Shravana Masa 2023: ಶ್ರಾವಣ ಬಂತು ನಾಡಿಗೆ; ಮನಸು ಹಬ್ಬಗಳ ಕಡೆಗೆ - Vistara News

ಧಾರ್ಮಿಕ

Shravana Masa 2023: ಶ್ರಾವಣ ಬಂತು ನಾಡಿಗೆ; ಮನಸು ಹಬ್ಬಗಳ ಕಡೆಗೆ

ಇಂದಿನಿಂದ ಶ್ರಾವಣ (Shravana masa 2023) ಆರಂಭ. ಈ ತಿಂಗಳಲ್ಲೇ ಸಾಲು ಸಾಲು ಧಾರ್ಮಿಕ ಪೂಜೆ, ಹಬ್ಬ-ಹರಿದಿನಗಳು ಬರುತ್ತವೆ. ಒಳ್ಳೆಯ ಕಾರ್ಯಗಳನ್ನು ಆರಂಭಿಸಲು ಈ ತಿಂಗಳು ಹೆಚ್ಚು ಪ್ರಶಸ್ತ ಎಂಬ ನಂಬಿಕೆ.

VISTARANEWS.COM


on

shravana masa
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ʻʻಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ…ʼʼ ಎಂದು ವರಕವಿ ದ.ರಾ.ಬೇಂದ್ರೆ ಅವರು ಹಾಡಿದ್ದರು. ಶ್ರಾವಣ (shravana masa 2023) ಬಂದರೆ ಪರಿಸರದಲ್ಲೂ ಮನುಷ್ಯನ ಮುಖದಲ್ಲೂ ಒಂದು ಉಲ್ಲಾಸ ಎದ್ದು ತೋರುತ್ತದೆ. ಅದಕ್ಕೆ ಕಾರಣ ಈ ಮಾಸದಲ್ಲಿ ಆಗುವ ಪ್ರಾಕೃತಿಕ ಬದಲಾವಣೆ ಮತ್ತು ಆಗಮಿಸುವ ಹಬ್ಬಗಳ (shravana masa festivals) ಸಾಲು.

ಚೈತ್ರ ವೈಶಾಖ ವಸಂತ ಋತು, ಜ್ಯೇಷ್ಠ ಆಷಾಢ ಗ್ರೀಷ್ಮ ಋತು ಎಂದು ನಮ್ಮ ಋತುಗಳನ್ನು ಲೆಕ್ಕ ಹಾಕುವುದು ವಾಡಿಕೆ. ಇವುಗಳ ನಂತರ ಬರುವ ಮಾಸವೇ ಶ್ರಾವಣ ಮಾಸ. ಶ್ರಾವಣದೊಂದಿಗೆ ವರ್ಷ ಋತು ಪ್ರವೇಶಿಸುತ್ತದೆ. ಹೀಗಾಗಿ ಇದು ವರ್ಷದ ಮೂರನೇ ಋತುವಿನ ಆರಂಭ ಹಾಗೂ ಐದನೇ ಮಾಸದ ಶುರು.

ಇದನ್ನು ವರ್ಷ ಋತುವೆಂದು ಕರೆದರೂ ನಮ್ಮಲ್ಲಿ ಗ್ರೀಷ್ಮದಿಂದಲೇ (ಜೂನ್‌, ಜುಲೈ) ಮುಂಗಾರು ಆರಂಭವಾಗಿರುತ್ತದೆ. ಶ್ರಾವಣದ ಹೊತ್ತಿಗೆ ಜೂನ್‌ ಜುಲೈ ತಿಂಗಳುಗಳ ಅಬ್ಬರ ಮಳೆಯ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ, ಒಂದು ಬಗೆಯ ನೆಮ್ಮದಿ ನೆಲೆಸಿರುತ್ತದೆ. ಈ ವರ್ಷದ ಮಳೆ ಹೇಗಿದೆ ಎಂದು ಗೊತ್ತಾಗಿರುತ್ತದೆ. ಹೀಗಾಗಿ ಕೃಷಿ ಚಟುವಟಿಕೆಗಳು ಮೈದುಂಬಿಕೊಂಡು, ಒಂದು ಹಂತದ ಬಿತ್ತನೆ ನಾಟಿಗಳು ಮುಗಿದಿರುತ್ತವೆ. ಇದರಿಂದ ರೈತಾಪಿ ಜನಗಳಿಗೆ ಕೂಡ ತುಸು ವಿಶ್ರಾಂತಿ ದೊರೆತು, ಸಮಾಜದ ಜನಗಳ ಜೊತೆ ಒಡನಾಡುವ ಹುಮ್ಮಸ್ಸು ಬಂದಿರುತ್ತದೆ.

ಇದೇ ಹಬ್ಬಗಳು ಹೆಚ್ಚಲು ಕೂಡ ಕಾರಣ. ಈ ತಿಂಗಳಲ್ಲೇ ಸಾಲು ಸಾಲು ಧಾರ್ಮಿಕ ಪೂಜೆ, ಹಬ್ಬ-ಹರಿದಿನಗಳು ಬರುತ್ತವೆ. ಒಳ್ಳೆಯ ಕಾರ್ಯಗಳನ್ನು ಆರಂಭಿಸಲು ಈ ತಿಂಗಳು ಹೆಚ್ಚು ಪ್ರಶಸ್ತ ಎಂಬ ನಂಬಿಕೆ. ಆಷಾಢ ಮಾಸದ ಬಳಿಕ ಬರುವ ಹುಣ್ಣಿಮೆಯ ನಂತರ ಶ್ರಾವಣ ನಕ್ಷತ್ರಕ್ಕೆ ಚಂದ್ರನು ಪ್ರವೇಶಿಸುತ್ತಾನೆ. ಹೀಗಾಗಿ ಇದು ಶ್ರಾವಣ. ನಮ್ಮಲ್ಲಿ ಶ್ರವಣ, ಶ್ರಾವಣ ಎಂದರೆ ಆಲಿಸುವುದು ಎಂದೂ ಅರ್ಥವಿದೆ. ಹೀಗಾಗಿ ಈ ಮಾಸದಲ್ಲಿ ಹೆಚ್ಚಾಗಿ ಪುರಾಣ ಪ್ರವಚನಗಳನ್ನು ಆಲಿಸುವ ರೂಢಿ ಕೂಡ ಬೆಳೆದುಬಂದಿದೆ.

ಶ್ರಾವಣ ತಿಂಗಳಲ್ಲಿ ಪ್ರಕೃತಿ ಕೂಡ ಸಾಕಷ್ಟು ಮಳೆ ಕಂಡುದರಿಂದ ಚಿಗುರಿ ನಳನಳಿಸುತ್ತದೆ. ಹೂಗಳೂ ಜಾಸ್ತಿ ಬೆಳೆಯುತ್ತವೆ. ಹೀಗಾಗಿ ಚೂಡಿಪೂಜೆ (ಹೂವಿನ ಪೂಜೆ) ಕೂಡ ನಡೆಯುತ್ತದೆ. ಚೂಡಿಪೂಜೆ, ತುಳಸಿಪೂಜೆಯಿಂದ ಲಕ್ಷ್ಮೀದೇವಿ ಒಲಿಯುತ್ತಾಳೆ ಎಂಬ ನಂಬಿಕೆ ಇದೆ.

ಶಿವನ ಮಾಸ

ಶ್ರಾವಣ ಎಂದರೆ ಶಿವನ ಮಾಸ (shiva worship) ಎಂದೇ ನಂಬಿಕೆ. ಶಿವನ ಪೂಜೆ ಆಗ ಶ್ರೇಯಸ್ಕರ. ಅದೇಕೆ? ಇದೇ ಮಾಸದಲ್ಲಿ ಸಮುದ್ರ ಮಥನ ನಡೆಯಿತಂತೆ. ಆಗ ಉದಿಸಿದ ಹಾಲಾಹಲವನ್ನು ಶಿವನು ಕುಡಿದು ಗಂಟಲಲ್ಲಿ ಧರಿಸಿಕೊಂಡು ಲೋಕಕ್ಕೆ ಒಳಿತನ್ನು ಮಾಡಿದ. ಇದೇ ಅಂದು ಆತನ ನೆನೆಯಲು ಕಾರಣ. ಶಿವನಿಗೆ ಅಭಿಷೇಕ ಮಾಡುವುದು ಈ ವಿಷದಿಂದ ಕಾವೇರಿದ ಅವನ ದೇಹವನ್ನು ತಣಿಸಲು. ಶ್ರಾವಣದಲ್ಲಿ ರುದ್ರಾಕ್ಷಿಯ ಹಾರ ಧರಿಸುವುದು ಅತ್ಯಂತ ಶುಭ. ಶ್ರಾವಣ ಸೋಮವಾರದ ವ್ರತ ಮಾಡುವುದು ತುಂಬಾ ಶ್ರೇಷ್ಠ. ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮಾಲೆ ಹಿಡಿದು, ಶಿವಪಂಚಾಕ್ಷರಿ ಮಂತ್ರವನ್ನು 108 ಬಾರಿ ಪಠಿಸಿದರೆ ಶುಭ.

ಮಹಾವಿಷ್ಣುವಿಗೂ ವಂದನೆ

ಶ್ರಾವಣ ಸೋಮವಾರಗಳಂದು ಪರಶಿವನನ್ನು ಆರಾಧಿಸಿದರೆ, ಗುರುವಾರ ಹಾಗೂ ಬುಧವಾರ ಮಹಾವಿಷ್ಣುವನ್ನು (vishnu worship) ಆರಾಧಿಸಲಾಗುತ್ತದೆ. ಮಂಗಳವಾರ, ಮನೆಯಲ್ಲಿನ ಮಹಿಳೆಯರು ಕುಟುಂಬದ ಸದಸ್ಯರ ಉತ್ತಮ ಆರೋಗ್ಯಕ್ಕಾಗಿ ಗೌರಿ ಪೂಜೆಯನ್ನು ಮಾಡುತ್ತಾರೆ. ಬುಧವಾರ, ಭಗವಾನ್ ವಿಷ್ಣು ಅಥವಾ ಕೃಷ್ಣನ ಇನ್ನೊಂದು ಅವತಾರವಾದ ವಿಠಲನನ್ನು ಆರಾಧಿಸುತ್ತಾರೆ. ಶ್ರಾವಣ ಮಾಸದ ಗುರುವಾರದಂದು ಬುಧ ಮತ್ತು ಗುರುವನ್ನು ಪೂಜಿಸುತ್ತಾರೆ. ಶುಕ್ರವಾರದಂದು ಲಕ್ಷ್ಮಿ ಮತ್ತು ತುಳಸಿಯನ್ನು ಪೂಜಿಸುತ್ತಾರೆ. ಶ್ರಾವಣ ಶನಿವಾರ ಅಥವಾ ಸಂಪತ್ ಶನಿವಾರದಂದು ಶನೀಶ್ವರನನ್ನು ಆರಾಧಿಸುತ್ತಾರೆ.

ಶ್ರಾವಣದ ಹಬ್ಬಗಳು

ಶ್ರಾವಣದಲ್ಲಿ ಸಾಲು ಸಾಲಾಗಿ ಬರುವ ಹಬ್ಬಗಳು ಹೀಗಿವೆ- ನಾಗಚೌತಿ, ನಾಗಪಂಚಮಿ (nagara panchami), ಪುತ್ರದಾ ಏಕಾದಶಿ, ರಕ್ಷಾಬಂಧನ (raksha bandhan), ಗುರು ಆರಾಧನೆ, ಗೋಕುಲಾಷ್ಟಮಿ, ಅಜ ಏಕಾದಶಿ, ಕಲ್ಕಿ ಜಯಂತಿ, ವರಮಹಾಕ್ಷ್ಮೀ ಪೂಜೆ, ಮಂಗಳಗೌರಿ ವ್ರತ, ಶ್ರಾವಣ ಶನಿವಾರ, ಋಗ್ಉಪಾಕರ್ಮ, ಯಜುರುಪಾಕರ್ಮ, ಸಿರಿಯಾಳ ಷಷ್ಠೀ, ವಾಮನ ಜಯಂತಿ, ಶ್ರೀ ಕೃಷ್ಣ ಜನ್ಮಾಷ್ಟಮಿ. ಈ ಹಬ್ಬಗಳಲ್ಲಿ ಕನಿಷ್ಠ ಒಂದನ್ನಾದರೂ ಪ್ರತೀ ಹಿಂದೂ ಕುಟುಂಬ ಆಚರಿಸುತ್ತದೆ. ಸಮಾಜದ ಜನತೆ ಒಟ್ಟಾಗಿ ಬಂಧುಮಿತ್ರರನ್ನು ಭೇಟಿಯಾಗಿ, ಸಿಹಿತಿಂಡಿಗಳನ್ನು ಹಂಚಿಕೊಂಡು, ಮಕ್ಕಳು ಮರಿಗಳೊಂದಿಗೆ ಆಟವಾಡಿ ಖುಷಿಪಡುತ್ತದೆ.

ಭಾದ್ರಪದ ಮಾಸದ ಪ್ರವೇಶವಾಗುತ್ತಿದ್ದಂತೆ ಚೌತಿ, ದೀಪಾವಳಿ ಮುಂತಾದ ದೊಡ್ಡ ಹಬ್ಬಗಳಿಗೆ ತೆರೆದುಕೊಳ್ಳಲು ಈ ಹಬ್ಬಗಳು ಮೂಲವಾಗುತ್ತವೆ. ಸಮಾಜದ ಆರ್ಥಿಕತೆ ಸ್ವಲ್ಪಸ್ವಲ್ಪವೇ ಬೆಳೆಯುತ್ತ, ದೀಪಾವಳಿ- ನವರಾತ್ರಿಯ ಹೊತ್ತಿಗೆ ಸಾಮಾಜಿಕ ಬಾಂಧವ್ಯದ ಗಟ್ಟಿ ಬೆಸುಗೆಯೊಂದು ರೂಪುಗೊಳ್ಳುತ್ತದೆ. ಹಬ್ಬದ ಮೂಲ ಆಶಯವೇ ಸಹಬಾಳ್ವೆ. ಇದು ಆರ್ಥಿಕತೆಯ ವಿಸ್ತರಣೆ, ಬೆಳವಣಿಗೆಗೂ ಕಾರಣವಾಗುತ್ತದೆ.

ಇದನ್ನೂ ಓದಿ: Festive Season Shopping: ಶುರುವಾಯ್ತು ಶ್ರಾವಣ ಮಾಸದ ಫೆಸ್ಟೀವ್‌ ಸೀಸನ್‌ ಶಾಪಿಂಗ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Tirupati Temple : ತಿರುಪತಿ ದೇಗುಲವನ್ನು ಹಿಂದೂ ನಂಬಿಕೆಯಂತೆ ಪವಿತ್ರಗೊಳಿಸುವೆ; ಸಿಎಂ ಚಂದ್ರಬಾಬು ನಾಯ್ಡು ಶಪಥ

Tirupati Temple : ದೇವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ನಾಯ್ಡು, ಹಿಂದಿನ ಜಗನ್ ಮೋಹನ್ ರೆಡ್ಡಿ ಆಡಳಿತದ ಅವಧಿಯಲ್ಲಿ ವೆಂಕಟೇಶ್ವರ ದೇವಾಲಯದ ಮೇಲ್ವಿಚಾರಣೆ ನಡೆಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಲ್ಲಿ ಅಕ್ರಮಗಳು ನಡೆದಿವೆ. ತಿರುಮಲದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಮತ್ತು ‘ಹಿಂದೂ ಧರ್ಮ’ವನ್ನು ರಕ್ಷಿಸಲು ತಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

VISTARANEWS.COM


on

Tirupati Temple
Koo

ಬೆಂಗಳೂರು: ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಚಂದ್ರಬಾಬು ನಾಯ್ಡು ಅವರು ಗುರುವಾರ ವಿಶ್ವ ಪ್ರಸಿದ್ಧ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ (Tirupati Temple) ಭೇಟಿ ನೀಡಿದರು. ವಿಜಯವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು ಈ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥಿಸಿದಿರು. ಈ ವೇಳೆ ಅವಉ ತಿರುಪತಿ-ತಿರುಮಲ ಆಡಳಿತವನ್ನು ಹಿಂದೂಗಳ ನಂಬಿಕೆಯಂತೆ ಶುದ್ಧೀಕರಿಸುವ ಪ್ರತಿಜ್ಞೆ ಮಾಡಿದರು. ಮಾಜಿ ಸಿಎಂ ಜಗನ್ ಆಡಳಿತವನ್ನು ಅಪವಿತ್ರಗೊಳಿಸಿದ್ದರು ಎಂಬುದನ್ನು ಅವರು ಬೊಟ್ಟು ಮಾಡಿದರು.

ದೇವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ನಾಯ್ಡು, ಹಿಂದಿನ ಜಗನ್ ಮೋಹನ್ ರೆಡ್ಡಿ ಆಡಳಿತದ ಅವಧಿಯಲ್ಲಿ ವೆಂಕಟೇಶ್ವರ ದೇವಾಲಯದ ಮೇಲ್ವಿಚಾರಣೆ ನಡೆಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಲ್ಲಿ ಅಕ್ರಮಗಳು ನಡೆದಿವೆ. ತಿರುಮಲದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಮತ್ತು ‘ಹಿಂದೂ ಧರ್ಮ’ವನ್ನು ರಕ್ಷಿಸಲು ತಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

ನಾನು ತಿರುಮಲದ ಆಡಳಿತವನ್ನು ಸನಾತನ ಸಂಸ್ಕೃತಿ ಪ್ರಕಾರ ಶುದ್ಧೀಕರಣವನ್ನು ಪ್ರಾರಂಭಿಸುತ್ತೇನೆ. ತಿರುಮಲವನ್ನು ಅಪವಿತ್ರಗೊಳಿಸುವುದು ಸ್ವೀಕಾರಾರ್ಹವಲ್ಲ. ತಿರುಮಲದಲ್ಲಿ ಗೋವಿಂದನ ನಾಮ ಜಪ ಮಾತ್ರ ಉಳಿಯುತ್ತದೆ. ಅನ್ಯರ ನಂಬಿಕೆಗಳು ತೊಲಗುತ್ತವೆ ಎಂದು ಅವರು ಹೇಳಿದರು.

ವ್ಯಾಪಾರೀಕರಣ ಇಲ್ಲ

ತಿರುಪತಿ ದೇವಸ್ಥಾನ ಹಿಂದೂ ಧಾರ್ಮಿಕ ನಂಬಿಕೆ ಕೇಂದ್ರ. ಹಿಂದಿನ ರಾಜ್ಯ ಸರ್ಕಾರವು ತಿರುಮಲ ತಿರುಪತಿ ದೇವಸ್ಥಾನವವನ್ನು ವ್ಯಾಪಾರೀಕರಣಗೊಳಿಸುತ್ತು ಎಂದು ಅವರು ಆರೋಪಿಸಿದರು.

ಇಲ್ಲಿನ ಪ್ರಸಾದ ಉತ್ತಮ ಗುಣಮಟ್ಟದ್ದಾಗಿರಬೇಕು. ಅನಗತ್ಯವಾಗಿ ದರ ಹೆಚ್ಚಿಸಬಾರದು ಮತ್ತು ದರ್ಶನದ ಟಿಕೆಟ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಬಾರದು. ಹಿಂದಿನ ಆಡಳಿತ ಈ ಧಾರ್ಮಿಕ ಸ್ಥಳವನ್ನು ಗಾಂಜಾ, ಮದ್ಯ ಮತ್ತು ಮಾಂಸಾಹಾರಿ ಆಹಾರದ ಕೇಂದ್ರವನ್ನಾಗಿ ಪರಿವರ್ತಿಸಿದ್ದರು. ಹೀಗಾಗಿ ಶುದ್ಧೀಕರಣವು ಟಿಟಿಡಿಯಿಂದ ಪ್ರಾರಂಭವಾಗುತ್ತದೆ ಎಂದು ನಾಯ್ಡು ಪ್ರತಿಪಾದಿಸಿದರು.

ಇದನ್ನೂ ಓದಿ: Amit Shah: ತಮಿಳಿಸೈಗೆ ಅಮಿತ್ ಶಾ ಬೈಗುಳದ ವಿಡಿಯೋ; ವಿವಾದಕ್ಕೆ ತೆರೆ ಎಳೆದ ತಮಿಳುನಾಡು ಬಿಜೆಪಿ ನಾಯಕಿ

2047ರ ವೇಳೆಗೆ ತೆಲುಗು ಜನರು ವಿಶ್ವದಲ್ಲೇ ನಂಬರ್ ಒನ್ ಆಗಲಿದ್ದಾರೆ. ನಾನು ಆಂಧ್ರಪ್ರದೇಶವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡುತ್ತೇನೆ. ಅಪರಾಧವನ್ನು ಸಹಿಸುವುದಿಲ್ಲ. ಅಪರಾಧಗಳನ್ನು ಮಾಡಿದ ನಂತರ ಕೆಲವರು ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ರಾಜಕೀಯ ಪಿತೂರಿಗಳನ್ನು ಸಹಿಸುವುದಿಲ್ಲ. ನಾವು ಒಳ್ಳೆಯವರನ್ನು ರಕ್ಷಿಸುತ್ತೇವೆ” ಎಂದು ಟಿಡಿಪಿ ಮುಖ್ಯಸ್ಥರು ಹೇಳಿದರು.

ಪತ್ನಿ, ಮಗ ನಾರಾ ಲೋಕೇಶ್, ಸೊಸೆ ಮತ್ತು ಇತರ ಸಂಬಂಧಿಕರು ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಮುಖ್ಯಮಂತ್ರಿಗಳು ಗುರುವಾರ ಸಂಜೆ ವಿಶೇಷ ವಿಮಾನದಲ್ಲಿ ತಿರುಪತಿಗೆ ತೆರಳಿದರು. ನಂತರ ರಸ್ತೆ ಮಾರ್ಗ ಮೂಲಕ ತಿರುಮಲಕ್ಕೆ ಪ್ರಯಾಣಿಸಿದರು. ಅಲ್ಲಿ ಅವರು ರಾತ್ರಿ ಕಳೆದರು. ಗುರುವಾರ ಮುಂಜಾನೆ, ಅವರು ಪವಿತ್ರ ಬೆಟ್ಟದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

Continue Reading

EXPLAINER

Jagannath Temple: 4 ವರ್ಷದ ಬಳಿಕ ಜಗನ್ನಾಥ ದೇಗುಲದ ಬಾಗಿಲು ಓಪನ್;‌ ಇದಕ್ಕೂ ಬಿಜೆಪಿ ಪ್ರಣಾಳಿಕೆಗೂ ಇದೆ ಸಂಬಂಧ!

Jagannath Temple: ಕಳೆದ ನಾಲ್ಕು ವರ್ಷಗಳಿಂದ ಮುಚ್ಚಲಾಗಿದ್ದ ಒಡಿಶಾದ ಪುರಿ ಜಗನ್ನಾಥ ದೇವಾಲಯದ ಎಲ್ಲ ನಾಲ್ಕೂ ಬಾಗಿಲುಗಳನ್ನು ಗುರುವಾರ ತೆರೆಯಲಾಗಿದೆ. ಅದರಂತೆ, ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಬಿಜೆಪಿಯು ಅಧಿಕಾರಕ್ಕೆ ಬರುತ್ತಲೇ ಈಡೇರಿಸಿದಂತಾಗಿದೆ. ದೇವಾಲಯದ ಬಾಗಿಲುಗಳನ್ನು ಮುಚ್ಚಿದ್ದೇಕೆ? ಇದು ಏಕೆ ಪ್ರಮುಖ ಎಂಬುದು ಸೇರಿ ವಿವಿಧ ಮಾಹಿತಿ ಇಲ್ಲಿದೆ.

VISTARANEWS.COM


on

Jagannath Temple
Koo

ಭುವನೇಶ್ವರ: ಒಡಿಶಾದ ಪುರಿಯಲ್ಲಿರುವ ವಿಶ್ವಪ್ರಸಿದ್ಧ ಜಗನ್ನಾಥ ದೇವಾಲಯದ (Jagannath Temple) ಎಲ್ಲ ನಾಲ್ಕೂ ಬಾಗಿಲುಗಳನ್ನು ಗುರುವಾರ (ಜೂನ್‌ 13) ತೆರೆಯಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಒಂದೇ ಬಾಗಿಲಿನ ಮೂಲಕ ತೆರಳಿ, ದೇವರ ದರ್ಶನ ಪಡೆಯುತ್ತಿದ್ದ ಭಕ್ತರು ಗುರುವಾರದಿಂದ ನಾಲ್ಕೂ ಬಾಗಿಲುಗಳ ಮೂಲಕ ಜಗನ್ನಾಥನ ದರ್ಶನ ಪಡೆಯಬಹುದಾಗಿದೆ. ಒಡಿಶಾದ ನೂತನ ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ (Mohan Charan Majhi) ಅವರ ಸಮ್ಮುಖದಲ್ಲಿ ಎಲ್ಲ ಬಾಗಿಲುಗಳನ್ನು ತೆರೆಯಲಾಗಿದೆ.

ಬಾಗಿಲುಗಳಿಗೆ ಬೀಗ ಹಾಕಿದ್ದೇಕೆ?

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಹಿಂದೆ ಪುರಿ ಜಗನ್ನಾಥ ದೇವಾಲಯಗಳಿಗೆ ಬೀಗ ಹಾಕಲಾಗಿತ್ತು. ಕೊರೊನಾ ಲಾಕ್‌ಡೌನ್‌, ಕೊರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿದಿತ್ತು. ಇದೇ ಸಂದರ್ಭದಲ್ಲಿ ದೇವಾಲಯದ ನಾಲ್ಕು ಬಾಗಿಲುಗಳನ್ನು ಮುಚ್ಚಲಾಗಿತ್ತು. ಆದರೆ, ಕೋವಿಡ್‌ 19 ಬಿಕ್ಕಟ್ಟಿನ ಬಳಿಕವೂ, ನಿರ್ಬಂಧಗಳನ್ನು ತೆರವುಗೊಳಿಸಿದ ಬಳಿಕವೂ ನಾಲ್ಕೂ ಬಾಗಿಲುಗಳನ್ನು ತೆರೆದಿರಲಿಲ್ಲ. ಸಿಂಹದ್ವಾರದ ಮೂಲಕ ಮಾತ್ರ ಭಕ್ತರು ದೇವರು ದರ್ಶನ ಪಡೆಯುವಂತಾಗಿತ್ತು.

ಬಿಜೆಪಿ ಪ್ರಣಾಳಿಕೆಗೂ, ಇದಕ್ಕೂ ಏನು ಸಂಬಂಧ?

ಪುರಿ ಜಗನ್ನಾಥ ದೇವಾಲಯಕ್ಕೆ 12ನೇ ಶತಮಾನದ ಇತಿಹಾಸವಿದೆ. ಇದನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಭಾರತ ಸೇರಿ ದೇಶ-ವಿದೇಶಗಳಿಂದ ವರ್ಷಕ್ಕೆ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಪ್ರತಿ ವರ್ಷವು ಪುರಿ ಜಗನ್ನಾಥ ರಥಯಾತ್ರೆ ನಡೆಯುತ್ತದೆ. ಇದು ವಿಶ್ವದಲ್ಲೇ ಬೃಹತ್‌ ಹಿಂದು ಹಬ್ಬ ಅಥವಾ ಜಾತ್ರೆ ಎಂದೇ ಖ್ಯಾತಿಯಾಗಿದೆ. ಆದರೆ, ಈ ದೇವಾಲಯದ ನಾಲ್ಕೂ ದ್ವಾರಗಳನ್ನು ತೆರೆಯದೆ ಇರುವುದು ರಾಜಕೀಯ ವಿಷಯವಾಗಿ ಬದಲಾಗಿತ್ತು.

ಒಡಿಶಾ ಮುಖ್ಯಮಂತ್ರಿಯಾಗಿದ್ದ ನವೀನ್‌ ಪಟ್ನಾಯಕ್‌ ಅವರ ಆಡಳಿತದಲ್ಲಿ ನಾಲ್ಕೂ ದ್ವಾರಗಳನ್ನು ತೆಗೆಯದಿರುವ ಕುರಿತು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲ, ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಾಲಯದ ನಾಲ್ಕೂ ಬಾಗಿಲುಗಳನ್ನು ತೆರೆಯಲಾಗುವುದು, ಕಳೆದು ಹೋಗಿರುವ ಭಂಡಾರದ ಬೀಗದ ಕೈ ಕುರಿತು ತನಿಖೆ ನಡೆಸಲಾಗುವುದು ಎಂಬುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿತ್ತು. ಅದರಂತೆ, ಬಿಜೆಪಿಯ ಮೋಹನ್‌ ಚರಣ್‌ ಮಾಝಿ ಅವರು ದೇವಾಲಯದ ಬಾಗಿಲುಗಳನ್ನು ತೆರೆಸುವ ಮೂಲಕ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ.

ದೇಗುಲದ ಬಾಗಿಲುಗಳು ಏಕೆ ಪ್ರಮುಖ?

ದೇವಾಲಯದ ನಾಲ್ಕು ದ್ವಾರಗಳು ಭಕ್ತರಿಗೆ ಪ್ರಮುಖವಾಗಿವೆ. ನಾಲ್ಕೂ ದ್ವಾರಗಳು ಒಂದೊಂದು ಪ್ರಾಣಿಯನ್ನು ಪ್ರತಿನಿಧಿಸುತ್ತವೆ. ಪೂರ್ವದಲ್ಲಿರುವ ದ್ವಾರವು ಸಿಂಹವನ್ನು ಪ್ರತಿನಿಧಿಸುವ ಕಾರಣ ಇದಕ್ಕೆ ಸಿಂಹದ್ವಾರ ಎನ್ನುತ್ತಾರೆ. ಇನ್ನು ಪಶ್ಚಿಮದಲ್ಲಿರುವ ದ್ವಾರವು ಹುಲಿಯನ್ನು ಪ್ರತಿನಿಧಿಸುವ ಕಾರಣ ಇದಕ್ಕೆ ವ್ಯಾಘ್ರದ್ವಾರ ಎಂದು ಕರೆಯುತ್ತಾರೆ. ಅದರಂತೆ, ಉತ್ತರಕ್ಕೆ ಇರುವ ದ್ವಾರವು ಆನೆಯನ್ನು ಪ್ರತಿನಿಧಿಸುವ ಕಾರಣ ಅದನ್ನು ಹಸ್ತಿದ್ವಾರ ಎಂದೂ, ದಕ್ಷಿಣಕ್ಕೆ ಇರುವ ದ್ವಾರವು ಕುದುರೆಯನ್ನು ಪ್ರತಿನಿಧಿಸುವ ಕಾರಣ ಅದನ್ನು ಅಶ್ವದ್ವಾರ ಎಂದೂ ಕರೆಯುತ್ತಾರೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

Continue Reading

ಧಾರ್ಮಿಕ

Coconut in Worship: ಪೂಜೆ, ಶುಭ ಕಾರ್ಯಗಳಲ್ಲಿ ತೆಂಗಿನಕಾಯಿ ಬಳಸುವುದೇಕೆ ಗೊತ್ತಿದೆಯೆ?

ಪ್ರತಿಯೊಂದು ಶುಭ ಕಾರ್ಯಗಳಲ್ಲೂ ಎಲ್ಲ ಹಣ್ಣುಗಳಲ್ಲಿ ಅತ್ಯುತ್ತಮ ಎಂದು ಪರಿಗಣಿಸಲಾಗಿರುವ ತೆಂಗಿನಕಾಯಿಯನ್ನು (Coconut in Worship) ಬಳಸಲಾಗುತ್ತದೆ. ಇದರಿಂದ ಅನೇಕ ರೀತಿಯ ದೋಷಗಳು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಇದರ ಹೊರತಾಗಿ ಇನ್ನೂ ಹಲವು ಪ್ರಮುಖ ಕಾರಣಗಳಿವೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Coconut in Worship
Koo

ಹಿಂದೂ ಧರ್ಮದಲ್ಲಿ (hindu  religion) ಪ್ರತಿ ದಿನವೂ ವಿಶೇಷವಾಗಿದೆ. ಯಾಕೆಂದರೆ ಪ್ರತಿ ದಿನ (every day) ಯಾವುದಾದರೊಂದು ದೇವರಿಗೆ (god) ಸಮರ್ಪಿತವಾಗಿದೆ. ಶ್ರದ್ದಾ, ಭಕ್ತಿಯಿಂದ ಪ್ರತಿಯೊಬ್ಬರೂ ಆಯಾ ದಿನಕ್ಕೆ ತಕ್ಕಂತೆ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಇದರಿಂದ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ.

ಯಾವುದೇ ಶುಭ ಕಾರ್ಯವಿರಲಿ ಹಿಂದೂ ಧರ್ಮದಲ್ಲಿ ತೆಂಗಿನಕಾಯಿಯನ್ನು (Coconut in Worship) ಬಳಸುವುದು ವಾಡಿಕೆ. ಪೂಜೆಯಲ್ಲಿ ತೆಂಗಿನಕಾಯಿಗೆ ವಿಶೇಷ ಮಹತ್ವವಿದೆ. ಯಾವುದೇ ಹೊಸ ಕೆಲಸದ ಪ್ರಾರಂಭದಲ್ಲಿ ತೆಂಗಿನಕಾಯಿಯನ್ನು ಒಡೆಯುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೇ ತೆಂಗಿನಕಾಯಿಯನ್ನು ಎಲ್ಲಾ ರೀತಿಯ ಶುಭ ಕಾರ್ಯಗಳಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಪೂಜೆಯ ಸಮಯದಲ್ಲಿ ತೆಂಗಿನಕಾಯಿಯನ್ನು ಬಳಸುವುದರಿಂದ ಅನೇಕ ರೀತಿಯ ದೋಷಗಳು ನಿವಾರಣೆಯಾಗುತ್ತವೆ ಎನ್ನುತ್ತದೆ ಶಾಸ್ತ್ರ.

ಎಲ್ಲಾ ಹಣ್ಣುಗಳಲ್ಲಿ ತೆಂಗಿನಕಾಯಿಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ತೆಂಗಿನಕಾಯಿಯನ್ನು ಪ್ರಾಚೀನ ಕಾಲದಿಂದಲೂ ಹಿಂದೂ ಧರ್ಮದ ಎಲ್ಲಾ ಶುಭ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಇದು ಇಲ್ಲದ ಪೂಜೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ.

ತೆಂಗಿನಕಾಯಿಯನ್ನು ಪೂಜೆಯಲ್ಲಿ ಏಕೆ ಬಳಸುತ್ತಾರೆ?

ಹಿಂದೂ ಧರ್ಮದಲ್ಲಿ ತೆಂಗಿನಕಾಯಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಬಹುತೇಕ ದೇವಸ್ಥಾನಗಳಲ್ಲಿ ತೆಂಗಿನಕಾಯಿ ಒಡೆಯುವ ಅಥವಾ ದೇವರಿಗೆ ಅರ್ಪಿಸುವ ಸಂಪ್ರದಾಯವಿದೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸುವುದು ಶ್ರೇಯಸ್ಕರ ಎಂದು ಪರಿಗಣಿಸಲಾಗುತ್ತದೆ.

ತೆಂಗಿನಕಾಯಿಗೆ ಪೂಜಾ ವಸ್ತುವಾಗಿಯೂ ಪ್ರಾಮುಖ್ಯತೆ ಇದೆ. ತೆಂಗಿನಕಾಯಿ ಇಲ್ಲದೆ ಯಾವುದೇ ಪೂಜೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸುವುದರಿಂದ ವ್ಯಕ್ತಿಯ ದುಃಖ ಮತ್ತು ನೋವುಗಳು ದೂರವಾಗುತ್ತವೆ ಮತ್ತು ಒಬ್ಬ ವ್ಯಕ್ತಿಯು ಸಂಪತ್ತು ಮತ್ತು ಇತರ ಅನುಗ್ರಹಗಳನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಪ್ರಸಾದವಾಗಿ ಸ್ವೀಕರಿಸಿದ ತೆಂಗಿನಕಾಯಿಯನ್ನು ತಿನ್ನುವುದರಿಂದ ದೈಹಿಕ ದೌರ್ಬಲ್ಯ ದೂರವಾಗುತ್ತದೆ.


ಶುಭ ಕಾರ್ಯಗಳಲ್ಲಿ ತೆಂಗಿನಕಾಯಿ ಬಳಕೆ

ತೆಂಗಿನಕಾಯಿಯನ್ನು ಹಿಂದೂ ಧರ್ಮದಲ್ಲಿ ಎಲ್ಲಾ ಧಾರ್ಮಿಕ ಆಚರಣೆಗಳಲ್ಲಿ ಬಳಸಲಾಗುತ್ತದೆ. ತೆಂಗಿನಕಾಯಿ ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವಾಗಿದೆ. ದೇವರಿಗೆ ತೆಂಗಿನಕಾಯಿಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸಿದ ಅನಂತರ ಅದನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ.

ತೆಂಗಿನಕಾಯಿಯ ಮಹತ್ವ

ತೆಂಗಿನಕಾಯಿ ಭಗವಾನ್ ನಾರಾಯಣನಿಗೆ ಅಚ್ಚುಮೆಚ್ಚು. ತೆಂಗಿನಕಾಯಿಯ ಹೊರ ಮೇಲ್ಮೈಯನ್ನು ಅಹಂಕಾರದ ಮತ್ತು ಮೃದುವಾದ ಬಿಳಿ ಒಳ ಮೇಲ್ಮೈಯನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ತೆಂಗಿನಕಾಯಿಯನ್ನು ಒಡೆಯುವುದು ಎಂದರೆ ನಾವು ನಮ್ಮ ಅಹಂಕಾರವನ್ನು ದೇವರ ಪಾದಕ್ಕೆ ಸಮರ್ಪಿಸಿದಂತೆ.


ಮೂರು ದೇವತೆಗಳಿರುವ ತೆಂಗಿನಕಾಯಿಗಳು

ತೆಂಗಿನ ಮರವನ್ನು ಕಲ್ಪವೃಕ್ಷ ಎಂದೂ ಕರೆಯುತ್ತಾರೆ. ಇದರಲ್ಲಿ ಮೂರು ದೇವರುಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ವಾಸಿಸುತ್ತಾರೆ ಎಂದು ನಂಬಲಾಗಿದೆ. ತೆಂಗಿನಕಾಯಿಯ ಮೇಲಿನ ಮೂರು ಕಣ್ಣುಗಳನ್ನು ಶಿವನ ಮೂರು ಕಣ್ಣುಗಳಿಗೆ ಹೋಲಿಸಲಾಗುತ್ತದೆ. ಆದ್ದರಿಂದ, ತೆಂಗಿನಕಾಯಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಪೂಜೆಯಲ್ಲಿ ಬಳಸಲಾಗುತ್ತದೆ. ರಾಮ- ಸೀತಾ ವಿವಾಹವಾಗಲಿ, ಶಿವ- ಪಾರ್ವತಿಯರ ವಿವಾಹವಾಗಲಿ ಎಲ್ಲಾ ಮದುವೆಗಳಲ್ಲಿ ಕಲಶದ ಮೇಲೆ ತೆಂಗಿನಕಾಯಿಯನ್ನು ಇಟ್ಟು ಪೂಜಿಸಲಾಗುತ್ತದೆ.

ಇದನ್ನೂ ಓದಿ: Vastu Tips: ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ವಾಸ್ತು ಸಲಹೆ ಪಾಲಿಸಿ

ತೆಂಗಿನಕಾಯಿ ಒಡೆಯುವುದೇಕೆ?

ಗಣಪತಿ ದೇವರಿಗೆ ತೆಂಗಿನಕಾಯಿ ಎಂದರೆ ತುಂಬಾ ಇಷ್ಟ ಎಂದು ಹೇಳಲಾಗುತ್ತದೆ. ಆದ್ದರಿಂದ, ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಗಣಪತಿ ದೇವರನ್ನು ಸ್ಮರಿಸಿ ಪೂಜಿಸಲಾಗುತ್ತದೆ. ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ತೆಂಗಿನಕಾಯಿ ಒಡೆಯುವುದು ಆ ಕೆಲಸವನ್ನು ಸುಗಮವಾಗಿ ಮತ್ತು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಲಕ್ಷ್ಮಿ ದೇವಿಗೆ ಏಕಮುಖ ತೆಂಗಿನಕಾಯಿ ತುಂಬಾ ಪ್ರಿಯವಾಗಿದೆ. ಇದನ್ನು ಅರ್ಪಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುವುದು. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ನೆಲೆಯಾಗುತ್ತದೆ ಎಂದು ಹೇಳಲಾಗುತ್ತದೆ.

Continue Reading

ಭವಿಷ್ಯ

Baba Vanga Predictions: ಪ್ರಪಂಚದ ಅಂತ್ಯ ಯಾವಾಗ? ಈ ವರ್ಷ ಏನೇನಾಗಲಿವೆ? ಬಾಬಾ ವಂಗಾ ಭವಿಷ್ಯ ಹೀಗಿದೆ!

ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೂ ಕರೆಯಲ್ಪಡುವ ಬಾಬಾ ವಂಗಾ (Baba Vanga Predictions) ಅವರು ನುಡಿದಿರುವ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ. ಇದೀಗ ಅವರು ಪ್ರಪಂಚದ ಅಂತ್ಯ ಯಾವಾಗ ಆಗುತ್ತೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ. ಅಲ್ಲದೇ 2024ರ ಅವರ ಅನೇಕ ಭವಿಷ್ಯವಾಣಿಗಳು ನಿಜವಾಗುವ ಹಾಗಿದೆ. ಅವು ಯಾವುದು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Baba Vanga Predictions
Koo

ವಾಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಎಂಬ ಹೆಸರಿನ ಬಲ್ಗೇರಿಯಾದ (Bulgarian) ಅಂಧ ಮಹಿಳೆ ಬಾಬಾ ವಂಗಾ (Baba Vanga) ಅವರ ಭವಿಷ್ಯವಾಣಿಯನ್ನು (Baba Vanga Predictions) ಸಾಕಷ್ಟು ಮಂದಿ ನಂಬುತ್ತಾರೆ. ಇದಕ್ಕೆ ಮುಖ್ಯ ಕಾರಣ ಹಲವು ವರ್ಷಗಳ ಹಿಂದೆ ಅವರು ನುಡಿದಿರುವ ಬಹುತೇಕ ಭವಿಷ್ಯವಾಣಿಗಳು (Predictions) ನಿಜವಾಗಿವೆ. ಎರಡು ದಶಕಗಳ ಹಿಂದೆಯೇ ಅವರು ನಿಧನರಾಗಿದ್ದು, ಅವರ ಭವಿಷ್ಯವಾಣಿಗಳ ಬಗ್ಗೆ ಜನರು ನಿರಂತರ ಚರ್ಚೆ ಮಾಡುತ್ತಿರುತ್ತಾರೆ.

ಬಲ್ಗೇರಿಯನ್ ಕ್ಲೈರ್ವಾಯಂಟ್ ನಲ್ಲಿ 1911ರಲ್ಲಿ ಜನಿಸಿದ ಬಾಬಾ ವಂಗಾ ಬಾಲ್ಯದಿಂದಲೂ ಭವಿಷ್ಯವನ್ನು ಸ್ಪಷ್ಟವಾಗಿ ಕಾಣುತ್ತಿದ್ದರು. ಇವರು 9/11 ದಾಳಿ, ರಾಜಕುಮಾರಿ ಡಯಾನಾ ಅವರ ಸಾವು, ಯುನೈಟೆಡ್ ಸ್ಟೇಟ್ ನ ಮೊದಲ ಕಪ್ಪು ಅಧ್ಯಕ್ಷ ಬರಾಕ್ ಒಬಾಮಾ ಅವರು ಆಗುತ್ತಾರೆ ಮತ್ತು ಕೋವಿಡ್-19 ಸಾಂಕ್ರಾಮಿಕದ ಕುರಿತು ಭವಿಷ್ಯ ನುಡಿದಿದ್ದರು. ಅವರು ತಮ್ಮ ಜೀವನದುದ್ದಕ್ಕೂ ಹಲವಾರು ಭವಿಷ್ಯವಾಣಿಗಳನ್ನು ನುಡಿದಿದ್ದು, ಅದರಲ್ಲಿ ಹೆಚ್ಚಿನವು ನಿಜವಾಗಿದೆ. ಬಾಬಾ ವಂಗಾ ಅವರು ಕೆಲವು ಭಯಾನಕ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಅದು ಹೆಚ್ಚು ಕಳವಳಕಾರಿಯಾಗಿದೆ.

ಮೂರನೇ ಮಹಾಯುದ್ಧ:

ಇದರಲ್ಲಿ 2024ರಲ್ಲಿ ಮೂರನೇ ಮಹಾಯುದ್ಧದ ಭವಿಷ್ಯವನ್ನು ಅವರು ಹೇಳಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಇಸ್ರೇಲ್- ಇರಾನ್ ಮತ್ತು ರಷ್ಯಾ- ಉಕ್ರೇನ್ ನಡುವಿನ ಪ್ರಸ್ತುತ ಉದ್ವಿಗ್ನತೆಯೊಂದಿಗೆ ಇದು ನಿಜವಾಗುತ್ತಿರುವಂತೆ ಕಾಣುತ್ತಿದೆ. ಇದು ಅನೇಕರ ಚಿಂತೆಗೂ ಕಾರಣವಾಗಿದೆ. ಬಾಬಾ ವಂಗಾ ಅವರು 2024ರಲ್ಲಿ ಯುರೋಪ್‌ನಲ್ಲಿ ಭಯೋತ್ಪಾದಕ ದಾಳಿಗಳು ಸೇರಿದಂತೆ ಹಲವು ಕರಾಳ ಘಟನೆಗಳ ಬಗ್ಗೆಯೂ ಮುನ್ಸೂಚನೆ ನೀಡಿದ್ದಾರೆ. ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೂ ಕರೆಯಲ್ಪಡುವ ಅವರು 1996ರಲ್ಲಿ ನಿಧನರಾದ ಅವರು ಪ್ರಪಂಚದ ಅಂತ್ಯದವರೆಗೆ ಮನುಕುಲಕ್ಕೆ ಸಂಭವಿಸಬಹುದಾದ ಅನೇಕ ಘಟನೆಗಳ ಬಗ್ಗೆ ಹೇಳಿದ್ದಾರೆ.

2024ರ ಕುರಿತು ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಹೀಗಿವೆ:

2024ರಲ್ಲಿ ನೈಸರ್ಗಿಕ ವಿಪತ್ತು ಮತ್ತು ತೀವ್ರ ಹವಾಮಾನ ಘಟನೆಗಳು ಸಂಭವಿಸಲಿದೆ. ಈ ದಿನಗಳಲ್ಲಿ ತಾಪಮಾನದ ಏರಿಕೆ ಯನ್ನು ಗಮನಿಸಿದರೆ ಇದು ಸರಿ ಎಂದು ಎನ್ನಬಹುದು. ಸೈಬರ್ ದಾಳಿ ಹೆಚ್ಚಾಗುತ್ತದೆ ಎಂದು ಬಾಬಾ ವಂಗಾ ಅವರ ಮೊದಲೇ ನುಡಿದಿರುವ ಪ್ರಮುಖ ಭವಿಷ್ಯವಾಣಿಗಳಲ್ಲಿ ಒಂದಾಗಿದೆ.

ಬಾಬಾ ವಂಗಾ ಸತ್ತಾಗ ಇಂಟರ್ನೆಟ್ ಪ್ರಾರಂಭವಾಗಿದ್ದು ಮಾತ್ರ. ಆದರೆ ಆಗಲೇ ಅವರು ಹ್ಯಾಕರ್‌ಗಳು ತಮ್ಮ ದಾಳಿಯನ್ನು ಹೆಚ್ಚಿಸುತ್ತಾರೆ, ವಿಶೇಷವಾಗಿ ಪ್ರಮುಖ ಮೂಲಸೌಕರ್ಯಗಳ ಮೇಲೆ ವಿಶ್ವದಾದ್ಯಂತ ಭದ್ರತಾ ಸಮಸ್ಯೆಗಳನ್ನು ಉಂಟುಮಾಡುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

ಆರ್ಥಿಕ ಶಕ್ತಿಯಲ್ಲಿ ಜಾಗತಿಕ ಬದಲಾವಣೆಗಳು, ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಸಾಲದ ಮಟ್ಟಗಳಿಂದಾಗಿ 2024ರಲ್ಲಿ ಆರ್ಥಿಕ ಬಿಕ್ಕಟ್ಟುಗಳ ಕುರಿತು ಬಾಬಾ ವಂಗಾ ಮೊದಲೇ ಹೇಳಿದ್ದಾರೆ.

ಇದನ್ನೂ ಓದಿ: Baba Vanga: 2024 ವರ್ಷವಿಡೀ ಭಯಾನಕ! ಬಾಬಾ ವಂಗಾ ಭವಿಷ್ಯ

ಯುರೋಪ್‌ನಲ್ಲಿ ಹೆಚ್ಚಿನ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಮೊದಲೇ ಎಚ್ಚರಿಸಿರುವ ಬಾಬಾ ವಂಗಾ, ದೊಡ್ಡ ರಾಷ್ಟ್ರವೊಂದು ಜೈವಿಕ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಬಹುದು ಅಥವಾ ಬಳಸಬಹುದು ಎಂದು ಹೇಳಿದ್ದರು.

2024ರಲ್ಲಿ ಆಲ್ಝೈಮರ್ ಮತ್ತು ಕ್ಯಾನ್ಸರ್ ಸೇರಿದಂತೆ ಗುಣಪಡಿಸಲಾಗದ ಕಾಯಿಲೆಗಳಿಗೆ ಕೆಲವು ವೈದ್ಯಕೀಯ ಪ್ರಗತಿಯ ಬಗ್ಗೆ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಆಶ್ಚರ್ಯ ಎನ್ನುವಂತೆ ರಷ್ಯಾದಲ್ಲಿ ಕ್ಯಾನ್ಸರ್ ಲಸಿಕೆ ಅಭಿವೃದ್ಧಿಯಲ್ಲಿದೆ ಎಂದು ವರದಿಯಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡುವ ಪ್ರಯತ್ನ ನಡೆಯುತ್ತದೆ ಎಂಬ ಭವಿಷ್ಯವಾಣಿಯನ್ನೂ ಬಾಬಾ ವಂಗಾ ನುಡಿದಿದ್ದಾರೆ. ಇಷ್ಟು ಮಾತ್ರವಲ್ಲ 5079ರಲ್ಲಿ ಜಗತ್ತು ಸಂಪೂರ್ಣ ವಿನಾಶವಾಗುತ್ತದೆ ಎಂಬುದು ಅವರ ಭವಿಷ್ಯವಾಣಿಯಲ್ಲಿದೆ.

Continue Reading
Advertisement
Sonakshi Sinha
Latest3 mins ago

Sonakshi Sinha: ನಟಿ ಸೋನಾಕ್ಷಿ ಸಿನ್ಹಾ ಐಷಾರಾಮಿ ಅಪಾರ್ಟ್‌ಮೆಂಟ್ ಹೇಗಿದೆ? ವಿಡಿಯೊ ನೋಡಿ!

Karnataka Weather Forecast
ಮಳೆ8 mins ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Gangster Ravi Pujari
ಕರ್ನಾಟಕ11 mins ago

Gangster Ravi Pujari: ಭೂಗತ ಪಾತಕಿ ರವಿ ಪೂಜಾರಿಗೆ ಅನಾರೋಗ್ಯ; ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು

BS Yediyurappa
ಕರ್ನಾಟಕ15 mins ago

BS Yediyurappa: ಪೋಕ್ಸೊ ಕೇಸ್;‌ ಮಾಜಿ ಸಿಎಂಗೇ ಹೀಗಾದರೆ ಜನರ ಗತಿ ಏನು? ಸರ್ಕಾರಕ್ಕೆ ಕೋರ್ಟ್‌ ಚಾಟಿ!

Allergic Asthma
ಆರೋಗ್ಯ23 mins ago

Allergic Asthma: ಅಸ್ತಮಾ ಹೊಂದಿರುವ ವ್ಯಕ್ತಿಗಳು ಈ ಅಲರ್ಜಿಗಳಿಂದ ದೂರವಿರಬೇಕು

Due to heavy rain water entered the houses of Tharkas Pet village of Chittapur taluk
ಮಳೆ52 mins ago

Karnataka Rain: ಧಾರಾಕಾರ ಮಳೆ; ಚಿತ್ತಾಪುರ ತಾಲೂಕಿನ ತರ್ಕಸ್‌ಪೇಟೆ ಗ್ರಾಮ ತತ್ತರ

Pawan Kalyan
Latest59 mins ago

Akira Nandan: ಅಕಿರಾ ನಂದನ್‌; ಆರೂವರೆ ಅಡಿ ಎತ್ತರದ ಪವನ್ ಕಲ್ಯಾಣ್ ಪುತ್ರನಿಗೆ ಭಾರಿ ಡಿಮ್ಯಾಂಡ್‌!

Ram Mandir
ದೇಶ59 mins ago

Ram Mandir: ರಾಮಮಂದಿರ ಸ್ಫೋಟಿಸುವ ಉಗ್ರರ ಬೆದರಿಕೆ ಆಡಿಯೊ ವೈರಲ್; ಅಯೋಧ್ಯೆಯಲ್ಲಿ ಹೈ ಅಲರ್ಟ್‌

Celebrity Ethnic Fashion
ಫ್ಯಾಷನ್60 mins ago

Celebrity Ethnic Fashion: ನಟ ಧನುಷ್‌ ಗೌಡರ ಗ್ರ್ಯಾಂಡ್‌ ಎಥ್ನಿಕ್‌ ಜಾಕೆಟ್‌ ವಿಶೇಷತೆ ಏನು?

Actor Darshan
ಕರ್ನಾಟಕ1 hour ago

Actor Darshan: ಸಸ್ಯಾಹಾರಿ ಅಂದ್ರೂ ರೇಣುಕಾಸ್ವಾಮಿ ಬಾಯಿಗೆ ಬಿರಿಯಾನಿ ಮೂಳೆ ತುರುಕಿದ್ದ ಆರೋಪಿಗಳು!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ8 mins ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು1 hour ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌