆ. ಹೆತ್ತ ಮಗುವಿನ ಆರೈಕೆ ಮಾಡಲು ಆಗದ ಕಾರಣಕ್ಕೆ ಹುಟ್ಟಿದ ಹೆಣ್ಣು ಮಗುವನ್ನು ದಾನ ಮಾಡಲು ರಾಜಮ್ಮ ಮುಂದಾಗಿದ್ದಾರೆ. ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಪತಿ ಲಕ್ಷ್ಮೀನಾರಾಣ ಪತ್ನಿ ರಾಜಮ್ಮ ಎಂದರೆ ತಾತ್ಸಾರ ಮನೋಭಾವ ತೋರುತ್ತಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Inhuman Behaviour : ಬಾಯ್‌ ಫ್ರೆಂಡ್‌ ಜತೆ ಸೇರಿ ಹೆತ್ತ ಮಗುವಿನ ಮರ್ಮಾಂಗ ಕಚ್ಚಿದಳು ರಾಕ್ಷಸಿ!

Assault Case : ತಾಯಿಗಿಂತ ದೇವರಿಲ್ಲ ಎಂಬ ಮಾತನ್ನೇ ಇಲ್ಲೊಬ್ಬಳು ಕ್ರೂರಿ ಸುಳ್ಳಾಗಿಸಿದ್ದಾಳೆ. ಕಟುಕಿಯೊಬ್ಬಳು ಬಾಯ್‌ಫ್ರೆಂಡ್‌ ಜತೆಗೆ ಸೇರಿ ಹೆತ್ತ ಮಗುವಿನ ಮರ್ಮಾಂಗಕ್ಕೆ ಹಾನಿ ಮಾಡಿದ್ದಾಳೆ.

VISTARANEWS.COM


on

By

Child assaulted by Mother and her boyfriend in Bengaluru
Koo

ಬೆಂಗಳೂರು: ಪ್ರತಿ ಮಕ್ಕಳಿಗೂ ಹೆತ್ತ ತಾಯಿಯೇ ಶ್ರೀರಕ್ಷೆ.. ಅದೆಷ್ಟೋ ಹೆಣ್ಮಕ್ಕಳು ಮಕ್ಕಳಾಗಿಲ್ಲ ಎಂದು ಕೊರಗುತ್ತಾ ಶತಕೋಟಿ ದೇವರನ್ನೆಲ್ಲ ಪೂಜಿಸುತ್ತಾರೆ. ಆದರೆ ಬೆಂಗಳೂರಿನಲ್ಲಿ ಪಾಪಿ ತಾಯಿಯೊಬ್ಬಳು ಪ್ರಿಯಕರನ ಜತೆ ಸೇರಿ ಹೆತ್ತ ಮಗುವಿನ (Assault Case) ಮೇಲೆ ಹಲ್ಲೆ (Inhuman Behaviour) ನಡೆಸಿದ್ದಾಳೆ.

ಈ ಅಮಾನುಷ ಕೃತ್ಯವು ಬೆಂಗಳೂರಿನ ಗಿರಿನಗರ ಸಮೀಪದ ವೀರಭದ್ರನಗರದಲ್ಲಿ ನಡೆದಿದೆ. ಮಗುವಿನ ಲಾಲನೆ ಪಾಲನೆ ಮಾಡಬೇಕಾದವಳೇ ಮನೆಯಲ್ಲಿ ಕೂಡಿ ಹಾಕಿ, ಮನಬಂದಂತೆ ಹೊಡೆದು ಬಡಿದು ಮಾಡಿದ್ದಾಳೆ. ತನ್ನ ಪ್ರಿಯಕರನ ಜತೆ ಸೇರಿ ಮಗುವಿನ ಮರ್ಮಾಂಗವನ್ನೇ ಕಚ್ಚಿದ್ದಾರೆ ಈ ಕಿರಾತಕರು.

ಮಗುವಿನ ಇಡೀ ದೇಹದ ತುಂಬೆಲ್ಲ ಗಾಯಗಳೇ ಇವೆ. 2-3 ವರ್ಷದ ಮಗುವು ತೊದಲನುಡಿಯಲ್ಲೇ ತನಗೆ ಹೇಗೆಲ್ಲ ಹೊಡೆದು ಹಿಂಸೆ ಕೊಟ್ಟರು ಎಂಬುದನ್ನು ತಿಳಿಸಿದೆ. ಮನೆಗೆ ಬಂದ ಅಂಕಲ್‌ವೊಬ್ಬರ್‌ ಕುಕ್ಕರ್‌ನಿಂದ ತಲೆಗೆ ಹೊಡೆದರಂತೆ. ಅಮ್ಮ ಕೂಡ ನೀನು ಬೇಡ ಮನೆ ಬಿಟ್ಟು ಹೋಗು ಎಂದು ಕಾಲಲ್ಲಿ ಒದ್ದರಂತೆ. ಇದೆಲ್ಲವನ್ನೂ ಮಗುವು ಸಂಘಟನೆಯೊಬ್ಬರ ಬಳಿ ಹೇಳಿಕೊಂಡಿದೆ.

inhuman behaviour child assaulted by mother and her boyfriend in bengaluru

ಇದನ್ನೂ ಓದಿ: Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಹೋದರೆ ರಾತ್ರಿ ಬರುವವರೆಗೂ ಬಾಗಿಲು ತೆಗಯದೆ ಕೂಡಿಹಾಕುತ್ತಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಸಂಘಟನೆಯೊಂದು ಮಗುವಿನ ರಕ್ಷಣೆಗೆ ಬಂದಿದೆ. ಪಾಪಿ ತಾಯಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಕೂಡಿ ಹಾಕಿದ್ದ ಮಗುವನ್ನು ರಕ್ಷಿಸಿ, ಗೃಹ ಬಂಧನಕ್ಕೆ ಮುಕ್ತಿಕೊಟ್ಟಿದ್ದಾರೆ.

ಮೈತುಂಬ ಗಾಯಗೊಂಡಿದ್ದ ಮಗುವಿಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ. ಸಿಡಬ್ಲ್ಯೂಸಿಗೆ(CWC)ಗೆ ದೂರು ಕೊಟ್ಟರೂ ಕ್ರಮಕೈಗೊಂಡಿಲ್ಲ. ಮತ್ತೊಂದು ಕಡೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಇನ್ನೂ ಈ ಸುದ್ದಿ ವಿಸ್ತಾರ ನ್ಯೂಸ್‌ನಲ್ಲಿ ಪ್ರಸಾರವಾಗುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಂದಿಸಿದ್ದಾರೆ. ಕೂಡಲೇ ಈ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಮಗುವಿನ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮವಹಿಸಲಾಗುವುದು ಎಂದಿದ್ದಾರೆ.

ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುವುದಾಗಿ ಶಾಸಕ ರವಿ ಸುಬ್ರಹ್ಮಣ್ಯ ತಿಳಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸರಿಂದ ಮಾಹಿತಿಯನ್ನು ಪಡೆಯುವುದಾಗಿ ಪ್ರತಿಕ್ರಿಯಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Child rescue : ರೂಂನಲ್ಲಿ 3 ವರ್ಷದ ಮಗು ಲಾಕ್‌; ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಸಾಹಸ

Mangaluru News : ಆಟವಾಡುತ್ತಾ ಮನೆಯ ಕೋಣೆಯಲ್ಲಿ ಸಿಲುಕಿದ್ದ 3 ವರ್ಷದ ಮಗುವನ್ನು ಕಾರ್ಯಾಚರಣೆ ನಡೆಸಿ ಅಗ್ನಿಶಾಮಕ ದಳ ಸಿಬ್ಬಂದಿ (Child rescue) ರಕ್ಷಿಸಿದ್ದಾರೆ.

VISTARANEWS.COM


on

By

Child rescued from door locked inside room
Koo

ಮಂಗಳೂರು: ನಿಂತಲ್ಲಿ ನಿಲ್ಲದೆ, ಅತ್ತಿಂದಿತ್ತ ಓಡಾಡುತ್ತಾ, ಕ್ಷಣಕೊಂದು ತುಂಟಾಟ ಮಾಡುವ ಮಕ್ಕಳನ್ನು ಕಂಡಾಗ ಸಂತೋಷವಾಗುತ್ತದೆ. ಆದರೆ ಅದೇ ಮಕ್ಕಳ ತುಂಟಾಟವು ಒಮ್ಮೊಮ್ಮೆ ಪೋಷಕರಿಗೆ ಸಂಕಷ್ಟಕ್ಕೆ ಕಾರಣವಾಗುತ್ತದೆ. ಮಕ್ಕಳ ಮೇಲೆ ಎಷ್ಟೇ ನಿಗಾವಿಟ್ಟು ಜಾಗ್ರತೆ ವಹಿಸಿದರೂ ಸಾಲದು. ಕ್ಷಣ ಮಾತ್ರದಲ್ಲಿ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಸದ್ಯ ಅಪಾರ್ಟ್‌ಮೆಂಟ್‌ ರೂಂವೊಂದರಲ್ಲಿ ಸಿಲುಕಿದ್ದ ಮಗುವನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ (Child rescue) ರಕ್ಷಿಸಿದ್ದಾರೆ.

ಮಂಗಳೂರಿನ ಕೊಡಿಯಾಲ್ ಗುತ್ತಿನ ಅಪಾಟ್೯ಮೆಂಟ್‌ನಲ್ಲಿ ಮಗುವೊಂದು ಆಟವಾಡುತ್ತಾ ಮನೆಯೊಳಗಿದ್ದ ರೂಮಿಗೆ ಹೋಗಿದೆ. ಈ ವೇಳೆ ಅಚಾನಕ್‌ ಆಗಿ ರೂಮಿನ ಡೋರ್‌ ಲಾಕ್‌ ಮಾಡಿಕೊಂಡಿದೆ. ವಾಪಸ್‌ ಡೋರ್‌ ಅನ್‌ ಲಾಕ್‌ ಮಾಡಲು ಆಗದೆ ಮಗು ಅಳಲು ಶುರು ಮಾಡಿತ್ತು. ಮಗು ಅಳುವಿನ ಸದ್ದು ಕೇಳಿ ಬಂದಿದ್ದ ಪೋಷಕರು ರೂಮಿನ ಬಾಗಿಲು ತೆರೆಯಲು ಮುಂದಾಗಿದ್ದಾರೆ. ಆದರೆ ರೂಮಿನೊಳಗೆ ಮಗು ಡೋರ್‌ ಲಾಕ್‌ ಮಾಡಿಕೊಂಡಿತ್ತು.

ರೂಮಿನ ಡೋರ್‌ ಲಾಕ್‌ ತೆರೆಯಲು ಎಷ್ಟೇ ಪ್ರಯತ್ನಿಸಿದರೂ ಆಗದಿದ್ದಾಗ ಗಾಬರಿಗೊಂಡ ಮನೆ ಮಂದಿ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ತಂಡದವರು ಹಗ್ಗದ ಸಹಾಯದಿಂದ 4ನೇ ಮಹಡಿಗೆ ಇಳಿದು, ಕೋಣೆಯೊಳಗೆ ಸಿಲುಕಿದ್ದ ಮಗುವನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: KC Cariappa Love Case: ಡಗ್ಸ್‌ ಸೇವನೆ ಆರೋಪ; ಕ್ರಿಕೆಟಿಗ ಕೆಸಿ ಕಾರಿಯಪ್ಪಗೆ ʻNadaʼ ಸಂಕಷ್ಟ

ಅಜ್ಜಿಯ ನೋಡಲು ಹೊರಟ 6 ವರ್ಷದ ಬಾಲಕ ಬೇರೊಂದು ವಿಮಾನ ಹತ್ತಿದ; ಮುಂದೇನಾಯ್ತು?

ವಾಷಿಂಗ್ಟನ್: ಸಾಮಾನ್ಯವಾಗಿ ವಿಮಾನ ಪ್ರಯಾಣದ (Air Travel) ವೇಳೆ ಒಂದು ವಿಮಾನದ ಬದಲು, ಬೇರೊಂದು ವಿಮಾನ ಹತ್ತುವುದು ವಿರಳದಲ್ಲಿ ಅತಿ ವಿರಳ. ಆಯಾ ಟರ್ಮಿನಲ್‌, ಗೇಟ್‌ಗಳ ವಿಂಗಡಣೆ, ಪ್ರತಿಯೊಬ್ಬ ಪ್ರಯಾಣಿಕರ ತಪಾಸಣೆ ಮಾಡುವುದರಿಂದ ಬೇರೆ ವಿಮಾನ ಹತ್ತುವ ಸಾಧ್ಯತೆ ತುಂಬ ಕಡಿಮೆ. ಆದರೆ, ಅಮೆರಿಕದಲ್ಲಿ ವಿಮಾನಯಾನ ಸಂಸ್ಥೆಯ (Airlines) ಸಿಬ್ಬಂದಿಯೇ ಆರು ವರ್ಷದ ಬಾಲಕನನ್ನು ಬೇರೊಂದು ವಿಮಾನವನ್ನು ಹತ್ತಿಸಿದ ಅಚಾತುರ್ಯ ನಡೆದಿದೆ.

ಹೌದು, ಪ್ರೀತಿಯ ಅಜ್ಜಿಯನ್ನು ನೋಡಲು ವಿಮಾನ ಹತ್ತಿದ ಬಾಲಕನು ವಿಮಾನಯಾನ ಸಂಸ್ಥೆ ಸಿಬ್ಬಂದಿಯ ಅಚಾತುರ್ಯದಿಂದಾಗಿ ಸಂಕಷ್ಟ ಅನುಭವಿಸಿದ್ದಾನೆ. ಅತ್ತ, ಮೊಮ್ಮಗನ ಆಗಮನಕ್ಕಾಗಿ ಕಾಯುತ್ತಿದ್ದ ಅಜ್ಜಿಯು ಆತ ಬಾರದ್ದನ್ನು ಕಂಡು ಆತಂಕಗೊಂಡಿದ್ದಾರೆ. ಅಮೆರಿಕದ ಫಿಲಾಡೆಲ್ಫಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫೋರ್ಟ್‌ ಮೇಯರ್ಸ್‌ನಲ್ಲಿರುವ ಸೌತ್‌ವೆಸ್ಟ್‌ ಫ್ಲೊರಿಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಲಕ ಸಂಚರಿಸಬೇಕಿತ್ತು. ಆದರೆ, ಸ್ಪಿರಿಟ್‌ ಏರ್‌ಲೈನ್ಸ್‌ ಸಿಬ್ಬಂದಿಯು ಬಾಲಕನನ್ನು ಒರಾಲ್ಡೋಗೆ ತೆರಳುತ್ತಿದ್ದ ವಿಮಾನದಲ್ಲಿ ಹತ್ತಿಸಿದ್ದು ಅಚಾತುರ್ಯಕ್ಕೆ ಕಾರಣವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಿರಿಟ್‌ ಏರ್‌ಲೈನ್ಸ್‌ ಸಂಸ್ಥೆಯು ಕ್ಷಮೆಯಾಚಿಸಿದೆ. “ಬಾಲಕ ಹಾಗೂ ಆತನ ಅಜ್ಜಿಗೆ ಉಂಟಾದ ತೊಂದರೆಗೆ ಸ್ಪಿರಿಟ್‌ ಏರ್‌ಲೈನ್ಸ್‌ ಕ್ಷಮೆಯಾಚಿಸುತ್ತದೆ. ಸಿಬ್ಬಂದಿಯ ತಪ್ಪಿನಿಂದಾಗಿ ಬಾಲಕನು ಬೇರೊಂದು ವಿಮಾನ ಹತ್ತುವಂತಾಗಿದೆ. ಪ್ರಮಾದ ಗೊತ್ತಾದ ಕೂಡಲೇ ವಿಮಾನದ ಸಿಬ್ಬಂದಿಯು ಬಾಲಕನಿಗೆ ರಕ್ಷಣೆ ನೀಡಿದೆ. ಆತನನ್ನು ಸಮಾಧಾನಪಡಿಸಲಾಗಿದೆ. ಹಾಗೆಯೇ, ಆತನ ಕುಟುಂಬಸ್ಥರನ್ನು ಸಂಪರ್ಕಿಸಿ ನಡೆದಿರುವ ಘಟನೆಯ ಕುರಿತು ಮಾಹಿತಿ ನೀಡಲಾಗಿದೆ. ಸುರಕ್ಷಿತವಾಗಿ ಆತನನ್ನು ಅಜ್ಜಿಯ ಬಳಿ ಕಳುಹಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದೆ. ಹಾಗೆಯೇ, ಪ್ರಕರಣವನ್ನು ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿ: Viral Story: ಒಂದೇ ದಿನ ಎರಡು ಪ್ರತ್ಯೇಕ ವಿಮಾನ ಅಪಘಾತ; ಬದುಕುಳಿದ ಯುವಜೋಡಿ!

“ನನ್ನ ಮೊಮ್ಮಗ ಬರುತ್ತಾನೆ ಎಂದು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದೆ. ಗಂಟೆಗಟ್ಟಲೆ ಕಾದು ಕುಳಿತರೂ ನನ್ನ ಮೊಮ್ಮಗ ಬರಲಿಲ್ಲ. ಕೂಡಲೇ ಈ ಕುರಿತು ವಿಮಾನಯಾನ ಸಿಬ್ಬಂದಿಗೆ ಕೇಳಿದೆ. ಅವರು ಸರಿಯಾಗಿ ಮಾಹಿತಿ ನೀಡಲಿಲ್ಲ. ನಾನು ವಿಮಾನದೊಳಗೆ ಓಡಿ ಹೋಗಿ ಪರಿಶೀಲನೆ ನಡೆಸಿದೆ. ಅಲ್ಲೂ ನನ್ನ ಮೊಮ್ಮಗ ಇರಲಿಲ್ಲ. ಕೆಲ ಹೊತ್ತನ ಬಳಿಕ ನನ್ನ ಮೊಮ್ಮಗ ಬೇರೊಂದು ವಿಮಾನ ಹತ್ತಿರುವ, ಸುರಕ್ಷಿತವಾಗಿ ಲ್ಯಾಂಡ್‌ ಆಗಿರುವ ಕುರಿತು ಮಾಹಿತಿ ನೀಡಲಾಗಿತ್ತು. ಕೆಲ ಗಂಟೆಗಳ ನಂತರ ಆತನನ್ನು ಫೋರ್ಟ್‌ ಮೈಯರ್ಸ್‌ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು” ಎಂದು ಆರು ವರ್ಷದ ಬಾಲಕನ ಅಜ್ಜಿ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading
Advertisement
ISIS Terrorists
ದೇಶ2 mins ago

ISIS Terrorists: ಬಿಜೆಪಿ, ಆರ್ ಎಸ್ ಎಸ್ ನಾಯಕರ ಮೇಲೆ ಆತ್ಮಾಹುತಿ ದಾಳಿಗೆ ಸಂಚು ಮಾಡಿದ್ದ ಐಸಿಸ್ ಉಗ್ರರು; ಸೆರೆ ಸಿಕ್ಕಿದ್ದು ಹೇಗೆ?

Shocking News
ವಿದೇಶ9 mins ago

Shocking News: ಎಚ್‌ಐವಿ ಪಾಸಿಟಿವ್‌ ವಿಚಾರ ಮುಚ್ಚಿಟ್ಟ ಲೈಂಗಿಕ ಕಾರ್ಯಕರ್ತೆ; 211 ಮಂದಿಗೆ ಎದುರಾಯ್ತು ಸಂಕಷ್ಟ

Darshan And Vijayalakshmi Celebrate Wedding Anniversary In Dubai pavitra gowda posted karma status
ಸ್ಯಾಂಡಲ್ ವುಡ್9 mins ago

Actor Darshan: ದುಬೈನಲ್ಲಿ ʻಡಿ ಬಾಸ್‌ʼ ವೆಡ್ದಿಂಗ್‌ ಆ್ಯನಿವರ್ಸರಿ ಸೆಲೆಬ್ರೇಷನ್‌: ಇತ್ತ ಪವಿತ್ರಾ ಗೌಡ ಕರ್ಮದ ಬಗ್ಗೆ ಪಾಠ!

KKR vs SRH:
ಕ್ರೀಡೆ24 mins ago

KKR vs SRH: ಕೆಕೆಆರ್​-ಹೈದರಾಬಾದ್​ ಕ್ವಾಲಿಫೈಯರ್​ ಪಂದ್ಯದ ಹವಾಮಾನ ವರದಿ ಹೇಗಿದೆ?

board exam public exam
ಪ್ರಮುಖ ಸುದ್ದಿ42 mins ago

Board Exam: ಮಕ್ಕಳೇ ನೀವು ಪಾಸ್!‌ 5, 8 ಮತ್ತು 9ನೇ ತರಗತಿಯ ಎಲ್ಲ ಮಕ್ಕಳು ಉತ್ತೀರ್ಣ

Kangana Ranaut
ದೇಶ59 mins ago

Kangana Ranaut: ಕಂಗನಾ ರಣಾವತ್‌ ಮೇಲೆ ಕಲ್ಲು ತೂರಾಟ; ಚು.ಆಯೋಗಕ್ಕೆ ದೂರು

Job Alert
ಉದ್ಯೋಗ1 hour ago

Job Alert: ಗಮನಿಸಿ: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಮೇ 24 ಕೊನೆಯ ದಿನ

belagavi farmer self harming
ಕ್ರೈಂ1 hour ago

Farmer Self Harming: ಸಾಲ ವಸೂಲಿಗೆ ಹೆಂಡತಿ- ಮಗನಿಗೆ ಗೃಹಬಂಧನ, ಅವಮಾನದಿಂದ ರೈತ ಆತ್ಮಹತ್ಯೆ, ಎಂಥ ರಾಕ್ಷಸಿ ಇವಳು!

Health Benefits Of Tofu
ಆರೋಗ್ಯ1 hour ago

Health Benefits Of Tofu: ಪನೀರ್‌ನಂತೆ ಕಾಣುವ ಈ ಆಹಾರದ ಬಗ್ಗೆ ನಿಮಗೆ ಗೊತ್ತೆ?

2nd PUC Exam 2 Result tomorrow
ಶಿಕ್ಷಣ2 hours ago

2nd PUC Exam 2 Result: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ ಇಂದು; ಸಿಇಟಿ ಫಲಿತಾಂಶ ಯಾವಾಗ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ19 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌