ಭಾರತಕ್ಕೆ ಎಚ್ಚರಿಕೆಯೇ ಅಥವಾ ಸಹಕಾರ ಬೇಡಿಕೆಯೇ?: ಇಂದು ಮೋದಿ ಜತೆ ಬೈಡೆನ್‌ ಸಭೆ - Vistara News

ವಿದೇಶ

ಭಾರತಕ್ಕೆ ಎಚ್ಚರಿಕೆಯೇ ಅಥವಾ ಸಹಕಾರ ಬೇಡಿಕೆಯೇ?: ಇಂದು ಮೋದಿ ಜತೆ ಬೈಡೆನ್‌ ಸಭೆ

ಉಕ್ರೇನ್‌ನಲ್ಲಿ ರಷ್ಯಾ ನಡೆಸಿರುವ ನಾಗರಿಕರ ಮೇಲಿನ ದಾಳಿಯನ್ನು ಭಾರತ ಖಂಡಿಸಿದೆಯಾದರೂ ಅದರ ವಿರುದ್ಧ ಪ್ರಸ್ತಾವನೆಗಳಿಗೆ ಬೆಂಬಲ ನೀಡಿಲ್ಲದಿರುವುದು ಅಮೆರಿಕಕ್ಕೆ ಮುಜುಗರ ಉಂಟು ಮಾಡಿದೆ.

VISTARANEWS.COM


on

PM Narendra Modi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸದ್ಯ ನಡೆಯುತ್ತಿರುವ ಜಾಗತಿಕ ವಿದ್ಯಮಾನದ ಹಿನ್ನೆಲೆಯಲ್ಲಿ ಅಮರಿಕ ಅಧ್ಯಕ್ಷ ಜೋ ಬೈಡೆನ್‌ (Joe Biden) ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಮಹತ್ವದ ವರ್ಚುವಲ್‌ ಸಭೆಯನ್ನು ಸೋಮವಾರ ನಡೆಸಲಿದ್ದಾರೆ.

ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧದ ಕುರಿತು ಭಾರತದ ಧೋರಣೆ, ಏಷ್ಯಾದಲ್ಲಿ ಚೀನಾ ವರ್ತನೆ ಸೇರಿ ಅನೇಕ ವಿಚಾರಗಳು ಚರ್ಚೆ ಆಗಲಿದೆ. ಈ ಹಿಂದೆ ಅಮೆರಿಕದ ಭದ್ರತಾ ಸಲಹೆಗಾರ ದಲೀಪ್‌ ಸಿಂಗ್‌ ನೀಡಿದಂತೆ ಮತ್ತೊಂದು ಎಚ್ಚರಿಕೆ ನೀಡಲಿದ್ದಾರೆಯೇ ಅಥವಾ ಈ ವಿಚಾರಗಳಲ್ಲಿ ಭಾರತದ ಸಹಕಾರ ಬೇಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ.

ಮೋದಿ ಹಾಗೂ ಬೈಡನ್‌ ಸಭೆಯ ಕುರಿತು ಅಮೆರಿಕದ ಶ್ವೇತ ಭವನ ಅಧಿಕೃತ ಪ್ರಕಟಣೆ ಹೊರಡಿಸಿದೆ. ಮಾಧ್ಯಮ ಕಾರ್ಯದರ್ಶಿ ಜೆನ್‌ ಸಾಕಿ ಈ ಹೇಳಿಕೆ ಹೊರಡಿಸಿದ್ದು, ಏಪ್ರಿಲ್‌ 11ರ ಸೋಮವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಭಾರತದ ಪ್ರದಾನಿ ನರೇಂದ್ರ ಮೋದಿಯವರ ಜತೆಗೆ ವರ್ಚುವಲ್‌ ಸಭೆ ನಡೆಸಲಿದ್ದಾರೆ. ನಮ್ಮ ಸರ್ಕಾರಗಳು, ಆರ್ಥಿಕತೆ, ನಾಗರಿಕರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಸಬಲಗೊಳಿಸಲು ಈ ಸಭೆ ಎಂದು ಪ್ರಾರಂಭದಲ್ಲಿ ಹೇಳಿದ್ದಾರೆ. ಈ ಸಭೆಯಲ್ಲಿ ಕೋವಿಡ್‌-19 ಮಹಾಮಾರಿಯನ್ನು ಎದುರಿಸುವುದು, ಹವಾಮಾನ ವೈಪರೀತ್ಯವನ್ನು ತಡೆಗಟ್ಟುವುದು, ಜಾಗತಿಕ ಆರ್ಥಿಕತೆಯನ್ನು ಸದೃಢಗೊಳಿಸುವುದು, ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಭದ್ರತೆ, ಪ್ರಜಾಪ್ರಭುತ್ವ ಹಾಗೂ ಸಮೃದ್ಧತೆಯನ್ನು ಉತ್ತೇಜಿಸಲು ಮುಕ್ತ, ಸೂತ್ರಗಳ ಆಧಾರದ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಸ್ಥಾಪಿಸಲು ಇಬ್ಬರೂ ನಾಯಕರು ಸಭೆ ನಡೆಸಲಿದ್ದಾರೆ.

ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಆರ್ಥಿಕ ಚೌಕಟ್ಟ ಅಭಿವೃದ್ಧಿಗೊಳಿಸಲು ಮತ್ತು ಉತ್ತಮ ಗುಣಮಟ್ಟದ ಮೂಲಸೌಕರ್ಯ ನೀಡುವ ಕುರಿತ ಚರ್ಚೆಗಳನ್ನು ನಾಯಕರು ಮುಂದುವರಿಸಲಿದ್ದಾರೆ. ರಷ್ಯಾ ದೇಶವು ಉಕ್ರೇನ್‌ ಮೇಲೆ ನಡೆಸಿರುವ ಅಮಾನವೀಯ ಯುದ್ಧ ಹಾಗೂ ಜಾಗತಿಕ ಆಹಾರ ಸರಬರಾಜು ಮತ್ತು ಉತ್ಪನ್ನ ಮಾರುಕಟ್ಟೆ ಮೇಲೆ ಈ ಯುದ್ಧದ ನಕಾರಾತ್ಮಕ ಪರಿಣಾಮಗಳ ಕುರಿತು ಆತ್ಮೀಯ ಮಾತುಕತೆಯನ್ನು ಮುಂದುವರಿಸಲಿದ್ದಾರೆ ಎಂದು ಹೇಳಿದ್ದಾರೆ.

ಈಗಾಗಲೆ ಉಕ್ರೇನ್‌ ಯುದ್ಧ ವಿಚಾರದಲ್ಲಿ ಭಾರತದ ನಿಲುವು ರಷ್ಯಾ ಪರವಾಗಿ ಇಲ್ಲವಾದರೂ ಅಮೆರಿಕ ಪರವಾಗಿಯಂತೂ ಇಲ್ಲ ಎನ್ನುವುದು ಅನೇಕ ಸಂದರ್ಭಗಳಲ್ಲಿ ಸಾಬೀತಾಗಿದೆ. ರಷ್ಯಾವನ್ನು ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿಸುವ ಸಲುವಾಗಿ ಅಮೆರಿಕ ಪ್ರೇರಿತವಾಗಿ ವಿಶ್ವಸಂಸ್ಥೆಯ ವಿವಿಧ ವೇದಿಕೆಗಳಲ್ಲಿ 10 ಬಾರಿ ಪ್ರಸ್ತಾವನೆಗಳನ್ನು ಮಂಡಿಸಲಾಗಿದೆ. ರಷ್ಯಾ ದೇಶವು ಉಕ್ರೇನ್‌ನಲ್ಲಿ ನಡೆಸಿರುವ ನಾಗರಿಕರ ಮೇಲಿನ ದಾಳಿಯನ್ನು ಭಾರತ ಖಂಡಿಸಿದೆಯಾದರೂ ಈ ಎಲ್ಲ ಪ್ರಸ್ತಾವನೆಗಳ ಸಂದರ್ಭದಲ್ಲೂ ಅನುಪಸ್ಥಿತಿ ಆಗಿದೆ. ಇದು ಅಮೆರಿಕಕ್ಕೆ ಮುಜುಗರ ಉಂಟು ಮಾಡಿದೆ.

ದಲೀಪ್‌ ಸಿಂಗ್‌ ನೀಡಿದ್ದ ಎಚ್ಚರಿಕೆ

ಕೆಲ ದಿನಗಳ ಹಿಂದೆ ಭಾರತಕ್ಕೆ ಆಗಮಿಸಿದ್ದ ಅಮೆರಿಕದ ಆರ್ಥಿಕ ವಿಚಾರಗಳ ಕುರಿತು ಭದ್ರತಾ ಸಲಹೆಗಾರ ದಲೀಪ್‌ ಸಿಂಗ್‌, ಉಕ್ರೇನ್‌ ಹಾಗೂ ರಷ್ಯಾ ವಿಚಾರದಲ್ಲಿ ಭಾರತದ ನಿಲುವಿನಿಂದಾಗಿ ಭವಿಷ್ಯದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದರು. ಇದು ಎಚ್ಚರಿಕೆ ಅಲ್ಲ ಎಂದು ಶ್ವೇತಭವನ ಮಾಧ್ಯಮ ಕಾರ್ಯದರ್ಶಿ ಜೆನ್‌ ಸಾಕಿ ತಳ್ಳಿ ಹಾಕಿದ್ದರಾದರೂ ಇದು ಎಚ್ಚರಿಕೆ ಎಂದೇ ಪರಿಗಣಿತವಾಗಿದೆ. ಇದೀಗ ಬೈಡೆನ್‌ ಮಾತುಕತೆ ವೇಳೆ ಅವರೂ ಎಚ್ಚರಿಕೆ ಸ್ವರೂಪದಲ್ಲಿ ಮಾತನಾಡುತ್ತಾರೆಯೇ ಅಥವಾ ಭಾರತದ ಸಹಕಾರವನ್ನು ಬೇಡುತ್ತಾರೆಯೇ ಕಾದುನೋಡಬೇಕಿದೆ. ಇದು ಭಾರತ- ಅಮೆರಿಕದ ಭವಿಷ್ಯದ ಸಂಬಂಧಗಳ ಮೇಲೆಯೂ ಪರಿಣಾಮ ಬೀರುತ್ತದೆ.

ಮತ್ತಷ್ಟು ಓದಿಗಾಗಿ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತದಿಂದ 76 ಸಾವಿರ ಟನ್ ಇಂಧನ ನೆರವು

ಎರಡನೆಯದಾಗಿ ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಸಮೃದ್ಧಿಯ ಕುರಿತು ಬೈಡೆನ್‌ ಪ್ರಸ್ತಾಪಿಸಲಿದ್ದಾರೆ. ಇದು ಪರೋಕ್ಷವಾಗಿ ಚೀನಾ ಕುರಿತ ಚರ್ಚೆ. ಚೀನಾವು ಏಷ್ಯಾದ ವಿವಿಧ ದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಅನೇಕ ಪ್ರಯತ್ನ ಮಾಡುತ್ತಿದೆ. ಸಣ್ಣ ದೇಶಗಳನ್ನು ಸಾಲದ ಸುಳಿಗೆ ಸಿಲುಕಿಸಿ ತನ್ನ ನಿಯಂತ್ರಣಕ್ಕೆ ಪಡೆಯುವ ಉದಾಹರಣೆಗಳಾಗಿ ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಅಸ್ಥಿರತೆಯೇ ಕಣ್ಣ ಮುಂದಿದೆ. ಜತೆಗೆ, ಉಕ್ರೇನ್‌ ಯುದ್ಧದ ಕುರಿತಂತೆ ಚೀನಾವು ನೇರವಾಗಿ ರಷ್ಯಾಕ್ಕೆ ಬೇಂಬಲ ನೀಡಿರುವುದು ಅಮೆರಿಕ ಕಣ್ಣನ್ನು ಕೆಂಪಾಗಿಸಿದೆ. ಏಷ್ಯಾದಲ್ಲಿ ಚೀನಾವನ್ನು ಕಟ್ಟಿಹಾಕಬೇಕೆಂದರೆ ಭಾರತದ ಸಹಕಾರ ಅಮೆರಿಕಕ್ಕೆ ಮುಖ್ಯವಾಗಿರುವುದರಿಂದ ಬೈಡೆನ್‌ ಮಾತುಕತೆಯು ಮತ್ತಷ್ಟು ಮಹತ್ವ ಪಡೆದಿದೆ.

ಬೈಡೆನ್‌-ಮೋದಿ ಸಭೆಯ ಹಿನ್ನೆಲೆಯಲ್ಲಿಯೇ 2+2 ಸಚಿವರ ಮಟ್ಟದ ಸಭೆಯೂ ನಡೆಯಲಿದೆ ಎಂದು ಶ್ವೇತಭವನ ಮಾಧ್ಯಮ ಪ್ರಕಟಣೆ ತಿಳಿಸಿದೆ. ಅಂದರೆ ಅಮೆರಿಕ ವಿದೇಶಾಂಗ ಸಚಿವ ಆಂಟನಿ ಬ್ಲಿಂಕೆನ್‌ ಹಾಗೂ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ಅಮೆರಿಕ ರಕ್ಷಣಾ ಸಚಿವ ಲಾಯ್ಡ್‌ ಆಸ್ಟಿನ್‌ ಹಾಗೂ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಭೆ ನಡೆಸಲಿದ್ದಾರೆ.

ಮತ್ತಷ್ಟು ಓದಿಗಾಗಿ: Explainer: ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದ್ದೇಕೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Gangster Goldy Brar:”ಶೂಟೌಟ್‌ನಲ್ಲಿ ಸತ್ತಿದ್ದು ಗ್ಯಾಂಗ್‌ಸ್ಟರ್‌ ಗೋಲ್ಡಿ ಬ್ರಾರ್‌ ಅಲ್ಲ”…ವದಂತಿಗೆ ತೆರೆ

Gangster Goldy Brar: ಕ್ಯಾಲಿಫೋರ್ನಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗೋಲ್ಡಿ ಬಾರ್‌ ಸಾವನ್ನಪ್ಪಿದ್ದಾನೆ ಎನ್ನಲಾದ ಸುದ್ದಿ ಸಂಪೂರ್ಣವಾಗಿ ಸುಳ್ಳು. ಘಟನೆಯಲ್ಲಿ ಫೇರ್‌ಮಾಂಟ್‌ ಮತ್ತು ಹಾಲ್ಟ್‌ ಅವೆನ್ಯೂ ಎಂಬಲ್ಲಿ ನಡೆದ ಶೂಟೌಟ್‌ನಲ್ಲಿ ಇಬ್ಬರು ಬಲಿಯಾದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

VISTARANEWS.COM


on

Gangster Goldy Brar
Koo

ವಾಷಿಂಗ್ಟನ್: ಪಂಜಾಬ್​ ಗಾಯಕ ಸಿಧು ಮೂಸೆವಾಲಾ (Sidhu Moosewala) ಹತ್ಯೆಯ ರೂವಾರಿ, ಕೆನಡಾ ಮೂಲದ ಗ್ಯಾಂಗ್​ಸ್ಟರ್​ ಗೋಲ್ಡಿ ಬ್ರಾರ್ (Gangster Goldy Brar) ಅಮೆರಿಕದಲ್ಲಿ ಹತ್ಯೆ ಸುದ್ದಿಗೆ ಟ್ವಿಸ್ಟ್‌ ಸಿಕ್ಕಿದ್ದು, ಇದು ಸುಳ್ಳು ಸುದ್ದಿ ಎಂದು ಅಮೆರಿಕ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ ಫ್ರೆಸನೋ ಪೊಲೀಸರು ಈ ಬಗ್ಗೆ ಸಾಮಾಜಿಕ ಜಾಲತಾಣ(Social Media) ದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕ್ಯಾಲಿಫೋರ್ನಿಯಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗೋಲ್ಡಿ ಬಾರ್‌ ಸಾವನ್ನಪ್ಪಿದ್ದಾನೆ ಎನ್ನಲಾದ ಸುದ್ದಿ ಸಂಪೂರ್ಣವಾಗಿ ಸುಳ್ಳು. ಘಟನೆಯಲ್ಲಿ ಫೇರ್‌ಮಾಂಟ್‌ ಮತ್ತು ಹಾಲ್ಟ್‌ ಅವೆನ್ಯೂ ಎಂಬಲ್ಲಿ ನಡೆದ ಶೂಟೌಟ್‌ನಲ್ಲಿ ಇಬ್ಬರು ಬಲಿಯಾದ್ದಾರೆ.

ಘಟನೆ ಬೆನ್ನಲ್ಲೇ ಮೃತರಲ್ಲಿ ಒಬ್ಬ ಗೋಲ್ಡಿ ಬ್ರಾರ್‌ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಸ್ಪಷ್ಟನೆ ನೀಡಿರುವ ಪೊಲೀಸರು, ಮೃತರ ಫೊಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹರಡಿರುವ ಬೆನ್ನಲ್ಲೇ ಬಗ್ಗೆ ಪ್ರಪಂಚದ ಮೂಲೆ ಮೂಲೆಗಳಿಂದ ಅಧಿಕೃತ ಮಾಹಿತಿಗಾಗಿ ಮನವಿ ಬಂದಿತ್ತು. ಈ ಸುಳ್ಳು ಸುದ್ದಿಯನ್ನು ಹರಡಿದವರು ಯಾರು ಎಂಬ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಇಲ್ಲ. ಈ ವಿಚಾರ ಪ್ರಪಂಚಾದ್ಯಂತ ಕಾಡ್ಗಿಚ್ಚಿನಂತೆ ಹರಡಿತ್ತು. ಆದರೆ ಇದು ಸುಳ್ಳು ಸುದ್ದಿ. ಮೃತ ಖಂಡಿತವಾಗಿಯೂ ಗೋಲ್ಡಿ ಬ್ರಾರ್‌ ಅಲ್ಲ ಎಂದು ಪೊಲೀಸ್‌ ಅಧಿಕಾರಿ ಲೆಫ್ಟಿನೆಂಟ್‌ ವಿಯಮ್‌ ಡೂಲೆ ಹೇಳಿದ್ದಾರೆ.

ಇನ್ನು ಮೃತ ವ್ಯಕ್ತಿಯನ್ನು 37 ವರ್ಷದ ಗ್ಸೇವಿಯರ್‌ ಗಾಲ್ಡ್‌ನೇ ಎಂದು ಗುರುತಿಸಲಾಗಿದ್ದು, ಗುಂಡಿನ ದಾಳಿಯಲ್ಲಿ ಈತ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ ಹೋಟೆಲ್‌ ಫೇರ್‌ಮೌಂಟ್‌ನಲ್ಲಿ ಲಖಬೀರ್‌ ಗ್ಯಾಂಗ್‌ನ ಸದಸ್ಯರು ಗುಂಡಿನ ದಾಳಿ ನಡೆಸಿದ್ದ ಗಂಭೀರವಾಗಿ ಗಾಯಗೊಂಡಿದ್ದ ಗೋಲ್ಡಿ ಬ್ರಾರ್‌ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ನಿನ್ನೆ ವರದಿಯಾಗಿತ್ತು.

ಗೋಲ್ಡಿ ಬ್ರಾರ್ ಎಂದೇ ಕುಖ್ಯಾತನಾಗಿರುವ ಸತೀಂದರ್ಜಿತ್ ಸಿಂಗ್, ವಿದ್ಯಾರ್ಥಿ ವೀಸಾ ಮೂಲಕ 2007ರಲ್ಲಿ ಕೆನಾಡಗೆ ಹೋಗಿದ್ದ. ಕೊಲೆ, ಸುಲಿಗೆ ಸೇರಿದಂತೆ ತನ್ನ ಕ್ರಿಮಿನಲ್ ಚಟುವಟಿಕೆಗಳನ್ನು ಕೆನಡಾದಲ್ಲಿದ್ದುಕೊಂಡೇ ನಡೆಸುತ್ತಿದ್ದ. ಗಡಿಯಾಚೆಗಿನ ಏಜೆನ್ಸಿಯ ಬೆಂಬಲದೊಂದಿಗೆ ಬ್ರಾರ್ ಅನೇಕ ಹತ್ಯೆಗಳಲ್ಲಿ ತೊಡಗಿಸಿಕೊಂಡಿದ್ದ ಮತ್ತು ರಾಷ್ಟ್ರೀಯವಾದಿ ಪರ ನಾಯಕರಿಗೆ ಬೆದರಿಕೆ ಕರೆಗಳನ್ನು ಮಾಡುವಲ್ಲಿ ಮುಂಚೂಣಿಯಲ್ಲಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

ಗೋಲ್ಡಿ ಬ್ರಾರ್ ಗಡಿಯಾಚೆಯಿಂದ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕ ವಸ್ತುಗಳನ್ನು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದ. ಭಾರತದಲ್ಲಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಈತನ ಪಾಲಿದೆ. ಬ್ರಾರ್ ಪಂಜಾಬ್‌ನ ಶಾಂತಿ, ಕೋಮು ಸೌಹಾರ್ದತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದ. ವಿಧ್ವಂಸಕ ಕೃತ್ಯಗಳು, ಭಯೋತ್ಪಾದನಾ ಘಟಕಗಳನ್ನು ಹೆಚ್ಚಿಸುವುದು, ಉದ್ದೇಶಿತ ಹತ್ಯೆಗಳು ಮತ್ತು ಇತರ ದೇಶವಿರೋಧಿ ಚಟುವಟಿಕೆಗಳಿಗೆ ಈತ ಉತ್ತೇಜನ ನೀಡುತ್ತಿದ್ದ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2022ರ ಮೇ 29ರಂದು ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಹತ್ಯೆ ಮಾಡಲಾಗಿದ್ದು, ಈತನೇ ಮಾಸ್ಟರ್‌ಮೈಂಡ್‌ ಎಂದು ತಿಳಿದುಬಂದಿದೆ. ವರ್ಷಾರಂಭದಲ್ಲಿಯೇ ಈತನನ್ನು ಭಯೋತ್ಪಾದಕ ಎಂದು ಭಾರತ ಸರ್ಕಾರ ಘೋಷಿಸಿತ್ತು. ಸಿಧು ಹತ್ಯೆಯ ಮಾಸ್ಟರ್​ ಮೈಂಡ್​ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿ ಎಂಬುದು ಸ್ಪಷ್ಟವಾಗಿದೆ. ಬಿಷ್ಣೋಯಿಯನ್ನು ಈಗಾಗಲೇ ಎನ್​ಐಎ ಕಸ್ಟಡಿಗೆ ತೆಗೆದುಕೊಂಡಿದೆ. ಈ ಬ್ರಾರ್​ ಕೂಡ ಅದೇ ಬಿಷ್ಣೋಯಿ ಗ್ಯಾಂಗ್​​ನವನು.

Continue Reading

ವಿದೇಶ

Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Google Layoff: ವಿಶ್ವದ ಅತಿದೊಡ್ಡ ಟೆಕ್ ಕಂಪನಿ ಎನಿಸಿಕೊಂಡಿರುವ ಆಲ್ಫಾಬೆಟ್‌ ಇಂಕ್‌ ಒಡೆತನದ ಗೂಗಲ್‌ ಮತ್ತೆ ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಗೂಗಲ್ ತನ್ನ ʼಕೋರ್ ತಂಡʼದಿಂದ ಸುಮಾರು 200 ಉದ್ಯೋಗಿಗಳನ್ನು ಕೈ ಬಿಟ್ಟಿದೆ. ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಂಜಿನಿಯರಿಂಗ್ ತಂಡದಿಂದ ಕನಿಷ್ಠ 50 ಉದ್ಯೋಗಿಗಳನ್ನು ವಜಾಗೊಳಿಸಲಾಗಿದ್ದು, ಭಾರತ ಮತ್ತು ಮೆಕ್ಸಿಕೊದಲ್ಲಿನ ಈ ಸ್ಥಾನಗಳಿಗೆ ಬದಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಕೆಲಸದಿಂದ ವಜಾಗೊಳಿಸಲ್ಪಟ್ಟ ಕಾರ್ಮಿಕರು ಕಂಪನಿಯಲ್ಲಿ ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕೃತರು ಮಾಹಿತಿ ನೀಡಿದ್ದಾರೆ.

VISTARANEWS.COM


on

Google Layoff
Koo

ನವದೆಹಲಿ: ವಿಶ್ವದ ಅತಿದೊಡ್ಡ ಟೆಕ್ ಕಂಪನಿ ಎನಿಸಿಕೊಂಡಿರುವ ಆಲ್ಫಾಬೆಟ್‌ ಇಂಕ್‌ ಒಡೆತನದ ಗೂಗಲ್‌ ಮತ್ತೆ ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ (Google Layoff). ಗೂಗಲ್ ತನ್ನ ʼಕೋರ್ ತಂಡʼದಿಂದ ಸುಮಾರು 200 ಉದ್ಯೋಗಿಗಳನ್ನು ಕೈ ಬಿಟ್ಟಿದೆ. ಮಾತ್ರವಲ್ಲ ಕಂಪನಿಯು ತನ್ನ ಪುನರ್‌ ರಚನೆ ಪ್ರಕ್ರಿಯೆಯನ್ನು ಮುಂದುವರಿಸುತ್ತಿರುವುದರಿಂದ ವೆಚ್ಚವನ್ನು ಕಡಿತಗೊಳಿಸುವ ಉದ್ದೇಶದಿಂದ ಕೆಲವು ಉದ್ಯೋಗಗಳನ್ನು ವಿದೇಶಕ್ಕೆ ಸ್ಥಳಾಂತರಿಸಿದೆ ಎಂದು ಮೂಲಗಳು ತಿಳಿಸಿವೆ.

ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಂಜಿನಿಯರಿಂಗ್ ತಂಡದಿಂದ ಕನಿಷ್ಠ 50 ಉದ್ಯೋಗಿಗಳನ್ನು ವಜಾಗೊಳಿಸಲಾಗಿದ್ದು, ಭಾರತ ಮತ್ತು ಮೆಕ್ಸಿಕೊದಲ್ಲಿನ ಈ ಸ್ಥಾನಗಳಿಗೆ ಬದಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಗೂಗಲ್‌ನ ʼಕೋರ್ ತಂಡʼವು ಬಳಕೆದಾರರ ಸುರಕ್ಷತೆಗೆ ಕಾರ್ಯ ನಿರ್ವಹಿಸುತ್ತದೆ. ಜತೆಗೆ ತಾಂತ್ರಿಕ ಅಡಿಪಾಯವನ್ನು ಅಭಿವೃದ್ಧಿ ಪಡಿಸುತ್ತದೆ.

ಅಧಿಕೃತರು ಹೇಳಿದ್ದೇನು?

ಗೂಗಲ್ ಡೆವಲಪರ್ ಇಕೋಸಿಸ್ಟಮ್‌ನ ಉಪಾಧ್ಯಕ್ಷ ಅಸಿಮ್ ಹುಸೇನ್ ಕಳೆದ ವಾರ ಇಮೇಲ್‌ ಮೂಲಕ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ್ದರು. ಇದು ತಮ್ಮ ತಂಡದ ಅತಿದೊಡ್ಡ ಉದ್ಯೋಗಿಗಳ ಕಡಿತ ಎಂದು ಮೂಲಗಳು ತಿಳಿಸಿವೆ. ಕೆಲಸದಿಂದ ವಜಾಗೊಳಿಸಲ್ಪಟ್ಟ ಕಾರ್ಮಿಕರು ಕಂಪನಿಯಲ್ಲಿ ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಅಧಿಕೃತರು ಹೇಳಿದ್ದಾರೆ. ಬೆಂಗಳೂರು, ಮೆಕ್ಸಿಕೊ ಮತ್ತು ಡಬ್ಲಿನ್‌ ನಗರಗಳಲ್ಲಿ ಕಂಪನಿಯ ಕಾರ್ಯಾಚರಣೆ ವಿಸ್ತರಿಸಲು ನಿರ್ಧರಿಸಿದೆ.

ಹಿಂದೆಯೂ ನಡೆದಿತ್ತು ಉದ್ಯೋಗ ಕಡಿತ

ಕೆಲವು ದಿನಗಳ ಹಿಂದೆಯೂ ಗೂಗಲ್‌ ಹಲವು ಉದ್ಯೋಗಿಗಳನ್ನು ಕಡಿತಗೊಳಿಸಿತ್ತು. ಕೃತಕ ಬುದ್ಧಿಮತ್ತೆ ಹಾಗೂ ಸ್ವಯಂಚಾಲಿತ ವ್ಯವಸ್ಥೆಯ ಅಳವಡಿಕೆಗೆ ಕಂಪನಿ ಮುಂದಾಗಿದೆ. ಹೀಗಾಗಿ ಈ ವರ್ಷದ ಜನವರಿಯಲ್ಲಿ ಎಂಜಿನಿಯರಿಂಗ್‌, ಹಾರ್ಡ್‌ವೇರ್‌ ಮತ್ತು ಅಸಿಸ್ಟಂಟ್‌ ಟೀಮ್‌ ವಿಭಾಗಗಳಿಂದ ಹಲವು ಉದ್ಯೋಗಿಗಳನ್ನು ವಜಾಗೊಳಿಸಿತ್ತು.

ಆ ವೇಳೆ ನೂರಾರು ಹಾರ್ಡ್‌ವೇರ್‌ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದರು. ಪಿಕ್ಸೆಲ್ (Pixel), ನೆಸ್ಟ್ (Nest) ಮತ್ತು ಫಿಟ್‌ಬಿಟ್‌ (Fitbit)ನಂತಹ ಉತ್ಪನ್ನಗಳನ್ನು ಮೇಲ್ವಿಚಾರಣೆ ಮಾಡುವ ಗೂಗಲ್ ತನ್ನ ತಂಡಗಳ ಪುನರ್‌ ವಿಂಗಡಣೆಗೆ ಮುಂದಾಗಿದ್ದು, ಅದರ ಭಾಗವಾಗಿ ಈ ಉದ್ಯೋಗ ಕಡಿತ ನಡೆದಿತ್ತು.

“1ಪಿ ಎಆರ್ (1P AR) ಹಾರ್ಡ್‌ವೇರ್‌ ತಂಡದ ಮೇಲೆ ಪರಿಣಾಮ ಬೀರುವ ಡಿಎಸ್‌ಪಿಎ(ಡಿವೈಸಸ್‌ & ಸರ್ವಿಸಸ್‌) ಯಲ್ಲಿನ ನೂರಾರು ಉದ್ಯೋಗಿಗಳನ್ನು ತೆಗೆದು ಹಾಕಲಾಗುತ್ತಿದೆ. ನಮ್ಮ 1ಪಿ ಎಆರ್ ಹಾರ್ಡ್‌ವೇರ್ ತಂಡದಲ್ಲಿ ಬದಲಾವಣೆಗಳನ್ನು ಕೈಗೊಳ್ಳಲಾಗುತ್ತಿದೆʼʼ ಎಂದು ಗೂಗಲ್ ವಕ್ತಾರರು ತಿಳಿಸಿದ್ದರು. “ಫಿಟ್‌ಬಿಟ್‌ ಬಳಕೆದಾರರಿಗೆ ಉತ್ತಮ ಸೇವೆ ಸಲ್ಲಿಸಲು ಕಂಪನಿ ಬದ್ಧವಾಗಿದೆ. ವೈಯಕ್ತಿಕ ಎಐನೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಹೊಸತನವನ್ನು ತರಲು ಮತ್ತು ಪಿಕ್ಸೆಲ್ ವಾಚ್, ಮರುವಿನ್ಯಾಸಗೊಳಿಸಿದ ಫಿಟ್‌ಬಿಟ್‌ ಅಪ್ಲಿಕೇಶನ್, ಫಿಟ್‌ಬಿಟ್‌ ಪ್ರೀಮಿಯಂ ಸೇವೆ ಮತ್ತು ಫಿಟ್‌ಬಿಟ್‌ ಟ್ರ್ಯಾಕರ್ ಲೈನ್‌ನೊಂದಿಗೆ ಎಂದಿನೊಂದಿಗೆ ಕಾರ್ಯ ನಿರ್ವಹಿಸಲಿದೆʼʼ ಎಂದು ಕಂಪನಿ ಭರವಸೆ ನೀಡಿತ್ತು.

ಇದನ್ನೂ ಓದಿ: Tech Layoffs: 453 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ಗೂಗಲ್ ಇಂಡಿಯಾ! ಇನ್ನಷ್ಟು ಜಾಬ್ ಕಡಿತ?

ಗೂಗಲ್ ಮಾತೃಸಂಸ್ಥೆಯಾಗಿರುವ ಆಲ್ಫಾಬೆಟ್ ಇಂಕ್ ಕೆಲವು ತಿಂಗಳ ಹಿಂದೆ ಒಟ್ಟು ಉದ್ಯೋಗಿಗಳ ಪೈಕಿ ಶೇ. 6 ಅಥವಾ 12000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಅದಾಗಿ ಕೆಲವೆ ತಿಂಗಳಲ್ಲಿ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. 2023ರ ಸೆಪ್ಟೆಂಬರ್‌ನಲ್ಲಿ ಬಂದ ವರದಿ ಪ್ರಕಾರ ಆಲ್ಫಾಬೆಟ್ ಕಂಪೆನಿಯಲ್ಲಿ ಸುಮಾರು 1,80,000 ಉದ್ಯೋಗಿಗಳಿದ್ದರು.

Continue Reading

ವಿದೇಶ

Danesh Palyani: ಪಾಕಿಸ್ತಾನದಲ್ಲಿ ಹಿಂದು ಯುವತಿಯರ ಮತಾಂತರ; ಕರಾಳ ಮುಖ ಬಿಚ್ಚಿಟ್ಟ ಸಂಸದ!

Danesh Palyani: ಪಾಕಿಸ್ತಾನದ ಪ್ರಮುಖ ಹಿಂದು ನಾಯಕರೂ ಆಗಿರುವ ದಾನೇಶ್‌ ಕುಮಾರ್‌ ಪಲ್ಯಾನಿ ಅವರು, ಪಾಕ್‌ನಲ್ಲಿ ಹೇಗೆ ಹಿಂದು ಯುವತಿಯರನ್ನು ಹೇಗೆ ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ, ಹೇಗೆ ಮುಸ್ಲಿಮರು ದೌರ್ಜನ್ಯ ಎಸಗುತ್ತಿದ್ದಾರೆ ಎಂಬುದರ ಕುರಿತು ಸಂಸತ್‌ನಲ್ಲಿಯೇ ಬೆಳಕು ಚೆಲ್ಲಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Danesh Palyani
Koo

ಇಸ್ಲಾಮಾಬಾದ್:‌ ಪಾಕಿಸ್ತಾನದಲ್ಲಿ (Pakistan) ಹಿಂದುಗಳನ್ನು, ಹಿಂದು ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡುವ ಹೀನ ಕೃತ್ಯವು ಮೊದಲಿನಿಂದಲೂ ನಡೆಯುತ್ತಿದೆ. ಭಾರತ ಹಾಗೂ ಪಾಕಿಸ್ತಾನ ವಿಭಾಜನೆಯಾದಾಗಿನಿಂದಲೂ ಮುಸ್ಲಿಮರು ಮತಾಂತರಗೊಳಿಸಿದ ಕಾರಣ ನೆರೆ ರಾಷ್ಟ್ರದಲ್ಲಿ ಹಿಂದುಗಳ ಸಂಖ್ಯೆಯು ಗಣನೀಯವಾಗಿ ಕುಸಿದಿದೆ. ಪಾಕಿಸ್ತಾನದ ಹಿಂದು ಸಂಸದ, ಹಿಂದುಗಳ ನಾಯಕರೂ ಆದ ದಾನೇಶ್‌ ಕುಮಾರ್‌ ಪಲ್ಯಾನಿ (Danesh Kumar Palyani) ಅವರೀಗ ಹಿಂದು ಯುವತಿಯರನ್ನು ಹೇಗೆ ಬಲವಂತವಾಗಿ ಮತಾಂತರ (Conversion) ಮಾಡಲಾಗುತ್ತಿದೆ ಎಂಬುದನ್ನು ಸಂಸತ್‌ನಲ್ಲಿಯೇ ಬಹಿರಂಗಪಡಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಸಂಸತ್‌ನಲ್ಲಿ ಮಾತನಾಡಿದ ದಾನೇಶ್‌ ಕುಮಾರ್‌ ಪಲ್ಯಾನಿ, “ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಧಕ್ಕೆಯಾಗುತ್ತಿದೆ. ಅದರಲ್ಲೂ, ಹಿಂದು ಯುವತಿಯರನ್ನು ಮುಸ್ಲಿಮರು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ. ಹಿಂದು ಯುವತಿಯನ್ನು ಅಪಹರಣ ಮಾಡಿ, ಬಳಿಕ ಅವರನ್ನು ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿದೆ. ಪಾಕಿಸ್ತಾನವು ಹಿಂದುಗಳನ್ನು ಬಲವಂತವಾಗಿ ಮಾತನಾಡಬಾರದು ಎಂಬ ಹಕ್ಕು ನೀಡಿದೆ. ಆದರೆ, ಸಿಂಧ್‌ ಪ್ರಾಂತ್ಯದಲ್ಲಿ ಹಿಂದುಗಳ ಸ್ಥಿತಿಯು ದುಸ್ಥರವಾಗಿದೆ” ಎಂದು ಹೇಳಿದ್ದಾರೆ.

“ಬಲವಂತವಾಗಿ ಧರ್ಮವನ್ನು ಹೇರಬಾರದು ಎಂಬುದಾಗಿ ಕುರಾನ್‌ ಕೂಡ ಹೇಳುತ್ತದೆ. ನಿಮ್ಮ ಧರ್ಮ ನಿಮ್ಮದು, ನಮ್ಮ ಧರ್ಮ ನಮ್ಮದು ಎಂಬ ಸಂದೇಶ ಸಾರಲಾಗಿದೆ. ಆದರೆ, ಇಸ್ಲಾಂ ಧರ್ಮದ ದುಷ್ಕರ್ಮಿಗಳು ಪಾಕಿಸ್ತಾನದ ಸಂವಿಧಾನವನ್ನೂ ನಂಬಲ್ಲ, ಕುರಾನ್‌ ಷರೀಫ್‌ಅನ್ನು ಕೂಡ ನಂಬುವುದಿಲ್ಲ. ಇದರಿಂದಾಗಿ ಪಾಕಿಸ್ತಾನದಲ್ಲಿ ಹಿಂದು ಯುವತಿಯರು ಬಲವಂತವಾಗಿ ತಮ್ಮ ಧರ್ಮವನ್ನು ಬದಲಾಯಿಸಬೇಕಾಗಿದೆ. ಪ್ರಿಯಾ ಕುಮಾರಿ ಎಂಬ ಯುವತಿಯನ್ನು ಅಪಹರಿಸಿ ಎರಡು ವರ್ಷಗಳೇ ಕಳೆದಿವೆ. ಆದರೂ, ಸರ್ಕಾರ ಇಂತಹ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ದೂರಿದರು.

“ಪಾಕಿಸ್ತಾನದ ಸಂವಿಧಾನವಾಗಲಿ, ಪವಿತ್ರ ಕುರಾನ್‌ ಆಗಲಿ ಬಲವಂತದ ಮತದಾನವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಹೀಗಿದ್ದರೂ, ನಮ್ಮ ಮಾತೃಭೂಮಿಯಾದ ಪಾಕಿಸ್ತಾನದ ಘನತೆಗೆ ದುಷ್ಕರ್ಮಿಗಳು ಧಕ್ಕೆ ತರುತ್ತಿದ್ದಾರೆ. ಇಂತಹವರ ವಿರುದ್ಧ ಪಾಕಿಸ್ತಾನ ಸರ್ಕಾರವು ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂಬುದಾಗಿ ಆಗ್ರಹಿಸಿದ್ದಾರೆ. ಪಾಕಿಸ್ತಾನದಲ್ಲಿ ಬಲವಂತದ ಮತಾಂತರ, ಯುವತಿಯರ ಅಪಹರಣ, ಮಕ್ಕಳ ಕಳ್ಳ ಸಾಗಣೆ, ಬಾಲ್ಯ ವಿವಾಹದಂತಹ ಸಮಸ್ಯೆಗಳು ತಲೆದೋರಿರುವ ಕುರಿತು ಕೆಲ ದಿನಗಳ ಹಿಂದಷ್ಟೇ ವಿಶ್ವಸಂಸ್ಥೆಯು ಕಳವಳ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: Forced Conversion : ಮಹಿಳೆಯ ಖಾಸಗಿ ವಿಡಿಯೊ ಮಾಡಿ, ಇಸ್ಲಾಂಗೆ ಮತಾಂತರ ಮಾಡಲು ಯತ್ನಿಸಿದ ನೀಚ ದಂಪತಿ

Continue Reading

ಕರ್ನಾಟಕ

Prajwal Revanna: ಜರ್ಮನಿಯಲ್ಲಿ ಪ್ರಜ್ವಲ್‌ ಅಜ್ಞಾತವಾಸ, ಮಲೇಷ್ಯಾದಲ್ಲಿ ಕಾರ್ತಿಕ್‌ ಹಾಲಿಡೇಸ್?

Prajwal Revanna: ಜರ್ಮನಿಗೆ ತೆರಳಿರುವ ಪ್ರಜ್ವಲ್‌ ರೇವಣ್ಣ, ಅಲ್ಲಿಯೇ ಆಶ್ರಯ ಪಡೆದಿದ್ದಾರೆ. ಎಸ್‌ಐಟಿ ವಿಚಾರಣೆಗೆ ಹಾಜರಾಗದೆ, ಭಾರತಕ್ಕೆ ವಾಪಸಾಗದೆ ಅಲ್ಲಿಯೇ ಅವರು ತಲೆಮರೆಸಿಕೊಂಡಿದ್ದರೆ, ಅವರ ಕಾರು ಓಡಿಸಿಕೊಂಡಿದ್ದ ಕಾರ್ತಿಕ್‌ ಮಲೇಷ್ಯಾದಲ್ಲಿ ಮಜಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ ಅವರು ಕಾರ್ತಿಕ್‌ ಬಗ್ಗೆ ಹೇಳಿಕೆ ನೀಡಿದ ಬಳಿಕವಂತೂ ಹಲವು ಚರ್ಚೆಗಳು ನಡೆಯುತ್ತಿವೆ.

VISTARANEWS.COM


on

Prajwal Revanna
Koo

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಅವರ ಕಾಮಕೇಳಿಯ ವಿಡಿಯೊಗಳು ಬಹಿರಂಗವಾದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಪೆನ್‌ಡ್ರೈವ್‌ ಪ್ರಕರಣವು (Pen Drive Case) ಕರ್ನಾಟಕದಲ್ಲಿ (Karnataka) ಜೆಡಿಎಸ್‌ ಹಾಗೂ ಬಿಜೆಪಿಗೆ ಮುಜುಗರ ತಂದರೆ, ಕಾಂಗ್ರೆಸ್‌ಗೆ ಅಸ್ತ್ರವಾಗಿದೆ. ಇದರ ಬೆನ್ನಲ್ಲೇ, ಪ್ರಜ್ವಲ್‌ ರೇವಣ್ಣ ಜರ್ಮನಿಯಲ್ಲಿ ಅಜ್ಞಾತವಾಸ ಅನುಭವಿಸುತ್ತಿದ್ದರೆ, ವಿಡಿಯೊ, ಫೋಟೊಗಳು ಎಲ್ಲೆಡೆ ಹರಡಲು ಕಾರಣರಾದ ಮಾಜಿ ಚಾಲಕ ಕಾರ್ತಿಕ್‌ ಮಲೇಷ್ಯಾದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜ್ವಲ್‌ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್‌ ಅಜ್ಞಾತಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿ, ಕೆಲ ಸ್ಪಷ್ಟನೆ ನೀಡಿದ್ದಾರೆ. ಇದರ ಬೆನ್ನಲ್ಲೇ, “ಕಾರ್ತಿಕ್‌ನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು” ಎಂಬುದಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇದರೊಂದಿಗೆ ಕಾರ್ತಿಕ್‌ ಮಲೇಷ್ಯಾಗೆ ತೆರಳಿದ್ದು ದೃಢಪಟ್ಟಿದ್ದು, ಕಾರು ಚಾಲಕನೊಬ್ಬ ಮಲೇಷ್ಯಾದಲ್ಲಿ ಕಾಲ ಕಳೆಯುವುದು, ಅಲ್ಲಿಯೇ ಹಾಲಿಡೇಸ್‌ ಎಂಜಾಯ್‌ ಮಾಡುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಮೂಡಿವೆ.

ಪ್ರಜ್ವಲ್‌ ರೇವಣ್ಣ ಲೈಂಗಿಕ ಶೋಷಣೆ ಮಾಡಿರುವ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆಗೆ ಎಸ್‌ಐಟಿ ರಚಿಸಲಾಗಿದೆ. ಇನ್ನು ಸಾವಿರಾರು ಅಶ್ಲೀಲ ವಿಡಿಯೊಗಳಿರುವ ಪೆನ್‌ಡ್ರೈವ್‌ ಎಲ್ಲೆಂದರಲ್ಲಿ ಸಿಕ್ಕಿರುವುದು ಹಲವು ಅನುಮಾನ ಮೂಡಿಸಿವೆ. ಇದರ ಮಧ್ಯೆಯೇ, ಜರ್ಮನಿಗೆ ತೆರಳಿರುವ ಪ್ರಜ್ವಲ್‌ ರೇವಣ್ಣ, ಅಲ್ಲಿಯೇ ಆಶ್ರಯ ಪಡೆದಿದ್ದಾರೆ. ಎಸ್‌ಐಟಿ ವಿಚಾರಣೆಗೆ ಹಾಜರಾಗದೆ, ಭಾರತಕ್ಕೆ ವಾಪಸಾಗದೆ ಅಲ್ಲಿಯೇ ಅವರು ತಲೆಮರೆಸಿಕೊಂಡಿದ್ದರೆ, ಅವರ ಕಾರು ಓಡಿಸಿಕೊಂಡಿದ್ದ ಕಾರ್ತಿಕ್‌ ಮಲೇಷ್ಯಾದಲ್ಲಿ ಮಜಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಈಗ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಕಾರ್ತಿಕ್‌ ಬಗ್ಗೆ ಎಚ್‌ಡಿಕೆ ಸಿಡಿಮಿಡಿ

ಬೆಂಗಳೂರಿನ ಪದ್ಮನಾಭನಗರದ ನಿವಾಸದ ಗೇಟ್‌ ಮುಂಭಾಗದಲ್ಲಿ ಪ್ರಕರಣದ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ಗರಂ ಆದರು. ಪದೇಪದೇ ಏನು ಕೇಳುತ್ತೀರಿ, ನಿಮಗೆ ಏನು ಕೆಲಸ, ಇಲ್ಲಿ ಯಾಕೆ ಬಂದಿದ್ದೀರಾ? ಸುದ್ದಿ ಬಿಡುವವರ ಜತೆ ಹೋಗಿ ಎಂದು ಕಿಡಿಕಾರಿದರು. ನಿನ್ನೆ ಡ್ರೈವರ್ ಒಬ್ಬ ವಿಡಿಯೋ ಮಾಡಿ ಹೇಳಿದನಲ್ಲಾ? ಯಾರು ಆ ವಿಡಿಯೊ ಮಾಡಿದ್ದು? ಇಲ್ಲಿ ಚಿಲ್ಲರೆ ಅಣ್ಣ ತಮ್ಮ ಇದ್ದಾರಲ್ಲವೇ? ಅವರು ಏನ್ ಹೇಳಿದರು? ಕುಮಾರಸ್ವಾಮಿ ಬಿಟ್ಟಿದ್ದು ಎನ್ನುತ್ತಾರೆ. ಡ್ರೈವರ್ ಕಾರ್ತಿಕ್ ಎಲ್ಲಿದ್ದಾನೆ ಈಗ? ಮಲೇಷ್ಯಾದಲ್ಲಿ ಇದಾನೆ, ಆತನನ್ನು ಮಲೇಷ್ಯಾಗೆ ಕಳುಹಿಸಿದ್ದು ಯಾರು ಎಂದು ಪ್ರಶ್ನಿಸಿದರು.

ಆ ಡ್ರೈವರ್‌ ಕಾರ್ತಿಕ್ ಏನು ಹೇಳಿಕೆ ಕೊಟ್ಟಾ? ದೇವರಾಜೇಗೌಡ ಕೈಯಲ್ಲಿ ಪೆನ್ ಡ್ರೈವ್ ಕೊಟ್ಟಿದ್ದೆ ಅಂತ ಹೇಳಿದ್ದ. ಇಂದು ಬೆಳಗ್ಗೆ ಈ ಚಿಲ್ಲರೆ ಅಣ್ಣ ತಮ್ಮ ಇದಾರಲ್ವಾ (ಡಿಕೆಶಿ ಹಾಗೂ ಡಿ.ಕೆ ಸುರೇಶ್), ಕುಮಾರಸ್ವಾಮಿನೇ ಬಿಟ್ಟಿರಬೇಕು ಅಂತ ಹೇಳಿಕೆ ಕೊಟ್ಟಿದ್ದಾರೆ. ಕುಮಾರಸ್ವಾಮಿಯನ್ನು ಈ ಮೊದಲು ದೇವರಾಜೇಗೌಡ ಭೇಟಿಯಾಗಿದ್ದ ಎಂದು ಈ 420ಗಳು ಹೇಳಿದ್ದಾರೆ. ಹಾಗಾದರೆ ಎಲ್ಲಿದ್ದಾನೆ ಈ ಕಾರ್ತಿಕ್? ಯಾರು ಕಳುಹಿಸಿದರು? ಎಲ್ಲಿಂದ ವಿಡಿಯೋ ಮಾಡಿ ಬಿಟ್ಟದ್ದಾನೆ, ಅದನ್ನು ಮೊದಲು ತಿಳಿದುಕೊಳ್ಳಿ. ನನ್ನ ಕೆಣಕಿದ್ದಾರೆ, ಸುಮ್ಮನೆ ಬಿಡಲ್ಲ ನಾನು ಎಂದು ಡಿಕೆ ಬ್ರದರ್ಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: Prajwal Revanna Case: ಸಿಂಗಾಪುರ ಮಾಧ್ಯಮಗಳಲ್ಲೂ ಪ್ರಜ್ವಲ್‌ ರೇವಣ್ಣ ಕೇಸ್‌ ಸದ್ದು!

Continue Reading
Advertisement
Prajwal Revanna Case PM Modi defends MP accused of rape says Rahul Gandhi
Lok Sabha Election 20245 mins ago

Prajwal Revanna Case: ಮಹಾನ್‌ ರೇಪಿಸ್ಟ್‌ಗೆ ಮೋದಿಯಿಂದ ರಕ್ಷಣೆ; ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ರಾಹುಲ್‌ ಗಾಂಧಿ ಗುಡುಗು

Rinku Singh
ಕ್ರೀಡೆ13 mins ago

Rinku Singh: ಟಿ20 ವಿಶ್ವಕಪ್​ಗೆ ರಿಂಕು ಆಯ್ಕೆಯಾಗಬಹುದೆಂದು ಪಟಾಕಿ, ಸಿಹಿ ತಂದಿಟ್ಟಿದ್ದ ತಂದೆಗೆ ನಿರಾಸೆ

Crime News
ಕ್ರೈಂ14 mins ago

Crime News : 6 ವರ್ಷದ ಬಾಲಕಿಯ ಅಪಹರಿಸಲು ಯತ್ನಿಸಿದ ದುಷ್ಟ; ಹಿಟ್‌ ಆ್ಯಂಡ್‌ ರನ್‌ ಮಾಡಿ ಚಾಲಕರಿಬ್ಬರು ಎಸ್ಕೇಪ್‌

Samsung
ತಂತ್ರಜ್ಞಾನ33 mins ago

ಸ್ಯಾಮ್‌ಸಂಗ್‌ನ ‘ಫ್ಯಾಬ್ ಗ್ರಾಬ್ ಫೆಸ್ಟ್’: ಸ್ಮಾರ್ಟ್‌ಫೋನ್‌, ಟಿವಿ, ಲ್ಯಾಪ್‌ಟಾಪ್‌, ಡಿಜಿಟಲ್ ಉಪಕರಣಗಳ ಮೇಲೆ ಅದ್ಭುತ ಆಫರ್

students self harming
ಕ್ರೈಂ1 hour ago

Students Self harming: 20 ವರ್ಷಗಳಲ್ಲಿ ಐಐಟಿಯ 115 ವಿದ್ಯಾರ್ಥಿಗಳು ಆತ್ಮಹತ್ಯೆ

Prajwal Revanna Case HD DeveGowda and HD Kumaraswamy slams HD Revanna
ಕ್ರೈಂ2 hours ago

Prajwal Revanna Case: ನಿನ್ನ ಮಗನಿಂದ ಇಂಥ ಕಪ್ಪು ಚುಕ್ಕೆ ಬಂತು; ರೇವಣ್ಣ ಮೇಲೆ ಮುಗಿಬಿದ್ದ ಎಚ್‌ಡಿಡಿ, ಎಚ್‌ಡಿಕೆ

Pawan Kalyan Hari Hara Veera Mallu Part 1 teaser Out
ಟಾಲಿವುಡ್2 hours ago

Pawan Kalyan: ʻಹರಿ ಹರ ವೀರ ಮಲ್ಲುʼವಾಗಿ ಅಬ್ಬರಿಸಿದ ಪವನ್ ಕಲ್ಯಾಣ್; ಟೀಸರ್‌ ಔಟ್‌!

supreme court
ದೇಶ2 hours ago

Supreme Court: CBI ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿಲ್ಲ; ಸುಪ್ರೀಂಕೋರ್ಟ್‌ಗೆ ಸರ್ಕಾರ ಸ್ಪಷ್ಟನೆ

Viral News
ವೈರಲ್ ನ್ಯೂಸ್2 hours ago

Viral News: ಮದುವೆಗೆ ಮುನ್ನವೇ 2 ಬಾರಿ ಗರ್ಭಿಣಿಯಾದ ಅಪ್ರಾಪ್ತೆ; ಪೋಷಕರು ಮಗುವನ್ನು ಮಾರಾಟ ಮಾಡಿದ್ದಾರೆಂದು ದೂರು

Uber Cup 2024 Quarterfinal
ಕ್ರೀಡೆ2 hours ago

Uber Cup 2024 Quarterfinal: ಭಾರತದ ಸವಾಲು ಅಂತ್ಯ; ಜಪಾನ್​ ವಿರುದ್ಧ ಕ್ವಾ. ಫೈನಲ್​ನಲ್ಲಿ ಸೋಲು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ10 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌