Independence day Fashion 2024: ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್‌ಗೆ ಕಾಲಿಟ್ಟ ಸಿಂಪಲ್‌ ಎಥ್ನಿಕ್‌ ವೇರ್‌ಗಳಿವು - Vistara News

ಫ್ಯಾಷನ್

Independence day Fashion 2024: ಸ್ವಾತಂತ್ರ್ಯ ದಿನಾಚರಣೆ ಸೆಲೆಬ್ರೇಷನ್‌ಗೆ ಕಾಲಿಟ್ಟ ಸಿಂಪಲ್‌ ಎಥ್ನಿಕ್‌ ವೇರ್‌ಗಳಿವು

Independence day Fashion 2024: ಸ್ವಾತಂತ್ರ್ಯ ದಿನಾಚಾರಣೆ ಸಮೀಪಿಸುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ, ಈ ವಿಶೇಷ ದಿನದಂದು ಧರಿಸಬಹುದಾದ ನಾನಾ ಬಗೆಯ ಡಿಸೆಂಟ್‌ ಲುಕ್‌ ನೀಡುವ ಸಿಂಪಲ್‌ ಎಥ್ನಿಕ್‌ ವೇರ್‌ಗಳು ಕಾಲಿಟ್ಟಿವೆ. ಯಾವ್ಯಾವ ಡಿಸೈನ್‌ನವು ದೊರೆಯುತ್ತಿವೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.

VISTARANEWS.COM


on

Independence day Fashion 2024
ಚಿತ್ರಕೃಪೆ: ಮಿಂಚು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ವಾತಂತ್ರ್ಯ ದಿನಾಚಾರಣೆ (Independence day Fashion 2024) ಸಮೀಪಿಸುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಈ ದಿನದಂದು ಧರಿಸಬಹುದಾದ ನಾನಾ ಬಗೆಯ ಡಿಸೆಂಟ್‌ ಲುಕ್‌ ನೀಡುವಂತಹ ಸಿಂಪಲ್‌ ಫ್ಯಾಷನ್‌ವೇರ್‌ಗಳು ಕಾಲಿಟ್ಟಿವೆ. ಅಂದಹಾಗೆ, ಪ್ರತಿ ವರ್ಷವೂ ಸ್ವಾತಂತ್ರ್ಯ ದಿನಾಚಾರಣೆ ಸೆಲೆಬ್ರೇಷನ್‌ಗೆ ಧರಿಸಬಹುದಾದ ನಾನಾ ಬಗೆಯ ಎಥ್ನಿಕ್‌ ಡಿಸೈನರ್‌ವೇರ್‌ಗಳು ಬಿಡುಗಡೆಗೊಳ್ಳುತ್ತವೆ. ಆದರೆ, ಆಯಾ ಸೀಸನ್‌ಗೆ ತಕ್ಕಂತೆ ಹಾಗೂ ಜನರೇಷನ್‌ಗೆ ಮ್ಯಾಚ್‌ ಆಗುವಂತೆ ಡಿಸೈನ್‌ನಲ್ಲಿ ಬದಲಾವಣೆಗಳಾಗಿರುತ್ತವೆ. ಧರಿಸುವ ವ್ಯಕ್ತಿ ಹಾಗೂ ಕ್ಷೇತ್ರಕ್ಕೂ ಹೊಂದುವಂತಹ ಉಡುಗೆಗಳು ಎಂಟ್ರಿ ನೀಡುತ್ತವೆ. ಆ ದಿನದ ಕಾನ್ಸೆಪ್ಟ್ ಹಾಗೂ ಥೀಮ್‌ ಪ್ರತಿ ವರ್ಷ ಒಂದೇ ಆದರೂ ಹೊಸ ರೂಪದಲ್ಲಿ ಹಾಗೂ ನವವಿನ್ಯಾಸದಲ್ಲಿ ಬಿಡುಗಡೆಗೊಳ್ಳುತ್ತವೆ ಎನ್ನುತ್ತಾರೆ.

Independence day Fashion 2024

ಸಮೀಕ್ಷಾ ವರದಿ

ಅಪರೆಲ್‌ ಸಂಸ್ಥೆಯೊಂದರ ಸಮೀಕ್ಷೆಯೊಂದರ ಪ್ರಕಾರ, ಈ ವಿಶೇ‍ಷ ದಿನದಂದು ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಅತಿ ಹೆಚ್ಚು ಮಂದಿ ಬಗೆಬಗೆಯ ಕುರ್ತಾ ಧರಿಸುತ್ತಾರಂತೆ. ಹಾಗಾಗಿ ಪ್ರತಿ ವರ್ಷವೂ ಈ ಸೀಸನ್‌ನಲ್ಲಿ ಅತಿ ಹೆಚ್ಚು ಕುರ್ತಾಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವಂತೆ.

Independence day Fashion 2024

ಯೂನಿಸೆಕ್ಸ್ ಕುರ್ತಾ

ಈ ಸಾಲಿನಲ್ಲಿ ಹುಡುಗರು ಹಾಗೂ ಹುಡುಗಿಯರು ಇಬ್ಬರೂ ಧರಿಸಬಹುದಾದ ಯೂನಿ ಸೆಕ್ಸ್ ಕುರ್ತಾಗಳು ನಯಾ ಡಿಸೈನ್‌ನಲ್ಲಿ ಬಂದಿವೆ. ಇನ್ನು ಎಂದಿನಂತೆ ಪುಟ್ಟ ಮಕ್ಕಳು, ಹಿರಿಯರು ಸೇರಿದಂತೆ ಎಲ್ಲಾ ವಯಸ್ಸಿನವರಿಗೂ ನಾನಾ ಡಿಸೈನ್‌ಗಳಲ್ಲಿ ಇವು ಎಂಟ್ರಿ ನೀಡಿದ್ದು, ಕಾಟನ್‌, ಖಾದಿ, ರಯಾನ್‌, ಲೆನಿನ್‌ನ ಪಾಕೆಟ್‌ ಕುರ್ತಾ, ಕುರ್ತಾ ಬಂದ್ಗಾಲ ಸೆಟ್‌, ಬಟನ್‌ಲೆಸ್‌ ಸ್ಲಿವ್‌ಲೆಸ್‌ ಕುರ್ತಾ ಹಾಗೂ ಜಿಪ್‌ ಕುರ್ತಾಗಳು ಈ ಬಾರಿ ಎಂಟ್ರಿ ಪಡೆದಿವೆ ಎನ್ನುತ್ತಾರೆ ಮಾರಾಟಗಾರರು.

Independence day Fashion 2024

ದೇಶ ಪ್ರೇಮ ಬಿಂಬಿಸುವ ಸಿಂಪಲ್‌ ಸೀರೆಗಳಿಗೆ ಡಿಮ್ಯಾಂಡ್‌

ಈ ವಿಶೇಷ ದಿನದಂದು ಸಿಂಪಲ್‌ ಎಥ್ನಿಕ್‌ ಡಿಸೈನರ್‌ವೇರ್‌ಗಳಿಗೆ ಅತಿ ಹೆಚ್ಚು ಬೇಡಿಕೆ. ಮಹಿಳೆಯರ ವಿಷಯಕ್ಕೆ ಬಂದಲ್ಲಿ, ಪಾಸ್ಟೆಲ್‌ ಹಾಗೂ ಕ್ರೀಮ್‌, ಹಾಫ್‌ ವೈಟ್‌, ವೈಟ್‌, ತಿರಂಗಾ ವರ್ಣದ ಖಾದಿ, ಕಾಟನ್‌ನ, ಸೆಮಿ ಸಿಲ್ಕ್‌ ಸಿಂಪಲ್‌ ಸೀರೆಗಳು ನಾನಾ ಫ್ಯಾಬ್ರಿಕ್‌ನಲ್ಲಿ ಆಗಮಿಸಿವೆ.

ಇದನ್ನೂ ಓದಿ: Varamahalaxmi Decoration: ವರಮಹಾಲಕ್ಷ್ಮಿಯ ಸಿಂಗಾರಕ್ಕೂ ಬಂತು ಮಿನಿ ವಸ್ತ್ರಾಭರಣಗಳು!

ತ್ರಿ ವರ್ಣದ ಲೆಹೆಂಗಾ & ಸಲ್ವಾರ್‌ ಕಮೀಜ್‌ ಸೆಟ್‌

ಇನ್ನು, ಯುವತಿಯರಿಗೆ ಇಷ್ಟವಾಗುವಂತಹ ಡಿಸೈನ್‌ನ ತ್ರಿವರ್ಣ ಶೇಡ್‌ನ ಲೆಹೆಂಗಾ, ಕಮೀಜ್‌, ಲಂಗ-ದಾವಣಿ ಸೆಟ್‌ಗಳು ರಾಷ್ಟ್ರಪ್ರೇಮ ಬಿಂಬಿಸುವ ಕಲರ್‌ ಕಾಂಬಿನೇಷನ್‌ಗಳಲ್ಲಿ ಬಂದಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Varamahalaxmi Decoration: ವರಮಹಾಲಕ್ಷ್ಮಿಯ ಸಿಂಗಾರಕ್ಕೂ ಬಂತು ಮಿನಿ ವಸ್ತ್ರಾಭರಣಗಳು!

Varamahalaxmi Decoration: ಹಬ್ಬದಂದು ಮನೆಯಲ್ಲಿ ಕೂರಿಸುವ ವರಮಹಾಲಕ್ಷ್ಮಿಯನ್ನು ಆಕರ್ಷಕವಾಗಿ ಸಿಂಗರಿಸಲು ಮಾರುಕಟ್ಟೆಗೆ ನಾನಾ ಬಗೆಯ ಪುಟ್ಟ ಪುಟ್ಟ ವಸ್ತ್ರಾಭರಣಗಳು ಲಗ್ಗೆ ಇಟ್ಟಿವೆ. ಏನೆಲ್ಲಾ ಬಂದಿವೆ? ಈ ಬಾರಿ ಯಾವ್ಯಾವ ಡಿಸೈನ್‌ನವು ಲಭ್ಯ ಎಂಬುದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Varamahalaxmi Decoration
ಚಿತ್ರಗಳು: ಮಿಂಚು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುಂಬರುವ ಹಬ್ಬಕ್ಕೆ ವರಮಹಾಲಕ್ಷ್ಮಿ (Varamahalaxmi Decoration) ದೇವಿಯನ್ನು ಆಕರ್ಷಕವಾಗಿ ಅಲಂಕರಿಸುವ ಪುಟ್ಟ ಪುಟ್ಟ ವಸ್ತ್ರಾಭರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

Varamahalaxmi Decoration

ವರಮಹಾಲಕ್ಷ್ಮಿಯ ಸಿಂಗಾರಕ್ಕೆ ವಸ್ತ್ರಾಭರಣ

ವರಮಹಾಲಕ್ಷ್ಮಿ ದೇವಿಯನ್ನು ಸಿಂಗಾರಗೊಳಿಸುವಂತಹ ಬಣ್ಣ ಬಣ್ಣದ ರೇ‍ಷ್ಟೇ ಹಾಗೂ ಬ್ರೋಕೆಡ್‌ನ ಪುಟ್ಟ ಸೀರೆ, ಮಿನಿ ದಾವಣಿ ಹಾಗೂ ಲೆಹೆಂಗಾದಂತಹ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಅವರವರ ಮನೆಯ ಡೆಕೋರೇಷನ್‌ ಥೀಮ್‌ಗೆ ತಕ್ಕಂತೆ ದೇವಿ ಲಕ್ಷ್ಮಿಯನ್ನು ಸುಂದರವಾಗಿ ಬಿಂಬಿಸಬಲ್ಲ, ಈ ದೇವಿ ವಸ್ತ್ರಗಳು, ಸಾಕಷ್ಟು ಶೇಡ್‌ಗಳಲ್ಲಿ ಹಾಗೂ ಡಿಸೈನ್‌ನಲ್ಲಿ ಸಿಗುತ್ತಿವೆ.

Varamahalaxmi Decoration

ವರಮಹಾಲಕ್ಷ್ಮಿಗೆ ಮಿನಿ ಆಭರಣಗಳು

ಇವುಗಳೊಂದಿಗೆ ಟ್ರೆಡಿಷನಲ್‌ ಲುಕ್‌ ನೀಡುವ ಕೇಶಾಲಂಕಾರದ ಪುಟ್ಟ ಜಡೆ, ಕುಚ್ಚು, ಜಡೆ ನಾಗರ, ಕತ್ತಿಗೆ ಪುಟ್ಟ ತಾಳಿ, ಕಾಸಿನ ಸರ, ಹರಳಿನ ಲೇಯರ್‌ ಹಾರ, ನೆಕ್ಲೇಸ್‌, ಮೂಗುತಿ, ಕಿವಿಯೊಲೆ, ಕಿವಿ ಸರಪಳಿ, ಡಾಬು, ಕಿರೀಟ ಸೇರಿದಂತೆ ಎಲ್ಲವೂ ಮಿನಿ ಸೈಝಿನಲ್ಲಿ, ಡಿಸೈನ್‌ಗಳಲ್ಲಿ ಬಂದಿವೆ.

Varamahalaxmi Decoration

ಹೆಚ್ಚಿದ ಮಾರಾಟ

ಪೂಜಿಸುವ ಬಿಂದಿಗೆಗೆ ಉಡಿಸುವ ಸೀರೆಗಳು, ದೇವಿಯ ಬೊಂಬೆಗೆ ಉಡಿಸುವ ಸೀರೆಗಳು ಅತಿ ಹೆಚ್ಚಾಗಿ ಮಾರಾಟವಾಗುತ್ತಿವೆ. ಇನ್ನು, ದೇವಿಯ ತೋಳಿಗೆ ಸಿಕ್ಕಿಸುವ ಹರಳಿನ ಅಸ್ತ್ರಗಳು, ಮಾತಾಪಟ್ಟಿ, ಕಿರೀಟದ ಹಿಂದಿನ ಚಕ್ರ, ಮೊಗ್ಗಿನ ಜಡೆ, ರೆಡಿಮೇಡ್‌ ಹರಳಿನ ತುರುಬು, ಸೊಂಟದ ಪಟ್ಟಿ, ಕಾಲ್ಗೆಜ್ಜೆ ಎಲ್ಲವೂ ನಾನಾ ಕಲರ್‌ಗಳಲ್ಲಿ ಹಾಗೂ ಡಿಸೈನ್‌ಗಳಲ್ಲಿ ಬಂದಿದ್ದು, ಅತಿ ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಗಾಂಧಿ ಬಜಾರ್‌ ಶಾಪ್‌ವೊಂದರ ಮಾರಾಟಗಾರರು.

Varamahalaxmi Decoration

ವೆರೈಟಿ ಅಲಂಕಾರಿಕ ವಸ್ತ್ರಾಭರಣಗಳು

ಆಯಾ ಮನೆಯಲ್ಲಿ ಕೂರಿಸುವ ಅಥವಾ ಪ್ರತಿಷ್ಠಾಪಿಸುವ ವರಮಹಾಲಕ್ಷ್ಮಿಯ ಆಕಾರಕ್ಕೆ ತಕ್ಕಂತೆಯೂ ಈ ವಸ್ತ್ರಾಭರಣಗಳು ದೊರಕುತ್ತಿವೆ. ಉದಾಹರಣೆಗೆ., ಪುಟ್ಟ ಚೊಂಬನ್ನು ದೇವಿಯಂತೆ ಕೂರಿಸಿ, ಆರಾಧಿಸುವವರಿಗೆಂದೇ ಚಿಕ್ಕ ಸೈಜಿನ ವಸ್ತ್ರಗಳು ದೊರೆಯುತ್ತಿವೆ. ಅವುಗಳಲ್ಲಿ ರೇಷ್ಮೆ, ಕಾಟನ್‌, ಬಾರ್ಡರ್‌ನವು, ಬ್ರೋಕೆಡ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. 100 ರೂ.ಗಳಿಂದಿಡಿದು 1000 ಸಾವಿರ ರೂ. ಗಳವರೆಗೂ ಅವುಗಳಿಗೆ ಬೆಲೆ ನಿಗಧಿಯಾಗಿದೆ ಎನ್ನುತ್ತಾರೆ ಮಾರಾಟಗಾರರು.

  • ಪೂಜಿಸುವ ದೇವಿಯ ಸೈಝಿಗೆ ತಕ್ಕಂತಹ ಮಿನಿ ಡಿಸೈನರ್‌ವೇರ್‌ ಕೊಳ್ಳಿ.
  • ವಸ್ತ್ರಾಭರಣಗಳನ್ನು ಬಳಸುವಾಗ ತೆಗೆದು ನಂತರ ಹಾಗೆಯೇ ಇಟ್ಟು ಪ್ಯಾಕಿಂಗ್‌ ಮಾಡಿ. ವರ್ಷಗಟ್ಟಲೇ ಬಣ್ಣ ಮಾಸುವುದಿಲ್ಲ.
  • ಹೆಚ್ಚಿನ ಬಿಲ್‌ಗೆ ಉಚಿತ ಹೋಮ್‌ ಡಿಲಿವೆರಿ ಸೌಲಭ್ಯ ನೀಡುವುದನ್ನು, ಬಳಸಿಕೊಳ್ಳಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Shravana Shopping 2024: ಮಾರುಕಟ್ಟೆಯಲ್ಲೀಗ ಶ್ರಾವಣದ ಟ್ರೆಂಡ್‌; ಶುರುವಾಗಿದೆ ಶಾಪಿಂಗ್‌ ಭರಾಟೆ

Continue Reading

ಫ್ಯಾಷನ್

Sharara Fashion: ಲಾಂಗ್‌ ಸ್ಕರ್ಟ್‌‌ನಂತೆ ರೂಪ ಬದಲಿಸಿದ ಶರಾರ!

Sharara Fashion: ಇದೀಗ ಸೆಲೆಬ್ರೆಟಿಗಳ ಎಥ್ನಿಕ್‌ ಡಿಸೈನರ್‌ವೇರ್‌ಗಳಲ್ಲಿ ಸೇರಿರುವ ಶರಾರ ನಾನಾ ರೂಪ ಪಡೆದಿದೆ. ಕೆಲವು ಲಾಂಗ್‌ ಸ್ಕರ್ಟ್‌ನಂತೆ ಕಂಡರೇ, ಇನ್ನು, ಕೆಲವು ಇಂಡೋ-ವೆಸ್ಟರ್ನ್‌ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಏನಿದು ಶರಾರ ? ಆಯ್ಕೆ ಹೇಗೆ? ಈ ಕುರಿತಂತೆ ಡಿಸೈನರ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Sharara Fashion
ಚಿತ್ರಗಳು: ದಿವ್ಯಾ ಕೋಸ್ಲಾ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಟ್ರೆಂಡಿಯಾಗಿರುವ (Sharara Fashion) ಶರಾರ ಲಾಂಗ್‌ ಸ್ಕರ್ಟ್‌ನಂತೆ ಬದಲಾಗಿದೆ. ಧರಿಸಿದಾಗ ತಕ್ಷಣಕ್ಕೆ ನೋಡಲು ಶರಾರ ಎಂದೆನಿಸಿದರೂ, ನಿಂತಾಗ ಥೇಟ್‌ ಲಾಂಗ್‌ ಸ್ಕರ್ಟ್ ಅಥವಾ ಡಿವೈಡೆಡ್‌ ಸ್ಕರ್ಟ್‌ನಂತೆ ಕಾಣಿಸುತ್ತವೆ. ಇತ್ತೀಚೆಗೆ ಸೆಲೆಬ್ರೆಟಿಗಳು ಧರಿಸುವುದು ಹೆಚ್ಚಾಗುತ್ತಿದ್ದಂತೆ, ಈ ಎಥ್ನಿಕ್‌ ಔಟ್‌ಫಿಟ್‌ ಯುವತಿಯರನ್ನು ಹೆಚ್ಚು ಸೆಳೆಯುತ್ತಿದೆ.

ಸೆಲೆಬ್ರೆಟಿಗಳ ಚಾಯ್ಸ್‌‌ನಲ್ಲಿ ಶರಾರ

ಹೌದು. ಇದಕ್ಕೆ ಪೂರಕ ಎಂಬಂತೆ, ನಟಿ ದಿವ್ಯಾ ಕೋಸ್ಲಾ ಕುಮಾರ್‌ ಇವೆಂಟ್‌ವೊಂದರಲ್ಲಿ ಧರಿಸಿದ್ದ ಶರಾರ, ಲಾಂಗ್‌ ಸ್ಕರ್ಟ್‌ನಂತೆ ಕಾಣಿಸಿತ್ತು. ಅಲ್ಲದೇ, ಅವರಿಗೆ ಸೆಮಿ ಇಂಡೋ-ವೆಸ್ಟರ್ನ್‌ ಲುಕ್‌ ನೀಡಿತ್ತು. ಡಿಸೈನರ್‌ಗಳು ಹೇಳುವಂತೆ, ಶರಾರಗಳು, ಬಾಲಿವುಡ್‌ ಸೆಲೆಬ್ರೆಟಿಗಳ ಚಾಯ್ಸ್ನಲ್ಲಿ ಸೇರಿದ ನಂತರ, ಲೆಕ್ಕವಿಲ್ಲದಷ್ಟು ಪ್ರಯೋಗಾತ್ಮಕ ಡಿಸೈನ್‌ಗಳಲ್ಲಿ ಬಿಡುಗಡೆಗೊಳ್ಳಲಾರಂಭಿಸಿವೆಯಂತೆ.

ಏನಿದು ಶರಾರ?

ಮೊಗಲರ ಕಾಲದ ಎಥ್ನಿಕ್‌ ಡಿಸೈನರ್‌ವೇರ್‌ ಇದಾಗಿದೆ. ಉತ್ತರ ಭಾರತದಲ್ಲಿ ಈ ಶರಾರ ಅತಿ ಹೆಚ್ಚು ಚಾಲ್ತಿಯಲ್ಲಿದೆ. ಪ್ಯಾಂಟ್‌ ಶೈಲಿಯ ಡಿಸೈನರ್‌ವೇರ್‌ ಎನ್ನಬಹುದು. ನೋಡಲು ಪಲ್ಹಾಜೊನಂತೆ ಕಂಡರೂ ಅದಲ್ಲ! ಪ್ಯಾರಲೆಲ್‌ ಪ್ಯಾಂಟೂ ಕೂಡ ಅಲ್ಲ. ಶರಾರ ವಿಶೇಷತೆ ಎಂದರೇ, ಪ್ಯಾಂಟ್‌ ಕೆಳಗೆ ಅಗಲವಾದ ಫ್ಲೇರ್‌ ಇರುತ್ತದೆ. ಮೇಲಿನಿಂದ ಒಂದೇ ಹೊಲಿಗೆಯಲ್ಲಿ ವಿನ್ಯಾಸಗೊಂಡಿದ್ದರೂ, ಕೆಳಗೆ ಅಂಬ್ರೆಲ್ಲಾದಂತೆ ಹರಡಿಕೊಂಡಿರುತ್ತವೆ. ಶರಾರ ಮೂಲ ಲೆಬನಾನ್‌ ಎಂದೂ ಕೂಡ ಹೇಳಲಾಗುತ್ತದೆ ಎನ್ನುತ್ತಾರೆ ಡಿಸೈನರ್‌ ರೀಟಾ.

ಟ್ರೆಂಡ್‌ನಲ್ಲಿರುವ ಶರಾರ ಎಥ್ನಿಕ್‌ವೇರ್ಸ್

ಸದ್ಯ ಸ್ಕರ್ಟ್‌ನಂತೆ ಕಾಣುವ ಡಿಸೈನ್‌ ಶರಾರಗಳು ಇದೀಗ ಅತಿ ಹೆಚ್ಚು ಟ್ರೆಂಡಿಯಾಗಿವೆ. ಲಾಂಗ್‌ ಸ್ಕರ್ಟ್‌ನಂತೆ ಬಿಂಬಿಸುವ ಜಾರ್ಜೆಟ್ ಫ್ಯಾಬ್ರಿಕ್‌ನ ಶರಾರಗಳು ಸಾಲಿಡ್‌ ಹಾಗೂ ಬ್ರೈಟ್‌ ಶೇಡ್‌ನವಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಇನ್ನು, ಸೆಮಿ ಇಂಡೋ-ವೆಸ್ಟರ್ನ್‌ ಲುಕ್‌ ನೀಡುವ ಶರಾರದ ಟಾಪ್‌ಗಳು ಹಾಗೂ ಸೆಟ್‌ಗಳು ಕೂಡ ಈ ಜನರೇಷನ್‌ ಹುಡುಗಿಯರಿಗೆ ಪ್ರಿಯವಾಗಿವೆ.

ಇದನ್ನೂ ಓದಿ: Kids Raincoats: ಮಾನ್ಸೂನ್‌‌‌ಗೆ ಲಗ್ಗೆ ಇಟ್ಟಿದೆ ಚಿಣ್ಣರ ಕಲರ್‌ ಫುಲ್‌ ರೈನ್‌ ಕೋಟ್ಸ್

ಶರಾರ ಪ್ರಿಯರಿಗೆ ತಿಳಿದಿರಬೇಕಾದ ಸಂಗತಿಗಳು

  • ಉದ್ದನಾಗಿರುವವರಿಗೆ ಮಾತ್ರ ಶರಾರ ಚೆನ್ನಾಗಿ ಕಾಣಿಸುತ್ತದೆ.
  • ರೆಡಿಮೇಡ್‌ ಶರಾರಗಳನ್ನು ಟ್ರಯಲ್‌ ನೋಡಿಯೇ ಕೊಳ್ಳಿ. ಇಲ್ಲವಾದಲ್ಲಿ ಪಾದದಿಂದ ಕೆಳಗೆ ಇಳಿದು ನಡೆಯಲು ಆಗದಿರಬಹುದು.
  • ಕಾಲಿಗೆ ಸಿಲುಕಿ ಹಾಕಿಕೊಳ್ಳುವಂತಹ ಶರಾರ ಪ್ಯಾಂಟ್‌ ಆಯ್ಕೆ ಬೇಡ, ಮುಗ್ಗರಿಸಿ ಬೀಳುವ ಸಾಧ್ಯತೆ ಹೆಚ್ಚು.
  • ಇಂಡೋ-ವೆಸ್ಟರ್ನ್‌ ಶೈಲಿಯ ಎಥ್ನಿಕ್‌ ಡಿಸೈನ್‌ನವು ಚಾಲ್ತಿಯಲ್ಲಿವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Kids Raincoats: ಮಾನ್ಸೂನ್‌‌‌ಗೆ ಲಗ್ಗೆ ಇಟ್ಟಿದೆ ಚಿಣ್ಣರ ಕಲರ್‌ ಫುಲ್‌ ರೈನ್‌ ಕೋಟ್ಸ್

Kids Raincoats: ಮಾನ್ಸೂನ್‌ ಸೀಸನ್‌ನಲ್ಲಿ ಮಕ್ಕಳಿಗೆ ಇಷ್ಟವಾಗುವಂತಹ ಕಾರ್ಟೂನ್‌ ಚಿತ್ತಾರವಿರುವಂತಹ ನಾನಾ ಬಗೆಯ ಆಕರ್ಷಕ ಬಣ್ಣ ಬಣ್ಣದ ರೈನ್‌ ಕೋಟ್‌ಗಳು ಬಿಡುಗಡೆಗೊಂಡಿವೆ. ಯಾವ್ಯಾವ ಬಗೆಯವು ಮಾರುಕಟ್ಟೆಯಲ್ಲಿ ಲಭ್ಯ? ಆಯ್ಕೆ ಹೇಗೆ? ಈ ಕುರಿತಂತೆ ಕಿಡ್ಸ್ ಸ್ಟೈಲಿಸ್ಟ್‌‌ಗಳು ವಿವರಿಸಿದ್ದಾರೆ.

VISTARANEWS.COM


on

Kids Raincoats
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ ಫ್ಯಾಷನ್‌ನಲ್ಲಿ ಆಕರ್ಷಕವಾದ ಕಿಡ್ಸ್ ರೈನ್‌ಕೋಟ್‌ಗಳು (Kids Raincoats) ಲಗ್ಗೆ ಇಟ್ಟಿವೆ. ಹೌದು, ಮಾನ್ಸೂನ್‌ ಸೀಸನ್‌ನಲ್ಲಿ ಎಲ್ಲಾ ವಯಸ್ಸಿನ ಮಕ್ಕಳಿಗೆ ಇಷ್ಟವಾಗುವಂತಹ ಬಗೆಬಗೆಯ ಕಾರ್ಟೂನ್‌ ಚಿತ್ತಾರವಿರುವಂತಹ ನಾನಾ ಬಗೆಯ ಆಕರ್ಷಕ ಬಣ್ಣ ಬಣ್ಣದ ರೈನ್‌ಕೋಟ್‌ಗಳು ಬಿಡುಗಡೆಗೊಂಡಿವೆ.

Kids Raincoats

ಮಕ್ಕಳನ್ನು ಉಲ್ಲಾಸಿತಗೊಳಿಸುವ ರೈನ್‌ಕೋಟ್ಸ್

“ ಪ್ರತಿ ಬಾರಿಯೂ ಮಾನ್ಸೂನ್‌ನಲ್ಲಿ ಮಕ್ಕಳಿಗೆ ನಾನಾ ವೆರೈಟಿ ವಿನ್ಯಾಸದ ರೈನ್‌ಕೋಟ್‌ಗಳು ಬಿಡುಗಡೆಗೊಳ್ಳುತ್ತಿರುತ್ತವೆ. ಮಕ್ಕಳು ಇಷ್ಟಪಟ್ಟು ಧರಿಸುವಂತಹ ಕಲರ್‌ ಹಾಗೂ ಚಿತ್ತಾರಗಳಿರುವಂತವು ಹೆಚ್ಚಾಗಿ ಬಿಕರಿಯಾಗುತ್ತವೆ. ಇದಕ್ಕೆ ಪೂರಕ ಎಂಬಂತೆ, ಮಳೆಗಾಲದಲ್ಲಿ ಔಟಿಂಗ್‌ ಅಥವಾ ಹೊರಗಡೆ ಹೋದಾಗ ಆಕರ್ಷಕವಾಗಿ ಕಾಣಿಸುವಂತಹ ಕಲರ್‌ಫುಲ್‌ ಡಿಸೈನ್‌ನ ರೈನ್‌ಕೋಟ್‌ಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಆಗಮಿಸಿವೆ. ಉತ್ತಮ ಗುಣ ಮಟ್ಟದ ಬ್ರಾಂಡ್‌ಗಳಿಂದಿಡಿದು, ರಸ್ತೆ ಬದಿ ಮಾರುವಂತಹ ಲೋಕಲ್‌ ಡಿಸೈನ್‌ನಲ್ಲೂ ದೊರೆಯುತ್ತಿವೆ. ಆದರೆ, ಇವನ್ನು ಕೊಳ್ಳುವಾಗ ಮೆಟಿರಿಯಲ್‌ ಪರಿಶೀಲಿಸಿ ಕೊಳ್ಳುವುದು ಮುಖ್ಯ “ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌‌ಗಳು.

Kids Raincoats

ಟ್ರೆಂಡ್‌ನಲ್ಲಿರುವ ಚಿಣ್ಣರ ರೈನ್‌ಕೋಟ್ಸ್

ವಾಟರ್‌ ಪ್ರೂಫ್‌ನ ಹೂಡಿ ರೈನ್‌ಕೋಟ್ಸ್, ಯೂನಿಸೆಕ್ಸ್ ರೈನ್‌ಕೋಟ್ಸ್, ಅನಿಮಲ್‌ ಪ್ರಿಂಟ್‌, ಕಾರ್ಟೂನ್‌ ಪ್ರಿಂಟ್, ಗ್ರಾಫಿಕ್ ಪ್ರಿಂಟ್‌, ಪಾಲಿಸ್ಟರ್‌, ತ್ರಿ ಡಿ ಕಲರ್‌, ಹೆಣ್ಣುಮಕ್ಕಳ ಬಾರ್ಬಿ ಪ್ರಿಂಟ್ಸ್, ಕೊರಿಯನ್‌ ಸ್ಟೈಲ್‌, ಕೇಪ್‌ ಸ್ಟೈಲ್‌, ಟ್ರೆಂಚ್‌ ಕೋಟ್‌ ಸ್ಟೈಲ್‌, ಬ್ಯಾಕ್‌ಪ್ಯಾಕ್‌ ಕವರ್‌ ರೈನ್‌ಕೋಟ್‌ಗಳು ಈ ಸೀಸನ್‌ನಲ್ಲಿ ಸಾಕಷ್ಟು ಟ್ರೆಂಡಿಯಾಗಿವೆ. ಎಲ್ಲರೂ ಅವರವರ ಮಕ್ಕಳಿಗೆ ಮ್ಯಾಚ್‌ ಆಗುವಂತಹ ರೈನ್‌ಕೋಟ್‌ಗಳನ್ನು ಪೋಷಕರು ಖರೀದಿಸುವುದು ಕೂಡ ಇಂದು ಹೆಚ್ಚಾಗಿದೆ ಎನ್ನುತ್ತಾರೆ ರೈನ್‌ಕೋಟ್‌ ವ್ಯಾಪಾರಿಗಳು.

Kids Raincoats
Kids Raincoats

ಆನ್‌ಲೈನ್‌ನಲ್ಲಿ ರೈನ್‌ಕೋಟ್‌ ಅಬ್ಬರ

ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗೆಂದೇ ಈಗಾಗಲೇ ಕಿಡ್ಸ್ ಕೆಟಗರಿಯಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ರೈನ್‌ಕೋಟ್‌ಗಳು ಲಗ್ಗೆ ಇಟ್ಟಿವೆ. ಕೆಲವು ಆನ್‌ಲೈನ್‌ ಶಾಪ್‌ಗಳು ಮಾನ್ಸೂನ್‌ ಆಫರ್‌ನಲ್ಲಿ ಕಡಿಮೆ ಬೆಲೆ ನಿಗಧಿಪಡಿಸಿದ್ದರೇ, ಇನ್ನು ಕೆಲವು ನ್ಯೂ ಅರೈವಲ್‌ ಕೆಟಗರಿಯಲ್ಲಿ ದರ ಹೆಚ್ಚಿಸಿವೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Blazer Saree Fashion: ಮಾನ್ಸೂನ್‌ ಸೀಸನ್‌ ಬ್ಲೇಜರ್‌ ಸೀರೆಯಲ್ಲಿ ಶ್ವೇತಾ ಚಂಗಪ್ಪ ಕಮಾಲ್‌

ಹೀಗಿರಲಿ ಮಕ್ಕಳ ರೈನ್‌ಕೋಟ್‌ ಆಯ್ಕೆ

  • ವಾಟರ್‌ಪ್ರೂಫ್‌ ರೈನ್‌ಕೋಟ್‌ಗೆ ಆದ್ಯತೆ ನೀಡಿ.
  • ಆದಷ್ಟೂ ಮಂಡಿ ಕೆಳಗಿನ ತನಕ ಉದ್ದವಿರುವ ರೈನ್‌ಕೋಟ್‌ ಖರೀದಿಸಿ.
  • ಮನೆಯಲ್ಲಿ ಇಬ್ಬರಿಗಿಂತ ಮಕ್ಕಳು ಹೆಚ್ಚಿದ್ದಲ್ಲಿ ಯೂನಿಸೆಕ್ಸ್ ರೈನ್‌ಕೋಟ್‌ ಬಳಸಬಹುದು.
  • ಟ್ರೆಂಡ್‌ಗೆ ತಕ್ಕಂತೆ ಬಿಡುಗಡೆಗೊಂಡಿರುವ ರೈನ್‌ಕೋಟ್‌ ಕೊಳ್ಳಿ.
  • ಮಕ್ಕಳನ್ನು ಉಲ್ಲಾಸಿತಗೊಳಿಸುವಂತಹ ಪ್ರಿಂಟ್ಸ್ ಇರುವಂತಹ ಕಲರ್‌ಫುಲ್‌ ರೈನ್‌ಕೋಟ್‌ ಚೂಸ್‌ ಮಾಡಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Monsoon Fashion Do’s & Don’ts: ಹುಡುಗಿಯರ ಮಾನ್ಸೂನ್‌ ಡ್ರೆಸ್‌ ಹೇಗಿರಬೇಕು? ಹೇಗಿರಬಾರದು?

Monsoon Fashion do’s & don’ts: ಮಾನ್ಸೂನ್‌ ಸೀಸನ್‌ನಲ್ಲಿ ಹುಡುಗಿಯರು ಧರಿಸುವ ಸ್ಟೈಲಿಶ್‌ ಡ್ರೆಸ್‌ಗಳು ಹೇಗಿರಬೇಕು? ಹೇಗಿರಬಾರದು ? ಎಂಬುದನ್ನು ತಿಳಿಸಿರುವ ಫ್ಯಾಷನಿಸ್ಟಾಗಳು ಈ ಕುರಿತಂತೆ ಹುಡುಗಿಯರಿಗೆ ಒಂದಿಷ್ಟು ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

VISTARANEWS.COM


on

Monsoon Fashion Do’s & Don’ts
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ನಲ್ಲಿ ಹುಡುಗಿಯರು ಧರಿಸುವ (Monsoon Fashion do’s & don’ts) ಉಡುಪುಗಳು ನೋಡಲು ಆಕರ್ಷಕವಾಗಿದ್ದರಷ್ಟೇ ಸಾಲದು, ಧರಿಸಿದಾಗ ಕಂಫರ್ಟಬಲ್‌ ಆಗಿರಬೇಕು, ಎಲ್ಲದಕ್ಕಿಂತ ಹೆಚ್ಚಾಗಿ ಸೀಸನ್‌ಗೆ ತಕ್ಕಂತಿರಬೇಕು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಸಮೀಕ್ಷೆಯೊಂದರ ಪ್ರಕಾರ, ಸಾಕಷ್ಟು ಹುಡುಗಿಯರು ಸ್ಟೈಲಿಶ್‌ ಆಗಿ ಕಾಣಿಸಲು ಮಾನ್ಸೂನ್‌ನಲ್ಲೂ ಸಮ್ಮರ್‌ ಫ್ಯಾಷನ್‌ವೇರ್‌ಗಳನ್ನು ಧರಿಸುತ್ತಾರಂತೆ. ಇನ್ನು, ಕೆಲವು ಯುವತಿಯರು ಮಾನ್ಸೂನ್‌ ಸೀಸನ್‌ನಲ್ಲಿ ಹೊದ್ದುಕೊಂಡಂತಿರುವ ಉಡುಪುಗಳನ್ನು ಧರಿಸುತ್ತಾರಂತೆ. ಆದರೆ, ಫ್ಯಾಷನಿಸ್ಟ್‌ಗಳ ಪ್ರಕಾರ, ಆಯಾ ವರ್ಗದ ಅನುಗುಣವಾಗಿ ಹುಡುಗಿಯರು ಧರಿಸುವ ಉಡುಪುಗಳು ಬದಲಾಗುತ್ತವಂತೆ. ಅದರಲ್ಲೂ, ಜೆನ್‌ ಜಿ ಹುಡುಗಿಯರು, ಯಾವುದೇ ಸೀಸನ್‌ ಟ್ರೆಂಡ್‌ ಫಾಲೋ ಮಾಡುವುದಿಲ್ಲ, ಬದಲಾಗಿ ತಮ್ಮದೇ ಆದ ಸ್ಟೈಲಿಶ್‌ ಮಾರ್ಗವನ್ನು ಹಿಡಿಯುತ್ತಾರಂತೆ. ಅಂದ ಹಾಗೆ, ಇದೆಲ್ಲಾ ಓಕೆ, ಹಾಗೆಂದು ಸೀಸನ್‌ಗೆ ವಿರುದ್ಧವಾಗಿ ಕಾಣಿಸುವುದು ದಿನಚರಿಯಾಗಬಾರದು! ಇದು ಆರೋಗ್ಯಕ್ಕೂ ಮಾರಕ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹಾಗಾದಲ್ಲಿ, ಈ ಸೀಸನ್‌ನಲ್ಲಿ ಯಾವ ರೀತಿಯ ಡ್ರೆಸ್‌ಗಳು ಬೆಸ್ಟ್? ಯಾವುದು ನಾಟ್‌ ಓಕೆ ! ಎಂಬುದನ್ನು ಫ್ಯಾಷನಿಸ್ಟ್‌ಗಳು ಸಿಂಪಲ್ಲಾಗಿ ತಿಳಿಸಿದ್ದಾರೆ.

Monsoon Fashion

ಮಾನ್ಸೂನ್‌ ಡ್ರೆಸ್‌ಗಳು

ಮಳೆಗಾಲದಲ್ಲಿ ಟ್ರೆಂಡಿಯಾಗುವ ಜಾಕೆಟ್‌ ಡ್ರೆಸ್‌, ಕೋಟ್‌ ಡ್ರೆಸ್‌-ಫ್ರಾಕ್ಸ್, ಸ್ಕೆಟರ್‌ ಡ್ರೆಸ್, ಮಿಡಿ ಡ್ರೆಸ್‌, ಹೈ ವೇಸ್ಟ್ ಶಾಟ್ಸ್ ಆಯ್ಕೆ ಮಾಡಬಹುದು. ಇವು ಸ್ಟೈಲಿಶ್‌ ಆಗಿ ಕಾಣಿಸುವುದರ ಜೊತೆಗೆ ಟ್ರೆಂಡಿಯಾಗಿಯೂ ಬಿಂಬಿಸುತ್ತವೆ.

Monsoon Fashion

ಗಿಡ್ಡ ಪ್ಯಾಂಟ್‌ಗೆ ಓಕೆ ಹೇಳಿ

ಆಂಕೆಲ್‌ ಲೆಂಥ್‌, ಕ್ರಾಪ್ಡ್ ಪ್ಯಾಂಟ್‌, ಲೆಗ್ಗಿಂಗ್ಸ್, ಜೆಗ್ಗಿಂಗ್ಸ್, ಪುಶ್‌ ಬ್ಯಾಕ್‌ನಂತಹ ಪ್ಯಾಂಟ್‌ಗಳನ್ನು ಧರಿಸಬಹುದು. ಆದರೆ, ಯಾವುದೇ ಕಾರಣಕ್ಕೂ ಪಲ್ಹಾಜೋ, ಪ್ಯಾರಲಲ್‌, ಬೂಟ್‌ ಕಟ್‌, ಶರರಾ, ಘರಾರದಂತಹ ಅಗಲವಾದ ನೆಲಹಾಸುವಂತಹ ಪ್ಯಾಂಟ್‌ಗಳನ್ನು ಧರಿಸಬೇಡಿ.

Monsoon Fashion

ನೆಲ ಮುಟ್ಟುವ ಗೌನ್‌ಗಳನ್ನು ದೂರವಿಡಿ

ನಡೆಯುವಾಗ ನೆಲವನ್ನು ಮುಟ್ಟುವಂತಹ ಉದ್ದುದ್ದ ಮ್ಯಾಕ್ಸಿ, ಗೌನ್‌ಗಳಿಗೆ ಸದ್ಯಕ್ಕೆ ಬೈ ಹೇಳಿ. ಇವು ನೋಡಲು ಮಾತ್ರ ಆಕರ್ಷಕವಾಗಿ ಕಾಣಿಸುತ್ತವೆ. ಇವನ್ನು ನಿರ್ವಹಣೆ ಮಾಡುವುದು ಕಷ್ಟ.

Monsoon Fashion

ಭಾರವಿಲ್ಲದ ಲೈಟ್‌ವೈಟ್‌ ಉಡುಗೆ ಧರಿಸಿ

ಲೇಯರಿಂಗ್‌ ಹೆಸರಲ್ಲಿ ದಪ್ಪನೆಯ ಫ್ಯಾಬ್ರಿಕ್‌ನ ಉಡುಗೆಗಳು ಉಸಿರುಕಟ್ಟಿಸಬಹುದು. ಮಳೆಯಲ್ಲಿ ಒದ್ದೆಯಾದರಂತೂ ಕಿರಿಕಿರಿ ಎನಿಸಬಹುದು. ಇದನ್ನು ಅವಾಯ್ಡ್ ಮಾಡಲು, ಬೇಗನೇ ಒಣಗುವ ಲೈಟ್‌ವೈಟ್‌ ಡ್ರೆಸ್‌ಗಳಿಗೆ ಸೈ ಎನ್ನಿ.

ಇದನ್ನೂ ಓದಿ: Model Monsoon Fashion: ಮಾನ್ಸೂನ್‌ ಫ್ಯಾಷನ್‌ನಲ್ಲಿ ಮಾಡೆಲ್‌ ಸನ್ನಿಧಿಯ ಸಿಂಪಲ್‌ ಲುಕ್ಸ್!

ಹೆವಿ ಎಥ್ನಿಕ್‌ ಡಿಸೈನರ್‌ವೇರ್‌ ಅವಾಯ್ಡ್ ಮಾಡಿ

ಹೆವಿ ಎಥ್ನಿಕ್‌ವೇರ್‌ಗಳನ್ನು ಆವಾಯ್ಡ್ ಮಾಡಿ. ಎಥ್ನಿಕ್‌ವೇರ್‌ ಧರಿಸಲೇ ಬೇಕಿದ್ದಲ್ಲಿ ಆದಷ್ಟೂ ಆಂಕೆಲ್‌ ಲೆಂಥ್‌ ಡಿಸೈನರ್‌ವೇರ್ಸ್ ಸೆಲೆಕ್ಟ್ ಮಾಡಿ. ಶಾರ್ಟ್ ಕುರ್ತಾ, ಆಂಕೆಲ್‌ ಲೆಂಥ್‌ ಚೂಡಿದಾರ್‌, ಸಲ್ವಾರ್‌ಗಳನ್ನು ಧರಿಸಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Viral Video
ವೈರಲ್ ನ್ಯೂಸ್35 mins ago

Viral Video: ಸಾಧುಗಳಂತೆ ನಟಿಸಿ ಜನರನ್ನು ದೋಚುತ್ತಿದ್ದ ಖದೀಮರು; ಸಾರ್ವಜನಿಕರಿಂದ ಗೂಸಾ! ವಿಡಿಯೋ ಇದೆ

Maharaja Trophy schedule
ಕ್ರೀಡೆ37 mins ago

Maharaja Trophy schedule: ಮಹಾರಾಜ ಟ್ರೋಫಿಯ ವೇಳಾಪಟ್ಟಿ ಪ್ರಕಟ; ಆಗಸ್ಟ್​ 15ರಿಂದ ಟೂರ್ನಿ ಆರಂಭ

Tungabhadra Dam
ಬೆಂಗಳೂರು45 mins ago

Tungabhadra Dam: ತುಂಗಭದ್ರಾ ಡ್ಯಾಂ ಗೇಟ್‌ ಚೈನ್‌ ಕಟ್‌ ಪ್ರಕರಣ; ಪ್ರವಾಹದ ಭೀತಿ ಇಲ್ಲ ಎಂದ ಗೃಹ ಸಚಿವ ಡಾ. ಜಿ.ಪರಮೇಶ್ವರ್

Hidden camera
ಬೆಂಗಳೂರು51 mins ago

Hidden Camera : ಲೇಡಿಸ್‌ ವಾಶ್‌ರೂಮ್‌ನ ಕಸದ ಬುಟ್ಟಿಯಲ್ಲಿತ್ತು ಮೊಬೈಲ್‌; ರೆಕಾರ್ಡ್‌ ಆಯ್ತು 2 ಗಂಟೆಗಳ ವಿಡಿಯೊ!

Tharun Sudhir - Sonal marriage vibe photos Out
ಸಿನಿಮಾ56 mins ago

Tharun Sudhir – Sonal: ತರುಣ್‌ ಸುಧೀರ್‌ -ಸೋನಲ್‌ ಕಲ್ಯಾಣ; ಹೇಗೆ ಕಾಣ್ತಿದ್ದಾಳೆ ನೋಡಿ ಮದುಮಗಳು!

Kieron Pollard
ಕ್ರೀಡೆ1 hour ago

Kieron Pollard: ರಶೀದ್ ಖಾನ್‌ ಓವರ್​ನಲ್ಲಿ ಸತತ 5 ಸಿಕ್ಸರ್ ಬಾರಿಸಿದ ಪೊಲಾರ್ಡ್‌; ವಿಡಿಯೊ ಇಲ್ಲಿದೆ

Serial Killer
ದೇಶ1 hour ago

Serial Killer: 9 ಮಹಿಳೆಯರ ಕೊಂದ ಸರಣಿ ಹಂತಕ ಸೆರೆ; ಆತ ಹೇಗೆ ಕೊಲೆ ಮಾಡುತ್ತಿದ್ದ? ವಿಡಿಯೊ ಇಲ್ಲಿದೆ

Tharun Sudhir and Sonal Monteiro tie the knot
ಸ್ಯಾಂಡಲ್ ವುಡ್2 hours ago

Tharun Sudhir: ವೈವಾಹಿಕ ಜೀವನಕ್ಕೆ ಕಾಲಿಟ್ಟ ತರುಣ್‌ ಸುಧೀರ್‌- ಸೋನಲ್‌ ಮೊಂಥೆರೋ!

Tharun Sudhir mother malathi sudheer old video viral
ಸಿನಿಮಾ2 hours ago

Tharun Sudhir: ನನ್ನ ಮಗ ಸುಂದರ ಇಲ್ವಾ, ಒಳ್ಳೆಯ ಗುಣ ಇಲ್ವಾ ಎಂದು ಕಣ್ಣೀರಿಟ್ಟಿದ್ದ ತರುಣ್ ಸುಧೀರ್ ತಾಯಿ!

Gold Rate Today
ಚಿನ್ನದ ದರ2 hours ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಗಮನಿಸಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ3 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ7 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌