Lok Sabha Election: ಬಿಹಾರದಲ್ಲಿ ಕಾಂಗ್ರೆಸ್‌, ಆರ್‌ಜೆಡಿ ಸೀಟು ಹಂಚಿಕೆ; ಯಾರಿಗೆ ಎಷ್ಟು ಕ್ಷೇತ್ರ? - Vistara News

Lok Sabha Election 2024

Lok Sabha Election: ಬಿಹಾರದಲ್ಲಿ ಕಾಂಗ್ರೆಸ್‌, ಆರ್‌ಜೆಡಿ ಸೀಟು ಹಂಚಿಕೆ; ಯಾರಿಗೆ ಎಷ್ಟು ಕ್ಷೇತ್ರ?

Lok Sabha Election: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಕಾಂಗ್ರೆಸ್‌ ಹಾಗೂ ಆರ್‌ಜೆಡಿ ಸೀಟು ಹಂಚಿಕೆ ಮಾಡಿಕೊಂಡಿವೆ. ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರಗಳು ಎಂಬ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Rahul Gandhi And Tejashwi Yadav
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪಟನಾ: ಲೋಕಸಭೆ ಚುನಾವಣೆಗೆ (Lok Sabha Election) ಇಂಡಿಯಾ ಒಕ್ಕೂಟವೂ (India Bloc) ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಬಿಹಾರದಲ್ಲಿ ಇಂಡಿಯಾ ಒಕ್ಕೂಟ ಅಥವಾ ಮಹಾಘಟಬಂಧನದ ಪಕ್ಷಗಳು ಸೀಟು ಹಂಚಿಕೆ ಮಾಡಿಕೊಂಡಿವೆ. ಆರ್‌ಜೆಡಿಯು (RJD) 26 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಇನ್ನು ಕಾಂಗ್ರೆಸ್‌ 9 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಎಡ ಪಕ್ಷವು ಐದು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ. ಇದರೊಂದಿಗೆ ಇಂಡಿಯಾ ಒಕ್ಕೂಟದಲ್ಲಿ ಬಿಹಾರದಲ್ಲಿ ಒಮ್ಮತ ಮೂಡಿದಂತಾಗಿದೆ.

ಕಿಶನ್‌ ಗಂಜ್‌ ಹಾಗೂ ಪಟನಾ ಸಾಹಿಬ್‌ ಕ್ಷೇತ್ರಗಳು ಕಾಂಗ್ರೆಸ್‌ ಪಾಲಾಗಿವೆ. ಪೂರ್ಣಿಯಾ ಹಾಗೂ ಕಟಿಹಾರ್‌ನಲ್ಲಿ ಜೆಡಿಯು ಗೆಲುವು ಸಾಧಿಸಿದ್ದು, ಪೂರ್ಣಿಯಾದಲ್ಲಿ ಆರ್‌ಜೆಡಿ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಇದಕ್ಕೂ ಮೊದಲು ಪೂರ್ಣಿಯಾ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ರಾಜ್ಯಸಭೆ ಸದಸ್ಯೆ ರಂಜೀತ್‌ ರಂಜನ್‌ ಅವರ ಪತಿ ಪಪ್ಪು ಯಾದವ್‌ ಅವರು ಇಲ್ಲಿ ಸ್ಪರ್ಧಿಸಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಪಪ್ಪು ಯಾದವ್‌ ಕೂಡ ಟಿಕೆಟ್‌ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಬಿಹಾರದಲ್ಲಿ ಲೋಕ ಸಭಾ ಚುನಾವಣೆಗೆ ಎನ್​ಡಿಎ ಬಣದ ಸೀಟು ಹಂಚಿಕೆ ಒಪ್ಪಂದ ನಡೆದಿದೆ. ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮಿತ್ರ ಪಕ್ಷ ಜೆಡಿಯು 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಪ್ರಕಟಿಸಿದ್ದಾರೆ. ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಐದು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿ 17, ಜೆಡಿಯು 16, ಎಲ್​ಜೆಪಿ (ರಾಮ್ ವಿಲಾಸ್) 5, ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ತಲಾ 1 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ತಾವ್ಡೆ ಎಎನ್ಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: Congress: ಕಾಂಗ್ರೆಸ್‌ಗೆ ಐಟಿ ಮತ್ತೊಂದು ಶಾಕ್;‌ 1,700 ಕೋಟಿ ರೂ. ಟ್ಯಾಕ್ಸ್ ನೋಟಿಸ್‌ ಜಾರಿ‌

ಬಿಹಾರದ ಯಾವ ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷ ಸ್ಪರ್ಧಿಸಲಿದೆ

  1. ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್): ವೈಶಾಲಿ, ಹಾಜಿಪುರ, ಸಮಸ್ತಿಪುರ, ಖಗರಿಯಾ ಮತ್ತು ಜಮುಯಿ ಕ್ಷೇತ್ರಗಳಲ್ಲಿ ಎಲ್ಜೆಪಿ (ರಾಮ್ ವಿಲಾಸ್) ಸ್ಪರ್ಧಿಸಲಿದೆ.
  2. ಹಿಂದೂಸ್ತಾನಿ ಅವಾಮ್ ಮೋರ್ಚಾ ಗಯಾ ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ
  3. ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ಕರಕಾಟ್ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

PM Narendra Modi: ಇಂದು ಸಂಜೆ ನರೇಂದ್ರ ಮೋದಿ ಸಂಪುಟ ಮೊದಲ ಸಭೆ; ಏನು ಅಜೆಂಡಾ?

PM Narendra Modi: ಮೋದಿ 3.0 ಸರ್ಕಾರದ ಮೊದಲ ಸಂಪುಟ ಸಭೆ ಇದಾಗಿದೆ. ಇದೇ ಸಂದರ್ಭದಲ್ಲಿ ನೂತನ ಸಚಿವರಿಗೆ ಔತಣಕೂಟವನ್ನೂ ಮೋದಿ ಏರ್ಪಡಿಸಿದ್ದಾರೆ. ಇದೇ ಸಭೆಯಲ್ಲಿ ಖಾತೆ ಹಂಚಿಕೆ ಸಂಬಂಧ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಮಿತ್ರ ಪಕ್ಷಗಳು ನಿರ್ದಿಷ್ಟ ಖಾತೆಗೆ ಡಿಮ್ಯಾಂಡ್ ಮಾಡಿವೆ.

VISTARANEWS.COM


on

pm narendra Modi Cabinet
Koo

ಹೊಸದಿಲ್ಲಿ: ಇಂದು ಸಂಜೆ 5 ಗಂಟೆಗೆ ನರೇಂದ್ರ ಮೋದಿ (PM Narendra Modi) ಅವರ ಮೂರನೇ ಅವಧಿಯ ಸರ್ಕಾರದ (Modi 3.0) ಮೊದಲ ಸಂಪುಟ ಸಭೆ (Cabinet meeting) ನಡೆಯಲಿದೆ. ಪ್ರಧಾನಿಯವರ ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ಸಭೆ ಆಯೋಜನೆಗೊಂಡಿದೆ.

ನಿನ್ನೆ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಿದೆ. ಪ್ರಧಾನಿಯಾಗಿ ಮೋದಿ ಇನ್ನಿತರ 72 ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರಿಂದ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಕರ್ನಾಟಕದ ಐವರೂ ಸೇರಿದ್ದಾರೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರೊಂದಿಗೆ ಇಂದು ಮೋದಿ ಸಭೆ ನಡೆಸಲಿದ್ದಾರೆ.

ಮೋದಿ 3.0 ಸರ್ಕಾರದ ಮೊದಲ ಸಂಪುಟ ಸಭೆ ಇದಾಗಿದೆ. ಇದೇ ಸಂದರ್ಭದಲ್ಲಿ ನೂತನ ಸಚಿವರಿಗೆ ಔತಣಕೂಟವನ್ನೂ ಮೋದಿ ಏರ್ಪಡಿಸಿದ್ದಾರೆ. ಇದೇ ಸಭೆಯಲ್ಲಿ ಖಾತೆ ಹಂಚಿಕೆ ಸಂಬಂಧ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಮಿತ್ರ ಪಕ್ಷಗಳು ನಿರ್ದಿಷ್ಟ ಖಾತೆಗೆ ಡಿಮ್ಯಾಂಡ್ ಮಾಡಿವೆ.

ಬಿಹಾರದ ನಿತೀಶ್‌ ಕುಮಾರ್‌ ಅವರು ಜೆಡಿಯುಗೆ ಕೃಷಿ ಖಾತೆ ನೀಡುವಂತೆ ಡಿಮ್ಯಾಂಡ್‌ ಮಾಡಿದ್ದಾರೆ. ಆದರೆ ಕರ್ನಾಟಕದ ಎಚ್‌.ಡಿ ಕುಮಾರಸ್ವಾಮಿ ಅವರೂ ಕೃಷಿ ಖಾತೆ ನೀಡಿದರೆ ನಿರ್ವಹಿಸಲು ತಾನು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ. ತೆಲುಗು ದೇಶಂನ ಚಂದ್ರಬಾಬು ನಾಯ್ಡು ಅವರೂ ಮಹತ್ವದ ಖಾತೆಗಳನ್ನು ಕೇಳಿದ್ದಾರೆ.

ಆದರೆ ಈಗ ಪ್ರಮಾಣ ವಚನ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನೋಡಿದರೆ, ಕ್ಯಾಬಿನೆಟ್‌ ದರ್ಜೆಯ 11 ಸ್ಥಾನಗಳನ್ನು ಬಿಜೆಪಿ ತನ್ನ ಜೊತೆಗೇ ಇಟ್ಟುಕೊಂಡಿದೆ. ಟಿಡಿಪಿಗೆ 2, ಜೆಡಿಯುಗೆ 2, ಜೆಡಿಎಸ್‌, ಶಿವಸೇನೆ, ಎಲ್‌ಜೆಪಿ, ಆರ್‌ಎಲ್‌ಡಿ ಮುಂತಾದ ಪಕ್ಷಗಳಿಗೆ ತಲಾ ಒಂದೊಂದು ಸ್ಥಾನಗಳನ್ನು ನೀಡಿದೆ. ಈಗ ಯಾವ ಖಾತೆ ಯಾರಿಗೆ ಎಂಬ ನಿರ್ಣಯ ಇನ್ನು ಆಗಬೇಕಿದೆ. ಮಿತ್ರಪಕ್ಷಗಳು ಮಹತ್ವದ ಖಾತೆಗಾಗಿ ಪಟ್ಟು ಹಿಡಿಯುತ್ತವೆಯೇ ಅಥವಾ ಕೊಟ್ಟದ್ದಕ್ಕೆ ತೃಪ್ತವಾಗುತ್ತವೆಯೇ ಎಂದು ನೋಡಬೇಕಿದೆ.

“ಒಕ್ಕೂಟ ವ್ಯವಸ್ಥೆಯ ಆಶಯ…” ನೂತನ ಪ್ರಧಾನಿ ಮೋದಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನ ಮಂತ್ರಿಯಾಗಿ (Prime minister) ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ (Narendra Modi) ಅವರಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ (CM Siddaramaiah) ಸಾಮಾಜಿಕ ಜಾಲತಾಣ X ಖಾತೆ ಮೂಲಕ ಶುಭ ಕೋರಿದ್ದಾರೆ.

“3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ @narendramodi ಅವರಿಗೆ ಅಭಿನಂದನೆಗಳು. ಕರುನಾಡಿನ ಅಭಿವೃದ್ಧಿಯ ನಮ್ಮ ಸಂಕಲ್ಪಕ್ಕೆ ನಿಮ್ಮ ಸಹಕಾರ ಇರಲಿದೆ, ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಎತ್ತಿಹಿಡಿಯುತ್ತಾ ರಾಜ್ಯಗಳ ಹಿತಾಸಕ್ತಿಯನ್ನು ನೀವು ಗೌರವಿಸುತ್ತೀರೆಂದು ಭಾವಿಸಿದ್ದೇನೆ. ಸಂಪದ್ಭರಿತ ಕರ್ನಾಟಕದ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ನಿಮ್ಮ ಜೊತೆಯಾಗಿ ಶ್ರಮಿಸುವ ದಿನಗಳನ್ನು ಎದುರು ನೋಡುತ್ತಿದ್ದೇನೆ” ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ.

ಇದನ್ನೂ ಓದಿ: Narendra Modi: 3ನೇ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣ; ಇಲ್ಲಿದೆ ಬಾಲ್ಯದಿಂದ ವಿಶ್ವನಾಯಕತನಕದ ಜೀವನ ಚಿತ್ರಣ

Continue Reading

ಸಂಪಾದಕೀಯ

ವಿಸ್ತಾರ ಸಂಪಾದಕೀಯ: 3ನೇ ಬಾರಿಯ ‘ವಿಸ್ತೃತ’ ಸರ್ಕಾರವು ‘ವಿಕಸಿತ ಭಾರತ’ಕ್ಕೆ ಶ್ರಮಿಸಲಿ

ಲೋಕಸಭೆ ಚುನಾವಣೆ ಫಲಿತಾಂಶವು ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ಬಿಜೆಪಿಗೆ ಇದ್ದ ಬಹುಮತ ಈಗ ಇಲ್ಲದ ಕಾರಣ ಮೈತ್ರಿಪಕ್ಷಗಳ ಮರ್ಜಿಗೆ ಕಾಯಬೇಕಿದೆ. ಅತ್ತ, ಕಾಂಗ್ರೆಸ್‌ ಮುಂದಾಳತ್ವದ ಇಂಡಿಯಾ ಒಕ್ಕೂಟವೂ ಬಲಿಷ್ಠವಾಗಿದೆ. ಹಾಗಾಗಿ, 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ನರೇಂದ್ರ ಮೋದಿ ಅವರು ಮೈತ್ರಿಪಕ್ಷಗಳ ಜತೆ ಸಮನ್ವಯ ಸಾಧಿಸುವ ಜತೆಗೆ ಪ್ರತಿಪಕ್ಷಗಳನ್ನೂ ಎದುರಿಸಬೇಕಿದೆ. ಇದರ ಮಧ್ಯೆ, ವಿಕಸಿತ ಭಾರತದ ಕನಸು ಸಾಕಾರಗೊಳ್ಳಲು ಕೂಡ ನೂತನ ಸರ್ಕಾರ ಹೆಚ್ಚು ಶ್ರಮ ವಹಿಸಬೇಕಿದೆ.

VISTARANEWS.COM


on

pm narendra Modi Cabinet
Koo

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಬಹುಮತ ಸಾಧಿಸಿದ್ದು, ನರೇಂದ್ರ ಮೋದಿ (Narendra Modi) ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರ ಜತೆಗೆ ಅನುಭವಿಗಳು, ಮೈತ್ರಿ ಪಕ್ಷಗಳ ಸಂಸದರು, ಯುವ ಸಂಸದರು ಸೇರಿ ಹಲವು ಮಾನದಂಡಗಳನ್ನು ಆಧರಿಸಿ ಆಯ್ಕೆ ಮಾಡಿದ 72 ಸಂಸದರು ಸಚಿವರಾಗಿ (Modi 3.0 Cabinet) ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಸುಮಾರು 80 ದಿನಗಳಿಗೂ ಅಧಿಕ ಅವಧಿವರೆಗೆ 7 ಹಂತಗಳಲ್ಲಿ ಮತದಾನ ನಡೆದು, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ, ಈಗ ನರೇಂದ್ರ ಮೋದಿ ಅವರ ನೇತೃತ್ವದಲ್ಲಿಯೇ ಸತತ ಮೂರನೇ ಬಾರಿಗೆ ಎನ್‌ಡಿಎ ಸರ್ಕಾರವೇ ಅಧಿಕಾರಕ್ಕೆ ಬಂದಿದೆ. ಹಾಗಾಗಿ, ಚುನಾವಣೆ ಸಮಯದ ರಾಜಕೀಯ ಮೇಲಾಟ, ಆರೋಪ, ಪ್ರತ್ಯಾರೋಪ, ಟೀಕೆ, ವ್ಯಂಗ್ಯ, ತಿರುಗೇಟುಗಳನ್ನು ಬಿಟ್ಟು, ಆಡಳಿತ ಪಕ್ಷದವರು ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ನಿರ್ಮಾಣದ ಕನಸನ್ನು ನನಸಾಗಿಸಲು ಶ್ರಮಿಸಬೇಕಿದೆ. ಚುನಾವಣೆ ನೀತಿ ಸಂಹಿತೆ, ಫಲಿತಾಂಶದ ಹಿನ್ನೆಲೆಯಲ್ಲಿ ನಿಂತ ನೀರಾಗಿದ್ದ ಆಡಳಿತ ಯಂತ್ರಕ್ಕೆ ಈಗ ವೇಗ ನೀಡಬೇಕಿದೆ.

ಹಾಗೆ ನೋಡಿದರೆ, ವಿಕಸಿತ ಭಾರತದ ಕಲ್ಪನೆ ಸಾಕಾರಗೊಳಿಸಲು ದೇಶದಲ್ಲಿ ಸಕಾರಾತ್ಮಕ ವಾತಾವರಣವೇ ಇದೆ. ದೇಶದ ಜಿಡಿಪಿ ಬೆಳವಣಿಗೆಯ ಕುರಿತು ಅಂದಾಜಿಸಲಾಗಿದೆ. ಹಣದುಬ್ಬರವೂ ನಿಯಂತ್ರಣಕ್ಕೆ ಬರುತ್ತಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಮೂಲ ಸೌಕರ್ಯ ಯೋಜನೆಗಳಿಗೆ ಒತ್ತು ನೀಡಿರುವುದು, ರೈಲು, ರೈಲು ನಿಲ್ದಾಣಗಳ ಆಧುನೀಕರಣ, ದಾಖಲೆ ವೇಗದಲ್ಲಿ ರಸ್ತೆ ನಿರ್ಮಾಣ, ಅತ್ಯಾಧುನಿಕ ವಿಮಾನ ನಿಲ್ದಾಣಗಳು ತಲೆ ಎತ್ತಿರುವುದು, ಇಸ್ರೋ ಬಾಹ್ಯಾಕಾಶ ಯೋಜನೆಗಳಿಗೆ ಉತ್ತೇಜನ ನೀಡಿರುವುದು ಸೇರಿ ಹಲವು ಕಾರ್ಯಕ್ರಮಗಳು ದೇಶದ ಅಭಿವೃದ್ದಿ ಮಾನದಂಡವನ್ನು ದುಪ್ಪಟ್ಟುಗೊಳಿಸಿವೆ. ಇದರಿಂದಾಗಿ ಸರ್ಕಾರದ ಸಚಿವರು, ಸಂಸದರು ವಿಕಸಿತ ಭಾರತದ ಕಲ್ಪನೆಯ ಸಾಕಾರಗೊಳಿಸಲು ಹೆಚ್ಚಿನ ಶ್ರಮ ವಹಿಸಬೇಕು. ಹೊಸ ಹೊಸ ಯೋಜನೆಗಳು, ಯೋಜನೆಗಳ ಸಮರ್ಪಕ ಜಾರಿ ಮೂಲಕ ದೇಶದ ಏಳಿಗೆಗೆ ಇನ್ನಷ್ಟು ಕೊಡುಗೆ ನೀಡಬೇಕು.

ಕೇಂದ್ರದಲ್ಲಿ 10 ವರ್ಷಗಳಿಂದ ಇದ್ದ ಬಹುಮತದ ಸರ್ಕಾರ ಈಗಿಲ್ಲ. ಬಿಜೆಪಿಯು 240 ಸೀಟುಗಳಿಗೆ ಸೀಮಿತವಾಗಿದ್ದು, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಾಗಾಗಿ, ಮೋದಿ ಸರ್ಕಾರವು ಸುಸ್ಥಿರ ಆಡಳಿತ ನೀಡಬೇಕು ಎಂದರೆ ಮೈತ್ರಿಕೂಟದಲ್ಲಿ ಸ್ಥಿರತೆ ಕಾಪಾಡಬೇಕು, ಸಮನ್ವಯತೆ ಸಾಧಿಸಬೇಕು. ಪ್ರಾದೇಶಿಕ ಪಕ್ಷಗಳಿಗೆ, ಪ್ರಾದೇಶಿಕ ಪಕ್ಷಗಳ ರಾಜ್ಯಗಳಿಗೆ ಹೆಚ್ಚಿನ ಮನ್ನಣೆ ನೀಡಬೇಕು. ಧರ್ಮ, ಜಾತಿಯ ವಿಷಯಗಳಿಗೆ ಪ್ರಾಮುಖ್ಯತೆ ಕೊಡದೆ, ಎಲ್ಲ ಮೈತ್ರಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರವನ್ನು ಮುನ್ನಡೆಸಬೇಕು. ಮೋದಿ ಸರ್ಕಾರವು ಉದ್ಯಮಿಗಳ ಪರವಾದ ಸರ್ಕಾರ ಎಂಬ ಕುಖ್ಯಾತಿ ಇತ್ತೀಚಿನ ವರ್ಷಗಳಲ್ಲಿ ಜಾಸ್ತಿಯಾಗಿದೆ. ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್‌ ಸೇರಿ ಅಗತ್ಯ ವಸ್ತುಗಳ ಬೆಲೆಯೇರಿಕೆಯು ಬಡ ಹಾಗೂ ಮಧ್ಯಮ ವರ್ಗದವರನ್ನು ಹೈರಾಣಾಗಿಸಿದೆ. ಇಂತಹ ವಿಷಯಗಳ ಕುರಿತು ಮೋದಿ ಹಾಗೂ ಟೀಮ್‌ ಗಮನ ಹರಿಸಬೇಕು. ಬಜೆಟ್‌ನಲ್ಲಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ನೇರವಾಗಿ ಅನುಕೂಲವಾಗುವ (ಕಿಸಾನ್‌ ಸಮ್ಮಾನ್‌, ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಸಬ್ಸಿಡಿ ಹೆಚ್ಚಳ ಇತ್ಯಾದಿ) ಯೋಜನೆಗಳನ್ನು ಘೋಷಿಸಬೇಕು.

ಕಳೆದ 10 ವರ್ಷಗಳಲ್ಲಿ ಲೋಕಸಭೆಯಲ್ಲಿ ಬಲಿಷ್ಠ ಪ್ರತಿಪಕ್ಷವೇ ಇರಲಿಲ್ಲ. ಕಾಂಗ್ರೆಸ್‌ ಸೇರಿ ಯಾವೊಂದು ಪಕ್ಷವೂ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯುವಷ್ಟು ಸಮರ್ಥವಾಗಿರಲಿಲ್ಲ. ಇದು ಕೂಡ ಮೋದಿ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಆದರೆ, ಫಲಿತಾಂಶದ ಬಳಿಕ ಚಿತ್ರಣ ಬದಲಾಗಿದೆ. ಕಾಂಗ್ರೆಸ್‌ 52 ಕ್ಷೇತ್ರಗಳಿಂದ 99 ಕ್ಷೇತ್ರಗಳಿಗೆ ತನ್ನ ಸದಸ್ಯ ಬಲವನ್ನು ಹೆಚ್ಚಿಸಿಕೊಂಡಿದೆ. ಇಂಡಿಯಾ ಒಕ್ಕೂಟವು ಒಗ್ಗಟ್ಟಾಗಿ 232 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹಾಗಾಗಿ, ಸಮ್ಮಿಶ್ರ ಸರ್ಕಾರಕ್ಕೆ ಆಡಳಿತ ನಡೆಸುವುದು ಹಗ್ಗದ ಮೇಲಿನ ನಡಿಗೆಯೇ ಆಗಿದೆ. ಇನ್ನು, ಕಳೆದ 10 ವರ್ಷಗಳಿಂದ ಬಲಿಷ್ಠವಾಗಿ, ಸಮರ್ಥವಾಗಿ ಕಾರ್ಯನಿರ್ವಹಿಸದ ಪ್ರತಿಪಕ್ಷಗಳು ಇನ್ನಾದರೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಬೇಕು. ಸರ್ಕಾರ ಲಯ ತಪ್ಪಿದಾಗ ಸರಿದಾರಿಗೆ ತರಬೇಕು. ಸರ್ಕಾರಕ್ಕೆ ಆಗಾಗ ಎಚ್ಚರಿಕೆ ನೀಡುವ ಜತೆಗೆ ಚಾಟಿ ಬೀಸಬೇಕು. ಒಟ್ಟಿನಲ್ಲಿ, ಸಬಲ ಸಮ್ಮಿಶ್ರ ಸರ್ಕಾರ ಹಾಗೂ ಪ್ರಬಲ ಪ್ರತಿಪಕ್ಷಗಳು ಕೂಡಿ ದೇಶದ ಏಳಿಗೆಗೆ, ವಿಕಸಿತ ಭಾರತ ಕಲ್ಪನೆಯ ಸಾಕಾರಕ್ಕೆ ಶ್ರಮಿಸಬೇಕು ಎಂಬುದೇ ಎಲ್ಲರ ಆಶಯವಾಗಿದೆ.

ಇದನ್ನೂ ಓದಿ: Modi 3.0 Cabinet: ನಡ್ಡಾ To ಎಚ್‌ಡಿಕೆ ;‌ ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಿವು

Continue Reading

ದೇಶ

Modi 3.0 Cabinet: ಮೋದಿ ನೂತನ ಸಂಪುಟದಿಂದ ಸ್ಮೃತಿ ಇರಾನಿ ಸೇರಿ ಯಾರಿಗೆಲ್ಲ ಕೊಕ್?‌ ಇಲ್ಲಿದೆ ಮಾಹಿತಿ

Modi 3.0 Cabinet:‌ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೇಂದ್ರದಲ್ಲಿ 10 ವರ್ಷಗಳ ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಇದರ ಬೆನ್ನಲ್ಲೇ, ನರೇಂದ್ರ ಮೋದಿ ಅವರ ಸಂಪುಟಕ್ಕೆ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ. ಹಾಗೆಯೇ, ಮೂವರು ಹಾಲಿ ಸಂಪುಟ ದರ್ಜೆ ಸಚಿವರನ್ನು ನರೇಂದ್ರ ಮೋದಿ ಅವರು ಕೈಬಿಟ್ಟಿದ್ದಾರೆ. ಹಾಗಾದರೆ, ಯಾರಿಗೆಲ್ಲ ಕೊಕ್‌ ಕೊಡಲಾಗಿದೆ? ಮಾಹಿತಿ ಹೀಗಿದೆ…

VISTARANEWS.COM


on

Modi 3.0 Cabinet
Koo

ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಜತೆಗೆ 72 ಸಂಸದರು ಕೂಡ ಸಚಿವರಾಗಿ (Modi 3.0 Cabinet) ಪ್ರಮಾಣವಚನ ಸ್ವೀಕರಿಸಿದ್ದಾರೆ. ಯುವ ಸಂಸದರು, ಮೈತ್ರಿ ಪಕ್ಷಗಳ ಸದಸ್ಯರು, ಅನುಭವಿಗಳು ಸೇರಿ ಹಲವು ಮಾನದಂಡಗಳನ್ನು ಅನುಸರಿಸಿ ಸಚಿವ ಸ್ಥಾನ ನೀಡಲಾಗಿದೆ. ಇನ್ನು, ಮೂವರು ಹಾಲಿ ಸಂಪುಟ ದರ್ಜೆ ಸಚಿವರಿಗೆ ನರೇಂದ್ರ ಮೋದಿ ಅವರು ಕೊಕ್‌ ನೀಡಿದ್ದಾರೆ. ಮೂವರು ಸಚಿವರಲ್ಲಿ ಸ್ಮೃತಿ ಇರಾನಿ (Smriti Irani) ಕೂಡ ಇದ್ದಾರೆ.

2019ರಲ್ಲಿ ರಾಹುಲ್‌ ಗಾಂಧಿ ವಿರುದ್ಧ ಗೆಲುವು ಸಾಧಿಸಿದ್ದ ಅಮೇಥಿ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ನ ಕಿಶೋರಿ ಲಾಲ್‌ ಶರ್ಮಾ ಅವರ ವಿರುದ್ಧ ಸ್ಮೃತಿ ಇರಾನಿ ಅವರು 1.6 ಲಕ್ಷ ಮತಗಳಿಂದ ಸೋಲನುಭವಿಸಿದ್ದಾರೆ. ಇವರು ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿದ್ದರು. ಮತ್ತೊಂದೆಡೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಅನುರಾಗ್‌ ಠಾಕೂರ್‌ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಹಿಮಾಚಲ ಪ್ರದೇಶ ಹಮೀರ್‌ಪುರ ಕ್ಷೇತ್ರದಲ್ಲಿ ಅನುರಾಗ್‌ ಠಾಕೂರ್‌ ಅವರು ಗೆಲುವು ಸಾಧಿಸಿದರೂ ಕೈಬಿಡಲಾಗಿದೆ. ಹಿಮಾಚಲ ಪ್ರದೇಶ ಕೋಟಾದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಂಪುಟ ದರ್ಜೆ ಖಾತೆ ನೀಡಲಾಗಿದೆ.

Anurag Thakur On Renaming India Name Row

ಮೋದಿ ಅವರ ಎರಡನೇ ಅವಧಿಯ ಸರ್ಕಾರದಲ್ಲಿ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಖಾತೆ ಸಚಿವರಾಗಿದ್ದ ನಾರಾಯಣ ರಾಣೆ ಅವರಿಗೆ ಕೊಕ್‌ ನೀಡಲಾಗಿದೆ. ಇವರು ಮಹಾರಾಷ್ಟ್ರದ ರತ್ನಗಿರಿ-ಸಿಂಧುದುರ್ಗ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೂ ಖಾತೆ ನೀಡಿಲ್ಲ. ಇನ್ನು, ಸಹಾಯಕ ಖಾತೆ ಸಚಿವರಾಗಿದ್ದ ರಾಜೀವ್‌ ಚಂದ್ರಶೇಖರ್‌ ಅವರ ಹೆಸರನ್ನೂ ಮೋದಿ ಕೈಬಿಟ್ಟಿದ್ದಾರೆ. ರಾಜೀವ್‌ ಚಂದ್ರಶೇಖರ್‌ ಅವರು ಕೇರಳದ ತಿರುವನಂತಪುರಂನಲ್ಲಿ ಕಾಂಗ್ರೆಸ್‌ನ ಶಶಿ ತರೂರ್‌ ಅವರಿಗೆ ತೀವ್ರ ಪೈಪೋಟಿ ನೀಡಿ ಸೋಲನುಭವಿಸಿದ್ದರು.

rajiv chandrashekhar

ಹಲವು ಹೊಸಬರಿಗೆ ಈ ಬಾರಿ ಮಣೆ ಹಾಕಲಾಗಿದೆ. ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ ಅವರ ಪುತ್ರ ರಾಮನಾಥ್‌ ಠಾಕೂರ್‌ ಅವರಿಗೆ ರಾಜ್ಯ ಖಾತೆಯ ಉಸ್ತುವಾರಿ ನೀಡಲಾಗಿದೆ. ಜೆಡಿಯು ಸಂಸದ, ನಿತೀಶ್‌ ಕುಮಾರ್‌ ಅವರ ನಿಕಟವರ್ತಿಯಾಗಿರುವ ಇವರಿಗೆ ನರೇಂದ್ರ ಮೋದಿ ಅವರು ಮಣೆ ಹಾಕಿದ್ದಾರೆ. ಕರ್ಪೂರಿ ಠಾಕೂರ್‌ ಅವರಿಗೆ ಪ್ರಸಕ್ತ ವರ್ಷದಲ್ಲಿಯೇ ಕೇಂದ್ರ ಸರ್ಕಾರವು ಮರಣೋತ್ತರವಾಗಿ ಭಾರತರತ್ನ ಘೋಷಿಸಿತ್ತು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಕೇಂದ್ರ ಸಂಪುಟ ದರ್ಜೆ ಸ್ಥಾನ ನೀಡಲಾಗಿದ್ದು, ಇವರು ಶೀಘ್ರದಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ತೊರೆಯಲಿದ್ದಾರೆ ಎನ್ನಲಾಗುತ್ತದೆ. ಇನ್ನು, ಮಧ್ಯಪ್ರದೇಶ ಸಿಎಂ ಸ್ಥಾನ ತೊರೆದ ಶಿವರಾಜ್‌ ಸಿಂಗ್‌ ಚೌಹಾಣ್‌, ಹರಿಯಾಣ ಮಾಜಿ ಸಿಎಂ ಮನೋಹರ ಲಾಲ್‌ ಖಟ್ಟರ್‌, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ಅವರಿಗೆ ಸಂಪುಟ ದರ್ಜೆ ಖಾತೆ ನೀಡಲಾಗಿದೆ. ಕೇರಳ ತ್ರಿಶ್ಶೂರ್‌ ಸಂಸದ ಸುರೇಶ್‌ ಗೋಪಿ, ಕರ್ನಾಟಕದ ವಿ.ಸೋಮಣ್ಣ, ತೆಲಂಗಾಣದ ಬಂಡಿ ಸಂಜಯ್‌ ಕುಮಾರ್‌ ಸೇರಿ ಹಲವು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Modi 3.0 Cabinet: ನಡ್ಡಾ To ಎಚ್‌ಡಿಕೆ ;‌ ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಿವು

Continue Reading

ದೇಶ

Modi 3.0 Cabinet: ನಡ್ಡಾ To ಎಚ್‌ಡಿಕೆ ;‌ ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಹೊಸ ಮುಖಗಳಿವು

Modi 3.0 Cabinet:‌ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೇಂದ್ರದಲ್ಲಿ 10 ವರ್ಷಗಳ ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಇದರ ಬೆನ್ನಲ್ಲೇ, ನರೇಂದ್ರ ಮೋದಿ ಅವರ ಸಂಪುಟಕ್ಕೆ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ. ಯಾವ ಹೊಸ ಮುಖಗಳಿಗೆಲ್ಲ ಮೋದಿ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ? ಇಲ್ಲಿದೆ ಮಾಹಿತಿ.

VISTARANEWS.COM


on

Modi 3.0 Cabinet
Koo

ನವದೆಹಲಿ: ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ (Narendra Modi) ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದಾದ ಬಳಿಕ ಮೈತ್ರಿಕೂಟದ ಪಕ್ಷಗಳ ಸಂಸದರು ಸಚಿವರಾಗಿ (Modi 3.0 Cabinet) ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಮ್ಮಿಶ್ರ ಸರ್ಕಾರವಾದ ಕಾರಣ ಸಹಜವಾಗಿಯೇ ಈ ಬಾರಿ ಹೊಸ ಮುಖಗಳಿಗೆ ಸಂಪುಟಕ್ಕೆ ಸೇರಿಸಿಕೊಳ್ಳಲು ಆದ್ಯತೆ ನೀಡಿದೆ. ಅದರಲ್ಲೂ, ಕೇರಳದಲ್ಲಿ ಬಿಜೆಪಿಯ ಖಾತೆ ತೆರೆದ ಸುರೇಶ್‌ ಗೋಪಿ, ಬಿಹಾರದ ಧೀಮಂತ ನಾಯಕ, ಭಾರತರತ್ನ ಪುರಸ್ಕೃತ ಕರ್ಪೂರಿ ಠಾಕೂರ್‌ ಅವರ ಪುತ್ರ ರಾಮನಾಥ್‌ ಠಾಕೂರ್‌ ಸೇರಿ ಹಲವು ಹೊಸಬರಿಗೆ ಸಚಿವ ಸ್ಥಾನ ನೀಡಲಾಗಿದೆ.

ಕರ್ಪೂರಿ ಠಾಕೂರ್‌ ಪುತ್ರಗೆ ಮಣೆ

ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ ಅವರ ಪುತ್ರ ರಾಮನಾಥ್‌ ಠಾಕೂರ್‌ ಅವರಿಗೆ ರಾಜ್ಯ ಖಾತೆಯ ಉಸ್ತುವಾರಿ ನೀಡಲಾಗಿದೆ. ಜೆಡಿಯು ಸಂಸದ, ನಿತೀಶ್‌ ಕುಮಾರ್‌ ಅವರ ನಿಕಟವರ್ತಿಯಾಗಿರುವ ಇವರಿಗೆ ನರೇಂದ್ರ ಮೋದಿ ಅವರು ಮಣೆ ಹಾಕಿದ್ದಾರೆ. ಕರ್ಪೂರಿ ಠಾಕೂರ್‌ ಅವರಿಗೆ ಪ್ರಸಕ್ತ ವರ್ಷದಲ್ಲಿಯೇ ಕೇಂದ್ರ ಸರ್ಕಾರವು ಮರಣೋತ್ತರವಾಗಿ ಭಾರತರತ್ನ ಘೋಷಿಸಿತ್ತು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಕೇಂದ್ರ ಸಂಪುಟ ದರ್ಜೆ ಸ್ಥಾನ ನೀಡಲಾಗಿದ್ದು, ಇವರು ಶೀಘ್ರದಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ತೊರೆಯಲಿದ್ದಾರೆ ಎನ್ನಲಾಗುತ್ತದೆ. ಇನ್ನು, ಮಧ್ಯಪ್ರದೇಶ ಸಿಎಂ ಸ್ಥಾನ ತೊರೆದ ಶಿವರಾಜ್‌ ಸಿಂಗ್‌ ಚೌಹಾಣ್‌, ಹರಿಯಾಣ ಮಾಜಿ ಸಿಎಂ ಮನೋಹರ ಲಾಲ್‌ ಖಟ್ಟರ್‌, ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ಅವರಿಗೆ ಸಂಪುಟ ದರ್ಜೆ ಖಾತೆ ನೀಡಲಾಗಿದೆ. ಕೇರಳ ತ್ರಿಶ್ಶೂರ್‌ ಸಂಸದ ಸುರೇಶ್‌ ಗೋಪಿ, ಕರ್ನಾಟಕದ ವಿ.ಸೋಮಣ್ಣ, ತೆಲಂಗಾಣದ ಬಂಡಿ ಸಂಜಯ್‌ ಕುಮಾರ್‌ ಸೇರಿ ಹಲವು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ಮೋದಿ ಸಂಪುಟ ಸೇರಿದ ಹೊಸಮುಖಗಳು

ಕ್ಯಾಬಿನೆಟ್‌ ದರ್ಜೆಯ ಸಚಿವರು

  • ಜೆ.ಪಿ.ನಡ್ಡಾ (ಬಿಜೆಪಿ- ಹಿಮಾಚಲ ಪ್ರದೇಶ)
  • ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ- ಮಧ್ಯಪ್ರದೇಶ )
  • ಮನೋಹರ ಲಾಲ್‌ ಖಟ್ಟರ್‌ (ಬಿಜೆಪಿ- ಹರಿಯಾಣ)
  • ಎಚ್‌.ಡಿ.ಕುಮಾರಸ್ವಾಮಿ (ಜೆಡಿಎಸ್‌- ಕರ್ನಾಟಕ)
  • ಜಿತನ್ ರಾಮ್ ಮಾಂಝಿ (ಎಚ್‌ಎಎಂ- ಬಿಹಾರ)
  • ರಾಜೀವ್‌ ರಂಜನ್‌ ಸಿಂಗ್‌ (ಲಲನ್‌ ಸಿಂಗ್-ಜೆಡಿಯು-ಬಿಹಾರ)
  • ರಾಮ್‌ ಮೋಹನ್‌ ನಾಯ್ಡು (ಟಿಡಿಪಿ-ಆಂಧ್ರಪ್ರದೇಶ)
  • ಜುವೆಲ್‌ ಒರಾಮ್‌ (ಬಿಜೆಪಿ- ಒಡಿಶಾ) (ಇವರು ವಾಜಪೇಯಿ ಸರ್ಕಾರದಲ್ಲೂ ಕೇಂದ್ರ ಸಚಿವರಾಗಿದ್ದರು)
  • ಚಿರಾಗ್‌ ಪಾಸ್ವಾನ್‌ (ಎಲ್‌ಜೆಪಿ-ಬಿಹಾರ)
  • ಸಿ.ಆರ್‌.ಪಾಟೀಲ್‌ (ಬಿಜೆಪಿ-ಗುಜರಾತ್)

ರಾಜ್ಯ/ ಸ್ವತಂತ್ರ ಖಾತೆ

  • ಪ್ರತಾಪ್‌ ರಾವ್‌ ಗಣಪತ್‌ ರಾವ್‌ ಜಾಧವ್‌ (ಶಿವಸೇನೆ ಏಕನಾಥ್‌ ಶಿಂಧೆ ಬಣದ ಸಂಸದ-ಮಹಾರಾಷ್ಟ್ರ)
  • ಜಯಂತ್‌ ಚೌಧರಿ (ಆರ್‌ಎಲ್‌ಡಿ-ಉತ್ತರ ಪ್ರದೇಶ)‌

ರಾಜ್ಯ ಖಾತೆ ಸಚಿವರು

  • ಜಿತಿನ್‌ ಪ್ರಸಾದ್‌ (ಬಿಜೆಪಿ-ಉತ್ತರ ಪ್ರದೇಶ)
  • ರಾಮನಾಥ್‌ ಠಾಕೂರ್‌ (ಜೆಡಿಯು-ಬಿಹಾರ)
  • ವಿ. ಸೋಮಣ್ಣ (ಬಿಜೆಪಿ-ಕರ್ನಾಟಕ)
  • ಪೆಮ್ಮಸಾನಿ ಚಂದ್ರಶೇಖರ್‌ (ಟಿಡಿಪಿ-ಆಂಧ್ರಪ್ರದೇಶ)
  • ಎಸ್‌ಪಿ ಸಿಂಗ್‌ ಬಘೇಲ್‌ (ಬಿಜೆಪಿ-ಉತ್ತರ ಪ್ರದೇಶ)
  • ಕೀರ್ತಿ ವರ್ಧನ್‌ ಸಿಂಗ್‌ (ಬಿಜೆಪಿ-ಉತ್ತರ ಪ್ರದೇಶ)
  • ಬಂಡಿ ಸಂಜಯ್‌ ಕುಮಾರ್‌ (ಬಿಜೆಪಿ-ತೆಲಂಗಾಣ)
  • ಕಮಲೇಶ್‌ ಪಾಸ್ವಾನ್‌ (ಬಿಜೆಪಿ-ಉತ್ತರ ಪ್ರದೇಶ)
  • ಭಾಗೀರಥ್‌ ಚೌಧರಿ (ಬಿಜೆಪಿ-ರಾಜಸ್ಥಾನ)
  • ಸತೀಶ್‌ ಚಂದ್ರ ದುಬೆ (ಬಿಜೆಪಿ-ಬಿಹಾರ)‌
  • ಸಂಜಯ್‌ ಸೇಠ್‌ (ಬಿಜೆಪಿ-ಜಾರ್ಖಂಡ್)‌
  • ರವನೀತ್‌ ಸಿಂಗ್‌ ಬಿಟ್ಟು (ಬಿಜೆಪಿ-ಪಂಜಾಬ್)
  • ದುರ್ಗಾದಾಸ್‌ ಉಯಿಕೆ (ಬಿಜೆಪಿ- ಮಧ್ಯಪ್ರದೇಶ)
  • ರಕ್ಷಾ ನಿಖಿಲ್‌ ಖಡ್ಸೆ (ಬಿಜೆಪಿ-ಮಹಾರಾಷ್ಟ್ರ)
  • ಸುಕಾಂತ ಮಜುಂದಾರ್‌ (ಬಿಜೆಪಿ-ಪಶ್ಚಿಮ ಬಂಗಾಳ)
  • ತೋಖನ್‌ ಸಾಹು (ಬಿಜೆಪಿ-ಛತ್ತೀಸ್‌ಗಢ)
  • ಡಾ.ರಾಜ್‌ಭೂಷಣ್‌ ಚೌಧರಿ (ಬಿಜೆಪಿ-ಬಿಹಾರ)
  • ಹರ್ಷ ಮಲ್ಹೋತ್ರಾ (ಬಿಜೆಪಿ-ದೆಹಲಿ)
  • ಮುರಳೀಧರ್‌ ಮೊಹೊಲ್‌ (ಬಿಜೆಪಿ-ಮಹಾರಾಷ್ಟ್ರ)
  • ನಿಮುಬೆನ್‌ ಬಾಂಭಣಿಯಾ (ಬಿಜೆಪಿ-ಗುಜರಾತ್)
  • ಜಾರ್ಜ್‌ ಕುರಿಯನ್‌ (ಬಿಜೆಪಿ-ಕೇರಳ)

ಇದನ್ನೂ ಓದಿ: Narendra Modi: ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ; 3.0 ಯುಗಾರಂಭ!

Continue Reading
Advertisement
reasi terror attack
ಪ್ರಮುಖ ಸುದ್ದಿ24 mins ago

Terror Attack: ಕಂದಮ್ಮನನ್ನೂ ಕೊಂದ ಉಗ್ರರು; ಎದೆಗೆ ಗುಂಡು ಬಿದ್ದರೂ ಪ್ರಯಾಣಿಕರನ್ನು ಉಳಿಸಲು ಯತ್ನಿಸಿದ್ದ ಚಾಲಕ

T20 World Cup
Latest39 mins ago

T20 World Cup : ಪಾಕಿಸ್ತಾನಕ್ಕೆ ಸಂಕಷ್ಟ ತಂದಿಟ್ಟ ಭಾರತ; ಸೂಪರ್ 8 ಹಂತ ಪ್ರವೇಶವೂ ಕಷ್ಟ!

Kangana Ranaut Looks Gorgeous In A White Saree
ಬಾಲಿವುಡ್40 mins ago

Kangana Ranaut: ಪ್ರಮಾಣ ವಚನ ಸಮಾರಂಭದಲ್ಲಿ ಬಿಳಿ ಸೀರೆಯಲ್ಲಿ ಮಿಂಚಿದ ಕಂಗನಾ!

IND vs PAK
ಪ್ರಮುಖ ಸುದ್ದಿ1 hour ago

IND vs PAK : ಪಾಕಿಸ್ತಾನದ ಬೌಲರ್​ ವಿರುದ್ಧ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

IND vs PAK
ಕ್ರೀಡೆ2 hours ago

IND vs PAK : ಭಾರತಕ್ಕೆ ಗೆಲುವಿನ ಚಾನ್ಸ್ ಕೇವಲ ಶೇ. 8, ಪಾಕ್ ಗೆ ಶೇ.92 ಇತ್ತು; ಆದರೆ…

Poonam Pandey making cake with ice cream with hot look
ಬಾಲಿವುಡ್2 hours ago

Poonam Pandey: ಪೂನಂ ಪಾಂಡೆಯ ರೆಸಿಪಿಗಿಂತ ಏಪ್ರನ್ ಮೇಲೆ ನೆಟ್ಟಿಗರ ಕಣ್ಣು; ರಸಿಕರ ಕಣ್ಣರಳಿಸಿದ ಹಾಟ್‌ ಬೆಡಗಿ!

Vastu Tips
ಧಾರ್ಮಿಕ2 hours ago

Vastu Tips: ನೆಮ್ಮದಿಯಿಂದ ನಿದ್ದೆ ಮಾಡಬೇಕೆ? ಈ ವಾಸ್ತು ನಿಯಮ ಪಾಲಿಸಿ

pm narendra Modi Cabinet
ಪ್ರಮುಖ ಸುದ್ದಿ2 hours ago

PM Narendra Modi: ಇಂದು ಸಂಜೆ ನರೇಂದ್ರ ಮೋದಿ ಸಂಪುಟ ಮೊದಲ ಸಭೆ; ಏನು ಅಜೆಂಡಾ?

Narendra Modi Oath Ceremony Celebs Congratulate PM Modi
ಸಿನಿಮಾ2 hours ago

Narendra Modi: ಪ್ರಧಾನಿ ಮೋದಿಗೆ ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಮಹಾಪೂರ !

IND vs PAK
ಪ್ರಮುಖ ಸುದ್ದಿ2 hours ago

IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌