KGFನಿಂದ ಕನ್ನಡ ಚಿತ್ರರಂಗ ಕಲಿಯಬೇಕಾದ 7 ಪಾಠಗಳು - Vistara News

ಸಿನಿಮಾ

KGFನಿಂದ ಕನ್ನಡ ಚಿತ್ರರಂಗ ಕಲಿಯಬೇಕಾದ 7 ಪಾಠಗಳು

ಒಂದು ಬಾಹುಬಲಿ, ಒಂದು ಕೆಜಿಎಫ್‌ ಇಡೀ ಜಗತ್ತನ್ನು ಗೆಲ್ಲಬಲ್ಲದಾದರೆ ಅದರ ಹಿಂದಿರುವ ಬಿಗ್‌ ಪಿಕ್ಚರ್‌ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಜಿಎಫ್‌ನಿಂದ ಕಲಿಯಬೇಕಾದ 7 ಪಾಠಗಳು ಇಲ್ಲಿವೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಜಿಎಫ್‌ 2 ಹಿಂದೆಂದೂ ಕಾಣದಷ್ಟು ಕ್ರೇಜಿಯಾಗಿ ಮುನ್ನುಗ್ಗುತ್ತಿರುವ ಕನ್ನಡ ಸಿನೆಮಾ. ಕನ್ನಡ ಸಿನೆಮಾವೊಂದನ್ನು ಹೀಗೆ ಪ್ಯಾನ್‌ ಇಂಡಿಯಾ ಫಿಲಂ ಆಗಿಸುವಲ್ಲಿ ನಾವು ಕಲಿಯಬೇಕಾದ ಪಾಠಗಳು ಯಾವುವು?

1. ದೊಡ್ಡದೊಂದು ಕನಸು

ಕನ್ನಡದ ಹೆಚ್ಚಿನ ನಿರ್ಮಾಪಕರು, ನಿರ್ದೇಶಕರು ಅಲ್ಪತೃಪ್ತರು. ದೊಡ್ಡ ಕನಸುಗಳಿದ್ದವರು ಅದನ್ನು ನನಸಾಗಿಸಲು ದಾರಿ ಕಾಣದೆ ಪರದಾಡುತ್ತಿರುತ್ತಾರೆ. ಒಂದು ಬಾಹುಬಲಿ, ಒಂದು ಕೆಜಿಎಫ್‌ ಇಡೀ ಜಗತ್ತನ್ನು ಗೆಲ್ಲಬಲ್ಲದಾದರೆ ಅದರ ಹಿಂದಿರುವ ಬಿಗ್‌ ಪಿಕ್ಚರ್‌ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ಯಾನ್‌ ಇಂಡಿಯಾ ತಾರಾಗಣದಿಂದ ಹಿಡಿದು ಹತ್ತಾರು ಸಾವಿರ ಥಿಯೇಟರ್‌ಗಳಲ್ಲಿ ರಿಲೀಸ್‌ ವರೆಗೆ ಎಲ್ಲ ಬಗೆಯ ಟಿಪ್ಸ್‌ ಆಂಡ್‌ ಟ್ರಿಕ್ಸ್‌ ತೆಗೆದುಕೊಳ್ಳಬೇಕು.

2. ಕಥೆ-ಚಿತ್ರಕಥೆ-ಸಂಭಾಷಣೆ

ಅಂಡರ್‌ವರ್ಲ್ಡ್‌ ಸಿನಿಮಾಗಳಿಗೆ ಸ್ವಲ್ಪ ಎಮೋಷನ್‌ ಬೆಸೆದ ಚಿತ್ರಗಳು ʼಓಂʼ ಕಾಲದಿಂದಲೂ ಕ್ಲಿಕ್‌ ಆಗುತ್ತ ಬಂದಿವೆ. ಕೆಜಿಎಫ್‌ ಸಕ್ಸಸ್‌ಗೆ ಮುಖ್ಯ ಕಾರಣ ಚಿತ್ರದ ಕಥೆ. ಒಂದು ಚಿತ್ರಕಥೆ, ಸ್ಕ್ರಿಪ್ಟ್ ಹೇಗಿರಬೇಕು ಎಂದು ಪ್ರಶಾಂತ್‌ ನೀಲ್‌ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅನವಶ್ಯಕ ಕಥೆಯ ಎಳೆಗಳನ್ನು ಮಧ್ಯ ಸೇರಿಸುವ ಪ್ರಯತ್ನ ಮಾಡಿಲ್ಲ. ರಾಕಿ ನಡೆದ ಹಾದಿ ಹಾಗು ಅದರ ಸುತ್ತ ನಡೆಯುವ ಘಟನೆಗಳನ್ನೇ ಪ್ರಮುಖವಾಗಿಟ್ಟಿದ್ದಾರೆ. ಅನವಶ್ಯಕ ದೃಶ್ಯಗಳೂ ಇಲ್ಲ. ಹೀರೋಗೆ ಎಲ್ಲಿ ಬಿಲ್ಡಪ್‌ನ ಅವಶ್ಯಕತೆ ಇದೆಯೋ ಅಲ್ಲಿ ನೀಡಿದ್ದಾರೆ. ಸಂಭಾಷಣೆ ಕೂಡ ಆ ಪಾತ್ರಕ್ಕೆ, ಆ ಸನ್ನಿವೇಶಕ್ಕೆ ಹೊಂದುವಂತಿದೆ. ಕೆಜಿಎಫ್‌ ಸಿನಿಮಾದಲ್ಲಿ ತೀರಾ ಉದ್ದ ಸಂಭಾಷಣೆ ಇಲ್ಲ. ಅಲ್ಲಿರುವ ಒನ್‌ಲೈನರ್ಸ್‌, ಪಂಚಿಂಗ್‌ ಡೈಲಾಗ್‌ ಗಮನ ಸೆಳೆಯುತ್ತವೆ.

3. ಹೊಂದುವ ತಾರಾಗಣ

ಒಂದು ಪಾತ್ರವನ್ನು ಸೃಷ್ಟಿಸಿದಾಗ ಅದಕ್ಕೆ ಹೊಂದುವಂತಹ ಸೂಕ್ತ ನಟ, ತಾರೆಯನ್ನು ಆಯ್ದುಕೊಳ್ಳುವುದು ಒಬ್ಬ ನಿರ್ದೇಶಕನ ಜವಾಬ್ಧಾರಿ. ಪ್ರಶಾಂತ ಆ ಕೆಲಸದಲ್ಲಿ ಪರಿಣಿತರಾಗಿದ್ದಾರೆ. ರಾಕಿ ಪಾತ್ರದ ಆದಿಯಾಗಿ ಕೆಜಿಎಫ್‌ನಲ್ಲಿ ಬರುವ ಸಾಮಾನ್ಯ ಕೆಲಸಗಾರರ ವರೆಗೂ ಸೂಕ್ತ ನಟ/ನಟಿಯರನ್ನು ಆಯ್ದುಕೊಂಡಿದ್ದಾರೆ. ಗರುಡ, ಅಧೀರ, ರಮಿಕಾ ಸೇನ್‌ ಹೀಗೆ ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ತೂಕವಿದೆ. ಆ ಪಾತ್ರವನ್ನು ನಿಭಾಯಿಸುವ ಅರ್ಹತೆ ಹೊಂದಿದವರನ್ನೇ ಆರಿಸಿಕೊಂಡಿದ್ದಾರೆ. ಕನ್ನಡದಲ್ಲಿ ಅದ್ಭುತ ನಟರಿದ್ದಾಗ ಸಂಜಯ್‌ ದತ್ತ್‌ ಅಥವಾ ರವೀನಾ ಟಂಡನ್ ಯಾಕೆ? ಎಂಬ ಪ್ರಶ್ನೆ ಮೂಡಿತ್ತು. ಆದರೆ‌ ನಿರ್ದೇಶಕನ ಮನಸ್ಸಿನಲ್ಲಿ ಯಾವ ಪಾತ್ರಕ್ಕೆ ಯಾರು ಹೊಂದುತ್ತಾರೆ ಎಂಬುದು ಸ್ಪಷ್ಟವಾಗಿರಬೇಕು. ಅದನ್ನು ನಿರ್ದೇಶಕ ಪ್ರಶಾಂತ್ ಕೆಜಿಎಫ್‌ನಲ್ಲಿ ಸಾಬೀತು ಮಾಡಿದ್ದಾರೆ.

4. ಸತತ ಪ್ರಮೋಷನ್‌

ಹಿಂದೆಂದೂ ಕಾಣದ ಪ್ರಮೋಷನ್‌ ಕೆಲಸವನ್ನು ಕೆಜಿಎಫ್‌ 2ನ ಹಿನ್ನೆಲೆಯಲ್ಲಿ ಕಾಣಬಹುದಾಗಿತ್ತು. ದೇಶದ ನಾನಾ ಪಟ್ಟಣಗಳಿಗೆ ಹೋಗಿ ಚಿತ್ರತಂಡ ಪ್ರಮೋಷನ್‌ ಮಾಡಿದೆ, ಇಂಟರ್‌ವ್ಯೂಗಳನ್ನು ಕೊಟ್ಟಿದೆ. ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿಕೊಂಡಿದೆ. ಜನರ ಹೃದಯದ ಮಿಡಿತವನ್ನು ಚೆನ್ನಾಗಿ ಅರಿತುಕೊಂಡು, ಸೋಷಿಯಲ್‌ ಮೀಡಿಯಾ ಅಥವಾ ಮೀಡಿಯಾಗಳ ಮೂಲಕ ಆಕರ್ಷಕ ಕಾರ್ಯಕ್ರಮಗಳನ್ನು ಮಾಡಿ, ತಂಡದವರು ಸಂದರ್ಶನಗಳನ್ನು ನೀಡಿ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸಬೇಕು. ಈ ವಿಷಯದಲ್ಲಿ ಕೆಜಿಎಫ್ ತಂಡ ಗೆದ್ದಿದೆ.

5. ಭರವಸೆಯ ಚಿತ್ರತಂಡ

ಚಿತ್ರ ತೆರೆಯ ಮೇಲೆ ಹೇಗೆ ಮೂಡುತ್ತದೆ ಎನ್ನುವುದು ತೆರೆಯ ಹಿಂದೆ ತಂಡ ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಕೆಜಿಎಫ್‌ನ ಛಾಯಾಗ್ರಾಹಕ ಭುವನ್‌ ಗೌಡ ಆದಿಯಾಗಿ ಪ್ರತಿಯೊಬ್ಬರೂ ಪ್ರಶಾಂತ್‌ ಅವರ ಕಲ್ಪನೆಯನ್ನು ತೆರೆಯ ಮೇಲೆ ಮೂಡಿಸುವಲ್ಲಿ ಶ್ರಮಿಸಿದ್ದಾರೆ. ಒಂದು ಸಣ್ಣ ಕಲ್ಲು ಬೀಳುವುದರಿಂದ, ದೊಡ್ಡ ಆಕ್ಷನ್ ದೃಶ್ಯದವರೆಗೂ ಪ್ರತಿಯೊಂದು ಸನ್ನಿವೇಶವನ್ನೂ ಪ್ರೇಕ್ಷಕರು ಗಮನಿಸುತ್ತಾರೆ. ಅದಕ್ಕೆ ತಕ್ಕಂತೆ ಚಿತ್ರತಂಡ ಕಾರ್ಯ ನಿರ್ವಹಿಸಿದೆ. ಪ್ರಶಾಂತ್‌ ನೀಲ್‌ ಪ್ರತಿಭೆ ಇರುವವರಿಗೆ ಅವಕಾಶ ನೀಡುವಲ್ಲಿ ಹಿಂದೇಟು ಹಾಕಿಲ್ಲ. 18 ವರ್ಷದ ಯುವಕನಿಗೆ ಕೂಡ ಎಡಿಟಿಂಗ್‌ನಂತಹ ದೊಡ್ಡ ಜವಾಬ್ಧಾರಿ ನೀಡಿದ್ದು ಗಮನಾರ್ಹ.

6. ಪ್ಯಾನ್‌ ಇಂಡಿಯಾ ತಾರಾಗಣ

ಚಿತ್ರದ ಹೀರೋ ಕನ್ನಡಿಗ ಯಶ್.‌ ಆದರೆ ಚಿತ್ರದ ಇತರ ದೊಡ್ಡ ಪಾತ್ರಗಳಲ್ಲಿ ಹಿಂದಿ ರವೀನಾ ಟಂಡನ್‌, ಸಂಜಯ್‌ ದತ್‌, ದಕ್ಷಿಣ ಭಾರತದ ಅಪೀಲ್‌ ಇರುವ ಪ್ರಕಾಶ್‌ ರೈ ಮುಂತಾದವರಿದ್ದಾರೆ. ಇವರಿಗೆ ಇಡೀ ಭಾರತೀಯ ಚಿತ್ರರಂಗದ ವೀಕ್ಷಕರಲ್ಲಿ ಐಡೆಂಟಿಟಿ ಇದೆ. ಇದು ಚಿತ್ರ ಎಲ್ಲ ಕಡೆಗೂ ರೀಚ್‌ ಮಾಡಿಸಲು ಸುಲಭವಾಗಿದೆ.

7. ಕಠಿಣ ಪರಿಶ್ರಮ

ಒಂದು ಕನಸು ನನಸಾಗಲು ರಾಕಿ ತನ್ನ ಮಾತು ಉಳಿಸಿಕೊಳ್ಳಲು ಪಡುವಷ್ಟೇ ಕಷ್ಟ ಪಡಬೇಕಾಗುತ್ತದೆ. ನಿರಂತರವಾಗಿ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಪೂರ್ತಿ ಮನಸ್ಸನಿನಿಂದ ದುಡಿದಾಗ ಕೆಜಿಎಫ್‌ನಂತ ಸಿನಿಮಾಗಳು ಇನ್ನಷ್ಟು ಬರಲು ಸಾಧ್ಯ.

ಇದನ್ನೂ ಓದಿ: KGF ನಮಗೆ ಕಲಿಸುವ 8 ಪಾಠಗಳು..

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸ್ಯಾಂಡಲ್ ವುಡ್

Priyanka Upendra: ’ಕಮರ್ ಫಿಲಂ ಫ್ಯಾಕ್ಟರಿ’ ಸಹಯೋಗದಲ್ಲಿ ‘ರೆಡ್ ರಾಕ್ ಸ್ಟುಡಿಯೊ’ ಶುಭಾರಂಭ: ಪ್ರಿಯಾಂಕ ಉಪೇಂದ್ರ ಸಾಥ್‌!

Priyanka Upendra : ಬೆಂಗಳೂರಿನ ನಾಗರಬಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ಸುಸಜ್ಜಿತ ರೀತಿಯಲ್ಲಿ, ಆಧುನಿಕ ಶೈಲಿಯಲ್ಲಿ ‘ಕಮರ್ ಫಿಲಂ ಫ್ಯಾಕ್ಟರಿ’ ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣವಾಗಿರುವ ‘ರೆಡ್ ರಾಕ್ ಸ್ಟುಡಿಯೋ’ವನ್ನು ನಟಿ ಪ್ರಿಯಾಂಕಾ ಉಪೇಂದ್ರ ಉದ್ಘಾಟಿಸಿದರು. ನಿರ್ಮಾಪಕ ಯೋಗಿ ದ್ವಾರಕೀಶ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

VISTARANEWS.COM


on

Priyanka Upendra Red Rock Studio in collaboration with Comer Film Factory
Koo

ಬೆಂಗಳೂರು : ಚಲನಚಿತ್ರಗಳು, ಶಾರ್ಟ್ ಫಿಲಂ, ವೆಬ್ ಸಿರೀಸ್ ಮೊದಲಾದವುಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅಗತ್ಯವಿರುವ ತಂತ್ರಜ್ಞಾನ ಮತ್ತು ಸುಸಜ್ಜಿತ ಸೌಲಭ್ಯ ಹೊಂದಿರುವ ‘ರೆಡ್ ರಾಕ್ ಸ್ಟುಡಿಯೋ’ ಇತ್ತೀಚೆಗೆ ಲೋಕಾರ್ಪಣೆಯಾಯಿತು. ಬೆಂಗಳೂರಿನ ನಾಗರಬಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ಸುಸಜ್ಜಿತ ರೀತಿಯಲ್ಲಿ, ಆಧುನಿಕ ಶೈಲಿಯಲ್ಲಿ ‘ಕಮರ್ ಫಿಲಂ ಫ್ಯಾಕ್ಟರಿ’ ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣವಾಗಿರುವ ‘ರೆಡ್ ರಾಕ್ ಸ್ಟುಡಿಯೋ’ವನ್ನು ನಟಿ ಪ್ರಿಯಾಂಕಾ ಉಪೇಂದ್ರ ಉದ್ಘಾಟಿಸಿದರು. ನಿರ್ಮಾಪಕ ಯೋಗಿ ದ್ವಾರಕೀಶ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಇದೇ ವೇಳೆ ಮಾತನಾಡಿದ ನಟಿ ಪ್ರಿಯಾಂಕಾ ಉಪೇಂದ್ರ, ‘ಇಂದಿನ ದಿನಗಳಲ್ಲಿ ಸಿನಿಮಾಗಳಿಗೆ ಕಂಟೆಂಟ್ ಮತ್ತು ಕ್ವಾಲಿಟಿ ತುಂಬ ಮುಖ್ಯ. ಇತ್ತೀಚೆಗೆ ಬರುತ್ತಿರುವ ಸಾಕಷ್ಟು ಹೊಸ ಸಿನಿಮಾ ಮೇಕರ್ಸ್ ತುಂಬ ಹೊಸದಾಗಿ ಯೋಚಿಸುತ್ತಿದ್ದಾರೆ. ಅಂಥವರಿಗೆ ಕೈಗೆಟಕುವ ದರದಲ್ಲಿ ತಂತ್ರಜ್ಞಾನ ಲಭ್ಯತೆಯಿದ್ದರೆ ಗುಣಮಟ್ಟದಲ್ಲಿ ಸಿನಿಮಾ ಮಾಡಬಹುದು. ‘ರೆಡ್ ರಾಕ್ ಸ್ಟುಡಿಯೋ’ದಲ್ಲಿ ಇಂದಿನ ಸಿನಿಮಾ ಮೇಕರ್ಸ್ ಗೆ ಬೇಕಾದ ಎಲ್ಲ ಸೌಲಭ್ಯಗಳಿದ್ದು, ಇದರಿಂದ ಚಿತ್ರರಂಗಕ್ಕೆ ಒಳ್ಳೆಯದಾಗಲಿದೆ’ ಎಂದು ಆಶಿಸಿದರು.

ಇದನ್ನೂ ಓದಿ: Cannes 2024: ಕಾನ್ ಚಿತ್ರೋತ್ಸವದಲ್ಲಿ ಭಾರತೀಯ ಸಿನಿಮಾಗೆ ಪ್ರಶಸ್ತಿ; ಹೊಸ ಇತಿಹಾಸ ಸೃಷ್ಟಿ!

ಇನ್ನು ನೂತನವಾಗಿ ಆರಂಭವಾಗಿರುವ ‘ರೆಡ್ ರಾಕ್ ಸ್ಟುಡಿಯೋ’ದಲ್ಲಿ ಸಿನಿಮಾ ಮತ್ತು ದೃಶ್ಯ ಮಾಧ್ಯಮಗಳಿಗೆ ಬೇಕಾದ ಎಡಿಟಿಂಗ್, ಡಬ್ಬಿಂಗ್, ಡಿ.ಐ, ವಿಎಫ್ಎಕ್ಸ್, ಗ್ರೀನ್ ಮ್ಯಾಟ್ ಶೂಟ್, ಪೋಟೋ ಶೂಟ್, 5.1 &
7.1 ಸೌಂಡ್ ಸಿಸ್ಟಂ, ಅಟ್ಮೋಸ್ ಹೀಗೆ ಎಲ್ಲ ರೀತಿಯ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳಿದ್ದು, ಕೈಗೆಟಕುವ ದರದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಒಂದೇ ಸೂರಿನಡಿ ಬೆಂಗಳೂರಿನಲ್ಲೇ ಮಾಡಬಹುದಾಗಿದೆ.

ಈ ಸಂದರ್ಭದಲ್ಲಿ ಹಾಜರಿದ್ದ ‘ಕಮರ್ ಫಿಲಂ ಫ್ಯಾಕ್ಟರಿ’ಯ ಕಮರ್, ಹಿರಿಯ ನಿರ್ದೇಶಕ ಬುಕ್ಕಾಪಟ್ಟಣ ವಾಸು, ಕೃಷ್ಣ ಮೊದಲಾದವರು ‘ರೆಡ್ ರಾಕ್ ಸ್ಟುಡಿಯೋ’ ದ ಹಿಂದಿನ ಉದ್ದೇಶ, ಲಭ್ಯವಿರುವ ಸೌಲಭ್ಯಗಳು, ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

Continue Reading

ಕಿರುತೆರೆ

Amrithadhare Serial: ಭೂಮಿಗೆ ಒಲವಿನುಸಿರ ಕೊಟ್ಟು ಮರುಜನ್ಮ ನೀಡಿದ ಗೌತಮ್‌!

Amrithadhare Serial: ಈಗ ಭೂಮಿಕಾ ಆಸ್ಪತ್ರೆಯಲ್ಲಿ ಇದ್ದಾಳೆ. ಮರು ಜನ್ಮ ನೀಡಿದ ಗೌತಮ್‌ಗೆ ಥ್ಯಾಂಕ್ಸ್‌ ಹೇಳುತ್ತಾಳೆ. ಈ ಜೋಡಿ ಕಂಡು ಪ್ರೇಕ್ಷಕರು ಕೂಡ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರ ಅಭಿನಯಕ್ಕೂ ಮನಸೋತಿದ್ದಾರೆ. ಎಪಿಸೋಡ್‌ ಕಂಡು ತುಂಬಾ ನೋವು ಮತ್ತೆ ಖುಷಿ ಎರಡು ಒಟ್ಟಿಗೆ ಆಯ್ತು ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

VISTARANEWS.COM


on

Amrithadhare Serial Fans reaction about goutham Bhoomika
Koo

ಧಾರಾವಾಹಿಯಲ್ಲಿ (Amrithadhare Serial) ಪ್ರೇಕ್ಷಕರು ಹೆಚ್ಚಾಗಿ ನಯಸೋದು ನಾಯಕ ನಾಯಕಿ ಒಂದಾಗಬೇಕು ಎಂದು. ಇದೀಗ ಅಮೃತಧಾರೆ ಸೀರಿಯಲ್​ನಲ್ಲಿಯೂ ಅದೇ ರೀತಿ ಆಗಿದ್ದು, ಭೂಮಿಕಾ ಮತ್ತು ಗೌತಮ್​ ಪಾತ್ರಧಾರಿಗಳ ನಟನೆಗೆ ವೀಕ್ಷಕರು ಕಣ್ಣೀರು ಹಾಕಿ, ನೂರುಕಾಲ ಹೀಗೆ ಚೆನ್ನಾಗಿ ಇರಿ ಎಂದು ಹಾರೈಸಿದ್ದಾರೆ.

ಗೌತಮ್‌ನ ಒಲವಿನ ಮಾತು..ಭೂಮಿಕಾಗೆ ಹೊಸ ಉಸಿರು ನೀಡಿದೆ. ಚಿಕ್ಕಮಗಳೂರಿಗೆ ಗೌತಮ್‌ ಮತ್ತು ಭೂಮಿಕಾ ಹೋಗಿದ್ದರು. ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ಜಗಳಕ್ಕೆ ಬಂದಿದ್ದರು. ಆದರೆ ಜಮೀನಿನ ವಿಚಾರ ಗೌತಮ್‌ಗೆ ಗೊತ್ತಿಲ್ಲ. ಇದೇ ನೆಪ ಇಟ್ಟುಕೊಂಡು ಶಕುಂತಲಾ ಇಬ್ಬರನ್ನೂ ಹನಿಮೂನ್‌ಗೆ ಕಳುಹಿಸಿರುತ್ತಾಳೆ. ಅಲ್ಲಿ ಹೋದರೆ ಇಬ್ಬರ ಸಾವು ಖಂಡಿತ ಎನ್ನುವುದು ಆಕೆಯ ಪ್ಲ್ಯಾನ್​. ಅದೇ ರೀತಿ ಭೂಮಿಕಾ ಕಿಡ್‌ನ್ಯಾಪ್‌ ಆಗಿದ್ದಳು.

ಇದನ್ನೂ ಓದಿ: Amrithadhare Serial Kannada: `ಅಮೃತಧಾರೆ’ಸೆಟ್‌ನಲ್ಲಿ ʻನಾನು ನಂದಿನಿʼ ಸ್ಟೆಪ್‌; ಎಲ್ಲೆಲ್ಲೂ  ವಿಕ್ಕಿಪೀಡಿಯಾ ಸಾಂಗ್‌ ಗುಂಗು!

ಅಂತೂ ಗೌತಮ್‌ ಭೂಮಿಕಾ ಹುಡುಕಿ ತನ್ನ  ಉಸಿರು ತುಂಬಿ ಜೀವ ನೀಡಿದ್ದಾನೆ. ಇದಕ್ಕೂ ಮುಂಚೆ ಜೈದೇವ್‌ನು ಭೂಮಿಕಾ ಮುಗಿಸಿದರೆ ರೌಡಿ ಕೆಂಚನಿಗೆ ಹೆಚ್ಚು ಹಣ ನೀಡುವುದಾಗಿ ಹೇಳಿರುತ್ತಾನೆ. ಆದರೆ ಕೆಂಚ ಇನ್ನಷ್ಟು ಹಣ ಸಿಗಬಹುದು ಎಂದು ನೇರವಾಗಿ ಗೌತಮ್‌ಗೆ ಹಣ ಕೇಳುತ್ತಾನೆ. ಹೀಗಾಗಿ ಭೂಮಿಕಾಳನ್ನು ಅಪಹರಿಸುತ್ತಾನೆ.

ಇದೇ ವೇಳೆ ಭೂಮಿಕಾ ಕಿವಿಯೋಲೆ ಮತ್ತು ಬಳೆಗಳನ್ನು ಎಸೆದು ತನ್ನನ್ನು ಈ ಜಾಗದಿಂದ ಕರೆದುಕೊಂಡು ಹೋಗಿರುವ ಬಗ್ಗೆ ಕುರುಹು ಬಿಟ್ಟಿರುತ್ತಾಳೆ. ಗೌತಮ್​ ಮತ್ತು ಆನಂದ್​ ಅದೇ ದಾರಿಯಲ್ಲಿ ಸಾಗುತ್ತಾರೆ. ಕೆಂಚ ಕೊನೆಗೂ ಸಿಕ್ಕಿ ಬಿದ್ದು ಭೂಮಿಕಾಳನ್ನು ಬಚ್ಚಿಟ್ಟಿರುವ ಬಗ್ಗೆ ಹೇಳುತ್ತಾನೆ. ಗೌತಮ್‌ ನೆಲದ ಒಳಗಿನ ಡ್ರಮ್​ನಿಂದ ಭೂಮಿಕಾಳನ್ನು ಹೊರಕ್ಕೆ ತೆಗೆದು ತನ್ನ ಉಸಿರು ನೀಡುತ್ತಾನೆ.

ಈಗ ಭೂಮಿಕಾ ಆಸ್ಪತ್ರೆಯಲ್ಲಿ ಇದ್ದಾಳೆ. ಮರು ಜನ್ಮ ನೀಡಿದ ಗೌತಮ್‌ಗೆ ಥ್ಯಾಂಕ್ಸ್‌ ಹೇಳುತ್ತಾಳೆ. ಈ ಜೋಡಿ ಕಂಡು ಪ್ರೇಕ್ಷಕರು ಕೂಡ ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಬ್ಬರ ಅಭಿನಯಕ್ಕೂ ಮನಸೋತಿದ್ದಾರೆ. ಎಪಿಸೋಡ್‌ ಕಂಡು ತುಂಬಾ ನೋವು ಮತ್ತೆ ಖುಷಿ ಎರಡು ಒಟ್ಟಿಗೆ ಆಯ್ತು ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

Continue Reading

ಬಾಲಿವುಡ್

Janhvi Kapoor: ಪಾಪರಾಜಿಗಳ ಅಸಲಿ ಮುಖ ರಿವೀಲ್‌ ಮಾಡಿದ ಜಾನ್ವಿ ಕಪೂರ್!

Janhvi Kapoor: ಪಾಪರಾಜಿಗಳು, ನಟ ನಟಿಯರು ಎಲ್ಲೇ ಹೋದರು ಬೆನ್ನಹತ್ತಿ ಫೋಟೊ ಕ್ಲಿಕ್ಕಿಸುತ್ತಾರೆ. ಅವರು ಎಲ್ಲಿ ಹೋಗುತ್ತಾರೆ ಎಂಬುದು ಇವರಿಗೆ ಹೇಗೆ ತಿಳಿಯುತ್ತೇ? ತಾರೆಗಳ ಫೋಟೊಗಳನ್ನು ತೆಗೆಯುವುದರಿಂದ ಇವರಿಗೇನು ಲಾಭ ಎನ್ನುವುದರ ಬಗ್ಗೆ ನಟಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಪಾಪರಾಜಿಗಳ ನಿಜ ಮುಖ ಬಯಲು ಮಾಡಿದ್ದಾರೆ. ಅಸಲಿಗೆ ಪಾಪರಾಜಿಗಳು ಹಣ ಕೊಟ್ಟು ಕರೆಸಲಾಗುತ್ತದೆಯಂತೆ ಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Janhvi Kapoor on paparazzi culture
Koo

ಬೆಂಗಳೂರು: ಜಾನ್ವಿ ಕಪೂರ್ (Janhvi Kapoor) ಇತ್ತೀಚೆಗೆ ಬಾಲಿವುಡ್‌ನ ಪಾಪರಾಜಿ ಸಂಸ್ಕೃತಿಯ ( paparazzi culture) ಬಗ್ಗೆ ಚರ್ಚಿಸಿದ್ದಾರೆ. ‘ಮಿಸ್ಟರ್ ಆ್ಯಂಡ್ ಮಿಸಸ್ ಮಹಿ’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಸಂದರ್ಶನ ವೇಳೆ, ಪಾಪರಾಜಿಗಳು ಅವರು ಕ್ಲಿಕ್ ಮಾಡುವ ಫೋಟೊಗಳ ಆಧಾರದ ಮೇಲೆ ಹಣ ಪಡೆಯುತ್ತಾರೆ ಎಂದು ಹೇಳಿದ್ದಾರೆ.

ಪಾಪರಾಜಿಗಳು, ನಟ ನಟಿಯರು ಎಲ್ಲೇ ಹೋದರು ಬೆನ್ನಹತ್ತಿ ಫೋಟೊ ಕ್ಲಿಕ್ಕಿಸುತ್ತಾರೆ. ಅವರು ಎಲ್ಲಿ ಹೋಗುತ್ತಾರೆ ಎಂಬುದು ಇವರಿಗೆ ಹೇಗೆ ತಿಳಿಯುತ್ತೇ? ತಾರೆಗಳ ಫೋಟೊಗಳನ್ನು ತೆಗೆಯುವುದರಿಂದ ಇವರಿಗೇನು ಲಾಭ ಎನ್ನುವುದರ ಬಗ್ಗೆ ನಟಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಪಾಪರಾಜಿಗಳ ನಿಜ ಮುಖ ಬಯಲು ಮಾಡಿದ್ದಾರೆ. ಅಸಲಿಗೆ ಪಾಪರಾಜಿಗಳು ಹಣ ಕೊಟ್ಟು ಕರೆಸಲಾಗುತ್ತದೆಯಂತೆ ಎಂದು ಹೇಳಿಕೊಂಡಿದ್ದಾರೆ.

ʻʻಪ್ರತಿಯೊಬ್ಬ ಸೆಲೆಬ್ರಿಟಿಗಲಳ ಫೋಟೊಗಳು ನಿರ್ದಿಷ್ಟ ಮೊತ್ತಕ್ಕೆ ಮಾರಾಟವಾಗುತ್ತದೆ. ತುಂಬ ವ್ಯಾಲ್ಯೂ ಇದ್ದ ತಾರೆಗಳನ್ನು ಹೆಚ್ಚಾಗಿ ಅವರು ಟಾರ್ಗೆಟ್‌ ಮಾಡುತ್ತಾರೆ. ನಿಮ್ಮ ಕಾರುಗಳನ್ನೇ ಫಾಲೋ ಮಾಡುತ್ತಾರೆ. ಒಮ್ಮೊಮ್ಮೆ ಸಿನಿಮಾ ಪ್ರಚಾರ ಇತ್ಯಾದಿಗಳಿದ್ದರೆ ಹಣ ಕೊಟ್ಟು ಅವರನ್ನು ಕರೆಸಬೇಕಾಗುತ್ತದೆʼʼ ಎಂದಿದ್ದಾರೆ.

ʻʻಈಗಾಗಲೇ ನನ್ನ ಚಿತ್ರದ ಪ್ರಚಾರ ನಡೆಯುತ್ತಿದೆ. ನನ್ನ ಫೋಟೊವನ್ನು ಕ್ಲಿಕ್ಕಿಸಲು ವಿಮಾನ ನಿಲ್ದಾಣಕ್ಕೆ ಅವರನ್ನು ಆಹ್ವಾನಿಸಲಾಗುತ್ತೆ. ನಾನು ಸಿನಿಮಾ ಪ್ರಚಾರ ಮಾಡದಿದ್ದಾಗ ಅಥವಾ ಸಾರ್ವಜನಿಕರಿಂದ ದೂರ ಇದ್ದಾಗ, ಪಾಪರಾಜಿಗಳು ಕೆಲವೊಮ್ಮೆ ನನ್ನ ಕಾರನ್ನು ಫಾಲೊ ಮಾಡುತ್ತಾರೆ. ಕಷ್ಟಪಟ್ಟು ನನ್ನ ಚಿತ್ರಗಳನ್ನು ತೆಗೆಯುತ್ತಾರೆ. ಏಕೆಂದರೆ ಪ್ರತಿ ಚಿತ್ರಕ್ಕೆ ಇಷ್ಟೆಂದು ಅವರು ಹಣ ಪಡೆಯುತ್ತಾರೆʼʼಎಂದರು.

ʻʻಬಾಲಿವುಡ್​ನ ಪ್ರತಿಯೊಬ್ಬ ಸೆಲೆಬ್ರಿಟಿಗೂ ಒಂದೊಂದು ರೇಟ್ ಇದೆ. ಸ್ಟಾರ್ ನಟ-ನಟಿ ಆಗಿದ್ದರೆ ಅವರ ಚಿತ್ರಗಳು ದೊಡ್ಡ ಬೆಲೆಗೆ ಮಾರಾಟವಾಗುತ್ತವೆ. ದೊಡ್ಡ ಸ್ಟಾರ್ ಅಲ್ಲದಿದ್ದರೆ ನೀವೇ ಕರೆ ಮಾಡಿ ಅವರನ್ನು ಕರೆಸಿಕೊಳ್ಳಬೇಕಾಗುತ್ತದೆ. ಹಾಗೆ ಮಾಡುವವರ ಸಂಖ್ಯೆಯೂ ಬಾಲಿವುಡ್​ನಲ್ಲಿ ಹೆಚ್ಚೇ ಇದೆ’ ಎಂದಿದ್ದಾರೆ.

ಇದನ್ನೂ ಓದಿ: Janhvi Kapoor: ಗಾಂಧಿ-ಅಂಬೇಡ್ಕರ್ ʻಜಾತಿವಾದʼದ ಬಗ್ಗೆ ಶ್ರೀದೇವಿ ಮಗಳಿಗೆ ಆಸಕ್ತಿಯಂತೆ!

ಜಾನ್ವಿ ಕಪೂರ್ ಮೇ 31 ರಂದು ಬಿಡುಗಡೆಯಾಗಲಿರುವ ‘ಮಿಸ್ಟರ್ ಅಂಡ್ ಮಿಸಸ್ ಮಹಿ’ ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಜಾನ್ವಿ ಕಪೂರ್ (Janhvi Kapoor) ಮತ್ತು ರಾಜ್‌ಕುಮಾರ್ ರಾವ್ ಅವರು ʻಮಿಸ್ಟರ್ ಆ್ಯಂಡ್ ಮಿಸಸ್ ಮಹಿʼ ಮಹಿಯಲ್ಲಿ ಎರಡನೇ ಬಾರಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಈಗಾಗಲೇ ನಟ ನಟಿ ಚಿತ್ರದ ಪ್ರಚಾರದಲ್ಲಿ ತೊಡಗಿರುವುದು ಕಂಡುಬಂದಿದೆ.. ʻಮಿಸ್ಟರ್ ಆ್ಯಂಡ್ ಮಿಸಸ್ ಮಹಿʼಯಲ್ಲಿ, ರಾಜ್‌ಕುಮಾರ್ ಅವರು ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಜಾನ್ವಿ ಮಹಿಮಾ ಎಂಬ ಪಾತ್ರವನ್ನು ನಿರ್ವಹಿಸಿಲಿದ್ದಾರೆ.

ದೇವರ’ ನಂತರ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ನಟಿಸಲು ಸಿದ್ಧರಾಗಿದ್ದಾರೆ. ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿರುವ 16ನೇ ಚಿತ್ರದಲ್ಲಿ ರಾಮ್ ಚರಣ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. ಜಾನ್ವಿ ಕಪೂರ್ ಕೊನೆಯದಾಗಿ ವರುಣ್ ಧವನ್ ಜತೆ ‘ಬವಾಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಆರ್‌ಸಿ 16’ ಮತ್ತು ‘ದೇವರ’ ಜತೆಗೆ , ಸುಧಾಂಶು ಸರಿಯಾ ಅವರ ‘ಉಲಾಜ್’ ಮತ್ತು ವರುಣ್ ಧವನ್ ಎದುರು ‘ಸನ್ನಿ ಸಂಸ್ಕರಿ ಕಿ ತುಳಸಿ ಕುಮಾರಿ’ ಸಿನಿಮಾಗಳನ್ನು ಹೊಂದಿದ್ದಾರೆ.

ಸುಧಾಂಶು ಸರಿಯಾ ನಿರ್ದೇಶನದ ಉಲಾಜ್ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಗೊಂಡಿದೆ. ಈ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ಅವರು ರಾಜತಾಂತ್ರಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಟೀಸರ್ ನಲ್ಲಿ ಜಾನ್ವಿ ಕಪೂರ್ ಅವರು ದೇಶಭಕ್ತರ ಕುಟುಂಬದಿಂದ ಬಂದ ಯುವ ರಾಜತಾಂತ್ರಿಕ ಸುಹಾನಾ ಪಾತ್ರದಲ್ಲಿ ನಟಿಸಿದ್ದಾರೆ.

Continue Reading

South Cinema

Dhruva Sarja: ಮತ್ತೆ ಗುಡ್‌ ನ್ಯೂಸ್‌ ಕೊಟ್ಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

Dhruva Sarja: ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಟೀಸರ್‌ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿರುವುದು ವಿಶೇಷ.

VISTARANEWS.COM


on

Dhruva Sarja KD Movie Release date announce
Koo

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅಭಿನಯದ ಬಹುನೀರಿಕ್ಷಿತ ʼಮಾರ್ಟಿನ್ʼ ಚಿತ್ರದ ರಿಲೀಸ್ ಡೇಟ್ ಈಗಾಗಲೇ ರಿವೀಲ್‌ ಆಗಿದೆ. ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪಂಚ ಭಾಷೆಗಳಲ್ಲಿ ಅಕ್ಟೋಬರ್‌ 11ಕ್ಕೆ ತೆರೆಗೆ ಅಪ್ಪಲಿಸಲಿದೆ. ಈ ಸುದ್ದಿ ಬೆನ್ನಲ್ಲೇ ಮತ್ತೊಮ್ಮೆ ಧ್ರುವ ಸರ್ಜಾ ಅವರು ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಧ್ರುವ ಸರ್ಜಾ ಮತ್ತು ಪ್ರೇಮ್ ಕಾಂಬಿನೇಷನ್ ಸಿನಿಮಾ ‘ಕೆಡಿ’ ಇದೇ ಡಿಸೆಂಬರ್‌ಗೆ ತೆರೆ ಕಾಣಲಿದೆ. ಮೇಕಿಂಗ್ ವಿಡಿಯೊ ರಿಲೀಸ್ ಮಾಡಿ ಸಿಹಿ ಸುದ್ದಿ ಕೊಟ್ಟಿದೆ ʻಕೆಡಿʼ ಸಿನಿಮಾ ಚಿತ್ರತಂಡ.

ಕೆಡಿ ಸಿನಿಮಾದಲ್ಲಿ ಬಹು ತಾರಾಗಣ ಇದೆ. ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಸತ್ಯವತಿಯಾಗಿ ಎಂಟ್ರಿ ಕೊಟ್ಟಿದ್ದರು. ರೆಟ್ರೊ ಲುಕ್‌ನಲ್ಲಿ ಶಿಲ್ಪಾ ಶೆಟ್ಟಿ ಮಿಂಚಿದ್ದು, ಚೆಂದದ ಸೀರೆಯುಟ್ಟು ಉದ್ದದ ಜಡೆ ಮುಂದಕ್ಕೆ ಬಿಟ್ಟು, ಕೂಲಿಂಗ್ ಗ್ಲ್ಯಾಸ್ ಧರಿಸಿ ರಾಯಲ್ ಆಗಿ ಕಾಣಿಸಿಕೊಂಡಿದ್ದರು. ಈ ಹಿಂದೆ ಚಿತ್ರತಂಡ ರವಿಚಂದ್ರನ್ ಅವರ ಲುಕ್‌ ಹಂಚಿಕೊಂಡಿತ್ತು. ರವಿಚಂದ್ರನ್ ಅವರ ಸಿನಿಮಾ ಫಸ್ಟ್ ಲುಕ್‌ನಲ್ಲಿ ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬಲಗಾಲಿನಲ್ಲಿ ಕಾರಿನ ಡೋರ್ ಓಪನ್ ಮಾಡಿ ಪೋಸ್ ಕೊಟ್ಟಿದ್ದರು. ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರವಿಚಂದ್ರನ್ ಮಿಂಚಿದ್ದರು. ಅಷ್ಟೇ ಅಲ್ಲದೇ ಧ್ರುವ ಸರ್ಜಾ ಅವರು 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದರು.

ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಟೀಸರ್‌ ಪಂಚ ಭಾಷೆಯಲ್ಲಿ ಬಿಡುಗಡೆಗೊಂಡಿರುವುದು ವಿಶೇಷ.

ಇದನ್ನೂ ಓದಿ: Dhruva Sarja: ಬರೋಬ್ಬರಿ 9 ಕೋಟಿ ರೂ.ಗೆ ಮಾರಾಟ ಆಯ್ತು ʻಮಾರ್ಟಿನ್‌ʼ ಆಡಿಯೊ ರೈಟ್ಸ್‌!

ಆರ್ಕೆಸ್ಟ್ರಾ ಗ್ಲಿಂಪ್ಸ್

ಇದೀಗ ಕೆಡಿ ಸಿನಿಮಾ ಆರ್ಕೆಸ್ಟ್ರಾ ಗ್ಲಿಂಪ್ಸ್‌ವನ್ನು ವಿಡಿಯೊ ಶೇರ್‌ ಮಾಡಿಕೊಂಡಿದೆ ಚಿತ್ರತಂಡ. ವಿದೇಶದಲ್ಲಿ ಮ್ಯೂಸಿಕ್‌ ರೆಕಾರ್ಡ್‌ ಮಾಡಲಾಗಿದೆ. ಈ ಬಗ್ಗೆ ಚಿಕ್ಕ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ. ‘ಕೆಡಿ’ ಸಿನಿಮಾದ ಆಡಿಯೋ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಎಂದೂ ಹೇಳಿಕೊಂಡಿದೆ ಚಿತ್ರತಂಡ. ಈ ವರ್ಷವೇ ಧ್ರುವ ನಟನೆಯ ಮಾರ್ಟಿನ್ ಹಾಗು ಕೆಡಿ ಎರಡು ಸಿನಿಮಾಗಳು ತೆರೆಗೆ ಬರಲಿವೆ .

ಮಾರ್ಟಿನ್ ಚಿತ್ರ

ಪೊಗರು ಚಿತ್ರದ ಬಳಿಕ 3 ವರ್ಷಗಳ ನಂತರ ಧ್ರುವ ಸರ್ಜಾ ತೆರೆಗೆ ಎಂಟ್ರಿ ನೀಡುತ್ತಿದ್ದು, ಮಾರ್ಟಿನ್‌ ಹಾಗೂ ಕೆಡಿ ಚಿತ್ರಗಳು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅದ್ಧೂರಿ ಬಜೆಟ್‌ ಮತ್ತು ಮೇಕಿಂಗ್‌ನಿಂದಾಗಿ ಸದ್ದು ಮಾಡಿರುವ ಸಿನಿಮಾ ‘ಮಾರ್ಟಿನ್ ಕ್ಲೈಮ್ಯಾಕ್ಸ್‌ನ ಆ್ಯಕ್ಷನ್‌ ದೃಶ್ಯಗಳಿಗೆ ರಾಮ್‌-ಲಕ್ಷ್ಮಣ್‌ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಒಂದು ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ ಮೂರು ಸಾಹಸ ನಿರ್ದೇಶಕರು ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Continue Reading
Advertisement
Iran-Israel Conflict
ವಿದೇಶ6 mins ago

Iran-Israel Conflict: “ಅಚ್ಚರಿಯ ದಾಳಿ ನಿರೀಕ್ಷಿಸಿ”- ಇಸ್ರೇಲ್‌ಗೆ ಇರಾನ್‌ನಿಂದ ವಾರ್ನಿಂಗ್‌

Congress Karnataka
ಕರ್ನಾಟಕ1 hour ago

Congress Karnataka: ಬದಲಾಗ್ತಾರಾ ಕೆಪಿಸಿಸಿ ಅಧ್ಯಕ್ಷರು?; ಡಿಕೆಶಿ ಹೇಳಿಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆ ಶುರು!

Malaysia Masters Final
ಕ್ರೀಡೆ1 hour ago

Malaysia Masters Final: ಮಲೇಷ್ಯಾ ಮಾಸ್ಟರ್ಸ್ ಫೈನಲ್​ನಲ್ಲಿ ಸೋಲು ಕಂಡ ಪಿ.ವಿ.ಸಿಂಧು

Priyanka Upendra Red Rock Studio in collaboration with Comer Film Factory
ಸ್ಯಾಂಡಲ್ ವುಡ್1 hour ago

Priyanka Upendra: ’ಕಮರ್ ಫಿಲಂ ಫ್ಯಾಕ್ಟರಿ’ ಸಹಯೋಗದಲ್ಲಿ ‘ರೆಡ್ ರಾಕ್ ಸ್ಟುಡಿಯೊ’ ಶುಭಾರಂಭ: ಪ್ರಿಯಾಂಕ ಉಪೇಂದ್ರ ಸಾಥ್‌!

Mob Attacks
ವಿದೇಶ1 hour ago

Mob Attacks: ಕುರಾನ್ ಅಪವಿತ್ರ ನೆಪ; ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ನರ ಮೇಲೆ ಮುಸ್ಲಿಮರ ದಾಳಿ

theft Case
ಚಿಕ್ಕಬಳ್ಳಾಪುರ1 hour ago

Theft Case : ಚಿನ್ನ ಕದಿಯಲು ಬಂದು ಮದುವೆ ಮನೆಯವರಿಂದ ಧರ್ಮದೇಟು ತಿಂದ ಕಳ್ಳ

Flight Emergency Landing
ದೇಶ2 hours ago

Flight Emergency Landing: ತಪ್ಪಿದ ಮತ್ತೊಂದು ಭಾರೀ ಅವಘಡ; ಸ್ಪೈಸ್‌ ಜೆಟ್‌ ವಿಮಾನ ತುರ್ತು ಭೂಸ್ಪರ್ಶ

Lockup Death
ಪ್ರಮುಖ ಸುದ್ದಿ2 hours ago

Lockup Death: ಚನ್ನಗಿರಿ ಠಾಣೆ ಮೇಲೆ ಕಲ್ಲು ತೂರಾಟ ಕೇಸ್; 23 ಕಿಡಿಗೇಡಿಗಳ ಸೆರೆ

theft Case
ಬೆಂಗಳೂರು2 hours ago

Theft case : ಬೆಳಗ್ಗೆ ಕೋಳಿ ಕುಯ್ಯುತ್ತಾರೆ, ರಾತ್ರಿಯಾದರೆ ಸುಲಿಗೆಗೆ ಇಳಿಯುತ್ತಾರೆ!

Amrithadhare Serial Fans reaction about goutham Bhoomika
ಕಿರುತೆರೆ2 hours ago

Amrithadhare Serial: ಭೂಮಿಗೆ ಒಲವಿನುಸಿರ ಕೊಟ್ಟು ಮರುಜನ್ಮ ನೀಡಿದ ಗೌತಮ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ23 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ7 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 week ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 week ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌