Bangalore Kambala: ಬೆಂಗಳೂರು ಕಂಬಳಕ್ಕೆ ಕೌಂಟ್‌ಡೌನ್‌, ಮಿಂಚಿನ ಓಟಕ್ಕೆ 200 ಜೋಡಿ ಕೋಣಗಳು ಸಜ್ಜು! - Vistara News

ಉಡುಪಿ

Bangalore Kambala: ಬೆಂಗಳೂರು ಕಂಬಳಕ್ಕೆ ಕೌಂಟ್‌ಡೌನ್‌, ಮಿಂಚಿನ ಓಟಕ್ಕೆ 200 ಜೋಡಿ ಕೋಣಗಳು ಸಜ್ಜು!

ಬೆಂಗಳೂರು ಕಂಬಳಕ್ಕೆ (Bangalore Kambala) ಕೌಂಟ್ ಡೌನ್ ಶುರುವಾಗಿದ್ದು, ಅರಮನೆ ಆವರಣದಲ್ಲಿ ಸಜ್ಜಾಗಿರುವ ಕಂಬಳದ ಗದ್ದೆಯಲ್ಲಿ ಕೋಣಗಳ ರಿಹರ್ಸಲ್ ಶುರುವಾಗಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ತುಳುನಾಡಿನ ಸಾಂಪ್ರದಾಯಿಕ ಜಾನಪದ ಕ್ರೀಡೆ ಕಂಬಳ ಇಂದಿನಿಂದ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Kambala) ಮೇಳೈಸಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ 200 ಜೋಡಿ ಕೋಣಗಳು ಬೆಂಗಳೂರಿಗೆ ಆಗಮಿಸಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಜನರ ಸಂಸ್ಕೃತಿಯ ಜೊತೆ ತಳುಕು ಹಾಕಿಕೊಂಡಿರುವ, ಜೋಡಿ ಕೋಣಗಳು ಕೆಸರು ಗದ್ದೆಯಲ್ಲಿ ಓಡುವ ಕಂಬಳದ ಕಂಪು, ಇದೀಗ ತುಳುನಾಡಿನಿಂದ ಸಿಲಿಕಾನ್ ಸಿಟಿಗೂ ಹರಡಿದೆ. ಬೆಂಗಳೂರು ಕಂಬಳಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಅರಮನೆ ಆವರಣದಲ್ಲಿ ಸಜ್ಜಾಗಿರುವ ಕಂಬಳದ ಗದ್ದೆಯಲ್ಲಿ ಕೋಣಗಳ ರಿಹರ್ಸಲ್ ಶುರುವಾಗಿದೆ. ರಾಜ- ಮಹಾರಾಜ ಹೆಸರಿನ ಕಂಬಳದ ಗದ್ದೆ ಟ್ರ್ಯಾಕ್‌ನಲ್ಲಿ ಮೇಲ್ಗಡೆ ನಿಶಾನೆ ಧ್ವಜಗಳನ್ನು ಕಟ್ಟಲಾಗಿದ್ದು, ನಿಶಾನೆಗೆ ನೀರು ಚಿಮ್ಮಿಸಲು ಕೋಣಗಳು ಸಜ್ಜಾಗಿವೆ.

ಕಂಬಳಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಬೆಂಗಳೂರು ಕಂಬಳ ಸಮಿತಿ ಅರಮನೆ ಮೈದಾನದಲ್ಲಿ ಮಾಡುತ್ತಿದ್ದು, ಇಂದು ಕೋಣಗಳ ಪ್ರದರ್ಶನ ಓಟದ ರಿಹರ್ಸಲ್ ಮಾಡಲಾಯಿತು. ಸಂಪ್ರದಾಯದಂತೆ ಗದ್ದೆಗೆ ಪೂಜೆ ಮಾಡಿ ಕೋಣಗಳನ್ನು ನೀರಿಗಿಳಿಸಿ ಕೋಣಗಳ ಸಾಮರ್ಥ್ಯ ಪರೀಕ್ಷಿಸಲಾಯಿತು. ರಿಹರ್ಸಲ್‌ನಲ್ಲಿ ನೀರಿನ ಮಟ್ಟ, ಮಣ್ಣಿನ ಗುಣಮಟ್ಟಗಳನ್ನು ಪರಿಶೀಲಿಸಿದರು.

ಮೊದಲ ದಿನ ಅಂದರೆ ಇಂದು (ಶುಕ್ರವಾರ) 10 ಗಂಟೆಗೆ ತುಳು ಕೂಟದ ಉದ್ಘಾಟನಾ ಸಭಾ ಕಾರ್ಯಕ್ರಮ ನಡೆಯಲಿದೆ. ಇಂದು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾತ್ರ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಿನಿಮಾ ನಟ-ನಟಿಯರು ಆಗಮಿಸಲಿದ್ದಾರೆ.‌ ಇಂದೂ ಕೋಣಗಳ ರಿಹರ್ಸಲ್ ಮಾತ್ರ ನಡೆಯಲಿದೆ. ಶನಿವಾರ ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯನವರಿಂದ ಸಂಜೆ 3:30ಕ್ಕೆ ಉದ್ಘಾಟನೆ ಆದ ನಂತರ ಭಾನುವಾರ ಪೂರ್ಣ ಪ್ರಮಾಣದ ಕಂಬಳ ನಡೆಯಲಿದೆ.

ಕಂಬಳದಲ್ಲಿ 200ಕ್ಕೂ ಹೆಚ್ಚು ಕೋಣಗಳು ಭಾಗಿಯಾಗಲಿದ್ದು, ಕಂಬಳಕ್ಕೆಂದೇ ರಾಜ- ಮಹಾರಾಜ ಹೆಸರಿನ ಕಂಬಳದ ಟ್ರ್ಯಾಕ್ ರೆಡಿ ಮಾಡಲಾಗಿದೆ. ಈ ಟ್ರ್ಯಾಕ್ 157 ಮೀ ಉದ್ದ, 8 ಮೀ ಅಗಲವನ್ನು ಒಳಗೊಂಡಿದೆ. 6ರಿಂದ 7 ಲಕ್ಷ ಜನರು ಬರುವ ಸಾಧ್ಯತೆ ಇದ್ದು, ಜನರು ಕೂತು ಕಂಬಳ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.‌ ದೊಡ್ಡ ಎಲ್‌ಇಡಿ ಸ್ಕ್ರೀನ್‌ಗಳನ್ನು ಕೂಡ ಅಳವಡಿಕೆ ಮಾಡಲಾಗಿದ್ದು, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ‌ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ರೈ ಹೇಳಿದ್ದಾರೆ.

ಎಲ್ಲೆಲ್ಲಿಂದ ಬಂದಿವೆ?

ಕಂಬಳಕ್ಕೆ ಮಂಗಳೂರು, ಉಡುಪಿ, ಪುತ್ತೂರು, ಕುಂದಾಪುರ, ಬೈಂದೂರು ಭಾಗದಿಂದ ಕೋಣಗಳು ಬಂದಿವೆ. ರಾತ್ರಿಯೇ ಕೋಣಗಳನ್ನು ಮಾಲೀಕರು ಲಾರಿ, ಪಿಕಪ್‌ಗಳಲ್ಲಿ ತಂದಿದ್ದಾರೆ. ಪ್ಯಾಲೇಸ್ ಗ್ರೌಂಡ್‌ನಲ್ಲಿ ಕೋಣಗಳನ್ನು ಕಟ್ಟಲು ವ್ಯವಸ್ಥೆ ಮಾಡಲಾಗಿದೆ.

4 ವಿಭಾಗದಲ್ಲಿ ಕಂಬಳ ನಡೆಸಲಾಗುತ್ತಿದೆ. ನೇಗಿಲ ಓಟ, ಹಗ್ಗ ಓಟ, ಅಡ್ಡ ಹಲಗೆ, ಕೆನೆ ಹಲಗೆ ಹೀಗೆ ನಾಲ್ಕು ವಿಭಾಗದಲ್ಲಿ ಭಾಗಿಯಾಗಲು ಕೋಣಗಳನ್ನು ತರಲಾಗಿದೆ. 2-6 ಹಲ್ಲುಗಳಿರುವ ಕೋಣಗಳು ಜೂನಿಯರ್ ವಿಭಾಗ, 7-8 ಹಲ್ಲುಗಳಿರುವ ಕೋಣಗಳು ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸುತ್ತವೆ.

ಸಂಚಾರಿ ಪೊಲೀಸರಿಂದ ಮಾರ್ಗಸೂಚಿ

ನ.24ರಿಂದ 26ರವರೆಗೆ ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳ ನಡೆಯಲಿರುವ ಹಿನ್ನೆಲೆಯಲ್ಲಿ 25 ಮತ್ತು 26ರಂದು ಸುಗಮ ಸಂಚಾರಕ್ಕೆ ಟ್ರಾಫಿಕ್‌ ಪೊಲೀಸರು ಮಾರ್ಗಸೂಚಿ ನೀಡಿದ್ದಾರೆ.

ಪ್ರವೇಶ ಮತ್ತು ವಾಹನ ನಿಲುಗಡೆ ಸ್ಥಳಗಳು: ಸಿಬಿಡಿ ಏರಿಯಾದಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಬಳಿಯ ಗೇಟ್ ನಂ 1(ಕೃಷ್ಣ ವಿಹಾರ್) ನಲ್ಲಿ ಪ್ರವೇಶದ ಪಾರ್ಕಿಂಗ್. ಹೆಬ್ಬಾಳ ಕಡೆಯಿಂದ ಬರುವ ವಾಹನಗಳಿಗೆ ಮೇಖ್ರಿ ಸರ್ಕಲ್ ಅಂಡರ್ ಪಾಸ್ ಮೂಲಕ ಗೇಟ್ ನಂ.1ರಿಂದ ಪ್ರವೇಶ.

ಯಶವಂತಪುರ ಕಡೆ ಬರುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ಬಲ ತಿರುವು ಗೇಟ್ ನಂಬರ್ 1ರಲ್ಲಿ ಪ್ರವೇಶ. ಕ್ಯಾಬ್‌ನಲ್ಲಿ ಬರುವವರು ಗೇಟ್ ನಂಬರ್ 2ರ ಮೂಲಕ ಪ್ರವೇಶ. ಗೇಟ್ ನಂಬರ್ 3ರ ಮೂಲಕ ಕ್ಯಾಬ್‌ಗಳಿಗೆ ಎಕ್ಸಿಟ್‌ಗೆ ಸೂಚನೆ ನೀಡಲಾಗಿದೆ. ಇತರೆ ವಾಹನಗಳು ವಾಪಸ್ ಹೋಗುವಾಗ ಜಯಮಹಲ್ ರಸ್ತೆಯ ಅಮಾನುಲ್ಲಾ ಖಾನ್ ಗೇಟ್ ಮೂಲಕ ನಿರ್ಗಮಿಸಬೇಕು.

ಕಾರ್ಯಕ್ರಮ ಹೊರತುಪಡಿಸಿ ಸಂಚರಿಸುವ ಸವಾರರಿಗೆ ಪ್ರತ್ಯೇಕ ಮಾರ್ಗಸೂಚಿ ನೀಡಲಾಗಿದ್ದು, ಮೈಸೂರು ಬ್ಯಾಂಕ್ ರಸ್ತೆ ಮೂಲಕ ವಸಂತ್ ನಗರ ಅಂಡರ್ ಪಾಸ್‌ನಲ್ಲಿ ಹೋಗುವವರು ಅರಮನೆ ರಸ್ತೆ ಮೂಲಕವೇ ಸಂಚರಿಸಬೇಕು.

ಇದನ್ನೂ ಓದಿ: Bangalore Kambala : ಕರಾವಳಿಯಿಂದ ಕೋಣಗಳ ಮೆರವಣಿಗೆ ಶುರು ; ರಾಜಧಾನಿಯಲ್ಲಿ ಕುದಿ ಕಂಬಳ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ಯಾದಗಿರಿಯಲ್ಲಿ ಸಿಡಿಲಿಗೆ ಕುರಿಗಾಹಿ ಸಾವು ; ಬಿರುಗಾಳಿ ಸಹಿತ ಮಳೆಗೆ ಸಿಲುಕಿದ ಪ್ರವಾಸಿಗರು

Karnataka Weather Forecast : ಮಲೆನಾಡು ಹಾಗೂ ಒಳನಾಡಿನಲ್ಲಿ ಮಳೆಯು (rain News) ಅಬ್ಬರಿಸುತ್ತಿದೆ. ಯಾದಗಿರಿಯಲ್ಲಿ ಸಿಡಿಲಿಗೆ ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟರೆ, ಗೋಪಾಲಸ್ವಾಮಿ ಬೆಟ್ಟದಲ್ಲಿ ಬಿರುಗಾಳಿ ಸಹಿತ ಮಳೆಗೆ ಸಿಲುಕಿದ ಪ್ರವಾಸಿಗರು ಪರದಾಡಿದರು.

VISTARANEWS.COM


on

By

Karnataka weather Forecast
Koo

ಯಾದಗಿರಿ/ಚಿಕ್ಕಮಗಳೂರು: ಮಳೆಯ ಆರ್ಭಟ (Karnataka Weather Forecast) ಮುಂದುವರಿದಿದ್ದು, ಸಾವು-ನೋವಿಗೆ ಕಾರಣವಾಗುತ್ತಿದೆ. ಯಾದಗಿರಿಯ ಗುರುಮಠಕಲ್ ತಾಲೂಕಿನ ಭಾಗದಲ್ಲಿ ಸೋಮವಾರ ಗುಡುಗು, ಸಿಡಿಲಿನ ಜತೆಗೆ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಸಿಡಿಲು ಬಡಿದು ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುರುಮಠಕಲ್ ತಾಲೂಕಿನ ರಾಂಪುರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ.

ರಾಂಪುರು ಗ್ರಾಮದ ಕುರಿಗಾಹಿ ಚಂದಪ್ಪ (55) ಮೃತ ದುರ್ದೈವಿ. ಕುರಿಗಾಹಿ ಚಂದಪ್ಪ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡು ಕುರಿ ಮೇಯಿಸಲು ತೆರಳಿದ್ದರು. ಈ ವೇಳೆ ಮೊಬೈಲ್ ಇಟ್ಟುಕೊಂಡ ಭಾಗಕ್ಕೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗೋಪಾಲಸ್ವಾಮಿ ಬೆಟ್ಟದಲ್ಲಿ ಮಳೆಗೆ ಸಿಲುಕಿ ಪ್ರವಾಸಿಗರ ಪರದಾಟ

ಗೋಪಾಲಸ್ವಾಮಿ ಬೆಟ್ಟದಲ್ಲಿ ಜೋರು ಮಳೆಯಾಗುತ್ತಿದ್ದು ಪ್ರವಾಸಿಗರು ಪರದಾಡಿದರು. ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಚೆಕ್ ಪೋಸ್ಟ್ ಸಮೀಪ ನೀರು ನದಿಯಂತೆ ಹರಿಯುತ್ತಿದೆ. ಚೆಕ್ ಪೋಸ್ಟ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ನೂರಾರು ಮಂದಿ ಮಳೆಗೆ ಸಿಲುಕಿದರು. 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ಬೆಟ್ಟದ ಮೇಲಿಂದ ನದಿಯಂತೆ ನೀರು ಹರಿದು ಬಂದಿತ್ತು. ಮಳೆಗೆ ಸಿಲುಕಿ ಪ್ರವಾಸಿಗರ ಪರದಾಟ ಒಂದು ಕಡೆಯಾದರೆ, ಮಳಿಗೆಗಳಿಗೂ ನೀರು ನುಗ್ಗಿತ್ತು.

ಚಾಮರಾಜನಗರದಲ್ಲಿ ಮಳೆಯ ಅಬ್ಬರ

ಚಾಮರಾಜನಗರದಲ್ಲಿ ಎರಡು ಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದೆ. ಜಿಲ್ಲೆಯ ಕೆಲ ಕಡೆ ತುಂತುರು ಮಳೆಯಾದರೆ ಕೆಲವು ಕಡೆ ಭರ್ಜರಿ ಮಳೆಯಾಗಿದೆ. ರಸ್ತೆ ಬದಿಗಳಲ್ಲಿ ನದಿಯಂತೆ ಮಳೆ ನೀರು ಹರಿಯುತ್ತಿದೆ. ಇತ್ತ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟ, ಹಂಗಳ ಗ್ರಾಮದ ಸುತ್ತ ಮುತ್ತ ಭರ್ಜರಿ ಮಳೆಯಾಗಿದೆ.

ಶಿವಮೊಗ್ಗದಲ್ಲಿ ಧಾರಾಕಾರ ಮಳೆ

ಮಲೆನಾಡು ಶಿವಮೊಗ್ಗದಲ್ಲೂ ಧಾರಾಕಾರವಾಗಿ ಮಳೆ ಸುರಿದಿದೆ. ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸೊರಬ, ಭದ್ರಾವತಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಒಂದು ಗಂಟೆಯಿಂದ ಬಿಡುವು ನೀಡದೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ.

ಇದನ್ನೂ ಓದಿ: Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಗುಡುಗು ಸಹಿತ ಮಳೆ

ದಕ್ಷಿಣ ಕನ್ನಡ, ಉಡುಪಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗಾಳಿ (40-50 kmph) ಸಹಿತ ಭಾರಿ ಮಳೆಯಾಗಲಿದೆ.

ಉತ್ತರ ಕನ್ನಡದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 ಕಿ.ಮೀ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಭಾಗದಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿ (40-50 ಕಿ.ಮೀ.) ಮಳೆ ಸಂಭವವಿದೆ.

ಮುಂದಿನ 5 ದಿನಗಳವರೆಗೆ ಕರ್ನಾಟಕದ ಒಳನಾಡಿನಲ್ಲಿ ಗರಿಷ್ಠ ತಾಪಮಾನವು 2-4 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗುವ ಸಾಧ್ಯತೆಯಿದೆ. ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವೊಮ್ಮೆ ಮೇಲ್ಮೈ ಗಾಳಿಯು ಬಲವಾಗಿರುತ್ತದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ಮತ್ತು 21 ಡಿ.ಸೆ ಇರಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಧಾರ್ಮಿಕ

Pretha Maduve: ವಧುವಿನ ಆತ್ಮಕ್ಕೆ ದೊರೆತ ವರ, ಆಷಾಢದಲ್ಲಿ ʻಪ್ರೇತ ಮದುವೆ’ ಫಿಕ್ಸ್

Pretha Maduve: ಜಾಹೀರಾತು ಹಾಗೂ ಈ ಕುರಿತು ಬಂದ ವರದಿಯಿಂದ ನೂರಾರು ಜನರು ಪೂರಕವಾಗಿ ಸ್ಪಂದಿಸಿದ್ದಾರೆ. ನೂರಾರು ಮಂದಿ ಸಂಪರ್ಕಿಸಿದ್ದರು. ವಿವಿಧ ಮಾಧ್ಯಮಗಳಲ್ಲಿಯೂ ಈ ವಿಚಾರ ಬಂದಿತ್ತು. ಇದು ತುಳುನಾಡಿನ ನಂಬಿಕೆಯ ಆಚರಣೆಯಾಗಿದೆ.

VISTARANEWS.COM


on

pretha maduve
Koo

ಮಂಗಳೂರು: ಕರ್ನಾಟಕ ಕರಾವಳಿಯ (karnataka Coastal) ತುಳುನಾಡಿನ (Tulunadu) ವಿಶಿಷ್ಟ ಆಚರಣೆಯಾದ ʼಪ್ರೇತ ಮದುವೆʼಗೆ (Pretha Maduve) ಸಜ್ಜಾಗಿದ್ದ ವಧುವಿಗೆ (bride) ವರ (groom) ಹಾಗೂ ದಿನಾಂಕ ಫಿಕ್ಸ್‌ ಆಗಿದೆ. ಆಷಾಢ (ಆಟಿ) ತಿಂಗಳಲ್ಲಿ ಮದುವೆ ನಡೆಯಲಿದೆ. ಇದು ಎರಡು ʼಆತ್ಮಗಳʼ (Souls) ಮದುವೆಯಾಗಿದ್ದು, ಸಾಂಪ್ರದಾಯಿಕ ಜಾನಪದ (Folk) ರೀತಿಯಲ್ಲಿ ನಡೆಯುತ್ತದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಧುವೊಬ್ಬಳಿಗೆ ʼವರ ಬೇಕಾಗಿದೆ’ ಎಂಬ ಜಾಹೀರಾತು ಭಾರಿ ಸುದ್ದಿಯಾಗಿತ್ತು. ಈ ʼವಧುʼ ಒಂದು ವಾರದ ಮಗುವಾಗಿದ್ದಾಗಲೇ ತೀರಿಕೊಂಡಿದ್ದಳು. ಇದು ನಡೆದು 30 ವರ್ಷಗಳು ಆಗಿವೆ. ಜ್ಯೋತಿಷ್ಯ ಪ್ರಕಾರ ನೋಡಿದಾಗ, ಹೆಣ್ಣುಮಗಳ ಆತ್ಮಕ್ಕೆ ವಿವಾಹ ಆಗಬೇಕು ಎಂದು ಕಂಡುಬಂದಿತ್ತು ಎನ್ನಲಾಗಿದೆ. ಈ ಮಗುವಿಗೆ ನಾಮಕರಣವೂ ಆಗಿರಲಿಲ್ಲ. ನಂತರ ಆಕೆಗೆ “ಪ್ರೇತ ಮದುವೆ’ ಮಾಡಲು ನಿರ್ಧರಿಸಲಾಗಿತ್ತು. ಈ ಕುರಿತು ಜಾಹೀರಾತು ಪ್ರಕಟಿಸಲಾಗಿತ್ತು.

Pretha Maduve

ಇದೀಗ ಈ ವಧುವಿಗೆ ಕಾಸರಗೋಡು ಸಮೀಪದ ಬಾಯಾರು ಕಡೆಯ “ವರ’ನೊಬ್ಬ ನಿಗದಿಯಾಗಿದ್ದಾನೆ. ಮುಂದಿನ “ಆಟಿ’ ತಿಂಗಳಲ್ಲಿ ಪ್ರೇತ ಮದುವೆ ನಡೆಯಲಿದೆ. “ಸುಮಾರು 30 ವರ್ಷದ ಹಿಂದೆ ತೀರಿ ಹೋದಾಕೆಗೆ ಪ್ರೇತ ವರ ಸದ್ಯ ಬೇಕಾಗಿದೆ” ಎಂದು ಪತ್ರಿಕೆಯಲ್ಲಿ ಜಾಹೀರಾತು ಹಾಕಿದ್ದನ್ನು ಗಮನಿಸಿದ ಬಾಯಾರು ಸಮೀಪದ ನಿವಾಸಿ ಸಂಬಂಧಪಟ್ಟವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಮೊದಲ ಕರೆ ಅದಾಗಿತ್ತು. ಬಳಿಕ ಸರಿಹೊಂದುವ ಸುಮಾರು 30ಕ್ಕೂ ಅಧಿಕ ಸಂಬಂಧದವರು ಸಂಪರ್ಕಿಸಿದ್ದರು. ಪ್ರಶ್ನಾಚಿಂತನೆಯಲ್ಲಿ ಅವಲೋಕಿಸಿದಾಗ ಬಾಯಾರುವಿನ ವರ ಅಂತಿಮಗೊಳಿಸುವ ಬಗ್ಗೆ ಸಲಹೆ ಬಂದಿತ್ತು.

ಪ್ರೇತ ಮದುವೆಯಲ್ಲಿ, ಜೀವಂತ ಇರುವಾಗ ನಡೆಯದಿದ್ದ ಮದುವೆ ಕ್ರಮಗಳನ್ನು ಎರಡೂ ಕುಟುಂಬ ವರ್ಗ ಸೇರಿ ಸಾಂಕೇತಿಕವಾಗಿ ನಡೆಸುತ್ತವೆ. ಮುಂದಿನ ರವಿವಾರ “ಪ್ರೇತ ವರ’ನ ಕಡೆಯವರು “ವಧು’ವಿನ ಮನೆಗೆ ಬರಲಿದ್ದಾರೆ. ಬಳಿಕ ನಾವು ಅವರ ಮನೆಗೆ ಹೋಗುತ್ತೇವೆ. ಬಳಿಕ ನಿಶ್ಚಿತಾರ್ಥ. ಆಟಿಯಲ್ಲಿ ಮದುವೆ ನಿಗದಿಯಾಗಿದೆ ಎನ್ನುತ್ತಾರೆ ಪುತ್ತೂರು ನಿವಾಸಿ.

ಜಾಹೀರಾತು ಹಾಗೂ ಈ ಕುರಿತು ಬಂದ ವರದಿಯಿಂದ ನೂರಾರು ಜನರು ಪೂರಕವಾಗಿ ಸ್ಪಂದಿಸಿದ್ದಾರೆ. ನೂರಾರು ಮಂದಿ ಸಂಪರ್ಕಿಸಿದ್ದರು. ವಿವಿಧ ಮಾಧ್ಯಮಗಳಲ್ಲಿಯೂ ಈ ವಿಚಾರ ಬಂದಿತ್ತು. ಇದು ತುಳುನಾಡಿನ ನಂಬಿಕೆಯ ಆಚರಣೆಯಾಗಿದೆ. ವಿವಿಧ ಸಮಾಜದ ಬಂಧುಗಳು ಪ್ರತಿಕ್ರಿಯಿಸಿದ್ದಾರೆ. ನಮ್ಮ ಮನೆಗೆ ಪ್ರೇತ ವರ ಬೇಕಾಗಿದ್ದ ಹಾಗೆಯೇ ನೂರಾರು ಮನೆಗೆ ವಧು-ವರ ಬೇಕಾಗಿದ್ದ ವಿಚಾರ ಆ ಸಂದರ್ಭ ಬೆಳಕಿಗೆ ಬಂತು. ಈ ಕುರಿತು ಜಾಗೃತಿಯೊಂದು ಮೂಡಿದಂತಾಗಿದೆ ಎನ್ನುತ್ತಾರೆ ಸಂಬಂಧಪಟ್ಟ ಮನೆಯವರು.

ಇದನ್ನೂ ಓದಿ: Mother’s Day: ಆಕೆಗಾಗಿ ಕೊಂಚ ಸಮಯ ನೀಡೋಣ; ತಾಯಂದಿರ ದಿನ ಅರ್ಥಪೂರ್ಣವಾಗಿ ಆಚರಿಸೋಣ

Continue Reading

ಮಳೆ

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain : ರಾಜ್ಯದಲ್ಲಿ ಮಳೆ ಅವಾಂತರ ಮುಂದುವರಿದಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.

VISTARANEWS.COM


on

By

Karnataka Rain
ಭಾರಿ ಮಳೆಗೆ ಕೊಚ್ಚಿ ಹೋದ ಬೆಳೆಗಳು
Koo

ಮಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸಮುದ್ರಕ್ಕಿಳಿಯದಂತೆ ಮಂಗಳೂರಿನ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡದಲ್ಲಿ 115 .5 ಮಿಮಿ ನಿಂದ 204 .5 ಮಿಮಿ ಮಳೆಯಾಗುವ (Karnataka Rain) ಸಾಧ್ಯತೆ ಇದ್ದು, ಎರಡು ದಿನಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.

ಕರಾವಳಿಯುದ್ದಕ್ಕೂ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮೀನುಗಾರಿಕೆಗೆ ತೆರಳದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಈಗಾಗಲೇ ಸಮುದ್ರಕ್ಕೆ ತೆರಳಿದ ಮೀನುಗಾರಿಕಾ ಬೋಟ್‌ಗಳಿಗೆ ತಕ್ಷಣ ದಡಕ್ಕೆ ಬರುವಂತೆ ಸೂಚನೆಯನ್ನು ನೀಡಲಾಗಿದೆ. ಗಂಟೆಗೆ 45 ಕಿ.ಮೀ ನಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.

ದಾವಣಗೆರೆಯಲ್ಲಿ ನಿಯಂತ್ರಣ ತಪ್ಪಿ ಕೊಚ್ಚಿಹೋದ ಕಾರು

ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಭರ್ಜರಿ ಮಳೆಯಾಗುತ್ತಿದೆ. ಭಾನುವಾರ ರಾತ್ರಿ ಸುರಿದ ಮಳೆಯಿಂದಾಗಿ ಜಗಳೂರಿನ ಕಾನನಕಟ್ಟೆ ಗ್ರಾಮದ ಸೇತುವೆ ಮೇಲೆ ನೀರು ಹರಿದಿದೆ. ಹರಿಯುತ್ತಿರುವ ನೀರಿನಲ್ಲೇ ಕಾರು ಚಲಾಯಿಸುವಾಗ ಚಾಲಕ‌ನ ನಿಯಂತ್ರಣ ತಪ್ಪಿ ಕಾರು ಕೊಚ್ಚಿಹೋಗಿದೆ. ಕೂಡಲೇ ಸ್ಥಳೀಯರಿಂದ ಕಾರು ಚಾಲಕ ಹಾಗೂ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಜತೆಗೆ ಕೊಚ್ಚಿ ಹೋದ ಕಾರನ್ನು ದಡಕ್ಕೆ ಎಳೆದು ತಂದಿದ್ದಾರೆ. ಜಗಳೂರಿನ ದೊಡ್ಡ ಬೊಮ್ಮನಹಳ್ಳಿ, ಸೇರಿದಂತೆ ಹಲವು ಕಡೆ ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿವೆ.

karnataka rain

ಶಿವಮೊಗ್ಗದಲ್ಲಿ ಮನೆ ಮೇಲೆ ಬಿದ್ದ ಅರಳಿ ಮರ

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಶಿವಮೊಗ್ಗದ ಸೊರಬ ಪಟ್ಟಣದಲ್ಲಿ ಮನೆ ಮೇಲೆ ಬೃಹತ್ ಅರಳಿ ಮರ, ತೆಂಗಿನ ಮರ ಬಿದ್ದು ಹಾನಿಯಾಗಿದೆ. ಭಾಗ್ಯ ಎಂಬುವರಿಗೆ ಸೇರಿದ ಮನೆ ಸಂಪೂರ್ಣ ದ್ವಂಸವಾಗಿದ್ದು,ಭಾಗ್ಯ ಅವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮನೆ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಹಾನಿಯಾಗಿವೆ. ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸೂಕ್ತ ಪರಿಹಾರ ನೀಡುವಂತೆ ಮನೆ ಮಾಲೀಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Rain news: ಚಾರ್ಮಾಡಿ ಘಾಟಿಯಲ್ಲಿ ಮಳೆಗೆ ಸಿಲುಕಿಕೊಂಡ ನೂರಾರು ಪ್ರಯಾಣಿಕರು

ಕೋಲಾರದಲ್ಲಿ ಮಳೆಗೆ ಬೆಳೆಗಳು ನೀರುಪಾಲು

ಕೋಲಾರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಲ್ಲಸಂದ್ರ ಗ್ರಾಮದಲ್ಲಿ ಬೆಳೆಗಳು ನೀರುಪಾಲಾಗಿದೆ. ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಮಲ್ಲಸಂದ್ರ ಗ್ರಾಮದಲ್ಲಿ ನಿನ್ನೆ ಭಾನುವಾರ ಸಂಜೆ ಸುರಿದ ಮಳೆಗೆ ಬೆಳೆಗಳು ಜಲಾವೃತಗೊಂಡಿದೆ. ಮಳೆಯ ನೀರಿನಲ್ಲಿ ಸೌತೆಕಾಯಿ, ಬೀನ್ಸ್, ಹೂ ಬೆಳೆಗಳು ಕೊಚ್ಚಿಹೋಗಿವೆ. ಅವೈಜ್ಞಾನಿಕ ಲೇಔಟ್ ನಿರ್ಮಾಣ ಮಾಡಿರುವುದೇ ಇದಕ್ಕೆಲ್ಲ ಕಾರಣ ಎಂದು ರೈತರು ಆರೋಪಿಸಿದ್ದಾರೆ. ದೊಂಬರಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿರುವ ಲೇಔಟ್‌ನಲ್ಲಿ ಮಳೆಯ ನೀರು ಹರಿಯಲು ಯಾವುದೇ ಕಾಲುವೆ ಮಾಡಿಲ್ಲ. ಇದರಿಂದ ಮಳೆ ಬಿದ್ದಾಗಲೆಲ್ಲಾ ಲೇಔಟ್‌ನಿಂದ ಹರಿದು ಬರುವ ನೀರು ತೋಟಗಳಿಗೆ ನುಗ್ಗುತ್ತಿದೆ ಎಂದು ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನ ಮಳೆ ಅಬ್ಬರಕ್ಕೆ ಕುಸಿದ ಮನೆ

ಚಿಕ್ಕಮಗಳೂರಿನಲ್ಲಿ ಭಾನುವಾರ ರಾತ್ರಿ ಸುರಿದ ಗಾಳಿ-ಮಳೆಗೆ ಮನೆ ಕುಸಿದಿದೆ. ಎನ್.ಆರ್.ಪುರ ತಾಲೂಕಿನ ಕರ್ಕೇಶ್ವರ ಗ್ರಾಮದಲ್ಲಿ ಘಟನೆ ನಡೆದಿದೆ. ಗುಲಾಬಿ ಎಂಬಾಕೆಯ ಮನೆ ಕುಸಿದಿದೆ. ಒಂಟಿ ಮಹಿಳೆಯಾಗಿರುವ ಗುಲಾಬಿ, ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಗಾಳಿ-ಮಳೆಗೆ ಇದ್ದವೊಂದು ಮನೆಯೂ ನೆಲಸಮವಾಗಿದೆ ಎಂದು ಕಂಗಲಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯರಿಂದ ನಿರ್ಗತಿಕ ಮಹಿಳೆಗೆ ಸಹಾಯ ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Drowned In water : ಕೆರೆಯಲ್ಲಿ ಈಜಲು ಹೋದ ಬಾಲಕರು ನೀರುಪಾಲು

Drowned In water : ಬಾಗಲಕೋಟೆಯಲ್ಲಿ ಬಾಲಕರಿಬ್ಬರು ಕೆರೆಯಲ್ಲಿ ಈಜಲು ಹೋಗಿ ನೀರುಪಾಲಾಗಿರುವ ದುರ್ಘಟನೆ ನಡೆದಿದೆ. ಉಡುಪಿಯಲ್ಲಿ ಟಿಪ್ಪರ್‌ಗೆ ಸ್ಕೂಟರ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ (Road Accident) ಮೃತಪಟ್ಟಿದ್ದಾರೆ.

VISTARANEWS.COM


on

By

Drowned in water
Koo

ಬಾಗಲಕೋಟೆ: ಸೋಮವಾರ ಬೆಳಗ್ಗೆ ಈಜಲು ಕೆರೆಗೆ (Drowned In water) ಇಳಿದ ಬಾಲಕರಿಬ್ಬರು ಹೆಣವಾಗಿ ವಾಪಸ್‌ ಆಗಿದ್ದಾರೆ. ಬಾಗಲಕೋಟೆಯ ಬನಹಟ್ಟಿ ಕೆರೆಯಲ್ಲಿ ದುರ್ಘಟನೆ ನಡೆದಿದೆ. ಸಂಜಯ್ ಲಕ್ಷ್ಮಣ ತಳವಾರ್ (12), ಸಮರ್ಥ ಸದಾಶಿವ ತಳವಾರ್ (10) ಮೃತ ದುರ್ದೈವಿಗಳು.

ಸಂಜಯ್‌ ಹಾಗೂ ಸಮರ್ಥ ಈಜಲು ಕೆರೆ ಬಳಿ ಹೋಗಿದ್ದಾರೆ. ಈ ವೇಳೆ ಸಮರ್ಥ್‌ ನೀರಿನಿಂದ ಹೊರಬರಲು ಆಗದೆ ಪರದಾಡಿದ್ದಾನೆ. ಇದನ್ನು ಗಮನಿಸಿದ ಸಂಜಯ್‌ ಮುಳುಗುತ್ತಿದ್ದ ಸಮರ್ಥ್‌ನನ್ನು ಹಿಡಿಯಲು ಹೋಗಿದ್ದಾನೆ. ಆದರೆ ಇಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಾಯದಿಂದ ಪೊಲೀಸರು ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Lok Sabha Election 2024: ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ; ಬಂಧಿತರಾಗಿದ್ದ 46 ಮಂದಿಗೆ ಜಾಮೀನು

Drowned in water.. road Accident

ಉಡುಪಿಯಲ್ಲಿ ಟಿಪ್ಪರ್‌ಗೆ ಸ್ಕೂಟರ್‌ ಡಿಕ್ಕಿ; ಸವಾರ ಸಾವು

ಉಡುಪಿಯ ಕಾರ್ಕಳ ಸಮೀಪದ ಬಳ್ಳಿ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಕಮಲ್ (32) ಮೃತ ದುರ್ದೈವಿ. ಟಿಪ್ಪರ್‌ಗೆ ಸ್ಕೂಟರ್‌ ಡಿಕ್ಕಿ ಹೊಡೆದ ಪರಿಣಾಮ ಕಮಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊರ್ವ ಸ್ಕೂಟರ್ ಸವಾರ ಪ್ರಸನ್ನ ಎಂಬಾತ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ನೈಸ್ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್‌ಗೆ ಸವಾರ ಸಾವು

ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್‌ಗೆ ಬೈಕ್‌ ಸವಾರ ಮೃತಪಟ್ಟಿದ್ದಾನೆ. ವಿನಾಯಕ ಎಸ್ ಪಲ್ಲೆದ್ (20) ಮೃತ ದುರ್ದೈವಿ. ಹಿಂಬದಿ ಸವಾರ ಗಿರೀಶ್ (22) ಎಂಬಾತ ಗಂಭೀರ ಗಾಯಗೊಂಡಿದ್ದಾರೆ. ನೈಸ್ ರಸ್ತೆಯ ಮಂಗನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ಘಟನೆ ನಡೆದಿದೆ. ಜ್ಞಾನಭಾರತಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
IPL 2024
ಕ್ರೀಡೆ52 mins ago

IPL 2024: ಮೋದಿ ಸ್ಟೇಡಿಯಂನಲ್ಲಿ ಫುಟ್ಬಾಲ್​ ಆಡಿದ ಆರ್​ಸಿಬಿ ಆಟಗಾರರು

Cannes Star Fashion
ಫ್ಯಾಷನ್55 mins ago

Cannes Star Fashion: ಕ್ರಾಪ್‌ ಟುಕ್ಸೆಡೊ ಧರಿಸಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದ ನಟ ಪ್ರತೀಕ್‌ ಬಬ್ಬರ್

Reservation in outsourcing
ಪ್ರಮುಖ ಸುದ್ದಿ1 hour ago

Reservation in Outsourcing: ಇನ್ನು ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ; ಸಿದ್ದರಾಮಯ್ಯ ಸರ್ಕಾರದ ಮಹತ್ವದ ಆದೇಶ

Karnataka weather Forecast
ಮಳೆ1 hour ago

Karnataka Weather : ಯಾದಗಿರಿಯಲ್ಲಿ ಸಿಡಿಲಿಗೆ ಕುರಿಗಾಹಿ ಸಾವು ; ಬಿರುಗಾಳಿ ಸಹಿತ ಮಳೆಗೆ ಸಿಲುಕಿದ ಪ್ರವಾಸಿಗರು

MLC N Ravikumar Spoke in North East Graduate Constituency Election Preliminary meeting in hosapete
ವಿಜಯನಗರ1 hour ago

MLC Election: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಎನ್. ರವಿಕುಮಾರ್

Lok Sabha Election
ದೇಶ1 hour ago

Lok Sabha Election: 5ನೇ ಹಂತದಲ್ಲಿ ಕೇವಲ ಶೇ.56ರಷ್ಟು ಮತದಾನ; ಯಾವ ರಾಜ್ಯದಲ್ಲಿ ಹೆಚ್ಚು?

Public Exam Good news for students of classes 5 and 8 and 9 Important decision of Karnataka government
ಶಿಕ್ಷಣ2 hours ago

Public Exam: 5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌; ರಾಜ್ಯ ಸರ್ಕಾರದ ಮಹತ್ವ ನಿರ್ಧಾರ

KKR vs SRH
ಕ್ರೀಡೆ2 hours ago

KKR vs SRH: ನಾಳೆ ಮೊದಲ ಕ್ವಾಲಿಫೈಯರ್‌ ಪಂದ್ಯ; ಗೆದ್ದವರಿಗೆ ನೇರ ಫೈನಲ್‌ ಸೋತವರಿಗೆ ಇನ್ನೊಂದು ಅವಕಾಶ

Air Crashes
ವಿದೇಶ2 hours ago

Air Crashes: ವಿಮಾನ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ 10 ಪ್ರಭಾವಿ ರಾಜಕಾರಣಿಗಳಿವರು

Phone Tapping
ಕರ್ನಾಟಕ2 hours ago

Phone Tapping: ಎಚ್‌ಡಿಕೆ ಫೋನ್‌ ಟ್ಯಾಪ್‌ ಮಾಡೋಕೆ, ಅವರೇನು ಟೆರರಿಸ್ಟಾ? ಎಂದ ಡಿಕೆಶಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ6 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌