ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧ ಮತ ಹಾಕಿದ ಭಾರತದ ನ್ಯಾಯಾಧೀಶ - Vistara News

ರಷ್ಯಾ-ಉಕ್ರೇನ್‌ ಕದನ

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧ ಮತ ಹಾಕಿದ ಭಾರತದ ನ್ಯಾಯಾಧೀಶ

ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವಾಗಿರುವ ಇಂಟರ್‌ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್, ಉಕ್ರೇನ್ ಮೇಲಿನ ಆಕ್ರಮಣವನ್ನು ನಿಲ್ಲಿಸುವಂತೆ ಬುಧವಾರ ರಷ್ಯಾಗೆ ತಾಕೀತು ನೀಡಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಉಕ್ರೇನ್‌ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ಘೋಷಿಸಿರುವ ವಿಚಾರದಲ್ಲಿ ಭಾರತ ತಟಸ್ಥ ನೀತಿ ಅನುಸರಿಸುತ್ತಿದೆ, ಆದ್ರೆ, ಈ ಮಧ್ಯೆ, ಅಂತರಾಷ್ಟ್ರೀಯ ನ್ಯಾಯಾಲಯ (International Court of Justice) ದಲ್ಲಿ ಭಾರತದ ನ್ಯಾಯಾಧೀಶ ದಲ್ವೀರ್‌ ಭಂಡಾರಿ ರಷ್ಯಾ ವಿರುದ್ಧ ಮತ ಚಲಾಯಿಸಿದ್ದಾರೆ.

ವಿಶ್ವಸಂಸ್ಥೆಯ ಉನ್ನತ ನ್ಯಾಯಾಲಯವಾಗಿರುವ ಇಂಟರ್‌ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್, ಉಕ್ರೇನ್ ಮೇಲಿನ ಆಕ್ರಮಣವನ್ನು ನಿಲ್ಲಿಸುವಂತೆ ಬುಧವಾರ ರಷ್ಯಾಗೆ ತಾಕೀತು ನೀಡಿದೆ. ಅಲ್ಲದೆ ರಷ್ಯಾ ಸೇನೆ ಬಳಕೆ ಬಗ್ಗೆ ಐಸಿಜೆ ಅತೀವ ಕಳವಳ ವ್ಯಕ್ತಪಡಿಸಿದೆ.

ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿನ ಭಾರತದ ನ್ಯಾಯಾಧೀಶ ದಲ್ವೀರ್ ಭಂಡಾರಿ ಅವರನ್ನು ಸರ್ಕಾರ ಹಾಗೂ ವಿವಿಧ ಮಿಷನ್‌ಗಳ ಸಂಪೂರ್ಣ ಬೆಂಬಲದೊಂದಿಗೆ ಐಸಿಜೆಗೆ ನಾಮನಿರ್ದೇಶನ ಮಾಡಲಾಗಿತ್ತು. ಉಕ್ರೇನ್ ಮೇಲಿನ ರಷ್ಯಾ ದಾಳಿ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯಲಾಗಿತ್ತು.


ಭಾರತದ ನ್ಯಾಯಾಧೀಶ ದಲ್ವೀರ್‌ ಭಂಡಾರಿ ಅವರು ರಷ್ಯಾ ವಿರುದ್ಧ ಮತ ಚಲಾಯಿಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನ್ಯಾ. ಭಂಡಾರಿ ಅವರು ರಷ್ಯಾ ವಿರುದ್ಧ ಮತ ಚಲಾಯಿಸಿರುವುದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಭಾರತದ ಅಧಿಕೃತ ನಿಲುವಿಗಿಂತ ವಿಭಿನ್ನವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Vladimir Putin: ಐಷಾರಾಮಿ ತಾಣದಲ್ಲಿ ವ್ಲಾದಿಮಿರ್‌ ಪುಟಿನ್‌, ಗರ್ಲ್‌ಫ್ರೆಂಡ್ ರಹಸ್ಯ ವಾಸ, ಯಾರೀಕೆ ಗೆಳತಿ?

ರಷ್ಯದ ರಾಜಧಾನಿ ಮಾಸ್ಕೋದ ವಾಯುವ್ಯದಲ್ಲಿರುವ ಈ ಎಸ್ಟೇಟ್‌ನಲ್ಲಿ ಪುಟಿನ್‌ (Vladimir Putin) ತಮ್ಮ ಬಹುಕಾಲ ಗೆಳತಿ ಮತ್ತು ಆಕೆಯ ಮಕ್ಕಳ ಜತೆಗೆ ಹಾಯಾಗಿದ್ದಾರೆ.
ಪುಟಿನ್‌ ಅವರ ಸಂಗಾತಿಯ ಹೆಸರು ಅಲಿನಾ ಕಬಯೆವಾ, ಈಕೆಗೆ 39 ವರ್ಷ. 2008ರಿಂದಲೂ ಇವರ ಹೆಸರು ಪುಟಿನ್‌ ಜತೆಗೆ ತಳುಕು ಹಾಕಿಕೊಂಡಿದೆ.

VISTARANEWS.COM


on

vladimir putin
Koo

ಕ್ರೆಮ್ಲಿನ್:‌ ಒಂದು ಕಡೆ ಉಕ್ರೇನ್‌ ದೇಶದ ಮೇಲೆ ಸೇನೆ ನುಗ್ಗಿಸಿ ಅಲ್ಲಿನ ಜನರ ಬದುಕನ್ನು ನರಕ ಮಾಡಿರುವ ರಷ್ಯ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) , ತಾನು ಮಾತ್ರ ರಹಸ್ಯ ಐಷಾರಾಮಿ ತಾಣದಲ್ಲಿ, ಗೆಳತಿಯ ಜತೆ ಸುಖವಾಗಿ ಮೋಜು ಮಜಾ ಮಾಡುತ್ತಾ ಇದ್ದಾರೆ.

ಹೌದು, ಅವರು ಇರುವ ಐಷಾರಾಮಿ ಎಸ್ಟೇಟ್‌ನ ಮೌಲ್ಯ ಸುಮಾರು 120 ಮಿಲಿಯ ಡಾಲರ್‌, ಅಂದರೆ ಸುಮಾರು 989 ಕೋಟಿ ರೂಪಾಯಿ. ರಷ್ಯದ ರಾಜಧಾನಿ ಮಾಸ್ಕೋದ ವಾಯುವ್ಯದಲ್ಲಿರುವ ಈ ಎಸ್ಟೇಟ್‌ನಲ್ಲಿ ಪುಟಿನ್‌ ತಮ್ಮ ಬಹುಕಾಲ ಗೆಳತಿ ಮತ್ತು ಆಕೆಯ ಮಕ್ಕಳ ಜತೆಗೆ ಹಾಯಾಗಿದ್ದಾರೆ. ಲೇಕ್‌ ವಾಲ್ಡಾಯ್‌ ತೀರದಲ್ಲಿರುವ ಈ ರಹಸ್ಯ ತಾಣವನ್ನು 2020ರಲ್ಲಿ ನಿರ್ಮಿಸಲಾಗಿದೆ. ಸುಮಾರು 13,000 ಚದರಡಿ ವಿಸ್ತಾರವಾಗಿರುವ ಬಂಗಲೆಯನ್ನು ಪೂರ್ತಿಯಾಗಿ ಮರದಿಂದ ರಷ್ಯನ್‌ ವಾಸ್ತುಶಿಲ್ಪ ಬಳಸಿ ನಿರ್ಮಿಸಲಾಗಿದೆಯಂತೆ.

ಪುಟಿನ್‌ ನೆಲೆಸಿರುವ ತಾಣದ ಬಗ್ಗೆ ಮೊದಲು ಅಲ್ಲಿನ ಪ್ರತಿಪಕ್ಷ ಮುಖಂಡ ಅಲೆಕ್ಸಿ ನವಲ್ನಿ ವರದಿ ಮಾಡಿದ್ದರು. ಇಲ್ಲಿರುವ ಪುಟಿನ್‌ ಅವರ ಬೆಡ್‌ರೂಂ, ಚಿನ್ನದ ಕುರ್ಚಿಗಳು, ಚಿನ್ನದ ತೂಗುದೀಪ ಮುಂತಾದ ಫೋಟೋಗಳು ಬಹಿರಂಗಗೊಂಡಿವೆ.

ಯಾರೀಕೆ ಕಬಯೆವಾ?

ಪುಟಿನ್‌ ಅವರ ಸಂಗಾತಿಯ ಹೆಸರು ಅಲಿನಾ ಕಬಯೆವಾ, ಈಕೆಗೆ 39 ವರ್ಷ. 2008ರಿಂದಲೂ ಇವರ ಹೆಸರು ಪುಟಿನ್‌ ಜತೆಗೆ ತಳುಕು ಹಾಕಿಕೊಂಡಿದೆ. ರಷ್ಯಾದ ಮಾಜಿ ಜಿಮ್ನಾಸ್ಟ್‌ ಕೂಡ ಆಗಿರುವ ಕಬಯೆವಾ ಮೊದಲು ನಾಲ್ಕು ಮಕ್ಕಳಿಗೆ ಸ್ವಿಜರ್ಲೆಂಡ್‌ನಲ್ಲಿ ಜನ್ಮ ನೀಡಿದ್ದರು. ಪುಟಿನ್‌ ಅವರಿಂದ ಐದನೇ ಮಗು ಪಡೆಯುತ್ತಿದ್ದಾರೆ ಎಂಬ ರೂಮರ್‌ಗಳು ಈ ಮೊದಲು ಹರಡಿದ್ದವು. ಅಲಿನಾ ರಷ್ಯಾದ ಸಂಸತ್ತು ಎನಿಸಿಕೊಂಡಿರುವ ಡುಮಾದ ಮಾಜಿ ಸದಸ್ಯರೂ ಆಗಿದ್ದಾರೆ. ರಷ್ಯಾದ ಪರವಾಗಿ ಮಾತನಾಡುವ ಟಿವಿ, ರೇಡಿಯೋ ಹಾಗೂ ಮುದ್ರಣ ಮಾಧ್ಯಮ ಸಂಸ್ಥೆಗಳ ಗುಂಪು ಎನಿಸಿಕೊಂಡಿರುವ ರಷ್ಯಾದ ರಾಷ್ಟ್ರೀಯ ಮಾಧ್ಯಮ ಗುಂಪಿನ ಮುಖ್ಯಸ್ಥರಾಗಿದ್ದಾರೆ.

ಕಬಯೆವಾ ರಷ್ಯಾದ ಅಗ್ರಗಣ್ಯ ಮಹಿಳಾ ಜಿಮ್ನಾಸ್ಟ್. 2000ರಲ್ಲಿ ಸಿಡ್ನಿ ಒಲಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ, 2004ರ ಅಥೆನ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ, ವಿವಿಧ ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಒಟ್ಟು 14 ಪದಕಗಳನ್ನು ಗೆದ್ದುಕೊಟ್ಟಿದ್ದಾರೆ. ಈ ಹಿಂದೆ ಒಬ್ಬ ಪೋಲೀಸ್‌ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳೆಂದು ಹೇಳಲಾಗಿತ್ತು; ಆದರೆ 2008ರಿಂದೀಚೆಗೆ ಪುಟಿನ್ ಜೊತೆ ಸಂಬಂಧ ಹೊಂದಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ಬೈಡೆನ್ ಉಕ್ರೇನ್ ಭೇಟಿ ಎಫೆಕ್ಟ್! ಅಮೆರಿಕ ಜತೆ ಪರಮಾಣು ಒಪ್ಪಂದ ಮಾತುಕತೆ ಇಲ್ಲ ಎಂದ ರಷ್ಯಾ ಅಧ್ಯಕ್ಷ ಪುಟಿನ್

Continue Reading

ದೇಶ

Russia-Ukraine War:‌ ರಷ್ಯಾ ವಿರುದ್ಧ ವಿಶ್ವಸಂಸ್ಥೆ ನಿರ್ಣಯ, ಮತದಾನದಿಂದ ಹೊರಗುಳಿದ ಭಾರತ

ಉಕ್ರೇನ್‌ನ ಮೇಲೆ ರಷ್ಯಾ ಯುದ್ಧ ಸಾರಿ (Russia-Ukraine War) ಒಂದು ವರ್ಷವಾಗಿದೆ. ಅಸಂಖ್ಯ ಜೀವಹಾನಿಯಾಗಿದೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಉಕ್ರೇನ್‌ನಿಂದ ಸೈನ್ಯ ಹಿಂದೆಗೆಯಲು ರಷ್ಯಾವನ್ನು ಆಗ್ರಹಿಸುವ ಗೊತ್ತುವಳಿಯನ್ನು ಮಂಡಿಸಲಾಗಿದೆ.

VISTARANEWS.COM


on

ukraine
Koo

ನವ ದೆಹಲಿ: ಉಕ್ರೇನ್‌ನಿಂದ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ರಷ್ಯಾವನ್ನು ಆಗ್ರಹಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಕುರಿತು ಮತದಾನ ನಡೆದಿದ್ದು, ಈ ಮತದಾನದಲ್ಲಿ ಭಾಗವಹಿಸದೆ ಭಾರತ ಆಚೆಗೆ ಉಳಿದಿದೆ.

ಉಕ್ರೇನ್‌ನ ಮೇಲೆ ರಷ್ಯಾ ಯುದ್ಧ ಸಾರಿ (Russia-Ukraine War) ಒಂದು ವರ್ಷವಾಗಿದೆ. ಅಸಂಖ್ಯ ಜೀವಹಾನಿಯಾಗಿದೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಉಕ್ರೇನ್‌ನಿಂದ ಸೈನ್ಯ ಹಿಂದೆಗೆಯಲು ರಷ್ಯಾವನ್ನು ಆಗ್ರಹಿಸುವ ಗೊತ್ತುವಳಿಯನ್ನು 180 ಸದಸ್ಯ ರಾಷ್ಟ್ರಗಳಿರುವ ವಿಶ್ವಸಂಸ್ಥೆ ಮಹಾಸಭೆಯಲ್ಲಿ ಮತಕ್ಕೆ ಹಾಕಿದಾಗ, 141 ದೇಶಗಳು ಅದನ್ನು ಬೆಂಬಲಿಸಿವೆ. ರಷ್ಯಾ ಸೇರಿದಂತೆ 7 ದೇಶಗಳು ವಿರೋಧಿಸಿವೆ. ಭಾರತ, ಚೀನಾ ಸೇರಿದಂತೆ 32 ದೇಶಗಳು ಈ ಮತದಾನದಿಂದ ಹೊರಗೆ ಉಳಿದಿವೆ.

ಆದರೆ, ಉಕ್ರೇನ್‌ನ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಭಾರತಕ್ಕೆ ಕಳವಳವಿದೆ. ಅಸಂಖ್ಯ ಜೀವಹಾನಿ ಹಾಗೂ ನಿರಾಶ್ರಯಕ್ಕೆ ಕಾರಣವಾಗಿರುವ ಈ ಯುದ್ಧವನ್ನು ಆದಷ್ಟು ಬೇಗ ಕೈಬಿಟ್ಟು ಉಭಯ ದೇಶಗಳು ಮಾತುಕತೆಯ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂಬುದರಲ್ಲಿ ಭಾರತ ವಿಶ್ವಾಸ ಹೊಂದಿದೆ. ಇಂದಿನ ನಿರ್ಣಯ ಈ ವಿಚಾರದಲ್ಲಿ ಸೀಮಿತವಾಗಿರುವುದರಿಂದ ಭಾರತ ಮತದಾನದಿಂದ ಆಚೆ ಉಳಿಯುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ರುಚಿರಾ ಕಾಂಬೋಜ್‌ ಹೇಳಿದ್ದಾರೆ.

ಇದನ್ನೂ ಓದಿ: Russia-Ukraine War : ಯುದ್ಧದ ಭೀಕರತೆ ಹೇಗಿರುತ್ತವೆ ಎಂಬುದಕ್ಕೆ ರಷ್ಯಾ- ಉಕ್ರೇನ್​ ಕದನ ಈ ಚಿತ್ರಗಳೇ ಸಾಕ್ಷಿ

Continue Reading

ತಂತ್ರಜ್ಞಾನ

ಗಾಳಿಯನ್ನೇ ಹೀರುವ vacuum bomb! ಸ್ಮಶಾನವನ್ನೇ ಸೃಷ್ಟಿಸಬಲ್ಲ ಇದರ ಮಾಹಿತಿ ಇಲ್ಲಿದೆ

ಉಕ್ರೇನ್‌ನಲ್ಲಿ ರಷ್ಯಾ ವ್ಯಾಕ್ಯೂಮ್‌ ಬಾಂಬ್‌ (ಥರ್ಮೋಬೇರಿಕ್‌ ಬಾಂಬ್‌)ಗಳನ್ನು ಪ್ರಯೋಗಿಸುತ್ತಿದೆ ಎನ್ನಲಾಗಿದೆ. ಈ vacuum bomb ಬರ್ಬರತೆ ಏನು? ಇಲ್ಲಿದೆ ವಿವರ.

VISTARANEWS.COM


on

vacuum bomb
Koo

— ಗಿರೀಶ್ ಲಿಂಗಣ್ಣ

ವ್ಯಾಕ್ಯೂಮ್ ಬಾಂಬ್ ಅಥವಾ ಥರ್ಮೋಬೇರಿಕ್ ಆಯುಧಗಳು ಎರಡು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಮೊದಲ ಹಂತದಲ್ಲಿ ಇದು ದಹನಕಾರಿ ವಸ್ತುಗಳ ದಟ್ಟ ಮೋಡವನ್ನು ಸೃಷ್ಟಿಸುತ್ತದೆ. ಸಾಮಾನ್ಯವಾಗಿ ಇದು ಇಂಧನ ಅಥವಾ ಅಲ್ಯೂಮಿನಿಯಂನಂತಹ ಲೋಹದ ಸಣ್ಣ ಕಣಗಳನ್ನು ಒಳಗೊಂಡಿರುತ್ತದೆ. ಎರಡನೇ ಹಂತದಲ್ಲಿ ಒಂದು ಸ್ಫೋಟ ನಡೆಯುತ್ತದೆ. ಈ ಸ್ಫೋಟ ಒಂದು ಬೃಹತ್ ಬೆಂಕಿಯ ಚೆಂಡು ಮತ್ತು ಶಾಕ್ ವೇವ್‌ಗಳನ್ನು ಉಂಟು ಮಾಡುತ್ತದೆ. ಇದು ಮೊದಲ ಹಂತದ ದಹನಕಾರಿ ವಸ್ತುಗಳನ್ನು ಸುಡುತ್ತಾ, ಎಲ್ಲೆಡೆ ಬೆಂಕಿ ಹರಡುತ್ತದೆ.

ಈ ಸ್ಫೋಟ ಒಂದು ರೀತಿ ಕಲ್ಲಿದ್ದಲು ಗಣಿಗಳಲ್ಲಿ ಅಥವಾ ಹಿಟ್ಟಿನ ಗಿರಣಿಗಳಲ್ಲಿ ಆಕಸ್ಮಿಕವಾಗಿ ನಡೆಯುವ ಧೂಳಿನ ಸ್ಫೋಟದಂತೆ ಕಂಡುಬರುತ್ತದೆ. ಆ ಧೂಳಿನ ಸ್ಫೋಟಗಳಲ್ಲಿ ಸುಲಭವಾಗಿ ಬೆಂಕಿ ಹಿಡಿಯುವ ಕಣಗಳು ಗಾಳಿಯಲ್ಲಿ ಎಲ್ಲೆಡೆ ಚದುರಿ, ಬಳಿಕ ಬೆಂಕಿ ಹತ್ತಿಕೊಂಡು, ಬೃಹತ್ ಪ್ರಮಾಣದ ಸ್ಫೋಟ ಉಂಟಾಗುವಂತೆ ಮಾಡುತ್ತವೆ.

vacuum bomb

ಥರ್ಮೋಬೇರಿಕ್ ಆಯುಧಗಳನ್ನು ವ್ಯಾಕ್ಯುಮ್ ಬಾಂಬ್ ಎಂದೂ ಕರೆಯಲಾಗುತ್ತದೆ. ಯಾಕೆಂದರೆ ಈ ಸ್ಫೋಟ ಉಪಕರಣದ ಸುತ್ತಲೂ ಇರುವ ಆಮ್ಲಜನಕವನ್ನು ಸಂಪೂರ್ಣವಾಗಿ ಹೀರಿಬಿಡುತ್ತದೆ. ಈ ರೀತಿ ಆದಾಗ ಸ್ಫೋಟದ ಸ್ಥಳದಲ್ಲಿ ಉಳಿದ ವ್ಯಕ್ತಿಗಳು ಉಸಿರಾಡಲೂ ಸಾಧ್ಯವಾಗದಂತೆ ಮಾಡಿ, ಉಸಿರುಕಟ್ಟಿ ಸಾಯುವಂತೆ ಮಾಡುತ್ತದೆ. ಉಸಿರು ಕಟ್ಟಿಸುವುದು ಮಾತ್ರವಲ್ಲದೆ, ಈ ಸ್ಫೋಟದ ಸಂದರ್ಭದಲ್ಲಿ ಉಂಟಾಗುವ ಒತ್ತಡ ಆ ಪ್ರದೇಶದಲ್ಲಿ ಇರುವ ವ್ಯಕ್ತಿಗಳನ್ನು ಸಾಯುವಂತೆ ಮಾಡಿಬಿಡುತ್ತದೆ. ಅದು ಮನುಷ್ಯರ ದೇಹದ ಪ್ರಮುಖ ಅಂಗಗಳನ್ನೂ ಹಾನಿಗೊಳಿಸುತ್ತದೆ. ಉದಾಹರಣೆಗೆ ಅದು ಶ್ವಾಸಕೋಶವನ್ನೇ ಹಾಳುಗೆಡವುತ್ತದೆ.

ಇದನ್ನೂ ಓದಿ | ಸಮರಾಂಕಣ | ಅಗ್ನಿ 5 ಕ್ಷಿಪಣಿ: ಭಾರತದ ಬತ್ತಳಿಕೆಯಲ್ಲಿದೆ ಐಸಿಬಿಎಂ ಅಸ್ತ್ರ

ಥರ್ಮೋಬೇರಿಕ್ ಆಯುಧಗಳ ಪರಿಣಾಮ ಯಾವದೇ ಸಾಂಪ್ರದಾಯಿಕ ಬಾಂಬ್‌ಗಿಂತ ಹೆಚ್ಚಾಗಿರುತ್ತದೆ. ಈ ಸ್ಫೋಟ ಬಹಳ ದೀರ್ಘಕಾಲ ನಡೆಯುತ್ತದೆ ಮಾತ್ರವಲ್ಲದೆ ಆ ಸ್ಫೋಟದ ತಾಪಮಾನವೂ ಅತ್ಯಂತ ಹೆಚ್ಚಾಗಿರುತ್ತದೆ. ಇದರ ಪರಿಣಾಮವಾಗಿ, ಈ ಆಯುಧಗಳು ಬಹುದೊಡ್ಡ ಭೂ ಪ್ರದೇಶವನ್ನೂ ನಾಶಪಡಿಸಬಲ್ಲವು, ಕಟ್ಟಡಗಳನ್ನು ಧ್ವಂಸಗೊಳಿಸಬಲ್ಲವು. ಇದರಲ್ಲಿ ಸೃಷ್ಟಿಯಾಗುವ ಅತ್ಯಂತ ಗರಿಷ್ಠ ಪ್ರಮಾಣದ ತಾಪಮಾನದಲ್ಲಿ ಮಾನವ ದೇಹವೂ ಆವಿಯಾಗಿ ಹೋಗುವ ಸಾಧ್ಯತೆಗಳಿವೆ. ಅದರೊಡನೆ ಥರ್ಮೋಬೇರಿಕ್ ಆಯುಧಗಳಲ್ಲಿ ಬಳಸುವ ಉಪಕರಣಗಳು ಸಾಮಾನ್ಯವಾಗಿ ಅತ್ಯಂತ ವಿಷಕಾರಿಯಾಗಿದ್ದು, ರಾಸಾಯನಿಕ ಆಯುಧಗಳಷ್ಟೇ ಅಪಾಯಕಾರಿಯಾಗಿರುತ್ತವೆ.

ಥರ್ಮೋಬೇರಿಕ್ ಆಯುಧಗಳು ಭಾರೀ ಶಸ್ತ್ರಸಜ್ಜಿತ ಸೇನೆಯ ವಿರುದ್ಧ ಅತ್ಯಂತ ಪರಿಣಾಮಕಾರಿ ಎನ್ನಲಾಗುವುದಿಲ್ಲ. ಆದ್ದರಿಂದ ಅವುಗಳನ್ನು ಟ್ಯಾಂಕ್‌ನಂತಹ ಗುರಿಗಳ ವಿರುದ್ಧ ಬಳಸಿಕೊಳ್ಳಲು ಸಾಧ್ಯವಿಲ್ಲ. ಅವುಗಳನ್ನು ಮೂಲಭೂತ ಸೌಕರ್ಯಗಳನ್ನು ನಾಶಪಡಿಸಲು, ಸೇನಾಪಡೆಗಳನ್ನು ಹಾಗೂ ನಾಗರಿಕರನ್ನು ಸಂಹರಿಸಲು ಬಳಸಬಹುದಾಗಿದೆ.

ಇದನ್ನೂ ಓದಿ | ಸಮರಾಂಕಣ | ಭಾರತದ ನೌಕಾಸೇನೆಯಲ್ಲಿ ಸದ್ದಿಲ್ಲದ ಕ್ರಾಂತಿ- INS ವಿಕ್ರಾಂತ್‌

Continue Reading

ಪ್ರಮುಖ ಸುದ್ದಿ

Ukrainian Soldier | ಬಂಧನಕ್ಕೂ ಮುನ್ನ ಹೇಗಿದ್ದ ಉಕ್ರೇನ್‌ ಯೋಧ ಈಗ ಹೇಗಾದ? ಇದು ರಷ್ಯಾ ಕ್ರೌರ್ಯಕ್ಕೆ ಸಾಕ್ಷಿ

ಮೈಖೈಲೊ ಡೈನೋವ್‌ (Ukrainian Soldier) ಅವರ ದೇಹ ಬಳಲಿದೆ. ಒಂದು ಕೈ ಮುರಿದಂತೆ ಕಾಣಿಸುತ್ತಿದೆ. ಹಿಂಸೆಯಿಂದ ಬೇಸತ್ತು ಮುಖವು ಬಾಡಿಹೋಗಿದೆ. ಸದ್ಯ, ಇವರು ಚೆರ್ನಿಹಿವ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

VISTARANEWS.COM


on

Ukraine
Koo

ಕೀವ್‌: ರಷ್ಯಾ ಆಕ್ರಮಣದಿಂದಾಗಿ ಇಡೀ ಉಕ್ರೇನ್‌ ಅಸ್ಥಿಪಂಜರದಂತಾಗಿದೆ. ಲಕ್ಷಾಂತರ ಜನ ವಲಸೆ ಹೋಗಿದ್ದಾರೆ, ಸಾವಿರಾರು ಮಂದಿ ಮೃತಪಟ್ಟಿದ್ದಾರೆ, ಕಟ್ಟಡಗಳು ಧರೆಗುರುಳಿವೆ, ಮೂಲ ಸೌಕರ್ಯ ಮರೀಚಿಕೆಯಾಗಿದೆ. ಹೀಗಿದ್ದರೂ ರಷ್ಯಾ ಹಿಂದಡಿ ಇಡುತ್ತಿಲ್ಲ. ಇಂತಹ ಪರಿಸ್ಥಿತಿಯ ಮಧ್ಯೆಯೇ ಉಕ್ರೇನ್‌ ಯೋಧರೊಬ್ಬರನ್ನು (Ukrainian Soldier) ರಷ್ಯಾ ಸೇನೆ ಬಿಡುಗಡೆ ಮಾಡಿದ್ದು, ಯೋಧನ ಪರಿಸ್ಥಿತಿಯು ರಷ್ಯಾ ಕ್ರೌರ್ಯಕ್ಕೆ ಕನ್ನಡಿ ಹಿಡಿದಂತಿದೆ.

ಉಕ್ರೇನ್‌ನ ಮರಿಯುಪೋಲ್‌ನಲ್ಲಿ ನಾಲ್ಕು ತಿಂಗಳ ಹಿಂದೆ ಸೈನಿಕ ಮೈಖೈಲೊ ಡೈನೋವ್‌ ಎಂಬುವರನ್ನು ರಷ್ಯಾ ಸೈನಿಕರು ಬಂಧಿಸಿದ್ದರು. ಇತ್ತೀಚೆಗೆ ಡೈನೋವ್‌ ಅವರನ್ನು ಬಿಡುಗಡೆ ಮಾಡಿದ್ದು, ಅವರ ಮೊದಲಿದ್ದ ಆರೋಗ್ಯ ಸ್ಥಿತಿ ಹಾಗೂ ಈಗಿನ ಪರಿಸ್ಥಿತಿಯು ಮನಕಲಕುವಂತಿದೆ. ಡೈನೋವ್‌ ಅವರೇ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ದು, ಪುಟಿನ್‌ ಸೈನಿಕರು ಎಷ್ಟರಮಟ್ಟಿಗೆ ಹಿಂಸೆ ನೀಡಿದ್ದಾರೆ ಎಂಬುದು ತಿಳಿಯುತ್ತದೆ.

ಮೈಖೈಲೊ ಡೈನೋವ್‌ ಅವರ ದೇಹ ಬಳಲಿದೆ. ಒಂದು ಕೈ ಮುರಿದಂತೆ ಕಾಣಿಸುತ್ತಿದೆ. ಹಿಂಸೆಯಿಂದ ಬೇಸತ್ತು ಮುಖವು ಬಾಡಿಹೋಗಿದೆ. ಸದ್ಯ, ಇವರು ಚೆರ್ನಿಹಿವ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಫೋಟೊಗಳನ್ನು ನೋಡಿದ ಜನ ಜಾಲತಾಣಗಳಲ್ಲಿ ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಪ್ಪಂದದಂತೆ ಒಂದು ವಾರದಲ್ಲಿ ರಷ್ಯಾ ಉಕ್ರೇನ್‌ನ ೨೧೫ ಯೋಧರನ್ನು ಬಿಡುಗಡೆ ಮಾಡಲಿದೆ. ಉಕ್ರೇನ್‌ ಸಹ ರಷ್ಯಾ ಯೋಧರನ್ನು ಬಿಡುಗಡೆ ಮಾಡಲಿದೆ. ಆದರೆ, ಉಕ್ರೇನ್‌ ಯೋಧರ ಪರಿಸ್ಥಿತಿ ಹೇಗಿರಲಿದೆ ಎಂಬ ಆತಂಕ ಮೂಡಿದೆ.

ಇದನ್ನೂ ಓದಿ | ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್ಸ್ಕಿಕಾರು ಅಪಘಾತ; ಡಿಕ್ಕಿ ಹೊಡೆದ ವಾಹನದ ಚಾಲಕನಿಗೆ ಗಂಭೀರ ಗಾಯ

Continue Reading
Advertisement
Road Accident
ಬೆಂಗಳೂರು ಗ್ರಾಮಾಂತರ31 seconds ago

Road Accident : ತಲೆ ಮೇಲೆ ಹರಿದ ಲಾರಿ; ಅರಣ್ಯ ಇಲಾಖೆ ಸಿಬ್ಬಂದಿ ಸಾವು, ಮತ್ತೊಬ್ಬ ಗಂಭೀರ

Sonarika Bhadoria
ಕಿರುತೆರೆ9 mins ago

Sonarika Bhadoria: ಹನಿಮೂನ್‌ನ ಹಾಟ್‌ ಫೋಟೊ ಶೇರ್‌ ಮಾಡಿದ ಹಿಂದಿ ಸೀರಿಯಲ್‌ ನಟಿ!

Riyan Parag
ಕ್ರೀಡೆ21 mins ago

Riyan Parag: 3 ದಿನ ನೋವು ನಿವಾರಕ ಮಾತ್ರೆ ಸೇವಿಸಿ ಹಾಸಿಗೆಯಲ್ಲಿದ್ದೆ; ಪಂದ್ಯಶ್ರೇಷ್ಠ ಪ್ರಶಸ್ತಿ ವೇಳೆ ಭಾವುಕರಾದ ​ಪರಾಗ್

Accident Case
ತುಮಕೂರು34 mins ago

Accident Case : ಮರ ಕಡಿಯುವಾಗ ಕರೆಂಟ್‌ ಶಾಕ್‌ಗೆ ಬಲಿ; ಹುಣಸೆ ಹಣ್ಣು ಕೊಯ್ಯುವಾಗ ಬಿದ್ದು ಸಾವು

shani louk photo hamas terrorists
ವಿದೇಶ49 mins ago

Shani Louk Photo: ಹಮಾಸ್‌ ಒತ್ತೆಯಾಳು ಇಸ್ರೇಲಿ ಮಹಿಳೆಯ ನಗ್ನ ದೇಹದ ಫೋಟೋಗೆ ಪ್ರಶಸ್ತಿ; ಆಕ್ರೋಶ; ಉಗ್ರನೇ ತೆಗೆದ ಫೋಟೋನಾ?

Rahul Gandhi And Sonia Gandhi
ದೇಶ50 mins ago

Congress: ಕಾಂಗ್ರೆಸ್‌ಗೆ ಐಟಿ ಮತ್ತೊಂದು ಶಾಕ್;‌ 1,700 ಕೋಟಿ ರೂ. ಟ್ಯಾಕ್ಸ್ ನೋಟಿಸ್‌ ಜಾರಿ‌

Karimani Malika Ninalla play by violinist Aneesh Vidyashankar
ವೈರಲ್ ನ್ಯೂಸ್1 hour ago

Karimani Malika Ninalla: ʻಕರಿಮಣಿ ಮಾಲೀಕʼ ರೀಲ್ಸ್‌ಗೆ ಇನ್ನಷ್ಟು ಮೆರುಗು ನೀಡಿದ ವಯೋಲಿನ್‌ ವಾದಕ!

Karnataka Weather
ಮಳೆ1 hour ago

Karnataka Weather: 28 ವರ್ಷಗಳ ಬಳಿಕ ಬೆಂಗಳೂರಲ್ಲಿ ದಾಖಲೆಯ ತಾಪಮಾನ; ಇನ್ನೊಂದು ವಾರ ಕಾದ ಕೆಂಡ

Sanjiv Bhatt
ದೇಶ1 hour ago

Sanjiv Bhatt: ಡ್ರಗ್ಸ್‌ ಕೇಸ್;‌ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ಗೆ 20 ವರ್ಷ ಜೈಲು!

Kaptaan KL is keeping
ಕ್ರೀಡೆ1 hour ago

LSG vs PBKS: ಗೆಲುವಿನ ಖಾತೆ ತೆರೆದೀತೇ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ತಂಡ?

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ9 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌