ಸಿನಿಮಾ
KGFನಿಂದ ಕನ್ನಡ ಚಿತ್ರರಂಗ ಕಲಿಯಬೇಕಾದ 7 ಪಾಠಗಳು
ಒಂದು ಬಾಹುಬಲಿ, ಒಂದು ಕೆಜಿಎಫ್ ಇಡೀ ಜಗತ್ತನ್ನು ಗೆಲ್ಲಬಲ್ಲದಾದರೆ ಅದರ ಹಿಂದಿರುವ ಬಿಗ್ ಪಿಕ್ಚರ್ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಜಿಎಫ್‌ನಿಂದ ಕಲಿಯಬೇಕಾದ 7 ಪಾಠಗಳು ಇಲ್ಲಿವೆ.
ಕೆಜಿಎಫ್ 2 ಹಿಂದೆಂದೂ ಕಾಣದಷ್ಟು ಕ್ರೇಜಿಯಾಗಿ ಮುನ್ನುಗ್ಗುತ್ತಿರುವ ಕನ್ನಡ ಸಿನೆಮಾ. ಕನ್ನಡ ಸಿನೆಮಾವೊಂದನ್ನು ಹೀಗೆ ಪ್ಯಾನ್ ಇಂಡಿಯಾ ಫಿಲಂ ಆಗಿಸುವಲ್ಲಿ ನಾವು ಕಲಿಯಬೇಕಾದ ಪಾಠಗಳು ಯಾವುವು?
1. ದೊಡ್ಡದೊಂದು ಕನಸು
ಕನ್ನಡದ ಹೆಚ್ಚಿನ ನಿರ್ಮಾಪಕರು, ನಿರ್ದೇಶಕರು ಅಲ್ಪತೃಪ್ತರು. ದೊಡ್ಡ ಕನಸುಗಳಿದ್ದವರು ಅದನ್ನು ನನಸಾಗಿಸಲು ದಾರಿ ಕಾಣದೆ ಪರದಾಡುತ್ತಿರುತ್ತಾರೆ. ಒಂದು ಬಾಹುಬಲಿ, ಒಂದು ಕೆಜಿಎಫ್ ಇಡೀ ಜಗತ್ತನ್ನು ಗೆಲ್ಲಬಲ್ಲದಾದರೆ ಅದರ ಹಿಂದಿರುವ ಬಿಗ್ ಪಿಕ್ಚರ್ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ಯಾನ್ ಇಂಡಿಯಾ ತಾರಾಗಣದಿಂದ ಹಿಡಿದು ಹತ್ತಾರು ಸಾವಿರ ಥಿಯೇಟರ್‌ಗಳಲ್ಲಿ ರಿಲೀಸ್ ವರೆಗೆ ಎಲ್ಲ ಬಗೆಯ ಟಿಪ್ಸ್ ಆಂಡ್ ಟ್ರಿಕ್ಸ್ ತೆಗೆದುಕೊಳ್ಳಬೇಕು.
2. ಕಥೆ-ಚಿತ್ರಕಥೆ-ಸಂಭಾಷಣೆ
ಅಂಡರ್‌ವರ್ಲ್ಡ್ ಸಿನಿಮಾಗಳಿಗೆ ಸ್ವಲ್ಪ ಎಮೋಷನ್ ಬೆಸೆದ ಚಿತ್ರಗಳು ʼಓಂʼ ಕಾಲದಿಂದಲೂ ಕ್ಲಿಕ್ ಆಗುತ್ತ ಬಂದಿವೆ. ಕೆಜಿಎಫ್ ಸಕ್ಸಸ್‌ಗೆ ಮುಖ್ಯ ಕಾರಣ ಚಿತ್ರದ ಕಥೆ. ಒಂದು ಚಿತ್ರಕಥೆ, ಸ್ಕ್ರಿಪ್ಟ್ ಹೇಗಿರಬೇಕು ಎಂದು ಪ್ರಶಾಂತ್ ನೀಲ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅನವಶ್ಯಕ ಕಥೆಯ ಎಳೆಗಳನ್ನು ಮಧ್ಯ ಸೇರಿಸುವ ಪ್ರಯತ್ನ ಮಾಡಿಲ್ಲ. ರಾಕಿ ನಡೆದ ಹಾದಿ ಹಾಗು ಅದರ ಸುತ್ತ ನಡೆಯುವ ಘಟನೆಗಳನ್ನೇ ಪ್ರಮುಖವಾಗಿಟ್ಟಿದ್ದಾರೆ. ಅನವಶ್ಯಕ ದೃಶ್ಯಗಳೂ ಇಲ್ಲ. ಹೀರೋಗೆ ಎಲ್ಲಿ ಬಿಲ್ಡಪ್‌ನ ಅವಶ್ಯಕತೆ ಇದೆಯೋ ಅಲ್ಲಿ ನೀಡಿದ್ದಾರೆ. ಸಂಭಾಷಣೆ ಕೂಡ ಆ ಪಾತ್ರಕ್ಕೆ, ಆ ಸನ್ನಿವೇಶಕ್ಕೆ ಹೊಂದುವಂತಿದೆ. ಕೆಜಿಎಫ್ ಸಿನಿಮಾದಲ್ಲಿ ತೀರಾ ಉದ್ದ ಸಂಭಾಷಣೆ ಇಲ್ಲ. ಅಲ್ಲಿರುವ ಒನ್‌ಲೈನರ್ಸ್, ಪಂಚಿಂಗ್ ಡೈಲಾಗ್ ಗಮನ ಸೆಳೆಯುತ್ತವೆ.
3. ಹೊಂದುವ ತಾರಾಗಣ
ಒಂದು ಪಾತ್ರವನ್ನು ಸೃಷ್ಟಿಸಿದಾಗ ಅದಕ್ಕೆ ಹೊಂದುವಂತಹ ಸೂಕ್ತ ನಟ, ತಾರೆಯನ್ನು ಆಯ್ದುಕೊಳ್ಳುವುದು ಒಬ್ಬ ನಿರ್ದೇಶಕನ ಜವಾಬ್ಧಾರಿ. ಪ್ರಶಾಂತ ಆ ಕೆಲಸದಲ್ಲಿ ಪರಿಣಿತರಾಗಿದ್ದಾರೆ. ರಾಕಿ ಪಾತ್ರದ ಆದಿಯಾಗಿ ಕೆಜಿಎಫ್‌ನಲ್ಲಿ ಬರುವ ಸಾಮಾನ್ಯ ಕೆಲಸಗಾರರ ವರೆಗೂ ಸೂಕ್ತ ನಟ/ನಟಿಯರನ್ನು ಆಯ್ದುಕೊಂಡಿದ್ದಾರೆ. ಗರುಡ, ಅಧೀರ, ರಮಿಕಾ ಸೇನ್ ಹೀಗೆ ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ತೂಕವಿದೆ. ಆ ಪಾತ್ರವನ್ನು ನಿಭಾಯಿಸುವ ಅರ್ಹತೆ ಹೊಂದಿದವರನ್ನೇ ಆರಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅದ್ಭುತ ನಟರಿದ್ದಾಗ ಸಂಜಯ್ ದತ್ತ್ ಅಥವಾ ರವೀನಾ ಟಂಡನ್ ಯಾಕೆ? ಎಂಬ ಪ್ರಶ್ನೆ ಮೂಡಿತ್ತು. ಆದರೆ ನಿರ್ದೇಶಕನ ಮನಸ್ಸಿನಲ್ಲಿ ಯಾವ ಪಾತ್ರಕ್ಕೆ ಯಾರು ಹೊಂದುತ್ತಾರೆ ಎಂಬುದು ಸ್ಪಷ್ಟವಾಗಿರಬೇಕು. ಅದನ್ನು ನಿರ್ದೇಶಕ ಪ್ರಶಾಂತ್ ಕೆಜಿಎಫ್‌ನಲ್ಲಿ ಸಾಬೀತು ಮಾಡಿದ್ದಾರೆ.
4. ಸತತ ಪ್ರಮೋಷನ್
ಹಿಂದೆಂದೂ ಕಾಣದ ಪ್ರಮೋಷನ್ ಕೆಲಸವನ್ನು ಕೆಜಿಎಫ್ 2ನ ಹಿನ್ನೆಲೆಯಲ್ಲಿ ಕಾಣಬಹುದಾಗಿತ್ತು. ದೇಶದ ನಾನಾ ಪಟ್ಟಣಗಳಿಗೆ ಹೋಗಿ ಚಿತ್ರತಂಡ ಪ್ರಮೋಷನ್ ಮಾಡಿದೆ, ಇಂಟರ್‌ವ್ಯೂಗಳನ್ನು ಕೊಟ್ಟಿದೆ. ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿಕೊಂಡಿದೆ. ಜನರ ಹೃದಯದ ಮಿಡಿತವನ್ನು ಚೆನ್ನಾಗಿ ಅರಿತುಕೊಂಡು, ಸೋಷಿಯಲ್ ಮೀಡಿಯಾ ಅಥವಾ ಮೀಡಿಯಾಗಳ ಮೂಲಕ ಆಕರ್ಷಕ ಕಾರ್ಯಕ್ರಮಗಳನ್ನು ಮಾಡಿ, ತಂಡದವರು ಸಂದರ್ಶನಗಳನ್ನು ನೀಡಿ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸಬೇಕು. ಈ ವಿಷಯದಲ್ಲಿ ಕೆಜಿಎಫ್ ತಂಡ ಗೆದ್ದಿದೆ.
5. ಭರವಸೆಯ ಚಿತ್ರತಂಡ
ಚಿತ್ರ ತೆರೆಯ ಮೇಲೆ ಹೇಗೆ ಮೂಡುತ್ತದೆ ಎನ್ನುವುದು ತೆರೆಯ ಹಿಂದೆ ತಂಡ ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಕೆಜಿಎಫ್‌ನ ಛಾಯಾಗ್ರಾಹಕ ಭುವನ್ ಗೌಡ ಆದಿಯಾಗಿ ಪ್ರತಿಯೊಬ್ಬರೂ ಪ್ರಶಾಂತ್ ಅವರ ಕಲ್ಪನೆಯನ್ನು ತೆರೆಯ ಮೇಲೆ ಮೂಡಿಸುವಲ್ಲಿ ಶ್ರಮಿಸಿದ್ದಾರೆ. ಒಂದು ಸಣ್ಣ ಕಲ್ಲು ಬೀಳುವುದರಿಂದ, ದೊಡ್ಡ ಆಕ್ಷನ್ ದೃಶ್ಯದವರೆಗೂ ಪ್ರತಿಯೊಂದು ಸನ್ನಿವೇಶವನ್ನೂ ಪ್ರೇಕ್ಷಕರು ಗಮನಿಸುತ್ತಾರೆ. ಅದಕ್ಕೆ ತಕ್ಕಂತೆ ಚಿತ್ರತಂಡ ಕಾರ್ಯ ನಿರ್ವಹಿಸಿದೆ. ಪ್ರಶಾಂತ್ ನೀಲ್ ಪ್ರತಿಭೆ ಇರುವವರಿಗೆ ಅವಕಾಶ ನೀಡುವಲ್ಲಿ ಹಿಂದೇಟು ಹಾಕಿಲ್ಲ. 18 ವರ್ಷದ ಯುವಕನಿಗೆ ಕೂಡ ಎಡಿಟಿಂಗ್‌ನಂತಹ ದೊಡ್ಡ ಜವಾಬ್ಧಾರಿ ನೀಡಿದ್ದು ಗಮನಾರ್ಹ.
6. ಪ್ಯಾನ್ ಇಂಡಿಯಾ ತಾರಾಗಣ
ಚಿತ್ರದ ಹೀರೋ ಕನ್ನಡಿಗ ಯಶ್. ಆದರೆ ಚಿತ್ರದ ಇತರ ದೊಡ್ಡ ಪಾತ್ರಗಳಲ್ಲಿ ಹಿಂದಿ ರವೀನಾ ಟಂಡನ್, ಸಂಜಯ್ ದತ್, ದಕ್ಷಿಣ ಭಾರತದ ಅಪೀಲ್ ಇರುವ ಪ್ರಕಾಶ್ ರೈ ಮುಂತಾದವರಿದ್ದಾರೆ. ಇವರಿಗೆ ಇಡೀ ಭಾರತೀಯ ಚಿತ್ರರಂಗದ ವೀಕ್ಷಕರಲ್ಲಿ ಐಡೆಂಟಿಟಿ ಇದೆ. ಇದು ಚಿತ್ರ ಎಲ್ಲ ಕಡೆಗೂ ರೀಚ್ ಮಾಡಿಸಲು ಸುಲಭವಾಗಿದೆ.
7. ಕಠಿಣ ಪರಿಶ್ರಮ
ಒಂದು ಕನಸು ನನಸಾಗಲು ರಾಕಿ ತನ್ನ ಮಾತು ಉಳಿಸಿಕೊಳ್ಳಲು ಪಡುವಷ್ಟೇ ಕಷ್ಟ ಪಡಬೇಕಾಗುತ್ತದೆ. ನಿರಂತರವಾಗಿ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಪೂರ್ತಿ ಮನಸ್ಸನಿನಿಂದ ದುಡಿದಾಗ ಕೆಜಿಎಫ್‌ನಂತ ಸಿನಿಮಾಗಳು ಇನ್ನಷ್ಟು ಬರಲು ಸಾಧ್ಯ.
ಇದನ್ನೂ ಓದಿ: KGF ನಮಗೆ ಕಲಿಸುವ 8 ಪಾಠಗಳು..
ದೇಶ
ಬಾಲಕಿಯನ್ನು ರೇಪ್ ಮಾಡಿ, ಇನ್‌ಸ್ಟಾದಲ್ಲಿ ಫೋಟೋ ಷೇರ್ ಮಾಡಿದ ಕಾಮುಕ ಗಾಯಕ ಈಗ ಅಂದರ್!
Bhojpuri Singer Arrested: ಭೋಜಪುರಿ ಗಾಯಕನೊಬ್ಬ 13 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ್ದ.
ಗುರುಗ್ರಾಮ: ಬಾಲಕಿಯನ್ನು (13 Year Old girl) ಅತ್ಯಾಚಾರ (Rape) ಮಾಡಿ, ಆಕೆಯ ಆಕ್ಷೇಪಾರ್ಹ ಭಾವಚಿತ್ರಗಳನ್ನು ಇನ್‌ಸ್ಟಾಗ್ರಾಮ್ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ ಆರೋಪದ ಮೇರೆಗೆ ಭೋಜಪುರಿ ಗಾಯಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ(Bhojpuri Singer Arrested). ಬಂಧಿತನನ್ನು 21 ವರ್ಷದ ಅಭಿಷೇಕ್ (Abhishek) ಎಂದು ಗುರುತಿಸಲಾಗಿದೆ. ಬಿಹಾರದ (Bihar) ಮೂಲದ ಈ ಯುವಕನನ್ನು ಭೋಜಪುರಿ ಸಿಂಗರ್ ಬಬುಲ್ ಬಿಹಾರಿ ಎಂದೂಕರೆಯಲಾಗುತ್ತದೆ. ಯುಟ್ಯೂಬ್ ಚಾನೆಲ್‌ನಲ್ಲಿ ಇವರಿಗೆ 27 ಸಾವಿರಕ್ಕೂ ಅಧಿಕ ಜನರು ಫಾಲೋವರ್ಸ್ ಇದ್ದಾರೆ.
ಆರೋಪಿ ಗಾಯಕ ದಿಲ್ಲಿಯ ರಾಜೀವ್ ನಗರದಲ್ಲಿ ಎರಡು ವರ್ಷಗಳ ಹಿಂದೆ ವಾಸವಾಗಿದ್ದರು. ಆಗ 13 ವರ್ಷದ ಬಾಲಕಿಯ ಸ್ನೇಹ ಸಂಪಾದಿಸಿದ ಆರೋಪಿ, ಆಕೆಯನ್ನು ಹೊಟೇಲ್ ರೂಮ್‌ಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಮಾಡಿ, ಆಕ್ಷೇಪಾರ್ಹ ಚಿತ್ರಗಳನ್ನು ಸೆರೆ ಹಿಡಿದಿದ್ದಾನೆ. ಈ ಘಟನೆಯ ಬಳಿಕ ಬಾಲಕಿ ಆತನಿಂದ ದೂರವಾಗಿದ್ದಾಳೆ. ಅಲ್ಲದೇ, ಈ ಘಟನೆಯ ಬಗ್ಗೆ ಯಾರೊಂದಿಗೆ ಆಕೆ ಮಾಹಿತಿ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಕೆಲವು ದಿನಗಳ ಹಿಂದೆ ಆರೋಪಿ, ಸಂತ್ರಸ್ತೆಯ ಆಕ್ಷೇಪಾರ್ಹ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಫೋಟೋಗಳನ್ನು ನೋಡಿದ ಬಳಿಕ, ಸಂತ್ರಸ್ತೆಯ ಕುಟುಂಬಸ್ಥರು ಆಕೆಯನ್ನು ಪ್ರಶ್ನಿಸಿದ್ದಾರೆ. ಆಗ, ಆಕೆ ಎಲ್ಲ ಮಾಹಿತಿಯನ್ನು ಅವರೆದುರಿಗೆ ಹೇಳಿದ್ದಾಳೆ. ಕೂಡಲೇ ಕುಟುಂಬಸ್ಥರು ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ದೂರು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ: Crime : ಬಾಡಿಗೆ ಸರಿಯಾಗಿ ಕೊಡಲಿಲ್ಲವೆಂದು ಕುಡುಕನನ್ನೇ ರೇಪ್ ಮಾಡಿದ ಆಟೋ ಚಾಲಕ!
ಸಂತ್ರಸ್ತೆಗೆ ಕೌನ್ಸೆಲಿಂಗ್ ಮಾಡಿದ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಗಾಯಕನ ಪೋಕ್ಸೋ ಹಾಗೂ ಐಟಿ ಕಾಯ್ದೆ ಉಲ್ಲಂಘನೆಯ ಆರೋಪಗಳನ್ನು ಹೊರಿಸಿದ್ದಾರೆ. ಪ್ರಕರಣ ದಾಖಲಾದ ಕೆಲವೇ ಘಂಟೆಗಳಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಆತನನ್ನು ಸಿಟಿ ಕೋರ್ಟ್ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ವಕ್ತಾರ ಸುಭಾಶ್ ಬೋಕನ್ ಅವರು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
South Cinema
Corset Fashion: ಬಣ್ಣ ಬಣ್ಣದ ಕಾರ್ಸೆಟ್ ಕ್ರಾಪ್ ಟಾಪ್ ಜಾದೂ…
ಕೇವಲ ಡೆನೀಮ್ ಹಾಗೂ ಬ್ಲಾಕ್ ಶೇಡ್‌ಗಳಿಗೆ ಸೀಮಿತವಾಗಿದ್ದ ಬಣ್ಣಬಣ್ಣದ ಕಾರ್ಸೆಟ್ ಕ್ರಾಪ್ ಟಾಪ್‌ಗಳು ಇಂದು ಯುವತಿಯರನ್ನು ಸೆಳೆದಿವೆ. ಅಲ್ಲದೇ, ಇವು ತಾರೆಯರ ನೆಚ್ಚಿನ ಔಟ್‌ಫಿಟ್‌ನಲ್ಲೊಂದಾಗಿವೆ. ಏನಿದು ಕಾರ್ಸೆಟ್ ಕ್ರಾಪ್ ಟಾಪ್ ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾರ್ಸೆಟ್ ಬಣ್ಣ ಬಣ್ಣದ ಕಾರ್ಸೆಟ್ ಟಾಪ್‌ಗಳು ಇದೀಗ ಯುವತಿಯರ ವೆಸ್ಟರ್ನ್ ಫ್ಯಾಷನ್ ಲಿಸ್ಟ್‌ಗೆ ಸೇರಿವೆ. ಈ ಹಿಂದೆ ಕೇವಲ ಡೆನೀಮ್ ಹಾಗೂ ಬ್ಲಾಕ್ ಶೇಡ್‌ಗಳಿಗೆ ಸೀಮಿತವಾಗಿದ್ದ ಕಾರ್ಸೆಟ್ ಟಾಪ್ ಇದೀಗ ಬಣ್ಣ ಬದಲಾಯಿಸಿವೆ. ಯುವತಿಯರ ನೆಚ್ಚಿನ ಟಾಪ್‌ಗಳಲ್ಲೊಂದಾಗಿರುವ ಇವು ಸಿನಿ ತಾರೆಯರ ನೆಚ್ಚಿನ ಔಟ್‌ಫಿಟ್‌ನಲ್ಲೂ ಸೇರಿವೆ.
ಏನಿದು ಕಾರ್ಸೆಟ್ ಕ್ರಾಪ್ ಟಾಪ್?
ಟಮ್ಮಿ ಭಾಗವನ್ನು ಸ್ಲಿಮ್ ಆಗಿ ಕಾಣಿಸಬಲ್ಲ ವಿನ್ಯಾಸ ಈ ಟಾಪ್‌ಗಿದೆ. ಮೂಲತಃ ಪಾಶ್ಚಿಮಾತ್ಯ ರಾಷ್ಟ್ರಗಳ ಫ್ಯಾಷನ್ ಆದ ಈ ಟಾಪ್, ಹೊಟ್ಟೆ ಭಾಗ ಸ್ಲಿಮ್ ಆಗಿ ಕಾಣಿಸುವಂತೆ ಮಾಡಬಲ್ಲ ತಂತ್ರಜ್ಞಾನ ಈ ಡಿಸೈನ್‌ನಲ್ಲಿಅಡಗಿದೆ. ಅಷ್ಟೇಕೆ! ಕರ್ವ್ಸ್ ಹೊಂದಿರುವವರಿಗೆ ಹೇಳಿ ಮಾಡಿಸಿದ ಟಾಪ್ ಇದು. ಕಾರ್ಸೆಟ್ ಟಾಪ್ ಫ್ಯಾಷನ್‌ನಲ್ಲಿಸಾಕಷ್ಟು ಡಿಸೈನ್‌ಗಳನ್ನು ನೋಡಬಹುದು. ಬಾಡಿಕವ್ರ್ಸ್ ಇರುವವರಿಗೆ ಹೇಳಿ ಮಾಡಿಸಿದ ಟಾಪ್ ಇದು ಎನ್ನುತ್ತಾರೆ ಸ್ಟೈಲಿಸ್ಟ್ ಚಿತ್ರಾ.
ಕಾರ್ಸೆಟ್ ಟಾಪ್‌ಗಳು ಯಾವ ಮಟ್ಟಿಗೆ ಫಿಟ್ಟಿಂಗ್ ಹೊಂದಿರುತ್ತವೆ ಎಂದರೇ, ಬಾಡಿ ಕರ್ವ್‌ಗೆ ತಕ್ಕಂತೆ ಅದರಲ್ಲೂ ವೇಸ್ಟ್ ಲೈನ್ ತೀರಾ ನಾಜೂಕಾಗಿ ರೂಪಿಸಲಾಗಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಇಲ್ಲಿಇಂಚು ಇಂಚಿಗೂ ಫಿಟ್ಟಿಂಗ್ ಬಗ್ಗೆ ಗಮನಹರಿಸಲಾಗಿರುತ್ತದೆ. ಹಾಗಾಗಿ ಧರಿಸಿದವರ ಬಾಡಿ ಕವ್ರ್ಸ್ ನೋಡಲು ಫಿಟ್ ಆಗಿರುವಂತೆ ಈ ಟಾಪ್‌ಗಳು ಇಲ್ಯೂಷನ್ ಕ್ರಿಯೇಟ್ ಮಾಡುತ್ತವೆ.
ಇದನ್ನೂ ಓದಿ: Skinny Dresses | ಸ್ಕಿನ್ನಿ ಉಡುಪುಗಳು ದೇಹಕ್ಕೆ ಬಾಧಕವೇ?
ಕಾರ್ಸೆಟ್ ಕ್ರಾಪ್ ಟಾಪ್ ಆಯ್ಕೆ
ಕೊಂಚ ಉದ್ದಗಿರುವವರಿಗೆ ಯಾವ ಬಗೆಯ ಕಾರ್ಸೆಟ್ ಟಾಪ್ ಆದರೂ ಸರಿಯೇ ಸೂಟ್ ಆಗುತ್ತದೆ. ಪ್ಲಂಪಿಯಾಗಿರುವವರು ಟ್ರಯಲ್ ನೋಡಿಯೇ ಆಯ್ಕೆ ಮಾಡಬೇಕು ಎನ್ನುತ್ತಾರೆ ಫ್ಯಾಷನಿಸ್ಟ್ ಸೂರಜ್. ಅವರ ಪ್ರಕಾರ, ಕಾರ್ಸೆಟ್ ಟಾಪ್‌ಗಳು ಮಾಡರ್ನ್ ಲುಕ್ ಕಲ್ಪಿಸುತ್ತವೆ. ಹಾಗಾಗಿ ತಾರೆಯರ ನೆಚ್ಚಿನ ಕ್ರಾಪ್ ಟಾಪ್‌ಗಳಲ್ಲಿ ಇವು ಸೇರಿವೆ ಎನ್ನುತ್ತಾರೆ. ಆಯಾ ಬಾಡಿ ಹೈಟ್‌ಗೆ ತಕ್ಕಂತೆ ಮ್ಯಾಚ್ ಆಗುವ ವಿನ್ಯಾಸದ ಕ್ರಾಪ್ ಕಾರ್ಸೆಟ್ ಟಾಪ್‌ಗಳನ್ನು ಧರಿಸುವುದು ಅಗತ್ಯ. ಇಲ್ಲವಾದಲ್ಲಿ ನೋಡಲು ಚೆನ್ನಾಗಿ ಕಾಣದು ಎನ್ನುತ್ತಾರೆ ಅವರು.
ಇದನ್ನೂ ಓದಿ: Skinny Dresses | ಸ್ಕಿನ್ನಿ ಉಡುಪುಗಳು ದೇಹಕ್ಕೆ ಬಾಧಕವೇ?
ಪರ್ಫೆಕ್ಟ್ ಕಾರ್ಸೆಟ್ ಕ್ರಾಪ್ ಟಾಪ್
- ಫಿಟ್ಟಿಂಗ್ ಸರಿಯಾಗಿರುವುದು ಅಗತ್ಯ.
- ಬೆನ್ನು ನೋವಿರುವವರು ಫಿಟ್ಟಿಂಗ್ ಕಾರ್ಸೆಟ್ ಆವಾಯ್ಡ್ ಮಾಡಿ.
- ಈ ಟಾಪ್ ಲೂಸಾಗಿರಕೂಡದು.
- ಪಾಸ್ಟಲ್ ಶೇಡ್‌ನವು ಹೆಚ್ಚು ಪ್ರಚಲಿತದಲ್ಲಿವೆ.
- ಜೀನ್ಸ್ ಪ್ಯಾಂಟ್-ಸ್ಕರ್ಟ್-ಲೆಹೆಂಗಾಗೂ ಮಿಕ್ಸ್ ಮ್ಯಾಚ್ ಮಾಡಬಹುದು.
- ಬಾರ್ಡಟ್, ಕೋಲ್ಡ್ ಶೋಲ್ಡರ್‌ನವು ಚಾಲ್ತಿಯಲ್ಲಿವೆ.
- ಹೈ ಹೀಲ್ಸ್ ಪರ್ಫೆಕ್ಟ್ ಲುಕ್ ನೀಡುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಸಿನಿಮಾ
Adipurush Movie : ಆದಿಪುರುಷನಿಗೆ ಸಿಕ್ಕ ಸರ್ಟಿಫಿಕೇಟ್ ಯಾವುದು? ಎಷ್ಟೊಂದು ತಾಸು ಇರಲಿದೆ ಗೊತ್ತಾ ಈ ಸಿನಿಮಾ?
ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾಕ್ಕೆ (Adipurush Movie) ಸೆನ್ಸಾರ್ ಮಂಡಳಿ U ಸರ್ಟಿಫಿಕೇಟ್ ಕೊಟ್ಟಿದೆ. ಸಿನಿಮಾ ಒಟ್ಟು 2 ಗಂಟೆ 59 ನಿಮಿಷ ಇರಲಿದೆ.
ಮುಂಬೈ: ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್ (Adipurush Movie) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಅದರ ಬೆನ್ನಲ್ಲೇ ಸಿನಿಮಾವನ್ನು ಸೆನ್ಸಾರ್ ಮಂಡಳಿ ವೀಕ್ಷಣೆ ಮಾಡಿ ಸರ್ಟಿಫಿಕೇಟ್ ಕೊಟ್ಟಿದೆ. ಹಾಗಾದರೆ ಈ ಸಿನಿಮಾಕ್ಕೆ ಸಿಕ್ಕ ಸರ್ಟಿಫಿಕೇಟ್ ಯಾವುದು? ಸಿನಿಮಾ ಒಟ್ಟಾಗಿ ಎಷ್ಟು ಸಮಯ ಇರಲಿದೆ ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಭಾರತದ ಸಿನಿಮಾ ವಿಶ್ಲೇಷಕರಾಗಿರುವ ತರಣ್ ಆದರ್ಶ್ ಅವರು ಆದಿಪುರುಷ್ ಸಿನಿಮಾಕ್ಕೆ ಸಿಕ್ಕ ಸರ್ಟಿಫಿಕೇಟ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸೆನ್ಸಾರ್ ಮಂಡಳಿ ಪೂರ್ತಿ ಸಿನಿಮಾ ವೀಕ್ಷಣೆ ಮಾಡಿ ʼU’ ಸರ್ಟಿಫಿಕೇಟ್ ಅನ್ನು ಕೊಟ್ಟಿದೆ. ಅಂದರೆ ಭಾರತದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಈ ಸಿನಿಮಾ ನೋಡುವುದಕ್ಕೆ ಅವಕಾಶವಿರಲಿದೆ. ಅದಷ್ಟೇ ಅಲ್ಲದೆ ಸಿನಿಮಾ ನೋಡಿರುವ ಮಂಡಳಿ ಸಿನಿಮಾದ ಒಂದೇ ಒಂದು ಸೀನ್ ಅನ್ನೂ ಕತ್ತರಿಸುವುದಕ್ಕೆ ಸೂಚನೆ ನೀಡಿಲ್ಲವಂತೆ.
ಇದನ್ನೂ ಓದಿ: Adipurush Movie : ಉಚಿತವಾಗಿ ಸಿಗುತ್ತಿದೆ ‘ಆದಿಪುರುಷ್’ ಸಿನಿಮಾದ ಟಿಕೆಟ್! ಪಡೆಯುವುದು ಹೇಗೆ?
ಸಿನಿಮಾದ ಯಾವ ಸೀನ್‌ಗೂ ಕತ್ತರಿ ಬೀಳುತ್ತಿಲ್ಲವಾದ್ದರಿಂದ ಸಿನಿಮಾದ ಸಮಯ ಕೂಡ ಹೆಚ್ಚೇ ಇರಲಿದೆ. ಒಟ್ಟಾಗಿ ಈ ಸಿನಿಮಾದ ಸಮಯ 179 ನಿಮಿಷ ಇರಲಿದೆ. ಅಂದರೆ 2 ಗಂಟೆ 59 ನಿಮಿಷ. ಈ ಬಗ್ಗೆಯೂ ತರಣ್ ಆದರ್ಶ್ ಅವರು ಟ್ವೀಟ್‌ನಲ್ಲಿ ಮಾಹಿತಿ ಕೊಟ್ಟಿದ್ದಾರೆ.
ಓಂ ರಾವುತ್ ನಿರ್ದೇಶಿಸಿರುವ ಆದಿಪುರುಷ ರಾಮಾಯಣದ ಪೌರಾಣಿಕ ಕಥೆಯ ರೂಪಾಂತರವಾಗಿದೆ. ರಾಮನ ಪಾತ್ರದಲ್ಲಿ ಪ್ರಭಾಸ್, ಸೀತೆ ಪಾತ್ರವನ್ನು ಕೃತಿ ಸನೊನ್ ಮತ್ತು ರಾವಣನ ಮಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಇತ್ತೀಚೆಗೆ, ಚಿತ್ರದ ಎರಡನೇ ಟ್ರೇಲರ್ ಅನ್ನು ತಿರುಪತಿಯಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. 300 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿರುವ ಈ ಸಿನಿಮಾ ಇದೇ ತಿಂಗಳ 16ರಂದು ತೆರೆ ಕಾಣಲಿದೆ.
South Cinema
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
Nandamuri Balakrishna: ಅನಿಲ್ ರವಿಪುಡಿ ನಿರ್ದೇಶನವಿರುವ ನಟ ನಂದಮೂರಿ ಬಾಲಕೃಷ್ಣ ಅವರ ಬಹು ನಿರೀಕ್ಷಿತ ಚಿತ್ರ ಇಷ್ಟೂ ದಿನ ತಾತ್ಕಾಲಿಕವಾಗಿ NBK 108 ಎಂದು ಇಡಲಾಗಿತ್ತು.
ಬೆಂಗಳೂರು: ಸರಿಲೇರು ನೀಕೆವ್ವರು ಮತ್ತು ಎಫ್-2 ನಂತಹ ಸಿನಿಮಾಗಳ ಮೂಲಕ ಉತ್ತಮ ಪ್ರತಿಕ್ರಿಯೆ ಪಡೆದ ಚಿತ್ರಗಳ ನಿರ್ದೇಶಕ ಅನಿಲ್ ರವಿಪುಡಿ ಹೊಸ ಸುದ್ದಿ ನೀಡಿದ್ದಾರೆ. ಇವರ ನಿರ್ದೇಶನವಿರುವ ನಟ ನಂದಮೂರಿ ಬಾಲಕೃಷ್ಣ ಅವರ ಬಹು ನಿರೀಕ್ಷಿತ ಚಿತ್ರ ಇಷ್ಟೂ ದಿನ ತಾತ್ಕಾಲಿಕವಾಗಿ NBK 108 (Nandamuri Balakrishna) ಎಂದು ಇಡಲಾಗಿತ್ತು. ಇದೀಗ ಚಿತ್ರತಂಡ ಈ ಸಿನಿಮಾಗೆ ʻಭಗವಂತ ಕೇಸರಿʼಎಂದು ಶೀರ್ಷಿಕೆ ಇಟ್ಟಿದ್ದಾರೆ. ಜತೆಗೆ ಫಸ್ಟ್ ಲುಕ್ ಪೋಸ್ಟರ್ ಕೂಡ ಶೇರ್ ಮಾಡಿಕೊಂಡಿದೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸಿದ್ದಾರೆ.
ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಬಾಲಕೃಷ್ಣ ಅವರು ಖಡ್ಗದಂತಹ ಆಯುಧವನ್ನು ಹಿಡಿದಿದ್ದಾರೆ. ಪೋಸ್ಟರ್‌ನಲ್ಲಿ ಲುಕ್ ಜತೆಗೆ, ‘ಐ ಡೋಂಟ್ ಕೇರ್’ ಎಂದು ಟ್ಯಾಗ್‌ಲೈನ್ ಕೂಡ ಕೊಟ್ಟಿದ್ದಾರೆ. ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ನಿರ್ಮಾಣ ಸಂಸ್ಥೆ ಶೈನ್ ಸ್ಕ್ರೀನ್ಸ್ ಬಿಡುಗಡೆ ಮಾಡಿದೆ. ಈ ಸಿನಿಮಾ ಮೂಲಕ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತೆಲುಗು ಸಿನಿಮಾಗೆ ಪದಾರ್ಪಣೆ ಮಾಡಿದ್ದಾರೆ. ನಟ ಶ್ರೀಲೀಲಾ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಎಸ್ ಥಮನ್ ಸಂಗೀತ ಚಿತ್ರಕ್ಕಿದೆ. ಭಗವಂತ ಕೇಸರಿ ದಸರಾಕ್ಕೆ ಥಿಯೇಟರ್‌ಗೆ ಲಗ್ಗೆ ಇಡಲಿದೆ.
ಅನಿಲ್ ರವಿಪುಡಿ ಅವರು ಮಹೇಶ್ ಬಾಬು ಅವರಿಗೆ ಸರಿಲೇರು ನೀಕೆವ್ವರು (2020)ನಲ್ಲಿ ನಿರ್ದೇಶಿಸಿದ ನಂತರ ಸ್ಟಾರ್ ಚಲನಚಿತ್ರ ನಿರ್ದೇಶಕರಾಗಿ ಹೊರಹೊಮ್ಮಿದರು. ಬಾಲಕೃಷ್ಣ ಸಿನಿಮಾದ ಟ್ರೇಡ್ ಮಾರ್ಕ್ ಮಾಸ್ ಅಂಶಗಳೂ ಇದರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Nandamuri Balakrishna: ನಂದಮೂರಿ ಬಾಲಕೃಷ್ಣ NBK 108 ಸಿನಿಮಾದ ಫಸ್ಟ್ ಲುಕ್ ಔಟ್
అన్న దిగిండు🔥
— Shine Screens (@Shine_Screens) June 8, 2023
ఇగ మాస్ ఊచకోత షురూ 😎
Presenting #NandamuriBalakrishna in & as #BhagavanthKesari 💥#NBKLikeNeverBefore ❤️🔥@AnilRavipudi @MsKajalAggarwal @sreeleela14 @rampalarjun @MusicThaman @sahugarapati7 @harish_peddi @YoursSKrishna @JungleeMusicSTH pic.twitter.com/aIAYbnMgcK
ಮಾರ್ಚ್ 22ರಂದು, ಅನಿಲ್ ರವಿಪುಡಿ ಅವರು NBK 108 ಫಸ್ಟ್ ಲುಕ್ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದರು. ಪೋಸ್ಟರ್‌ಗಳಲ್ಲಿ ‘ಈ ಬಾರಿ ನಿಮ್ಮ ಕಲ್ಪನೆಗೂ ಮೀರಿ’ ಎಂಬ ಅಡಿಬರಹವಿತ್ತು. ಈ ಚಿತ್ರವು ಬಾಲಯ್ಯ ಅವರ ಹಿಂದಿನ ಸಿನಿಮಾಗಳಿಗಿಂತಲೂ ಹೆಚ್ಚು ಮಾಸ್ ಆಗಿರಲಿದೆ ಎನ್ನಲಾಗಿದೆ.
-
ಸುವಚನ12 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
South Cinema24 hours ago
Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!
-
South Cinema22 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema22 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ18 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
ಪ್ರಮುಖ ಸುದ್ದಿ23 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಕರ್ನಾಟಕ22 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ20 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ